11.04.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈಗ ಈ ನಾಟಕವು ಮುಕ್ತಾಯವಾಗುತ್ತದೆ, ನೀವು ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಆದ್ದರಿಂದ ಈ ಹಳೆಯ ಪ್ರಪಂಚದೊಂದಿಗಿನ ಮಮತ್ವವನ್ನು ತೆಗೆಯಿರಿ, ಮನೆಯನ್ನು ಮತ್ತು ಹೊಸ ರಾಜ್ಯವನ್ನು ನೆನಪು ಮಾಡಿ”

ಪ್ರಶ್ನೆ:
ದಾನಕ್ಕೆ ಯಾವಾಗ ಮಹತ್ವಿಕೆಯಿರುತ್ತದೆ? ಅದರ ಪ್ರತಿಫಲವು ಯಾವ ಮಕ್ಕಳಿಗೆ ಪ್ರಾಪ್ತಿಯಾಗುತ್ತದೆ?

ಉತ್ತರ:
ಯಾವಾಗ ದಾನವಾಗಿ ಕೊಟ್ಟಿರುವ ವಸ್ತುವಿನಲ್ಲಿ ಮಮತ್ವವಿರುವುದಿಲ್ಲವೋ ಆಗಲೇ ಆ ದಾನಕ್ಕೆ ಮಹತ್ವಿಕೆಯಿರುತ್ತದೆ. ಒಂದುವೇಳೆ ದಾನ ಮಾಡಿದ ನಂತರ ಅದು ನೆನಪಿಗೆ ಬಂದಿತೆಂದರೆ ಅದಕ್ಕೆ ಪ್ರತಿಫಲವು ಪ್ರಾಪ್ತವಾಗುವುದಿಲ್ಲ. ದಾನವನ್ನು ನೀಡುವುದೇ ಇನ್ನೊಂದು ಜನ್ಮಕ್ಕಾಗಿ, ಆದ್ದರಿಂದ ಈ ಜನ್ಮದಲ್ಲಿ ನಿಮ್ಮ ಬಳಿ ಏನೆಲ್ಲವೂ ಇದೆಯೋ ಅದರಿಂದ ಮಮತ್ವವನ್ನು ಕಳೆಯಿರಿ. ಟ್ರಸ್ಟಿಯಾಗಿ ಸಂಭಾಲನೆ ಮಾಡಿ. ಇಲ್ಲಿ ನೀವು ಯಾವುದನ್ನು ಈಶ್ವರೀಯ ಸೇವೆಯಲ್ಲಿ ತೊಡಗಿಸುತ್ತೀರೋ, ಆಸ್ಪತ್ರೆ ಅಥವಾ ಕಾಲೇಜನ್ನು ತೆರೆಯುತ್ತೀರೋ ಅದರಿಂದ ಅನೇಕರ ಕಲ್ಯಾಣವಾಗುತ್ತದೆ. 21 ಜನ್ಮಗಳಿಗಾಗಿ ಅದಕ್ಕೆ ಪ್ರತಿಫಲವು ಸಿಗುತ್ತದೆ.

