10.11.24 Avyakt Bapdada
Kannada
Murli 14.11.2002 Om Shanti Madhuban
“ಬ್ರಾಹ್ಮಣ ಜೀವನದ
ಫೌಂಡೇಶನ್ ಮತ್ತು ಸಫಲತೆಗೆ ಆಧಾರ - ನಿಶ್ಚಯ ಬುದ್ಧಿ”
ಇಂದು ಸಮರ್ಥ ತಂದೆಯು
ತನ್ನ ನಾಲ್ಕೂ ಕಡೆಯ ಸಮರ್ಥ ಮಕ್ಕಳು ನೋಡುತ್ತಿದ್ದಾರೆ. ಪ್ರತಿಯೊಂದು ಮಗು ಸಮರ್ಥನಾಗಿ ತಂದೆಯ
ಸಮಾನರಾಗುವ ಶ್ರೇಷ್ಠ ಪುರುಷಾರ್ಥದಲ್ಲಿ ತೊಡಗಿದ್ದಾರೆ. ಮಕ್ಕಳ ಆಸಕ್ತಿಯನ್ನು ನೋಡಿ ಬಾಪ್ದಾದಾರವರೂ
ಸಹ ಹರ್ಷಿತರಾಗುತ್ತಿದ್ದಾರೆ. ಮಕ್ಕಳ ಈ ಧೃಡ ಸಂಕಲ್ಪ ಬಾಪ್ದಾದಾರವರಿಗೂ ಸಹ ಪ್ರಿಯವಾಗುತ್ತದೆ.
ಬಾಪ್ದಾದಾರವರ0ತೂ ಮಕ್ಕಳಿಗೆ ತಂದೆಗಿಂತಲೂ ಸಹ ಮುಂದೆ ಹೋಗಬಹುದೆಂದು ಹೇಳುತ್ತೇವೆ ಏಕೆಂದರೆ
ನೆನಪಾರ್ಥದಲ್ಲೂ ಸಹ ತಂದೆಯ ಪೂಜೆ ಒಂದೇ (ಸಿಂಗಲ್) ಆಗಿದೆ. ನೀವು ಮಕ್ಕಳ ಪೂಜೆ ಡಬಲ್ ಆಗಿದೆ.
ಬಾಪ್ದಾದಾರವರ ಕಿರೀಟವೂ ಸಹ ಆಗಿದ್ದೀರಿ. ಬಾಪ್ದಾದಾ ಮಕ್ಕಳ ಸ್ವಮಾನವನ್ನು ನೋಡಿ ಭಲೆ ಶ್ರೇಷ್ಠ
ಸ್ವಮಾನಧಾರಿ, ಸ್ವರಾಜ್ಯಧಾರಿ ಮಕ್ಕಳೇ ಭಲೆ! ಎಂದು ಹೇಳುತ್ತಾರೆ. ಪ್ರತಿಯೊಬ್ಬ ಮಗುವಿನ ವಿಶೇಷತೆಯು
ತಂದೆಗೆ ಪ್ರತಿಯೊಬ್ಬ ಮಗುವಿನಲ್ಲಿ ಹೊಳೆಯುತ್ತಿರುವ ರೂಪದಲ್ಲಿ ಕಂಡುಬರುತ್ತದೆ. ನೀವು ನಿಮ್ಮ
ವಿಶೇಷತೆಯನ್ನು ತಿಳಿದು, ಅರ್ಥ ಮಾಡಿಕೊಂಡು ಸೇವೆಯಲ್ಲಿ ಉಪಯೋಗಿಸುತ್ತಾ ಹೋಗಿ. ಪರಿಶೀಲನೆ
ಮಾಡಿಕೊಳ್ಳಿ - ನಾನು ಪ್ರಭು ಪ್ರಿಯ, ಪರಿವಾರದ ಪ್ರಿಯ ಎಲ್ಲಿಯವರೆಗೆ ಆಗಿದ್ದೇನೆ ಏಕೆಂದರೆ
ಸಂಗಮಯುಗದಲ್ಲಿ ತಂದೆಯು ಬ್ರಾಹ್ಮಣ ಪರಿವಾರ ರಚಿಸುತ್ತಾರೆ. ಅಂದಾಗ ಪ್ರಭು ಪ್ರಿಯ ಮತ್ತು ಪರಿವಾರದ
ಪ್ರಿಯ ಎರಡೂ ಅವಶ್ಯಕತೆಯಿದೆ.
ಇಂದು ಬಾಪ್ದಾದಾರವರು
ಸರ್ವಮಕ್ಕಳ ಬ್ರಾಹ್ಮಣ ಜೀವನದ ಅಡಿಪಾಯ (ಫೌಂಡೇಶನ್)ವನ್ನು ನೋಡುತ್ತಿದ್ದಾರೆ. ಫೌಂಡೇಶನ್ ಆಗಿದೆ
ನಿಶ್ಚಯಬುದ್ಧಿ. ಆದ್ದರಿಂದ ಎಲ್ಲಿ ನಿಶ್ಚಯಬುದ್ಧಿಯಿದೆ - ಪ್ರತಿಯೊಂದು ಸಂಕಲ್ಪದಲ್ಲಿ ಪ್ರತಿಯೊಂದು
ಕಾರ್ಯದಲ್ಲಿ ವಿಜಯವಿದ್ದೇ ಇದೆ. ಸಫಲತೆಯು ಜನ್ಮಸಿದ ಅಧಿಕಾರದ ರೂಪದಲ್ಲಿ ತಾನಾಗಿಯೇ ಮತ್ತು
ಸಹಜವಾಗಿ ಪ್ರಾಪ್ತಿಯಾಗುತ್ತದೆ. ಜನ್ಮಸಿದ್ಧ ಅಧಿಕಾರಕ್ಕಾಗಿ ಕಷ್ಟಪಡುವ ಅವಶ್ಯಕತೆಯಿಲ್ಲ. ಸಫಲತೆ
ಬ್ರಾಹ್ಮಣ ಜೀವನದ ಕೊರಳಿನ ಹಾರವಾಗಿದೆ. ಬ್ರಾಹ್ಮಣ ಜೀವನ ಸಫಲತಾಸ್ವರೂಪ ಆಗಿಯೇ ಇದೆ. ಸಫಲತೆಯು
ಆಗುತ್ತದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆಯು ಬ್ರಾಹ್ಮಣ ಜೀವನದಲ್ಲಿ ಇಲ್ಲವೇ ಇಲ್ಲ. ನಿಶ್ಚಯ
ಬುದ್ಧಿ ಸದಾ ತಂದೆಯ ಕಂಬೈಂಡ್ ಆಗಿದೆ. ಎಲ್ಲಿ ತಂದೆಯು ಕಂಬೈಂಡ್ ಇದ್ದಾರೆ ಅಲ್ಲಿ ಸಫಲತೆಯು ಸದಾ
ಪ್ರಾಪ್ತಿಯಿದೆ. ಅಂದಾಗ ಪರಿಶೀಲನೆ ಮಾಡಿಕೊಳ್ಳಿ - ಸಫಲತಾ ಸ್ವರೂಪ ಎಷ್ಟರ ಮಟ್ಟಿಗೆ ಆಗಿದ್ದೇನೆ?
