09.07.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಸತ್ಯ ತಂದೆಯ ಜೊತೆ ಒಳಗೂ-ಹೊರಗೂ ಸತ್ಯವಾಗಿರಿ ಆಗಲೇ ದೇವತೆಗಳು ಆಗಲು ಸಾಧ್ಯ, ಬ್ರಾಹ್ಮಣರೇ ಫರಿಶ್ತೆಗಳಿಂದ ದೇವತೆಗಳಾಗುತ್ತೀರಿ”

ಪ್ರಶ್ನೆ:
ಈ ಜ್ಞಾನವನ್ನು ಕೇಳುವ ಹಾಗೂ ಧಾರಣೆ ಮಾಡುವ ಅಧಿಕಾರಿಗಳು ಯಾರಾಗುತ್ತಾರೆ?

ಉತ್ತರ:
ಯಾರು ಸರ್ವತೋಮುಖವಾದ ಪಾತ್ರವನ್ನಭಿನಯಿಸುತ್ತಾರೆ, ಯಾರು ಎಲ್ಲರಿಗಿಂತ ಹೆಚ್ಚಿನ ಭಕ್ತಿ ಮಾಡಿದ್ದಾರೆಯೋ ಅವರೇ ಜ್ಞಾನವನ್ನು ಧಾರಣೆ ಮಾಡುವದರಲ್ಲಿ ಬಹಳ ತೀಕ್ಷ್ಣವಾಗಿ ಹೋಗುತ್ತಾರೆ. ಶ್ರೇಷ್ಟ ಪದವಿಯನ್ನು ಅವರೇ ಪಡೆಯುತ್ತಾರೆ. ನೀವು ಶಾಸ್ತ್ರಗಳನ್ನು ಒಪ್ಪುತ್ತೀರಾ ಎಂದು ನೀವು ಮಕ್ಕಳನ್ನು ಕೆಲವರು ಪ್ರಶ್ನೆ ಮಾಡುತ್ತಾರೆ, ಆಗ ತಿಳಿಸಿ-ನಾವು ಎಷ್ಟು ಶಾಸ್ತ್ರಗಳನ್ನು ಓದಿದ್ದೇವೆ, ಭಕ್ತಿಮಾಡಿದ್ದೇವೆಯೋ ಅಷ್ಟು ಪ್ರಪಂಚದಲ್ಲಿ ಯಾರೂ ಮಾಡುವುದಿಲ್ಲ. ಈಗ ನಮಗೆ ಭಕ್ತಿಯ ಫಲ ಸಿಕ್ಕಿದೆ ಆದ್ದರಿಂದ ಈಗ ಭಕ್ತಿಯ ಅವಶ್ಯಕತೆಯಿಲ್ಲ.

ಓಂ ಶಾಂತಿ.
ಬೇಹದ್ದಿನ ತಂದೆಯು ಬೇಹದ್ದಿನ ಮಕ್ಕಳಿಗೆ ತಿಳಿಸಿಕೊಡುತ್ತಾರೆ, ಎಲ್ಲಾ ಆತ್ಮಗಳ ತಂದೆಯು ಎಲ್ಲಾ ಆತ್ಮಗಳಿಗೆ ತಿಳಿಸುತ್ತಾರೆ ಏಕೆಂದರೆ ಅವರು ಸರ್ವರ ಸದ್ಗತಿ ದಾತನಾಗಿದ್ದಾರೆ. ಯಾರೆಲ್ಲಾ ಆತ್ಮಗಳಿದ್ದಾರೆಯೊ ಅವರಿಗೆ ಜೀವಾತ್ಮರೆಂದೇ ಹೇಳಲಾಗುತ್ತದೆ. ಶರೀರವಿಲ್ಲದಿದ್ದರೆ ಆತ್ಮವು ನೋಡಲು ಸಾಧ್ಯವಿಲ್ಲ. ಭಲೆ ನಾಟಕದ ಯೋಜನೆಯನುಸಾರ ಸ್ವರ್ಗದ ಸ್ಥಾಪನೆಯನ್ನು ತಂದೆಯು ಮಾಡುತ್ತಿದ್ದಾರೆ ಆದರೆ ತಂದೆಯು ತಿಳಿಸುತ್ತಾರೆ-ನಾನಂತೂ ಸ್ವರ್ಗವನ್ನು ನೋಡುವುದಿಲ್ಲ, ಯಾರಿಗಾಗಿ ಸ್ಥಾಪನೆ ಮಾಡುವೆನೋ ಅವರೇ ನೋಡುತ್ತಾರೆ. ನಿಮಗೆ ಓದಿಸಿದ ನಂತರ ಯಾವುದೇ ಶರೀರವನ್ನಂತೂ ನಾನು ಧಾರಣೆ ಮಾಡುವದಿಲ್ಲ. ಅಂದಮೇಲೆ ಶರೀರವಿಲ್ಲದೇ ಹೇಗೆ ನೋಡಲು ಸಾಧ್ಯ! ಎಲ್ಲಿ ನೋಡಿದರಲ್ಲಿ ಇದ್ದೇನೆ, ಎಲ್ಲವನೂ ನೋಡುತ್ತೇನೆಂದಲ್ಲ. ಕೇವಲ ನೀವು ಮಕ್ಕಳನ್ನು ನೋಡುತ್ತೇನೆ, ನಿಮ್ಮನ್ನೇ ಹೂಗಳನ್ನಾಗಿ ಮಾಡಿ ನೆನಪಿನ ಯಾತ್ರೆಯನ್ನು ಕಲಿಸುತ್ತೇನೆ.

