10.09.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ-
ಮಾಯೆಯನ್ನು ವಶಪಡಿಸಿಕೊಳ್ಳುವ ಮಂತ್ರವಾಗಿದೆ- ಮನ್ಮನಾಭವ, ಇದೇ ಮಂತ್ರದಲ್ಲಿ ಎಲ್ಲಾ ವಿಶೇಷತೆಗಳು
ಸಮಾವೇಶವಾಗಿದೆ, ಇದೇ ಮಂತ್ರವು ನಿಮ್ಮ ಪವಿತ್ರರನ್ನಾಗಿ ಮಾಡುತ್ತದೆ”
ಪ್ರಶ್ನೆ:
ಆತ್ಮದ
ಸುರಕ್ಷತೆಯ ನಂಬರ್ವನ್ ಸಾಧನವು ಯಾವುದಾಗಿದೆ ಮತ್ತು ಹೇಗೆ?
ಉತ್ತರ:
ನೆನಪಿನ
ಯಾತ್ರೆಯು ನಂಬರ್ವನ್ ಸುರಕ್ಷತೆಯ ಸಾಧನವಾಗಿದೆ ಏಕೆಂದರೆ ಈ ನೆನಪಿನಿಂದಲೇ ನಿಮ್ಮ ನಡವಳಿಕೆಯು
ಸುಧಾರಣೆಯಾಗುತ್ತದೆ. ನೀವು ಮಾಯೆಯ ಮೇಲೆ ಜಯಗಳಿಸುತ್ತೀರಿ. ನೆನಪಿನಿಂದ ಪತಿತ ಕರ್ಮೇಂದ್ರಿಯಗಳು
ಶಾಂತವಾಗಿಬಿಡುತ್ತವೆ. ನೆನಪಿನಿಂದಲೇ ಬಲ ಬರುತ್ತದೆ. ಜ್ಞಾನದ ಖಡ್ಗದಲ್ಲಿ ನೆನಪಿನ ಹರಿತವಿರಬೇಕು.
ನೆನಪಿನಿಂದ ಮಧುರ, ಸತೋಪ್ರಧಾನವಾಗುತ್ತೀರಿ. ಯಾರನ್ನೂ ಬೇಸರಪಡಿಸುವುದಿಲ್ಲ ಆದ್ದರಿಂದ ನೆನಪಿನ
ಯಾತ್ರೆಯಲ್ಲಿ ನಿರ್ಬಲರಾಗಬಾರದು. ನಾವು ಎಲ್ಲಿಯವರೆಗೆ ನೆನಪಿನಲ್ಲಿರುತ್ತೇವೆಂದು ತಮ್ಮನ್ನು ತಾವು
ಕೇಳಿಕೊಳ್ಳಿರಿ.
ಓಂ ಶಾಂತಿ.
ಪ್ರತಿನಿತ್ಯವೂ ಮಧುರಾತಿ ಮಧುರ ಆತ್ಮಿಕ ಮಕ್ಕಳಿಗೆ ಎಚ್ಚರಿಕೆಯನ್ನು ಅವಶ್ಯವಾಗಿ ನೀಡಲಾಗುತ್ತದೆ.
ಯಾವ ಎಚ್ಚರಿಕೆ? ಸೇಫ್ಟಿ ಫಸ್ಟ್(ರಕ್ಷಣೆಯು ಮೊದಲನೆಯದಾಗಿದೆ) ಯಾವ ರಕ್ಷಣೆ? ನೆನಪಿನ ಯಾತ್ರೆಯಿಂದ
ನೀವು ಬಹಳ-ಬಹಳ ಸುರಕ್ಷಿತವಾಗಿರುತ್ತೀರಿ. ಮಕ್ಕಳಿಗಾಗಿ ಮೂಲಮಾತು ಇದೇ ಆಗಿದೆ. ತಂದೆಯು
ತಿಳಿಸಿದ್ದಾರೆ- ನೀವು ಮಕ್ಕಳು ನೆನಪಿನ ಯಾತ್ರೆಯಲ್ಲಿ ಎಷ್ಟಿರುತ್ತೀರಿ, ಅಷ್ಟು ಖುಷಿಯೂ ಇರುತ್ತದೆ
ಮತ್ತು ನಡುವಳಿಕೆಯೂ ಸುಧಾರಣೆಯಾಗುತ್ತದೆ ಏಕೆಂದರೆ ಪಾವನರೂ ಆಗಬೇಕಾಗಿದೆ, ನಡುವಳಿಕೆಯನ್ನೂ
ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕು- ಅನ್ಯರಿಗೆ ದುಃಖ ಕೊಡುವಂತಹ
ನಡುವಳಿಕೆ ನನ್ನಲ್ಲಿಲ್ಲವೇ! ನನಗೆ ದೇಹಾಭಿಮಾನವು ಬಂದುಬಿಡುವುದಿಲ್ಲವೇ? ಇದನ್ನು ಬಹಳಚೆನ್ನಾಗಿ
ಪರಿಶೀಲನೆ ಮಾಡಿಕೊಳ್ಳಬೇಕು. ತಂದೆಯು ಮಕ್ಕಳಿಗೆ ಓದಿಸುತ್ತಾರೆ- ನೀವು ಮಕ್ಕಳು ಓದುತ್ತೀರಿ ಮತ್ತು
ಅನ್ಯರಿಗೂ ಓದಿಸುತ್ತೀರಿ. ಬೇಹದ್ದಿನ ತಂದೆಯು ಕೇವಲ ಓದಿಸುತ್ತಾರೆ. ಬಾಕಿ ಎಲ್ಲರೂ
ದೇಹಧಾರಿಯಾಗಿದ್ದಾರೆ, ಇದರಲ್ಲಿ ಇಡೀ ಪ್ರಪಂಚವೇ ಬಂದುಬಿಡುತ್ತದೆ. ಒಬ್ಬ ತಂದೆಯು
ವಿದೇಹಿಯಾಗಿದ್ದಾರೆ, ತಾವು ಮಕ್ಕಳಿಗೆ ತಿಳಿಸುತ್ತಾರೆ- ಮಕ್ಕಳೇ ನೀವೂ ವಿದೇಹಿಗಳಾಗಬೇಕಾಗಿದೆ.
ನಾನು ನಿಮ್ಮನ್ನು ವಿದೇಹಿಯನ್ನಾಗಿ ಮಾಡಲು ಬಂದಿದ್ದೇನೆ. ಅಲ್ಲಿಗೆ ಪವಿತ್ರರಾಗಿಯೇ ಹೋಗುತ್ತೀರಿ.
