09.06.24    Avyakt Bapdada     Kannada Murli    15.02.20     Om Shanti     Madhuban


“ಮನಸ್ಸನ್ನು ಸ್ವಚ್ಛ, ಬುದ್ಧಿಯನ್ನು ಕ್ಲಿಯರ್ ಆಗಿ ಇಟ್ಟುಕೊಂಡು ಡಬಲ್ ಲೈಟ್ ಫರಿಶ್ತಾ ಸ್ಥಿತಿಯ ಅನುಭವ ಮಾಡಿ”


ಇಂದು ಬಾಪ್ದಾದಾರವರು ತನ್ನ ಸ್ವರಾಜ್ಯ ಅಧಿಕಾರಿ ಮಕ್ಕಳನ್ನು ನೋಡುತ್ತಿದ್ದಾರೆ. ಸ್ವರಾಜ್ಯ ಬ್ರಾಹ್ಮಣ ಜೀವನದ ಜನ್ಮ ಸಿದ್ಧ ಅಧಿಕಾರವಾಗಿದೆ. ಬಾಪ್ದಾದಾರವರು ಪ್ರತಿಯೊಂದು ಬ್ರಾಹ್ಮಣನಿಗೂ ಸ್ವರಾಜ್ಯದ ಸಿಂಹಾಸನಾಧೀಶರನ್ನಾಗಿ ಮಾಡಿಬಿಟ್ಟಿದ್ದಾರೆ. ಸ್ವರಾಜ್ಯದ ಅಧಿಕಾರ ಜನ್ಮವಾಗುತ್ತಿದ್ದಂತೆಯೇ ಪ್ರತಿಯೊಂದು ಬ್ರಾಹ್ಮಣ ಆತ್ಮನಿಗೆ ಪ್ರಾಪ್ತಿಯಾಗಿದೆ. ಎಷ್ಟು ಸ್ವರಾಜ್ಯದ ಮೇಲೆ ಸ್ಥಿತರಾಗುತ್ತೀರಿ ಅಷ್ಟು ತಮ್ಮಲ್ಲಿ ಲೈಟ್ (ಹಗುರತೆ, ಬೆಳಕು) ಹಾಗೂ ಮೈಟ್ನ (ಶಕ್ತಿಯ) ಅನುಭವ ಮಾಡುತ್ತೀರಿ.

ಬಾಪ್ದಾದಾರವರು ಇಂದು ಪ್ರತಿಯೊಂದು ಮಗುವಿನ ಮಸ್ತಕದಲ್ಲಿ ಪ್ರಕಾಶದ ಕಿರೀಟವನ್ನು ನೋಡುತ್ತಿದ್ದಾರೆ. ಎಷ್ಟು ತಮ್ಮಲ್ಲಿ ಶಕ್ತಿಯನ್ನು ಧಾರಣೆ ಮಾಡಿಕೊಂಡಿದ್ದೀರಿ ಅಷ್ಟೇ ನಂಬರಿನಲ್ಲಿ ಪ್ರಕಾಶದ ಕಿರೀಟ ಹೊಳೆಯುತ್ತದೆ. ಬಾಪ್ದಾದಾರವರು ಎಲ್ಲಾ ಮಕ್ಕಳಿಗೂ ಸರ್ವಶಕ್ತಿಗಳನ್ನು ಅಧಿಕಾರದಲ್ಲಿ ಕೊಟ್ಟಿದ್ದಾರೆ. ಪ್ರತಿಯೊಬ್ಬರು ಮಾಸ್ಟರ್ ಸರ್ವ ಶಕ್ತಿವಂತರಾಗಿದ್ದಾರೆ, ಆದರೆ ಧಾರಣೆ ಮಾಡುವುದರಲ್ಲಿ ನಂಬರ್ವಾರ್ ಆಗಿದ್ದಾರೆ. ಬಾಪ್ದಾದಾರವರು ನೋಡಿದರು ಸರ್ವಶಕ್ತಿಗಳ ಜ್ಞಾನವು ಎಲ್ಲರಲ್ಲಿಯೂ ಇದೆ, ಧಾರಣೆಯು ಇದೆ ಆದರೆ ಒಂದು ಮಾತಿನಲ್ಲಿ ಅಂತರ ಬಂದುಬಿಡುತ್ತದೆ. ಯಾವುದೇ ಬ್ರಾಹ್ಮಣ ಆತ್ಮನೊಂದಿಗೆ ಕೇಳಿ- ಪ್ರತಿಯೊಂದು ಶಕ್ತಿಯ ವರ್ಣನೆಯನ್ನು ಬಹಳ ಚೆನ್ನಾಗಿ ಮಾಡುತ್ತಾರೆ, ಪ್ರಾಪ್ತಿಗಳ ವರ್ಣನೆಯನ್ನು ಸಹ ಬಹಳ ಚೆನ್ನಾಗಿ ಮಾಡುತ್ತಾರೆ, ಆದರೆ ಅಂತರ ಏನೆಂದರೆ - ಸಮಯದಲ್ಲಿ ಯಾವ ಶಕ್ತಿಯ ಅವಶ್ಯಕತೆ ಇದೆಯೋ, ಆ ಸಮಯದಲ್ಲಿ ಆ ಶಕ್ತಿ ಕರ್ಮದಲ್ಲಿ ತೊಡಗಿಸಲು ಸಾಧ್ಯವಾಗುವುದಿಲ್ಲ. ಸಮಯದ ನಂತರ ಅನುಭವ ಮಾಡುತ್ತಾರೆ- ಈ ಶಕ್ತಿಯ ಅವಶ್ಯಕತೆ ಇತ್ತು. ಬಾಪ್ದಾದಾರವರು ಮಕ್ಕಳಿಗೆ ಹೇಳುತ್ತಾರೆ- ಸರ್ವ ಶಕ್ತಿಗಳ ಆಸ್ತಿ ಎಷ್ಟು ಶಕ್ತಿಶಾಲಿಯಾಗಿದೆ ಯಾವುದರಿಂದ ಯಾವ ಸಮಸ್ಯೆಯೂ ಸಹ ನಿಮ್ಮ ಎದುರು ನಿಲ್ಲಲು ಸಾಧ್ಯವಿಲ್ಲ. ಸಮಸ್ಯೆ ಮುಕ್ತ ಆಗಬಹುದು. ಕೇವಲ ಸರ್ವ ಶಕ್ತಿಗಳನ್ನು ಇಮರ್ಜ್ ರೂಪದಲ್ಲಿ ಸ್ಮೃತಿಯಲ್ಲಿ ಇಟ್ಟುಕೊಳ್ಳಿ ಹಾಗೂ ಸಮಯ ದಲ್ಲಿ ಕಾರ್ಯದಲ್ಲಿ ತೊಡಗಿಸಿ. ಇದಕ್ಕಾಗಿ ನೀವು ಬುದ್ಧಿಯ ಲೈನನ್ನು ಕ್ಲಿಯರ್ ಆಗಿ ಇಟ್ಟುಕೊಳ್ಳಿ. ಎಷ್ಟು ಬುದ್ಧಿಯ ಲೈನ್ ಕ್ಲಿಯರ್ ಹಾಗೂ ಕ್ಲೀನ್ ಇರುತ್ತದೆ ಅಷ್ಟು ನಿರ್ಣಯ ಶಕ್ತಿ ತೀವ್ರವಾಗಿರುವ ಕಾರಣ ಯಾವ ಸಮಯ ಯಾವ ಶಕ್ತಿಯ ಅವಶ್ಯಕತೆ ಇದೆಯೋ ಅದನ್ನು ಕಾರ್ಯದಲ್ಲಿ ತೊಡಗಿಸಬಹುದು. ಏಕೆಂದರೆ ಸಮಯ ಪ್ರಮಾಣ ಬಾಪ್ದಾದಾರವರು ಪ್ರತಿಯೊಂದು ಮಗುವನ್ನು ವಿಘ್ನಮುಕ್ತ, ಸಮಸ್ಯೆ ಮುಕ್ತ, ಪರಿಶ್ರಮದ ಪುರುಷಾರ್ಥದಿಂದ ಮುಕ್ತರನ್ನಾಗಿ ನೋಡಲು ಬಯಸುತ್ತಾರೆ. ಎಲ್ಲರೂ ಆಗಬೇಕೆಂದು ಬಯಸುತ್ತಾರೆ ಆದರೆ ಬಹಳ ಕಾಲದ ಈ ಅಭ್ಯಾಸದ ಅವಶ್ಯಕತೆ ಇದೆ. ಬ್ರಹ್ಮಾ ತಂದೆಯ ವಿಶೇಷ ಸಂಸ್ಕಾರವನ್ನು ನೋಡಿ-"ತಕ್ಷಣ ಧಾನ ಮಹಾಪುಣ್ಯ" ಜೀವನದ ಆರಂಭದಿಂದ ಪ್ರತಿ ಕಾರ್ಯದಲ್ಲಿ ತಕ್ಷಣ ದಾನವು ಮಾಡಿದರು ಹಾಗೂ ತಕ್ಷಣ ಕೆಲಸವನ್ನು ಮಾಡಿದರು. ಬ್ರಹ್ಮಾ ತಂದೆಯ ವಿಶೇಷತೆಯಾಗಿದೆ- ನಿರ್ಣಯ ಶಕ್ತಿ ಸದಾ ಫಾಸ್ಟ್ ಆಗಿತ್ತು. ಬಾಪ್ದಾದಾರವರು ಫಲಿತಾಂಶದಲ್ಲಿ ನೋಡಿದರು. ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಲೇಬೇಕು. ಬಾಪ್ದಾದಾರವರೊಂದಿಗೆ ಬರುವವರಾಗಿದ್ದೀರಲ್ಲವೇ! ಅಥವಾ ಹಿಂದೆ ಹಿಂದೆ ಬರುವವರಾಗಿದ್ದೀರಾ? ಜೊತೆಯಲ್ಲಿ ಹೋಗಬೇಕೆಂದರೆ ಬ್ರಹ್ಮಾ ತಂದೆಯನ್ನು ಅನುಕರಿಸಿ. ಕರ್ಮದಲ್ಲಿ ಫಾಲೋ ಬ್ರಹ್ಮಾ ತಂದೆ ಹಾಗೂ ಸ್ಥಿತಿಯಲ್ಲಿ ನಿರಾಕರಿ ಶಿವ ತಂದೆಯನ್ನು ಫಾಲೋ ಮಾಡಬೇಕು. ಫಾಲ್ಲೋ ಮಾಡುವುದು ಬರುತ್ತದೆ ಅಲ್ಲವೇ?

ಡಬಲ್ ವಿದೇಶಿಯರಿಗೆ ಫಾಲೋ ಮಾಡಲು ಬರುತ್ತದೆಯೇ? ಫಾಲೋ ಮಾಡುವುದಂತೂ ಸಹಜವಾಗಿದೆ ಅಲ್ಲವೇ! ಫಾಲೋ ಮಾಡಬೇಕೆಂದರೆ ಏಕೆ, ಏನು, ಹೇಗೆ.... ಇದೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ. ಹಾಗೂ ಎಲ್ಲರಿಗೂ ಅನುಭವವಿದೆ- ಏಕೆ, ಏನು, ಹೇಗೆ ಇದೆ ವ್ಯರ್ಥ ಸಂಕಲ್ಪಗಳ ನಿಮಿತ್ತ ಆಗಿದೆ, ಇದೆ ಆಧಾರವಾಗಿದೆ. ಫಾಲೋ ಫಾದರ್ ಮಾಡುವುದರಲ್ಲಿ ಈ ಶಬ್ದಗಳು ಸಮಾಪ್ತಿಯಾಗಿ ಬಿಡುತ್ತದೆ. ಹೇಗೆ ಎನ್ನುವುದಲ್ಲ ಹೀಗೆ! ಬುದ್ಧಿ ತಕ್ಷಣ ನಿರ್ಣಯ ಮಾಡುತ್ತದೆ ಈ ರೀತಿ ನಡೆ, ಈ ರೀತಿ ಮಾಡು. ಎಂದ ಮೇಲೆ ಇಂದು ಬಾಪ್ದಾದಾರವರು ವಿಶೇಷ ಎಲ್ಲಾ ಮಕ್ಕಳಿಗೂ ಭಲೇ ಮೊದಲ ಬಾರಿ ಬಂದಿರುವಿರಿ, ಅಥವಾ ಹಳೆಯವರಾಗಿದ್ದೀರಿ, ಎಲ್ಲರಿಗೂ ಇದೆ ಸೂಚನೆಯನ್ನು ಕೊಡುತ್ತಿದ್ದಾರೆ- ತಮ್ಮ ಮನಸ್ಸನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ಹಲವರ ಮನಸ್ಸನಲ್ಲಿ ಈಗಲೂ ಸಹ ವ್ಯರ್ಥ ಹಾಗೂ ನಕಾರಾತ್ಮಕತೆಯ ಸಣ್ಣಪುಟ್ಟ ಕಲೆ ಇದೆ. ಇದರ ಕಾರಣ ಪುರುಷಾರ್ಥದ ಶ್ರೇಷ್ಠ ವೇಗ, ತೀವ್ರಗತಿಯಲ್ಲಿ ಅಡೆತಡೆ ಬರುತ್ತದೆ. ಬಾಪ್ದಾದಾರವರು ಸದಾ ಶ್ರೀಮತವನ್ನು ಕೊಡುತ್ತಾರೆ- ಮನಸ್ಸಿನಲ್ಲಿ ಸದಾ ಪ್ರತಿಯೊಂದು ಆತ್ಮದ ಪ್ರತಿ ಶುಭ ಭಾವನೆ ಹಾಗೂ ಶುಭಕಾಮನೆಯನ್ನು ಇಡಿ- ಇದಾಗಿದೆ ಸ್ವಚ್ಛ ಮನಸ್ಸು. ಅಪಕಾರಿಯ ಮೇಲೆಯೂ ಉಪಕಾರದ ವೃತ್ತಿ ಇಡುವುದು- ಇದೆ ಸ್ವಚ್ಛ ಮನಸ್ಸಾಗಿದೆ. ಸ್ವಯಂನ ಪ್ರತಿ ಹಾಗೂ ಅನ್ಯರ ಪ್ರತಿ ವ್ಯರ್ಥ ಸಂಕಲ್ಪ ಬರುವುದು- ಇದು ಸ್ವಚ್ಛ ಮನಸ್ಸಲ್ಲ. ಸ್ವಚ್ಛ ಮನಸ್ಸು ಹಾಗೂ ಶುದ್ಧ ಮತ್ತು ಕ್ಲಿಯರ್ ಬುದ್ಧಿ. ಪರಿಶೀಲನೆ ಮಾಡಿ, ತಮ್ಮನ್ನು ತಾವು ಗಮನವಿಟ್ಟು ನೋಡಿ, ಮೇಲೆ ಮೇಲೆ ಪರಿಶೀಲನೆ ಮಾಡುವುದಲ್ಲ ಸರಿಯಾಗಿದೆ, ಸರಿಯಾಗಿದೆ. ಹೀಗಲ್ಲ. ಯೋಚಿಸಿ ನೋಡಿ- ಮನಸ್ಸು ಹಾಗೂ ಬುದ್ಧಿ ಸ್ಪಷ್ಟವಾಗಿದೆಯೇ, ಶ್ರೇಷ್ಠವಾಗಿದೆಯೇ? ಆಗ ಡಬಲ್ ಲೈಟ್ ಸ್ಥಿತಿ ಬರಲು ಸಾಧ್ಯ. ತಂದೆಯ ಸಮಾನ ಸ್ಥಿತಿಯನ್ನು ಮಾಡಲು ಇದೇ ಸಾಧನವಾಗಿದೆ. ಹಾಗೂ ಈ ಅಭ್ಯಾಸ ಅಂತ್ಯದಲ್ಲಿ ಅಲ್ಲ, ಬಹು ಕಾಲದ ಅಭ್ಯಾಸ ಅವಶ್ಯಕ ವಾಗಿದೆ. ಚೆಕ್ ಮಾಡಲು ಬರುತ್ತದೆಯೇ? ತಮ್ಮನ್ನು ತಾವು ಚೆಕ್ ಮಾಡಿಕೊಳ್ಳಬೇಕು, ಬೇರೆಯವರನ್ನಲ್ಲ ಬಾಪ್ದಾದಾರವರು ಮೊದಲು ಸಹ, ಹಾಸ್ಯದ ಮಾತನ್ನು ಹೇಳಿದ್ದರು- ಮಕ್ಕಳಿಗೆ ದೂರದ ದೃಷ್ಟಿ ಬಹಳ ತೀಕ್ಷ್ಣವಾಗಿದೆ ಹಾಗೂ ಹತ್ತಿರದ ದೃಷ್ಟಿ ಬಲಹೀನವಾಗಿದೆ. ಆದ್ದರಿಂದ ಅನ್ಯರನ್ನು ಜಡ್ಜ್ (ತೀರ್ಮಾನ) ಮಾಡುವುದರಲ್ಲಿ ಬಹಳ ಬುದ್ಧಿವಂತರಾಗಿದ್ದೀರಿ. ತನ್ನನ್ನು ತಾನು ಚೆಕ್ ಮಾಡುವುದರಲ್ಲಿ ಬಲಹೀನರಾಗಬೇಡಿ.

ಬಾಪ್ದಾದಾರವರು ಮೊದಲು ಸಹ ಹೇಳಿದ್ದರು- ಹೇಗೆ ಈಗ ನಿಮಗೆ ನಿಶ್ಚಯವಿದೆ ನಾನು ಬ್ರಹ್ಮಾಕುಮಾರಿ/ ಬ್ರಹ್ಮಾಕುಮಾರನಾಗಿದ್ದೇನೆ. ನಡೆಯುತ್ತಾ- ಓಡಾಡುತ್ತಾ- ಯೋಚಿಸುತ್ತ - ನಾನು ಬ್ರಹ್ಮಾಕುಮಾರಿ ಆಗಿದ್ದೇನೆ, ನಾನು ಬ್ರಹ್ಮಾಕುಮಾರ ಬ್ರಾಹ್ಮಣ ಆತ್ಮನಾಗಿದ್ದೇನೆ. "ನಾನು ಫರಿಶ್ತಾ ಆಗಿದ್ದೇನೆ" ಇದನ್ನು ಸ್ವಾಭಾವಿಕ ಸ್ಮೃತಿ ಹಾಗೂ ಸ್ವಭಾವವನ್ನಾಗಿ ಮಾಡಿಕೊಳ್ಳಿ. ಅಮೃತ ವೇಳೆ ಏಳುತ್ತಲೇ ಇದನ್ನು ಪಕ್ಕಾ ಮಾಡಿಕೊಳ್ಳಿ- ನಾನು ಫರಿಶ್ತಾ ಪರಮಾತ್ಮ- ಶ್ರೀಮತದ ಅಡಿಯಲ್ಲಿ ಈ ಸಾಕಾರ ತನುವಿನಲ್ಲಿ ಬಂದಿದ್ದೇನೆ, ಎಲ್ಲರಿಗೂ ಸಂದೇಶವನ್ನು ಕೊಡುವುದಕ್ಕಾಗಿ ಹಾಗೂ ಶ್ರೇಷ್ಠ ಕರ್ಮವನ್ನು ಮಾಡುವುದಕ್ಕಾಗಿ. ಕಾರ್ಯ ಪೂರ್ಣವಾದ ತಕ್ಷಣ ತಮ್ಮ ಶಾಂತಿಯ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡಿ. ಶ್ರೇಷ್ಠ ಸ್ಥಿತಿಯಲ್ಲಿ ಹೋಗಿಬಿಡಿ. ಒಬ್ಬರು ಇನ್ನೊಬ್ಬರನ್ನು ಸಹ ಫರಿಶ್ತಾ ಸ್ಥಿತಿಯಲ್ಲಿಯೇ ನೋಡಿ. ನಿಮ್ಮ ವೃತ್ತಿ ಅನ್ಯರನ್ನು ಸಹ ನಿಧಾನವಾಗಿ ಫರಿಶ್ತೆಗಳನ್ನಾಗೆ ಮಾಡಿಬಿಡುವುದು. ನಿಮ್ಮ ದೃಷ್ಟಿ ಅನ್ಯರ ಮೇಲೆಯೂ ಪ್ರಭಾವ ಬೀರುವುದು. ನಾವು ಫರಿಶ್ತೆಗಳಾಗಿದ್ದೇವೆ ಎಂದು ಪಕ್ಕಾ ಇದೆಯೇ? `ಫರಿಶ್ತಾ ಭವ'ದ ವರದಾನ ಎಲ್ಲರಿಗೂ ಸಿಕ್ಕಿದೆಯೇ? ಒಂದು ಸೆಕೆಂಡಿನಲ್ಲಿ ಫರಿಶ್ತಾ ಸ್ಥಿತಿ ಅರ್ಥಾತ್ ಡಬಲ್ ಲೈಟ್ ಆಗಲು ಸಾಧ್ಯವೇ? ಒಂದು ಸೆಕೆಂಡಿನಲ್ಲಿ, ಒಂದು ನಿಮಿಷದಲ್ಲಿ ಅಲ್ಲ, 10 ನಿಮಿಷದಲ್ಲಿ ಅಲ್ಲ, ಒಂದು ಸೆಕೆಂಡ್ನಲ್ಲಿ ಯೋಚಿಸಿದಿರಿ ಹಾಗೂ ಆಗಿಬಿಟ್ಟಿರಿ, ಈ ರೀತಿಯ ಅಭ್ಯಾಸವಿದೆಯೇ? ಒಳ್ಳೆಯದು, ಯಾರು ಒಂದು ಸೆಕೆಂಡಿನಲ್ಲಿ ಆಗಬಲ್ಲರು, 2 ಸೆಕೆಂಡಿನಲ್ಲಿ ಅಲ್ಲ, ಒಂದು ಸೆಕೆಂಡ್ನಲ್ಲಿ ಆಗುತ್ತೀರಿ ಎನ್ನುವವರು ಒಂದು ಕೈಯಿಂದ ಚಪ್ಪಾಳೆ ಹೊಡೆಯಿರಿ. ಆಗಲು ಸಾಧ್ಯವೇ? ಸುಮ್ಮನೆ ಕೈ ಎತ್ತಬೇಡಿ. ಡಬಲ್ ವಿದೇಶಿಯರು ಕೈ ಎತ್ತುತ್ತಿಲ್ಲ! ಸಮಯ ಬೇಕಾಗುತ್ತದೆಯೇ? ಒಳ್ಳೆಯದು ಯಾರು ಸ್ವಲ್ಪ ಸಮಯ ಬೇಕು ಎಂದು ತಿಳಿಯುತ್ತೀರಿ, ಒಂದು ಸೆಕೆಂಡ್ನಲ್ಲಿ ಅಲ್ಲ, ಸ್ವಲ್ಪ ಸಮಯ ಬೇಕಾಗುತ್ತದೆ ಎನ್ನುವವರು ಕೈ ಎತ್ತಿ. (ಬಹುತೇಕರು ಕೈಯೆತ್ತಿದರು) ಒಳ್ಳೆಯದು, ಆದರೆ ಕೊನೆಯ ಸಮಯದ ಪೇಪರ್ ಒಂದು ಸೆಕೆಂಡ್ನಲ್ಲಿ ಬರುವಂತಹದ್ದಾಗಿದೆ, ಆಗ ಏನು ಮಾಡುವಿರಿ? ಇದ್ದಕ್ಕಿದ್ದಂತೆಯೇ ಬರುತ್ತದೆ ಹಾಗೂ ಸೆಕೆಂಡ್ ನಲ್ಲಿ ಬರುತ್ತದೆ. ಕೈ ಎತ್ತಿದಿರಿ, ಯಾವುದೇ ತೊಂದರೆ ಇಲ್ಲ. ಅನುಭೂತಿ ಮಾಡಿದಿರಿ, ಇದು ಸಹ ಬಹಳ ಒಳ್ಳೆಯದು. ಆದರೆ ಈ ಅಭ್ಯಾಸ ಮಾಡಲೇಬೇಕು. ಮಾಡಬೇಕಾಗುತ್ತದೆ ಅಲ್ಲ, ಮಾಡಲೇಬೇಕು. ಈ ಅಭ್ಯಾಸ ಬಹಳ ಬಹಳ- ಬಹಳ ಅವಶ್ಯಕವಾಗಿದೆ. ಹೋಗಲಿ, ಬಾಪ್ದಾದಾರವರು ನಿಮಗೆ ಇನ್ನು ಸ್ವಲ್ಪ ಸಮಯ ಕೊಡುತ್ತಾರೆ. ಎಷ್ಟು ಸಮಯ ಬೇಕು? ಎರಡು ಸಾವಿರದ ವರೆಗೂ ಬೇಕೆ? 21ನೇ ಶತಮಾನವಂತು ನೀವೆಲ್ಲರೂ ಚಾಲೆಂಜ್ (ಸವಾಲು) ಮಾಡಿದ್ದೀರಿ- ಗೋಲ್ಡನ್ ಏಜ್ ಪ್ರಪಂಚ ಬರುವುದು ಹಾಗೂ ವಾತಾವರಣವನ್ನು ತಯಾರು ಮಾಡುತ್ತೇವೆ. ಚಾಲೆಂಜ್ ಮಾಡಿದ್ದಿರಲ್ಲವೇ! ಎಂದ ಮೇಲೆ ಅಷ್ಟರವರೆಗೂ ಬಹಳ ಸಮಯವಿದೆ. ಎಷ್ಟು ಸ್ವಯಂನ ಮೇಲೆ ಗಮನ ಕೊಡಲು ಸಾಧ್ಯವೂ, ಕೊಡಲು ಸಾಧ್ಯವೇ? ಅಲ್ಲ, ಕೊಡಲೇಬೇಕು. ಹೇಗೆ ದೇಹಭಾನದಲ್ಲಿ ಬರಲು ಎಷ್ಟು ಸಮಯ ಬೇಕಾಗುತ್ತದೆ! ಎರಡು ಸೆಕೆಂಡ್? ಬಯಸದಿದ್ದರೂ ಸಹ ದೇಹ ಭಾನದಲ್ಲಿ ಬಂದುಬಿಡುತ್ತೀರಿ, ಎಂದ ಮೇಲೆ ಎಷ್ಟು ಸಮಯ ಹಿಡಿಸುತ್ತದೆ? ಒಂದು ಸೆಕೆಂಡ್ ಅಥವಾ ಅದಕ್ಕಿಂತಲೂ ಕಡಿಮೆ? ಗೊತ್ತೇ ಆಗುವುದಿಲ್ಲ- ದೇಹ ಭಾನದಲ್ಲಿ ಬಂದುಬಿಟ್ಟಿದ್ದೇವೆ. ಇದೇ ರೀತಿ ಈ ಅಭ್ಯಾಸವನ್ನು ಮಾಡಿ- ಏನೇ ಆಗಲಿ, ಏನೆ ಮಾಡುತ್ತಿರಲಿ ಆದರೆ ಗೊತ್ತೇ ಆಗದಿದ್ದಂತೆ ಆತ್ಮ ಅಭಿಮಾನಿ, ಶಕ್ತಿಶಾಲಿ ಸ್ಥಿತಿಯಲ್ಲಿ ಸ್ವತಹವಾಗಿ ಬಂದುಬಿಟ್ಟಿದ್ದೇನೆ. ಫರಿಶ್ತಾ ಸ್ಥಿತಿಯು ಸಹ ಸ್ವತಹವಾಗಿ ಬಂದುಬಿಡಬೇಕು. ಎಷ್ಟು ತಮ್ಮ ಸ್ವಭಾವ ಫರಿಶ್ತಾತನದ್ದಾಗಿ ಮಾಡಿಕೊಳ್ಳುತ್ತೀರಿ, ಪ್ರಕೃತಿ ಈ ಸ್ಥಿತಿಯನ್ನು ನ್ಯಾಚುರಲ್ (ಸ್ವತಹವಾಗಿ) ಮಾಡಿಬಿಡುತ್ತದೆ. ಹಾಗಾದರೆ ಬಾಪ್ದಾದಾರವರು ಎಷ್ಟು ಸಮಯದ ನಂತರ ಕೇಳಬಹುದು? ಎಷ್ಟು ಸಮಯ ಬೇಕು? ಜಯಂತಿ ಹೇಳಿ- ಎಷ್ಟು ಸಮಯ ಬೇಕು? ವಿದೇಶಿಯರ ಕಡೆಯಿಂದ ನೀವು ಹೇಳಿ- ವಿದೇಶಿಯರಿಗೆ ಎಷ್ಟು ಸಮಯ ಬೇಕು? ಜನಕ್ ಹೇಳಿ. (ದಾದೀಜಿಯವರು ಹೇಳಿದರು ಇವತ್ತೆ ಆಗುತ್ತೇವೆ, ನಾಳೆ ಅಲ್ಲ) ಒಂದು ವೇಳೆ ಇಂದೇ ಆಗುತ್ತೀರಿ ಎಂದರೆ ಎಲ್ಲರೂ ಫರಿಶ್ತಾ ಆಗಿಬಿಟ್ಟಿದ್ದೀರಿ? ಆಗಿಬಿಡುತ್ತೇವೆ ಅಲ್ಲ. ಆಗಿಬಿಡುತ್ತೇವೆ ಎಂದರೆ ಎಲ್ಲಿಯವರೆಗೆ ಆಗುವಿರಿ? ಬಾಪ್ದಾದಾರವರು ಇಂದು ಬ್ರಹ್ಮಾ ತಂದೆಯ ಯಾವ ಸಂಸ್ಕಾರವನ್ನು ಹೇಳಿದರು?- `ತಕ್ಷಣ ದಾನ ಮಹಾಪುಣ್ಯ'.

