11.03.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ಮಕ್ಕಳನ್ನು ಸುಖ-ಆರಾಮ/ನೆಮ್ಮದಿಯ ಪ್ರಪಂಚದಲ್ಲಿ ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ, ಶಾಂತಿಯು ಶಾಂತಿಧಾಮ ಮತ್ತು ಸುಖಧಾಮದಲ್ಲಿಯೇ ಇರುತ್ತದೆ”

ಪ್ರಶ್ನೆ:
ಈ ಯುದ್ಧದ ಮೈದಾನದಲ್ಲಿ ಮಾಯೆಯು ಎಲ್ಲದಕ್ಕಿಂತ ಮೊದಲು ಯಾವ ಮಾತಿನ ಮೇಲೆ ಯುದ್ಧ ಮಾಡುತ್ತದೆ?

ಉತ್ತರ:
ನಿಶ್ಚಯದ ಮೇಲೆ. ನಡೆಯುತ್ತಾ-ನಡೆಯುತ್ತಾ ನಿಶ್ಚಯವನ್ನು ತುಂಡರಿಸುತ್ತದೆ ಆದ್ದರಿಂದ ಸೋಲನ್ನನುಭವಿಸುತ್ತಾರೆ. ಒಂದುವೇಳೆ ಎಲ್ಲರ ದುಃಖವನ್ನು ಹರಣ ಮಾಡಿ, ಸುಖ ಕೊಡುವಂತಹ ತಂದೆಯೇ ನಮಗೆ ಶ್ರೀಮತವನ್ನು ಕೊಡುತ್ತಿದ್ದಾರೆ, ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಿದ್ದಾರೆಂಬ ನಿಶ್ಚಯವಿದ್ದರೆ ಎಂದೂ ಮಾಯೆಯಿಂದ ಸೋಲನ್ನನುಭವಿಸಲು ಸಾಧ್ಯವಿಲ್ಲ.

ಗೀತೆ:
ಈ ಪಾಪದ ಪ್ರಪಂಚದಿಂದ ದೂರ ಕರೆದುಕೊಂಡು ಹೋಗಿ..............

ಓಂ ಶಾಂತಿ.
ಯಾರಿಗಾಗಿ ಹೇಳುತ್ತಾರೆ ಮತ್ತು ಎಲ್ಲಿಗೆ ಕರೆದುಕೊಂಡು ಹೋಗಿ, ಹೇಗೆ ಕರೆದುಕೊಂಡು ಹೋಗುವುದು ಎಂಬುದನ್ನು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ನೀವು ಬ್ರಾಹ್ಮಣ ಕುಲಭೂಷಣರೇ ನಂಬರ್ವಾರ್ ಪುರುಷಾರ್ಥದನುಸಾರ ಅರಿತುಕೊಂಡಿದ್ದೀರಿ. ನೀವು ಮಕ್ಕಳಿಗೆ ಅರ್ಥವಾಗಿದೆ - ಇವರಲ್ಲಿ ಯಾರ ಪ್ರವೇಶತೆಯಾಗಿದೆಯೋ ನಮಗೆ ಅವರು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಿದ್ದಾರೆ, ಎಲ್ಲರ ದುಃಖವನ್ನು ದೂರ ಮಾಡಿ ಎಲ್ಲರನ್ನೂ ಸುಖದಾಯಿಯನ್ನಾಗಿ ಮಾಡುತ್ತಿದ್ದಾರೆ. ಇದೇನೂ ಹೊಸಮಾತಲ್ಲ. ತಂದೆಯು ಕಲ್ಪ-ಕಲ್ಪವೂ ಬರುತ್ತಾರೆ, ಎಲ್ಲರಿಗೆ ಶ್ರೀಮತವನ್ನು ಕೊಡುತ್ತಿದ್ದಾರೆ. ಮಕ್ಕಳಿಗೂ ಸಹ ತಿಳಿದಿದೆ, ಅದೇ ಕಲ್ಪದ ಹಿಂದಿನ ತಂದೆಯಾಗಿದ್ದಾರೆ. ನಾವೂ ಸಹ ಕಲ್ಪದ ಹಿಂದಿನವರೇ ಆಗಿದ್ದೇವೆ. ನೀವು ಮಕ್ಕಳಿಗೆ ಈ ನಿಶ್ಚಯವಿರಬೇಕು. ತಂದೆಯು ತಿಳಿಸುತ್ತಾರೆ - ನಾನು ಮಕ್ಕಳನ್ನು ಸುಖಧಾಮ-ಶಾಂತಿಧಾಮದಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆ ಆದರೆ ಮಾಯೆಯು ನಿಶ್ಚಯವನ್ನು ತುಂಡರಿಸುತ್ತದೆ. ಸುಖಧಾಮಕ್ಕೆ ನಡೆಯುತ್ತಾ-ನಡೆಯುತ್ತಾ ಪುನಃ ಸೋಲಿಸಿಬಿಡುತ್ತದೆ. ಇದು ಯುದ್ಧದ ಮೈದಾನವಲ್ಲವೆ, ಅದು ಬಾಹುಬಲದ ಯುದ್ಧವಾಗಿರುತ್ತದೆ, ಇದು ಯೋಗಬಲದ ಯುದ್ಧವಾಗಿದೆ. ಯೋಗಬಲವು ಬಹಳ ಪ್ರಸಿದ್ಧವಾಗಿದೆ ಆದ್ದರಿಂದಲೇ ಎಲ್ಲರೂ ಯೋಗ-ಯೋಗ ಎಂದು ಹೇಳುತ್ತಿರುತ್ತಾರೆ. ನೀವು ಈ ಯೋಗವನ್ನು ಒಂದೇಬಾರಿ ಕಲಿಯುತ್ತೀರಿ. ಉಳಿದಂತೆ ಅವರೆಲ್ಲರೂ ಅನೇಕ ಪ್ರಕಾರದ ಹಠಯೋಗಗಳನ್ನು ಕಲಿಸುತ್ತಾರೆ. ತಂದೆಯು ಹೇಗೆ ಬಂದು ಯೋಗವನ್ನು ಕಲಿಸುತ್ತಾರೆಂಬುದು ಅವರಿಗೆ ತಿಳಿದಿಲ್ಲ. ಮನುಷ್ಯರು ಪ್ರಾಚೀನ ಯೋಗವನ್ನು ಕಲಿಸಲು ಸಾಧ್ಯವಿಲ್ಲ. ನೀವು ಮಕ್ಕಳು ಚೆನ್ನಾಗಿ ತಿಳಿದುಕೊಂಡಿದ್ದೀರಿ - ಇವರು ಕಲ್ಪದ ಹಿಂದಿನ ತಂದೆಯೇ ರಾಜಯೋಗವನ್ನು ಕಲಿಸುತ್ತಿದ್ದಾರೆ ಯಾರನ್ನು ಹೇ ಪತಿತ-ಪಾವನ ಬನ್ನಿ, ಎಲ್ಲಿ ನೆಮ್ಮದಿಯಿದೆಯೋ ಅಂತಹ ಸ್ಥಾನಕ್ಕೆ ಕರೆದುಕೊಂಡು ಹೋಗಿ ಎಂದು ನೆನಪು ಮಾಡುತ್ತಾರೆ. ಆರಾಮವು ಶಾಂತಿಧಾಮ-ಸುಖಧಾಮದಲ್ಲಿಯೇ ಇರುವುದು. ದುಃಖಧಾಮದಲ್ಲಿ ಶಾಂತಿಯೆಲ್ಲಿಂದ ಬರುವುದು? ಶಾಂತಿಯಿಲ್ಲ ಆದ್ದರಿಂದಲೇ ನಾಟಕದನುಸಾರ ತಂದೆಯು ಬರುತ್ತಾರೆ, ಇದು ದುಃಖಧಾಮವಾಗಿದೆ. ಇಲ್ಲಿ ದುಃಖವೇ ದುಃಖವಿದೆ, ದುಃಖದ ಪರ್ವತಗಳೇ ಬೀಳಲಿವೆ. ಭಲೆ ಎಷ್ಟೇ ಧನವಂತರಾಗಿರಲಿ, ಅಥವಾ ಏನಾದರೂ ಆಗಿರಲಿ. ಯಾವುದಾದರೊಂದು ದುಃಖವು ಅವಶ್ಯವಾಗಿ ಇರುವುದು. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಮಧುರ ತಂದೆಯ ಜೊತೆಯಲ್ಲಿ ಕುಳಿತಿದ್ದೇವೆ. ಯಾವ ತಂದೆಯು ಈಗ ಬಂದಿದ್ದಾರೆ. ನಾಟಕದ ರಹಸ್ಯವನ್ನೂ ಸಹ ಈಗ ನೀವು ತಿಳಿದಿದ್ದೀರಿ. ತಂದೆಯು ನಮ್ಮೆಲ್ಲರನ್ನೂ ಜೊತೆ ಕರೆದುಕೊಂಡು ಹೋಗಲು ಬಂದಿದ್ದಾರೆ. ತಂದೆಯು ನಾವಾತ್ಮಗಳಿಗೆ ತಿಳಿಸುತ್ತಾರೆ ಏಕೆಂದರೆ ಅವರು ಆತ್ಮಗಳ ತಂದೆಯಾಗಿದ್ದಾರಲ್ಲವೆ. ಇದಕ್ಕಾಗಿಯೇ ಗಾಯನವಿದೆ - ಪರಮಾತ್ಮ ಮತ್ತು ಆತ್ಮಗಳು ಬಹಳ ಕಾಲ ಅಗಲಿದ್ದರು. ಶಾಂತಿಧಾಮದಲ್ಲಿ ಎಲ್ಲಾ ಆತ್ಮಗಳೂ ಜೊತೆಯಲ್ಲಿರುತ್ತಾರೆ. ಈಗ ತಂದೆಯು ಬಂದಿದ್ದಾರೆ, ಈಗ ಪರಮಧಾಮದಲ್ಲಿ ಉಳಿದುಕೊಂಡಿರುವ ಆತ್ಮಗಳೆಲ್ಲರೂ ಸಹ ಕೆಳಗೆ ಪಾತ್ರವನ್ನಭಿನಯಿಸಲು ಇಲ್ಲಿ ಬರುತ್ತಿರುತ್ತಾರೆ. ಇಲ್ಲಿ ನಿಮಗೆ ತಂದೆಯು ಎಷ್ಟೊಂದು ಮಾತುಗಳನ್ನು ತಿಳಿಸಿಕೊಡುತ್ತಾರೆ ಆದರೆ ಮನೆಗೆ ಹೋದತಕ್ಷಣ ಮರೆತು ಹೋಗುತ್ತೀರಿ. ಇದು ಬಹಳ ಸಹಜ ಮಾತಾಗಿದೆ ಮತ್ತು ಯಾವ ತಂದೆಯು ಸರ್ವರ ಸದ್ಗತಿದಾತ, ಶಾಂತಿದಾತನಾಗಿದ್ದಾರೆಯೋ ಅವರೇ ಮಕ್ಕಳಿಗೆ ತಿಳಿಸಿಕೊಡುತ್ತಾರೆ. ನೀವು ಬಹಳ ಕೆಲವರೇ ಇದ್ದೀರಿ. ನಿಧಾನ-ನಿಧಾನವಾಗಿ ವೃದ್ಧಿಯನ್ನು ಹೊಂದುತ್ತಾ ಹೋಗುತ್ತೀರಿ. ತಂದೆಯ ಜೊತೆ ನಿಮಗೆ ಗುಪ್ತಪ್ರೀತಿಯಿದೆ. ಎಲ್ಲಿಯಾದರೂ ಇರಿ ಆದರೆ ತಂದೆಯು ಮಧುಬನದಲ್ಲಿದ್ದಾರೆ ಎಂದು ನಿಮ್ಮ ಬುದ್ಧಿಯಲ್ಲಿರುತ್ತದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ಮೂಲವತನದಲ್ಲಿ ನೆನಪು ಮಾಡಿ, ನಿಮ್ಮ ನಿವಾಸಸ್ಥಾನವೂ ಸಹ ಅದೇ ಆಗಿದೆ ಅಂದಾಗ ಅವಶ್ಯವಾಗಿ ತಂದೆಯನ್ನು ನೆನಪು ಮಾಡಿ, ಯಾರನ್ನು ನೀವು ಮಾತಾಪಿತಾ ಎಂದು ಹೇಳುತ್ತೀರೋ ಅವರು ಈಗ ನಿಮ್ಮ ಬಳಿ ಬಂದಿದ್ದಾರೆ. ನಾನು ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆಂದು ತಂದೆ ತಿಳಿಸುತ್ತಾರೆ. ರಾವಣನು ನಿಮ್ಮನ್ನು ಪತಿತ, ತಮೋಪ್ರಧಾನರನ್ನಾಗಿ ಮಾಡಿದ್ದಾನೆ, ಈಗ ಸತೋಪ್ರಧಾನರಾಗಬೇಕಾಗಿದೆ. ಪತಿತರು ಹೋಗಲು ಹೇಗೆ ಸಾಧ್ಯ? ಅಂದಾಗ ಅವಶ್ಯವಾಗಿ ಪಾವನರಾಗಬೇಕಾಗಿದೆ. ಈ ಸಮಯದಲ್ಲಿ ಒಬ್ಬರೂ ಸಹ ಸತೋಪ್ರಧಾನ ಮನುಷ್ಯರಿಲ್ಲ. ಇದು ತಮೋಪ್ರಧಾನ ಪ್ರಪಂಚವಾಗಿದೆ. ಇದು ಮನುಷ್ಯರದೇ ಮಾತಾಗಿದೆ. ಮನುಷ್ಯರಿಗೇ ಸತೋಪ್ರಧಾನ, ಸತೋ, ರಜೋ, ತಮೋದ ರಹಸ್ಯವನ್ನು ತಿಳಿಸಲಾಗುತ್ತದೆ. ತಂದೆಯು ಮಕ್ಕಳಿಗೇ ತಿಳಿಸುತ್ತಾರೆ. ಇದು ಬಹಳ ಸಹಜವಾಗಿದೆ, ನೀವಾತ್ಮಗಳು ತಮ್ಮ ಮನೆಯಲ್ಲಿದ್ದಿರಿ, ಅಲ್ಲಿ ಎಲ್ಲಾ ಆತ್ಮಗಳು ಪಾವನರಾಗಿರುತ್ತಾರೆ. ಅಪವಿತ್ರರಂತೂ ಇರಲು ಸಾಧ್ಯವಿಲ್ಲ. ಅದರ ಹೆಸರೇ ಆಗಿದೆ - ಮುಕ್ತಿಧಾಮ, ತಂದೆಯು ನಿಮ್ಮನ್ನು ಪಾವನರನ್ನಾಗಿ ಮಾಡಿ ಕಳುಹಿಸುತ್ತಾರೆ ನಂತರ ನೀವು ಪಾತ್ರವನ್ನಭಿನಯಿಸಲು ಸುಖಧಾಮದಲ್ಲಿ ಬರುತ್ತೀರಿ. ಸತೋ, ರಜೋ, ತಮೋದಲ್ಲಿ ಬರುತ್ತೀರಿ.

ಬಾಬಾ ನಮ್ಮನ್ನು ಶಾಂತಿ,ನೆಮ್ಮದಿಯಿರುವಲ್ಲಿಗೆ ಕರೆದುಕೊಂಡು ಹೋಗಿ ಎಂದು ಕೂಗುತ್ತಾರೆ. ಸಾಧು-ಸಂತ ಮೊದಲಾದ ಯಾರಿಗೂ ಸಹ ಶಾಂತಿ ನೆಮ್ಮದಿಯು ಎಲ್ಲಿ ಸಿಗುತ್ತದೆ ಎಂದು ತಿಳಿದಿಲ್ಲ. ಈಗ ಸುಖ-ಶಾಂತಿ, ನೆಮ್ಮದಿಯು ನಮಗೆ ಎಲ್ಲಿ ಸಿಗುತ್ತದೆ ಎಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ತಂದೆಯು ಈಗ ನಮಗೆ 21 ಜನ್ಮಗಳಿಗಾಗಿ ಸುಖವನ್ನು ಕೊಡಲು ಬಂದಿದ್ದಾರೆ ಮತ್ತು ಯಾರು ಕೊನೆಯಲ್ಲಿ ಬರುತ್ತಾರೆ ಅವರೆಲ್ಲರಿಗೆ ಮುಕ್ತಿಯನ್ನು ಕೊಡಲು ಬಂದಿದ್ದಾರೆ. ಯಾರು ತಡವಾಗಿ ಬರುವರೋ ಇವರ ಪಾತ್ರವೇ ಕಡಿಮೆಯಿದೆ, ನಿಮ್ಮದು ಎಲ್ಲರಿಗಿಂತ ದೊಡ್ಡ ಪಾತ್ರವಿದೆ. ನಿಮಗೆ ತಿಳಿದಿದೆ - ನಾವು 84 ಜನ್ಮಗಳ ಪಾತ್ರವನ್ನಭಿನಯಿಸಿ ಈಗ ಪೂರ್ಣ ಮಾಡಿದ್ದೇವೆ, ಚಕ್ರವು ಪೂರ್ಣವಾಗುತ್ತದೆ. ಇಡೀ ಹಳೆಯ ವೃಕ್ಷವು ಪೂರ್ಣವಾಗುತ್ತದೆ. ಈಗ ಈ ನಿಮ್ಮ ಗುಪ್ತ ಸರ್ಕಾರ ದೈವೀ ವೃಕ್ಷದ ಸಸಿಯು ನಾಟಿಮಾಡುತ್ತಿದೆ, ಅವರಂತೂ ಕಾಡಿನ ಸಸ್ಯಗಳನ್ನು ನಾಟಿ ಮಾಡುತ್ತಿರುತ್ತಾರೆ. ಇಲ್ಲಿ ತಂದೆಯು ಮುಳ್ಳುಗಳನ್ನು ತೆಗೆದು ದೈವೀ ಹೂಗಳ ಗಿಡಗಳನ್ನು ಮಾಡುತ್ತಿದ್ದಾರೆ. ಅದೂ ಸರ್ಕಾರವಾಗಿದೆ, ನಿಮ್ಮದೂ ಸಹ ಇದು ಗುಪ್ತಸರ್ಕಾರವಾಗಿದೆ. ಅವರೇನು ಮಾಡುತ್ತಾರೆ ಮತ್ತು ನೀವೇನನ್ನು ಮಾಡುತ್ತೀರಿ! ಅಂತರವು ನೋಡಿ ಎಷ್ಟೊಂದಿದೆ. ಅವರು ಏನನ್ನೂ ತಿಳಿದುಕೊಂಡಿಲ್ಲ. ಸಸಿಗಳ ನಾಟಿ ಮಾಡುತ್ತಿರುತ್ತಾರೆ. ಆ ಕಾಡು-ಮರಗಳಂತೂ ಅನೇಕ ಪ್ರಕಾರದ್ದಾಗಿರುತ್ತದೆ. ಕೆಲವರು ಕೆಲಕೆಲವು ಸಸ್ಯಗಳ ನಾಟಿ ಮಾಡುತ್ತಾರೆ. ಈಗ ನೀವು ಮಕ್ಕಳನ್ನು ತಂದೆಯು ಪುನಃ ದೇವತೆಯನ್ನಾಗಿ ಮಾಡುತ್ತಿದ್ದಾರೆ. ನೀವೇ ಸತ್ಯಯುಗದ ದೇವಿ-ದೇವತೆಗಳಾಗಿದ್ದೀರಿ ನಂತರ 84 ಜನ್ಮಗಳ ಚಕ್ರವನ್ನು ಸುತ್ತಿ ತಮೋಪ್ರಧಾನರಾದಿರಿ. ಯಾರೂ ಸಹ ಸದಾ ಸತೋಪ್ರಧಾನರಾಗಿರಲು ಸಾಧ್ಯವಿಲ್ಲ, ಪ್ರತಿಯೊಂದು ವಸ್ತು ಹೊಸದರಿಂದ ಹಳೆಯದಾಗುತ್ತದೆ. ನೀವು 24 ಕ್ಯಾರೇಟ್ ಸತ್ಯಚಿನ್ನವಾಗಿದ್ದಿರಿ ಈಗ 9 ಕ್ಯಾರೇಟ್ ಚಿನ್ನದ ಆಭರಣವಾಗಿಬಿಟ್ಟಿದ್ದೀರಿ ಪುನಃ 24 ಕ್ಯಾರೇಟ್ನ ಸಮಾನ ಆಗಬೇಕು. ಆತ್ಮಗಳೇ ಈ ರೀತಿ ಆಗಬೇಕಲ್ಲವೆ. ಚಿನ್ನವು ಹೇಗೋ ಹಾಗೆಯೇ ಒಡವೆಗಳಿರುತ್ತವೆ. ಈಗ ಎಲ್ಲರೂ ಕಪ್ಪು ಶ್ಯಾಮನಾಗಿಬಿಟ್ಟಿದ್ದಾರೆ. ಮರ್ಯಾದೆಗಾಗಿ ಕಪ್ಪು ಎನ್ನುವ ಅಕ್ಷರವನ್ನು ತೆಗೆದು ಶ್ಯಾಮ ಎಂದು ಹೇಳಿಬಿಡುತ್ತಾರೆ. ಆತ್ಮವು ಸತೋಪ್ರಧಾನ, ಪವಿತ್ರವಾಗಿತ್ತು. ಈಗ ನೋಡಿ, ಎಷ್ಟೊಂದು ತುಕ್ಕುಹಿಡಿದಿದೆ, ಅದನ್ನು ಪುನಃ ಪವಿತ್ರವನ್ನಾಗಿ ಮಾಡಲು ತಂದೆಯು ಯುಕ್ತಿಯನ್ನು ತಿಳಿಸುತ್ತಾರೆ. ಈ ಯೋಗಾಗ್ನಿಯಿಂದಲೇ ನಿಮ್ಮಲ್ಲಿ ಹಿಡಿದಿರುವ ತುಕ್ಕು ಬಿಟ್ಟುಹೋಗುವುದು ಆದ್ದರಿಂದ ತಂದೆಯನ್ನು ನೆನಪು ಮಾಡಬೇಕಾಗಿದೆ. ಸ್ವಯಂ ತಂದೆಯೇ ತಿಳಿಸುತ್ತರೆ - ಮಕ್ಕಳೇ, ನನ್ನನ್ನು ಈ ಪ್ರಕಾರವಾಗಿ ನೆನಪು ಮಾಡಿ, ನಾನು ಪತಿತ-ಪಾವನನಾಗಿದ್ದೇನೆ, ನಾನು ಅನೇಕಬಾರಿ ಪತಿತರಿಂದ ಪಾವನ ಮಾಡಿದ್ದೇನೆ, ಇದನ್ನೂ ಸಹ ನೀವು ಮೊದಲು ತಿಳಿದುಕೊಂಡಿರಲಿಲ್ಲ, ಈಗ ನೀವು ತಿಳಿಯುತ್ತೀರಿ - ಇಂದು ನಾವು ಪತಿತರಾಗಿದ್ದೇವೆ ನಾಳೆ ಮತ್ತೆ ಪಾವನರಾಗುತ್ತೇವೆ. ಅವರಂತೂ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಹೇಳಿ ಮನುಷ್ಯರು ಘೋರ ಅಂಧಕಾರದಲ್ಲಿ ಹಾಕಿಬಿಟ್ಟಿದ್ದಾರೆ. ತಂದೆಯು ಬಂದು ಎಲ್ಲಾ ಮಾತುಗಳನ್ನು ಬಹಳ ಚೆನ್ನಾಗಿ ತಿಳಿಸುತ್ತಾರೆ. ನಮಗೆ ಯಾರು ಓದಿಸುತ್ತಾರೆ, ಜ್ಞಾನಸಾಗರ, ಪತಿತ-ಪಾವನ, ಎಲ್ಲರ ಸದ್ಗತಿದಾತ ತಂದೆಯಾಗಿದ್ದಾರೆ ಎಂಬುದನ್ನು ಮಕ್ಕಳು ತಿಳಿದುಕೊಂಡಿದ್ದೀರಿ. ಮನುಷ್ಯರು ಭಕ್ತಿಮಾರ್ಗದಲ್ಲಿ ಎಷ್ಟೊಂದು ಮಹಿಮೆ ಮಾಡುತ್ತಾರೆ ಆದರೆ ಅರ್ಥವನ್ನು ಸ್ವಲ್ಪವೂ ತಿಳಿದುಕೊಂಡಿಲ್ಲ. ಮಹಿಮೆ ಮಾಡಿದಾಗ ಎಲ್ಲರನ್ನು ಸೇರಿಸಿ ಮಹಿಮೆ ಮಾಡುತ್ತಾರೆ. ಎಲ್ಲವನ್ನೂ ಬೆರಕೆ ಮಾಡಿಬಿಡುತ್ತಾರೆ. ಯಾರೇನನ್ನು ಕಲಿಸಿದರೋ ಅದನ್ನು ಕಂಠಪಾಠ ಮಾಡಿಬಿಡುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ನೀವು ಏನೆಲ್ಲವನ್ನೂ ಕಲಿತಿದ್ದೀರಿ, ಅದೆಲ್ಲಾ ಮಾತುಗಳನ್ನು ಮರೆತುಹೋಗಿ, ಜೀವಿಸಿದ್ದಂತೆಯೇ ನನ್ನವರಾಗಿ. ಗೃಹಸ್ಥ ವ್ಯವಹಾರದಲ್ಲಿ ಇರುತ್ತಲೂ ಯುಕ್ತಿಯಿಂದಿರಬೇಕಾಗಿದೆ, ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಅವರದು ಹಠಯೋಗವಾಗಿದೆ, ನೀವು ರಾಜಯೋಗಿಗಳಾಗಿದ್ದೀರಿ. ಪರಿವಾರದವರಿಗೂ ಸಹ ಈ ಶಿಕ್ಷಣವನ್ನು ಕೊಡಬೇಕಾಗಿದೆ - ನಿಮ್ಮ ಚಲನೆಯನ್ನು ನೋಡಿ ಅವರೂ ಸಹ ನಿಮ್ಮನ್ನು ಅನುಸರಿಸುವಂತಿರಬೇಕು, ಎಂದೂ ಸಹ ಪರಸ್ಪರ ಜಗಳವಾಡಬಾರದು. ಒಂದುವೇಳೆ ನೀವು ಜಗಳವಾಡುತ್ತೀರೆಂದರೆ ಇವರಲ್ಲಿ ಬಹಳ ಕ್ರೋಧವಿದೆ ಎಂದು ಎಲ್ಲರೂ ಏನು ತಿಳಿಯಬಹುದು! ನಿಮ್ಮಲ್ಲಿ ಯಾವುದೇ ವಿಕಾರವಿರಬಾರದು. ಮನುಷ್ಯರ ಬುದ್ಧಿಯನ್ನು ಭ್ರಷ್ಟ ಮಾಡುವಂತಹದ್ದು ಸಿನೆಮಾ ಆಗಿಮಿದು ಒಂದು ನರಕವಿದ್ದಹಾಗೆ, ಅಲ್ಲಿಗೆ ಹೋಗುವುದರಿಂದ ಬುದ್ಧಿ ಭ್ರಷ್ಠವಾಗಿ ಬಿಡುತ್ತದೆ ಪ್ರಪಂಚದಲ್ಲಿ ಎಷ್ಟೊಂದು ಕೊಳಕಿದೆ, ಒಂದುಕಡೆ ಸರ್ಕಾರವು 18 ವರ್ಷದೊಳಗಿರುವವರು ವಿವಾಹ ಮಾಡಿಕೊಳ್ಳುವಂತಿಲ್ಲ ಎಂದು ನಿಯಮ ಮಾಡುತ್ತದೆ ಆದರೂ ಸಹ ಅನೇಕಾನೇಕ ವಿವಾಹಗಳು ಆಗುತ್ತಿರುತ್ತವೆ. ಮಕ್ಕಳನ್ನು ಬಗಲಿನಲ್ಲಿ ಕುಳ್ಳರಿಸಿಕೊಂಡು ವಿವಾಹ (ಬಾಲ್ಯವಿವಾಹ) ಮಾಡಿಸುತ್ತಾರೆ. ಈಗ ನಿಮಗೆ ಅರ್ಥವಾಗಿದೆ - ತಂದೆಯು ನಮ್ಮನ್ನು ಈ ಛೀ ಛೀ ಪ್ರಪಂಚದಿಂದ ಕರೆದುಕೊಂಡು ಹೋಗುತ್ತಾರೆ. ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಷ್ಟಮೋಹಿಯಾಗಿ ಕೇವಲ ನನ್ನನ್ನು ನೆನಪು ಮಾಡಿ. ಕುಟುಂಬ ಪರಿವಾರದಲ್ಲಿ ಇರುತ್ತಾ ನನ್ನೊಬ್ಬನನ್ನು ನೆನಪು ಮಾಡಿ. ಸ್ವಲ್ಪ ಪರಿಶ್ರಮಪಟ್ಟಾಗಲೇ ವಿಶ್ವದ ಮಾಲೀಕರಾಗುತ್ತೀರಿ ಆದ್ದರಿಂದ ನನ್ನೊಬ್ಬನನ್ನೇ ನೆನಪು ಮಾಡಿ ಹಾಗೂ ಆಸುರೀಗುಣಗಳನ್ನು ಬಿಡಿ. ಪ್ರತಿನಿತ್ಯ ರಾತ್ರಿಯಲ್ಲಿ ನಿಮ್ಮ ಲೆಕ್ಕಾಚಾರವನ್ನು ನೋಡಿಕೊಳ್ಳಿ. ನಿಮ್ಮದು ಇದು ವ್ಯಾಪಾರವಾಗಿದೆ, ಕೆಲವರೇ ವಿರಳ ಈ ವ್ಯಾಪಾರ ಮಾಡುತ್ತಾರೆ. ಒಂದು ಸೆಕೆಂಡಿನಲ್ಲಿ ತಂದೆಯು ಕಂಗಾಲರನ್ನು ಕಿರೀಟಧಾರಿಗಳನ್ನಾಗಿ ಮಾಡಿಬಿಡುತ್ತಾರೆ ಅಂದಮೇಲೆ ಇದು ಜಾದುವಾಯಿತಲ್ಲವೆ. ಇಂತಹ ಜಾದೂಗರನ ಕೈಯನ್ನು ಹಿಡಿದುಕೊಂಡುಬಿಡಬೇಕು, ಯಾರು ನಮ್ಮನ್ನು ಯೋಗಬಲದಿಂದ, ಪತಿತರಿಂದ ಪಾವನ ಮಾಡುತ್ತಾರೆ, ಅನ್ಯ ಯಾರೂ ಮಾಡಲು ಸಾಧ್ಯವಿಲ್ಲ. ಸ್ಥೂಲ ನೀರಿನಿಂದ ಯಾರೂ ಪಾವನರಾಗಲು ಸಾಧ್ಯವಿಲ್ಲ. ನೀವು ಮಕ್ಕಳಲ್ಲಿ ಎಷ್ಟೊಂದು ಜ್ಞಾನವಿದೆ! ತಂದೆಯು ಪುನಃ ಬಂದಿದ್ದಾರೆಂದು ನಿಮಗೆ ಆಂತರಿಕ ಖುಷಿಯಿರಬೇಕು. ದೇವಿಯರ ಎಷ್ಟೊಂದು ಚಿತ್ರಗಳನ್ನು ಮಾಡಿಸುತ್ತಾರೆ, ಅವರಿಗೆ ಆಯುಧಗಳನ್ನು ತೋರಿಸಿ ಭಯಂಕರವಾಗಿ ಮಾಡಿಬಿಡುತ್ತಾರೆ. ಬ್ರಹ್ಮನಿಗೆ ಎಷ್ಟೊಂದು ಭುಜಗಳನ್ನು ತೋರಿಸುತ್ತಾರೆ, ಈಗ ನೀವು ಅದನ್ನು ಯಥಾರ್ಥವಾಗಿ ತಿಳಿದುಕೊಂಡಿದ್ದೀರಿ - ಬ್ರಹ್ಮನಿಗೆ ಲಕ್ಷಾಂತರ ಭುಜಗಳು ಅಂದರೆ ಇಷ್ಟೊಂದು ಮಂದಿ ಬ್ರಹ್ಮಾಕುಮಾರ-ಕುಮಾರಿಯರು ಈ ಬ್ರಹ್ಮಾರವರ ಉತ್ಪತ್ತಿಯಲ್ಲವೆ ಆದ್ದರಿಂದ ಪ್ರಜಾಪಿತ ಬ್ರಹ್ಮನಿಗೆ ಇಷ್ಟೊಂದು ಭುಜಗಳಿವೆ.

ಈಗ ನೀವು ರೂಪಭಸಂತರಾಗಿದ್ದೀರಿ, ಈಗ ನಿಮ್ಮ ಮುಖದಿಂದ ರತ್ನಗಳೇ ಹೊರಬರಬೇಕು, ಜ್ಞಾನರತ್ನಗಳ ವಿನಃ ಮತ್ತ್ಯಾವುದೇ ಮಾತಿಲ್ಲ. ಈ ರತ್ನಗಳಿಗೆ ಯಾರೂ ಬೆಲೆಕಟ್ಟಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ಮನ್ಮನಾಭವ. ತಂದೆಯನ್ನು ನೆನಪು ಮಾಡಿ ಆಗ ದೇವತೆಗಳಾಗುವಿರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ರಾತ್ರಿಯ ಕ್ಲಾಸ್ 11-03-1968

ನಿಮ್ಮ ಬಳಿ ಪ್ರದರ್ಶನಿಯ ಉದ್ಧಾಟನೆ ಮಾಡಲು ದೊಡ್ಡ-ದೊಡ್ಡ ವ್ಯಕ್ತಿಗಳು ಬರುತ್ತಾರೆ, ಅವರು ಕೇವಲ ಇಷ್ಟನ್ನೇ ತಿಳಿದುಕೊಳ್ಳುತ್ತಾರೆ ಇವರು ಭಗವಂತನನ್ನು ಪಡೆಯಲು ಒಂದು ಒಳ್ಳೆಯ ಮಾರ್ಗವನ್ನು ಕಂಡುಕೊಂಡಿದ್ದಾರೆ. ಹೇಗೆ ಭಗವಂತನ ಪ್ರಾಪ್ತಿಗಾಗಿ ಸತ್ಸಂಗ ಇತ್ಯಾದಿ ಮಾಡುತ್ತಾರೆ, ವೇಧ ಪಠನ ಮಾಡುತ್ತಾರೆ ಅದೇರೀತಿ ಇಲ್ಲಿಯೂ ಸಹಾ ಇವರು ಈ ಮಾರ್ಗವನ್ನು ತೆಗೆದುಕೊಂಡಿದ್ದಾರೆ. ಬಾಕಿ ಇವರಿಗೆ ಭಗವಂತನೇ ಓದಿಸುತ್ತಿದ್ದಾರೆ ಇದನ್ನು ತಿಳಿದುಕೊಳ್ಳುವುದಿಲ್ಲ. ಕೇವಲ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ, ಪವಿತ್ರತೆಯಿದೆ ಮತ್ತು ಭಗವಂತನ ಜೊತೆ ಮಿಲನಮಾಡಿಸುತ್ತಾರೆ. ಈ ದೇವಿಯರು ಒಳ್ಳೆಯ ಮಾರ್ಗವನ್ನು ಆರಿಸಿಕೊಂಡಿದ್ದಾರೆ, ಅಷ್ಟೆ. ಯಾರಿಂದ ಉದ್ಘಾಟನೆ ಮಾಡಿಸಲಾಗುತ್ತೆ ಅವರು ತಮ್ಮನ್ನು ಬಹಳ ಶ್ರೇಷ್ಠರು ಎಂದು ತಿಳಿಯುತ್ತಾರೆ. ಕೆಲವು ದೊಡ್ಡ-ದೊಡ್ಡ ವ್ಯಕ್ತಿಗಳು ಬಾಬಾನ ಬಗ್ಗೆ ತಿಳಿಯುತ್ತಾರೆ ಇವರು ಒಬ್ಬ ಮಹಾನ್ ಪುರುಷರಾಗಿದ್ದಾರೆ, ಅವರನ್ನು ಹೋಗಿ ಬೇಟಿಯಾಗ ಬೇಕು ಎಂದು. ಬಾಬಾ ಹೇಳುತ್ತಾರೆ ಮೊದಲು ಅವರ ಬಗ್ಗೆ ಫಾರ್ಮ ತುಂಬಿಸಿ ಕಳುಹಿಸಿಕೊಡಿ. ಮೊದಲು ನೀವು ಮಕ್ಕಳು ಅವರಿಗೆ ತಂದೆಯ ಪೂರ್ಣ ಪರಿಚಯವನ್ನು ಕೊಡಿ. ಪರಿಚಯವಿಲ್ಲದೆ ಬಂದು ಏನು ಮಾಡುತ್ತಾರೆ! ಶಿವಬಾಬಾರನ್ನಂತೂ ಪೂರ್ತಿ ನಿಶ್ಚಯವಾದ ನಂತರವೇ ಮಿಲನ ಮಾಡಲು ಸಾಧ್ಯ.. ಪರಿಚಯವಿಲ್ಲದೆ ಬೇಟಿಮಾಡಿ ಏನು ಮಾಡುತ್ತಾರೆ! ಯಾರಾದರೂ ಸಹುಕಾರರು ಬಂದರೆ, ತಿಳಿಯುತ್ತಾರೆ ನಾವು ಇವರಿಗೆ ಏನನ್ನಾದರೂ ಕೊಡೋಣ ಎಂದು. ಕೆಲವು ಬಡವರು ಒಂದು ರುಪಾಯಿ ಕೊಡುತ್ತಾರೆ, ಸಾಹುಕಾರರು 100 ರುಪಾಯಿ ಕೊಡುತ್ತಾರೆ, ಬಡವರ ಒಂದು ರುಪಾಯಿ ಬಹಳ ಬೆಲೆ ಉಳ್ಳದ್ದಾಗಿಬಿಡುತ್ತದೆ. ಆ ಸಾಹುಕಾರ ಜನರಂತೂ ಎಂದೂ ನೆನಪಿನ ಯಾತ್ರೆಯಲ್ಲಿ ಯರ್ಥಾಥ ರೀತಿಯಲ್ಲಿ ಇರುವುದಿಲ್ಲ, ಅವರು ಆತ್ಮಾಭಿಮಾನಿಗಳಾಗಿರುವುದಿಲ್ಲ.ಮೊದಲು ಪತಿತರಿಂದ ಪಾವನರು ಹೇಗೆ ಆಗುವುದು, ಇದನ್ನು ಬರೆದು ಕೊಡಬೇಕು. ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕು. ಇದರಲ್ಲಿ ಪ್ರೇರಣೆ ಇತ್ಯಾದಿಯ ಯಾವುದೇ ಮಾತಿಲ್ಲ. ತಂದೆ ತಿಳಿಸುತ್ತಾರೆ ನನ್ನೊಬ್ಬನನ್ನೇ ನೆನಪು ಮಾಡಿದರೆ ತುಕ್ಕು ಬಿಟ್ಟು ಹೋಗುವುದು, ಪ್ರದರ್ಶನಿ ಇತ್ಯಾದಿ ನೋಡಲು ಬರುತ್ತಾರೆ ಆದರೆ ನಂತರ ಎರಡು-ಮೂರುಬಾರಿ ಬಂದು ತಿಳಿಯಲಿ ಆಗ ತಿಳಿಯಿರಿ ಇವರಿಗೆ ಏನೋ ಸ್ವಲ್ಪ ಬಾಣ ನಾಟಿದೆ. ದೇವತಾ ಧರ್ಮದವರಾಗಿದ್ದಾರೆ, ಇವರು ಭಕ್ತಿಯನ್ನು ಚೆನ್ನಾಗಿ ಮಾಡಿದ್ದಾರೆ. ಭಲೇ ಕೆಲವರಿಗೆ ಚೆನ್ನಾಗಿದೆ ಎನ್ನಿಸುತ್ತದೆ ಆದರೆ ಲಕ್ಷ್ಯವನ್ನು ಇಡಿದುಕೊಳ್ಳಲಿಲ್ಲ, ಅಂದಮೇಲೆ ಅವರು ಯಾವ ಕೆಲಸಕ್ಕೆ ಬರುತ್ತಾರೆ. ಇದನ್ನಂತೂ ನೀವು ಮಕ್ಕಳು ತಿಳಿದಿರುವಿರಿ ಡ್ರಾಮ ನಡೆಯುತ್ತಿರುತ್ತದೆ. ಏನೆಲ್ಲಾ ನಡೆಯುತ್ತಿದೆ ಬುದ್ಧಿಯಿಂದ ತಿಳಿಯುತ್ತಾರೆ ಏನಾಗುತ್ತಿದೆ! ನಿಮ್ಮ ಬುದ್ಧಿಯಲ್ಲಿ ಚಕ್ರ ತಿರುಗುತ್ತಿರುತ್ತದೆ, ಪುನರಾವೃತ್ತಿ ಯಾಗುತ್ತಿರುತ್ತದೆ. ಯಾರು ಏನೆಲ್ಲಾ ಮಾಡಿದ್ದರು ಅವರು ಹಾಗೇ ಮಾಡುತ್ತಿರುತ್ತಾರೆ. ತಂದೆ ಯಾರಿಂದ ತೆಗೆದುಕೊಳ್ಳುವುದು, ಇಲ್ಲಾ ತೆಗೆದುಕೊಳ್ಳದೇ ಇರುವುದು ಅದು ಅವರ ಕೈ ನಲ್ಲಿದೆ. ಭಲೆ ಈಗ ಸೇವಾಕೇಂದ್ರ ಇತ್ಯಾದಿ ತೆರೆಯುತ್ತವೆ, ಆಗ ಹಣ ಕೆಲಸಕ್ಕೆ ಬರುತ್ತದೆ. ಯಾವಾಗ ನಿಮ್ಮ ಫ್ರಭಾವ ಹೊರಬರುತ್ತೆ ನಂತರ ಹಣ ಏನುಮಾಡುವಿರಿ! ಮೂಲ ಮಾತಾಗಿದೆ ಪತಿತರಿಂದ ಪಾವನರಾಗುವುದು. ಅದಂತೂ ಬಹಳಕಷ್ಟವಾಗಿದೆ, ಇದರಲ್ಲೇ ತೊಡಗಿರಬೇಕು. ನಮಗಂತೂ ತಂದೆಯನ್ನು ನೆನಪುಮಾಡಬೇಕು. ರೋಟಿ ತಿನ್ನುತ್ತಿದ್ದರೂ ತಂದೆಯನ್ನು ನೆನಪು ಮಾಡಲಿ. ತಿಳಿಯುತ್ತಾರೆ ಮೊದಲು ತಂದೆಯಿಂದ ಆಸ್ತಿಯನ್ನು ಪಡೆಯೋಣ. ನಾನು ಆತ್ಮ ಆಗಿರುವೆ ಎನ್ನುವುದನ್ನು ಮೊದಲು ಪಕ್ಕ ಮಾಡಿಕೊಳ್ಳಬೇಕು. ಯಾವಾಗ ಈ ರೀತಿ ಯಾರಾದರೂ ಸಿಗುತ್ತಾರೆ ಆಗ ಓಟಕ್ಕೆ ತಯಾರಾಗಬೇಕು. ವಾಸ್ತವದಲ್ಲಿ ನೀವು ಮಕ್ಕಳು ಇಡೀ ವಿಶ್ವವನ್ನು ಯೋಗಬಲದಿಂದ ಪವಿತ್ರವನ್ನಾಗಿ ಮಾಡುವಿರಿ ಅಂದಮೇಲೆ ನೀವು ಮಕ್ಕಳಿಗೆ ಎಷ್ಟು ನಶೆಯಿರಬೇಕು. ಮೂಲಮಾತಾಗಿದೆ ಪವಿತ್ರತೆಯದು. ಇಲ್ಲಿ ಓದಲೂ ಬೇಕಾಗುವುದು ಹಾಗೂ ಪವಿತ್ರರೂ ಆಗಬೇಕಾಗುವುದು, ಸ್ವಚ್ಛವಾಗೂ ಇರಬೇಕಾಗುವುದು. ಒಳಗೆ ಬೇರೆ ಯಾವುದೇ ಮಾತು ನೆನಪಿನಲ್ಲಿಟ್ಟುಕೊಳ್ಳಬಾರದು. ಮಕ್ಕಳಿಗೆ ತಿಳಿಸಿಕೊಡಲಾಗುವುದು ಅಶರೀರಿ ಭವ. ಇಲ್ಲಿ ನೀವು ಪಾತ್ರ ಅಭಿನಯಿಸಲು ಬಂದಿರುವಿರಿ. ಎಲ್ಲರಿಗೂ ತಮ್ಮ-ತಮ್ಮ ಪಾತ್ರ ಅಭಿನಯಿಸಲೇ ಬೇಕಾಗುವುದು. ಈ ಜ್ಞಾನ ಬುದ್ಧಿಯಲ್ಲಿಬೇಕಾಗುವುದು. ಏಣಿಯ ಚಿತ್ರದಲ್ಲಿಯೂ ನೀವು ತಿಳಿಸಿಕೊಡಬಹುದು. ರಾವಣರಾಜ್ಯವು ಪತಿತವಾಗಿದೆ, ರಾಮರಾಜ್ಯವು ಪಾವನವಾಗಿದೆ. ಮತ್ತೆ ಪತಿತರಿಂದ ಪಾವನ ಹೇಗೆ ಆಗುವುದು, ಇಂತಹ ಇಂತಹ ಮಾತುಗಳಲ್ಲಿ ರಮಣಮಾಡಬೇಕಾಗುವುದು, ಇದಕ್ಕೇ ವಿಚಾರಸಾಗರ ಮಂಥನವೆಂದು ಹೇಳಲಾಗುವುದು. 84ರ ಚಕ್ರ ನೆನಪು ಬರಬೇಕಾಗುವುದು. ತಂದೆ ಹೇಳಿದ್ದಾರೆ ನನ್ನನ್ನು ನೆನಪುಮಾಡಿ. ಇದಾಗಿದೆ ಆತ್ಮೀಯ ಯಾತ್ರೆ. ತಂದೆಯ ನೆನಪಿನಿಂದಲೇ ವಿಕರ್ಮವಿನಾಶವಾಗುವುದು. ಆ ಶಾರೀರಿಕ ಯಾತ್ರೆಯಿಂದ ಇನ್ನೂ ವಿಕರ್ಮವಾಗುವುದು. ಹೇಳಿ ಇದು ತಾಯಿತಾಗಿದೆ. ಇದನ್ನು ತಿಳಿದಿರೆಂದರೆ ಎಲ್ಲಾ ದುಃಖವು ದೂರವಾಗಿಬಿಡುವುದು ತಾಯಿತವನ್ನು ಧರಿಸುವುದೇ ದುಃಖ ದೂರಾಗಲು. ಒಳ್ಳೆಯದು!

