09.05.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವಿಲ್ಲಿ ಸ್ವ ಅನುಭೂತಿ ಮಾಡಲು ಬಂದಿದ್ದೀರಿ. ನೀವು ತಮ್ಮನ್ನು ಆತ್ಮನೆಂದು ತಿಳಿದು ಪರಮಾತ್ಮ ತಂದೆಯಿಂದ ಕೇಳಿರಿ, ಆತ್ಮಾಭಿಮಾನಿಯಾಗಿರುವ ಅಭ್ಯಾಸ ಮಾಡಿ”

ಪ್ರಶ್ನೆ:
ಕೆಲವು ಬಾರಿ ಮಕ್ಕಳೊಂದಿಗೆ ನೀವು ಆತ್ಮದ ಸಾಕ್ಷಾತ್ಕಾರ ಮಾಡಿದ್ದೀರಾ ಎಂದು ಕೆಲವರು ಕೇಳುತ್ತಾರೆ, ಆಗ ನೀವು ಯಾವ ಉತ್ತರವನ್ನು ಕೊಡುವಿರಿ?

ಉತ್ತರ:
ತಿಳಿಸಿ - ಹೌದು, ನಾವು ಆತ್ಮದ ಸಾಕ್ಷಾತ್ಕಾರ ಮಾಡಿದ್ದೇವೆ. ಆತ್ಮವು ಜ್ಯೋತಿರ್ಬಿಂದುವಾಗಿದೆ. ಆತ್ಮದಲ್ಲಿಯೇ ಒಳ್ಳೆಯ ಹಾಗೂ ಕೆಟ್ಟ ಸಂಸ್ಕಾರವಿದೆ. ಆತ್ಮದ ಸಂಪೂರ್ಣ ಜ್ಞಾನವು ಈಗ ನಮಗೆ ಸಿಕ್ಕಿದೆ. ಎಲ್ಲಿಯವರೆಗೆ ಆತ್ಮದ ಸಾಕ್ಷಾತ್ಕಾರ ಮಾಡಿರಲಿಲ್ಲವೋ ಅಲ್ಲಿಯವರೆಗೆ ದೇಹಾಭಿಮಾನಿಯಾಗಿದ್ದೆವು, ಈಗ ನಮಗೆ ಪರಮಾತ್ಮನ ಮೂಲಕ ಪರಮಾತ್ಮಾನುಭೂತಿ ಮತ್ತು ಆತ್ಮಾನುಭೂತಿಯಾಗಿದೆ.

ಗೀತೆ:
ಅವರು ನಮ್ಮಿಂದ ದೂರವಾಗುವುದಿಲ್ಲ.........

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯನ್ನು ಕೇಳಿದಿರಿ. ಆತ್ಮಿಕ ಮಕ್ಕಳು ಶರೀರದ ಮೂಲಕ ಹೇಳುತ್ತೀರಿ. ನಾವು ಸಾಧು-ಸಂತರಿಗಾಗಿಯೇ ಸಾಯುತ್ತೇವೆ ಎಂದು ಯಾರೂ ಹೇಳುವುದಿಲ್ಲ. ಮಕ್ಕಳಿಗೆ ತಿಳಿದಿದೆ - ನಾವು ತಂದೆಯ ಜೊತೆ ಹೋಗಬೇಕಾಗಿದೆ, ಈ ಶರೀರವನ್ನು ಬಿಟ್ಟು ಬಿಡಬೇಕಾಗಿದೆ ಆದ್ದರಿಂದ ಹೇಳುತ್ತಾರೆ - ಈ ಶರೀರವನ್ನು ಬಿಟ್ಟು ನಾವು ತಂದೆಯ ಜೊತೆ ಹೊರಟು ಹೋಗುತ್ತೇವೆ. ತಂದೆಯು ಕರೆದುಕೊಂಡು ಹೋಗುವುದಕ್ಕಾಗಿಯೇ ಬಂದಿದ್ದಾರೆ, ಇದು ಬಹಳ ತಿಳುವಳಿಕೆಯ ಮಾತಾಗಿದೆ. ನಾವು ಪತಿತರನ್ನು ಬಂದು ಪಾವನ ಮಾಡಿ ಎಂದು ಮಕ್ಕಳು ಕರೆಯುತ್ತಾರೆ ಅಂದಮೇಲೆ ಏನು ಮಾಡಲಿ? ಇಲ್ಲಿಯೇ ಬಿಟ್ಟು ಹೋಗುವುದಿಲ್ಲ, ಇಡೀ ಪ್ರಪಂಚವೇ ಪತಿತವಾಗಿದೆ, ಈ ಪತಿತ ಪ್ರಪಂಚದಿಂದ ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗುವುದಕ್ಕಾಗಿಯೇ ತಂದೆಯು ಬಂದಿದ್ದಾರೆ, ನಾವಾತ್ಮರನ್ನು ಜೊತೆ ಕರೆದುಕೊಂಡು ಹೋಗುತ್ತಾರೆ. ಇಡೀ ಪ್ರಪಂಚವು ವಿಕಾರಿಯಾಗಿದೆ ಎಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ನೀವು ಯಾರಿಗಾದರೂ ವಿಕಾರಿ, ಪತಿತರೆಂದು ಹೇಳಿದರೆ ಕ್ರೋಧಿತರಾಗಿ ಬಿಡುವರು. ಮನುಷ್ಯರಿಗೆ ಬಹಳ ಯುಕ್ತಿಯಿಂದ ತಿಳಿಸಬೇಕಾಗಿದೆ, ಒಬ್ಬ ತಂದೆಯ ಮಹಿಮೆ ಮಾಡಬೇಕಾಗಿದೆ. ಈಗ ನೀವು ಮಕ್ಕಳಿಗೆ ಜ್ಞಾನ ಸಿಕ್ಕಿದೆ, ಬಹಳ ತಿಳುವಳಿಕೆಯಿಂದ ಮಾತನಾಡಬೇಕಾಗಿದೆ. ಯಾರಾದರೂ ಬಹಳ ಪ್ರಶ್ನೋತ್ತರ ಮಾಡಿದರೆ ಹೇಳಿರಿ - ನಾವಿನ್ನೂ ಕಚ್ಚಾ ಆಗಿದ್ದೇವೆ, ನಮ್ಮ ಹಿರಿಯ ಸಹೋದರಿಯು ಬಂದು ನಿಮಗೆ ಉತ್ತರ ನೀಡುವರು.

