10.08.25    Avyakt Bapdada     Kannada Murli    31.10.2006     Om Shanti     Madhuban


“ಸದಾ ಸ್ನೇಹಿಯ ಜೊತೆಗೆ ಅಖಂಡ ಮಹಾದಾನಿಗಳಾಗಿ ಆಗ ವಿಘ್ನ ವಿನಾಶಕರು, ಸಮಾಧಾನ ಸ್ವರೂಪರಾಗಿ ಬಿಡುವಿರಿ”


ಇಂದು ಪ್ರೇಮ ಸಾಗರ ತನ್ನ ಪರಮಾತ್ಮ ಪ್ರೀತಿಗೆ ಪಾತ್ರರಾದ ಮಕ್ಕಳೊಂದಿಗೆ ಮಿಲನ ಮಾಡಲು ಬಂದಿದ್ದೇವೆ. ತಾವೆಲ್ಲರೂ ಸ್ನೇಹದ ಅಲೌಕಿಕ ವಿಮಾನದಿಂದ ಇಲ್ಲಿಗೆ ತಲುಪಿದ್ದೀರಲ್ಲವೆ! ಸಾಧಾರಣ ವಿಮಾನದಲ್ಲಿ ಬಂದಿದ್ದೀರೊ ಅಥವಾ ಸ್ನೇಹದ ವಿಮಾನದಲ್ಲಿ ಹಾರಿಕೊಂಡು ಬಂದಿದ್ದೀರೋ? ಎಲ್ಲರ ಹೃದಯದಲ್ಲಿ ಸ್ನೇಹದ ಅಲೆಗಳು ತೇಲಾಡುತ್ತಿದೆ ಮತ್ತು ಸ್ನೇಹವೇ ಈ ಬ್ರಾಹ್ಮಣ ಜೀವನದ ತಳಪಾಯವಾಗಿದೆ. ಅಂದಾಗ ತಾವೆಲ್ಲರೂ ಬಂದಾಗ ಸ್ನೇಹವೇ ಸೆಳೆಯಿತಲ್ಲವೆ! ಜ್ಞಾನವನ್ನಂತೂ ನಂತರ ಕೇಳಿದಿರಿ ಆದರೆ ಮೊದಲು ಸ್ನೇಹವು ಪರಮಾತ್ಮ ಸ್ನೇಹಿಗಳನ್ನಾಗಿ ಮಾಡಿ ಬಿಟ್ಟಿತು. ನಾವು ಪರಮಾತ್ಮ ಸ್ನೇಹಕ್ಕೆ ಪಾತ್ರರಾಗುತ್ತೇವೆ ಎಂಬುದು ಎಂದೂ ಸ್ವಪ್ನದಲ್ಲಿಯೂ ಇರಲಿಲ್ಲ ಆದರೆ ಈಗ ಏನು ಹೇಳುತ್ತೀರಿ? ಪರಮಾತ್ಮ ಸ್ನೇಹಕ್ಕೆ ಪಾತ್ರರಾಗಿ ಬಿಟ್ಟೆವು ಎಂದು ಹೇಳುತ್ತೀರಿ. ಸ್ನೇಹವೂ ಸಾಧಾರಣ ಸ್ನೇಹವಲ್ಲ, ಹೃದಯದ ಸ್ನೇಹವಾಗಿದೆ, ಆತ್ಮಿಕ ಸ್ನೇಹವಾಗಿದೆ, ಸತ್ಯ ಸ್ನೇಹವಾಗಿದೆ, ನಿಸ್ವಾರ್ಥ ಸ್ನೇಹವಾಗಿದೆ. ಈ ಪರಮಾತ್ಮ ಸ್ನೇಹವು ಬಹಳ ಸಹಜ ನೆನಪಿನ ಅನುಭವ ಮಾಡಿಸುತ್ತದೆ. ಸ್ನೇಹಿಯನ್ನು ಮರೆಯುವುದು ಕಷ್ಟವಾಗುತ್ತದೆ, ನೆನಪು ಮಾಡಿಕೊಳ್ಳುವುದು ಕಷ್ಟವಲ್ಲ, ಮರೆಯುವುದು ಕಷ್ಟವಾಗುತ್ತದೆ. ಸ್ನೇಹವು ಒಂದು ಅಲೌಕಿಕ ಅಯಸ್ಕಾಂತವಾಗಿದೆ. ಸ್ನೇಹವು ಸಹಜಯೋಗಿಗಳನ್ನಾಗಿ ಮಾಡುತ್ತದೆ, ಪರಿಶ್ರಮದಿಂದ ಬಿಡಿಸುತ್ತದೆ. ಸ್ನೇಹದಿಂದ ನೆನಪು ಮಾಡುವುದರಲ್ಲಿ ಪರಿಶ್ರಮವೆನಿಸುವುದಿಲ್ಲ, ಪ್ರೀತಿಯ ಫಲವನ್ನು ತಿನ್ನುತ್ತಾರೆ. ಸ್ನೇಹದ ಚಿಹ್ನೆಯಾಗಿ ವಿಶೇಷ ನಾಲ್ಕಾರು ಕಡೆಯ ಮಕ್ಕಳಂತೂ ಅವಶ್ಯವಾಗಿ ಇದ್ದೀರಿ ಆದರೆ ಡಬಲ್ ವಿದೇಶಿಯರು ಸ್ನೇಹದಲ್ಲಿ ಓಡೋಡಿ ಬಂದು ತಲುಪಿದ್ದಾರೆ. ನೋಡಿ, 90 ದೇಶಗಳಿಂದ ಹೇಗೆ ಓಡೋಡಿ ಬಂದು ತಲುಪಿದ್ದಾರೆ! ದೇಶದ ಮಕ್ಕಳಂತೂ ಪ್ರಭು ಪ್ರೇಮಕ್ಕೆ ಪಾತ್ರರಾಗಿಯೇ ಇದ್ದೀರಿ. ಆದರೆ ಇಂದು ವಿಶೇಷವಾಗಿ ಡಬಲ್ ವಿದೇಶಿಯರಿಗೆ ಸುವರ್ಣಾವಕಾಶವಿದೆ. ತಮ್ಮೆಲ್ಲರದೂ ವಿಶೇಷ ಪ್ರೀತಿಯಿದೆಯಲ್ಲವೆ. ಸ್ನೇಹವಿದೆಯಲ್ಲವೆ. ಸ್ನೇಹವೂ ಎಷ್ಟಿದೆ! ಎಷ್ಟಿದೆ? ಯಾವುದರಿಂದ ತುಲಾಭಾರ ಮಾಡುವಿರಿ! ಯಾರೂ ಇದನ್ನು ತುಲನೆ ಮಾಡುವುದಕ್ಕೇ ಸಾಧ್ಯವಿಲ್ಲ. ತಮ್ಮೆಲ್ಲರದು ಒಂದು ಗೀತೆಯೂ ಇದೆಯಲ್ಲವೆ - ಆಕಾಶಕ್ಕಿಂತಲೂ ಅಗಲ ಸಾಗರಕ್ಕಿಂತಲೂ ಆಳವಾಗಿದೆ.... ಬೇಹದ್ದಿನ ಪ್ರೀತಿ, ಬೇಹದ್ದಿನ ಸ್ನೇಹವಿದೆ.

ಬಾಪ್ದಾದಾರವರೂ ಸಹ ಸ್ನೇಹಿ ಮಕ್ಕಳೊಂದಿಗೆ ಮಿಲನ ಮಾಡಲು ಬಂದಿದ್ದೇವೆ. ತಾವೆಲ್ಲಾ ಮಕ್ಕಳು ಸ್ನೇಹದಿಂದ ನೆನಪು ಮಾಡಿದಿರಿ ಮತ್ತು ಬಾಪ್ದಾದಾ ತಮ್ಮ ಪ್ರೀತಿಯಲ್ಲಿ ಬಂದು ಬಿಟ್ಟಿದ್ದೇವೆ. ಹೇಗೆ ಈ ಸಮಯದಲ್ಲಿ ಪ್ರತಿಯೊಬ್ಬರ ಚಹರೆಯಲ್ಲಿ ಸ್ನೇಹದ ರೇಖೆಗಳು ಹೊಳೆಯುತ್ತಿವೆ, ಹಾಗೆಯೇ ಈಗ ಇನ್ನೇನು ಅಡಿಷನ್ ಮಾಡಿಕೊಳ್ಳಬೇಕಾಗಿದೆ? ಸ್ನೇಹವಂತೂ ಇದೆ. ಇದು ಪಕ್ಕಾ ಇದೆ. ಬಾಪ್ದಾದಾರವರೂ ಸಹ ಸ್ನೇಹದ ಸರ್ಟಿಫಿಕೇಟನ್ನು ಕೊಡುತ್ತೇವೆ ಆದರೆ ಈಗ ಏನು ಮಾಡಬೇಕಾಗಿದೆ? ಅರ್ಥವಾಗಿರಬಹುದು. ಈಗ ಕೇವಲ ಅಂಡರ್ಲೈನ್ ಮಾಡಿಕೊಳ್ಳಿ- ಸದಾ ಸ್ನೇಹಿಯಾಗಿರಬೇಕಾಗಿದೆ. ಸದಾ, ಸಮ್ಟೈಮ್ (ಕೆಲವೊಮ್ಮೆ) ಅಲ್ಲ. ಸ್ನೇಹವು ಅಟೂಟವಾಗಿದೆ ಆದರೆ ಪರ್ಸೆಂಟೇಜಿನಲ್ಲಿ ಅಂತರವಾಗಿ ಬಿಡುತ್ತದೆ ಅಂದಮೇಲೆ ಅಂತರವನ್ನು ಕಳೆಯಲು ಮಂತ್ರವೇನಾಗಿದೆ? ಪ್ರತೀ ಸಮಯ ಮಹಾದಾನಿ, ಅಖಂಡ ದಾನಿಗಳಾಗಿರಿ. ಸದಾ ದಾತನ ಮಕ್ಕಳು ವಿಶ್ವ ಸೇವಾಧಾರಿ ಸಮಾನರು. ಯಾವುದೇ ಸಮಯದಲ್ಲಿ ಮಾll ದಾತರಾಗದೆ ಇರಲೇಬಾರದು, ಏಕೆಂದರೆ ತಂದೆಯ ಜೊತೆ ಜೊತೆಗೆ ತಾವೆಲ್ಲರೂ ಸಹ ವಿಶ್ವ ಕಲ್ಯಾಣದ ಕಾರ್ಯದಲ್ಲಿ ಸಹಯೋಗಿಗಳಾಗುವ ಸಂಕಲ್ಪ ಮಾಡಿದ್ದೀರಿ. ಭಲೆ ಮನಸ್ಸಿನ ಮೂಲಕ ಶಕ್ತಿಗಳ ದಾನ ಹಾಗೂ ಸಹಯೋಗ ನೀಡಿ. ವಾಚಾದ ಮೂಲಕ ಜ್ಞಾನ ದಾನ ನೀಡಿ, ಸಹಯೋಗ ಕೊಡಿ. ಕರ್ಮದ ಮೂಲಕ ಗುಣಗಳ ದಾನ ಮಾಡಿ ಮತ್ತು ಸ್ನೇಹ-ಸಂಪರ್ಕದ ಮೂಲಕ ಖುಷಿಯ ದಾನ ಮಾಡಿ. ಎಷ್ಟು ಅಖಂಡ ಖಜಾನೆಗಳಿಗೆ ಮಾಲೀಕರಾಗಿದ್ದೀರಿ, ರಿಚೆಸ್ಟ್ ಇನ್ ದಿ ವರ್ಲ್ಡ್ ಆಗಿದ್ದೀರಿ. ಅಖೂಟ ಮತ್ತು ಅಖಂಡ ಖಜಾನೆಗಳಿವೆ, ಎಷ್ಟು ಕೊಡುತ್ತೀರೋ ಅಷ್ಟು ಹೆಚ್ಚುತ್ತಾ ಹೋಗುತ್ತವೆ, ಕಡಿಮೆಯಾಗುವುದಿಲ್ಲ ಹೆಚ್ಚುತ್ತವೆ, ಏಕೆಂದರೆ ವರ್ತಮಾನ ಸಮಯದಲ್ಲಿ ಮೆಜಾರಿಟಿ ತಮ್ಮೆಲ್ಲರ ಆತ್ಮಿಕ ಸಹೋದರ-ಸಹೋದರಿಯರು ಈ ಖಜಾನೆಗಳಿಗೆ ಬಾಯಾರಿದ್ದಾರೆ ಅಂದಮೇಲೆ ತಮ್ಮ ಸಹೋದರ-ಸಹೋದರಿಯರ ಮೇಲೆ ದಯೆ ಬರುವುದಿಲ್ಲವೆ! ಬಾಯಾರಿದ ಆತ್ಮರ ಬಾಯಾರಿಕೆ ನೀಗಿಸುವುದಿಲ್ಲವೇ? “ಹೇ ನಮ್ಮ ದೇವ-ದೇವಿಯರೇ, ನಮಗೆ ಶಕ್ತಿ ಕೊಡಿ, ಸತ್ಯವಾದ ಪ್ರೀತಿ ಕೊಡಿ” - ಈ ಕೂಗು ಕಿವಿಗಳಲ್ಲಿ ಕೇಳಿ ಬರುತ್ತಿಲ್ಲವೇ? ತಮ್ಮ ಭಕ್ತರು ಹಾಗೂ ದುಃಖಿ ಆತ್ಮರು ಇಬ್ಬರೂ ದಯೆ ತೋರಿಸಿ, ಕೃಪೆ ಮಾಡಿ, ಹೇ ಕೃಪೆ ತೋರುವ ದೇವ-ದೇವಿಯರೇ ಎಂದು ಹೇಳಿ ಚೀರಾಡುತ್ತಿದ್ದಾರೆ. ಸಮಯದ ಕೂಗು ಕೇಳಿ ಬರುತ್ತಿದೆಯಲ್ಲವೆ! ಮತ್ತು ಕೊಡುವುದಕ್ಕೂ ಸಹ ಇದೇ ಸಮಯವಾಗಿದೆ. ಈಗ ಬಿಟ್ಟರೆ ಮತ್ತೆ ಯಾವಾಗ ಕೊಡುತ್ತೀರಿ? ಇಷ್ಟು ಅಖೂಟ-ಅಖಂಡ ಖಜಾನೆಗಳು ಯಾವುದು ತಮ್ಮ ಬಳಿ ಜಮಾ ಆಗಿದೆಯೋ ಅದನ್ನು ಯಾವಾಗ ಕೊಡುವಿರಿ? ಅಂತಿಮ ಸಮಯದಲ್ಲಿ ಕೊಡುವಿರಾ? ಆ ಸಮಯದಲ್ಲಿ ಕೇವಲ ನೀವು ಅಂಚಲಿಯನ್ನಷ್ಟೇ (ಸಾಗರದಲ್ಲಿ ಭೊಗಸೆಯಷ್ಟು ಮಾತ್ರ) ಕೊಡಬಲ್ಲಿರಿ. ಅಂದಮೇಲೆ ತಮ್ಮ ಬಳಿ ಜಮಾ ಆಗಿರುವ ಖಜಾನೆಗಳನ್ನು ಯಾವಾಗ ಕಾರ್ಯದಲ್ಲಿ ತೊಡಗಿಸುತ್ತೀರಿ? ಪರಿಶೀಲನೆ ಮಾಡಿಕೊಳ್ಳಿ - ಪ್ರತೀ ಸಮಯ ಯಾವುದಾದರೊಂದು ಖಜಾನೆಯನ್ನು ಸಫಲ ಮಾಡಿಕೊಳ್ಳುತ್ತಿದ್ದೇನೆಯೇ! ಇದರಲ್ಲಿ ಡಬಲ್ ಲಾಭವಿದೆ. ಖಜಾನೆಯನ್ನು