11.02.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನಿಮಗೆ ಭಗವಂತನು ಓದಿಸುತ್ತಾರೆ, ನಿಮ್ಮ ಬಳಿ ಜ್ಞಾನರತ್ನಗಳಿವೆ, ನೀವು ಈ ಜ್ಞಾನರತ್ನಗಳ ವ್ಯಾಪಾರವನ್ನೇ ಮಾಡಬೇಕಾಗಿದೆ, ನೀವಿಲ್ಲಿ ಜ್ಞಾನವನ್ನು ಕಲಿಯುತ್ತೀರಿ, ಭಕ್ತಿಯನ್ನಲ್ಲ”

ಪ್ರಶ್ನೆ:
ಮನುಷ್ಯರು ನಾಟಕದ ಯಾವ ಅದ್ಭುತವಾದ ನೊಂದಾವಣೆಯನ್ನು ಭಗವಂತನ ಲೀಲೆಯೆಂದು ತಿಳಿದು ಅವರ ಮಹಿಮೆ ಮಾಡುತ್ತಾರೆ?

ಉತ್ತರ:
ಯಾರು ಯಾರಲ್ಲಿ ಭಾವನೆಯನ್ನಿಡುವರೋ ಅವರಿಗೆ ಆ ಮೂರ್ತಿಯ ಸಾಕ್ಷಾತ್ಕಾರವಾಗುತ್ತದೆ ಆದ್ದರಿಂದ ಭಗವಂತನು ಸಾಕ್ಷಾತ್ಕಾರ ಮಾಡಿಸಿದರೆಂದು ತಿಳಿಯುತ್ತಾರೆ ಆದರೆ ಎಲ್ಲವೂ ನಾಟಕದನುಸಾರವೇ ಆಗುತ್ತದೆ. ಒಂದುಕಡೆ ಭಗವಂತನ ಮಹಿಮೆ ಮಾಡುತ್ತಾರೆ, ಇನ್ನೊಂದು ಕಡೆ ಸರ್ವವ್ಯಾಪಿ ಎಂದು ಹೇಳಿ ನಿಂದನೆ ಮಾಡುತ್ತಾರೆ.

ಓಂ ಶಾಂತಿ.
ಭಗವಾನುವಾಚ - ಮಕ್ಕಳಿಗೆ ಇದನ್ನು ತಿಳಿಸಲಾಗಿದೆ, ಮನುಷ್ಯರಿಗೆ ಅಥವಾ ದೇವತೆಗಳಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ಬ್ರಹ್ಮ ದೇವತಾಯ ನಮಃ, ವಿಷ್ಣು ದೇವತಾಯ ನಮಃ, ಶಂಕರ ದೇವತಾಯ ನಮಃ ಎಂದು ಹಾಡುತ್ತಾರೆ, ನಂತರ ಶಿವಪರಮಾತ್ಮಾಯ ನಮಃ ಎಂದು ಹೇಳಲಾಗುತ್ತದೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಶಿವನಿಗೆ ತಮ್ಮದೇ ಆದ ಶರೀರವಿಲ್ಲ. ಮೂಲವತನದಲ್ಲಿ ಶಿವತಂದೆ ಮತ್ತು ಸಾಲಿಗ್ರಾಮಗಳಿರುತ್ತಾರೆ. ಮಕ್ಕಳಿಗೆ ತಿಳಿದಿದೆ - ಈಗ ನಾವಾತ್ಮಗಳಿಗೆ ತಂದೆಯು ಓದಿಸುತ್ತಿದ್ದಾರೆ, ಮತ್ತ್ಯಾವುದೆಲ್ಲಾ ಸತ್ಸಂಗಗಳಿವೆಯೋ ಅವು ವಾಸ್ತವದಲ್ಲಿ ಸತ್ಸಂಗಗಳಲ್ಲ. ಅದಂತೂ ಮಾಯೆಯ ಸಂಗವೆಂದು ತಂದೆಯು ತಿಳಿಸುತ್ತಾರೆ. ಅಲ್ಲಿ ನಮಗೆ ಭಗವಂತನು ಓದಿಸುತ್ತಾರೆಂದು ಯಾರೂ ತಿಳಿಯುವುದಿಲ್ಲ. ಗೀತೆಯನ್ನೂ ಸಹ ಕೇಳುತ್ತಾರೆಂದರೆ ಕೃಷ್ಣ ಭಗವಾನುವಾಚವೆಂದು ತಿಳಿಯುತ್ತಾರೆ. ದಿನ-ಪ್ರತಿದಿನ ಗೀತೆಯ ಪಠಣವು ಕಡಿಮೆಯಾಗುತ್ತಾ ಹೋಗುತ್ತದೆ ಏಕೆಂದರೆ ತಮ್ಮ ಧರ್ಮವನ್ನೇ ತಿಳಿದುಕೊಂಡಿಲ್ಲ. ಕೃಷ್ಣನ ಜೊತೆ ಎಲ್ಲರ ಪ್ರೀತಿಯಿದೆ, ಕೃಷ್ಣನನ್ನೇ ತೂಗುತ್ತಾರೆ. ಈಗ ನಾವು ಯಾರನ್ನು ತೂಗಬೇಕೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಮಕ್ಕಳನ್ನೇ ತೂಗುತ್ತಾರೆ, ತಂದೆಯನ್ನು ತೂಗಲು ಸಾಧ್ಯವಿಲ್ಲ. ನೀವು