09.09.25         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ತಮ್ಮ ಮೇಲೆ ತಾವೇ ಕೃಪೆ ಮಾಡಿಕೊಳ್ಳಬೇಕಾಗಿದೆ, ವಿದ್ಯೆಯಲ್ಲಿ ಬಹಳ ಬೇಗ-ಬೇಗ ಮುಂದೆ ಹೋಗಿ, ಯಾವುದೇ ವಿಕರ್ಮ ಮಾಡಿ ತನ್ನ ರಿಜಿಸ್ಟರನ್ನು ಕೆಡಿಸಿಕೊಳ್ಳಬೇಡಿ".

ಪ್ರಶ್ನೆ:
ಈ ಶ್ರೇಷ್ಠ ವಿದ್ಯೆಯಲ್ಲಿ ಉತ್ತೀರ್ಣರಾಗಲು ಮುಖ್ಯವಾಗಿ ಯಾವ ಶಿಕ್ಷಣ ಸಿಗುತ್ತದೆ? ಅದಕ್ಕಾಗಿ ಯಾವ ಮಾತಿನ ಮೇಲೆ ವಿಶೇಷ ಗಮನವನ್ನಿಡಬೇಕು?

ಉತ್ತರ:
ಈ ವಿದ್ಯೆಯಲ್ಲಿ ೀರ್ಣರಾಗಬೇಕೆಂದರೆ ಕಣ್ಣುಗಳು ಬಹಳ-ಬಹಳ ಪವಿತ್ರವಾಗಬೇಕು ಏಕೆಂದರೆ ಈ ಕಣ್ಣುಗಳೇ ಮೋಸ ಮಾಡುತ್ತವೆ, ಇವೇ ವಿಕಾರಿಯಾಗುತ್ತವೆ, ಶರೀರವನ್ನು ನೋಡಿದೊಡನೆಯೇ ಕರ್ಮೇಂದ್ರಿಯಗಳಲ್ಲಿ ಚಂಚಲತೆ ಬರುತ್ತದೆ. ಆದ್ದರಿಂದ ಕಣ್ಣುಗಳೆಂದೂ ವಿಕಾರಿಯಾಗದಿರಲಿ. ಪವಿತ್ರರಾಗಲು ಸಹೋದರ-ಸಹೋದರಿಯರಾಗಿ ಇರಿ, ನೆನಪಿನ ಯಾತ್ರೆಯಲ್ಲಿ ಸಂಪೂರ್ಣ ಗಮನವಿಡಿ.

ಗೀತೆ:
ಧೈರ್ಯ ತಾಳು ಮಾನವನೇ ನಿನ್ನ ಸುಖದ ದಿನಗಳು ಬರುತ್ತಿವೆ..........

ಓಂ ಶಾಂತಿ.
ಇದನ್ನು ಯಾರು ಹೇಳಿದರು? ಬೇಹದ್ದಿನ ತಂದೆಯು ಬೇಹದ್ದಿನ ಮಕ್ಕಳಿಗೆ ಹೇಳಿದರು. ಹೇಗೆ ಯಾವ ಮನುಷ್ಯರಾದರೂ ಖಾಯಿಲೆಗೊಳಗಾದರೆ ಅವರಿಗೆ ಧೈರ್ಯದಿಂದಿರಿ, ನಿಮ್ಮ ಎಲ್ಲಾ ದುಃಖಗಳು ದೂರವಾಗಿ ಬಿಡುತ್ತವೆ ಎಂದು ಧೈರ್ಯವನ್ನು ಕೊಡುತ್ತಾರೆ. ಅವರನ್ನು ಖುಷಿಯಲ್ಲಿ ತರಲು ಧೈರ್ಯ ತರಿಸಬೇಕಾಗುತ್ತದೆ. ಈಗ ಅದಂತೂ ಹದ್ದಿನ ಮಾತುಗಳಾಗಿವೆ, ಇದು ಬೇಹದ್ದಿನ ಮಾತು. ಬೇಹದ್ದಿನ ತಂದೆಗೆ ಎಷ್ಟು ಮಂದಿ ಮಕ್ಕಳಿರಬೇಕು! ಎಲ್ಲರನ್ನೂ ದುಃಖದಿಂದ ಬಿಡಿಸಬೇಕಾಗಿದೆ. ಇದನ್ನೂ ಸಹ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಅಂದಮೇಲೆ ನೀವಿದನ್ನು ಮರೆಯಬಾರದು. ತಂದೆಯೇ ಸರ್ವರ ಸದ್ಗತಿ ಮಾಡಲು ಬಂದಿದ್ದಾರೆ. ಸರ್ವರ ಸದ್ಗತಿದಾತನಿದ್ದಾರೆ ಅಂದಮೇಲೆ ಇದರ ಅರ್ಥ ಎಲ್ಲರೂ ದುರ್ಗತಿಯಲ್ಲಿದ್ದಾರೆ. ಇಡೀ ಪ್ರಪಂಚದ ಮನುಷ್ಯ ಮಾತ್ರರೂ ಇಡೀ ಪ್ರಪಂಚ ಅದರಲ್ಲಿಯೂ ವಿಶೇಷವಾಗಿ ಭಾರತವು ದುರ್ಗತಿಯಲ್ಲಿದೆ ಎಂದು ಹೇಳಲಾಗುತ್ತದೆ. ನೀವು ಸುಖಧಾಮದಲ್ಲಿ ಹೋಗುತ್ತೀರಿ ಉಳಿದೆಲ್ಲರೂ ಶಾಂತಿಧಾಮಕ್ಕೆ ಹೋಗುವರು. ಬುದ್ಧಿಯಲ್ಲಿ ಬರುತ್ತದೆ - ಅವಶ್ಯವಾಗಿ ನಾವು ಸುಖಧಾಮದಲ್ಲಿದ್ದೆವು ಆಗ ಅನ್ಯ ಧರ್ಮದವರು ಶಾಂತಿಧಾಮದಲ್ಲಿದ್ದರು. ತಂದೆಯು ಬಂದು ಭಾರತವನ್ನು ಸುಖಧಾಮವನ್ನಾಗಿ ಮಾಡಿದ್ದರು ಅಂದಾಗ ಈ ರೀತಿ ಜಾಹೀರಾತನ್ನು ಮಾಡಿಸಬೇಕು - ತಿಳಿಸಿ, ಪ್ರತೀ 5000 ವರ್ಷಗಳ ನಂತರ ನಿರಾಕಾರ ಶಿವ ತಂದೆಯು ಬರುತ್ತಾರೆ. ಅವರು ಎಲ್ಲರ ತಂದೆಯಾಗಿದ್ದಾರೆ. ಉಳಿದೆಲ್ಲರೂ ಸಹೋದರ-ಸಹೋದರರಾಗಿದ್ದೀರಿ. ಸಹೋದರರೇ ತಂದೆಯಿಂದ ಆಸ್ತಿಯನ್ನು ಪಡೆಯಲು ಪುರುಷಾರ್ಥ ಮಾಡುತ್ತಾರೆ. ತಂದೆಯು ಪುರುಷಾರ್ಥ ಮಾಡುತ್ತಾರೆಂದಲ್ಲ. ಎಲ್ಲರೂ ತಂದೆಯರಾದರೆ ಮತ್ತೆ ಆಸ್ತಿಯನ್ನು ಯಾರಿಂದ ತೆಗೆದುಕೊಳ್ಳುವರು? ಸಹೋದರರಿಂದಲೇ? ಇದಂತೂ ಸಾಧ್ಯವಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ಇದು ಬಹಳ ಸಹಜವಾದ ಮಾತಾಗಿದೆ. ಸತ್ಯಯುಗದಲ್ಲಿ ಒಂದೇ ದೇವಿ-ದೇವತಾ ಧರ್ಮವಿರುತ್ತದೆ ಉಳಿದೆಲ್ಲಾ ಆತ್ಮಗಳು ಮುಕ್ತಿಧಾಮಕ್ಕೆ ಹೊರಟು ಹೋಗುತ್ತಾರೆ. ವಿಶ್ವದ ಚರಿತ್ರೆ-ಭೂಗೋಳದ ಪುನರಾವರ್ತನೆಯೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಒಂದೇ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುತ್ತದೆ. ಕಲಿಯುಗದ ನಂತರ ಮತ್ತೆ ಸತ್ಯಯುಗವಾಗುವುದು, ಎರಡರ ಮಧ್ಯದಲ್ಲಿ ಅವಶ್ಯವಾಗಿ ಸಂಗಮವಿರುವುದು. ಇದಕ್ಕೆ ಪುರುಷೋತ್ತಮ ಕಲ್ಯಾಣಕಾರಿ ಯುಗವೆಂದು ಹೇಳಲಾಗುತ್ತದೆ. ಈಗ ನಿಮ್ಮ ಬುದ್ಧಿಯ ಬೀಗ ತೆರೆದಿದೆ ಆದ್ದರಿಂದ ತಿಳಿದುಕೊಳ್ಳುತ್ತೀರಿ, ಇದು ಬಹಳ ಸಹಜ ಮಾತಾಗಿದೆ. ಹೊಸ ಪ್ರಪಂಚ ಮತ್ತು ಹಳೆಯ ಪ್ರಪಂಚ. ಹಳೆಯ ವೃಕ್ಷದಲ್ಲಿ ಅವಶ್ಯವಾಗಿ ಲೆಕ್ಕವಿಲ್ಲದಷ್ಟು ಎಲೆಗಳಿರುತ್ತವೆ, ಹೊಸ ವೃಕ್ಷದಲ್ಲಿ ಕೆಲವೇ ಎಲೆಗಳಿರುತ್ತವೆ. ಇದಕ್ಕೆ ತಮೋಪ್ರಧಾನವೆಂದು ಹೇಳುತ್ತಾರೆ. ನಿಮಗೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ಬುದ್ಧಿಯ ಬೀಗವು ತೆರೆದಿದೆ ಏಕೆಂದರೆ ಎಲ್ಲರೂ ಯಥಾರ್ಥ ರೀತಿಯಿಂದ ತಂದೆಯನ್ನು ನೆನಪು ಮಾಡುವುದಿಲ್ಲ ಅಂದಮೇಲೆ ಧಾರಣೆಯೂ ಆಗುವುದಿಲ್ಲ. ತಂದೆಯಂತು ಪುರುಷಾರ್ಥ ಮಾಡಿಸುತ್ತಾರೆ ಆದರೆ ಅದೃಷ್ಟದಲ್ಲಿಲ್ಲ. ಡ್ರಾಮಾದನುಸಾರ ಯಾರು ಚೆನ್ನಾಗಿ ಓದುತ್ತಾರೆ ಮತ್ತು ಓದಿಸುತ್ತಾರೆ ಹಾಗೂ ತಂದೆಯ ಸಹಯೋಗಿಗಳಾಗುತ್ತಾರೆಯೋ ಅವರೇ ಪ್ರತಿಯೊಂದು ಸನ್ನಿವೇಶದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳೂ ಸಹ ನಾವು ಎಷ್ಟು ಅಂಕಗಳಿಂದ ಉತ್ತೀರ್ಣರಾಗುತ್ತೇವೆ ಎಂದು ತಿಳಿದುಕೊಳ್ಳುತ್ತಾರೆ. ತೀವ್ರ ವೇಗಿಯಾಗಿ ಪುರುಷಾರ್ಥ ಮಾಡುತ್ತಾರೆ. ಹೇಗಾದರೂ ಮಾಡಿ ತೇರ್ಗಡೆಯಾಗಬೇಕೆಂದು ವಿಶೇಷ ತರಗತಿಗಾಗಿ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಾರೆ. ಇಲ್ಲಿಯೂ ಸಹ ಬಹಳಷ್ಟು ತೀವ್ರವಾಗಿ ಮುಂದೆ ಹೋಗಬೇಕಾಗಿದೆ. ತಮ್ಮ ಮೇಲೆ ತಾವೇ ಕೃಪೆ ಮಾಡಿಕೊಳ್ಳಬೇಕಾಗಿದೆ. ನಾವು ಈ ಸಮಯದಲ್ಲಿ ಶರೀರ ಬಿಟ್ಟರೆ ಯಾವ ಪದವಿಯನ್ನು ಪಡೆಯುತ್ತೇವೆಂದು ತಂದೆಯೊಂದಿಗೆ ಯಾರಾದರೂ ಕೇಳಿದರೆ ತಂದೆಯು ಕೂಡಲೇ ತಿಳಿಸಬಲ್ಲರು. ಇದಂತೂ ಬಹಳ ಸಹಜವಾಗಿ ತಿಳಿದುಕೊಳ್ಳುವ ಮಾತಾಗಿದೆ. ಹೇಗೆ ಲೌಕಿಕ ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆಯೋ ಹಾಗೆಯೇ ನೀವು ಬೇಹದ್ದಿನ ವಿದ್ಯಾರ್ಥಿಗಳೂ ಸಹ ತಿಳಿದುಕೊಳ್ಳಬಹುದಾಗಿದೆ. ಬುದ್ಧಿಯಿಂದ ತಿಳಿದುಕೊಳ್ಳಬಹುದು - ನನ್ನಿಂದ ಮತ್ತೆ-ಮತ್ತೆ ಈ ತಪ್ಪುಗಳಾಗುತ್ತವೆ, ವಿಕರ್ಮಗಳಾಗುತ್ತದೆ. ರಿಜಿಸ್ಟರ್ ಹಾಳಾದರೆ ಫಲಿತಾಂಶವು ಅದೇ ರೀತಿಯಿರುತ್ತದೆಯಲ್ಲವೆ. ಪ್ರತಿಯೊಬ್ಬರೂ ತಮ್ಮ ರಿಜಿಸ್ಟರನ್ನು ಇಟ್ಟುಕೊಳ್ಳಿ. ಹಾಗೆ ನೋಡಿದರೆ ಡ್ರಾಮದನುಸಾರ ಎಲ್ಲವೂ ನಿಗಧಿಯಾಗಿ ಬಿಡುತ್ತದೆ. ತಮ್ಮ ರಿಜಿಸ್ಟರ್ ಬಹಳ ಹಾಳಾಗಿದೆ ಎಂಬುದನ್ನು ತಾವೇ ತಿಳಿದುಕೊಳ್ಳಬಹುದು. ಒಂದುವೇಳೆ ತಿಳಿದುಕೊಳ್ಳಲು ಆಗದಿದ್ದರೆ ತಂದೆಯು ತಿಳಿಸಬಲ್ಲರು. ಶಾಲೆಯಲ್ಲಿ ರಿಜಿಸ್ಟರ್ ಇಡಲಾಗುತ್ತದೆ. ಇದರ ಬಗ್ಗೆ ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಗೀತಾ ಪಾಠಶಾಲೆಯೆಂದು ಹೆಸರಿದೆ, ವೇದಗಳ ಪಾಠಶಾಲೆಯೆಂದು ಹೇಳುವುದಿಲ್ಲ. ವೇದ-ಉಪನಿಷತ್ತು, ಗ್ರಂಥ ಇತ್ಯಾದಿ., ಯಾವುದಕ್ಕೂ ಪಾಠಶಾಲೆಯೆಂದು ಹೇಳುವುದಿಲ್ಲ. ನಾವು ಭವಿಷ್ಯದಲ್ಲಿ ಈ ರೀತಿ ಆಗುತ್ತೇವೆಂದು ಪಾಠಶಾಲೆಯಲ್ಲಿ ಗುರಿ-ಧ್ಯೇಯವಿರುತ್ತದೆ. ಯಾರಾದರೂ ಬಹಳ ವೇದಶಾಸ್ತ್ರಗಳನ್ನು