11.01.26    Avyakt Bapdada     Kannada Murli    20.10.2008     Om Shanti     Madhuban


“ಸಂತುಷ್ಟ ಮಣಿ ಆಗಿ ವಿಶ್ವದಲ್ಲಿ ಸಂತುಷ್ಟತೆಯ ಪ್ರಕಾಶವನ್ನು ಹರಡಿಸಿ, ಸಂತುಷ್ಟರಾಗಿ ಹಾಗೂ ಎಲ್ಲರನ್ನು ಸಂತುಷ್ಟರನ್ನಾಗಿ ಮಾಡಿ”


ಇಂದು ಬಾಪ್ದಾದಾರವರು ತಮ್ಮ ಸದಾ ಸಂತುಷ್ಟರಾಗಿರುವ ಸಂತುಷ್ಟ ಮಣಿಗಳನ್ನು ನೋಡುತ್ತಿದ್ದೇವೆ. ಒಂದೊಂದು ಸಂತುಷ್ಟ ಮಣಿಯ ಹೊಳಪಿನಿಂದ ಎಲ್ಲಾ ಕಡೆ ಎಷ್ಟು ಸುಂದಾರವಾದ ಹೊಳಪು, ಹೊಳೆಯುತ್ತಿದೆ. ಪ್ರತಿಯೊಂದು ಸಂತುಷ್ಟ ಮಣಿ ತಂದೆಗೆ ಎಷ್ಟು ಪ್ರಿಯವಾಗಿದ್ದಾರೆ, ಪ್ರತಿಯೊಬ್ಬರಿಗೆ ಪ್ರಿಯವಾಗಿದ್ದಾರೆ, ಸ್ವಯಂಗೂ ಪ್ರಿಯವಾಗಿದ್ದಾರೆ. ಸಂತುಷ್ಟತೆ ಸರ್ವರಿಗೂ ಪ್ರಿಯವಾಗಿದೆ. ಸಂತುಷ್ಟತೆ ಸದಾ ಸರ್ವ ಪ್ರಾಪ್ತಿ ಸಂಪನ್ನವಾಗಿದೆ ಏಕೆಂದರೆ ಎಲ್ಲಿ ಸಂತುಷ್ಟತೆ ಇದೆಯೋ ಅಲ್ಲಿ ಅಪ್ರಾಪ್ತಿ ವಸ್ತು ಯಾವುದೂ ಇಲ್ಲ. ಸಂತುಷ್ಟ ಆತ್ಮರಲ್ಲಿ ಸಂತುಷ್ಟತೆ ಸ್ವಾಭಾವಿಕವಾದ ಸ್ವಭಾವವಾಗಿದೆ. ಸಂತುಷ್ಟತೆಯ ಶಕ್ತಿ ಸ್ವತಃವಾಗಿ ಹಾಗೂ ಸಹಜವಾಗಿ ಎಲ್ಲಾ ಕಡೆ ವಾಯುಮಂಡಲವನ್ನು ಹರಡಿಸುತ್ತದೆ. ಅವರ ಚೆಹರೆ, ಅವರ ನಯನಗಳು ವಾಯುಮಂಡಲದಲ್ಲೂ ಸಹ ಸಂತುಷ್ಟತೆಯ ಅಲೆಗಳನ್ನು ಹರಡಿಸುತ್ತದೆ. ಎಲ್ಲಿ ಸಂತುಷ್ಟತೆ ಇದೆಯೋ ಅಲ್ಲಿ ಅನ್ಯ ವಿಶೇಷತೆಗಳು ಸ್ವತಃವಾಗಿಯೇ ಬಂದು ಬಿಡುತ್ತದೆ. ಸಂತುಷ್ಟತೆ ವಿಶೇಷವಾಗಿ ಸಂಗಮ ಯುಗದಲ್ಲಿ ತಂದೆಯ ಊಡುಗೊರೆಯಾಗಿದೆ. ಸಂತುಷ್ಟತೆಯ ಸ್ಥಿತಿ ಪರಿಸ್ಥಿತಿಯ ಮೇಲೆ ಸದಾ ವಿಜಯಿಯನ್ನಾಗಿ ಮಾಡುತ್ತದೆ. ಪರಿಸ್ಥಿತಿ ಬದಲಾವಣೆ ಆಗುತ್ತಿರುತ್ತದೆ ಆದರೆ ಸಂತುಷ್ಟತೆಯ ಸ್ಥಿತಿ ಸದಾ ಪ್ರಗತಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿರುತ್ತದೆ. ಎಷ್ಟೇ ಪರಿಸ್ಥಿತಿಗಳು ಎದುರಿನಲ್ಲಿ ಬರಲಿ ಆದರೆ ಸಂತುಷ್ಟತಾಮಣಿಯ ಮುಂದೆ ಸದಾ ಮಾಯೆ ಮತ್ತು ಪ್ರಕೃತಿ ಗೊಂಬೆಗಳ ಆಟದ ಹಾಗೆ ಕಂಡು ಬರುತ್ತದೆ. ಮಾಯೆ ಹಾಗೂ ಪ್ರಕೃತಿಯ ಗೊಂಬೆಗಳ ಆಟವಾಗಿದೆ. ಆದ್ದರಿಂದ ಸಂತುಷ್ಟ ಆತ್ಮ ಎಂದೂ ಚಿಂತಿತರಾಗುವುದಿಲ್ಲ. ಪರಿಸ್ಥಿತಿಯ ಶೋ ಮನೋರಂಜನೆಯಾಗಿ ಅನುಭವವಾಗುತ್ತದೆ. ಈ ಮನೋರಂಜನೆಯನ್ನು ಅನುಭವ ಮಾಡಲು ತಮ್ಮ ಸ್ಥಿತಿಯ ಸೀಟ್ನ್ನು ಸದಾ ಸಾಕ್ಷಿ ಸ್ಥಿತಿಯಲ್ಲಿ ಸ್ಥಿತ ಮಾಡಿ. ಆಗ ಇದು ಮನೋರಂಜನೆಯಾಗಿ ಅನುಭವವಾಗುತ್ತದೆ. ದೃಶ್ಯ ಎಷ್ಟೇ ಬದಲಾವಣೆ ಆದರೂ ಸಾಕ್ಷಿ ದೃಷ್ಟಿಯ ಸೀಟಿನಲ್ಲಿ ಸ್ಥಿತರಾಗಿರುವಂತಹ ಸಂತುಷ್ಟ ಆತ್ಮರು ಸಾಕ್ಷಿ ಆಗಿ ಪ್ರತಿಯೊಂದು ಪರಿಸ್ಥಿತಿಯನ್ನು ಸ್ವ ಸ್ಥಿತಿಯಿಂದ ಬದಲಾವಣೆ ಮಾಡುತ್ತಾರೆ ಅಂದಾಗ ಪ್ರತಿಯೊಬ್ಬರು ನಾನು ಸದಾ ಸಂತುಷ್ಟನಾಗಿದ್ದೇನೆಯೇ ಎಂದು ತಮ್ಮನ್ನು ಚೆಕ್ ಮಾಡಿಕೊಳ್ಳಿ. ಸದಾ? ಸದಾ ಆಗಿದ್ದೀರೋ ಅಥವಾ ಕೆಲವೊಮ್ಮೆ ಆಗಿದ್ದೀರೋ?

