10.05.26 Avyakt Bapdada
Kannada
Murli 30.01.2010 Om Shanti Madhuban
“ನಾಲ್ಕೂ
ಸಬ್ಜೆಕ್ಟ್ಗಳಲ್ಲಿ ಸ್ವಮಾನದ ಅನುಭವಿ ಸ್ವರೂಪರಾಗಿ ಅನುಭವದ ಅಥಾರಿಟಿಯನ್ನು ಕಾರ್ಯದಲ್ಲಿ ತೊಡಗಿಸಿ”
ಈ ದಿನ ಬ್ರಾಹ್ಮಣ
ಸಂಸಾರದ ರಚಯಿತ ಬಾಪ್ದಾದಾ ತನ್ನ ನಾಲ್ಕೂ ಕಡೆಯ ಬ್ರಾಹ್ಮಣ ಸಂಸಾರವನ್ನು ನೋಡುತ್ತಿದ್ದೇವೆ.
ಪ್ರತಿಯೊಬ್ಬ ಬ್ರಾಹ್ಮಣ ಇಡೀ ಪ್ರಪಂಚದಲ್ಲಿ ವಿಶೇಷ ಆತ್ಮರಾಗಿದ್ದಾರೆ. ಕೋಟಿಯಲ್ಲಿ
ಕೆಲವರಾಗಿದ್ದಾರೆ ಏಕೆಂದರೆ ಸಾಧಾರಣ ತನುವಿನಲ್ಲಿ ಬಂದ ತಂದೆಯನ್ನು ತಿಳಿದಿದ್ದಾರೆ. ಬಾಪ್ದಾದಾರವರೂ
ಸಹ ಹೃದಯದಲ್ಲಿ ಸಮಾವೇಶರಾಗಿರುವ ಮಕ್ಕಳಿಗೆ ಹೃದಯದಿಂದ ಹೃದಯದ ಪ್ರೀತಿಯನ್ನು ಕೊಡುತಿದ್ಧಾರೆ.
ಪ್ರತಿಯೊಬ್ಬ ಮಗು ತನ್ನನ್ನು ತಂದೆಯ ಪ್ರೀತಿ ಹೃದಯದಲ್ಲಿ ತಂದೆಯನ್ನು ಸಮಾವೇಶ ಮಾಡಿಕೊಂಡಿರುವುದು
ಅನುಭವ ಮಾಡುತ್ತಾರೆ. ತಂದೆಗೆ ಪ್ರತಿಯೊಬ್ಬ ಮಗು ಅತೀ ಪ್ರಿಯ, ಸರ್ವರಿಗೆ ಪ್ರಿಯವಾಗಿದ್ದಾರೆ.
ತಾವೆಲ್ಲಾ ಮಕ್ಕಳಿಗೆ ಸರ್ವ ಆತ್ಮರ ಪ್ರತಿ ನಾವು ಯೋಗಿ ಜೀವನದವರು ಎಂದು ಚಾಲೆಂಜ್ ಆಗಿದೆ. ಕೇವಲ
ಯೋಗವನ್ನು ಜೋಡಿಸುವವರಲ್ಲ, ಆದರೆ ಯೋಗಿ ಜೀವನದವರಾಗಿದ್ದೀರಿ. ಜೀವನ 2-4 ಗಂಟೆಯದ್ದು ಇರುವುದಿಲ್ಲ.
ಜೀವನ ಸದಾ ಕಾಲಕ್ಕಾಗಿ ಇರುತ್ತದೆ ಅಂದಮೇಲೆ ನಡೆಯುತ್ತಾ-ಓಡಾಡುತ್ತಾ ಯೋಗಿ ಜೀವನದವರು ನಿರಂತರ ಯೋಗಿ
ಆಗಿದ್ದೀರಿ. ಯೋಗದಲ್ಲಿ ಕುಳಿತಿರಬಹುದು, ಯಾವುದೇ ಕರ್ಮ ಮಾಡುತ್ತಾ ಕರ್ಮ ಯೋಗಿ ಆಗಿದ್ದೀರಿ.
ಜೀವನದ ಲಕ್ಷ್ಯ ಆಗಿದೆ ಸದಾ ಯೋಗಿ ಆಗುವುದು. ಈ ರೀತಿ ತಮ್ಮ ಯೋಗಿ ಜೀವನ ಸ್ವಾಭಾವಿಕವಾಗಿ ಅನುಭವ
ಮಾಡುತ್ತೀರಾ? ಬಾಪ್ದಾದಾ ಪ್ರತಿಯೊಬ್ಬ ಮಗುವಿನ ಮಸ್ತಕದಲ್ಲಿ ಹೊಳೆಯುತ್ತಿರುವ ಭಾಗ್ಯವನ್ನು
ನೋಡುತ್ತಿದ್ದಾರೆ, ಏನು ನೋಡುತ್ತಿದ್ದಾರೆ? ನನ್ನ ಪ್ರತಿಯೊಬ್ಬ ಮಗು ಸ್ವಮಾನಧಾರಿ,
ಸ್ವರಾಜ್ಯಾಧಿಕಾರಿ ಆಗಿದೆ ಏಕೆ? ಎಲ್ಲಿ ಸ್ವಮಾನವಿದೆಯೋ ಅಲ್ಲಿ ದೇಹಭಾನ ಬರಲು ಸಾಧ್ಯವಿಲ್ಲ.
ಆದಿಯಿಂದ ಅಂತ್ಯದವರೆಗೆ ಇದುವರೆಗೆ ಬಾಪ್ದಾದಾ ಪ್ರತಿಯೊಬ್ಬ ಮಗುವಿಗೆ ಭಿನ್ನ-ಭಿನ್ನ ಸ್ವಮಾನಗಳನ್ನು
ಕೊಟ್ಟಿದ್ದಾರೆ. ಒಂದುವೇಳೆ ಈಗಲೂ ಸ್ವಮಾನವನ್ನು ನೆನಪು ಮಾಡಿದರೆ ಮತ್ತು ಒಂದೊಂದು ಸ್ವಮಾನದ
ಮಾಲೆಯನ್ನು ತಿರುಗಿಸುತ್ತಾ ಹೋದರೆ ಅನೇಕ ಸ್ವಮಾನಗಳ ಸ್ವರೂಪರಾಗಿ ಸ್ವಮಾನದಲ್ಲಿ ಲವಲೀನರಾಗಿ
ಬಿಡುತ್ತೀರಿ ಆದರೆ ಬಾಪ್ದಾದಾರವರಿಗೆ ಒಂದು ಮಾತು ಮಕ್ಕಳದು ಇದುವರೆಗೆ ಇಷ್ಟ ಆಗುವುದಿಲ್ಲ. ಅದು
ಯಾವುದು ಎಂದು ಗೊತ್ತಿದೆಯೇ? ಯಾವುದೇ ಮಗು ನಮಗೆ ಸ್ವಮಾನದಲ್ಲಿ ಸ್ಥಿತರಾಗುವುದರಲ್ಲಿ ಕೆಲವೊಮ್ಮೆ
ಕಷ್ಟ ಆಗುತ್ತದೆ, ಬಯಸುತ್ತೇವೆ ಆದರೆ ಕೆಲವೊಮ್ಮೆ ಕಷ್ಟ ಆಗುತ್ತದೆ ಎಂದು ಹೇಳುವುದು ಇಷ್ಟ
ಆಗುವುದಿಲ್ಲ ಅಂದಾಗ ತಂದೆ ಸರ್ವಶಕ್ತಿವಂತ ಮಕ್ಕಳ ಪರಿಶ್ರಮವನ್ನು ನೋಡಲು ಸಾಧ್ಯವಿಲ್ಲ ಏಕೆಂದರೆ
ಎಲ್ಲಿ ಪ್ರೀತಿ ಇರುತ್ತದೆ ಅಲ್ಲಿ ಪರಿಶ್ರಮ ಇರುವುದಿಲ್ಲ. ಎಲ್ಲಿ ಪರಿಶ್ರಮವಿದೆಯೋ ಅಲ್ಲಿ
ಪ್ರೀತಿಯಲ್ಲಿ ಕೊರತೆ ಇದೆ.