ಪತಿತರನ್ನಂತು ಜೊತೆ ಕರೆದುಕೊಂಡು ಹೋಗುವುದಿಲ್ಲ ಆದ್ದರಿಂದ ಮೊಟ್ಟಮೊದಲನೆಯದಾಗಿ ಇದೇ ಮಂತ್ರವನ್ನು
ಕೊಡುತ್ತೇನೆ. ಇದು ಮಾಯೆಯನ್ನು ವಶಪಡಿಸಿಕೊಳ್ಳುವ ಮಂತ್ರವಾಗಿದೆ, ಪವಿತ್ರರಾಗುವ ಮಂತ್ರವಾಗಿದೆ. ಈ
ಮಂತ್ರದಲ್ಲಿ ಬಹಳಷ್ಟು ವಿಶೇಷತೆಗಳು ತುಂಬಿವೆ, ಇದರಿಂದಲೇ ಪವಿತ್ರರಾಗಬೇಕು, ಮನುಷ್ಯರಿಂದ
ದೇವತೆಗಳಾಗಬೇಕು. ಅವಶ್ಯವಾಗಿ ನಾವೇ ದೇವತೆಗಳಾಗಿದ್ದೆವು ಆದ್ದರಿಂದ ತಂದೆಯು ತಿಳಿಸುತ್ತಾರೆ-
ತಮ್ಮ ರಕ್ಷಣೆಯನ್ನು ಬಯಸುತ್ತೀರಿ, ಶಕ್ತಿಶಾಲಿ ಮಹಾವೀರರಾಗಲು ಬಯಸುತ್ತೀರೆಂದರೆ ಇಂತಹ
ಪುರುಷಾರ್ಥವನ್ನು ಮಾಡಿರಿ. ತಂದೆ ಶಿಕ್ಷಣವನ್ನು ಕೊಡುತ್ತಿರುತ್ತಾರೆ. ಭಲೆ ಡ್ರಾಮ ಎಂದು
ಹೇಳುತ್ತಿರುತ್ತಾರೆ, ಡ್ರಾಮಾನುಸಾರವಾಗಿ ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ. ಭವಿಷ್ಯಕ್ಕಾಗಿಯೂ
ತಿಳಿಸುತ್ತಿರುತ್ತಾರೆ. ತಾವು ನೆನಪಿನ ಯಾತ್ರೆಯಲ್ಲಿ ಬಲಹೀನರಾಗಬಾರದು. ಬಂಧನದಲ್ಲಿರುವ ಗೋಪಿಕೆಯರು
ಎಷ್ಟು ನೆನಪು ಮಾಡುತ್ತಾರೆಯೋ, ಅಷ್ಟು ಸಮೀಪವಿರುವವರೂ ನೆನಪು ಮಾಡುವುದಿಲ್ಲ ಏಕೆಂದರೆ
ನೆನಪಿನಲ್ಲಿರುವರು ಶಿವತಂದೆಯೊಂದಿಗೆ ಮಿಲನ ಮಾಡಲು ಚಡಪಡಿಸುತ್ತಿರುತ್ತಾರೆ. ಯಾರು ಮಿಲನ
ಮಾಡುತ್ತಾರೆಯೋ ಅವರ ಹೊಟ್ಟೆ ತುಂಬಿದಂತಾಗುತ್ತದೆ. ಯಾರು ಬಹಳ ನೆನಪು ಮಾಡುವರೋ ಅವರು
ಉತ್ತಮಪದವಿಯನ್ನು ಪಡೆಯುತ್ತಾರೆ. ಇಲ್ಲಿ ನೋಡಿದರೆ ಒಳ್ಳೊಳ್ಳೆಯ ಅನುಭವಿ ಮಕ್ಕಳೂ ಸಹ ನೆನಪಿನ
ಯಾತ್ರೆಯಲ್ಲಿ ನಿರ್ಬಲವಾಗಿದ್ದಾರೆ. ನೆನಪಿನ ಹರಿತವು ಬಹಳ ಚೆನ್ನಾಗಿರಬೇಕು, ಜ್ಞಾನದ ಖಡ್ಗದಲ್ಲಿ
ನೆನಪಿನ ಹರಿತವಿರದೇ ಇರುವಕಾರಣದಿಂದ ಯಾರಿಗೂ ಸಹ ಬಾಣವು ನಾಟುವುದಿಲ್ಲ, ಪೂರ್ಣವಾಗಿ
ಸಾಯುವುದಿಲ್ಲ(ಬಲಿಹಾರಿಯಾಗುವುದಿಲ್ಲ). ಜ್ಞಾನದ ಬಾಣವನ್ನು ಹೊಡೆದು ತಂದೆಯ ಮಕ್ಕಳನ್ನಾಗಿ ಮಾಡಬೇಕು,
ಮರುಜೀವಿಗಳನ್ನಾಗಿ ಮಾಡಬೇಕೆಂದು ಮಕ್ಕಳು ಪ್ರಯತ್ನಪಡುತ್ತೀರಿ ಆದರೆ ಅವರು ಸಾಯುವುದಿಲ್ಲ. ಅಂದಮೇಲೆ
ಅವಶ್ಯವಾಗಿ ಜ್ಞಾನದ ಖಡ್ಗ ಸರಿಯಿಲ್ಲವೆಂದರ್ಥ. ನಾಟಕವು ಸಂಪೂರ್ಣವಾಗಿ ನಿಖರವಾಗಿ ನಡೆಯುತ್ತಿದೆ
ಎಂದು ಭಲೆ ತಂದೆಗೆ ಗೊತ್ತಿದೆ ಆದರೆ ಭವಿಷ್ಯಕ್ಕಾಗಿ ತಿಳಿಸುತ್ತಿರುತ್ತಾರಲ್ಲವೆ. ಪ್ರತಿಯೊಬ್ಬರೂ
ಸಹ ತಮ್ಮ ಹೃದಯದಲ್ಲಿ ಕೇಳಿಕೊಳ್ಳಿರಿ- ನಾವು ಎಷ್ಟು ನೆನಪು ಮಾಡುತ್ತೇವೆ? ನೆನಪಿನಿಂದಲೇ ಶಕ್ತಿಯು
ಸಿಗುವುದು ಆದ್ದರಿಂದ ಜ್ಞಾನದ ಖಡ್ಗದಲ್ಲಿ ಹೊಳಪು ಇರಬೇಕೆಂದು ಹೇಳಲಾಗುತ್ತದೆ. ಜ್ಞಾನವನ್ನು ಬಹಳ
ಸಹಜವಾಗಿಯೂ ತಿಳಿಸಬಹುದು. ನೆನಪಿನಲ್ಲಿ ಎಷ್ಟೆಷ್ಟಿರುತ್ತೀರಿ, ಅಷ್ಟಷ್ಟು ಬಹಳ ಮಧುರರಾಗುತ್ತೀರಿ.
ನೀವು ಸತೋಪ್ರಧಾನರಾಗಿದ್ದಾಗ ಬಹಳ ಮಧುರರಾಗಿದ್ದಿರಿ, ಈಗ ಮತ್ತೆ ಸತೋಪ್ರಧಾನ ಆಗಬೇಕಾಗಿದೆ. ನಿಮ್ಮ
ಸ್ವಭಾವವು ಬಹಳ ಮಧುರವಾಗಿರಬೇಕು, ಎಂದೂ ಸಹ ಬೇಸರವಾಗಬಾರದು. ಯಾರೂ ಬೇಸರವಾಗುವಂತಹ
ವಾತಾವರಣವಿರಬಾರದು ಏಕೆಂದರೆ ಈ ಈಶ್ವರೀಯ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡುವ ಸೇವೆಯು
ಅತ್ಯುತ್ತಮವಾಗಿರುವುದಾಗಿದೆ. ವಿಶ್ವವಿದ್ಯಾಲಯಗಳು ಭಾರತದಲ್ಲಿ ಬಹಳಷ್ಟಿವೆ ಆದರೆ ವಾಸ್ತವದಲ್ಲಿ
ಅದು ವಿಶ್ವವಿದ್ಯಾಲಯವಲ್ಲ. ವಿಶ್ವವಿದ್ಯಾಲಯವು ಒಂದೇ ಆಗಿದೆ, ತಂದೆಯು ಬಂದು ಎಲ್ಲರಿಗೂ
ಮುಕ್ತಿ-ಜೀವನ್ಮುಕ್ತಿಯನ್ನು ಕೊಡುತ್ತಾರೆ. ತಂದೆಗೆ ಗೊತ್ತಿದೆ- ಇಡೀ ಪ್ರಪಂಚದ
ಮನುಷ್ಯಾತ್ಮರೆಲ್ಲರೂ ಸಮಾಪ್ತಿಯಾಗಲಿದ್ದಾರೆ. ತಂದೆಯನ್ನು ಹಳೆಯ ಪ್ರಪಂಚದ ಸಮಾಪ್ತಿ ಮತ್ತು ಹೊಸ
ಪ್ರಪಂಚದ ಸ್ಥಾಪನೆ ಮಾಡಿರಿ ಎಂದು ಕರೆದಿದ್ದೀರಿ ತಂದೆಯು ಬಂದಿದ್ದಾರೆ, ಈಗ ಮಾಯೆಯ ಆಡಂಬರವೂ
ಎಷ್ಟೊಂದಿದೆ. ಈಗ ಫಾಲ್ ಆಫ್ ಪಾಂಪ್ ಎಂಬ ಆಟವನ್ನು ತೋರಿಸುತ್ತಾರೆ. ದೊಡ್ಡ-ದೊಡ್ಡಮನೆಗಳನ್ನೂ
ಕಟ್ಟಿಸುತ್ತಾರೆ, ಇದೂ ಸಹ ಆಡಂಬರವಾಗಿದೆ. ಸತ್ಯಯುಗದಲ್ಲಿ ಇಷ್ಟು ಅಂತಸ್ತುಗಳ ಮನೆಗಳ
ನಿರ್ಮಾಣವನ್ನು ಮಾಡುವುದಿಲ್ಲ. ಇಲ್ಲಷ್ಟೆ ನಿರ್ಮಾಣ ಮಾಡುತ್ತಾರೆ ಏಕೆಂದರೆ ಇಲ್ಲಿ ಇರುವುದಕ್ಕಾಗಿ
ಸ್ಥಳವು ಕಡಿಮೆಯಿದೆ. ಯಾವಾಗ ವಿನಾಶವಾಗುವುದೋ ಆಗ ಎಲ್ಲಾ ದೊಡ್ಡ-ದೊಡ್ಡಮನೆಗಳು ಕೆಳಗೆ ಬೀಳುತ್ತವೆ.
ಮುಂಚೆ ಇಷ್ಟು ದೊಡ್ಡ-ದೊಡ್ಡ ಮನೆಗಳನ್ನು ನಿರ್ಮಿಸುತ್ತಿರಲಿಲ್ಲ, ಬಾಂಬುಗಳನ್ನು ಹಾಕಿದಾಗ ಎಲೆಗಳು
ಬೀಳುವಂತೆ, ಈ ಮನೆಗಳು ಕೆಳಗೆ ಉರುಳುತ್ತವೆ, ಅಂದರೆ ಅಲ್ಲಿರುವವರು ಸಾಯುತ್ತಾರೆ ಅನ್ಯರು
ಉಳಿದುಕೊಳ್ಳುತ್ತಾರೆ ಎಂದಲ್ಲ. ಯಾರು ಎಲ್ಲಿರವರೋ ಭಲೆ ಸಮುದ್ರದಲ್ಲಿರಬಹುದು, ಪೃಥ್ವಿಯ
ಮೇಲಿರಬಹುದು, ಆಕಾಶದ ಮೇಲಿರಬಹುದು, ಪರ್ವತಗಳ ಮೇಲಿರಬಹುದು, ಹಾರುತ್ತಿರಬಹುದು..... ಆದರೆ
ಎಲ್ಲಿರುವವರು ಅಲ್ಲಿಯೇ ಸಮಾಪ್ತಿಯಾಗಿಬಿಡುತ್ತಾರೆ. ಇದು ಹಳೆಯ ಪ್ರಪಂಚವಲ್ಲವೆ. 84 ಲಕ್ಷ
ಯೋನಿಗಳೆಲ್ಲವೂ ಸಮಾಪ್ತಿಯಾಗಿಬಿಡಬೇಕು. ಹೊಸಪ್ರಪಂಚದಲ್ಲಿ ಇದ್ಯಾವುದೂ ಇರುವುದಿಲ್ಲ,
ಸೊಳ್ಳೆಗಳಾಗಲಿ, ಮನುಷ್ಯರು, ಜೀವಜಂತುಗಳಾಗಲಿ ಯಾವುದೂ ಉಳಿಯುವುದಿಲ್ಲ. ಇಲ್ಲಂತು ಬಹಳ
ಜನಸಂಖ್ಯೆಯಿದೆ, ನೀವು ಮಕ್ಕಳು ದೇವತೆಗಳಾಗುತ್ತೀರೆಂದರೆ, ಅಲ್ಲಿ ಪ್ರತಿಯೊಂದು ವಸ್ತುವು
ಸತೋಪ್ರಧಾನವಾಗಿರುತ್ತದೆ. ಇಲ್ಲಿಯೂ ಸಹ ದೊಡ್ಡವ್ಯಕ್ತಿಗಳ ಮನೆಗಳಿಗೆ ಹೋಗುತ್ತೀರೆಂದರೆ ಅಲ್ಲಿ
ಬಹಳ ಸ್ವಚ್ಛತೆಯಿರುತ್ತದೆ. ನೀವು ಎಲ್ಲರಿಗಿಂತ ಶ್ರೇಷ್ಠ ದೇವತೆಗಳಾಗುತ್ತೀರಿ. ದೊಡ್ಡದೇವತೆಗಳೆಂದು
ಹೇಳುವುದಿಲ್ಲ ಆದರೆ ನೀವು ಬಹಳ ಶ್ರೇಷ್ಠ ದೇವತೆಗಳಾಗುತ್ತೀರಿ. ಇದೇನು ಹೊಸಮಾತಲ್ಲ. 5000 ವರ್ಷಗಳ
ಮೊದಲ ನೀವು ನಂಬರ್ವಾರ್ ಆ ರೀತಿಯಲ್ಲಿದ್ದಿರಿ, ಅಲ್ಲಿ ಇಷ್ಟೆಲ್ಲಾ ಕೊಳಕು ಇತ್ಯಾದಿಗಳೆಲ್ಲವೂ
ಇರುವುದಿಲ್ಲ. ನಾವು ಬಹಳ ಶ್ರೇಷ್ಠ ದೇವತೆಗಳಾಗುತ್ತೇವೆ, ಒಬ್ಬ ತಂದೆಯೇ ನಮಗೆ ಓದಿಸುವವರಾಗಿದ್ದಾರೆ.
