10.07.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈಗ ಸತೋಪ್ರಧಾನರಾಗಿ ಮನೆಗೆ ಹೋಗಬೇಕಾಗಿದೆ ಆದ್ದರಿಂದ ತಮ್ಮನ್ನು ಆತ್ಮವೆಂದು ತಿಳಿಯಿರಿ, ನಿರಂತರ ತಂದೆಯನ್ನು ನೆನಪು ಮಾಡುವ ಅಭ್ಯಾಸ ಮಾಡಿ, ಸದಾ ಉನ್ನತಿಯ ಗಮನವನ್ನು ಇಟ್ಟುಕೊಳ್ಳಿ”

ಪ್ರಶ್ನೆ:
ವಿದ್ಯಾಭ್ಯಾಸದಲ್ಲಿ ದಿನ-ಪ್ರತಿದಿನ ಮುಂದುವರೆಯುತ್ತಿದ್ದೀರಿ ಅಥವಾ ಹಿಂದೆ ಹೋಗುತ್ತಿದ್ದೀರಿ ಎಂಬುದರ ಚಿಹ್ನೆಗಳೇನಾಗಿವೆ?

ಉತ್ತರ:
ವಿದ್ಯಾಭ್ಯಾಸದಲ್ಲಿ ಒಂದುವೇಳೆ ಮುಂದುವರೆಯುತ್ತಿದ್ದೀರೆಂದರೆ ಹಗುರತೆಯ ಅನುಭವವಾಗುವುದು. ಬುದ್ಧಿಯಲ್ಲಿರುತ್ತದೆ - ಈ ಶರೀರವಂತೂ ಪತಿತವಾಗಿದೆ, ಇದನ್ನು ಬಿಡಬೇಕಾಗಿದೆ. ನಾವಂತೂ ಈಗ ಮನೆಗೆ ಹೋಗಬೇಕಾಗಿದೆ. ದೈವೀಗುಣಗಳನ್ನು ಧಾರಣೆ ಮಾಡುತ್ತಾ ಹೋಗುತ್ತಾರೆ. ಒಂದುವೇಳೆ ಹಿಂದೆ ಹೋಗುತ್ತಿದ್ದರೆ ನಡವಳಿಕೆಯಿಂದ ಅಸುರೀಗುಣಗಳು ಕಂಡುಬರುತ್ತವೆ, ನಡೆಯುತ್ತಾ-ತಿರುಗಾಡುತ್ತಾ ತಂದೆಯ ನೆನಪಿರುವುದಿಲ್ಲ. ಅವರು ಹೂಗಳಾಗಿ ಎಲ್ಲರಿಗೆ ಸುಖ ಕೊಡಲು ಸಾಧ್ಯವಿಲ್ಲ. ಇಂತಹ ಮಕ್ಕಳಿಗೆ ಮುಂದೆಹೋದಂತೆ ತಮ್ಮದೆಲ್ಲದರ ಸಾಕ್ಷಾತ್ಕಾರ ಆಗುತ್ತದೆ. ಮತ್ತೆ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ.

ಓಂ ಶಾಂತಿ.
ಬುದ್ಧಿಯಲ್ಲಿ ಇದೇ ವಿಚಾರವಿರಲಿ - ನಾವು ಸತೋಪ್ರಧಾನರಾಗಿ ಬಂದಿದ್ದೆವು, ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸಿಕೊಡುತ್ತಾರೆ - ಇಲ್ಲಿ ಎಲ್ಲರೂ ಕುಳಿತಿದ್ದೀರಿ, ಅದರಲ್ಲಿ ಕೆಲವರು ದೇಹಾಭಿಮಾನಿಗಳು ಮತ್ತೆ ಕೆಲವರು ದೇಹೀ ಅಭಿಮಾನಿಗಳು ಇರುವರು. ಕೆಲವರು ಸೆಕೆಂಡಿನಲ್ಲಿ ದೇಹಾಭಿಮಾನಿ ಮತ್ತು ಸೆಕೆಂಡಿನಲ್ಲಿ ದೇಹೀ ಅಭಿಮಾನಿಗಳಾಗುತ್ತಿರುತ್ತಾರೆ. ನಾವು ಸದಾ ದೇಹೀ-ಅಭಿಮಾನಿಯಾಗಿ ಕುಳಿತಿರುತ್ತೇವೆ ಎಂದು ಯಾರೂ ತಿಳಿಸಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ಕೆಲವೊಮ್ಮೆ ಆತ್ಮಾಭಿಮಾನಿ, ಕೆಲವೊಮ್ಮೆ ದೇಹಾಭಿಮಾನದಲ್ಲಿರುತ್ತೀರಿ. ಈಗ ತಾವು ಮಕ್ಕಳಿಗಂತೂ ತಿಳಿದಿದೆ - ನಾವು ಈ ಶರೀರವನ್ನು ಬಿಟ್ಟು ನಮ್ಮ ಮನೆಗೆ ಹೋಗುತ್ತೇವೆ ಅಂದಾಗ ಬಹಳ ಖುಷಿಯಿಂದ ಹೋಗಬೇಕು. ಇಡೀ ದಿನ ಇದೇ ಚಿಂತನೆ ಮಾಡುತ್ತಾರೆ - ನಾವು ಶಾಂತಿಧಾಮಕ್ಕೆ ಹೋಗಬೇಕು ಏಕೆಂದರೆ ತಂದೆಯು ಮಾರ್ಗವನ್ನಂತೂ ತಿಳಿಸಿದ್ದಾರೆ. ಅನ್ಯ ಮನುಷ್ಯರು ಈ ವಿಚಾರದಿಂದ ಕುಳಿತುಕೊಳ್ಳುವುದಿಲ್ಲ, ಈ ಶಿಕ್ಷಣವು ಮತ್ತ್ಯಾರಿಗೂ ಸಿಗುವುದೇ ಇಲ್ಲ. ಅವರ ಸಂಕಲ್ಪದಲ್ಲಿಯೂ ಇರುವುದಿಲ್ಲ, ನೀವೇ ತಿಳಿಯುತ್ತೀರಿ - ಇದು ದುಃಖಧಾಮವಾಗಿದೆ, ಈಗ ತಂದೆಯು ಸುಖಧಾಮದಲ್ಲಿ ಹೋಗುವ ಮಾರ್ಗವನ್ನು ತಿಳಿಸಿದ್ದಾರೆ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಯಥಾಯೋಗ್ಯರಾಗಿ ಶಾಂತಿಧಾಮಕ್ಕೆ ಹೋಗುತ್ತೀರಿ, ಅದಕ್ಕೆ ಮುಕ್ತಿ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಮನುಷ್ಯರು ಗುರುಗಳನ್ನಾಗಿ ಮಾಡಿಕೊಳ್ಳುತ್ತಾರೆ ಆದರೆ ಮುಕ್ತಿ-ಜೀವನ್ಮುಕ್ತಿಯ ಕುರಿತು ಮನುಷ್ಯರು ತಿಳಿದೇ ಇಲ್ಲ ಏಕೆಂದರೆ ಇದು ಹೊಸಮಾತಾಗಿದೆ. ನಾವು ಈಗ ಮನೆಗೆ ಹೋಗಬೇಕಾಗಿದೆ ಎಂದು ತಾವು ಮಕ್ಕಳೇ ತಿಳಿಯುತ್ತೀರಿ. ತಂದೆಯು ತಿಳಿಸುತ್ತಾರೆ - ನೆನಪಿನ ಯಾತ್ರೆಯಿಂದ ಪವಿತ್ರರಾಗಿ, ನೀವು ಮೊಟ್ಟಮೊದಲು ಶ್ರೇಷ್ಠಾಚಾರಿ ಪ್ರಪಂಚದಲ್ಲಿ ಬಂದಾಗ ಸತೋಪ್ರಧಾನರಾಗಿದ್ದೀರಿ, ಆತ್ಮವು ಸತೋಪ್ರಧಾನವಾಗಿತ್ತು, ಅನ್ಯರ ಜೊತೆ ಸಂಬಂಧವೂ ನಂತರ ಆಗುತ್ತದೆ. ಯಾವಾಗ ಗರ್ಭದಲ್ಲಿ ಹೋಗುವವರೋ ಆಗ ಸಂಬಂಧದಲ್ಲಿ ಬರುತ್ತಾರೆ. ಇದು ನಮ್ಮ ಅಂತಿಮ ಜನ್ಮವಾಗಿದೆ, ನಾವು ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಎಂದು ನಿಮಗೆ ಗೊತ್ತಿದೆ. ಪವಿತ್ರರಾಗದ ವಿನಃ ನಾವು ಹೋಗಲು ಸಾಧ್ಯವಿಲ್ಲ, ಈ ರೀತಿ ತಮ್ಮೊಳಗೆ ಮಾತನಾಡಿಕೊಳ್ಳಬೇಕು ಏಕೆಂದರೆ ತಂದೆಯ ಆದೇಶವಾಗಿದೆ ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಾ-ತಿರುಗಾಡುತ್ತಾ ಬುದ್ಧಿಯಲ್ಲಿ ಇದೇ ವಿಚಾರವಿರಲಿ, ನಾವು ಸತೋಪ್ರಧಾನರಾಗಿ ಬಂದಿದ್ದೆವು, ಈಗ ಸತೋಪ್ರಧಾನರಾಗಿ ಹೋಗಬೇಕಾಗಿದೆ. ತಂದೆಯ ನೆನಪಿನಿಂದಲೇ ಸತೋಪ್ರಧಾನರಾಗಬೇಕು ಏಕೆಂದರೆ ತಂದೆಯೇ ಪತಿತಪಾವನರಾಗಿದ್ದಾರೆ. ನೀವು ಈ ಆಂತರ್ಯದಲ್ಲಿ ಹರಿಯುತ್ತಿರಬೇಕು. ಹೇಗೆ ತಂದೆಯ ಆತ್ಮದಲ್ಲಿ ಜ್ಞಾನ ವಿದೆಯೋ ಹಾಗೆಯೇ ನೀವು ಆತ್ಮಗಳಿಗೆ ಜ್ಞಾನವಿದೆ. ಶರೀರದ ಮೂಲಕ ಕೇಳುತ್ತಾ ಮತ್ತೆ ತಿಳಿಸುತ್ತಾರೆ. ಶರೀರವಿಲ್ಲದೆ ಆತ್ಮವು ಮಾತನಾಡಲು ಸಾಧ್ಯವಿಲ್ಲ. ಇದರಲ್ಲಿ ಪ್ರೇರಣೆ ಅಥವಾ ಆಕಾಶವಾಣಿಯ ಮಾತಿಲ್ಲ. ಭಗವಾನುವಾಚ ಇದೆ ಎಂದರೆ ಅವಶ್ಯವಾಗಿ ಮುಖವು ಬೇಕು, ರಥವು ಬೇಕು. ಕತ್ತೆ, ಕುದುರೆಯ ರಥವಂತೂ ಇಲ್ಲ. ನೀವೂ ಸಹ ಮೊದಲು ಕಲಿಯುಗ ಇನ್ನೂ 40,000 ವರ್ಷಗಳು ನಡೆಯುವುದು ಎಂದು ತಿಳಿಯುತ್ತಿದ್ದಿರಿ, ಅಜ್ಞಾನ ನಿದ್ರೆಯಲ್ಲಿ ಮಲಗಿಬಿಟ್ಟಿದ್ದೀರಿ, ಈಗ ತಂದೆಯು ಬಂದು ಜಾಗೃತರನ್ನಾಗಿ ಮಾಡಿದ್ದಾರೆ, ನೀವೂ ಸಹ ಅಜ್ಞಾನದಲ್ಲಿ ಇದ್ದಿರಿ, ಈಗ ಜ್ಞಾನ ಸಿಕ್ಕಿದೆ, ಭಕ್ತಿಗೆ ಅಜ್ಞಾನವೆಂದು ಹೇಳಲಾಗುತ್ತದೆ.

