09.03.25    Avyakt Bapdada     Kannada Murli    20.03.2004     Om Shanti     Madhuban


ಈ ವರ್ಷವನ್ನು ವಿಶೇಷ ಜೀವನ್ಮುಕ್ತ ವರ್ಷದ ರೂಪದಲ್ಲಿ ಆಚರಿಸಿ, ಏಕತೆ ಮತ್ತು ಏಕಾಗ್ರತೆಯಿಂದ ತಂದೆಯ ಪ್ರತ್ಯಕ್ಷತೆ ಮಾಡಿ


ಇಂದು ಸ್ನೇಹಸಾಗರ ನಾಲ್ಕಾರೂ ಕಡೆಯ ಸ್ನೇಹೀ ಮಕ್ಕಳನ್ನು ನೋಡುತ್ತಿದ್ದಾರೆ. ತಂದೆಗೂ ಸಹ ಹೃದಯದ ಅವಿನಾಶಿ ಸ್ನೇಹವಿದೆ ಮತ್ತು ಮಕ್ಕಳಿಗೂ ಹೃದಯರಾಮ ತಂದೆಯೊಂದಿಗೆ ಹೃದಯದ ಸ್ನೇಹವಿದೆ. ಈ ಪರಮಾತ್ಮ ಸ್ನೇಹ, ಹೃದಯದ ಸ್ನೇಹವನ್ನು ಕೇವಲ ತಂದೆ ಮತ್ತು ಬ್ರಾಹ್ಮಣ ಮಕ್ಕಳೇ ಅರಿತುಕೊಂಡಿದ್ದೀರಿ. ಕೇವಲ ತಾವು ಬ್ರಾಹ್ಮಣ ಆತ್ಮಗಳೇ ಪರಮಾತ್ಮನ ಸ್ನೇಹಕ್ಕೆ ಪಾತ್ರರಾಗಿದ್ದೀರಿ. ಭಕ್ತಾತ್ಮರು ಪರಮಾತ್ಮನ ಪ್ರೀತಿಗಾಗಿ ಬಾಯಾರಿದ್ದಾರೆ, ಕೂಗುತ್ತಾರೆ. ತಾವು ಭಾಗ್ಯವಂತ ಬ್ರಾಹ್ಮಣ ಆತ್ಮಗಳು ಅಂತಹ ಪ್ರೀತಿಗೆ ಪಾತ್ರರಾಗಿದ್ದೀರಿ. ಮಕ್ಕಳಿಗೆ ವಿಶೇಷ ಪ್ರೀತಿಯು ಏಕೆ ಇದೆ ಎಂಬುದು ಬಾಪ್ ದಾದಾರವರಿಗೂ ತಿಳಿದಿದೆ ಏಕೆಂದರೆ ಈ ಸಮಯದಲ್ಲಿಯೇ ಸರ್ವಖಜಾನೆಗಳ ಮಾಲೀಕನ ಮೂಲಕ ಸರ್ವಖಜಾನೆಗಳೂ ಪ್ರಾಪ್ತವಾಗುತ್ತವೆ. ಆ ಖಜಾನೆಗಳು ಕೇವಲ ಈಗಿನ ಒಂದುಜನ್ಮಕ್ಕಷ್ಟೇ ನಡೆಯುವುದಿಲ್ಲ ಆದರೆ ಅನೇಕ ಜನ್ಮಗಳವರೆಗೆ ಅವಿನಾಶಿ ಖಜಾನೆಗಳು ತಮ್ಮ ಜೊತೆ ಇರುತ್ತವೆ. ತಾವೆಲ್ಲಾ ಬ್ರಾಹ್ಮಣ ಆತ್ಮಗಳು ಪ್ರಪಂಚದವರ ತರಹ ಬರಿಗೈಯಲ್ಲಿ ಹೋಗುವುದಿಲ್ಲ, ಸರ್ವಖಜಾನೆಗಳು ಜೊತೆಯಿರುತ್ತವೆ. ಅಂದಾಗ ಇಂತಹ ಅವಿನಾಶಿ ಖಜಾನೆಗಳ ಪ್ರಾಪ್ತಿಯ ನಶೆಯಿರುತ್ತದೆಯಲ್ಲವೆ! ಮತ್ತು ಎಲ್ಲಾ ಮಕ್ಕಳು ಅವಿನಾಶಿ ಖಜಾನೆಗಳನ್ನು ಜಮಾ ಮಾಡಿಕೊಂಡಿದ್ದೀರಲ್ಲವೆ! ಜಮಾದ ನಶೆ, ಜಮಾದ ಖುಷಿಯು ಸದಾ ಇರುತ್ತದೆ, ಪ್ರತಿಯೊಬ್ಬರ ಚಹರೆಯಲ್ಲಿ ಜಮಾದ ಹೊಳಪು ಕಂಡುಬರುತ್ತದೆ. ಯಾವ ಖಜಾನೆಗಳು ತಂದೆಯ ಮೂಲಕ ಪ್ರಾಪ್ತಿಯಾಗಿವೆ? – ಎಂದು ಗೊತ್ತಿದೆಯಲ್ಲವೆ. ಎಂದಾದರೂ ತಮ್ಮ ಜಮಾದ ಖಾತೆಯನ್ನು ಪರಿಶೀಲನೆ ಮಾಡುತ್ತೀರಾ? ತಂದೆಯಂತೂ ಎಲ್ಲಾ ಮಕ್ಕಳಿಗೆ ಪ್ರತಿಯೊಂದು ಖಜಾನೆಯನ್ನು ಅಪಾರವಾಗಿ ಕೊಡುತ್ತಾರೆ. ಕೆಲವರಿಗೆ ಸ್ವಲ್ಪ, ಕೆಲವರಿಗೆ ಹೆಚ್ಚಾಗಿ ಕೊಡುವುದಿಲ್ಲ. ಪ್ರತಿಯೊಂದು ಮಗು ಅಪಾರ, ಅಖಂಡ, ಅವಿನಾಶಿ ಖಜಾನೆಗಳಿಗೆ ಮಾಲೀಕರಾಗಿದ್ದಾರೆ. ಬಾಲಕರಾಗುವುದು ಎಂದರೆ ಖಜಾನೆಗಳ ಮಾಲೀಕರಾಗುವುದು ಅಂದಾಗ ಇಮರ್ಜ್ ಮಾಡಿಕೊಳ್ಳಿ ಬಾಪ್ ದಾದಾರವರು ಎಷ್ಟೊಂದು ಖಜಾನೆಗಳನ್ನು ಕೊಟ್ಟಿದ್ದಾರೆ!