ಒಂದುವೇಳೆ ಸಫಲತೆಯಲ್ಲಿ ಪಸೆರ್ಂಟೇಜ್ ಇದ್ದರೆ ಅದಕ್ಕೆ ಕಾರಣ ನಿಶ್ಚಯದಲ್ಲಿ ಪಸೆರ್ಂಟೇಜ್ ಇದೆ.
ನಿಶ್ಚಯ ಕೇವಲ ತಂದೆಯಲ್ಲಿ ಇದೆ. ಇದಂತೂ ಬಹಳ ಒಳ್ಳೆಯದು. ಆದರೆ ನಿಶ್ಚಯ - ತಂದೆಯಲ್ಲಿ ನಿಶ್ಚಯ,
ಸ್ವಯಂನ ಮೇಲೆ ನಿಶ್ಚಯ, ಡ್ರಾಮಾದ ಮೇಲೆ ನಿಶ್ಚಯ ಜೊತೆ ಜೊತೆಗೆ ಪರಿವಾರದಲ್ಲೂ ನಿಶ್ಚಯ. ಈ ನಾಲ್ಕೂ
ಪ್ರಕಾರದ ನಿಶ್ಚಯದ ಆಧಾರದಿಂದ ಸಫಲತೆ ಸಹಜ ಮತ್ತು ಸ್ವತಃವಾಗಿಯೇ ಇದೆ.
ತಂದೆಯಲ್ಲಿ ನಿಶ್ಚಯ
ಎಲ್ಲಾ ಮಕ್ಕಳಲ್ಲಿಯೂ ಇದೆ. ಆದ್ದರಿಂದಲೇ ಇಲ್ಲಿಗೆ ಬಂದಿದ್ದೀರಿ. ತಂದೆಗೂ ಸಹ ತಮ್ಮೆಲ್ಲರ ಮೇಲೆ
ನಿಶ್ಚಯವಿದೆ ಆದ್ದರಿಂದ ತನ್ನವರನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಬ್ರಾಹ್ಮಣ ಜೀವನದಲ್ಲಿ ಸಂಪನ್ನ
ಅಥವಾ ಸಂಪೂರ್ಣರಾಗಲು ಸ್ವಯಂನಲ್ಲೂ ಸಹ ನಿಶ್ಚಯ ಅವಶ್ಯಕವಾಗಿದೆ. ಬಾಪ್ದಾದಾರವರ ಮೂಲಕ
ಪ್ರಾಪ್ತಿಯಾದ ಶ್ರೇಷ್ಠ ಆತ್ಮನ ಸ್ವಮಾನ ಸದಾ ಸ್ಮೃತಿಯಲ್ಲಿರಲಿ. ನಾನು ಪರಮಾತ್ಮನ ಮೂಲಕ
ಸ್ವಮಾನಧಾರಿ, ಶ್ರೇಷ್ಠ ಆತ್ಮನಾಗಿದ್ದೇನೆ. ಸಾಧಾರಣ ಆತ್ಮನಲ್ಲ, ಪರಮಾತ್ಮ ಸ್ವಮಾನಧಾರಿ ಆತ್ಮ.
ಸ್ವಮಾನ ಪ್ರತಿಯೊಂದು ಸಂಕಲ್ಪ, ಪ್ರತೀ ಕರ್ಮದಲ್ಲಿ ಸಫಲತೆಯನ್ನು ಕೊಡಿಸುತ್ತದೆ. ಸಾಧಾರಣ ಕರ್ಮ
ಮಾಡುವ ಆತ್ಮನನ್ನು ಸ್ವಮಾನಧಾರಿ ಆತ್ಮನಾಗಿದ್ದೇನೆ ಅಂದಾಗ ಪ್ರತಿಯೊಂದು ಕರ್ಮದಲ್ಲಿ ಸ್ವಮಾನ ತಮಗೆ
ಸಫಲತೆಯನ್ನು ಸಹಜವಾಗಿ ನೀಡುತ್ತದೆ. ಸ್ವಯಂನಲ್ಲಿ ನಿಶ್ಚಯದ ಚಿಹ್ನೆಯಾಗಿದೆ - ಸಫಲತೆ ಅಥವಾ ವಿಜಯ.
ಹಾಗೆಯೇ ತಂದೆಯಲ್ಲೂ ಸಹ ಪಕ್ಕಾ ನಿಶ್ಚಯವಿದೆ. ಅದರ ವಿಶೇಷತೆಯಾಗಿದೆ - ನಿರಂತರ ನಾನು ತಂದೆಯವನ್ನು
ಮತ್ತು ತಂದೆ ನನ್ನವರು. ಇದು ನಿರಂತರ ವಿಜಯದ ಆಧಾರವಾಗಿದೆ. ನನ್ನ ಬಾಬಾ ಕೇವಲ ಬಾಬಾ ಅಲ್ಲ, ನನ್ನ
ಬಾಬಾ. ನನ್ನದರ ಮೇಲೆ ಅಧಿಕಾರವಿರುತ್ತದೆ ಅಂದಾಗ ನನ್ನ ಬಾಬಾ, ನಿಶ್ಚಯಬುದ್ಧಿ ಆತ್ಮ ಸದಾ ಸಫಲತೆಯ,
ವಿಜಯದ ಅಧಿಕಾರಿಯಾಗಿದ್ದಾರೆ. ಹಾಗೆಯೇ ಡ್ರಾಮಾದಲ್ಲಿಯೂ ಸಹ ಸಂಪೂರ್ಣ ನಿಶ್ಚಯವಿರಬೇಕು. ಸಫಲತೆ
ಮತ್ತು ಸಮಸ್ಯೆ ಎರಡೂ ಪ್ರಕಾರದ ಮಾತು ಡ್ರಾಮಾದಲ್ಲಿ ಬರುತ್ತವೆ. ಆದರೆ ಸಮಸ್ಯೆಯ ಸಮಯದಲ್ಲಿ
ನಿಶ್ಚಯಬುದ್ದಿಯ ಗುರುತಾಗಿದೆ - ಸಮಾಧಾನ ಸ್ವರೂಪರಾಗಿರುವುದು. ಸಮಸ್ಯೆಯನ್ನು ಸೆಕೆಂಡ್ನಲ್ಲಿ
ಸಮಾಧಾನ ಸ್ವರೂಪದ ಮೂಲಕ ಪರಿವರ್ತನೆ ಮಾಡಿಕೊಳ್ಳುವುದು. ಸಮಸ್ಯೆಯ ಕೆಲಸವಾಗಿದೆ ಬರುವುದು,
ನಿಶ್ಚಯಬುದ್ಧಿಯ ಆತ್ಮನ ಕೆಲಸವಾಗಿದೆ ಸಮಾಧಾನ ಸ್ವರೂಪದಿಂದ ಪರಿವರ್ತನೆ ಮಾಡುವುದು. ಏಕೆ? ತಾವು
ಪ್ರತಿಯೊಬ್ಬ ಆತ್ಮನ ಬಗ್ಗೆ ಬ್ರಾಹ್ಮಣ ಜನ್ಮವನ್ನು ತೆಗೆದುಕೊಳ್ಳುತ್ತಲೇ ಚಾಲೆಂಜ್ ಮಾಡಿದ್ದೀರಿ.