ಈ ದಿನ ಅಮೃತವೇಳೆ
ಬಾಪ್ದಾದಾರವರು ನಾಲ್ಕಾರೂ ಕಡೆ ಬ್ರಾಹ್ಮಣರ ಬಳಿ ದೇಶದವರು ಇರಬಹುದು ಅಥವಾ ವಿದೇಶದವರು ಇರಬಹುದು
ಚಕ್ಕರ್ ಹಾಕಿದಾಗ ಏನು ನೋಡಿದ್ದಾರೆ? ಕೆಲವು ಮಕ್ಕಳು ಸ್ವಮಾನದಲ್ಲಿ ಕುಳಿತಿದ್ದಾರೆ, ಯೋಚನೆ
ಮಾಡುತ್ತಿದ್ದಾರೆ ನಾನು ಬಾಪ್ದಾದಾರವರ ಹೃದಯ ಸಿಂಹಾಸನಾಧಿಕಾರಿ ಆಗಿದ್ದೇನೆಯೇ? ಯೋಚನೆಯೂ
ಮಾಡುತ್ತಾರೆ, ಸ್ವಮಾನದಲ್ಲಿ ಸ್ಥಿತರಾಗುವ ಪುರುಷಾರ್ಥವೂ ಮಾಡುತ್ತಿದ್ದಾರೆ ಆದರೆ ಯಾವ ಕೊರತೆಯನ್ನು
ನೋಡಿದ್ದೇವೆ? ಸ್ವಮಾನ ನೆನಪು ಇದೆ, ಯೋಚನೆ ಮಾಡುತ್ತಿದ್ದಾರೆ ಆದರೆ ಸ್ವಮಾನದ ಸ್ವರೂಪರಾಗಿ
ಅನುಭವಿಮೂರ್ತಿಗಳಾಗಿ ಅನುಭವದ ಅಥಾರಿಟಿ ಸ್ವರೂಪ ಆಗುವುದರಲ್ಲಿ ಕೊರತೆ ಕಂಡು ಬಂದಿದೆ ಏಕೆಂದರೆ
ಅಥಾರಿಟಿ ಬಹಳ ಇದೆ ಆದರೆ ಎಲ್ಲದಕ್ಕಿಂತ ದೊಡ್ಡ ಅಥಾರಿಟಿ ಅನುಭವದ ಅಥಾರಿಟಿಯಾಗಿದೆ ಮತ್ತು ಈ
ಸ್ವಮಾನದ ಅನುಭೂತಿ ಆಲ್ಮೈಟಿ ಅಥಾರಿಟಿ (ಸರ್ವಶಕ್ತಿವಂತ) ಕೊಟ್ಟಿದ್ದಾರೆ, ಅಂದಮೇಲೆ ಪರಿಶ್ರಮ
ಮಾಡುತ್ತಿದ್ದಾರೆ ಆದರೆ ಅನುಭವ ಸ್ವರೂಪರಾಗಿಲ್ಲ ಅಂದಾಗ ಬಾಪ್ದಾದಾರವರು ಕುಳಿತಿದ್ದಾರೆ, ಯೋಚನೆಯೂ
ಮಾಡುತ್ತಾರೆ ಆದರೆ ಅನುಭವ ಸ್ವರೂಪ ಕೆಲವರಷ್ಟೇ ಇದ್ದಾರೆ, ಅನುಭವದಲ್ಲಿ ಯಾವುದೇ ಪ್ರಕಾರದ
ದೇಹಾಭಿಮಾನ ಸ್ವಲ್ಪವೂ ತನ್ನ ಕಡೆ ಸೆಳೆಯಲು ಸಾಧ್ಯವಿಲ್ಲ ಅಂದಾಗ ಅನುಭವ ಸ್ವರೂಪರಾಗಿ ಬಿಡುವುದು,
ಕರ್ಮ ಮಾಡುತ್ತಾ ಕರ್ಮಯೋಗಿಯ ಅನುಭವ ಸ್ವರೂಪದಲ್ಲಿ ಮುಳುಗಿರಬೇಕು, ಇದರ ಅವಶ್ಯಕತೆ ಈಗ ಹೆಚ್ಚು ಇದೆ.
ಸ್ವರೂಪ ಆಗುವುದು, ಪ್ರತಿಯೊಂದು ಮಾತಿನಲ್ಲಿ, ಪ್ರತಿಯೊಂದು ಸಬ್ಜೆಕ್ಟಿನಲ್ಲಿ ಅನುಭವಿ
ಸ್ವರೂಪರನ್ನಾಗಿ ಮಾಡುವುದು, ಜ್ಞಾನ ಇರಲಿ, ಯೋಗ, ಧಾರಣೆ ಮತ್ತು ಸೇವೆ ನಾಲ್ಕೂ ಸಬ್ಜೆಕ್ಟಿನಲ್ಲಿ
ಅನುಭವಿ ಸ್ವರೂಪರಾಗುವುದು. ಅನುಭವಿಗಳಿಗೆ ಮಾಯೆಯೂ ಅಲುಗಾಡಿಸಲು ಸಾಧ್ಯವಿಲ್ಲ, ಆದ್ದರಿಂದ
ಬಾಪ್ದಾದಾ ಈ ದಿನ ಎಲ್ಲಾ ಮಕ್ಕಳನ್ನು ಅನುಭವಿ ಸ್ವರೂಪದಲ್ಲಿ ನೋಡಲು ಬಯಸುತ್ತಾರೆ. ಕೇಳುವುದರಲ್ಲಿ
ಮತ್ತು ಯೋಚನೆ ಮಾಡುವುದರಲ್ಲಿ ಅಂತರವಿದೆ ಆದರೆ ಅನುಭವಿ ಸ್ವರೂಪರನ್ನಾಗಿ ಮಾಡಬೇಕು. ಏನು ಯೋಚನೆ
ಮಾಡುತ್ತೇವೆ, ಯಾವ ಸ್ವಮಾನದಲ್ಲಿ ಸ್ಥಿತರಾಗಲು ಬಯಸುತ್ತೇವೆ ಅದರ ಅನುಭವದ ಸ್ವರೂಪದಲ್ಲಿ
ಸ್ಥಿತರಾಗಿಬಿಡುವುದು. ಅನುಭವವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಏಕೆಂದರೆ ಸ್ವಮಾನ ಮತ್ತು
ದೇಹಬಾನ, ಎಲ್ಲಿ ಸ್ವಮಾನದ ಸ್ವರೂಪವಿದೆ, ಸ್ವಮಾನದ ಅನುಭವದಲ್ಲಿ ಸ್ಥಿತರಾಗುತ್ತೀರಿ ಅಲ್ಲಿ
ದೇಹಬಾನ ಬರಲು ಸಾಧ್ಯವಿಲ್ಲ. ಹೇಗೆ ಅಂಧಾಕರವಿದ್ದರೆ ಸ್ವಿಚ್ ಆನ್ ಮಾಡಿದರೆ ಬೆಳಕಿನಿಂದ ಅಂಧಕಾರ
ಸಹಜವಾಗಿ ದೂರ ಆಗಿಬಿಡುತ್ತದೆ. ಅಂಧಕಾರವನ್ನು ದೂರ ಮಾಡುವುದರಲ್ಲಿ, ಅಂಧಕಾರವನ್ನು ಓಡಿಸುವುದರಲ್ಲಿ
ಪರಿಶ್ರಮ ಮಾಡಬೇಕಾಗಿಲ್ಲ. ಅದೇ ರೀತಿ ಯಾವಾಗ ಸ್ವಮಾನದ ಸೀಟ್ ಮೇಲೆ ಅನುಭವದ ಸ್ವಿಚ್ ಆನ್ ಆದರೆ
ಯಾವುದೇ ಪ್ರಕಾರದ ದೇಹಬಾನ, ಭಿನ್ನ-ಭಿನ್ನ ಪ್ರಕಾರದ ದೇಹಭಾನವೂ ಇದೆ ಮತ್ತು ಭಿನ್ನ-ಭಿನ್ನ
ಪ್ರಕಾರದ ಸ್ವಮಾನಗಳನ್ನೂ ತಂದೆ ಕೊಟ್ಟಿದ್ದಾರೆ. ಸ್ವಮಾನವನ್ನು ತಿಳಿದಿದ್ದಾರೆ, ಪುರುಷಾರ್ಥವೂ
ಮಾಡುತ್ತಾರೆ ಆದರೆ ಅನುಭವದ ಪುರುಷಾರ್ಥ ಮಾಡುವುದು ಅನುಭವಿ ಸ್ವರೂಪರನ್ನಾಗಿ ಮಾಡುವುದರಲ್ಲಿ
ಅಂತರವಿದೆ, ಆದ್ದರಿಂದ ಪರಿಶ್ರಮ ಮಾಡಬೇಕಾಗುತ್ತದೆ ಅಂದಾಗ ಬಾಪ್ದಾದಾರವರಿಗೆ ಈಗ ಸಮಯ ಪ್ರಮಾಣ
ತಂದೆಯ ಸಮಾನ ಆಗುವ ಲಕ್ಷ್ಯ ಸಂಪನ್ನ ಮಾಡುವ ಸಮಯವಾಗಿದೆ, ಪರಿಶ್ರಮ ಮಾಡುವುದು ಇಷ್ಟ ಆಗುವುದಿಲ್ಲ.