ನೀವು ಹೇಳುತ್ತೀರಿ, ಶಿವ ತಂದೆಯು ತಿಳಿಸುತ್ತಾರೆ - ಭಗವಾನುವಾಚ, ಮನುಷ್ಯರೆಲ್ಲರೂ ಪತಿತರಾಗಿದ್ದಾರೆ, ಪತಿತರು ಭಗವಂತನಾಗಲು ಸಾಧ್ಯವಿಲ್ಲ. ಪತಿತ-ಪಾವನನನ್ನು ಕರೆಯುತ್ತಾರೆ ಏಕೆಂದರೆ ಪತಿತರಾಗಿದ್ದಾರೆ. ದೇಹಧಾರಿಗಳಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ, ನಿರಾಕಾರ ಶಿವನಿಗೇ ಭಗವಂತನೆಂದು ಹೇಳಲಾಗುತ್ತದೆ. ಶಿವನ ಮಂದಿರಗಳೂ ಬಹಳಷ್ಟಿವೆ. ಮೊಟ್ಟ ಮೊದಲು ಒಂದು ಮಾತನ್ನು ತಿಳಿದುಕೊಂಡರೆ ಸಾಕು ನಿಲ್ಲುವರು. ಮೊಟ್ಟ ಮೊದಲು ತಿಳಿಸಿ, ಶಿವ ಭಗವಾನುವಾಚ - ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಶಿವ ತಂದೆಯು ಹೇಳುತ್ತಾರೆ. ಅವರಿಗೆ ತಮ್ಮದೇ ಆದ ಶರೀರವಿಲ್ಲ. ಬ್ರಹ್ಮಾ-ವಿಷ್ಣು-ಶಂಕರನಿಗಾದರೂ ತಮ್ಮದೇ ಆದ ಸೂಕ್ಷ್ಮ ಶರೀರವಿದೆ, ಕಾಣುತ್ತದೆ. ಇವರಂತೂ ಕಣ್ಣಿಗೂ ಕಾಣಿಸುವುದಿಲ್ಲ, ಅವರಿಗೆ ಪರಮಪಿತ ಪರಮಾತ್ಮನೆಂದು ಹೇಳಲಾಗುತ್ತದೆ. ನಾನಾತ್ಮನು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ ಎಂದು ನೀವೂ ಸಹ ಹೇಳುತ್ತೀರಿ. ನೀವು ತಮ್ಮ ಆತ್ಮದ ಸಾಕ್ಷಾತ್ಕಾರ ಮಾಡಿದ್ದೀರಿ. ಭಕ್ತಿ ಮಾರ್ಗದಲ್ಲಿ ಸಾಕ್ಷಾತ್ಕಾರಕ್ಕಾಗಿ ನೌಧಾ ಭಕ್ತಿ ಮಾಡುತ್ತಾರೆ ಆದರೆ ಭಕ್ತಿ ಮಾಡುವವರು ಎಂದೂ ಸಾಕ್ಷಾತ್ಕಾರ ಮಾಡಲಿಲ್ಲ, ಅದೇನು ಎಂಬುದನ್ನೂ ಸಹ ತಿಳಿದುಕೊಂಡಿಲ್ಲ. ಕೇವಲ ಅದು ನಿರಾಕಾರಿಯಾಗಿದೆ ಎಂದು ಹೇಳುತ್ತಾರೆ. ವಾರ್ತಾಲಾಪವನ್ನಂತೂ ಆತ್ಮವೇ ಮಾಡುತ್ತದೆ, ಸಂಸ್ಕಾರವೂ ಆತ್ಮದಲ್ಲಿಯೇ ಇರುತ್ತದೆ. ಆತ್ಮವು ಹೊರಟು ಹೋದರೆ ಆತ್ಮನಾಗಲಿ, ಶರೀರವಾಗಲಿ ಮಾತನಾಡಲು ಸಾಧ್ಯವಿಲ್ಲ. ಆತ್ಮವು ಶರೀರವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ಮೊದಲು ಆತ್ಮನನ್ನು ಅರಿತುಕೊಳ್ಳಬೇಕಾಗಿದೆ ಮತ್ತು ತಂದೆಯ ಮೂಲಕವೇ ತಂದೆಯನ್ನು ಅರಿತುಕೊಳ್ಳುವಿರಿ. ಯಾವಾಗ ತನ್ನನ್ನೇ ತಿಳಿದುಕೊಂಡಿಲ್ಲ, ನೋಡಲು ಆಗುವುದಿಲ್ಲ ಅಂದಮೇಲೆ ಆತ್ಮನಿಗೆ ಪರಮಪಿತ ಪರಮಾತ್ಮನ ಸಾಕ್ಷಾತ್ಕಾರವು ಹೇಗಾಗಲು ಸಾಧ್ಯ? ಭಲೆ ಹೊಳೆಯುತ್ತಿರುವ ವಿಚಿತ್ರ ನಕ್ಷತ್ರವೆಂದು ಹೇಳುತ್ತಾರೆ ಆದರೆ ಆತ್ಮದಲ್ಲಿಯೇ 84 ಜನ್ಮಗಳ ಪಾತ್ರವು ನಿಗಧಿಯಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ಮನುಷ್ಯರು ಸಂಪೂರ್ಣ ದೇಹಾಭಿಮಾನಿಯಾಗಿರುತ್ತಾರೆ, ಈಗ ತಂದೆಯು ತಿಳಿಸುತ್ತಾರೆ - ದೇಹೀ-ಅಭಿಮಾನಿಯಾಗಿರಿ, ತಮ್ಮನ್ನು ಆತ್ಮನೆಂದು ತಿಳಿದು ನನ್ನ ಮುಖಾಂತರ ಕೇಳಿರಿ. ಹೇಳುವುದು ಆತ್ಮನಾಗಿದೆ, ಆತ್ಮಕ್ಕೆ ತಿಳಿಸುವವರು ಪರಮಾತ್ಮನೇ ಬೇಕು. ಮನುಷ್ಯರಿಗೆ ತಿಳಿಸುವವರು ಮನುಷ್ಯರೇ ಆಗುವರು, ಈ ಆತ್ಮದ ಜ್ಞಾನವು ಯಾರಿಗೂ ಇಲ್ಲ. ಆದ್ದರಿಂದಲೇ ಮೊದಲು ಆತ್ಮನನ್ನು ಅರಿತುಕೊಳ್ಳಿ, ಆತ್ಮಾನುಭೂತಿ ಮಾಡಿ ಎಂದು ಹೇಳಲಾಗುತ್ತದೆ. ನಾವು ಹೇಗೆ ಆತ್ಮಾನುಭೂತಿ ಮಾಡುವುದು ಎಂದು ಆತ್ಮವೇ ಕೇಳುತ್ತದೆ. ನಾವಾತ್ಮರಲ್ಲಿ ಹೇಗೆ ಪಾತ್ರವು ತುಂಬಲ್ಪಟ್ಟಿದೆ ಎಂಬುದು ಯಾರಿಗೂ ತಿಳಿದಿಲ್ಲ. ಯಾವುದೇ ಸಾಧು ಸನ್ಯಾಸಿಗಳು ತಿಳಿಸಲು ಸಾಧ್ಯವಿಲ್ಲ. ತಂದೆಯೇ ಬಂದು ಮಕ್ಕಳಿಗೆ ಆತ್ಮಾನುಭೂತಿ ಮಾಡಿಸಲಾಗುತ್ತದೆ. ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ನಾನು ನಿರಾಕಾರ ಪರಮಪಿತ ಪರಮಾತ್ಮನಿಂದ ಕೇಳಿರಿ, ಆತ್ಮ ಮತ್ತು ಪರಮಾತ್ಮನು ಯಾವಾಗ ಮಿಲನ ಮಾಡುವರೋ ಆಗಲೇ ಈ ಮಾತುಗಳಿರುವವು. ಪರಮಪಿತ ಪರಮಾತ್ಮನು ಯಾವಾಗ ಬರುತ್ತಾರೆ, ಹೇಗೆ ಬಂದು ತಿಳಿಸುತ್ತಾರೆ ಎಂಬುದು ಪ್ರಪಂಚದವರಿಗೆ ತಿಳಿದೇ ಇಲ್ಲ. ತಿಳಿದುಕೊಳ್ಳದ ಕಾರಣ ಮತಭೇದದಲ್ಲಿ ಬಂದು ಬಿಡುತ್ತಾರೆ. ಅವರದೆಲ್ಲವೂ ಶಾಸ್ತ್ರಗಳ ಮೇಲೆ ಆಧಾರಿತವಾಗಿದೆ. ತಂದೆಯು ತಿಳಿಸುತ್ತಾರೆ - ಅದರಿಂದ ನನ್ನ ಅನುಭೂತಿಯಾಗಲಿ ಅಥವಾ ಆತ್ಮಾನುಭೂತಿಯಾಗಲಿ ಮಾಡಲು ಸಾಧ್ಯವಿಲ್ಲ. ಅವರಂತೂ ಆತ್ಮ ಸೋ ಪರಮಾತ್ಮ ಎಂದು ಹೇಳಿಬಿಡುತ್ತಾರೆ. ಹೀಗೆ ಹೇಳುವುದರಿಂದ ಏನಾಗುತ್ತದೆ? ನಮ್ಮನ್ನು ಪತಿತರಿಂದ ಪಾವನರನ್ನಾಗಿ ಯಾರು ಮಾಡುತ್ತಾರೆ? ತ್ರಿಕಾಲದರ್ಶಿಯನ್ನಾಗಿ ಯಾರು ಮಾಡುತ್ತಾರೆ? ಯಾರೂ ಸಹ ಆತ್ಮ-ಪರಮಾತ್ಮನ ಜ್ಞಾನವನ್ನಂತೂ ಕೊಡಲು ಸಾಧ್ಯವಿಲ್ಲ ಆದ್ದರಿಂದ ನೀವು ಹೇಳುತ್ತೀರಿ - ಯಾವ ಆತ್ಮರು ತಮ್ಮ ತಂದೆಯನ್ನೇ ಅರಿತುಕೊಂಡಿಲ್ಲವೋ ಅವರು ನಾಸ್ತಿಕರಾಗಿದ್ದಾರೆ. ಯಾರು ಭಕ್ತಿ ಮಾಡುವುದಿಲ್ಲವೋ ಅವರು ನಾಸ್ತಿಕರಾಗಿದ್ದಾರೆಂದು ಅವರು ಹೇಳಿ ಬಿಡುತ್ತಾರೆ. ಈಗ ನೀವು ಮಕ್ಕಳು ಭಕ್ತಿಯನ್ನಂತೂ ಮಾಡುವುದಿಲ್ಲ, ನಿಮ್ಮ ಬಳಿ ಬಹಳ ಒಳ್ಳೆಯ ಚಿತ್ರಗಳಿವೆ. ಚಿತ್ರಗಳಲ್ಲಿಯೇ ತಿಳಿಸಲಾಗುತ್ತದೆ - ಯಾರಾದರೂ ವಿಶ್ವದ ನಕ್ಷೆಯನ್ನೇ ನೋಡಿಲ್ಲವೆಂದರೆ ಅವರಿಗೆ ಲಂಡನ್ ಎಲ್ಲಿದೆ? ಅಮೇರಿಕಾ ಎಲ್ಲಿದೆ? ಎಂಬುದು ಹೇಗೆ ತಿಳಿಯುತ್ತದೆ. ಎಲ್ಲಿಯವರೆಗೆ ಶಿಕ್ಷಕರು ಕುಳಿತು ನಕ್ಷೆಯಲ್ಲಿ ತಿಳಿಸುವುದಿಲ್ಲವೋ ಅಲ್ಲಿಯವರೆಗೆ ಅವರಿಗೇನು ಗೊತ್ತು? ಆದ್ದರಿಂದ ನೀವು ಈ ಚಿತ್ರಗಳನ್ನು ಮಾಡಿಸಿದ್ದೀರಿ ಆದರೆ ಯಾರೂ ಇದನ್ನು ವಿವರವಾಗಿ ತಿಳಿದುಕೊಳ್ಳುವುದಿಲ್ಲ. ಸೂರ್ಯವಂಶಿಯರು ಈ ರಾಜಧಾನಿಯನ್ನು ಎಲ್ಲಿಂದ ಪಡೆದುಕೊಂಡರು? ಮತ್ತೆ ಚಂದ್ರವಂಶಿಯರು ಹೇಗೆ ಪಡೆದುಕೊಂಡರು? ಸೂರ್ಯವಂಶಿಯರೊಂದಿಗೆ ಯುದ್ಧ ಮಾಡಿದರೆ? ನೀವು ತಿಳಿದುಕೊಂಡಿದ್ದೀರಿ - ಎಲ್ಲರಿಗೂ ಆಸ್ತಿಯು ಒಬ್ಬ ತಂದೆಯಿಂದಲೇ ಸಿಗುತ್ತದೆ. ಸೂರ್ಯವಂಶಿ, ಚಂದ್ರವಂಶಿಯರಂತೂ ವಿಶ್ವದ ಮಾಲೀಕರಾಗಿದ್ದಾರೆ ಮತ್ತ್ಯಾವುದೇ ಧರ್ಮವೂ ಇರುವುದಿಲ್ಲ ಅಂದಮೇಲೆ ಯುದ್ಧದ ಮಾತೆಲ್ಲಿ! ನಾವು ವಿಶ್ವದ ಮಾಲೀಕರಾಗುತ್ತೇವೆಂದು ನೀವೀಗ ತಿಳಿದುಕೊಳ್ಳುತ್ತೀರಿ. ಸೂರ್ಯವಂಶಿಯರಿಂದ ಚಂದ್ರವಂಶಿಯರು ಗೆದ್ದರು ಅಥವಾ ಯುದ್ಧ ನಡೆಯಿತು ಎಂದಲ್ಲ. ಬೇರೆ-ಬೇರೆ ಮನೆತನವಿರುತ್ತದೆ.

ಈಗ ನಿಮ್ಮ ಬುದ್ಧಿಯಲ್ಲಿ ಈ ಚಿತ್ರಗಳ ಸಂಪೂರ್ಣ ಜ್ಞಾನವಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಓದುತ್ತಾರೆಂದರೆ ಬುದ್ಧಿಯಲ್ಲಿ ಇಡೀ ಜ್ಞಾನವು ಬಂದು ಬಿಡುತ್ತದೆ. ಚಿಕ್ಕ ಮಕ್ಕಳಿಗೆ ಪುಸ್ತಕದಲ್ಲಿ ತೋರಿಸಿ ಇದು ಆನೆ ಆಗಿದೆ, ಇದು ಇಂತದ್ದಾಗಿದೆ ಎಂದು ಹೇಳಲಾಗುತ್ತದೆ. ನೀವೀಗ ಈ ನಾಟಕವನ್ನು ಅರಿತುಕೊಂಡಿದ್ದೀರಿ. ಇಡೀ ಚಕ್ರವು ನಿಮ್ಮ ಬುದ್ದಿಯಲ್ಲಿದೆ. ಇವೆಲ್ಲಾ ಹೊಸ ಮಾತುಗಳನ್ನು ಬ್ರಾಹ್ಮಣ ಕುಲದವರೇ ತಿಳಿದುಕೊಳ್ಳುತ್ತಾರೆ. ಬೇರೆಯವರಂತೂ ವಾದ-ವಿವಾದ ಮಾಡುತ್ತಾರೆ. ಎಲ್ಲರಿಗೂ ಒಟ್ಟಿಗೆ ತಿಳಿಸಬಾರದು, ಪ್ರತ್ಯೇಕವಾಗಿ ತಿಳಿಸಬೇಕಾಗುತ್ತದೆ. ಕಾಯಿದೆಯೂ ಇದೆ, ಮೊದಲು ತಂದೆಯನ್ನು, ಆತ್ಮನನ್ನು ತಿಳಿದುಕೊಳ್ಳಲಿ ನಂತರ ತರಗತಿಯಲ್ಲಿ ಕುಳಿತುಕೊಂಡಾಗ ಅರ್ಥವಾಗುವುದು, ಇಲ್ಲದಿದ್ದರೆ ಅವರಿಗೆ ಅರ್ಥವೇ ಆಗುವುದಿಲ್ಲ. ಸಂಶಯವನ್ನೇ ತರುತ್ತಿರುತ್ತಾರೆ. ನೀವು ತಿಳಿಸಬೇಕಾಗಿದೆ - ಭಗವಂತನು ಒಬ್ಬರೇ ಆಗಿದ್ದಾರೆ, ಅವರು ಸರ್ವ ಶ್ರೇಷ್ಠನಾಗಿದ್ದಾರೆ. ದೇವತೆಗಳಿಗೂ ಸಹ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಈಗ ನಿಮಗೆ ಆತ್ಮದ ಜ್ಞಾನವು ಸಿಕ್ಕಿದೆ, ಕರ್ಮದ ಫಲವನ್ನು ಆತ್ಮವೇ ಅನುಭವಿಸುತ್ತದೆ. ಸಂಸ್ಕಾರವು ಆತ್ಮದಲ್ಲಿಯೇ ಇರುತ್ತದೆ. ಆತ್ಮವೇ ಈ ಕರ್ಮೇಂದ್ರಿಯಗಳ ಮೂಲಕ ಕೇಳಿಸಿಕೊಳ್ಳುತ್ತದೆ. ಭಗವಂತ ತಂದೆಯು ಒಬ್ಬರೇ ಆಗಿದ್ದಾರೆ, ಆಸ್ತಿಯು ಅವರಿಂದಲೇ ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ನೀವು ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ, ತಂದೆಯೊಂದಿಗೆ ಬುದ್ಧಿಯೋಗವನ್ನಿಡಿ. ಜನ್ಮ-ಜನ್ಮಾಂತರದಿಂದ ಭಕ್ತಿ ಮಾಡುತ್ತಾ ಬಂದಿದ್ದೀರಿ. ಹನುಮಂತನ ಪೂಜಾರಿಗಳಿದ್ದರೆ ಹನುಮಂತನನ್ನೇ ನೆನಪು ಮಾಡುತ್ತಾರೆ, ಕೃಷ್ಣನ ಪೂಜಾರಿಗಳಾಗಿದ್ದರೆ ಕೃಷ್ಣನನ್ನೇ ನೆನಪು ಮಾಡುತ್ತಾರೆ. ಈಗ ನಿಮಗೆ ತಿಳಿಸಲಾಗುತ್ತದೆ - ನೀವಾತ್ಮರಾಗಿದ್ದೀರಿ, ನಿಮ್ಮವರು ಪರಮಪಿತ ಪರಮಾತ್ಮನಾಗಿದ್ದಾರೆ, ಅವರನ್ನು ನೆನಪು ಮಾಡುವುದರಿಂದಲೇ ಆಸ್ತಿಯು ಸಿಗುವುದು. ಅವರು ಸ್ವರ್ಗದ ರಚಯಿತ ಅಂದಮೇಲೆ ಅವಶ್ಯವಾಗಿ ನಾವು ಸ್ವರ್ಗದಲ್ಲಿರಬೇಕು. ಭಾರತವು ಸ್ವರ್ಗವಾಗಿತ್ತು, ಈಗಂತೂ ರಾಜ್ಯಭಾಗ್ಯವಿರಲು ಸ್ವರ್ಗವೇ ಇಲ್ಲ. ನರಕದಲ್ಲಂತೂ ರಾವಣನ ರಾಜ್ಯವಿದೆ. ನಮ್ಮ ರಾಜಧಾನಿಯು ಹೇಗೆ ನಡೆಯಿತು, ನಂತರ ಹೇಗೆ ಕೆಳಗಿಳಿದೆವು ಎಂಬುದೇನನ್ನೂ ತಿಳಿದುಕೊಂಡಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ನಾವು ಕೆಳಗಿಳಿಯಲೇಬೇಕಾಗಿದೆ. ಈಗ ಪುನಃ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನೀವು ಪಾವನರಾಗುವಿರಿ, ಸ್ವರ್ಗದ ಆಸ್ತಿಯು ಸಿಗುತ್ತದೆ. ನಾವು ತಂದೆಯ ಮಕ್ಕಳಾಗುತ್ತೇವೆಂದರೆ ತಂದೆಯ ಆಸ್ತಿಯು ಸಿಗುತ್ತದೆ ಆದರೆ ಎಲ್ಲಿಯವರೆಗೆ ತಮೋಪ್ರಧಾನರಿಂದ ಸತೋಪ್ರಧಾನರಾಗುವುದಿಲ್ಲವೋ, ಯೋಗದಿಂದ ಪಾವನರಾಗುವುದಿಲ್ಲವೋ ಅಲ್ಲಿಯವರೆಗೆ ಆಸ್ತಿಯು ಸಿಗಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ, ವಿಕರ್ಮಾಜೀತರಾಗುತ್ತೀರಿ. ಇದು ಗ್ಯಾರಂಟಿಯಾಗಿದೆ, ತಿಳುವಳಿಕೆ ನೀಡಬೇಕಾಗುತ್ತದೆ. ಕೆಲವರು ತಿಳಿದುಕೊಂಡಿದ್ದಾರೆ, ಕೆಲವರು ಆತುರ ಬುದ್ಧಿಯವರಾಗಿದ್ದರೆ ಕೂಗಾಡತೊಡಗುತ್ತಾರೆ. ಒಂದಲ್ಲ ಒಂದು ವಿಘ್ನಗಳನ್ನು ಹಾಕುವವರು ತಯಾರಾಗುತ್ತಾರೆ. ಯಾರಾದರೂ ಬಹಳ ಏರುಪೇರು ಮಾಡಿದರೆ ಅವರಿಗೆ ಹೇಳಿರಿ, ಏಕಾಂತದಲ್ಲಿ ಬಂದು ತಿಳಿದುಕೊಳ್ಳಿ. ಇಲ್ಲಿಯ ನಿಯಮವಾಗಿದೆ - 7 ದಿನಗಳ ಕಾಲ ಭಟ್ಟಿಯಲ್ಲಿದ್ದು ತಿಳಿದುಕೊಳ್ಳಬೇಕಾಗಿದೆ ಏಕೆಂದರೆ ಇದು ಹೊಸ ಜ್ಞಾನವಾಗಿರುವ ಕಾರಣ ಮನುಷ್ಯರು ತಬ್ಬಿಬ್ಬಾಗುತ್ತಾರೆ. ಯಾವುದೇ ಹೊಸ ಸೇವಾಕೇಂದ್ರವನ್ನು ಮೊದಲು