ಯೋಗ ಅಕ್ಷರ ಭಕ್ತಿಯದಾಗಿದೆ. ಜ್ಞಾನಕೊಡುವವರು ಒಬ್ಬ ಜ್ಞಾನಸಾಗರನಾಗಿದ್ದಾರೆ, ಅವರನ್ನೇ ಸದ್ಗುರುವೆಂದು ಕರೆಯಲಾಗುತ್ತದೆ, ಉಳಿದವರೆಲ್ಲರೂ ಗುರುಗಳು. ಸತ್ಯವನ್ನು ಹೇಳುವವರು, ಸತ್ಯ ಖಂಡವನ್ನು ಸ್ಥಾಪನೆ ಮಾಡುವವರು ಒಬ್ಬ ಸದ್ಗುರುವೇ ಆಗಿದ್ದಾರೆ, ಭಾರತವು ಸತ್ಯ ಖಂಡವಾಗಿತ್ತು, ಅಲ್ಲಿ ಎಲ್ಲರೂ ದೇವಿ-ದೇವತೆಗಳು ನಿವಾಸ ಮಾಡುತ್ತಿದ್ದರು, ತಾವೀಗ ಮನುಷ್ಯರಿಂದ ದೇವತೆಗಳಾಗುತ್ತಿದ್ದೀರಿ ಅಂದಮೇಲೆ ಮಕ್ಕಳಿಗೆ ತಿಳಿಸಿಕೊಡುತ್ತಾರೆ- ಸತ್ಯ ತಂದೆಯ ಜೊತೆಗೆ ಒಳಗೂ-ಹೊರಗೂ ಸತ್ಯವಾಗಿರಬೇಕು. ಮೊದಲು ಹೆಜ್ಜೆ-ಹೆಜ್ಜೆಯಲ್ಲಿಯೂ ಅಸತ್ಯವೇ ಇತ್ತು. ಒಂದು ವೇಳೆ ಈಗ ಸ್ವರ್ಗದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಲು ಇಚ್ಚಿಸುತ್ತೀರೆಂದರೆ ಅದೆಲ್ಲವನ್ನೂ ಬಿಡಬೇಕಾಗುತ್ತದೆ.. ಭಲೆ ಸ್ವರ್ಗದಲ್ಲಂತೂ ಅನೇಕರು ಬರುತ್ತಾರೆ ಅದರೆ ತಂದೆಯನ್ನು ಅರಿತುಕೊಂಡಮೇಲೂ ವಿಕರ್ಮಗಳನ್ನು ವಿನಾಶ ಮಾಡದಿದ್ದರೆ ಶಿಕ್ಷೆಗಳನ್ನು ತಿಂದು ಲೆಕ್ಕಾಚಾರವನ್ನು ಸಮಾಪ್ತಿ ಮಾಡಿಕೊಳ್ಳಬೇಕಾಗುತ್ತದೆ ಮತ್ತೆ ಪದವಿಯೂ ಕಡಿಮೆ ಸಿಗುತ್ತದೆ. ಪುರುಷೋತ್ತಮ ಸಂಗಮಯುಗದಲ್ಲಿ ರಾಜ್ಯಧಾನಿಯು ಸ್ಥಾಪನೆಯಾಗುತ್ತಿದೆ, ರಾಜ್ಯಧಾನಿಯು ಸತ್ಯಯುಗದಲ್ಲಾಗಲಿ, ಕಲಿಯುಗದಲ್ಲಾಗಲಿ ಸ್ಥಾಪನೆಯಾಗುವುದಿಲ್ಲ ಏಕೆಂದರೆ ತಂದೆಯು ಸತ್ಯಯುಗ ಅಥವಾ ಕಲಿಯುಗದಲ್ಲಿ ಬರುವುದಿಲ್ಲ. ಈ ಯುಗಕ್ಕೆ ಪುರುಷೋತ್ತಮ ಕಲ್ಯಾಣಕಾರಿ ಯುಗವೆಂದು ಹೇಳಲಾಗುತ್ತದೆ. ಈ ಸಮಯದಲ್ಲಿಯೇ ತಂದೆಯು ಬಂದು ಎಲ್ಲರ ಕಲ್ಯಾಣ ಮಾಡುತ್ತಾರೆ. ಕಲಿಯುಗದ ನಂತರ ಸತ್ಯಯುಗವು ಬರಬೇಕಾಗಿದೆ. ಆದ್ದರಿಂದ ನಡುವೆ ಸಂಗಮಯುಗವು ಅವಶ್ಯವಾಗಿ ಬೇಕು. ತಂದೆಯು ತಿಳಿಸಿದ್ದಾರೆ- ಇದು ಪತಿತ, ಹಳೆಯ ಪ್ರಪಂಚವಾಗಿದೆ. ದೂರದೇಶದಲ್ಲಿರುವವರು ಪರದೇಶದಲ್ಲಿ ಬಂದರೆಂಬ ಗಾಯನವಿದೆ ಅಂದಮೇಲೆ ಪರದೇಶದಲ್ಲಿ ತಮ್ಮ ಮಕ್ಕಳು ಎಲ್ಲಿ ಸಿಗುತ್ತಾರೆ! ಪರದೇಶದಲ್ಲಿ ಪರರ ಮಕ್ಕಳೇ ಸಿಗುತ್ತಾರೆ, ಅಂತಹವರಿಗೆ ತಂದೆಯು ಬಹಳ ಒಳ್ಳೆಯ ರೀತಿಯಲ್ಲಿ ತಿಳಿಸುತ್ತಾರೆ-ನಾನು ಯಾರಲ್ಲಿ ಪ್ರವೇಶ ಮಾಡುತ್ತೇನೆ, ತನ್ನ ಪರಿಚಯವನ್ನೂ ಕೊಡುತ್ತಾರೆ ಮತ್ತು ಯಾರಲ್ಲಿ ಪ್ರವೇಶ ಮಾಡುವರೋ ಅವರಿಗೂ ತಿಳಿಸುತ್ತೇನೆ- ಇದು ನಿಮ್ಮ ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ.. ಎಷ್ಟು ಸ್ಪಷ್ಟವಾಗಿದೆ!

ಈಗ ನೀವು ಇಲ್ಲಿ ಪುರುಷಾರ್ಥಿಗಳಾಗಿದ್ದೀರಿ, ಸಂಪೂರ್ಣ ಪವಿತ್ರರಲ್ಲ, ಸಂಪೂರ್ಣ ಪವಿತ್ರರಿಗೆ ಫರಿಸ್ತೆಗಳೆಂದು ಹೇಳಲಾಗುತ್ತದೆ. ಫರಿಸ್ತೆಗಳಾದನಂತರ ದೇವತೆಗಳಾಗುತ್ತೀರಿ. ಸೂಕ್ಷ್ಮವತನದಲ್ಲಿ ನೀವು ಸಂಪೂರ್ಣ ಫರಿಸ್ತೆಗಳನ್ನು ನೋಡುತ್ತೀರಿ, ಅವರಿಗೆ ಫರಿಸ್ತೆಗಳೆಂದು ಹೇಳಲಾಗುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಒಬ್ಬ ತಂದೆಯನ್ನೇ ನೆನಪು ಮಾಡಬೇಕು. ಅಲಫ್ ಎಂದರೆ ಬಾಬಾ, ಅವರನ್ನೇ ಅಲ್ಲಾ ಎಂದು ಹೇಳುತ್ತಾರೆ. ಆ ತಂದೆಯಿಂದ ಸ್ವರ್ಗದ ಆಸ್ತಿಯು ಸಿಗುತ್ತದೆಯೆಂದು ಮಕ್ಕಳಿಗೆ ತಿಳಿದಿದೆ. ಸ್ವರ್ಗವನ್ನು ಹೇಗೆ ರಚಿಸುತ್ತಾರೆ? ನೆನಪಿನ ಯಾತ್ರೆ ಮತ್ತು ಜ್ಞಾನದಿಂದ. ಭಕ್ತಿಯಲ್ಲಿ ಜ್ಞಾನವಿರುವುದಿಲ್ಲ, ಜ್ಞಾನವನ್ನು ಕೇವಲ ಒಬ್ಬ ತಂದೆಯು ಬ್ರಾಹ್ಮಣರಿಗೆ ತಿಳಿಸುತ್ತಾರೆ, ಬ್ರಾಹ್ಮಣರು ಶಿಖೆಗೆ ಸಮಾನರಲ್ಲವೇ. ಈಗ ನೀವು ಬ್ರಾಹ್ಮಣರಾಗಿದ್ದೀರಿ, ನಂತರ ಬಾಜೋಲಿ (ಚಕ್ರದ ಆಟದಲ್ಲಿ ಕಾಲು ಮತ್ತು ತಲೆ ಒಂದು ಕಡೆ ಬರುತ್ತದೆ) ಆಡುತ್ತೀರಿ. ಬ್ರಾಹ್ಮಣ, ದೇವತೆ, ಕ್ಷತ್ರಿಯ, ಶೂದ್ರ..... ಇದಕ್ಕೆ ವಿರಾಟ ರೂಪವೆಂದು ಹೇಳಲಾಗುವದು, ಬ್ರಹ್ಮಾ-ವಿಷ್ಣು-ಶಂಕರರ ವಿರಾಟರೂಪವೆಂದು ಹೇಳುವುದಿಲ್ಲ. ವಿರಾಟರೂಪದಲ್ಲಿ ಶಿಖೆ ಬ್ರಾಹ್ಮಣರನ್ನು ತೋರಿಸಿಲ್ಲ. ತಂದೆಯು ಬ್ರಹ್ಮಾರವರ ತನುವಿನಲ್ಲಿ ಬರುತ್ತಾರೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಬ್ರಾಹ್ಮಣ ಕುಲವೇ ಸರ್ವೋತ್ತಮ ಕುಲವಾಗಿದೆ. ಏಕೆಂದರೆ ತಂದೆಯು ಬಂದು ಓದಿಸುತ್ತಾರೆ.. ತಂದೆಯು ಶೂದ್ರರಿಗಂತೂ ಓದಿಸುವುದಿಲ್ಲ. ಬ್ರಾಹ್ಮಣರಿಗೇ ಓದಿಸುತ್ತಾರಲ್ಲವೇ! ಓದಿಸುವುದರಲ್ಲಿ ಸಮಯ ಹಿಡಿಸುತ್ತದೆ. ರಾಜ್ಯಧಾನಿ ಸ್ಥಾಪನೆಯಾಗಬೇಕಾಗಿದೆ. ನೀವು ಸರ್ವಶ್ರೇಷ್ಟ ಪುರುಷೋತ್ತಮರಾಗಿ. ಹೊಸ ಪ್ರಪಂಚವನ್ನು ಯಾರು ರಚಿಸುವರು? ತಂದೆಯೇ ರಚಿಸುತ್ತಾರೆ, ಇದನ್ನು ಮರೆಯದಿರಿ. ಮಾಯೆಯು ನಿಮ್ಮನ್ನು ಮರೆಸುತ್ತದೆ. ಅದರ ಕೆಲಸವೇ ಇದಾಗಿದೆ. ಜ್ಞಾನದಲ್ಲಿ ಮಾಯೆಯು ಅಷ್ಟು ಮದ್ಯ ಪ್ರವೇಶ ಮಾಡುವುದಿಲ್ಲ, ನೆನಪಿನಲ್ಲಿಯೇ ಪ್ರವೇಶ ಮಾಡುತ್ತದೆ. ಆತ್ಮದಲ್ಲಿ ಯಾವ ಕೊಳಕು ತುಂಬಿದೆಯೋ ಅದು ತಂದೆಯ ನೆನಪಿನ ವಿನಃ ಸ್ವಚ್ಛವಾಗುವುದಿಲ್ಲ. ಯೋಗ ಎಂಬ ಶಬ್ದದಿಂದ ಮಕ್ಕಳು ಬಹಳ ತಬ್ಬಿಬ್ಬಾಗುತ್ತಾರೆ. ಬಾಬಾ, ನಮಗೆ ಯೋಗ ಹಿಡಿಯುವುದಿಲ್ಲವೆಂದು ಹೇಳುತ್ತಾರೆ. ವಾಸ್ತವದಲ್ಲಿ ಯೋಗ ಶಬ್ದವು ಹಠಯೋಗಿಗಳಾಗಿದೆ. ಬ್ರಹ್ಮ ತತ್ವದೊಂದಿಗೆ ಯೋಗವನ್ನು ಜೋಡಿಸಬೇಕೆಂದು ಸನ್ಯಾಸಿಗಳು ಹೇಳುತ್ತಾರೆ ಅಂದಾಗ ಬ್ರಹ್ಮ್ತತ್ವವಂತೂ ಬಹಳ ಉದ್ದಗಲವಾಗಿದೆ, ಹೇಗೆ ಆಕಾಶದಲ್ಲಿ ನಕ್ಷತ್ರಗಳು ಕಾಣಿಸುವುದೋ ಹಾಗೆಯೇ ಅಲ್ಲಿಯೂ ಆತ್ಮಗಳು ಚಿಕ್ಕ-ಚಿಕ್ಕ ನಕ್ಷತ್ರಗಳಂತಿರುತ್ತಾರೆ. ಅದು ಆಕಾಶತತ್ವದಿಂದ ದೂರವಿದೆ, ಅಲ್ಲಿ ಸೂರ್ಯ-ಚಂದ್ರರ ಪ್ರಕಾಶವಿಲ್ಲ. ಅಂದಾಗ ನೋಡಿ, ನೀವು ಎಷ್ಟು ಚಿಕ್ಕ-ಚಿಕ್ಕ ರಾಕೇಟ್ ಆಗಿದ್ದೀರಿ ಆದ್ದರಿಂದ ತಂದೆಯು ತಿಳಿಸುತ್ತಾರೆ- ಮೊಟ್ಟ ಮೊದಲು ಆತ್ಮದ ಜ್ಞಾನವನ್ನು ತಿಳಿಸಬೇಕು. ಅದನ್ನು ಒಬ್ಬ ಭಗವಂತನೇ ಕೊಡಲು ಸಾಧ್ಯ. ಮನುಷ್ಯರು ಕೇವಲ ಭಗವಂತನನ್ನು ತಿಳಿದುಕೊಂಡಿಲ್ಲವೆಂದಲ್ಲ ಜೊತೆಗೆ ಆತ್ಮವನ್ನೂ ತಿಳಿದುಕೊಂಡಿಲ್ಲ, ಇಷ್ಟು ಚಿಕ್ಕ ಆತ್ಮದಲ್ಲಿ 84 ಜನ್ಮಗಳ ಚಕ್ರದ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ. ಇದಕ್ಕೆ ಸೃಷ್ಟಿ(ವಿಧಿ) ಎಂದು ಹೇಳಲಾಗುತ್ತದೆ ಮತ್ತೇನು ಹೇಳಲಾರೆವು. ಆತ್ಮವು 84ರ ಚಕ್ರವನ್ನು ಸುತ್ತುತ್ತಲೇ ಇರುತ್ತದೆ. ಪ್ರತೀ 5000 ವರ್ಷಗಳ ನಂತರ ಈ ಚಕ್ರವು ತಿರುಗುತ್ತಲೇ ಇರುತ್ತದೆ, ಇದು ನಾಟಕದಲ್ಲಿ ನಿಗದಿಯಾಗಿದೆ, ಪ್ರಪಂಚವು ಅವಿನಾಶಿಯಾಗಿದೆ ಎಂದಿಗೂ ವಿನಾಶ ಹೊಂದುವುದಿಲ್ಲ. ಅವರು ಮಹಾಪ್ರಳಯವಾಗುತ್ತದೆ, ಕೃಷ್ಣನು ಹೆಬ್ಬೆರಳನ್ನು ಚೀಪುತ್ತಾ, ಆಲದ ಎಲೆಯ ಮೇಲೆ ತೇಲಿಕೊಂಡು ಬರುತ್ತಾನೆಂದು ತೋರಿಸುತ್ತಾರೆ ಆದರೆ ಹಾಗೇನೂ ಅಗುವುದಿಲ್ಲ. ಇದು ನಿಯಮಕ್ಕೆ ವಿರುದ್ಧವಾಗಿದೆ, ಮಹಾಪ್ರಳಯವು ಎಂದಿಗೂ ಆಗುವುದಿಲ್ಲ. ಒಂದು ಧರ್ಮದ ಸ್ಥಾಪನೆ, ಅನೇಕ ಧರ್ಮಗಳ ವಿನಾಶವು ನಡೆಯುತ್ತಲೇ ಇರುತ್ತದೆ. ಈ ಸಮಯದಲ್ಲಿ ಮುಖ್ಯವಾಗಿ ಮೂರು ಧರ್ಮಗಳಿವೆ. ಇದಂತೂ ಕಲ್ಯಾಣಕಾರಿ ಸಂಗಮಯುಗವಾಗಿದೆ. ಹಳೆಯ ಪ್ರಪಂಚ ಮತ್ತು ಹೊಸ ಪ್ರಪಂಚದಲ್ಲಿ ರಾತ್ರಿ-ಹಗಲಿನ ಅಂತರವಿದೆ. ನೆನ್ನೆ ಹೊಸ ಪ್ರಪಂಚವಾಗಿತ್ತು, ಇಂದು ಹಳೆಯದಾಗಿದೆ, ನೆನ್ನೆಯ ಪ್ರಪಂಚದಲ್ಲಿ ಏನಿತ್ತು ಎಂಬುದನ್ನು ನೀವು ತಿಳಿದುಕೊಳ್ಳಬಲ್ಲಿರಿ. ಯಾರು ಯಾವ ಧರ್ಮದವರಾಗಿರುವರೋ ಅವರು ಆ ಧರ್ಮದ ಸ್ಥಾಪನೆಯನ್ನೇ ಮಾಡುತ್ತಾರೆ. ಆ ಧರ್ಮಾತ್ಮರು ಮೊದಲು ಒಬ್ಬರೇ ಬರುತ್ತಾರೆ, ಅನೇಕರು ಬರುವುದಿಲ್ಲ ನಂತರ ನಿಧಾನ-ನಿಧಾನವಾಗಿ ವೃದ್ಧಿಯಾಗುತ್ತಾರೆ.

ತಂದೆಯು ತಿಳಿಸುತ್ತಾರೆ-ನೀವು ಮಕ್ಕಳಿಗೆ ನಾನು ಯಾವುದೇ ಕಷ್ಟವನ್ನು ಕೊಡುವುದಿಲ್ಲ. ಮಕ್ಕಳಿಗೆ ಹೇಗೆ ಕಷ್ಟ ಕೊಡಲಿ! ಪ್ರಿಯಾತಿಪ್ರಿಯ ತಂದೆಯಲ್ಲವೇ. ನಾನು ಸದ್ಗತಿದಾತ, ದುಃಖಹರ್ತ-ಸುಖಕರ್ತನಾಗಿದ್ದೇನೆ. ನೆನಪೂ ನನ್ನೊಬ್ಬನನ್ನೇ ಮಾಡುತ್ತೀರಿ, ಭಕ್ತಿಮಾರ್ಗದಲ್ಲಿ ಏನು ಮಾಡಿಬಿಟ್ಟಿದ್ದಾರೆ, ನನಗೆ ಎಷ್ಟೊಂದು ನಿಂದನೆ ಮಾಡುತ್ತಾರೆ!

ದೇವರು ಒಬ್ಬನೇ ಎಂದು ಹೇಳುತ್ತಾರೆ. ಸೃಷ್ಟಿಯ ಚಕ್ರವು ಒಂದೇ ಆಗಿದೆ, ಆಕಾಶದಲ್ಲಿ ಯಾವುದೋ ಪ್ರಪಂಚವಿದೆಯೆಂದಲ್ಲ. ಆಕಾಶತತ್ವದಲ್ಲಿ ನಕ್ಷತ್ರಗಳಿವೆ. ಒಂದೊಂದು ನಕ್ಷತ್ರದಲ್ಲಿಯೂ ಜಗತ್ತಿದೆ, ಕೆಳಗೂ ಒಂದು ಪ್ರಪಂಚವಿದೆ ಎಂದು ಮನುಷ್ಯರು ತಿಳಿಯುತ್ತಾರೆ ಅದರೆ ಇವೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ಶ್ರೇಷ್ಟಾತಿ ಶ್ರೇಷ್ಟ ಭಗವಂತ ಒಬ್ಬರಾಗಿದ್ದಾರೆ. ಸಕಲ ಸಾಮಗ್ರಿ ನಿಮ್ಮಲ್ಲಿದೆ.....ಎಂದು ಶ್ಲೋಕವಿದೆ ಅಂದರೆ ಇಡೀ ಸೃಷ್ಟಿಯ ಆತ್ಮಗಳು ನಿಮ್ಮಲ್ಲಿ (ರುದ್ರಮಾಲೆ) ಪೋಣಿಸಲ್ಪಟ್ಟಿದ್ದಾರೆ. ಇದು ಮಾಲೆಯಾಗಿದೆ. ಇದಕ್ಕೆ ಬೇಹದ್ದಿನ ರುದ್ರಮಾಲೆಯೆಂದೂ ಹೇಳಬಹುದು. ಎಲ್ಲಾ ಆತ್ಮಗಳು ಒಂದು ಸೂತ್ರದಲ್ಲಿ ಬಂದಿಸಲ್ಪಟ್ಟಿದ್ದಾರೆ. ಹಾಡುತ್ತಾರೆ ಅದರ ಅರ್ಥವನ್ನು ತಿಳಿದುಕೊಂಡಿಲ್ಲ. ತಂದೆಯು ಬಂದು ತಿಳಿಸುತ್ತಾರೆ ಮಕ್ಕಳೇ, ನಾನು ನಿಮಗೆ ಸ್ವಲ್ಪವೂ ಕಷ್ಟ ಕೊಡುವುದಿಲ್ಲ. ಇದನ್ನೂ ತಿಳಿಸಿದ್ದಾರೆ-ಯಾರು ಮೊಟ್ಟಮೊದಲು ಭಕ್ತಿಮಾಡಿದ್ದಾರೆಯೋ ಅವರೇ ಜ್ಞಾನದಲ್ಲಿ ತೀವ್ರವಾಗಿ ಮುಂದುವರೆಯುತ್ತಾರೆ. ಹೆಚ್ಚು ಭಕ್ತಿಮಾಡಿದ್ದಾರೆ ಹೆಚ್ಚು ಫಲವೂ ಅವರಿಗೆ ಸಿಗಬೇಕು. ಭಕ್ತಿಯ ಫಲವನ್ನು ಭಗವಂತ ಕೊಡುತ್ತಾರೆಂದು ಹೇಳುತ್ತಾರೆ. ಅವರು ಜ್ಞಾನಸಾಗರನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಜ್ಞಾನದಿಂದಲೇ ಫಲವನ್ನು ಕೊಡುತ್ತಾರೆ. ಭಕ್ತಿಯ ಫಲದ ಬಗ್ಗೆ ಯಾರಿಗೂ ತಿಳಿದಿಲ್ಲ. ಇದು ಹಳೆಯ ಪ್ರಪಂಚವಾಗಿದೆ ಎಂದು ಹೇಳುತ್ತಾರೆ ಆದರೆ ಯಾವಾಗಿನಿಂದ ಹಳೆಯದಾಗಿದೆ, ಇದರ ಲೆಕ್ಕವನ್ನು ತೆಗೆಯಲು ಸಾಧ್ಯವಿಲ್ಲ. ಮನುಷ್ಯ ಸೃಷ್ಟಿ ರೂಪಿ ವೃಕ್ಷದ ಬೀಜರೂಪವಾಗಿದ್ದಾರೆ, ಸತ್ಯವಾಗಿದ್ದಾರೆ. ಇದು ಎಂದೂ ವಿನಾಶವಾಗುವುದಿಲ್ಲ, ಇದಕ್ಕೆ ಉಲ್ಟಾ ವೃಕ್ಷವೆಂದು ಹೇಳಲಾಗುತ್ತದೆ. ತಂದೆಯು ಮೇಲಿದ್ದಾರೆ ಆದ್ದರಿಂದಲೇ ತಂದೆಯನ್ನು ಮೇಲೆ ನೋಡಿ ಕರೆಯುತ್ತಾರೆ. ಶರೀರವಂತೂ ಕರೆಯಲು ಸಾಧ್ಯವಿಲ್ಲ. ಆತ್ಮವು ಒಂದು ಶರೀರದಿಂದ ಹೊರಬಂದು ಇನ್ನೊಂದು ಶರೀರವನ್ನು ಧಾರಣೆ ಮಾಡುತ್ತದೆ, ಆತ್ಮವು ಚಿಕ್ಕದೂ ಆಗುವುದಿಲ್ಲ, ದೊಡ್ಡದೂ ಆಗುವುದಿಲ್ಲ. ಮೃತ್ಯುವನ್ನು ಹೊಂದುವುದಾಗಲಿ ಸಾಧ್ಯವಿಲ್ಲ, ಈ ಆಟವು ಮಾಡಲ್ಪಟ್ಟಿದೆ, ಪೂರ್ಣ ಆಟದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಂದೆಯು ತಿಳಿಸಿದ್ದಾರೆ, ಆಸ್ತಿಕರನ್ನಾಗಿಯೂ ಮಾಡಿದ್ದಾರೆ. ಜೊತೆಜೊತೆಗೆ ಈ ತಿಳುವಳಿಕೆಯನ್ನೂ ನೀಡಿದ್ದಾರೆ ಲಕ್ಷ್ಮೀ-ನಾರಾಯಣರಲ್ಲಿ ಈ ಜ್ಞಾನವಿರುವುದಿಲ್ಲ, ಅಲ್ಲಿ ನಾಸ್ತಿಕ-ಅಸ್ತಿಕರ ಬಗ್ಗೆ ಗೊತ್ತೇ ಇರುವುದಿಲ್ಲ. ಇದರ ಬಗ್ಗೆ ತಂದೆಯೇ ತಿಳಿಸುತ್ತಾರೆ. ಯಾರು ತಂದೆಯನ್ನಾಗಲೀ, ರಚನೆಯ ಆದಿ-ಮಧ್ಯ-ಅಂತ್ಯವನ್ನಾಗಲೀ ಕಾಲಾವಧಿಯನ್ನಾಗಲೀ ತಿಳಿದುಕೊಂಡಿಲ್ಲವೋ ಅವರು ನಾಸ್ತಿಕರು. ಈ ಸಮಯದಲ್ಲಿ ನೀವು ಆಸ್ತಿಕರಾಗಿದ್ದೀರಿ, ಸತ್ಯಯುಗದಲ್ಲಿ ಈ ಮಾತುಗಳೇ ಇರುವುದಿಲ್ಲ. ಆಟವಾಗಿದೆ ಅಲ್ಲವೆ. ಯಾವ ಮಾತು ಒಂದು ಸೆಕೆಂಡಿನಲ್ಲಿರುವುದೋ ಅದು ಇನ್ನೊಂದು ಸೆಕೆಂಡಿನಲ್ಲಿರುವುದಿಲ್ಲ. ಕಾಲ ಚಕ್ರವು ಟಿಕ್ ಟಿಕ್ ಎಂದು ತಿರುಗುತ್ತದೆ. ಕಳೆದು ಹೋದುದು ಚಕ್ರದಲ್ಲಿ ತಿರುಗುತ್ತಿರುವುದು. ಹೇಗೆ ಚಲನ ಚಿತ್ರದಲ್ಲಿ 2 ಅಥವಾ 3 ಗಂಟೆಗಳ ನಂತರ ಪುನಃ ಅದೇ ಚಲನ ಚಿತ್ರವು ಚಾಚೂ ತಪ್ಪದೇ ಪುನರಾವರ್ತನೆ ಆಗುತ್ತದೆ, ಮನೆ ಮಹಲುಗಳು ಬೀಳುತ್ತವೆ, ಪುನಃ ನೋಡಿದಾಗ ಇವೆಲ್ಲವೂ ಹಾಗೆಯೇ ಇರುತ್ತವೆ ಅಂದರೆ ಅದು ಚಾಚೂ ತಪ್ಪದೆ ಪುನರಾವರ್ತನೆ ಆಗುತ್ತದೆ, ಇದರಲ್ಲಿ ತಬ್ಬಿಬ್ಬಾಗುವ ಮಾತಿಲ್ಲ. ಮುಖ್ಯ ಮಾತು ಆತ್ಮಗಳ ತಂದೆ ಪರಮಾತ್ಮ ಆಗಿದ್ದಾರೆ, ಆತ್ಮ ಪರಮಾತ್ಮನಿಂದ ಬಹಳ ಕಾಲ ಅಗಲಿದ್ದರು. . . ಆತ್ಮಗಳು ಅಗಲಿ ಇಲ್ಲಿ ಪಾತ್ರ ಅಭಿನಯಿಸಲು ಬರುತ್ತಿರಿ. ನೀವು ಪೂರ್ಣ 5000 ವರ್ಷಗಳು ತಂದೆಯಿಂದ ಅಗಲಿದ್ದೀರಿ. ನೀವು ಮಧುರ ಮಕ್ಕಳಿಗೆ ಸರ್ವತೋಮುಖ ಪಾತ್ರವು ಸಿಕ್ಕಿದೆ ಆದ್ದರಿಂದ ನಿಮಗೆ ತಿಳಿಸಿಕೊಡುತ್ತೇನೆ, ಜ್ಞಾನಕ್ಕೂ ನೀವೇ ಅಧಿಕಾರಿಗಳಾಗಿದ್ದೀರಿ. ಎಲ್ಲರಿಗಿಂತ ಹೆಚ್ಚು ಭಕ್ತಿ ಯಾರು ಮಾಡಿರುವರೋ ಅವರೇ ಜ್ಞಾನದಲ್ಲಿಯೂ ಮುಂದೆ ಹೋಗುತ್ತಾರೆ, ಶ್ರೇಷ್ಠ ಪದವಿಯನ್ನೂ ಪಡೆಯುತ್ತಾರೆ. ಮೊಟ್ಟ ಮೊದಲು ಒಬ್ಬ ಶಿವ ತಂದೆಯ ನಂತರ ದೇವತೆಗಳ ಭಕ್ತಿ ನಡೆಯುತ್ತದೆ. ಆನಂತರ ಪಂಚ ತತ್ವಗಳ ಭಕ್ತಿಯೂ ನಡೆಯುತ್ತದೆ, ವ್ಯಭಿಚಾರಿಗಳಾಗುತ್ತಾರೆ. ಈಗ ಬೇಹದ್ದಿನ ತಂದೆಯು ಬೇಹದ್ದಿನಲ್ಲಿ ಕರೆದುಕೊಂಡು