09.04.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಪ್ರತಿಯೊಬ್ಬರ ನಾಡಿಯನ್ನು ನೋಡಿ ಮೊದಲು ಅವರಿಗೆ ತಂದೆಯ ಮೇಲೆ ನಿಶ್ಚಯ ಮಾಡಿಸಿ ನಂತರ ಮುಂದುವರೆಯಿರಿ, ಪರಮಾತ್ಮನ ಮೇಲೆ ನಿಶ್ಚಯವಿಲ್ಲವೆಂದರೆ ಜ್ಞಾನಕೊಡುವುದು ಸಮಯ ವ್ಯರ್ಥಮಾಡುವುದಾಗಿದೆ”

ಪ್ರಶ್ನೆ:
ಯಾವ ಮುಖ್ಯ ಪುರುಷಾರ್ಥವು ಸ್ಕಾಲರ್ಶಿಪನ್ನು ತೆಗೆದುಕೊಳ್ಳಲು ಅಧಿಕಾರಿಗಳನ್ನಾಗಿ ಮಾಡುತ್ತದೆ?

ಉತ್ತರ:
ಅಂತರ್ಮುಖತೆಯ ಪುರುಷಾರ್ಥ. ನೀವು ಬಹಳ ಅಂತರ್ಮುಖಿಯಾಗಿರಬೇಕು. ತಂದೆಯಂತು ಕಲ್ಯಾಣಕಾರಿಯಾಗಿದ್ದಾರೆ, ಕಲ್ಯಾಣಕ್ಕಾಗಿಯೇ ಸಲಹೆಯನ್ನು ಕೊಡುತ್ತಾರೆ. ಯಾರು ಅಂತರ್ಮುಖಿ ಯೋಗಿ ಮಕ್ಕಳಿದ್ದಾರೆಯೋ ಅವರೆಂದೂ ದೇಹಾಭಿಮಾನದಲ್ಲಿ ಬಂದು ಮುನಿಸಿಕೊಳ್ಳುವುದಾಗಲಿ, ಜಗಳವಾಡುವುದಾಗಲಿ ಇಲ್ಲ. ಅವರ ಚಲನೆಯು ಬಹಳ ಘನತೆಯಿಂದ ಕೂಡಿರುತ್ತದೆ. ಬಹಳ ಕಡಿಮೆ ಮಾತನಾಡುತ್ತಾರೆ. ಯಜ್ಞದ ಸೇವೆಯಲ್ಲಿ ಬಹಳ ಅಭಿರುಚಿಯನ್ನಿಡುತ್ತಾರೆ. ಅವರು ಜ್ಞಾನವನ್ನು ಹೆಚ್ಚಿನದಾಗಿ ಚರ್ಚೆ ಮಾಡುವುದಿಲ್ಲ, ನೆನಪಿನಲ್ಲಿದ್ದು ಸೇವೆ ಮಾಡುತ್ತಾರೆ.

ಓಂ ಶಾಂತಿ.
ಬಹಳಮಟ್ಟಿಗೆ ನೋಡಿದಾಗ ಪ್ರದರ್ಶನಿ, ಸೇವೆಯ ಸಮಾಚಾರವು ಬರುತ್ತದೆ. ಅದರಲ್ಲಿ ಮೂಲಮಾತು ತಂದೆಯ ಪರಿಚಯವಾಗಿದೆ. ತಂದೆಯ ಮೇಲೆ ಪೂರ್ಣ ನಿಶ್ಚಯವಾಗದ ಹೊರತು ಉಳಿದಂತೆ ಏನೆಲ್ಲಾ ತಿಳಿಸುತ್ತೀರಿ, ಅದು ಅವರ ಬುದ್ಧಿಯಲ್ಲಿ ಕುಳಿತುಕೊಳ್ಳುವುದು ಕಷ್ಟವಾಗುತ್ತದೆ. ಭಲೆ ಚೆನ್ನಾಗಿದೆ, ಚೆನ್ನಾಗಿದೆ ಎಂದು ಹೇಳುತ್ತಾರೆ. ತಂದೆಯ ಪರಿಚಯವಿಲ್ಲವೆಂದರೆ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ. ತಂದೆಯ ಮಹಾವಾಕ್ಯವಾಗಿದೆ - ನನ್ನನ್ನು ನೆನಪು ಮಾಡಿ, ನಾನೇ ಪತಿತ-ಪಾವನನಾಗಿದ್ದೇನೆ, ನನ್ನನ್ನು ನೆನಪು ಮಾಡುವುದರಿಂದ ಪತಿತರಿಂದ ಪಾವನರಾಗಿಬಿಡುತ್ತೀರಿ. ಇದು ಮುಖ್ಯಮಾತಾಗಿದೆ - ಭಗವಂತನು ಒಬ್ಬರೇ ಆಗಿದ್ದಾರೆ, ಅವರೇ ಪತಿತ-ಪಾವನನಾಗಿದ್ದಾರೆ, ಅಲ್ಲದೆ ಜ್ಞಾನಸಾಗರ, ಸುಖದಸಾಗರನಾಗಿದ್ದಾರೆ. ಅವರೇ ಶ್ರೇಷ್ಠಾತಿಶ್ರೇಷ್ಠನಾಗಿದ್ದಾರೆ. ಈ ಮಾತು ನಿಶ್ಚಯವಾಗಿಬಿಟ್ಟರೆ ಭಕ್ತಿಮಾರ್ಗದ ಯಾವ ಗೀತಾ, ಭಾಗವತ, ವೇದಶಾಸ್ತ್ರಗಳಿವೆಯೋ ಎಲ್ಲವೂ ಖಂಡನೆಯಾಗಿಬಿಡುವುದು. ಭಗವಂತನಂತೂ ಸ್ವತಃ ತಿಳಿಸುತ್ತಾರೆ - ಈ ಶಾಸ್ತ್ರಗಳನ್ನು ನಾನು ತಿಳಿಸಲಿಲ್ಲ. ನನ್ನ ಜ್ಞಾನವು ಶಾಸ್ತ್ರಗಳಲ್ಲಿಲ್ಲ, ಅದು ಭಕ್ತಿಮಾರ್ಗದ ಜ್ಞಾನವಾಗಿದೆ, ನಾನಂತೂ ಜ್ಞಾನವನ್ನು ನೀಡಿ ಸದ್ಗತಿ ಮಾಡಿ ಹೊರಟುಹೋಗುತ್ತೇನೆ, ಮತ್ತೆ ಈ ಜ್ಞಾನವು ಪ್ರಾಯಲೋಪವಾಗಿಬಿಡುತ್ತದೆ. ಜ್ಞಾನದ ಪ್ರಾಲಬ್ಧವು ಮುಕ್ತಾಯವಾದ ಮೇಲೆ ಮತ್ತೆ ಭಕ್ತಿಮಾರ್ಗವು ಆರಂಭವಾಗುತ್ತದೆ. ಯಾವಾಗ ತಂದೆಯ ಮೇಲೆ ನಿಶ್ಚಯವು ಕುಳಿತುಕೊಳ್ಳುತ್ತದೆಯೋ ಆಗ ತಿಳಿಯುತ್ತಾರೆ. ಭಗವಾನುವಾಚ - ಇದು ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ. ಜ್ಞಾನ ಮತ್ತು ಭಕ್ತಿ - ಇದು ಅರ್ಧ-ಅರ್ಧಸಮಯ ನಡೆಯುತ್ತದೆ. ಭಗವಂತನು ಬಂದಾಗ ತಮ್ಮ ಪರಿಚಯವನ್ನು ತಿಳಿಸುತ್ತಾರೆ.ನಾನು ಹೇಳುತ್ತೇನೆ ಇದು 5000 ವರ್ಷಗಳ ಕಲ್ಪವಾಗಿದೆ. ನಾನು ಬ್ರಹ್ಮಾರವರ ಮುಖದಿಂದ ತಿಳಿಸುತ್ತಿದ್ದೇನೆ ಅಂದಾಗ ಮೊಟ್ಟಮೊದಲಿಗೆ ಇದೇ ಮುಖ್ಯಮಾತನ್ನು ಅವರ ಬುದ್ಧಿಯಲ್ಲಿ ಕುಳ್ಳರಿಸಬೇಕು - ಭಗವಂತ ಯಾರು? ಎಲ್ಲಿಯವರೆಗೆ ಈ ಮಾತು ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಮತ್ತೇನು ತಿಳಿಸಿದರೂ ಅದರ ಪ್ರಭಾವ ಬೀರುವುದಿಲ್ಲ. ಇಡೀ ಪರಿಶ್ರಮವೆಲ್ಲವೂ ಈ ಮಾತಿನಲ್ಲಿದೆ. ತಂದೆಯು ಬರುವುದೇ ಎಲ್ಲರನ್ನು ಸಮಾಧಿಯಿಂದ ಜಾಗೃತ ಮಾಡಲು. ಶಾಸ್ತ್ರ ಇತ್ಯಾದಿಗಳನ್ನು ಓದುವುದರಿಂದ ಜಾಗೃತರಾಗುವುದಿಲ್ಲ. ಪರಮತ್ಮನು ಜ್ಯೋತಿ ಸ್ವರೂಪನಾಗಿದ್ದಾರೆ. ಅಂದಮೇಲೆ ಅವರ ಮಕ್ಕಳೂ ಜ್ಯೋತಿಸ್ವರೂಪರಾಗಿದ್ದೀರಿ ಆದರೆ ನೀವು ಮಕ್ಕಳು ಪತಿತ ಆತ್ಮರಾಗಿದ್ದೀರಿ. ಆದಕಾರಣ ಜ್ಯೋತಿಯು ನಂದಿಹೋಗಿದೆ, ತಮೋಪ್ರಧಾನರಾಗಿಬಿಟ್ಟಿದ್ದೀರಿ. ಮೊಟ್ಟಮೊದಲಿಗೆ ತಂದೆಯ ಪರಿಚಯ ಕೊಡದ ಹೊರತು ನಂತರ ಯಾವುದೆಲ್ಲಾ ಪರಿಶ್ರಮ ಪಡುತ್ತಾರೆಯೋ, ಅಭಿಪ್ರಾಯವನ್ನು ಬರೆಸಿಕೊಳ್ಳುವರು. ಅದೇನೂ ಪ್ರಯೋಜನಕ್ಕೆ ಬರುವುದಿಲ್ಲ. ಅದರಿಂದ ಸೇವೆಯೂ ಆಗುವುದಿಲ್ಲ, ನಿಶ್ಚಯವಿದ್ದಾಗಲೇ ಅವಶ್ಯವಾಗಿ ತಿಳಿದುಕೊಳ್ಳುವರು - ಬ್ರಹ್ಮಾರವರ ಮೂಲಕ ತಂದೆಯು ಜ್ಞಾನವನ್ನು ಕೊಡುತ್ತಿದ್ದಾರೆ. ಬ್ರಹ್ಮಾರವರನ್ನು ನೋಡಿ ಅನೇಕರು ತಬ್ಬಿಬ್ಬಾಗುತ್ತಾರೆ ಏಕೆಂದರೆ ತಂದೆಯ ಪರಿಚಯವಿಲ್ಲ. ನೀವೆಲ್ಲರೂ ತಿಳಿದುಕೊಂಡಿದ್ದೀರಿ - ಭಕ್ತಿಮಾರ್ಗವು ಈಗ ಕಳೆದಿದೆ, ಕಲಿಯುಗದಲ್ಲಿ ಭಕ್ತಿಮಾರ್ಗವಿದೆ, ಈಗ ಸಂಗಮಯುಗದಲ್ಲಿ ಜ್ಞಾನಮಾರ್ಗವಿದೆ. ನಾವು ಸಂಗಮಯುಗಿಗಳಾಗಿದ್ದೇವೆ, ರಾಜಯೋಗವನ್ನು ಕಲಿಯುತ್ತಿದ್ದೇವೆ, ಹೊಸ ಪ್ರಪಂಚಕ್ಕಾಗಿ ದೈವೀ ಗುಣಗಳನ್ನು ಧಾರಣೆ ಮಾಡುತ್ತೇವೆ. ಯಾರು ಸಂಗಮಯುಗದಲ್ಲಿಲ್ಲವೋ ಅವರು ದಿನ-ಪ್ರತಿದಿನ ತಮೋಪ್ರಧಾನರಾಗುತ್ತಲೇ ಹೋಗುತ್ತಾರೆ. ಆ ಕಡೆ ತಮೋಪ್ರಧಾನವು ಹೆಚ್ಚುತ್ತಲೇ ಹೋಗುತ್ತದೆ, ಈ ಕಡೆ ನಿಮ್ಮ ಸಂಗಮಯುಗವು ಮುಕ್ತಾಯವಾಗುತ್ತಾ ಹೋಗುತ್ತಿದೆ. ಇವು ತಿಳಿದುಕೊಳ್ಳುವ ಮಾತುಗಳಾಗಿವೆಯಲ್ಲವೆ. ತಿಳಿಸುವವರು ನಂಬರ್ವಾರ್ ಇದ್ದೀರಿ. ತಂದೆಯು ಪ್ರತಿನಿತ್ಯವೂ ಪುರುಷಾರ್ಥ ಮಾಡಿಸುತ್ತಾರೆ. ನಿಶ್ಚಯಬುದ್ಧಿ ವಿಜಯಂತಿ. ಮಕ್ಕಳಲ್ಲಿ ಹೆಚ್ಚಿನದಾಗಿ ಮಾತನಾಡುವ ಹವ್ಯಾಸವಿದೆ, ತಂದೆಯನ್ನು ನೆನಪು ಮಾಡುವುದೇ ಇಲ್ಲ. ನೆನಪು ಮಾಡುವುದು ಬಹಳ ಕಠಿಣವಾಗುತ್ತದೆ. ತಂದೆಯನ್ನು ನೆನಪು ಮಾಡುವುದನ್ನು ಬಿಟ್ಟು ತಮ್ಮದೇ ವಿಚಾರಗಳನ್ನು ತಿಳಿಸುತ್ತಿರುತ್ತಾರೆ. ತಂದೆಯ ಮೇಲೆ ನಿಶ್ಚಯವಾಗದ ಹೊರತು ಅನ್ಯ ಚಿತ್ರಗಳ ಕಡೆ ಮುಂದುವರೆಯಲೇಬಾರದು. ನಿಶ್ಚಯವಿಲ್ಲದಿದ್ದರೆ ಏನನ್ನೂ ತಿಳಿದುಕೊಳ್ಳುವುದಿಲ್ಲ. ಉಳಿದೆಲ್ಲವೂ ಸಮಯವನ್ನು ವ್ಯರ್ಥಮಾಡುವುದಾಗಿದೆ. ಅನ್ಯರ ನಾಡಿಯನ್ನು ತಿಳಿದುಕೊಂಡಿರುವುದಿಲ್ಲ. ಉದ್ಘಾಟನೆ ಮಾಡುವವರಿಗೂ ಸಹ ಮೊದಲು ತಂದೆಯ ಪರಿಚಯವನ್ನು ಕೊಡಬೇಕಾಗಿದೆ. ಇವರು ಸರ್ವಶ್ರೇಷ್ಠ ತಂದೆ ಜ್ಞಾನಸಾಗರನಾಗಿದ್ದಾರೆ, ತಂದೆಯು ಈ ಜ್ಞಾನವನ್ನು ಈಗಲೇ ಕೊಡುತ್ತಾರೆ. ಸತ್ಯಯುಗದಲ್ಲಿ ಈ ಜ್ಞಾನದ ಅವಶ್ಯಕತೆಯಿರುವುದಿಲ್ಲ. ಕೊನೆಯಲ್ಲಿ ಭಕ್ತಿಯು ಆರಂಭವಾಗುತ್ತದೆ. ತಂದೆಯು ತಿಳಿಸುತ್ತಾರೆ - ಯಾವಾಗ ದುರ್ಗತಿ ಅರ್ಥಾತ್ ನನ್ನ ನಿಂದನೆಯ ಮುಕ್ತಾಯವಾಗುವ ಸಮಯ ವಾಗುವುದೋ ಆಗ ನಾನು ಬರುತ್ತೇನೆ. ಅರ್ಧಕಲ್ಪ ಅವರು ನಿಂದನೆ ಮಾಡಲೇಬೇಕಾಗಿದೆ. ಯಾರ ಪೂಜೆಯನ್ನು ಮಾಡುತ್ತಾರೆಯೋ ಅವರ ಪರಿಚಯವನ್ನು ತಿಳಿದುಕೊಂಡಿಲ್ಲ. ನೀವು ಮಕ್ಕಳು ತಿಳಿಸುತ್ತೀರಿ ಆದರೆ ತಂದೆಯೊಂದಿಗೆ ತನ್ನ ಯೋಗವಿಲ್ಲವೆಂದರೆ ಅನ್ಯರಿಗೇನು ತಿಳಿಸುತ್ತಾರೆ! ಭಲೆ ಶಿವತಂದೆ ಎಂದು ಹೇಳುತ್ತಾರೆ ಆದರೆ ಯೋಗವೇ ಇಲ್ಲದಿದ್ದರೆ ವಿಕರ್ಮಗಳು ವಿನಾಶವಾಗುವುದಿಲ್ಲ, ಧಾರಣೆಯೂ ಆಗುವುದಿಲ್ಲ. ಮುಖ್ಯವಾದ ಮಾತು ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ.