ಓದುತ್ತಾರೆಂದರೆ ಅವರಿಗೂ ಬಿರುದು ಸಿಗುತ್ತದೆ. ಕೆಲವರಂತೂ ಬಹಳಷ್ಟು ಸಂಪಾದಿಸುತ್ತಾರೆ ಆದರೆ ಅದು ಅವಿನಾಶಿ ಸಂಪಾದನೆಯಲ್ಲ, ಜೊತೆ ಬರುವಂತದ್ದಾಗಿದೆ. ಇಲ್ಲಿನ ಸತ್ಯ ಸಂಪಾದನೆಯು ಜೊತೆ ಬರುತ್ತದೆ. ಉಳಿದೆಲ್ಲಾ ಸಮಾಪ್ತಿಯಾಗಿ ಬಿಡುತ್ತದೆ. ಮಕ್ಕಳಿಗೆ ತಿಳಿದಿದೆ - ನಾವು ಬಹಳ-ಬಹಳ ಸಂಪಾದನೆ ಮಾಡಿಕೊಳ್ಳುತ್ತಿದ್ದೇವೆ, ನಾವು ವಿಶ್ವದ ಮಾಲೀಕರಾಗುತ್ತೇವೆ. ಸೂರ್ಯವಂಶಿ ರಾಜಧಾನಿಯಿದೆ ಅಂದಮೇಲೆ ಅವಶ್ಯವಾಗಿ ಮಕ್ಕಳು ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾರೆ. ಬಹಳ ಶ್ರೇಷ್ಠ ಪದವಿಯಿದೆ. ನಾವು ಪುರುಷಾರ್ಥ ಮಾಡಿ ರಾಜ್ಯ ಪದವಿಯನ್ನು ಪಡೆಯುತ್ತೇವೆಂದು ನಿಮಗೆ ಸ್ವಪ್ನದಲ್ಲಿಯೂ ಇರಲಿಲ್ಲ. ಇದಕ್ಕೆ ರಾಜಯೋಗವೆಂದು ಹೇಳಲಾಗುತ್ತದೆ. ಅಲ್ಲಿ ಬ್ಯಾರಿಸ್ಟರಿ ಯೋಗ, ಡಾಕ್ಟರಿ ಯೋಗವಿರುತ್ತದೆ, ವಿದ್ಯೆ ಮತ್ತು ಓದಿಸುವವರ ಜೊತೆ ಬುದ್ಧಿಯೋಗವಿರುತ್ತದೆ. ಇಲ್ಲಿಯೂ ಸಹ ಇದು ಸಹಜ ನೆನಪಾಗಿದೆ. ನೆನಪಿನಲ್ಲಿ ಪರಿಶ್ರಮವಿದೆ. ತಮ್ಮನ್ನು ದೇಹೀ-ಅಭಿಮಾನಿಯೆಂದು ತಿಳಿದುಕೊಳ್ಳಬೇಕಾಗಿದೆ. ಆತ್ಮದಲ್ಲಿಯೇ ಸಂಸ್ಕಾರವು ತುಂಬಲ್ಪಟ್ಟಿದೆ. ಅನೇಕರು ಬರುತ್ತಾರೆ, ನಾವು ಶಿವ ತಂದೆಯ ಪೂಜೆ ಮಾಡುತ್ತಿದ್ದೆವು ಎಂದು ಹೇಳುತ್ತಾರೆ ಆದರೆ ಏಕೆ ಪೂಜೆ ಮಾಡುತ್ತೇವೆಂದು ತಿಳಿದುಕೊಳ್ಳುವುದಿಲ್ಲ. ಶಿವನಿಗೆ ತಂದೆಯೆಂದು ಹೇಳುತ್ತಾರೆ, ಮತ್ತ್ಯಾರಿಗೂ ತಂದೆಯೆಂದು ಹೇಳುವುದಿಲ್ಲ. ಹನುಮಂತ, ಗಣೇಶ ಮೊದಲಾದವರ ಪೂಜೆ ಮಾಡುತ್ತಾರೆ, ಬ್ರಹ್ಮಾನಿಗೆ ಪೂಜೆಯಾಗುವುದಿಲ್ಲ. ಅಜ್ಮೀರ್ನಲ್ಲಿ ಭಲೆ ಮಂದಿರವಿದೆ, ಅಲ್ಲಿನ ಕೆಲವರು ಬ್ರಾಹ್ಮಣರು ಮಾತ್ರವೇ ಪೂಜೆ ಮಾಡುತ್ತಿರಬಹುದು. ಉಳಿದಂತೆ ಗಾಯನವೇನೂ ಇಲ್ಲ. ಶ್ರೀಕೃಷ್ಣ, ಲಕ್ಷೀ-ನಾರಾಯಣರಿಗೆ ಎಷ್ಟೊಂದು ಗಾಯನವಿದೆ! ಬ್ರಹ್ಮಾನ ಹೆಸರೇ ಇಲ್ಲ ಏಕೆಂದರೆ ಬ್ರಹ್ಮಾನು ಈ ಸಮಯದಲ್ಲಿ ಶ್ಯಾಮನಾಗಿದ್ದಾರೆ. ಮತ್ತೆ ತಂದೆಯು ಬಂದು ಇವರನ್ನು ದತ್ತು ಮಾಡಿಕೊಳ್ಳುತ್ತಾರೆ. ಇದೂ ಸಹ ಬಹಳ ಸಹಜವಾಗಿದೆ ಆದ್ದರಿಂದ ತಂದೆಯು ಮಕ್ಕಳಿಗೆ ಭಿನ್ನ-ಭಿನ್ನ ಪ್ರಕಾರದಿಂದ ತಿಳಿಸುತ್ತಾರೆ. ಬುದ್ಧಿಯಲ್ಲಿರಲಿ, ನಮಗೆ ಶಿವ ತಂದೆಯು ತಿಳಿಸುತ್ತಿದ್ದಾರೆ. ಅವರು