ಈಗ ನೀವು ಮಕ್ಕಳು ಇದನ್ನು ವಿಚಾರ ಮಾಡಬೇಕು, ನಾವು ನಮ್ಮ ಉನ್ನತಿ ಹೇಗೆ ಮಾಡಿಕೊಳ್ಳುವುದು ಶ್ರೇಷ್ಠ ಪದವಿಯನ್ನು ಹೇಗೆ ಪಡೆಯುವುದು? ತಮ್ಮ ಮನೆಗೆ ಹೋಗಿ ಮತ್ತೆ ಹೊಸ ರಾಜಧಾನಿಯಲ್ಲಿ ಬಂದು ಶ್ರೇಷ್ಠ ಪದವಿಯನ್ನು ಪಡೆಯಬೇಕು. ಅದಕ್ಕಾಗಿ ನೆನಪಿನ ಯಾತ್ರೆ ಇದೆ. ತಮ್ಮನ್ನು ಆತ್ಮನೆಂದಂತೂ ಅವಶ್ಯವಾಗಿ ತಿಳಿಯಬೇಕಾಗಿದೆ. ನಾವೆಲ್ಲಾ ಆತ್ಮಗಳ ತಂದೆಯು ಪರಮಾತ್ಮನಾಗಿದ್ದಾರೆ. ಇದಂತೂ ಬಹಳ ಸಹಜವಾಗಿದೆ ಆದರೆ ಮನುಷ್ಯರು ಇಷ್ಟು ಚಿಕ್ಕ ಮಾತನ್ನೂ ತಿಳಿಯುವುದಿಲ್ಲ. ನೀವು ಇದನ್ನು ತಿಳಿಸಬಹುದು - ಇದು ರಾವಣರಾಜ್ಯವಾಗಿದೆ ಆದ್ದರಿಂದ ನಿಮ್ಮ ಬುದ್ಧಿಯು ಭ್ರಷ್ಟಾಚಾರಿ ಆಗಿಬಿಟ್ಟಿದೆ, ಯಾರು ವಿಕಾರದಲ್ಲಿ ಹೋಗುವುದಿಲ್ಲವೋ ಅವರು ಪಾವನರಾಗಿದ್ದಾರೆ. ಹೇಗೆ ಸನ್ಯಾಸಿಗಳು ಇದ್ದಾರೆ ಎಂದು ಮನುಷ್ಯರು ತಿಳಿಯುತ್ತಾರೆ. ಆದರೆ ತಂದೆಯು ಹೇಳುತ್ತಾರೆ ಅವರಂತೂ ಅಲ್ಪಕಾಲಕ್ಕಾಗಿ ಪಾವನರಾಗುತ್ತಾರೆ ಆದರೆ ಪ್ರಪಂಚವಂತೂ ಪತಿತವಾಗಿದೆಯಲ್ಲವೇ. ಪಾವನ ಪ್ರಪಂಚವು ಸತ್ಯಯುಗವಾಗಿದೆ. ಪತಿತ ಪ್ರಪಂಚದಲ್ಲಿ ಸತ್ಯಯುಗದಂತಹ ಪಾವನರು ಯಾರೂ ಇರಲು ಸಾಧ್ಯವಿಲ್ಲ. ಅಲ್ಲಂತೂ ರಾವಣರಾಜ್ಯವೇ ಇರುವುದಿಲ್ಲ. ವಿಕಾರದ ಮಾತೇ ಇರುವುದಿಲ್ಲ. ನಡೆಯುತ್ತಾ-ತಿರುಗಾಡುತ್ತಾ ಬುದ್ಧಿಯಲ್ಲಿ ಇದೇ ಚಿಂತನೆ ಇರುತ್ತದೆ. ತಂದೆಯಲ್ಲಿ ಈ ಜ್ಞಾನವಿದೆಯಲ್ಲವೇ. ತಂದೆ ಜ್ಞಾನಸಾಗರ ಆಗಿದ್ದಾರೆ ಎಂದ ಮೇಲೆ ಅವಶ್ಯವಾಗಿ ಜ್ಞಾನದ ಬಿಂದುಗಳು ಹರಿಯುತ್ತಿರುತ್ತವೆ. ನೀವೂ ಸಹ ಜ್ಞಾನಸಾಗರನಿಂದ ಹೊರಟ ನದಿಗಳು ಆಗಿದ್ದೀರಿ. ಅವರಂತೂ ಸದಾ ಸಾಗರನಾಗಿರುತ್ತಾರೆ, ನೀವು ಸದಾ ಸಾಗರನಲ್ಲ. ನೀವು ಮಕ್ಕಳು ತಿಳಿಯುತ್ತೀರಿ, ನಾವೆಲ್ಲರೂ ಸಹೋದರ-ಸಹೋದರಿಯರಾಗಿದ್ದೇವೆ. ನೀವು ಮಕ್ಕಳು ಓದುತ್ತೀರಿ, ವಾಸ್ತವದಲ್ಲಿ ಸ್ಥೂಲ ನದಿಗಳ ಮಾತಲ್ಲ. ನದಿಗಳ ಮಾತು ಬರುವುದರಿಂದ ಗಂಗಾ, ಜಮುನ ಮೊದಲಾದ ನದಿಗಳ ಹೆಸರನ್ನು ಹೇಳುತ್ತಾರೆ. ತಾವು ಈಗ ಬೇಹದ್ದಿನಲ್ಲಿ ನಿಂತಿದ್ದೀರಿ. ಈಗ ನಾವೆಲ್ಲಾ ಆತ್ಮಗಳು ಒಬ್ಬ ತಂದೆಯ ಮಕ್ಕಳು ಸಹೋದರ-ಸಹೋದರಿಯರಾಗಿದ್ದೇವೆ. ಈಗ ನಾವು ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಅಲ್ಲಿಂದ ಬಂದು ಶರೀರ ರೂಪಿ ಸಿಂಹಾಸನದಲ್ಲಿ ವಿರಾಜಮಾನವಾಗುತ್ತೇವೆ. ಅತೀ ಸೂಕ್ಷ್ಮ ಆತ್ಮವಾಗಿದೆ. ಸಾಕ್ಷಾತ್ಕಾರ ಆಗುವುದರಿಂದ ಅರಿತುಕೊಳ್ಳುವುದಿಲ್ಲ, ಆತ್ಮವು ಶರೀರವನ್ನು ಬಿಟ್ಟು ಹೋಗುತ್ತದೆ ಎಂದರೆ ತಲೆಯಿಂದ ಹೋಯಿತು ಎಂದು ಕೆಲವರು ಹೇಳುತ್ತಾರೆ, ಕಣ್ಣುಗಳಿಂದ ಹೋಯಿತು, ಬಾಯಿಯಿಂದ ಹೋಯಿತು.....ಬಾಯಿ ತೆರೆಯಲ್ಪಡುತ್ತದೆ ಎಂದು ಕೆಲವರು ಹೇಳುತ್ತಾರೆ, ಆತ್ಮವು ಶರೀರವನ್ನು ಬಿಟ್ಟು ಹೊರಟು ಹೋಗುತ್ತದೆ ಎಂದರೆ ಶರೀರವು ಜಡವಾಗಿಬಿಡುತ್ತದೆ. ಇದು ಜ್ಞಾನವಾಗಿದೆ. ವಿದ್ಯಾರ್ಥಿಗಳ ಬುದ್ಧಿಯಲ್ಲಿ ಇಡೀ ದಿನ ವಿದ್ಯೆಯೇ ನೆನಪು ಇರುತ್ತದೆ, ಅದೇ ರೀತಿ ನಿಮ್ಮ ಬುದ್ಧಿಯಲ್ಲಿ ಇಡೀ ದಿನ ವಿದ್ಯೆಯ ವಿಚಾರವೇ ನಡೆಯುತ್ತಿರಬೇಕು. ಒಳ್ಳೊಳ್ಳೆಯ ವಿದ್ಯಾರ್ಥಿಗಳ ಕೈಯಲ್ಲಿ ಸದಾ ಯಾವುದಾದರೂ ಒಂದು ಪುಸ್ತಕ ಇರುತ್ತದೆ, ಓದುತ್ತಿರುತ್ತಾರೆ.

