09.11.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯು
ನೀವು ಮಕ್ಕಳನ್ನು ಭಕ್ತಾತ್ಮರಿಂದ ಜ್ಞಾನಿ ಆತ್ಮಗಳನ್ನಾಗಿ ಮಾಡಲು, ಪತಿತರಿಂದ ಪಾವನರನ್ನಾಗಿ ಮಾಡಲು
ಬಂದಿದ್ದಾರೆ”
ಪ್ರಶ್ನೆ:
ಜ್ಞಾನವಂತ
ಮಕ್ಕಳು ಸದಾ ಯಾವ ಚಿಂತನೆಯಲ್ಲಿರುತ್ತಾರೆ?
ಉತ್ತರ:
ನಾನು ಅವಿನಾಶಿ
ಆತ್ಮನಾಗಿದ್ದೇನೆ, ಈ ಶರೀರವು ವಿನಾಶಿಯಾಗಿದೆ. ನಾನು 84 ಜನ್ಮಗಳನ್ನು ಧಾರಣೆ ಮಾಡಿದ್ದೇನೆ, ಈಗ
ಇದು ಅಂತಿಮಜನ್ಮವಾಗಿದೆ. ಆತ್ಮವು ಎಂದಿಗೂ ಸಹ ಚಿಕ್ಕದು-ದೊಡ್ಡದಾಗುವುದಿಲ್ಲ. ಶರೀರವೇ
ಚಿಕ್ಕದು-ದೊಡ್ಡದಾಗುತ್ತದೆ. ಈ ಕಣ್ಣುಗಳು ಶರೀರದಲ್ಲಿವೆ ಆದ್ದರಿಂದ ನಾನು ನೋಡುವಂತಹ
ಆತ್ಮನಾಗಿದ್ದೇನೆ. ತಂದೆಯು ಆತ್ಮಗಳಿಗೆ ಜ್ಞಾನದ ಮೂರನೆಯ ನೇತ್ರವನ್ನು ಕೊಡುತ್ತಾರೆ. ಅದೂ ಸಹ
ಎಲ್ಲಿಯವರೆಗೆ ಶರೀರದ ಆಧಾರವನ್ನು ತೆಗೆದುಕೊಳ್ಳುವುದಿಲ್ಲ ಅಲ್ಲಿಯವರೆಗೆ ಓದಿಸಲು ಸಾಧ್ಯವಿಲ್ಲ.
ಇಂತಹ ಜ್ಞಾನವಂತ ಮಕ್ಕಳು ಸದಾ ಇಂತಹ ಚಿಂತನೆಯನ್ನು ಮಾಡುತ್ತಾರೆ.
ಓಂ ಶಾಂತಿ.
ಇದನ್ನು ಯಾರು ಹೇಳಿದರು? ಆತ್ಮ. ಈ ಶರೀರದ ಮೂಲಕ ಅವಿನಾಶಿ ಆತ್ಮವು ಹೇಳುತ್ತದೆ. ಶರೀರಿ ಮತ್ತು
ಆತ್ಮನಲ್ಲಿ ಎಷ್ಟೊಂದು ಅಂತರವಿದೆ! ಪಂಚತತ್ವಗಳ ಶರೀರವು ಎಷ್ಟು ದೊಡ್ಡದಾಗುತ್ತದೆ! ಒಂದುವೇಳೆ
ಚಿಕ್ಕದಾಗಿದ್ದರೂ ಸಹ ಆತ್ಮನಿಗಿಂತಲೂ ದೊಡ್ಡದಾಗಿರುತ್ತದೆ. ಮೊದಲು ಚಿಕ್ಕದಾದ ಪಿಂಡವಾಗಿರುತ್ತದೆ.
ಅದು ಸ್ವಲ್ಪ ದೊಡ್ಡದಾಗುತ್ತದೆಯಲ್ಲವೆ. ಎಲ್ಲಿಯವರೆಗೆ ಆತ್ಮವು ಪ್ರವೇಶವಾಗುವುದಿಲ್ಲ ಅಲ್ಲಿಯವರೆಗೆ
ಯಾವ ಕೆಲಸಕ್ಕೂ ಬರುವುದಿಲ್ಲ. ಎಷ್ಟೊಂದು ಅಂತರವಿದೆ! ಮಾತನಾಡುವುದು, ನಡೆಸುವುದು ಆತ್ಮವೇ ಆಗಿದೆ.
ಅದು ಇಷ್ಟೊಂದು ಸೂಕ್ಷ್ಮಬಿಂದುವಾಗಿದೆ, ಅದು ಎಂದಿಗೂ ಚಿಕ್ಕದು-ದೊಡ್ಡದು ಆಗುವುದಿಲ್ಲ, ಅದು
ಎಂದಿಗೂ ವಿನಾಶವಾಗುವುದಿಲ್ಲ. ಈಗ ಪರಮಾತ್ಮ ತಂದೆಯು ತಿಳಿಸಿದ್ದಾರೆ - ನಾನು ಅವಿನಾಶಿಯಾಗಿದ್ದೇನೆ,
ಈ ಶರೀರವು ವಿನಾಶಿಯಾಗಿದೆ. ಇದರಲ್ಲಿ ನಾನು ಪ್ರವೇಶಿಸಿ ಪಾತ್ರವನ್ನಭಿನಯಿಸುತ್ತೇನೆ. ಈ
ಮಾತುಗಳನ್ನು ನೀವೀಗ ಚಿಂತನೆಯಲ್ಲಿ ತರುತ್ತೀರಿ. ಮೊದಲಂತೂ ಆತ್ಮನನ್ನೂ ತಿಳಿದಿರಲಿಲ್ಲ,
ಪರಮಾತ್ಮನನ್ನೂ ತಿಳಿದಿರಲಿಲ್ಲ. ಕೇವಲ ಪರಮಪಿತ ಪರಮಾತ್ಮನೆಂದು ಹೇಳುತ್ತಿದ್ದೆವಷ್ಟೇ. ಆತ್ಮನೆಂದು
ಹೇಳುತ್ತಿದ್ದೆವು ಆದರೆ ನಂತರ ನೀವು ಪರಮಾತ್ಮನೆಂದು ಯಾರೋ ಹೇಳಿದರು, ಇದನ್ನು ಯಾರು ಹೇಳಿದರು? ಇದು
ಭಕ್ತಿಮಾರ್ಗದ ಗುರು ಹಾಗೂ ಶಾಸ್ತ್ರಗಳಲ್ಲಿ ಹೇಳಿದ್ದಾರೆ. ಸತ್ಯಯುಗದಲ್ಲಂತೂ ಯಾರೂ ಹೇಳುವುದಿಲ್ಲ.