ಅವರು ನಮ್ಮನ್ನು ಬಹಳ ಶ್ರೇಷ್ಠರನ್ನಾಗಿ ಮಾಡುತ್ತಾರೆಂದು ಮಕ್ಕಳಿಗೆ ಬಹಳ ಖುಷಿಯಾಗುತ್ತದೆ.
ವಿದ್ಯೆಯಲ್ಲಿ ಸದಾ ನಂಬರ್ವಾರ್ ಇರುತ್ತಾರೆ. ಕೆಲವರು ಕಡಿಮೆ ಓದುತ್ತಾರೆ, ಕೆಲವರು ಹೆಚ್ಚು
ಓದುತ್ತಾರೆ. ಈಗ ಮಕ್ಕಳು ಪುರುಷಾರ್ಥವನ್ನು ಮಾಡುತ್ತಿದ್ದೀರಿ, ದೊಡ್ಡ-ದೊಡ್ಡ ಸೇವಾಕೇಂದ್ರಗಳನ್ನು
ಏಕೆ ತೆರೆಯುತ್ತಿದ್ದೀರೆಂದರೆ- ದೊಡ್ಡ-ದೊಡ್ಡವರಿಗೂ ಆತ್ಮದ ಜ್ಞಾನವು ಅರ್ಥವಾಗಬೇಕು ಎಂದು
ತೆರೆಯುತ್ತಿದ್ದೀರಿ. ಭಾರತದ ಪ್ರಾಚೀನ ರಾಜಯೋಗವೆಂದು ಗಾಯನವಿದೆ. ವಿಶೇಷವಾಗಿ ವಿದೇಶದವರಿಗೆ
ರಾಜಯೋಗವನ್ನು ಕಲಿಯಬೇಕೆಂಬ ಉತ್ಸಾಹವು ಬಹಳಷ್ಟಿರುತ್ತದೆ. ಭಾರತವಾಸಿಗಳು ತಮೋಪ್ರಧಾನ
ಬುದ್ಧಿಯವರಾಗಿರುತ್ತಾರೆ. ವಿದೇಶದವರು ತಮೋಬುದ್ಧಿಯವರಾಗಿದ್ದಾರೆ ಆದ್ದರಿಂದ ಅವರಿಗೆ ಭಾರತದ
ಪ್ರಾಚೀನ ರಾಜಯೋಗವನ್ನು ಕಲಿಯುವ ಉತ್ಸಾಹವಿರುತ್ತದೆ. ಭಾರತದ ಪ್ರಾಚೀನ ರಾಜಯೋಗವೆಂದು
ಹೆಸರುವಾಸಿಯಾಗಿದೆ, ಇದರಿಂದ ಭಾರತವು ಸ್ವರ್ಗವಾಗಿತ್ತು, ಅಲ್ಲಿ ಬಹಳ ಕೆಲವರೇ ಬರುತ್ತಾರೆ, ಪೂರ್ಣ
ರೀತಿಯಲ್ಲಿ ಅರಿತುಕೊಳ್ಳುತ್ತಾರೆ. ಸ್ವರ್ಗವು ಹಿಂದೆ ಇತ್ತು, ಈಗ ಮತ್ತೆ ಅವಶ್ಯವಾಗಿ ಬರಲಿದೆ.
ವಿಶ್ವದಲ್ಲಿಯೇ ಹೆವೆನ್ ಅಥವ ಪ್ಯಾರಡೈಸ್(ಸ್ವರ್ಗ) ಎಲ್ಲದಕ್ಕಿಂತ ಅತಿದೊಡ್ಡ ಅದ್ಭುತವಾಗಿದೆ.
ಸ್ವರ್ಗದ ಹೆಸರು ಎಷ್ಟೊಂದು ಪ್ರಸಿದ್ಧವಾಗಿದೆ. ಸ್ವರ್ಗ ಮತ್ತು ನರಕ, ಶಿವಾಲಯ ಮತ್ತು ವೇಶ್ಯಾಲಯ.
ನಾವೀಗ ಶಿವಾಲಯದಲ್ಲಿ ಹೋಗಬೇಕೆಂದು ಮಕ್ಕಳಿಗೆ ನಂಬರ್ವಾರ್ ನೆನಪಿದೆ. ಅಲ್ಲಿಗೆ ಹೋಗಲು
ಶಿವತಂದೆಯನ್ನು ನೆನಪು ಮಾಡಬೇಕಾಗಿದೆ. ಅವರೇ ಎಲ್ಲರನ್ನೂ ಕರೆದುಕೊಂಡು ಹೋಗುವ
ಮಾರ್ಗದರ್ಶಕನಾಗುತ್ತಾರೆ. ಭಕ್ತಿಗೆ ರಾತ್ರಿಯೆಂದು ಹೇಳಲಾಗುತ್ತದೆ, ಜ್ಞಾನಕ್ಕೆ ದಿನವೆಂದು
ಹೇಳಲಾಗುತ್ತದೆ, ಇದು ಬೇಹದ್ದಿನ ಮಾತಾಗಿದೆ. ಹಳೆಯ ವಸ್ತು ಮತ್ತು ಹೊಸವಸ್ತುವಿನಲ್ಲಿ ಬಹಳ
ವ್ಯತ್ಯಾಸವಿರುತ್ತದೆ. ಈಗ ನೀವು ಮಕ್ಕಳಿಗೆ ಇಷ್ಟು ಶ್ರೇಷ್ಠಾತಿಶ್ರೇಷ್ಠ ವಿದ್ಯೆಯನ್ನು
ದೊಡ್ಡಸುಂದರವಾದ ಮನೆಗಳಲ್ಲಿ ಓದಿಸಿದರೆ ದೊಡ್ಡ-ದೊಡ್ಡ ಗಣ್ಯವ್ಯಕ್ತಿಗಳು ಬಂದು ಕೇಳುತ್ತಾರೆಂದು
ನಾವು ಬಯಸುತ್ತೇವೆ. ಅಲ್ಲಿ ಒಬ್ಬೊಬ್ಬರಿಗೂ ಸಹ ಕುಳಿತು ತಿಳಿಸಬೇಕಾಗುತ್ತದೆ. ವಾಸ್ತವದಲ್ಲಿ
ವಿದ್ಯಾಭ್ಯಾಸ ಅಥವ ಶಿಕ್ಷಣಕ್ಕಾಗಿ ಏಕಾಂತದ ಸ್ಥಾನಗಳಿರುತ್ತವೆ. ಬ್ರಹ್ಮಜ್ಞಾನಿಗಳ ಆಶ್ರಮಗಳು
ನಗರದಿಂದ ಬಹಳ ದೂರದಲ್ಲಿರುತ್ತದೆ ಮತ್ತು ಕೆಳಗೆ ಇರುತ್ತವೆ. ಇಷ್ಟೊಂದು ಎತ್ತರವಾದ ಅಂತಸ್ತುಗಳಲ್ಲಿ
ಇರುವುದಿಲ್ಲ. ಈಗ ತಮೋಪ್ರಧಾನರಾಗಿರುವುದರಿಂದ ನಗರದಲ್ಲಿಯೇ ಪ್ರವೇಶ ಮಾಡಿದ್ದಾರೆ, ಅವರ ಶಕ್ತಿಯು
ಸಮಾಪ್ತಿಯಾಗಿದೆ. ಈ ಸಮಯದಲ್ಲಿ ಎಲ್ಲರ ಬ್ಯಾಟರಿಯು ಖಾಲಿಯಾಗಿದೆ. ಈಗ ಬ್ಯಾಟರಿಯನ್ನು ಹೇಗೆ
ತುಂಬುವುದು, ಇದನ್ನು ತಂದೆಯ ವಿನಃ ಮತ್ತ್ಯಾರೂ ಸಹ ತುಂಬಲು ಸಾಧ್ಯವಿಲ್ಲ. ಮಕ್ಕಳು ಬ್ಯಾಟರಿಯನ್ನು
ಚಾರ್ಜ್ ಮಾಡಿಕೊಳ್ಳುವುದರಿಂದಲೇ ಶಕ್ತಿಯು ಬರುತ್ತದೆ. ಅದಕ್ಕಾಗಿ ಮುಖ್ಯವಾದುದು ನೆನಪಾಗಿದೆ.
