10.12.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ನಿಮ್ಮ ಈ ರಿರ್ಕಾಡ್ ಸಂಜೀವನಿ ಬೂಟಿಯಾಗಿದೆ. ಇದನ್ನು ಪ್ಲೇ ಮಾಡುವುದರಿಂದ ಬಾಡಿಹೋಗಿರುವುದು ಸರಿಯಾಗುವುದು

ಪ್ರಶ್ನೆ:
ಅವಸ್ಥೆ ಕ್ಷೀಣವಾಗಲು ಕಾರಣ ಏನು? ಯಾವ ಯುಕ್ತಿಯಿಂದ ಅವಸ್ಥೆಯನ್ನು ಬಹಳ ಚೆನ್ನಾಗಿ ಇಡಲು ಸಾಧ್ಯ?

ಉತ್ತರ:
1. ಜ್ಞಾನದ ಡಾನ್ಸ್ ಮಾಡುವುದಿಲ್ಲ, ಇಲ್ಲ, ಸಲ್ಲದ ಮಾತುಗಳಿಂದ ಸಮಯ ಕಳೆದುಬಿಡುವಿರಿ ಆದ್ದರಿಂದ ಅವಸ್ಥೆ ಕ್ಷೀಣಿಸುತ್ತದೆ. 2. ಬೇರೆಯವರಿಗೆ ದುಃಖ ಕೊಟ್ಟರು ಸಹ ಅದರ ಪ್ರಭಾವ ಅವಸ್ಥೆಯ ಮೇಲೆ ಬೀಳುತ್ತದೆ. ಅವಸ್ಥೆ ಚೆನ್ನಾಗಿ ಯಾವಾಗ ಇರುವುದೆಂದರೆ ಯಾವಾಗ ಮಧುರರಾಗಿ ನಡೆಯುವಿರಿ. ನೆನಪಿನ ಮೇಲೆ ಪೂರ್ತಿ ಗಮನವಿರುವುದು. ರಾತ್ರಿ ಮಲಗುವ ಮೊದಲು ಕಡಿಮೆ ಎಂದರೂ 1/2 ಘಂಟೆಯಾದರೂ ನೆನಪಿನಲ್ಲಿ ಕುಳಿತುಕೊಳ್ಳುವಿರಿ ನಂತರ ಬೆಳ್ಳಿಗ್ಗೆ ಎದ್ದು ನೆನಪು ಮಾಡಿದಾಗ ನಿಮ್ಮ ಅವಸ್ಥೆ ಚೆನ್ನಾಗಿರುತ್ತದೆ.

ಗೀತೆ:
ನನ್ನ ಮನಸ್ಸಿನ ದ್ವಾರದಲ್ಲಿ ಬಂದವರು ಯಾರು.. (ಕೌನ್ ಆಯಾ ಮೇರೆ ಮನ್ ಕೆ ದ್ವಾರೆ..)

ಓಂ ಶಾಂತಿ.
ಈ ರಿಕಾರ್ಡ್ಗಳನ್ನು ಬಾಬಾ ಮಕ್ಕಳಿಗಾಗಿ ಮಾಡಿಸಿದ್ದಾರೆ. ಇದರ ಅರ್ಥ ಸಹ ಮಕ್ಕಳವಿನಃ ಬೇರೆ ಯಾರಿಗೂ ತಿಳಿಯುವುದಿಲ್ಲ. ಬಾಬಾ ಅನೇಕ ಬಾರಿ ತಿಳಿಸಿದ್ದಾರೆ ಇಂತಹ ಒಳ್ಳೊಳ್ಳೆಯ ರಿಕಾರ್ಡ್ ಮನೆಯಲ್ಲಿಟ್ಟುಕೊಳ್ಳ ಬೇಕು ನಂತರ ಯಾರಾದರೂ ಬಾಡಿಹೋದಂತಾಗಿ ಬಂದಾಗ ರಿಕಾರ್ಡ್ ಪ್ಲೇ ಮಾಡುವುದರಿಂದ ಬುದ್ಧಿಯಲ್ಲಿ ತಕ್ಷಣ ಅರ್ಥ ಬಂದಾಗ ಬಾಡಿಹೋಗಿರುವವರು ಸರಿಹೋಗಿಬಿಡುವರು. ಈ ರಿಕಾರ್ಡ್ ಸಹ ಸಂಜೀವನೀ ಬೂಟಿಯಾಗಿದೆ. ಬಾಬಾ ಸೂಚನೆಗಳಂತೂ ಕೊಡುತ್ತಾರೆ ಆದರೆ ಕೆಲವರು ಮಾತ್ರ ಅದನ್ನು ಕಾರ್ಯರೂಪದಲ್ಲಿ ತರುತ್ತಾರೆ. ಈಗ ಈ ಗೀತೆಯಲ್ಲಿ ಯಾರು ಹೇಳುತ್ತಾರೆ ನಮ್ಮ, ನಿಮ್ಮ, ಎಲ್ಲರ ಹೃದಯದಲ್ಲಿ ಯಾರು ಬಂದರು! ಯಾರು ಬಂದು ಜ್ಞಾನದ ಡಾನ್ಸ್ ಮಾಡುತ್ತಾರೆ. ಹೇಳುತ್ತಾರೆ ಗೋಪಿಕೆಯರು ಕೃಷ್ಣನನ್ನು ನಾಟ್ಯವಾಡಿಸುತ್ತಿದ್ದರು ಎಂದು, ಹೀಗಂತೂ ಇಲ್ಲ. ಈಗ ಬಾಬಾ ಹೇಳುತ್ತಾರೆ- ಹೇ ಸಾಲಿಗ್ರಾಮ ಮಕ್ಕಳೇ. ಎಲ್ಲರಿಗೂ ಹೆಳುತ್ತಾರಲ್ಲವೆ. ಸ್ಕೂಲ್ ಎಂದರೆ ಸ್ಕೂಲ್, ಎಲ್ಲಿ ವಿಧ್ಯೆ ಓದಲಾಗುತ್ತದೆ, ಇದೂ ಸಹ ಪಾಠಶಾಲೆಯಾಗಿದೆ. ನೀವು ಮಕ್ಕಳು ತಿಳಿದಿರುವಿರಿ ನಮ್ಮ ಹೃದಯದಲ್ಲಿ ಯಾರ ನೆನಪು ಬರುತ್ತದೆ! ಬೇರೆ ಯಾರೇ ಮನುಷ್ಯ ಮಾತ್ರರ ಬುದ್ಧಿಯಲ್ಲಿ ಈ ಮಾತುಗಳು ಇಲ್ಲ. ಇದೊಂದೇ ಸಮಯವಾಗಿದೆ ಯಾವುದು ನೀವು ಮಕ್ಕಳಿಗೆ ಅವರ ನೆನಪು ಇರುತ್ತದೆ ಬೇರೆ ಯಾರೂ ಅವರನ್ನು ನೆನಪು ಮಾಡುವುದಿಲ್ಲ. ತಂದೆ ಹೇಳುತ್ತಾರೆ ನೀವು ಪ್ರತಿದಿನ ನನ್ನನ್ನು ನೆನಪು ಮಾಡಿದಾಗ ಧಾರಣೆ ಬಹಳ ಚೆನ್ನಾಗಿ ಆಗುತ್ತದೆ. ಯಾವರೀತಿ ನಾನು ಡೈರೆಕ್ಷನ್ ಕೊಡುತ್ತೇನೆ ಆ ರೀತಿ ನೀವು ನೆನಪು ಮಾಡುವುದಿಲ್ಲ. ಮಾಯೆ ನಿಮಗೆ ನೆನಪು ಮಾಡಲು ಬಿಡುವುದಿಲ್ಲ. ನಾನು ಹೇಳಿದಂತೆ ನೀವು ಬಹಳ ಕಡಿಮೆ ನಡೆಯುವಿರಿ ಮತ್ತು ಮಾಯೆ ಹೇಳುವಂತೆ ಬಹಳ ಹೆಚ್ಚು ನಡೆಯುವಿರಿ. ಎಷ್ಟೋ ಬಾರಿ ಹೇಳಿರುವೆ- ರಾತ್ರಿಯಲ್ಲಿ ಮಲಗಲು ಹೋಗುವ ಮುಂಚೆ 1/2 ಘಂಟೆ ಬಾಬಾನ ನೆನಪಿನಲ್ಲಿ ಕುಳಿತುಕೊಳ್ಳಬೇಕು. ಭಲೆ ಸ್ತ್ರೀ-ಪುರುಷರಿದ್ದರೆ ಒಟ್ಟಿಗೆ ಕುಳಿತುಕೊಳ್ಳಿ ಅಥವಾ ಬೇರೆ-ಬೇರೆ ಕುಳಿತುಕೊಳ್ಳಲಿ. ಬುದ್ಧಿಯಲ್ಲಿ ಒಬ್ಬ ತಂದೆಯದೇ ನೆನಪಿರಲಿ. ಆದರೆ ಕೇವಲ ಕೆಲವರು ಮಾತ್ರ ನೆನಪು ಮಾಡುತ್ತಾರೆ. ಮಾಯೆ ಮರೆಸಿಬಿಡುತ್ತದೆ. ಆಜ್ಞೆಯಂತೆ ನಡೆಯದಿದ್ದರೆ ಪದವಿಯನ್ನು ಹೇಗೆ ಪಡೆಯಲು ಸಾಧ್ಯ. ಬಾಬಾರವರನ್ನು ಬಹಳ ನೆನಪು ಮಾಡಬೇಕು. ಶಿವ ಬಾಬಾ ನೀವೇ ಆತ್ಮಗಳ ತಂದೆಯಾಗಿರುವಿರಿ. ಎಲ್ಲರಿಗೂ ನಿಮ್ಮಿಂದಲೇ ಆಸ್ತಿ ಸಿಗಬೇಕಿದೆ. ಯಾರು ಪುರುಷಾರ್ಥ ಮಾಡುವುದಿಲ್ಲ ಅವರಿಗೂ ಸಹ ಆಸ್ತಿ ಸಿಗುವುದು, ಬ್ರಹ್ಮಾಂಡದ ಮಾಲೀಕರಂತೂ ಎಲ್ಲರೂ ಆಗುವಿರಿ. ಎಲ್ಲಾ ಆತ್ಮಗಳು ನಿರ್ವಾಣಧಾಮಕ್ಕೆ ಡ್ರಾಮಾ ಅನುಸಾರ ಬರುವವು. ಭಲೆ ಏನು ಮಾಡದೇ ಹೋದರೂ. ಅರ್ಧ ಕಲ್ಪ ಭಲೆ ಭಕ್ತಿ ಮಾಡುತ್ತಾರೆ ಆದರೆ ಯಾರೂ ವಾಪಸ್ಸು ಹೋಗಲು ಸಾಧ್ಯವಿಲ್ಲ, ಎಲ್ಲಿಯವರೆಗ ನಾನು ಮಾರ್ಗರ್ದಶಕನಾಗಿ ಬರುವುದಿಲ್ಲ ಅಲ್ಲಿಯವರೆಗೆ ಯಾರೂ ವಾಪಸ್ಸು ಹೋಗುವುದಿಲ್ಲ. ಯಾರೂ ರಸ್ತೆಯನ್ನು ನೋಡೇ ಇಲ್ಲ. ಒಂದುವೇಳೆ ನೋಡಿದ್ದೇ ಆದರೆ ಅವರ ಹಿಂದೆ ಎಲ್ಲರೂ ಸೊಳ್ಳೆಗಳ ತರಹ ಹೋಗ ಬೇಕಿತ್ತು. ಮೂಲವತನ ಏನು- ಇದನ್ನೂ ಸಹ ಯಾರೂ ಅರಿತುಕೊಂಡಿಲ್ಲ. ನೀವು ಅರಿತಿರುವಿರಿ ಇದು ಮಾಡಿ ಮಾಡಲ್ಪಟ್ಟ ಡ್ರಾಮಾ ಆಗಿದೆ, ಇದೇ ಪುನರಾರ್ವತನೆ ಮಾಡಬೇಕು. ಈಗ ದಿನದಲ್ಲಂತೂ ಕರ್ಮಯೋಗಿಯಾಗಿ ಕೆಲಸ-ಕಾರ್ಯದಲ್ಲಿ ತೊಡಗಬೇಕು. ಭೋಜನ ತಯಾರಿಸುವುದು ಇತ್ಯಾದಿ ಎಲ್ಲಾ ಕೆಲಸ ಮಾಡಬೇಕು, ವಾಸ್ತವದಲ್ಲಿ ಕರ್ಮ ಸನ್ಯಾಸ ಮಾಡುವುದೂ ಸಹಾ ತಪ್ಪಾಗಿದೆ. ಕರ್ಮವಿಲ್ಲದೆ ಯಾರೂ ಇರಲು ಸಾಧ್ಯವಿಲ್ಲ. ಕರ್ಮ ಸನ್ಯಾಸಿ ಎಂದು ಸುಳ್ಳಾಗಿ ಹೆಸರಿಟ್ಟಿದ್ದಾರೆ. ಅಂದಾಗ ದಿನದಲ್ಲಿ ಭಲೇ ವ್ಯವಹಾರ ಇತ್ಯಾದಿ ಮಾಡಿ, ರಾತ್ರಿಯಲ್ಲಿ ಹಾಗೂ ಬೆಳ್ಳಿಗ್ಗೆ-ಬೆಳ್ಳಿಗ್ಗೆ ತಂದೆಯನ್ನು ಚೆನ್ನಾಗಿ ನೆನಪು ಮಾಡಿರಿ. ಯಾರನ್ನು ಈಗ ನೀವು ತನ್ನವರನ್ನಾಗಿ ಮಾಡಿಕೊಂಡಿರುವಿರಿ, ಅವರ ನೆನಪು ಮಾಡುವುದರಿಂದ ಸಹಯೋಗವೂ ಸಿಗುವುದು. ಇಲ್ಲದೇ ಹೋದರೆ ಸಿಗುವುದಿಲ್ಲ. ಸಾಹುಕಾರರಿಗಂತೂ ತಂದೆಗೆ ಮಕ್ಕಳಾಗುವುದರಲ್ಲಿ ಹೃದಯ ವಿದೀರ್ಣರಾಗುತ್ತಾರೆ ನಂತರ ಪದವಿಯು ಸಹಾ ಸಿಗುವುದಿಲ್ಲ. ಇಲ್ಲಿ ನೆನಪು ಮಾಡುವುದಂತೂ ಬಹಳ ಸಹಜವಾಗಿದೆ. ಅವರು ನಮ್ಮ ತಂದೆ, ಟೀಚರ್, ಸದ್ಗುರುವಾಗಿದ್ದಾರೆ. ನಮಗೆ ಎಲ್ಲಾ ರಹಸ್ಯವನ್ನು ತಿಳಿಸಿಕೊಡುತ್ತಾರೆ- ಈ ಪ್ರಪಂಚದ ಚರಿತ್ರೆ-ಭೂಗೋಳ ಯಾವರೀತಿ ಪುನರಾರ್ವತನೆಯಾಗುತ್ತದೆ ಎಂದು. ತಂದೆಯನ್ನು ನೆನಪು ಮಾಡಬೇಕು ಮತ್ತು ನಂತರ ಸ್ವರ್ದಶನ ಚಕ್ರವನ್ನು ತಿರುಗಿಸ ಬೇಕು. ಎಲ್ಲರನ್ನೂ ವಾಪಸ್ಸು ಕರೆದೊಯ್ಯುವವರಂತು ತಂದೆಯೆ ಆಗಿದ್ದಾರೆ. ಈ ರೀತಿಯ ಚಿಂತನೆಯಲ್ಲಿರ ಬೇಕು. ರಾತ್ರಿ ಮಲಗುವ ಸಮಯದಲ್ಲಿಯೂ ಸಹ ಈ ಜ್ಞಾನ ತಿರುಗುತ್ತಿರಬೇಕು. ಬೆಳ್ಳಿಗ್ಗೆ ಏಳುವಾಗಲೂ ಸಹ ಇದೇ ಜ್ಞಾನ ನೆನಪಿನಲ್ಲಿರಲಿ. ನಾವು ಬ್ರಾಹ್ಮಣರಿಂದ ದೇವತೆ, ನಂತರ ಕ್ಷತ್ರಿಯ, ವೈಶ್ಯ, ಶೂದ್ರ ಆಗುವೆವು. ಆಮೇಲೆ ಬಾಬಾ ಬರುತ್ತಾರೆ ನಂತರ ನಾವು ಶೂದ್ರರಿಂದ ಬ್ರಾಹ್ಮಣರಾಗುತ್ತೇವೆ. ಬಾಬಾ ತ್ರಿಮೂರ್ತಿ, ತ್ರಿಕಾಲದರ್ಶಿ, ತ್ರಿನೇತ್ರಿ ಸಹ ಆಗಿದ್ದಾರೆ. ನಮ್ಮ ಬುದ್ಧಿಯನ್ನು ತೆರೆದು ಬಿಡುತ್ತಾರೆ. ಜ್ಞಾನದ ಮೂರನೇ ನೇತ್ರವೂ ಸಹ ಸಿಗುತ್ತದೆ. ಇಂತಹ ತಂದೆಯಂತೂ ಬೇರೆಯಾರೂ ಇರಲು ಸಾಧ್ಯವಿಲ್ಲ. ತಂದೆ ರಚನೆಯನ್ನು ರಚಿಸುತ್ತಾರೆ ಎಂದಮೇಲೆ ತಾಯಿಯೂ ಆಗಿದ್ದಾರೆ. ಜಗದಂಬೆಯನ್ನು ನಿಮಿತ್ತವಾಗಿ ಮಾಡುತ್ತಾರೆ. ತಂದೆ ಈ ತನುವಿನಲ್ಲಿ ಬಂದು ಬ್ರಹ್ಮಾರವರ ರೂಪದಲ್ಲಿ ಆಟ-ಪಾಟವನ್ನೂ ಆಡುತ್ತಾರೆ. ತಿರುಗಾಡಲೂ ಸಹ ಹೋಗುತ್ತಾರೆ. ನಾವು ಬಾಬಾರವರನ್ನು ನೆನಪಂತೂ ಮಾಡುತ್ತೇವಲ್ಲವೆ! ನೀವು ಅರಿತಿರುವಿರಿ ಇವರ ರಥದಲ್ಲಿ ಬರುತ್ತಾರೆ ಎಂದು. ನೀವು ಹೇಳುವಿರಿ ಬಾಪ್ದಾದಾ ನಮ್ಮ ಜೊತೆ ಆಟವಾಡುತ್ತಾರೆ ಎಂದು. ಆಟದಲ್ಲಿಯೂ ಸಹಾ ಬಾಬಾ ನೆನಪು ಮಾಡುವ ಪುರುಷಾರ್ಥ ಮಾಡುತ್ತಾರೆ. ಬಾಬಾ ತಿಳಿಸುತ್ತಾರೆ ನಾನು ಇವರ ರಥದ ಮೂಲಕ ಆಟವಾಡುತ್ತಿದ್ದೇನೆ ಎಂದು. ಚೈತನ್ಯದಲ್ಲಂತು ಇರುವರಲ್ಲವೆ. ಆದ್ದರಿಂದ ಇಂತಹ ಚಿಂತನೆ ಇಟ್ಟುಕೊಳ್ಳ ಬೇಕು. ಇಂತಹ ತಂದೆಯ ಮೇಲೆ ಬಲಿಹಾರಿ ಸಹಾ ಆಗಬೇಕು. ಭಕ್ತಿಮಾರ್ಗದಲ್ಲಿ ನೀವು ಹಾಡುತ್ತಾ ಬಂದಿರಿ ನಾನು ನಿನಗೆ ಬಲಿಹಾರಿ ಯಾಗಿಬಿಡುವೆನು..... ಈಗ ತಂದೆ ಹೇಳುತ್ತಾರೆ ನನ್ನನ್ನು ಈ ಒಂದು ಜನ್ಮಕ್ಕಾಗಿ ನಿಮ್ಮ ವಾರಿಸ್ ಮಾಡಿಕೊಂಡುಬಿಡಿ ಆಗ ನಾನು ನಿಮಗೆ 21 ಜನ್ಮಕ್ಕಾಗಿ ರಾಜ್ಯ-ಭಾಗ್ಯವನ್ನು ನೀಡುತ್ತೇನೆ. ಈಗ ಇವರು ಆಜ್ಞೆ ನೀಡಿದರೂ ಸಹ ಆ ಸೂಚನೆಯಂತೆ ನಡೆಯ ಬೇಕು. ಅವರೂ ಸಹಾ ಹೇಗೆ ನೋಡಿರುತ್ತಾರೆ ಅದರಂತೆ ಸೂಚನೆಯನ್ನು ಕೊಡುತ್ತಾರೆ. ಡೈರೆಕ್ಷನ್ ಪ್ರಮಾಣ ನಡೆಯುವುದರಿಂದ ಮಮತ್ವ ಅಳಿಸಿ ಹೋಗುವುದು, ಆದರೆ ಭಯ ಬೀಳುತ್ತಾರೆ. ಬಾಬಾ ಹೇಳುತ್ತಾರೆ ನೀವು ಬಲಿಯಾಗದಿದ್ದರೆ ನಾವು ಹೇಗೆ ಆಸ್ತಿ ಕೊಡುವುದು. ನಿಮ್ಮ ಹಣವನ್ನು ಯಾರೂ ತೆಗೆದುಕೊಂಡು ಹೋಗುವುದಿಲ್ಲ. ಹೇಳುತ್ತಾರೆ, ಒಳ್ಳೆಯದು ನಿಮ್ಮ ಬಳಿ ಹಣ ಇದ್ದಲ್ಲಿ ಅದನ್ನು ಲಿಟರೇಚರ್ ಮಾಡಿಸುವಲ್ಲಿ ತೊಡಗಿಸಿ. ಟ್ರಸ್ಟಿಯಾಗಿರುವಿರಲ್ಲವೆ. ಬಾಬಾ ಸಲಹೆ ಕೊಡುತ್ತಿರುತ್ತಾರೆ. ಬಾಬಾರವರ ಬಳಿ ಏನಿದೆ ಅದೆಲ್ಲಾ ಮಕ್ಕಳಿಗಾಗಿ ಇದೆ. ಮಕ್ಕಳಿಂದ ಏನನ್ನೂ ಪಡೆಯುವುದಿಲ್ಲ. ಯುಕ್ತಿಯಿಂದ ತಿಳಿಸಿಕೊಡುತ್ತಾರೆ ಕೇವಲ ಮಮತ್ವ ಅಳಿಸಿಹೋಗಬೇಕು. ಮೋಹವೂ ಸಹ ಬಹಳ ಕಠಿಣವಾಗಿದೆ. (ಕೋತಿಯ ಉದಾಹರಣೆ) ಬಾಬಾ ಹೇಳುತ್ತಾರೆ ನೀವು ಕೋತಿಗಳ ತರಹ ಅವರಲ್ಲಿ ಏಕೆ ಮೋಹವನ್ನು ಇಡುವಿರಿ. ಮತ್ತೆ ಮನೆ-ಮನೆಯಲ್ಲಿ ಮಂದಿರ ಹೇಗೆ ಆಗುವುದು. ನಾನು ನಿಮ್ಮನ್ನು ಮಂಗತನದಿಂದ ಬಿಡಿಸಿ ಮಂದಿರಕ್ಕೆ ಯೋಗ್ಯರನ್ನಾಗಿ ಮಾಡುತ್ತೇನೆ. ನೀವು ಈ ಕಿಚಡಾ ಪಟ್ಟಿಯ ಮೆಲೆ ಮಮತ್ವ ಏಕೆ ಇಡುವಿರಿ. ಬಾಬಾ ಕೇವಲ ಮತ ನೀಡುತ್ತಾರೆ- ಹೇಗೆ ಸಂಭಾಲಿಸಬೇಕು ಎಂದು. ಆದರೂ ಬುದ್ಧಿಯಲ್ಲಿ ಕೂರುವುದಿಲ್ಲ. ಇದೆಲ್ಲಾ ಬುದ್ಧಿಯ ಕೆಲಸವಾಗಿದೆ.

ಬಾಬಾ ಸಲಹೆ ಕೊಡುತ್ತಾರೆ ಅಮೃತವೇಳೆಯಲ್ಲೂ ಸಹ ಬಾಬಾನ ಜೊತೆ ಹೇಗೆ ಮಾತನಾಡುವುದು. ಬಾಬಾ, ತಾವು ಬೇಹದ್ದಿನ ತಂದೆ, ಟೀಚರ್ ಆಗಿರುವಿರಿ. ನೀವೆ ಈ ಬೇಹದ್ದಿನ ಪ್ರಪಂಚದ ಚರಿತ್ರೆ-ಭೂಗೋಳವನ್ನು ತಿಳಿಸಬಲ್ಲಿರಿ. ಲಕ್ಷ್ಮಿ-ನಾರಾಯಣರ 84 ಜನ್ಮಗಳ ಕಥೆಯನ್ನು ಈ ಪ್ರಪಂಚದಲ್ಲಿ ಯಾರೂ ಸಹ ತಿಳಿದಿಲ್ಲ. ಜಗದಂಬೆಗೆ ಮಾತಾ-ಮಾತಾ ಎಂದು ಸಹಾ ಹೇಳುವಿರಿ. ಅವರು ಯಾರು? ಸತ್ಯಯುಗದಲ್ಲಿಯಂತೂ ಆಗಲು ಸಾಧ್ಯವಿಲ್ಲ. ಅಲ್ಲಿನ ಮಹಾರಾಣಿ-ಮಹಾರಾಜ ಅಂತೂ ಲಕ್ಷ್ಮಿ-ನಾರಾಯಣ ಆಗಿದ್ದಾರೆ. ಅವರಿಗೆ ಅವರದೆ ಆದ ಮಕ್ಕಳಿದ್ದಾರೆ ಯಾರು ಸಿಂಹಾಸನದ ಮೇಲೆ ಕೂರುತ್ತಾರೆ. ನಾವು ಹೇಗೆ ಅವರ ಮಕ್ಕಳಾಗುತ್ತೇವೆ ಯಾರು ಸಿಂಹಾಸನದ ಮೇಲೆ ಕೂರುತ್ತಾರೆ. ಈಗ ನಾವು ಅರಿತಿದ್ದೇವೆ ಈ ಜಗದಂಬ ಬ್ರಾಹ್ಮಣಿಯಾಗಿದ್ದಾರೆ, ಬ್ರಹ್ಮಾರ ಮಗಳು ಸರಸ್ವತಿ. ಮನಷ್ಯರಿಗೆ ಈ ರಹಸ್ಯ ತಿಳಿದಿಲ್ಲ. ರಾತ್ರಿಯಲ್ಲಿ ಬಾಬಾರವರ ನೆನಪಿನಲ್ಲಿ ಕುಳಿತುಕೊಳ್ಳುವ ನಿಯಮವನ್ನಿಟ್ಟುಕೊಳ್ಳಿ ಇದು ಬಹಳ ಒಳ್ಳೆಯದು. ನಿಯಮ ಮಾಡಿದ್ದೇ ಆದರೆ ನಿಮಗೆ ಖುಷಿಯ ಪಾರ ಏರಿರುತ್ತದೆ ನಂತರ ಯಾವುದೇ ಕಷ್ಟ ಇರುವುದಿಲ್ಲ. ಹೇಳುವಿರಿ ಒಬ್ಬತಂದೆಯ ಮಕ್ಕಳು ನಾವು ಸಹೋದರ-ಸಹೋದರಿಯರಾಗಿದ್ದೇವೆ. ಮತ್ತೆ ಕೊಳಕು ದೃಷ್ಠಿ ಇಟ್ಟಿದ್ದೇ ಆದರೆ ಕ್ರಿಮಿನಲ್ ಅಸಾಲ್ಟ್ ಆಗಿಬಿಡುವುದು. ನಶೆಯಲ್ಲಿಯೂ ಸಹ ಸತೊ,ರಜೊ, ತಮೋಗುಣಿ ಇರುವುದಲ್ಲವೇ. ತಮೋಗುಣಿ ನಶೆ ಏರಿದರೆ ಸಾಯಬೇಕಾಗುತ್ತೆ. ಇದನ್ನು ನಿಯಮವಾಗಿ ಮಾಡಿಕೊಳ್ಳಿ- ಸ್ವಲ್ಪ ಸಮಯವಾದರೂ ಬಾಬಾರವರನ್ನು ನೆನಪು ಮಾಡಿ ಬಾಬಾರವರ ಸೇವೆಯಲ್ಲಿ ಹೋಗಿ. ಆಮೇಲೆ ಮಾಯೆಯ ಬಿರುಗಾಳಿ ಬರುವುದಿಲ್ಲ. ಆ ನಶೆ ದಿನ ಪೂರ್ತಿ ನಡೆಯುತ್ತದೆ ಮತ್ತು ಅವಸ್ಥೆಯೂ ಸಹ ಬಹಳ ರಿಫೈನ್ ಆಗಿಬಿಡುವುದು. ಯೋಗದಲ್ಲಿಯೂ ಲೈನ್ ಕ್ಲಿಯರ್ ಆಗಿಬಿಡುವುದು. ಇಂತಿಂತಹ ರಿಕಾರ್ಡ್ಗಳೂ ಸಹ ಬಹಳ ಚೆನ್ನಾಗಿದೆ, ರಿಕಾರ್ಡ್ ಕೇಳುತ್ತಿದ್ದರೆ ಕುಣಿಯಲು ಶುರುಮಾಡುವಿರಿ, ರಿಫ್ರೆಷ್ ಆಗಿಬಿಡುವಿರಿ. ಎರಡು, ನಾಲ್ಕು, ಐದು ರಿಕಾರ್ಡ್ಗಳು ಬಹಳ ಚೆನ್ನಾಗಿದೆ. ಬಡವರು ಸಹ ಬಾಬಾರವರ ಈ ಸೇವೆಯಲ್ಲಿ ತೊಡಗಿದ್ದೇ ಆದರೆ ಅವರಿಗೆ ಮಹೆಲ್ ಸಿಗಲು ಸಾಧ್ಯವಿದೆ. ಶಿವಬಾಬಾರವರ ಭಂಡಾರದಿಂದ ಎಲ್ಲವೂ ಸಿಗುತ್ತದೆ. ಸರ್ವೀಸಬಲ್ ಮಕ್ಕಳಿಗೆ ಬಾಬಾ ಏಕೆ ಕೊಡುವುದಿಲ್ಲ. ಶಿವಬಾಬಾರವರ ಭಂಡಾರ ಸದಾ ಭರ್ಪೂರ್ ಆಗಿರುವುದು.

(ಗೀತೆ) ಇದಾಗಿದೆ ಜ್ಞಾನದ ಡಾನ್ಸ್. ತಂದೆ ಬಂದು ಗೋಪ-ಗೋಪಿಯರಿಂದ ಜ್ಞಾನದ ಡಾನ್ಸ್ ಮಾಡಿಸುತ್ತಾರೆ. ಎಲ್ಲೇ ಕುಳಿತಿರಿ ಬಾಬಾರವರನ್ನು ನೆನಪು ಮಾಡುತ್ತಿರಿ ಆಗ ಅವಸ್ಥೆ ಬಹಳ ಚೆನ್ನಾಗಿರುತ್ತದೆ. ಹೇಗೆ ಬಾಬಾ ಜ್ಞಾನ ಮತ್ತು ಯೋಗದ ನಶೆಯಲ್ಲಿರುತ್ತಾರೆ ನೀವು ಮಕ್ಕಳಿಗೂ ಸಹ ಕಲಿಸುತ್ತಾರೆ. ಆಗ ಖುಷಿಯ ನಶೆ ಇರುವುದು. ಇಲ್ಲದೇ ಹೋದರೆ ಇಲ್ಲ-ಸಲ್ಲದ ಮಾತುಗಳಲ್ಲಿ ಇರುವುದರಿಂದ ನಂತರ ಅವಸ್ಥೆ ಕೆಟ್ಟು ಹೋಗುವುದು. ಬೆಳ್ಳಿಗ್ಗೆ ಏಳುವುದು ಬಹಳ ಒಳ್ಳೆಯದು. ಬಾಬಾನ ನೆನಪಿನಲ್ಲಿ ಕುಳಿತು ಬಾಬಾರವರ ಜೊತೆ ಸಿಹಿ-ಸಿಹಿಯಾದ ಮಾತುಗಳನ್ನಾಡಬೇಕು. ಬಾಷಣ ಮಾಡುವವರಂತೂ ವಿಚಾರ ಸಾಗರ ಮಂಥನ ಮಾಡಬೇಕಾಗುತ್ತೆ. ಇಂದು ಇಂತಿಂತಹ ಪಾಯಿಂಟ್ಸ್ ಮೇಲೆ ತಿಳಿಸಿ ಹೇಳೋಣ, ಹೀಗೆ ತಿಳಿಸಿ ಹೇಳೋಣ. ಬಾಬಾರವರಿಗೆ ಬಹಳ ಮಕ್ಕಳು ಕೇಳುತ್ತಾರೆ ನಾವು ನೌಕರಿ ಬಿಡೋಣವೇ? ಆದರೆ ಬಾಬಾ ಹೇಳುತ್ತಾರೆ ಮೊದಲು ಸೇವೆಯ ಪ್ರತ್ಯಕ್ಷ ಪ್ರಮಾಣವನ್ನು ತೊರಿಸಿ. ಬಾಬಾರವರು ನೆನಪಿನ ಯುಕ್ತಿ ಬಹಳ ಚೆನ್ನಾಗಿ ತಿಳಿಸಿದ್ದಾರೆ. ಆದರೆ ಕೋಟಿಯಲ್ಲಿ ಕೆಲವರು ಮಾತ್ರ ಸಿಗುತ್ತಾರೆ ಅವರಿಗೆ ಈ ಅಭ್ಯಾಸವಾಗಿಬಿಡುತ್ತೆ. ಕೆಲವರಿಗಂತೂ ಬಾಬಾರವರ ನೆನಪು ಬಹಳ ಕಷ್ಟದಿಂದ ನೆನಪಿರುತ್ತೆ. ನೀವು ಕುಮಾರಿಯರ ಹೆಸರಂತೂ ಬಹಳ ಪ್ರಸಿದ್ಧವಾಗಿದೆ. ಕುಮಾರಿಯರಿಗೆ ಎಲ್ಲರೂ ಕಾಲಿಗೆ ಬೀಳುತ್ತಾರೆ. ನೀವು 21 ಜನ್ಮಕ್ಕಾಗಿ ಭಾರತಕ್ಕೆ ಸ್ವರಾಜ್ಯವನ್ನು ಕೊಡಿಸುವಿರಿ. ನಿಮ್ಮ ನೆನಪಾರ್ಥ ಮಂದಿರಗಳು ಇವೆ.. ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯರ ಹೆಸರು ಸಹಾ ಪ್ರಸಿದ್ದವಾಗಿದೆಯಲ್ಲವೆ. ಕುಮಾರಿಯರು ಅವರೇ ಆಗಿದ್ದಾರೆ ಯಾರು 21 ಕುಲದ ಉದ್ಧಾರ ಮಾಡುತ್ತಾರೆ. ಅಂದರೆ ಇದರ ಅರ್ಥವನ್ನೂ ಸಹಾ ತಿಳಿದುಕೊಳ್ಳ ಬೇಕಾಗಿದೆ. ನೀವು ಮಕ್ಕಳು ಅರಿತಿರುವಿರಿ ಇದು 5000 ವರ್ಷಗಳ ರೀಲ್ ಆಗಿದೆ, ಏನೆಲ್ಲಾ ಪಾಸ್ ಆಯಿತು ಅದು ಡ್ರಾಮ. ತಪ್ಪಾದರೆ ಅದೂ ಡ್ರಾಮ. ನಂತರ ಮುಂದೆ ನಿಮ್ಮ ರಿಜಿಸ್ಟರ್ ಸರಿ ಮಾಡಿಕೊಳ್ಳ ಬೇಕಾಗಿದೆ. ಆಮೇಲೆ ರಿಜಿಸ್ಟರ್ ಕೆಡಬಾರದು. ಬಹಳ ದೊಡ್ಡ ಪರಿಶ್ರಮವಾಗಿದೆ ಆದ್ದರಿಂದ ಇಷ್ಟು ಉನ್ನತವಾದ ಪದವಿ ಸಿಗುವುದು. ಬಾಬಾ ರವರ ಮಗು ಆದ ನಂತರ ಬಾಬಾ ಆಸ್ತಿಯನ್ನೂ ಕೊಡುತ್ತಾರೆ. ಸವತಿ ಮಕ್ಕಳಿಗಂತೂ ಆಸ್ತಿ ಕೊಡುವುದಿಲ್ಲ. ಸಹಾಯ ಮಾಡುವುದಂತೂ ನನ್ನ ಕರ್ತವ್ಯ ಆಗಿದೆ. ಬುದ್ಧಿವಂತರು ಯಾರಿದ್ದಾರೆ ಅವರಿಗೆ ಪ್ರತಿ ಮಾತಿನಲ್ಲಿ ಸಹಾಯ ಮಾಡುತ್ತಾರೆ. ತಂದೆಯನ್ನು ನೋಡಿ ಎಷ್ಟು ಸಹಾಯ ಮಾಡುತ್ತಾರೆ. ಸಾಹಸ ಮನುಷ್ಯನದು ಸಹಾಯ ಭಗವಂತನದು (ಹಿಮ್ಮತ್ ಎ ಬಚ್ಚೇ ಮದದ್ ಎ ಖುದಾ). ಮಾಯೆಯ ಮೇಲೆ ಜಯಸಾಧಿಸಲು ಸಹಾ ಶಕ್ತಿಯ ಅವಶ್ಯಕತೆಯಿದೆ. ಒಬ್ಬ ಆತ್ಮೀಯ ತಂದೆಯನ್ನು ನೆನಪು ಮಾಡಬೇಕು, ಬೇರೆ ಎಲ್ಲರ ಸಂಗ ಬಿಟ್ಟು ಒಬ್ಬರ ಸಂಗ ಜೋಡಿಸಬೇಕು. ಬಾಬಾ ಜ್ಞಾನಸಾಗರ ಆಗಿದ್ದಾರೆ. ಅವರು ತಿಳಿಸುತ್ತಾರೆ ನಾನು ಇವರಲ್ಲಿ ಪ್ರವೇಶ ಮಾಡುತ್ತೇನೆ, ಮಾತನಾಡುತ್ತೇನೆ. ಬೇರೆಯವರು ಯಾರೂ ನಾನು ತಂದೆ, ಟೀಚರ್ ಮತ್ತು ಗುರುವಾಗಿದ್ದೇನೆ ಎಂದು ಹೀಗೆ ಹೇಳಲು ಸಾಧ್ಯವಿಲ್ಲ. ಬ್ರಹ್ಮಾ, ವಿಷ್ಣು, ಶಂಕರರ ರಚೈತನಾಗಿದ್ದೇನೆ. ಈ ಮಾತುಗಳನ್ನು ನೀವು ಮಕ್ಕಳೇ ತಿಳಿದುಕೊಂಡಿರುವಿರಿ. ಒಳ್ಳೆಯದು!