ತೆರೆಯುತ್ತಾರೆಂದರೆ ಎಲ್ಲರಿಗೆ ತಿಳಿಸಲು ಅದರಲ್ಲಿ ಬಹಳ ಬುದ್ಧಿವಂತರಿರಬೇಕು. ಭಗವಂತನಂತೂ ಎಲ್ಲರಿಗೂ ಒಬ್ಬರೇ ಆಗಿದ್ದಾರೆ, ಎಲ್ಲಾ ಆತ್ಮರು ಸಹೋದರ-ಸಹೋದರರಾಗಿದ್ದಾರೆ, ಪರಮಾತ್ಮನು ಎಲ್ಲರ ತಂದೆಯಾಗಿದ್ದಾರೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಅವರು ಅವಶ್ಯವಾಗಿ ಪಾವನನಾಗಿದ್ದಾರೆ, ಅವರೆಂದಿಗೂ ಪತಿತನಾಗುವುದಿಲ್ಲ. ತಂದೆಯೇ ಬಂದು ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ. ಸತ್ಯಯುಗದಲ್ಲಿ ಎಲ್ಲರೂ ಪಾವನರಿರುತ್ತಾರೆ. ಕಲಿಯುಗದಲ್ಲಿ ಪತಿತರಿದ್ದಾರೆ. ಪತಿತರು ಬಹಳ ಮಂದಿ ಇರುತ್ತಾರೆ, ಪಾವನರು ಕೆಲವರೇ ಇರುತ್ತಾರೆ. ಸತ್ಯಯುಗಕ್ಕೆ ಎಲ್ಲರೂ ಹೋಗುವುದಿಲ್ಲ, ಯಾರು ಪತಿತರಿಂದ ಪಾವನರಾಗುವರೋ ಅವರೇ ಪಾವನ ಪ್ರಪಂಚದಲ್ಲಿ ಹೋಗುತ್ತಾರೆ. ಉಳಿದೆಲ್ಲರೂ ನಿರ್ವಾಣಧಾಮಕ್ಕೆ ಹೋಗುತ್ತಾರೆ. ಇದೂ ಸಹ ತಿಳಿದಿದೆ- ಇಡೀ ಪ್ರಪಂಚವು ಬಂದು ಮತವನ್ನು ತೆಗೆದುಕೊಳ್ಳುವುದಿಲ್ಲ. ನೀವು ಇಡೀ ಪ್ರಪಂಚಕ್ಕೆ ಮತಕೊಡಿ ಎಂಬುದು ಕಷ್ಟದ ಮಾತಾಗಿದೆ. ಈಗ ಎಲ್ಲರ ಅಂತಿಮ ಸಮಯವಾಗಿದೆ, ಎಲ್ಲರ ವಿನಾಶವಾಗಲಿದೆ. ತಿಳಿಸುವುದಕ್ಕೂ ಬಹಳ ಯುಕ್ತಿ ಬೇಕು. ಅದರಿಂದ ಎಲ್ಲರೂ ಶಾಂತಿಯಿಂದ ಕುಳಿತು ಕೇಳಲಿ. ತೊಂದರೆ ಮಾಡದಿರಲಿ, ಮೊಟ್ಟ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ. ಶಿವ ತಂದೆಯೇ ಪತಿತ-ಪಾವನನಾಗಿದ್ದಾರೆ, ಅವರೇ ತಿಳಿಸುತ್ತಾರೆ. ಗೀತೆಯಲ್ಲಿಯೂ ಅಕ್ಷರವು ಪ್ರಸಿದ್ಧವಾಗಿದೆ. ಪತಿತ-ಪಾವನ ತಂದೆಯೇ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಗೀತೆಯೊಂದಿಗೆ ಈ ಶಬ್ಧಗಳು ಸಂಬಂಧ ಪಟ್ಟಿವೆ. ಶಿವ ತಂದೆಯು ಹೇಳಿದ್ದಾರೆ - ನನ್ನನ್ನು ನೆನಪು ಮಾಡಿರಿ, ನಾನು ಸರ್ವಶಕ್ತಿವಂತ, ಪತಿತ-ಪಾವನನಾಗಿದ್ದೇನೆ. ಗೀತಾ ಜ್ಞಾನ ದಾತ, ಜ್ಞಾನ ಸಾಗರನಾಗಿದ್ದೇನೆ. ಗೀತೆಯ ಶಬ್ಧವಂತೂ ಇದೆಯಲ್ಲವೆ. ಕೇವಲ ಅವರು ಕೃಷ್ಣ ಭಗವಾನುವಾಚ ಎಂದು ಹೇಳುತ್ತಾರೆ. ನೀವು ಶಿವ ಭಗವಾನುವಾಚ ಎಂದು ಹೇಳುತ್ತೀರಿ. ಭಗವಂತನು ನಿರಾಕಾರನಾಗಿದ್ದಾರೆ, ಅವರೆಂದಿಗೂ ಪುನರ್ಜನ್ಮದಲ್ಲಿ ಬರುವುದಿಲ್ಲ. ಅಲೌಕಿಕ ದಿವ್ಯ ಜನ್ಮವನ್ನು ಪಡೆಯುತ್ತಾರೆ. ಸ್ವಯಂ ತಂದೆಯೇ ತಿಳಿಸುತ್ತಾರೆ - ನಾನು ಸಾಧಾರಣ ವೃದ್ಧನ ತನುವಿನಲ್ಲಿ ಬರುತ್ತೇನೆ. ಅವರಿಗೇ ಭಗೀರಥನೆಂದು