ತಂದೆ, ಶಿಕ್ಷಕ, ಗುರುವೂ ಆಗಿದ್ದಾರೆ. ಶಿವ ತಂದೆ, ಜ್ಞಾನ ಸಾಗರನೇ ನಮಗೆ ಓದಿಸುತ್ತಾರೆ. ನೀವು ಮಕ್ಕಳು ತ್ರಿಕಾಲದರ್ಶಿಗಳಾಗಿದ್ದೀರಿ, ನಿಮಗೆ ಜ್ಞಾನದ ಮೂರನೆಯ ನೇತ್ರವು ಸಿಗುತ್ತದೆ. ಇದನ್ನೂ ತಿಳಿದುಕೊಂಡಿದ್ದೀರಿ - ಆತ್ಮವು ಅವಿನಾಶಿಯಾಗಿದೆ, ಆತ್ಮಗಳ ತಂದೆಯು ಅವಿನಾಶಿಯಾಗಿದ್ದಾರೆ. ಇದನ್ನು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಬಾಬಾ ನಮ್ಮನ್ನು ಪತಿತರನ್ನು ಪಾವನರನ್ನಾಗಿ ಮಾಡಿ ಎಂದು ಅವರು ಕರೆಯುತ್ತಾರೆಯೇ ಹೊರತು ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿಸಿ ಎಂದು ಹೇಳುವುದಿಲ್ಲ. ಇದನ್ನು ಸ್ವಯಂ ತಂದೆಯೇ ನಮಗೆ ತಿಳಿಸುತ್ತಾರೆ. ಪತಿತರಿಂದ ಪಾವನರು ಮತ್ತು ಪಾವನರಿಂದ ಪತಿತರು ಹೇಗಾಗುತ್ತೀರಿ? ಚರಿತ್ರೆಯು ಹೇಗೆ ಪುನರಾವರ್ತನೆಯಾಗುತ್ತದೆ ಎಂಬುದನ್ನೂ ಸಹ ತಿಳಿಸುತ್ತಾರೆ. 84 ಜನ್ಮಗಳ ಚಕ್ರವಾಗಿದೆ, ನಾವು ಏಕೆ ಪತಿತರಾಗಿದ್ದೇವೆ, ಮತ್ತೆ ಪಾವನರಾಗಿ ಎಲ್ಲಿ ಹೋಗಲು ಬಯಸುತ್ತೇವೆ. ಮನುಷ್ಯರಂತೂ ಸನ್ಯಾಸಿ ಮೊದಲಾದವರ ಬಳಿ ಹೋಗಿ ಮನಃಶ್ಯಾಂತಿ ಹೇಗೆ ಸಿಗುತ್ತದೆ? ಎಂದು ಕೇಳುತ್ತಾರೆ. ನಾವು ಸಂಪೂರ್ಣ ನಿರ್ವಿಕಾರಿಗಳು ಹೇಗಾಗುವುದು ಎಂದು ಕೇಳುವುದಿಲ್ಲ. ಹೀಗೆ ಕೇಳುವುದಕ್ಕೆ ನಾಚಿಕೆಯಾಗುತ್ತದೆ. ತಂದೆಯೂ ತಿಳಿಸಿದ್ದಾರೆ - ನೀವೆಲ್ಲರೂ ಭಕ್ತಿನಿಯರಾಗಿದ್ದೀರಿ, ನಾನು ಭಗವಂತ ವರನಾಗಿದ್ದೇನೆ. ನೀವು ವಧುಗಳಾಗಿದ್ದೀರಿ. ನೀವೆಲ್ಲರೂ ನನ್ನನ್ನು ನೆನಪು ಮಾಡುತ್ತೀರಿ. ನಾನು ಯಾತ್ರಿಕನು ಅತಿ ಸುಂದರನಾಗಿದ್ದೇನೆ. ಇಡೀ ಪ್ರಪಂಚದ ಮನುಷ್ಯ ಮಾತ್ರರೆಲ್ಲರನ್ನೂ ಬಹಳ ಸುಂದರರನ್ನಾಗಿ ಮಾಡುತ್ತೇನೆ. ಸ್ವರ್ಗವೇ ಇಡೀ ಪ್ರಪಂಚದ ಅತಿದೊಡ್ಡ ಅದ್ಭುತವಾಗಿದೆ. ಇಲ್ಲಿ 7 ಅದ್ಭುತಗಳೆಂದು ಹೇಳುತ್ತಾರೆ. ಸತ್ಯಯುಗದಲ್ಲಿ ಪ್ರಪಂಚದ ಅದ್ಭುತವು ಸ್ವರ್ಗ ಒಂದೇ ಆಗಿದೆ. ತಂದೆಯೂ ಒಬ್ಬರೇ, ಸ್ವರ್ಗವೂ ಒಂದೇ, ಯಾವುದನ್ನು ಎಲ್ಲಾ ಮನುಷ್ಯ ಮಾತ್ರರೆಲ್ಲರೂ ನೆನಪು ಮಾಡುತ್ತಾರೆ. ಇಲ್ಲಂತೂ ಕೇವಲ ಹೇಳುತ್ತಾರೆ ಆದರೆ ಅದ್ಭುತವೇನೂ ಇಲ್ಲ. ನೀವು ಮಕ್ಕಳಲ್ಲಿ ಧೈರ್ಯವಿದೆ - ಈಗ ಸುಖದ ದಿನಗಳು ಬರುತ್ತಿವೆ.