ಈಗ ತಂದೆಯು ತಿಳಿಸುತ್ತಾರೆ - ನೀವು ನನ್ನ ಮಕ್ಕಳಾಗಿದ್ದೀರಿ. ಆತ್ಮವು ಸ್ವಾಭಾವಿಕವಾದದ್ದು ಈ
ಶರೀರವು ಅಸ್ವಾಭಾವಿಕ, ಮಣ್ಣಿನಿಂದ ಮಾಡಲ್ಪಟ್ಟಿದೆ. ಯಾವಾಗ ಶರೀರದಲ್ಲಿ ಆತ್ಮವಿರುತ್ತದೆಯೋ ಆಗ
ಮಾತನಾಡುತ್ತದೆ. ಈಗ ನೀವು ಮಕ್ಕಳಿಗೆ ತಿಳಿದಿದೆ, ಈಗ ನಾವಾತ್ಮಗಳಿಗೆ ತಂದೆಯು ಬಂದು ತಿಳಿಸುತ್ತಾರೆ.
ನಿರಾಕಾರ ಶಿವತಂದೆಯು ಸಂಗಮಯುಗದಲ್ಲಿ ಈ (ಬ್ರಹ್ಮಾ) ಶರೀರದ ಮೂಲಕ ಬಂದು ಹೇಳುತ್ತಾರೆ. ಈ
ಕಣ್ಣುಗಳಂತೂ ಶರೀರದಲ್ಲಿರುತ್ತವೆ, ಈಗ ತಂದೆಯು ಜ್ಞಾನದ ಚಕ್ಷುವನ್ನು ಕೊಡುತ್ತಾರೆ. ಆತ್ಮನಲ್ಲಿ
ಜ್ಞಾನವಿಲ್ಲದಿದ್ದಾಗ ಅಜ್ಞಾನದ ಚಕ್ಷು ಇರುತ್ತದೆ. ತಂದೆಯು ಬಂದಾಗ ಆತ್ಮನಿಗೆ ಜ್ಞಾನದ ಚಕ್ಷು
ಸಿಗುತ್ತದೆ. ಆತ್ಮವೇ ಎಲ್ಲವನ್ನೂ ಮಾಡುತ್ತದೆ, ಮತ್ತೆ ಈ ಶರೀರದ ಮೂಲಕ ಎಲ್ಲವನ್ನೂ ಮಾಡಿಸುತ್ತದೆ.
ಈಗ ನೀವು ತಿಳಿದುಕೊಂಡಿದ್ದೀರಿ - ತಂದೆಯು ಈ ಶರೀರವನ್ನು ಧಾರಣೆ ಮಾಡಿದ್ದಾರೆ, ತನ್ನ ರಹಸ್ಯವನ್ನೂ
ಸಹ ತಿಳಿಸುತ್ತಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನೂ ತಿಳಿಸುತ್ತಾರೆ. ಪೂರ್ಣ ನಾಟಕದ
ಜ್ಞಾನವನ್ನೂ ಕೊಡುತ್ತಾರೆ. ಮೊದಲು ನಿಮಗೂ ಸಹ ಏನೂ ತಿಳಿದಿರಲಿಲ್ಲ. ಹಾ! ಅಗತ್ಯವಾಗಿ ಇದು
ನಾಟಕವಾಗಿದೆ, ಸೃಷ್ಟಿಚಕ್ರವು ತಿರುಗುತ್ತದೆ ಎಂದು ಹೇಳುತ್ತಿದ್ದೆವು ಆದರೆ ಇದು ಹೇಗೆ
ತಿರುಗುತ್ತದೆಯೆಂದು ಯಾರೂ ತಿಳಿದುಕೊಂಡಿರಲಿಲ್ಲ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ
ಜ್ಞಾನವು ಈಗ ನಿಮಗೆ ಸಿಗುತ್ತದೆ. ಉಳಿದೆಲ್ಲವೂ ಭಕ್ತಿಯಾಗಿದೆ. ತಂದೆಯೇ ಬಂದು ನಿಮ್ಮನ್ನು ಜ್ಞಾನಿ
ಆತ್ಮಗಳನ್ನಾಗಿ ಮಾಡುತ್ತಾರೆ. ಮೊದಲು ನೀವು ಭಕ್ತಾತ್ಮರಾಗಿದ್ದಿರಿ. ನೀವು ಆತ್ಮಗಳು
ಭಕ್ತಿಮಾಡುತ್ತಿದ್ದಿರಿ, ಈಗ ನೀವಾತ್ಮಗಳೇ ಜ್ಞಾನವನ್ನು ಕೇಳುತ್ತಿದ್ದೀರಿ. ಭಕ್ತಿಗೆ ಕತ್ತಲೆಂದು
ಹೇಳಲಾಗುವುದು. ಭಕ್ತಿಯಿಂದ ಭಗವಂತನು ಸಿಗುತ್ತಾನೆಂದು ಹೇಳಲಾಗುವುದಿಲ್ಲ. ತಂದೆಯು ತಿಳಿಸುತ್ತಾರೆ
- ಭಕ್ತಿಯದ್ದೂ ಪಾತ್ರವಿದೆ, ಜ್ಞಾನದ್ದೂ ಪಾತ್ರವಿದೆ. ನಾವು ಭಕ್ತಿ ಮಾಡುತ್ತಿದ್ದಾಗ ಯಾವ ಸುಖವೂ
ಇರಲಿಲ್ಲ, ಭಕ್ತಿ ಮಾಡುತ್ತಾ ಕಷ್ಟಪಡುತ್ತಿದ್ದೆವೆಂದು ನೀವು ತಿಳಿದುಕೊಂಡಿದ್ದೀರಿ. ತಂದೆಯನ್ನು
ಹುಡುಕುತ್ತಿದ್ದೆವು. ಈಗ ತಿಳಿದುಕೊಂಡಿದ್ದೀರಿ - ಯಜ್ಞ, ತಪ, ದಾನ, ಪುಣ್ಯ ಮೊದಲಾದುವುಗಳನ್ನು
ಮಾಡುತ್ತಿದ್ದೆವು. ಹುಡುಕುತ್ತಾ-ಹುಡುಕುತ್ತಾ ಕಷ್ಟಪಟ್ಟು ಬೇಸರವಾಗಿಬಿಡುತ್ತಾರೆ.