ಮಾಯಾಜೀತರಾಗುತ್ತೇವೆಂದು ಮಾಡಿದ್ದೀರಲ್ಲವೇ ಅಥವಾ ಮರೆತುಬಿಟ್ಟಿದ್ದೀರೋ? ಅಂದಾಗ ಸಮಸ್ಯೆಯ ಸ್ವರೂಪ
ಮಾಯೆಯ ಸ್ವರೂಪವಾಗಿದೆ. ಯಾವಾಗ ಚಾಲೆಂಜ್ ಮಾಡುತ್ತೀರೆಂದರೆ ಮಾಯೆಯು ಎದುರಿಸುವುದಕ್ಕೆ
ಬರುತ್ತದೆಯಲ್ಲವೆ! ಅದು ಭಿನ್ನ-ಭಿನ್ನ ಸಮಸ್ಯೆಯ ರೂಪದಲ್ಲಿ ನಿಮ್ಮ ಚಾಲೆಂಜ್ನ್ನು ಪೂರ್ಣ ಮಾಡಲು
ಬರುತ್ತದೆ. ತಾವು ನಿಶ್ಚಯಬುದ್ಧಿ, ವಿಜಯೀಸ್ವರೂಪದಿಂದ ಪಾರು ಮಾಡಬೇಕು, ಏಕೆ? ಇದು ಹೊಸದೇನಲ್ಲ (ನತಿಂಗ್
ನ್ಯೂ). ಎಷ್ಟು ಬಾರಿ ವಿಜಯಿಗಳಾಗಿದ್ದೀರಿ. ಈಗ ಮೊದಲನೇ ಸಾರಿ ಸಂಗಮದಲ್ಲಿ ವಿಜಯಿಗಳಾಗಿದ್ದೀರೋ
ಅಥವಾ ಅನೇಕ ಬಾರಿ ಆಗಿದ್ದೀರೋ, ಅದನ್ನು ರಿಪೀಟ್ ಮಾಡಿದ್ದೀರೋ? ಆದ್ದರಿಂದ ಸಮಸ್ಯೆ ನಿಮಗೇನೂ
ಹೊಸದೇನಲ್ಲ, ನಥಿಂಗ್ ನ್ಯೂ. ಅನೇಕ ಬಾರಿ ವಿಜಯಿಗಳಾಗಿದ್ದೀರಿ. ಆಗುತ್ತಿದ್ದೀರಿ ಮತ್ತು ಮುಂದೆಯೂ
ಸಹ ಆಗುತ್ತೀರಿ. ಇದಾಗಿದೆ ಡ್ರಾಮಾದ ಮೇಲೆ ನಿಶ್ಚಯಬುದ್ಧಿ ವಿಜಯಿ. ಉಳಿದದ್ದು - ಬ್ರಾಹ್ಮಣ
ಪರಿವಾರದಲ್ಲಿ ನಿಶ್ಚಯ, ಏಕೆ? ಬ್ರಾಹ್ಮಣ ಪರಿವಾರದ ಅರ್ಥವೇ ಆಗಿದೆ ಸಂಘಟನೆ. ಚಿಕ್ಕ ಪರಿವಾರವಲ್ಲ,
ಬ್ರಹ್ಮಾತಂದೆಯ ಬ್ರಾಹ್ಮಣ ಪರಿವಾರ ಎಲ್ಲಾ ಪರಿವಾರಕ್ಕಿಂತ ಶ್ರೇಷ್ಠ ಮತ್ತು ದೊಡ್ಡದಾಗಿದೆ. ಅಂದಾಗ
ಪರಿವಾರದ ಮಧ್ಯದಲ್ಲಿ, ಪರಿವಾರದ ಪ್ರೀತಿ ಮತ್ತು ಪ್ರೀತಿಯನ್ನು ನಿಭಾಯಿಸುವಂತಹ ವಿಜಯಿ. ಈ
ರೀತಿಯಲ್ಲ ತಂದೆಯು ನನ್ನವರು, ನಾನು ಬಾಬಾನವನು, ಎಲ್ಲವೂ ಮುಗಿಯಿತು. ತಂದೆಯ ಜೊತೆ ಕೆಲಸವಿದೆ ಆದರೆ
ಪರಿವಾರದ ಜೊತೆ ಕೆಲಸವೇನಿದೆ. ಆದರೆ ಇದೂ ಸಹ ನಿಶ್ಚಯದ ವಿಶೇಷತೆಯಾಗಿದೆ. ನಾಲ್ಕೂ ಮಾತಿನ
ನಿಶ್ಚಯದಲ್ಲಿ ವಿಜಯದ ಅವಶ್ಯಕತೆಯಿದೆ. ಪರಿವಾರವೂ ಸಹ ಎಲ್ಲರನ್ನು ಕೆಲವು ಮಾತುಗಳಲ್ಲಿ
ಶಕ್ತಿಶಾಲಿಗಳನ್ನಾಗಿ ಮಾಡುತ್ತದೆ. ಕೇವಲ ಪರಿವಾರದಲ್ಲಿ ಎಲ್ಲರೂ ತನ್ನ ತನ್ನ ಧಾರಣೆಯು ನಂಬರ್ವಾರ್
ಧಾರಣಾ ಸ್ವರೂಪರಾಗಿದ್ದಾರೆ ಎಂಬ ಸ್ಮೃತಿಯಿರಲಿ. ವಿವಿಧತೆಯಿದೆ. ಇದರ ನೆನಪಾರ್ಥವಾಗಿ 108ರ
ಮಾಲೆಯಿದೆ. ಯೋಚಿಸಿ - ಮೊದಲನೆಯ ನಂಬರ್ ಎಲ್ಲಿ, 108ನೇ ನಂಬರ್ ಎಲ್ಲಿ, ಈ ರೀತಿ ಏಕೆ ಆಯಿತು?
ಎಲ್ಲರೂ ಮೊದಲನೆ ನಂಬರ್ ಏಕೆ ಆಗಲಿಲ್ಲ? 16000 ಏಕೆ ಆದರು? ಕಾರಣ? ವಿವಿಧ ಸಂಸ್ಕಾರವನ್ನು ತಿಳಿದು
ಜ್ಞಾನಪೂರ್ಣರಾಗಿ ನಡೆಯಬೇಕು, ನಿಭಾಯಿಸುವುದು. ಇದೇ ಸಫಲತಾಪೂರ್ಣ ಸ್ಥಿತಿಯಾಗಿದೆ,
ನಡೆಯಲೇಬೇಕಾಗುತ್ತದೆ. ಪರಿವಾರವನ್ನು ಬಿಟ್ಟು ಎಲ್ಲಿಗೆ ಹೋಗುತ್ತೀರಿ. ನಮ್ಮದು ಎಷ್ಟೊಂದು ದೊಡ್ಡ
ಪರಿವಾರವಿದೆ ಎಂದು ನಶೆಯೂ ಸಹ ಇದೆಯಲ್ಲವೆ. ವಿಶಾಲ ಪರಿವಾರದಲ್ಲಿ ವಿಶಾಲ ಹೃದಯದಿಂದ ಪ್ರತಿಯೊಬ್ಬರ
ಸಂಸ್ಕಾರವನ್ನು ತಿಳಿದೂ ನಡೆಯುವುದು, ನಿರ್ಮಾಣರಾಗಿ ನಡೆಯುವುದು, ಶುಭಭಾವನೆ, ಶುಭಕಾಮನೆಯ
ವೃತ್ತಿಯಿಂದ ನಡೆಯುವುದು... ಇದೇ ಪರಿವಾರದ ಮೇಲಿನ ನಿಶ್ಚಯಬುದ್ದಿ, ವಿಜಯದ ಗುರುತಾಗಿದೆ. ಅಂದಾಗ
ಎಲ್ಲರೂ ವಿಜಯಿಗಳಾಗಿದ್ದೀರಲ್ಲವೇ?
ಡಬಲ್ ವಿದೇಶಿಗಳು
ವಿಜಯಿಯಾಗಿದ್ದೀರಾ? ಕೈಯಂತೂ ಬಹಳ ಚೆನ್ನಾಗಿ ಅಲುಗಾಡಿಸುತ್ತೀರಿ. ಬಹಳ ಒಳ್ಳೆಯದು.
ಬಾಪ್ದಾದಾರವರಿಗೆ ಖುಷಿಯಿದೆ. ಒಳ್ಳೆಯದು. ಶಿಕ್ಷಕಿಯರು ವಿಜಯಿಗಳಾಗಿದ್ದೀರಾ? ಅಥವಾ ಅಲ್ಪಸ್ವಲ್ಪ
ಆಗುತ್ತದೆಯೋ? ಏನು ಮಾಡಲಿ, ಇದಂತೂ ಇಲ್ಲವೇ! ಹೇಗೆ ಬದಲಾಗಿ ಹೀಗೆ ಶಬ್ದವನ್ನು ಉಪಯೋಗಿಸಿ, ಹೇಗೆ
ಮಾಡಲಿ ಅಲ್ಲ ಹೀಗೆ ಮಾಡುವುದು. 21 ಜನ್ಮದ ಸಂಬಂಧ ಪರಿವಾರದ ಜೊತೆಯಿದೆ. ಆದ್ದರಿಂದ ಯಾರು
ಪರಿವಾರದಲ್ಲಿ ಉತ್ತೀರ್ಣ (ಪಾಸ್) ಆಗುತ್ತಾರೆ ಅವರು ಎಲ್ಲದರಲ್ಲೂ ಉತ್ತೀರ್ಣರಾಗುತ್ತಾರೆ.
ಅಂದಾಗ ನಾಲ್ಕೂ ಪ್ರಕಾರದ
ನಿಶ್ಚಯವನ್ನು ಚೆಕ್ ಮಾಡಿಕೊಳ್ಳಿ ಏಕೆಂದರೆ ಪ್ರಭುಪ್ರಿಯರ ಜೊತೆಗೆ ಪರಿವಾರದ ಪ್ರಿಯರೂ ಆಗಬೇಕು ಇದು
ಅತೀ ಅವಶ್ಯಕತೆಯಿದೆ. ಅಂಕಗಳು ಈ ನಾಲ್ಕೂ ಪ್ರಕಾರದ ನಿಶ್ಚಯ ಪಸೆರ್ಂಟೇಜ್ ಅನುಸಾರ ಸಿಗುತ್ತದೆ.
ನಾನು ಬಾಬಾನವನು, ಬಾಬಾ ನನ್ನವರು, ಆಯಿತು ಈ ರೀತಿಯಲ್ಲ. ನನ್ನ ಬಾಬಾ ಎಂದು ಬಹಳ ಚೆನ್ನಾಗಿ
ಹೇಳುತ್ತೀರಿ ಮತ್ತು ಸದಾ ಈ ನಿಶ್ಚಯದಲ್ಲಿ ಆಟಲವಾಗಿದ್ದೀರಿ, ಇದಕ್ಕಾಗಿ ಅಭಿನಂದನೆಗಳು, ಆದರೆ
ಇನ್ನೂ ಮೂರು ಉಳಿದಿವೆ. ಟೀಚರ್ಸ್, ನಾಲ್ಕೂ ಅವಶ್ಯಕತೆಯಿದೆಯೇ? ಅಥವಾ ಮೂರು ಅವಶ್ಯಕತೆಯಿದೆ
ಒಂದಲ್ಲ. ನಾಲ್ಕೂ ಪ್ರಕಾರದ ನಿಶ್ಚಯದ ಅವಶ್ಯಕತೆಯಿದೆ ಎಂದು ತಿಳಿಯುವವರು ಕೈಯನ್ನು ಎತ್ತಿ.
ಎಲ್ಲರಿಗೂ ನಾಲ್ಕೂ ಮಾತಿನ ಬಗ್ಗೆ ಇಷ್ಟವಿದೆಯೇ? ಯಾರಿಗೆ ಮೂರು ಮಾತಿನಲ್ಲಿ ನಿಶ್ಚಯವಿದೆ ಅವರು
ಕೈಯನ್ನು ಎತ್ತಿ. ಯಾರೂ ಇಲ್ಲ. ನಿಭಾಯಿಸಲು ಕಷ್ಟವಾಗುವುದಿಲ್ಲವೆ? ಬಹಳ ಒಳ್ಳೆಯದು. ಒಂದುವೇಳೆ
ಮನಃಪೂರ್ವಕವಾಗಿ ಕೈಯನ್ನು ಎತ್ತಿದ್ದರೆ ಎಲ್ಲರೂ ಪಾಸ್ ಆಗಿದಿರಿ, ಒಳ್ಳೆಯದು.