ನೀವು ತಿಳಿದುಕೊಳ್ಳುತ್ತೀರಿ - ಈ ಹಳೆಯ ಪ್ರಪಂಚದ ವಿನಾಶವಾಗಬೇಕು ಆಗಲೇ ಸ್ವರ್ಗದ ರಾಜ್ಯಭಾಗ್ಯವು ಸಿಗುವುದು. ಇನ್ನೂ ಬಹುಶಃ ರಾಜಧಾನಿಯು ಸ್ಥಾಪನೆಯಾಗಿಲ್ಲ, ಹಾ! ಪ್ರಜೆಗಳೂ ತಯಾರಾಗುತ್ತಾ ಹೋಗುತ್ತಾರೆ. ಮಕ್ಕಳು ಪರಸ್ಪರ ಸಲಹೆಯನ್ನು ತೆಗೆದುಕೊಳ್ಳುತ್ತೀರಿ, ಸರ್ವೀಸಿನ ವೃದ್ಧಿ ಹೇಗಾಗುವುದು? ಎಲ್ಲರಿಗೆ ಹೇಗೆ ಸಂದೇಶವನ್ನು ಕೊಡುವುದು. ತಂದೆಯು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ. ಉಳಿದೆಲ್ಲವನ್ನೂ ವಿನಾಶ ಮಾಡಿಸುತ್ತಾರೆ. ಇಂತಹ ತಂದೆಯನ್ನು ನೆನಪು ಮಾಡಬೇಕಲ್ಲವೆ! ಯಾವ ತಂದೆಯು ನಮ್ಮನ್ನು ರಾಜ ತಿಲಕಕ್ಕೆ ಹಕ್ಕುದಾರರನ್ನಾಗಿ ಮಾಡಿ ಉಳಿದೆಲ್ಲರ ವಿನಾಶ ಮಾಡಿಸುತ್ತಾರೆ. ಡ್ರಾಮಾದಲ್ಲಿ ಪಾಕೃತಿಕ ವಿಕೋಪಗಳೂ ನಿಶ್ಚಿತವಾಗಿವೆ. ಇವು ಇಲ್ಲದೆ ಪ್ರಪಂಚದ ವಿನಾಶವಾಗಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ಈಗ ನಿಮ್ಮ ಪರೀಕ್ಷೆಯು ಬಹಳ ಸನ್ಮುಖವಿದೆ. ಮೃತ್ಯುಲೋಕದಿಂದ ಅಮರಲೋಕಕ್ಕೆ ವರ್ಗಾಯಿತರಾಗಬೇಕಾಗಿದೆ. ಎಷ್ಟು ಚೆನ್ನಾಗಿ ಓದುತ್ತೀರೊ, ಓದಿಸುತ್ತೀರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ ಏಕೆಂದರೆ ತಮ್ಮ ಪ್ರಜೆಗಳನ್ನೂ ತಯಾರು ಮಾಡಿಕೊಳ್ಳುತ್ತಾರೆ. ಪುರುಷಾರ್ಥ ಮಾಡಿ ಎಲ್ಲರ ಕಲ್ಯಾಣ ಮಾಡಬೇಕು. ದಾನವು ಮನೆಯಿಂದಲೇ ಆರಂಭವಾಗುತ್ತದೆ, ಇದು ನಿಯಮವಿದೆ. ಮೊದಲು ಮಿತ್ರ ಸಂಬಂಧಿ ಮೊದಲಾದವರು ಬರುತ್ತಾರೆ ನಂತರ ಸಾರ್ವಜನಿಕರು ಬರುತ್ತಾರೆ. ಆದಿಯಲ್ಲಿಯೂ ಇದೇ ರೀತಿ ಆಯಿತಲ್ಲವೆ. ನಿಧಾನ-ನಿಧಾನವಾಗಿ ವೃದ್ಧಿಯಾಯಿತು, ಮತ್ತೆ ಮಕ್ಕಳು ಇರುವುದಕ್ಕಾಗಿ ದೊಡ್ಡ ಮನೆಯನ್ನೂ ಮಾಡಲಾಯಿತು. ಅದಕ್ಕೆ ಓಂ ನಿವಾಸ ಎಂದು ಹೇಳುತ್ತಿದ್ದರು. ಅಲ್ಲಿ ಮಕ್ಕಳು ಹೋಗಿ ಓದತೊಡಗಿದರು. ಇದೆಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆ, ಇದು ಪುನಃ ಪುನರಾವರ್ತನೆಯಾಗುವುದು. ಇದನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಈ ವಿದ್ಯೆಯು ಎಷ್ಟು ಶ್ರೇಷ್ಠವಾಗಿದೆ! ನೆನಪಿನ ಯಾತ್ರೆಯೇ ಮುಖ್ಯವಾಗಿದೆ. ಮುಖ್ಯವಾಗಿ ಕಣ್ಣುಗಳು ಬಹಳ ಮೋಸ ಮಾಡುತ್ತವೆ. ಕಣ್ಣುಗಳು ವಿಕಾರಿಯಾಗುವುದರಿಂದ ಶರೀರದ ಕರ್ಮೇಂದ್ರಿಯಗಳು ಚಂಚಲವಾಗುತ್ತವೆ. ಯಾರಾದರೂ ಸುಂದರವಾದ ಕನ್ಯೆಯನ್ನು ನೋಡಿದರೆ ಸಾಕು, ಅವರಿಗೆ ಮೋಹಿತರಾಗುತ್ತಾರೆ. ಪ್ರಪಂಚದಲ್ಲಿ ಹೀಗೆ ಬಹಳಷ್ಟು ಪ್ರಕರಣಗಳಿವೆ. ಗುರುವಿಗೂ ಸಹ ವಿಕಾರಿ ದೃಷ್ಟಿಯಾಗಿ ಬಿಡುತ್ತದೆ. ಇಲ್ಲಿ ತಂದೆಯು ತಿಳಿಸುತ್ತಾರೆ - ಮಕ್ಕಳೇ, ವಿಕಾರಿ ದೃಷ್ಟಿಯಿರಲೇಬಾರದು. ಸಹೋದರ-ಸಹೋದರಿಯರಾಗಿ ಇರಿ ಆಗ ಪವಿತ್ರರಾಗಲು ಸಾಧ್ಯ. ಮನುಷ್ಯರಿಗೇನು ಗೊತ್ತು? ಅವರಂತೂ ತಮಾಷೆ ಮಾಡುತ್ತಾರೆ. ಶಾಸ್ತ್ರಗಳಲ್ಲಿ ಈ ಮಾತುಗಳಿಲ್ಲ. ತಂದೆಯು ತಿಳಿಸುತ್ತಾರೆ - ಈ ಜ್ಞಾನವು ಪ್ರಾಯಲೋಪವಾಗಿ ಬಿಡುತ್ತದೆ. ನಂತರ ದ್ವಾಪರದಿಂದ ಈ ಶಾಸ್ತ್ರಗಳಾಗಿವೆ. ಈಗ ತಂದೆಯು ಮುಖ್ಯ ಮಾತನ್ನು ತಿಳಿಸುತ್ತಾರೆ. ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುವುದು. ತನ್ನನ್ನು ಆತ್ಮನೆಂದು ತಿಳಿಯಿರಿ, ನೀವು 84 ಜನ್ಮಗಳ ಚಕ್ರವನ್ನು ಸುತ್ತಿ ಬಂದಿದ್ದೀರಿ. ಈಗ ಪುನಃ ನೀವಾತ್ಮಗಳು ದೇವತೆಯಾಗುತ್ತೀರಿ. ಅತಿ ಚಿಕ್ಕ ಆತ್ಮನಲ್ಲಿ 84 ಜನ್ಮಗಳ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ. ಅದ್ಭುತವಲ್ಲವೆ. ಇಂತಹ ಪ್ರಪಂಚದ ಅದ್ಭುತದ ಮಾತುಗಳನ್ನು ತಂದೆಯೇ ಬಂದು ತಿಳಿಸುತ್ತಾರೆ. ಕೆಲವರದು 84 ಜನ್ಮ, ಇನ್ನೂ ಕೆಲವರದು 50-60 ಜನ್ಮಗಳ ಪಾತ್ರವಿರುತ್ತದೆ. ಪರಮಪಿತ ಪರಮಾತ್ಮನಿಗೂ ಸಹ ಪಾತ್ರವು ಸಿಕ್ಕಿದೆ, ಡ್ರಾಮಾನುಸಾರ ಇದು ಅನಾದಿ-ಅವಿನಾಶಿ ನಾಟಕವಾಗಿದೆ. ಯಾವಾಗ ಆರಂಭವಾಯಿತು, ಯಾವಾಗ ನಿಂತು ಹೋಗುವುದು ಎಂದು ಹೇಳುವಂತಿಲ್ಲ ಏಕೆಂದರೆ ಇದು ಅನಾದಿ-ಅವಿನಾಶಿ ನಾಟಕವಾಗಿದೆ. ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈಗ ಪರೀಕ್ಷೆಯ ಸಮಯವು ಬಹಳ ಸಮೀಪವಿದೆ ಆದ್ದರಿಂದ ಪುರುಷಾರ್ಥ ಮಾಡಿ ತನ್ನ ಮತ್ತು ಸರ್ವರ ಕಲ್ಯಾಣ ಮಾಡಬೇಕಾಗಿದೆ. ಓದಬೇಕು ಮತ್ತು ಓದಿಸಬೇಕಾಗಿದೆ, ಮನೆಯೇ ಮೊದಲ ಪಾಠಶಾಲೆಯಾಗಿದೆ.

