10.04.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಮ್ಮ ಉನ್ನತಿಗಾಗಿ ಪ್ರತಿನಿತ್ಯವು ಲೆಕ್ಕಪತ್ರವನ್ನು ತೆಗೆಯಿರಿ, ಇಡೀ ದಿನದಲ್ಲಿ ಚಲನೆಯು ಹೇಗಿತ್ತು, ಪರಿಶೀಲನೆ ಮಾಡಿಕೊಳ್ಳಿ - ಯಜ್ಞದ ಪ್ರತಿ ಪ್ರಾಮಾಣಿಕನಾಗಿದ್ದೇನೆಯೇ?”

ಪ್ರಶ್ನೆ:
ಯಾವ ಮಕ್ಕಳ ಪ್ರತಿ ತಂದೆಯ ಗೌರವವಿದೆ? ಆ ಗೌರವದ ಗುರುತೇನಾಗಿದೆ?

ಉತ್ತರ:
ಯಾವ ಮಕ್ಕಳು ತಂದೆಯ ಜೊತೆ ಸತ್ಯವಂತರು, ಯಜ್ಞದ ಪ್ರತಿ ಪ್ರಾಮಾಣಿಕರಾಗಿದ್ದಾರೆ, ಏನನ್ನೂ ಮುಚ್ಚಿಡುವುದಿಲ್ಲವೋ ಅಂತಹ ಮಕ್ಕಳಪ್ರತಿ ತಂದೆಗೆ ಬಹಳ ಗೌರವವಿರುತ್ತದೆ. ಗೌರವವಿರುವ ಕಾರಣವೇ ಅವರನ್ನು ಪ್ರೀತಿಮಾಡಿ ಮೇಲೆತ್ತುತ್ತಿರುತ್ತಾರೆ. ಸೇವೆಗಾಗಿಯೂ ಕಳುಹಿಸುತ್ತಿರುತ್ತಾರೆ. ಮಕ್ಕಳಿಗೆ ಸತ್ಯವನ್ನು ತಿಳಿಸಿ ಶ್ರೀಮತವನ್ನು ತೆಗೆದುಕೊಳ್ಳುವ ಬುದ್ಧಿವಂತಿಕೆಯಿರಬೇಕು.

ಗೀತೆ:
ಸಭೆಯಲ್ಲಿ ಜ್ಯೋತಿಯು ಬೆಳಗಿತು....................

ಓಂ ಶಾಂತಿ.
ವಾಸ್ತವದಲ್ಲಿ ಈ ಗೀತೆಯು ತಪ್ಪಾಯಿತು ಏಕೆಂದರೆ ನೀವು ಪರಂಜ್ಯೋತಿಯಲ್ಲ, ವಾಸ್ತವದಲ್ಲಿ ಆತ್ಮಕ್ಕೆ ಪರಂಜ್ಯೋತಿಯೆಂದು ಹೇಳಲಾಗುವುದಿಲ್ಲ. ಭಕ್ತರು ಅನೇಕ ಹೆಸರುಗಳನ್ನಿಟ್ಟುಬಿಟ್ಟಿದ್ದಾರೆ. ಅರಿತುಕೊಳ್ಳದ ಕಾರಣ ನೇತಿ ನೇತಿ, ನಮಗೂ ತಿಳಿದಿಲ್ಲ ನಮಗೂ ತಿಳಿದಿಲ್ಲವೆಂದು ಹೇಳುತ್ತಾರೆ, ನಾಸ್ತಿಕರಾಗಿದ್ದಾರೆ ಆದರೂ ಸಹ ಏನು ಬಂದರೆ ಆ ಹೆಸರನ್ನಿಟ್ಟುಬಿಡುತ್ತಾರೆ. ಪರಮಾತ್ಮನಿಗೆ ಬಹ್ಮ್ , ಪರಂಜ್ಯೋತಿ, ಕಲ್ಲು-ಮುಳ್ಳಿನಲ್ಲಿಯೂ ಇದ್ದಾರೆಂದು ಹೇಳಿಬಿಡುತ್ತಾರೆ ಏಕೆಂದರೆ ಭಕ್ತಿಮಾರ್ಗದಲ್ಲಿ ಯಾರೂ ತಂದೆಯನ್ನು ಯಥಾರ್ಥ ರೀತಿಯಿಂದ ಅರಿತುಕೊಳ್ಳಲಾಗುವುದಿಲ್ಲ ಅಂದಾಗ ತಂದೆಯೇ ಬಂದು ತನ್ನ ಪರಿಚಯವನ್ನು ಕೊಡಬೇಕಾಗುತ್ತದೆ. ಶಾಸ್ತ್ರ ಮೊದಲಾದುವುಗಳಲ್ಲಿಯೂ ಸಹ ತಂದೆಯ ಪರಿಚಯವಿಲ್ಲ. ಆದ್ದರಿಂದ ಅವರಿಗೆ ನಾಸ್ತಿಕರೆಂದು ಹೇಳಲಾಗುತ್ತದೆ. ಈಗ ಮಕ್ಕಳಿಗೆ ತಂದೆಯು ಪರಿಚಯವನ್ನು ನೀಡಿದ್ದಾರೆ ಆದರೆ ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡುವುದರಲ್ಲಿ ಬುದ್ಧಿಯ ಕೆಲಸವು ಬಹಳಷ್ಟಿದೆ, ಈ ಸಮಯದಲ್ಲಿ ಕಲ್ಲುಬುದ್ಧಿಯಾಗಿದೆ. ಆತ್ಮದಲ್ಲಿ ಬುದ್ಧಿಯಿದೆ. ಆತ್ಮದ ಬುದ್ಧಿ ಪಾರಸವಾಗಿದೆಯೇ ಅಥವಾ ಕಲ್ಲಾಗಿದೆಯೋ ಎಂಬುದು ಕರ್ಮೇಂದ್ರಿಯಗಳ ಮೂಲಕ ತಿಳಿದುಬರುತ್ತದೆ. ಎಲ್ಲವೂ ಆತ್ಮದ ಮೇಲೆ ಆಧಾರಿತವಾಗಿದೆ, ಮನುಷ್ಯರಂತೂ ಆತ್ಮವೇ ಪರಮಾತ್ಮ ಅದು ನಿರ್ಲೇಪವಾಗಿದೆ. ಆದ್ದರಿಂದ ಏನು ಬೇಕೋ ಅದನ್ನು ಮಾಡುತ್ತಾ ಇರಿ ಎಂದು ಹೇಳಿಬಿಡುತ್ತಾರೆ. ಮನುಷ್ಯರಾಗಿಯೂ ಸಹ ತಂದೆಯನ್ನೇ ಅರಿತುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ಮಾಯಾರಾವಣನು ಎಲ್ಲರ ಬುದ್ಧಿಯನ್ನು ಕಲ್ಲು ಮಾಡಿಬಿಟ್ಟಿದ್ದಾನೆ. ದಿನ-ಪ್ರತಿದಿನ ಇನ್ನೂ ಹೆಚ್ಚು ತಮೋಪ್ರಧಾನರಾಗುತ್ತಾ ಹೋಗುತ್ತಾರೆ. ಮಾಯೆಯ ಪ್ರಭಾವವು ಬಹಳಷ್ಟಿದೆ, ಸುಧಾರಣೆಯಾಗುವುದೇ ಇಲ್ಲ. ಮಕ್ಕಳಿಗೆ ಈಗ ತಿಳಿಸಲಾಗುತ್ತದೆ - ರಾತ್ರಿಯಲ್ಲಿ ಇಡೀ ದಿನದ ಲೆಕ್ಕಪತ್ರವನ್ನು ತೆಗೆಯಿರಿ - ಇಂದು ಏನು ಮಾಡಿದೆನು? ಭೋಜನವನ್ನು ದೇವತೆಗಳ ತರಹ ಸೇವಿಸಿದೆನೇ? ಚಲನೆಯು ನಿಯಮ ಪೂರ್ವಕವಾಗಿತ್ತೆ ಅಥವಾ ಅನಾಡಿಗಳ ತರಹ ಇತ್ತೆ? ಪ್ರತಿನಿತ್ಯವೂ ತಮ್ಮ ಲೆಕ್ಕಪತ್ರವನ್ನು ಸಂಭಾಲನೆ ಮಾಡಲಿಲ್ಲವೆಂದರೆ ನಿಮ್ಮ ಉನ್ನತಿ ಎಂದೂ ಆಗುವುದಿಲ್ಲ. ಅನೇಕರಿಗೆ ಮಾಯೆಯು ಪೆಟ್ಟು ಕೊಡುತ್ತಿರುತ್ತದೆ. ಇಂದು ನಮ್ಮ ಬುದ್ಧಿಯೋಗವು ಇಂಥಹವರ ನಾಮ-ರೂಪದಲ್ಲಿ ಹೋಯಿತು, ಇಂದು ಈ ಪಾಪಕರ್ಮವಾಯಿತೆಂದು ಬರೆಯುತ್ತಿರುತ್ತಾರೆ. ಹೀಗೆ ಸತ್ಯವಾಗಿ ಬರೆಯುವವರು ಕೋಟಿಯಲ್ಲಿ ಕೆಲವರೇ ಇದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಯಾರಾಗಿದ್ದೇನೆ, ಹೇಗಿದ್ದೇನೆಯೋ ಹಾಗೆಯೇ ನನ್ನನ್ನು ಯಾರೂ ತಿಳಿದುಕೊಂಡಿಲ್ಲ. ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿದಾಗಲೇ ಸ್ವಲ್ಪ ಬುದ್ಧಿಯಲ್ಲಿ ಕುಳಿತುಕೊಳ್ಳುವುದು. ತಂದೆಯು ತಿಳಿಸುತ್ತಾರೆ - ಭಲೆ ಒಳ್ಳೊಳ್ಳೆಯ ಮಕ್ಕಳಿದ್ದಾರೆ, ಬಹಳ ಚೆನ್ನಾಗಿ ಜ್ಞಾನವನ್ನು ತಿಳಿಸುತ್ತಾರೆ ಆದರೆ ಸ್ವಲ್ಪವೂ ಯೋಗವಿಲ್ಲ, ಪೂರ್ಣಪರಿಚಯವಿಲ್ಲ, ಅರ್ಥಮಾಡಿಕೊಂಡಿಲ್ಲ ಆದ್ದರಿಂದಲೇ ಅನ್ಯರಿಗೂ ತಿಳಿಸಲು ಸಾಧ್ಯವಿಲ್ಲ. ಇಡೀ ಪ್ರಪಂಚದ ಮನುಷ್ಯಮಾತ್ರರು ರಚಯಿತ ಮತ್ತು ರಚನೆಯನ್ನೇ ಅರಿತುಕೊಂಡಿಲ್ಲವೆಂದರೆ ಮತ್ತೇನನ್ನೂ ಅರಿತುಕೊಂಡಿಲ್ಲ. ಇದು ಸಹ ನಾಟಕದಲ್ಲಿ ನಿಗಧಿಯಾಗಿದೆ, ಕಲ್ಪದ ನಂತರವೂ ಆಗುವುದು. 5000 ವರ್ಷಗಳ ನಂತರ ಮತ್ತೆ ಈ ಸಮಯವು ಬರುವುದು ಆಗ ನಾನು ಬಂದು ತಿಳಿಸಬೇಕಾಗುವುದು. ರಾಜ್ಯಭಾಗ್ಯವನ್ನು ಪಡೆಯುವುದು ಕಡಿಮೆ ಮಾತಲ್ಲ! ಬಹಳ ಪರಿಶ್ರಮವಿದೆ. ಮಾಯೆಯು ಬಹಳ ಚೆನ್ನಾಗಿ ಯುದ್ಧ ಮಾಡುತ್ತದೆ. ಬಹಳ ದೊಡ್ಡಯುದ್ಧವು ನಡೆಯುತ್ತದೆ. ಹೇಗೆ ಮುಷ್ಠಿಯುದ್ಧವಿರುತ್ತದೆಯಲ್ಲವೆ. ಯಾರು ಬಹಳ ಬುದ್ಧಿವಂತರಿರುತ್ತಾರೆಯೋ ಅವರದೇ ಮುಷ್ಠಿಯುದ್ಧವು ನಡೆಯುತ್ತದೆ. ಆದರೂ ಸಹ ಒಬ್ಬರು ಇನ್ನೊಬ್ಬರನ್ನು ಮೂರ್ಛಿತರನ್ನಾಗಿ ಮಾಡಿಬಿಡುತ್ತಾರಲ್ಲವೆ. ಬಾಬಾ, ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ, ಇದಾಗುತ್ತದೆ, ಅದಾಗುತ್ತದೆ ಎಂದು ಹೇಳುತ್ತಾರೆ ಆದರೂ ಸಹ ಬಹಳ ಕೆಲವರು ಮಾತ್ರವೇ ಸತ್ಯವಾಗಿ ಬರೆಯುತ್ತಾರೆ. ಮುಚ್ಚಿಟ್ಟುಕೊಳ್ಳುವವರೂ ಅನೇಕರಿದ್ದಾರೆ. ನಾನು ತಂದೆಗೆ ಹೇಗೆ ಸತ್ಯವನ್ನು