ತಮೋಪ್ರಧಾನರಾಗುತ್ತಾರೆ ಏಕೆಂದರೆ ಇಳಿಯಬೇಕಾಗುತ್ತದೆಯಲ್ಲವೆ. ಅಸತ್ಯ ಕರ್ತವ್ಯವನ್ನು ಮಾಡುವುದು
ಅಪವಿತ್ರರಾಗುವುದಾಗಿದೆ. ಪತಿತರೂ ಆಗಿಬಿಟ್ಟಿರಿ, ಪಾವನರಾಗಲು ಭಕ್ತಿ ಮಾಡುತ್ತಿದ್ದೆವು ಎಂದು
ಹೇಳಲಾಗುವುದಿಲ್ಲ. ಭಗವಂತನಿಂದ ಪಾವನರಾಗದ ವಿನಃ ಪಾವನಪ್ರಪಂಚಕ್ಕೆ ಹೋಗಲು ಸಾಧ್ಯವಿಲ್ಲ.
ಪಾವನರಾಗದೇ ಭಗವಂತನನ್ನು ಮಿಲನ ಮಾಡಲು ಸಾಧ್ಯವಿಲ್ಲವೆಂದು ಹೇಳಲಾಗುವುದಿಲ್ಲ ಏಕೆಂದರೆ ಭಗವಂತನನ್ನು
ಬಂದು ಪಾವನ ಮಾಡು ಎಂದು ಹೇಳುತ್ತೇವೆ. ಪಾವನರಾಗಲು ಪತಿತರೇ ಭಗವಂತನೊಂದಿಗೆ ಮಿಲನ ಮಾಡುತ್ತಾರೆ.
ಪಾವನರೊಂದಿಗೆ ಭಗವಂತನು ಮಿಲನ ಮಾಡುವುದಿಲ್ಲ. ಸತ್ಯಯುಗದಲ್ಲಿ ಈ ಲಕ್ಷ್ಮಿ-ನಾರಾಯಣರೊಂದಿಗೆ ಭಗವಂತ
ಮಿಲನ ಮಾಡುತ್ತಾರೇನು? ಭಗವಂತನೇ ಬಂದು ನೀವು ಪತಿತರನ್ನು ಪಾವನ ಮಾಡುತ್ತಾರೆ ಆಗ ನೀವು
ಪತಿತಶರೀರವನ್ನು ಬಿಟ್ಟುಬಿಡುತ್ತೀರಿ. ಪಾವನರಂತೂ ಈ ತಮೋಪ್ರಧಾನ, ಪತಿತಸೃಷ್ಟಿಯಲ್ಲಿ ಇರಲು
ಸಾಧ್ಯವಿಲ್ಲ. ತಂದೆಯು ನಿಮ್ಮನ್ನು ಪಾವನ ಮಾಡಿ ಮರೆಯಾಗಿಬಿಡುತ್ತಾರೆ. ನಾಟಕದಲ್ಲಿ ಅವರ ಪಾತ್ರವು
ಆಶ್ಚರ್ಯವಾದದ್ದಾಗಿದೆ. ಆತ್ಮನನ್ನು ಈ ಕಣ್ಣುಗಳಿಂದ ನೋಡಲು ಆಗುವುದಿಲ್ಲ, ಒಂದುವೇಳೆ
ಸಾಕ್ಷಾತ್ಕಾರವಾದರೂ ಸಹ ತಿಳಿದುಕೊಳ್ಳುವುದಿಲ್ಲ. ಉಳಿದವರನ್ನಂತೂ ಇವರು ಇಂತಹವರು, ಇವರು
ಇಂತಹವರೆಂದು ತಿಳಿಸಬಹುದು. ನೆನಪು ಮಾಡುತ್ತಾರೆ. ಇಂತಹವರು ಚೈತನ್ಯದಲ್ಲಿ ಸಾಕ್ಷಾತ್ಕಾರವಾಗಲಿ
ಎಂದು ಇಷ್ಟಪಡುತ್ತಾರೆ ಆದರೆ ಅದಕ್ಕೆ ಏನೂ ಅರ್ಥವಿಲ್ಲ. ಒಳ್ಳೆಯದು- ಚೈತನ್ಯದಲ್ಲಿ ನೋಡಿದರೆ ನಂತರ
ಏನಾಯಿತು? ಸಾಕ್ಷಾತ್ಕಾರವಾಗಿ ನಂತರ ಮರೆಯಾಗಿಬಿಡುತ್ತದೆ. ಅಲ್ಪಕಾಲದ ಕ್ಷಣಭಂಗುರ ಸುಖದ ಆಸೆಯು
ಪೂರ್ಣವಾಗುತ್ತದೆ. ಅದನ್ನು ಅರ್ಧಕಲ್ಪದ ಕ್ಷಣಭಂಗುರ ಸುಖವೆಂದು ಕರೆಯಲಾಗುವುದು. ಸಾಕ್ಷಾತ್ಕಾರದ
ಆಸೆಯಿತ್ತು, ಅದು ದೊರೆತಂತಾಯಿತಷ್ಟೆ. ಇಲ್ಲಿ ಪತಿತರಿಂದ ಪಾವನರಾಗುವುದೇ ಮೂಲಮಾತಾಗಿದೆ.
ಪಾವನರಾದರೆ ದೇವತೆಯಾಗಿಬಿಡುತ್ತೀರಿ, ಅಂದರೆ ಸ್ವರ್ಗದಲ್ಲಿ ಹೊರಟುಹೋಗುತ್ತೀರಿ.