ಬಾಪ್ದಾದಾರವರಿಗೆ ಪ್ರತಿಯೊಂದು ಮಗುವಿನ ಮೇಲೆ ಪ್ರೀತಿ ಇದೆ. ಒಂದು ಮಗುವನ್ನು ಸಹ ಕಡಿಮೆ ಎಂದು ತಿಳಿಯುವುದಿಲ್ಲ. ನಂಬರ್ವಾರ್ ಏಕೆ? ಎಲ್ಲರೂ ನಂಬರ್ ಒನ್ ಆಗಿಬಿಟ್ಟರೆ ಎಷ್ಟು ಚೆನ್ನಾಗಿರುತ್ತೆ. ಒಳ್ಳೆಯದು ಇಂದು ಬಹಳ ಗುಂಪುಗಳು ಬಂದಿದ್ದಾರೆ.

ಪ್ರಶಾಸಕ ವರ್ಗ (ಅಡ್ಮಿನಿಸ್ಟ್ರೇಟಿವ್ ವಿಂಗ್)ನ ಸಹೋದರ ಸಹೋದರಿಯರೊಂದಿಗೆ:- ಪರಸ್ಪರ ಸೇರಿಕೊಂಡು ಯಾವ ಪ್ರೋಗ್ರಾಮ್ ಮಾಡಿದ್ದೀರಿ? ಇಂತಹ ತೀವ್ರ ಪುರುಷಾರ್ಥದ ಯೋಜನೆಯನ್ನು ಮಾಡಿ ಯಾವುದರಿಂದ ಬೇಗ ನೀವು ಶ್ರೇಷ್ಠ ಆತ್ಮರ ಕೈಯಲ್ಲಿ ಈ ಕಾರ್ಯ ಬಂದು ಬಿಡಬೇಕು. ವಿಶ್ವ ಪರಿವರ್ತನೆ ಮಾಡಬೇಕೆಂದರೆ ಇಡೀ ಅಡ್ಮಿನಿಸ್ಟ್ರೇಷನ್ (ಪ್ರಶಾಸನ) ಬದಲಾಯಿಸಬೇಕಾಗುತ್ತದೆ ಅಲ್ಲವೇ! ಹೇಗೆ ಈ ಕಾರ್ಯ ಸಹಜವಾಗಿ ಮುಂದುವರೆಯುತ್ತಾ ಹೋಗುವುದು, ಹರಡುತ್ತಾ ಹೋಗುವುದು, ಇದರ ಯೋಚನೆ ಮಾಡಿದ್ದೀರಾ? ಯಾರೆಲ್ಲಾ ಕಡಿಮೆ ಎಂದರೆ ಕಡಿಮೆ ದೊಡ್ಡ ದೊಡ್ಡ ನಗರಗಳಲ್ಲಿ ನಿಮಿತ್ತರಾಗಿದ್ದಾರೆ ಅವರಿಗೆ ಪರ್ಸನಲ್ (ವೈಯಕ್ತಿಕವಾಗಿ) ಸಂದೇಶ ಕೊಡುವ ಯೋಜನೆ ಮಾಡಿದ್ದೀರಾ? ಕಡಿಮೆ ಎಂದರೆ ಕಡಿಮೆ ಇವರಾದರೂ ತಿಳಿದುಕೊಳ್ಳಲಿ- ಈಗ ಆಧ್ಯಾತ್ಮಿಕತೆಯ ಮೂಲಕ ಪರಿವರ್ತನೆ ಆಗಬಹುದು ಹಾಗೂ ಆಗಲೇಬೇಕು. ಹಾಗಾದರೆ ತಮ್ಮ ವರ್ಗದವರನ್ನು ಎದ್ದೇಳಿಸಿ ಆದ್ದರಿಂದ ಈ ವರ್ಗಗಳನ್ನು ಮಾಡಲಾಗಿದೆ. ಬಾಪ್ದಾದಾರವರು ವರ್ಗದವರ ಸೇವೆಯನ್ನು ನೋಡಿ ಖುಷಿಯಾಗಿದ್ದಾರೆ ಆದರೆ ಈ ಫಲಿತಾಂಶವನ್ನು ನೋಡಬೇಕಾಗಿದೆ- ಪ್ರತಿ ವರ್ಗದವರು ತಮ್ಮ ತಮ್ಮ ವರ್ಗದವರಿಗೆ ಎಲ್ಲಿಯವರೆಗೂ ಸಂದೇಶವನ್ನು ತಲುಪಿಸಿದ್ದಾರೆ! ಅಲ್ಪಸ್ವಲ್ಪ ಎದ್ದೇಳಿಸಿದ್ದೀರಾ ಅಥವಾ ಜೊತೆಗಾರರನ್ನಾಗಿ ಮಾಡಿಕೊಂಡಿದ್ದೀರಾ? ಸಹಯೋಗಿ, ಜೊತೆಗಾರರನ್ನಾಗಿ ಮಾಡಿಕೊಂಡಿದ್ದೀರಾ? ಬ್ರಹ್ಮಾಕುಮಾರನನ್ನಾಗಿ ಮಾಡಿಕೊಂಡಿಲ್ಲ ಆದರೆ ಸಹಯೋಗಿ ಜೊತೆಗಾರರನ್ನಾಗಿ ಮಾಡಿಕೊಂಡಿದ್ದೀರಾ?

ಎಲ್ಲಾ ವರ್ಗದವರಿಗೆ ಬಾಪ್ದಾದಾರವರು ಹೇಳುತ್ತಿದ್ದಾರೆ- ಹೇಗೆ ಈಗ ಧಾರ್ಮಿಕ ನಾಯಕರು ಬಂದರು, ಅವರು ನಂಬರ್ಒನ್ ಆಗಿರಲಿಲ್ಲ ಆದರೂ ಸಹ ಒಂದೇ ವೇದಿಕೆಯ ಮೇಲೆ ಎಲ್ಲರೂ ಒಟ್ಟಾದರೂ ಹಾಗೂ ಎಲ್ಲರ ಮುಖದಿಂದ ಬಂತು- ನಾವೆಲ್ಲರೂ ಸೇರಿಕೊಂಡು ಆಧ್ಯಾತ್ಮಿಕ ಶಕ್ತಿಯನ್ನು ಹರಡಿಸಬೇಕು. ಈ ರೀತಿ ಪ್ರತಿಯೊಂದು ವರ್ಗದವರು ಯಾರೆಲ್ಲಾ ಬಂದಿದ್ದೀರಿ, ಈ ಪ್ರತಿಯೊಂದು ವರ್ಗದವರು ಸಹ ಇಂತಹ ಫಲಿತಾಂಶವನ್ನು ತೆಗೆಯಬೇಕು- ನಮ್ಮ ವರ್ಗದವರಿಗೆ ಎಲ್ಲಿಯವರೆಗೂ ಸಂದೇಶ ತಲುಪಿದೆ?

ಎರಡನೆಯದು- ಆಧ್ಯಾತ್ಮಿಕತೆಯ ಅವಶ್ಯಕತೆ ಇದೆ ಹಾಗೂ ನಾವು ಸಹಯೋಗಿಗಳಾಗುತ್ತೇವೆ ಇಂತಹ ಫಲಿತಾಂಶವಿರಲಿ. ರೆಗುಲರ್ (ನಿಯಮಿತ) ವಿದ್ಯಾರ್ಥಿಗಳಾಗುವುದಿಲ್ಲ ಆದರೆ ಸಹಯೋಗಿ ಆಗಬಹುದು. ಇಲ್ಲಿಯವರೆಗೂ ಪ್ರತಿಯೊಂದು ವರ್ಗದವರಿಗೂ ಏನೆಲ್ಲ ಸೇವೆ ಮಾಡಿದ್ದೀರಿ, ಹೇಗೆ ಈಗ ಧಾರ್ಮಿಕ ನಾಯಕರನ್ನು ಕರೆದಿರಿ, ಇದೇ ರೀತಿ ಪ್ರತಿಯೊಂದು ದೇಶದಿಂದ ಪ್ರತಿಯೊಂದು ವರ್ಗದವರಿಗೆ ಮಾಡಿ. ಮೊದಲು ಭಾರತದಲ್ಲಿಯೇ ಮಾಡಿ, ನಂತರ ಇಂಟನ್ರ್ಯಾಷನಲ್ (ಅಂತರಾಷ್ಟ್ರೀಯವಾಗಿ) ಮಾಡಿ, ಪ್ರತಿಯೊಂದು ವರ್ಗದ ಇಂತಹ ಭಿನ್ನ-ಭಿನ್ನ ಪದವಿಯವರು ಒಟ್ಟಾಗಲಿ ಹಾಗೂ ಇಂತಹ ಅನುಭವ ಮಾಡಲಿ- ನಾವು ಇವರ ಸಹಯೋಗಿಗಳಾಗಬೇಕು. ಪ್ರತಿಯೊಂದು ವರ್ಗದ ಈ ಫಲಿತಾಂಶ ಎಲ್ಲಿಯವರೆಗೂ ಇದೆ? ಹಾಗೂ ಮುಂದಿನ ಯೋಜನೆ ಏನಾಗಿದೆ? ಏಕೆಂದರೆ ಒಂದು ವರ್ಗ, ಒಬ್ಬೊಬ್ಬರನ್ನು ಒಂದು ವೇಳೆ ಲಕ್ಷ್ಯವಿಟ್ಟುಕೊಂಡು ಸಮೀಪ ತರುತ್ತಿರಿ ಎಂದರೆ ನಂತರ ಎಲ್ಲಾ ವರ್ಗದ ಯಾರೆಲ್ಲ ಸಮೀಪ ಸಹಯೋಗಿಗಳಿದ್ದಾರಲ್ಲವೇ, ಅವರ ಸಂಘಟನೆಯನ್ನು ಮಾಡಿ ದೊಡ್ಡ ಸಂಘಟನೆಯನ್ನು ಮಾಡೋಣ. ಹಾಗೂ ಒಬ್ಬರು ಇನ್ನೊಬ್ಬರನ್ನು ನೋಡುತ್ತಾ ಉಮಂಗ ಉತ್ಸಾಹವು ಸಹ ಬರುತ್ತದೆ. ಈಗ ಹರಡಿಕೊಂಡಿದ್ದಾರೆ, ಒಂದು ನಗರದಲ್ಲಿ ಕೆಲವರು, ಇನ್ನೊಂದು ನಗರದಲ್ಲಿ ಕೆಲವರು. ಒಳ್ಳೆಯವರಾಗಿದ್ದಾರೆ ಆದರೆ ಎಲ್ಲಕ್ಕಿಂತ ಮೊದಲು ಸಂಘಟನೆಯನ್ನು ಸೇರಿಸಿ ಹಾಗೂ ನಂತರ ಎಲ್ಲರನ್ನು ಸೇರಿಸಿ ಸಂಘಟನೆ ಮಧುಬನದಲ್ಲಿ ಮಾಡೋಣ. ಇಂತಹ ಯೋಜನೆಯನ್ನು ಮಾಡಿದ್ದೀರಾ? ಅವಶ್ಯವಾಗಿ ಮಾಡಿರಬಹುದು. ಫಾರಿನ್ ಅವರಿಗೆ( ವಿದೇಶದವರಿಗೆ) ಸಹ ಸಂದೇಶವನ್ನು ಕಳುಹಿಸಿದ್ದೆವು, ಬಹಳ ಹರಡಿಕೊಂಡಿದ್ದಾರೆ. ಭಾರತದಲ್ಲಿಯೂ ನೋಡಿ ಒಳ್ಳೊಳ್ಳೆಯ ಆತ್ಮಗಳು ಬೇರೆ ಬೇರೆ ಜಾಗಗಳಲ್ಲಿ ಹೊರ ಬಂದಿದ್ದಾರೆ ಆದರೆ ಗುಪ್ತವಾಗಿ ಇದ್ದುಬಿಡುತ್ತಾರೆ. ಅವರನ್ನು ಭೇಟಿ ಮಾಡಿಸಿ ವಿಶೇಷ ಕಾರ್ಯಕ್ರಮವನ್ನು ಮಾಡಿ ಅನುಭವವನ್ನು ಹಂಚಿಸಿ, ಇದರಿಂದ ಅಂತರ ಬಂದುಬಿಡುತ್ತದೆ, ಸಮೀಪ ಬಂದುಬಿಡುತ್ತಾರೆ. ಕೆಲವು ವರ್ಗದಲ್ಲಿ ಐದು ಇರುತ್ತಾರೆ, ಕೆಲವು ವರ್ಗದಲ್ಲಿ ಎಂಟು ಇರುತ್ತಾರೆ, ಕೆಲವು ವರ್ಗದಲ್ಲಿ 25 - 30 ಸಹ ಇರುತ್ತಾರೆ. ಸಂಘಟನೆಯಲ್ಲಿ ಬರುವುದರಿಂದ ಮುಂದುವರೆದು ಬಿಡುತ್ತಾರೆ. ಉಮಂಗ - ಉಲ್ಲಾಸ ವೃದ್ಧಿಯಾಗುತ್ತದೆ. ಹಾಗಾದರೆ ಇಲ್ಲಿಯವರೆಗೂ ಏನೆಲ್ಲಾ ವರ್ಗಗಳ ಸೇವೆಯಾಗಿದೆ, ಅದರ ಫಲಿತಾಂಶವನ್ನು ತೆಗೆಯಬೇಕು. ಕೇಳಿಸಿತೇ, ಎಲ್ಲಾ ವರ್ಗದವರು ಕೇಳಿಸಿಕೊಳ್ಳುತ್ತಿದ್ದೀರಿ ಅಲ್ಲವೇ! ಎಲ್ಲಾ ವರ್ಗದವರು ಯಾರೆಲ್ಲ ಇಂದು ವಿಶೇಷವಾಗಿ ಬಂದಿದ್ದೀರಿ ಅವರು ಕೈ ಎತ್ತಿ. ಬಹಳ ಇದ್ದಾರೆ. ಹಾಗಾದರೆ ಈಗ ಫಲಿತಾಂಶವನ್ನು ಕೊಡಿ- ಎಷ್ಟು ಎಷ್ಟು, ಯಾರು ಯಾರು ಹಾಗೂ ಎಷ್ಟು ಪಸೆರ್ಂಟೇಜ್ ಸಮೀಪ ಸಹಯೋಗಿಗಳಾಗಿದ್ದಾರೆ? ನಂತರ ಅವರಿಗಾಗಿ ರಮಣೀಕ ಕಾರ್ಯಕ್ರಮವನ್ನು ತಯಾರಿಸೋಣ. ಸರಿಯೇ!