ಹೋಗುತ್ತಾರೆ ಮತ್ತೆ ಅವರು ಬೇಹದ್ದಿನ ಭಕ್ತಿಯ ಅಜ್ಞಾನದಲ್ಲಿ ಕರೆದುಕೊಂಡು ಹೋಗುತ್ತಾರೆ, ಈಗ ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ಒಬ್ಬ ತಂದೆಯನ್ನು ನೆನಪು ಮಾಡಿ ಆದರೂ ಸಹ ಇಲ್ಲಿಂದ ಹೊರಗೆ ಹೋದ ತಕ್ಷಣ ಮಾಯೆ ಮರೆಸಿಬಿಡುತ್ತದೆ. ಹೇಗೆ ಪಾಪ ಮಾಡುವುದಿಲ್ಲ ಎಂದು ಗರ್ಭದಲ್ಲಿದ್ದಾಗ ಪಶ್ಚಾತ್ತಾಪ ಪಡುತ್ತಾರೆ ನಂತರ ಹೊರಗೆ ಬಂದಾಗ ಮರೆತು ಬಿಡುತ್ತಾರೆ. ಇಲ್ಲಿಯೂ ಹಾಗೆಯೇ ಹೊರಗೆ ಹೋದ ತಕ್ಷಣವೇ ಮರೆತುಹೋಗುತ್ತಾರೆ, ಇದು ಸ್ಮೃತಿ ಮತ್ತು ವಿಸ್ಮೃತಿಯ ಆಟವಾಗಿದೆ. ಈಗ ನೀವು ತಂದೆಯ ದತ್ತು ಮಕ್ಕಳಾಗಿದ್ದೀರಿ. ಶಿವ ತಂದೆ ಅಲ್ಲವೆ. ಅವರು ಎಲ್ಲ್ಲಾ ಆತ್ಮಗಳ ಬೇಹದ್ದಿನ ತಂದೆಯಾಗಿದ್ದಾರೆ. ಎಷ್ಟು ದೂರದಿಂದ ಬರುತ್ತಾರೆ, ಅವರ ಮನೆ ಪರಮಧಾಮವಾಗಿದೆ. ಪರಮಧಾಮದಿಂದ ಬರುತ್ತಾರೆ ಅಂದ ಮೇಲೆ ಉಡುಗೊರೆಯನ್ನು ಅವಶ್ಯ ತರುತ್ತಾರೆ. ಅಂಗೈಯಲ್ಲಿ ಸ್ವರ್ಗದ ಉಡುಗೊರೆ ತರುತ್ತಾರೆ ಮತ್ತು ತಿಳಿಸುತ್ತಾರೆ - ಮಕ್ಕಳೇ, ಸೆಕೆಂಡಿನಲ್ಲಿ ಸ್ವರ್ಗದ ರಾಜ್ಯ ಭಾಗ್ಯವು ದೊರೆಯುತ್ತದೆ, ಕೇವಲ ತಂದೆಯನ್ನು ಅರಿತುಕೊಳ್ಳಿರಿ. ಎಲ್ಲಾ ಆತ್ಮಗಳಿಗೆ ತಂದೆ ಆಗಿದ್ದಾರಲ್ಲವೆ. ಹೇಳುತ್ತಾರೆ - ನಾನು ನಿಮ್ಮ ತಂದೆಯಾಗಿದ್ದೇನೆ, ನಾನು ಹೇಗೆ ಬರುತ್ತೇನೆಂದು ನಿಮಗೆ ತಿಳಿಸುತ್ತೇನೆ. ನನಗೆ ರಥವಂತೂ ಅವಶ್ಯವಾಗಿ ಬೇಕು, ಯಾವ ರಥ? ಯಾವುದೇ ಮಹಾತ್ಮರ ಶರೀರವನ್ನು ಆಧಾರವಾಗಿ ಪಡೆಯುವುದಿಲ್ಲ. ನೀವು ಬ್ರಹ್ಮನಿಗೆ ಭಗವಂತನೆಂದು ಹೇಳುತ್ತೀರಿ. ಬ್ರಹ್ಮನಿಗೆ ಭಗವಂತ, ದೇವತೆ ಎಂದು ಹೇಳುತ್ತೀರಿ, ಎಂದು ಮನುಷ್ಯರು ಹೇಳುತ್ತಾರೆ. ಅರೆ! ನಾವೆಲ್ಲಿ ಹೇಳುತ್ತೇವೆ. ವೃಕ್ಷದಲ್ಲಿ ಪೂರ್ಣ ತುದಿಯಲ್ಲಿ ನಿಂತಿದ್ದಾರೆ. ಈಗ ಇಡೀ ವೃಕ್ಷವು ತಮೋಪ್ರಧಾನವಾಗಿದೆ. ಬ್ರಹ್ಮಾರವರೂ ಸಹ ಇಲ್ಲಿ ನಿಂತಿದ್ದಾರೆ ಅಂದ ಮೇಲೆ ಬಹಳ ಜನ್ಮಗಳ ಅಂತಿಮ ಜನ್ಮವಾಯಿತಲ್ಲವೆ. ಸ್ವಯಂ ಬ್ರಹ್ಮನೇ ತಿಳಿಸುತ್ತಾರೆ - ನನ್ನ ಅಂತಿಮ ಜನ್ಮದಲ್ಲಿ ವಾನಪ್ರಸ್ಥ ಸ್ಥಿತಿಯಲ್ಲಿದ್ದಾಗ ತಂದೆಯು ಬಂದಿದ್ದಾರೆ, ಅವರು ಬಂದು ವ್ಯಾಪಾರ ವ್ಯವಹಾರವನ್ನು ಬಿಡಿಸಿದರು. 60 ವರ್ಷಗಳ ನಂತರ ಭಗವಂತನನ್ನು ಮಿಲನ ಮಾಡಲು ಭಕ್ತಿ ಮಾಡುತ್ತಾರೆ.