ಶಾಸ್ತ್ರಗಳಲ್ಲಿ ಕಲ್ಪದ
ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ. ಕಲಿಯುಗವಿನ್ನೂ ಸುಮಾರು 40,000
ವರ್ಷಗಳಿದೆಯೆಂದು ತಿಳಿದಿದ್ದಾರೆ. ಇಡೀ ಕಲ್ಪವೇ 5000 ವರ್ಷಗಳದ್ದಾಗಿದೆ ಎಂದು ತಂದೆಯು
ತಿಳಿಸುತ್ತಾರೆ ಅಂದಾಗ ಇದರಿಂದ ಮನುಷ್ಯರು ಅಂಧಕಾರದಲ್ಲಿದ್ದಾರಲ್ಲವೆ. ಇದನ್ನು ಘೋರ ಅಂಧಕಾರವೆಂದು
ಕರೆಯಲಾಗುವುದು. ಯಾರಲ್ಲಿಯೂ ಸಹ ಜ್ಞಾನವಿಲ್ಲ, ಅದೆಲ್ಲವೂ ಭಕ್ತಿಯಾಗಿದೆ. ರಾವಣನು ಬಂದಾಗ ಭಕ್ತಿಯೂ
ಸಹ ಅವನ ಜೊತೆಯಿದೆ, ತಂದೆಯು ಬಂದಾಗ ಅವರ ಅವರಲ್ಲಿ ಜ್ಞಾನವಿರುತ್ತದೆ. ತಂದೆಯಿಂದ ಒಂದೇಬಾರಿ
ಜ್ಞಾನದ ಆಸ್ತಿಯು ಸಿಗುತ್ತದೆ, ಮತ್ತೆ-ಮತ್ತೆ ಸಿಗುವುದಿಲ್ಲ. ಅಲ್ಲಿ ನೀವು ಯಾರಿಗೂ ಸಹ
ಜ್ಞಾನವನ್ನು ತಿಳಿಸುವುದಿಲ್ಲ, ಅದರ ಅವಶ್ಯಕತೆಯೂ ಇರುವುದಿಲ್ಲ. ಯಾರು ಅಜ್ಞಾನದಲ್ಲಿರುತ್ತಾರೆಯೋ
ಅವರಿಗಷ್ಟೆ ಜ್ಞಾನ ಸಿಗುತ್ತದೆ. ತಂದೆಯನ್ನಂತೂ ಯಾರೂ ತಿಳಿದುಕೊಂಡಿಲ್ಲ. ತಂದೆಯನ್ನು ನಿಂದನೆ
ಮಾಡದೇ ಯಾವ ಮಾತನ್ನೂ ಮಾತನಾಡುವುದಿಲ್ಲ. ಇದನ್ನೂ ಸಹ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ನೀವು
ಈಶ್ವರ ಸರ್ವವ್ಯಾಪಿಯಲ್ಲವೆಂದು ಹೇಳುತ್ತೀರಿ. ಅವರು ನಾವಾತ್ಮಗಳ ತಂದೆಯಾಗಿದ್ದಾರೆ ಹಾಗೂ ಅವರು
ಪರಮಾತ್ಮನು ಕಲ್ಲು-ಮುಳ್ಳಿನಲ್ಲಿದ್ದಾರೆಂದು ಮನುಷ್ಯರು ಹೇಳಿಬಿಡುತ್ತಾರೆ. ನೀವು ಮಕ್ಕಳು
ತಂದೆಯನ್ನು ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ - ಭಕ್ತಿಯು ಸಂಪೂರ್ಣ ಬೇರೆ ವಸ್ತುವಾಗಿದೆ,
ಅದರಲ್ಲಿ ಸ್ವಲ್ಪವೂ ಸಹ ಜ್ಞಾನವಿರುವುದಿಲ್ಲ. ಇಡೀ ಸಮಯವೇ ಪರಿವರ್ತನೆಯಾಗಿಬಿಡುತ್ತದೆ. ಭಗವಂತನ
ಹೆಸರು ಬದಲಾವಣೆಯಾಗಿ ನಂತರ ಮನುಷ್ಯರ ಹೆಸರು ಬದಲಾಗುತ್ತದೆ. ಮೊದಲು ದೇವಿ-ದೇವತೆಯೆಂದು
ಕರೆಯಲಾಗುವುದು ನಂತರ ಕ್ಷತ್ರಿಯ, ವೈಶ್ಯ, ಶೂದ್ರರೆಂದು ಕರೆಯಲಾಗುವುದು. ಅವರು ದೈವೀಗುಣವುಳ್ಳ
ಮನುಷ್ಯರು ಹಾಗೂ ಇವರು ಅಸುರೀಗುಣವುಳ್ಳ ಮನುಷ್ಯರಾಗಿದ್ದಾರೆ, ಇವರು (ಮನುಷ್ಯರು) ಖಂಡಿತವಾಗಿ
ಅಪವಿತ್ರರಾಗಿದ್ದಾರೆ. ಗುರುನಾನಕ್ ಸಹ ಹೇಳಿದ್ದಾರೆ - ಅಶಂಕ್ ಚೋರ್ (ನಿಸ್ಸಂದೇಹವಾದ ಕಳ್ಳರು).....
ಆಗಿದ್ದಾರೆ. ಮನುಷ್ಯರಿಗೇನಾದರೂ ಈ ರೀತಿ ಹೇಳಿದರೆ ನಿಂದನೆ ಮಾಡುತ್ತಿದ್ದೀರೇನು ಎಂದು ತಕ್ಷಣ
ಹೇಳಿಬಿಡುತ್ತಾರೆ ಆದರೆ ತಂದೆಯೂ ಸಹ ತಿಳಿಸುತ್ತಾರೆ - ಈಗ ಎಲ್ಲರೂ ಅಸುರೀ ಸಂಪ್ರದಾಯದವರಾಗಿದ್ದಾರೆ,
ನಿಮಗೆ ಸ್ಪಷ್ಟಮಾಡಿ ತಿಳಿಸುತ್ತಾರೆ - ಇದು ರಾವಣ ಸಂಪ್ರದಾಯ ಮತ್ತು ಇದು ರಾಮನ ಸಂಪ್ರದಾಯ. ನಮಗೆ
ರಾಮರಾಜ್ಯವು ಬೇಕೆಂದು ಗಾಂಧೀಜಿಯು ಹೇಳುತ್ತಿದ್ದರು. ರಾಮರಾಜ್ಯದಲ್ಲಿ ಎಲ್ಲರೂ
ನಿರ್ವಿಕಾರಿಗಳಿದ್ದಾರೆ, ರಾವಣರಾಜ್ಯದಲ್ಲಿ ಎಲ್ಲರೂ ವಿಕಾರಿಗಳಾಗಿದ್ದಾರೆ. ಇದರ ಹೆಸರೂ ವೇಶ್ಯಾಲಯ,
ಭಯಂಕರ ನರಕವಾಗಿದೆ. ಈ ಸಮಯದಲ್ಲಿ ಮನುಷ್ಯರು ವಿಷಯವೈತರಣೀ ನದಿಯಲ್ಲಿ ಮುಳುಗಿದ್ದಾರೆ. ಮನುಷ್ಯರು,
ಪ್ರಾಣಿಗಳೆಲ್ಲರೂ ಒಂದೇ ಸಮಾನವಾಗಿದ್ದಾರೆ. ಇಂದಿನ ಮನುಷ್ಯರಿಗೆ ಯಾವ ಮಹಿಮೆಯೂ ಇಲ್ಲ.
ಪಂಚವಿಕಾರಗಳ ಮೇಲೆ ನೀವು ಮಕ್ಕಳು ವಿಜಯ ಪಡೆದು ಮನುಷ್ಯರಿಂದ ದೇವತಾಪದವಿಯನ್ನು ಪಡೆಯುತ್ತೀರಿ.