ಸಫಲ ಮಾಡುವುದರಿಂದ ಆತ್ಮರ ಕಲ್ಯಾಣವೂ ಆಗುವುದು ಮತ್ತು ಜೊತೆಯಲ್ಲಿ ತಾವೆಲ್ಲರೂ ಮಹಾದಾನಿಗಳಾಗುವ ಕಾರಣ ವಿಘ್ನ ವಿನಾಶಕರಾಗುತ್ತೀರಿ. ಸಮಸ್ಯಾ ಸ್ವರೂಪರಲ್ಲ, ಸಮಾಧಾನ ಸ್ವರೂಪರು ಸಹಜವಾಗಿ ಆಗಿ ಬಿಡುತ್ತೀರಿ. ಡಬಲ್ ಲಾಭವಿದೆ. ಇಂದು ಇದು ಬಂದಿತು, ನೆನ್ನೆ ಇದು ಬಂದಿತ್ತು. ಇಂದು ಇದಾಯಿತು, ನೆನ್ನೆ ಅದಾಯಿತು, ಇದೆಲ್ಲದರಿಂದ ವಿಘ್ನ ಮುಕ್ತರು, ಸಮಸ್ಯಾ ಮುಕ್ತರು ಸದಾಕಾಲಕ್ಕಾಗಿ ಆಗಿ ಬಿಡುತ್ತೀರಿ. ಈಗ ಸಮಸ್ಯೆಯ ಹಿಂದೆ ಯಾವ ಸಮಯ ಕೊಡುತ್ತೀರಿ, ಪರಿಶ್ರಮವನ್ನೂ ಪಡುತ್ತೀರಿ, ಕೆಲವೊಮ್ಮೆ ಉದಾಸರಾಗುತ್ತೀರಿ, ಕೆಲವೊಮ್ಮೆ ಉಲ್ಲಾಸದಲ್ಲಿ ಬರುತ್ತೀರೋ, ಇದೆಲ್ಲದರಿಂದ ಮುಕ್ತರಾಗುತ್ತೀರಿ ಏಕೆಂದರೆ ಬಾಪ್ದಾದಾರವರಿಗೂ ಸಹ ಮಕ್ಕಳ ಪರಿಶ್ರಮವು ಇಷ್ಟವಾಗುವುದಿಲ್ಲ. ಮಕ್ಕಳು ಪರಿಶ್ರಮ ಪಡುತ್ತಿರುವುದನ್ನು ಬಾಪ್ದಾದಾ ನೋಡಿದಾಗ ಮಕ್ಕಳ ಪರಿಶ್ರಮವನ್ನು ತಂದೆಯಿಂದ ನೋಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪರಿಶ್ರಮಮುಕ್ತ ಪುರುಷಾರ್ಥ ಮಾಡಬೇಕಾಗಿದೆ ಆದರೆ ಯಾವ ಪುರುಷಾರ್ಥ? ಇನ್ನೂ ತಮ್ಮ ಚಿಕ್ಕ-ಚಿಕ್ಕ ಸಮಸ್ಯೆಗಳಲ್ಲಿಯೇ ಪುರುಷಾರ್ಥಿಗಳಾಗಿರುತ್ತೀರಾ? ಈಗ ಅಖಂಡ ಮಹಾದಾನಿ, ಅಖಂಡ ಸಹಯೋಗಿಗಳಾಗುವ ಪುರುಷಾರ್ಥ ಮಾಡಿರಿ. ಬ್ರಾಹ್ಮಣರಲ್ಲಿ ಸಹಯೋಗಿಗಳಾಗಿ ಮತ್ತು ದುಃಖಿ ಆತ್ಮರು, ಬಾಯಾರಿರುವ ಆತ್ಮರಿಗೆ ಮಹಾದಾನಿಗಳಾಗಿರಿ. ಈಗ ಈ ಪುರುಷಾರ್ಥದ ಅವಶ್ಯಕತೆಯಿದೆ, ಎಲ್ಲರಿಗೂ ಇದು ಇಷ್ಟವಿದೆಯಲ್ಲವೇ? ಇಷ್ಟವಾಯಿತೇ! ಹಿಂದೆ ಕುಳಿತಿರುವವರಿಗೆ ಇಷ್ಟವಿದೆಯೇ! ಅಂದಮೇಲೆ ಏನಾದರೂ ಪರಿವರ್ತನೆಯನ್ನೂ ಮಾಡಿಕೊಳ್ಳಬೇಕಲ್ಲವೆ. ಅದೇ ಸ್ವ-ಪ್ರತಿ ಪುರುಷಾರ್ಥವನ್ನು ಬಹಳ ಸಮಯ ಮಾಡಿದಿರಿ, ಪಾಂಡವರೇ, ಹೇಗೆ? ಇಷ್ಟವಿದೆಯೇ? ಅಂದಮೇಲೆ ನಾಳೆಯಿಂದ ಏನು ಮಾಡುತ್ತೀರಿ? ನಾಳೆಯಿಂದಲೇ ಆರಂಭಿಸುತ್ತೀರೋ ಅಥವಾ ಈಗಿನಿಂದಲೇ ಮಾಡುತ್ತೀರೋ? ಈಗಿನಿಂದಲೇ ಸಂಕಲ್ಪ ಮಾಡಿರಿ - ನನ್ನ ಸಮಯ, ಸಂಕಲ್ಪ ವಿಶ್ವದ ಪ್ರತಿ, ವಿಶ್ವದ ಸೇವೆಯ ಪ್ರತಿಯಿರಲಿ. ಇದರಲ್ಲಿ ಸ್ವಯಂನ ಸೇವೆಯು ಸ್ವತಹ ಆಗಿ ಬಿಡುವುದು. ಉಳಿಯುವುದಿಲ್ಲ ಇನ್ನೂ ಹೆಚ್ಚುತ್ತದೆ. ಏಕೆ? ಯಾರ ಆಸೆಗಳನ್ನಾದರೂ ನೀವು ಪೂರ್ಣಗೊಳಿಸುತ್ತೀರಿ, ದುಃಖದ ಬದಲು ಸುಖ ನೀಡುತ್ತೀರಿ, ನಿರ್ಬಲ ಆತ್ಮರಿಗೆ ಶಕ್ತಿ ಕೊಡುತ್ತೀರಿ, ಗುಣ ಕೊಡುತ್ತೀರೆಂದರೆ ಅವರು ಎಷ್ಟೊಂದು ಆಶೀರ್ವಾದಗಳನ್ನು ಕೊಡುವರು! ಮತ್ತು ಎಲ್ಲರಿಂದ ಆಶೀರ್ವಾದಗಳನ್ನು ತೆಗೆದುಕೊಳ್ಳುವುದೇ ಮುಂದುವರೆಯಲು ಎಲ್ಲದಕ್ಕಿಂತ ಸಹಜ ಸಾಧನವಾಗಿದೆ. ಭಲೆ ಭಾಷಣ ಮಾಡಬೇಡಿ, ಹೆಚ್ಚು ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗದಿದ್ದರೆ ಭಲೆ ಮಾಡದಿದ್ದರೂ ಪರವಾಗಿಲ್ಲ. ಮಾಡುವುದಾದರೆ ಇನ್ನೂ ಹೆಚ್ಚಿನದಾಗಿ ಮಾಡಿರಿ, ಮಾಡಲು ಆಗದಿದ್ದರೂ ಪರವಾಗಿಲ್ಲ. ಆದರೆ ಖಜಾನೆಗಳನ್ನು ಸಫಲ ಮಾಡಿಕೊಳ್ಳಿ. ತಿಳಿಸಿದೆವಲ್ಲವೆ - ಮನಸ್ಸಿನಿಂದ ಶಕ್ತಿಗಳ ಖಜಾನೆಯನ್ನು ನೀಡುತ್ತಾ ಹೋಗಿರಿ, ವಾಣಿಯಿಂದ ಜ್ಞಾನದ ಖಜಾನೆ, ಕರ್ಮದಿಂದ ಗುಣಗಳ ಖಜಾನೆ ಮತ್ತು ಬುದ್ಧಿಯಿಂದ ಸಮಯದ ಖಜಾನೆ. ಸಂಬಂಧ-ಸಂಪರ್ಕದಿಂದ ಖುಷಿಯ ಖಜಾನೆಯನ್ನು ಸಫಲ ಮಾಡಿಕೊಳ್ಳಿ. ಸಫಲ ಮಾಡುವುದರಿಂದ ಸಹಜವಾಗಿ ಸಫಲತಾಮೂರ್ತಿಗಳಾಗುತ್ತೀರಿ, ಹಾರುತ್ತಾ ಇರುತ್ತೀರಿ ಏಕೆಂದರೆ ಆಶೀರ್ವಾದಗಳು ಒಂದು ಲಿಫ್ಟ್ನ ಕೆಲಸ ಮಾಡುತ್ತದೆ, ಮೆಟ್ಟಿಲಿನ ಕೆಲಸವಲ್ಲ. ಸಮಸ್ಯೆ ಬಂದಿತು, ಅದನ್ನು ದೂರ ಮಾಡಿದಿರಿ, ಅದರಲ್ಲಿ ಕೆಲವೊಮ್ಮೆ ಎರಡು ದಿನಗಳನ್ನು ಕಳೆದಿರಿ, ಕೆಲವೊಮ್ಮೆ ಎರಡು ಗಂಟೆಗಳನ್ನು ತೊಡಗಿಸಿದಿರಿ ಎಂದರೆ ಇದು ಮೆಟ್ಟಿಲನ್ನು ಹತ್ತುವುದಾಗಿದೆ. ಆದ್ದರಿಂದ ಸಫಲ ಮಾಡಿಕೊಳ್ಳಿ, ಸಫಲತಾಮೂರ್ತಿಗಳಾಗಿ ಆಗ ಲಿಫ್ಟ್ನಲ್ಲಿ ಸೆಕೆಂಡಿನಲ್ಲಿ ಎಲ್ಲಿಗೆ ಬೇಕೋ ತಲುಪಿ ಬಿಡುತ್ತೀರಿ. ಸೂಕ್ಷ್ಮವತನಕ್ಕಾದರೂ ತಲುಪಿರಿ, ಪರಂಧಾಮಕ್ಕಾದರೂ ತಲುಪಿರಿ, ಸೆಕೆಂಡಿನಲ್ಲಿ ತಮ್ಮ ರಾಜ್ಯದಲ್ಲಾದರೂ ತಲುಪಿರಿ. ಲಂಡನ್ನಿನಲ್ಲಿ ಒಂದು ನಿಮಿಷಕ್ಕಾಗಿ ಎಂಬ ಕಾರ್ಯಕ್ರಮ ಮಾಡಿದರಲ್ಲವೆ. ಬಾಪ್ದಾದಾರವರಂತೂ ಒಂದು ಸೆಕೆಂಡ್ ಎಂದು ಹೇಳುತ್ತೇವೆ. ಒಂದು ಸೆಕೆಂಡಿನಲ್ಲಿ ಆಶೀರ್ವಾದದ ಲಿಫ್ಟ್ನಲ್ಲಿ ಹತ್ತಿಬಿಡಿ, ಕೇವಲ ಸ್ಮೃತಿಯ ಸ್ವಿಚ್ನ್ನು ಒತ್ತಿದರೆ ಸಾಕು. ಪರಿಶ್ರಮ ಮುಕ್ತರಾಗುವಿರಿ.

ಅಂದಾಗ ಬಾಪ್ದಾದಾ ಇಂದು ಡಬಲ್ ವಿದೇಶಿಯರ ದಿನವಾಗಿರುವ ಕಾರಣ ಮೊದಲು ಡಬಲ್ ವಿದೇಶಿಯರನ್ನು ಯಾವ ಸ್ವರೂಪದಲ್ಲಿ ನೋಡಲು ಬಯಸುತ್ತೇವೆ? ಪರಿಶ್ರಮ ಮುಕ್ತರು, ಸಫಲತಾ ಮೂರ್ತಿಗಳು, ಆಶೀರ್ವಾದಕ್ಕೆ ಪಾತ್ರರು. ಆಗುತ್ತೀರಲ್ಲವೆ? ಏಕೆಂದರೆ ಡಬಲ್ ವಿದೇಶಿಯರಿಗೆ ತಂದೆಯೊಂದಿಗೆ ಬಹಳ ಪ್ರೀತಿಯಿದೆ. ಪ್ರೀತಿಯು ಚೆನ್ನಾಗಿದೆ ಆದರೆ ಶಕ್ತಿ ಬೇಕಾಗಿದೆ. ಚಮತ್ಕಾರವನ್ನಂತೂ ಮಾಡಿದ್ದೀರಲ್ಲವೇ? ನೋಡಿ, 90 ದೇಶಗಳಿಂದ ವಿಭಿನ್ನ ದೇಶ, ವಿಭಿನ್ನ ರೀತಿ-ನೀತಿಗಳಿದ್ದರೂ ಸಹ ಐದೂ ಖಂಡಗಳಿಂದ ಸೇರಿ ಒಂದು ಚಂದನದ ವೃಕ್ಷವಾಗಿ ಬಿಟ್ಟಿದ್ದೀರಿ. ಒಂದು ವೃಕ್ಷದಲ್ಲಿ ಬಂದು ಬಿಟ್ಟಿದ್ದೀರಿ, ಒಂದೇ ಬ್ರಾಹ್ಮಣ ಸಂಸ್ಕೃತಿಯಾಯಿತು. ಈಗ ನಮ್ಮದು ಆಂಗ್ಲ ಸಂಸ್ಕೃತಿ ಎಂಬುದು ಇಲ್ಲ ಅಲ್ಲವೆ! ಬ್ರಾಹ್ಮಣ ಸಂಸ್ಕೃತಿಯಲ್ಲವೆ! ಈಗ ನಮ್ಮದು ಬ್ರಾಹ್ಮಣ ಸಂಸ್ಕೃತಿಯೆಂದು ತಿಳಿದುಕೊಳ್ಳುವವರು ಕೈಯನ್ನೆತ್ತಿರಿ. ಬ್ರಾಹ್ಮಣ ಸಂಸ್ಕೃತಿಯಾಗಿದೆ, ಮತ್ತ್ಯಾವುದೇ ಅಡಿಷನ್ ಇಲ್ಲ, ಒಂದಾಗಿ ಬಿಟ್ಟಿದ್ದೀರಲ್ಲವೇ! ಎಲ್ಲರೂ ಒಂದು ವೃಕ್ಷದವರಾಗಿ ಬಿಟ್ಟಿರಿ, ಇದಕ್ಕಾಗಿ ಬಾಪ್ದಾದಾ ಶುಭಾಷಯಗಳನ್ನು ನೀಡುತ್ತಿದ್ದೇವೆ. ಎಷ್ಟು ಚೆನ್ನಾಗಿದೆ! ಯಾರೊಂದಿಗಾದರೂ ಕೇಳಿರಿ, ಅಮೇರಿಕಾದವರೊಂದಿಗೆ, ಯುರೋಪಿನವರೊಂದಿಗೆ, ತಾವು ಯಾರು ಎಂದು ಯಾರೊಂದಿಗಾದರೂ ಕೇಳಿರಿ, ಏನು ಹೇಳುತ್ತಾರೆ? ಬ್ರಾಹ್ಮಣರೆಂದೇ ಹೇಳುತ್ತಾರಲ್ಲವೆ! ನಾವು ಇಂಗ್ಲೆಂಡಿನವರು, ಆಫ್ರಿಕನ್ನರು, ಅಮೇರಿಕನ್ನರು ಎಂದು ಹೇಳುವುದಿಲ್ಲ. ಎಲ್ಲರೂ ಒಂದು ಬ್ರಾಹ್ಮಣ ಪರಿವಾರದವರಾದಿರಿ. ಏಕಮತವಾಗಿ ಬಿಟ್ಟಿತು. ಬ್ರಾಹ್ಮಣರು ಒಂದು ಸ್ವರೂಪದವರಾಗಿದಿರಿ ಮತ್ತು ಏಕಮತ ಶ್ರೀಮತವಾಯಿತು. ಇದರಲ್ಲಿ ಮಜಾ ಬರುತ್ತದೆಯಲ್ಲವೆ. ಮಜಾ ಇದೆಯೇ? ಅಥವಾ ಪರಿಶ್ರಮವಿದೆಯೇ? ಪರಿಶ್ರಮವಂತೂ ಇಲ್ಲ ತಾನೆ? ತಲೆ ಅಲುಗಾಡಿಸುತ್ತಿದ್ದಾರೆ. ಒಳ್ಳೆಯದು.