ಎಲ್ಲದಕ್ಕಿಂತ ಮೊದಲ ಖಜಾನೆಯು ಜ್ಞಾನಧನವಾಗಿದೆ. ಅಂದಾಗ ಎಲ್ಲರಿಗೆ ಜ್ಞಾನಧನವು ಸಿಕ್ಕಿದೆಯೆ? ಸಿಕ್ಕಿದೆಯೋ ಅಥವಾ ಸಿಗಬೇಕಾಗಿದೆಯೋ? ಒಳ್ಳೆಯದು- ಜಮಾ ಆಗಿದೆಯೆ? ಅಥವಾ ಸ್ವಲ್ಪವೇ ಜಮಾ ಆಗಿದೆ, ಇನ್ನೂ ಸ್ವಲ್ಪ ಹೊರಟುಹೋಗಿದೆಯೋ? ಜ್ಞಾನಧನ ಅರ್ಥಾತ್ ಬುದ್ಧಿವಂತರಾಗಿ, ತ್ರಿಕಾಲದರ್ಶಿಗಳಾಗಿ ಕರ್ಮಮಾಡುವುದಾಗಿದೆ, ಜ್ಞಾನಪೂರ್ಣರಾಗುವುದಾಗಿದೆ. ಪೂರ್ಣಜ್ಞಾನ ಮತ್ತು ಮೂರೂಕಾಲಗಳ ಜ್ಞಾನವನ್ನರಿತು ಜ್ಞಾನಧನವನ್ನು ಕಾರ್ಯದಲ್ಲಿ ತೊಡಗಿಸಬೇಕು. ಈ ಜ್ಞಾನದ ಖಜಾನೆಯಿಂದ ಪ್ರತ್ಯಕ್ಷಜೀವನದಲ್ಲಿ ಪ್ರತೀ ಕಾರ್ಯದಲ್ಲಿ ಉಪಯೋಗಿಸುವುದರಿಂದ ವಿಧಿಯಿಂದ ಸಿದ್ಧಿಯು ಪ್ರಾಪ್ತಿಯಾಗುತ್ತದೆ, ಕೆಲವು ಬಂಧನಗಳಿಂದ ಮುಕ್ತಿ ಮತ್ತು ಜೀವನ್ಮುಕ್ತಿಯು ಸಿಗುತ್ತದೆ. ಅನುಭವ ಮಾಡುತ್ತೀರಾ? ಜೀವನ್ಮುಕ್ತಿಯು ಸತ್ಯಯುಗದಲ್ಲಿ ಸಿಗುತ್ತದೆ ಎಂದಲ್ಲ ಈಗಲೂ ಸಹ ಈ ಸಂಗಮದ ಜೀವನದಲ್ಲಿಯೂ ಅನೇಕ ಕ್ಷಣಿಕ ಬಂಧನಗಳಿಂದ ಮುಕ್ತಿ ಸಿಕ್ಕಿಬಿಡುತ್ತದೆ. ಜೀವನವು ಬಂಧನಮುಕ್ತವಾಗಿಬಿಡುತ್ತದೆ. ಎಷ್ಟೊಂದು ಬಂಧನಗಳಿಂದ ಮುಕ್ತರಾಗಿಬಿಟ್ಟಿದ್ದೀರಿ! ಎಷ್ಟು ಪ್ರಕಾರದ ಹಾಯ್! ಹಾಯ್!ನಿಂದ (ದುಃಖ) ಮುಕ್ತರಾಗಿದ್ದೀರೆಂದು ತಿಳಿದಿದೆಯಲ್ಲವೆ! ಮತ್ತು ಸದಾ ಹಾಯ್! ಹಾಯ್! ಸಮಾಪ್ತಿ, ವಾಹ್! ವಾಹ್!ನ ಗೀತೆಯನ್ನು ಹಾಡುತ್ತಿರುತ್ತೀರಿ. ಒಂದುವೇಳೆ ಯಾವುದೇ ಮಾತಿನಲ್ಲಿ ಅಂಶಮಾತ್ರವೂ ಕೇವಲ ಮುಖದಿಂದಲ್ಲ, ಸಂಕಲ್ಪಮಾತ್ರವೂ, ಸ್ವಪ್ನ ಮಾತ್ರದಿಂದಲೂ ಸಹ ಹಾಯ್! ಹಾಯ್!..... ಮನಸ್ಸಿನಲ್ಲಿ ಬಂದಿತೆಂದರೆ ಜೀವನ್ಮುಕ್ತರಲ್ಲ. ವಾಹ್! ವಾಹ್! ವಾಹ್! ಈ ರೀತಿಯಿದ್ದೀರಾ! ಮಾತೆಯರೇ ಹಾಯ್! ಹಾಯ್! ಎನ್ನುವುದಿಲ್ಲ ತಾನೆ? ಇಲ್ಲ ತಾನೆ? ಒಮ್ಮೊಮ್ಮೆ ಮಾಡುತ್ತೀರಾ? ಪಾಂಡವರು ಮಾಡುತ್ತಾರೆ. ಭಲೆ ಮುಖದಿಂದ ಮಾಡಬೇಡಿ ಆದರೆ ಮನಸ್ಸಿನಲ್ಲಿ ಸಂಕಲ್ಪಮಾತ್ರದಲ್ಲಿಯೂ ಸಹ ಒಂದುವೇಳೆ ಯಾವುದೇ ಮಾತಿನಲ್ಲಿ ಹಾಯ್! ಇದೆಯೆಂದರೆ ಫ್ಲೈ (ಹಾರುವುದು) ಇಲ್ಲ. ಹಾಯ್! ಎಂದರೆ ಬಂಧನ ಮತ್ತು ಫ್ಲೈ ಎಂದರೆ ಹಾರುವಕಲೆ ಆರ್ಥಾತ್ ಜೀವನ್ಮುಕ್ತ, ಬಂಧನಮುಕ್ತ ಸ್ಥಿತಿಯಾಗಿದೆ. ಅಂದಾಗ ಪರಿಶೀಲನೆ ಮಾಡಿಕೊಳ್ಳಿ ಏಕೆಂದರೆ ಬ್ರಾಹ್ಮಣ ಆತ್ಮಗಳು ಎಲ್ಲಿಯವರೆಗೆ ಸ್ವಯಂ ಬಂಧನಮುಕ್ತರಾಗಿಲ್ಲವೋ, ಯಾವುದೇ ಚಿನ್ನದ ಅಥವಾ ವಜ್ರದ ರಾಯಲ್ ಬಂಧನದ ಸೂತ್ರದಿಂದ ಬಂಧಿಸಲ್ಪಟ್ಟಿರುತ್ತೀರೋ ಅಲ್ಲಿಯವರೆಗೆ ಸರ್ವಆತ್ಮಗಳಿಗಾಗಿ ಮುಕ್ಕಿಯ ದ್ವಾರವು ತೆರೆಯಲು ಸಾಧ್ಯವಿಲ್ಲ. ತಾವು ಬಂಧನಮುಕ್ತರಾಗುವುದರಿಂದ ಸರ್ವಆತ್ಮಗಳಿಗಾಗಿ ಮುಕ್ತಿಯ ದ್ವಾರವು ತೆರೆಯುತ್ತದೆ ಅಂದಮೇಲೆ ದ್ವಾರವನ್ನು ತೆರೆಯುವ ಹಾಗೂ ಸರ್ವ ಆತ್ಮಗಳು ದುಃಖ, ಅಶಾಂತಿಯಿಂದ ಮುಕ್ತರಾಗುವ ಜವಾಬ್ದಾರಿಯು ತಮ್ಮ ಮೇಲಿದೆ.

ಆದ್ದರಿಂದ ಪರಿಶೀಲನೆ ಮಾಡಿಕೊಳ್ಳಿ - ಎಲ್ಲಿಯವರೆಗೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದೇವೆ? ತಾವೆಲ್ಲರೂ ಬಾಪ್ದಾದಾರವರ ಜೊತೆ ವಿಶ್ವಪರಿವರ್ತನೆಯ ಕಾರ್ಯವನ್ನು ಮಾಡುವ ಗುತ್ತಿಗೆಯನ್ನು ಪಡೆದಿದ್ದೀರಿ. ಗುತ್ತಿಗೆದಾರರು, ಜವಾಬ್ದಾರರೂ ಆಗಿದ್ದೀರಿ. ಒಂದುವೇಳೆ ತಂದೆಯು ಏನು ಬೇಕಾದರೂ ಮಾಡಬಲ್ಲೆವು ಆದರೆ ತಂದೆಗೆ ಮಕ್ಕಳೊಂದಿಗೆ ಪ್ರೀತಿಯಿದೆ. ತಾವೊಬ್ಬರೇ ಮಾಡಲು ಇಚ್ಛಿಸುವುದಿಲ್ಲ. ತಾವು ಸರ್ವಮಕ್ಕಳನ್ನು ತಂದೆಯು ಅವತರಿತರಾಗುತ್ತಿದ್ದಂತೆಯೇ ಜೊತೆಯಲ್ಲಿಯೇ ಅವತರಿತರನ್ನಾಗಿ ಮಾಡಿದ್ದೇವೆ. ಶಿವರಾತ್ರಿಯನ್ನು ಆಚರಿಸಿದರಲ್ಲವೆ! ಅಂದಾಗ ಯಾರದನ್ನು ಆಚರಿಸಿದಿರಿ? ಕೇವಲ ಬಾಪ್ದಾದಾರವರದೆ? ತಮ್ಮೆಲ್ಲರದೂ ಆಚರಿಸಿದ್ದಿರಲ್ಲವೆ? ತಂದೆಗೆ ಆದಿಯಿಂದ ಅಂತ್ಯದವರೆಗಿನ ಜೊತೆಗಾರರಾಗಿದ್ದೀರಿ. ಆದಿಯಿಂದ ಅಂತ್ಯದವರೆಗೆ ಜೊತೆಗಾರರಾಗಿದ್ದೇವೆ ಎಂಬ ನಶೆಯಿದೆಯೇ? ತಾವು ಭಗವಂತನ ಜೊತೆಗಾರರಾಗಿದ್ದೀರಿ.