ಯಾವ ಮಕ್ಕಳು ಜ್ಞಾನಿಯ ಜೊತೆ ಯೋಗಿಯಾಗಿರುವುದಿಲ್ಲವೋ ಅವರಲ್ಲಿ ದೇಹಾಭಿಮಾನದ ಅಂಶವು ಅವಶ್ಯವಾಗಿ ಇರುವುದು. ಯೋಗವಿಲ್ಲದೆ ಅನ್ಯರಿಗೆ ತಿಳಿಸಿದರೆ ಯಾವುದೇ ಪ್ರಯೋಜನವಿಲ್ಲ. ದೇಹಾಭಿಮಾನದಲ್ಲಿ ಬಂದು ಯಾರಾದರೊಬ್ಬರಿಗೆ ತೊಂದರೆ ಕೊಡುತ್ತಿರುತ್ತಾರೆ. ಮಕ್ಕಳು ಚೆನ್ನಾಗಿ ಭಾಷಣ ಮಾಡುತ್ತಾರೆಂದರೆ ನಾನು ಜ್ಞಾನಿ ಆತ್ಮನಾಗಿದ್ದೇನೆಂದು ತಿಳಿಯುತ್ತಾರೆ. ತಂದೆಯು ಹೇಳುತ್ತಾರೆ - ಜ್ಞಾನೀ ಆತ್ಮವಂತೂ ಆಗಿದ್ದೀರಿ ಆದರೆ ಯೋಗವು ಕಡಿಮೆಯಿದೆ, ಯೋಗದ ಮೇಲೆ ಪುರುಷಾರ್ಥ ಬಹಳ ಕಡಿಮೆಯಿದೆ. ಚಾರ್ಟನ್ನು ಇಡಿ ಎಂದು ತಂದೆಯು ಎಷ್ಟೊಂದು ತಿಳಿಸುತ್ತಾರೆ. ಮುಖ್ಯವಾದುದೇ ಯೋಗದ ಮಾತಾಗಿದೆ. ಮಕ್ಕಳಲ್ಲಿ ಜ್ಞಾನವನ್ನು ತಿಳಿಸುವ ಉಮ್ಮಂಗವಂತೂ ಇದೆ. ಆದರೆ ಯೋಗವಿಲ್ಲ ಅಂದಾಗ ವಿಕರ್ಮಗಳು ವಿನಾಶವಾಗುವುದಿಲ್ಲ, ಮತ್ತೇನು ಪದವಿಯನ್ನು ಪಡೆಯುತ್ತಾರೆ! ಯೋಗದಲ್ಲಿ ಬಹಳ ಮಕ್ಕಳು ಅನುತ್ತೀರ್ಣರಾಗುತ್ತಾರೆ. ನಾವು 100% ಇದ್ದೇವೆಂದು ತಿಳಿಯುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - 2% ಸಹ ಇಲ್ಲ. ಈ ಬ್ರಹ್ಮಾರವರೂ ಸಹ ತಮ್ಮ ಅನುಭವವನ್ನು ತಿಳಿಸುತ್ತಾರೆ. ಭೋಜನವನ್ನು ಮಾಡುವ ಸಮಯದಲ್ಲಿ ನೆನಪಿನಲ್ಲಿರುತ್ತೇನೆ ಮತ್ತೆ ಮರೆತು ಹೋಗುತ್ತೇನೆ. ಸ್ನಾನ ಮಾಡುವಾಗಲೂ ಸಹ ತಂದೆಯನ್ನು ನೆನಪು ಮಾಡುತ್ತೇನೆ. ಭಲೆ ಅವರ ಮಗುವಾಗಿದ್ದೇನೆ ಆದರೂ ಸಹ ಅವರ ನೆನಪು ಮರೆತುಹೋಗುತ್ತದೆ. ನೀವು ತಿಳಿದುಕೊಂಡಿದ್ದೀರಿ - ಇವರು ನಂಬರ್ವನ್ನಲ್ಲಿ ಹೋಗುವವರಿದ್ದಾರೆ ಅಂದಮೇಲೆ ಜ್ಞಾನ ಮತ್ತು ಯೋಗವು ಅವಶ್ಯವಾಗಿ ಸರಿಯಾಗಿರುವುದು ಆದರೂ ಸಹ ತಂದೆಯು ತಿಳಿಸುತ್ತಾರೆ - ಯೋಗದಲ್ಲಿ ಬಹಳ ಪರಿಶ್ರಮವಿದೆ. ಪ್ರಯತ್ನಪಟ್ಟು ನೋಡಿ, ನಂತರ ಅನುಭವವನ್ನು ತಿಳಿಸಿ. ತಿಳಿದುಕೊಳ್ಳಿ, ಬಟ್ಟೆಯನ್ನು ಹೊಲಿಯುವಾಗಲೂ ಸಹ ನೋಡಿಕೊಳ್ಳಬೇಕು - ನಾನು ತಂದೆಯ ನೆನಪಿನಲ್ಲಿರುತ್ತೇನೆಯೆ? ಅವರು ಬಹಳ ಮಧುರ ಪ್ರಿಯತಮನಾಗಿದ್ದಾರೆ, ಅವರನ್ನು ಎಷ್ಟು ನೆನಪು ಮಾಡುತ್ತೇವೆಯೋ ಅಷ್ಟು ನಮ್ಮ ವಿಕರ್ಮಗಳು ವಿನಾಶವಾಗುತ್ತವೆ, ನಾವು ಸತೋಪ್ರಧಾನರಾಗಿಬಿಡುತ್ತೇವೆ. ತಮ್ಮನ್ನು ನೋಡಿಕೊಳ್ಳಬೇಕು - ನಾನು ಎಷ್ಟು ಸಮಯ ನೆನಪಿನಲ್ಲಿರುತ್ತೇನೆ, ಮತ್ತೆ ತಂದೆಗೆ ಫಲಿತಾಂಶವನ್ನು ತಿಳಿಸಬೇಕು. ನೆನಪಿನಲ್ಲಿದ್ದಾಗಲೇ ಕಲ್ಯಾಣವಾಗುವುದು. ಬಾಕಿ ಹೆಚ್ಚಿನದಾಗಿ ತಿಳಿಸುವುದರಿಂದ ಕಲ್ಯಾಣವಾಗುವುದಿಲ್ಲ, ಏನನ್ನೂ ತಿಳಿದುಕೊಳ್ಳುವುದಿಲ್ಲ. ಮೊದಲನೇ ಅಂಕಿಯಿಲ್ಲದೆ ಕೆಲಸವೇನು ನಡೆಯುತ್ತದೆ? ಅಂಕೆಯೇ ಗೊತ್ತಿಲ್ಲವೆಂದರೆ ಅದರ ಪಕ್ಕದಲ್ಲಿರುವ ಬಿಂದುವು (ಸೊನ್ನೆ) ಬಿಂದುವೇ ಆಗಿಬಿಡುತ್ತದೆ. ಅಂಕೆಯ ಜೊತೆಯಲ್ಲಿ ಬಿಂದುವನ್ನು ಹಾಕುವುದರಿಂದ ಲಾಭವಾಗುತ್ತದೆ. ಯೋಗವಿಲ್ಲವೆಂದರೆ ಇಡೀ ದಿನ ಸಮಯವನ್ನು ವ್ಯರ್ಥ ಮಾಡುತ್ತಿರುತ್ತಾರೆ. ಇವರೇನು ಪದವಿಯನ್ನು ಪಡೆಯುತ್ತಾರೆಂದು