ಉಳಿದವರೆಲ್ಲರೂ ನಾಶವಾಗುತ್ತಾರೆ, ದೇವತೆಗಳೆಲ್ಲರೂ ಸತ್ಯಯುಗದಲ್ಲಿರುತ್ತಾರೆ ಈಗ ಈ ಕಲಿಯುಗದಲ್ಲಿ
ಎಲ್ಲರೂ ಅಸುರರಿದ್ದಾರೆ. ಅಂದಾಗ ಅಸುರರ ಚಿಹ್ನೆ ಏನಾಗಿದೆ? ಪಂಚವಿಕಾರಗಳು. ದೇವತೆಗಳಿಗೆ ಸಂಪೂರ್ಣ
ನಿರ್ವಿಕಾರಿಗಳೆಂದು ಕರೆಯಲಾಗುವುದು, ಅಸುರರಿಗೆ ಸಂಪೂರ್ಣ ವಿಕಾರಿಗಳೆಂದು ಕರೆಯಲಾಗುವುದು. ಅವರು
16 ಕಲಾಸಂಪೂರ್ಣರಾಗಿದ್ದಾರೆ ಹಾಗೂ ಇವರು ಕಲಾಹೀನರಾಗಿದ್ದಾರೆ, ಎಲ್ಲರ ಕಲೆಯನ್ನೂ ಮಾಯೆಯು
ಕಸಿದುಕೊಂಡುಬಿಟ್ಟಿದೆ. ಈಗ ಈ ತಂದೆಯು ಕುಳಿತು ಮಕ್ಕಳಿಗೆ ತಿಳಿಸಿಕೊಡುತ್ತಾರೆ. ತಂದೆಯು ಹಳೆಯ,
ಅಸುರೀ ಪ್ರಪಂಚವನ್ನು ಪರಿವರ್ತನೆ ಮಾಡಲು ಬರುತ್ತಾರೆ. ರಾವಣರಾಜ್ಯ ವೇಶ್ಯಾಲಯವನ್ನು
ಶಿವಾಲಯವನ್ನಾಗಿ ಮಾಡುತ್ತಾರೆ. ಅವರಂತೂ ಇಲ್ಲಿಯೇ ತ್ರಿಮೂರ್ತಿ ಹೌಸ್, ತ್ರಿಮೂರ್ತಿ ರಸ್ತೆಯೆಂದು
ಹೆಸರನ್ನಿಟ್ಟಿದ್ದಾರೆ. ಮೊದಲೆಲ್ಲಾ ಈ ಹೆಸರುಗಳಿತ್ತೇನು? ಈಗ ಆಗಬೇಕಾಗಿರುವುದೇನು? ಇಡೀ ಪ್ರಪಂಚವು
ಯಾರದ್ದಾಗಿದೆ? ಪರಮಾತ್ಮನದಲ್ಲವೆ. ಪರಮಾತ್ಮನ ಪ್ರಪಂಚದಲ್ಲಿ ಅರ್ಧಕಲ್ಪ ಪವಿತ್ರ, ಅರ್ಧಕಲ್ಪ
ಅಪವಿತ್ರರಾಗಿರುತ್ತಾರೆ. ತಂದೆಗೆ ರಚಯಿತನೆಂದು ಕರೆಯಲಾಗುತ್ತದೆಯಲ್ಲವೆ ಅಂದಾಗ ಈ ಪ್ರಪಂಚವು ಅವರದೇ
ಆಯಿತಲ್ಲವೆ. ತಂದೆಯು ತಿಳಿಸುತ್ತಾರೆ - ನಾನೇ ಮಾಲೀಕನಾಗಿದ್ದೇನೆ, ನಾನೇ ಬೀಜರೂಪ, ಚೈತನ್ಯ,
ಜ್ಞಾನಸಾಗರನಾಗಿದ್ದೇನೆ. ನನ್ನಲ್ಲಿಯೇ ಎಲ್ಲಾ ಜ್ಞಾನವಿದೆ, ಬೇರೆ ಯಾರಲ್ಲಿಯೂ ಇಲ್ಲ. ನೀವು
ತಿಳಿಸಿಕೊಡಬಹುದು - ಈ ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ಜ್ಞಾನವು ತಂದೆಯಲ್ಲಿಯೇ ಇದೆ.
ಉಳಿದೆಲ್ಲವೂ ಸುಳ್ಳಾಗಿದೆ. ಮುಖ್ಯವಾಗಿ ಸುಳ್ಳು ಬಹಳ ಕೆಟ್ಟದ್ದಾಗಿದೆ ಅದಕ್ಕಾಗಿ ತಂದೆಯು ದೂರನ್ನು
ಕೊಡುತ್ತಾರೆ. ನೀವು ನನ್ನನ್ನು ಕಲ್ಲು-ಮುಳ್ಳು, ನಾಯಿ-ಬೆಕ್ಕು ಎಲ್ಲರದಲ್ಲಿಯೂ ಇದ್ದೇನೆಂದು
ತಿಳಿದು ಕುಳಿತಿದ್ದೀರಿ ಆದುದರಿಂದ ನೀವೆಷ್ಟು ದುರ್ದೆಶೆಯಲ್ಲಿ ಬಂದಿದ್ದೀರಿ!
ಹೊಸ ಪ್ರಪಂಚದ
ಮನುಷ್ಯರಿಗೂ, ಹಳೆಯ ಪ್ರಪಂಚದ ಮನುಷ್ಯರಿಗೂ ಬಹಳ ವ್ಯತ್ಯಾಸವಿದೆ. ಅರ್ಧಕಲ್ಪದಿಂದ ಹಿಡಿದು
ಅಪವಿತ್ರ ಮನುಷ್ಯರು ಪಾವನ ದೇವತೆಗಳ ಮುಂದೆ ತಲೆಬಾಗುತ್ತಾರೆ. ಇದನ್ನೂ ಸಹ ಮಕ್ಕಳಿಗೆ ತಿಳಿಸಲಾಗಿದೆ
- ಮೊಟ್ಟಮೊದಲು ಶಿವನ ಪೂಜೆಯಾಗುತ್ತದೆ. ಅವರು ನಿಮ್ಮನ್ನು ಪೂಜಾರಿಯಿಂದ ಪೂಜ್ಯರನ್ನಾಗಿ
ಮಾಡುತ್ತಾರೆ. ರಾವಣನು ನಿಮ್ಮನ್ನು ಪೂಜ್ಯರಿಂದ ಪೂಜಾರಿಯನ್ನಾಗಿ ಮಾಡುತ್ತಾನೆ ನಂತರ ತಂದೆಯು
ನಾಟಕದ ಯೋಜನೆಯನುಸಾರವಾಗಿ ನಿಮ್ಮನ್ನು ಪೂಜ್ಯರನ್ನಾಗಿ ಮಾಡುತ್ತಾರೆ. ರಾವಣ ಮುಂತಾದವರ ಹೆಸರುಗಳೂ
ಇದೆಯಲ್ಲವೆ. ದಸರಾ ಹಬ್ಬವನ್ನು ಯಾವಾಗ ಆಚರಿಸುತ್ತಾರೆಯೋ ಆಗ ಹೊರದೇಶದಿಂದಲೂ ಸಹ ಎಷ್ಟೊಂದು
ಜನರನ್ನು ಕರೆಯುತ್ತಾರೆ ಆದರೆ ಅದರ ಬಗ್ಗೆ ಸ್ವಲ್ಪವೂ ಅರ್ಥವನ್ನೇ ತಿಳಿದುಕೊಂಡಿಲ್ಲ. ದೇವತೆಗಳಿಗೆ
ಎಷ್ಟೊಂದು ನಿಂದನೆ ಮಾಡುತ್ತಾರೆ. ಆದರೆ ಸ್ವಲ್ಪವೂ ಇಂತಹ ಮಾತುಗಳಿಲ್ಲ. ಹೇಗೆ ಈಶ್ವರನಿಗೆ
ನಾಮ-ರೂಪದಿಂದ ಭಿನ್ನ ಎಂದು ಹೇಳುತ್ತಾರೆಯೋ ಹಾಗೆಯೇ ಆಟವನ್ನೆಲ್ಲಾ ಮಾಡುತ್ತಾರೆ ಆದರೆ ಅದೇನೂ
ಇಲ್ಲವೇ ಇಲ್ಲ. ಇದೆಲ್ಲವೂ ಮನುಷ್ಯರ ಬುದ್ಧಿಯಾಗಿದೆ. ಮನುಷ್ಯರ ಮತವನ್ನು ಅಸುರೀ ಮತವೆಂದು
ಕರೆಯಲಾಗುವುದು. ಯಥಾರಾಜ-ರಾಣಿ ತಥಾ ಪ್ರಜೆಗಳೆಲ್ಲರೂ ಅದೇ ರೀತಿಯಾಗಿಬಿಡುತ್ತಾರೆ. ಇದನ್ನು ಭೂತಗಳ
ಪ್ರಪಂಚವೆಂದು ಕರೆಯಲಾಗುವುದು. ಎಲ್ಲರೂ ಒಬ್ಬರಿಗೊಬ್ಬರು ಬೈಯುತ್ತಿರುತ್ತಾರೆ ಆದರೆ ತಂದೆಯು
ತಿಳಿಸುತ್ತಾರೆ - ಮಕ್ಕಳೇ, ಯಾವಾಗ ಯೋಗದಲ್ಲಿ ಕುಳಿತುಕೊಳ್ಳುತ್ತೀರೋ ಆಗ ತಮ್ಮನ್ನು ಆತ್ಮನೆಂದು
ತಿಳಿದು ತಂದೆಯನ್ನು ನೆನಪು ಮಾಡಿ. ನೀವು ಅಜ್ಞಾನದಲ್ಲಿದ್ದಾಗ ಪರಮಾತ್ಮನನ್ನು ಮೇಲಿದ್ದಾರೆಂದು
ತಿಳಿದಿದ್ದಿರಿ, ಈಗ ತಂದೆಯು ಇಲ್ಲಿಗೆ ಬಂದಿದ್ದಾರೆಂದು ತಿಳಿದುಕೊಂಡಿದ್ದೀರಿ. ನೀವು ತಂದೆಯನ್ನು
ಈ (ಬ್ರಹ್ಮಾ) ಶರೀರದಲ್ಲಿ ಕರೆದಿದ್ದೀರಿ. ನೀವು ಯಾವಾಗ ನಿಮ್ಮ-ನಿಮ್ಮ ಸೇವಾಕೇಂದ್ರಗಳಲ್ಲಿ
ಕುಳಿತುಕೊಳ್ಳುತ್ತೀರಿ ಆಗ ಮಧುಬನದಲ್ಲಿ ಇವರ ಶರೀರದಲ್ಲಿ ತಂದೆಯಿದ್ದಾರೆಂದು ನೀವು ತಿಳಿಯುತ್ತೀರಿ.
ಹೇ ಭಗವಂತ...... ಎಂದು ಭಕ್ತಿಮಾರ್ಗದಲ್ಲಿ ಪರಮಾತ್ಮನು ಮೇಲಿದ್ದಾರೆಂದು ಒಪ್ಪಿಕೊಳ್ಳುತ್ತಿದ್ದೆವು.
ಈಗ ನೀವು ತಂದೆಯನ್ನು ಎಲ್ಲಿದ್ದಾರೆಂದು ನೆನಪು ಮಾಡುತ್ತೀರಿ? ಕುಳಿತು ಏನು ಮಾಡುತ್ತೀರಿ? ನೀವು
ತಿಳಿದುಕೊಂಡಿದ್ದೀರಿ - ಅಗತ್ಯವಾಗಿ ಇಲ್ಲಿಯೇ ನೆನಪು ಮಾಡುತೀರಿ. ಶಿವತಂದೆಯು ಬ್ರಹ್ಮನ
ತನುವಿನಲ್ಲಿದ್ದಾಗ ಮೇಲಂತೂ ಇರುವುದಿಲ್ಲ. ಪುರುಷೋತ್ತಮ ಸಂಗಮಯುಗದಲ್ಲಿ ಇಲ್ಲಿಗೆ ಬಂದಿದ್ದಾರೆ.
ತಂದೆಯು ತಿಳಿಸುತ್ತಾರೆ - ನಿಮ್ಮನ್ನು ಇಷ್ಟೊಂದು ಶ್ರೇಷ್ಠರನ್ನಾಗಿ ಮಾಡಲು ನಾನು ಇಲ್ಲಿಗೆ
ಬಂದಿದ್ದೇನೆ. ನೀವು ಮಕ್ಕಳು ಇಲ್ಲಿ ನೆನಪು ಮಾಡುತ್ತೀರಿ, ಭಕ್ತರು ಮೇಲೆ ನೆನಪು ಮಾಡುತ್ತಾರೆ.
ನೀವು ಒಂದುವೇಳೆ ವಿದೇಶದಲ್ಲಿದ್ದರೂ ಸಹ ಬ್ರಹ್ಮನ ತನುವಿನಲ್ಲಿ ಶಿವತಂದೆಯಿದ್ದಾರೆಂದು ಹೇಳುತ್ತೀರಿ.
ಅವಶ್ಯವಾಗಿ ಶರೀರವು ಬೇಕಲ್ಲವೆ. ನೀವು ಎಲ್ಲಿಯೇ ಕುಳಿತಿದ್ದರೂ ಸಹ ಇಲ್ಲಿಯೇ ನೆನಪು ಮಾಡುತ್ತೀರಿ.
