10.02.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಿಮಗೆ
ತಂದೆಯ ಮೂಲಕ ಯಾವ ಅದ್ವೈತ ಮತವು ಸಿಗುತ್ತಿದೆಯೋ ಆ ಮತದಂತೆ ನಡೆದು ಕಲಿಯುಗೀ ಮನುಷ್ಯರನ್ನು
ಸತ್ಯಯುಗೀ ದೇವತೆಗಳನ್ನಾಗಿ ಮಾಡುವ ಶ್ರೇಷ್ಠ ಕರ್ತವ್ಯ ಮಾಡಬೇಕಾಗಿದೆ”
ಪ್ರಶ್ನೆ:
ಎಲ್ಲಾ
ಮನುಷ್ಯಾತ್ಮರು ಏಕೆ ದುಃಖಿಗಳಾಗಿದ್ದಾರೆ, ಅದಕ್ಕೆ ಮೂಲಕಾರಣವೇನು?
ಉತ್ತರ:
ರಾವಣನು
ಎಲ್ಲರನ್ನು ಶ್ರಾಪಿತರನ್ನಾಗಿ ಮಾಡಿಬಿಟ್ಟಿದ್ದಾರೆ ಆದ್ದರಿಂದ ಎಲ್ಲರೂ ದುಃಖಿಯಾಗಿದ್ದಾರೆ, ತಂದೆಯು
ಆಸ್ತಿಯನ್ನು ಕೊಡುತ್ತಾರೆ, ರಾವಣನು ಶಾಪವನ್ನು ಕೊಡುತ್ತಾನೆ - ಇದೂ ಸಹ ಪ್ರಪಂಚಕ್ಕೆ ಗೊತ್ತಿದೆ.
ತಂದೆಯು ಆಸ್ತಿಯನ್ನು ಕೊಟ್ಟರು ಆದ್ದರಿಂದಲೇ ಭಾರತವಾಸಿಗಳು ಇಷ್ಟೊಂದು ಸುಖಿ-ಸ್ವರ್ಗದ ಮಾಲೀಕರಾದರು,
ಪೂಜ್ಯರಾದರು. ಶ್ರಾಪಿತರಾಗುವುದರಿಂದ ಪೂಜಾರಿಗಳಾಗಿಬಿಡುತ್ತಾರೆ.
ಓಂ ಶಾಂತಿ.
ಮಕ್ಕಳು ಇಲ್ಲಿ ಮಧುಬನದಲ್ಲಿ ಬಾಪ್ದಾದಾರವರ ಬಳಿ ಬರುತ್ತೀರಿ. ಹಾಲ್ನಲ್ಲಿ ಬರುತ್ತೀರಿ ಆಗ ಮೊದಲು
ಸಹೋದರ-ಸಹೋದರಿಯರು ಕುಳಿತಿರುವುದನ್ನು ನೋಡುತ್ತೀರಿ ನಂತರ ಕೊನೆಯಲ್ಲಿ ಬಾಪ್ದಾದಾ
ಬಂದಿದ್ದಾರೆಂಬುದನ್ನು ನೋಡುತ್ತೀರಿ ಆಗ ತಂದೆಯ ನೆನಪು ಬರುತ್ತದೆ. ನೀವು ಪ್ರಜಾಪಿತ ಬ್ರಹ್ಮನ
ಮಕ್ಕಳು ಬ್ರಾಹ್ಮಣ-ಬ್ರಾಹ್ಮಿಣಿಯರಾಗಿದ್ದೀರಿ. ಆ ಬ್ರಾಹ್ಮಣರಂತೂ ಬ್ರಹ್ಮಾತಂದೆಯನ್ನೇ
ಅರಿತುಕೊಂಡಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಬಂದಾಗ ಅವಶ್ಯವಾಗಿ
ಬ್ರಹ್ಮಾ-ವಿಷ್ಣು-ಶಂಕರರು ಬೇಕಾಗಿದೆ. ತ್ರಿಮೂರ್ತಿ ಶಿವಭಗವಾನುವಾಚ ಎಂದೇ ಹೇಳುತ್ತಾರೆ. ಈಗ ಮೂವರ
ಮೂಲಕವಂತೂ ಮಾತನಾಡುವುದಿಲ್ಲ ಅಲ್ಲವೆ. ಈ ಮಾತುಗಳನ್ನು ಬುದ್ಧಿಯಲ್ಲಿ ಬಹಳ ಚೆನ್ನಾಗಿ ಧಾರಣೆ
ಮಾಡಬೇಕಾಗಿದೆ. ಬೇಹದ್ದಿನ ತಂದೆಯಿಂದ ಅವಶ್ಯವಾಗಿ ಸ್ವರ್ಗದ ಆಸ್ತಿಯು ಸಿಗುತ್ತದೆ ಆದ್ದರಿಂದ ಎಲ್ಲಾ
ಭಕ್ತರು ಭಗವಂತನಿಂದ ಏನನ್ನು ಬಯಸುತ್ತಾರೆ? ಜೀವನ್ಮುಕ್ತಿಯನ್ನು. ಈಗ ಜೀವನ ಬಂಧನವಾಗಿದೆ, ಬಂದು
ನಮ್ಮನ್ನು ಈ ಬಂಧನದಿಂದ ಮುಕ್ತಗೊಳಿಸಿ ಎಂದು ಎಲ್ಲರೂ ತಂದೆಯನ್ನು ನೆನಪು ಮಾಡುತ್ತಾರೆ. ಈಗ ತಂದೆಯು
ಬಂದಿದ್ದಾರೆ, ಕಲ್ಪ-ಕಲ್ಪವೂ ತಂದೆಯು ಬರುತ್ತಾರೆಂದು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ನೀವೇ
ಮಾತಾ-ಪಿತಾ ಎಂದು ಕರೆಯುತ್ತಾರೆ ಆದರೆ ಇದರ ಅರ್ಥವನ್ನು ತಿಳಿದುಕೊಂಡಿಲ್ಲ. ಇದನ್ನು ನಿರಾಕಾರ
ತಂದೆಗೆ ಹೇಳುತ್ತೇವೆಂದು ತಿಳಿದುಕೊಳ್ಳುತ್ತಾರೆ. ಹಾಡುತ್ತಾರೆ ಆದರೆ ಸಿಗುವುದೇನೂ ಇಲ್ಲ. ಈಗ ನೀವು
ಮಕ್ಕಳಿಗೆ ಆ ತಂದೆಯಿಂದ ಆಸ್ತಿಯು ಸಿಗುತ್ತದೆ. ಪುನಃ ಕಲ್ಪದ ನಂತರವೂ ಸಿಗುವುದು. ಮಕ್ಕಳಿಗೆ
ಗೊತ್ತಿದೆ, ತಂದೆಯು ಬಂದು ಅರ್ಧಕಲ್ಪಕ್ಕಾಗಿ ಆಸ್ತಿಯನ್ನು ಕೊಡುತ್ತಾರೆ ಮತ್ತು ರಾವಣನು ಶಾಪ
ಕೊಡುತ್ತಾನೆ. ನಾವೆಲ್ಲರು ಈಗ ಶ್ರಾಪಿತರಾಗಿದ್ದೇವೆಂಬುದನ್ನೂ ಸಹ ಪ್ರಪಂಚದವರು ತಿಳಿದುಕೊಂಡಿಲ್ಲ.