ಬಾಪ್ದಾದಾ ಸೇವೆಯಲ್ಲಿ ಯಾವ ನವೀನತೆಯನ್ನು ಬಯಸುತ್ತೇವೆ? ಯಾವುದೆಲ್ಲಾ ಸೇವೆ ಮಾಡುತ್ತಿದ್ದೀರೋ ಬಹಳ-ಬಹಳ-ಬಹಳ ಚೆನ್ನಾಗಿ ಮಾಡುತ್ತಿದ್ದೀರಿ ಆದ್ದರಿಂದ ಶುಭಾಷಯಗಳು ಆದರೆ ಮುಂದೆ ಇನ್ನೇನು ಮಾಡಬೇಕಾಗಿದೆ? ತಮ್ಮೆಲ್ಲರ ಮನಸ್ಸಿನಲ್ಲಿ ಯಾವುದಾದರೂ ನವೀನತೆ ಬೇಕೆಂದು ಸಂಕಲ್ಪವಿದೆಯಲ್ಲವೆ? ಆದ್ದರಿಂದ ಬಾಪ್ದಾದಾ ನೋಡಿದೆವು, ಯಾವುದೆಲ್ಲಾ ಕಾರ್ಯಕ್ರಮಗಳನ್ನು ಮಾಡಿದ್ದೀರಿ, ಸಮಯವನ್ನೂ ಕೊಟ್ಟಿದ್ದೀರಿ ಮತ್ತು ಪ್ರೀತಿಯಿಂದಲೇ ಮಾಡಿದ್ದೀರಿ, ಪ್ರೀತಿಯಿಂದಲೇ ಪರಿಶ್ರಮ ಪಟ್ಟಿದ್ದೀರಿ ಮತ್ತು ಒಂದುವೇಳೆ ಸ್ಥೂಲ ಧನವನ್ನು ತೊಡಗಿಸಿದ್ದರೂ ಸಹ ಅದು ಪದಮದಷ್ಟು ಆಗಿ ತಮ್ಮ ಪರಮಾತ್ಮ ಬ್ಯಾಂಕಿನಲ್ಲಿ ಜಮಾ ಆಗಿ ಬಿಟ್ಟಿದೆ. ಅಂದಮೇಲೆ ನೀವು ತೊಡಗಿಸಲಿಲ್ಲ, ಜಮಾ ಮಾಡಿಕೊಂಡಿರಿ. ಫಲಿತಾಂಶದಲ್ಲಿ ಏನು ನೋಡಿದೆವೆಂದರೆ ಸಂದೇಶವನ್ನು ತಲುಪಿಸುವ ಕಾರ್ಯ, ಪರಿಚಯ ಕೊಡುವ ಕಾರ್ಯವನ್ನು ಎಲ್ಲರೂ ಬಹಳ ಚೆನ್ನಾಗಿ ಮಾಡಿದ್ದೀರಿ. ಭಲೆ ಎಲ್ಲಿಯಾದರೂ ಮಾಡಿರಬಹುದು, ಈಗ ದೆಹಲಿಯಲ್ಲಿಯೂ ಆಗುತ್ತಿದೆ, ಲಂಡನ್ನಿನಲ್ಲಿಯೂ ಆಯಿತು ಮತ್ತು ಬಾಪ್ದಾದಾರವರಿಗೆ ಡಬಲ್ ವಿದೇಶಿಯರು ಸಮಯದ ಕೂಗು, ಪೀಸ್ ಆಫ್ ಮೈಂಡ್ ಇವೆಲ್ಲಾ ಯಾವ ಕಾರ್ಯಕ್ರಮಗಳನ್ನು ಮಾಡಿದ್ದೀರೋ ಅದೆಲ್ಲವೂ ಬಹಳ ಇಷ್ಟವಾಗಿದೆ. ಮತ್ತ್ಯಾವುದೆಲ್ಲಾ ಮಾಡಲು ಸಾಧ್ಯವೋ ಮಾಡುತ್ತಾ ಇರಿ ಆದರೆ ಆಗುವುದೇನೆಂದರೆ ಸಂದೇಶವು ಸಿಗುತ್ತದೆ, ಸ್ನೇಹಿಗಳೂ ಆಗುತ್ತಾರೆ, ಸಹಯೋಗಿಗಳೂ ಆಗುತ್ತಾರೆ. ಕೆಲಕೆಲವರು ಸಂಬಂಧದಲ್ಲಿಯೂ ಬರುತ್ತಾರೆ ಆದರೆ ಈಗ ಈ ಅಡಿಷನ್ ಮಾಡಬೇಕಾಗಿದೆ - ಯಾವುದೇ ದೊಡ್ಡ ಕಾರ್ಯಕ್ರಮವನ್ನು ಮಾಡುತ್ತೀರೆಂದರೆ ಅದರಲ್ಲಿ ಸಂದೇಶವಂತೂ ಸಿಗುತ್ತದೆ. ಅದರ ಜೊತೆಗೆ ಏನಾದರೂ ಅನುಭವ ಮಾಡಿಹೋಗಲಿ ಏಕೆಂದರೆ ಅನುಭವವು ಬಹು ಬೇಗನೆ ಮುಂದುವರೆಸುತ್ತದೆ. ಹೇಗೆ ಈ ಕಾಲ್ ಆಫ್ ಟೈಮ್ ಅಥವಾ ಪೀಸ್ ಆಫ್ ಮೈಂಡ್ ಕಾರ್ಯಕ್ರಮದಲ್ಲಿ ಸ್ವಲ್ಪ ಹೆಚ್ಚು ಅನುಭವ ಮಾಡುತ್ತಾರೆ ಆದರೆ ಯಾವ ದೊಡ್ಡ ಕಾರ್ಯಕ್ರಮಗಳು ನಡೆಯುತ್ತವೆಯೋ ಅದರಲ್ಲಿ ಸಂದೇಶವಂತೂ ಚೆನ್ನಾಗಿ ಸಿಗುತ್ತದೆ ಆದರೆ ಯಾರೇ ಬಂದರೂ ಸಹ ಅವರು ಇದನ್ನು ಬಿಡದೆ ಏನನ್ನಾದರೂ ಅನುಭವ ಮಾಡಲಿ ಏಕೆಂದರೆ ಅನುಭವವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಅನುಭವವು ಬಯಸದಿದ್ದರೂ ತನ್ನ ಕಡೆ ಸೆಳೆಯುತ್ತದೆ ಆದ್ದರಿಂದ ಮೊದಲು ಬಾಪ್ದಾದಾ ಹೇಳುವುದೇನೆಂದರೆ ಯಾರೆಲ್ಲಾ ಬ್ರಾಹ್ಮಣರಿದ್ದೀರೋ ಎಲ್ಲರೂ ಸ್ವಯಂ ಎಲ್ಲಾ ಜ್ಞಾನದ ಮಾತುಗಳಲ್ಲಿ ಅನುಭವಿಗಳಾಗಿದ್ದೀರಾ? ಪ್ರತೀ ಶಕ್ತಿಯ ಅನುಭವ ಮಾಡಿದ್ದೀರಾ? ಪ್ರತೀ ಗುಣದ ಅನುಭವ ಮಾಡಿದ್ದೀರಾ? ಆತ್ಮಿಕ ಸ್ಥಿತಿಯ ಅನುಭವ ಮಾಡಿದ್ದೀರಾ? ಪರಮಾತ್ಮ ಪ್ರೀತಿಯ ಅನುಭವ ಮಾಡಿದ್ದೀರಾ? ಜ್ಞಾನವನ್ನು ತಿಳಿದುಕೊಳ್ಳುವುದರಲ್ಲಿ ಎಲ್ಲರೂ ಪಾಸಾಗಿದ್ದೀರಿ. ಜ್ಞಾನಪೂರ್ಣರಾಗಿ ಬಿಟ್ಟಿದ್ದೀರಿ, ಇದರಲ್ಲಿ ಬಾಪ್ದಾದಾ ಸಹ ಸರಿಯೆಂದು ಒಪ್ಪಿಕೊಳ್ಳುತ್ತೇವೆ. ಆತ್ಮವೆಂದರೇನು, ಪರಮಾತ್ಮ ಯಾರು? ಸೃಷ್ಟಿ ನಾಟಕವೆಂದರೇನು? ಎಂಬ ಜ್ಞಾನವನ್ನಂತೂ ಅರ್ಥ ಮಾಡಿಕೊಂಡಿದ್ದೀರಿ ಆದರೆ ಯಾವಾಗ ಬೇಕೋ, ಎಷ್ಟು ಸಮಯ ಬೇಕೋ, ಎಂತಹುದೇ ಪರಿಸ್ಥಿತಿಯಲ್ಲಿರಲಿ, ಆ ಪರಿಸ್ಥಿತಿಯಲ್ಲಿಯೂ ಆತ್ಮಿಕ ಬಲದ ಅನುಭವವಾಗಲಿ, ಪರಮಾತ್ಮ ಶಕ್ತಿಯ ಅನುಭವವಾಗಲಿ, ಇದು ಆಗುತ್ತಿದೆಯೇ? ಯಾವಾಗ ಬೇಕೋ, ಎಷ್ಟು ಸಮಯ ಬೇಕೋ, ಎಂತಹ ಅನುಭವ ಮಾಡಬೇಕೋ ಅದೇರೀತಿ ಅನುಭವ ಆಗುತ್ತದೆಯೇ ಅಥವಾ ಕೆಲಕೆಲವೊಮ್ಮೆ ಕೆಲಕೆಲವೊಂದು ರೀತಿಯಲ್ಲಿ ಆಗುತ್ತದೆಯೋ? ನಾನು ಆತ್ಮನಾಗಿದ್ದೇನೆ ಎಂದುಕೊಳ್ಳುತ್ತೀರಿ, ಆದರೆ ಪದೇಪದೇ ದೇಹಭಾನವು ಬರುತ್ತಿದ್ದರೆ ಅನುಭವವು ಕೆಲಸಕ್ಕೆ ಬಂದಂತಾಯಿತೇ? ಅನುಭವೀ ಮೂರ್ತಿಗಳೆಂದರೆ ಪ್ರತಿ ಸಬ್ಜೆಕ್ಟ್ನಲ್ಲಿ ಅನುಭವೀ ಮೂರ್ತಿಗಳು, ಪ್ರತಿಯೊಂದು ಶಕ್ತಿಯ ಅನುಭವೀ ಮೂರ್ತಿಗಳಾಗಿರಿ ಆದ್ದರಿಂದ ಸ್ವಯಂನಲ್ಲಿಯೂ ಅನುಭವವನ್ನು ಹೆಚ್ಚಿಸಿಕೊಳ್ಳಿ. ಕೆಲಕೆಲವೊಮ್ಮೆ ಆಗುತ್ತದೆ ಎಂದಲ್ಲ. ಬಾಪ್ದಾದಾ ಕೆಲವೊಮ್ಮೆ (ಸಮ್ಟೈಮ್) ಎಂಬ ಶಬ್ಧವನ್ನು ಇಷ್ಟ ಪಡುವುದಿಲ್ಲ. ಸಮ್ತಿಂಗ್ ಆಗಿ ಬಿಟ್ಟರೆ ಸಮ್ಟೈಮ್ ಆಗಿ ಬಿಡುತ್ತದೆ ಏಕೆಂದರೆ ತಮ್ಮೆಲ್ಲರ ಲಕ್ಷ್ಯವಾಗಿದೆ- ಏನಾಗುವ ಲಕ್ಷ್ಯವಿದೆಯೆಂದು ಕೇಳಿದರೆ ಏನು ಹೇಳುತ್ತೀರಿ? ತಂದೆಯ ಸಮಾನರು. ಎಲ್ಲರೂ ಒಂದೇ ಉತ್ತರವನ್ನು ಕೊಡುತ್ತೀರಿ. ತಂದೆಯ ಸಮಾನರು ಅಂದಮೇಲೆ ತಂದೆಯು ಸಮ್ತಿಂಗ್ ಮತ್ತು ಸಮ್ಟೈಮ್ ಆಗಿರಲಿಲ್ಲ, ಬ್ರಹ್ಮಾ ತಂದೆಯು ಸದಾ ರಹಸ್ಯಯುಕ್ತ, ಯೋಗಯುಕ್ತ, ಪ್ರತೀ ಶಕ್ತಿಯಲ್ಲಿ ಸದಾ ಇದ್ದರು. ಕೆಲಕೆಲವೊಮ್ಮೆ ಅಲ್ಲ. ಅನುಭವ ಆಗಿರುವುದು ಸದಾಕಾಲ ನಡೆಯುತ್ತದೆ ಕೆಲವೊಮ್ಮೆ ಅಲ್ಲ. ಅಂದಮೇಲೆ ಸ್ವಯಂ ಅನುಭವೀ ಮೂರ್ತಿಯಾಗಿ ಪ್ರತೀ ಮಾತಿನಲ್ಲಿ, ಪ್ರತಿ ಸಬ್ಜೆಕ್ಟ್ನಲ್ಲಿ ಅನುಭವಿ, ಜ್ಞಾನ ಸ್ವರೂಪದಲ್ಲಿ ಅನುಭವಿ, ಯೋಗಯುಕ್ತದಲ್ಲಿ ಅನುಭವಿ, ಧಾರಣಾ ಸ್ವರೂಪದಲ್ಲಿ ಅನುಭವಿಗಳಾಗಿರಿ. ಆಲ್ರೌಂಡ್ ಸೇವೆ ಮನಸ್ಸಾ-ವಾಚಾ-ಕರ್ಮಣಾ, ಸಂಬಂಧ-ಸಂಪರ್ಕ ಎಲ್ಲದರಲ್ಲಿ ಅನುಭವಿ ಆಗಿರಿ ಆಗ ಪಾಸ್-ವಿತ್-ಆನರ್ ಎಂದು ಹೇಳಲಾಗುತ್ತದೆ ಅಂದಾಗ ಏನಾಗಲು ಬಯಸುತ್ತೀರಿ? ಪಾಸ್ ಆಗುತ್ತೀರೋ ಅಥವಾ ಪಾಸ್-ವಿತ್-ಆನರ್ ಆಗಲು ಬಯಸುತ್ತೀರೋ? ಪಾಸ್ ಆಗುವವರಂತೂ ಕೊನೆಯಲ್ಲಿಯೂ ಬರುತ್ತಾರೆ. ತಾವಂತೂ ಟೂಲೇಟ್ ಆಗುವ ಮೊದಲೇ ಬಂದುಬಿಟ್ಟಿದ್ದೀರಿ. ಭಲೆ ಈಗ ಹೊಸಬರೂ ಬಂದಿರಬಹುದು ಆದರೆ ಇನ್ನೂ ಟೂಲೇಟ್ ಬೋರ್ಡ್ ಹಾಕಿಲ್ಲ. ಲೇಟ್ನ ಬೋರ್ಡ್ನ್ನು ಹಾಕಿದೆ, ಟೂಲೇಟ್ನ ಬೋರ್ಡ್ ಹಾಕಿಲ್ಲ ಆದ್ದರಿಂದ ಯಾರಾದರೂ ಹೊಸಬರಿದ್ದರೂ ಸಹ ಈಗಲೂ ತೀವ್ರ ಪುರುಷಾರ್ಥ ಮಾಡಿರಿ. ಕೇವಲ ಪುರುಷಾರ್ಥವಲ್ಲ, ತೀವ್ರ ಪುರುಷಾರ್ಥ. ಇದರಿಂದ ಮುಂದೆ ಹೋಗಬಹುದು ಏಕೆಂದರೆ ಇನ್ನೂ ನಂಬರ್ ಔಟ್ ಆಗಿಲ್ಲ. ಕೇವಲ ಎರಡು ನಂಬರ್ಗಳು ಔಟ್ ಆಗಿದೆ - ಬಾಬಾ ಮತ್ತು ಮಮ್ಮಾ. ಈಗಿನ್ನೂ ಯಾವುದೇ ಸಹೋದರ-ಸಹೋದರಿಯರದು