ಬ್ರಹ್ಮನ ಶರೀರದಲ್ಲಿ ತಂದೆಯನ್ನು ನೆನಪು ಮಾಡಬೇಕಾಗುತ್ತದೆ. ಕೆಲವರು ಬುದ್ಧಿಹೀನರು ತಂದೆಯನ್ನು
ಒಪ್ಪಿಕೊಳ್ಳುವುದಿಲ್ಲ. ತಂದೆಯು ಬ್ರಹ್ಮನನ್ನು ನೆನಪು ಮಾಡಬೇಡಿ ಎಂದು ಹೇಳುವುದಿಲ್ಲ,
ಬ್ರಹ್ಮನಿಲ್ಲದೆ ಶಿವತಂದೆಯ ನೆನಪು ಹೇಗೆ ಬರುತ್ತದೆ? ನಾನು ಇವರ ಶರೀರದಲ್ಲಿದ್ದೇನೆಂದು
ಹೇಳುತ್ತಾರೆ. ಇವರಲ್ಲಿ (ಬ್ರಹ್ಮಾ) ನನ್ನನ್ನು ನೆನಪು ಮಾಡಿ ಆದುದರಿಂದ ನೀವು ತಂದೆ ಹಾಗೂ ದಾದಾ
ಇಬ್ಬರನ್ನೂ ನೆನಪು ಮಾಡುತ್ತೀರಿ. ಇವರ ಆತ್ಮವು ತನ್ನದೇ ಆಗಿದೆಯೆಂದು ಬುದ್ಧಿಯಲ್ಲಿದೆ. ಶಿವತಂದೆಯ
ಆತ್ಮನಿಗೆ ಶರೀರವಿಲ್ಲ. ನಾನು ಈ ಪ್ರಕೃತಿಯ ಆಧಾರವನ್ನು ಪಡೆಯುತ್ತೇನೆಂದು ತಂದೆಯು ಹೇಳುತ್ತಾರೆ.
ತಂದೆಯು ಕುಳಿತು ಇಡೀ ಬ್ರಹ್ಮಾಂಡ, ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ.
ಬೇರೆ ಯಾರೂ ಸಹ ಬ್ರಹ್ಮಾಂಡವನ್ನು ತಿಳಿದುಕೊಂಡೇ ಇಲ್ಲ. ತತ್ವದಲ್ಲಿ ನಾವು ಹಾಗೂ ನೀವು ಇರುತ್ತೇವೆ.
ಶ್ರೇಷ್ಠತಂದೆ, ಶ್ರೇಷ್ಠರಾದ ಆತ್ಮಗಳಿರುವಂತಹ ಆ ಬ್ರಹ್ಮಲೋಕ ಶಾಂತಿಧಾಮವಾಗಿದೆ. ಶಾಂತಿಧಾಮ
ಎನ್ನುವುದು ಬಹಳ ಮಧುರವಾದ ಹೆಸರಾಗಿದೆ. ಈ ಎಲ್ಲಾ ಮಾತುಗಳು ನಿಮ್ಮ ಬುದ್ಧಿಯಲ್ಲಿದೆ. ನಾವು ಮೂಲತಃ
ಬ್ರಹ್ಮ್ತತ್ವ ನಿವಾಸಿಗಳಾಗಿದ್ದೆವು, ಅದನ್ನು ನಿರ್ವಾಣಧಾಮ, ವಾನಪ್ರಸ್ಥ ಎಂದೂ ಸಹ ಕರೆಯಲಾಗುವುದು.
ಈ ಮಾತುಗಳು ಈಗ ನಿಮ್ಮ ಬುದ್ಧಿಯಲ್ಲಿದೆ. ಯಾವಾಗ ಭಕ್ತಿಯಿರುತ್ತದೆಯೋ ಆಗ ಜ್ಞಾನದ
ಅಕ್ಷರವಿರುವುದಿಲ್ಲ. ಯಾವಾಗ ಪರಿವರ್ತನೆಯಾಗುತ್ತದೆಯೋ ಆಗ ಇದನ್ನು ಪುರುಷೋತ್ತಮ ಸಂಗಮಯುಗವೆಂದು
ಕರೆಯಲಾಗುವುದು. ಹಳೆಯ ಪ್ರಪಂಚದಲ್ಲಿ ಅಸುರರಿರುತ್ತಾರೆ, ಹೊಸಪ್ರಪಂಚದಲ್ಲಿ ದೇವತೆಗಳಿರುತ್ತಾರೆ
ಆದ್ದರಿಂದ ಅದನ್ನು ಪರಿವರ್ತನೆ ಮಾಡಲು ತಂದೆಯು ಬರಬೇಕಾಗುವುದು. ಸತ್ಯಯುಗದಲ್ಲಿ ನಿಮಗೇನೂ
ತಿಳಿಯುವುದಿಲ್ಲ, ಈಗ ನೀವು ಕಲಿಯುಗದಲ್ಲಿರುವುದರಿಂದ ಎಲ್ಲವೂ ತಿಳಿದಿದೆ. ನೀವು
ಸತ್ಯಯುಗದಲ್ಲಿದ್ದಾಗಲೂ ಈ ಹಳೆಯ ಪ್ರಪಂಚದ ಬಗ್ಗೆ ಏನೂ ತಿಳಿದಿರುವುದಿಲ್ಲ. ಈಗ ಹಳೆಯ
ಪ್ರಪಂಚದಲ್ಲಿರುವುದರಿಂದ ಹೊಸಪ್ರಪಂಚದ ಬಗ್ಗೆಯೂ ತಿಳಿಯುವುದಿಲ್ಲ. ಹೊಸಪ್ರಪಂಚವು ಯಾವಾಗ ಇತ್ತೆಂದು
ತಿಳಿಯದು. ಅವರು ಲಕ್ಷಾಂತರ ವರ್ಷಗಳೆಂದು ಹೇಳಿಬಿಡುತ್ತಾರೆ. ತಂದೆಯು ಈ ಸಂಗಮದಲ್ಲಿ ಕಲ್ಪ-ಕಲ್ಪವೂ
ಬರುತ್ತಾರೆ, ಬಂದು ಈ ಭಿನ್ನತೆಯುಳ್ಳ ವೃಕ್ಷದ ರಹಸ್ಯವನ್ನು ತಿಳಿಸುತ್ತಾರೆ ಹಾಗೂ ಈ ಚಕ್ರವು ಹೇಗೆ
ತಿರುಗುತ್ತದೆ ಎಂಬುದನ್ನು ನೀವು ಮಕ್ಕಳಿಗೆ ತಿಳಿಸುತ್ತಾರೆಂದು ನೀವು ತಿಳಿದುಕೊಂಡಿದ್ದೀರಿ.