ಅದರಲ್ಲಿಯೇ ಮಾಯೆಯ ವಿಘ್ನಗಳೂ ಬರುತ್ತವೆ, ಕೆಲವರು ಸರ್ಜನ್ನ ಮುಂದೆ ಸತ್ಯವನ್ನು ತಿಳಿಸುತ್ತಾರೆ,
ಇನ್ನೂ ಕೆಲವರು ಬಚ್ಚಿಟ್ಟುಕೊಳ್ಳುತ್ತಾರೆ. ಒಳಗಿರುವ ನಿರ್ಬಲತೆಗಳನ್ನು ತಂದೆಗೆ
ತಿಳಿಸಬೇಕಾಗುತ್ತದೆ, ಈ ಜನ್ಮದಲ್ಲಿ ಮಾಡಿರುವ ಪಾಪವನ್ನು ಅವಿನಾಶಿ ಸರ್ಜನ್ನ ಮುಂದೆ ವರ್ಣನೆ
ಮಾಡಬೇಕು ಇಲ್ಲವೆಂದರೆ ಅದು ವೃದ್ಧಿಯಾಗುತ್ತಿರುತ್ತದೆ. ತಿಳಿಸಿದನಂತರ ಅದು ವೃದ್ಧಿಯಾಗುವುದಿಲ್ಲ
ಆದ್ದರಿಂದ ತಿಳಿಸದೆಯೇ ಒಳಗಿಟ್ಟುಕೊಳ್ಳುವುದೂ ಸಹ ಹಾನಿಕಾರಕವಾಗಿದೆ. ಯಾವ ಮಕ್ಕಳು ತಂದೆಗೆ
ಸತ್ಯ-ಸತ್ಯವಾದ ಮಕ್ಕಳಾಗಿದ್ದಾರೆಯೋ ಅವರು ಈ ಜನ್ಮದಲ್ಲಿ ಇಂತಿಂತಹ ಪಾಪಗಳನ್ನು ಮಾಡಿದ್ದೇವೆ ಎಂದು
ಸತ್ಯವಾಗಿ ಎಲ್ಲವನ್ನೂ ತಿಳಿಸಿಬಿಡುತ್ತಾರೆ. ದಿನಕಳೆದಂತೆ ತಂದೆಯೂ ಸಹ ಒತ್ತುಕೊಟ್ಟು
ಹೇಳುತ್ತಿರುತ್ತಾರೆ, ಇದು ನಿಮ್ಮ ಅಂತಿಮ ಜನ್ಮವಾಗಿದೆ. ತಮೋಪ್ರಧಾನರಿಂದ ಪಾಪಗಳಂತು ಖಂಡಿತವಾಗಿಯೂ
ಆಗುತ್ತದೆಯಲ್ಲವೆ.
ತಂದೆಯು ತಿಳಿಸುತ್ತಾರೆ-
ನಾನು ಬಹಳ ಜನ್ಮಗಳ ಅಂತಿಮದಲ್ಲಿ, ಯಾರು ನಂಬರ್ವನ್ ಪತಿತರಾಗಿದ್ದಾರೆಯೋ ಅವರಲ್ಲಿಯೇ ಪ್ರವೇಶ
ಮಾಡುತ್ತೇನೆ ಏಕೆಂದರೆ ಅವರೇ ಪುನಃ ನಂಬರ್ವನ್ನಲ್ಲಿ ಹೋಗಬೇಕಾಗಿದೆ, ಬಹಳ ಪರಿಶ್ರಮಪಡಬೇಕು. ಈ
ಜನ್ಮದಲ್ಲಿಯೂ ಪಾಪಗಳಾಗಿವೆ ಅಲ್ಲವೆ. ನಾವು ಏನು ಮಾಡುತ್ತಿದ್ದೇವೆಂದು ಕೆಲವರಿಗೆ ತಿಳಿಯುವುದಿಲ್ಲ,
ಸತ್ಯವನ್ನು ತಿಳಿಸುವುದಿಲ್ಲ. ಕೆಲವರು ಸತ್ಯವಾಗಿ ತಿಳಿಸುತ್ತಾರೆ. ತಂದೆಯು ತಿಳಿಸುತ್ತಾರೆ-
ಮಕ್ಕಳೇ, ಯಾವಾಗ ಕರ್ಮಾತೀತ ಸ್ಥಿತಿಯಾಗುವುದೋ ಆಗಲೇ ನಿಮ್ಮ ಕರ್ಮೇಂದ್ರಿಯಗಳು ಶಾಂತವಾಗುತ್ತವೆ.