ತಂದೆಗೆ ದಯೆ ಬರುತ್ತದೆ. ಅದೃಷ್ಟದಲ್ಲಿಲ್ಲದಿದ್ದರೆ ತಂದೆಯು ತಾನೇ ಏನು ಮಾಡುವರು? ತಂದೆಯು ಪದೇ-ಪದೇ ತಿಳಿಸುತ್ತಾರೆ - ಮಕ್ಕಳೇ, ದೈವೀಗುಣಗಳನ್ನು ಚೆನ್ನಾಗಿ ಧಾರಣೆ ಮಾಡಿಕೊಳ್ಳಿ. ತಂದೆಯ ನೆನಪಿನಲ್ಲಿರಿ. ನೆನಪು ಮಾಡುವುದು ಅತ್ಯಾವಶ್ಯಕವಾಗಿದೆ. ನೆನಪಿನೊಂದಿಗೆ ಪ್ರೀತಿಯಿದ್ದಾಗಲೇ ಶ್ರೀಮತದಂತೆ ನಡೆಯುತ್ತೀರಿ. ಪ್ರಜೆಗಳಂತೂ ಅನೇಕರಾಗುವರು. ಲಕ್ಷ್ಮೀ-ನಾರಾಯಣರಾಗುವುದಕ್ಕಾಗಿಯೇ ನೀವಿಲ್ಲಿಗೆ ಬಂದಿದ್ದೀರಿ. ಇದರಲ್ಲಿಯೇ ಪರಿಶ್ರಮವಿದೆ. ಭಲೆ ಸ್ವರ್ಗದಲ್ಲಿ ಹೋಗುತ್ತೀರಿ ಆದರೆ ಶಿಕ್ಷೆಯನ್ನನುಭವಿಸಿ ಕೊನೆಯಲ್ಲಿ ಬಂದು ಸ್ವಲ್ಪ ಪದವಿಯನ್ನು ಪಡೆಯುತ್ತೀರಿ. ತಂದೆಯು ಎಲ್ಲಾ ಮಕ್ಕಳನ್ನು ತಿಳಿದುಕೊಂಡಿದ್ದಾರಲ್ಲವೆ. ಯಾವ ಮಕ್ಕಳು ಯೋಗದಲ್ಲಿ ಕಚ್ಚಾ ಆಗಿರುವರೋ ಅವರು ದೇಹಾಭಿಮಾನದಲ್ಲಿ ಬಂದು ಹೊಡೆದಾಡುತ್ತಾ, ಜಗಳವಾಡುತ್ತಿರುತ್ತಾರೆ. ಯಾರು ಪಕ್ಕಾ ಆಗಿರುವರೋ ಅವರ ಚಲನೆಯು ಬಹಳ ಘನತೆ ಮರ್ಯಾದಾ ಪೂರ್ವಕವಾಗಿರುವುದು. ಬಹಳ ಕಡಿಮೆ ಮಾತನಾಡುತ್ತಾರೆ. ಅವರಿಗೆ ಯಜ್ಞಸೇವೆಯಲ್ಲಿ ಮೂಳೆ-ಮೂಳೆಗಳೂ ಸವೆದರೂ ಪರವಾಗಿಲ್ಲ ಎನ್ನುವಷ್ಟು ರುಚಿಯಿರುವುದು. ಇಂತಹವರು ಕೆಲವರಿದ್ದಾರೆ ಆದರೆ ತಂದೆಯು ತಿಳಿಸುತ್ತಾರೆ - ಹೆಚ್ಚಿನದಾಗಿ ನೆನಪಿನಲ್ಲಿದ್ದಾಗಲೇ ತಂದೆಯೊಂದಿಗೆ ಪ್ರೀತಿಯಿರುತ್ತದೆ ಮತ್ತು ಖುಷಿಯಲ್ಲಿರುತ್ತೀರಿ.

ತಂದೆಯು ತಿಳಿಸುತ್ತಾರೆ - ನಾನು ಭಾರತಖಂಡದಲ್ಲಿಯೇ ಬರುತ್ತೇನೆ, ಬಂದು ಭಾರತವನ್ನು ಶ್ರೇಷ್ಠವನ್ನಾಗಿ ಮಾಡುತ್ತೇನೆ. ಸತ್ಯಯುಗದಲ್ಲಿ ನೀವು ವಿಶ್ವದ ಮಾಲೀಕರಾಗಿದ್ದಿರಿ, ಸದ್ಗತಿಯಲ್ಲಿದ್ದಿರಿ ಮತ್ತೆ ದುರ್ಗತಿ ಮಾಡಿದವರು ಯಾರು? (ರಾವಣ) ಯಾವಾಗ ಆರಂಭವಾಯಿತು? (ದ್ವಾಪರದಿಂದ). ಒಂದು ಸೆಕೆಂಡಿನಲ್ಲಿ ನೀವು ಅರ್ಧಕಲ್ಪಕ್ಕಾಗಿ ಸದ್ಗತಿಯನ್ನು ಪಡೆಯುತ್ತೀರಿ. 21 ಜನ್ಮಗಳ ಆಸ್ತಿಯನ್ನು ಪಡೆಯುತ್ತೀರಿ ಅಂದಾಗ ಯಾರಾದರೂ ಒಳ್ಳೆಯ ವ್ಯಕ್ತಿಗಳು ಬಂದರೆ ಅವರಿಗೆ ಮೊಟ್ಟಮೊದಲು ತಂದೆಯ ಪರಿಚಯವನ್ನು ಕೊಡಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ಜ್ಞಾನದಿಂದಲೇ ನಿಮ್ಮ ಸದ್ಗತಿಯಾಗುವುದು, ನೀವು ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ. ಈ ನಾಟಕವು ಕ್ಷಣ-ಪ್ರತಿಕ್ಷಣ ನಡೆಯುತ್ತಾ ಇದೆ, ಇದು ನೆನಪಿದ್ದರೂ ಸಹ ನೀವು ಸ್ಥಿರವಾಗಿರುತ್ತೀರಿ. ಇಲ್ಲಿ ಕುಳಿತುಕೊಂಡಾಗಲೂ ಸಹ ಬುದ್ಧಿಯಲ್ಲಿರಲಿ - ಈ ಸೃಷ್ಟಿನಾಟಕವು ಹೇಗೆ ನಿಧಾನವಾಗಿ ಸುತ್ತುತ್ತಿರುತ್ತದೆ? ಕ್ಷಣ-ಕ್ಷಣವು ಕಳೆಯುತ್ತಾ ಹೋಗುತ್ತದೆ. ನಾಟಕದನುಸಾರವೇ ಎಲ್ಲರ ಪಾತ್ರವು ಅಭಿನಯವಾಗುತ್ತಿದೆ. ಒಂದುಕ್ಷಣವು ಕಳೆಯಿತೆಂದರೆ ಸಮಾಪ್ತಿ. ಬಹಳ ನಿಧಾನ-ನಿಧಾನವಾಗಿ ಸುತ್ತುತ್ತದೆ. ಇದು ಬೇಹದ್ದಿನ ನಾಟಕವಾಗಿದೆ. ವೃದ್ಧರ ಬುದ್ಧಿಯಲ್ಲಿ ಈ ಮಾತುಗಳು ಕುಳಿತುಕೊಳ್ಳುವುದಿಲ್ಲ, ಜ್ಞಾನವೂ ಕುಳಿತುಕೊಳ್ಳುವುದಿಲ್ಲ. ಯೋಗವೂ ಇಲ್ಲ ಆದರೆ ಮಕ್ಕಳಂತೂ ಆಗಿದ್ದಾರಲ್ಲವೆ! ಹಾ! ಸೇವೆ ಮಾಡುವವರಿಗೆ ಶ್ರೇಷ್ಠಪದವಿಯಿದೆ, ಇಲ್ಲದವರಿಗೆ ಕಡಿಮೆ ಪದವಿಯಾಗುವುದು, ಇದನ್ನು ಚೆನ್ನಾಗಿ ವಿಚಾರ ಮಾಡಿ - ಇದು ಬೇಹದ್ದಿನ ನಾಟಕವಾಗಿದೆ, ಚಕ್ರವು ಸುತ್ತುತ್ತಿರುತ್ತದೆ, ಹೇಗೆ ರೆಕಾರ್ಡ್ ಸುತ್ತುತ್ತಿರುತ್ತದೆಯಲ್ಲವೆ. ನಾವಾತ್ಮಗಳಲ್ಲಿಯೂ ರೆಕಾರ್ಡ್ ತುಂಬಲ್ಪಟ್ಟಿದೆ. ಇಷ್ಟು ಸೂಕ್ಷ್ಮ ಆತ್ಮದಲ್ಲಿ ಪಾತ್ರವೆಲ್ಲವೂ ತುಂಬಲ್ಪಟ್ಟಿದೆ, ಇದಕ್ಕೆ ಸೃಷ್ಟಿಯೆಂದು ಹೇಳಲಾಗುತ್ತದೆ. ನೋಡಲು ಏನೂ ಕಾಣುವುದಿಲ್ಲ, ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಮಂಧಬುದ್ಧಿಯವರು ಅರಿತುಕೊಳ್ಳಲು ಸಾಧ್ಯವಿಲ್ಲ. ಇದರಲ್ಲಿ ನಾವು ಮಾತನಾಡುತ್ತಾ ಹೋದಂತೆ ಸಮಯವು ಕಳೆಯುತ್ತಾ ಹೋಗುತ್ತದೆ. ಅದು ಮತ್ತೆ 5000 ವರ್ಷಗಳ ನಂತರ ಪುನರಾವರ್ತನೆಯಾಗುತ್ತದೆ, ಈ ತಿಳುವಳಿಕೆಯು ಯಾರ ಬಳಿಯೂ ಇಲ್ಲ. ಯಾರು ಮಹಾರಥಿಗಳಿದ್ದಾರೆಯೋ ಅವರು ಪದೇ-ಪದೇ ಈ ಮಾತುಗಳ ಮೇಲೆ ಗಮನಕೊಟ್ಟು ತಿಳಿಸುತ್ತಿರುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮೊಟ್ಟಮೊದಲಿಗೆ ತಂದೆಯ ನೆನಪಿನ ಗಂಟನ್ನು ಹಾಕಿಕೊಳ್ಳಿ, ನನ್ನನ್ನು ನೆನಪು ಮಾಡಿ. ಆತ್ಮವು ಈಗ ಮನೆಗೆ ಹೋಗಬೇಕಾಗಿದೆ. ದೇಹದ ಎಲ್ಲಾ ಸಂಬಂಧಗಳನ್ನು ಬಿಡಬೇಕಾಗಿದೆ. ಎಷ್ಟು ಸಾಧ್ಯವೋ ಅಷ್ಟು ತಂದೆಯನ್ನು ನೆನಪು ಮಾಡುತ್ತಾ ಇರಿ. ಈ ಪುರುಷಾರ್ಥವು ಗುಪ್ತವಾಗಿದೆ. ತಂದೆಯು ಸಲಹೆ ನೀಡುತ್ತಾರೆ - ಮೊಟ್ಟಮೊದಲಿಗೆ ತಂದೆಯ ಪರಿಚಯವನ್ನೇ ಕೊಡಿ, ಕಡಿಮೆ ನೆನಪು ಮಾಡಿದರೆ ಕಡಿಮೆ ಪರಿಚಯವನ್ನೇ ಕೊಡುತ್ತೀರಿ. ಮೊದಲಿಗೆ ತಂದೆಯ ಪರಿಚಯವು ಬುದ್ಧಿಯಲ್ಲಿ ಕುಳಿತುಕೊಳ್ಳಲಿ. ತಿಳಿಸಿಕೊಡಿ - ಈಗ ಅವಶ್ಯವಾಗಿ ಅವರು ನಮ್ಮ ತಂದೆಯಾಗಿದ್ದಾರೆ ಎಂಬುದನ್ನು ಬರೆಯಿರಿ. ದೇಹಸಹಿತವಾಗಿ ಎಲ್ಲವನ್ನು ಬಿಟ್ಟು ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ನೆನಪಿನಿಂದಲೇ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ಮುಕ್ತಿಧಾಮ, ಜೀವನ್ಮುಕ್ತಿಧಾಮದಲ್ಲಿ ದುಃಖ-ನೋವಿನ ಮಾತೇ ಇರುವುದಿಲ್ಲ. ದಿನ-ಪ್ರತಿದಿನ ಕಳೆದಂತೆ ಒಳ್ಳೊಳ್ಳೆಯ ಮಾತುಗಳನ್ನು ತಿಳಿಸಲಾಗುತ್ತದೆ. ಪರಸ್ಪರದಲ್ಲಿಯೂ ಇವೇ ಮಾತುಗಳನ್ನಾಡಿ ಯೋಗ್ಯರಾಗಬೇಕಲ್ಲವೆ. ಬ್ರಾಹ್ಮಣರಾಗಿ ತಂದೆಯ ಆತ್ಮಿಕ ಸೇವೆ ಮಾಡದಿದ್ದರೆ ಅವರಿಂದೇನು ಪ್ರಯೋಜನ? ವಿದ್ಯೆಯನ್ನು ಬಹಳ ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕು. ತಂದೆಗೆ ಗೊತ್ತಿದೆ, ಅನೇಕರು ಇಂತಹವರಿದ್ದಾರೆ, ಅವರಿಗೆ ಒಂದು ಅಕ್ಷರವೂ ಧಾರಣೆಯಾಗುವುದಿಲ್ಲ, ಯಥಾರ್ಥ ರೀತಿಯಿಂದ ತಂದೆಯನ್ನು ನೆನಪು ಮಾಡುವುದಿಲ್ಲ. ರಾಜ-ರಾಣಿಯ ಪದವಿಯನ್ನು ಪಡೆಯುವುದರಲ್ಲಿ ಪರಿಶ್ರಮವಿದೆ. ಯಾರು ಪರಿಶ್ರಮ ಪಡುವರೋ ಅವರೇ ಶ್ರೇಷ್ಠಪದವಿಯನ್ನು ಪಡೆಯುತ್ತಾರೆ. ಪರಿಶ್ರಮ ಪಟ್ಟಾಗಲೇ ರಾಜಧಾನಿಯಲ್ಲಿ ಬರಲು ಸಾಧ್ಯ. ಮೊಟ್ಟಮೊದಲು ಬರುವವರಿಗೆ ಸ್ಕಾಲರ್ಶಿಪ್ ಸಿಗುತ್ತದೆ. ಈ ಲಕ್ಷ್ಮೀ-ನಾರಾಯಣರು ಸ್ಕಾಲರ್ಶಿಪ್ ತೆಗೆದುಕೊಂಡಿದ್ದಾರೆ, ಇವರ ನಂತರ ನಂಬರ್ವಾರ್ ಇದ್ದಾರೆ. ಇದು ಬಹಳ ದೊಡ್ಡ ಪರೀಕ್ಷೆಯಾಗಿದೆಯಲ್ಲವೆ. ಸ್ಕಾಲರ್ಶಿಪ್ ತೆಗೆದುಕೊಂಡಿರುವವರದೇ ಮಾಲೆಯಾಗಿದೆ. ಅಷ್ಟರತ್ನಗಳಿದ್ದಾರಲ್ಲವೆ. ಮೊದಲು 8 ನಂತರ 100, ನಂತರ 16,000 ಅಂದಾಗ ಮಾಲೆಯಲ್ಲಿ ಪೋಣಿಸಲ್ಪಡಲು ಎಷ್ಟೊಂದು ಪುರುಷಾರ್ಥ ಮಾಡಬೇಕು. ಅಂತರ್ಮುಖಿಯಾಗಿರುವ ಪುರುಷಾರ್ಥ ಮಾಡುವುದರಿಂದ ಸ್ಕಾಲರ್ಶಿಪ್ ತೆಗೆದುಕೊಳ್ಳಲು ಅಧಿಕಾರಿಗಳಾಗಿಬಿಡುತ್ತೀರಿ. ನೀವು ಬಹಳ ಅಂತರ್ಮುಖಿಯಾಗಿರಬೇಕಲ್ಲವೆ. ತಂದೆಯಂತೂ ಕಲ್ಯಾಣಕಾರಿಯಾಗಿದ್ದಾರೆ. ಅಂದಾಗ ಕಲ್ಯಾಣಕ್ಕಾಗಿಯೇ ಸಲಹೆಯನ್ನು ನೀಡುತ್ತಿರುತ್ತಾರೆ. ಇಡೀ ಪ್ರಪಂಚದ ಕಲ್ಯಾಣವಾಗುವುದಿದೆ ಆದರೆ ನಂಬರ್ವಾರ್. ನೀವಿಲ್ಲಿ ತಂದೆಯ ಬಳಿ ಓದುವುದಕ್ಕಾಗಿ ಬಂದಿದ್ದೀರಿ, ನಿಮ್ಮಲ್ಲಿಯೂ ಯಾರು ಒಳ್ಳೆಯ ವಿದ್ಯಾರ್ಥಿಗಳಿದ್ದಾರೆಯೋ ಅವರು ವಿದ್ಯೆಯ ಮೇಲೆ ಗಮನ ಕೊಡುತ್ತಾರೆ. ಇನ್ನೂ ಕೆಲವರು ಸ್ವಲ್ಪವೂ ಗಮನ ಕೊಡುವುದಿಲ್ಲ. ಭಾಗ್ಯದಲ್ಲಿದ್ದರೆ ಸಿಗುವುದೆಂದು ತಿಳಿದುಕೊಳ್ಳುವವರು ಅನೇಕರಿದ್ದಾರೆ, ವಿದ್ಯೆಯ ಲಕ್ಷ್ಯವೇ ಇಲ್ಲ ಆದ್ದರಿಂದ ಮಕ್ಕಳು ನೆನಪಿನ ಚಾರ್ಟನ್ನು ಇಟ್ಟುಕೊಳ್ಳಬೇಕಾಗಿದೆ. ನಾವೀಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಜ್ಞಾನವನ್ನು ಇಲ್ಲಿಯೇ ಬಿಟ್ಟುಹೋಗುತ್ತೀರಿ, ಜ್ಞಾನದ ಪಾತ್ರವು ಇಲ್ಲಿಯೇ ಮುಕ್ತಾಯವಾಗುತ್ತದೆ. ಇಷ್ಟು ಚಿಕ್ಕದಾದ ಆತ್ಮದಲ್ಲಿ ಎಷ್ಟೊಂದು ಪಾತ್ರವಿದೆ. ಆಶ್ಚರ್ಯವಲ್ಲವೆ. ಇದು ಅವಿನಾಶಿ ನಾಟಕವಾಗಿದೆ. ಹೀಗೆ ನೀವು ಅಂತರ್ಮುಖಿಯಾಗಿ ತಮ್ಮೊಂದಿಗೆ ಮಾತನಾಡಿಕೊಳ್ಳುತ್ತಾ ಇರಿ ಆಗ ನಿಮಗೆ ತಂದೆಯು ಬಂದು ಇಂತಹ ಮಾತುಗಳನ್ನು ತಿಳಿಸುತ್ತಾರೆಂದು ಬಹಳ ಖುಷಿಯಿರುವುದು. ನಾಟಕದಲ್ಲಿ ಒಬ್ಬೊಬ್ಬ ಮನುಷ್ಯನ ಒಂದೊಂದು ವಸ್ತುವಿನ ಪಾತ್ರವು ನಿಗಧಿಯಾಗಿದೆ. ಇದಕ್ಕೆ ಅಂತ್ಯವಿಲ್ಲವೆಂದು ಹೇಳುವಂತಿಲ್ಲ. ಅಂತ್ಯವನ್ನು ಹೊಂದುತ್ತದೆ ಆದರೆ ಇದು ಅನಾದಿಯಾಗಿದೆ. ಇಷ್ಟೊಂದು ವಸ್ತುಗಳಿವೆ, ಇದಕ್ಕೆ ಸೃಷ್ಟಿಯೆಂದು ಹೇಳುವುದೆ! ಈಶ್ವರನ ಸೃಷ್ಟಿಯೆಂದು ಹೇಳುವಂತಿಲ್ಲ ಏಕೆಂದರೆ ಅವರು ತಿಳಿಸುತ್ತಾರೆ - ಮಕ್ಕಳೇ, ಇದರಲ್ಲಿ ನನ್ನ ಪಾತ್ರವೂ ಇದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯೋಗದಲ್ಲಿ ಬಹಳ ಪರಿಶ್ರಮವಿದೆ. ಪ್ರಯತ್ನಪಟ್ಟು ನೋಡಿಕೊಳ್ಳಬೇಕು - ಕರ್ಮದಲ್ಲಿ ಎಷ್ಟು ಸಮಯ ತಂದೆಯ ನೆನಪಿನಲ್ಲಿರುತ್ತೇವೆ, ನೆನಪಿನಲ್ಲಿರುವುದರಲ್ಲಿಯೇ ಕಲ್ಯಾಣವಿದೆ. ಮಧುರವಾದ ಪ್ರಿಯತಮನನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ನೆನಪಿನ ಚಾರ್ಟನ್ನಿಡಬೇಕಾಗಿದೆ.