ನೋಡಿ, ಎಲ್ಲೆಲ್ಲಿಂದ
ಮಧುಬನದಲ್ಲಿ ಭಿನ್ನ ಭಿನ್ನ ದೇಶದ ಕೊಂಬೆಗಳು ಮಧುಬನದಲ್ಲಿ ಒಂದು ವೃಕ್ಷವಾಗಿದ್ದೀರಿ. ಮಧುಬನದಲ್ಲಿ
ನೆನಪಿರುತ್ತದೆಯೇ ನಾನು ದೆಹಲಿಯವನು, ನಾನು ಕರ್ನಾಟಕದವನು, ನಾನು ಗುಜರಾತಿನವನು ಎಂದು ಮಧುಬನದಲ್ಲಿ
ನೆನಪಿರುತ್ತದೆಯೇ? ಎಲ್ಲರೂ ಮಧುಬನ ನಿವಾಸಿಗಳೇ ಆಗಿದ್ದೀರಿ. ಅಂದಾಗ ಒಂದೇ ವೃಕ್ಷ ಆಯಿತಲ್ಲವೇ. ಈ
ಸಮಯದಲ್ಲಿ ಎಲ್ಲರೂ ಏನೆಂದು ತಿಳಿದುಕೊಂಡಿದ್ದೀರಿ, ಮಧುಬನ ನಿವಾಸಿಗಳಾಗಿದ್ದೀರಿ ಅಥವಾ ತಮ್ಮ ತಮ್ಮ
ದೇಶದ ನಿವಾಸಿಗಳಾಗಿದ್ದೀರಾ, ಮಧುಬನ ನಿವಾಸಿಗಳಾಗಿದ್ದೀರಾ? ಎಲ್ಲರೂ ಮಧುಬನ ನಿವಾಸಿಗಳೇ, ಬಹಳ
ಒಳ್ಳೆಯದು. ಪ್ರತಿಯೊಬ್ಬ ಬ್ರಾಹ್ಮಣನ ಸ್ಥಿರವಾದ ವಿಳಾಸ ಮಧುಬನವೇ ಆಗಿದೆ. ತಮ್ಮ ಸ್ಥಿರವಾದ ವಿಳಾಸ
ಯಾವುದಾಗಿದೆ? ಬಾಂಬೆಯಾಗಿದೆಯೇ? ದೆಹಲಿಯಾಗಿದೆಯೇ? ಪಂಜಾಬ್ ಆಗಿದೆಯೇ? ಮಧುಬನ ಸ್ಥಿರವಾದ
ವಿಳಾಸವಾಗಿದೆ. ಎಲ್ಲರನ್ನು ಸೇವೆಗೋಸ್ಕರ ಸೇವಾಕೇಂದ್ರಗಳಿಗೆ ಕಳುಹಿಸಲಾಗಿದೆ. ಅದು
ಸೇವಾಸ್ಥಾನವಾಗಿದೆ. ಮಧುಬನವು ತಮ್ಮ ಮನೆಯಾಗಿದೆ. ಕೊನೆಗೆ ಆಶ್ರಯ ಎಲ್ಲಿ ಸಿಗುತ್ತದೆ? ಮಧುಬನವೇ
ಆಗಿದೆಯಲ್ಲವೆ. ಆದ್ದರಿಂದ ದೊಡ್ಡ ದೊಡ್ಡ ಸ್ಥಾನಗಳು ಮಾಡಲ್ಪಟ್ಟಿವೆ!
ತಂದೆಯ ಸಮಾನರಾಗುವುದು
ಎಲ್ಲರ ಲಕ್ಷ್ಯವಾಗಿದೆ. ಇಡೀ ದಿನ ಮನಸ್ಸಿನ ಡ್ರಿಲ್ನ್ನು ಮಾಡಬೇಕು. ಶರೀರದ ಡ್ರಿಲ್ ಮಾಡಿದಾಗ
ಶಾರೀರಿಕ ಆರೋಗ್ಯವು ಸಿಗುತ್ತದೆ ಏಕೆಂದರೆ ಇಂದಿನ ಔಷಧಿಗಳಿಗೆ ವ್ಯಾಯಾಮ ಅವಶ್ಯಕವಿದೆ. ಅದನ್ನು
ಸಮಯದಲ್ಲಿ ವೇಗವಾಗಿ ಮಾಡಬೇಕು. ಸೇವೆಯ ಸಮಯದಲ್ಲಿ ವ್ಯಾಯಾಮ ಮಾಡಬಾರದು. ಬಾಕಿ ಸಮಯದಲ್ಲಿ ವ್ಯಾಯಾಮ
ಮಾಡುವುದು ಒಳ್ಳೆಯದು ಆದರೆ ಜೊತೆಜೊತೆಗೆ ಮನಸ್ಸಿನ ವ್ಯಾಯಾಮವನ್ನು ಪದೇ ಪದೇ ಮಾಡಬೇಕು. ತಂದೆಯ
ಸಮಾನ ಆಗಬೇಕಾದರೆ ಒಂದು ನಿರಾಕಾರಸ್ಥಿತಿ, ಮತ್ತೊಂದು ಅವ್ಯಕ್ತ ಫರಿಸ್ತಾ ಸ್ಥಿತಿಯಾಗಿದೆ. ಅಂದಾಗ
ಯಾವಾಗ ಸಮಯ ಸಿಗುತ್ತದೆ ಆಗ ಸೆಕೆಂಡಿನಲ್ಲಿ ತಂದೆಯ ಸಮಾನ ನಿರಾಕಾರಿ ಸ್ಥಿತಿಯಲ್ಲಿ ಸ್ಥಿತರಾಗಬೇಕು,
ತಂದೆಯ ಸಮಾನವಾಗಬೇಕಾದರೆ ನಿರಾಕಾರಿ ಸ್ಥಿತಿಯೇ ತಂದೆಯ ಸಮಾನವಾಗಿದೆ. ಕಾರ್ಯವನ್ನು ಮಾಡುತ್ತಾ
ಫರಿಸ್ತೆಗಳಾಗಿ ಕರ್ಮವನ್ನು ಮಾಡಿ. ಫರಿಸ್ತಾ ಅರ್ಥಾತ್ ಡಬಲ್ಲೈಟ್. ಕಾರ್ಯದ ಹೊರೆಯಿರುವುದಿಲ್ಲ.
ಕಾರ್ಯದ ಹೊರೆಯು ಅವ್ಯಕ್ತ ಫರಿಸ್ತೆಗಳಾಗಲು ಬಿಡುವುದಿಲ್ಲ. ಅಂದಾಗ ಮಧ್ಯ ಮಧ್ಯದಲ್ಲಿ ನಿರಾಕಾರಿ
ಮತ್ತು ಫರಿಸ್ತಾ ಸ್ವರೂಪದ ಮನಸ್ಸಿನ ವ್ಯಾಯಾಮವನ್ನು ಮಾಡಿದಾಗ ಸುಸ್ತಾಗುವುದಿಲ್ಲ. ಹೇಗೆ ಬ್ರಹ್ಮಾ
ತಂದೆಯನ್ನು ಸಾಕಾರ ರೂಪದಲ್ಲಿ ಡಬಲ್ಲೈಟ್ ಆಗಿ ನೋಡಿದಿರಿ. ಅವರಿಗೆ ಸೇವೆಯ ಹೊರೆಯಿರಲಿಲ್ಲ.
ಅವ್ಯಕ್ತ ಫರಿಸ್ತಾ ರೂಪ ಅಂದಾಗ ಸಹಜವಾಗಿ ತಂದೆಯ ಸಮಾನವಾದರು. ಆತ್ಮವೂ ಸಹ ನಿರಾಕಾರಿಯಾಗಿದೆ ಮತ್ತು
ಆತ್ಮ ನಿರಾಕಾರ ಸ್ಥಿತಿಯಲ್ಲಿ ಸ್ಥಿತವಾದಾಗ ನಿರಾಕಾರ ತಂದೆಯ ನೆನಪು ಸಹಜವಾಗಿ ಸಮಾನ ಮಾಡುತ್ತದೆ.
ಈಗೀಗ ಒಂದು ಸೆಕೆಂಡಿನಲ್ಲಿ ನಿರಾಕಾರ ಸ್ಥಿತಿಯಲ್ಲಿ ಸ್ಥಿತರಾಗುತ್ತೀರಾ? ಆಗುತ್ತದೆಯೇ? (ಬಾಪ್ದಾದಾ
ಡ್ರಿಲ್ ಮಾಡಿಸಿದರು) ಈ ಅಭ್ಯಾಸ ಮತ್ತು ಗಮನ ನಡೆಯುತ್ತಾ, ತಿರುಗಾಡುತ್ತಾ, ಕರ್ಮ ಮಾಡುತ್ತಾ ಮಧ್ಯ
ಮಧ್ಯದಲ್ಲಿ ಮಾಡುತ್ತಿರಬೇಕು. ಆಗ ಈ ಅಭ್ಯಾಸ ಮನಸಾ ಸೇವೆಯನ್ನು ಮಾಡುವುದರಲ್ಲಿ ಸಹಯೋಗವನ್ನು
ಕೊಡುತ್ತದೆ ಮತ್ತು ಶಕ್ತಿಶಾಲಿ ಯೋಗದ ಸ್ಥಿತಿಯಲ್ಲಿರಲು ಬಹಳ ಸಹಯೋಗ ಸಿಗುತ್ತದೆ. ಒಳ್ಳೆಯದು.
ಡಬಲ್ ವಿದೇಶಿಗಳೊಂದಿಗೆ
- ನೋಡಿ ಡಬಲ್ ವಿದೇಶಿಗಳಿಗೆ ಈ ಸೀಜನ್ನಲ್ಲಿ ಕಾರಣವಾಗಿಯೋ ಅಥವಾ ಅಕಾರಣವಾಗಿಯೋ ಎಲ್ಲಾ
ಗ್ರೂಪ್ನಲ್ಲಿಯೂ ಅವಕಾಶ ಸಿಕ್ಕಿದೆ. ಪ್ರತಿಯೊಂದು ಗ್ರೂಪ್ನಲ್ಲೂ ಸಹ ಬರುವುದಕ್ಕೆ ಸ್ವತಂತ್ರತೆಯಿದೆ.
ಅಂದಾಗ ಇದು ಭಾಗ್ಯವಲ್ಲವೇ, ಡಬಲ್ ಭಾಗ್ಯವಾಗಿದೆ. ಬಾಪ್ದಾದಾ ನೋಡುತ್ತಿದ್ದಾರೆ. ಈ ಗ್ರೂಪ್ನಲ್ಲಿಯೂ
ಸಹ ಕೆಲವರು ಮೊದಲನೇ ಬಾರಿ ಬಂದಿದ್ದಾರೆ, ಕೆಲವರು ಮುಂಚೆಯೇ ಬಂದಿದ್ದಾರೆ. ಬಾಪ್ದಾದಾರವರ ದೃಷ್ಟಿ
ಎಲ್ಲಾ ವಿದೇಶಿಗಳ ಮೇಲಿದೆ. ನಿಮಗೆ ಎಷ್ಟು ತಂದೆಯ ಮೇಲೆ ಪ್ರೀತಿಯಿದೆ, ನಿಮಗಿಂತಲೂ ಪದಮಗುಣದಷ್ಟು
ತಂದೆಗೆ ಪ್ರೀತಿಯಿದೆ. ಸರಿಯಾಗಿದೆಯಲ್ಲವೇ! ಪದಮಗುಣವಾಗಿದೆಯೇ? ನಿಮ್ಮದೂ ಪ್ರೀತಿಯಿದೆ, ನಿಮ್ಮ
ಪ್ರೀತಿ ಮನಸ್ಸಿನ ಪ್ರೀತಿಯಾಗಿದೆ. ಆದ್ದರಿಂದ ಬಂದು ತಲುಪಿದ್ದೀರಿ. ಡಬಲ್ ವಿದೇಶಿಗಳು ಈ
ಬ್ರಾಹ್ಮಣ ಪರಿವಾರದ ಶೃಂಗಾರವಾಗಿದ್ದಾರೆ. ವಿಶೇಷವಾಗಿ ಶೃಂಗಾರವಾಗಿದ್ದೀರಿ. ಪ್ರತಿಯೊಂದು
ದೇಶವನ್ನು ಬಾಪ್ದಾದಾ ನೋಡುತ್ತಿದ್ದಾರೆ - ನೆನಪಿನಲ್ಲಿ ಕುಳಿತಿದ್ದಾರೆ. ಕೇಳುತ್ತಿದ್ದರು
ನೆನಪಿನಲ್ಲಿಯೂ ಕುಳಿತುಕೊಂಡಿದ್ದಾರೆ. ಬಹಳ ಒಳ್ಳೆಯದು.
ಶಿಕ್ಷಕಿಯರು:
ಶಿಕ್ಷಕಿಯರ ಗುಂಪು ಬಹಳ
ದೊಡ್ಡದಿದೆ. ಬಾಪ್ದಾದಾ ಶಿಕ್ಷಕಿಯರಿಗೆ ಒಂದು ಬಿರುದನ್ನು ಕೊಡುತ್ತಾರೆ. ಅದು ಯಾವ ಬಿರುದಾಗಿದೆ?