ಹೇಗೆಂದರೆ ಮನುಷ್ಯರು ವೃದ್ಧರಾದಾಗ ಕರ್ಮೇಂದ್ರಿಯಗಳು ತಾನಾಗಿಯೇ ಶಾಂತವಾಗಿಬಿಡುತ್ತದೆ. ಇಲ್ಲಂತು
ಬಾಲ್ಯದಲ್ಲಿಯೇ ಎಲ್ಲವೂ ಶಾಂತವಾಗಿಬಿಡಬೇಕು. ಯೋಗಬಲದಲ್ಲಿ ಬಹಳಚೆನ್ನಾಗಿದ್ದರೆ ಇವೆಲ್ಲಾ ಮಾತುಗಳ
ಸಮಾಪ್ತಿಯು ಆಗಿಬಿಡುತ್ತದೆ. ಸತ್ಯಯುಗದಲ್ಲಿ ಇಂತಹ ಯಾವುದೇ ಕೆಟ್ಟಕಾಯಿಲೆ, ಕೊಳಕು ಇತ್ಯಾದಿಯೇನೂ
ಇರುವುದಿಲ್ಲ. ಮನುಷ್ಯರು ಬಹಳ ಸ್ವಚ್ಛ, ಶುದ್ಧವಾಗಿರುತ್ತಾರೆ. ಅಲ್ಲಿರುವುದೇ ರಾಮರಾಜ್ಯ, ಇಲ್ಲಿ
ರಾವಣರಾಜ್ಯವಿದೆ ಆದ್ದರಿಂದ ಅನೇಕಪ್ರಕಾರದ ಕೊಳಕು ಖಾಯಿಲೆಗಳಿವೆ. ಸತ್ಯಯುಗದಲ್ಲಿ ಇದೇನೂ
ಇರುವುದಿಲ್ಲ. ಹೆಸರೇ ಸ್ವರ್ಗ ಎಂಬುದು ಎಷ್ಟು ಸುಂದರವಾಗಿದೆ, ಹೊಸಪ್ರಪಂಚವಾಗಿರುತ್ತದೆ, ಅಲ್ಲಿ
ಬಹಳ ಸ್ವಚ್ಛತೆಯಿರುತ್ತದೆ. ತಂದೆಯು ತಿಳಿಸುತ್ತಾರೆ- ಈ ಪುರುಷೋತ್ತಮ ಸಂಗಮಯುಗದಲ್ಲಿಯೇ ನೀವು
ಎಲ್ಲವನ್ನೂ ಕೇಳುತ್ತೀರಿ. ನಿನ್ನೆ ಕೇಳಿರಲಿಲ್ಲ, ನಿನ್ನೆಯ ದಿನದಲ್ಲಿ ನೀವು ಮೃತ್ಯುಲೋಕದ
ಮಾಲೀಕರಾಗಿದ್ದಿರಿ, ಇಂದು ಅಮರಲೋಕದ ಮಾಲೀಕರಾಗುತ್ತೀರಿ. ನಿನ್ನೆ ಮೃತ್ಯುಲೋಕದಲ್ಲಿದ್ದೆವು ಎಂದು
ನಿಶ್ಚಯವಾಗಿದೆ, ಇಂದು ಸಂಗಮಯುಗದಲ್ಲಿ ಬಂದಿರುವುದರಿಂದ ನೀವು ಅಮರಲೋಕಕ್ಕೆ ಹೋಗುವ
ಪುರುಷಾರ್ಥವನ್ನು ಮಾಡುತ್ತಿದ್ದೀರಿ. ಈಗ ಓದಿಸುವವರೂ ಸಹ ಸಿಕ್ಕಿದ್ದಾರೆ. ಯಾರು ಬಹಳಚೆನ್ನಾಗಿ
ಓದುತ್ತಾರೆಯೋ ಅವರು ಹಣವನ್ನು ಬಹಳಷ್ಟು ಸಂಪಾದಿಸುತ್ತಾರೆ. ಬಲಿಹಾರಿಯು ವಿದ್ಯೆಯದೇ ಆಗಿದೆಯೆಂದು
ಹೇಳುತ್ತಾರೆ. ಇಲ್ಲಿಯೂ ಸಹ ಈ ವಿದ್ಯೆಯಿಂದ ಬಹಳ ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ಈಗ ನೀವು
ಪ್ರಕಾಶದಲ್ಲಿದ್ದೀರಿ, ಇದು ನೀವು ಮಕ್ಕಳಲ್ಲದೆ ಬೇರೆಯಾರೂ ತಿಳಿದುಕೊಂಡಿಲ್ಲ. ಇದನ್ನೂ ಸಹ ಪದೇ-ಪದೇ
ಮರೆತುಹೋಗುತ್ತೀರಿ. ಮರೆಯುವುದೆಂದರೆ ಹಳೆಯ ಪ್ರಪಂಚದಲ್ಲಿ ಹೊರಟುಹೋಗುವುದು.
ಈಗ ನಾವು ಕಲಿಯುಗದಲ್ಲಿ
ಇದ್ದೇವೆಂದು ಸಂಗಮಯುಗೀ ಬ್ರಾಹ್ಮಣರಿಗೆ ತಿಳಿದಿದೆ. ಇದನ್ನು ಸದಾ ನೆನಪಿಡಬೇಕು- ನಾವು ಹೊಸವಿಶ್ವದ
ಮಾಲೀಕರಾಗುತ್ತಿದ್ದೇವೆ. ಹೊಸ ಪ್ರಪಂಚದಲ್ಲಿ ಹೋಗುವುದಕ್ಕಾಗಿ ತಂದೆಯು ನಮಗೆ ಓದಿಸುತ್ತಾರೆ, ಇದು
ಶುದ್ಧ ಅಹಂಕಾರವಾಗಿದೆ. ಅದು ಅಶುದ್ಧ ಅಹಂಕಾರವಾಗಿದೆ. ಇಲ್ಲಿ ಮಕ್ಕಳಿಗೆಂದಿಗೂ ಸಹ ಅಶುದ್ಧ
ಅಹಂಕಾರವು ಬರಬಾರದು, ಪುರುಷಾರ್ಥವನ್ನು ಮಾಡುತ್ತಾ-ಮಾಡುತ್ತಾ ಕೊನೆಗೆ ಫಲಿತಾಂಶವು ಬರುತ್ತದೆ.
ತಂದೆಯು ತಿಳಿಸುತ್ತಾರೆ- ಈ ಸಮಯದಲ್ಲಿ ಎಲ್ಲರೂ ಪುರುಷಾರ್ಥಿಗಳಾಗಿದ್ದಾರೆ, ಯಾವಾಗ ಪರೀಕ್ಷೆಯು
ನಡೆಯುವುದೋ ಆಗ ನಂಬರ್ವಾರ್ ಆಗಿ ತೇರ್ಗಡೆಯಾದ ನಂತರದಲ್ಲಿ ವರ್ಗಾವಣೆಯಾಗುತ್ತಾರೆ. ನಿಮ್ಮದು
ಬೇಹದ್ದಿನ ವಿದ್ಯೆಯಾಗಿದೆ, ಇದನ್ನು ಕೇವಲ ನೀವಷ್ಟೇ ತಿಳಿದುಕೊಂಡಿದ್ದೀರಿ. ನೀವು ಎಷ್ಟೊಂದು
ತಿಳಿಸುತ್ತೀರಿ. ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆಯುವುದಕ್ಕಾಗಿ ಹೊಸ-ಹೊಸಬರು ಬರುತ್ತಾರೆ,
ಭಲೆ ದೂರವಿರಬಹುದು ಆದರೂ ಸಹ ಕೇಳುತ್ತಾ-ಕೇಳುತ್ತಾ ನಿಶ್ಚಯಬುದ್ಧಿಯವರಾಗುತ್ತಾರೆ. ಅಂತಹವರು
ತಂದೆಯ ಸನ್ಮುಖದಲ್ಲಿಯೇ ಹೋಗಬೇಕು. ಯಾವ ತಂದೆಯು ಮಕ್ಕಳಿಗೆ ಓದಿಸಿದ್ದಾರೆಯೋ ಅಂತಹ ತಂದೆಯ
ಸನ್ಮುಖದಲ್ಲಿ ಮಿಲನವನ್ನು ಅವಶ್ಯವಾಗಿ ಮಾಡಬೇಕು. ಅದನ್ನು ತಿಳಿದುಕೊಂಡು ಇಲ್ಲಿಗೆ ಬರುತ್ತೀರಲ್ಲವೆ.