ರಾವಣನ ಶಾಪವು ಹಿಡಿದುಕೊಂಡಿದೆ ಆದ್ದರಿಂದ ಎಲ್ಲರೂ ದುಃಖಿಗಳಾಗಿದ್ದಾರೆ. ಭಾರತವಾಸಿಗಳು
ಸುಖಿಯಾಗಿದ್ದರು, ನೆನ್ನೆಯ ದಿನ ಈ ಲಕ್ಷ್ಮೀ -ನಾರಾಯಣರ ರಾಜ್ಯವಿತ್ತು, ದೇವತೆಗಳ ಮುಂದೆ
ತಲೆಬಾಗುತ್ತಾರೆ, ಪೂಜೆ ಮಾಡುತ್ತಾರೆ ಆದರೆ ಯಾವಾಗ ಸತ್ಯಯುಗವಿತ್ತು ಎಂಬುದು ಯಾರಿಗೂ ತಿಳಿದಿಲ್ಲ.
ನೋಡಿ, ಕೇವಲ ಸತ್ಯಯುಗಕ್ಕೆ ಲಕ್ಷಾಂತರ ವರ್ಷಗಳ ಆಯಸ್ಸನ್ನು ತೋರಿಸಿಬಿಟ್ಟಿದ್ದಾರೆ, ಆಗ
ಸತ್ಯಯುಗದಲ್ಲೇ ಬಹಳ ಜನಸಂಖ್ಯೆಯಾಗಿಬಿಡುವುದು, ಆ ಲೆಕ್ಕದಿಂದ ತ್ರೇತಾಯುಗ ಮತ್ತು
ದ್ವಾಪರ-ಕಲಿಯುಗದಲ್ಲಿ ಇನ್ನೂ ಬಹಳಷ್ಟು ಜನಸಂಖ್ಯೆಯಾಗಿಬಿಡುವುದು. ಯಾವುದೇ ಮನುಷ್ಯರ ಬುದ್ಧಿಯಲ್ಲಿ
ಕುಳಿತುಕೊಳ್ಳುವುದಿಲ್ಲ ಅಂದಾಗ ತಂದೆಯು ತಿಳಿಸುತ್ತಾರೆ - ನೋಡಿ, 33 ಕೋಟಿ ದೇವತೆಗಳಿರುತ್ತಾರೆಂದು
ಗಾಯನವಿದೆ, ಅವರು ಯಾವುದೇ ಲಕ್ಷಾಂತರ ವರ್ಷಗಳಲ್ಲಿ ಇರಲು ಸಾಧ್ಯವೆ? ಅಂದಾಗ ಇದನ್ನು ಸಹ
ಮನುಷ್ಯರಿಗೆ ತಿಳಿಸಬೇಕಾಗಿದೆ.
ಈಗ ನೀವು
ತಿಳಿದುಕೊಂಡಿದ್ದೀರಿ - ತಂದೆಯು ನಮ್ಮನ್ನು ಸ್ವಚ್ಛಬುದ್ಧಿಯವರನ್ನಾಗಿ ಮಾಡುತ್ತಾರೆ, ರಾವಣನು
ತುಚ್ಛಬುದ್ಧಿಯವರನ್ನಾಗಿ ಮಾಡುತ್ತಾನೆ. ಮುಖ್ಯಮಾತಂತೂ ಇದಾಗಿದೆ. ಸತ್ಯಯುಗದಲ್ಲಿ ಪವಿತ್ರರು,
ಇಲ್ಲಿ ಅಪವಿತ್ರರಿದ್ದಾರೆ. ರಾಮರಾಜ್ಯವು ಯಾವಾಗಿನಿಂದ ಎಲ್ಲಿಯವರೆಗೆ ಇರುತ್ತದೆ? ರಾವಣರಾಜ್ಯವು
ಎಷ್ಟು ಸಮಯದವರೆಗೆ ಇರುತ್ತದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ರಾಮರಾಜ್ಯವೂ ಇಲ್ಲಿಯೇ ಇದೆ,
ರಾವಣರಾಜ್ಯವೂ ಇದೆ ಎಂದು ತಿಳಿಯುತ್ತಾರೆ. ಅನೇಕ ಮತ-ಮತಾಂತರಗಳಿವೆ. ಎಷ್ಟು ಮನುಷ್ಯರೋ ಅಷ್ಟು
ಮತಗಳು. ಈಗ ಇಲ್ಲಿ ನೀವು ಮಕ್ಕಳಿಗೆ ಒಂದು ಅದ್ವೈತ ಮತವು ಸಿಗುತ್ತದೆ. ಅದನ್ನು ತಂದೆಯೇ
ಕೊಡುತ್ತಾರೆ. ನೀವೀಗ ಬ್ರಹ್ಮಾರವರ ಮೂಲಕ ದೇವತೆಗಳಾಗುತ್ತಿದ್ದೀರಿ. ಸರ್ವಗುಣ ಸಂಪನ್ನ, 16