ಶಿವತಂದೆಯನ್ನು ತೂಗುತ್ತೀರಾ? ಅವರಂತೂ ಬಾಲಕನಾಗುವುದಿಲ್ಲ, ಪುನರ್ಜನ್ಮದಲ್ಲಿ ಬರುವುದಿಲ್ಲ, ಅವರು ಬಿಂದುವಾಗಿದ್ದಾರೆ, ಅವರನ್ನೇನು ತೂಗುತ್ತೀರಿ! ಅನೇಕರಿಗೆ ಕೃಷ್ಣನ ಸಾಕ್ಷಾತ್ಕಾರವಾಗುತ್ತದೆ, ಕೃಷ್ಣನ ಬಾಯಲ್ಲಿ ಇಡೀ ವಿಶ್ವವಿದೆ ಏಕೆಂದರೆ ವಿಶ್ವದ ಮಾಲೀಕನಾಗುತ್ತಾರೆ ಅಂದಾಗ ವಿಶ್ವರೂಪಿ ಬೆಣ್ಣೆಯಿದೆ. ಅವರು ಪರಸ್ಪರ ಹೊಡೆದಾಡುವುದೂ ಸಹ ವಿಶ್ವರೂಪಿ ಬೆಣ್ಣೆಗಾಗಿಯೇ ಹೊಡೆದಾಡುತ್ತಾರೆ, ನಾವು ವಿಜಯಿಗಳಾಗಬೇಕೆಂದು ತಿಳಿಯುತ್ತಾರೆ. ಕೃಷ್ಣನ ಬಾಯಲ್ಲಿ ಬೆಣ್ಣೆಯನ್ನು ತೋರಿಸುತ್ತಾರೆ. ಹೀಗೆ ಅನೇಕ ಪ್ರಕಾರದ ಸಾಕ್ಷಾತ್ಕಾರಗಳಾಗುತ್ತವೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಇಲ್ಲಿ ನಿಮಗೆ ಸಾಕ್ಷಾತ್ಕಾರದ ಅರ್ಥವನ್ನು ತಿಳಿಸಲಾಗುತ್ತದೆ. ನಮಗೆ ಭಗವಂತನು ಸಾಕ್ಷಾತ್ಕಾರ ಮಾಡಿಸುತ್ತಾರೆಂದು ಮನುಷ್ಯರು ತಿಳಿಯುತ್ತಾರೆ. ಇದನ್ನೂ ಸಹ ತಂದೆಯು ತಿಳಿಸುತ್ತಾರೆ - ಯಾರನ್ನು ನೆನಪು ಮಾಡುವರೋ ಅಂದರೆ ತಿಳಿದುಕೊಳ್ಳಿ, ಕೆಲವರು ಕೃಷ್ಣನ ನೌಧಾಭಕ್ತಿ ಮಾಡುತ್ತಾರೆ ಆಗ ಅಲ್ಪಕಾಲಕ್ಕಾಗಿ ಅವರ ಮನೋಕಾಮನೆಯು ಈಡೇರುತ್ತದೆ, ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಭಗವಂತನು ಸಾಕ್ಷಾತ್ಕಾರ ಮಾಡಿಸಿದರೆಂದು ಹೇಳುವುದಿಲ್ಲ. ಯಾರು ಯಾವ ಭಾವನೆಯಿಂದ ಯಾರ ಪೂಜೆಯನ್ನು ಮಾಡುವರೋ ಅವರಿಗೆ ಅವರ ಸಾಕ್ಷಾತ್ಕಾರವಾಗುತ್ತದೆ. ಇದು ನಾಟಕದಲ್ಲಿ ನಿಗಧಿಯಾಗಿದೆ. ಅವರು ಸಾಕ್ಷಾತ್ಕಾರ ಮಾಡಿಸುತ್ತಾರೆಂದು ಮನುಷ್ಯರು ಭಗವಂತನ ಮಹಿಮೆಯನ್ನು ಹೆಚ್ಚಿಸಿದ್ದಾರೆ. ಒಂದು ಕಡೆ ಮಹಿಮೆಯನ್ನು ಮಾಡುತ್ತಾರೆ, ಇನ್ನೊಂದು ಕಡೆ ಎಲ್ಲದರಲ್ಲಿ ಭಗವಂತನಿದ್ದಾರೆಂದು ಹೇಳುತ್ತಾರೆ. ಎಷ್ಟೊಂದು ಅಂಧಶ್ರದ್ಧೆಯ ಭಕ್ತಿಯಾಗಿದೆ! ಕೃಷ್ಣನ ಸಾಕ್ಷಾತ್ಕಾರವಾಯಿತು, ಇನ್ನು ನಾವು ಕೃಷ್ಣಪುರಿಯಲ್ಲಿ ಹೋಗುತ್ತೇವೆಂದು ತಿಳಿಯುತ್ತಾರೆ ಆದರೆ ಕೃಷ್ಣಪುರಿಯು ಎಲ್ಲಿಂದ ಬರುವುದು? ಇದೆಲ್ಲಾ ರಹಸ್ಯವನ್ನು ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ. ಕೃಷ್ಣಪುರಿಯ ಸ್ಥಾಪನೆಯಾಗುತ್ತದೆ. ಇದು ಕಂಸಪುರಿಯಾಗಿದೆ, ಕಂಸ, ಅಕಾಸುರ, ಬಕಾಸುರ, ಕುಂಭಕರ್ಣ, ರಾವಣ - ಇವೆಲ್ಲವೂ ಅಸುರರ ಹೆಸರುಗಳಾಗಿವೆ. ಶಾಸ್ತ್ರಗಳಲ್ಲಿ ಏನೇನನ್ನೋ ಬರೆದಿದ್ದಾರೆ.