ತಿಳಿಸಬೇಕು? ಯಾವ ಶ್ರೀಮತವನ್ನು ತೆಗೆದುಕೊಳ್ಳಬೇಕೆಂಬ ತಿಳುವಳಿಕೆಯಿಲ್ಲ. ತಂದೆಗೆ ಗೊತ್ತಿದೆ, ಮಾಯೆಯು ಬಹಳ ಪ್ರಬಲವಾಗಿದೆ, ಸತ್ಯವನ್ನು ತಿಳಿಸಲು ಬಹಳ ಸಂಕೋಚವಾಗುತ್ತದೆ, ಅವರಿಂದ ಇಂತಹ ಕರ್ಮಗಳಾಗುತ್ತವೆ, ಅದನ್ನು ತಿಳಿಸಲು ಅವರಿಗೆ ಸಂಕೋಚವಾಗುತ್ತದೆ. ತಂದೆಯಂತೂ ಬಹಳ ಗೌರವ ನೀಡಿ ಮೇಲೆತ್ತುತ್ತಾರೆ, ಇವರು ಬಹಳ ಒಳ್ಳೆಯವರು, ಇವರನ್ನು ಸರ್ವತೋಮುಖ ಸೇವೆಗಾಗಿ ಕಳುಹಿಸುತ್ತೇನೆಂದು ಹೇಳುತ್ತಾರೆ ಆದರೆ ಅವರಿಗೆ ದೇಹಾಭಿಮಾನವು ಬಂದಿತು, ಮಾಯೆಯ ಪೆಟ್ಟು ಬಿತ್ತೆಂದರೆ ಅವರು ಬಿದ್ದರೆಂದರ್ಥ. ತಂದೆಯಂತೂ ಮೇಲೆತ್ತುವುದಕ್ಕಾಗಿ ಮಹಿಮೆಯನ್ನು ಮಾಡುತ್ತಾರೆ. ಪ್ರೀತಿ ಮಾಡಿಯೂ ಮೇಲೆತ್ತುತ್ತೇನೆ - ನೀವಂತೂ ಬಹಳ ಒಳ್ಳೆಯವರಾಗಿದ್ದೀರಿ, ಸ್ಥೂಲಸೇವೆಯನ್ನು ಸಹ ಬಹಳ ಚೆನ್ನಾಗಿ ಮಾಡುತ್ತೀರೆಂದು ಹೇಳುತ್ತಾರೆ ಆದರೆ ಯಥಾರ್ಥ ರೀತಿಯಾಗಿ ಕುಳಿತು ತಿಳಿಸುತ್ತಾರೆ - ಗುರಿಯು ಬಹಳ ಉನ್ನತವಾಗಿದೆ, ದೇಹ ಮತ್ತು ದೇಹದ ಸಂಬಂಧಗಳನ್ನು ತೊರೆದು ತಮ್ಮನ್ನು ಅಶರೀರಿ ಆತ್ಮವೆಂದು ತಿಳಿಯುವುದು, ಈ ಪುರುಷಾರ್ಥ ಮಾಡುವುದು ಬುದ್ಧಿಯ ಕೆಲಸವಾಗಿದೆ. ಎಲ್ಲರೂ ಪುರುಷಾರ್ಥಿಗಳಾಗಿದ್ದಾರೆ, ಎಷ್ಟು ದೊಡ್ಡ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ತಂದೆಗೆ ಎಲ್ಲರೂ ಮಕ್ಕಳಾಗಿದ್ದಾರೆ, ವಿದ್ಯಾರ್ಥಿಗಳೂ ಆಗಿದ್ದಾರೆ ಮತ್ತು ಅನುಯಾಯಿಗಳೂ ಆಗಿದ್ದಾರೆ. ಇವರು ಇಡೀ ಪ್ರಪಂಚದ ತಂದೆಯಾಗಿದ್ದಾರೆ, ಎಲ್ಲರೂ ಅವರೊಬ್ಬರನ್ನೇ ಕರೆಯುತ್ತಾರೆ. ಅವರು ಬಂದು ಮಕ್ಕಳಿಗೆ ತಿಳಿಸಿಕೊಡುತ್ತಿರುತ್ತಾರೆ ಆದರೂ ಸಹ ಅಷ್ಟು ಗೌರವವಿರುವುದಿಲ್ಲ. ದೊಡ್ಡ-ದೊಡ್ಡವ್ಯಕ್ತಿಗಳು ಬರುತ್ತಾರೆಂದರೆ ಅವರನ್ನು ಎಷ್ಟೊಂದು ಗೌರವಪೂರ್ಣವಾಗಿ ಸಂಭಾಲನೆ ಮಾಡುತ್ತಾರೆ, ಎಷ್ಟೊಂದು ಆಡಂಬರವಿರುತ್ತದೆ. ಈ ಸಮಯದಲ್ಲಂತೂ ಎಲ್ಲರೂ ಪತಿತರಾಗಿದ್ದಾರೆ ಆದರೆ ತನ್ನನ್ನು ಪತಿತನೆಂದು ತಿಳಿಯುವುದಿಲ್ಲ. ಮಾಯೆಯು ಸಂಪೂರ್ಣ ತುಚ್ಛಬುದ್ಧಿಯವರನ್ನಾಗಿ ಮಾಡಿಬಿಟ್ಟಿದೆ. ಸತ್ಯಯುಗದ ಆಯಸ್ಸು ಬಹಳ ಉದ್ದಗಲವಾಗಿ ಹೇಳಿಬಿಟ್ಟಿದ್ದಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ - ಇದು 100% ಬುದ್ಧಿಹೀನತೆಯಾಯಿತಲ್ಲವೆ. ಮನುಷ್ಯರಾಗಿಯೂ ಸಹ ಎಂತಹ ಕೆಲಸಗಳನ್ನು ಮಾಡುತ್ತಿರುತ್ತಾರೆ. 5000 ವರ್ಷಗಳ ಮಾತನ್ನೇ ಲಕ್ಷಾಂತರ ವರ್ಷಗಳೆಂದು ಹೇಳಿಬಿಡುತ್ತಾರೆ. ಇದನ್ನು ಸಹ ತಂದೆಯು ಬಂದು ತಿಳಿಸುತ್ತಾರೆ - 5000 ವರ್ಷಗಳ ಹಿಂದೆ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇವರು ದೈವೀಗುಣವಂತ ಮನುಷ್ಯರಾಗಿದ್ದರು ಆದ್ದರಿಂದ ಅವರಿಗೆ ದೇವತೆಗಳೆಂತಲೂ, ಆಸುರೀಗುಣವುಳ್ಳವರಿಗೆ ಅಸುರರೆಂತಲೂ ಹೇಳಲಾಗುತ್ತದೆ. ಅಸುರರು ಮತ್ತು ದೇವತೆಗಳಲ್ಲಿ ರಾತ್ರಿ-ಹಗಲಿನ ಅಂತರವಿದೆ. ಎಷ್ಟೊಂದು ಜಗಳ-ಕಲಹವಿದೆ ಅದಕ್ಕಾಗಿ ಹೆಚ್ಚು ತಯಾರಿಗಳು ನಡೆಯುತ್ತಿರುತ್ತವೆ. ಈ ಯಜ್ಞದಲ್ಲಿ ಇಡೀ ಪ್ರಪಂಚವು ಸಮಾಪ್ತಿಯಾಗಬೇಕಾಗಿದೆ. ಇದಕ್ಕಾಗಿ ಇವೆಲ್ಲಾ ತಯಾರಿಗಳು ಬೇಕಲ್ಲವೆ. ಅಣುಬಾಂಬುಗಳನ್ನು ತಯಾರಿ ಮಾಡಿಯೇ ಮಾಡುತ್ತಾರೆ, ಇವು ನಿಂತುಹೋಗಲು ಸಾಧ್ಯವಿಲ್ಲ, ಸ್ವಲ್ಪಸಮಯದಲ್ಲಿಯೇ ಎಲ್ಲವೂ ತಯಾರಾಗಿಬಿಡುತ್ತದೆ ಏಕೆಂದರೆ ವಿನಾಶವು ಬಹಳ ಬೇಗ-ಬೇಗನೆ ಆಗಬೇಕಲ್ಲವೆ ಮತ್ತೆ ಆಸ್ಪತ್ರೆ ಮೊದಲಾದುವುಗಳೂ ಇರುವುದಿಲ್ಲ. ಇದು ಯಾರಿಗೂ ತಿಳಿಯುವುದೂ ಇಲ್ಲ. ಚಿಕ್ಕಮ್ಮನ ಮನೆಯಂತೇನು! ವಿನಾಶದ ಸಾಕ್ಷಾತ್ಕಾರವು ಯಾವುದೇ ಬಿಡಿಗಾಸಿನ ಮಾತಲ್ಲ, ಇಡೀ ಪ್ರಪಂಚದ ಬೆಂಕಿಯನ್ನು ನೋಡಬಲ್ಲಿರಾ! ಸಾಕ್ಷಾತ್ಕಾರವಾಗುತ್ತದೆ - ಎಲ್ಲಾಕಡೆಯು ಬೆಂಕಿಯೇ ಬೆಂಕಿಯಿರುತ್ತದೆ. ಇಡೀ ಪ್ರಪಂಚವು ಸಮಾಪ್ತಿಯಾಗಲಿದೆ. ಎಷ್ಟು ದೊಡ್ಡ ಪ್ರಪಂಚವಾಗಿದೆ, ಆಕಾಶವಂತೂ ಸುಟ್ಟುಹೋಗುವುದಿಲ್ಲ. ಇದರಲ್ಲಿ ಏನೆಲ್ಲವೂ ಇದೆಯೋ ಎಲ್ಲವೂ ವಿನಾಶವಾಗಲಿದೆ, ಸತ್ಯಯುಗ ಮತ್ತು ಕಲಿಯುಗದಲ್ಲಿ ರಾತ್ರಿ-ಹಗಲಿನ ಅಂತರವಿದೆ. ಎಷ್ಟೊಂದು ಜನಸಂಖ್ಯೆಯಿದೆ, ಪ್ರಾಣಿ-ಪಕ್ಷಿಗಳಿವೆ, ಎಷ್ಟೊಂದು ಸಾಮಗ್ರಿಗಳಿವೆ, ಇದು ಸಹ ಮಕ್ಕಳ ಬುದ್ಧಿಯಲ್ಲಿ ಕುಳಿತುಕೊಳ್ಳುವುದು ಬಹಳ ಕಷ್ಟ. ವಿಚಾರ ಮಾಡಿ - 5000 ವರ್ಷಗಳ ಮಾತಾಗಿದೆ, ದೇವಿ-ದೇವತೆಗಳ ರಾಜ್ಯವಿತ್ತಲ್ಲವೆ! ಎಷ್ಟು ಕಡಿಮೆ ಜನಸಂಖ್ಯೆಯಿತ್ತು, ಈಗ ನೋಡಿ ಎಷ್ಟೊಂದು ಹೆಚ್ಚಾಗಿಬಿಟ್ಟಿದೆ! ಈಗ ಕಲಿಯುಗವಾಗಿದೆ ಅಂದಮೇಲೆ ಇದರ ವಿನಾಶವು ಅವಶ್ಯವಾಗಿ ಆಗಬೇಕಾಗಿದೆ.

