09.10.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ನೀವೀಗ
ಮುಳ್ಳುಗಳಿಂದ ಹೂಗಳಾಗುತ್ತಿದ್ದೀರಿ, ನೀವು ಯಾವಾಗಲೂ ಎಲ್ಲರಿಗೂ ಸುಖವನ್ನು ಕೊಡಬೇಕಾಗಿದೆ, ನೀವು
ಯಾರಿಗೂ ದುಃಖ ಕೊಡಲು ಸಾಧ್ಯವಿಲ್ಲ"
ಪ್ರಶ್ನೆ:
ಒಳ್ಳೆಯ
ಫಸ್ಟ್ಕ್ಲಾಸ್ ಪುರುಷಾರ್ಥಿ ಮಕ್ಕಳು ಯಾವ ಮಾತನ್ನು ತೆರೆದ ಹೃದಯದಿಂದ ಹೇಳುತ್ತಾರೆ?
ಉತ್ತರ:
ಬಾಬಾ, ನಾವಂತೂ
ಪಾಸ್-ವಿತ್-ಆನರ್ ಆಗಿ ತೋರಿಸುತ್ತೇವೆ, ತಾವು ನಿಶ್ಚಿಂತವಾಗಿರಿ ಎಂದು ಹೇಳುತ್ತಾರೆ. ಅವರ
ರಿಜಿಸ್ಟರ್ ಚೆನ್ನಾಗಿರುತ್ತದೆ. ಇನ್ನೂ ಪುರುಷಾರ್ಥಿಗಳಾಗಿದ್ದೇವೆ ಎಂಬ ಮಾತು ಅವರ ಬಾಯಿಂದ ಎಂದೂ
ಬರುವುದಿಲ್ಲ. ಪುರುಷಾರ್ಥ ಮಾಡಿ ಇಂತಹ ಮಹಾವೀರರಾಗಬೇಕು, ಮಾಯೆಯು ಸ್ವಲ್ಪವೂ ಅಲುಗಾಡಿಸಲು
ಸಾಧ್ಯವಾಗಬಾರದು.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಆತ್ಮಿಕ ತಂದೆಯ ಮೂಲಕ ಓದುತ್ತಿದ್ದೀರಿ. ತಮ್ಮನ್ನು ಆತ್ಮನೆಂದು
ತಿಳಿಯಬೇಕು, ನಿರಾಕಾರ ತಂದೆಯ ಮಕ್ಕಳು ನಾವು ನಿರಾಕಾರಿ ಆತ್ಮಗಳು ಓದುತ್ತಿದ್ದೇವೆ. ಪ್ರಪಂಚದಲ್ಲಿ
ಸಾಕಾರಿ ಶಿಕ್ಷಕರೇ ಓದಿಸುತ್ತಾರೆ ಆದರೆ ಇಲ್ಲಿ ನಿರಾಕಾರ ತಂದೆ ನಿರಾಕಾರ ಶಿಕ್ಷಕನಾಗಿದ್ದಾರೆ,
ಬಾಕಿ ಇವರಿಗೆ (ಬ್ರಹ್ಮಾ) ಬೆಲೆ ಕೊಡುವುದಿಲ್ಲ. ಶಿವ ತಂದೆ ಬೇಹದ್ದಿನ ತಂದೆಯು ಬಂದು ಇವರಿಗೆ ಬೆಲೆ
ಕೊಡುತ್ತಾರೆ. ಮೋಸ್ಟ್ ವ್ಯಾಲ್ಯುಬಲ್ ಶಿವ ತಂದೆಯಾಗಿದ್ದಾರೆ, ಸ್ವರ್ಗದ ಸ್ಥಾಪನೆ ಮಾಡುತ್ತಾರೆ.
ಎಷ್ಟು ಶ್ರೇಷ್ಠ ಕಾರ್ಯವನ್ನು ಮಾಡುತ್ತಾರೆ. ಎಷ್ಟು ತಂದೆಯು ಶ್ರೇಷ್ಠಾತಿ ಶ್ರೇಷ್ಠನೆಂದು
ಗಾಯನವಿದೆಯೋ ಅಷ್ಟೇ ಮಕ್ಕಳೂ ಸಹ ಶ್ರೇಷ್ಠರಾಗಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ -
ಎಲ್ಲರಿಗಿಂತ ಶ್ರೇಷ್ಠನು ತಂದೆಯಾಗಿದ್ದಾರೆ. ಇದೂ ನಿಮ್ಮ ಬುದ್ಧಿಯಲ್ಲಿದೆ – ಅವಶ್ಯವಾಗಿ ಈಗ
ಸ್ವರ್ಗದ ಸ್ಥಾಪನೆಯಾಗುತ್ತಿದೆ, ಇದು ಸಂಗಮಯುಗವಾಗಿದೆ. ಸತ್ಯಯುಗ ಮತ್ತು ಕಲಿಯುಗದ ನಡುವಿನ
ಪುರುಷೋತ್ತಮರಾಗುವ ಸಂಗಮಯುಗವು ಇದಾಗಿದೆ. ಪುರುಷೋತ್ತಮ ಎಂಬುದರ ಅರ್ಥವನ್ನು ಮನುಷ್ಯರು
ತಿಳಿದುಕೊಂಡಿಲ್ಲ. ಶ್ರೇಷ್ಠಾತಿ ಶ್ರೇಷ್ಠರೇ ಕನಿಷ್ಟರಾಗಿದ್ದೀರಿ. ಪತಿತ ಮತ್ತು ಪಾವನರಲ್ಲಿ
ಎಷ್ಟೊಂದು ಅಂತರವಿದೆ! ಯಾರು ದೇವತೆಗಳ ಪೂಜಾರಿಗಳಿರುವರೋ ಅವರು ವರ್ಣನೆ ಮಾಡುತ್ತಾರೆ - ತಾವು
ಸರ್ವಗುಣ ಸಂಪನ್ನರು, ವಿಶ್ವದ ಮಾಲೀಕರು... ನಾವಂತೂ ವಿಷಯ ವೈತರಣೀ ನದಿಯಲ್ಲಿ
ಮುಳುಗಿರುವವರಾಗಿದ್ದೇವೆಂದು ಕೇವಲ ಹೇಳುತ್ತಾರಷ್ಟೆ ತಿಳಿದುಕೊಳ್ಳುವುದಿಲ್ಲ. ನಾಟಕವು ಬಹಳ
ಅದ್ಬುತ, ವಿಚಿತ್ರವಾಗಿದೆ. ಈ ಮಾತುಗಳನ್ನು ಕಲ್ಪ-ಕಲ್ಪವೂ ಕೇಳುತ್ತೀರಿ, ತಂದೆಯು ಬಂದು
ತಿಳಿಸುತ್ತಾರೆ – ಯಾರಿಗೆ ತಂದೆಯ ಜೊತೆ ಪೂರ್ಣ ಪ್ರೀತಿಯಿದೆಯೋ ಅವರಿಗೆ ಬಹಳ ಆಕರ್ಷಣೆಯಾಗುತ್ತದೆ.