ಯಾರಾದರೂ ಒಂದುವೇಳೆ ಅರಿತುಕೊಂಡಿಲ್ಲವೆಂದರೂ ಸಹ ಇಲ್ಲಿಗೆ ಬರುವುದರಿಂದ ಅರಿತುಕೊಳ್ಳುತ್ತಾರೆ.
ತಂದೆಯು ತಿಳಿಸುತ್ತಾರೆ- ಮನಸ್ಸಿನಲ್ಲಿ ಯಾವುದೇ ಮಾತಿರಬಹುದು, ಅದು ಅರ್ಥವಾಗಲಿಲ್ಲವೆಂದರೆ ಭಲೆ
ಕೇಳಬಹುದು, ಬಾಬಾ ಚುಂಬಕವಾಗಿದ್ದಾರಲ್ಲವೆ. ಯಾರ ಅದೃಷ್ಟದಲ್ಲಿದೆಯೋ ಅವರು ಬಹಳಚೆನ್ನಾಗಿ
ಆಕರ್ಷಿತರಾಗುತ್ತಾರೆ. ಅದೃಷ್ಟದಲ್ಲಿಲ್ಲವೆಂದರೆ ಸಮಾಪ್ತಿ, ಕೇಳಿಯೂ ಕೇಳದಂತಿರುತ್ತಾರೆ. ಇಲ್ಲಿ
ಕುಳಿತುಕೊಂಡು ಯಾರು ಓದಿಸುತ್ತಾರೆ? ಭಗವಂತ. ಅವರ ಹೆಸರಾಗಿದೆ- ಶಿವ. ಶಿವತಂದೆಯೇ ನಮಗೆ ಸ್ವರ್ಗದ
ರಾಜ್ಯಭಾಗ್ಯವನ್ನು ಕೊಡುತ್ತಾರೆ ಅಂದಮೇಲೆ ಯಾವ ವಿದ್ಯೆಯನ್ನು ಓದುವುದು ಒಳ್ಳೆಯದಾಗಿದೆ?
ಶಿವತಂದೆಯು ನಮಗೆ ಓದಿಸುತ್ತಾರೆ, ಇದರಿಂದ ರಾಜ್ಯಭಾಗ್ಯವು ಸಿಗುತ್ತದೆಯೆಂದು ನೀವು ಹೇಳುತ್ತೀರಿ.
ಹೀಗೆ ತಿಳಿಸುತ್ತಾ-ತಿಳಿಸುತ್ತಾ ಕರೆದುಕೊಂಡು ಹೋಗುತ್ತೀರಿ. ಕೆಲವರು ಪೂರ್ಣ ತಿಳಿಯದೇ ಇರುವ
ಕಾರಣದಿಂದ ಅಷ್ಟೊಂದು ಸೇವೆ ಮಾಡುವುದಿಲ್ಲ. ಬಂಧನದ ಸರಪಳಿಗಳಲ್ಲಿಯೇ ಸಿಲುಕಿಕೊಂಡಿರುತ್ತಾರೆ.
ಪ್ರಾರಂಭದಲ್ಲಿ ನೀವು ತಮ್ಮನ್ನು ಸರಪಳಿಗಳಿಂದ ಬಿಡಿಸಿಕೊಂಡು ಹೇಗೆ ಬಂದಿದ್ದೀರಿ, ಅದರಲ್ಲಿ ಕೆಲವರು
ಮಸ್ತರಾಗಿರುತ್ತಿದ್ದರು. ಇದೂ ಸಹ ಡ್ರಾಮಾದಲ್ಲಿ ಪಾತ್ರವಿತ್ತು, ಅವರು ಆಕರ್ಷಿತರಾದರು.
ಡ್ರಾಮಾದಲ್ಲಿ ಭಟ್ಟಿಯಾಗಬೇಕಿತ್ತು, ಬದುಕಿದ್ದಂತೆಯೇ ಸತ್ತರು ಆನಂತರ ಮಾಯೆಯಕಡೆ ಕೆಲವರು
ಹೊರಟುಹೋದರು. ಯುದ್ಧವಂತು ನಡೆಯುತ್ತದೆಯಲ್ಲವೆ. ಇವರು ಬಹಳ ಸಾಹಸವನ್ನು ತೋರಿಸಿದ್ದಾರೆ. ಇವರು
ಪಕ್ಕಾ ಆಗಿದ್ದಾರೆಯೇ ಅಥವ ಇಲ್ಲವೆ ಎಂದು ಕುಟ್ಟಿ ನೋಡೋಣವೆಂದು ಮಾಯೆಯೂ ಸಹ ನೋಡುತ್ತದೆ. ಮಕ್ಕಳಿಗೆ
ಎಷ್ಟೊಂದು ಪಾಲನೆಯಾಗುತ್ತಿತ್ತು, ಎಲ್ಲವನ್ನೂ ಕಲಿಸುತ್ತಿದ್ದರು. ನೀವು ಮಕ್ಕಳು ಆಲ್ಬಂ
ನೋಡುತ್ತೀರಿ ಆದರೆ ಕೇವಲ ಚಿತ್ರಗಳನ್ನು ನೋಡುವುದರಿಂದ ಅಷ್ಟು ತಿಳಿದುಕೊಳ್ಳಲು
ಸಾಧ್ಯವಾಗುವುದಿಲ್ಲ. ಮೊದಲು ಏನೇನು ನಡೆಯಿತು, ಭಟ್ಟಿಯಲ್ಲಿ ಹೇಗೆ ಕುಳಿತಿದ್ದೆವು, ಹೇಗೆ
ತಯಾರಾದೆವು ಎಂಬುದನ್ನು ಯಾರಾದರೂ ತಿಳಿಸಿದರೆ ಚೆನ್ನಾಗಿರುತ್ತದೆ. ಹೇಗೆ ರೂಪಾಯಿಗಳು ತಯಾರಾಗುವಾಗ
ಕೆಲವು ಹಾಳಾಗಿಬಿಡುತ್ತದೆಯೋ ಹಾಗೆಯೇ ಇದೂ ಸಹ ಈಶ್ವರೀಯ ಯಂತ್ರವಾಗಿದೆ. ಈಶ್ವರನು ಕುಳಿತು
ಧರ್ಮಸ್ಥಾಪನೆಯನ್ನು ಮಾಡುತ್ತಾರೆ. ಈ ಮಾತು ಯಾರಿಗೂ ತಿಳಿದಿಲ್ಲ. ತಂದೆಯನ್ನು ಕರೆಯುತ್ತಾರೆ ಆದರೆ
ತವೆಯಂತಿದ್ದಾರೆ, ಅರಿತುಕೊಳ್ಳುವುದೇ ಇಲ್ಲ. ಇದು ಹೇಗೆ ಸಾಧ್ಯವೆಂದು ಕೇಳುತ್ತಾರೆ, ಅಂತಹವರನ್ನು
