10.03.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ಮನುಷ್ಯರಿಂದ ದೇವತೆಗಳಾಗುವ ವಿದ್ಯೆಯನ್ನು ಓದಬೇಕು ಮತ್ತು ಓದಿಸಬೇಕಾಗಿದೆ, ಎಲ್ಲರಿಗೆ ಶಾಂತಿಧಾಮ ಮತ್ತು ಸುಖಧಾಮದ ಮಾರ್ಗವನ್ನು ತೋರಿಸಬೇಕಾಗಿದೆ”

ಪ್ರಶ್ನೆ:
ಯಾರು ಸತೋಪ್ರಧಾನ ಪುರುಷಾರ್ಥಿಗಳಾಗಿದ್ದಾರೆಯೋ ಅವರ ಲಕ್ಷಣಗಳೇನಾಗಿರುತ್ತದೆ?

ಉತ್ತರ:
ಅವರು ಅನ್ಯರನ್ನೂ ತಮ್ಮ ಸಮಾನ ಮಾಡುತ್ತಾರೆ. ಅನೇಕರ ಕಲ್ಯಾಣ ಮಾಡುತ್ತಿರುತ್ತಾರೆ. ಜ್ಞಾನಧನದಿಂದ ಜೋಳಿಗೆಯನ್ನು ತುಂಬಿಸಿಕೊಂಡು ದಾನ ಮಾಡುತ್ತಾರೆ. 21 ಜನ್ಮಗಳಿಗಾಗಿ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಅನ್ಯರಿಗೂ ಕೊಡಿಸುತ್ತಾರೆ.

ಗೀತೆ:
ಓಂ ನಮಃ ಶಿವಾಯ....................

ಓಂ ಶಾಂತಿ.
ಭಕ್ತರು ಯಾರ ಮಹಿಮೆಯನ್ನು ಮಾಡುತ್ತಾರೆಯೋ ಅವರ ಸನ್ಮುಖದಲ್ಲಿ ನೀವು ಕುಳಿತಿದ್ದೀರಿ ಅಂದಮೇಲೆ ಎಷ್ಟೊಂದು ಖುಷಿಯಿರಬೇಕು! ಅವರಿಗೆ ಶಿವಾಯ ನಮಃ ಎಂದು ಹೇಳುತ್ತಾರೆ. ನೀವಂತೂ ನಮಸ್ಕಾರ ಮಾಡಬೇಕಾಗಿಲ್ಲ, ಮಕ್ಕಳು ತಂದೆಯನ್ನು ನೆನಪು ಮಾಡುತ್ತಾರೆಯೇ ಹೊರತು ಎಂದೂ ನಮಸ್ಕಾರ ಮಾಡುವುದಿಲ್ಲ. ಇವರೂ ಸಹ ತಂದೆಯಾಗಿದ್ದಾರೆ. ಇವರಿಂದ ನಿಮಗೆ ಆಸ್ತಿಯು ಸಿಗುತ್ತದೆ. ನೀವು ನೆನಪು ಮಾಡುತ್ತೀರಿ, ನಮಸ್ಕರಿಸುವುದಿಲ್ಲ. ಜೀವಾತ್ಮವು ತಂದೆಯನ್ನು ನೆನಪು ಮಾಡುತ್ತದೆ, ತಂದೆಯು ಈ ತನುವಿನ ಆಧಾರವನ್ನು ಪಡೆದಿದ್ದಾರೆ. ಅವರು ನಮಗೆ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಹೇಗೆ ತೆಗೆದುಕೊಳ್ಳಬೇಕೆಂಬ ಮಾರ್ಗವನ್ನು ತಿಳಿಸುತ್ತಿದ್ದಾರೆ. ನೀವೂ ಸಹ ಬಹಳ ಚೆನ್ನಾಗಿ ಅರಿತುಕೊಂಡಿದ್ದೀರಿ. ಸತ್ಯಯುಗವು ಸುಖಧಾಮವಾಗಿದೆ ಮತ್ತು ಎಲ್ಲಿ ಆತ್ಮಗಳಿರುವರೋ ಅದಕ್ಕೆ ಶಾಂತಿಧಾಮವೆಂದು ಕರೆಯಲಾಗುವುದು. ನಾವು ಶಾಂತಿಧಾಮದ ನಿವಾಸಿಗಳಾಗಿದ್ದೇವೆಂದು ನಿಮ್ಮ ಬುದ್ಧಿಯಲ್ಲಿದೆ. ಈ ಕಲಿಯುಗಕ್ಕೆ ದುಃಖಧಾಮವೆಂದೂ ಹೇಳಲಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ - ನಾವಾತ್ಮಗಳು ಈಗ ಸ್ವರ್ಗದಲ್ಲಿ ಹೋಗುವುದಕ್ಕಾಗಿ ಮನುಷ್ಯರಿಂದ ದೇವತೆಗಳಾಗುವುದಕ್ಕಾಗಿ ಓದುತ್ತಿದ್ದೀರಿ. ಈ ಲಕ್ಷ್ಮಿ-ನಾರಾಯಣರು ದೇವತೆಗಳಲ್ಲವೆ. ಹೊಸಪ್ರಪಂಚಕ್ಕಾಗಿ ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ತಂದೆಯ ಮೂಲಕ ನೀವು ಓದುತ್ತೀರಿ. ಎಷ್ಟು ಓದುತ್ತೀರೋ, ವಿದ್ಯೆಯಲ್ಲಿ ಕೆಲವರ ಪುರುಷಾರ್ಥ ತೀಕ್ಷ್ಣವಾಗಿರುತ್ತದೆ, ಇನ್ನೂ ಕೆಲವರದು ಡೀಲ ಆಗಿರುತ್ತದೆ. ಯಾರು ಸತೋಪ್ರಧಾನ ಪುರುಷಾರ್ಥಿಗಳಾಗಿರುವರೋ ಅಂತಹವರು ತಮ್ಮ ಸಮಾನ ಮಾಡಿಕೊಳ್ಳುವ ನಂಬರ್ವಾರ್ ಪುರುಷಾರ್ಥ ಮಾಡಿಸುತ್ತಾರೆ. ಅನೇಕರ ಕಲ್ಯಾಣ ಮಾಡುತ್ತಾರೆ. ಹಣದಿಂದ ಎಷ್ಟು ತಮ್ಮ ಜೋಳಿಗೆಯನ್ನು ತುಂಬಿಸಿಕೊಂಡು ದಾನ ಮಾಡುವರೋ ಅಷ್ಟು ಲಾಭವಾಗುವುದು. ಮನುಷ್ಯರು ದಾನ ಮಾಡುತ್ತಾರೆಂದರೆ ಅದರ ಫಲವಾಗಿ ಇನ್ನೊಂದು ಜನ್ಮಕ್ಕೆ ಅಲ್ಪಕಾಲಕ್ಕಾಗಿ ಸಿಗುತ್ತದೆ. ಅದರಲ್ಲಿ ಸ್ವಲ್ಪವೇ ಸುಖ ಉಳಿದಂತೆ ದುಃಖವೇ ದುಃಖವಿದೆ. ನಿಮಗಂತೂ 21 ಜನ್ಮಗಳಿಗಾಗಿ ಸ್ವರ್ಗದ ಸುಖ ಸಿಗುತ್ತದೆ. ಸ್ವರ್ಗದ ಸುಖವೆಲ್ಲಿ, ಈ ದುಃಖವೆಲ್ಲಿ! ಬೇಹದ್ದಿನ ತಂದೆಯ ಮೂಲಕ ನಿಮಗೆ ಸ್ವರ್ಗದಲ್ಲಿ ಬೇಹದ್ದಿನ ಸುಖವು ಸಿಗುತ್ತದೆ. ಈಶ್ವರಾರ್ಥವಾಗಿ ದಾನ-ಪುಣ್ಯ ಮಾಡುತ್ತಾರೆ ಆದರೆ ಅದು ಪರೋಕ್ಷವಾಗಿದೆ. ಈಗ ನೀವು ಸನ್ಮುಖದಲ್ಲಿದ್ದೀರಲ್ಲವೆ. ತಂದೆಯು ಈಗ ಸನ್ಮುಖದಲ್ಲಿ ಕುಳಿತು ತಿಳಿಸುತ್ತಾರೆ - ಭಕ್ತಿಮಾರ್ಗದಲ್ಲಿ ಈಶ್ವರಾರ್ಥವಾಗಿ ದಾನ-ಪುಣ್ಯ ಮಾಡುತ್ತಾರೆಂದರೆ ಅದರ ಫಲವು ಇನ್ನೊಂದು ಜನ್ಮದಲ್ಲಿ ಸಿಗುತ್ತದೆ. ಯಾರಾದರೂ ಒಳ್ಳೆಯದನ್ನು ಮಾಡಿದರೆ ಒಳ್ಳೆಯದೇ ಸಿಗುತ್ತದೆ, ಪಾಪಕರ್ಮಗಳನ್ನು ಮಾಡಿದರೆ ಅದರ ಫಲವು ಹಾಗೆಯೇ ಸಿಗುತ್ತದೆ. ಇಲ್ಲಿ ಕಲಿಯುಗದಲ್ಲಿ ಪಾಪಕರ್ಮಗಳೇ ಆಗುತ್ತದೆ, ಪುಣ್ಯವೇ ಆಗುವುದಿಲ್ಲ. ಅಲ್ಪಕಾಲಕ್ಕಾಗಿ ಸ್ವಲ್ಪಸುಖವು ಸಿಗಬಹುದಷ್ಟೆ. ಈಗಂತೂ ನೀವು ಭವಿಷ್ಯ ಸತ್ಯಯುಗದಲ್ಲಿ 21 ಜನ್ಮಗಳಿಗಾಗಿ ಸದಾ ಸುಖಿಯಾಗುತ್ತೀರಿ. ಅದರ ಹೆಸರೇ ಆಗಿದೆ - ಸುಖಧಾಮ. ಪ್ರದರ್ಶನಿಯಲ್ಲಿಯೂ ಸಹ ನೀವು ಬರೆಯಬಹುದು - ಇದು ಶಾಂತಿಧಾಮ ಮತ್ತು ಸುಖಧಾಮದ ಮಾರ್ಗವಾಗಿದೆ. ಶಾಂತಿಧಾಮ ಮತ್ತು ಸುಖಧಾಮದಲ್ಲಿ ಹೋಗುವ ಸಹಜ ಮಾರ್ಗವಾಗಿದೆ. ಈಗಂತೂ ಕಲಿಯುಗವಲ್ಲವೆ, ಕಲಿಯುಗದಿಂದ ಸತ್ಯಯುಗ, ಪತಿತಪ್ರಪಂಚದಿಂದ ಪಾವನ ಪ್ರಪಂಚದಲ್ಲಿ ಹೋಗುವ ಮಾರ್ಗವನ್ನು ಕವಡೆಯಷ್ಟೂ ಖರ್ಚಿಲ್ಲದೆ ಅರಿತುಕೊಳ್ಳಬಹುದಾಗಿದೆ. ಇದರಿಂದ ಮನುಷ್ಯರು ಅರ್ಥಮಾಡಿಕೊಳ್ಳಲಿ ಏಕೆಂದರೆ ಕಲ್ಲುಬುದ್ಧಿಯವರಾಗಿದ್ದಾರಲ್ಲವೆ. ತಂದೆಯು ಬಹಳ ಸಹಜ ಮಾಡಿ ತಿಳಿಸುತ್ತಾರೆ. ಇದರ ಹೆಸರೇ ಆಗಿದೆ - ಸಹಜ ರಾಜಯೋಗ, ಸಹಜ ಜ್ಞಾನ.