ಈಗ ಆತ್ಮವು ತಂದೆಯೊಂದಿಗೆ ಹೇಗೆ ಮಿಲನ ಮಾಡುವುದು? ಸಾಕಾರದಲ್ಲಿಯೇ ಮಿಲನವಾಗುತ್ತದೆ, ನಿರಾಕಾರಿ
ಪ್ರಪಂಚದಲ್ಲಿ ಆಕರ್ಷಣೆಯ ಮಾತೇ ಇಲ್ಲ. ಅಲ್ಲಿ ಎಲ್ಲರೂ ಪವಿತ್ರರಾಗಿರುತ್ತಾರೆ, ತುಕ್ಕು
ಇರುವುದಿಲ್ಲ. ಆಕರ್ಷಿತರಾಗುವ ಮಾತಿಲ್ಲ. ಪ್ರೀತಿಯ ಮಾತು ಇಲ್ಲಿಯೇ ಇರುತ್ತದೆ. ಇಂತಹ ತಂದೆಯನ್ನು
ಒಮ್ಮೆಲೆ ಹಿಡಿದುಕೊಂಡು ಬಿಡಬೇಕು. ಬಾಬಾ, ತಾವಂತೂ ಕಮಾಲ್ ಮಾಡುತ್ತೀರಿ. ನಮ್ಮ ಜೀವನವನ್ನು ತಾವು
ಎಷ್ಟು ಶ್ರೇಷ್ಠ ಮಾಡುತ್ತೀರೆಂದು ಬಹಳ ಪ್ರೀತಿ ಇರಬೇಕು ಆದರೆ ಆ ಪ್ರೀತಿಯು ಏಕಿಲ್ಲ. ಏಕೆಂದರೆ
ತುಕ್ಕು ಹಿಡಿದಿದೆ. ನೆನಪಿನ ಯಾತ್ರೆಯ ವಿನಃ ತುಕ್ಕು ಇಳಿಯುವುದಿಲ್ಲ. ಅಷ್ಟು ಪ್ರಿಯರಾಗುವುದೂ
ಇಲ್ಲ. ನೀವು ಹೂಗಳು ಇಲ್ಲಿಯೇ ಅರಳಬೇಕಾಗಿದೆ, ಹೂಗಳಾಗಬೇಕಾಗಿದೆ. ಇದರಿಂದ ಮತ್ತೆ ಅಲ್ಲಿ
ಜನ್ಮ-ಜನ್ಮಾಂತರ ಹೂಗಳಾಗುತ್ತೀರಿ. ನಾವು ಮುಳ್ಳುಗಳಿಂದ ಹೂಗಳಾಗುತ್ತಿದ್ದೇವೆಂದು ಎಷ್ಟೊಂದು
ಖುಷಿಯಿರಬೇಕು. ಹೂಗಳು ಯಾವಾಗಲೂ ಎಲ್ಲರಿಗೂ ಸುಖ ಕೊಡುತ್ತವೆ. ಎಲ್ಲರೂ ತಮ್ಮ
ಕಣ್ಣಿಗೊತ್ತಿಕೊಳ್ಳುತ್ತಾರೆ, ಅದರಿಂದ ಪರಿಮಳವನ್ನು ಸವಿಯುತ್ತಾರೆ. ಹೂಗಳಿಂದ ಸುಗಂಧ ದ್ರವ್ಯವನ್ನು
ತಯಾರಿಸುತ್ತಾರೆ. ಗುಲಾಬಿಯ ಜಲವನ್ನು ತಯಾರಿಸುತ್ತಾರೆ. ನಿಮ್ಮನ್ನು ಮುಳ್ಳುಗಳಿಂದ ಹೂಗಳನ್ನಾಗಿ
ಮಾಡುತ್ತಾರೆ. ಹೂಗಳನ್ನಾಗಿ ಮಾಡುವವರು ತಂದೆಯಾಗಿದ್ದಾರೆ. ನೀವು ಮಕ್ಕಳಿಗೆ ಏಕೆ
ಖುಷಿಯಾಗುವುದಿಲ್ಲ? ತಂದೆಗೆ ಬಹಳ ಆಶ್ಚರ್ಯವೆನಿಸುತ್ತದೆ. ತಂದೆಯು ನಮ್ಮನ್ನು ಸ್ವರ್ಗದ
ಹೂಗಳನ್ನಾಗಿ ಮಾಡುತ್ತಾರೆ, ಹೂಗಳು ಹಳೆಯದಾದರೆ ಬಾಡಿ ಹೋಗುತ್ತದೆ. ನಿಮ್ಮ ಬುದ್ಧಿಯಲ್ಲಿದೆ -
ನಾವೀಗ ಮನುಷ್ಯರಿಂದ ದೇವತೆಗಳಾಗುತ್ತೇವೆ. ತಮೋಪ್ರಧಾನ ಮನುಷ್ಯರು ಮತ್ತು ಸತೋಪ್ರಧಾನ ದೇವತೆಗಳಲ್ಲಿ
ಎಷ್ಟೊಂದು ಅಂತರವಿದೆ. ಇದನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ.
ನಾವು ದೇವತೆಗಳಾಗಲು
ಓದುತ್ತಿದ್ದೇವೆಂದು ನಿಮಗೆ ತಿಳಿದಿದೆ - ವಿದ್ಯೆಯಲ್ಲಿ ನಶೆಯಿರುತ್ತದೆಯಲ್ಲವೆ. ನೀವೂ ಸಹ
ತಿಳಿದುಕೊಳ್ಳುತ್ತೀರಿ - ನಾವು ತಂದೆಯ ಮೂಲಕ ಓದಿ ವಿಶ್ವದ ಮಾಲೀಕರಾಗುತ್ತೇವೆ. ನಿಮ್ಮ ವಿದ್ಯೆಯು
ಭವಿಷ್ಯಕ್ಕಾಗಿದೆ. ಭವಿಷ್ಯಕ್ಕಾಗಿ ಓದುವ ವಿದ್ಯೆಯನ್ನು ಎಂದಾದರೂ ಕೇಳಿದ್ದೀರಾ? ನಾವು ಹೊಸ
ಪ್ರಪಂಚಕ್ಕಾಗಿ, ಹೊಸ ಜನ್ಮಕ್ಕಾಗಿ ಓದುತ್ತೇವೆಂದು ನೀವೇ ಹೇಳುತ್ತೀರಿ. ಕರ್ಮ-ಅಕರ್ಮ-ವಿಕರ್ಮದ
ಗತಿಯನ್ನು ತಂದೆಯೇ ತಿಳಿಸುತ್ತಾರೆ. ಗೀತೆಯಲ್ಲಿಯೂ ಇದೆ ಆದರೆ ಅದರ ಅರ್ಥವು ಗೀತೆಯನ್ನು ಓದುವವರಿಗೆ
ಗೊತ್ತಿಲ್ಲ. ಈಗ ತಂದೆಯ ಮೂಲಕ ನೀವು ತಿಳಿದುಕೊಂಡಿದ್ದೀರಿ - ಸತ್ಯಯುಗದಲ್ಲಿ ಕರ್ಮವು
ಅಕರ್ಮವಾಗುತ್ತದೆ ನಂತರ ರಾವಣ ರಾಜ್ಯದಲ್ಲಿ ಕರ್ಮವು ವಿಕರ್ಮವಾಗಲು ಆರಂಭವಾಗುತ್ತದೆ. 63
ಜನ್ಮಗಳಿಂದ ನೀವು ಇಂತಹ ಕರ್ಮಗಳನ್ನು ಮಾಡುತ್ತಾ ಬಂದಿದ್ದೀರಿ. ತಲೆಯ ಮೇಲೆ ವಿಕರ್ಮಗಳ ಹೊರೆ
ಬಹಳಷ್ಟಿದೆ. ಎಲ್ಲರೂ ಪಾಪಾತ್ಮರಾಗಿ ಬಿಟ್ಟಿದ್ದಾರೆ. ಈಗ ಆ ಹಿಂದಿನ ವಿಕರ್ಮಗಳು ಹೇಗೆ ಕಳೆಯುತ್ತವೆ!
ನೀವು ತಿಳಿದುಕೊಂಡಿದ್ದೀರಿ - ಮೊದಲು ಸತೋಪ್ರಧಾನರಾಗಿದ್ದೆವು ನಂತರ 84 ಜನ್ಮಗಳನ್ನು
ತೆಗೆದುಕೊಳ್ಳುತ್ತೇವೆ. ತಂದೆಯು ನಾಟಕದ ಪರಿಚಯವನ್ನು ಕೊಟ್ಟಿದ್ದಾರೆ. ಯಾರು ಮೊಟ್ಟ ಮೊದಲು ಬರುವರೋ,
ಯಾರದು ಮೊಟ್ಟ ಮೊದಲೇ ರಾಜ್ಯವಿರುವುದೋ ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ನಂತರ
ತಂದೆಯು ಬಂದು ರಾಜ್ಯಭಾಗ್ಯವನ್ನು ಕೊಡುವರು. ನೀವೀಗ ರಾಜ್ಯವನ್ನು ತೆಗೆದುಕೊಳ್ಳುತ್ತಿದ್ದೀರಿ.
ನಾವು ಹೇಗೆ 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆಂದು ನಿಮಗೆ ತಿಳಿದಿದೆ. ಈಗ ಮತ್ತೆ
ಪವಿತ್ರರಾಗಬೇಕಾಗಿದೆ. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಆತ್ಮವು ಪವಿತ್ರವಾಗುವುದು ನಂತರ
ಈ ಶರೀರವು ಸಮಾಪ್ತಿಯಾಗುವುದು. ಮಕ್ಕಳಿಗೆ ಅಪಾರ ಖುಷಿಯಿರಬೇಕು. ತಂದೆಯು ತಂದೆಯೂ ಆಗಿದ್ದಾರೆ,
ಶಿಕ್ಷಕನೂ ಆಗಿದ್ದಾರೆ, ಗುರುವೂ ಆಗಿದ್ದಾರೆ. ಮೂವರೂ ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆಂಬ
ಮಹಿಮೆಯನ್ನು ಎಂದೂ ಎಲ್ಲಿಯೂ ಕೇಳಿರಲಿಲ್ಲ. ಸತ್ಯ ತಂದೆ, ಸತ್ಯ ಶಿಕ್ಷಕ, ಸದ್ಗುರು ಮೂವರೂ ಒಬ್ಬರೇ
ಆಗಿದ್ದಾರೆ. ಈಗ ನಿಮಗೆ ಇದು ಅನುಭವವಾಗುತ್ತದೆ. ಯಾವ ತಂದೆಯು ಜ್ಞಾನ ಸಾಗರನಾಗಿದ್ದಾರೆ, ಎಲ್ಲಾ
ಆತ್ಮಗಳ ತಂದೆಯಾಗಿದ್ದಾರೆ, ಅವರೇ ನಮಗೆ ಓದಿಸುತ್ತಿದ್ದಾರೆ, ಯುಕ್ತಿಯನ್ನು ರಚಿಸುತ್ತಿದ್ದಾರೆ.
ಮ್ಯಾಗಜಿನ್ನಲ್ಲಿಯೂ ಸಹ ಒಳ್ಳೊಳ್ಳೆಯ ವಿಚಾರಗಳು ಬರುತ್ತಿರುತ್ತವೆ. ಇದು ಬಣ್ಣದ ಚಿತ್ರಗಳಿಂದಲೂ
ಮುಂದೆ ಒಂದುದಿನ ಮ್ಯಾಗಜಿನ್ ತಯಾರಾಗುವುದು. ಕೇವಲ ಅಕ್ಷರಗಳು ಚಿಕ್ಕದಾಗಿರುತ್ತವೆ. ಚಿತ್ರಗಳಂತೂ
ತಯಾರಾಗಿವೆ, ಎಲ್ಲಿಯಾದರೂ ಯಾರು ಬೇಕಾದರೂ ಮಾಡಬಹುದು. ಮೇಲಿನಿಂದ ಹಿಡಿದು ಪ್ರತಿಯೊಂದು ಚಿತ್ರದ
ಪರಿಚಯವನ್ನು ನೀವು ತಿಳಿದುಕೊಂಡಿದ್ದೀರಿ. ಶಿವ ತಂದೆಯ ಪರಿಚಯವನ್ನೂ ತಿಳಿದುಕೊಂಡಿದ್ದೀರಿ. ಮಕ್ಕಳು
ತಂದೆಯ ಕರ್ತವ್ಯವನ್ನು ತಂದೆಯ ಮೂಲಕವೇ ತಿಳಿದುಕೊಳ್ಳುವರಲ್ಲವೆ. ನೀವು ಏನನ್ನೂ
ತಿಳಿದುಕೊಂಡಿರಲಿಲ್ಲ. ಚಿಕ್ಕ ಮಕ್ಕಳು ವಿದ್ಯೆಯಿಂದ ಏನು ತಿಳಿದುಕೊಳ್ಳುವರು? 5 ವರ್ಷಗಳ ನಂತರ
ಒದುವುದನ್ನು ಆರಂಭಿಸುತ್ತಾರೆ ಮತ್ತೆ ಓದುತ್ತಾ-ಓದುತ್ತಾ ಉನ್ನತ ಪರೀಕ್ಷೆಯನ್ನು ತೇರ್ಗಡೆ
ಮಾಡುವುದರಲ್ಲಿ ಕೆಲವೊಂದು ವರ್ಷಗಳು ಹಿಡಿಸುತ್ತವೆ. ನೀವು ಎಷ್ಟು ಸಾಧಾರಣವಾಗಿದ್ದೀರಿ,
ಏನಾಗುತ್ತೀರಿ! ವಿಶ್ವದ ಮಾಲೀಕರು. ನಿಮಗೆ ಎಷ್ಟೊಂದು ಶೃಂಗಾರವಾಗುವುದು. ನಿಮ್ಮ ಬಾಯಲ್ಲಿ ಚಿನ್ನದ
ಚಮಚವಿರುತ್ತದೆ. ಅಲ್ಲಿಯದು ಗಾಯನವೇ ಇದೆ. ಈಗಲೂ ಸಹ ಒಳ್ಳೆಯ ಮಕ್ಕಳು ಶರೀರ ಬಿಟ್ಟರೆ ಅವರು
ಒಳ್ಳೆಯ ಮನೆಯಲ್ಲಿ ಜನ್ಮ ಪಡೆಯುತ್ತಾರೆ ಅಂದಾಗ ಬಾಯಲ್ಲಿ ಚಿನ್ನದ ಚಮಚ ಸಿಗುತ್ತದೆ. ಯಾರ ಬಳಿಯಾದರೂ
ಮುಂಚಿತವಾಗಿಯೇ ಹೋಗುವರಲ್ಲವೆ. ನಿರ್ವಿಕಾರಿಗಳ ಬಳಿ ಮೊಟ್ಟ ಮೊದಲಿಗೆ ಶ್ರೀಕೃಷ್ಣನೇ ಜನ್ಮ
ತೆಗೆದುಕೊಳ್ಳಬೇಕಾಗುತ್ತದೆ. ಉಳಿದಂತೆ ಯಾರೆಲ್ಲರೂ ಹೋಗುವರೋ ಅವರು ವಿಕಾರಿಗಳ ಬಳಿಯೇ ಜನ್ಮ
ಪಡೆಯುತ್ತಾರೆ ಆದರೆ ಗರ್ಭದಲ್ಲಿ ಇಷ್ಟೊಂದು ಶಿಕ್ಷೆಗಳನ್ನನುಭವಿಸುವುದಿಲ್ಲ. ಬಹಳ ಒಳ್ಳೆಯ
ಮನೆಯಲ್ಲಿ ಜನ್ಮ ಪಡೆಯುತ್ತಾರೆ. ಶಿಕ್ಷೆಗಳಂತೂ ಸಮಾಪ್ತಿಯಾಯಿತು, ಇನ್ನು ಅಲ್ಪಸ್ವಲ್ಪ
ಉಳಿದಿರುತ್ತದೆ ಆದರೂ ಇಷ್ಟು ದುಃಖವಾಗುವುದಿಲ್ಲ. ಮುಂದೆ ಹೋದಂತೆ ನೋಡುವಿರಿ, ನಿಮ್ಮ ಬಳಿ
ದೊಡ್ಡ-ದೊಡ್ಡ ಮನೆಯವರ ಮಕ್ಕಳು, ರಾಜಕುಮಾರ-ಕುಮಾರಿಯರು ಹೇಗೆ ಬರುತ್ತಾರೆ? ತಂದೆಯು ಎಷ್ಟೊಂದು
ನಿಮ್ಮ ಮಹಿಮೆ ಮಾಡುತ್ತಾರೆ. ನಿಮ್ಮನ್ನು ನಾನು ನನಗಿಂತಲೂ ಶ್ರೇಷ್ಠರನ್ನಾಗಿ ಮಾಡುತ್ತೇನೆ. ಹೇಗೆ
ಲೌಕಿಕ ತಂದೆಯು ಮಕ್ಕಳನ್ನು ಸುಖಿಯನ್ನಾಗಿ ಮಾಡುತ್ತಾರೆ. 60 ವರ್ಷಗಳಾದ ಮೇಲೆ ತಾನು
ವಾನಪ್ರಸ್ಥದಲ್ಲಿ ಹೊರಟು ಹೋಗುತ್ತಾರೆ, ಭಕ್ತಿಯಲ್ಲಿ ತೊಡಗುತ್ತಾರೆ. ಜ್ಞಾನವನ್ನಂತೂ ಯಾರೂ ಕೊಡಲು
ಸಾಧ್ಯವಿಲ್ಲ. ನಾನೇ ಜ್ಞಾನದಿಂದ ಸರ್ವರ ಸದ್ಗತಿ ಮಾಡುತ್ತೇನೆ. ನಿಮ್ಮ ಕಾರಣದಿಂದ ಎಲ್ಲರ
ಕಲ್ಯಾಣವಾಗಿ ಬಿಡುತ್ತದೆ ಏಕೆಂದರೆ ನಿಮಗಾಗಿ ಹೊಸ ಪ್ರಪಂಚವು ಅವಶ್ಯವಾಗಿ ಬೇಕು. ನೀವು ಎಷ್ಟು
ಖುಷಿಯಾಗುತ್ತೀರಿ! ವೆಜಿಟೇರಿಯನ್ನರ ಸಮ್ಮೇಳನದಲ್ಲಿಯೂ ನೀವು ಮಕ್ಕಳಿಗೆ ನಿಮಂತ್ರಣ ಸಿಕ್ಕಿತ್ತು.
ತಂದೆಯು ಹೇಳುತ್ತಿರುತ್ತಾರೆ - ಸಾಹಸವನ್ನಿಡಿ, ದೆಹಲಿಯಂತಹ ನಗರದಲ್ಲಿ ಸಂದೇಶವು ಹರಡಲಿ.
ಪ್ರಪಂಚದಲ್ಲಿ ಅಂಧಶ್ರದ್ಧೆಯ ಭಕ್ತಿಯು ಬಹಳಷ್ಟಿದೆ. ಸತ್ಯ-ತ್ರೇತಾಯುಗದಲ್ಲಿ ಭಕ್ತಿಯ ಯಾವುದೇ
ಮಾತಿರುವುದಿಲ್ಲ, ಆ ವಿಭಾಗವೇ ಬೇರೆಯಾಗಿದೆ. ಅರ್ಧಕಲ್ಪದವರೆಗೆ ಪ್ರಾಲಬ್ಧವಿರುತ್ತದೆ. ನಿಮಗೆ
ಬೇಹದ್ದಿನ ತಂದೆಯಿಂದ 21 ಜನ್ಮಗಳ ಆಸ್ತಿಯು ಸಿಗುತ್ತದೆ. ನೀವು 21 ಜನ್ಮಗಳವರೆಗೆ
ಸುಖಿಯಾಗಿರುತ್ತೀರಿ. ವೃದ್ಧಾಪ್ಯದವರೆಗೆ ದುಃಖದ ಹೆಸರೇ ಇರುವುದಿಲ್ಲ. ಜೀವನಪರ್ಯಂತ
ಸುಖಿಯಾಗಿರುತ್ತೀರಿ. ಎಷ್ಟು ಆಸ್ತಿಯನ್ನು ಪಡೆಯುವ ಪುರುಷಾರ್ಥ ಮಾಡುತ್ತೀರೋ ಅಷ್ಟು ಶ್ರೇಷ್ಠ
ಪದವಿಯನ್ನು ಪಡೆಯುತ್ತೀರಿ ಆದ್ದರಿಂದ ಪೂರ್ಣ ಪುರುಷಾರ್ಥ ಮಾಡಿರಿ. ಹೇಗೆ ನಂಬರ್ವಾರ್
ಮಾಲೆಯಾಗುತ್ತದೆ ಎಂಬುದನ್ನು ನೀವು ನೋಡುವಿರಿ. ಪುರುಷಾರ್ಥದನುಸಾರವೇ ಮಾಲೆಯಾಗುವುದು. ನೀವು
ವಿಚಿತ್ರ ವಿದ್ಯಾರ್ಥಿಗಳಾಗಿದ್ದೀರಿ, ಶಾಲೆಯಲ್ಲಿಯೂ ಮಕ್ಕಳನ್ನು ಗುರಿಯ ತನಕ ಓದಿಸುತ್ತಾರಲ್ಲವೆ.
ತಂದೆಯು ಹೇಳುತ್ತಾರೆ - ನೀವು ಗುರಿಯ ತನಕ ಓಡಿ ಮತ್ತೆ ಇಲ್ಲಿಯೇ ಬರಬೇಕಾಗಿದೆ. ನೆನಪಿನ
ಯಾತ್ರೆಯಿಂದ ನೀವು ಓಟವನ್ನು ಓಡಿ ಮತ್ತೆ ನೀವು ನಂಬರ್ವನ್ನಲ್ಲಿ ಬಂದು ಬಿಡುತ್ತೀರಿ. ಮುಖ್ಯವಾದುದು
ನೆನಪಿನ ಯಾತ್ರೆಯಾಗಿದೆ. ಬಾಬಾ, ನಾವು ಮರೆತು ಹೋಗುತ್ತೇವೆಂದು ಹೇಳುತ್ತಾರೆ. ಅರೆ! ತಂದೆಯು
ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಅವರನ್ನೇ ನೀವು ಮರೆತು ಹೋಗುತ್ತೀರಾ? ಭಲೆ
ಬಿರುಗಾಳಿಗಳಂತೂ ಬರುತ್ತವೆ, ತಂದೆಯು ಧೈರ್ಯ ತರಿಸುತ್ತಾರಲ್ಲವೆ. ಜೊತೆ ಜೊತೆಗೆ ಹೇಳುತ್ತಾರೆ -
ಮಕ್ಕಳೇ ಇದು ಯುದ್ಧ ಸ್ಥಳವಾಗಿದೆ. ವಾಸ್ತವದಲ್ಲಿ ಯುಧಿಷ್ಠಿರನೆಂದು ತಂದೆಗೆ ಹೇಳಬೇಕು ಏಕೆಂದರೆ
ಯುದ್ಧವನ್ನು ಕಲಿಸುತ್ತಾರೆ. ಮಾಯೆಯೊಂದಿಗೆ ನೀವು ಹೇಗೆ ಯುದ್ಧ ಮಾಡಬೇಕೆಂದು ಯುಧಿಷ್ಠಿರ ತಂದೆಯು
ನಿಮಗೆ ಕಲಿಸಿಕೊಡುತ್ತಾರೆ. ಈ ಸಮಯದಲ್ಲಿ ಯುದ್ಧದ ಮೈದಾನವಾಗಿದೆಯಲ್ಲವೆ. ತಂದೆಯು ತಿಳಿಸುತ್ತಾರೆ
– ಕಾಮ ಮಹಾಶತ್ರುವಾಗಿದೆ. ಅದರ ಮೇಲೆ ಜಯ ಗಳಿಸಿದರೆ ನೀವು ಜಗಜ್ಜೀತರಾಗುವಿರಿ. ನೀವು ಬಾಯಿಂದ
ಏನನ್ನೂ ಜಪಿಸಬೇಕಾಗಿಲ್ಲ, ಮಾಡುವಂತಿಲ್ಲ, ಶಾಂತವಾಗಿರಬೇಕಾಗಿದೆ. ಭಕ್ತಿಮಾರ್ಗದಲ್ಲಿ ಎಷ್ಟು
ಪರಿಶ್ರಮ ಪಡುತ್ತಾರೆ! ಒಳಗಿಂದೊಳಗೆ ರಾಮ ನಾಮವನ್ನು ಜಪಿಸುತ್ತಾರೆ, ಅದಕ್ಕೆ ನೌಧಾ ಭಕ್ತಿಯೆಂದು
ಹೇಳಲಾಗುವುದು. ನಿಮಗೆ ತಿಳಿದಿದೆ - ತಂದೆಯು ನಮ್ಮನ್ನು ತಮ್ಮ ಮಾಲೆಯ ಮಣಿಯನ್ನಾಗಿ
ಮಾಡುತ್ತಿದ್ದಾರೆ. ನೀವು ರುದ್ರ ಮಾಲೆಯ ಮಣಿಗಳಾಗುವವರಿದ್ದೀರಿ. ಮತ್ತೆ ಅದನ್ನು ಪೂಜಿಸುತ್ತಾರೆ.
ರುದ್ರ ಮಾಲೆ ಮತ್ತು ರುಂಡ ಮಾಲೆಯು ತಯಾರಾಗುತ್ತಿದೆ. ವಿಷ್ಣುವಿನ ಮಾಲೆಗೆ ರುಂಡ ಮಾಲೆಯೆಂದು
ಹೇಳಲಾಗುತ್ತದೆ. ನೀವು ವಿಷ್ಣುವಿನ ಕೊರಳಿನ ಹಾರವಾಗುತ್ತೀರಿ - ಹೇಗಾಗುತ್ತೀರಿ? ಯಾವಾಗ
ಸ್ಪರ್ಧೆಯಲ್ಲಿ ವಿಜಯಿಗಳಾಗುತ್ತೀರೋ ಆಗ. ತಂದೆಯನ್ನು ನೆನಪು ಮಾಡಬೇಕು ಮತ್ತು 84 ಜನ್ಮಗಳ
ಚಕ್ರವನ್ನು ಅರಿತುಕೊಳ್ಳಬೇಕಾಗಿದೆ. ತಂದೆಯ ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ನೀವು
ಲೈಟ್ಹೌಸ್ ಆಗಿದ್ದೀರಿ. ಒಂದು ಕಣ್ಣಿನಲ್ಲಿ ಮುಕ್ತಿಧಾಮ, ಇನ್ನೊಂದು ಕಣ್ಣಿನಲ್ಲಿ ಜೀವನ್ಮುಕ್ತಿ
ಧಾಮವಿದೆ. ಈ ಚಕ್ರವನ್ನು ತಿಳಿದುಕೊಳ್ಳುವುದರಿಂದ ನೀವು ಚಕ್ರವರ್ತಿ ರಾಜರು, ಸುಖಧಾಮದ
ಮಾಲೀಕರಾಗುತ್ತೀರಿ. ನಾವಾತ್ಮಗಳು ನಮ್ಮ ಮನೆಗೆ ಹೋಗುತ್ತೇವೆ. ಮನೆಯನ್ನು ನೆನಪು
ಮಾಡುತ್ತಾ-ಮಾಡುತ್ತಾ ಹೋಗುತ್ತೇವೆಂದು ನಿಮ್ಮ ಆತ್ಮವು ಹೇಳುತ್ತದೆ. ಇದು ನೆನಪಿನ ಯಾತ್ರೆಯಾಗಿದೆ,
ನಿಮ್ಮ ಯಾತ್ರೆಯು ನೋಡಿ ಹೇಗೆ ಸುಂದರವಾಗಿದೆ! ನಾವು ಹೀಗೆ ಕುಳಿತು-ಕುಳಿತಿದ್ದಂತೆಯೀ ಕ್ಷೀರ
ಸಾಗರದಲ್ಲಿ ಹೋಗುತ್ತೇವೆಂದು ತಂದೆಗೆ ಗೊತ್ತಿದೆ. ವಿಷ್ಣುವನ್ನು ಕ್ಷೀರ ಸಾಗರದಲ್ಲಿ
ತೋರಿಸುತ್ತಾರಲ್ಲವೆ. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಕ್ಷೀರ ಸಾಗರದಲ್ಲಿ ಹೊರಟು
ಹೋಗುತ್ತೀರಿ. ಕ್ಷೀರ ಸಾಗರವು ಈಗಂತೂ ಇಲ್ಲ. ಯಾರು ಸರೋವರವನ್ನು ಮಾಡಿದ್ದಾರೆಯೋ ಅವರು ಅವಶ್ಯವಾಗಿ
ಹಾಲನ್ನು ಹಾಕಿರಬೇಕು. ಮೊದಲು ಹಾಲು ಬಹಳ ಸಸ್ತಾ ಆಗಿತ್ತು, ಒಂದುಪೈಸೆಗೆ ಒಂದು ಲೋಟದ ತುಂಬಾ
ಬರುತ್ತಿತ್ತು. ಅಂದಮೇಲೆ ಸರೋವರವನ್ನು ಏಕೆ ತುಂಬಿಸಬಾರದು! ಈಗಂತೂ ಹಾಲು ಎಲ್ಲಿದೆ? ನೀರೇ ನೀರಾಗಿ
ಬಿಟ್ಟಿದೆ. ತಂದೆಯು ನೇಪಾಳದಲ್ಲಿ ನೋಡಿದ್ದಾರೆ, ವಿಷ್ಣುವಿನ ಬಹಳ ದೊಡ್ಡ ಚಿತ್ರವಿದೆ, ಕಪ್ಪಾಗಿ
ತೋರಿಸಿದ್ದಾರೆ. ನೀವೀಗ ನೆನಪಿನ ಯಾತ್ರೆಯಿಂದ ಮತ್ತು ಸ್ವದರ್ಶನ ಚಕ್ರವನ್ನು ತಿರುಗಿಸುವುದರಿಂದ
ವಿಷ್ಣು ಪುರಿಯ ಮಾಲೀಕರಾಗುತ್ತಿದ್ದೀರಿ. ಇಲ್ಲಿಯೇ ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಇದು
ಪುರುಷೋತ್ತಮ ಸಂಗಮಯುಗವಾಗಿದೆ. ಓದುತ್ತಾ-ಓದುತ್ತಾ ನೀವು ಪುರುಷೋತ್ತಮರಾಗಿ ಬಿಡುತ್ತೀರಿ. ಆತ್ಮದ
ಕನಿಷ್ಟತನವು ಬಿಟ್ಟು ಹೋಗುತ್ತದೆ. ತಂದೆಯು ಪ್ರತಿನಿತ್ಯವೂ ತಿಳಿಸುತ್ತಾರೆ - ನಶೆಯೇರಬೇಕು. ಬಾಬಾ,
ಪುರುಷಾರ್ಥ ಮಾಡುತ್ತಿದ್ದೇವೆಂದು ಹೇಳುತ್ತೇವೆ. ಬಾಬಾ, ನಾವಂತೂ ಪಾಸ್-ವಿತ್-ಆನರ್ ಆಗಿ
ತೋರಿಸುತ್ತೇವೆ, ತಾವು ಚಿಂತೆ ಮಾಡಬೇಡಿ ಎಂದು ತೆರೆದ ಹೃದಯದಿಂದ ಹೇಳಬೇಕಲ್ಲವೆ. ಚೆನ್ನಾಗಿ
ಓದುವಂತಹ ಒಳ್ಳೆಯ ಮಕ್ಕಳ ರಿಜಿಸ್ಟರ್ ಕೂಡ ಚೆನ್ನಾಗಿರುವುದು. ತಂದೆಗೆ ಹೇಳಬೇಕು, ಬಾಬಾ ತಾವು
ನಿಶ್ಚಿಂತರಾಗಿರಿ, ನಾವು ಈ ರೀತಿಯಾಗಿ ತೋರಿಸುತ್ತೇವೆ. ತಂದೆಗೂ ಗೊತ್ತಿದೆಯಲ್ಲವೆ, ಅನೇಕ ಟೀಚರ್ಸ್
ಬಹಳ ಫಸ್ಟ್ಕ್ಲಾಸ್ ಆಗಿದ್ದಾರೆ, ಎಲ್ಲರೂ ಫಸ್ಟ್ಕ್ಲಾಸ್ ಆಗಲು ಸಾಧ್ಯವಿಲ್ಲ. ಒಳ್ಳೊಳ್ಳೆಯ ಟೀಚರ್ಸ್
ಒಬ್ಬರು ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುತ್ತಾರೆ. ಎಲ್ಲರನ್ನೂ ಮಹಾರಥಿಗಳ ಸಾಲಿನಲ್ಲಿ ತರಲು
ಸಾಧ್ಯವಿಲ್ಲ. ಒಳ್ಳೆಯ ದೊಡ್ಡ-ದೊಡ್ಡ ಸೇವಾಕೇಂದ್ರಗಳನ್ನು ತೆರೆಯಿರಿ ಆಗ ದೊಡ್ಡ-ದೊಡ್ಡ
ವ್ಯಕ್ತಿಗಳು ಬರುವರು. ಕಲ್ಪದ ಹಿಂದೆಯೂ ಹುಂಡಿಯು ತುಂಬಿತ್ತು. ಸಾಹುಕಾರರಿಗಿಂತಲೂ ಸಾಹುಕಾರ
ತಂದೆಯು ಹುಂಡಿಯನ್ನು ಅವಶ್ಯವಾಗಿ ತುಂಬುತ್ತಾರೆ. ಇಬ್ಬರೂ ತಂದೆಯರು ಮಕ್ಕಳ ಪಾಲಕರಾಗಿದ್ದಾರೆ.