ತಿಳಿಸುವುದೇ ನಿಮ್ಮ ಕರ್ತವ್ಯವಾಗಿದೆ, ಈಗ ಒಬ್ಬೊಬ್ಬರಿಗೂ ತಿಳಿಸಲು ಸಮಯ ಹಿಡಿಸುತ್ತದೆ ಆದುದರಿಂದ
ನೀವು ಅನೇಕರಿಗೆ ತಿಳಿಸುತ್ತೀರಿ. ಬಹಳಷ್ಟು ಮಂದಿ ತಿಳಿದುಕೊಳ್ಳುತ್ತಾರೆ. ಈ ಮಧುರಾತಿ ಮಧುರ
ಮಾತುಗಳನ್ನು ನಂತರ ಅನೇಕರಿಗೆ ತಿಳಿಸಬೇಕು. ನೀವು ಪ್ರದರ್ಶನಿ ಮೊದಲಾದುವುಗಳಲ್ಲಿ ಶಿವಜಯಂತಿಯನ್ನು
ಕುರಿತು ಅನೇಕರನ್ನು ಕರೆದು ತಿಳಿಸುತ್ತೀರಲ್ಲವೆ. ಈ ಆಟದ ಪುನರಾವರ್ತನೆಯ ಸಮಯ ಎಷ್ಟಿದೆ ಎಂದು
ಯಥಾರ್ಥವಾಗಿ ನೀವು ತಿಳಿಸುತ್ತೀರಿ. ಇದೆಲ್ಲವೂ ವಿಷಯಗಳಾಗಿವೆ, ಇವುಗಳನ್ನು ನಾವು ತಿಳಿಸುತ್ತೇವೆ.
ನಿಮಗೆ ತಂದೆಯು ತಿಳಿಸುತ್ತಾರಲ್ಲವೆ, ಇದರಿಂದ ನೀವು ದೇವತೆಯಾಗಿಬಿಡುತ್ತೀರಿ. ಹೇಗೆ ನೀವು
ತಿಳಿದುಕೊಂಡು ದೇವತೆಯಾಗುತ್ತೀರೋ ನಂತರ ಅನ್ಯರನ್ನೂ ಮಾಡುತ್ತೀರಿ. ತಂದೆಯು ನಮಗೆ ಇದನ್ನು
ತಿಳಿಸಿದ್ದಾರೆ. ನಾವು ಯಾರ ನಿಂದನೆಯನ್ನೂ ಮಾಡುವುದಿಲ್ಲ, ಜ್ಞಾನವು ಸದ್ಗತಿ ಮಾರ್ಗವಾಗಿದೆ. ಒಬ್ಬ
ಸದ್ಗುರು ಪಾರುಮಾಡುವವರಾಗಿದ್ದಾರೆಂದು ನಾವು ತಿಳಿಸುತ್ತೇವೆ. ಇಂತಿಂತಹ ಮುಖ್ಯವಾದ ಮಾತುಗಳನ್ನು
ತೆಗೆದು ತಿಳಿಸಿಕೊಡಿ. ಈ ಎಲ್ಲಾ ಜ್ಞಾನವು ತಂದೆಯ ವಿನಃ ಬೇರೆ ಯಾರೂ ಸಹ ತಿಳಿಸಲು ಸಾಧ್ಯವಿಲ್ಲ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಪೂಜಾರಿಯಿಂದ
ಪೂಜ್ಯರಾಗಲು ಸಂಪೂರ್ಣ ನಿರ್ವಿಕಾರಿಗಳಾಗಬೇಕು. ಜ್ಞಾನವಂತರಾಗಿ ತಮ್ಮನ್ನು ತಾವೇ ಪರಿವರ್ತನೆ
ಮಾಡಿಕೊಳ್ಳಬೇಕು. ಅಲ್ಪಕಾಲದ ಸುಖದ ಹಿಂದೆ ಹೋಗಬಾರದು.
2. ತಂದೆ (ಬಾಪ್) ಹಾಗೂ
ದಾದಾ ಇಬ್ಬರನ್ನೂ ನೆನಪು ಮಾಡಬೇಕು. ಬ್ರಹ್ಮನ ವಿನಃ ಶಿವತಂದೆಯ ನೆನಪು ಬರುವುದಿಲ್ಲ. ಭಕ್ತಿಯಲ್ಲಿ
ಮೇಲೆ ನೆನಪು ಮಾಡಿದಿರಿ, ಈಗ ಬ್ರಹ್ಮನ ತನುವಿನಲ್ಲಿ ಬಂದಿರುವುದರಿಂದ ಇಬ್ಬರ ನೆನಪೂ ಬರಬೇಕಾಗಿದೆ.
ವರದಾನ:
ಪ್ರತಿ
ಕರ್ಮದಲ್ಲಿ ವಿಜಯದ ಅಟಲ ನಿಶ್ಚಯ ಮತ್ತು ನಶೆ ಇಡುವಂತಹ ಅಧಿಕಾರಿ ಆತ್ಮ ಭವ.
ವಿಜಯ ನಮ್ಮ ಜನ್ಮ ಸಿದ್ಧ
ಅಧಿಕಾರವಾಗಿದೆ- ಈ ಸ್ಮೃತಿಯಿಂದ ಸದಾ ಹಾರುತ್ತಾ ಹೋಗಿ. ಏನೇ ಆಗಲಿ - ಇದನ್ನು ಸ್ಮೃತಿಯಲ್ಲಿ
ತಂದುಕೊಳ್ಳಿ ನಾನು ಸದಾ ವಿಜಯಿಯಾಗಿದ್ದೇನೆ. ಏನೇ ಆಗಲಿ- ಈ ನಿಶ್ಚಯ ಅಟಲವಾಗಿರಲಿ. ನಶೆಯ ಆಧಾರವೇ
ಆಗಿದೆ ನಿಶ್ಚಯ. ನಿಶ್ಚಯ ಕಡಿಮೆಯಿದ್ದಾಗ ನಶೆ ಕಡಿಮೆ. ಆದ್ದರಿಂದ ಹೇಳಲಾಗುವುದು ನಿಶ್ಚಯ ಬುದ್ಧಿ
ವಿಜಯಿ. ನಿಶ್ಚಯದಲ್ಲಿ ಕೆಲವೊಮ್ಮೆ ಎಂದು ಹೇಳುವವರಾಗ ಬೇಡಿ. ಅವಿನಾಶಿ ತಂದೆ ಇದ್ದಾಗ ಅವಿನಾಶಿ
ಪ್ರಾಪ್ತಿಯ ಅಧಿಕಾರಿಗಳಾಗಿ. ಪ್ರತೀ ಕರ್ಮದಲ್ಲಿ ವಿಜಯದ ನಿಶ್ಚಯ ಮತ್ತು ನಶೆ ಇರಬೇಕು.
ಸ್ಲೋಗನ್:
ತಂದೆಯ ಸ್ನೇಹದ
ಛತ್ರಛಾಯೆಯ ಕೆಳಗೆ ಇದ್ದಾಗ ಯಾವುದೇ ವಿಘ್ನ ನಿಲ್ಲಲು ಸಾಧ್ಯವಿಲ್ಲ.