ಇದನ್ನೂ ಸಹ ತಿಳಿಸಬೇಕಾಗಿದೆ - ಗುರುಗಳಲ್ಲಿ ಎರಡು ಪ್ರಕಾರದವರಿದ್ದಾರೆ. ಮೊದಲನೆಯವರು ಭಕ್ತಿಮಾರ್ಗದ ಗುರುಗಳಾಗಿದ್ದಾರೆ, ಅವರು ಭಕ್ತಿಯನ್ನೇ ಕಲಿಸುತ್ತಾರೆ. ಈ ತಂದೆಯಂತೂ ಜ್ಞಾನಸಾಗರನಾಗಿದ್ದಾರೆ, ಇವರಿಗೆ ಸದ್ಗುರುವೆಂದು ಹೇಳಲಾಗುತ್ತದೆ. ಅವರೆಂದೂ ಭಕ್ತಿಯನ್ನು ಕಲಿಸುವುದಿಲ್ಲ, ಜ್ಞಾನವನ್ನೇ ಕಲಿಸುತ್ತಾರೆ. ಮನುಷ್ಯರು ಭಕ್ತಿಯಲ್ಲಿ ಎಷ್ಟೊಂದು ಖುಷಿಯಾಗುತ್ತಾರೆ, ಡೋಲು ಬಾರಿಸುತ್ತಾರೆ. ಕಾಶಿಯಲ್ಲಿ ನೀವು ನೋಡುತ್ತೀರಿ, ಎಲ್ಲಾ ದೇವತೆಗಳ ಮಂದಿರಗಳನ್ನು ಮಾಡಿಬಿಟ್ಟಿದ್ದಾರೆ. ಇವೆಲ್ಲವೂ ಭಕ್ತಿಮಾರ್ಗದ ಅಂಗಡಿಗಳಾಗಿವೆ ಭಕ್ತಿಯ ವ್ಯಾಪಾರವಾಗಿದೆ. ನೀವು ಮಕ್ಕಳದು ಜ್ಞಾನರತ್ನಗಳ ವ್ಯವಹಾರವಾಗಿದೆ, ಇದಕ್ಕೂ ವ್ಯಾಪಾರವೆಂದು ಹೇಳಲಾಗುತ್ತದೆ. ತಂದೆಯು ರತ್ನಗಳ ವ್ಯಾಪಾರಿಯಾಗಿದ್ದಾರೆ, ಯಾವ ರತ್ನಗಳೆಂಬುದನ್ನು ನೀವೇ ತಿಳಿದುಕೊಂಡಿದ್ದೀರಿ. ಯಾರು ಕಲ್ಪದ ಹಿಂದೆ ತಿಳಿದುಕೊಂಡಿದ್ದಾರೆಯೋ ಅವರೇ ಈ ಮಾತುಗಳನ್ನು ತಿಳಿದುಕೊಳ್ಳುತ್ತಾರೆ, ಅನ್ಯರು ತಿಳಿದುಕೊಳ್ಳುವುದಿಲ್ಲ. ಯಾರೆಲ್ಲಾ ದೊಡ್ಡ-ದೊಡ್ಡವರಿದ್ದಾರೆಯೋ ಅವರು ಕೊನೆಯಲ್ಲಿ ಬಂದು ತಿಳಿದುಕೊಳ್ಳುತ್ತಾರೆ. ಬೇರೆ ಧರ್ಮಗಳಲ್ಲಿ ಹೋಗಿ ಸೇರಿದ್ದಾರಲ್ಲವೆ. ಒಬ್ಬ ರಾಜ ಜನಕನ ಕಥೆಯನ್ನು ತಿಳಿಸುತ್ತಾರೆ, ಜನಕನೇ ಮತ್ತೆ ಅನುಜನಕನಾದನು. ಹೇಗೆ ಯಾರ ಹೆಸರಾದರೂ ಕೃಷ್ಣನಾಗಿದ್ದರೆ ನೀನು ಅನುದೈವೀಕೃಷ್ಣನಾಗುತ್ತೀಯ ಎಂದು ಹೇಳುತ್ತಾರೆ. ಆ ಸರ್ವಗುಣ ಸಂಪನ್ನ ಕೃಷ್ಣನೆಲ್ಲಿ, ಇವರೆಲ್ಲಿ! ಯಾರ ಹೆಸರಾದರೂ ಲಕ್ಷ್ಮಿಯೆಂದಿದ್ದರೆ ಅವರು ಈ ಲಕ್ಷ್ಮೀ -ನಾರಾಯಣರ ಮುಂದೆ ಹೋಗಿ ಮಹಿಮೆ ಮಾಡುತ್ತಾರೆ. ಇವರಲ್ಲಿ ಮತ್ತು ನನ್ನಲ್ಲಿ ಅಂತರವೇನಿದೆ ಎಂಬುದನ್ನು ತಿಳಿದುಕೊಳ್ಳುತ್ತಾರೆಯೇ? ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂದು ನೀವು ಮಕ್ಕಳಿಗೆ ಈಗ ಜ್ಞಾನವಿದೆ. ನೀವೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ಈ ಚಕ್ರವು ಅನೇಕಬಾರಿ ತಿರುಗುತ್ತಾ ಬಂದಿದೆ, ಎಂದೂ ನಿಂತುಹೋಗುವುದಿಲ್ಲ. ನೀವು ಈ ನಾಟಕದಲ್ಲಿ ಪಾತ್ರಧಾರಿಗಳಾಗಿದ್ದೀರಿ. ನಾವು ಈ ನಾಟಕದಲ್ಲಿ ಪಾತ್ರವನ್ನಭಿನಯಿಸಲು ಬಂದಿದ್ದೇವೆ ಎಂಬುದನ್ನಂತೂ ಮನುಷ್ಯರು ಅವಶ್ಯವಾಗಿ ತಿಳಿದುಕೊಳ್ಳುತ್ತಾರೆ. ಆದರೆ ನಾಟಕದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವಾತ್ಮಗಳಿರುವ ಸ್ಥಾನವು ಅತಿದೂರಕ್ಕಿಂತ ದೂರವಿದೆ, ಅಲ್ಲಿ ಸೂರ್ಯ, ಚಂದ್ರರ ಬೆಳಕು ಇರುವುದಿಲ್ಲ. ಇದೆಲ್ಲವನ್ನೂ ತಿಳಿದುಕೊಳ್ಳುವಂತಹ ಮಕ್ಕಳೂ ಸಹ ಬಹುತೇಕ ಮಟ್ಟಿಗೆ ಸಾಧಾರಣ, ಬಡವರೇ ಆಗಿರುತ್ತಾರೆ ಏಕೆಂದರೆ ಭಾರತವೇ ಎಲ್ಲದಕ್ಕಿಂತ ಸಾಹುಕಾರನಾಗಿತ್ತು, ಈಗ ಅದೇ ಎಲ್ಲದಕ್ಕಿಂತ ಬಡದೇಶವಾಗಿದೆ. ಸಂಪೂರ್ಣ ಆಟವು ಭಾರತದ ಮೇಲಿದೆ. ಭಾರತದಂತಹ ಪಾವನ ಖಂಡವು ಮತ್ತ್ಯಾವುದೂ ಇಲ್ಲ. ಪಾವನ ಪ್ರಪಂಚದಲ್ಲಿ ಪಾವನ ಖಂಡವಿರುತ್ತದೆ, ಮತ್ತ್ಯಾವುದೇ ಖಂಡವಿರುವುದಿಲ್ಲ. ತಂದೆಯು ತಿಳಿಸುತ್ತಾರೆ - ಇಡೀ ಪ್ರಪಂಚವೇ ಒಂದು ದ್ವೀಪವಾಗಿದೆ, ಹೇಗೆ ಲಂಕೆಯು ದ್ವೀಪವಾಗಿದೆ. ರಾವಣನು ಲಂಕೆಯಲ್ಲಿದ್ದನೆಂದು ತೋರಿಸುತ್ತಾರೆ. ಈಗ ನಿಮಗೆ ತಿಳಿದಿದೆ, ರಾವಣರಾಜ್ಯವಂತೂ ಇಡೀ ಬೇಹದ್ದಿನ ಲಂಕೆಯಲ್ಲಿದೆ. ಇಡೀ ಸೃಷ್ಟಿಯು ಸಮುದ್ರದಲ್ಲಿ ನಿಂತಿದೆ, ಒಂದು ದ್ವೀಪವಾಗಿದೆ. ಇದರಲ್ಲಿ ರಾವಣರಾಜ್ಯವಿದೆ. ಇವರೆಲ್ಲಾ ಸೀತೆಯರು ರಾವಣನ ಬಂಧನದಲ್ಲಿದ್ದಾರೆ. ಆ ಮನುಷ್ಯರಂತೂ ಇದನ್ನು ಹದ್ದಿನ ಕಥೆಗಳನ್ನಾಗಿ ಮಾಡಿಬಿಟ್ಟಿದ್ದಾರೆ. ಇದೆಲ್ಲವೂ ವಾಸ್ತವದಲ್ಲಿ ಬೇಹದ್ದಿನ ಮಾತಾಗಿದೆ, ಬೇಹದ್ದಿನ ನಾಟಕವಾಗಿದೆ. ಇದರಲ್ಲಿಯೇ ಮತ್ತೆ ಚಿಕ್ಕ-ಚಿಕ್ಕ ನಾಟಕಗಳನ್ನು ರಚಿಸಿದ್ದಾರೆ. ಈ ಸಿನೆಮಾ ಮೊದಲಾದುವುಗಳೂ ಸಹ ಈಗಲೇ ಬಂದಿವೆ. ಆದ್ದರಿಂದ ತಂದೆಗೂ ತಿಳಿಸುವುದರಲ್ಲಿ ಸಹಜವಾಗುತ್ತದೆ. ಇಡೀ ಬೇಹದ್ದಿನ ನಾಟಕವು ನೀವು ಮಕ್ಕಳ ಬುದ್ಧಿಯಲ್ಲಿದೆ. ಸ್ಥೂಲವತನ, ಸೂಕ್ಷ್ಮವತನ ಮತ್ತ್ಯಾರ ಬುದ್ಧಿಯಲ್ಲಿರಲು ಸಾಧ್ಯವಿಲ್ಲ. ನೀವು ತಿಳಿದುಕೊಂಡಿದ್ದೀರಿ, ನಾವಾತ್ಮಗಳು ಮೂಲವತನವಾಸಿಗಳಾಗಿದ್ದೇವೆ, ದೇವತೆಗಳು ಸೂಕ್ಷ್ಮವತನವಾಸಿಗಳಾಗಿದ್ದಾರೆ ಅವರನ್ನು ಫರಿಶ್ತೆಗಳೆಂದು ಹೇಳುತ್ತಾರೆ. ಅಲ್ಲಿ ಮೂಳೆಮಾಂಸದ ಪಂಜರ (ಶರೀರ) ವಿರುವುದಿಲ್ಲ. ಈ ಸೂಕ್ಷ್ಮವತನದ ಪಾತ್ರವೂ ಸಹ ಸ್ವಲ್ಪಸಮಯಕ್ಕಾಗಿದೆ. ಈಗ ನೀವು ಬಂದು ಹೋಗುತ್ತೀರಿ. ಇದರ ನಂತರ ಎಂದೂ ಹೋಗುವುದಿಲ್ಲ. ಸೂಕ್ಷ್ಮವತನದ ಪಾತ್ರವು ಮುಗಿಯುತ್ತದೆ, ನೀವಾತ್ಮಗಳು ಮೂಲವತನದಿಂದ ಬರುವಾಗ ಸೂಕ್ಷ್ಮವತನದ ಮೂಲಕ ಬರುವುದಿಲ್ಲ, ನೇರವಾಗಿ ಬರುತ್ತೀರಿ. ಈಗ ಹೋಗುವಾಗ ಸೂಕ್ಷ್ಮವತನಕ್ಕೆ ಹೋಗುತ್ತೀರಿ, ಈಗ ಸೂಕ್ಷ್ಮವತನ ಪಾತ್ರವಿದೆ, ಇದೆಲ್ಲಾ ರಹಸ್ಯವನ್ನು ಮಕ್ಕಳಿಗೆ ತಿಳಿಸುತ್ತಾರೆ. ನಾನು ಆತ್ಮಗಳಿಗೆ ತಿಳಿಸುತ್ತಿದ್ದೇನೆಂದು ತಂದೆಯು ತಿಳಿಯುತ್ತಾರೆ. ಸಾಧು-ಸಂತರು ಯಾರೂ ಸಹ ಈ ಮಾತುಗಳನ್ನು ಅರಿತುಕೊಳ್ಳುವುದಿಲ್ಲ. ಅವರೆಂದೂ ಸಹ ಈ ರೀತಿಯ ಮಾತುಗಳನ್ನಾಡಲು ಸಾಧ್ಯವಿಲ್ಲ. ತಂದೆಯೇ ಮಕ್ಕಳೊಂದಿಗೆ ಮಾತನಾಡುತ್ತಾರೆ. ಕರ್ಮೇಂದ್ರಿಯಗಳಿಲ್ಲದೆ ಮಾತನಾಡಲು ಸಾಧ್ಯವಿಲ್ಲ. ನಾನು ಈ ಶರೀರದ ಆಧಾರವನ್ನು ತೆಗೆದುಕೊಂಡು ನೀವು ಮಕ್ಕಳಿಗೆ ಓದಿಸುತ್ತೇನೆಂದು