ಮಧುರ-ಮಧುರ ಅಗಲಿ ಹೋಗಿ ಸಿಕ್ಕಿರುವಂತಹ ಮಕ್ಕಳಿಗೆ ಮಾತ್ಪಿತ ಬಾಪ್ದಾದಾರವರ ನೆನಪು ಪ್ರೀತಿ ಮತ್ತು ಗುಡ್ ನೈಟ್.

ಧಾರಣೆಗಾಗಿ ಮುಖ್ಯಸಾರ-
1. ನಷ್ಟಮೋಹಿಯಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಪರಿವಾರದಲ್ಲಿರುತ್ತಾ ವಿಶ್ವದ ಮಾಲೀಕರಾಗುವ ಪರಿಶ್ರಮಪಡಬೇಕಾಗಿದೆ. ಅವಗುಣಗಳನ್ನು ಬಿಡುತ್ತಾ ಹೋಗಬೇಕಾಗಿದೆ.

2. ತಮ್ಮ ಚಲನೆಯು ಈ ರೀತಿಯಿರಬೇಕು ಎಲ್ಲರೂ ನೋಡಿ ಅನುಸರಿಸುವಂತಿರಬೇಕು. ಒಳಗೆ ಯಾವುದೇ ವಿಕಾರವಿರಬಾರದು, ಇದರ ಪರಿಶೀಲನೆ ಮಾಡಿಕೊಳ್ಳಬೇಕು.

ವರದಾನ:
ಡಬಲ್ ಸೇವೆಯ ಮುಖಾಂತರ ಅಲೌಕಿಕ ಶಕ್ತಿಯ ಸಾಕ್ಷಾತ್ಕಾರ ಮಾಡಿಸುವಂತಹ ವಿಶ್ವ ಸೇವಾಧಾರಿ ಭವ.

ಹೇಗೆ ತಂದೆಯ ಸ್ವರೂಪವೇ ಆಗಿದೆ ವಿಶ್ವ ಸೇವಕ, ಅದೇ ರೀತಿ ನೀವೂ ಸಹ ತಂದೆಯ ಸಮಾನ ವಿಶ್ವಸೇವಾಧಾರಿಯಾಗಿರುವಿರಿ. ಶರೀರದ ಮೂಲಕ ಸ್ಥೂಲ ಸೇವೆ ಮಾಡುತ್ತಾ ಮನಸ್ಸಿನಿಂದ ವಿಶ್ವಪರಿವರ್ತನೆಯ ಸೇವೆಯಲ್ಲಿ ತತ್ಪರರಾಗಿರಿ. ಒಂದೇ ಸಮಯದಲ್ಲಿ ಶರೀರ ಮತ್ತು ಮನಸ್ಸಿನಿಂದ ಒಟ್ಟಿಗೆ ಸೇವೆಯಾಗಲಿ. ಯಾರ ಮನಸ್ಸು ಹಾಗೂ ಕರ್ಮಣ ಎರಡೂ ಜೊತೆ-ಜೊತೆ ಸೇವೆ ಮಾಡುತ್ತಾರೆ, ಅವರಿಂದ ನೋಡುವಂತಹವರಿಗೆ ಅನುಭವ ಹಾಗೂ ಸಾಕ್ಷಾತ್ಕಾರವಾಗಿಬಿಡುತ್ತದೆ ಇದು ಯಾವುದೋ ಅಲೌಕಿಕ ಶಕ್ತಿಯಾಗಿದೆ ಇದರಿಂದ ಈ ಅಭ್ಯಾಸವನ್ನು ನಿರಂತರ ಮತ್ತು ಸ್ವಾಭಾವಿಕ ಮಾಡಿಕೊಳ್ಳಿ. ಮನಸಾ ಸೇವೆಗಾಗಿ ವಿಶೇಷ ಏಕಾಗ್ರತೆಯ ಅಭ್ಯಾಸವನ್ನು ಹೆಚ್ಚಿಸಿಕೊಳ್ಳಿ.

ಸ್ಲೋಗನ್:
ಸರ್ವರ ಪ್ರತಿ ಗುಣಗ್ರಾಹಕರಾಗಿ ಆದರೆ ಬ್ರಹ್ಮಾತಂದೆಯನ್ನು ಫಾಲೋ ಮಾಡಿ.

ಅವ್ಯಕ್ತ ಸೂಚನೆ - ಸತ್ಯ ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ

ಈಗ ಸ್ವಚ್ಛತೆ ಹಾಗೂ ನಿರ್ಭಯತೆಯ ಆಧಾರದಿಂದ ಸತ್ಯಯ ಪ್ರತ್ಯಕ್ಷತೆಯನ್ನು ಮಾಡಿ. ಮುಖದಿಂದ ಸತ್ಯತೆಯ ಅಥಾರಿಟಿ ಸ್ವತಹವಾಗಿ ತಂದೆಯ ಪ್ರತ್ಯಕ್ಷತೆಯನ್ನು ಮಾಡಿಸುತ್ತದೆ. ಈಗ ಪರಮಾತ್ಮ ಬಾಂಬ್ನ ಮುಖಾಂತರ (ಸತ್ಯ ಜ್ಞಾನದಿಂದ) ಧರಣಿಯನ್ನು ಪರಿವರ್ತನೆ ಮಾಡಿ. ಇದರ ಸಹಜ ಸಾಧನವಾಗಿದೆ- ಸದಾ ಮುಖದಿಂದ ಹಾಗೂ ಸಂಕಲ್ಪದಲ್ಲಿ ನಿರಂತರ ಮಾಲೆಯಂತೆ ಪರಮಾತ್ಮನ ಸ್ಮೃತಿ ಇರಲಿ. ಎಲ್ಲರಲ್ಲಿ ಒಂದೇ ದೃಢ ಸಂಕಲ್ಪ ಇರಲಿ “ನನ್ನ ಬಾಬಾ”. ಸಂಕಲ್ಪ ಕರ್ಮ ಹಾಗೂ ಆಣೆಯಲ್ಲಿ ಇದೆ ಅಖಂಡ ಧೃಡತೆ ಇರಲಿ, ಇದೆ ಅಜಪ್ಪ ಜಾಪ ಇರಲಿ. ಯಾವಾಗ ಇಂತಹ ಅಜಪಜಾಪ ಇರುವುದು ಆಗ ಬೇರೆ ಎಲ್ಲಾ ಮಾತುಗಳು ಸ್ವತಹವಾಗಿಯೇ ಸಮಾಪ್ತಿಯಾಗುವುದು.