ಈಗ ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ. ಇದನ್ನೂ ಸಹ ತಿಳಿದು ನೆನಪು ಮಾಡಬೇಕಾಗಿದೆ, ಕೇವಲ ಶಿವ, ಶಿವ ಎಂದು ಅನೇಕರು ಹೇಳುತ್ತಿರುತ್ತಾರೆ, ಚಿಕ್ಕಮಕ್ಕಳೂ ಇದನ್ನು ಹೇಳುತ್ತಾರೆ ಆದರೆ ಬುದ್ಧಿಯಲ್ಲಿ ತಿಳುವಳಿಕೆಯಿರುವುದಿಲ್ಲ. ತಂದೆಯು ಬಿಂದುವಾಗಿದ್ದಾರೆ, ನಾವೂ ಸಹ ಸೂಕ್ಷ್ಮಬಿಂದುಗಳಾಗಿದ್ದೇವೆಂದು ಅನುಭವದಿಂದ ಹೇಳುವುದಿಲ್ಲ. ನೀವು ಅನುಭವದಿಂದ ನೆನಪು ಮಾಡಬೇಕಾಗಿದೆ, ಮೊಟ್ಟಮೊದಲನೆಯದಾಗಿ ನಾನು ಆತ್ಮನಾಗಿದ್ದೇನೆಂದು ಪಕ್ಕಾ ಮಾಡಿಕೊಳ್ಳಿ ಮತ್ತೆ ತಂದೆಯ ಪರಿಚಯವನ್ನೂ ಬುದ್ಧಿಯಲ್ಲಿ ಬಹಳ ಚೆನ್ನಾಗಿ ಧಾರಣೆ ಮಾಡಿಕೊಳ್ಳಿ. ನಾವು ಆತ್ಮಗಳಾಗಿದ್ದೇವೆ, ನಮ್ಮಲ್ಲಿ 84 ಜನ್ಮಗಳ ಪಾತ್ರವು ಹೇಗೆ ತುಂಬಲ್ಪಟ್ಟಿದೆ, ಆತ್ಮವು ಹೇಗೆ ಸತೋಪ್ರಧಾನವಾಗುತ್ತಿದೆ ಎಂಬ ಜ್ಞಾನವು ನಾವಾತ್ಮಗಳಿಗೆ ಸಿಗುತ್ತಿದೆ ಎಂಬುದನ್ನು ಅಂತರ್ಮುಖಿ ಮಕ್ಕಳೇ ಬಹಳ ಚೆನ್ನಾಗಿ ಅರಿತುಕೊಳ್ಳುತ್ತಾರೆ. ಇವೆಲ್ಲವೂ ಬಹಳ ಅಂತರ್ಮುಖಿಯಾಗಿ ಅರಿತುಕೊಳ್ಳುವ ಮಾತುಗಳಾಗಿವೆ. ಇದರಲ್ಲಿಯೇ ಸಮಯ ಹಿಡಿಸುತ್ತದೆ. ಮಕ್ಕಳಿಗೆ ತಿಳಿದಿದೆ - ಇದು ನಮ್ಮದು ಅಂತಿಮ ಜನ್ಮವಾಗಿದೆ. ಈಗ ನಾವು ಮನೆಗೆ ಹೋಗುತ್ತೇವೆ, ಇದು ಸಹ ಬುದ್ಧಿಯಲ್ಲಿ ಪಕ್ಕಾ ಇರಲಿ - ನಾವು ಆತ್ಮಗಳಾಗಿದ್ದೇವೆ, ಶರೀರದ ಪರಿವೆಯು ಕಡಿಮೆಯಾದಗಲೇ ಮಾತನಾಡುವುದರಲ್ಲಿ ಸುಧಾರಣೆಯಾಗುವುದು. ಇಲ್ಲವಾದರೆ ಚಲನೆಯು ಬಹಳ ಕೆಟ್ಟುಹೋಗುತ್ತದೆ, ಏಕೆಂದರೆ ಶರೀರದಿಂದ ಬೇರೆಯಾಗುವುದೇ ಇಲ್ಲ. ದೇಹಾಭಿಮಾನದಲ್ಲಿ ಬಂದು ಏನಾದರೊಂದು ಹೇಳಿಬಿಡುತ್ತಾರೆ. ಯಜ್ಞದೊಂದಿಗೆ ಬಹಳ ಪ್ರಾಮಾಣಿಕತೆಯಿರಬೇಕು, ಈಗಂತೂ ಬಹಳ ಹುಡುಗಾಟಿಕೆಯಲ್ಲಿದ್ದಾರೆ, ಆಹಾರ-ಪಾನೀಯ ಎಲ್ಲವೂ ಸುಧಾರಣೆಯಾಗುವುದೇ ಇಲ್ಲ, ಇನ್ನು ಸ್ವಲ್ಪಸಮಯ ಬೇಕು. ಸೇವಾಧಾರಿ ಮಕ್ಕಳನ್ನೇ ತಂದೆ ನೆನಪು ಮಾಡುತ್ತಾರೆ ಮತ್ತು ಪದವಿಯನ್ನೂ ಅವರೇ ಪಡೆಯುತ್ತಾರೆ. ಹಾಗೆಯೇ ಕೇವಲ ತನ್ನನ್ನು ಖುಷಿಪಡಿಸಿಕೊಳ್ಳುವುದು ಕಡಲೆಯನ್ನು ತಿಂದಂತೆ. ಇದರಲ್ಲಿ ಬಹಳ ಅಂತರ್ಮುಖತೆಯಿರಬೇಕು, ತಿಳಿಸುವುದಕ್ಕೂ ಯುಕ್ತಿಯಿರಬೇಕು. ಪ್ರದರ್ಶನಿಯಲ್ಲಿ ಯಥಾರ್ಥವಾಗಿ ಯಾರಾದರೂ ಅರಿತುಕೊಳ್ಳುತ್ತಾರೆಯೇ! ತಮ್ಮ ಮಾತುಗಳು ಸರಿಯಾಗಿವೆ ಎಂದಷ್ಟೇ ಹೇಳಿಬಿಡುತ್ತಾರೆ, ಇಲ್ಲಿಯೂ ನಂಬರ್ವಾರ್ ಇದ್ದಾರೆ. ನಾವು ಮಕ್ಕಳಾಗಿದ್ದೇವೆ, ತಂದೆಯಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ ಎಂಬ ನಿಶ್ಚಯವಿದೆ. ಒಂದುವೇಳೆ ನಾವು ತಂದೆಯ ಪೂರ್ಣ ಸೇವೆಯನ್ನು ಮಾಡುತ್ತಾ ಇದ್ದರೆ ನಮ್ಮದು ಇದೇ ಕರ್ತವ್ಯವಾಗಿದೆ, ಇಡಿ ದಿನ ವಿಚಾರಸಾಗರ ಮಂಥನ ನಡೆಯುತ್ತಾ ಇರುವುದು. ಈ ಬ್ರಹ್ಮಾತಂದೆಯೂ ಸಹ ವಿಚಾರಸಾಗರ ಮಂಥನ ಮಾಡುತ್ತಾರಲ್ಲವೆ ಇಲ್ಲವಾದರೆ ಈ ಪದವಿಯನ್ನು ಹೇಗೆ ಪಡೆಯುತ್ತಾರೆ! ಮಕ್ಕಳಿಗೆ ಇಬ್ಬರೂ ಒಟ್ಟಿಗೆ ತಿಳಿಸಿಕೊಡುತ್ತಿರುತ್ತಾರೆ - ಎರಡು ಇಂಜಿನ್ ಸಿಕ್ಕಿದೆ ಏಕೆಂದರೆ ಏರಿಕೆಯು ಅತಿದೊಡ್ಡದಾಗಿದೆ. ಹೇಗೆ ಬೆಟ್ಟದ ಮೇಲೆ ಹತ್ತುವಾಗ ವಾಹನಕ್ಕೆ ಎರಡು ಇಂಜಿನ್ ಹಾಕುತ್ತಾರೆ. ಕೆಲಕೆಲವೊಮ್ಮೆ ನಡೆಯುತ್ತಾ-ನಡೆಯುತ್ತಾ ವಾಹನವು ನಿಂತುಹೋಗುತ್ತದೆ. ಆಗ ಅದು ಮತ್ತೆ ಜಾರಿ ಕೆಳಗೆ ಬಂದುಬಿಡುತ್ತದೆ, ನಾವು ಮಕ್ಕಳದೂ ಹಾಗೆಯೇ ಏರುತ್ತಾ-ಏರುತ್ತಾ, ಪರಿಶ್ರಮಪಡುತ್ತಾ-ಪಡುತ್ತಾ ಮತ್ತೆ ಎತ್ತರವನ್ನು ಏರಲು ಸಾಧ್ಯವಾಗುವುದಿಲ್ಲ. ಮಾಯೆಯ ಗ್ರಹಣ ಅಥವಾ ಬಿರುಗಾಳಿಯು ಬರುತ್ತದೆಯೆಂದರೆ ಒಮ್ಮೆಲೆ ಕೆಳಗೆ ಬಿದ್ದು ಪುಡಿಪುಡಿಯಾಗಿಬಿಡುತ್ತಾರೆ. ಸ್ವಲ್ಪ ಸೇವೆ ಮಾಡಿದರೂ ಸಹ ಅಹಂಕಾರವು ಬಂದುಬಿಡುತ್ತದೆ. ಕೆಳಗೆ ಬೀಳುತ್ತಾರೆ, ತಂದೆಯು ಇದ್ದಾರೆ ಜೊತೆಯಲ್ಲಿ ಧರ್ಮರಾಜನೂ ಇದ್ದಾರೆಂದು ತಿಳಿದುಕೊಳ್ಳುವುದೇ ಇಲ್ಲ. ಒಂದುವೇಳೆ ಇಂತಹದ್ದೇನಾದರೂ ಮಾಡಿದರೆ ನಮ್ಮ ಮೇಲೆ ಬಹಳ ಶಿಕ್ಷೆಯುಂಟಾಗುತ್ತದೆ. ಇದಕ್ಕಿಂತಲೂ ಹೊರಗಿರುವುದೇ ಒಳ್ಳೆಯದು, ತಂದೆಯ ಮಕ್ಕಳಾಗಿ ಆಸ್ತಿಯನ್ನು ತೆಗೆದುಕೊಳ್ಳುವುದು ಚಿಕ್ಕಮ್ಮನ ಮನೆಯಂತಲ್ಲ. ತಂದೆಯ ಮಕ್ಕಳಾಗಿ ಇಂತಹದ್ದೇನಾದರೂ ಮಾಡುತ್ತಾರೆಂದರೆ ಹೆಸರನ್ನು ಕೆಡಿಸುತ್ತಾರೆ, ಬಹಳ ಪೆಟ್ಟುಬೀಳುತ್ತದೆ. ವಾರಸುಧಾರರಾಗುವುದು ಚಿಕ್ಕಮ್ಮನ ಮನೆಯಂತಲ್ಲ. ಪ್ರಜೆಗಳಲ್ಲಿ ಕೆಲವರು ಇಷ್ಟೊಂದು ಸಾಹುಕಾರರಾಗುತ್ತಾರೆ ಕೇಳಲೇಬೇಡಿ. ಅಜ್ಞಾನಕಾಲದಲ್ಲಿಯೂ ಕೆಲವರು ಒಳ್ಳೆಯವರಾಗಿರುತ್ತಾರೆ, ಇನ್ನು ಕೆಲವರು ಕೆಲವೊಂದು ರೀತಿಯಲ್ಲಿರುತ್ತಾರೆ. ಯೋಗ್ಯರಲ್ಲದ ಮಕ್ಕಳಂತೂ ನಮ್ಮ ಮುಂದೆ ಇರಬೇಡಿ ಎಂತಲೂ ಹೇಳಿಬಿಡುತ್ತಾರೆ. ಇಲ್ಲಿ ಒಬ್ಬರು-ಇಬ್ಬರ ಮಾತಲ್ಲ. ಮಾಯೆಯು ಬಹಳ ಶಕ್ತಿಶಾಲಿಯಾಗಿದೆ, ಇದರಲ್ಲಿ ಮಕ್ಕಳು ಬಹಳ ಅಂತರ್ಮುಖಿಯಾಗಬೇಕಾಗಿದೆ. ಆಗಲೇ ನೀವು ಅನ್ಯರಿಗೆ ತಿಳಿಸಬಲ್ಲಿರಿ. ನಿಮ್ಮ ಮೇಲೆ ಬಲಿಹಾರಿಯಾಗುತ್ತಾರೆ ಮತ್ತು ಬಹಳ ಪಶ್ಚಾತ್ತಾಪ ಪಡುತ್ತಾರೆ - ನಾವು ತಂದೆಗಾಗಿ ಎಷ್ಟೊಂದು ನಿಂದನೆ ಮಾಡುತ್ತಾ ಬಂದೆವು, ಸರ್ವವ್ಯಾಪಿ ಎಂದು ಹೇಳುವುದು ಅಥವಾ ತಮ್ಮನ್ನೇ ಈಶ್ವರನೆಂದು ಹೇಳಿಕೊಳ್ಳುವುದಕ್ಕೆ ಶಿಕ್ಷೆಯು ಕಡಿಮೆಯಿಲ್ಲ. ಹಾಗೆಯೇ ಹೊರಟುಹೋಗಲು ಸಾಧ್ಯವಿಲ್ಲ, ಅಂತಹವರಿಗೆ ಇನ್ನೂ ಹೆಚ್ಚು ಸಂಕಟವಿರುತ್ತದೆ. ಸಮಯವು ಬಂದಾಗ ತಂದೆಯು ಇವರೆಲ್ಲರಿಂದ ಲೆಕ್ಕವನ್ನು ತೆಗೆದುಕೊಳ್ಳುತ್ತಾರೆ. ಅಂತಿಮ ಸಮಯದಲ್ಲಿ ಎಲ್ಲರ ಲೆಕ್ಕಾಚಾರಗಳು ಸಮಾಪ್ತಿಯಾಗುತ್ತದೆಯಲ್ಲವೆ. ಇದರಲ್ಲಿ ಬಹಳ ವಿಶಾಲಬುದ್ಧಿಯಿರಬೇಕು.