ಮಧುಬನದವರು ಖಾಲಿಯಾಗಿ ಇರಬಾರದು. ಖಾಲಿಯಾಗಿರಲು ಬಯಸುತ್ತೀರಾ? ವ್ಯಸ್ತರಾಗಿರಲು ಬಯಸುತ್ತೀರಿ ಅಲ್ಲವೇ! ಅಥವಾ ದಣಿದು ಬಿಡುತ್ತೀರಾ? ಮಧ್ಯ ಮಧ್ಯದಲ್ಲಿ 15 ದಿನ ರಜೆಯೂ ಇರುತ್ತದೆ ಹಾಗೂ ಇರಲೇಬೇಕು. ಆದರೆ ಕಾರ್ಯಕ್ರಮದ ಹಿಂದೆ ಕಾರ್ಯಕ್ರಮ ಲಿಸ್ಟ್ನಲ್ಲಿ ಇರಬೇಕು ಆಗ ಉಮಂಗ ಉತ್ಸಾಹವಿರುತ್ತದೆ. ಇಲ್ಲವಾದರೆ ಯಾವಾಗ ಸೇವೆ ಇರುವುದಿಲ್ಲ ಎಂದರೆ ದಾದಿ ಒಂದು ದೂರನ್ನು ಕೊಡುತ್ತಾರೆ. ಯಾವ ದೂರು ಹೇಳಲೇ? ದಾದಿ ಹೇಳುತ್ತಾರೆ, ಎಲ್ಲರೂ ಹೇಳುತ್ತಾರೆ- ತಮ್ಮ ತಮ್ಮ ಊರಿಗೆ ಹೋಗುತ್ತೇವೆ, ಸುತ್ತಾಡಲು ಹೋಗುತ್ತೇವೆ, ಸೇವೆಗಾಗಿಯೂ ಸುತ್ತಾಡಲು ಹೋಗುತ್ತೇವೆ ಆದ್ದರಿಂದ ವ್ಯಸ್ತರಾಗಿರುವುದು ಒಳ್ಳೆಯದಾಗಿದೆ. ವ್ಯಸ್ತರಾಗಿದ್ದರೆ ಕಿಟ್ ಕಿಟ್ ಆಗುವುದಿಲ್ಲ. ಹಾಗೂ ನೋಡಿ ಮಧುಬನದವರ ಒಂದು ವಿಶೇಷತೆಯ ಮೇಲೆ ಬಾಪ್ದಾದಾರವರು ಪದಮದಷ್ಟು ಶುಭಾಶಯಗಳನ್ನು ಕೊಡುತ್ತಾರೆ, ನೂರರಷ್ಟು ಸಹ ಅಲ್ಲ, ಪದಮದಷ್ಟು. ಯಾವ ಮಾತಿನ ಮೇಲೆ? ಯಾವಾಗಲೂ ಯಾರೇ ಬರುತ್ತಾರೆ ಎಂದರೆ ಮಧುಬನ ನಿವಾಸಿಯರಲ್ಲಿ ಇಂತಹ ಸೇವೆಯ ಲಗನ್ ಬಂದುಬಿಡುತ್ತದೆ ಏನೇ ಒಳಗಡೆ ಇದ್ದರೂ ಅದು, ಮರೆಯಾಗಿ ಹೋಗುತ್ತದೆ. ಅವ್ಯಕ್ತ ಕಾಣಿಸುತ್ತದೆ. ಅವಿಶ್ರಾಂತರಾಗಿ ಕಾಣಿಸುತ್ತಾರೆ ಹಾಗೂ ರಿಮಾರ್ಕ್ ಬರೆದು ಹೋಗುತ್ತಾರೆ- ಇಲ್ಲಂತೂ ಪ್ರತಿಯೊಬ್ಬರೂ ಫರಿಶ್ತೆಗಳಂತೆ ಎನಿಸುತ್ತಾರೆ. ಈ ವಿಶೇಷತೆ ಬಹಳ ಒಳ್ಳೆಯದಾಗಿದೆ- ಆ ಸಮಯದಲ್ಲಿ ವಿಶೇಷವಾಗಿ ವಿಲ್ ಪವರ್ ಬಂದುಬಿಡುತ್ತದೆ. ಸೇವೆಯ ಹೊಳಪು ಬಂದುಬಿಡುತ್ತದೆ. ಎಂದ ಮೇಲೆ ಈ ಪ್ರಮಾಣ ಪತ್ರವನ್ನು ಬಾಪ್ದಾದಾರವರು ಕೊಡುತ್ತಾರೆ. ಶುಭಾಶಯಗಳು? ಚಪ್ಪಾಳೆ ಅಂತೂ ಹೊಡೆಯಿರಿ ಮಧುಬನದವರು. ಬಹಳ ಒಳ್ಳೆಯದು. ಬಾಪ್ದಾದಾರವರು ಸಹ ಆ ಸಮಯ ಸುತ್ತಾಡಲು ಬರುತ್ತಾರೆ, ನಿಮಗೆ ಗೊತ್ತಾಗುವುದಿಲ್ಲ ಆದರೆ ಬಾಪ್ದಾದಾರವರು ಸುತ್ತಾಡಲು ಬರುತ್ತಾರೆ. ಈ ಮಧುಬನದ ವಿಶೇಷತೆ ಇನ್ನಷ್ಟು ಮುಂದುವರೆಯುತ್ತಾ ಹೋಗುವುದು. ಒಳ್ಳೆಯದು.

ಮೀಡಿಯಾ ವಿಂಗ್: ವಿದೇಶದಲ್ಲಿಯೂ ಮೀಡಿಯಾ ಶುರುವಾಗಿದೆ ಅಲ್ಲವೇ! ಬಾಪ್ದಾದಾರವರು ನೋಡಿದರೂ ಮೀಡಿಯಾದಲ್ಲಿ ಒಳ್ಳೆಯ ಪರಿಶ್ರಮ ಪಟ್ಟಿದ್ದೀರಿ. ಈಗ ನ್ಯೂಸ್ ಪೇಪರ್ನಲ್ಲಿ (ಸುದ್ದಿ ಪತ್ರಿಕೆಯಲ್ಲಿ) ಬರಲು ಶುರುವಾಗಿದೆ ಹಾಗೂ ಪ್ರೀತಿಯಿಂದ ಕೊಡುತ್ತಾರೆ. ಪರಿಶ್ರಮದ ಫಲವು ಸಿಗುತ್ತಿದೆ. ಈಗ ಇನ್ನೂ ವಿಶೇಷವಾಗಿ ಸುದ್ದಿ ಪತ್ರಿಕೆಗಳಲ್ಲಿ, ದೂರದರ್ಶನದಲ್ಲಿ ಸದಾ ಕಾಲಕ್ಕಾಗಿ ಸ್ವಲ್ಪ ಸಮಯ ಕೊಟ್ಟಿದ್ದಾರೆ! ಪ್ರತಿದಿನ ನಡೆಯುತ್ತದೆ ಅಲ್ಲವೇ. ಈ ಉನ್ನತಿ ಚೆನ್ನಾಗಿದೆ. ಎಲ್ಲರಿಗೂ ಕೇಳಿಸಿಕೊಳ್ಳುವುದರಲ್ಲಿ ಒಳ್ಳೆಯ ಅನುಭವವಾಗುತ್ತದೆ ಈ ರೀತಿ ಸುದ್ಧಿ ಪತ್ರಿಕೆಯಲ್ಲಿ ವಿಶೇಷ ಸಪ್ತಾಹಿಕವಾಗಿರಲಿ, ಅಥವಾ ಪ್ರತಿನಿತ್ಯ ವಾಗಿರಲಿ ಅಥವಾ ಎರಡು ದಿನಕ್ಕೆ ಒಮ್ಮೆ ಒಂದು ಭಾಗ ನಿಗದಿಯಾಗಲಿ- ಇದು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಅವಕಾಶವಾಗಿದೆ. ಈ ರೀತಿ ಪುರುಷಾರ್ಥ ಮಾಡಿ. ಸಫಲತೆ ಇದೆ, ಕನೆಕ್ಷನ್ ಕೂಡ ಚೆನ್ನಾಗಿ ವೃದ್ಧಿಯಾಗುತ್ತ ಹೋಗುತ್ತದೆ. ಈಗ ಸುದ್ದಿ ಪತ್ರಿಕೆಯಲ್ಲಿ ಏನಾದರೂ ಅದ್ಭುತವನ್ನು ಮಾಡಿ ತೋರಿಸಿ ಸುದ್ಧಿ ಪತ್ರಿಕೆಯಲ್ಲಿ. ಮಾಡಲು ಸಾಧ್ಯವೇ? ಗುಂಪು ಮಾಡಲು ಸಾಧ್ಯವೇ? ಕೈ ಎತ್ತಿ- ಆಯಿತು ಮಾಡುತ್ತೇವೆ. ಉಮಂಗ ಉತ್ಸಾಹ ಇದ್ದಲ್ಲಿ ಸಫಲತೆ ಇದ್ದೇ ಇದೆ. ಏಕೆ ಆಗಲು ಸಾಧ್ಯವಿಲ್ಲ! ಅಂತಿಮದಲ್ಲಿ ಸಮಯ ಬರುತ್ತದೆ ಯಾವಾಗ ಎಲ್ಲಾ ಸಾಧನೆಗಳು ನಿಮ್ಮ ಕಡೆಯಿಂದ ಬಳಸಲಾಗುತ್ತದೆ. ನಿಮಗೆ ನೀಡುತ್ತಾರೆ. ಏನಾದರೂ ಕೊಡಿ, ಏನಾದರೂ ಕೊಡಿ ಎಂದು ನೀಡುತ್ತಾರೆ. ಸಹಯೋಗವನ್ನು ತೆಗೆದುಕೊಳ್ಳಿ. ಈಗ ನೀವು ಹೇಳಬೇಕಾಗುತ್ತದೆ- ಸಹ ಯೋಗಿಗಳಾಗಿ ಎಂದು, ನಂತರ ಅವರು ಹೇಳುತ್ತಾರೆ ನಮ್ಮನ್ನು ಸಹಯೋಗಿಗಳನ್ನಾಗಿ ಮಾಡಿಕೊಳ್ಳಿ. ಕೇವಲ ಒಂದು ಮಾತನ್ನು ಪಕ್ಕಾ ಮಾಡಿಕೊಳ್ಳಿ- ಫರಿಶ್ತೆ, ಫರಿಶ್ತೆ, ಫರಿಶ್ತೆ. ನಂತರ ನೋಡಿ ನಿಮ್ಮ ಕೆಲಸ ಎಷ್ಟು ಬೇಗ ಆಗುತ್ತದೆ. ಹಿಂದೆ ಬೀಳುವ ಅವಶ್ಯಕತೆ ಇರುವುದಿಲ್ಲ ಆದರೆ ನೆರಳಿನಂತೆ ಅವರೇ ನಿಮ್ಮ ಹಿಂದೆ ಬರುತ್ತಾರೆ. ಕೇವಲ ನಿಮ್ಮ ಸ್ಥಿತಿ ನಿಂತಿರುವುದರಿಂದ ಇನ್ನು ನಿಂತುಕೊಂಡಿದೆ. ಸದಾ ಸಿದ್ದರಾಗಿ ಬಿಟ್ಟರೆ ಕೇವಲ ವಿಚ್ ಒತ್ತುವುದಷ್ಟೇ ತಡವಾಗಿರುತ್ತದೆ, ಅಷ್ಟೇ. ಚೆನ್ನಾಗಿ ಮಾಡುತ್ತಿದ್ದೀರಿ ಹಾಗೂ ಮಾಡುವಿರಿ.