ಕಲಾಸಂಪೂರ್ಣರೆಂದು ದೇವತೆಗಳ ಮಹಿಮೆ ಮಾಡಲಾಗುತ್ತದೆ. ವಾಸ್ತವದಲ್ಲಿ ಅವರೂ ಮನುಷ್ಯರೆ ಅಂದಮೇಲೆ
ಮನುಷ್ಯರ ಮಹಿಮೆಯನ್ನೇಕೆ ಹಾಡುತ್ತಾರೆ? ಅವಶ್ಯವಾಗಿ ಅಂತರವಿರಬೇಕಲ್ಲವೆ. ಈಗ ನೀವು ಮಕ್ಕಳೂ ಸಹ
ನಂಬರ್ವಾರ್ ಪುರುಷಾರ್ಥದನುಸಾರ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಕರ್ತವ್ಯವನ್ನು
ಕಲಿಯುತ್ತೀರಿ. ಕಲಿಯುಗೀ ಮನುಷ್ಯರನ್ನು ನೀವು ಸತ್ಯಯುಗೀ ದೇವತೆಗಳನ್ನಾಗಿ ಮಾಡುತ್ತೀರಿ ಅರ್ಥಾತ್
ಶಾಂತಿಧಾಮ, ಬ್ರಹ್ಮಾಂಡ ಮತ್ತು ವಿಶ್ವದ ಮಾಲೀಕರನ್ನಾಗಿ ಮಾಡುತ್ತೀರಿ. ಇದಂತೂ ಶಾಂತಿಧಾಮವಲ್ಲ
ಅಲ್ಲವೆ! ಇಲ್ಲಂತೂ ಅವಶ್ಯವಾಗಿ ಕರ್ಮ ಮಾಡಬೇಕಾಗುತ್ತದೆ. ಅದು ಮಧುರ, ಶಾಂತಿಯ ಮನೆಯಾಗಿದೆ. ಈಗ
ನೀವು ತಿಳಿದುಕೊಂಡಿದ್ದೀರಿ - ನಾವಾತ್ಮಗಳು ಮಧುರಮನೆ, ಬ್ರಹ್ಮಾಂಡದ ಮಾಲೀಕರಾಗಿದ್ದೆವು. ಅಲ್ಲಿ
ದುಃಖ-ಸುಖದಿಂದ ಭಿನ್ನವಾಗಿರುತ್ತೇವೆ ನಂತರ ಸತ್ಯಯುಗದಲ್ಲಿ ವಿಶ್ವದ ಮಾಲೀಕರಾಗುತ್ತೇವೆ. ಈಗ ನೀವು
ಮಕ್ಕಳು ಯೋಗ್ಯರಾಗುತ್ತಿದ್ದೀರಿ. ಲಕ್ಷ್ಯವು ಸನ್ಮುಖದಲ್ಲಿ ನಿಂತಿದೆ. ನೀವು ಮಕ್ಕಳು
ಯೋಗಬಲದವರಾಗಿದ್ದೀರಿ, ಅವರು ಬಾಹುಬಲದವರಾಗಿದ್ದಾರೆ. ನೀವೂ ಸಹ ಯುದ್ಧದ ಮೈದಾನದಲ್ಲಿದ್ದೀರಿ ಆದರೆ
ನೀವು ಡಬಲ್ ಅಹಿಂಸಕರಾಗಿದ್ದೀರಿ, ಅವರು ಹಿಂಸಕರಾಗಿದ್ದಾರೆ. ಕಾಮಕಟಾರಿಗೆ ಹಿಂಸೆಯೆಂದು
ಹೇಳಲಾಗುತ್ತದೆ. ಇದು ಹಿಂಸೆಯಾಗಿದೆ ಎಂದು ಸನ್ಯಾಸಿಗಳೂ ಸಹ ತಿಳಿಯುತ್ತಾರೆ ಆದ್ದರಿಂದ
ಪವಿತ್ರರಾಗುತ್ತಾರೆ ಆದರೆ ನಿಮ್ಮ ವಿನಃ ಮತ್ತ್ಯಾರಿಗೂ ತಂದೆಯ ಜೊತೆ ಪ್ರೀತಿಯಿಲ್ಲ. ಹೇಗೆ
ಪ್ರಿಯತಮ-ಪ್ರಿಯತಮೆಯರ ಪ್ರೀತಿಯಿರುತ್ತದೆಯಲ್ಲವೆ. ಆ ಪ್ರಿಯತಮ-ಪ್ರಿಯತಮೆಯರಂತೂ ಕೇವಲ ಒಂದು
ಜನ್ಮಕ್ಕಾಗಿ ಗಾಯನ ಮಾಡಲ್ಪಡುತ್ತಾರೆ. ನೀವೆಲ್ಲರೂ ಪ್ರಿಯತಮನಾದ ನನಗೆ ಪ್ರಿಯತಮೆಯರಾಗಿದ್ದೀರಿ.