ತಂದೆಯು ತಿಳಿಸುತ್ತಾರೆ - ನಿಮ್ಮದು ಇದು ಅಂತಿಮ ಜನ್ಮವಾಗಿದೆ, ಇಡೀ ಸೃಷ್ಟಿ ಚಕ್ರವನ್ನು ಸುತ್ತಿ ಅಂತ್ಯದಲ್ಲಿ ಬಂದಿದ್ದೀರಿ ಅಂದಮೇಲೆ ಬುದ್ಧಿಯಲ್ಲಿ ಇದೇ ಸ್ಮರಣೆ ಇರಬೇಕು, ಧಾರಣೆ ಮಾಡಿ ಅನ್ಯರಿಗೆ ತಿಳಿಸಬೇಕು. ಕೆಲವರಿಗಂತೂ ಧಾರಣೆ ಆಗುವುದೇ ಇಲ್ಲ. ಶಾಲೆಯಲ್ಲಿಯೂ ನಂಬರ್ವಾರ್ ವಿದ್ಯಾರ್ಥಿಗಳು ಇರುತ್ತಾರೆ, ಬಹಳ ಸಬ್ಜೆಕ್ಟ್ಗಳು ಇರುತ್ತದೆ ಆದರೆ ಇಲ್ಲಂತೂ ಒಂದೇ ಸಬ್ಜೆಕ್ಟ್ ಇದೆ, ದೇವತೆಗಳು ಆಗಬೇಕಾಗಿದೆ, ವಿದ್ಯೆಯ ಚಿಂತನೆಯು ನಡೆಯುತ್ತಿರಲಿ, ಇದನ್ನು ಬಿಟ್ಟು ವಿದ್ಯೆಯು ಮರೆತು ಅನ್ಯ ಬೇರೆ-ಬೇರೆ ವಿಚಾರಗಳು ನಡೆಯುತ್ತಿರುವುದಲ್ಲ, ಹೇಗೆ ವ್ಯಾಪಾರಿಗಳು ಇರುತ್ತಾರೆ, ಅವರು ತಮ್ಮ ವ್ಯಾಪಾರದ ಚಿಂತನೆಯಲ್ಲಿಯೇ ತೊಡಗಿರುತ್ತಾರೆ, ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿಯೇ ತೊಡಗಿರುತ್ತಾರೆ, ಹಾಗೆಯೇ ನೀವು ಮಕ್ಕಳು ವಿದ್ಯಾಭ್ಯಾಸದಲ್ಲಿ ಇರಬೇಕಾಗಿದೆ.

ಅಂತರಾಷ್ಟ್ರೀಯ ಯೋಗ ಸಮ್ಮೇಳನದ ಒಂದು ನಿಮಂತ್ರಣ ಪತ್ರವು ಬಂದಿತ್ತು, ಅವರಿಗೆ ನೀವು ಬರೆಯಬಹುದು ನಿಮ್ಮದು ಹಠಯೋಗವಾಗಿದೆ, ಇದರ ಗುರಿ-ಉದ್ದೇಶವೇನಾಗಿದೆ? ಇದರಿಂದ ಏನು ಲಾಭವಾಗುತ್ತದೆ? ನಾವಂತೂ ರಾಜಯೋಗವನ್ನು ಕಲಿಯುತ್ತಿದ್ದೇವೆ, ಪರಮಪಿತ ಪರಮಾತ್ಮ ಯಾರು ಜ್ಞಾನಸಾಗರನಾಗಿದ್ದಾರೆ ಆ ರಚಯಿತ ತನ್ನ ಮತ್ತು ರಚಯಿತ ಜ್ಞಾನವನ್ನು ತಿಳಿಸುತ್ತಾರೆ. ನಾವು ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ, ಮನ್ಮನಾಭವ ಇದು ನಮ್ಮ ಮಂತ್ರವಾಗಿದೆ. ನಾವು ತಂದೆ ಮತ್ತು ತಂದೆಯ ಮೂಲಕ ಸಿಗುವ ಆಸ್ತಿಯನ್ನು ನೆನಪು ಮಾಡುತ್ತೇವೆ. ನೀವು ಯಾವ ಹಠಯೋಗ ಮೊದಲಾದವುಗಳನ್ನು ಮಾಡುತ್ತಾ ಬಂದಿದ್ದೀರಿ, ಇದರ ಗುರಿ-ಉದ್ದೇಶವೇನು? ನಾವಂತೂ ನಮ್ಮದನ್ನು ತಿಳಿಸಿದೆವು, ನಾವು ಇದನ್ನು ಕಲಿಯುತ್ತಿದ್ದೇವೆ ಅಂದ ಮೇಲೆ ನಿಮ್ಮ ಈ ಹಠಯೋಗದಿಂದ ಏನು ಸಿಗುತ್ತದೆ? ಈ ರೀತಿ ಪ್ರತ್ಯುತ್ತರವನ್ನು ಸಾರ ರೂಪದಲ್ಲಿ ಬರೆಯಬೇಕು. ಇಂತಹ ನಿಮಂತ್ರಣ ಪತ್ರಗಳಂತೂ ನಿಮ್ಮ ಬಳಿ ಬಹಳ ಬರುತ್ತಿರುತ್ತವೆ. ಅಖಿಲ ಭಾರತೀಯ ಸರ್ವ ಧರ್ಮದ ಸಮ್ಮೇಳನದ ನಿಮಂತ್ರಣವು ಬಂದಿತ್ತು ಮತ್ತು ನಿಮ್ಮನ್ನು ಕೇಳಿದರು, ತಮ್ಮ ಗುರಿ-ಉದ್ದೇಶವು ಏನು ಎಂದು. ಅಂತಹ ಸಮಯದಲ್ಲಿ ನಾವು ಇದನ್ನು ಕಲಿಯುತ್ತಿದ್ದೇವೆ ಎಂದು ತಿಳಿಸಿ. ನಮ್ಮದನ್ನು ಅವಶ್ಯವಾಗಿ ತಿಳಿಸಬೇಕು. ಏಕೆ ನೀವು ಈ ರಾಜಯೋಗವನ್ನು ಕಲಿಯುತ್ತಿದ್ದೀರಿ? ತಿಳಿಸಿ ನಾವು ಇದನ್ನು ಕಲಿಯುತ್ತಿದ್ದೇವೆ, ನಮಗೆ ಇದನ್ನು ಓದಿಸುವವರು ಭಗವಂತನಾಗಿದ್ದಾರೆ, ನಾವೆಲ್ಲರೂ ಸಹೋದರರಾಗಿದ್ದೇವೆ, ನಾವು ನಮ್ಮನ್ನು ಆತ್ಮನೆಂದು ತಿಳಿಯುತ್ತೇವೆ. ಬೇಹದ್ದಿನ ತಂದೆಯು ತಿಳಿಸುತ್ತಾರೆ, ತಮ್ಮನ್ನು ಆತ್ಮವೆಂದು ತಿಳಿದು ನನ್ನೊಬ್ಬನನ್ನೇ ನೆನಪು ಮಾಡಿ, ಆಗ ನಿಮ್ಮ ಪಾಪಗಳು ಪರಿಹಾರವಾಗುತ್ತವೆ. ಇಂತಹ ಬರವಣಿಗೆಯನ್ನು ಬಹಳ ಸುಂದರವಾಗಿ ಮುದ್ರಿಸಿ ಇಟ್ಟುಕೊಳ್ಳಿ. ಎಲ್ಲೆಲ್ಲಿ ಸಮ್ಮೇಳನಗಳು ಆಗುತ್ತದೋ ಅಲ್ಲಿಗೆ ಕಳುಹಿಸಿ. ಆಗ ಇವರಂತೂ ಬಹಳ ಒಳ್ಳೆಯ ನಿಯಮಪೂರ್ವಕವಾದ ಮಾತನ್ನು ಕಲಿಯುತ್ತಾರೆ ಎಂದು ತಿಳಿಯುತ್ತಾರೆ. ಈ ರಾಜಯೋಗದಿಂದ ರಾಜರಿಗೂ ರಾಜಾ, ವಿಶ್ವಕ್ಕೆ ಮಾಲೀಕರಾಗುತ್ತೇವೆ. ಪ್ರತಿ 5000 ವರ್ಷಗಳ ನಂತರ ನಾವು ದೇವತೆಗಳು ಆಗುತ್ತವೆ ಮತ್ತೆ ಮನುಷ್ಯರು ಆಗುತ್ತೇವೆ. ಹೀಗೆ ವಿಚಾರ-ಸಾಗರ ಮಂಥನ ಮಾಡಿ ಬಹಳ ಸುಂದರವಾಗಿ ಬರೆಯಬೇಕು. ಯಾರೇ ನಿಮ್ಮ ಉದ್ದೇಶವನ್ನು ನಿಮ್ಮೊಂದಿಗೆ ಪ್ರಶ್ನಿಸಬಹುದು ಆಗ ಹೀಗೆ ಮುದ್ರಿಸಿರುವುದನ್ನು ಇಟ್ಟಿರಬೇಕು. ಇದು ನಮ್ಮ ಗುರಿ-ಉದ್ದೇಶವಾಗಿದೆ ಎಂದು ಬರೆಯುವುದರಿಂದ ಪ್ರಭಾವ ಬೀರುತ್ತದೆ. ಇದರಲ್ಲಿ ಯಾವುದೇ ಹಠಯೋಗ ಅಥವಾ ಶಾಸ್ತ್ರಗಳನ್ನು ಓದುವ ಮಾತಿಲ್ಲ. ಅವರಿಗೆ ಎಷ್ಟೊಂದುಶಾಸ್ತ್ರಗಳ ಅಹಂಕಾರವಿರುತ್ತದೆ, ತಮ್ಮನ್ನು ಶಾಸ್ತ್ರಗಳ ಅಥಾರಿಟಿ ಎಂದು ತಿಳಿಯುತ್ತಾರೆ, ವಾಸ್ತವದಲ್ಲಿ ಅವರಂತೂ ಪೂಜಾರಿಗಳಾಗಿದ್ದಾರೆ, ಅಥಾರಿಟಿ ಎಂದು ಪೂಜ್ಯರಿಗೆ ಹೇಳಲಾಗುತ್ತದೆ ಅಂದಾಗ ಪೂಜಾರಿಗಳಿಗೆ ಏನು ಹೇಳುತ್ತಾರೆ! ನಾವು ಏನು ಕಲಿಯುತ್ತಿದ್ದೇವೆ ಎಂದು ಸ್ಪಷ್ಟ ಮಾಡಿ ಬರೆಯಬೇಕು. ಬ್ರಹ್ಮಾಕುಮಾರ-ಕುಮಾರಿಯರೆಂದು ಹೆಸರಂತೂ ಪ್ರಸಿದ್ಧವಾಗಿದೆ.