ನೀವೆಲ್ಲರೂ ಮನುಷ್ಯನ ಮತದಲ್ಲಿದ್ದಿರಿ, ಈಗ ತಂದೆಯು ನಿಮಗೆ ಶ್ರೀಮತವನ್ನು ಕೊಡುತ್ತಿದ್ದಾರೆ. ಶಾಸ್ತ್ರಗಳನ್ನು ಬರೆಯುವುವರು ಮನುಷ್ಯರಾಗಿದ್ದಾರೆ, ಭಗವಂತನು ಬರೆಯುವುದು ಓದುವುದನ್ನು ಮಾಡುವುದಿಲ್ಲ. ಸತ್ಯಯುಗದಲ್ಲಿ ಶಾಸ್ತ್ರಗಳಿರುವುದಿಲ್ಲ.ಶಾಸ್ತ್ರಗಳಲ್ಲಿ ಎಲ್ಲ್ಲಾ ಕರ್ಮಕಾಂಡಗಳನ್ನು ಬರೆದಿದ್ದಾರೆ, ಇಲ್ಲಿ ಆ ಮಾತಿಲ್ಲ. ನೀವು ನೋಡುತ್ತೀರಿ - ತಂದೆ ಜ್ಞಾನ ತಿಳಿಸುತ್ತಾರೆ, ಭಕ್ತಿ ಮಾರ್ಗದಲ್ಲಿ ಬಹಳ ಶಾಸ್ತ್ರಗಳನ್ನು ಓದಿದ್ದೇವೆ, ನೀವು ವೇದ ಶಾಸ್ತ್ರಗಳನ್ನು ಓದಿದ್ದೀರಾ ಎಂದು ಯಾರಾದರೂ ನಿಮ್ಮನ್ನು ಕೇಳಿದರೆ, ತಿಳಿಸಿ- ಎಲ್ಲ್ಲಾ ಮನುಷ್ಯರಿಗಿಂತ ನಾವು ಹೆಚ್ಚು ಒಪ್ಪುತ್ತೇವೆ. ಪ್ರಾರಂಭದಿಂದ ಅವ್ಯಭಿಚಾರಿ ಭಕ್ತಿಯನ್ನು ನಾವೇ ಆರಂಭ ಮಾಡಿದೆವು, ಈಗ ನಮಗೆ ಜ್ಞಾನ ಸಿಕ್ಕಿದೆ, ಜ್ಞಾನದಿಂದ ಸದ್ಗತಿ ಸಿಗುತ್ತದೆ ಎಂದ ಮೇಲೆ ಭಕ್ತಿಯನ್ನೇನು ಮಾಡುವುದು. ತಂದೆ ತಿಳಿಸುತ್ತಾರೆ - ಕೆಟ್ಟದ್ದನ್ನು ಕೇಳಬೇಡಿ , ಕೆಟ್ಟದ್ದನ್ನು ನೋಡಬೇಡಿ. . . . ತಂದೆ ತಿಳಿಸುತ್ತಾರೆ, ಸರಳವಾಗಿ ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ತಮ್ಮನ್ನು ತಾವು ಆತ್ಮನಿಶ್ಚಯ ಮಾಡಿಕೊಳ್ಳಿ - ನಾನು ಆತ್ಮ, ಅವರು ಅಲ್ಲಾ ಆಗಿದ್ದೇನೆ ಎಂದು ಹೇಳುತ್ತಾರೆ, ಆದರೆ ನಿಮಗೆ ತಂದೆ ತಿಳಿಸುತ್ತಾರೆ - ನಾನು ಆತ್ಮನಾಗಿದ್ದೇನೆ, ತಂದೆಯ ಮಗುವಾಗಿದ್ದೇನೆ. ಇದನ್ನೇ ಮಾಯೆ ಪದೇ ಪದೇ ಮರೆಸಿಬಿಡುತ್ತದೆ. ದೇಹಾಭಿಮಾನದಲ್ಲಿ ಬರುವುದರಿಂದ ವಿರುದ್ಧ ಕೆಲಸಗಳನ್ನು ಮಾಡುತ್ತಾರೆ. ಆದ್ದರಿಂದ ತಂದೆ ಹೇಳುತ್ತಾರೆ - ಮಕ್ಕಳೇ, ತಂದೆಯನ್ನು ಮರೆಯದಿರಿ ಸಮಯವನ್ನು ವ್ಯರ್ಥಮಾಡದಿರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ರಚೈತಾ ಮತ್ತು ರಚನೆಯ ರಹಸ್ಯವನ್ನು ಯಥಾರ್ಥವಾಗಿ ತಿಳಿದುಕೊಂಡು ಆಸ್ತಿಕರಾಗಬೇಕು. ನಾಟಕದ ಜ್ಞಾನದಲ್ಲಿ ತಬ್ಬಿಬ್ಬಾಗಬಾರದು. ತಮ್ಮ ಬುದ್ಧಿಯನ್ನು ಸೀಮಿತತನದಿಂದ ಬೇಹದ್ದಿನಲ್ಲಿ ತೆಗೆದುಕೊಂಡು ಹೋಗಬೇಕು.

2. ಸೂಕ್ಷ್ಮ ವತನವಾಸಿ ಫರಿಶ್ತೆ ಆಗಲು ಸಂಪೂರ್ಣ ಪವಿತ್ರರಾಗಬೇಕು. ಆತ್ಮದಲ್ಲಿತುಂಬಿರುವ ಕೊಳಕನ್ನು ನೆನಪಿನ ಬಲದಿಂದ ಸ್ವಚ್ಛ ಮಾಡಬೇಕು.

ವರದಾನ:
ಈಶ್ವರೀಯ ರಸದ ಅನುಭವ ಮಾಡಿ ಏಕರಸ ಸ್ಥಿತಿಯಲ್ಲಿ ಸ್ಥಿತರಾಗಿರುವಂತಹ ಶ್ರೇಷ್ಠ ಆತ್ಮ ಭವ.

ಯಾವ ಮಕ್ಕಳು ಈಶ್ವರೀಯ ರಸದ ಅನುಭವ ಮಾಡುತ್ತಾರೆ ಅವರಿಗೆ ಪ್ರಪಂಚದ ಬೇರೆಲ್ಲಾ ರಸಗಳು ಸಪ್ಪೆ ಎನಿಸುತ್ತವೆ. ಎಲ್ಲಿ ಒಂದೇ ಒಂದು ರಸ ಮಧುರವಾಗಿರುತ್ತದೆ ಆಗ ಆ ಒಂದೇಕಡೆ ಎಲ್ಲರ ಗಮನ ಹರಿಯುತ್ತದೆಯಲ್ಲವೆ. ಸಹಜವಾಗಿ ಒಂದೇ ಕಡೆ ಮನಸ್ಸು ಹೋಗುತ್ತದೆ, ಪರಿಶ್ರಮವೆನ್ನಿಸುವುದಿಲ್ಲ. ತಂದೆಯ ಸ್ನೇಹ, ತಂದೆಯ ಸಹಾಯ, ತಂದೆಯ ಜೊತೆ ತಂದೆಯ ಮುಖಾಂತರ ಸರ್ವ ಪ್ರಾಪ್ತಿಗಳು ಸಹಜವಾಗಿ ಏಕರಸ ಸ್ಥಿತಿಯನ್ನಾಗಿ ಮಾಡುತ್ತದೆ. ಇಂತಹ ಏಕರಸ ಸ್ಥಿತಿಯಲ್ಲಿ ಸ್ಥಿತರಾಗಿರುವಂತಹ ಆತ್ಮರೇ ಶ್ರೇಷ್ಠರಾಗಿದ್ದಾರೆ.

ಸ್ಲೋಗನ್:
ಕೆಟ್ಟದನ್ನು ಒಳಗೆ ಅಡಗಿಸಿಕೊಂಡು ರತ್ನಗಳನ್ನು ಕೊಡುವುದೇ ಮಾಸ್ಟರ್ ಸಾಗರರಾಗುವುದು.