ಭಕ್ತಿಮಾರ್ಗದಲ್ಲಿ ಪ್ರಿಯತಮನಾದ ನನ್ನೊಬ್ಬನನ್ನು ನೆನಪು ಮಾಡುತ್ತಾ ಬಂದಿದ್ದೀರಿ. ಈಗ ನಾನು
ಹೇಳುತ್ತೇನೆ - ಈ ಅಂತಿಮ ಜನ್ಮದಲ್ಲಿ ಕೇವಲ ಪವಿತ್ರರಾಗಿ ಮತ್ತು ಯಥಾರ್ಥ ರೀತಿಯಲ್ಲಿ ನೆನಪು
ಮಾಡುವುದರಿಂದಲೇ ನೀವು ಮುಕ್ತರಾಗುತ್ತೀರಿ. ಸತ್ಯಯುಗದಲ್ಲಿ ನೆನಪು ಮಾಡುವ ಅವಶ್ಯಕತೆಯೇ
ಇರುವುದಿಲ್ಲ. ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುತ್ತಾರೆ. ಇದು ನರಕವಾಗಿದೆ, ಇದಕ್ಕೆ ಸ್ವರ್ಗವೆಂದು
ಹೇಳುವುದಿಲ್ಲ ಅಲ್ಲವೆ. ಯಾರು ಧನವಂತ ದೊಡ್ಡವ್ಯಕ್ತಿಗಳಿದ್ದಾರೆಯೋ ಅವರು ನಮಗಾಗಿ ಇಲ್ಲಿಯೇ
ಸ್ವರ್ಗವಿದೆಯೆಂದು ತಿಳಿಯುತ್ತಾರೆ. ಎಷ್ಟೊಂದು ಅಂಧಶ್ರದ್ಧೆಯಲ್ಲಿರುತ್ತಾರೆ. ನೀವೇ ಮಾತಾಪಿತಾ
ಎಂದು ಹಾಡುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಯಾವ ಅಪಾರ ಸುಖ ಸಿಗುತ್ತೆ ಎಂಬುದನ್ನೂ ಸಹ
ಯಾರೂ ತಿಳಿದಿಲ್ಲ. ಇದನ್ನು ಆತ್ಮವೇ ಹೇಳುತ್ತದೆಯಲ್ಲವೆ. ನೀವಾತ್ಮಗಳು ನಮಗೆ ಅಪಾರ ಸುಖವು
ಸಿಗುವುದಿದೆ ಎಂದು ತಿಳಿದುಕೊಂಡಿದ್ದೀರಿ. ಅದರ ಹೆಸರೇ ಆಗಿದೆ - ಸ್ವರ್ಗ, ಸುಖಧಾಮ. ಸ್ವರ್ಗವು
ಎಲ್ಲರಿಗೆ ಬಹಳ ಮಧುರವೆನಿಸುತ್ತದೆ, ನೀವು ತಿಳಿದುಕೊಂಡಿದ್ದೀರಿ - ಸ್ವರ್ಗದಲ್ಲಿ
ವಜ್ರ-ವೈಡೂರ್ಯಗಳ ಎಷ್ಟೊಂದು ಮಹಲುಗಳಿತ್ತು, ಭಕ್ತಿಮಾರ್ಗದಲ್ಲಿಯೂ ಸಹ ಎಷ್ಟೊಂದು ಅಪಾರವಾದ
ಧನವಿತ್ತು, ಆದ್ದರಿಂದ ಸೋಮನಾಥನ ಮಂದಿರವನ್ನು ಕಟ್ಟಿಸಿದ್ದಾರೆ. ಒಂದೊಂದು ಚಿತ್ರವೂ ಲಕ್ಷಾಂತರ
ರೂಪಾಯಿಗಳಷ್ಟು ಬೆಲೆಯುಳ್ಳದ್ದಾಗಿತ್ತು, ಅವೆಲ್ಲವು ಎಲ್ಲಿಗೆ ಹೋದವು? ಎಷ್ಟೊಂದು ಲೂಟಿ ಮಾಡಿಕೊಂಡು
ಹೋದರು! ಮುಸಲ್ಮಾನರು ತೆಗೆದುಕೊಂಡು ಹೋಗಿ ಮಸೀದಿಯಲ್ಲಿ ಹಾಕಿದರು, ಅಷ್ಟೊಂದು ಅಪಾರ ಧನವಿತ್ತು,
ಈಗ ನೀವು ಮಕ್ಕಳ ಬುದ್ಧಿಯಲ್ಲಿದೆ - ನಾವು ತಂದೆಯ ಮೂಲಕ ಪುನಃ ಸ್ವರ್ಗದ ಮಾಲೀಕರಾಗುತ್ತೇವೆ. ನಮ್ಮ
ಮಹಲುಗಳು ಚಿನ್ನದಿಂದ ಕೂಡಿರುತ್ತವೆ. ಬಾಗಿಲುಗಳೂ ಸಹ ಎಷ್ಟೇ ರತ್ನಜಡಿತವಾಗಿರಬಹುದು. ಜೈನರ
ಮಂದಿರಗಳೂ ಸಹ ಹೀಗೆ ಮಾಡಲ್ಪಟ್ಟಿರುತ್ತವೆ. ಈಗ ಮೊದಲಿದ್ದ ವಜ್ರ ಇತ್ಯಾದಿಯಂತೂ ಇಲ್ಲ. ನಾವು
ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಶಿವತಂದೆಯು ಭಾರತದಲ್ಲಿಯೇ
ಬರುತ್ತಾರೆ, ಭಾರತಕ್ಕೆ ಶಿವಪರಮಾತ್ಮನಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ. ಕ್ರಿ.ಪೂ. 3000
ವರ್ಷಗಳ ಹಿಂದೆ ಭಾರತವು ಸ್ವರ್ಗವಾಗಿತ್ತು ಎಂದು ಕ್ರಿಶ್ಚಿಯನ್ನರೂ ಸಹ ಹೇಳುತ್ತಾರೆ, ಇಲ್ಲಿ ಯಾರು
ರಾಜ್ಯ ಮಾಡುತ್ತಿದ್ದರು? ಇದು ಯಾರಿಗೂ ತಿಳಿದಿಲ್ಲ. ಭಾರತವು ಬಹಳ ಹಳೆಯದಾಗಿದೆ ಎಂಬುದನ್ನಷ್ಟೆ
ತಿಳಿಯುತ್ತಾರೆ ಅಂದಮೇಲೆ ಇದೇ ಸ್ವರ್ಗವಾಯಿತಲ್ಲವೆ. ತಂದೆಗೆ ಸ್ವರ್ಗದ ರಚಯಿತ ಅಥವಾ