ಬಾಪ್ದಾದಾ ಸದಾ ಪ್ರತಿಯೊಂದು ಶಕ್ತಿಗಾಗಿ, ಖುಷಿಗಾಗಿ, ಡಬಲ್ಲೈಟ್ ಆಗಿ ಹಾರಲು, ಮಕ್ಕಳಿಗೆ ಸದಾ ಶಬ್ದವನ್ನು ಸದಾ ನೆನಪಿಟ್ಟುಕೊಳ್ಳಲು ತಿಳಿಸುತ್ತಾರೆ. ಕೆಲವೊಮ್ಮೆ ಎನ್ನುವ ಶಬ್ದ ಬ್ರಾಹ್ಮಣ ಜೀವನದ ಶಬ್ದ ಕೋಶದಲ್ಲಿ ಇಲ್ಲ ಏಕೆಂದರೆ ಸಂತುಷ್ಟತೆಯ ಅರ್ಥವೇ ಆಗಿದೆ ಸರ್ವ ಪ್ರಾಪ್ತಿ. ಎಲ್ಲಿ ಸರ್ವ ಪ್ರಾಪ್ತಿಗಳು ಇದೆಯೋ ಅಲ್ಲಿ ಕೆಲವೊಮ್ಮೆ ಎನ್ನುವ ಶಬ್ದವೇ ಇಲ್ಲ ಅಂದಾಗ ಸದಾ ಅನುಭೂತಿ ಮಾಡುವಂತಹವರೋ ಅಥವಾ ಪುರುಷಾರ್ಥ ಮಾಡುವಂತಹವರೋ? ಪ್ರತಿಯೊಬ್ಬರು ತಮ್ಮನ್ನು ತಾವು ಕೇಳಿಕೊಂಡಿದ್ದೀರಾ, ಚೆಕ್ ಮಾಡಿಕೊಂಡೊದ್ದೀರಾ? ಏಕೆಂದರೆ ತಾವೆಲ್ಲರೂ ವಿಶೇಷ ತಂದೆಯ ಸ್ನೇಹಿ, ಸಹಯೋಗಿ, ಮುದ್ದು, ಮಧುರ-ಮಧುರ ಸ್ವ ಪರಿವರ್ತಕ ಮಕ್ಕಳಾಗಿದ್ದೀರಿ. ಹಾಗೆಯೇ ಇದ್ದೀರಲ್ಲವೇ? ಹಾಗೆ ಇದ್ದೀರಾ? ಹೇಗೆ ತಂದೆ ತಮ್ಮನ್ನು ನೋಡುತ್ತಾರೋ ಅದೇ ರೀತಿ ತಮ್ಮನ್ನು ತಾವು ಅನುಭವ ಮಾಡುತ್ತೀರಾ? ಯಾರು ಸದಾ ಸಂತುಷ್ಟರಾಗಿರುತ್ತಾರೋ ಕೆಲವೊಮ್ಮೆ ಅಲ್ಲ ಸದಾ ಇರುತ್ತಾರೋ ಅವರು ಕೈಯನ್ನು ಎತ್ತಿ. ಸದಾ ಶಬ್ದವು ನೆನಪಿದೆಯಲ್ಲವೇ. ಸ್ವಲ್ಪ ನಿಧಾನವಾಗಿ ಕೈ ಎತ್ತುತ್ತಿದ್ದಾರೆ. ಒಳ್ಳೆಯದು, ಬಹಳ ಒಳ್ಳೆಯದು. ಸ್ವಲ್ಪ-ಸ್ವಲ್ಪ ಕೈ ಎತ್ತುತ್ತಿದ್ದಾರೆ ಹಾಗೂ ವಿಚಾರ ಮಾಡಿ ಕೈ ಎತ್ತುತ್ತಿದ್ದಾರೆ. ಆದರೆ ಬಾಪ್ದಾದಾ ಪದೇ-ಪದೇ ಈಗ ಸಮಯ ಹಾಗೂ ಸ್ವಯಂ ಎರಡರನ್ನು ನೋಡಿ ಎಂದು ನಮ್ಮ ಗಮನವನ್ನು ಸೆಳೆಯುತ್ತಾರೆ. ಸಮಯದ ವೇಗ ಹಾಗೂ ಸ್ವಯಂನ ವೇಗ ಎರಡರನ್ನು ಚೆಕ್ ಮಾಡಿಕೊಳ್ಳಿ. ಪಾಸ್ವಿತ್ಆನರ್ ಆಗಲೇಬೇಕಲ್ಲವೇ. ಪ್ರತಿಯೊಬ್ಬರು ವಿಚಾರ ಮಾಡಿ ನಾನು ರಾಜ ಧುಲಾರಿ ಅಥವಾ ರಾಜ ಧುಲಾರ ಆಗಿದ್ದೇನೆ. ತಮ್ಮನ್ನು ರಾಜ ಧುಲಾರ (ಅತೀ ಪ್ರಿಯ) ಎಂದು ತಿಳಿದಿದ್ದೀರಲ್ಲವೇ! ಪ್ರತಿದಿನ ಬಾಪ್ದಾದಾ ತಮಗೆ ಯಾವ ನೆನಪು ಪ್ರೀತಿಯನ್ನು ಕೊಡುತ್ತಾರೆ? ಮುದ್ದು ಮಕ್ಕಳೇ (ಲಾಡಲೇ) ಅಂದಾಗ ಮುದ್ದು ಮಕ್ಕಳು ಯಾರಾಗುತ್ತಾರೆ? ಯಾರು ತಂದೆಯನ್ನು ಫಾಲೋ ಮಾಡುತ್ತಾರೋ ಅವರೇ ಅಂತಹ ಮಕ್ಕಳಾಗುತ್ತಾರೆ ಹಾಗೂ ತಂದೆಯನ್ನು ಫಾಲೋ ಮಾಡುವುದು ಬಹಳ-ಬಹಳ ಸಹಜವಾಗಿದೆ, ಯಾವುದೇ ಕಷ್ಟವಿಲ್ಲ. ಒಂದು ಮಾತನ್ನು ಫಾಲೋ ಮಾಡಿದರೆ ಸಹಜವಾಗಿ ಎಲ್ಲಾ ಮಾತುಗಳಲ್ಲಿ ಫಾಲೋ ಆಗುತ್ತದೆ. ಬಾಬಾ ಪ್ರತಿನಿತ್ಯ ಒಂದೇ ಲೈನ್ನ್ನು ನೆನಪು ತರಿಸುತ್ತಾರೆ ಅದು ನೆನಪಿದೆಯಲ್ಲವೇ? ತಮ್ಮನ್ನು ಆತ್ಮ ಎಂದು ತಿಳಿದು ನಾನು ತಂದೆಯನ್ನು ನೆನಪು ಮಾಡಿ. ಒಂದೇ ಲೈನ್ ಅಲ್ಲವೇ ಹಾಗೂ ನೆನಪು ಮಾಡುವಂತಹ ಆತ್ಮ ಯಾರಿಗೆ ತಂದೆಯ ಖಜಾನೆ ಸಿಕ್ಕಿದೆಯೋ ಅವರು ಸೇವೆಯ ವಿನಃ ಇರಲು ಸಾಧ್ಯವಿಲ್ಲ ಏಕೆಂದರೆ ಹೆಚ್ಚು ಪ್ರಾಪ್ತಿ, ಅಪಾರ ಖಜನೆಯಾಗಿದೆ. ದಾತನ ಮಕ್ಕಳು ಕೊಡದೆ ಇರಲು