ಸ್ನೇಹಿತರಂತೂ ಎಲ್ಲರೂ ಆಗಿದ್ದೀರಿ. ಡಬಲ್ ವಿದೇಶಿಗಳಂತೂ ಮೊದಲೇ ಸ್ನೇಹಿಗಳಾಗಿದ್ದಾರೆ. ಅವರಿಗೆ
ಸ್ನೇಹಿತನ ಸಂಬಂಧ ಇಷ್ಟವಾಗುತ್ತದೆ. ಶಿಕ್ಷಕಿಯರಿಗೆ ಬಾಪ್ದಾದಾ ಯಾರು ಯೋಗ್ಯವಾದ
ಶಿಕ್ಷಕಿಯರಾಗಿದ್ದಾರೆ. ಎಲ್ಲರಿಗೂ ಸಹ ಅಲ್ಲ. ಯಾರು ಯೋಗ್ಯವಾಗಿದ್ದಾರೆ. ಅವರಿಗೆ ಬಾಪ್ದಾದಾ
ಹೇಳುತ್ತಾರೆ - ಇವರು ಗುರು, ಸಹೋದರ ಆಗಿದ್ದಾರೆ. ಹೇಗೆ ದೊಡ್ಡ ಮಕ್ಕಳು ತಂದೆಯ
ಸಮಾನವಾಗುತ್ತಾರಲ್ಲವೇ, ಹಾಗೆಯೇ ಶಿಕ್ಷಕಿಯರೂ ಸಹ ಗುರು, ಸಹೋದರ ಆಗಿದ್ದಾರೆ ಏಕೆಂದರೆ ಸದಾ ತಂದೆಯ
ಸೇವೆಯಲ್ಲಿ ನಿಮಿತ್ತರಾಗಿರುತ್ತಾರೆ. ತಂದೆಯ ಸಮಾನ ಸೇವಾಧಾರಿಯಾಗಿದ್ದಾರೆ. ನೋಡಿ, ಶಿಕ್ಷಕಿಯರಿಗೆ
ತಂದೆಯ ಸಿಂಹಾಸನ ಮುರುಳಿಯನ್ನು ನುಡಿಸಲು ಸಿಗುತ್ತದೆ. ಗುರುವಿನ ಗದ್ದಿಯು ಸಿಕ್ಕಿದೆಯಲ್ಲವೆ!
ಆದ್ದರಿಂದ ಶಿಕ್ಷಕಿ ಅರ್ಥಾತ್ ನಿರಂತರ ಸೇವಾಧಾರಿಗಳಾಗಿದ್ದಾರೆ. ಅವರು ಮನಸಾ-ವಾಚಾ ಅಥವಾ
ಸಂಬಂಧ-ಸಂಪರ್ಕದ ಮುಖಾಂತರ ಕರ್ಮಣಾ ಸದಾ ಸೇವಾಧಾರಿ ಈ ರೀತಿಯಲ್ಲವೇ! ಆರಾಮ ಪ್ರಿಯರಾಗಬಾರದು.
ಸೇವಾಧಾರಿ ಸೇವೆ, ಸೇವೆ ಮತ್ತು ಸೇವೆ. ಸರಿಯಾಗಿದೆಯಲ್ಲವೇ? ಒಳ್ಳೆಯದು.
ಸೇವಾಧಾರಿಗಳಲ್ಲಿ ದೆಹಲಿ,
ಆಗ್ರಾದ ಟರ್ನ್ ಆಗಿದೆ: ಆಗ್ರ ಜೊತೆಗಾರ ಆಗಿದೆ ದೆಹಲಿಯ ಸೈನ್ಯ ಬಹಳ ದೊಡ್ಡದಾಗಿದೆ. ಒಳ್ಳೆಯದು.
ದೆಹಲಿಯಲ್ಲಿ ಸ್ಥಾಪನೆಯ ತಳಪಾಯವನ್ನು ಹಾಕಲಾಗಿದೆ. ಬಹಳ ಒಳ್ಳೆಯದು. ಈಗ ತಂದೆಯ ಪ್ರತ್ಯಕ್ಷತೆಯನ್ನು
ಮಾಡಲು ತಳಪಾಯ ಎಲ್ಲಿಂದ ಹಾಕಲಾಗಿದೆ? ದೆಹಲಿಯಿಂದಲೋ ಅಥವಾ ಮಹಾರಾಷ್ಟ್ರದಿಂದಲೋ? ಕರ್ನಾಟಕದಿಂದಲೋ
ಅಥವಾ ಲಂಡನ್ನಿಂದಲೋ? ಎಲ್ಲಿಂದ ಆಗುತ್ತದೆ? ದೆಹಲಿಯಿಂದ ಆಗುತ್ತದೆಯೇ? ನಿರಂತರ ಸೇವೆ ಮತ್ತು
ತಪಸ್ಸನ್ನು ಮಾಡಿ. ಸೇವೆ ಮತ್ತು ತಪಸ್ಸು, ಈ ಎರಡರ ಬ್ಯಾಲೆನ್ಸ್ನಿಂದ ಆಗುತ್ತದೆ. ಹೇಗೆ ಸೇವೆಯ
ಡೈಲಾಗ್ ಮಾಡಲಾಗಿದೆ. ಹಾಗೆಯೇ ದೆಹಲಿಯಲ್ಲಿ ತಪಸ್ಸಿನ ವರ್ಣನೆ ಮಾಡುವ ಡೈಲಾಗ್ ಮಾಡಿದಾಗ ದೆಹಲಿ,
ದೆಹಲಿ ಎಂದು ಹೇಳಲಾಗುತ್ತದೆ. ಮನಸ್ಸು ತಂದೆಯದಾಗಿದೆ ಆದರೆ ಕಾರ್ಯ ಮಾಡಿ ತೋರಿಸುವುದೇ ತಂದೆಯ
ಮನಸ್ಸಿಗೆ ಪ್ರಿಯರಾಗುವುದಾಗಿದೆ. ಪಾಂಡವರು ಮಾಡಬೇಕಲ್ಲವೇ? ಮಾಡುತ್ತೀರಾ, ಆವಶ್ಯಕವಾಗಿ
ಮಾಡುತ್ತೀರಾ. ಆ ರೀತಿ ತಪಸ್ಸನ್ನು ಮಾಡಬೇಕು. ಹೇಗೆ ಎಲ್ಲಾ ಪತಂಗಗಳು ಬಾಬಾ, ಬಾಬಾ ಎಂದು ಹೇಳುತ್ತಾ
ದೆಹಲಿಯ ವಿಶೇಷ ಸ್ಥಾನಕ್ಕೆ ತಲುಪಬೇಕು. ಪತಂಗಗಳು ಬಾಬಾ, ಬಾಬಾ ಎಂದು ಹೇಳುತ್ತಾ ಬರಬೇಕು, ಆಗ
ಪ್ರತ್ಯಕ್ಷತೆ ಎಂದು ಹೇಳಲಾಗುತ್ತದೆ. ಅಂದಾಗ ಇದನ್ನು ಮಾಡಬೇಕು. ಮುಂದಿನ ವರ್ಷ ಈ ಡೈಲಾಗನ್ನು
ಮಾಡಬೇಕು ಮತ್ತು ಎಷ್ಟು ಪತಂಗಗಳು ಬಾಬಾ, ಬಾಬಾ ಎಂದು ಸ್ವಾಹಾ ಆದರು ಎನ್ನುವ ಫಲಿತಾಂಶ
ತಿಳಿಸಬೇಕಾಗಿದೆ. ಸರಿಯಾಗಿದೆಯಲ್ಲವೆ. ಬಹಳ ಒಳ್ಳೆಯದು. ಮಾತೆಯರೂ ಸಹ ಅನೇಕರಿದ್ದಾರೆ.