ಪ್ರತಿಯೊಬ್ಬರು ತಮ್ಮನ್ನು ತಾವು ನಾನು ಕರ್ಮಯೋಗಿ ಜೀವನದವರಾಗಿದ್ದೇನೆಯೇ? ಎಂದು ಚೆಕ್ ಮಾಡಿಕೊಳ್ಳಿ.
ಜೀವನ ಸ್ವಾಭಾವಿಕವಾಗಿ ಮತ್ತು ಸದಾಕಾಲದ್ದಾಗಿರುತ್ತದೆ, ಆದರೆ ಕೆಲವೊಮ್ಮೆ ಇರುವುದಿಲ್ಲ. ಈ ರೀತಿ
ಅನುಭವಿ ಸ್ವರೂಪರನ್ನಾಗಿ ಮಾಡಿ, ಯೋಗಿ ಜೀವನದ ಯಾವ ಲಕ್ಷ್ಯವಿದೆ, ಅನುಭವಿಮೂರ್ತಿಗಳಾಗುವ ಲಕ್ಷ್ಯ
ಸಂಪನ್ನ ಆಗಿದೆಯೇ? ಸದಾ ಮಸ್ತಕದಿಂದ ಹೊಳೆಯುತ್ತಿರುವ ಬೆಳಕು ಸ್ವಯಂಗೂ ಅನುಭವ ಆಗಲಿ, ಸ್ವಯಂ ಆ
ಸ್ವರೂಪದಲ್ಲಿ ಸ್ಥಿತರಾಗಿ, ಸ್ಮೃತಿ ಸ್ವರೂಪರಾಗಿ, ಸ್ಮೃತಿ ಮಾಡುವವರಲ್ಲ, ಸ್ಮೃತಿ ಸ್ವರೂಪರಾಗಬೇಕು
ಮತ್ತು ಸ್ಮೃತಿ ಸ್ವರೂಪ ಆಗಿದ್ದೀರೋ ಇಲ್ಲವೋ? ಇದರ ಪ್ರಮಾಣ ಎಲ್ಲಿ ಸ್ಮೃತಿಯ ಅನುಭವ
ಸ್ವರೂಪರಾಗಿರುತ್ತಾರೆ ಅಲ್ಲಿ ತಮ್ಮಲ್ಲಿ ಸಮರ್ಥತೆ ಪ್ರತಿಯೊಂದು ಕಾರ್ಯವನ್ನು ಮಾಡುತ್ತಾ ಅನುಭವ
ಆಗುತ್ತದೆ. ಕಾರ್ಯ ಭಿನ್ನ-ಭಿನ್ನ ಆಗಿರುತ್ತದೆ, ಆದರೆ ಅನುಭವ ಸ್ವರೂಪದ ಸ್ಥಿತಿ ಭಿನ್ನ-ಭಿನ್ನ
ಆಗಿರುವುದಿಲ್ಲ.
ಈ ದಿನ ಬಾಪ್ದಾದಾ
ಪರಿಶ್ರಮ ಏಕೆ ಮಾಡಬೇಕಾಗುತ್ತದೆ ಎಂದು ನೋಡಿದ್ದೇವೆ. ಅನುಭವಿ ಸ್ವರೂಪ ಆಗುವುದರಲ್ಲಿ ನಂಬರ್ವಾರ್
ಪುರುಷಾರ್ಥದನುಸಾರ ನೋಡಿದ್ದೇವೆ. ಬಾಪ್ದಾದಾರವರಿಗೆ ಪ್ರತಿಯೊಬ್ಬ ಮಕ್ಕಳ ಮೇಲೆ ಅತೀ ಪ್ರೀತಿ ಇದೆ
ಅಂದಾಗ ಪ್ರಿಯವಾಗಿರುವವರ ಪರಿಶ್ರಮ ನೋಡಲು ಇಷ್ಟ ಆಗುವುದಿಲ್ಲ. ಯಾವುದೇ ಸಬ್ಜೆಕ್ಟಿನಲ್ಲಿ
ಪರಿಶ್ರಮ ಮಾಡಬೇಕಾಗುತ್ತದೆ, ಕೆಲವೊಮ್ಮೆ ಎಂಬ ಶಬ್ದ ಉಪಯೋಗಿಸಬೇಕಾಗುತ್ತದೆ, ಇದಕ್ಕೆ ಕಾರಣ ಅನುಭವಿ
ಸ್ವರೂಪ ಆಗುವುದರ ಕೊರತೆ. ಪುರುಷಾರ್ಥಿ ಆಗಿದ್ದೀರಿ ಆದರೆ ಸ್ವರೂಪ ಆಗಲಿಲ್ಲ. ಒಂದು ಸೆಕೆಂಡಿನಲ್ಲಿ
ನಾಲ್ಕೂ ಸಬ್ಜೆಕ್ಟಿನಲ್ಲಿ ತಮ್ಮ ಸ್ವಮಾನದ ಅನುಭವಿ ಸ್ವರೂಪದ ಅನುಭವ ಆಗಬೇಕು ಯಾವುದರಿಂದ
ದೇಹಾಭಿಮಾನ ಹತ್ತಿರ ಬರಲು ಸಾಧ್ಯವಿಲ್ಲ. ಹೇಗೆ ಬೆಳಕಿನ ಮುಂದೆ ಅಂಧಕಾರ ಇರಲು ಸಾಧ್ಯವಿಲ್ಲ,
ತೆಗೆಯಬೇಕಾಗಿಲ್ಲ ಸ್ವಾಭಾವಿಕವಾಗಿ ಎಲ್ಲಿ ಅಂಧಕಾರವಿರುತ್ತದೆ ಅಲ್ಲಿ ಬೆಳಕು ಕಡಿಮೆ ಇದೆ ಅಥವಾ
ಇಲ್ಲ. ಅಂದಾಗ ಎಲ್ಲದಕ್ಕಿಂತ ಅತೀ ದೊಡ್ಡ ಅಥಾರಿಟಿ ಅನುಭವದ ಅಥಾರಿಟಿ ಎಂದು ಗಾಯನವಿದೆ.