ಸ್ವರ್ಗದಾತನೆಂದು ಹೇಳುತ್ತಾರೆ. ಅವಶ್ಯವಾಗಿ ತಂದೆಯು ಬಂದಿದ್ದರು, ಆಗಲೇ ನೀವು ಸ್ವರ್ಗದ
ಮಾಲೀಕರಾದ್ದೀರಿ. ಪ್ರತೀ 5000 ವರ್ಷಗಳ ನಂತರ ಸ್ವರ್ಗದ ಮಾಲೀಕರಾಗುತ್ತೀರಿ, ಮತ್ತೆ ಅರ್ಧಕಲ್ಪದ
ನಂತರ ರಾವಣರಾಜ್ಯವು ಆರಂಭವಾಗುತ್ತದೆ. ಚಿತ್ರಗಳಲ್ಲಿ ಹೀಗೆ ಸ್ಪಷ್ಟಮಾಡಿ ತೋರಿಸಿ ಅದರಿಂದ
ಲಕ್ಷಾಂತರ ವರ್ಷಗಳ ಮಾತುಗಳು ಬುದ್ಧಿಯಿಂದ ಹೊರಟುಹೋಗುತ್ತವೆ. ಕೇವಲ ಲಕ್ಷ್ಮೀ -ನಾರಾಯಣರೊಬ್ಬರೇ
ಇರುವುದಿಲ್ಲ, ಅವರ ರಾಜಮನೆತನವೂ ಇರುತ್ತದೆ ಮತ್ತು ಅವರ ಮಕ್ಕಳೂ ರಾಜರಾಗುತ್ತಾರೆ. ಅನೇಕರು
ರಾಜರಾಗುತ್ತಾರಲ್ಲವೆ! ಇಡೀ ಮಾಲೆಯು ಮಾಡಲ್ಪಟ್ಟಿದೆ. ಮಾಲೆಯನ್ನೇ ಸ್ಮರಣೆ ಮಾಡುತ್ತಾರಲ್ಲವೆ. ಯಾರು
ತಂದೆಗೆ ಸಹಯೋಗಿಗಳಾಗಿ ತಂದೆಗೆ ಸೇವೆ ಮಾಡುವರೋ ಅವರದೇ ಮಾಲೆಯಾಗುತ್ತದೆ. ಯಾರು ಪೂರ್ಣ ಚಕ್ರದಲ್ಲಿ
ಬರುತ್ತಾರೆ, ಪೂಜ್ಯರಿಂದ ಪೂಜಾರಿಗಳಾಗುತ್ತಾರೆಯೋ ಅವರದು ಇದು ನೆನಪಾರ್ಥವಾಗಿದೆ. ನೀವು
ಪೂಜ್ಯರಿಂದ ಪೂಜಾರಿಯಾಗುತ್ತೀರಿ, ಆಗ ತಮ್ಮ ಮಾಲೆಯನ್ನು ತಾವೇ ಪೂಜಿಸುತ್ತೀರಿ. ಮೊದಲು ಮಾಲೆಗೆ
ಕೈಹಾಕಿ ಮತ್ತೆ ತಲೆಬಾಗುತ್ತಾರೆ ನಂತರ ಮಾಲೆ ಜಪಿಸುವುದನ್ನು ಆರಂಭಿಸುತ್ತಾರೆ. ನೀವೂ ಸಹ ಸಂಪೂರ್ಣ
ಚಕ್ರವನ್ನು ಸುತ್ತುತ್ತೀರಿ ನಂತರ ಶಿವತಂದೆಯಿಂದ ಆಸ್ತಿಯನ್ನು ಪಡೆಯುತ್ತೀರಿ. ಈ ರಹಸ್ಯವನ್ನು ನೀವೇ
ತಿಳಿದುಕೊಂಡಿದ್ದೀರಿ, ಮನುಷ್ಯರಂತೂ ಕೆಲಕೆಲವರು ಕೆಲವರ ಹೆಸರಿನ ಮೇಲೆ ಮಾಲೆಯನ್ನು ಜಪಿಸುತ್ತಾರೆ.
ಏನನ್ನೂ ತಿಳಿದುಕೊಂಡಿಲ್ಲ. ಈಗ ನಿಮಗೆ ಮಾಲೆಯ ಸಂಪೂರ್ಣ ಜ್ಞಾನವಿದೆ. ಮತ್ತ್ಯಾರಿಗೂ ಈ
ಜ್ಞಾನವಿಲ್ಲ. ಯಾರ ಮಾಲೆಯನ್ನು ಜಪಿಸುತ್ತಾರೆಂದು ಕ್ರಿಶ್ಚಿಯನ್ನರಿಗೇನು ತಿಳಿದಿದೆ! ಯಾರು ತಂದೆಗೆ
ಸಹಯೋಗಿಗಳಾಗಿ ಸೇವೆ ಮಾಡುವರೋ ಅವರದೇ ಈ ಮಾಲೆಯಾಗಿದೆ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ,
ಯಾರು ಪಾವನರಿದ್ದರೋ ಅವರೆಲ್ಲರೂ ಇಲ್ಲಿ ಪುನರ್ಜನ್ಮದಲ್ಲಿ ಬರುತ್ತಾ-ಬರುತ್ತಾ ಪತಿತರಾಗಿದ್ದಾರೆ.
ಪುನಃ ನಂಬರ್ವಾರ್ ಎಲ್ಲರೂ ಹೋಗುತ್ತಾರೆ, ನಂಬರ್ವಾರ್ ಬರುತ್ತಾರೆ. ಎಷ್ಟೊಂದು ತಿಳಿದುಕೊಳ್ಳುವ
ಮಾತುಗಳಾಗಿವೆ, ಇದು ವೃಕ್ಷವಾಗಿದೆ ಎಷ್ಟೊಂದು ರೆಂಬೆ-ಕೊಂಬೆಗಳು, ಮಠ-ಪಂಥಗಳಿವೆ. ಈಗ ಇಡೀ ವೃಕ್ಷವು
ಸಮಾಪ್ತಿಯಾಗಲಿದೆ ಮತ್ತೆ ನಿಮ್ಮ ತಳಪಾಯವು ಹಾಕಲ್ಪಡುವುದು. ನೀವು ಈ ವೃಕ್ಷದ ಬುನಾದಿಯಾಗಿದ್ದೀರಿ,
ಅದರಲ್ಲಿ ಸೂರ್ಯವಂಶಿ, ಚಂದ್ರವಂಶಿ ಇಬ್ಬರೂ ಇದ್ದೀರಿ. ಯಾರು ಸತ್ಯಯುಗ, ತ್ರೇತಾಯುಗದಲ್ಲಿ ರಾಜ್ಯ
ಮಾಡುತ್ತಿದ್ದರು ಅವರದು ಈಗ ಧರ್ಮವೇ ಇಲ್ಲ. ಕೇವಲ ಚಿತ್ರಗಳಿವೆ. ಯಾರ ಚಿತ್ರಗಳಿವೆಯೋ ಅವರ
ಚರಿತ್ರೆಯನ್ನಂತೂ ಅರಿತುಕೊಳ್ಳಬೇಕಲ್ಲವೆ! ಇಂತಹ ವಸ್ತು ಲಕ್ಷಾಂತರ ವರ್ಷಗಳ ಹಳೆಯದೆಂದು
ಹೇಳುತ್ತಾರೆ. ವಾಸ್ತವದಲ್ಲಿ ಹಳೆಯದಕ್ಕಿಂತ ಹಳೆಯದು ಆದಿಸನಾತನ ದೇವಿ-ದೇವತಾಧರ್ಮವಾಗಿದೆ.