ಅಂದಮೇಲೆ ಬಾಪ್ದಾದಾ ಈಗ ಈ ವರ್ಷದ ಸೀಜನ್ನಿನ ಅಂತ್ಯದ ಪಾತ್ರವನ್ನಭಿನಯಿಸುವುದರಲ್ಲಿ ಎಲ್ಲಾ ಮಕ್ಕಳಿಂದ ಇದೇ ಬಯಸುತ್ತೇವೆ. ಅದೇನೆಂದು ತಿಳಿಸುವುದೇ? ಅದನ್ನು ಮಾಡಲೇಬೇಕಾಗುತ್ತದೆ. ಕೇವಲ ಕೇಳುವುದಲ್ಲ ಮಾಡಲೇಬೇಕಾಗುವುದು. ನಿಮಿತ್ತ ಟೀಚರ್ಸ್ ಸರಿಯೆ? ಟೀಚರ್ಸ್ ಕೈಯೆತ್ತಿರಿ. ಟೀಚರ್ಸ್ ಸೆಖೆಯಿರುವ ಕಾರಣ ಬೀಸಣಿಕೆಗಳನ್ನು ಅಲುಗಾಡಿಸುತ್ತಿದ್ದಾರೆ. ಒಳ್ಳೆಯದು- ಎಲ್ಲಾ ನಿಮಿತ್ತ ಟೀಚರ್ಸ್ ಮಾಡುತ್ತೀರಿ ಮತ್ತು ಮಾಡಿಸುತ್ತೀರಾ? ಮಾಡಿಸುತ್ತೀರಾ, ಮಾಡುವಿರಾ? ಒಳ್ಳೆಯದು- ಸೆಖೆಯೂ ಆಗುತ್ತಿದೆ, ಕೈಯನ್ನೂ ಅಲುಗಾಡಿಸುತ್ತಿದ್ದಾರೆ, ದೃಶ್ಯವು ಬಹಳ ಚೆನ್ನಾಗಿದೆ. ಬಹಳ ಒಳ್ಳೆಯದು ಅಂದಾಗ ಬಾಪ್ದಾದಾ ಈ ಸೀಜನ್ನಿನ ಸಮಾಪ್ತಿ ಸಮಾರೋಹಣದಲ್ಲಿ ಒಂದು ಹೊಸ ಪ್ರಕಾರದ ದೀಪಮಾಲೆಯನ್ನಾಚರಿಸಲು ಬಯಸುತ್ತಾರೆ. ತಿಳಿಯಿತೆ! ಹೊಸಪ್ರಕಾರದ ದೀಪಮಾಲೆಯನ್ನಾಚರಿಸಲು ಇಚ್ಛಿಸುತ್ತೇವೆ ಅಂದಮೇಲೆ ತಾವೆಲ್ಲರೂ ದೀಪಮಾಲೆಯನ್ನಾಚರಿಸಲು ತಯಾರಾಗಿದ್ದೀರಾ? ಯಾರು ತಯಾರಿದ್ದೀರೋ ಅವರು ಕೈಯೆತ್ತಿರಿ. ಕೇವಲ ಹೌದು ಎಂದು ಹೇಳುವುದಲ್ಲ, ಬಾಪ್ದಾದಾರವರನ್ನು ಖುಷಿಪಡಿಸುವುದಕ್ಕಾಗಿ ಕೈಯೆತ್ತುವುದಲ್ಲ ಹೃದಯಪೂರ್ವಕವಾಗಿ ಕೈಯೆತ್ತಿ. ಬಾಪ್ದಾದಾ ತಮ್ಮ ಹೃದಯದ ಆಸೆಗಳನ್ನು ಸಂಪನ್ನ ಮಾಡುವಂತಹ, ಬೆಳಗುತ್ತಿರುವ ದೀಪವನ್ನು ನೋಡಲು ಬಯಸುತ್ತಾರೆ. ಅಂದಾಗ ಬಾಪ್ ದಾದಾರವರ ಆಸೆಗಳ ದೀಪಗಳ ದೀಪಮಾಲೆಯನ್ನು ಆಚರಿಸಬಯಸುತ್ತೇವೆ. ಯಾವ ದೀಪಾವಳಿ ಎಂದು ತಿಳಿಯಿತೆ? ಸ್ಪಷ್ಟವಾಯಿತೆ?

ಬಾಪ್ದಾದಾರವರ ಆಸೆಗಳ ದೀಪ ಯಾವುದಾಗಿದೆ? ಹಿಂದಿನ ವರ್ಷದಿಂದ ಹಿಡಿದು ಈ ವರ್ಷದವರೆಗೆ ಸೀಜನ್ ಮುಕ್ತಾಯವಾಯಿತು. ಬಾಪ್ದಾದಾ ತಿಳಿಸಿದರು – ತಾವೆಲ್ಲರೂ ಸಂಕಲ್ಪ ಮಾಡಿದ್ದಿರಿ, ನೆನಪಿದೆಯೆ? ಕೆಲವರು ಆ ಸಂಕಲ್ಪವನ್ನು ಕೇವಲ ಸಂಕಲ್ಪದವರೆಗೆ ಪೂರ್ಣ ಮಾಡಿದ್ದೀರಿ, ಇನ್ನೂ ಕೆಲವರು ಆ ಸಂಕಲ್ಪವನ್ನು ಅರ್ಧದಷ್ಟು ಪೂರ್ಣ ಮಾಡಿದ್ದೀರಿ. ಇನ್ನೂ ಕೆಲವರು ಯೋಚಿಸುತ್ತೀರಿ ಆದರೆ ಆ ಯೋಚನೆಯು ಯೋಚಿನೆಗಷ್ಟೇ ಸೀಮಿತವಾಗಿದೆ. ಆ ಸಂಕಲ್ಪವೇನು? ಹೊಸ ಮಾತೇನಲ್ಲ, ಹಳೆಯ ಮಾತೇ ಆಗಿದೆ - ಸ್ವ-ಪರಿವರ್ತನೆಯಿಂದ ಸರ್ವರ ಪರಿವರ್ತನೆ. ವಿಶ್ವದ ಮಾತನ್ನಂತೂ ಬಿಡಿ ಆದರೆ ಬಾಪ್ ದಾದಾರವರು ಸ್ವ-ಪರಿವರ್ತನೆಯಿಂದ ಬ್ರಾಹ್ಮಣ ಪರಿವಾರದ ಪರಿವರ್ತನೆಯನ್ನು ನೋಡಬಯಸುತ್ತಾರೆ. ಈಗ ಇದನ್ನು ಕೇಳಲು ಇಷ್ಟವಿಲ್ಲ ಅವರು ಈ ರೀತಿಯಿದ್ದರೆ ಇದಾಗುತ್ತದೆ, ಇವರು ಬದಲಾದರೆ ನಾನೂ ಬದಲಾಗುವೆನು, ಇವರು ಮಾಡಿದರೆ ನಾನು ಮಾಡುವೆನು. ಇದರಲ್ಲಿ ವಿಶೇಷವಾಗಿ ಪ್ರತಿಯೊಂದು ಮಗುವಿಗೆ ಬ್ರಹ್ಮಾತಂದೆಯು ವಿಶೇಷವಾಗಿ ತಿಳಿಸುತ್ತಿದ್ದಾರೆ - ಹೇ ಅರ್ಜುನರೇ, ನನ್ನ ಸಮಾನರಾಗಿ. ಇದರಲ್ಲಿ ಮೊದಲು ನಾನು ಎನ್ನಬೇಕು, ಇವರು ಮೊದಲು ಎನ್ನುವುದಲ್ಲ. ಈ ನಾನು ಕಲ್ಯಾಣಕಾರಿ ನಾನು ಎಂಬುದಾಗಿದೆ. ಬಾಕಿ ಮಿತವಾದ ನಾನು ಎಂಬುದು ಕೆಳಗೆ ಬೀಳಿಸುತ್ತದೆ. ಇದರಲ್ಲಿ ಒಂದು ಗಾದೆ ಮಾತೂ ಇದೆ ಓಟೇ ಸೋ ಅರ್ಜುನ್ (ನಂಬರ್ವನ್ ಆಗಿ) ಅಂದಾಗ ಅರ್ಜುನರು ಎಂದರೆ ನಂಬರ್ವನ್, ನಂಬರ್ವಾರ್ ಅಲ್ಲ ನಂಬರ್ವನ್. ಅಂದಾಗ ತಾವು ಎರಡನೇ ನಂಬರಿನವರಾಗಲು ಇಚ್ಛಿಸುತ್ತೀರೋ ಅಥವಾ ನಂಬರ್ವನ್ ಆಗಬಯಸುತ್ತೀರೋ? ಕೆಲವೊಂದು ಕಾರ್ಯದಲ್ಲಿ ಬಾಪ್ ದಾದಾ ಹಾಸ್ಯದ ಮಾತು ನೋಡಿದ್ದರು, ಪರಿವಾರದ ಮಾತನ್ನು ತಿಳಿಸುತ್ತೇವೆ ಏಕೆಂದರೆ ಪರಿವಾರದವರೇ ಕುಳಿತಿದ್ದೀರಲ್ಲವೆ. ಬಾಪ್ ದಾದಾರವರ ಬಳಿ ಸಮಾಚಾರಗಳು ಬರುತ್ತವೆ ಕೆಲವು ಇಂತಹ ಕಾರ್ಯಕ್ರಮಗಳು ಆಗುತ್ತವೆ, ಅದು ವಿಶೇಷ ಆತ್ಮಗಳ ನಿಮಿತ್ತವಾಗಿರುತ್ತದೆ. ಅಂದಾಗ ಬಾಪ್ ದಾದಾರವರ ಬಳಿ, ದಾದಿಯರ ಬಳಿ ಸಮಾಚಾರವು ಬರುತ್ತದೆ ಏಕೆಂದರೆ ಸಾಕಾರದಲ್ಲಂತೂ ದಾದಿಯರಿದ್ದಾರೆ. ಬಾಪ್ ದಾದಾರವರ ಬಳಿಯಂತೂ ಸಂಕಲ್ಪವು ತಲುಪುತ್ತದೆ, ಯಾವ ಸಂಕಲ್ಪ? ಇದರಲ್ಲಿ ನನ್ನ ಹೆಸರೂ ಇರಬೇಕು. ನಾನೇನು ಕಡಿಮೆ? ನನ್ನ ಹೆಸರು ಏಕೆ ಇಲ್ಲ? ಆದ್ದರಿಂದ ತಂದೆಯು ತಿಳಿಸುತ್ತಾರೆ - ನಂಬರ್ವನ್ ಆಗುವುದರಲ್ಲಿ ತಮ್ಮ ಹೆಸರು ಏಕಿಲ್ಲ! ಇರಬೇಕಲ್ಲವೆ! ಅಥವಾ ಇರಬಾರದೋ? ಇರಬೇಕಲ್ಲವೆ. ಸನ್ಮುಖದವರು ಕುಳಿತಿದ್ದೀರಿ, ಮಹಾರಥಿಗಳು ಕುಳಿತಿದ್ದೀರಿ, ಇರಬೇಕಲ್ಲವೆ! ಇರಬೇಕೆ! ಅಂದಾಗ ಬ್ರಹ್ಮಾ ತಂದೆಯು ಏನನ್ನು ಮಾಡಿತೋರಿಸಿದರೋ, ಇವರು ಹೀಗೆ ಮಾಡುತ್ತಾರೆ, ಅವರು ಮಾಡುವುದಿಲ್ಲ ಎಂದು ಯಾರನ್ನೂ ನೋಡಲಿಲ್ಲ. ಮೊದಲು ನಾನು ಎಂದರು. ಈ ನಾನು ಎನ್ನುವುದರಲ್ಲಿ ಯಾವುದನ್ನು ಮೊದಲು ತಿಳಿಸಿದ್ದೆವೋ ಆ ಅನೇಕ ಪ್ರಕಾರದ ರಾಯಲ್ ರೂಪದ ನಾನು ಸಮಾಪ್ತಿಯಾಗಿಬಿಡುತ್ತದೆ. ಅಂದಾಗ ಬಾಪ್ ದಾದಾರವರ ಈ ಸೀಜನ್ನಿನ ಸಮಾಪ್ತಿಯ ಆಸೆ ಇದಾಗಿದೆ. ಪ್ರತಿಯೊಂದು ಮಗು ಅಂದರೆ ಯಾರು ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿ ಎಂದು ಕರೆಸಿಕೊಳ್ಳುತ್ತಾರೆ, ತಿಳಿದುಕೊಂಡಿದ್ದಾರೆ, ಒಪ್ಪುತ್ತಾರೆ, ಆ ಪ್ರತಿಯೊಂದು ಬ್ರಾಹ್ಮಣ ಆತ್ಮವು ಯಾವುದೆಲ್ಲಾ ಸಂಕಲ್ಪ ರೂಪದಲ್ಲಿಯೂ ಹದ್ದಿನ ಬಂಧನವಿದ್ದರೆ ಆ ಬಂಧನಗಳಿಂದ ಮುಕ್ತರಾಗಿ ಬ್ರಹ್ಮಾತಂದೆಯ ಸಮಾನ ಬಂಧನಮುಕ್ತ, ಜೀವನ್ಮುಕ್ತ. ಬ್ರಾಹ್ಮಣ ಜೀವನ್ಮುಕ್ತ, ಸಾಧಾರಣ ಜೀವನ್ಮುಕ್ತರಲ್ಲ. ಬ್ರಾಹ್ಮಣ ಶ್ರೇಷ್ಠ ಜೀವನ್ಮುಕ್ತಿಯ ಈ ವಿಶೇಷ ವರ್ಷವನ್ನಾಚರಿಸಿ ಪ್ರತಿಯೊಂದು ಆತ್ಮವೂ ಎಷ್ಟು ತಮ್ಮ ಸೂಕ್ಷ್ಮ ಬಂಧನಗಳನ್ನು ಅರಿತುಕೊಂಡಿದ್ದೀರೋ ಅಷ್ಟು ಬೇರೆಯವರು ಅರಿತುಕೊಳ್ಳಲು ಸಾಧ್ಯವಿಲ್ಲ. ಬಾಪ್ ದಾದಾರವರಿಗಂತೂ ಗೊತ್ತಿದೆ ಏಕೆಂದರೆ ಬಾಪ್ ದಾದಾರವರ ಬಳಿ ದೂರದರ್ಶನವೂ ಇದೆ. ಮನಸ್ಸಿನ ದೂರದರ್ಶನವಿದೆ, ಶರೀರದ ದೂರದರ್ಶನವಲ್ಲ. ಅಂದಾಗ ಈಗ ಪುನಃ ಬಾಪ್ ದಾದಾರವರ ಯಾವ ಸೀಜನ್ ಇರುವುದೋ, ಸೀಜನ್ನಂತೂ ಇರುತ್ತದೆಯಲ್ಲವೆ ಅಥವಾ ರಜೆ ಕೊಡುವುದೇ? (ಬಾಪ್ದಾದಾ ಬರುವುದನ್ನು ನಿಲ್ಲಿಸುವುದು) ಒಂದುವರ್ಷ ರಜೆ ಕೊಡುವುದೇ? ರಜೆ ಕೊಡುವುದೇ? ಒಂದುವರ್ಷವಾದರೂ ರಜೆ ಇರಬೇಕಲ್ಲವೆ? ಅಥವಾ ಇರಬಾರದೋ? ಪಾಂಡವರೇ, ಒಂದುವರ್ಷದ ರಜೆ ಕೊಡುವುದೇ? (ದಾದೀಜಿಯವರು ಹೇಳುತ್ತಿದ್ದಾರೆ - ತಿಂಗಳಿನಲ್ಲಿ 15 ದಿನಗಳ ರಜೆ) ಒಳ್ಳೆಯದು- ಬಹಳ ಒಳ್ಳೆಯದು, ಎಲ್ಲರೂ ಹೇಳುತ್ತಾರೆ. ಯಾರು ರಜೆ ಬೇಡವೆಂದು ಹೇಳುತ್ತೀರೋ ಅವರು ಕೈಯೆತ್ತಿರಿ. ಮೇಲೆ ಕುಳಿತಿರುವವರು ಕೈಯನ್ನು ಅಲುಗಾಡಿಸುತ್ತಿಲ್ಲ. ತಂದೆಯಂತೂ ಸದಾ ಮಕ್ಕಳಿಗೆ ಪ್ರತಿಯೊಂದು ಮಾತಿನಲ್ಲಿ ಹಾಂಜೀ (ಆಯಿತು) ಎಂದು ಹೇಳುತ್ತಾರೆ. ಈಗ ತಂದೆಗೆ ಮಕ್ಕಳು ಯಾವಾಗ ಹಾಂಜಿ ಹೇಳುತ್ತೀರಿ! ತಂದೆಯಿಂದಂತೂ ಹಾಂಜಿ ಮಾಡಿಸಿಬಿಟ್ಟಿರಿ. ಆದ್ದರಿಂದ ತಂದೆಯು ತಿಳಿಸುತ್ತಾರೆ ತಂದೆಯೂ ಸಹ ಒಂದು ನಿಭಂದನೆ ಹಾಕುತ್ತಾರೆ ಆ ನಿಭಂದನೆಯು ಮಂಜೂರು ಮಾಡುತ್ತೀರಾ? ಎಲ್ಲರೂ ಹಾಂಜೀ ಎಂದಾದರೂ ಹೇಳಿ. ಪಕ್ಕಾ? ಸ್ವಲ್ಪವೂ ಉದಾಸೀನ ಮಾಡುವುದಿಲ್ಲ ತಾನೆ? ಈಗ ದೂರದರ್ಶನದಲ್ಲಿ ಎಲ್ಲರ ಭಾವಚಿತ್ರಗಳನ್ನು ತೆಗೆಯಿರಿ. ಚೆನ್ನಾಗಿದೆ- ಎಲ್ಲಾ ಮಕ್ಕಳು ಹಾಂಜೀ, ಹಾಂಜೀ ಮಾಡುತ್ತಿರುವುದನ್ನು ನೋಡಿ ತಂದೆಗೂ ಖುಷಿಯಾಗುತ್ತದೆ.