ಮನುಷ್ಯರಂತೂ ನೋಡಿ, ಯಾರ್ಯಾರಿಗೋ ಶಾಂತಿಯ ಪಾರಿತೋಷಕಗಳನ್ನು ಕೊಡುತ್ತಿರುತ್ತಾರೆ, ವಾಸ್ತವದಲ್ಲಿ ಸಂಪೂರ್ಣ ಶಾಂತಿಯನ್ನು ಸ್ಥಾಪಿಸುವವರು ಒಬ್ಬ ತಂದೆಯಲ್ಲವೆ. ಆದ್ದರಿಂದ ಮಕ್ಕಳು ಬರೆಯಬೇಕು - ಪ್ರಪಂಚದಲ್ಲಿ ಸುಖ, ಶಾಂತಿ-ಪವಿತ್ರತೆಯು ಭಗವಂತನ ಶ್ರೀಮತದಂತೆ ಸ್ಥಾಪನೆಯಾಗುತ್ತಿದೆ. ಶ್ರೀಮತವಂತೂ ಪ್ರಸಿದ್ಧವಾಗಿದೆ. ಶ್ರೀಮತ್ ಭಗವದ್ಗೀತಾ ಶಾಸ್ತ್ರಕ್ಕೂ ಎಷ್ಟೊಂದು ಗೌರವವನ್ನಿಡುತ್ತಾರೆ. ಯಾರಾದರೂ ತಮ್ಮ ಶಾಸ್ತ್ರ ಅಥವಾ ಮಂದಿರವನ್ನು ಕಟ್ಟಿದರೆ ಎಷ್ಟೊಂದು ಹೊಡೆದಾಡುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ - ಇಡೀ ಪ್ರಪಂಚವೇ ಸುಟ್ಟು ಭಸ್ಮವಾಗುವುದಿದೆ. ಈ ಮಸೀದಿ ಮಂದಿರಗಳೆಲ್ಲವನ್ನೂ ಸುಡುತ್ತಿರುತ್ತಾರೆ, ಇವೆಲ್ಲವೂ ಆಗುವುದಕ್ಕೆ ಮೊದಲೇ ಪವಿತ್ರರಾಗಬೇಕಾಗಿದೆ. ಇದೇ ಚಿಂತೆಯಿರಲಿ - ಗೃಹಸ್ಥವನ್ನೂ ಸಹ ಸಂಭಾಲನೆ ಮಾಡಬೇಕಾಗಿದೆ. ಇಲ್ಲಿ ಅನೇಕರು ಬರುತ್ತಾರೆ, ಕುರಿಗಳ ರೀತಿಯಂತೂ ಇಟ್ಟುಕೊಳ್ಳಲು ಸಾಧ್ಯವಿಲ್ಲ ಅಲ್ಲವೆ ಏಕೆಂದರೆ ಇದು ಬಹಳ ಅಮೂಲ್ಯ ಜನ್ಮವಾಗಿದೆ. ಇದನ್ನು ಬಹಳ ಜೋಪಾನವಾಗಿ ಇಟ್ಟುಕೊಳ್ಳಬೇಕು. ಮಕ್ಕಳನ್ನು ಕರೆದುಕೊಂಡು ಬರುವುದನ್ನು ನಿಲ್ಲಿಸಬೇಕಾಗುವುದು. ಇಷ್ಟೊಂದು ಮಂದಿ ಮಕ್ಕಳನ್ನು ಎಲ್ಲಿ ಸಂಭಾಲನೆ ಮಾಡುತ್ತೀರಿ? ಮಕ್ಕಳಿಗೆ ಅನುಮತಿ ಸಿಕ್ಕಿದರೆ ಸಾಕು, ಇನ್ನೆಲ್ಲಿಗೆ ಹೋಗುವುದು? ಮಧುಬನಕ್ಕೆ ಹೋಗೋಣ ನಡೆಯಿರಿ ಎಂದು ಬರುತ್ತಾರೆ, ಹಾಗಿದ್ದರೆ ಇದು ಧರ್ಮಶಾಲೆಯಾಗಿಬಿಡುವುದು ಅಂದಮೇಲೆ ವಿಶ್ವವಿದ್ಯಾಲಯ ಹೇಗಾಯಿತು! ತಂದೆಯು ಪರಿಶೀಲನೆ ಮಾಡುತ್ತಿದ್ದಾರೆ - ಮಕ್ಕಳನ್ನು ಯಾರೂ ಕರೆತರುವಂತಿಲ್ಲ ಎಂದು ಕೊನೆಗೆ ಆದೇಶ ನೀಡುತ್ತಾರೆ. ಈ ಬಂಧನವೂ ಸಹ ಕಡಿಮೆಯಾಗಿಬಿಡುತ್ತದೆ, ಮಾತೆಯರ ಮೇಲೆ ದಯೆಬರುತ್ತದೆ. ಇದನ್ನೂ ಸಹ ಮಕ್ಕಳು ತಿಳಿದುಕೊಂಡಿದ್ದಾರೆ - ಶಿವತಂದೆಯು ಗುಪ್ತವಾಗಿದ್ದಾರೆ ಆದರೆ ಇವರಪ್ರತಿಯೂ (ಬ್ರಹ್ಮಾ) ಕೆಲವರಿಗೆ ಗೌರವವಿಲ್ಲ. ನಮಗೆ ಶಿವತಂದೆಯೊಂದಿಗೆ ಸಂಬಂಧವಿದೆ ಎಂದು ಹೇಳುತ್ತಾರೆ. ಶಿವತಂದೆಯೇ ಇವರ ಮೂಲಕ ತಿಳಿಸುತ್ತಾರಲ್ಲವೆ ಎಂಬುದನ್ನೂ ಸಹ ತಿಳಿದುಕೊಳ್ಳುವುದಿಲ್ಲ. ಮಾಯೆಯು ಮೂಗನ್ನು ಹಿಡಿದು ವ್ಯತಿರಿಕ್ತವಾದ ಕೆಲಸಗಳನ್ನು ಮಾಡುತ್ತಿರುತ್ತದೆ, ಬಿಡುವುದೇ ಇಲ್ಲ. ರಾಜಧಾನಿಯಲ್ಲಿ ಎಲ್ಲರೂ ಬೇಕಲ್ಲವೆ. ಅಂತಿಮದಲ್ಲಿ ಇದೆಲ್ಲವೂ ಸಾಕ್ಷಾತ್ಕಾರವೂ ಆಗುವುದು, ಶಿಕ್ಷೆಗಳ ಸಾಕ್ಷಾತ್ಕಾರವೂ ಆಗುವುದು. ಮಕ್ಕಳಿಗೆ ಇವೆಲ್ಲವೂ ಸಹ ಮೊದಲೇ ಸಾಕ್ಷಾತ್ಕಾರವಾಗಿದೆ ಆದರೂ ಸಹ ಕೆಲವರು ಪಾಪ ಮಾಡುವುದನ್ನೇ ಬಿಡುವುದಿಲ್ಲ. ಕೆಲವರಂತೂ ನಾವು ತೇರ್ಗಡೆಯಾಗುವುದೇ ತೃತೀಯ ದರ್ಜೆಯಲ್ಲಿ ಎಂದು ಗಂಟನ್ನು ಹಾಕಿಕೊಂಡಿದ್ದಾರೆ. ಆದ್ದರಿಂದ ಪಾಪ ಮಾಡುವುದನ್ನು ಬಿಡುವುದೇ ಇಲ್ಲ. ಇನ್ನೂ ಚೆನ್ನಾಗಿ ತಮ್ಮನ್ನು ಶಿಕ್ಷೆಗೆ ಗುರಿಪಡಿಸಿಕೊಳ್ಳುತ್ತಿದ್ದಾರೆ. ತಂದೆಯಂತೂ ತಿಳಿಸಬೇಕಾಗುತ್ತದೆಯಲ್ಲವೆ. ನಾವಂತೂ ಕಡಿಮೆ ದರ್ಜೆಯನ್ನೇ ಪಡೆಯುತ್ತೇವೆಂದು ಗಂಟನ್ನು ಹಾಕಿಕೊಂಡು ಕುಳಿತುಕೊಳ್ಳಬೇಡಿ, ಈಗ ಈ ಗಂಟನ್ನು ಹಾಕಿಕೊಳ್ಳಿ - ನಾವು ಇಂತಹ ಲಕ್ಷ್ಮೀ-ನಾರಾಯಣರಾಗಬೇಕಾಗಿದೆ. ಕೆಲವರಂತೂ ಒಳ್ಳೆಯ ಗಂಟನ್ನು ಹಾಕಿಕೊಳ್ಳುತ್ತಾರೆ, ಚಾರ್ಟನ್ನೂ ಬರೆಯುತ್ತಾರೆ - ಇಂದು ನಾನು ಅಂತಹ ಕರ್ಮವೇನನ್ನೂ ಮಾಡಲಿಲ್ಲವೆ! ಹೀಗೆ ಅನೇಕರು ಚಾರ್ಟನ್ನು ಇಡುತ್ತಿದ್ದರು ಆದರೆ ಅವರೂ ಸಹ ಇಂದು ಇಲ್ಲ, ಮಾಯೆಯು ಬಹಳ ಹಿಂದೆ ಬೀಳುತ್ತದೆ. ನಾನು ಅರ್ಧ ಕಲ್ಪ ಸುಖ ಕೊಡುತ್ತೇನೆ, ಇನ್ನರ್ಧಕಲ್ಪ ಮಾಯೆಯು ದುಃಖ ಕೊಡುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಅಂತರ್ಮುಖಿಯಾಗಿ ಶರೀರದ ಪರಿವೆಯಿಂದ ದೂರವಿರುವ ಅಭ್ಯಾಸ ಮಾಡಬೇಕಾಗಿದೆ. ಆಹಾರ-ಪಾನೀಯ, ಚಲನ-ವಲನವನ್ನು ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ಕೇವಲ ಹಾಗೆಯೇ ತಮ್ಮನ್ನು ಖುಷಿಪಡಿಸಿಕೊಂಡು ಆಲಸಿಯಾಗಬಾರದು.