ಅನುಭವವನ್ನು ಸಾವಿರಾರು ಜನ ಬದಲಾವಣೆ ಮಾಡಲು ಪ್ರಯತ್ನ ಮಾಡಿದರೂ ಮಾಡಲು ಸಾಧ್ಯವಿಲ್ಲ. ಹೇಗೆ
ತಾವೆಲ್ಲರೂ ಸಕ್ಕರೆಯನ್ನು ಅನುಭವ ಮಾಡಿ ನೋಡಿದಿರಿ ಅದು ಸಿಹಿ ಆಗಿರುತ್ತದೆ. ಒಂದುವೇಳೆ ಸಾವಿರಾರು
ಜನ ತಮ್ಮನ್ನು ಬದಲಾವಣೆ ಮಾಡಲು ಪ್ರಯತ್ನ ಮಾಡಿದರೂ ಆಗಲು ಸಾಧ್ಯವೇ? ಅಂದಾಗ ಯಾವುದೆಲ್ಲಾ
ಸಬ್ಜೆಕ್ಟ್ ಇದೆ ಜ್ಞಾನದ್ದಿರಬಹುದು, ಯೋಗದ ಸಬ್ಜೆಕ್ಟ್ ಇರಬಹುದು, ಧಾರಣೆಯ ಸಬ್ಜೆಕ್ಟ್ ಇರಬಹುದು,
ಸೇವೆಯ ಸಬ್ಜೆಕ್ಟ್ ಇರಬಹುದು. ನಾಲ್ಕರಲ್ಲಿ ಒಂದರಲ್ಲಾದರೂ ಪರಿಶ್ರಮ ಆಗುತ್ತದೆ, ಸೇವೆಯಲ್ಲೂ ಸಫಲತೆ,
ಧಾರಣೆಯಲ್ಲೂ ಸ್ವಭಾವ ಪರಿವರ್ತನೆ ಮಾಡಿಕೊಂಡಿರಿ, ಯೋಗದಲ್ಲೂ ಅಚಲವಾಗಿರುವ, ಯೋಗಿ ಜೀವನದ ಅನುಭೂತಿ
ಮಾಡುವುದರಲ್ಲಿ ಎಲ್ಲಿ ಪರಿಶ್ರಮವಿದೆ ಆಗ ಕೆಲವೊಮ್ಮೆ ಎಂದು ಹೇಳುತ್ತೀರಾ! ಇದರ ಅರ್ಥವಾಗಿದೆ ಆ
ಸಬ್ಜೆಕ್ಟಿನಲ್ಲಿ ತಾವು ಅನುಭವಿಮೂರ್ತಿಗಳು ಆಗಲಿಲ್ಲ. ಅನುಭವ ಕೆಲವೊಮ್ಮೆ ಇರುವುದಿಲ್ಲ
ಸ್ವಭಾವಿಕವಾಗಿ ಸ್ವಭಾವ ಆಗಿ ಬಿಡುತ್ತದೆ. ಈಗ ಪರಿಶ್ರಮ ಮಾಡುವ ಕಾರಣ ಏನು ಎಂದು ಕೇಳಿದ್ದೀರಾ?
ಯಾವುದೇ ಸಮಯದಲ್ಲಿ ತಮಗೆ ಅನುಭವ ಆಗುತ್ತದೆ, ಅನುಭವದ ಸೀಟಿನಲ್ಲಿ ಸೆಟ್ ಆದರೆ ಯಾವುದೇ ವರದಾನದ
ಸ್ವರೂಪದಲ್ಲಿ ಅನುಭವಿ ಆಗಿ ಅನುಭವ ಮಾಡಿದರೆ ಆ ಸಮಯದಲ್ಲಿ ಪರಿಶ್ರಮ ಮಾಡಬೇಕಾಗುತ್ತದೇನು? ಸಹಜವಾಗಿ
ಅನುಭೂತಿ ಆಗುತ್ತದೆ, ಆದ್ದರಿಂದ ಈಗ ಸಮಯ ಪ್ರಮಾಣ ಎಲ್ಲಾ ಅಚಾನಕ್ ಆಗುವುದಿದೆ. ಹೇಳಿ ಆಗುವುದಿಲ್ಲ.
ಹೇಗೆ ಈಗ ಪ್ರಕೃತಿಯ ಅಚಾನಕ್ ಮಾತುಗಳ ಆಟ ನಡೆಯುತ್ತಿದೆ, ಈಗ ಆರಂಭ ಆಗಿದೆ, ಹೊಸ-ಹೊಸ ಮಾತುಗಳು
ಅಚಾನಕ್ ಭೂಕಂಪ ಆಗಿದೆ, ಸ್ವಲ್ಪ ಸಮಯದಲ್ಲಿ ಲಕ್ಷಾಂತರ ಆತ್ಮಗಳು ಹೊರಟು ಹೋದರು, ಅವರಿಗೆ ನಾಳೆ
ನಾವು ಇರುತ್ತೇವೆಯೋ ಇಲ್ಲವೋ? ಎಂದು ಗೊತ್ತಿದೆಯೇನು? ಇದೇ ರೀತಿ ಯಾವುದೇ ಆಕ್ಸಿಡೆಂಟ್
ಭಿನ್ನ-ಭಿನ್ನ ಸ್ಥಾನಗಳಲ್ಲಿ ಅಚಾನಕ್ ಆಗುವುದು ಪ್ರಾರಂಭವಾಗಿದೆ. ಒಟ್ಟಿಗೆ ಒಂದೇ ಸಮಯದಲ್ಲಿ
ಅನೇಕರ ಟಿಕೆಟ್ ಕಟ್ ಆಗುತ್ತಿದ್ದರೆ ಅಂತಹ ಸಮಯದಲ್ಲಿ ತಾವು ಎವರ್ರೆಡಿ ಆಗಿದ್ದೀರಾ? ಪುರುಷಾರ್ಥ
ಮಾಡುತ್ತಿದ್ದೇನೆ ಎಂದು ಹೇಳುವುದಿಲ್ಲ ತಾನೇ. ಎವರ್ರೆಡಿ ಅರ್ಥಾತ್ ಯಾವುದೇ ವರದಾನ ಅಥವಾ ಸ್ವಮಾನದ
ಸಂಕಲ್ಪ ಮಾಡಿ ಮತ್ತು ಸ್ವರೂಪ ಆಗುವುದು ಆದ್ದರಿಂದ ಬಾಪ್ದಾದಾ ಈ ದಿನ ಈ ಮಾತಿನ ಮೇಲೆ ಅಟೆನ್ಷನ್
ಕೊಡುತ್ತಿದ್ದಾರೆ. ಯಾವುದೇ ವರದಾನವನ್ನು ಫಲೀಭೂತ ಮಾಡಿ ವರದಾನ ಅಥವಾ ಸ್ವಮಾನದ ಸ್ವರೂಪದ ಅನುಭವಿ
ಆಗಲು ಸಾಧ್ಯವೇ? ಆಗಲೇಬೇಕಾಗುತ್ತದೆ. ಪ್ರಯತ್ನ ಮಾಡುತ್ತಿದ್ದೇನೆ, ಒಂದುವೇಳೆ ಪ್ರಯತ್ನ
ಮಾಡುವುದಾದರೂ ಈಗನಿಂದಲೇ ಮಾಡಬೇಕು ಏಕೆಂದರೆ ಬಹಳ ಕಾಲದ ಅಭ್ಯಾಸ ಸಮಯದಲ್ಲಿ ಸಹಯೋಗ ಕೊಡುತ್ತದೆ,
ಪುರುಷಾರ್ಥಿ ಅಲ್ಲ, ಅನುಭವಿ ಆಗಬೇಕು ಏಕೆಂದರೆ ಅನುಭವದ ಅಥಾರಿಟಿ ತಮ್ಮೆಲ್ಲರಿಗೆ ಸರ್ವಶಕ್ತಿವಂತ
ಕೊಟ್ಟಿದ್ದಾರೆ, ಹೇಗೆ ದೇಹಬಾನದ ಅನುಭವಿ ಆದರೆ ನಾನು ಇಂತಹವರು ಎಂದು ದೇಹಭಾನವನ್ನು ನೆನಪು
ಮಾಡಬೇಕಾಗುತ್ತದೆಯೇ? ತಮ್ಮ ಹೆಸರು ದೇಹದ ಮೇಲೆ ಇದ್ದರೆ ದೇಹಭಾನ ಆಯಿತಲ್ಲವೇ? ಒಂದುವೇಳೆ ಸಾವಿರಾರು
ಜನ ತಾವು ಇಂತಹವರು ಅಲ್ಲ, ತಾವು ಇದಾಗಿದ್ದೀರಿ ಎಂದು ಹೇಳಿದರೆ, ಹೆಸರು ಬದಲಾವಣೆ ಮಾಡಿ ಬಿಟ್ಟರೆ
ತಾವು ಒಪ್ಪುತ್ತೀರೇನು? ತಮ್ಮ ಹೆಸರು ಮರೆತು ಬಿಡುತ್ತೀರಾ! ಜನ್ಮ ಪಡೆಯುತ್ತಿದ್ದಾಗಲೇ ಯಾವ ಹೆಸರು
ಇದೆ, ಆ ದೇಹಭಾನ ಎಷ್ಟು ಪಕ್ಕಾ ಮತ್ತು ಸ್ವಾಭಾವಿಕವಾಗಿರುತ್ತದೆ. ಯಾರಿಗಾದರೂ ತಮ್ಮ ಹೆಸರಿನಲ್ಲಿ
ಕರೆದರೆ, ತಮ್ಮನ್ನು ಕರೆಯುವುದಿಲ್ಲ ಆದರೆ ತಮ್ಮ ಹೆಸರಿನವರನ್ನು ಕರೆದರೆ, ತಮ್ಮ ಕಿವಿ ಹೆಸರು
ಕೇಳುತ್ತಿದ್ದಾಗಲೇ ನನ್ನನ್ನು ಕರೆಯುತ್ತಿದ್ದಾರೆ ಎಂದು ಅಟೆನ್ಷನ್ ಹೋಗುತ್ತದೆ ಅಂದಾಗ ದೇಹಬಾನ
ಇಷ್ಟು ಪಕ್ಕಾ ಆಗಿ ಬಿಟ್ಟಿದೆ. ಈ ರೀತಿ ದೇಹಿ-ಅಭಿಮಾನಿ ಸ್ವಮಾನಧಾರಿ, ಸ್ವರಾಜ್ಯಾಧಿಕಾರಿ ಇಷ್ಟು
ಪಕ್ಕಾ ಆಗಿದ್ದೀರಾ? ನಮ್ಮ ಜೀವನ ಪರಿವರ್ತನೆ ಆದರೆ ಯಾವ ಪರಿವರ್ತನೆ ಮಾಡಿಕೊಂಡಿರಿ ಎಂದು ತಾವು
ಹೇಳುತ್ತೀರಲ್ಲವೇ. ದೇಹ ಭಾನದಿಂದ ಸ್ವಮಾನ, ಸ್ವರಾಜ್ಯಾಧಿಕಾರಿ ಆಗಿದ್ದೀರಿ ಅಂದಾಗ ಜ್ಞಾನ
ಸ್ವರೂಪನಾಗಿದ್ದೇನೆಯೇ? ಅಥವಾ ಜ್ಞಾನ ಕೇಳಿ ತಿಳಿಸುವಂತಹವನಾಗಿದ್ದೇನೆಯೇ? ಎಂದು ಚೆಕ್ ಮಾಡಿಕೊಳ್ಳಿ.