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಹಳೆಯ ಕಸದ ಮೇಲೆ ಮಮತ್ವ ಇಡಬಾರದು, ತಂದೆಯ ಸೂಚನೆಯ ಮೇಲೆ ನಡೆದು ತಮ್ಮ ಮಮತ್ವವನ್ನು ಅಳಿಸಿಹಾಕಬೇಕು, ಟ್ರಸ್ಟಿ ಆಗಿ ಇರಬೇಕು.

2. ಈ ಅಂತಿಮ ಜನ್ಮದಲ್ಲಿ ಭಗವಂತನನ್ನು ತಮ್ಮ ವಾರಿಸ್ ಮಾಡಿಕೊಂಡು ಅವರ ಮೇಲೆ ಬಲಿಹಾರಿಯಾಗಬೇಕು ಆಗ 21 ಜನ್ಮಗಳಿಗೆ ರಾಜ್ಯ ಭಾಗ್ಯ ಸಿಗುವುದು. ತಂದೆಯನ್ನು ನೆನಪು ಮಾಡುತ್ತಾ ಸೇವೆ ಮಾಡಬೇಕು, ನಶೆಯಲ್ಲಿರಬೇಕು ರಿಜಿಸ್ಟರ್ ಎಂದೂ ಕೆಟ್ಟುಹೋಗಬಾರದು ಇದರ ಬಗ್ಗೆ ಗಮನ ಕೊಡಬೇಕು.

ವರದಾನ:
ಪ್ರತ್ಯಕ್ಷ ಫಲದ ಮೂಲಕ ಅತೀಂದ್ರಿಯ ಸುಖದ ಅನುಭೂತಿ ಮಾಡುವಂತಹ ನಿಸ್ವಾರ್ಥ ಸೇವಾಧಾರಿ ಭವ.

ಸತ್ಯಯುಗದಲ್ಲಿ ಸಂಗಮದ ಕರ್ಮದ ಫಲ ದೊರಕುವುದು, ಆದರೆ ಇಲ್ಲಿ ತಂದೆಯವರಾಗುವುದರಿಂದ ಪ್ರತ್ಯಕ್ಷ ಫಲ ಆಸ್ತಿಯ ರೂಪದಲ್ಲಿ ದೊರಕುವುದು. ಸೇವೆ ಮಾಡಿದೊಡನೆ ಮತ್ತು ಸೇವೆ ಮಾಡುವುದರ ಜೊತೆ-ಜೊತೆ ಖುಷಿ ಸಿಗುವುದು. ಯಾರು ನೆನಪಿನಲ್ಲಿರುತ್ತಾ, ನಿಸ್ವಾರ್ಥ ಭಾವದಿಂದ ಸೇವೆ ಮಾಡುವರು ಅವರಿಗೆ ಸೇವೆಯ ಪ್ರತ್ಯಕ್ಷ ಫಲ ಅವಶ್ಯವಾಗಿ ಸಿಗುವುದು. ಪ್ರತ್ಯಕ್ಷ ಫಲವೇ ತಾಜಾ ಫಲವಾಗಿದೆ ಯಾವುದು ಸದಾಕಾಲಕ್ಕೆ ಆರೋಗ್ಯವಂತರನ್ನಾಗಿ ಮಾಡಿ ಬಿಡುವುದು. ಯೋಗಯುಕ್ತ, ಯಥಾರ್ಥ ಸೇವೆಯ ಫಲವಾಗಿದೆ ಖುಷಿ, ಅತೀಂದ್ರಿಯ ಸುಖ ಮತ್ತು ಡಬ್ಬಲ್ ಲೈಟ್ ನ ಅನುಭೂತಿ.

ಸ್ಲೋಗನ್:
ವಿಶೇಷ ಆತ್ಮರು ಅವರೇ ಆಗಿದ್ದಾರೆ ಯಾರು ತಮ್ಮ ಚಲನೆಯ ಮೂಲಕ ಆತ್ಮೀಯ ಘನತೆಯ ಬೆಳಕು ಮತ್ತು ಹೊಳಪಿನ ಅನುಭವ ಮಾಡಿಸುವಂತಹವರು.