ನಾಲ್ಕಾರು ಕಡೆಯ ದೇಶ ವಿದೇಶದ ಸಹಕಾರ ಸ್ವರೂಪದಲ್ಲಿ ಅಥವಾ ಸೂಕ್ಷ್ಮ ಸ್ವರೂಪದಲ್ಲಿ ಮಿಲನ ಆಚರಿಸುವಂತಹ ಸರ್ವ ಸ್ವರಾಜ್ಯ ಅಧಿಕಾರಿ ಆತ್ಮಗಳಿಗೆ ಸದಾ ಈ ಶ್ರೇಷ್ಠ ಅಧಿಕಾರವನ್ನು ತಮ್ಮ ಚಲನೆ ಹಾಗೂ ಚಹರೆಯಿಂದ ಪ್ರತ್ಯಕ್ಷ ಮಾಡುವಂತಹ ವಿಶೇಷ ಆತ್ಮಗಳಿಗೆ, ಸದಾ ಬಾಪ್ದಾದಾರವರನ್ನು ಪ್ರತಿಯೊಂದು ಹೆಜ್ಜೆಯಲ್ಲಿ ಫಾಲೋ ಮಾಡುವಂತಹ, ಸದಾ ಮನಸ್ಸನ್ನು ಸ್ವಚ್ಛ ಹಾಗೂ ಬುದ್ಧಿಯನ್ನು ಸ್ಪಷ್ಟವಾಗಿಟ್ಟುಕೊಳ್ಳುವಂತಹ ಇಂತಹ ಸ್ವತಹ ತೀವ್ರ ಪುರುಷಾರ್ಥಿ ಆತ್ಮಗಳಿಗೆ, ಸದಾ ಜೊತೆಯಲ್ಲಿರುವಂತಹ ಹಾಗೂ ಜೊತೆಯಲ್ಲಿ ನಡೆಯುವಂತಹ ಮಕ್ಕಳಿಗೆ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ

ವರದಾನ:
ಸಾಧನಗಳನ್ನು ನಿರ್ಲೇಪ ಅಥವ ಭಿನ್ನರಾಗಿದ್ದು ಕಾರ್ಯದಲ್ಲಿ ಉಪಯೋಗಿಸುವಂತಹ ಬೇಹದ್ದಿನ ವೈರಾಗಿ ಭವ

ಬೇಹದ್ದಿನ ವೈರಾಗಿ ಅರ್ಥಾತ್ ಯಾವುದರಲ್ಲಿಯೂ ಸೆಳೆತವಿಲ್ಲ, ಸದಾ ತಂದೆಯ ಪ್ರಿಯರು. ಈ ಪ್ರಿಯವಾಗಿರುವುದೇ ಭಿನ್ನರನ್ನಾಗಿ ಮಾಡಿಸುತ್ತದೆ. ತಂದೆಯ ಪ್ರಿಯರಾಗಲಿಲ್ಲವೆಂದರೆ ಭಿನ್ನರೂ ಸಹ ಆಗಲು ಸಾಧ್ಯವಿಲ್ಲ, ಸೆಳೆತದಲ್ಲಿ ಬಂದುಬಿಡುತ್ತೀರಿ. ಯಾರು ತಂದೆಯ ಪ್ರಿಯರಾಗುವರು, ಅವರು ಸರ್ವ ಆಕರ್ಷಣೆಗಳಿಂದ ಭಿನ್ನ ಅರ್ಥಾತ್ ಭಿನ್ನವಾಗುವರು- ಇದಕ್ಕೇ ನಿರ್ಲೇಪ ಸ್ಥಿತಿಯೆಂದು ಹೇಳಲಾಗುತ್ತದೆ. ಯಾವುದೇ ಅಲ್ಪಕಾಲದ ಆಕರ್ಷಣೆಯ ಲೇಪದಲ್ಲಿ ಬರುವವರಲ್ಲ. ತಾವು ರಚನೆ ಅಥವ ಸಾಧನಗಳನ್ನು ನಿರ್ಲೇಪರಾಗಿದ್ದು ಕಾರ್ಯದಲ್ಲಿ ಉಪಯೋಗಿಸಿರಿ- ಇಂತಹ ಬೇಹದ್ದಿನ ವೈರಾಗಿಯೇ ರಾಜಋಷಿಯಾಗಿದ್ದಾರೆ.

ಸ್ಲೋಗನ್:
ಹೃದಯದ ಸ್ವಚ್ಛತೆ-ಶುದ್ಧತೆಯಿರಲಿ ಆಗ ಸಾಹೇಬನು(ಪ್ರಭು) ರಾಜಿ(ಪ್ರಸನ್ನ)ಯಾಗಿಬಿಡುವನು.