ಜ್ಞಾನ ಅರ್ಥಾತ್ ನಾಲೆಡ್ಜ್. ನಾಲೆಡ್ಜ್ ಪ್ರತ್ಯಕ್ಷ ಸ್ವರೂಪವಾಗಿದೆ. ಜ್ಞಾನ ಶಕ್ತಿಯಾಗಿದೆ,
ಬೆಳಕಾಗಿದೆ ಎಂದು ಹೇಳಲಾಗುತ್ತದೆ, ಅಂದಾಗ ಜ್ಞಾನ ಸ್ವರೂಪರಾಗುವುದು ಅರ್ಥಾತ್ ಯಾವುದೆಲ್ಲಾ ಕರ್ಮ
ಮಾಡುತ್ತೀರಿ ಅದು ಲೈಟ್ ಮತ್ತು ಮೈಟ್ ನೀಡುವಂತಹದ್ದಾಗಿರುತ್ತದೆ, ಯಥಾರ್ಥವಾಗಿರುತ್ತದೆ. ಇದಕ್ಕೆ
ಜ್ಞಾನ ಸ್ವರೂಪರಾಗುವುದು ಎಂದು ಹೇಳಲಾಗುತ್ತದೆ. ಜ್ಞಾನ ತಿಳಿಸುವವರಲ್ಲ ಆದರೆ ಜ್ಞಾನ
ಸ್ವರೂಪರಾಗಬೇಕು. ಯೋಗ ಸ್ವರೂಪದ ಅರ್ಥ ಆಗಿದೆ ಕರ್ಮೇಂದ್ರಿಯಾಜೀತರಾಗುವುದು. ಪ್ರತಿಯೊಂದು
ಕರ್ಮೇಂದ್ರಿಯದ ಮೇಲೆ ಸ್ವರಾಜ್ಯಾಧಿಕಾರಿ. ಇದಕ್ಕೆ ಯೋಗ ಅರ್ಥಾತ್ ಯುಕ್ತಿ ಯುಕ್ತ ಜೀವನ ಎಂದು
ಹೇಳಲಾಗುತ್ತದೆ. ಈ ರೀತಿ ಒಂದುವೇಳೆ ಜ್ಞಾನ ಮತ್ತು ಯೋಗದ ಸ್ವರೂಪರಾದರೆ ಪ್ರತಿಯೊಂದು ಗುಣದ ಧಾರಣೆ
ಸಹಜವಾಗಿ ಆಗುತ್ತದೆ. ಎಲ್ಲಿ ಜ್ಞಾನ, ಯೋಗವಿದೆ, ಯೋಗ ಯುಕ್ತರಾಗಿರುತ್ತಾರೆ ಅಲ್ಲಿ ಗುಣಗಳ ಧಾರಣೆ
ಸಹಜವಾಗಿ ಆಗುತ್ತದೆ. ಸೇವೆ ಪ್ರತಿಯೊಂದು ಸಮಯದಲ್ಲಿ ಸಹಜವಾಗಿ ಆಗುತ್ತದೆ. ಸಮಯನುಸಾರ ಮನಸಾ ಸೇವೆ
ಮಾಡಲಿ, ವಾಚಾ ಸೇವೆ ಮಾಡಲಿ, ಕರ್ಮಣಾ ಸೇವೆ ಮಾಡಲಿ, ಸ್ನೇಹ-ಸಂಬಂಧದಲ್ಲಿ ಮಾಡಲಿ, ಸೇವೆಯೂ ಸದಾ
ಅಖಂಡವಾಗಿ ನಡೆಯುತ್ತಿರುತ್ತದೆ. ಸಂಬಂಧ-ಸಂಪರ್ಕದಲ್ಲೂ ಸೇವೆ ಆಗುತ್ತದೆ. ಯಾರಾದರೂ ತಮ್ಮ ಸಹೋದರಿ
ಅಥವಾ ಸಹೋದರ ಬ್ರಾಹ್ಮಣ ಪರಿವಾರದಲ್ಲಿ...... ಆದರೆ ಪುರುಷಾರ್ಥದಲ್ಲಿ ನಿರುತ್ಸಾಹಿ ಆಗಿದ್ದರೆ,
ಯಾವುದಾದರೂ ಸಂಸ್ಕಾರಕ್ಕೆ ವಶರಾದರೆ ಅಂತಹ ಸಂಪರ್ಕದ ಆತ್ಮಗಳಿಗೆ ತಾವು ಉಮ್ಮಂಗ-ಉತ್ಸಾಹ ಕೊಟ್ಟಿರಿ,
ಸಹಯೋಗ ಕೊಟ್ಟಿರಿ, ಸ್ನೇಹ ಕೊಟ್ಟಿರಿ, ಇದೂ ಸಹ ತಮಗೆ ಸೇವೆಯ ಪುಣ್ಯ ಜಮಾ ಆಗುತ್ತದೆ.