ಹೇಳುತ್ತಾರೆ. ಬ್ರಹ್ಮಾರವರ ಮೂಲಕವೇ ರಚನೆಯನ್ನು ರಚಿಸುತ್ತಾರೆ ಆದ್ದರಿಂದ ಮನುಷ್ಯನ ಹೆಸರನ್ನು ಬ್ರಹ್ಮನೆಂದು ಇಡಲಾಗುತ್ತದೆ. ವ್ಯಕ್ತ ಬ್ರಹ್ಮನೇ ಮತ್ತೆ ಪಾವನನಾಗಿ ಅವ್ಯಕ್ತ ಫರಿಶ್ತೆಯಾಗುತ್ತಾರೆ. ಪತಿತರನ್ನು ಪಾವನ ಮಾಡುವುದಕ್ಕಾಗಿಯೇ ತಂದೆಯು ಬರುತ್ತಾರೆ ಅಂದಮೇಲೆ ಅವಶ್ಯವಾಗಿ ಪತಿತ ಪ್ರಪಂಚ, ಪತಿತ ಶರೀರದಲ್ಲಿ ಬರುತ್ತಾರೆ. ಇವು ವಿಸ್ತಾರವಾದ ತಿಳುವಳಿಕೆಯಾಗಿದೆ. ಮೊದಲಿಗೆ ತಿಳಿಸಬೇಕು - ಭಗವಂತನು ಹೇಳುತ್ತಾರೆ, ಕಲ್ಪದ ಮೊದಲಿನ ತರಹ ನನ್ನನ್ನು ನೆನಪು ಮಾಡಿರಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ, ಪತಿತರಿಂದ ಪಾವನರಾಗುತ್ತೀರಿ. ಹೇ ಪತಿತ-ಪಾವನ ಬನ್ನಿ ಎಂದು ಹಾಡುತ್ತಾರೆ, ಗಂಗೆಯಂತೂ ಇದ್ದೇ ಇದೆ. ನೀವು ಕರೆಯುತ್ತೀರಿ ಅಂದಮೇಲೆ ಅವಶ್ಯವಾಗಿ ಎಲ್ಲಿಂದಲೋ ಬರುತ್ತಾರೆ. ಪತಿತ-ಪಾವನನು ಪತಿತರಿಂದ ಪಾವನರನ್ನಾಗಿ ಮಾಡುವ ಪಾತ್ರವನ್ನಭಿನಯಿಸಲು ಬರುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಪಾವನರಾಗಿದ್ದಿರಿ ನಂತರ ನಿಮ್ಮಲ್ಲಿ ತುಕ್ಕು ಹಿಡಿದಿದೆ. ಅದು ಯೋಗ ಬಲದಿಂದಲೇ ಬಿಟ್ಟು ಹೋಗುವುದು. ನೀವು ಪವಿತ್ರರಾದರೆ ಮತ್ತೆ ಪಾವನ ಪ್ರಪಂಚದಲ್ಲಿಯೇ ಬರುತ್ತೀರಿ. ಪತಿತ ಪ್ರಪಂಚದ ವಿನಾಶವಾಗಿ ಬಿಡುತ್ತದೆ. ಏನನ್ನು ತಿಳಿಸುವೆವೋ ಅದನ್ನು ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ನಾವಂತೂ ಕೇವಲ ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮಹಿಮೆ ಮಾಡುತ್ತೀರಿ. ಬೇಹದ್ದಿನ ತಂದೆಯು ತಿಳಿಸುತ್ತಾರೆ - ನೀವು 84 ಜನ್ಮಗಳ ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ಎಷ್ಟೊಂದು ಪತಿತರಾಗಿದ್ದೀರಿ, ಮೊದಲು ಪಾವನರಾಗಿದ್ದಿರಿ, ಈಗ ಪತಿತರಾಗಿದ್ದೀರಿ. ಮತ್ತೆ ನೆನಪಿನ ಯಾತ್ರೆಯಲ್ಲಿರುವುದರಿಂದ ನೀವು ಪಾವನರಾಗಿ ಬಿಡುತ್ತೀರಿ. ಭಕ್ತಿಮಾರ್ಗದಿಂದ ನೀವು ಏಣಿಯನ್ನು ಇಳಿಯುತ್ತಲೇ ಬಂದಿದ್ದೀರಿ. ಇದು ಸಂಪೂರ್ಣ ಸಹಜ ಮಾತಾಗಿದೆ. ಇದು ನೀವು ಮಕ್ಕಳ ಬುದ್ಧಿಯಲ್ಲಿ ಕುಳಿತುಕೊಳ್ಳಬೇಕು. ಮುಂಜಾನೆ ಎದ್ದು ವಿಚಾರ ಸಾಗರ ಮಂಥನ ಮಾಡಬೇಕು. ನಂತರ ಯಾರೇ ಬರಲಿ ಅವರಿಗೆ ತಿಳಿಸಬೇಕಾಗಿದೆ. ಮುರುಳಿಯ ಮುಖ್ಯ ಅಂಶಗಳನ್ನು ಬರೆದುಕೊಂಡು ಅದನ್ನು ರಿಪೀಟ್ ಮಾಡಬೇಕು ಆಗ ಹೃದಯದಲ್ಲಿ ಪಕ್ಕಾ ಆಗಿ ಬಿಡುವುದು.