ಪ್ರಜಾಪಿತ ಬ್ರಹ್ಮಾನಿಗೆ ಎಷ್ಟೊಂದು ಮಂದಿ ಮಕ್ಕಳಿದ್ದಾರೆ. ಕೆಲವರು ಬಡವರು, ಕೆಲವರು ಸಾಹುಕಾರರು,
ಕೆಲವರು ಸಾಧಾರಣರು, ಕಲ್ಪದ ಹಿಂದೆಯೂ ಇವರ ಮೂಲಕ ರಾಜಧಾನಿಯು ಸ್ಥಾಪನೆಯಾಗಿತ್ತು, ಅದಕ್ಕೆ ದೈವೀ
ರಾಜಾಸ್ಥಾನವೆಂದು ಕರೆಯಲಾಗುತ್ತಿತ್ತು. ಈಗಂತೂ ಆಸುರೀ ರಾಜಾಸ್ಥಾನವಾಗಿದೆ. ಇಡೀ ವಿಶ್ವವು ದೈವೀ
ರಾಜಾಸ್ಥಾನವಾಗಿತ್ತು, ಇಷ್ಟೊಂದು ಖಂಡಗಳಿರಲಿಲ್ಲ, ಇದೇ ದೆಹಲಿಯು ಜಮುನಾ ನದಿಯ ತೀರವಾಗಿತ್ತು.
ಅದಕ್ಕೆ ಫರಿಸ್ಥಾನವೆಂದು ಕರೆಯಲಾಗುತ್ತದೆ. ಅಲ್ಲಿಯ ನದಿಗಳು ಇಲ್ಲಿಯತರಹ ಉಕ್ಕುವುದಿಲ್ಲ. ಇಲ್ಲಂತೂ
ಎಷ್ಟೊಂದು ಉಕ್ಕುತ್ತವೆ. ಅಣೆಕಟ್ಟುಗಳೇ ಹೊಡೆದು ಹೋಗುತ್ತವೆ. ನಾವು ಹೇಗೆ ಪ್ರಕೃತಿಗೆ ದಾಸಿಗಳಾಗಿ
ಬಿಟ್ಟಿದ್ದೇವೆ, ನಂತರ ನೀವು ಮಾಲೀಕರಾಗಿ ಬಿಡುತ್ತೀರಿ. ನಿಯಮವನ್ನು ಉಲ್ಲಂಘಿಸಲು ಅಲ್ಲಿ ಮಾಯೆಗೆ
ಶಕ್ತಿಯೇ ಇರುವುದಿಲ್ಲ. ಅಲುಗಾಡಲು ಧರಣಿಗೆ ಶಕ್ತಿಯಿರುವುದಿಲ್ಲ. ನೀವೂ ಸಹ ಮಹಾವೀರರಾಗಬೇಕು.
ಹನುಮಂತನಿಗೆ ಮಹಾವೀರನೆಂದು ಹೇಳುತ್ತಾರಲ್ಲವೆ. ತಂದೆಯು ತಿಳಿಸುತ್ತಾರೆ - ನೀವೆಲ್ಲರೂ
ಮಹಾವೀರರಾಗಿದ್ದೀರಿ, ಮಹಾವೀರ ಮಕ್ಕಳೆಂದಿಗೂ ಅಲುಗಾಡಲು ಸಾಧ್ಯವಿಲ್ಲ. ಮಹಾವೀರ, ಮಹಾವೀರಿಣಿಯರ
ಮಂದಿರಗಳು ಮಾಡಲ್ಪಟ್ಟಿವೆ. ಇಷ್ಟೊಂದು ದೇವಿ-ದೇವತೆಗಳ ಚಿತ್ರಗಳನ್ನಿಟ್ಟುಕೊಳ್ಳಲು ಸಾಧ್ಯವಿಲ್ಲ.
ಕೇವಲ ಮಾದರಿಯ ರೂಪದಲ್ಲಿ ಮಾಡಿದ್ದಾರೆ, ನೀವೀಗ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೀರಿ,
ಅಂದಮೇಲೆ ಎಷ್ಟೊಂದು ಖುಷಿಯಿರಬೇಕು! ಎಷ್ಟು ಒಳ್ಳೆಯ ಗುಣಗಳಿರಬೇಕು, ಅವಗುಣಗಳನ್ನು ತೆಗೆಯುತ್ತಾ
ಹೋಗಿ. ಸದಾ ಹರ್ಷಿತರಾಗಿರಬೇಕು. ಬಿರುಗಾಳಿಗಳಂತೂ ಬರುತ್ತವೆ, ಬಿರುಗಾಳಿಗಳು ಬಂದಾಗಲೇ
ಮಹಾವೀರಿಣಿಯರ ಶಕ್ತಿಯು ಕಾಣುತ್ತದೆ. ನೀವು ಎಷ್ಟು ಶಕ್ತಿಶಾಲಿಗಳಾಗುವಿರೋ ಅಷ್ಟು ಬಿರುಗಾಳಿಗಳು
ಬರುತ್ತವೆ. ನೀವೀಗ ಪುರುಷಾರ್ಥ ಮಾಡಿ ನಂಬರ್ವಾರ್ ಪುರುಷಾರ್ಥದನುಸಾರ ಮಹಾವೀರರಾಗುತ್ತಿದ್ದೀರಿ.
ಜ್ಞಾನ ಸಾಗರನು ತಂದೆಯೇ ಆಗಿದ್ದಾರೆ, ಉಳಿದೆಲ್ಲಾ ಶಾಸ್ತ್ರ ಇತ್ಯಾದಿಗಳು ಭಕ್ತಿಮಾರ್ಗದ
ಸಾಮಗ್ರಿಯಾಗಿದೆ. ನಿಮಗಾಗಿ ಈ ಪುರುಷೋತ್ತಮ ಸಂಗಮಯುಗವಿದೆ. ಕೃಷ್ಣನ ಆತ್ಮವು ಇಲ್ಲಿಯೇ ಕುಳಿತಿದೆ.
ಇವರು ಭಗೀರಥನಾಗಿದ್ದಾರೆ, ಹಾಗೆಯೇ ನೀವೆಲ್ಲರೂ ಭಗೀರಥನಾಗಿದ್ದೀರಿ. ಭಾಗ್ಯಶಾಲಿಗಳಲ್ಲವೆ!