ಹೇಳುತ್ತಾರೆ. ನೀವಾತ್ಮಗಳ ದೃಷ್ಟಿಯೂ ಸಹ ತಂದೆಯ ಕಡೆ ಹೋಗುತ್ತದೆ. ಇವೆಲ್ಲವೂ ಹೊಸಮಾತುಗಳಾಗಿವೆ, ನಿರಾಕಾರ ತಂದೆ, ಅವರ ಹೆಸರು ಶಿವತಂದೆಯೆಂದಾಗಿದೆ. ನೀವಾತ್ಮಗಳ ಹೆಸರಂತೂ ಆತ್ಮವೇ ಆಗಿದೆ. ನಿಮ್ಮ ಶರೀರದ ಹೆಸರು ಬದಲಾಗುತ್ತದೆ. ಪರಮಾತ್ಮನು ನಾಮ-ರೂಪದಿಂದ ಭಿನ್ನವಾಗಿದ್ದಾರೆಂದು ಮನುಷ್ಯರು ಹೇಳುತ್ತಾರೆ ಆದರೆ ಹೆಸರಂತೂ ಶಿವನೆಂದು ಹೇಳುತ್ತಾರಲ್ಲವೆ. ಶಿವನ ಪೂಜೆಯನ್ನೂ ಮಾಡುತ್ತಾರೆ. ಒಂದನ್ನು ತಿಳಿಯುತ್ತಾರೆ ಇನ್ನೊಂದನ್ನು ಮಾಡುತ್ತಾರೆ. ಈಗ ನೀವು ತಂದೆಯ ನಾಮ-ರೂಪ, ದೇಶ-ಕಾಲಗಳನ್ನು ಅರಿತುಕೊಂಡಿದ್ದೀರಿ. ನಿಮಗೆ ತಿಳಿದಿದೆ, ಯಾವುದೇ ವಸ್ತು ನಾಮ-ರೂಪವಿಲ್ಲದೇ ಇರಲು ಸಾಧ್ಯವಿಲ್ಲ. ಇದೂ ಸಹ ಬಹಳ ಸೂಕ್ಷ್ಮ ತಿಳಿದುಕೊಳ್ಳುವ ಮಾತುಗಳಾಗಿವೆ. ತಂದೆಯು ತಿಳಿಸುತ್ತಾರೆ - ಸೆಕೆಂಡಿನಲ್ಲಿ ಜೀವನ್ಮುಕ್ತಿ ಅರ್ಥಾತ್ ಮನುಷ್ಯನು ನರನಿಂದ ನಾರಾಯಣನಾಗುವನೆಂದು ಗಾಯನವೂ ಇದೆ. ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ. ನಾವು ಅವರ ಮಕ್ಕಳಾಗಿದ್ದೇವೆ ಅಂದಮೇಲೆ ಸ್ವರ್ಗದ ಮಾಲೀಕರಾದೆವಲ್ಲವೆ. ಆದರೆ ಇದನ್ನೂ ಸಹ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನರನಿಂದ ನಾರಾಯಣನಾಗುವುದು ನಿಮ್ಮ ಲಕ್ಷ್ಯವಾಗಿದೆ, ರಾಜಯೋಗವಾಗಿದೆಯಲ್ಲವೆ. ಅನೇಕರಿಗೆ ಚತುರ್ಭುಜ ವಿಷ್ಣುವಿನ ಸಾಕ್ಷಾತ್ಕಾರವಾಗುತ್ತದೆ, ಇದರಿಂದ ನಾವು ವಿಷ್ಣುಪುರಿಯ ಮಾಲೀಕರಾಗುತ್ತೇವೆಂದು ಸಿದ್ಧವಾಗುತ್ತದೆ. ನಿಮಗೆ ತಿಳಿದಿದೆ, ಸ್ವರ್ಗದಲ್ಲಿಯೂ ಸಹ ಲಕ್ಷ್ಮಿ-ನಾರಾಯಣರ ಸಿಂಹಾಸನದ ಹಿಂದೆ ವಿಷ್ಣುವಿನ ಚಿತ್ರವನ್ನಿಡುತ್ತಾರೆ ಅರ್ಥಾತ್ ವಿಷ್ಣುಪುರಿಯಲ್ಲಿ ಇವರ ರಾಜ್ಯವಿದೆ. ಈ ಲಕ್ಷ್ಮಿ-ನಾರಾಯಣರು ವಿಷ್ಣುಪುರಿಯ ಮಾಲೀಕರಾಗಿದ್ದಾರೆ. ಅದು ಕೃಷ್ಣಪುರಿ, ಇದು ಕಂಸಪುರಿಯಾಗಿದೆ. ನಾಟಕದನುಸಾರ ಈ ಹೆಸರುಗಳನ್ನೂ ಇಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ - ನನ್ನ ರೂಪವು ಬಹಳ ಸೂಕ್ಷ್ಮವಾಗಿದೆ, ಯಾರೂ ನನ್ನನ್ನು ಅರಿತುಕೊಳ್ಳುವುದಿಲ್ಲ. ಆತ್ಮವು ಒಂದು ನಕ್ಷತ್ರವಾಗಿದೆ ಎಂದು ಹೇಳುತ್ತಾರೆ ಆದರೆ ಮತ್ತೆ ಲಿಂಗಾಕಾರವಾಗಿ ಮಾಡಿಬಿಡುತ್ತಾರೆ ಇಲ್ಲವೆಂದರೆ ಪೂಜೆಯನ್ನು ಹೇಗೆ ಮಾಡುವರು! ರುದ್ರಯಜ್ಞವನ್ನು ರಚಿಸಿದಾಗಲೂ ಸಹ ಅಂಡಾಕಾರವಾಗಿ ಸಾಲಿಗ್ರಾಮಗಳನ್ನು ಮಾಡುತ್ತಾರೆ. ಇನ್ನೊಂದು ಕಡೆ ಅವರನ್ನು ಹೊಳೆಯುವ ನಕ್ಷತ್ರವೆಂದು ಹೇಳುತ್ತಾರೆ. ಆತ್ಮವನ್ನು ನೋಡಲು ಬಹಳ ಪ್ರಯತ್ನಪಡುತ್ತಾರೆ ಆದರೆ ಯಾರೂ ನೋಡಲು ಸಾಧ್ಯವಿಲ್ಲ. ರಾಮಕೃಷ್ಣ, ವಿವೇಕಾನಂದರನ್ನು