ಮೊಟ್ಟ ಮೊದಲ ಮುಖ್ಯ ಮಾತಾಗಿದೆ, ತಂದೆಯನ್ನು ನೆನಪು ಮಾಡುವುದು. ತಂದೆಯೇ ತಿಳಿಸುತ್ತಾರೆ - ಮನ್ಮನಾಭವ. ನನ್ನನ್ನು ನೆನಪು ಮಾಡಿರಿ ಆಗ ವಿಕರ್ಮ ವಿನಾಶವಾಗುತ್ತದೆ. ಈಗ ಮಾಡಿರಿ ಅಥವಾ ಮಾಡದೇ ಇರಿ ನಿಮ್ಮಿಷ್ಟ. ತಂದೆಯ ಆಜ್ಞೆಯಂತೂ ಸಿಕ್ಕಿದೆ, ಪಾವನ ಪ್ರಪಂಚದಲ್ಲಿ ಹೋಗಬೇಕೆಂದರೆ ಮತ್ತೆ ಪತಿತ ಪ್ರಪಂಚದಲ್ಲಿ ಬುದ್ಧಿಯು ಹೋಗಬಾರದು. ವಿಕಾರದಲ್ಲಿ ಹೋಗಬಾರದು. ತಿಳುವಳಿಕೆಯಂತೂ ಬಹಳ ಸಿಗುತ್ತಾ ಇರುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಬೆಳಗ್ಗೆ-ಬೆಳಗ್ಗೆ ಎದ್ದು ವಿಚಾರ ಸಾಗರ ಮಂಥನ ಮಾಡಬೇಕು. ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಬರೆದುಕೊಂಡು ರಿಪೀಟ್ ಮಾಡಬೇಕಾಗಿದೆ. ಅನ್ಯರಿಗೂ ತಿಳಿಸಬೇಕಾಗಿದೆ. ಎಲ್ಲರಿಗೆ ಮೊಟ್ಟ ಮೊದಲು ತಂದೆಯ ಪರಿಚಯವನ್ನೇ ಕೊಡಬೇಕಾಗಿದೆ.

2. ಪಾವನ ಪ್ರಪಂಚದಲ್ಲಿ ಹೋಗಲು ಈ ಪತಿತ ಪ್ರಪಂಚದಿಂದ ಬುದ್ಧಿಯೋಗವನ್ನು ತೆಗೆಯಬೇಕಾಗಿದೆ.

ವರದಾನ:
ನಂಬರ್ವನ್ ವ್ಯಾಪಾರಿಗಳಾಗಿ ಒಂದೊಂದು ಸೆಕೆಂಡ್ ಅಥವಾ ಸಂಕಲ್ಪದಲ್ಲಿ ಸಂಪಾದನೆ ಜಮಾ ಮಾಡಿಕೊಳ್ಳುವಂತಹ ಪದಮಪತಿ ಭವ.

ನಂಬರ್ವನ್ ವ್ಯಾಪಾರಿಯೆಂದರೆ ಅವರಾಗಿದ್ದಾರೆ, ಯಾರು ಸ್ವಯಂನ್ನು ಬ್ಯುಸಿಯಾಗಿಟ್ಟುಕೊಳ್ಳುವ ವಿಧಿಯನ್ನು ತಿಳಿದಿರುತ್ತಾರೆ. ವ್ಯಾಪಾರಿ ಅರ್ಥಾತ್ ಯಾರ ಒಂದು ಸಂಕಲ್ಪವೂ ವ್ಯರ್ಥವಾಗಬಾರದು, ಪ್ರತೀ ಸಂಕಲ್ಪದಲ್ಲಿ ಸಂಪಾದನೆಯಾಗಬೇಕು. ಹೇಗೆ ಅವರು ವ್ಯಾಪಾರಿಗಳು ಒಂದೊಂದು ಪೈಸೆಯನ್ನು ಕಾರ್ಯದಲ್ಲಿ ಉಪಯೋಗಿಸುತ್ತಾ ಪದಮದಷ್ಟು ಮಾಡಿ ಬಿಡುತ್ತಾರೆ, ಹಾಗೆಯೇ ತಾವೂ ಸಹ ಒಂದೊಂದು ಸೆಕೆಂಡ್ ಅಥವಾ ಸಂಕಲ್ಪದಲ್ಲಿ ಸಂಪಾದನೆ ಮಾಡಿ ತೋರಿಸುತ್ತೀರೆಂದರೆ ಪದಮಪತಿ ಆಗುವಿರಿ. ಇದರಿಂದ ಬುದ್ಧಿಯ ಅಲೆದಾಟವು ಬಂದ್ ಆಗಿ ಬಿಡುತ್ತದೆ ಹಾಗೂ ವ್ಯರ್ಥ ಸಂಕಲ್ಪಗಳ ದೂರುಗಳು ಸಮಾಪ್ತಿಯಾಗಿ ಬಿಡುತ್ತದೆ.

ಸ್ಲೋಗನ್:
ಯಾರು ಬೇಡುವರೋ ಅವರು ಖುಷಿಯ ಖಜಾನೆಯಿಂದ ಸಂಪನ್ನರಾಗಲು ಸಾಧ್ಯವಿಲ್ಲ.

ಅವ್ಯಕ್ತ ಸೂಚನೆ:– “ಸದಾ ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ”

ಸದಾ ಮಾಸ್ಟರ್ ಸರ್ವಶಕಿವಂತನ ಸೀಟಿನ ಮೇಲೆ ಸ್ಥಿತವಾಗಿರುತ್ತಾರೇ ಅವರು ಅಚಲ ಅಡೋಲರಾಗಿರುತ್ತಾರೆ. ಬಾಪ್ ದಾದಾ ರವರು ಹೇಳುತ್ತಾರೆ ಮಕ್ಕಳೇ ಶರೀರ ಹೊರಟು ಹೋದರು, ಖುಷಿ ಹೋಗದಿರಲಿ. ಹಣವಂತೂ ಅದರ ಮುಂದೆ ಏನೂ ಅಲ್ಲ, ಯಾರ ಬಳಿ ಖುಷಿಯ ಖಜಾನೆ ಇದೆ ಅವರ ಮುಂದೆ ಏನು ಸಹ ದೊಡ್ಡ ಮಾತಲ್ಲ ಹಾಗೂ ಸದಾ ಸಹಯೋಗಿ ಸೇವಾಧಾರಿ ಮಕ್ಕಳ ಜೊತೆ ಬಾಪ್ದಾದ ಇರುತ್ತಾರೆ ಹಾಗಾಗಿ ಗಾಬರಿಯಾಗುವ ಯಾವುದೇ ಮಾತಿಲ್ಲ.