ಆದ್ದರಿಂದ ಬಾಪ್ದಾದಾರವರು ಯಾವುದೇ ಕಾರಣವನ್ನು ಹೇಳದೇ ಇರುವುದನ್ನು ಇಷ್ಟಪಡುತ್ತಾರೆ, ಈ ಕಾರಣವಿದೆ, ಈ ಕಾರಣವಿದೆ, ಈ ಬಂಧನವಿದೆ! ಯಾವುದೇ ಸಮಸ್ಯೆ ಇರಬಾರದು, ಸಮಾಧಾನಸ್ವರೂಪರಾಗಬೇಕು ಹಾಗೂ ಜೊತೆಗಾರರನ್ನು ಮಾಡಬೇಕು ಏಕೆಂದರೆ ಸಮಯದ ಗತಿಯನ್ನು ನೀವು ನೋಡುತ್ತಿದ್ದೀರಿ. ಪ್ರಪಂಚದಲ್ಲಿ ಭ್ರಷ್ಟಾಚಾರದ ಮಾತು ಎಷ್ಟೊಂದು ಹೆಚ್ಚುತ್ತಿದೆ. ಭ್ರಷ್ಟಾಚಾರ, ಅತ್ಯಾಚಾರವು ಅತಿಯಲ್ಲಿ ಹೋಗುತ್ತಿದೆ. ಆದ್ದರಿಂದ ಶ್ರೇಷ್ಟಾಚಾರದ ಬಾವುಟವು ಪ್ರತಿಯೊಬ್ಬ ಬ್ರಾಹ್ಮಣ ಆತ್ಮದ ಮನಸ್ಸಿನಲ್ಲಿ ಹಾರಲಿ ಆಗ ವಿಶ್ವದಲ್ಲಿ ಹಾರಲ್ಪಡುತ್ತದೆ. ಎಷ್ಟೊಂದು ಶಿವರಾತ್ರಿಯನ್ನು ಆಚರಿಸಿದ್ದೀರಿ! ಪ್ರತಿಯೊಂದು ಶಿವರಾತ್ರಿಯಲ್ಲಿ ಇದೇ ಸಂಕಲ್ಪವನ್ನು ಮಾಡುತ್ತೀರಿ... ವಿಶ್ವದಲ್ಲಿ ತಂದೆಯ ಬಾವುಟವನ್ನು ಹಾರಿಸಬೇಕು. ವಿಶ್ವದಲ್ಲಿ ಪ್ರತ್ಯಕ್ಷತೆಯ ಬಾವುಟವನ್ನು ಹಾರಿಸುವ ಮೊದಲು ಪ್ರತಿಯೊಂದು ಬ್ರಾಹ್ಮಣರ ಮನಸ್ಸಿನ ಹೃದಯಸಿಂಹಾಸನದಲ್ಲಿ ಸದಾ ತಂದೆಯ ಬಾವುಟ ಹಾರಬೇಕಾಗುವುದು. ಇಂತಹ ಬಾವುಟವನ್ನು ಹಾರಿಸುವ ಸಲುವಾಗಿ ಕೇವಲ ಎರಡು ಶಬ್ಧವನ್ನು ಪ್ರತಿ ಕರ್ಮದಲ್ಲಿ! ಸಂಕಲ್ಪಮಾತ್ರವಲ್ಲ, ಬುದ್ಧಿಮಾತ್ರವಲ್ಲ. ಹೃದಯದಲ್ಲಿ, ಕರ್ಮದಲ್ಲಿ, ಸಂಬಂಧದಲ್ಲಿ, ಸಂಪರ್ಕದಲ್ಲಿ ತರಬೇಕಾಗುವುದು. ಇದು ಕಷ್ಟದ ಶಬ್ಧವಲ್ಲ, ಇದು ಸಾಮಾನ್ಯ ಶಬ್ಧವಾಗಿದೆ. ಅದಾಗಿದೆ ಒಂದು ಸರ್ವ ಸಂಬಂಧದಲ್ಲಿ, ಸಂಪರ್ಕದಲ್ಲಿ ಏಕತೆ. ಅನೇಕ ಸಂಸ್ಕಾರವಿದ್ದರೂ ಸಹ ಅನೇಕತೆಯಲ್ಲಿ ಏಕತೆ. ಹಾಗೂ ಎರಡನೆಯದು ನೀವು ಯಾವ ಶ್ರೇಷ್ಠ ಸಂಕಲ್ಪವನ್ನು ಮಾಡುತ್ತೀರಿ, ಬಾಪ್ದಾದಾರವರಿಗೆ ಅದು ಬಹಳ ಇಷ್ಟವಾಗುತ್ತದೆ, ನೀವು ಯಾವಾಗ ಸಂಕಲ್ಪ ಮಾಡುತ್ತೀರಿ ಆಗ ಬಾಪ್ ದಾದಾರವರು ನೋಡಿ, ಕೇಳಿ ಈ ರೀತಿ ಬಹಳ ಖುಷಿಪಡುತ್ತಾರೆ - ವಾಹ್! ವಾಹ್! ಮಕ್ಕಳೇ ವಾಹ್! ವಾಹ್ ಶ್ರೇಷ್ಠ ಸಂಕಲ್ಪ ವಾಹ್! ಆದರೆ, ಆದರೆ..... ಬಂದುಬಿಡುತ್ತದೆ. ಇದು ಬರಬಾರದು ಆದರೆ ಬಂದುಬಿಡುತ್ತದೆ. ಮೆಜಾರಿಟಿ ಸಂಕಲ್ಪ, ಮೆಜಾರಿಟಿ ಅರ್ಥಾತ್ 90%, ಕೆಲವು ಮಕ್ಕಳು ತುಂಬಾ ಚೆನ್ನಾಗಿದ್ದಾರೆ, ಬಾಪ್ ದಾದಾರವರೂ ಸಹ ತಿಳಿದುಕೊಳ್ಳುತ್ತಾರೆ ಇಂದು ಈ ಮಗುವಿನ ಸಂಕಲ್ಪ ಬಹಳ ಚೆನ್ನಾಗಿದೆ. ಉನ್ನತಿಯೂ ಆಗಿಬಿಡುತ್ತದೆ ಆದರೆ ಮಾತಿನಲ್ಲಿ ಬರುವ ವೇಳೆಗೆ ಅದು ಅರ್ಧದಷ್ಟು ಕಡಿಮೆ ಆಗುತ್ತದೆ, ಹಾಗೆಯೇ ಕರ್ಮದಲ್ಲಿ ಬರುವ ವೇಳೆಗೆ ಮುಕ್ಕಾಲುಭಾಗ ಕಡಿಮೆ ಆಗುತ್ತದೆ, ಹೀಗೆ ಕಲಬೆರಕೆ ಆಗಿಬಿಡುತ್ತದೆ. ಇದಕ್ಕೆ ಕಾರಣ ಏನು? ಕಾರಣ ಸಂಕಲ್ಪದಲ್ಲಿ ಏಕಾಗ್ರತೆ ಹಾಗೂ ಧೃಡತೆ ಇಲ್ಲ. ಒಂದುವೇಳೆ ಸಂಕಲ್ಪದಲ್ಲಿ ಏಕಾಗ್ರತೆ ಇದ್ದಾಗ ಆ ಏಕಾಗ್ರತೆಯು ಸಫಲತೆಗೆ ಸಾಧನವಾಗಿದೆ. ಧೃಡತೆಯು ಸಫಲತೆಗೆ ಸಾಧನವಾಗಿದೆ ಆದರೆ ಈ ಎರಡರಲ್ಲೂ ಅಂತರವಾಗಿಬಿಡುತ್ತದೆ, ಇದಕ್ಕೆ ಕಾರಣವೇನು? ಆ ಕಾರಣವನ್ನು ಒಂದೇ ಮಾತಿನಲ್ಲಿ ಬಾಪ್ದಾದಾ ಫಲಿತಾಂಶವನ್ನು ನೋಡುತ್ತಾರೆ, ಮಕ್ಕಳು ಅನ್ಯರನ್ನು ಹೆಚ್ಚಾಗಿ ನೋಡುತ್ತಾರೆ. ನೀವೂ ಸಹ ಈ ರೀತಿ ಹೇಳುತ್ತೀರಲ್ಲವೇ..., ಇವರು ಹೀಗೆ ಮಾಡುತ್ತಾರೆ, ಆಗ ಒಂದುಬೆರಳು ಅವರಕಡೆ ಇದ್ದು ಇನ್ನುಳಿದ ನಾಲ್ಕು ಬೆರಳು ಸ್ವಯಂನ ಕಡೆ ಇರುತ್ತದೆ. ಆಗ ನಾಲ್ಕು ಬೆರಳನ್ನು (ಸ್ವಯಂನ್ನು) ನೋಡುವುದಿಲ್ಲ, ಒಂದು ಬೆರಳು (ಅನ್ಯರನ್ನು) ತುಂಬಾ ನೋಡುತ್ತಾರೆ. ಆದ್ದರಿಂದ ಧೃಡತೆ ಹಾಗೂ ಏಕಾಗ್ರತೆ, ಏಕತೆಯು ಅಲುಗಾಡಿಬಿಡುತ್ತದೆ. ಇದನ್ನು ಅವರು ಮಾಡಲಿ, ಆಗ ನಾನು ಮಾಡುತ್ತೇನೆ. ಇಲ್ಲಿ ಸ್ವಯಂನ ನಂಬರ್ವನ್ (ಓಟೆ ಸೋ ಅರ್ಜುನ್) ಮಾಡುತ್ತಾರೆ, ಅನ್ಯರನ್ನು ಎರಡನೇ ನಂಬರ್ ಮಾಡಿಕೊಳ್ಳುತ್ತಾರೆ. ಇಲ್ಲವೆಂದರೆ ತಮ್ಮ ಸ್ಲೋಗನ್ನನ್ನು ಪರಿವರ್ತನೆ ಮಾಡಿಕೊಳ್ಳಿ. ಸ್ವ ಪರಿವರ್ತನೆಯಿಂದ ವಿಶ್ವಪರಿವರ್ತನೆ ಬದಲಾಗಿ ವಿಶ್ವಪರಿವರ್ತನೆಯಿಂದ ಸ್ವ ಪರಿವರ್ತನೆ ಎಂದು ಮಾಡಿಕೊಳ್ಳಿ. ಅನ್ಯರ ಪರಿವರ್ತನೆಯಿಂದ ಸ್ವಯಂನ ಪರಿವರ್ತನೆ. ಪರಿವರ್ತನೆ ಮಾಡೋಣವೇ? ಪರಿವರ್ತನೆ ಮಾಡೋಣವೇ? ಮಾಡುವುದು ಬೇಡ...? ಆದರೆ ಅದಕ್ಕಾಗಿ ಬಾಪ್ದಾದಾರವರೂ ಸಹ ಒಂದು ನಿಬಂಧನೆಯನ್ನು (ಕಂಡೀಷನ್) ಹಾಕುತ್ತಾರೆ, ನಿಮಗೆ ಇಷ್ಟ ತಾನೇ! ತಿಳಿಸಿಕೊಡೋಣವೇ? ಬಾಪ್ದಾದಾರವರು 6 ತಿಂಗಳಿನ ಫಲಿತಾಂಶವನ್ನು ನೋಡುತ್ತೇವೆ ಆಗ ಬರುತ್ತೇವೆ. ಇಲ್ಲವೆಂದರೆ ಬರುವುದಿಲ್ಲ. ಯಾವಾಗ ತಂದೆ ತಮ್ಮ ಮಾತಿಗೆ ಹಾಜಿ ಎಂದು ಹೇಳಿದರು ಮಕ್ಕಳೂ ಸಹ ತಂದೆಯ ಮಾತಿಗೆ ಹಾಜಿ ಎಂದು ಹೇಳಬೇಕಲ್ಲವೇ! ಏನೇ ಆಗಿಬಿಡಲಿ, ಬಾಪ್ ದಾದಾರವರಂತೂ ತಿಳಿಸುತ್ತಾರೆ - ಸ್ವ ಪರಿವರ್ತನೆಗಾಗಿ ಈ ಹದ್ದಿನ ನನ್ನತನದಿಂದಸಾಯಬೇಕಾಗುತ್ತದೆ, ನನ್ನತನದಿಂದ ಸಾಯಬೇಕು, ಶರೀರದಿಂದಲ್ಲ. ಶರೀರದಿಂದ ಸಾಯಬಾರದು, ನನ್ನತನದಿಂದ ಸಾಯಬೇಕು. ನಾನು ಸರಿಯಾಗಿ ಇದ್ದೇನೆ, ನಾನು ಈ ರೀತಿ ಇದ್ದೇನೆ, ನಾನೇನು ಕಡಿಮೆ ಇದ್ದೇನೆ, ನಾನೂ ಸಹ ಎಲ್ಲಾ ಆಗಿದ್ದೇನೆ, ಈ ನನ್ನತನದಿಂದ ಸಾಯಬೇಕು. ಆದ್ದರಿಂದ ಸಾಯಬೇಕಾಗುತ್ತದೆಯಲ್ಲವೇ. ಈ ಮೃತ್ಯು ಬಹಳ ಮಧುರವಾದ ಮೃತ್ಯು ಆಗಿದೆ. ಇದು ಸಾಯುವುದು ಅಲ್ಲ, 21 ಜನ್ಮಗಳ ರಾಜ್ಯಭಾಗ್ಯದಲ್ಲಿ ಬದುಕುವುದಾಗಿದೆ. ಹಾಗಾದರೆ ಇಷ್ಟ ಇದೆಯಲ್ಲವೇ? ನಿಮಿತ್ತ ಟೀಚರ್ಸ್ಗೆ ಇಷ್ಟ ಇದೆಯಲ್ಲವೇ? ಡಬಲ್ ವಿದೇಶಿಯರಿಗೆ? ಡಬಲ್ ವಿದೇಶಿಯರೂ ಸಹ ಯಾವ ಸಂಕಲ್ಪ ಮಾಡುತ್ತೀರಿ ಆ ಸಂಕಲ್ಪ ಮಾಡುವುದರಲ್ಲಿ ಧೈರ್ಯ ಇಡುತ್ತಾರೆ. ಅದು ಅವರ ವಿಶೇಷತೆ ಆಗಿದೆ ಹಾಗೂ ಭಾರತವಾಸಿಯರು ಮೂರುಪಟ್ಟು (ಟ್ರಿಬಲ್)) ಧೈರ್ಯ ಮಾಡುವರು ಆಗಿದ್ದಾರೆ, ಅವರು ಡಬಲ್ ಆದರೆ ಇವರು ಟ್ರಿಬಲ್. ಆದ್ದರಿಂದ ಬಾಪ್ದಾದಾರವರೂ ಸಹ ಇದನ್ನೇ ನೋಡಲು ಇಷ್ಟಪಡುತ್ತಾರೆ. ತಿಳಿಯಿತಲ್ಲವೇ! ಇದೇ ಬಾಪ್ ದಾದಾರವರ ಆಶಾದೀಪ, ಪ್ರತಿಯೊಂದು ಮಗುವಿನ ಆಂತರ್ಯದಲ್ಲಿ ಬೆಳಗಿರುವುದನ್ನು ನೋಡಲು ಇಷ್ಟಪಡುತ್ತಾರೆ. ಈಗ ಈ ವರ್ಷದಲ್ಲಿ ಇಂತಹ ದೀಪಾವಳಿಯನ್ನು ಆಚರಿಸಿ. ಭಲೇ 6 ತಿಂಗಳ ನಂತರವೇ ಆಚರಿಸಿ. ಯಾವಾಗ ಬಾಪ್ದಾದಾ ಇಂತಹ ದೀಪಾವಳಿಯ ಸಮಾರೋಹವನ್ನು ನೋಡುತ್ತಾರೆ ಆಗ ತಮ್ಮ ಆಗಮನದ ಪೆÇ್ರೀಗ್ರಾಂನ್ನು ಕೊಡುತ್ತಾರೆ. ಮಾಡಲೇಬೇಕಾಗುವುದು. ನೀವು ಮಾಡದೆ, ಹಿಂದೆ ಇರುವವರು ಮಾಡುತ್ತಾರೇನು! 16108ರ ನಿಮ್ಮ ಮಾಲೆಯಲ್ಲಿ ನೀವು ಹಳೆಯ ಮಕ್ಕಳೇ ಬರಬೇಕಾಗಿದೆ. ಹೊಸ ಮಕ್ಕಳಂತೂ ಹಿಂದೆ-ಹಿಂದೆ ಬರುತ್ತಾರೆ. ಹಾ! ಕೆಲವು-ಕೆಲವರು ಲಾಸ್ಟ್ ಸೋ ಫಸ್ಟ್ನಲ್ಲಿ ಬರುತ್ತಾರೆ. ಕೆಲವು ಕೆಲವರು ಲಾಸ್ಟ್ ಸೋ ಫಸ್ಟ್ನಲ್ಲಿ ಬರುವಂತೆ ಮಾದರಿ ಆಗಿದ್ದಾರೆ ಆದ್ದರಿಂದ ಫಸ್ಟ್ ಬರುತ್ತಾರೆ. ಆದರೆ ಬಹಳ ಕಡಿಮೆ. ಆಗ ಉಳಿದವರು ನೀವೇ ಆಗಿದ್ದೀರಿ. ನೀವೇ ಪ್ರತಿ ಕಲ್ಪದಲ್ಲಿ ಆಗಿದ್ದೀರಿ ಈಗ ನೀವೇ ಆಗಬೇಕಾಗಿದೆ. ಒಂದುವೇಳೆ ಈಗ ಎಲ್ಲಾದರೂ ಕುಳಿತಿರಬಹುದು, ವಿದೇಶದಲ್ಲಾದರೂ ಕುಳಿತಿರಬಹುದು, ದೇಶದಲ್ಲಾದರೂ ಕುಳಿತಿರಬಹುದು ಆದರೆ ಯಾರು ನಿಮ್ಮಲ್ಲಿ ಬಹಳ ಕಾಲದ ಪಕ್ಕಾ ನಿಶ್ಚಯ ಬುದ್ಧಿವುಳ್ಳವರಾಗಿದ್ದೀರಿ ಅವರು ಅಧಿಕಾರಿ ಆಗಿಯೇ ಇದ್ದಾರೆ. ಬಾಪ್ ದಾದಾರವರಿಗಂತೂ ಪ್ರೀತಿ ಇದೆಯಲ್ಲವೆ, ಯಾರು ಬಹಳ ಕಾಲದ ಉತ್ತಮ ಪುರುÁರ್ಥಿ, ಸಂಪೂರ್ಣ ಪುರುಷಾರ್ಥಿ ಅಲ್ಲ ಆದರೆ ಉತ್ತಮ ಪುರುಷಾರ್ಥಿ ಆಗಿದ್ದಾರೆ ಅವರನ್ನು ಬಾಪ್ ದಾದಾ ಬಿಟ್ಟು ಹೋಗುವುದಿಲ್ಲ. ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ. ಆದ್ದರಿಂದ ಈ ಪಕ್ಕಾ ನಿಶ್ಚಯ ಮಾಡಿಕೊಳ್ಳಿ - ನಾವೇ ಆಗಿದ್ದೆವು, ನಾವೇ ಆಗಿದ್ದೇವೆ, ನಾವೇ ಜೊತೆ ಇರುತ್ತೇವೆ. ಸರಿ ಇದೆಯಲ್ಲವೇ! ಪಕ್ಕಾ ಇದೆಯಲ್ಲವೇ? ಅದಕ್ಕಾಗಿ ಕೇವಲ ಶುಭಚಿಂತಕ, ಶುಭಚಿಂತನೆ, ಶುಭಭಾವನೆ, ಪರಿವರ್ತನೆಯ ಭಾವನೆ, ಸಹಯೋಗ ಕೊಡುವಭಾವನೆ, ದಯಾಭಾವನೆಯನ್ನು ಇಮರ್ಜ್ ಮಾಡಿಕೊಳ್ಳಿ. ಈಗ ಮರ್ಜ್ ಮಾಡಿ ಇಟ್ಟುಕೊಂಡಿದ್ದೀರಿ ಅದನ್ನು ಇಮರ್ಜ್ ಮಾಡಿಕೊಳ್ಳಿ. ತುಂಬಾ ಶಿಕ್ಷಣವನ್ನು ಕೊಡಬೇಡಿ, ಕ್ಷಮಿಸಿ. ಶಿಕ್ಷಣ ಕೊಡುವುದರಲ್ಲಿ ಒಬ್ಬರಿಗಿಂತ ಒಬ್ಬರು ಎಲ್ಲರೂ ಬುದ್ಧಿವಂತರಾಗಿದ್ದಾರೆ. ಆದರೆ ಕ್ಷಮೆಯ ಜೊತೆಯಲ್ಲಿ ಶಿಕ್ಷಣವನ್ನು ಕೊಡಿ. ಮುರಳಿ ಹೇಳುವುದರಲ್ಲಿ, ಕೋರ್ಸ್ ಕೊಡುವುದರಲ್ಲಿ ಅಲ್ಲದೇ ತಾವು ಯಾವ ಕಾರ್ಯಕ್ರಮಗಳನ್ನು ಮಾಡುತ್ತೀರಿ ಆಗ ಶಿಕ್ಷಣವನ್ನು ಕೊಡಿ ಆದರೆ ಯಾವಾಗ ಪರಸ್ಪರ ವ್ಯವಹಾರದಲ್ಲಿ ಬರುತ್ತೀರಿ ಆಗ ಕ್ಷಮೆಯ ಜೊತೆಯಲ್ಲಿ ಶಿಕ್ಷಣವನ್ನು ಕೊಡಿ, ಕೇವಲ ಶಿಕ್ಷಣವನ್ನು ಕೊಡಬೇಡಿ. ದಯಾಹೃದಯಿ ಆಗಿ ಶಿಕ್ಷಣವನ್ನು ಕೊಟ್ಟಾಗ ನಿಮ್ಮ ಕ್ಷಮೆಯೂ ಅನ್ಯರ ಬಲಹೀನತೆಯನ್ನು ಕ್ಷಮಿಸುವಂತಹ ಕೆಲಸ ಮಾಡುತ್ತದೆ. ತಿಳಿಯಿತಲ್ಲವೇ! ಒಳ್ಳೆಯದು.