ಸಾಧ್ಯವಿಲ್ಲ ಹಾಗೂ ಮೆಜಾರಿಟಿ ತಮ್ಮೆಲ್ಲರಿಗೂ ಯಾವ ಟೈಟಲ್ ಸಿಕ್ಕಿದೆ? ಡಬಲ್ ಫಾರೆನರ್ಸ್. ಅಂದಾಗ ಟೈಟಲೇ ಡಲ್ ಆಗಿದೆ. ಬಾಪ್ದಾದಾರವರಿಗೂ ಸಹ ತಮ್ಮೆಲ್ಲರನ್ನು ನೋಡಿ ಖುಷಿ ಆಗುತ್ತದೆ ಹಾಗೂ ಸದಾ ಸ್ವತಃ ವಾಹ್! ನನ್ನ ಮಕ್ಕಳೇ ವಾಹ್! ಎನ್ನುವ ಗೀತೆಯನ್ನು ಹಾಡುತ್ತಿರುತ್ತಾರೆ. ಒಳ್ಳೆಯದು. ಭಿನ್ನ-ಭಿನ್ನ ದೇಶಗಳಿಂದ ಯಾವ ವಿಮಾನದಲ್ಲಿ ಬಂದು ತಲುಪಿದ್ದೀರಿ? ಸ್ಥೂಲದಲ್ಲಿ ಯಾವ ವಿಮಾನದಲ್ಲೇ ಬರಲಿ ಆದರೆ ಬಾಪ್ದಾದಾರವರು ಯಾವ ವಿಮಾನವನ್ನು ನೋಡುತ್ತಿದ್ದಾರೆ? ಅತೀ ಸ್ನೇಹದ ವಿಮಾನದಲ್ಲಿ ತಮ್ಮ ಮಧುರ-ಮಧುರ ಮನೆಯನ್ನು ತಲುಪಿದ್ದೀರಿ. ಬಾಪ್ದಾದಾರವರು ಪ್ರತಿಯೊಬ್ಬ ಮಗುವಿಗೆ ಇಂದು ವಿಶೇಷ ಇದೇ ವರದಾನವನ್ನು ಕೊಡುತ್ತಿದ್ದಾರೆ - ಹೇ! ನನ್ನ ಅತೀ ಪ್ರಿಯ ಮುದ್ದು ಮಕ್ಕಳೆ, ಸದಾ ಸಂತುಷ್ಟ ಮಣಿಯಾಗಿ ವಿಶ್ವದಲ್ಲಿ ಸಂತುಷ್ಟತೆಯ ಪ್ರಕಾಶವನ್ನು ಹರಡಿಸಿ. ಸಂತುಷ್ಟರಾಗಿರಿ ಹಾಗೂ ಸಂತುಷ್ಟರನ್ನಾಗಿ ಮಾಡಿ. ಅನೇಕ ಮಕ್ಕಳು ಸಂತುಷ್ಟರಾಗಿರುವುದು ಸಹಜ ಆದರೆ ಸಂತುಷ್ಟ ಮಾಡುವುದು ಸ್ವಲ್ಪ ಕಷ್ಟವೆಂದು ಹೇಳುತ್ತಾರೆ. ಬಾಪ್ದಾದಾರವರಿಗೆ ತಿಳಿದಿದೆ ಒಂದುವೇಳೆ ಪ್ರತಿಯೊಂದು ಆತ್ಮನನ್ನು ಸಂತುಷ್ಟ ಮಾಡಬೇಕಾದರೆ ಅದರ ವಿಧಿ ಬಹಳ ಸಹಜ ಸಾಧನವಾಗಿದೆ - ಯಾರಾದರೂ ತಮ್ಮಿಂದ ಅಸುಂತಷ್ಟರಾದರೆ ಅಥವಾ ಸ್ವಯಂ ಅಸಂತುಷ್ಟರಾಗಿದ್ದರೆ ಆಗ ಅವರೂ ಅಸಂತುಷ್ಟತೆಯಲ್ಲಿ ಇರುತ್ತಾರೆ ಅಲ್ಲದೆ ತಮಗೂ ಅವರ ಅಸಂತುಷ್ಟತೆಯ ಪ್ರಭಾವ ಸ್ವಲ್ಪವಾದರೂ ಆಗುತ್ತದೆ. ವ್ಯರ್ಥ ಸಂಕಲ್ಪವಂತೂ ನಡೆಯುತ್ತಿದೆಯಲ್ಲವೇ. ಬಾಪ್ದಾದಾರವರು ಯಾವ ಶುಭ ಭಾವನೆ, ಶುಭ ಕಾಮನೆಯ ಮಂತ್ರವನ್ನು ಕೊಟ್ಟಿದ್ದಾರೆ ಅದನ್ನು ಒಂದುವೇಳೆ ಸ್ಮೃತಿ ಸ್ವರೂಪದಲ್ಲಿ ಇಟ್ಟುಕೊಂಡಿದ್ದೇ ಆದರೆ ತಮಗೆ ವ್ಯರ್ಥ ಸಂಕಲ್ಪ ನಡೆಯುವುದಿಲ್ಲ. ತಮ್ಮನ್ನು ಅರಿತೂ ಸಹ ಇದು ಹೀಗಿದೆ ಅವರು ಹೀಗಿದ್ದಾರೆ ಎಂದು ತಿಳಿದರೂ ಸಹ ತಮ್ಮನ್ನು ಸದಾ ನ್ಯಾರ ಅವರ ವೈಬ್ರೇಷನ್ನಿಂದ ನ್ಯಾರ ಹಾಗೂ ತಂದೆಗೆ ಪ್ರಿಯ ಎಂದು ಅನುಭವ ಮಾಡಿ. ತಮ್ಮ ನ್ಯಾರ ಹಾಗೂ ತಂದೆಗೆ ಪ್ರಿಯರಾಗುವ ಶ್ರೇಷ್ಠ ಸ್ಥಿತಿಯ ವೈಬ್ರೇಷನ್ ಒಂದುವೇಳೆ ಆ ಆತ್ಮಕ್ಕೆ ತಲುಪಲಿಲ್ಲವೆಂದರೂ ಸಹ ವಾಯುಮಂಡಲದಲ್ಲಂತೂ ಖಂಡಿತ ಹರಡುತ್ತದೆ. ಒಂದುವೇಳೆ ಯಾವ ಪರಿವರ್ತನೆ ಆಗದಿದ್ದರೂ ಸಹ ತಮ್ಮಲ್ಲಿ ಆ ಆತ್ಮನ ಪ್ರಭಾವ ಆಗುತ್ತಿರುತ್ತದೆ, ವ್ಯರ್ಥ ಸಂಕಲ್ಪದ ರೂಪದಿಂದಂತೂ ವಾಯುಮಂಡಲದಲ್ಲಿ ಎಲ್ಲರ ಸಂಕಲ್ಪ ಹರಡುತ್ತದೆ ಆದ್ದರಿಂದ ತಾವು ನ್ಯಾರ ಆಗಿ ತಂದೆಗೆ ಪ್ರಿಯರಾಗಿ ಆ ಆತ್ಮನ ಕಲ್ಯಾಣದ ಪ್ರತಿ ಶುಭ ಭಾವನೆ, ಶುಭ ಕಾಮನೆಯನ್ನು ಇಟ್ಟುಕೊಳ್ಳಿ. ಅನೇಕ ಬಾರಿ ಮಕ್ಕಳು ಅವರು ತಪ್ಪು ಮಾಡಿದರಲ್ಲವೇ ಆದ್ದರಿಂದ ನಾವೂ ಸಹ ಜೋರಾಗಿ ಹೇಳಬೇಕಾಯಿತು ಎಂದು ಹೇಳುತ್ತಾರೆ. ಸ್ವಲ್ಪ ತಮ್ಮ ಸ್ವಭಾವ ಮುಖವೂ ಸಹ ಜೋರಾಗುತ್ತದೆ. ಅಂದಾಗ ಅವರಂತೂ ತಪ್ಪು ಮಾಡಿದರು ಆದರೆ ತಾವು ಏನು ಜೋರು (ಫೋರ್ಸ್) ಮಾಡಿದಿರೋ ಅದೂ ತಪ್ಪಲ್ಲವೇ? ಅವರು ಇನ್ನೂ ತಪ್ಪು ಮಾಡಿದರು, ತಾವು ಮುಖದಿಂದ ಏನು ಜೋರಾಗಿ ಮಾತನಾಡಿದ್ದೀರೋ ಯಾವುದಕ್ಕೆ ಕ್ರೋಧದ ಅಂಶವೆಂದು ಹೇಳುತ್ತಾರೆ, ಅದು ಸರಿಯೇ? ತಪ್ಪು ತಪ್ಪನ್ನು ಸರಿಪಡಿಸಲು ಸಾಧ್ಯವೇ? ಈಗಿನ ಸಮಯದ ಅನುಸಾರ ತಮ್ಮ ಮಾತನ್ನು ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳಿ. ಇದರ ಬಗ್ಗೆಯೂ ವಿಶೇಷ ಅಟೆನ್ಷನ್ ಇಡಬೇಕು ಏಕೆಂದರೆ ಜೋರಾಗಿ ಮಾತನಾಡುವುದು ಬೇಸತ್ತು ಹೇಳುವುದು ಇವರಂತೂ ಬದಲಾವಣೆ ಆಗುವುದಿಲ್ಲ, ಆದರೆ ಇದೂ ಸಹ ಎರಡನೆಯ ನಂಬರಿನ ವಿಕಾರದ ಅಂಶವಾಗಿದೆ. ಬಾಯಿಯಿಂದ ಮಾತುಗಳು ಹೂಗಳ ಸುರಿಮಳೆ ಅಂತೆ ಇರಬೇಕೆಂದು ಹೇಳುತ್ತಾರೆ. ಮಧುರ ಮಾತು, ಮುಗುಳ್ನಗುವ ಮುಖ, ಮಧುರ ವೃತ್ತಿ, ಮಧುರ ದೃಷ್ಟಿ, ಮಧುರ ಸಂಬಂಧ-ಸಂಪರ್ಕ ಇದೂ ಸಹ ಸೇವೆಯ ಸಾಧನವಾಗಿದೆ. ಆದ್ದರಿಂದ ಫಲಿತಾಂಶವನ್ನು ನೋಡಿ. ಒಂದುವೇಳೆ ಯಾರಾದರೂ ತಪ್ಪು ಮಾಡಿದ್ದಲ್ಲಿ, ತಪ್ಪು ಇದ್ದರೂ ತಮ್ಮ ಉದ್ದೇಶ ಅವರಿಗೆ ತಿಳುವಳಿಕೆ ಹೇಳುವುದಾದರೂ, ಬೇರೆ ಯಾವುದೇ ಉದ್ದೇಶ ಇಲ್ಲದಿದ್ದರೂ ಇವರಿಗೆ ಶಿಕ್ಷಣ ನೀಡಬೇಕೆಂಬ ತಮ್ಮ ಲಕ್ಷ್ಯ ಬಹಳ ಚೆನ್ನಾಗಿದೆ ಆದರೆ ಫಲಿತಾಂಶದಲ್ಲಿ ಏನನ್ನು ನೋಡಿದ್ದೀರಿ? ಅವರು ಬದಲಾವಣೆ ಆಗುತ್ತಾರೆಯೇ? ಇನ್ನೂ ನಿಮ್ಮ ಮುಂದೆ ಬರಲು ಹೆದರುತ್ತಾರೆ ಅಂದಾಗ ತಾವು ಏನು ಲಕ್ಷ್ಯ ಇಟ್ಟುಕೊಳ್ಳುತ್ತೀರೋ ಅದು ಆಗುವುದಿಲ್ಲ ಆದ್ದರಿಂದ ತಮ್ಮ ಮನಸ್ಸಿನ ಸಂಕಲ್ಪ ಹಾಗೂ ವಾಣಿ ಅರ್ಥಾತ್ ಮಾತು ಮತ್ತು ಸಂಬಂಧ-ಸಂಪರ್ಕ ಸದಾ ಮಧುರ, ಮಧುರತೆ ಅರ್ಥಾತ್ ಮಹಾನ್ ಮಾಡಿಕೊಳ್ಳಿ. ಏಕೆಂದರೆ ವರ್ತಮಾನ ಸಮಯದಲ್ಲಿ ಜನರು ಪ್ರತ್ಯಕ್ಷ ಜೀವನವನ್ನು ನೋಡಲು ಬಯಸುತ್ತಾರೆ. ಒಂದುವೇಳೆ ವಾಣಿಯಿಂದ ಸೇವೆ ಮಾಡಿದಲ್ಲಿ ವಾಣಿಯ ಸೇವೆಯಿಂದ ಪ್ರಭಾವಿತರಾಗಿ ಸಮೀಪ ಅಂತೂ ಬರುತ್ತಾರೆ, ಈ ಲಾಭವಂತೂ ಇದೆ ಆದರೆ ಪ್ರಾಕ್ಟಿಕಲ್ ಮಧುರತೆ, ಮಹಾನತೆ, ಶ್ರೇಷ್ಠ ಭಾವನೆ, ಚಲನೆ ಹಾಗೂ ಚೆಹರೆಯನ್ನು ನೋಡಿ ಸ್ವಯಂ ಪರಿವರ್ತನೆಗೋಸ್ಕರ ಪ್ರೇರಣೆಯನ್ನು ಪಡೆಯುತ್ತಾರೆ. ಮತ್ತು ಮುಂದೆ ಹೇಗೆ ಸಮಯದ ಪರಿಸ್ಥಿತಿಗಳು ಪರಿವರ್ತನೆ ಆಗುತ್ತದೆಯೋ ಅಂತಹ ಸಮಯದಲ್ಲಿ ತಾವು ಎಲ್ಲರ ಚೆಹರೆ ಹಾಗೂ ಚಲನೆಯಿಂದ ಹೆಚ್ಚು ಸೇವೆ ಮಾಡಬೇಕು. ಆದ್ದರಿಂದ ಆತ್ಮಗಳ ಪ್ರತಿ ಶುಭ ಭಾವನೆ, ಶುಭ ಕಾಮನೆಯ ವೃತ್ತಿ ಹಾಗೂ ದೃಷ್ಟಿಯ ಸಂಸ್ಕಾರದ ವ್ಯಕ್ತಿತ್ವ ಹಾಗೂ ಸ್ವಾಭಾವಿಕವಿದೆಯೇ? ಎಂದು ತಮ್ಮನ್ನು ತಾವು ಚೆಕ್ ಮಾಡಿಕೊಳ್ಳಿ.