ತಂದೆಯು ನೀವು ಮಕ್ಕಳನ್ನು ಎಷ್ಟೊಂದು ಬುದ್ಧಿವಂತರನ್ನಾಗಿ ಮಾಡುತ್ತಾರೆ. ಈ ಲಕ್ಷ್ಮೀ-ನಾರಾಯಣರು ಬುದ್ಧಿವಂತರಾಗಿದ್ದಾರೆ. ಭಲೆ ಕೃಷ್ಣನಿಗಾಗಿ ಏನೇನನ್ನೋ ಬರೆದುಬಿಟ್ಟಿದ್ದಾರೆ. ಇದೆಲ್ಲವೂ ಸುಳ್ಳು-ಕಳಂಕವಾಗಿದೆ. ಅಮ್ಮ ನಾನು ಬೆಣ್ಣೆಯನ್ನು ತಿನ್ನಲಿಲ್ಲವೆಂದು ಕೃಷ್ಣನು ಹೇಳುತ್ತಾನೆ. ಇದರ ಅರ್ಥವನ್ನೂ ಸಹ ತಿಳಿದುಕೊಂಡಿಲ್ಲ. ನಾನು ಬೆಣ್ಣೆಯನ್ನು ತಿನ್ನಲಿಲ್ಲವೆಂದಮೇಲೆ ತಿಂದವರು ಯಾರು? ಮಕ್ಕಳಿಗೆ ಹಾಲನ್ನು ಕುಡಿಸಲಾಗುತ್ತದೆ, ಮಕ್ಕಳು ಬೆಣ್ಣೆಯನ್ನು ತಿನ್ನುವರೋ ಅಥವಾ ಹಾಲನ್ನು ಕುಡಿಯುವರೋ! ಮಡಕೆಯನ್ನು ಹೊಡೆದನು ಎಂದು ಯಾವ ಮಾತುಗಳನ್ನು ತೋರಿಸಿದ್ದಾರೆಯೋ ಅಂತಹ ಮಾತೇನೂ ಇಲ್ಲ. ಕೃಷ್ಣನು ಸ್ವರ್ಗದ ಮೊದಲನೇ ರಾಜಕುಮಾರನಾಗಿದ್ದಾನೆ. ಮಹಿಮೆಯೆಲ್ಲವೂ ಒಬ್ಬ ಶಿವತಂದೆಯದೇ ಆಗಿದೆ. ಪ್ರಪಂಚದಲ್ಲಿ ತಂದೆಯಷ್ಟು ಮಹಿಮೆ ಮತ್ತ್ಯಾರದೂ ಇಲ್ಲ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ ಆದರೆ ಭಕ್ತಿಮಾರ್ಗದ ಮಹಿಮೆಯೂ ಇದೆ. ಭಕ್ತಮಾಲೆಯ ಗಾಯನವೂ ಇದೆಯಲ್ಲವೆ. ಸ್ತ್ರೀಯರಲ್ಲಿ ಮೀರಾಳ ಹೆಸರಿದೆ, ಪುರುಷರಲ್ಲಿ ನಾರದನು ಮುಖ್ಯವಾದವನೆಂದು ಗಾಯನವಿದೆ. ನೀವು ತಿಳಿದುಕೊಂಡಿದ್ದೀರಿ - ಒಂದು ಭಕ್ತಮಾಲೆ ಇನ್ನೊಂದು ಜ್ಞಾನಮಾಲೆಯಾಗಿದೆ. ಭಕ್ತಮಾಲೆಯಿಂದ ರುದ್ರಮಾಲೆಯಾಗಿದೆ ಮತ್ತೆ ರುದ್ರಮಾಲೆಯಿಂದ ವಿಷ್ಣುವಿನ ಮಾಲೆಯಾಗುತ್ತದೆ. ರುದ್ರಮಾಲೆಯು ಸಂಗಮಯುಗದ್ದಾಗಿದೆ. ಈ ರಹಸ್ಯವು ನೀವು ಮಕ್ಕಳ ಬುದ್ಧಿಯಲ್ಲಿದೆ. ಇವೆಲ್ಲಾ ಮಾತುಗಳನ್ನು ತಂದೆಯು ನಿಮಗೆ ಸನ್ಮುಖದಲ್ಲಿ ತಿಳಿಸುತ್ತಾರೆ. ನೀವು ಸನ್ಮುಖದಲ್ಲಿ ಕುಳಿತುಕೊಂಡಾಗ ರೋಮಾಂಚನವಾಗಿಬಿಡಬೇಕು ಏಕೆಂದರೆ ಅಹೋ ಸೌಭಾಗ್ಯವಾಗಿದೆ. ನಾವೀಗ ದೌರ್ಭಾಗ್ಯಶಾಲಿಗಳಿಂದ 100% ಸೌಭಾಗ್ಯಶಾಲಿಗಳಾಗುತ್ತೇವೆ. ಕುಮಾರಿಯರಂತೂ ಕಾಮದ ಕತ್ತಿಯ ಕೆಳಗಡೆ ಹೋಗಿಲ್ಲ. ತಂದೆಯು ತಿಳಿಸುತ್ತಾರೆ - ಅದು ಕತ್ತಿಯಾಗಿದೆ, ಜ್ಞಾನಕ್ಕೂ ಕತ್ತಿಯೆಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಜ್ಞಾನದ ಅಸ್ತ್ರಶಸ್ತ್ರಗಳನ್ನು ದೇವಿಯರಿಗೆ ಸ್ಥೂಲವಾದ ಅಸ್ತ್ರಶಸ್ತ್ರಗಳ ರೂಪದಲ್ಲಿ ಕೊಟ್ಟುಬಿಟ್ಟಿದ್ದಾರೆ. ಅವು ಹಿಂಸಾತ್ಮಕ ವಸ್ತುಗಳಾಗಿವೆ. ಸ್ವದರ್ಶನ ಚಕ್ರವು ಯಾವುದೆಂಬುದೂ ಸಹ ಮನುಷ್ಯರಿಗೆ ತಿಳಿದಿಲ್ಲ. ಶಾಸ್ತ್ರಗಳಲ್ಲಿ ಕೃಷ್ಣನಿಗೂ ಸಹ ಸ್ವದರ್ಶನಚಕ್ರವನ್ನು ಕೊಟ್ಟು ಹಿಂಸೆಯೇ ಹಿಂಸೆಯನ್ನು ತೋರಿಸಿಬಿಟ್ಟಿದ್ದಾರೆ. ವಾಸ್ತವದಲ್ಲಿ ಇದು ಜ್ಞಾನದ ಮಾತಾಗಿದೆ. ನೀವೀಗ ಸ್ವದರ್ಶನಚಕ್ರಧಾರಿಗಳಾಗಿದ್ದೀರಿ. ಅದಕ್ಕೆ ಅವರು ಹಿಂಸೆಯ ಮಾತನ್ನು ತಿಳಿಸಿಬಿಟ್ಟಿದ್ದಾರೆ. ಈಗ ನೀವು ಮಕ್ಕಳಿಗೆ ಸ್ವ ಅರ್ಥಾತ್ ಚಕ್ರದ ಜ್ಞಾನವು ಸಿಕ್ಕಿದೆ. ನಿಮಗೆ ತಂದೆಯು ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣ ಕುಲಭೂಷಣರು, ಸ್ವದರ್ಶನಚಕ್ರಧಾರಿಗಳೆಂದು ಹೇಳುತ್ತಾರೆ. ಇದರ ಅರ್ಥವನ್ನು ನೀವೇ ತಿಳಿದುಕೊಂಡಿದ್ದೀರಿ. ನಿಮ್ಮಲ್ಲಿ ಇಡೀ 84 ಜನ್ಮಗಳ ಮತ್ತು ಸೃಷ್ಟಿಚಕ್ರದ ಜ್ಞಾನವಿದೆ. ಮೊದಲು ಸತ್ಯಯುಗದಲ್ಲಿ ಒಂದು ಸೂರ್ಯವಂಶಿ ಧರ್ಮವಿರುತ್ತದೆ ನಂತರ ಚಂದ್ರವಂಶಿ. ಎರಡನ್ನೂ ಸೇರಿಸಿ ಸ್ವರ್ಗವೆಂದು ಕರೆಯಲಾಗುತ್ತದೆ. ಈ ಮಾತುಗಳು ನಿಮ್ಮಲ್ಲಿಯೂ ನಂಬರ್ವಾರ್ ಎಲ್ಲರ ಬುದ್ಧಿಯಲ್ಲಿದೆ. ಹೇಗೆ ನಿಮಗೆ ತಂದೆಯು ಓದಿಸಿದ್ದಾರೆ. ನೀವು ಓದಿ ಬುದ್ಧಿವಂತರಾಗಿದ್ದೀರಿ ಅಂದಮೇಲೆ ನೀವು ಅನ್ಯರ ಕಲ್ಯಾಣವನ್ನೂ ಮಾಡಬೇಕಾಗಿದೆ. ಸ್ವದರ್ಶನಚಕ್ರಧಾರಿಗಳಾಗಬೇಕಾಗಿದೆ. ಎಲ್ಲಿಯವರೆಗೆ ಬ್ರಹ್ಮಾಮುಖವಂಶಾವಳಿಯಾಗುವುದಿಲ್ಲವೋ ಅಲ್ಲಿಯವರೆಗೆ ಶಿವತಂದೆಯಿಂದ ಆಸ್ತಿಯನ್ನು ಹೇಗೆ ತೆಗೆದುಕೊಳ್ಳುವಿರಿ! ಈಗ ನೀವು ಬ್ರಾಹ್ಮಣರಾಗಿದ್ದೀರಿ, ಶಿವತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ ಅಂದಮೇಲೆ ಇದನ್ನು ಮರೆಯಬಾರದು. ಈ ಅಂಶಗಳನ್ನು ಬರೆದಿಟ್ಟುಕೊಳ್ಳಬೇಕು - ಇದು 84 ಜನ್ಮಗಳ ಏಣಿಯಾಗಿದೆ, ಏಣಿಯನ್ನಿಳಿಯುವುದು ಸಹಜವಾಗುತ್ತದೆ. ಏಣಿಯನ್ನು ಹತ್ತುವಾಗ ಸೊಂಟದ ಮೇಲೆ ಕೈಯನ್ನಿಟ್ಟು ಹೇಗೆ ಹತ್ತುತ್ತಾರೆ? ಆದರೆ ಲಿಫ್ಟ್ ಸಹ ಇದೆ. ಈಗ ತಂದೆಯು ನಿಮಗೆ ಲಿಫ್ಟ್ ನ್ನು ಕೊಡಲು ಬರುತ್ತಾರೆ. ಸೆಕೆಂಡಿನಲ್ಲಿ ಏರುವಕಲೆಯಾಗುತ್ತದೆ. ನಮ್ಮದು ಏರುವಕಲೆಯಾಗಿದೆ. ಅತಿಪ್ರಿಯ ತಂದೆಯು ಸಿಕ್ಕಿದ್ದಾರೆ, ಅವರಂತಹ ಪ್ರಿಯವಸ್ತು ಯಾವುದೂ ಇಲ್ಲವೆಂದು ಈಗ ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು. ಸಾಧು-ಸಂತ ಮೊದಲಾದವರೆಲ್ಲರೂ ಆ ಒಬ್ಬ ಪ್ರಿಯತಮನನ್ನೇ ನೆನಪು ಮಾಡುತ್ತಾರೆ, ಎಲ್ಲರೂ ಅವರ ಪ್ರಿಯತಮೆಯರಾಗಿದ್ದಾರೆ ಆದರೆ ಅವರು ಯಾರು ಎಂಬುದೇನನ್ನೂ ತಿಳಿದುಕೊಂಡಿಲ್ಲ. ಕೇವಲ ಸರ್ವವ್ಯಾಪಿಯೆಂದು ಹೇಳಿಬಿಡುತ್ತಾರೆ.

ನೀವೀಗ ತಿಳಿದುಕೊಂಡಿದ್ದೀರಿ - ಶಿವತಂದೆಯು ನಮಗೆ ಇವರ ಮೂಲಕ ನಮಗೆ ಓದಿಸುತ್ತಾರೆ. ಶಿವತಂದೆಗೆ ತಮ್ಮ ಶರೀರವಂತೂ ಇಲ್ಲ, ಅವರು ಪರಮ ಆತ್ಮನಾಗಿದ್ದಾರೆ. ಪರಮ ಆತ್ಮನೆಂದರೆ ಪರಮಾತ್ಮ. ಅವರ ಹೆಸರು ಶಿವನೆಂದಾಗಿದೆ. ಉಳಿದೆಲ್ಲಾ ಆತ್ಮಗಳಿಗೆ ತಮ್ಮ ಶರೀರದ ಮೇಲೆ ಬೇರೆ-ಬೇರೆ ಹೆಸರುಗಳಿರುತ್ತವೆ. ಇವರೊಬ್ಬರೇ ಪರಮ ಆತ್ಮನಾಗಿದ್ದಾರೆ. ಇವರ ಹೆಸರು ಶಿವನೆಂದಾಗಿದೆ ಮತ್ತೆ ಮನುಷ್ಯರು ಇವರಿಗೆ ಅನೇಕ ಹೆಸರುಗಳನ್ನಿಟ್ಟುಬಿಟ್ಟಿದ್ದಾರೆ, ಭಿನ್ನ-ಭಿನ್ನ ಮಂದಿರಗಳನ್ನು ಕಟ್ಟಿಸಿದ್ದಾರೆ. ಈಗ ನೀವು ಅರ್ಥವನ್ನು ತಿಳಿದುಕೊಳ್ಳುತ್ತೀರಿ. ಬಾಂಬೆಯಲ್ಲಿ ಬಬುಲ್ನಾಥನ ಮಂದಿರವಿದೆ, ಈ ಸಮಯದಲ್ಲಿ ನಿಮ್ಮನ್ನು ಮುಳ್ಳುಗಳಿಂದ ಹೂಗಳನ್ನಾಗಿ ಮಾಡುತ್ತಾರೆ, ವಿಶ್ವದ ಮಾಲೀಕರಾಗುತ್ತೀರಿ ಅಂದಾಗ ಮೊದಲ ಮುಖ್ಯಮಾತು ಇದೇ ಆಗಿದೆ - ನಾವಾತ್ಮಗಳ ತಂದೆಯು ಒಬ್ಬರೇ ಆಗಿದ್ದಾರೆ. ಅವರಿಂದಲೇ ಭಾರತವಾಸಿಗಳಿಗೆ ಆಸ್ತಿಯು ಸಿಗುತ್ತದೆ. ಈ ಲಕ್ಷ್ಮೀ-ನಾರಾಯಣರು ಭಾರತದವರಾಗಿದ್ದಾರಲ್ಲವೆ, ಚೀನಾದವರಲ್ಲ. ಚೀನಾದವರಾಗಿದ್ದರೆ ಮುಖವೇ ಬೇರೆಯಾಗಿರುತ್ತಿತ್ತು. ಇವರು ಭಾರತದವರೇ ಆಗಿದ್ದಾರೆ. ಮೊಟ್ಟಮೊದಲು ಸುಂದರರಾಗಿದ್ದವರು ನಂತರ ಕಪ್ಪಾಗುತ್ತಾರೆ. ಆತ್ಮದಲ್ಲಿಯೇ ತುಕ್ಕುಬೀಳುತ್ತದೆ, ಕಪ್ಪಾಗುತ್ತದೆ. ಉದಾಹರಣೆಯೆಲ್ಲವೂ ಇದರ ಮೇಲಿದೆ, ಭ್ರಮರಿಯು ಕೀಟವನ್ನು ಪರಿವರ್ತನೆ ಮಾಡಿ ತನ್ನ ಸಮಾನ ಮಾಡಿಕೊಳ್ಳುತ್ತದೆ. ಸನ್ಯಾಸಿಗಳೇನು ಪರಿವರ್ತನೆ ಮಾಡುತ್ತಾರೆ! ಶ್ವೇತವಸ್ತ್ರಧಾರಿಗಳಿಗೆ ಕಾವೀ ಬಟ್ಟೆಗಳನ್ನು ತೊಡಿಸಿ ತಲೆತಿರುಗಿಸಿಬಿಡುತ್ತಾರೆ. ನೀವಂತೂ ಈ ಜ್ಞಾನವನ್ನು ತಿಳಿದುಕೊಳ್ಳುತ್ತೀರಿ. ಈ ಲಕ್ಷ್ಮೀ-ನಾರಾಯಣರ ಹಾಗೇ ಶೋಭಾಯಮಾನವಾಗಿಬಿಡುತ್ತೀರಿ. ಈಗಂತೂ ಪ್ರಕೃತಿಯೂ ತಮೋಪ್ರಧಾನವಾಗಿದೆ ಅದರಿಂದ ಈ ಧರಣಿಯೂ ತಮೋಪ್ರಧಾನವಾಗಿದೆ, ನಷ್ಟದಾಯಕವಾಗಿದೆ. ಆಕಾಶದಲ್ಲಿ ಬಿರುಗಾಳಿ ಏಳುತ್ತದೆ, ಅದರಿಂದ ಎಷ್ಟೊಂದು ನಷ್ಟ ಮಾಡುತ್ತಿದೆ ಎಷ್ಟೊಂದು ಉಪದ್ರವಗಳಾಗುತ್ತಿರುತ್ತವೆ, ಈಗ ಈ ಪ್ರಪಂಚದಲ್ಲಿ ಪರಮ ದುಃಖವಿದೆ, ಮತ್ತೆ ಸತ್ಯಯುಗದಲ್ಲಿ ಪರಮ ಸುಖವಿರುವುದು. ತಂದೆಯು ಪರಮ ದುಃಖದಿಂದ ಪರಮ ಸುಖದಲ್ಲಿ ಕರೆದುಕೊಂಡು ಹೋಗುತ್ತಾರೆ. ಇದರ ವಿನಾಶವಾದಮೇಲೆ ಎಲ್ಲವೂ ಸತೋಪ್ರಧಾನವಾಗಿಬಿಡುತ್ತದೆ. ಈಗ ನೀವು ಪುರುಷಾರ್ಥ ಮಾಡಿ ತಂದೆಯಿಂದ ಎಷ್ಟು ಆಸ್ತಿಯನ್ನು ತೆಗೆದುಕೊಳ್ಳಬೇಕೋ ಅಷ್ಟು ತೆಗೆದುಕೊಳ್ಳಿ. ಇಲ್ಲದಿದ್ದರೆ ಅಂತಿಮದಲ್ಲಿ ತಂದೆಯು ಬಂದರು ಆದರೆ ನಾವು ಏನನ್ನೂ ತೆಗೆದುಕೊಳ್ಳಲಿಲ್ಲ ಎಂದು ಪಶ್ಚಾತ್ತಾಪ ಪಡಬೇಕಾಗುವುದು. ಬರೆಯಲ್ಪಟ್ಟಿದೆ - ಬಿದುರಿನ ಕಾಡಿಗೆ ಬೆಂಕಿ ಬೀಳುವುದಿದೆ ಆಗ ಕುಂಭಕರ್ಣನ ನಿದ್ರೆಯಿಂದ ಏಳುತ್ತಾರೆ ಮತ್ತೆ ಹಾಯ್ ಹಾಯ್ ಎಂದು ಸತ್ತುಹೋಗುತ್ತಾರೆ. ಹಾಯ್ ಹಾಯ್ನ ನಂತರ ಜಯಜಯಕಾರವಾಗುತ್ತದೆ. ಕಲಿಯುಗದಲ್ಲಿ ಹಾಯ್ ಹಾಯ್ ಇದೆಯಲ್ಲವೆ, ಒಬ್ಬರು ಇನ್ನೊಬ್ಬರನ್ನು ಸಾಯಿಸುತ್ತಿರುತ್ತಾರೆ. ಅನೇಕರು ಸಾಯುತ್ತಾರೆ, ಕಲಿಯುಗದ ನಂತರ ಮತ್ತೆ ಸತ್ಯಯುಗವು ಅವಶ್ಯವಾಗಿ ಬರುವುದು. ಮಧ್ಯದಲ್ಲಿ ಈ ಸಂಗಮಯುಗವಿದೆ, ಇದಕ್ಕೆ ಪುರುಷೋತ್ತಮ ಯುಗವೆಂದು ಕರೆಯಲಾಗುತ್ತದೆ. ತಂದೆಯು ತಮೋಪ್ರಧಾನರಿಂದ ಸತೋಪ್ರಧಾನರಾಗುವ ಯುಕ್ತಿಯನ್ನು ಬಹಳ ಚೆನ್ನಾಗಿ ತಿಳಿಸುತ್ತಾರೆ. ಕೇವಲ ಇಷ್ಟನ್ನೇ ಹೇಳುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ ಮತ್ತೇನನ್ನೂ ಮಾಡುವಂತಿಲ್ಲ. ಈಗ ನೀವು ಮಕ್ಕಳು ತಲೆಯನ್ನೂ ಬಾಗಬೇಕಾಗಿಲ್ಲ. ತಂದೆಗೆ ಯಾರಾದರೂ ಕೈಜೋಡಿಸುತ್ತಾರೆಂದರೆ ತಂದೆಯು ಹೇಳುತ್ತಾರೆ - ನೀವಾತ್ಮನಿಗೂ ಕೈಯಿಲ್ಲ, ತಂದೆಗೂ ಕೈಯಿಲ್ಲ ಅಂದಮೇಲೆ ಕೈಯನ್ನೇಕೆ ಜೋಡಿಸುತ್ತೀರಿ! ಕಲಿಯುಗೀ ಭಕ್ತಿಮಾರ್ಗದ ಒಂದು ಚಿಹ್ನೆಯೂ ಇರಬಾರದು. ಹೇ ಆತ್ಮ, ನೀನು ಕೈಯನ್ನೇಕೆ ಜೋಡಿಸುತ್ತೀಯಾ? ಕೇವಲ ತಂದೆಯಾದ ನನ್ನನ್ನು ನೆನಪು ಮಾಡು. ನೆನಪಿನ ಅರ್ಥವು ಕೈಜೋಡಿಸುವುದಲ್ಲ. ಮನುಷ್ಯರು ಸೂರ್ಯನಿಗೂ ಕೈಜೋಡಿಸುತ್ತಾರೆ, ಮಹಾತ್ಮರಿಗೂ ಕೈಜೋಡಿಸುತ್ತಾರೆ ಆದರೆ ನೀವು ಕೈಜೋಡಿಸುವಂತಿಲ್ಲ. ಇದು (ಬ್ರಹ್ಮಾ) ನಾನು ಲೋನ್ ಆಗಿ ಪಡೆದಿರುವ ಶರೀರವಾಗಿದೆ. ಆದರೆ ಯಾರಾದರೂ ನಮಸ್ಕಾರ ಮಾಡುತ್ತಾರೆಂದರೆ ಅದಕ್ಕೆ ಪ್ರತಿಯಾಗಿ ಕೈಜೋಡಿಸಲಾಗುತ್ತದೆ. ನೀವು ಇದನ್ನು ತಿಳಿದುಕೊಳ್ಳಬೇಕು - ನಾವಾತ್ಮಗಳಾಗಿದ್ದೇವೆ, ನಾವು ಈ ಬಂಧನದಿಂದ ಮುಕ್ತರಾಗಿ ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ, ಇದರಿಂದ ತಿರಸ್ಕಾರವು ಬರುತ್ತದೆ. ಈ ಹಳೆಯ ಶರೀರವನ್ನು ಬಿಟ್ಟುಬಿಡಬೇಕಾಗಿದೆ. ಹೇಗೆ ಸರ್ಪದ ಉದಾಹರಣೆಯಿದೆ, ಭ್ರಮರಿಯಲ್ಲಿ ಎಷ್ಟೊಂದು ಬುದ್ಧಿಯಿದೆ ಅದು ಕೀಟವನ್ನು ಭ್ರಮರಿಯನ್ನಾಗಿ ಮಾಡಿಬಿಡುತ್ತದೆ. ನೀವು ಮಕ್ಕಳೂ ಸಹ ಯಾರು ವಿಷಯಸಾಗರದಲ್ಲಿ ಮುಳುಗುತ್ತಿದ್ದಾರೆಯೋ ಅವರನ್ನು ಹೊರತೆಗೆದು ಕ್ಷೀರಸಾಗರದೆಡೆಗೆ ಕರೆದುಕೊಂಡು ಹೋಗುತ್ತೀರಿ. ಈಗ ತಂದೆಯು ತಿಳಿಸುತ್ತಾರೆ -ಮಕ್ಕಳೇ, ಈಗ ಶಾಂತಿಧಾಮಕ್ಕೆ ನಡೆಯಿರಿ, ಮನುಷ್ಯರು ಶಾಂತಿಗಾಗಿ ಎಷ್ಟೊಂದು ತಲೆಕೆಡಿಸಿಕೊಳ್ಳುತ್ತಾರೆ, ಸನ್ಯಾಸಿಗಳಿಗೆ ಸ್ವರ್ಗದ ಜೀವನ್ಮುಕ್ತಿಯು ಸಿಗುವುದಿಲ್ಲ. ಹಾ! ಮುಕ್ತಿಯು ಸಿಗುತ್ತದೆ, ದುಃಖದಿಂದ ಮುಕ್ತರಾಗಿ ಶಾಂತಿಧಾಮದಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ ಆದರೂ ಸಹ ಆತ್ಮವು ಮೊಟ್ಟಮೊದಲಿಗೆ ಜೀವನ್ಮುಕ್ತಿಯಲ್ಲಿ ಬರುತ್ತದೆ ಅರ್ಥಾತ್ ಸ್ವಲ್ಪ ಸುಖವಿರುತ್ತದೆ ನಂತರ ಕೊನೆಯಲ್ಲಿ ಜೀವನ ಬಂಧನದಲ್ಲಿ ಬರುತ್ತದೆ. ಆತ್ಮವು ಸತೋಪ್ರಧಾನವಾಗಿರುತ್ತದೆ ನಂತರ ಏಣಿಯನ್ನಿಳಿಯುತ್ತದೆ. ಮೊದಲು ಸುಖವನ್ನನುಭವಿಸಿ ನಂತರ ಕೆಳಗಿಳಿಯುತ್ತಾ ತಮೋಪ್ರಧಾನ ದುಃಖಿಯಾಗಿಬಿಡುತ್ತದೆ. ಈಗ ಮತ್ತೆ ಎಲ್ಲರನ್ನೂ ಹಿಂತಿರುಗಿ ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ, ತಂದೆಯು ಹೇಳುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡುವುದರಿಂದ ನೀವು ಪಾವನರಾಗಿಬಿಡುತ್ತೀರಿ.

ತಂದೆಯು ತಿಳಿಸಿದ್ದಾರೆ - ಮನುಷ್ಯನು ಶರೀರ ಬಿಡುವ ಸಮಯದಲ್ಲಿ ಬಹಳ ನೋವನ್ನನುಭವಿಸುತ್ತಾನೆ ಏಕೆಂದರೆ ಶಿಕ್ಷೆಯನ್ನನುಭವಿಸಬೇಕಾಗುತ್ತದೆ. ಹೇಗೆ ಕಾಶಿಯಲ್ಲಿ ಬಲಿಯಾಗುತ್ತಾರೆ ಏಕೆಂದರೆ ಶಿವನಿಗೆ ಬಲಿಯಾಗುವುದರಿಂದ ಮುಕ್ತಿಯು ಸಿಕ್ಕಿಬಿಡುತ್ತದೆಯೆಂದು ತಿಳಿದುಕೊಂಡಿದ್ದಾರೆ. ನೀವೀಗ ಬಲಿಹಾರಿಯಾಗುತ್ತೀರಲ್ಲವೆ. ಇದಕ್ಕೆ ನೆನಪಾರ್ಥವಾಗಿ ಭಕ್ತಿಮಾರ್ಗದಲ್ಲಿಯೂ ಅವರು ಸ್ಥೂಲವಾಗಿ ಬಲಿಯಾಗುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ಹಿಂತಿರುಗಿ ಯಾರೂ ಹೋಗಲು ಸಾಧ್ಯವಿಲ್ಲ. ಹಾ! ಅವರು ಬಲಿಹಾರಿಯಾಗುವುದರಿಂದ ಪಾಪಗಳು ತುಂಡಾಗುತ್ತವೆ. ಮತ್ತೆ ಹೊಸದಾಗಿ ಲೆಕ್ಕಾಚಾರವು ಆರಂಭವಾಗುತ್ತದೆ. ನೀವು ಈ ಸೃಷ್ಟಿಚಕ್ರವನ್ನು ಅರಿತುಕೊಂಡಿದ್ದೀರಿ. ಈ ಸಮಯದಲ್ಲಿ ಎಲ್ಲರದು ಇಳಿಯುವ ಕಲೆಯಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಸರ್ವರ ಸದ್ಗತಿ ಮಾಡುತ್ತೇನೆ. ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗುತ್ತೇನೆ. ಪತಿತರನ್ನಂತೂ ಜೊತೆ ಕರೆದುಕೊಂಡು ಹೋಗುವುದಿಲ್ಲ ಆದ್ದರಿಂದ ಈಗ ಪವಿತ್ರರಾಗಿ ಆಗ ನಿಮ್ಮ ಜ್ಯೋತಿಯು ಜಾಗೃತವಾಗುವುದು. ವಿವಾಹದ ಸಮಯದಲ್ಲಿ ಸ್ತ್ರೀಯ ತಲೆಯ ಮೇಲೆ ಮಡಿಕೆಯಲ್ಲಿ ಜ್ಯೋತಿಯನ್ನು ಬೆಳಗಿಸುತ್ತಾರೆ, ಪತಿಯ ತಲೆಯ ಬೆಳಗಿಸುವುದಿಲ್ಲ ಏಕೆಂದರೆ ಪತಿಯು ಪರಮೇಶ್ವರನೆಂದು ಹೇಳುತ್ತಾರೆ ಅಂದಮೇಲೆ ಈಶ್ವರನ ಮೇಲೆ ಹೇಗೆ ಜ್ಯೋತಿಯನ್ನು ಬೆಳಗಿಸುತ್ತಾರೆ! ಆದ್ದರಿಂದ ತಂದೆಯು ತಿಳಿಸುತ್ತಾರೆ - ನನ್ನ ಜ್ಯೋತಿಯಂತೂ ಸದಾ ಜಾಗೃತವಾಗಿರುತ್ತದೆ. ನಾನು ನಿಮ್ಮ ಜ್ಯೋತಿಯನ್ನು ಬೆಳಗಿಸುತ್ತೇನೆ. ತಂದೆಗೆ ಪರಂಜ್ಯೋತಿಯೆಂದೂ ಹೇಳುತ್ತಾರೆ. ಬ್ರಹ್ಮಸಮಾಜದವರು ಜ್ಯೋತಿಯನ್ನು ಮಾನ್ಯಮಾಡುತ್ತಾರೆ. ಸದಾ ಜ್ಯೋತಿಯು ಬೆಳಗಿರುತ್ತದೆ. ಅದನ್ನೇ ನೆನಪು ಮಾಡುತ್ತಿರುತ್ತಾರೆ, ಅದನ್ನೇ ಭಗವಂತನೆಂದು ತಿಳಿಯುತ್ತಾರೆ. ಎರಡನೆಯದಾಗಿ, ಚಿಕ್ಕ ಜ್ಯೋತಿಯು (ಆತ್ಮ) ದೊಡ್ಡ ಜ್ಯೋತಿಯಲ್ಲಿ (ಪರಮಾತ್ಮ) ಸಮಾವೇಶವಾಗುತ್ತದೆಯೆಂದು ತಿಳಿಯುತ್ತಾರೆ. ಅನೇಕ ಮತಗಳಿವೆ. ತಂದೆಯು ತಿಳಿಸುತ್ತಾರೆ - ನಿಮ್ಮ ಧರ್ಮವಂತೂ ಅಪಾರ ಸುಖ ಕೊಡುವಂತಹದ್ದಾಗಿದೆ, ನೀವು ಸ್ವರ್ಗದಲ್ಲಿ ಬಹಳ ಸುಖವನ್ನು ನೋಡುತ್ತೀರಿ. ಹೊಸಪ್ರಪಂಚದಲ್ಲಿ ನೀವು ದೇವತೆಗಳಾಗುತ್ತೀರಿ. ನಿಮ್ಮ ವಿದ್ಯೆಯೇ ಭವಿಷ್ಯದ ಹೊಸಪ್ರಪಂಚಕ್ಕಾಗಿ ಇದೆ. ಮತ್ತೆಲ್ಲಾ ವಿದ್ಯೆಗಳು ಇಲ್ಲಿಗಾಗಿಯೇ ಓದಲಾಗುತ್ತದೆ. ಆದರೆ ಇಲ್ಲಿ ನೀವು ಓದಿ ಭವಿಷ್ಯದಲ್ಲಿ ಪದವಿಯನ್ನು ಪಡೆಯುವಿರಿ. ಗೀತೆಯಲ್ಲಿಯೂ ಅವಶ್ಯವಾಗಿ ರಾಜಯೋಗದ ಮಾತನ್ನು ಬರೆದಿದ್ದಾರೆ ನಂತರ ಕೊನೆಯಲ್ಲಿ ಯುದ್ಧವಾಯಿತು, ಏನೂ ಉಳಿಯಲಿಲ್ಲ. ಪಾಂಡವರ ಜೊತೆ ನಾಯಿಯನ್ನು ತೋರಿಸುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ದೇವಿ-ದೇವತೆಗಳನ್ನಾಗಿ ಮಾಡುತ್ತೇನೆ. ಇಲ್ಲಂತೂ ಅನೇಕ ಪ್ರಕಾರದ ದುಃಖವನ್ನು ಕೊಡುವಂತಹ ಮನುಷ್ಯರಿದ್ದಾರೆ. ಕಾಮಕಟಾರಿಯನ್ನು ನಡೆಸಿ ಎಷ್ಟೊಂದು ದುಃಖಿಯನ್ನಾಗಿ ಮಾಡುತ್ತಾರೆ ಅಂದಾಗ ಈಗ ಬೇಹದ್ದಿನ ತಂದೆಯು ಜ್ಞಾನಸಾಗರನೇ ನಮಗೆ ಓದಿಸುತ್ತಿದ್ದಾರೆ. ಅವರು ಅತಿಪ್ರಿಯವಾದ ಪ್ರಿಯತಮನಾಗಿದ್ದಾರೆ ಎಂದು ಈಗ ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು. ನಾವು ಪ್ರಿಯತಮೆಯರು ಅವರನ್ನು ಅರ್ಧಕಲ್ಪ ನೆನಪು ಮಾಡುತ್ತೇವೆ. ಈಗ ತಂದೆಯು ತಿಳಿಸುತ್ತಾರೆ - ನಾನು ಬಂದಿದ್ದೇನೆ, ನೀವು ನನ್ನ ಮತದಂತೆ ನಡೆಯಿರಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ, ಬೇರೆ ಯಾರೂ ಇಲ್ಲ. ನನ್ನ ನೆನಪಿನ ಹೊರತು ನಿಮ್ಮ ಪಾಪಗಳು ಭಸ್ಮವಾಗುವುದಿಲ್ಲ. ಪ್ರತಿಯೊಂದು ಮಾತಿನಲ್ಲಿ ವೈದ್ಯರಿಂದ ಸಲಹೆಯನ್ನು ತೆಗೆದುಕೊಳ್ಳುತ್ತಾ ಇರಿ. ಹೀಗ್ಹೀಗೆ ಸಂಬಂಧವನ್ನು ನಿಭಾಯಿಸಿ ಎಂದು ತಂದೆಯು ಸಲಹೆ ನೀಡುತ್ತಾರೆ. ಒಂದುವೇಳೆ ಅವರ ಸಲಹೆಯಂತೆ ನಡೆಯುತ್ತೀರೆಂದರೆ ಹೆಜ್ಜೆ-ಹೆಜ್ಜೆಯಲ್ಲಿ ಪದಮದಷ್ಟು ಸಿಗುತ್ತದೆ. ತಂದೆಯ ಸಲಹೆಯನ್ನು ತೆಗೆದುಕೊಂಡರೆ ನಿಮ್ಮದೂ ಸಹ ಜವಾಬ್ದಾರಿಯು ತಪ್ಪುತ್ತದೆ. ಒಳ್ಳೆಯದು.