ಎರಡು ಪ್ರಕಾರದ ಯೋಗಗಳಿವೆ, ಒಂದು ಹಠಯೋಗ, ಇನ್ನೊಂದು ಸಹಜಯೋಗವಾಗಿದೆ. ಸಹಜಯೋಗವನ್ನು ಮನುಷ್ಯರು ಕಲಿಸಲು ಸಾಧ್ಯವಿಲ್ಲ. ಒಬ್ಬ ಪರಮಾತ್ಮನೇ ಕಲಿಸುತ್ತಾರೆ. ಉಳಿದ ಅನೇಕ ಪ್ರಕಾರದ ಯೋಗಗಳು ಎಲ್ಲವೂ ಮನುಷ್ಯರ ಮತದಂತೆ ಇವೆ. ಸತ್ಯಯುಗದಲ್ಲಿ ದೇವತೆಗಳಿಗೆ ಯಾರ ಮತದ ಅವಶ್ಯಕತೆಯೂ ಇಲ್ಲ ಏಕೆಂದರೆ ಅವರಿಗೆ ಆಸ್ತಿಯು ಸಿಕ್ಕಿದೆ, ಶ್ರೇಷ್ಠ ಮತವು ಸಿಕ್ಕಿದೆ. ಅವರು ದೇವತೆಗಳು ಅರ್ಥಾತ್ ದೈವೀಗುಣವಂತರಾಗಿದ್ದಾರೆ. ಯಾರಲ್ಲಿ ಇಂತಹ ಗುಣಗಳು ಇಲ್ಲವೋ ಅವರಿಗೆ ಅಸುರರು ಎಂದು ಕರೆಯಲಾಗುತ್ತದೆ. ದೇವತೆಗಳ ರಾಜ್ಯವಿತ್ತು ಮತ್ತೆ ಅವರು ಎಲ್ಲಿಗೆ ಹೋದರು? 84 ಜನ್ಮಗಳನ್ನು ಹೇಗೆ ತೆಗೆದುಕೊಂಡರು? ಇದರ ಬಗ್ಗೆ ಏಣಿಚಿತ್ರದಲ್ಲಿ ತಿಳಿಸಬೇಕು, ಏಣಿ ಚಿತ್ರವು ಬಹಳ ಚೆನ್ನಾಗಿದೆ, ನಿಮ್ಮ ಮನಸ್ಸಿನಲ್ಲಿ ಏನಿದೆಯೋ ಅದು ಈ ಏಣಿಚಿತ್ರದಲ್ಲಿ ಇದೆ. ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ, ವಿದ್ಯೆಯು ಸಾಂಪಾದನೆಗೆ ಮೂಲವಾಗಿದೆ. ಇದು ಎಲ್ಲದಕ್ಕಿಂತ ಶ್ರೇಷ್ಠ ವಿದ್ಯೆಯಾಗಿದೆ, ಅತ್ಯುತ್ತಮವಾಗಿದೆ, ಆದರೆ ಅತ್ಯುತ್ತಮ ವಿದ್ಯೆ ಯಾವುದು, ಯಾವ ವಿದ್ಯೆಯಿಂದ ಮನುಷ್ಯರಿಂದ ದೇವತೆ ಡಬಲ್ ಕಿರೀಟಧಾರಿಗಳು ಆಗುತ್ತಾರೆ ಎಂದು ಮನುಷ್ಯರಿಗೆ ಗೊತ್ತಿಲ್ಲ. ಈಗ ನೀವು ಡಬಲ್ ಕಿರೀಟಧಾರಿಗಳಾಗುವ ಪುರುಷಾರ್ಥ ಮಾಡುತ್ತಿದ್ದೀರಿ. ವಿದ್ಯೆಯು ಒಂದೇ ಆದರೆ ಇದರಿಂದಲೇ ಕೆಲ-ಕೆಲವರು ಕೆಲ-ಕೆಲವೊಂದು ಪದವಿಯನ್ನು ಪಡೆಯುತ್ತಾರೆ. ಇವು ಆಶ್ಚರ್ಯದ ಮಾತಾಗಿದೆ. ಒಂದೇ ವಿದ್ಯೆಯಿಂದ ರಾಜಧಾನಿಯು ಸ್ಥಾಪನೆ ಆಗುತ್ತದೆ, ಇದರಿಂದ ರಾಜರೂ ಆಗುತ್ತಾರೆ, ಪ್ರಜೆಗಳೂ ಆಗುತ್ತಾರೆ ಆದರೆ ಅಲ್ಲಿ ದುಃಖದ ಮಾತೇ ಇರುವುದಿಲ್ಲ. ಪದವಿಗಳಂತೂ ಇರುತ್ತದೆಯಲ್ಲವೇ. ಇಲ್ಲಿ ಅನೇಕ ಪ್ರಕಾರದ ದುಃಖಗಳಿವೆ, ರೋಗಗಳು, ಬಡತನ, ಅತೀವೃಷ್ಟಿ, ಅನಾವೃಷ್ಟಿ ಆಗುತ್ತಾ ಇರುತ್ತದೆ. ಭಲೆ ಲಕ್ಷಾಧಿಪತಿ, ಕೋಟ್ಯಾದಿಪತಿಗಳು ಆಗಿರಬಹುದು, ಜನ್ಮವಂತೂ ವಿಕಾರಿಗಳಿಂದಲೇ ಆಗುತ್ತದೆಯಲ್ಲವೇ. ಎಡವಿದರೋ, ಸೊಳ್ಳೆಯು ಕಚ್ಚಿತೋ, ಇದೆಲ್ಲವೂ ದುಃಖವಾಗಿದೆಯಲ್ಲವೇ, ಹೆಸರೇ ಆಗಿದೆ ರೌರವ ನರಕ ಆದರೂ ಇಂತಹವರು ಸ್ವರ್ಗದಲ್ಲಿ ಹೋದರು ಎಂದು ಹೇಳುತ್ತಿರುತ್ತಾರೆ ಆದರೆ ಸ್ವರ್ಗವಂತೂ ಇನ್ನೂ ಬರಲಿದೆ ಎಂದಮೇಲೆ ಸ್ವರ್ಗದಲ್ಲಿ ಹೇಗೆ ಹೋದರು ಇದನ್ನು ತಿಳಿಸುವುದು ಬಹಳ ಸಹಜವಾಗಿದೆ. ತಂದೆಯು ಪ್ರಬಂಧ ಕೊಟ್ಟಿದ್ದಾರೆ, ಬರೆಯುವುದು ಮಕ್ಕಳ ಕೆಲಸವಾಗಿದೆ, ಧಾರಣೆ ಇದ್ದರೆ ಅವಶ್ಯವಾಗಿ ಬರೆಯುತ್ತಾರೆ. ಮುಖ್ಯ ಮಾತನ್ನು ಮಕ್ಕಳಿಗೆ ತಿಳಿಸಿಕೊಡುತ್ತಾರೆ. ತಮ್ಮನ್ನು ಆತ್ಮನೆಂದು ತಿಳಿಯಿರಿ, ಈಗ ಹಿಂತಿರುಗಿ ಹೋಗಬೇಕಾಗಿದೆ, ನಾವು ಸತೋಪ್ರಧಾನರಾಗಿದ್ದೆವು, ಆಗ ಖುಷಿಗೆ ಪಾರವೇ ಇರಲಿಲ್ಲ, ಈಗ ತಮೋಪ್ರಧಾನರಾಗಿದ್ದೇವೆ. ಎಷ್ಟು