ಬಿದ್ದಿರುವವರನ್ನು ಮೇಲೆತ್ತುವುದು ಪುಣ್ಯ ಎಂದು ಗಾಯನ ಮಾಡಲಾಗುತ್ತದೆ. ಅಂದಾಗ ಸಂಬಂಧ ಮತ್ತು
ಸಂಪರ್ಕದಲ್ಲೂ ಸೇವೆ ಮಾಡುವುದು ಸತ್ಯ ಸೇವಾಧಾರಿಗಳ ಕರ್ತವ್ಯವಾಗಿದೆ. ಸೇವೆ ಸಿಕ್ಕಿದರೆ, ಸೇವೆ
ಮಾಡಿದಾಗ ಸೇವೆ ಅಲ್ಲ. ಸ್ವಯಂ ಮನಸಾ-ವಾಚಾ-ಕರ್ಮಣಾ, ಸಂಪರ್ಕ-ಸಂಬಂಧದಲ್ಲಿ ಸೇವೆ ಸಹಜವಾಗಿ
ಆಗುತ್ತಿರಲಿ, ಕೆಲವೊಮ್ಮೆ ಬಾಪ್ದಾದಾರವರು ನೋಡಿದರು ಸಂಪರ್ಕದಲ್ಲಿ ಕೆಲವು ಮಕ್ಕಳು ಇವರ
ಸ್ವಭಾವ-ಸಂಸ್ಕಾರ ಯಾವ ರೀತಿ ಇರಬೇಕೋ ಆ ರೀತಿ ಇಲ್ಲ ಆದರೆ ಇವರು ಇರುವುದೇ ಆ ರೀತಿ, ಇವರು ಬದಲಾವಣೆ
ಆಗುವುದಿಲ್ಲ, ಇವರ ಸೇವೆ ಮಾಡುವುದು ಸಮಯ ವ್ಯರ್ಥವಾಗಿದೆ, ಈ ರೀತಿ ಸಂಕಲ್ಪ ಮಾಡುವುದು
ಯಥಾರ್ಥವಾಗಿದೆಯೇ? ನಾವು ಪ್ರಕೃತಿಯನ್ನೂ ಸತೋಪ್ರಧಾನವನ್ನಾಗಿ ಮಾಡುವವರು ಎಂದು ತಾವು
ಒಪ್ಪಿಕೊಳ್ಳುತ್ತೀರಿ, ಅವರು ಮನುಷ್ಯಾತ್ಮರು ಆಗಿದ್ದಾರೆ, ಬ್ರಾಹ್ಮಣರು ಎಂದು ಹೇಳಲಾಗುತ್ತದೆ ಆದರೆ
ಸಂಸ್ಕಾರ ವಶರಾಗಿದ್ದಾರೆ. ಪ್ರಕೃತಿಯ ಸಂಸ್ಕಾರವನ್ನು ಬದಲಾವಣೆ ಮಾಡುವ ಚಾಲೆಂಜ್ ಮಾಡಿದರೆ ಅವರು
ಪ್ರಕೃತಿಯಿಂದ ಪುರುಷ ಆತ್ಮರಾಗಿದ್ದರೆ, ತಮ್ಮ ಸಂಬಂಧದಲ್ಲಿ ಇದ್ದಾರೆ ಅಂದಾಗ ಸತ್ಯ ಸೇವಾಧಾರಿ
ತಮ್ಮ ಸೇವೆಯ ಪುಣ್ಯ ಸಂಪಾದನೆ ಮಾಡಿಕೊಳ್ಳುವ ಶುಭ ಭಾವನೆ ಅವಶ್ಯವಾಗಿ ಇಟ್ಟುಕೊಳ್ಳುತ್ತಾರೆ.
ಇವರಂತೂ ಇರುವುದೇ ಹಾಗೆ, ಬದಲಾವಣೆ ಆಗಲು ಸಾಧ್ಯವಿಲ್ಲ, ಇದು ಶುಭ ಭಾವನೆ ಅಲ್ಲ, ಇದು ಸೂಕ್ಷ್ಮ
ತಿರಸ್ಕಾರದ ಭಾವನೆ ಆದರೂ ತಮ್ಮ ಸಹೋದರ-ಸಹೋದರಿಯಾಗಿದ್ದಾರೆ, ಆದರೂ ನನ್ನ ಬಾಬಾ ಎಂದು
ಹೇಳುತ್ತಾರಲ್ಲವೇ! ಅಂದಾಗ ಸತ್ಯ ಸೇವಾಧಾರಿ ಸೇವೆಯ ವಿನಃ ಶುಭ ಭಾವನೆ ಕೊಡುವುದು, ಈ ಸೇವೆಯಲ್ಲೂ
ಪುಣ್ಯ ಜಮಾ ಮಾಡಿಕೊಳ್ಳುತ್ತಾರೆ. ಬಿದ್ದಿರುವವರನ್ನು ಬೀಳಿಸುವುದಲ್ಲ ಮೇಲೆತ್ತುವುದು. ಸಹಯೋಗ
ಕೊಡುವುದಕ್ಕೆ ಸತ್ಯ ಸೇವಾಧಾರಿ, ಪುಣ್ಯಾತ್ಮ ಎಂದು ಹೇಳಲಾಗುತ್ತದೆ, ಅಂದಾಗ ತಮ್ಮಲ್ಲ್ನಿ ಇಷ್ಟು
ಸೇವೆಯ ಉಮ್ಮಂಗ-ಉತ್ಸಾಹ ಇದೆಯೇ? ಎಂದು ಚೆಕ್ ಮಾಡಿಕೊಳ್ಳಿ. ಇದಕ್ಕೆ ಅನುಭವದ ಅಥಾರಿಟಿಯವರು ಎಂದು
ಹೇಳಲಾಗುತ್ತದೆ. ಈಗ ಬಾಪ್ದಾದಾರವರು ಅನುಭವಿಮೂರ್ತಿಗಳಾಗಲಿ ಎಂದು ಬಯಸುತ್ತಾರೆ. ಅನುಭವದ
ಅಥಾರಿಟಿಯನ್ನು ಕಾರ್ಯದಲ್ಲಿ ತೊಡಗಿಸಿ.
ನಾಲ್ಕೂ
ಸಬ್ಜೆಕ್ಟ್ಗಳಲ್ಲಿ ಯಾರು ತಮ್ಮನ್ನು ಅನುಭವಿ ಸ್ವರೂಪರನ್ನಾಗಿ ಮಾಡಿಕೊಂಡು ಅನುಭವದ ಅಥಾರಿಟಿಯನ್ನು
ಕಾರ್ಯದಲ್ಲಿ ತೊಡಗಿಸುತ್ತಾರೆ, ಯಾವ ಕೊರತೆ ಇದೆ ಅದನ್ನು ಸಂಪನ್ನ ಮಾಡುತ್ತಾರೆ, ಯಾರು ತಮ್ಮ ಮೇಲೆ
ಇಷ್ಟು ಅಟೆನ್ಷನ್ ಕೊಡುತ್ತಾರೆ ಅವರು ಕೈ ಎತ್ತಿ. ಮನಸ್ಸಿನ ಕೈಯನ್ನು ಎತ್ತುತ್ತಿದ್ದೀರಲ್ಲವೇ,
ಶರೀರದ ಕೈ ಅಲ್ಲ ಮನಸ್ಸಿನ ಕೈ ಎತ್ತಿ. ಎತ್ತಿ. ಮನಸ್ಸಿನ ಕೈ ಎತ್ತಬೇಕು ಏಕೆಂದರೆ ಬಾಪ್ದಾದಾರವರು
ಶಿವರಾತ್ರಿಯಂದು ರಿಜಲ್ಟ್ ನೋಡುತ್ತಾರೆ. ಮನಸ್ಸಿನಲ್ಲಿ ಯಾರದೇ ಕೊರತೆಯ ಸಂಸ್ಕಾರ ತಮ್ಮ ಶುಭ
ಭಾವನೆಯನ್ನು ಕಡಿಮೆ ಮಾಡಬಾರದು. ಅವರ ಸಂಸ್ಕಾರವಂತೂ ಬಲಹೀನವಾಗಿದೆ ಆದರೆ ತಮ್ಮ ಶುಭ ಭಾವನೆಯನ್ನು
ಕಡಿಮೆ ಮಾಡುವ ಶಕ್ತಿಶಾಲಿ ಆಗಿದೆ. ಆದ್ದರಿಂದ ಹೇಗೆ ಬ್ರಹ್ಮಾ ಬಾಬಾ ಯಾವುದನ್ನು ನೋಡಿಲ್ಲ,
ಯಾವುದನ್ನು ಮಾಡಲಿಲ್ಲ, ಜವಾಬ್ದಾರಿ ಇದ್ದರೂ ಅಂತ್ಯದಲ್ಲಿ ಶುಭ ಭಾವನೆ, ಶುಭ ಕಾಮನೆಯ ಮೂರು
ಶಬ್ದಗಳ ಶಿಕ್ಷಣವನ್ನು ಎಲ್ಲರಿಗೂ ಕೊಟ್ಟು ಹೋದರು, ನೆನಪಿದೆಯಲ್ಲವೇ? ಮೂರು ಶಬ್ದಗಳು
ನೆನಪಿದೆಯಲ್ಲವೇ. ಸ್ವಯಂ ಸಹ ನಿರಾಕಾರಿ, ನಿರಹಂಕಾರಿ, ನಿರ್ವಿಕಾರಿ, ಇದೇ ಸ್ಥಿತಿಯಿಂದ
ಅವ್ಯಕ್ತರಾದರು, ಯಾರಿಗೂ ಕರ್ಮ ಭೋಗದ ಫೀಲಿಂಗ್ಸ್ ಕೊಟ್ಟಿಲ್ಲ. ಕೆಲವರು ಕರ್ಮ ಭೋಗ ಸಮಾಪ್ತಿ
ಆಗುತ್ತಿದೆ ಎಂದು ತಿಳಿದರು! ಏನಾಗಿದೆ? ಅವ್ಯಕ್ತರಾದರು. ಈ ರೀತಿ ಬ್ರಹ್ಮಾ ತಂದೆಯ ಸಮಾನ ಫರಿಸ್ಥಾ
ಭವದ ವರದಾನವಿದೆ, ಯಾವುದನ್ನು ತಂದೆ ಮಾಡಿ ತೋರಿಸಿದರು ಅದೇ ರೀತಿ ಬ್ರಹ್ಮಾ ತಂದೆಯನ್ನು ಅನುಸರಿಸಿ.