ಧಾರಣೆಗಾಗಿ ಮುಖ್ಯಸಾರ-
1. ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖದ ಆಸ್ತಿಯನ್ನು ಪಡೆಯಲು ಡೈರೆಕ್ಟ್ ಈಶ್ವರಾರ್ಥವಾಗಿ ದಾನ-ಪುಣ್ಯವನ್ನು ಮಾಡಬೇಕಾಗಿದೆ. ಜ್ಞಾನಧನದಿಂದ ಜೋಳಿಗೆಯನ್ನು ತುಂಬಿಸಿಕೊಂಡು ಎಲ್ಲರಿಗೆ ಕೊಡಬೇಕಾಗಿದೆ.

2. ಈ ಪುರುಷೋತ್ತಮ ಯುಗದಲ್ಲಿ ಸ್ವಯಂನ್ನು ಸರ್ವಬಂಧನಗಳಿಂದ ಮುಕ್ತಗೊಳಿಸಿಕೊಂಡು ಜೀವನ್ಮುಕ್ತರಾಗಬೇಕಾಗಿದೆ. ಭ್ರಮರಿಯ ತರಹ ಜ್ಞಾನದ ಭೂಂ ಭೂಂ ಮಾಡಿ ತಮ್ಮ ಸಮಾನರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.

ವರದಾನ:
ಸರ್ವ ಪ್ರಾಪ್ತಿಗಳ ಅನುಭವದ ಮುಖಾಂತರ ಶಕ್ತಿಶಾಲಿಯಾಗುವಂತಹ ಸದಾ ಸಫಲತಾಮೂರ್ತಿ ಭವ

ಯಾರು ಸರ್ವ ಪ್ರಾಪ್ತಿಗಳ ಅನುಭವಿಮೂರ್ತಿಯಾಗಿರುತ್ತಾರೆ ಅವರೇ ಶಕ್ತಿಶಾಲಿಯಾಗಿರುತ್ತಾರೆ, ಇಂತಹ ಶಕ್ತಿಶಾಲಿ ಸರ್ವಪ್ರಾಪ್ತಿಗಳ ಅನುಭವಿ ಆತ್ಮರೇ ಸಫಲತಾಮೂರ್ತಿಯಾಗುತ್ತಾರೆ ಏಕೆಂದರೆ ಈಗ ಎಲ್ಲ ಆತ್ಮರೂ ಸುಖ-ಶಾಂತಿಯ ಮಾಸ್ಟರ್ ದಾತ ಎಲ್ಲಿದ್ದಾರೆ ಎಂದು ಹುಡುಕುತಿದ್ದಾರೆ. ಯಾವಾಗ ನಿಮ್ಮ ಬಳಿ ಸರ್ವಶಕ್ತಿಗಳ ಸ್ಟಾಕ್ಯಿರುತ್ತದೆ ಆಗ ಮಾತ್ರ ಎಲ್ಲರನ್ನೂ ಸಂತುಷ್ಟ ಮಾಡಬಲ್ಲಿರಿ. ಹೇಗೆ ವಿದೇಶದಲ್ಲಿ ಒಂದೇ ಸ್ಟೋರ್ನಲ್ಲಿ ಎಲ್ಲಾ ವಸ್ತುಗಳೂ ಸಿಗುತ್ತವೆ ಅದೇ ರೀತಿ ನೀವೂ ಸಹ ಆಗಬೇಕು. ಹೀಗಲ್ಲ ಸಹನಶಕ್ತಿ ಇದ್ದು, ಅಳವಡಿಸಿಕೊಳ್ಳುವ ಶಕ್ತಿ ಇಲ್ಲ. ಸರ್ವಶಕ್ತಿಗಳ ಸ್ಟಾಕ್ ಇರಬೇಕು ಆಗ ಸಫಲತಾಮೂರ್ತಿಯಾಗಬಲ್ಲಿರಿ.

ಸ್ಲೋಗನ್:
ಮರ್ಯಾದೆಗಳೇ ಬ್ರಾಹ್ಮಣಜೀವನದ ಹೆಜ್ಜೆಯಾಗಿದೆ, ಹೆಜ್ಜೆ ಮೇಲೆ ಹೆಜ್ಜೆ ಇಡುವುದು ಎಂದರೆ ಗುರಿಯ ಸಮೀಪ ತಲುಪುವುದು.

ಅವ್ಯಕ್ತ ಸೂಚನೆ - ಸತ್ಯ ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ

ಇತ್ತೀಚೆಗೆ ಕೆಲವರು ಒಂದು ವಿಶೇಷ ಭಾಷೆಯನ್ನು ಬಳಸುತ್ತಾರೆ- ನಮ್ಮಿಂದ ಅಸತ್ಯತೆಯನ್ನು ನೋಡಲು ಸಾಧ್ಯವಿಲ್ಲ. ಅಸತ್ಯತೆಯನ್ನು ಕೇಳಲು ಸಾಧ್ಯವಿಲ್ಲ, ಆದ್ದರಿಂದ ಅಸತ್ಯತೆಯನ್ನು ನೋಡಿ, ಸುಳ್ಳನ್ನು ಕೇಳಿ ಒಳಗಡೆ ಆವೇಶ ಬಂದುಬಿಡುತ್ತದೆ. ಆದರೆ ಒಂದು ವೇಳೆ ಅದು ಅಸತ್ಯವಾಗಿದೆ ಹಾಗೂ ನಿಮಗೆ ಅಸತ್ಯ ನೋಡಿ ಆವೇಶ ಬರುತ್ತದೆ ಎಂದರೆ ಆ ಆವೇಶವು ಸಹ ಅಸತ್ಯ ಆಗಿದೆ ಅಲ್ಲವೇ. ಅಸತ್ಯತೆಯನ್ನು ಸಮಾಪ್ತಿ ಮಾಡುವುದಕ್ಕಾಗಿ ಸ್ವಯಂನಲ್ಲಿ ಸತ್ಯತೆಯ ಶಕ್ತಿಯನ್ನು ಧಾರಣೆ ಮಾಡಿ.