ತೋರಿಸುತ್ತಾರಲ್ಲವೆ. ಆತ್ಮವು ಅವರಿಂದ ಹೊರಟು ನನ್ನಲ್ಲಿ ಸಮಾವೇಶವಾಯಿತೆಂದು ಅವರು ನೋಡಿದರು. ಅವರಿಗೆ ಯಾರ ಸಾಕ್ಷಾತ್ಕಾರವಾಗಿರಬಹುದು! ಆತ್ಮ ಮತ್ತು ಪರಮಾತ್ಮನ ರೂಪವು ಒಂದೇ ಆಗಿದೆ. ಬಿಂದುವನ್ನು ನೋಡಿದರು ಆದರೆ ಏನೂ ತಿಳಿದುಕೊಳ್ಳಲಾಗಲಿಲ್ಲ. ಆತ್ಮದ ಸಾಕ್ಷಾತ್ಕಾರವನ್ನು ಯಾರೂ ಬಯಸುವುದಿಲ್ಲ. ಪರಮಾತ್ಮನ ಸಾಕ್ಷಾತ್ಕಾರವನ್ನು ಮಾಡಬೇಕೆಂದು ಇಚ್ಛೆಯನ್ನಿಡುತ್ತಾರೆ. ಗುರುವಿನಿಂದ ಪರಮಾತ್ಮನ ಸಾಕ್ಷಾತ್ಕಾರ ಮಾಡಬೇಕೆಂದು ಅವರು ಕುಳಿತಿದ್ದರು. ಜ್ಯೋತಿಯು ನನ್ನಲ್ಲಿ ಸಮಾವೇಶವಾಯಿತೆಂದು ಹೇಳಿದರು. ಇದರಲ್ಲಿಯೇ ಅವರು ಬಹಳ ಖುಷಿಯಾಗಿಬಿಟ್ಟರು. ಇದೇ ಪರಮಾತ್ಮನ ರೂಪವೆಂದು ತಿಳಿದರು. ಭಗವಂತನ ಸಾಕ್ಷಾತ್ಕಾರದ ಭಾವನೆಯನ್ನು ಗುರುವಿನಲ್ಲಿಡುತ್ತಾರೆ. ಏನನ್ನೂ ತಿಳಿದುಕೊಂಡಿಲ್ಲ, ಭಕ್ತಿಮಾರ್ಗದಲ್ಲಿ ಅವರಿಗೆ ತಿಳಿಸುವವರಾದರೂ ಯಾರು? ಯಾರು-ಯಾರು ಯಾವ ರೂಪದಿಂದ ಎಂಥಹ ಭಾವನೆಯನ್ನು ಇಟ್ಟುಕೊಳ್ಳುವರೋ, ಯಾರ ಮುಖವನ್ನು ನೋಡುವರೋ ಅದು ಸಾಕ್ಷಾತ್ಕಾರವಾಗುವುದು. ಹೇಗೆ ಗಣೇಶನ ಬಹಳ ಪೂಜೆ ಮಾಡುತ್ತಾರೆಂದರೆ ಚೈತನ್ಯದಲ್ಲಿ ಗಣೇಶನ ಸಾಕ್ಷಾತ್ಕಾರವಾಗಿಬಿಡುತ್ತದೆ ಇಲ್ಲವೆಂದರೆ ಅವರಿಗೆ ನಿಶ್ಚಯವಾಗುವುದು ಹೇಗೆ? ತೇಜೋಮಯ ರೂಪವನ್ನು ನೋಡಿ ನಾವು ಭಗವಂತನ ಸಾಕ್ಷಾತ್ಕಾರ ಮಾಡಿದೆವೆಂದು ತಿಳಿಯುತ್ತಾರೆ. ಅದರಲ್ಲಿಯೇ ಖುಷಿಯಾಗಿಬಿಡುತ್ತಾರೆ. ಇದೆಲ್ಲವೂ ಭಕ್ತಿಮಾರ್ಗ, ಇಳಿಯುವ ಕಲೆಯಾಗಿದೆ. ಮೊದಲ ಜನ್ಮವು ಚೆನ್ನಾಗಿರುತ್ತದೆ ನಂತರ ಎಲ್ಲವೂ ಕಡಿಮೆಯಾಗುತ್ತಾ-ಆಗುತ್ತಾ ಅಂತ್ಯವು ಬಂದುಬಿಡುತ್ತದೆ. ಮಕ್ಕಳೇ ಈ ಮಾತುಗಳನ್ನು ತಿಳಿದುಕೊಳ್ಳುತ್ತಾರೆ, ಯಾರಿಗೆ ಕಲ್ಪದ ಹಿಂದೆ ಜ್ಞಾನವನ್ನು ತಿಳಿಸಿದ್ದೆವೋ ಅವರಿಗೆ ಈಗ ತಿಳಿಸುತ್ತಿದ್ದೇವೆ. ಕಲ್ಪದ ಹಿಂದಿನವರೇ ಬರುತ್ತಾರೆ. ಅನ್ಯರ ಧರ್ಮವೇ ಬೇರೆಯಾಗಿದೆ, ಒಂದೊಂದು ಚಿತ್ರದಲ್ಲಿ ಭಗವಾನುವಾಚ ಎಂದು ಬರೆಯಿರಿ ಎಂದು ತಂದೆಯು ತಿಳಿಸುತ್ತಾರೆ. ಬಹಳ ಯುಕ್ತಿಯಿಂದ ತಿಳಿಸಬೇಕಾಗಿದೆ. ಯಾದವರು, ಕೌರವರು ಮತ್ತು ಪಾಂಡವರು ಏನು ಮಾಡಿ ಹೋದ ಕಾರಣ ಅವರ ಈ ಚಿತ್ರಗಳಿವೆ ಎಂದು ಭಗವಾನುವಾಚ ಇದೆಯಲ್ಲವೆ. ಕೇಳಿ, ನೀವು ತಮ್ಮ ತಂದೆಯನ್ನು ತಿಳಿದುಕೊಂಡಿದ್ದೀರಾ? ತಿಳಿದುಕೊಂಡಿಲ್ಲವೆಂದರೆ ತಂದೆಯೊಂದಿಗೆ ಪ್ರೀತಿಯಿಲ್ಲ ಅಲ್ಲವೆ. ಅಂದಾಗ ವಿಪರೀತ ಬುದ್ಧಿಯವರಾದರು. ತಂದೆಯೊಂದಿಗೆ ಪ್ರೀತಿಯಿಲ್ಲವೆಂದರೆ ವಿನಾಶವಾಗಿಬಿಡುತ್ತಾರೆ. ಪ್ರೀತಿಬುದ್ಧಿ ವಿಜಯಂತಿ, ಸತ್ಯಮೇವ ಜಯತೆ - ಇದರ ಅರ್ಥವೂ ಸರಿಯಾಗಿದೆ. ತಂದೆಯ ನೆನಪೇ ಇಲ್ಲವೆಂದರೆ ವಿಜಯಗಳಿಸಲು ಸಾಧ್ಯವಿಲ್ಲ.