ಬಾಪ್ದಾದಾರವರು ಪ್ರತಿಯೊಬ್ಬ ಮಗುವನ್ನು ವಿಜಯ ಮಾಲೆಯ ಮಣಿಯಾಗಿ ನೋಡಲು ಬಯಸುತ್ತಾರೆ ಅಂದಾಗ ತಾವೆಲ್ಲರೂ ಸಹ ತಮ್ಮನ್ನು ಮಾಲೆಯ ಮಣಿ ಆಗುವವರೆಂದು ತಿಳಿಯುತ್ತೀರಾ. ಅನೇಕ ಮಕ್ಕಳು 108ರ ಮಾಲೆಯಲ್ಲಂತೂ ನಿಮಿತ್ತ ಆಗಿರುವ ಮಕ್ಕಳು ಮಾತ್ರ ಬರುತ್ತಾರೆಂದು ತಿಳಿಯುತ್ತಾರೆ ಆದರೆ ಬಾಪ್ದಾದಾರವರು ಇದಂತೂ 108ರ ಗಾಯನ ಭಕ್ತಿಯ ಮಾಲೆಯದ್ದಾಗಿದೆ ಆದರೆ ಒಂದುವೇಳೆ ತಾವು ಪ್ರತಿಯೊಬ್ಬ ಮಗು ವಿಜಯಿ ಆದರೆ ಬಾಪ್ದಾದಾರವರು ಮಾಲೆಯ ಒಳಗೆ ಅನೇಕ ಸಾಲುಗಳನ್ನು ಸೇರಿಸುತ್ತಾರೆಂದು ಈ ಮೊದಲೂ ತಿಳಿಸಿದ್ದೇವೆ. ತಂದೆಯ ಹೃದಯದ ಮಾಲೆಯಲ್ಲಿ ನೀವು ಪ್ರತಿಯೊಬ್ಬ ವಿಜಯಿ ಮಗುವಿಗೆ ಸ್ಥಾನವಿದೆ, ಇದು ತಂದೆಯ ಗ್ಯಾರೆಂಟಿ ಆಗಿದೆ. ಕೇವಲ ಮನಸಾ, ವಾಚಾ, ಕರ್ಮಣ ಮತ್ತು ಚಲನೆ, ಚೆಹರೆಯಲ್ಲಿ ಸ್ವಯಂನ್ನು ವಿಜಯಿಯನ್ನಾಗಿ ಮಾಡಿಕೊಳ್ಳಿ. ಇಷ್ಟವಿದೆಯೇ, ಆಗುತ್ತೀರಾ? ವಿಜಯ ಮಾಲೆಯ ಮಣಿ ಆಗುತ್ತೀರೆಂಬ ಗ್ಯಾರಂಟಿ ಬಾಪ್ದಾದಾರವರು ನೀಡುತ್ತಾರೆ. ಯಾರಾಗುತ್ತೀರಿ? ಒಳ್ಳೆಯದು. ಬಾಪ್ದಾದಾರವರು ಮಾಲೆಯ ಒಳಗೊಂದು ಮಾಲೆಯನ್ನು ಮಾಡಲು ಪ್ರಾರಂಭಿಸುತ್ತಾರೆ. ಡಬಲ್ ವಿದೇಶಿಗಳಿಗೆ ಇಷ್ಟವಿದೆಯೇ! ವಿಜಯ ಮಾಲೆಯಲ್ಲಿ ತರುವುದು ತಂದೆಯ ಕೆಲಸವಾಗಿದೆ ಆದರೆ ವಿಜಯಿ ಆಗುವುದು ತಮ್ಮ ಕೆಲಸವಾಗಿದೆ. ಸಹಜವಲ್ಲವೇ! ಅಥವಾ ಕಷ್ಟವೆನಿಸುತ್ತದೆಯೇ? ಯಾರಿಗೆ ಕಷ್ಟವೆನಿಸುತ್ತದೆ ಅವರು ಕೈ ಎತ್ತಿ. ಕಷ್ಟವಾಗುತ್ತದೆಯೇ? ಸ್ವಲ್ಪ-ಸ್ವಲ್ಪ ಕೆಲವರು ಇದ್ದಾರೆ. ಯಾವಾಗ ಬಾಪ್ದಾದಾ ಎಂದು ಹೇಳುತ್ತೀರೋ ಆಗ ಬಾಬಾ ಎಂದು ಹೇಳುವುದರಿಂದ ತಂದೆಯ ಆಸ್ತಿ ಸಿಗುವುದಿಲ್ಲವೇ? ಎಂದು ಬಾಪ್ದಾದಾರವರು ಕೇಳುತ್ತಾರೆ. ಎಲ್ಲರೂ ಆಸ್ತಿಗೆ ಅಧಿಕಾರಿಗಳಾಗಿದ್ದೀರಿ ಹಾಗೂ ಎಷ್ಟು ಸಹಜವಾಗಿ ತಂದೆಯು ಆಸ್ತಿಯನ್ನು ನೀಡಿದ್ದಾರೆ. ಸೆಕೆಂಡಿನ ಮಾತಾಗಿದೆ. ತಾವು ಅರಿತು ಒಪ್ಪಿ ನನ್ನ ಬಾಬಾ ಎಂದಾಗ ಬಾಬಾ ಎನು ಹೇಳಿದರು? ನನ್ನ ಮಗು ಅಂದಾಗ ಮಗು ಸ್ವತಃವಾಗಿ ಆಸ್ತಿಗೆ ಅಧಿಕಾರಿ ಆಗಿದೆ. ಬಾಬಾ ಎಂದು ಹೇಳುತ್ತೀರಲ್ಲವೇ. ಎಲ್ಲರೂ ಈ ಒಂದೇ ಶಬ್ದವನ್ನು “ನನ್ನ ಬಾಬಾ” ಎಂದು ಹೇಳುತ್ತೀರಿ. ಹಾಗೆಯೇ ಇದ್ದೀರಾ? ನನ್ನ ಬಾಬಾ ಆಗಿದ್ದಾರೆಯೇ? ಇದರಲ್ಲಿ ಕೈ ಎತ್ತಿ. ಬಾಬಾ ನನ್ನವರಾದ ಮೇಲೆ ಆಸ್ತಿ ನನ್ನದಾಗಿಲ್ಲವೇ? ನನ್ನ ಬಾಬಾ ಎಂದು ಯಾವಾಗ ಹೇಳುತ್ತೇನೆಯೋ ಆಗ ನನ್ನ ಆಸ್ತಿಯೂ ಸಹ ಅದರ ಜೊತೆ ಬಂಧಿತವಾಗಿದೆ ಹಾಗೂ ಆಸ್ತಿ ಯಾವುದಾಗಿದೆ? ತಂದೆಯ ಸಮಾನ ಆಗುವುದು ವಿಜಯಿ ಆಗುವುದು. ಬಾಪ್ದಾದಾರವರು ಮೆಜಾರಿಟಿ ಡಬಲ್ವಿದೇಶದವರು ಕೈಯಲ್ಲಿ ಕೈಯನ್ನು ಹಿಡಿದು ನಡೆಯುವುದನ್ನು ನೋಡುತ್ತೇವೆ. ಕೈಯಲ್ಲಿ ಕೈಯನ್ನು ನೀಡುವುದು ನಡೆಯುವುದು ಇದು ಫ್ಯಾಶನ್ ಆಗಿದೆ. ಅಂದಾಗ ಈಗಲೂ ತಂದೆ ಹೇಳುತ್ತಾರೆ - ತಂದೆ ಶಿವಬಾಬಾರವರ ಕೈ ಯಾವುದಾಗಿದೆ? ಸ್ಥೂಲ ಕೈಯಂತೂ ಇಲ್ಲ ಆದರೆ ಶಿವಬಾಬಾನ ಕೈ ಹಿಡಿದುಕೊಳ್ಳುವುದು