ಬ್ರಹ್ಮಾ ತಂದೆಯ ಜೊತೆ ಪ್ರೀತಿ ಇದೆ, ಈಗಲೂ ಸಾಕಾರದಲ್ಲಿ ನೋಡದೆ ಇರಬಹುದು ಆದರೆ ಅವ್ಯಕ್ತ ತಂದೆಯ
ರೂಪದಲ್ಲಿ ಸ್ನೇಹ ಎಲ್ಲರಿಗೂ ಇದೆ. ಬಾಪ್ದಾದಾ ಇಬ್ಬರಲ್ಲೂ ಸ್ನೇಹದಲ್ಲಿ ನೋಡಲಾಗಿದೆ, ಸ್ನೇಹದ
ಸಬ್ಜೆಕ್ಟ್ನಲ್ಲಿ ಎಲ್ಲರೂ ಪಾಸ್ ಆಗಿದ್ದಾರೆ, ಸ್ನೇಹವೇ ನಡೆಸುತ್ತಿದೆ. ಧಾರಣೆ ಮಾಡಿಲ್ಲವೆಂದರೂ
ಯಾವುದೇ ಸಬ್ಜೆಕ್ಟಿನಲ್ಲಿ ಕೊರತೆ ಇದ್ದರೂ ಸ್ನೇಹದ ಸಬ್ಜೆಕ್ಟಿನಲ್ಲಿ ಹೆಚ್ಚು ಎಲ್ಲರೂ ಪಾಸ್
ಆಗಿದ್ದಾರೆ. ಸ್ನೇಹ ನಡೆಸುತ್ತಿದೆ, ತಾವೆಲ್ಲರೂ ಏಕೆ ಬಂದಿದ್ದೀರಿ? ಯಾವ ವಿಮಾನದಲ್ಲಿ ಬಂದಿದ್ದೀರಿ?
ಸ್ನೇಹದ ವಿಮಾನದಲ್ಲಿ ತಲುಪಿದ್ದೀರಿ ಮತ್ತು ಬಾಪ್ದಾದಾರವರಿಗೆ ಕೊನೆಯ ಮಗುವಿನ ಮೇಲೂ ಪ್ರೀತಿ ಇದೆ,
ಹೇಗೇ ಇರಲಿ ಆದರೆ ಪ್ರೀತಿಯಲ್ಲಿ ಪಾಸ್ ಆಗಿದ್ದಾರೆ ಏಕೆಂದರೆ ತಂದೆಯ ಪ್ರತಿಯೊಬ್ಬ ಮಗುವಿನ ಮೇಲೆ
ಹೃದಯದ ಪ್ರೀತಿ ಇದೆ. ಹೇಗೆ ಇರಲಿ ಆದರೆ ನನ್ನವರಾಗಿದ್ದಾರೆ. ಹೇಗೆ ತಾವು ನನ್ನ ಬಾಬಾ ಎಂದು
ಹೇಳುತ್ತೀರಿ ಅಂದಾಗ ತಂದೆ ಏನು ಹೇಳುತ್ತಾರೆ? ನನ್ನ ಮಕ್ಕಳಾಗಿದ್ದಾರೆ ಎಂದು ಹೇಳುತ್ತಾರೆ, ಈ ರೀತಿ
ಶುಭ ಭಾವನೆ ಪರಸ್ಪರ ಪರಿವಾರದಲ್ಲೂ ಇರುವುದು ಅವಶ್ಯಕವಾಗಿದೆ. ಸ್ವಭಾವವನ್ನು ನೋಡಬೇಡಿ,
ಭಾವ-ಸ್ವಭಾವವಿದೆ ಎಂದು ತಂದೆಗೆ ಗೊತ್ತಿದೆ ಆದರೆ ಭಾವ-ಸ್ವಭಾವ ಪ್ರೀತಿಯನ್ನು ಸಮಾಪ್ತಿ ಮಾಡಬಾರದು,
ಸಂಬಂಧವನ್ನು ಸಮಾಪ್ತಿ ಮಾಡಬಾರದು. ಕಾರ್ಯವನ್ನು ಕಡಿಮೆ ಸಫಲ ಮಾಡುವುದು ಸರಿ ಅಲ್ಲ, ಪರಿವಾರ ಆಗಿದೆ,
ಯಾವ ಪರಿವಾರ? ಪ್ರಭು ಪರಿವಾರ ಪರಮಾತ್ಮ ಪರಿವಾರ ಆಗಿದೆ, ಇದರಲ್ಲಿ ಯಾವುದೇ ಕಾರಣದಿಂದ ಪ್ರೀತಿಯ
ಕೊರತೆ ಇರಬಾರದು. ಈ ರೀತಿ ಇದ್ದೀರಾ? ಪ್ರೀತಿಯ ಕೊರತೆ ಇದೆಯೇ? ಪ್ರೀತಿ ಅರ್ಥಾತ್ ಅವಶ್ಯವಾಗಿ
ಶುಭಭಾವನೆ ಇರುವುದು, ಹೇಗೆ ಇರಲಿ ಪರಮಾತ್ಮನ ಪರಿವಾರವಾಗಿದೆ. ಯಾರು ನಾನು ಪ್ರಭು
ಪರಿವಾರದವನಾಗಿದ್ದೇನೆ ಎಂದು ತಿಳಿಯುತ್ತಾರೆ, ಪರಿವಾರ ಅರ್ಥಾತ್ ಪ್ರೀತಿ. ಒಂದುವೇಳೆ ಪರಿವಾರದಲ್ಲಿ
ಪ್ರೀತಿ ಇಲ್ಲವೆಂದರೆ ಪರಿವಾರದವಲ್ಲ. ಆದ್ದರಿಂದ ಈ ದಿನ ಯಾವ ಪಾಠವನ್ನು ಓದಿದ್ದೀರಿ? ಪಕ್ಕಾ
ಮಾಡಿಕೊಂಡಿದ್ದೀರಾ? ಪ್ರತಿಯೊಂದು ಆತ್ಮನ ಪ್ರತಿ ಶುಭ ಭಾವನೆ, ಶುಭ ಕಾಮನೆ, ಈ ಪರಮಾತ್ಮನ ಪರಿವಾರ
ಒಂದೇ ಸಮಯದಲ್ಲಿ ಇರುವುದು, ಇಷ್ಟು ದೊಡ್ಡ ಪರಿವಾರ ಪರಮಾತ್ಮನ ವಿನ: ಬೇರೆ ಯಾರದೂ ಇರಲು
ಸಾಧ್ಯವಿಲ್ಲ ಅಂದಾಗ ಚೆಕ್ ಮಾಡಿಕೊಳ್ಳಬೇಕು ಏಕೆಂದರೆ ಇದೂ ಪುರುಷಾರ್ಥದಲ್ಲಿ ವಿಘ್ನ ಆಗುತ್ತದೆ.
ವಿಘ್ನ ಮುಕ್ತರಾದಾಗ ಅನುಭವಿ ಆಗಿ ಅನುಭವದ ಅಥಾರಿಟಿಯ ಮೂಲಕ ಎಲ್ಲರನ್ನೂ ಅನುಭವಿಯನ್ನಾಗಿ
ಮಾಡುತ್ತೀರಿ. ಒಳ್ಳೆಯದು.