ಮೂರನೇ ನಂಬರ್ ಔಟ್ ಆಗಿಲ್ಲ. ಭಲೆ ತಾವು ಹೇಳುತ್ತೀರಿ -ದಾದಿಯರೊಂದಿಗೆ ಬಹಳ ಪ್ರೀತಿಯಿದೆ ಎಂದು, ತಂದೆಗೂ ದಾದಿಯರೊಂದಿಗೆ ಬಹಳ ಪ್ರೀತಿಯಿದೆ ಆದರೆ ಇನ್ನೂ ನಂಬರ್ ಔಟ್ ಮಾಡಿಲ್ಲ, ಆದ್ದರಿಂದ ತಾವು ಬಹಳ-ಬಹಳ ಅಗಲಿ ಹೋಗಿ ಮರಳಿ ಮಿಲನ ಮಾಡಿದ್ದೀರಿ, ಮುದ್ದು ಮಕ್ಕಳು ಭಾಗ್ಯವಂತರಾಗಿದ್ದೀರಿ, ಎಷ್ಟು ಹಾರಲು ಬಯಸುತ್ತೀರೋ ಅಷ್ಟು ಹಾರಿ ಏಕೆಂದರೆ ನೋಡಿ, ಚಿಕ್ಕ ಮಕ್ಕಳನ್ನು ತಂದೆಯು ತಮ್ಮ ಕೈ ಕೊಟ್ಟು ನಡೆಸುತ್ತಾರೆ, ಹೆಚ್ಚು ಪ್ರೀತಿ ಮಾಡುತ್ತಾರೆ ಮತ್ತು ದೊಡ್ಡವರನ್ನು ಕೈ ಹಿಡಿದು ನಡೆಸುವುದಿಲ್ಲ, ಅವರು ತಮ್ಮ ಕಾಲಿನಿಂದ ನಡೆಯುತ್ತಾರೆ ಆದ್ದರಿಂದ ಇಲ್ಲಿ ಹೊಸಬರೂ ಸಹ ಮುಂದೆ ಹೋಗಬಹುದು. ಸುವರ್ಣಾವಕಾಶವಿದೆ. ಆದರೆ ಈಗ ಅತಿ ಶೀಘ್ರದಲ್ಲಿಯೇ ಟೂಲೇಟ್ ಬೋರ್ಡ್ ಹಾಕಲ್ಪಡುವುದು ಆದ್ದರಿಂದ ಮೊದಲೇ ಪುರುಷಾರ್ಥ ಮಾಡಿರಿ. ಯಾರೆಲ್ಲಾ ಹೊಸಬರು ಮೊದಲ ಬಾರಿ ಬಂದಿದ್ದೀರೋ ಅವರು ಕೈಯೆತ್ತಿರಿ. ಒಳ್ಳೆಯದು - ಶುಭಾಷಯಗಳು. ಮೊದಲ ಬಾರಿ ತಮ್ಮ ಮನೆಯಾದ ಮಧುಬನಕ್ಕೆ ಬಂದಿದ್ದೀರಿ, ಆದ್ದರಿಂದ ಬಾಪ್ದಾದಾ ಮತ್ತು ದೇಶ-ವಿದೇಶದವರ ಎಲ್ಲರ ಕಡೆಯಿಂದ ಪದಮಾ ಪದಮದಷ್ಟು ಶುಭಾಷಯಗಳು.

ಒಳ್ಳೆಯದು - ಈಗ ಸೆಕೆಂಡಿನಲ್ಲಿ ಯಾವ ಸ್ಥಿತಿಯಲ್ಲಿರಲು ಬಾಪ್ದಾದಾ ಸೂಚನೆ ನೀಡುವೆವೋ ಅದೇ ಸ್ಥಿತಿಯಲ್ಲಿ ಸೆಕೆಂಡಿನಲ್ಲಿ ತಲುಪುವಿರೋ ಅಥವಾ ಪುರುಷಾರ್ಥದಲ್ಲಿ ಸಮಯವು ಹೊರಟು ಹೋಗುವುದೋ? ಈಗ ಸೆಕೆಂಡಿನ ಅಭ್ಯಾಸ ಬೇಕಾಗಿದೆ ಏಕೆಂದರೆ ಮುಂದೆ ಯಾವ ಅಂತಿಮ ಸಮಯ ಬರಲಿದೆಯೋ ಅದರಲ್ಲಿ ಪಾಸ್-ವಿತ್-ಆನರ್ನ ಸರ್ಟಿಫಿಕೇಟ್ ಸಿಗಬೇಕಾಗಿದೆ. ಅದಕ್ಕಾಗಿ ಈಗಿನಿಂದಲೇ ಅಭ್ಯಾಸ ಮಾಡಬೇಕಾಗಿದೆ. ಸೆಕೆಂಡಿನಲ್ಲಿ ಎಲ್ಲಿ ಬೇಕೋ ಯಾವ ಸ್ಥಿತಿ ಬೇಕೋ ಆ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡಬೇಕು. ಅಂದಾಗ ಎವರೆಡಿ, ರೆಡಿಯಾಗಿ ಬಿಟ್ಟಿರಾ!

ಈಗ ಮೊದಲು ಒಂದು ಸೆಕೆಂಡಿನಲ್ಲಿ ಪುರುಷೋತ್ತಮ ಸಂಗಮಯುಗೀ ಶ್ರೇಷ್ಠ ಬ್ರಾಹ್ಮಣನಾಗಿದ್ದೇನೆ, ಈ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡಿ...., ಈಗ ನಾನು ಫರಿಶ್ತಾ ರೂಪವಾಗಿದ್ದೇನೆ, ಡಬಲ್ಲೈಟ್ ಆಗಿದ್ದೇನೆ.... ಈಗ ವಿಶ್ವ ಕಲ್ಯಾಣಕಾರಿಯಾಗಿ ಮನಸ್ಸಿನ ಮೂಲಕ ನಾಲ್ಕಾರು ಕಡೆ ಶಕ್ತಿಯ ಕಿರಣಗಳನ್ನು ಕೊಡುವ ಅನುಭವ ಮಾಡಿರಿ. ಹೀಗೆ ಇಡೀ ದಿನದಲ್ಲಿ ಸೆಕೆಂಡಿನಲ್ಲಿ ಸ್ಥಿತರಾಗಲು ಸಾಧ್ಯತೆಯಿದೆಯೇ! ಇದರ ಅನುಭವವನ್ನು ಮಾಡುತ್ತಾ ಇರಿ, ಏಕೆಂದರೆ ಆಕಸ್ಮಿಕವಾಗಿ ಏನು ಬೇಕಾದರೂ ಆಗಬಹುದು. ಹೆಚ್ಚು ಸಮಯ ಸಿಗುವುದಿಲ್ಲ. ಏರುಪೇರಿನಲ್ಲಿಯೂ ಸೆಕೆಂಡಿನಲ್ಲಿ ಅಚಲರಾಗಬೇಕು. ಇದರ ಅಭ್ಯಾಸವನ್ನೂ ಸ್ವಯಂ ತನ್ನ ಸಮಯವನ್ನು ತೆಗೆದು ಮಧ್ಯ-ಮಧ್ಯದಲ್ಲಿ ಮಾಡುತ್ತಾ ಇರಿ. ಇದರಿಂದ ಸಹಜವಾಗಿ ಮನಸ್ಸಿನ ನಿಯಂತ್ರಣವಾಗಿ ಬಿಡುವುದು. ಕಂಟ್ರೋಲಿಂಗ್ ಫವರ್, ರೂಲಿಂಗ್ ಫವರ್ ಹೆಚ್ಚುತ್ತಾ ಹೋಗುವುದು. ಒಳ್ಳೆಯದು.