2. ಸೂಕ್ಷ್ಮಬುದ್ಧಿಯಿಂದ ಈ ನಾಟಕದ ರಹಸ್ಯವನ್ನು ತಿಳಿದುಕೊಳ್ಳಬೇಕಾಗಿದೆ. ಇದು ಬಹಳ-ಬಹಳ ಕಲ್ಯಾಣಕಾರಿ ನಾಟಕವಾಗಿದೆ. ಇದರಲ್ಲಿ ನಾವು ಏನು ಮಾತನಾಡುತ್ತೇವೆಯೋ ಅಥವಾ ಮಾಡುತ್ತೇವೆಯೋ ಅದು ಪುನಃ 5000 ವರ್ಷಗಳ ನಂತರವೇ ಪುನರಾವರ್ತನೆಯಾಗುವುದು. ಇದನ್ನು ಯಥಾರ್ಥವಾಗಿ ತಿಳಿದುಕೊಂಡು ಖುಷಿಯಾಗಿರಬೇಕಾಗಿದೆ.

ವರದಾನ:
ತಮ್ಮ ಶ್ರೇಷ್ಠ ಜೀವನದ ಮೂಲಕ ಪರಮಾತ್ಮ ಜ್ಞಾನದ ಪ್ರತ್ಯಕ್ಷ ಪ್ರೂಫ್ ಕೊಡುವಂತಹ ಮಾಯಾ ಪೂಫ್ ಭವ

ಸ್ವಯಂಗೆ ಪರಮಾತ್ಮ ಜ್ಞಾನದ ಪ್ರತ್ಯಕ್ಷ ಪ್ರಮಾಣ ಅಥವಾ ಫ್ರೂಫ್ ಎಂದು ತಿಳಿಯುವುದರಿಂದ ಮಾಯಾ ಫ್ರೂಫ್ ಆಗಿಬಿಡುವಿರಿ. ನಿಮ್ಮ ಶ್ರೇಷ್ಠ ಪವಿತ್ರ ಜೀವನ ಪ್ರತ್ಯಕ್ಷ ಪ್ರಮಾಣವಾಗಿದೆ. ಎಲ್ಲಕ್ಕಿಂತ ದೊಡ್ಡ ಅಸಂಭವದಿಂದ ಸಂಭವವಾಗುವಂತಹ ಮಾತು- ಪ್ರವೃತ್ತಿಯಲ್ಲಿದ್ದು ಪರ-ವೃತ್ತಿಯಲ್ಲಿರುವುದು. ದೇಹ ಮತ್ತು ದೇಹದ ಪ್ರಪಂಚದ ಸಂಬಂಧಗಳಿಂದ ನ್ಯಾರಾ ಇರುವುದು. ಹಳೆಯ ಶರೀರದ ಕಣ್ಣುಗಳಿಂದ, ಹಳೆಯ ಪ್ರಪಂಚದ ವಸ್ತುಗಳನ್ನು ನೋಡುತ್ತಿದ್ದರೂ ನೋಡದೇ ಇರುವುದು ಅರ್ಥಾತ್ ಸಂಪೂರ್ಣ ಜೀವನದಲ್ಲಿ ನಡೆಯುವುದು-ಇದೇ ಪರಮಾತ್ಮನನ್ನು ಪ್ರತ್ಯಕ್ಷ ಮಾಡುವಂತಹ ಅಥವಾ ಮಾಯಾ ಪ್ರೂಫ್ ಆಗುವಂತಹ ಸಹಜ ಸಾಧನೆಯಾಗಿದೆ.

ಸ್ಲೋಗನ್:
ಎಚ್ಚರಿಕೆ ರೂಪಿ ಚೌಕಿದಾರ ಸರಿಯಾಗಿದ್ದರೆ, ಅತೀಂದ್ರೀಯ ಸುಖದ ಖಜಾನೆಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ.

ಅವ್ಯಕ್ತ ಸೂಚನೆ: ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ

ತಂದೆಯಂತೂ ಜೊತೆಗಾರರನ್ನಾಗಿ ಮಾಡಿಕೊಂಡಿದ್ದೀರಿ ಈಗ ಅವರನ್ನು ಕಂಬೈಂಡ್ ರೂಪದಲ್ಲಿ ಅನುಭವ ಮಾಡಿ ಮತ್ತು ಈ ಅನುಭವವನ್ನು ಪದೇ-ಪದೇ ಸ್ಮೃತಿಯಲ್ಲಿ ತರುತ್ತಾ-ತರುತ್ತಾ ಸ್ಮೃತಿ ಸ್ವರೂಪರಾಗಿಬಿಡಿ. ಪದೇ-ಪದೇ ಚೆಕ್ ಮಾಡಿ ಕಂಬೈಂಡ್ ಆಗಿದ್ದೇನೆಯೇ, ಬೇರೆಯಾಗಿಲ್ಲ ತಾನೇ? ಎಷ್ಟು ಕಂಬೈಂಡ್ ರೂಪದ ಅನುಭವ ಹೆಚ್ಚುಸುವಿರಿ ಅಷ್ಟು ಬ್ರಾಹ್ಮಣ ಜೀವನ ಬಹಳ ಪ್ರಿಯ, ಮನೋರಂಜನೆ ಅನುಭವವಾಗಲಿ.