ಅದಕ್ಕಿಂತಲೂ ಮೊದಲು ಯಾವುದೇ ವಸ್ತುವಿರಲು ಸಾಧ್ಯವಿಲ್ಲ. ಉಳಿದೆಲ್ಲವೂ 2500 ವರ್ಷಗಳಷ್ಟು
ಹಳೆಯದಾಗಿದೆ. ಕೆಳಗೆ ಅಗೆದು ಹೊರತೆಗೆಯುತ್ತಾರಲ್ಲವೆ. ಭಕ್ತಿಮಾರ್ಗದಲ್ಲಿ ಯಾರು ಪೂಜೆ
ಮಾಡುತ್ತಾರೆಯೋ ಅವರು ಹಳೆಯ ಚಿತ್ರಗಳನ್ನು ತೆಗೆಯುತ್ತಾರೆ ಏಕೆಂದರೆ ಭೂಕಂಪದಲ್ಲಿ ಎಲ್ಲಾ ಮಂದಿರಗಳು
ಮೊದಲಾದುವುಗಳು ಬಿದ್ದುಹೋಗುತ್ತವೆ ಮತ್ತೆ ಹೊಸದಾಗುತ್ತವೆ. ಯಾವ ಚಿನ್ನ, ವಜ್ರದ ಗಣಿಗಳು ಏನೆಲ್ಲಾ
ಖಾಲಿಯಾಗಿಬಿಟ್ಟಿವೆಯೋ ಅವು ಪುನಃ ಸತ್ಯಯುಗದಲ್ಲಿ ಸಂಪನ್ನವಾಗಿಬಿಡುವವು. ಇವೆಲ್ಲಾ ಮಾತುಗಳು ಈಗ
ನಿಮ್ಮ ಬುದ್ಧಿಯಲ್ಲಿವೆ. ತಂದೆಯು ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿಸಿದ್ದಾರೆ, ಸತ್ಯಯುಗದಲ್ಲಿ
ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ ನಂತರ ವೃದ್ಧಿಹೊಂದುತ್ತದೆ. ಎಲ್ಲಾ ಆತ್ಮಗಳು ಪರಮಧಾಮದಿಂದ
ಬರುತ್ತಾರೆ, ಬರುತ್ತಾ-ಬರುತ್ತಾ ವೃಕ್ಷವು ವೃದ್ಧಿಯಾಗುತ್ತದೆ. ನಂತರ ಯಾವಾಗ ವೃಕ್ಷವು ಜಡಜಡೀಭೂತ
ಸ್ಥಿತಿಯನ್ನು ತಲುಪುವುದೋ ಆಗ ರಾಮನೂ ಹೋದ, ರಾವಣನೂ ಹೋದ, ಯಾರದು ಬಹುಪರಿವಾರವಾಗಿದೆ ಎಂದು
ಹೇಳಲಾಗುತ್ತದೆ. ಅನೇಕ ಧರ್ಮಗಳಿವೆಯಲ್ಲವೆ. ನಮ್ಮ ಪರಿವಾರವು ಎಷ್ಟು ಚಿಕ್ಕದಾಗಿದೆ, ಇದು ಕೇವಲ
ಬ್ರಾಹ್ಮಣರದೇ ಪರಿವಾರವಾಗಿದೆ, ಅವರದು ಎಷ್ಟು ಅನೇಕ ಧರ್ಮಗಳಿವೆ, ಜನಸಂಖ್ಯೆಯನ್ನು
ತಿಳಿಸುತ್ತಾರಲ್ಲವೆ. ಅವರೆಲ್ಲರು ರಾವಣನ ಸಂಪ್ರದಾಯದವರಾಗಿದ್ದಾರೆ, ಎಲ್ಲರೂ ಹೋಗಿ ಕೆಲವರೇ
ಉಳಿಯುತ್ತಾರೆ. ರಾವಣ ಸಂಪ್ರದಾಯದವರು ಸ್ವರ್ಗದಲ್ಲಿ ಬರುವುದಿಲ್ಲ, ಎಲ್ಲರೂ ಮುಕ್ತಿಧಾಮದಲ್ಲಿಯೇ
ಇರುತ್ತಾರೆ. ಉಳಿದಂತೆ ನೀವು ಯಾರು ಓದುತ್ತೀರೋ ಅವರು ನಂಬರ್ವಾರ್ ಆಗಿ ಸ್ವರ್ಗದಲ್ಲಿ ಬರುತ್ತೀರಿ.