2. ಏರಿಕೆಯು ಬಹಳ ಉನ್ನತವಾಗಿದೆ ಆದ್ದರಿಂದ ಬಹಳ-ಬಹಳ ಎಚ್ಚರಿಕೆಯಿಂದ ನಡೆಯಬೇಕಾಗಿದೆ. ಯಾವುದೇ ಕರ್ಮವನ್ನು ಬಹಳ ಜಾಗ್ರತೆಯಿಂದ ಮಾಡಬೇಕಾಗಿದೆ, ಅಹಂಕಾರದಲ್ಲಿ ಬರಬಾರದು. ಉಲ್ಟಾಕರ್ಮವನ್ನು ಮಾಡಿ ಶಿಕ್ಷೆಗೆ ಗುರಿಪಡಿಸಿಕೊಳ್ಳಬಾರದು. ಈ ಗಂಟನ್ನು ಹಾಕಿಕೊಳ್ಳಿ - ನಾವು ಈ ಲಕ್ಷ್ಮೀ-ನಾರಾಯಣರ ಸಮಾನ ಆಗಲೇಬೇಕಾಗಿದೆ.

ವರದಾನ:
ಆತ್ಮೀಯತೆಯ ಶ್ರೇಷ್ಠ ಸ್ಥಿತಿಯ ಮೂಲಕ ವಾತಾವರಣವನ್ನು ಆತ್ಮೀಯವಾಗಿ ಮಾಡುವಂತಹ ಸಹಜ ಪುರುಷಾರ್ಥಿ ಭವ