ಸಹಜವಾಗಿದೆ. ತಂದೆಯು ಬಹಳಷ್ಟು ವಿಚಾರಗಳನ್ನು ತಿಳಿಸುತ್ತಾರೆ ಎಂದಾಗ ಕುಳಿತು ಬಹಳ ಚೆನ್ನಾಗಿ ತಿಳಿಸಿಕೊಡಬೇಕು. ಒಪ್ಪಿಕೊಳ್ಳದಿದ್ದರೆ ಇವರು ನಮ್ಮ ಕುಲದವರು ಅಲ್ಲವೆಂದು ತಿಳಿಯಲಾಗುತ್ತದೆ. ವಿದ್ಯಾಭ್ಯಾಸದಲ್ಲಿ ದಿನ-ಪ್ರತಿದಿನ ಮುಂದುವರೆಯಬೇಕಾಗಿದೆ. ಹಿಂದೆ ಹೋಗಬಾರದು. ದೈವೀಗುಣಗಳ ಬದಲಾಗಿ ಆಸುರೀ ಗುಣಗಳನ್ನು ಧಾರಣೆ ಮಾಡುವುದು ಹಿಂದಕ್ಕೆ ಹೋದಂತಾಯಿತಲ್ಲವೇ. ವಿಕಾರಗಳನ್ನು ಬಿಡುತ್ತಿರಿ, ದೈವೀಗುಣಗಳನ್ನು ಧಾರಣೆ ಮಾಡಿ ಬಹಳ ಹಗುರವಾಗಬೇಕು, ಈ ಶರೀರವು ಪತಿತವಾಗಿದೆ, ಇದನ್ನು ಬಿಡಬೇಕಾಗಿದೆ, ನಾವಂತೂ ಈಗ ಮನೆಗೆ ಹೋಗಬೇಕಾಗಿದೆ. ತಂದೆಯನ್ನು ನೆನಪು ಮಾಡದಿದ್ದರೆ ಹೂಗಳು ಆಗುವುದಿಲ್ಲ, ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ. ಮುಂದೆ ಹೋದಂತೆ ನಿಮಗೆ ಬಹಳ ಸಾಕ್ಷಾತ್ಕಾರ ಆಗುತ್ತದೆ - ನೀವು ಏನು ಸೇವೆ ಮಾಡಿದಿರಿ? ಎಂದು ಕೇಳುತ್ತಾರೆ. ನೀವು ಎಂದೂ ಕೋರ್ಟ್ಗೆ ಹೋಗಲಿಲ್ಲ ಆದರೆ ಈ ಬ್ರಹ್ಮಾರವರು ಎಲ್ಲವನ್ನು ನೋಡಿದ್ದಾರೆ, ಹೇಗೆ ಇವರು ಕಳ್ಳರನ್ನು ಹಿಡಿಯುತ್ತಾರೆ ನಂತರ ಪ್ರಕರಣ ನಡೆಯುತ್ತದೆ, ಹಾಗೆಯೇ ಅಲ್ಲಿಯೂ ಎಲ್ಲವನ್ನು ಸಾಕ್ಷಾತ್ಕಾರ ಮಾಡಿಸುತ್ತಿರುತ್ತಾರೆ. ಶಿಕ್ಷೆಗಳನ್ನು ಅನುಭವಿಸಿ ನಂತರ ಬಹಳ ಕಡಿಮೆ ಪದವಿಯನ್ನು ಪಡೆಯುತ್ತೀರಿ. ಶಿಕ್ಷಕರಿಗಂತೂ ಇವರು ಅನುತ್ತೀರ್ಣರಾಗಿಬಿಡುತ್ತಾರೆ ಎಂದು ದಯೆ ಬರುತ್ತದೆಯಲ್ಲವೇ. ತಂದೆಯನ್ನು ನೆನಪು ಮಾಡುವ ಸಬ್ಜೆಕ್ಟ್ ಎಲ್ಲದಕ್ಕಿಂತ ಒಳ್ಳೆಯದಾಗಿದೆ. ಇದರಿಂದ ಪಾಪಗಳು ಭಸ್ಮವಾಗುತ್ತವೆ, ತಂದೆಯು ನನಗೆ ಓದಿಸುತ್ತಾರೆ, ಇದೇ ಸ್ಮರಣೆ ಮಾಡುತ್ತಾ ತಿರುಗಾಡುತ್ತಿರಬೇಕು. ವಿದ್ಯಾರ್ಥಿಯು ಶಿಕ್ಷಕರನ್ನು ನೆನಪು ಮಾಡುತ್ತಾರೆ ಮತ್ತೆ ಬುದ್ಧಿಯಲ್ಲಿ ವಿದ್ಯೆಯು ಇರುತ್ತದೆ. ಶಿಕ್ಷಕರೊಂದಿಗೆ ಯೋಗವಂತೂ ಅವಶ್ಯವಾಗಿ ಇರುತ್ತದೆಯಲ್ಲವೇ. ತಂದೆಯು ನಮಗೆ ಓದಿಸುತ್ತಾರೆ, ಬುದ್ಧಿಯಲ್ಲಿ ಈ ವಿದ್ಯೆ ಇರುತ್ತದೆ, ಶಿಕ್ಷಕರ ಜೊತೆ ಯೋಗವಂತೂ ಅವಶ್ಯವಾಗಿ ಇರುತ್ತದೆಯಲ್ಲವೇ. ಇದು ಬುದ್ಧಿಯಲ್ಲಿ ಇರಬೇಕು ನಾವೆಲ್ಲಾ ಸಹೋದರರಿಗೆ ಒಬ್ಬರೇ ಶಿಕ್ಷಕನಾಗಿದ್ದಾರೆ. ಅವರು ಪಾರಲೌಕಿಕ ಶಿಕ್ಷಕನಾಗಿದ್ದಾರೆ. ಮುಂದೆ ಹೋದಂತೆ ಅನೇಕರಿಗೆ ತಿಳಿಯುತ್ತದೆ, ಅಹೋ ಪ್ರಭು ನಿನ್ನ ಲೀಲೆ ಅಪರಮಪಾರ..... ಹೀಗೆ ಮಹಿಮೆ ಮಾಡಿ ಶರೀರ ಬಿಡುತ್ತಾರೆ ಆದರೆ ಏನನ್ನೂ ಪಡೆಯುವುದಕ್ಕೆ ಆಗುವುದಿಲ್ಲ. ದೇಹಾಭಿಮಾನದಲ್ಲಿ ಬರುವುದರಿಂದಲೇ ಉಲ್ಟಾ ಕೆಲಸಗಳನ್ನು ಮಾಡುತ್ತಾರೆ. ದೇಹಿ-ಅಭಿಮಾನಿ ಆಗುವುದರಿಂದ ಒಳ್ಳೆಯ ಕೆಲಸಗಳು ಆಗುತ್ತವೆ, ತಂದೆಯು ತಿಳಿಸುತ್ತಾರೆ - ನಿಮ್ಮದ್ದು ವಾನಪ್ರಸ್ಥ ಸ್ಥಿತಿಯಾಗಿದೆ. ಹಿಂತಿರುಗಿ ಹೋಗಲೇಬೇಕಾಗಿದೆ. ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿ ಎಲ್ಲರೂ ಹಿಂತಿರುಗಿ ಹೋಗಲೇಬೇಕಾಗಿದೆ. ಬಯಸಲಿ, ಬಯಸದಿರಲಿ ಆದರೆ ಅವಶ್ಯವಾಗಿ ಹೋಗಲೇಬೇಕಾಗಿದೆ. ಒಂದು ದಿನ ಹೀಗೂ ಬರುತ್ತದೆ ಪ್ರಪಂಚವು ಖಾಲಿ ಆಗಿಬಿಡುತ್ತದೆ, ಕೇವಲ ಭಾರತವೇ ಇರುತ್ತದೆ, ಅರ್ಧಕಲ್ಪ ಕೇವಲ ಭಾರತವೇ ಇರುತ್ತದೆ ಎಂದರೆ ಪ್ರಪಂಚವು ಎಷ್ಟು ಖಾಲಿ ಆಗುವುದು? ಈ ವಿಚಾರವು ನಿಮ್ಮ ವಿನಃ ಮತ್ತ್ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ಆ ಸಮಯದಲ್ಲಿ ಆಗ ಯಾರೂ ನಿಮ್ಮ ಶತೃಗಳು ಇರುವುದಿಲ್ಲ, ಶತೃಗಳು ಏಕೆ ಬರುತ್ತಾರೆ ಹಣದ ಹಿಂದೆ. ಭಾರತದಲ್ಲಿ ಬ್ರಿಟೀಷರು ಮತ್ತು ಮುಸಲ್ಮಾನರು ಏಕೆ ಬಂದರು? ಹಣ ನೋಡಿದರು. ಬಹಳ ಹಣವಿತ್ತು, ಈಗ ಹಣವೂ ಇಲ್ಲ ಆದ್ದರಿಂದ ಮತ್ತ್ಯಾರೂ ಇಲ್ಲ. ಹಣವನ್ನು ತೆಗೆದುಕೊಂಡು ಖಾಲಿ ಮಾಡಿ ಹೋದರು. ಮನುಷ್ಯರಿಗೆ ಇದು ಗೊತ್ತಿಲ್ಲ. ನಾಟಕದನುಸಾರ ಹಣವನ್ನಂತೂ ತಾವೇ ಸಮಾಪ್ತಿ ಮಾಡಿಬಿಟ್ಟಿರಿ ಎಂದು ತಂದೆಯು ತಿಳಿಸುತ್ತಾರೆ. ನಿಮಗೆ ನಿಶ್ಚಯವಿದೆ, ಈಗ ನಾವು ಬೇಹದ್ದಿನ ತಂದೆಯ ಬಳಿಗೆ ಬಂದಿದ್ದೇವೆ, ಇದು ಈಶ್ವರೀಯ ಪರಿವಾರವಾಗಿದೆ ಎಂದು ಮತ್ತ್ಯಾರ ಸಂಕಲ್ಪದಲ್ಲೂ ಇರುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ನಡೆಯುತ್ತಾ-ತಿರುಗಾಡುತ್ತಾ ಬುದ್ಧಿಯಲ್ಲಿ ವಿದ್ಯಾಭ್ಯಾಸದ ಚಿಂತನೆ ಮಾಡಬೇಕಾಗಿದೆ. ಯಾವುದೇ ಕಾರ್ಯವನ್ನು ಮಾಡುತ್ತಾ ಬುದ್ಧಿಯಲ್ಲಿ ಸದಾ ಜ್ಞಾನವು ಹನಿಯುತ್ತಿರಬೇಕಾಗಿದೆ. ಇದು ಬಹಳ ಉತ್ತಮವಾದ ವಿದ್ಯೆಯಾಗಿದೆ. ಇದನ್ನು ಓದಿ ಡಬಲ್ ಕಿರೀಟಧಾರಿಗಳಾಗಬೇಕಾಗಿದೆ.

2. ನಾವು ಆತ್ಮ ಸಹೋದರ-ಸಹೋದರರಾಗಿದ್ದೇವೆ ಎನ್ನುವ ಅಭ್ಯಾಸ ಮಾಡಬೇಕಾಗಿದೆ. ದೇಹಾಭಿಮಾನದಲ್ಲಿ ಬರುವುದರಿಂದ ಉಲ್ಟಾ ಕರ್ಮಗಳು ಆಗುತ್ತವೆ, ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ದೇಹೀ-ಅಭಿಮಾನಿಗಳಾಗಬೇಕಾಗಿದೆ.

ವರದಾನ:
ಸತ್ಯತೆಯ ಶಕ್ತಿಯ ಮುಖಾಂತರ ಸದಾ ಖುಷಿಯಲ್ಲಿ ನಾಟ್ಯವಾಡುವಂತಹ ಶಕ್ತಿಶಾಲಿ ಮಹಾನ್ ಆತ್ಮ ಭವ

"ಸತ್ಯವಾಗಿರುವವರು ನಾಟ್ಯ ವಾಡುತ್ತಾರೆ" ಎಂದು ಹೇಳಲಾಗುತ್ತದೆ. ಸತ್ಯವೆಂದರೆ ಸತ್ಯತೆಯ ಶಕ್ತಿವುಳ್ಳವರು ಸದಾ ನಾಟ್ಯವಾಡುತ್ತಿರುತ್ತಾರೆ, ಎಂದೂ ಬಾಡಿಹೋಗಿರುವುದಿಲ್ಲ, ಬೇಸರದಿಂದಿರುವುದಿಲ್ಲ, ಗಾಭರಿಯಾಗುವುದಿಲ್ಲ, ಬಲಹೀನರಾಗುವುದಿಲ್ಲ. ಅವರು ಸದಾ ಖುಷಿಯಲ್ಲಿ ನಾಟ್ಯವಾಡುತಿರುತ್ತಾರೆ. ಶಕ್ತಿಶಾಲಿಯಾಗಿರುತ್ತಾರೆ. ಅವರಲ್ಲಿ ಎದುರಿಸುವಂತಹ ಶಕ್ತಿಯಿರುತ್ತದೆ, ಸತ್ಯತೆ ಎಂದೂ ಅಲುಗಾಡುವುದಿಲ್ಲ, ಅಚಲವಾಗಿರುತ್ತದೆ. ಸತ್ಯತೆಯ ದೋಣಿ ಅಲುಗಾಡುತ್ತದೆಯೇ ವಿನಃ ಮುಳುಗುವುದಿಲ್ಲ. ಅಂದರೆ ಸತ್ಯತೆಯ ಶಕ್ತಿಯನ್ನು ಧಾರಣೆ ಮಾಡುವಂತಹ ಆತ್ಮಗಳೇ ಮಹಾನರು.

ಸ್ಲೋಗನ್:
ವ್ಯಸ್ತವಾಗಿರುವ ಮನಸ್ಸು-ಬುದ್ದಿಯನ್ನು ಸಕೆಂಡ್ ನಲ್ಲಿ ನಿಲ್ಲಿಸುವುದೇ ಸರ್ವ ಶ್ರೇಷ್ಠ ಅಭ್ಯಾಸವಾಗಿದೆ.