ಎಂದರೆ ಆ ಕೈ ಯಾವುದು? ಶ್ರೀಮತವೇ ತಂದೆಯ ಕೈ ಆಗಿದೆ. ಹೇಗೆ ಸ್ಥೂಲದಲ್ಲಿ ಕೈಯನ್ನು ಹಿಡಿದುಕೊಂಡು ನಡೆಯುವುದು ಇಷ್ಟವಾಗುತ್ತದೋ ಅದೇ ರೀತಿ ಶ್ರೀಮತದ ಕೈಯನ್ನು ಹಿಡಿದು ನಡೆಯುವುದು ಕಷ್ಟವೇ! ಬ್ರಹ್ಮಾ ತಂದೆಯನ್ನು ನೋಡಿದ್ದೀರಿ. ಪ್ರಾಕ್ಟಿಕಲ್ ಪ್ರಮಾಣ ನೋಡಿದ್ದೀರಿ, ಪ್ರತಿಯೊಂದು ಹೆಜ್ಜೆಯಲ್ಲಿ ಶ್ರೀಮತದ ಪ್ರಮಾಣ ನಡೆಯುವುದರಿಂದ ಸಂಪೂರ್ಣ ಫರಿಸ್ಥಾತನದ ಗುರಿಯನ್ನು ತಲುಪಿ ಬಿಟ್ಟರು ಅವ್ಯಕ್ತ ಫರಿಸ್ಥಾ ಆದರಲ್ಲವೇ ಅಂದಾಗ ತಂದೆಯನ್ನು ಅನುಕರಣೆ ಮಾಡಿ, ಪ್ರತಿಯೊಂದು ಶ್ರೀಮತ ಬೆಳಿಗ್ಗೆ ಏಳುವುದರಿಂದ ಹಿಡಿದು ರಾತ್ರಿಯ ತನಕ ಪ್ರತಿಯೊಂದು ಹೆಜ್ಜೆಯ ಶ್ರೀಮತವನ್ನು ಬಾಪ್ದಾದಾರವರು ತಿಳಿಸಿ ಕೊಟ್ಟಿದ್ದಾರೆ. ಹೇಗೆ ಏಳಬೇಕು, ಹೇಗೆ ನಡೆಯಬೇಕು, ಕರ್ಮ ಹೇಗೆ ಮಾಡಬೇಕು, ಮನಸ್ಸಿನಲ್ಲಿ ಯಾವ-ಯಾವ ಸಂಕಲ್ಪ ಮಾಡಬೇಕು ಹಾಗೂ ಸಮಯವನ್ನು ಹೇಗೆ ಶ್ರೇಷ್ಠವಾಗಿ ಕಳೆಯಬೇಕು. ರಾತ್ರಿ ಮಲುಗುವುದರವರೆಗೂ ಶ್ರೀಮತ ಸಿಕ್ಕಿದೆ. ಇದು ಮಾಡಲೇ ಅಥವಾ ಮಾಡಬಾರದೇ ಎಂದು ವಿಚಾರ ಮಾಡುವ ಅವಶ್ಯಕತೆ ಇಲ್ಲ. ಬ್ರಹ್ಮಾ ತಂದೆಯನ್ನು ಅನುಕರಣೆ ಮಾಡಿ. ಅಂದಾಗ ಬಾಪ್ದಾದಾರವರಿಗೆ ಮಕ್ಕಳ ಪ್ರತಿ ಬಹಳ ಪ್ರೀತಿ ಇದೆ. ಒಂದು ಮಗುವೂ ಸಹ ವಿಜಯಿ ಆಗದಿರುವುದನ್ನು, ರಾಜಾ ಆಗದಿರುವುದನ್ನು ಬಾಪ್ದಾದಾರವರು ನೋಡಲು ಬಯಸುವುದಿಲ್ಲ. ಪ್ರತಿಯೊಬ್ಬ ಮಗು ರಾಜಾ ಮಗುವಾಗಿದೆ. ಸ್ವರಾಜ್ಯಾಧಿಕಾರಿ ಆಗಿದೆ, ಆದ್ದರಿಂದ ತಮ್ಮ ಸ್ವರಾಜ್ಯವನ್ನು ಮರೆಯಬೇಡಿ. ತಿಳಿಯಿತೇ.

ಬಾಪ್ದಾದಾರವರು ಅನೇಕ ಬಾರಿ ಸಮಯ ಅಚಾನಕ್ ಹಾಗೂ ನಾಜೂಕಾಗಿರುವುದು ಬರುತ್ತಲಿದೆ ಎಂದು ಸನ್ನೆ ಮಾಡಿದ್ದಾರೆ, ಆದ್ದರಿಂದ ಎವರ್ರೆಡಿ, ಅಶರೀರಿತನದ ಅನುಭವದ ಅವಶ್ಯಕತೆ ಇದೆ. ಎಷ್ಟೇ ಬಿಜಿ ಇರಲಿ ಬಿಜಿಯಾಗಿದ್ದರೂ ಸಹ ಒಂದು ಸೆಕೆಂಡ್ ಅಶರೀರಿ ಆಗುವುದರ ಅಭ್ಯಾಸ ಈಗಿಂದಲೇ ಮಾಡಿ ನೋಡಿ. ತಾವು ನಾವು ಬಹಳ ಬಿಜಿ ಆಗಿದ್ದೇವೆ ಎಂದು ಹೇಳುತ್ತೀರಿ. ಎಷ್ಟೇ ಬಿಜಿಯಾಗಿದ್ದರೂ ಒಂದುವೇಳೆ ತಮಗೆ ಬಾಯಾರಿಕೆ ಆದರೆ ಏನು ಮಾಡುತ್ತೀರಿ? ನೀರು ಕುಡಿಯುತ್ತೀರಲ್ಲವೇ! ಏಕೆಂದರೆ ಬಾಯಾರಿಕೆ ಆದರೆ ನೀರು ಕುಡಿಯಲೇ ಬೇಕೆಂದು ತಿಳಿದಿದೆ. ಹಾಗೆಯೇ ಮಧ್ಯ-ಮಧ್ಯದಲ್ಲಿ ಅಶರೀರಿ ಆತ್ಮಿಕ ಸ್ಥಿತಿಯಲ್ಲಿ ಸ್ಥಿತರಾಗುವ ಅಭ್ಯಾಸವೂ ಸಹ ಬೇಕಾಗಿದೆ. ಏಕೆಂದರೆ ಮುಂಬರುವ ಸಮಯದಲ್ಲಿ ನಾಲ್ಕೂ ಕಡೆಯ ಏರುಪೇರಿನಲ್ಲಿ ಅಚಲ ಸ್ಥಿತಿಯ ಅವಶ್ಯಕತೆ ಇದೆ ಅಂದಾಗ ಈಗಿಂದಲೇ ಬಹಳ ಕಾಲದ ಅಭ್ಯಾಸ ಮಾಡಲಿಲ್ಲವೆಂದರೆ ಬಹಳ ಏರುಪೇರಿನ ಸಮಯದಲ್ಲಿ ಅಚಲವಾಗಿ ಹೇಗೆ ಇರುತ್ತೀರಿ! ಇಡೀ ದಿನದಲ್ಲಿ 1-2 ನಿಮಿಷ ತೆಗೆದು ಸಮಯ ಪ್ರಮಾಣ ಆತ್ಮಿಕ ಸ್ಥಿತಿಯಿಂದ ಅಶರೀರಿ ಆಗಬಹುದೇ ಎಂದು ಚೆಕ್ ಮಾಡಿಕೊಳ್ಳಿ. ಚೆಕ್ (ಪರಿಶೀಲನೆ) ಮಾಡಿಕೊಳ್ಳಿ ಹಾಗೂ ಪರಿವರ್ತನೆ (ಚೇಂಜ್) ಮಾಡಿಕೊಳ್ಳಿ. ಕೇವಲ ಚೆಕ್ ಮಾಡಿಕೊಳ್ಳುವುದಲ್ಲ ಬದಲಾವಣೆ ಮಾಡಿಕೊಳ್ಳಿ ಅಂದಾಗ ಈ ಅಭ್ಯಾಸವನ್ನು ಪದೇ-ಪದೇ ಚೆಕ್ ಮಾಡಿಕೊಳ್ಳುವುದರಿಂದ, ರಿವೈಜ್ ಮಾಡುವುದರಿಂದ ಸಹಜ ಸ್ಥಿತಿ ಆಗಿ ಬಿಡುತ್ತದೆ. ಬಾಪ್ದಾದಾರವರೊಂದಿಗೆ ಸ್ನೇಹವಿದೆ ಎಂಬುವುದರಲ್ಲಿ ಎಲ್ಲರೂ ಕೈ ಎತ್ತುತ್ತಾರೆ. ಪೂರ್ತಿ ಸ್ನೇಹವಿದೆಯೋ ಅಥವಾ ಅರ್ಧ ಇದೆಯೋ? ಅರ್ಧ ಇಲ್ಲ ತಾನೆ? ಅಂದಾಗ ಸ್ನೇಹವಿದ್ದಲ್ಲಿ ಪ್ರತಿಜ್ಞೆ ಏನಾಗಿದೆ? ಏನು ಪ್ರತಿಜ್ಞೆ ಮಾಡಿದ್ದೀರಿ? ಜೊತೆಯಲ್ಲಿ ನಡೆಯುತ್ತೀರಾ? ಅಶರೀರಿ ಆಗಿ ಜೊತೆಯಲ್ಲಿ ನಡೆಯುತ್ತೀರಾ? ಅಥವಾ ಹಿಂದೆ ಬರುತ್ತೀರೋ? ಜೊತೆಯಲ್ಲಿ ನಡೆಯುತ್ತೀರಾ? ಸ್ವಲ್ಪ ಸಮಯ ವತನದಲ್ಲಿ ಜೊತೆಯಲ್ಲಿಯೂ ಇರುತ್ತೀರಿ, ಸ್ವಲ್ಪ ಸಮಯ. ನಂತರ ಬ್ರಹ್ಮಾ ತಂದೆಯ ಜೊತೆ ಮೊದಲ ಜನ್ಮದಲ್ಲಿ ಬರುತ್ತೀರಿ. ಈ ಪ್ರತಿಜ್ಞೆ ಮಾಡಿದ್ದೀರಲ್ಲವೇ. ಕೈ ಎತ್ತಿಸುವುದಿಲ್ಲ ತಲೆಯನ್ನು ಆಡಿಸಿ. ಕೈ ಎತ್ತಿಸಿದರೆ ಸುಸ್ತಾಗುತ್ತದೆಯಲ್ಲವೇ. ಜೊತೆಯಲ್ಲಿ ಹೋಗಲೇಬೇಕಾದಾಗ ಹಿಂದೆ ಬರಬಾರದು ಎಂದಾಗ ತಂದೆ ಯಾರನ್ನು ಜೊತೆಯಲ್ಲಿ ಕರೆದೊಯ್ಯುತ್ತಾರೆ? ತಂದೆಯು ಸಮಾನರನ್ನು ಜೊತೆಗೆ ಕರೆದೊಯ್ಯುತ್ತಾರೆ. ತಂದೆಗೆ ಒಂಟಿ ಆಗಿ ಹೋಗುವುದು ಇಷ್ಟವಿಲ್ಲ. ಮಕ್ಕಳ ಜೊತೆ ಹೋಗಬೇಕು ಅಂದಾಗ ಜೊತೆ ಬರಲು ತಯಾರಾಗಿದ್ದೀರಾ! ಕೈ ಅಲ್ಲಾಡಿಸಿ. ಎಲ್ಲರೂ ನಡೆಯುತ್ತೀರಾ? ಒಳ್ಳೆಯದು. ಎಲ್ಲರೂ ನಡೆಯಲು ತಯಾರಿದ್ದೀರಾ? ಯಾವಾಗ ತಂದೆ ಹೋಗುತ್ತಾರೋ ಆಗ ಹೋಗುತ್ತೀರಲ್ಲವೇ. ಈಗ ಹೋಗುವುದಿಲ್ಲ. ಈಗಂತೂ ವಿದೇಶಕ್ಕೆ ಮರಳಿ ಹೋಗಬೇಕು. ತಂದೆಯು ಆದೇಶ ಮಾಡುತ್ತಾರೆ, ನಷ್ಟಮೋಹಿ ಸ್ಮೃತಿಲಬ್ಧದ ಬೆಲ್ ಬಾರಿಸುತ್ತಾರೆ ಆಗ ಜೊತೆ ನಡೆಯುತ್ತೀರಿ. ಅಂದಾಗ ತಯಾರಿ ಮಾಡಿದ್ದೀರಲ್ಲವೇ! ಸ್ನೇಹದ ಚಿನ್ಹೆ ಆಗಿದೆ ಜೊತೆ ನಡೆಯುವುದು. ಒಳ್ಳೆಯದು.

ಬಾಪ್ದಾದಾರವರು ಪ್ರತಿಯೊಂದು ಮಗುವನ್ನು ದೂರವಿದ್ದರೂ ಸಹ ಸಮೀಪದಲ್ಲಿ ಅನುಭವ ಮಾಡುತ್ತಿದ್ದಾರೆ. ವಿಜ್ಞಾನದ ಸಾಧನ ದೂರವನ್ನು ಸಮೀಪಕ್ಕೆ ತರಬಹುದು, ನೋಡಬಹುದು, ಮಾತನಾಡಬಹುದು ಅಂದಾಗ ಬಾಪ್ದಾದಾರವರೂ ಸಹ ದೂರ ಕುಳಿತಿರುವಂತಹ ಮಕ್ಕಳನ್ನು ಎಲ್ಲರಿಗಿಂತ ಸಮೀಪ ನೋಡುತ್ತಿದ್ದಾರೆ. ದೂರ ಕುಳಿತಿಲ್ಲ, ಸಮಾವೇಶ ಆಗಿದ್ದೀರಿ. ಬಾಪ್ದಾದಾರವರು ವಿಶೇಷ ಸರದಿ ಅನುಸಾರ ಬಂದಂತಹ ಮಕ್ಕಳನ್ನು ತಮ್ಮ ಹೃದಯದಲ್ಲಿ, ನಯನಗಳಲ್ಲಿ ಸಮಾವೇಶ ಮಾಡಿಕೊಳ್ಳುತ್ತಾ ಒಬ್ಬೊಬ್ಬರನ್ನು ಜೊತೆ ನಡೆಯುವಂತಹ, ಜೊತೆ ಇರುವಂತಹ, ಜೊತೆಯಲ್ಲಿ ರಾಜ್ಯ ಮಾಡುವಂತಹವರನ್ನಾಗಿ ನೋಡುತ್ತಿದ್ದಾರೆ. ಇಂದಿನಿಂದ ಇಡೀ ದಿನ ಪದೇ-ಪದೇ ಯಾವ ಡ್ರಿಲ್ ಮಾಡುತ್ತೀರಿ? ಈಗೀಗ ಒಂದು ಸೆಕೆಂಡಿನಲ್ಲಿ ಆತ್ಮಾಭಿಮಾನಿ, ತಮ್ಮ ಶರೀರವನ್ನು ನೋಡುತ್ತಲೂ ಅಶರೀರಿ ಸ್ಥಿತಿಯಲ್ಲಿ ನ್ಯಾರಾ ಹಾಗೂ ತಂದೆಗೆ ಪ್ರಿಯರೆಂದು ಅನುಭವ ಮಾಡಬಹುದಲ್ಲವೇ! ಹಾಗಾದರೆ ಈಗ ಒಂದು ಸೆಕೆಂಡಿನಲ್ಲಿ ಅಶರೀರಿ ಆಗಿ! ಒಳ್ಳೆಯದು. (ಡ್ರಿಲ್) ಹೀಗೆಯೇ ಮಧ್ಯ-ಮಧ್ಯದಲ್ಲಿ ಇಡೀ ದಿನದಲ್ಲಿ ಹೇಗಾದರೂ ಮಾಡಿ ಒಂದು ನಿಮಿಷ ತೆಗೆದು ಈ ಅಭ್ಯಾಸವನ್ನು ಪಕ್ಕಾ ಮಾಡಿಕೊಳ್ಳುತ್ತಾ ಹೋಗಿ. ಏಕೆಂದರೆ ಮುಂದಿನ ಸಮಯ ಅತೀ ಆಹಾಕಾರದ್ದಾಗಿರುತ್ತದೆ ಎಂದು ಬಾಪ್ದಾದಾರವರಿಗೆ ತಿಳಿದಿದೆ. ನೀವು ಎಲ್ಲರಿಗೂ ಸಕಾಶವನ್ನು ಕೊಡಬೇಕಾಗುತ್ತದೆ ಮತ್ತು ಸಕಾಶ ಕೊಡುವುದರಲ್ಲಿಯೇ ತಮ್ಮ ತೀವ್ರ ಪುರುಷಾರ್ಥ ಆಗುತ್ತದೆ. ಸ್ವಲ್ಪ ಸಮಯದಲ್ಲಿ ಸಕಾಶದ ಮೂಲಕ ಸರ್ವಶಕ್ತಿಗಳನ್ನು ಕೊಡಬೇಕಾಗುತ್ತದೆ. ಯಾರು ಇಂತಹ ಸೂಕ್ಷ್ಮ ಸಮಯದಲ್ಲಿ ಸಕಾಶ ಕೊಡುತ್ತಾರೋ, ಎಷ್ಟು ಜನಕ್ಕೆ ಕೊಡುತ್ತಾರೋ, ಅನೇಕರಿಗೆ ಕೊಡಬಹುದು ಅಥವಾ ಸ್ವಲ್ಪ ಜನಕ್ಕೆ ಕೊಡಬಹುದು ಅಷ್ಟೇ ದ್ವಾಪರ ಹಾಗೂ ಕಲಿಯುಗದ ಭಕ್ತರು ಅವರಿಗೆ ಸಿಗುತ್ತಾರೆ. ಅಂದಾಗ ಸಂಗಮದಲ್ಲಿ ಪ್ರತಿಯೊಬ್ಬರು ಭಕ್ತರನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಏಕೆಂದರೆ ಕೊಟ್ಟಿರುವಂತಹ ಸುಖ ಹಾಗೂ ಶಾಂತಿ ಅವರ ಹೃದಯದಲ್ಲಿ ಸಮಾವೇಶವಾಗುತ್ತದೆ ಮತ್ತು ಭಕ್ತಿಯ ರೂಪದಲ್ಲಿ ತಮಗೆ ರಿಟರ್ನ್ ನೀಡುತ್ತಾರೆ. ಒಳ್ಳೆಯದು.

ಎಲ್ಲಾ ಕಡೆಯ ಬಾಪ್ದಾದಾರವರ ನಯನಗಳ ಮಣಿ, ವಿಶ್ವದ ಆಧಾರ ಹಾಗೂ ಉದ್ಧಾರ ಮಾಡುವ ಆತ್ಮಗಳಿಗೆ ಮಾಸ್ಟರ್ ದುಃಖ ಹರ್ತ, ಸುಖ ಕರ್ತ, ವಿಶ್ವ ಪರಿವರ್ತಕ ಮಕ್ಕಳಿಗೆ ಬಹಳ-ಬಹಳ ಹೃದಯದ ಸ್ನೇಹ, ಹೃದಯದ ಪ್ರೀತಿ ಮತ್ತು ಪದಮ-ಪದಮ ವರದಾನ ಸ್ವೀಕಾರವಾಗಲಿ. ಒಳ್ಳೆಯದು.

ವರದಾನ:
ಕಂಬೈಂಡ್ ಸ್ವರೂಪದ ಸ್ಮೃತಿ ಮತ್ತು ಪೋಜಿಷನ್ನ ನಶೆಯ ಮೂಲಕ ಕಲ್ಪ-ಕಲ್ಪದ ಅಧಿಕಾರಿ ಭವ.

ನಾನು ಮತ್ತು ನನ್ನ ಬಾಬಾ - ಈ ಸ್ಮೃತಿಯಲ್ಲಿ ಕಂಬೈಂಡ್ ಆಗಿರಿ ಹಾಗೂ ನಾವು ಇಂದು ಬ್ರಾಹ್ಮಣರಾಗಿದ್ದೇವೆ, ನಾಳೆ ದೇವತೆಗಳಾಗುತ್ತೇವೆ ಎಂಬ ಶ್ರೇಷ್ಠ ಪೋಜಿಷನ್ ಸದಾ ಸ್ಮೃತಿಯಲ್ಲಿರಲಿ. ಹಮ್ ಸೋ, ಸೋ ಹಮ್ನ ಮಂತ್ರವು ಸದಾ ನೆನಪಿರಲಿ ಆಗ ಈ ನಶೆ ಮತ್ತು ಖುಷಿಯಲ್ಲಿ ಹಳೆಯ ಪ್ರಪಂಚವು ಸಹಜವಾಗಿ ಮರೆತು ಹೋಗುವುದು. ಸದಾ ಇದೇ ನಶೆಯಿರುವುದು - ನಾವೇ ಕಲ್ಪ-ಕಲ್ಪದ ಅಧಿಕಾರಿ ಆತ್ಮರಾಗಿದ್ದೇವೆ, ನಾವೇ ಆಗಿದ್ದೆವು, ನಾವೇ ಆಗಿದ್ದೇವೆ ಮತ್ತು ಕಲ್ಪ-ಕಲ್ಪವೂ ನಾವೇ ಆಗುತ್ತೇವೆ.

ಸ್ಲೋಗನ್:
ತಮಗೆ ತಾವೇ ಶಿಕ್ಷಕರಾಗಿ ಆಗ ಸರ್ವ ನಿರ್ಬಲತೆಗಳು ಸ್ವತಹವಾಗಿ ಸಮಾಪ್ತಿಯಾಗುವವು.

ಅವ್ಯಕ್ತ ಸೂಚನೆಗಳು: ಈ ಅವ್ಯಕ್ತ ಮಾಸದಲ್ಲಿ ಬಂಧನ ಮುಕ್ತರಾಗಿ ಜೀವನ ಮುಕ್ತ ಸ್ಥಿತಿಯ ಅನುಭವ ಮಾಡಿರಿ.

ಹಾಗೆ ನೋಡಿದರೆ ಬಂಧನ ಯಾರಿಗೂ ಇಷ್ಟವಿಲ್ಲ, ಆದರೆ ಪರವಶರಾದಾಗ ಬಂಧನ ಉಂಟಾಗುತ್ತದೆ. ಆದ್ದರಿಂದ ಪರಿಶೀಲನೆ ಮಾಡಿಕೊಳ್ಳಿ - ನಾನು ಪರವಶ ಆತ್ಮನಾ? ಅಥವಾ ಸ್ವತಂತ್ರ ಆತ್ಮನಾ? ಜೀವನಮುಕ್ತಿ ಜೀವನ ಬಂಧದ ವ್ಯತ್ಯಾಸವು ಭವಿಷ್ಯದಲ್ಲಿ ಅನುಭವವಾಗುವುದಿಲ್ಲ. ಈ ಸಮಯದ ಜೀವನ ಮುಕ್ತ ಸ್ಥಿತಿಯ ಅನುಭವವೇ ಶ್ರೆಷ್ಠ. ಜೀವನದಲ್ಲೇ ಇದ್ದರೂ ಬಂಧನದಲ್ಲಿ ಇರಬಾರದು ಅದೇ ನಿಜವಾದ ಜೀವನ ಮುಕ್ತಿ.