ಮಾಯಾರಾವಣನು ಈ ರೀತಿ ಮಾಡಿಬಿಡುತ್ತಾನೆ. ಶಿವತಂದೆಯ ಪೂಜೆಯನ್ನೂ ಮಾಡುತ್ತಾರೆ ಆದರೆ ನಂತರದಲ್ಲಿ
ಸರ್ವವ್ಯಾಪಿಯೆಂದು ಹೇಳಿಬಿಡುತ್ತಾರೆ. ಶಿವತಂದೆಯೆಂದು ಹೇಳುತ್ತೀರಿ, ನಂತರ ಅವರು ಸರ್ವವ್ಯಾಪಿ
ಹೇಗಾಗುತ್ತಾರೆ! ಪೂಜೆ ಮಾಡುತ್ತಾರೆ, ಲಿಂಗಕ್ಕೆ ಶಿವನೆಂದು ಹೇಳುತ್ತಾರೆ. ಇವರಲ್ಲಿ ಶಿವನು
ಕುಳಿತಿದ್ದಾರೆಂದು ಹೇಳುವುದಿಲ್ಲ. ಕಲ್ಲು-ಮುಳ್ಳಿನಲ್ಲಿ ಭಗವಂತನಿದ್ದಾರೆಂದು ಹೇಳುವುದಾದರೆ
ಅದೆಲ್ಲವೂ ಭಗವಂತನೇ? ಭಗವಂತನು ಅನೇಕರಿರುವುದಿಲ್ಲ ಅಲ್ಲವೆ. ಅಂದಮೇಲೆ ತಂದೆಯು ಮಕ್ಕಳಿಗೆ
ತಿಳಿಸುತ್ತಾರೆ- ಕಲ್ಪದ ಮೊದಲೂ ಸಹ ಇದೇರೀತಿ ತಿಳಿಸಿದ್ದೆವು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಯಾರೂ ಸಹ
ಬೇಸರವಾಗದಂತಹ ಮಧುರ ವಾತಾವರಣವನ್ನು ರಚಿಸಬೇಕು. ತಂದೆಯ ಸಮಾನ ವಿದೇಹಿಯಾಗುವ ಪುರುಷಾರ್ಥವನ್ನು
ಮಾಡಬೇಕಾಗಿದೆ. ನೆನಪಿನ ಬಲದಿಂದ ತಮ್ಮ ಸ್ವಭಾವವನ್ನು ಮಧುರ ಮತ್ತು ಕರ್ಮೇಂದ್ರಿಯಗಳನ್ನು
ಶಾಂತವನ್ನಾಗಿ ಮಾಡಿಕೊಳ್ಳಬೇಕು.
2. ಸದಾ ಇದೇ
ನಶೆಯಲ್ಲಿರಬೇಕು- ಈಗ ನಾವು ಸಂಗಮಯುಗೀ ಆಗಿದ್ದೇವೆ, ಕಲಿಯುಗಿಗಳಲ್ಲ. ತಂದೆಯು ನಮ್ಮನ್ನು ಹೊಸ
ವಿಶ್ವದ ಮಾಲೀಕರನ್ನಾಗಿ ಮಾಡಲು ಓದಿಸುತ್ತಿದ್ದಾರೆ. ಅಶುದ್ಧ ವಿಚಾರಗಳನ್ನು ಸಮಾಪ್ತಿ ಮಾಡಿಬಿಡಬೇಕು.
ವರದಾನ:
ಅಕಾಲ ಸಿಂಹಾಸನ
ಮತ್ತು ಹೃದಯ ಸಿಂಹಾಸನದ ಮೇಲೆ ಕುಳಿತು ಸದಾ ಶ್ರೇಷ್ಠ ಕರ್ಮ ಮಾಡುವಂತಹ ಕರ್ಮಯೋಗಿ ಭವ.
ಈ ಸಮಯದಲ್ಲಿ ನೀವು
ಮಕ್ಕಳಿಗೆ ಎರಡು ಸಿಂಹಾಸನ ಸಿಗುವುದು - ಒಂದು ಅಕಾಲ ಸಿಂಹಾಸನ, ಇನ್ನೊಂದು ಹೃದಯ ಸಿಂಹಾಸನ. ಆದರೆ
ರಾಜ್ಯವಿರುವವರು ಮಾತ್ರ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಸಾಧ್ಯ. ಯಾವಾಗ ಅಕಾಲ
ಸಿಂಹಾಸನಧಾರಿಗಳಾಗಿರುವಿರಿ ಆಗ ಸ್ವರಾಜ್ಯ ಅಧಿಕಾರಿಯಾಗಿರುವಿರಿ ಮತ್ತು ತಂದೆಯ ಹೃದಯ
ಸಿಂಹಾಸನಾಧಿಕಾರಿಗಳಾದರೆ ತಂದೆಯ ಆಸ್ತಿಗೆ ಅಧಿಕಾರಿಯಾಗುವಿರಿ, ಇದರಲ್ಲಿ ರಾಜ್ಯಭಾಗ್ಯ ಎಲ್ಲವೂ
ಬಂದು ಬಿಡುವುದು. ಕರ್ಮಯೋಗಿ ಅರ್ಥಾತ್ ಎರಡೂ ಸಿಂಹಾಸನಾಧಿಕಾರಿ. ಈ ರೀತಿಯ ಸಿಂಹಾಸನಾಧಿಕಾರಿ
ಆತ್ಮರ ಪ್ರತಿ ಕರ್ಮ ಶ್ರೇಷ್ಠವಾಗಿರುವುದು. ಏಕೆಂದರೆ ಎಲ್ಲಾ ಕಮೇರ್ಂದ್ರಿಯಗಳು ನಿಯಮ ಮತ್ತು
ಆದೇಶಾನುಸಾರ ನಡೆಯುತ್ತಿರುವುದು.
ಸ್ಲೋಗನ್:
ಯಾರು ಸದಾ
ಸ್ವಮಾನದ ಸೀಟ್ ಮೇಲೆ ಸೆಟ್ ಆಗಿರುತ್ತಾರೆ ಅವರೇ ಗುಣವಾನ್ ಮತ್ತು ಮಹಾನ್ ಆಗಿದ್ದಾರೆ.