ಈಗ ಒಂದು ಸೆಕೆಂಡಿನಲ್ಲಿ ಮನಸ್ಸಿನ ಮಾಲೀಕರಾಗುವ, ಮನಸ್ಸನ್ನು ಎಷ್ಟು ಸಮಯಬೇಕೋ ಅಷ್ಟೂ ಸಮಯ ಏಕಾಗ್ರ ಮಾಡಲು ಸಾಧ್ಯವೆ? ಮಾಡಬಲ್ಲಿರಾ? ಅಂದಾಗ ಈಗ ಈ ಆತ್ಮಿಕ ವ್ಯಾಯಾಮ ಮಾಡಿ - ಸಂಪೂರ್ಣ ಮನಸ್ಸಿನ ಏಕಾಗ್ರತೆಯಿರಲಿ, ಅದು ಸಂಕಲ್ಪದಲ್ಲಿಯೂ ಏರುಪೇರಿಲ್ಲ, ಅಚಲ ಒಳ್ಳೆಯದು.

ನಾಲ್ಕಾರೂ ಕಡೆಯ ಸರ್ವ ಅವಿನಾಶಿ, ಅಖಂಡ ಖಜಾನೆಗಳ ಮಾಲೀಕರು, ಸದಾ ಸಂಗಮಯುಗಿ ಶ್ರೇಷ್ಠ ಬಂಧನಮುಕ್ತ, ಜೀವನ್ಮುಕ್ತಸ್ಥಿತಿಯಲ್ಲಿ ಸ್ಥಿತರಾಗಿರುವವರು, ಸದಾ ಬಾಪ್ದಾದಾರವರ ಆಸೆಗಳನ್ನು ಸಂಪನ್ನ ಮಾಡಿರುವವರು, ಸದಾ ಏಕತೆ ಮತ್ತು ಏಕಾಗ್ರತೆಯ ಶಕ್ತಿ ಸಂಪನ್ನ ಮಾಸ್ಟರ್ ಸರ್ವಶಕ್ತಿವಂತ ಆತ್ಮಗಳಿಗೆ ಬಾಪ್ದಾದಾರವರ ನೆನಪು, ಪ್ರೀತಿ, ಹಾಗೂ ನಮಸ್ತೆ.