ಶಿವಭಗವಂತನು ಗೀತೆಯನ್ನು ತಿಳಿಸಿದ್ದಾರೆ, ಅವರೇ ಬ್ರಹ್ಮಾರವರ ಮೂಲಕ ರಾಜಯೋಗವನ್ನು ಕಲಿಸಿದ್ದರೆಂದು ನೀವು ಸಿದ್ಧಮಾಡಿ ತಿಳಿಸುತ್ತೀರಿ. ಇಲ್ಲಂತೂ ಕೃಷ್ಣಭಗವಂತನ ಗೀತೆಯೆಂದು ತಿಳಿದು ಪ್ರತಿಜ್ಞೆ ಮಾಡುತ್ತಾರೆ. ಅವರನ್ನು ಕೇಳಬೇಕು - ಕೃಷ್ಣನನ್ನು ಎಲ್ಲಿ ನೋಡಿದರಲ್ಲಿ ಪ್ರತ್ಯಕ್ಷದಲ್ಲಿದ್ದಾರೆಂದು ತಿಳಿಯಬೇಕೋ? ಅಥವಾ ಭಗವಂತನನ್ನೋ? ಈಶ್ವರನು ಎಲ್ಲಾಕಡೆಯು ಇದ್ದಾರೆಂದು ತಿಳಿದು ಸತ್ಯವನ್ನು ಹೇಳಿ ಎಂದು ಹೇಳುತ್ತಾರೆ. ಆದ್ದರಿಂದ ಎಲ್ಲವೂ ತಬ್ಬಿಬ್ಬಾಯಿತು. ಪ್ರತಿಜ್ಞೆಯೂ ಅಸತ್ಯವಾಗಿಬಿಡುತ್ತದೆ. ಸೇವೆ ಮಾಡುವಂತಹ ಮಕ್ಕಳಿಗೆ ಗುಪ್ತನಶೆಯಿರಬೇಕು. ನಶೆಯಿಂದ ತಿಳಿಸಿದಾಗ ಸಫಲತೆಯಾಗುವುದು. ನಿಮ್ಮ ವಿದ್ಯೆಯೂ ಗುಪ್ತವಾಗಿದೆ, ಓದಿಸುವವರೂ ಗುಪ್ತವಾಗಿದ್ದಾರೆ. ನಾವು ಹೊಸ ಪ್ರಪಂಚದಲ್ಲಿ ಹೋಗಿ ಇಂತಹ ದೇವತೆಗಳಾಗುತ್ತೇವೆ ಎಂದು ತಿಳಿಯುತ್ತೀರಿ. ಮಹಾಭಾರತದ ಯುದ್ಧದ ನಂತರ ಹೊಸ ಪ್ರಪಂಚದ ಸ್ಥಾಪನೆಯಾಗುತ್ತದೆ, ಮಕ್ಕಳಿಗೆ ಈಗ ಜ್ಞಾನವು ಸಿಕ್ಕಿದೆ, ಅದನ್ನು ನಂಬರ್ವಾರ್ ಧಾರಣೆ ಮಾಡುತ್ತಾರೆ. ಯೋಗದಲ್ಲಿಯೂ ನಂಬರ್ವಾರ್ ಇರುತ್ತಾರೆ. ನಾವು ಎಷ್ಟು ನೆನಪಿನಲ್ಲಿರುತ್ತೇವೆಂದು ಪರಿಶೀಲನೆ ಮಾಡಿಕೊಳ್ಳಬೇಕು. ತಂದೆಯು ತಿಳಿಸುತ್ತಾರೆ - ಈಗಿನ ನಿಮ್ಮ ಪುರುಷಾರ್ಥವು ಭವಿಷ್ಯದ 21 ಜನ್ಮಗಳಿಗಾಗಿ ಆಗಿಬಿಡುವುದು. ಈಗ ಅನುತ್ತೀರ್ಣವಾದರೆ ಕಲ್ಪ-ಕಲ್ಪಾಂತರವೂ ಅನುತ್ತೀರ್ಣರಾಗುತ್ತಲೇ ಇರುತ್ತೀರಿ, ಶ್ರೇಷ್ಠಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಶ್ರೇಷ್ಠಪದವಿಯನ್ನು ಪಡೆಯುವ ಪುರುಷಾರ್ಥವನ್ನೇ ಮಾಡಬೇಕು. ಕೆಲವರು ಸೇವಾಕೇಂದ್ರದಲ್ಲಿಯೂ ಬರುತ್ತಿರುತ್ತಾರೆ ಮತ್ತು ವಿಕಾರದಲ್ಲಿ ಹೋಗುತ್ತಿರುತ್ತಾರೆ. ಮತ್ತೆ ಸೇವಾಕೇಂದ್ರದಲ್ಲಿ ಬರುತ್ತಾರೆ. ಈಶ್ವರನಂತೂ ಎಲ್ಲವನ್ನೂ ನೋಡುತ್ತಾರೆ, ಅರಿತುಕೊಳ್ಳುತ್ತಾರೆಂದು ತಿಳಿಯುತ್ತಾರೆ. ಎಲ್ಲವನ್ನೂ ಕುಳಿತು ನೋಡಲು ತಂದೆಗೇನಾಗಿದೆ? ನೀವು ಸುಳ್ಳು ಹೇಳುತ್ತೀರಿ, ವಿಕರ್ಮವನ್ನು ಮಾಡುತ್ತೀರೆಂದರೆ ನಷ್ಟ ಮಾಡಿಕೊಳ್ಳುತ್ತೀರಿ. ಇದನ್ನು ನೀವೂ ಸಹ ತಿಳಿದುಕೊಳ್ಳಬಹುದು - ನಾನು ಮುಖ ಕಪ್ಪು ಮಾಡಿಕೊಂಡರೆ ಶ್ರೇಷ್ಠಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಅಂದಾಗ ತಂದೆಯು ಎಲ್ಲವನ್ನೂ ಅರಿತುಕೊಂಡರೆಂದರೂ ಸಹ ಒಂದೇ ಮಾತಾಯಿತು ಆದರೆ ಅವರಿಗೆ ಇದೆಲ್ಲದರ ಅವಶ್ಯಕತೆಯೇನಿದೆ? ನಾನು ಇಂತಹ ಕರ್ಮ ಮಾಡುವುದರಿಂದ ದುರ್ಗತಿಯನ್ನು ಹೊಂದುತ್ತೇನೆಂದು ತಮ್ಮ ಹೃದಯವು ಹೇಳಬೇಕು. ತಂದೆಯೇಕೆ ತಿಳಿಸುವುದು? ಹಾ! ನಾಟಕದಲ್ಲಿದ್ದರೆ ತಂದೆಯು ತಿಳಿಸುತ್ತಾರೆ, ತಂದೆಯೊಂದಿಗೆ ಮುಚ್ಚಿಡುವುದೆಂದರೆ ತಮ್ಮ ಸತ್ಯನಾಶ ಮಾಡಿಕೊಳ್ಳುವುದಾಗಿದೆ. ಪಾವನರಾಗುವುದಕ್ಕಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ನಾವು ಬಹಳ ಚೆನ್ನಾಗಿ ಓದಿ ಶ್ರೇಷ್ಠಪದವಿಯನ್ನು ಪಡೆಯಬೇಕೆಂಬ ಚಿಂತೆಯೇ ನಿಮಗಿರಬೇಕು. ಯಾರೋ ಸತ್ತರು, ಅಥವಾ ಬದುಕಿದರು, ಅವರ ಚಿಂತೆಯಲ್ಲ. ತಂದೆಯಿಂದ ಆಸ್ತಿಯನ್ನು ಹೇಗೆ ತೆಗೆದುಕೊಳ್ಳುವುದು ಎಂಬ ಚಿಂತೆಯಿರಬೇಕು ಅಂದಾಗ ಯಾರಿಗಾದರೂ ಸ್ವಲ್ಪದರಲ್ಲಿಯೇ ತಿಳಿಸಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿಹೋಗಿ ಮರಳಿಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಗುಪ್ತ ನಶೆಯಲ್ಲಿದ್ದು ಸೇವೆ ಮಾಡಬೇಕಾಗಿದೆ. ಮನಸ್ಸು ತಿನ್ನುವಂತಹ ಯಾವುದೇ ಕರ್ಮವನ್ನು ಮಾಡಬಾರದು. ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ - ನಾವು ಎಷ್ಟು ಸಮಯ ನೆನಪಿನಲ್ಲಿರುತ್ತೇವೆ?