ಎಲ್ಲಾ ಕಡೆ ಮಕ್ಕಳನ್ನು
ಬಾಪ್ದಾದಾರವರು ನೋಡಿ-ನೋಡಿ ಖುಷಿ ಆಗುತ್ತಾ ವಾಹ್! ಮಕ್ಕಳೇ ವಾಹ್! ಎಂಬ ಹಾಡನ್ನು ಹೇಳುತ್ತಿದ್ದಾರೆ,
ಪ್ರತಿಯೊಬ್ಬ ಮಗುವಿನ ಹೃದಯದಲ್ಲಿ ತಂದೆ ಇದ್ದಾರೆ ಮತ್ತು ತಂದೆಯ ಹೃದಯಲ್ಲಿ ಪ್ರತಿಯೊಬ್ಬ ಮಗುವಿದೆ
ಮತ್ತು ಇಲ್ಲಿ ಇಷ್ಟು ಪರಿವಾರ ಮಧುಬನ ನಿವಾಸಿಗಳನ್ನು ನೋಡಿ ವಾಹ್! ಮಧುಬನ ವಾಹ್! ಎಂದು ಖುಷಿ
ಆಗುತ್ತದೆ, ಎಲ್ಲರ ತೀರ್ಥ ಸ್ಥಾನ ಮಧುಬನ ಆಗಿಯೇ ಇದೆ ಆದ್ದರಿಂದ ಮಧುಬನಕ್ಕೆ ಓಡಿ ಬಂದು
ಬಿಡುತ್ತಾರೆ. ಈಗ ತಂದೆಯ ಯಾವ ಆಸೆ ಇದೆ ಅದು ಆದಷ್ಟು ಬೇಗ ಪೂರ್ಣ ಮಾಡಬೇಕು. ನಾಲ್ಕೂ
ಸಬ್ಜೆಕ್ಟಿನಲ್ಲಿ ಅನುಭವಿ ಸ್ವರೂಪರಾಗಲೇಬೇಕು. ಬಾಪ್ದಾದಾ ದೇಶ-ವಿದೇಶದ ಎಲ್ಲಾ ಮಕ್ಕಳನ್ನು ಇಲ್ಲಿ
ಕುಳಿತುಕೊಂಡು ನೋಡುತ್ತಿದ್ದಾರೆ, ಎಲ್ಲರೂ ಹೇಗೆ ನೋಡಿ-ನೋಡಿ ಹರ್ಷಿತರಾಗುತ್ತಿದ್ದಾರೆ, ಈ ಸಾಧನ
ವಿಜ್ಞಾನ ಈ ಸಮಯದಲ್ಲಿಯೇ ಉನ್ನತಿಯಲ್ಲಿ ಹೋಗುತ್ತಿದೆ, ಹೊಸ-ಹೊಸ ಸಂಶೋಧನೆ ಪ್ರಪಂಚದ್ದಾಗಿದೆ ಆದರೆ
ತಮ್ಮ ಲಾಭದಾಯಕ ಸಾಧನಗಳನ್ನು ಬಹಳ ಚೆನ್ನಾಗಿರುವುದು ಕಂಡು ಹಿಡಿಯುತ್ತಿದ್ದಾರೆ. ದೂರ ಇದ್ದರೂ
ಜೊತೆಯಲ್ಲಿ ಇದ್ದಾರೆ ಅಂದಾಗ ವಿಜ್ಞಾನದವರಿಗೂ ಶುಭಾಶಯಗಳು. ಸಾಧನೆಗಳಂತೂ ಮಾಡಿದ್ದೀರಿ, ಒಳ್ಳೆಯದು.
ದೇಶ-ವಿದೇಶದ ಎಲ್ಲಾ ಮಕ್ಕಳಿಗೆ ಬಹಳ-ಬಹಳ ಹೃದಯದ ಪ್ರೀತಿ ಮತ್ತು ನೆನಪು ಸ್ವೀಕಾರ ಆಗಲಿ ಮತ್ತು
ಅಂತಹ ವಿಶೇಷ ಮಕ್ಕಳಿಗೆ ನಮಸ್ತೆ.
ವರದಾನ:
ಜ್ಞಾನದ
ಪ್ರಕಾಶತೆಯ ಮೂಲಕ ಪುರುಷಾರ್ಥದ ಮಾರ್ಗವನ್ನು ಸಹಜ ಹಾಗೂ ಸ್ಪಷ್ಟ ಮಾಡಿಕೊಳ್ಳುವಂತಹ ಫರಿಶ್ತಾ
ಸ್ವರೂಪ ಭವ.
ಸೂಕ್ಷ್ಮ ದೇವತಾ
ಜೀವನದಲ್ಲಿ ಪ್ರಕಾಶತೆ ಹಾಗೂ ಶಕ್ತಿಯೆರಡೂ ಕಾಣಿಸುತ್ತದೆ. ಆದರೆ ಪ್ರಕಾಶತೆ ಹಾಗೂ ಶಕ್ತಿ
ರೂಪವಾಗುವುದಕ್ಕಾಗಿ ಮನನ ಮಾಡುವ ಹಾಗೂ ಸಹನೆ ಮಾಡುವ ಶಕ್ತಿಯಿರಬೇಕು. ಮನಸ್ಸಿಗಾಗಿ ಮನನ ಶಕ್ತಿ
ಹಾಗೂ ವಾಚಾ, ಕರ್ಮಕ್ಕಾಗಿ ಸಹನಶಕ್ತಿಯನ್ನು ಧಾರಣೆ ಮಾಡಿಕೊಳ್ಳಿರಿ. ನಂತರದಲ್ಲಿ ಯಾವುದೇ
ಶಬ್ಧವನ್ನು ಮಾತನಾಡುವಿರಿ, ಕರ್ಮ ಮಾಡುವಿರೆಂದರೆ ಅದರನುಸಾರವಾಗಿಯೇ ಇರುತ್ತದೆ. ಒಂದುವೇಳೆ ಇವೆರಡೂ
ಶಕ್ತಿಗಳಿವೆಯೆಂದರೆ ಪ್ರತಿಯೊಬ್ಬರಿಗಾಗಿ ಪುರುಷಾರ್ಥದ ಮಾರ್ಗವು ಸಹಜ ಹಾಗೂ ಸ್ಪಷ್ಟವಾಗಿ ಬಿಡುವುದು.
ಸ್ಲೋಗನ್:
ವ್ಯರ್ಥ
ಮಾತನಾಡುವುದು ಅರ್ಥಾತ್ ಅನೇಕರನ್ನು ಬೇಸರ ಮಾಡುವುದಾಗಿದೆ.
ಅವ್ಯಕ್ತ ಸೂಚನೆ:– “ಸದಾ
ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ”
ನೀವು ಮಕ್ಕಳು ಮಾಸ್ಟರ್
ಪ್ರಕೃತಿ ಪತಿ ಆಗಿದ್ದೀರಿ, ಈ ಪ್ರಕೃತಿಯ ಆಟವನ್ನು ನೋಡುತ್ತಾ ಹರ್ಷಿತ ಆಗುತ್ತಾ ಇರಿ. ಪ್ರಕೃತಿ
ಏನು ಬೇಕಾದರು ಮಾಡಲಿ, ಅಥವಾ ಪ್ರಕೃತಿ ಸುಂದರ ಆಟವನ್ನು ತೋರಿಸಲಿ, ಎರಡರಲ್ಲಿಯೂ ಪ್ರಕೃತಿ ಪತಿ
ಆತ್ಮಗಳು ಸಾಕ್ಷಿಯಾಗಿ ಆಟವನ್ನು ನೋಡುತ್ತಾ ಇರುತ್ತಾರೆ ಹಾಗೂ ಆಟದ ಮನೋರಂಜನೆಯನ್ನು
ಪಡೆದುಕೊಳ್ಳುತ್ತಾರೆ, ಗಾಬರಿ ಆಗುವುದಿಲ್ಲ ಹಾಗಾಗಿ ಬಾಪ್ದಾದಾ ತಪಸ್ಸಿನ ಮೂಲಕ ಸಾಕ್ಷಿತನದ
ಸ್ಥಿತಿಯ ಆಸನದ ಮೇಲೆ ಅಚಲ ಅಡೋಲ ಸ್ಥಿರವಾಗಿ ಮಾಡುವ ವಿಶೇಷ ಅಭ್ಯಾಸವನ್ನು ಮಾಡಿಸುತ್ತಿದ್ದಾರೆ.