ಆತ್ಮೀಯತೆಯ ಸ್ಥಿತಿಯ ಮೂಲಕ ತಮ್ಮ ಸೇವಾಕೇಂದ್ರದಲ್ಲಿ ಇಂತಹ ಆತ್ಮೀಯ ವಾತಾವರಣ ನಿರ್ಮಾಣ ಮಾಡಿ ಯಾವುದರಿಂದ ಸ್ವಯಂನ ಮತ್ತು ಮುಂದೆ ಬರುವಂತಹ ಆತ್ಮಗಳ ಸಹಜ ಉನ್ನತಿಯಾಗಬೇಕು ಏಕೆಂದರೆ ಯಾವುದೇ ಹೊರಗಿನ ವಾತಾವರಣದಿಂದ ಸುಸ್ತಾಗಿ ಬರುತ್ತಾರೆ. ಅವರಿಗೆ ಅತಿಯಾದ ಸಹಯೋಗದ ಆವಶ್ಯಕತೆ ಇರುತ್ತದೆ. ಆದ್ದರಿಂದ ಅವರಿಗೆ ಆತ್ಮೀಯ ವಾಯುಮಂಡಲದ ಸಹಯೋಗ ಕೊಡಿ. ಸಹಜ ಪುರುಷಾರ್ಥಿಯಾಗಿ ಮತ್ತು ಮಾಡಿಸಿ. ಬರುವಂತಹ ಪ್ರತಿಯೊಬ್ಬ ಆತ್ಮವು ಅನುಭವ ಮಾಡಲಿ- ಈ ಸ್ಥಾನವು ಸಹಜವಾಗಿ ಉನ್ನತಿಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹದು ಎಂದು.