ನಾಲ್ಕಾರು ಕಡೆಯ ದೂರ ಕುಳಿತಿರುವ ಮಕ್ಕಳಿಗೆ, ಯಾರು ನೆನಪು-ಪ್ರೀತಿಯನ್ನು ಕಳಿಸಿದ್ದೀರಿ, ಪತ್ರವನ್ನು ಕಳಿಸಿದ್ದೀರಿ, ಅವರಿಗೆ ಬಾಪ್ದಾದಾ ಬಹಳ ಬಹಳ ಹೃದಯದ ಪ್ರೀತಿಯ ಸಹಿತ ನೆನಪು -ಪ್ರೀತಿಯನ್ನು ಕೊಡುತ್ತಿದ್ದಾರೆ. ಜೊತೆ ಜೊತೆಯಲ್ಲಿ ಅನೇಕ ಮಕ್ಕಳು ಮಧುಬನಿನ ರಿಫ್ರೇಶ್ಮೆಂಟ್ನ ಪತ್ರ ಬಹಳ ಚೆನ್ನಾಗಿ ಕಳಿಸಿದ್ದೀರಿ, ಆ ಮಕ್ಕಳಿಗೂ ವಿಶೇಷ ನೆನಪು ಪ್ರೀತಿ ಮತ್ತು ನಮಸ್ತೆ.

ವರದಾನ:
ಕಳೆದು ಹೋದದ್ದರ ಬಗ್ಗೆ ಚಿಂತೆ ಮಾಡದೆ ಫುಲ್ ಸ್ಟಾಪ್ ಹಾಕುವಂತಹ ತೀವ್ರ ಪುರುಷಾರ್ಥಿ ಭವ

ಇದುವರೆಗೂ ಏನೆಲ್ಲಾ ಆಗಿದೆ ಅದಕ್ಕೆ ಪುಲ್ ಸ್ಟಾಪ್ ಹಾಕಿಬಿಡಿ. ಕಳೆದು ಹೋದದ್ದರ ಬಗ್ಗೆ ಚಿಂತೆ ಮಾಡದೇ ಇರುವುದೇ ತೀವ್ರಪುರುಷಾರ್ಥವಾಗಿದೆ. ಒಂದುವೇಳೆ ಕಳೆದು ಹೋದುದರ ಬಗ್ಗೆ ಚಿಂತನೆ ಮಾಡುತ್ತಿದ್ದರೆ ಸಮಯ, ಶಕ್ತಿ, ಸಂಕಲ್ಪ, ಎಲ್ಲಾ ವ್ಯರ್ಥವಾಗಿಬಿಡುತ್ತದೆ. ಈಗ ವ್ಯರ್ಥ ಮಾಡುವ ಸಮಯವಲ್ಲ ಏಕೆಂದರೆ ಸಂಗಮಯುಗದ ಎರಡು ಗಳಿಗೆ ಅರ್ಥಾತ್ ಎರಡು ಸೆಕೆಂಡ್ ಆದರೂ ವ್ಯರ್ಥಮಾಡಿದರೆ ಅನೇಕ ವರ್ಷ ವ್ಯರ್ಥ ಮಾಡಿದಿರಿ ಆದ್ದರಿಂದ ಸಮಯದ ಮಹತ್ವಿಕೆಯನ್ನು ತಿಳಿದು ಈಗ ಕಳೆದು ಹೋದುದಕ್ಕೆ ಫುಲ್ ಸ್ಟಾಪ್ ಹಾಕಿ. ಪುಲ್ಸ್ಟಾಪ್ ಹಾಕುವುದು ಎಂದರೆ ಸರ್ವ ಖಜಾನೆಗಳಿಂದ ಫುಲ್ ಆಗುವುದು.

ಸ್ಲೋಗನ್:
ಯಾವಾಗ ಎಲ್ಲಾ ಸಂಕಲ್ಪ ಶ್ರೇಷ್ಠವಾಗುವುದು ಆಗ ಸ್ವಯಂನ ಮತ್ತು ವಿಶ್ವದ ಕಲ್ಯಾಣವಾಗುವುದು.

ಅವ್ಯಕ್ತ ಸೂಚನೆ - ಸತ್ಯ ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ

ಜ್ಞಾನದ ಯಾವುದೇ ಮಾತನ್ನು ಅಥಾರಿಟಿಯ ಜೊತೆ, ಸತ್ಯತೆ ಹಾಗೂ ಸಭ್ಯತೆಯೊಂದಿಗೆ ಹೇಳಿ, ಸಂಕೋಚದಿಂದ ಅಲ್ಲ. ಪ್ರತ್ಯಕ್ಷತೆಯನ್ನು ಮಾಡುವುದಕ್ಕಾಗಿ ಮೊದಲು ಸ್ವಯಂ ಅನ್ನು ಪ್ರತ್ಯಕ್ಷ ಮಾಡಿ, ನಿರ್ಭಯರಾಗಿ. ಭಾಷಣದಲ್ಲಿ ಶಬ್ದಗಳು ಕಡಿಮೆ ಇರಲಿ ಆದರೆ ಇಂತಹ ಶಕ್ತಿಶಾಲಿ ಇರಲಿ ಆದರೆ ಇಷ್ಟು ಶಕ್ತಿಶಾಲಿ ಆಗಿರಲಿ ಅದರಲ್ಲಿ ತಂದೆಯ ಪರಿಚಯ ಹಾಗೂ ಸ್ನೇಹ ಸಮಾವೇಶವಾಗಿರಲಿ ಯಾವ ಸ್ನೇಹ ರೂಪಿ ಚುಂಬಕ ಆತ್ಮರನ್ನು ಪರಮಾತ್ಮನ ಕಡೆಗೆ ಸೆಳೆಯಲಿ.