2. ಆತ್ಮಾಭಿಮಾನಿಯಾಗಿ ಅವಿನಾಶಿ ಸತ್ಯ ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ. ತಮ್ಮ ರಿಜಿಸ್ಟರನ್ನು ಇಡಬೇಕಾಗಿದೆ. ರಿಜಿಸ್ಟರ್ ಹಾಳಾಗುವಂತಹ ಯಾವುದೇ ವಿಕರ್ಮವಾಗದಿರಲಿ.

ವರದಾನ:
ಸರ್ವರಿಗೂ ಉಲ್ಲಾಸ-ಉತ್ಸಾಹದ ಸಹಯೋಗವನ್ನು ನೀಡಿ ಶಕ್ತಿಶಾಲಿಗಳನ್ನಾಗಿ ಮಾಡುವಂತಹ ಸತ್ಯ ಸೇವಾಧಾರಿ ಭವ.

ಸೇವಾಧಾರಿ ಅರ್ಥಾತ್ ಸರ್ವರನ್ನು ಉಲ್ಲಾಸ-ಉತ್ಸಾಹದ ಸಹಯೋಗ ಕೊಟ್ಟು ಶಕ್ತಿಶಾಲಿಗಳನ್ನಾಗಿ ಮಾಡುವಂತಹವರು. ಈಗ ಸಮಯ ಕಡಿಮೆ ಇದೆ ಮತ್ತು ರಚನೆ ಹೆಚ್ಚೆಚ್ಚು ಬರುವವರಿದ್ದಾರೆ. ಕೇವಲ ಇಷ್ಟೇ ಸಂಖ್ಯೆಯಲ್ಲಿ ಬಹಳಷ್ಟ ಜನ ಬಂದರು ಎಂದು ಖುಶಿಯಾಗಬೇಡಿ. ಈಗ ಇನ್ನೂ ಬಹಳಷ್ಟು ಸಂಖ್ಯೆ ಹೆಚ್ಚಾಗಲಿದೆ, ಆದ್ದರಿಂದ ಇಲ್ಲಿಯವರೆಗೆ ಏನೆಲ್ಲಾ ಪಾಲನೆಯನ್ನು ಪಡೆದಿರುವಿರಿ ಅದನ್ನು ಹಿಂದಿರುಗಿಸಿಕೊಡಿ. ಬರುವಂತಹ ನಿರ್ಬಲ ಅತ್ಮಗಳಿಗೆ ಸಹಯೋಗಿಗಳಾಗಿ ಅವರನ್ನು ಸಮರ್ಥ, ಅಚಲ ಅಡೋಲರನ್ನಾಗಿ ಮಾಡಿ ಆಗ ಹೇಳಲಾಗುವುದು ಸತ್ಯ ಸೇವಾಧಾರಿ.

ಸ್ಲೋಗನ್:
ಆತ್ಮವನ್ನು ಯಾವಾಗ, ಎಲ್ಲಿ ಮತ್ತು ಹೇಗೆ ಇಚ್ಛಿಸುವಿರೋ ಹಾಗೆ ಸ್ಥಿತ ಮಾಡಿ - ಇದೇ ಆತ್ಮೀಯ ಡ್ರಿಲ್ ಆಗಿದೆ.

ಅವ್ಯಕ್ತ ಸೂಚನೆ:- ಈಗ ಲಗನ್ನಿನ (ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೊಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.

ಶಕ್ತಿಶಾಲಿ ಮನಸ್ಸಿನ ಲಕ್ಷಣವಾಗಿದೆ - ಸೆಕೆಂಡಿನಲ್ಲಿ ಎಲ್ಲಿ ಬೇಕೋ ಅಲ್ಲಿ ತಲುಪಬೇಕು. ಮನಸ್ಸಿಗೆ ಯಾವಾಗ ಹಾರಲು ಬಂದು ಬಿಟ್ಟಿತು, ಅಭ್ಯಾಸವಾಯಿತೆಂದರೆ ಸೆಕೆಂಡಿನಲ್ಲಿ ಎಲ್ಲಿ ಬೇಕೋ ಅಲ್ಲಿಗೆ ತಲುಪಬಹುದು. ಈಗೀಗ ಸಾಕಾರ ವತನದಲ್ಲಿ, ಈಗೀಗ ಪರಮಧಾಮದಲ್ಲಿ, ಸೆಕೆಂಡಿನ ತೀವ್ರತೆಯಿದೆ – ಈಗ ಇದರ ಅಭ್ಯಾಸವನ್ನು ಹೆಚ್ಚಿಸಿಕೊಳ್ಳಿರಿ.