ನಾಲ್ಕಾರು ಕಡೆಯ ಮಕ್ಕಳ ಬಹಳಷ್ಟು ಪತ್ರಗಳು ಬಂದಿವೆ, ಬಹಳಷ್ಟು ಅನುಭವದ ಪತ್ರಗಳೂ ಬಂದಿವೆ. ಬಾಪ್ದಾದಾ ಮಕ್ಕಳಿಗೆ ರಿಟರ್ನ್ ಆಗಿ ಬಹಳ-ಬಹಳ ಹೃದಯದ ಆಶೀರ್ವಾದಗಳು ಮತ್ತು ಹೃದಯದ ಪದಮಾಪದಮದಷ್ಟು ನೆನಪು-ಪ್ರೀತಿಯನ್ನು ಕೊಡುತ್ತಿದ್ದೇವೆ. ಬಾಪ್ದಾದಾ ನೋಡುತ್ತಿದ್ದೇವೆ- ನಾಲ್ಕಾರು ಕಡೆಯ ಮಕ್ಕಳು ಕೇಳುತ್ತಿದ್ದಾರೆ, ನೋಡುತ್ತಲೂ ಇದ್ದಾರೆ. ಯಾರು ನೋಡುತ್ತಿಲ್ಲವೋ ಅವರೂ ಸಹ ನೆನಪಿನಲ್ಲಂತೂ ಇದ್ದಾರೆ, ಎಲ್ಲರ ಬುದ್ಧಿಯು ಈ ಸಮಯದಲ್ಲಿ ಮಧುಬನದಲ್ಲಿಯೇ ಇದೆ ಅಂದಾಗ ನಾಲ್ಕಾರು ಕಡೆಯ ಪ್ರತಿಯೊಬ್ಬ ಮಗು ಹೆಸರಿನ ಸಹಿತವಾಗಿ ನೆನಪು-ಪ್ರೀತಿಯನ್ನು ಸ್ವೀಕಾರ ಮಾಡಿರಿ.

ಎಲ್ಲಾ ಸದಾ ಉಮ್ಮಂಗ-ಉತ್ಸಾಹದ ರೆಕ್ಕೆಗಳ ಮೂಲಕ ಶ್ರೇಷ್ಠ ಸ್ಥಿತಿಯಲ್ಲಿ ಹಾರುತ್ತಾ ಇರುವ ಶ್ರೇಷ್ಠ ಆತ್ಮರಿಗೆ, ಸದಾ ಸ್ನೇಹದಲ್ಲಿ ಲವಲೀನರಾಗಿರುವಂತಹ ಸಮಾವೇಶವಾಗಿರುವ ಮಕ್ಕಳಿಗೆ, ಸದಾ ಪರಿಶ್ರಮಮುಕ್ತ-ಸಮಸ್ಯಾಮುಕ್ತ-ವಿಘ್ನಮುಕ್ತ-ಯೋಗಯುಕ್ತ, ರಹಸ್ಯಯುಕ್ತ ಮಕ್ಕಳಿಗೆ, ಸದಾ ಪ್ರತೀ ಪರಿಸ್ಥಿತಿಯಲ್ಲಿ ಸೆಕೆಂಡಿನಲ್ಲಿ ತೇರ್ಗಡೆಯಾಗುವಂತಹ, ಪ್ರತೀ ಸಮಯ ಸರ್ವಶಕ್ತಿ ಸ್ವರೂಪರಾಗಿರುವಂತಹ ಮಾll ಸರ್ವಶಕ್ತಿವಂತ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ವರದಾನ:
ಗೋಲ್ಡನ್ ಏಜ್ಡ್ ಸ್ವಭಾವದ ಮೂಲಕ ಗೋಲ್ಡನ್ ಏಜ್ಡ್ ಸೇವೆ ಮಾಡುವಂತಹ ಶ್ರೇಷ್ಠ ಪುರುಷಾರ್ಥಿ ಭವ.

ಯಾವ ಮಕ್ಕಳ ಸ್ವಭಾವದಲ್ಲಿ ಈರ್ಷ್ಯೆ, ಸಿದ್ಧ ಮತ್ತು ಜಿದ್ಧು ಮಾಡುವ ಭಾವದ ಅಥವಾ ಯಾವುದೇ ಹಳೆಯ ಸಂಸ್ಕಾರದ ಅಲಾಯ್ ಮಿಕ್ಸ್ ಆಗಿರಲ್ಲ ಅವರಾಗಿದ್ದಾರೆ ಗೋಲ್ಡನ್ ಏಜ್ಡ್ ಸ್ವಭಾವದವರು. ಇಂತಹ ಗೋಲ್ಡನ್ ಏಜ್ಡ್ ಸ್ವಭಾವ ಮತ್ತು ಸದಾ ಹಾಂ! ಜೀ ಯ ಸಂಸ್ಕಾರ ಮಾಡಿಕೊಳ್ಳುವಂತಹವರು ಶ್ರೇಷ್ಠ ಪುರುಷಾರ್ಥಿ ಮಕ್ಕಳು ಎಂತಹ ಸಮಯ, ಎಂತಹ ಸೇವೆ ಹಾಗೆ ಸ್ವಯಂ ಅನ್ನು ಮೋಲ್ಡ್ ಮಾಡಿಕೊಂಡು ರಿಯಲ್ ಗೋಲ್ಡ್ ಆಗಿ ಬಿಡುತ್ತಾರೆ. ಸೇವೆಯಲ್ಲಿಯೂ ಸಹ ಅಭಿಮಾನ ಅಥವಾ ಅಪಮಾನದ ಅಲಾಯ್ ಮಿಕ್ಸ್ ಆಗಿರಬಾರದು ಆಗ ಹೇಳಲಾಗುವುದು ಗೋಲ್ಡನ್ ಏಜ್ಡ್ ಸೇವೆ ಮಾಡುವಂತಹವರು.

ಸ್ಲೋಗನ್:
ಏಕೆ?, ಏನು? ಎನ್ನುವ ಪ್ರಶ್ನೆಗಳನ್ನು ಸಮಾಪ್ತಿ ಮಾಡಿ ಸದಾ ಪ್ರಸನ್ನಚಿತ್ತರಾಗಿರಿ.

ಅವ್ಯಕ್ತ ಸೂಚನೆ:- ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.

ಲವಲೀನ ಸ್ಥಿತಿಯುಳ್ಳ ಸಮಾನ ಆತ್ಮರು ಸದಾ ಯೋಗಿಯಾಗಿದ್ದಾರೆ. ಯೋಗವನ್ನು ಜೋಡಿಸುವವರಲ್ಲ ಆದರೆ ಲವಲೀನರಾಗಿದ್ದಾರೆ. ಬೇರೆಯಾಗಿಲ್ಲವೆಂದಾಗ ಏನು ನೆನಪು ಮಾಡುವುದು. ಸ್ವತಃ ನೆನಪು ಇದ್ದೇ ಇದೆ. ಎಲ್ಲಿ ಜೊತೆಯಿರುತ್ತದೆ ಅಲ್ಲಿ ನೆನಪು ಸ್ವತಃ ಬರುತ್ತದೆ. ಸಮಾನ ಆತ್ಮಗಳ ಸ್ಟೇಜ್ ಜೊತೆಯಿರುವುದಾಗಿದೆ, ಸಮಾವೇಶವಾಗಿರುವಂತಹದ್ದಾಗಿದೆ.