2. ಸದಾ ಇದೇ ಚಿಂತನೆಯಿರಲಿ - ನಾವು ಚೆನ್ನಾಗಿ ಓದಿ ಶ್ರೇಷ್ಠಪದವಿಯನ್ನು ಪಡೆಯಬೇಕು. ಯಾವುದೇ ವಿಕರ್ಮ ಮಾಡಿ ಸುಳ್ಳುಹೇಳಿ ತಮ್ಮ ನಷ್ಟ ಮಾಡಿಕೊಳ್ಳಬಾರದು.

ವರದಾನ:
ಮನ್ಮನಾಭವದ ಮಹಾಮಂತ್ರದ ಮೂಲಕ ಸರ್ವ ದುಃಖಗಳಿಂದ ದೂರವಿರುವಂತಹ ಸದಾ ಸುಖ ಸ್ವರೂಪ ಭವ

ಯಾವಾಗ ಯಾವುದೇ ಪ್ರಕಾರದ ದುಃಖ ಬಂದರೆ ಮಂತ್ರ ಹೇಳಿ ಅದರಿಂದ ದುಃಖ ಓಡಿಹೋಗುವುದು. ಸ್ವಪ್ನದಲ್ಲಿಯೂ ಸ್ವಲ್ಪವೂ ಸಹ ದುಃಖದ ಅನುಭವ ಆಗಬಾರದು, ಶರೀರಕ್ಕೆ ಖಾಯಿಲೆ ಬರಲಿ, ಹಣ ಸಂಪಾದನೆಯಲ್ಲಿ ಮೇಲೆ-ಕೆಳಗೆ ಆಗಲಿ, ಏನೇ ಆಗಲಿ ಆದರೆ ದುಃಖದ ಅಲೆ ಒಳಗೆ ಬರಲೇಬಾರದು. ಹೇಗೆ ಸಾಗರದಲ್ಲಿ ಅಲೆಗಳು ಬರುತ್ತವೆ ಮತ್ತು ಹೋಗುತ್ತವೆ ಆದರೆ ಯಾರಿಗೆ ಆ ಅಲೆಗಳಲ್ಲಿ ತೇಲಾಡುವುದು ಬರುತ್ತದೆ ಅವರು ಅದರಲ್ಲಿ ಸುಖದ ಅನುಭವ ಮಾಡುತ್ತಾರೆ, ಅಲೆಗಳನ್ನು ಜಂಪ್ ಮಾಡಿ ಈ ರೀತಿ ಪಾರುಮಾಡುತ್ತಾರೆ ಹೇಗೆ ಆಟವಾಡುತ್ತಿರುವ ಹಾಗೆ. ಅಂದರೆ ಸಾಗರನ ಮಕ್ಕಳು ಸುಖ ಸ್ವರೂಪರಾಗಿರುವಿರಿ, ದುಃಖದ ಅಲೆಯೂ ಸಹ ಬರಬಾರದು.

ಸ್ಲೋಗನ್:
ಪ್ರತಿ ಸಂಕಲ್ಪದಲ್ಲಿ ಧೃಡತೆಯ ವಿಶೇಷತೆಗಳನ್ನು ಕಾರ್ಯರೂಪದಲ್ಲಿ ತನ್ನಿ ಆಗ ಪ್ರತ್ಯಕ್ಷತೆಯಾಗಿಬಿಡುವುದು.

ಅವ್ಯಕ್ತ ಸೂಚನೆ: ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ

ಸ್ವ ಉನ್ನತಿಯಲ್ಲಿ, ಸೇವೆಯ ಉನ್ನತಿಯಲ್ಲಿ ಒಬ್ಬರು ಹೇಳಿದರು, ಇನ್ನೊಬ್ಬರು ಹಾಂಜೀ ಎಂದರು, ಹಾಗೆಯೇ ಸದಾ ಏಕತೆ ಮತ್ತು ದೃಢತೆಯಿಂದ ಮುಂದುವರೆಯುತ್ತಾ ಹೋಗಿ. ಹೇಗೆ ದಾದಿಯರ ಏಕತೆ ಮತ್ತು ದೃಢತೆಯ ಸಂಘಟನೆ ಪಕ್ಕಾ ಆಗಿದೆ, ಹಾಗೆಯೇ ಆದಿ ಸೇವೆಯ ರತ್ನಗಳ ಸಂಘಟನೆ ಪಕ್ಕಾ ಆಗಿರಲಿ, ಇದರ ಬಹಳ-ಬಹಳ ಅವಶ್ಯಕತೆಯಾಗಿದೆ.