ಕುಮಾರ-ಕುಮಾರಿಯರು:
ಕುಮಾರ ಮತ್ತು ಕುಮಾರಿಯರು ಅರ್ಧ ಹಾಲ್ನಲ್ಲಿ ಕುಮಾರ-ಕುಮಾರಿಯರೇ ಇದ್ದಾರೆ. ಶಹಭಾಸ್
ಕುಮಾರ-ಕುಮಾರಿಯರೇ, ಕುಮಾರ-ಕುಮಾರಿಯರು ಜ್ವಾಲಾರೂಪರಾಗಿ ಆತ್ಮಗಳನ್ನು ಪಾವನರನ್ನಾಗಿ ಮಾಡಬೇಕು.
ಇಂದಿನ ಕುಮಾರ-ಕುಮಾರಿರ ಮೇಲೆ ದಯೆ ಬರಬೇಕು ಏಕೆಂದರೆ ಅವರು ಎಷ್ಟೊಂದು ಅಲೆದಾಡುತ್ತಿದ್ದಾರೆ.
ಅಲೆದಾಡುತ್ತಿರುವಂತಹ ಸಂಬಂಧಿಗಳಿಗೆ ಮಾರ್ಗವನ್ನು ತೋರಿಸಬೇಕಾಗಿದೆ. ಒಳ್ಳೆಯದು. ಈ ಇಡೀ ವರ್ಷದಲ್ಲಿ
ಯಾರೆಲ್ಲಾ ಕುಮಾರ-ಕುಮಾರಿಯರು ಬಂದಿದ್ದೀರಿ, ನೀವು ಆತ್ಮಗಳನ್ನು ಎಷ್ಟು ತಮ್ಮ ಸಮಾನ
ಮಾಡಿಕೊಂಡಿದ್ದೀರಿ. ಅವರು ಕೈಯನ್ನು ಎತ್ತಿ. ಯಾರು ಸೇವೆಯಲ್ಲಿ ತಮ್ಮ ಸಮಾನ ಮಾಡಿಕೊಂಡಿದ್ದೀರಿ
ಅವರು ದೊಡ್ಡ ಕೈಯನ್ನು ಎತ್ತಬೇಕು. ಕುಮಾರಿಯರು ತಮ್ಮ ಸಮಾನ ಮಾಡಿಕೊಂಡಿದ್ದೀರಾ? ಒಳ್ಳೆಯ
ಯೋಜನೆಯನ್ನು ಮಾಡುತ್ತಿದ್ದಾರೆ. ಹಾಸ್ಟೆಲ್ನಲ್ಲಿರುವಂತಹವರು ಕೈಯನ್ನು ಎತ್ತಿ. ಈಗ ಸೇವೆಯ
ಪ್ರತ್ಯಕ್ಷ ಪ್ರಮಾಣವನ್ನು ತಂದ್ದೆಲ್ಲವೇ? ಅಂದಾಗ ಕುಮಾರ ಮತ್ತು ಕುಮಾರಿಯರು ಸೇವೆಯ ಪ್ರತ್ಯಕ್ಷ
ಪ್ರಮಾಣವನ್ನು ತರಬೇಕು. ಸರಿಯಿದೆಯೇ?
ದಾದಿಯವರ ಜೊತೆ:
ಎಲ್ಲರಿಗೂ ತಮ್ಮ ಜೊತೆ
ಪ್ರೀತಿ ಇದೆ, ತಂದೆಗೂ ಸಹ ತಮ್ಮ ಮೇಲೆ ಪ್ರೀತಿ ಇದೆ [ರತನಮೋಹಿನಿ ದಾದಿಯವರ ಜೊತೆ]
ಸಹಯೋಗಿಗಳಾಗುವುದರಿಂದ ಬಹಳಷ್ಟು ಸೂಕ್ಷ್ಮವಾಗಿ ಪ್ರಾಪ್ತಿ ಆಗುತ್ತದೆ. ಅದೇ ರೀತಿಯಲ್ಲವೇ. ಆದಿರತನ್
ಆಗಿದ್ದಾರೆ. ಆದಿರತ್ನ ಇಲ್ಲಿಯವರೆಗೂ ನಿಮಿತ್ತರಾಗಿದ್ದಾರೆ. ಒಳ್ಳೆಯದು.
ವರದಾನ:
ಎಲ್ಲವನ್ನೂ
ನಿನ್ನದು-ನಿನ್ನದು ಎಂದು ಮಾಡಿ ನನ್ನತನವನ್ನು ಅಂಶ ಮಾತ್ರವನ್ನೂ ಸಹಾ ಸಮಾಪ್ತಿ ಮಾಡುವಂತಹ ಡಬ್ಬಲ್
ಲೈಟ್ ಭವ.
ಯಾವುದೇ ಪ್ರಕಾರದ
ನನ್ನತನ-ನನ್ನ ಸ್ವಬಾವ, ನನ್ನ ಸಂಸ್ಕಾರ, ನನ್ನ ಸ್ವಭಾವ...... ಯಾವುದೇ ಆಗಲಿ ನನ್ನದು ಎಂದಾಗ
ಹೊರೆಯಾಗಿದೆ ಮತ್ತು ಹೊರೆಯುಳ್ಳವರು ಹಾರಲು ಸಾದ್ಯವಿಲ್ಲ. ಈ ನನ್ನದು-ನನ್ನದು ಎನ್ನುವುದೇ ಮೈಲಿಗೆ
ಮಾಡುವಂತಹದು. ಆದ್ದರಿಂದ ಈಗ ನಿನ್ನದು-ನಿನ್ನದು ಎಂದು ಹೇಳುತ್ತಾ ಸ್ವಚ್ಛ ಆಗಿ. ಫರಿಶ್ತಾ ಎಂದರೇನೆ
ನನ್ನತನ ಅಂಶ ಮಾತ್ರವೂ ಇಲ್ಲ. ಸಂಕಲ್ಪದಲ್ಲಿಯೂ ಸಹ ನನ್ನತನದ ಭಾನ ಬಂದಲ್ಲಿ ತಿಳಿಯಿರಿ ಮೈಲಿಗೆ
ಆಯಿತು ಎಂದು. ಆದ್ದರಿಂದ ಈ ಮೈಲಿಗೆ ತನದ ಹೊರೆಯನ್ನು ಸಮಾಪ್ತಿ ಮಾಡಿ, ಡಬ್ಬಲ್ ಲೈಟ್ ಆಗಿ.
ಸ್ಲೋಗನ್:
ಈ ಜಗತ್ತಿನ ಶೋಭೆ
ಅವರೇ ಆಗಿದ್ದಾರೆ ಯಾರು ಬಾಪ್ದಾದಾರವರನ್ನು ತಮ್ಮ ಕಣ್ಣುಗಳಲ್ಲಿ ಸಮಾವೇಶ ಮಾಡಿಕೊಂಡಿರುತ್ತಾರೆ.