ಭಕ್ತಿಮಾರ್ಗದಲ್ಲಿ ತಂದೆಯು ಯಾರ ಸಾಕ್ಷಾತ್ಕಾರವನ್ನು ಬೇಕಾದರೂ ಮಾಡಿಸಬಲ್ಲರು, ಈ ಕಾರಣದಿಂದ
ಮನುಷ್ಯರು ಸರ್ವವ್ಯಾಪಿಯೆಂದು ಹೇಳಿ ಬಿಟ್ಟಿದ್ದಾರೆ. ಇದೂ ಸಹ ನಾಟಕದ ಪೂರ್ವ ನಿಶ್ಚಿತವಾಗಿದೆ.
ನೀವು ಮಕ್ಕಳು ಬಹಳ ಶ್ರೇಷ್ಠ ವಿದ್ಯೆಯನ್ನು ಓದುತ್ತಿದ್ದೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಆತ್ಮನಲ್ಲಿ
ಯಾವ ತುಕ್ಕು ಹಿಡಿದಿದೆಯೋ ಅದನ್ನು ನೆನಪಿನ ಯಾತ್ರೆಯಿಂದ ಇಳಿಸಿಕೊಂಡು ಬಹಳ-ಬಹಳ
ಪ್ರಿಯರಾಗಬೇಕಾಗಿದೆ. ಈ ರೀತಿಯ ಪ್ರೀತಿಯಿರಲಿ ಸದಾ ತಂದೆಯ ಕಡೆ ಸೆಳೆತವಾಗುತ್ತಿರಲಿ.
2. ಮಾಯೆಯ
ಬಿರುಗಾಳಿಗಳಿಗೆ ಹೆದರಬಾರದು, ಮಹಾವೀರರಾಗಬೇಕಾಗಿದೆ. ತಮ್ಮ ಅವಗುಣಗಳನ್ನು ತೆಗೆಯುತ್ತಾ
ಹೋಗಬೇಕಾಗಿದೆ. ಸದಾ ಹರ್ಷಿತರಾಗಿರಬೇಕಾಗಿದೆ. ಎಂದೂ ಅಲುಗಾಡಬಾರದು.
ವರದಾನ:
ಶುದ್ಧ
ಸಂಕಲ್ಪಗಳ ಶಕ್ತಿಯ ಸ್ಟಾಕ್ ಮೂಲಕ ಮನಸಾ ಸೇವೆಯ ಸಹಜ ಅನುಭವಿ ಭವ.
ಅಂತರ್ಮುಖಿಯಾಗಿ ಶುದ್ಧ
ಸಂಕಲ್ಪಗಳ ಶಕ್ತಿಯ ಸ್ಟಾಕ್ ಜಮಾ ಮಾಡಿ. ಈ ಶುದ್ಧ ಸಂಕಲ್ಪಗಳ ಶಕ್ತಿ ಸಹಜವಾಗಿ ತಮ್ಮ ವ್ಯರ್ಥ
ಸಂಕಲ್ಪಗಳನ್ನು ಸಮಾಪ್ತಿ ಮಾಡಿ ಬಿಡುತ್ತದೆ ಮತ್ತು ಅನ್ಯರನ್ನೂ ಸಹಾ ಶುಭ ಭಾವನೆ, ಶುಭ ಕಾಮನೆಯ
ಸ್ವರೂಪದಿಂದ ಪರಿವರ್ತನೆ ಮಾಡಲು ಸಾಧ್ಯ. ಶುದ್ಧ ಸಂಕಲ್ಪಗಳ ಸ್ಟಾಕ್ ಜಮಾ ಮಾಡುವುದಕ್ಕಾಗಿ ಮುರಳಿಯ
ಪ್ರತಿ ಪಾಯಿಂಟ್ಸ್ ಗಳನ್ನು ಕೇಳುವುದರ ಜೊತೆ-ಜೊತೆ ಶಕ್ತಿಯ ರೂಪದಲ್ಲಿ ಪ್ರತಿ ಸಮಯ ಕಾರ್ಯದಲ್ಲಿ
ತೊಡಗಿಸಿ. ಎಷ್ಟು ಶುದ್ಧ ಸಂಕಲ್ಪಗಳ ಶಕ್ತಿಯ ಸ್ಟಾಕ್ ಜಮಾ ಆಗುವುದು ಅಷ್ಟು ಮನಸಾ ಸೇವೆಯ ಸಹಜ
ಅನುಭವಿಗಳಾಗುತ್ತಾ ಹೋಗುವಿರಿ.
ಸ್ಲೋಗನ್:
ಮನಸ್ಸಿನಿಂದ
ಸದಾಕಾಲಕ್ಕಾಗಿ ಈಷ್ರ್ಯಾ-ದ್ವೇಷಕ್ಕೆ ವಿದಾಯಿ ಕೊಡಿ ಆಗ ವಿಜಯವಾಗುವುದು.
ಅವ್ಯಕ್ತ ಸೂಚನೆ:-
ಸ್ವಯಂನ ಮತ್ತು ಸರ್ವರ ಪ್ರತಿ ಮನಸ್ಸಾ ಮೂಲಕ ಯೋಗದ ಶಕ್ತಿಗಳ ಪ್ರಯೋಗ ಮಾಡಿ.
ಎಷ್ಟು ತಮ್ಮ ತನು, ಮನ,
ಧನ ಮತ್ತು ಸಮಯವನ್ನು ತೊಡಗಿಸುತ್ತೀರಿ, ಅದರಿಂದ ಮನಸ್ಸಾ ಶಕ್ತಿಗಳ ಮೂಲಕ ಸೇವೆ ಮಾಡುವುದರಿಂದ ಬಹಳ
ಸ್ವಲ್ಪ ಸಮಯದಲ್ಲಿ ಸಫಲತೆ ಹೆಚ್ಚು ಸಿಗುವುದು. ಈಗ ಯಾರು ತಮ್ಮ ಪ್ರತಿ ಕೆಲ-ಕೆಲವೊಮ್ಮೆ ಪರಿಶ್ರಮ
ಪಡಬೇಕಾಗುತ್ತದೆ – ತಮ್ಮ ನೇಚರನ್ನು ಪರಿವರ್ತನೆ ಮಾಡುವ ಅಥವಾ ಸಂಘಟನೆಯಲ್ಲಿ ನಡೆಯುವ ಅಥವಾ
ಸೇವೆಯಲ್ಲಿ ಸಫಲತೆ ಕೆಲವೊಮ್ಮೆ ಕಡಿಮೆ ನೋಡಿ ಹೃದಯ ವಿಧೀರ್ಣಯಾಗುವುದು, ಇದೆಲ್ಲವೂ
ಸಮಾಪ್ತಿಯಾಗುತ್ತದೆ.