ಸ್ಲೋಗನ್:
ವರದಾನಿಯಾಗಿ ಶುಭಭಾವನೆ ಮತ್ತು ಶುಭಕಾಮನೆಯ ವರದಾನ ಕೊಡುತ್ತೀರಿ.

ಅವ್ಯಕ್ತ ಸೂಚನೆ: ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ

ಹೇಗೆ ಬ್ರಹ್ಮಾ ತಂದೆಯನ್ನು ನೋಡಿದಿರಿ ತಂದೆಯ ಜೊತೆ ಸ್ವಯಂನ್ನು ಸದಾ ಕಂಬೈಂಡ್ ರೂಪದಲ್ಲಿ ಅನುಭವ ಮಾಡಿದರು ಮತ್ತು ಮಾಡಿಸಿದರು. ಈ ಕಂಬೈಂಡ್ ಸ್ವರೂಪವನ್ನು ಯಾರು ಬೇರೆ ಮಾಡಲು ಸಾಧ್ಯವಿಲ್ಲ. ಇಂತಹ ಸುಪುತ್ರ ಮಕ್ಕಳು ಸದಾ ತಮ್ಮನ್ನು ತಂದೆಯ ಜೊತೆ ಕಂಬೈಂಡ್ ಅನುಭವ ಮಾಡುತ್ತಾರೆ. ಅವರನ್ನು ಬೇರ್ಪಡಿಸುವಂತಹ ಯಾವುದೇ ಶಕ್ತಿಯಿಲ್ಲ.

ತಂದೆ ಕಂಬೈಂಡ್ ಆಗಿದ್ದಾರೆ ಅದಕ್ಕೆ ಉಮಂಗ – ಉತ್ಸಾಹದಿಂದ ಮುಂದುವರೆಸುತ್ತಾ ಹೋಗಿ. ಬಲಹೀನ, ಹೃದಯವಿಧಿರ್ಣತೆಯನ್ನು ತಂದೆಗೆ ಸಮರ್ಪಿತ ಮಾಡಿ, ತಮ್ಮ ಹತ್ತಿರ ಇಟ್ಟುಕೊಳ್ಳಬೇಡಿ. ತಮ್ಮ ಹತ್ತಿರ ಕೇವಲ ಉಮಂಗ-ಉತ್ಸಾಹ ಇಟ್ಟುಕೊಳ್ಳಿ. ಸದಾ ಉಮಂಗ-ಉತ್ಸಾಹದಲ್ಲಿ ನರ್ತನ ಮಾಡುತ್ತೀರುತ್ತೀರಿ, ಹಾಡುತ್ತಿರುತ್ತೀರಿ ಮತ್ತು ಬ್ರಹ್ಮಾ ಭೋಜನ ಮಾಡುತ್ತಿರುತ್ತೀರಿ.

ಆತ್ಮೀಯತೆಯ ಸ್ಥಿತಿಯ ಮೂಲಕ ತಮ್ಮ ಸೇವಾಕೇಂದ್ರದಲ್ಲಿ ಇಂತಹ ಆತ್ಮೀಯ ವಾತಾವರಣ ನಿರ್ಮಾಣ ಮಾಡಿ ಯಾವುದರಿಂದ ಸ್ವಯಂನ ಮತ್ತು ಮುಂದೆ ಬರುವಂತಹ ಆತ್ಮಗಳ ಸಹಜ ಉನ್ನತಿಯಾಗಬೇಕು ಏಕೆಂದರೆ ಯಾವುದೇ ಹೊರಗಿನ ವಾತಾವರಣದಿಂದ ಸುಸ್ತಾಗಿ ಬರುತ್ತಾರೆ ಅವರಿಗೆ ಅತಿಯಾದ ಸಹಯೋಗದ ಆವಶ್ಯಕತೆಯಾಗುತ್ತದೆ ಆದ್ದರಿಂದ ಅವರಿಗೆ ಆತ್ಮೀಯ ವಾಯುಮಂಡಲದ ಸಹಯೋಗ ಕೊಡಿ. ಸಹಜ ಪುರುಷಾರ್ಧಿಯಾಗಿ ಮತ್ತು ಮಾಡಿಸಿ ಬರುವಂತಹ ಪ್ರತಿಯೊಬ್ಬ ಆತ್ಮ ಅನುಭವ ಮಾಡಲಿ ಈ ಮಾಡಿಕೊಳ್ಳುವಂತಹದು ಎಂದು. ಸ್ಥಾನ ಸಹಜವಾಗಿ ಉನ್ನತಿಯನ್ನು ಪ್ರಾಪ್ತಿ.

ಸ್ಲೋಗನ್: ವರದಾನಿಯಾಗಿ ಶುಭಭಾವನೆ ಮತ್ತು ಶುಭಕಾಮನೆಯ ವರದಾನ ಕೊಡುತ್ತಿರಿ.

ಆತ್ಮೀಯತೆಯ ಸ್ಥಿತಿಯ ಮೂಲಕ ತಮ್ಮ ಸೇವಾಕೇಂದ್ರದಲ್ಲಿ ಇಂತಹ ಆತ್ಮೀಯ ವಾತಾವರಣ ನಿರ್ಮಾಣ ಮಾಡಿ ಯಾವುದರಿಂದ ಸ್ವಯಂನ ಮತ್ತು ಮುಂದೆ ಬರುವಂತಹ ಆತ್ಮಗಳ ಸಹಜ ಉನ್ನತಿಯಾಗಬೇಕು ಏಕೆಂದರೆ ಯಾವುದೇ ಹೊರಗಿನ ವಾತಾವರಣದಿಂದ ಸುಸ್ತಾಗಿ ಬರುತ್ತಾರೆ ಅವರಿಗೆ ಅತಿಯಾದ ಸಹಯೋಗದ ಆವಶ್ಯಕತೆಯಾಗುತ್ತದೆ ಆದ್ದರಿಂದ ಅವರಿಗೆ ಆತ್ಮೀಯ ವಾಯುಮಂಡಲದ ಸಹಯೋಗ ಕೊಡಿ. ಸಹಜ ಪುರುಷಾರ್ಧಿಯಾಗಿ ಮತ್ತು ಮಾಡಿಸಿ ಬರುವಂತಹ ಪ್ರತಿಯೊಬ್ಬ ಆತ್ಮ ಅನುಭವ ಮಾಡಲಿ ಈ ಮಾಡಿಕೊಳ್ಳುವಂತಹದು ಎಂದು. ಸ್ಥಾನ ಸಹಜವಾಗಿ ಉನ್ನತಿಯನ್ನು ಪ್ರಾಪ್ತಿ.