ಈಗ ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ಹೇಗೆ ಅದು ನಿರಾಕಾರ ವೃಕ್ಷವಾಗಿದೆ, ಇದು ಮನುಷ್ಯ ಸೃಷ್ಟಿಯ ವೃಕ್ಷವಾಗಿದೆ,
ಇದು ನಿಮ್ಮ ಬುದ್ಧಿಯಲ್ಲಿದೆ. ವಿದ್ಯೆಯ ಮೇಲೆ ಗಮನ ಕೊಡದಿದ್ದರೆ ಪರೀಕ್ಷೆಯಲ್ಲಿ
ಅನುತ್ತೀರ್ಣರಾಗಿಬಿಡುತ್ತೀರಿ. ಓದುತ್ತಾ ಮತ್ತು ಓದಿಸುತ್ತಾ ಇದ್ದಾಗ ಖುಷಿಯೂ ಇರುವುದು. ಒಂದುವೇಳೆ
ವಿಕಾರದಲ್ಲಿ ಬಿದ್ದರೆ ಇದೆಲ್ಲವೂ ಮರೆತುಹೋಗುವುದು. ಯಾವಾಗ ಆತ್ಮವು ಪವಿತ್ರ ಚಿನ್ನವಾಗುವುದೋ ಆಗ
ಅದರಲ್ಲಿ ಧಾರಣೆಯು ಚೆನ್ನಾಗಿ ಆಗುವುದು. ಚಿನ್ನದ ಪಾತ್ರೆಯು ಪವಿತ್ರವಾಗಿರುತ್ತದೆ. ಒಂದುವೇಳೆ
ಯಾರಾದರೂ ಪತಿತರಾದರೆ ಜ್ಞಾನವನ್ನು ಹೇಳಲು ಸಾಧ್ಯವಿಲ್ಲ. ಈಗ ನೀವು ಸನ್ಮುಖದಲ್ಲಿ ಕುಳಿತಿದ್ದೀರಿ.
ನಿಮಗೆ ತಿಳಿದಿದೆ, ಪರಮಪಿತ ಪರಮಾತ್ಮನು ನಾವಾತ್ಮಗಳಿಗೆ ಓದಿಸುತ್ತಿದ್ದಾರೆ. ನಾವಾತ್ಮಗಳು ಈ
ಕರ್ಮೇಂದ್ರಿಯಗಳ ಮೂಲಕ ಕೇಳುತ್ತಿದ್ದೇವೆ. ಓದಿಸುವವರು ತಂದೆಯಾಗಿದ್ದಾರೆ, ಇಂತಹ ಪಾಠಶಾಲೆಯು ಇಡೀ
ವಿಶ್ವದಲ್ಲಿ ಎಲ್ಲಿರುತ್ತದೆ! ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ
ಆಗಿದ್ದಾರೆ, ಎಲ್ಲರನ್ನೂ ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ. ಈಗ ನೀವು ತಂದೆಯ ಸನ್ಮುಖದಲ್ಲಿ
ಕುಳಿತಿದ್ದೀರಿ, ಸನ್ಮುಖದಲ್ಲಿ ಮುರುಳಿ ಕೇಳುವುದರಲ್ಲಿ ಎಷ್ಟೊಂದು ಅಂತರವಿದೆ! ಹೇಗೆ ಈ ಟೇಪ್
ರೆಕಾರ್ಡರ್ ಬಂದಿದೆ, ಒಂದು ದಿನ ಇದು ಎಲ್ಲರ ಬಳಿ ಬಂದುಬಿಡುತ್ತದೆ. ಮಕ್ಕಳ ಸುಖಕ್ಕಾಗಿ ತಂದೆಯು
ಇಂತಹ ವಸ್ತುಗಳನ್ನು ಮಾಡಿಸುತ್ತಾರೆ, ಯಾವುದೇ ದೊಡ್ಡಮಾತಲ್ಲ. ಇವರು ಸಾವಲ್ಶಾಹ್ ಆಗಿದ್ದಾರಲ್ಲವೆ
ಮೊದಲು ಸುಂದರನಾಗಿದ್ದರು, ಈಗ ಕಪ್ಪಾಗಿಬಿಟ್ಟಿದ್ದಾರೆ. ಆದ್ದರಿಂದ ಶ್ಯಾಮಸುಂದರನೆಂದು ಹೇಳುತ್ತಾರೆ.
ನಿಮಗೂ ತಿಳಿದಿದೆ, ನಾವು ಸುಂದರರಾಗಿದ್ದೆವು, ಈಗ ಶ್ಯಾಮನಾಗಿಬಿಟ್ಟಿದ್ದೇವೆ ಪುನಃ
ಸುಂದರರಾಗುತ್ತೇವೆ. ಕೇವಲ ಒಬ್ಬರೇ ಏಕಾಗುವರು? ಒಬ್ಬರಿಗೇ ಸರ್ಪವು ಕಚ್ಚಿತೆ? ಮಾಯೆಗೆ ಸರ್ಪವೆಂದು
ಹೇಳಲಾಗುತ್ತದೆ. ವಿಕಾರದಲ್ಲಿ ಹೋಗುವುದರಿಂದ ಕಪ್ಪಾಗಿಬಿಡುತ್ತಾರೆ, ಎಷ್ಟೊಂದು ತಿಳಿದುಕೊಳ್ಳುವ
ಮಾತುಗಳಾಗಿವೆ. ಬೇಹದ್ದಿನ ತಂದೆಯು ತಿಳಿಸುತ್ತಾರೆ - ಗೃಹಸ್ಥ ವ್ಯವಹಾರದಲ್ಲಿರುತ್ತಾ ಈ ಅಂತಿಮ
ಜನ್ಮದಲ್ಲಿ ನನಗಾಗಿ ಪವಿತ್ರರಾಗಿ, ತಂದೆಯು ಮಕ್ಕಳಿಂದ ಈ ಭಿಕ್ಷೆಯನ್ನು ಬೇಡುತ್ತಾರೆ. ಕಮಲಪುಷ್ಪ
ಸಮಾನ ಪವಿತ್ರರಾಗಿ ಮತ್ತು ನನ್ನನ್ನು ನೆನಪು ಮಾಡಿ ಆಗ ಈ ಜನ್ಮದಲ್ಲಿ ಪವಿತ್ರರಾಗುತ್ತೀರಿ ಮತ್ತು
ನೆನಪಿನಲ್ಲಿರುವುದರಿಂದ ಹಿಂದಿನ ಜನ್ಮಗಳ ವಿಕರ್ಮವು ವಿನಾಶವಾಗುತ್ತದೆ. ಇದು ಯೋಗಾಗ್ನಿಯಾಗಿದೆ,
ಇದರಿಂದ ಜನ್ಮ-ಜನ್ಮಾಂತರದ ಪಾಪಗಳು ಭಸ್ಮವಾಗುತ್ತವೆ. ಸತೋಪ್ರಧಾನರಿಂದ ಸತೋ, ರಜೋ, ತಮೋದಲ್ಲಿ
ಬರುವುದರಿಂದ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ, ತುಕ್ಕು ಬೀಳುತ್ತಾ ಹೋಗುತ್ತದೆ. ಈಗ ಕೇವಲ
ನನ್ನೊಬ್ಬನನ್ನೇ ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಉಳಿದಂತೆ ನೀರಿನ ನದಿಗಳಲ್ಲಿ ಸ್ನಾನ
ಮಾಡುವುದರಿಂದ ಪಾವನರಾಗುತ್ತೀರೇನು? ನೀರೂ ಸಹ ತತ್ವವಾಗಿದೆಯಲ್ಲವೆ. ಪಂಚತತ್ವಗಳೆಂದು
ಹೇಳಲಾಗುತ್ತದೆ. ಈ ನದಿಗಳು ಪತಿತ-ಪಾವನಿಯಾಗಲು ಹೇಗೆ ಸಾಧ್ಯ. ನದಿಗಳು ಸಾಗರದಿಂದ ಹುಟ್ಟುತ್ತವೆ.
ಮೊದಲಂತೂ ಸಾಗರನೇ ಪತಿತ-ಪಾವನನಾಗಿರಬೇಕಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿಹೋಗಿ
ಮರಳಿಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ವಿಜಯಮಾಲೆಯಲ್ಲಿ ಬರಲು ತಂದೆಯ ಸಹಯೋಗಿಗಳಾಗಿ ಸೇವೆ ಮಾಡಬೇಕಾಗಿದೆ. ಒಬ್ಬ ಪ್ರಿಯತಮನ ಜೊತೆ ಸತ್ಯ
ಪ್ರೀತಿಯನ್ನಿಟ್ಟುಕೊಳ್ಳಬೇಕಾಗಿದೆ. ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ.
2. ತಮ್ಮ ನಿಖರವಾದ
ಗುರಿ-ಧ್ಯೇಯವನ್ನು ಮುಂದಿಟ್ಟುಕೊಂಡು ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಡಬಲ್ ಅಹಿಂಸಕರಾಗಿ
ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಶ್ರೇಷ್ಠ ಕರ್ತವ್ಯವನ್ನು ಮಾಡುತ್ತಿರಬೇಕಾಗಿದೆ.
ವರದಾನ:
ವಿಜಯೀತನದ ನಶೆಯ
ಮೂಲಕ ಸದಾ ಹರ್ಷಿತರಾಗಿರುವಂತಹ ಸರ್ವ ಆಕರ್ಷಣೆಗಳಿಂದ ಮುಕ್ತ ಭವ
ವಿಜಯಿರತ್ನಗಳ
ನೆನಪಾರ್ಥ-ತಂದೆಯ ಕೊರಳಿನ ಹಾರ ಇದುವರೆವಿಗೂ ಪೂಜಿಸಲ್ಪಡುತ್ತಿದೆ. ಅಂದರೆ ಸದಾ ಇದೇ ನಶೆಯಿರಲಿ
ನಾನು ಬಾಬಾರವರ ಕೊರಳಿನಹಾರ ವಿಜಯೀರತ್ನನಾಗಿದ್ದೇನೆ, ನಾನು ವಿಶ್ವದ ಮಾಲಿಕನ ಬಾಲಕನಾಗಿದ್ದೇನೆ.
ನಮಗೆ ಏನು ಸಿಕ್ಕಿದೆ ಅದು ಯಾರಿಗೂ ಸಿಗಿವುದಿಲ್ಲ - ಈ ನಶೆ ಮತ್ತು ಖುಶಿ ಸದಾ ಇದ್ದಾಗ ಯಾವುದೇ
ಪ್ರಕಾರದ ಆಕರ್ಷಣೆಯಿಂದ ದೂರವಿರುವಿರಿ. ಯಾರು ಸದಾ ವಿಜಯಿಯಾಗಿರುತ್ತಾರೆ ಅವರು ಸದಾ
ಹರ್ಷಿತರಾಗಿರುತ್ತಾರೆ. ಒಬ್ಬ ತಂದೆಯ ನೆನಪಿನ ಆಕರ್ಷಣೆಯಲ್ಲಿ ಆಕರ್ಷಿತರಾಗಿರುತ್ತಾರೆ.
ಸ್ಲೋಗನ್:
ಒಬ್ಬರ
ನೆನಪಿನಲ್ಲಿ ಮುಳುಗಿಹೋಗುವುದು ಅರ್ಥಾತ್ ಏಕಾಂತವಾಸಿಯಾಗುವುದಾಗಿದೆ.
ಅವ್ಯಕ್ತ ಸೂಚನೆ:
ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ
ಈಗ ಎಲ್ಲರು ಸೇರಿ
ಒಬ್ಬರಿಗೊಬ್ಬರು ಸಾಹಸವನ್ನು ಹೆಚ್ಚಿಸಿ ಸಮಯವನ್ನು ಸಮೀಪ ತರಲೇಬೇಕು, ಆತ್ಮಗಳಿಗೆ ಮುಕ್ತಿ
ಕೊಡಿಸಲೇಬೇಕು ಎಂದು ಸಂಕಲ್ಪ ಮಾಡಿ. ಆದರೆ ಇದು ಯಾವಾಗಾಗುವುದೆಂದರೆ ಯಾವಾಗ ಯೋಚನೆಯನ್ನು ಸ್ಮೃತಿ
ಸ್ವರೂಪದಲ್ಲಿ ತರುವಿರಿ. ಎಲ್ಲಿ ಏಕತೆ ಮತ್ತು ದೃಢತೆಯಿದೆ ಅಲ್ಲಿ ಅಸಂಭವವೂ ಸಂಭವವಾಗಿ ಬಿಡುತ್ತದೆ.