ಓಂ ಶಾಂತಿ.
ಮಕ್ಕಳಿಗೆ ತಮ್ಮ ಮನೆ ಮತ್ತು ರಾಜಧಾನಿಯ ನೆನಪಿದೆಯೇ? ಇಲ್ಲಿ ಕುಳಿತುಕೊಂಡಾಗ ಗೃಹಸ್ಥ ವ್ಯವಹಾರ, ಉದ್ಯೋಗ-ವ್ಯಾಪಾರ ಮೊದಲಾದುವುಗಳ ವಿಚಾರಗಳು ಬರಬಾರದು. ಕೇವಲ ತಮ್ಮ ಮನೆಯ(ಶಾಂತಿಧಾಮ) ನೆನಪೇ ಬರಬೇಕಾಗಿದೆ. ಈಗ ಈ ಹಳೆಯ ಪ್ರಪಂಚದಿಂದ ಹೊಸ ಪ್ರಪಂಚಕ್ಕೆ ಹಿಂದಿರುಗಬೇಕಾಗಿದೆ. ಈ ಹಳೆಯ ಪ್ರಪಂಚವಂತೂ ಸಮಾಪ್ತಿಯಾಗಬೇಕಾಗಿದೆ. ಎಲ್ಲವೂ ಸಹ ಬೆಂಕಿಯಲ್ಲಿ ಸ್ವಾಹಾ ಆಗಿಬಿಡುವುದು. ಏನೆಲ್ಲವನ್ನು ಈ ಕಣ್ಣುಗಳಿಂದ ನೋಡುತ್ತೀರೋ, ಮಿತ್ರಸಂಬಂಧಿ ಮೊದಲಾದವರೆಲ್ಲರೂ ಸಹ ಸಮಾಪ್ತಿಯಾಗಿಬಿಡುವರು. ಈ ಜ್ಞಾನವನ್ನು ತಂದೆಯೇ ಆತ್ಮಗಳಿಗೆ ತಿಳಿಸುತ್ತಾರೆ. ಮಕ್ಕಳೇ, ಈಗ ಹಿಂದಿರುಗಿ ಮನೆಗೆ ಹೋಗಬೇಕಾಗಿದೆ. ಈಗ ನಾಟಕವು ಮುಕ್ತಾಯವಾಗುತ್ತದೆ, ಇದು 5000 ವರ್ಷಗಳ ಚಕ್ರವಾಗಿದೆ. ಪ್ರಪಂಚವಂತೂ ಇರುತ್ತದೆ ಆದರೆ ಇದು ಒಂದುಸುತ್ತು ಸುತ್ತುವುದರಲ್ಲಿ 5000 ವರ್ಷಗಳು ಹಿಡಿಸುತ್ತದೆ. ಯಾರೆಲ್ಲಾ ಆತ್ಮಗಳಿದ್ದಾರೆಯೋ ಎಲ್ಲರೂ ಈಗ ಹಿಂದಿರುಗಿ ಮನೆಗೆ ಹೋಗುವರು. ಈ ಹಳೆಯ ಪ್ರಪಂಚವೇ ಸಮಾಪ್ತಿಯಾಗುವುದು. ತಂದೆಯು ಪ್ರತಿಯೊಂದು ಮಾತನ್ನು ಬಹಳ ಚೆನ್ನಾಗಿ ತಿಳಿಸುತ್ತಾರೆ. ಕೆಲವರು ಜಿಪುಣರಾಗಿರುತ್ತಾರೆಂದರೆ ಅವರು ತಮ್ಮ ಆಸ್ತಿಯನ್ನು ಕಳೆದುಕೊಂಡು ಕುಳಿತುಕೊಳ್ಳುತ್ತಾರೆ. ಭಕ್ತಿಮಾರ್ಗದಲ್ಲಿ ದಾನ ಪುಣ್ಯ ಮಾಡುತ್ತಾರಲ್ಲವೆ. ಯಾರಾದರೂ ಧರ್ಮಶಾಲೆಯನ್ನು ಕಟ್ಟಿಸಿದರು, ಆಸ್ಪತ್ರೆಯನ್ನು ಕಟ್ಟಿಸಿದರು, ಇದರ ಫಲವಾಗಿ ಇನ್ನೊಂದು ಜನ್ಮದಲ್ಲಿ ಸಿಗುವುದೆಂದು ತಿಳಿಯುತ್ತಾರೆ. ಯಾವುದೇ ಆಸೆಯಿಲ್ಲದೆ ಅನಾಸಕ್ತಿಯಿಂದ ಯಾರೂ ಮಾಡುವುದಿಲ್ಲ. ನಾವು ಫಲಾಪೇಕ್ಷೆಯನ್ನಿಟ್ಟುಕೊಳ್ಳುವುದಿಲ್ಲವೆಂದು ಕೆಲವರು ಹೇಳುತ್ತಾರೆ ಆದರೆ ಇಲ್ಲ, ಫಲವು ಅವಶ್ಯವಾಗಿ ಸಿಗುತ್ತದೆ. ತಿಳಿದುಕೊಳ್ಳಿ, ಯಾರ ಬಳಿಯಾದರೂ ಹಣವಿದ್ದರೆ ಅದರಿಂದ ದಾನಧರ್ಮಗಳನ್ನು ಮಾಡಿದರೆ ನಮಗೆ ಇನ್ನೊಂದು ಜನ್ಮದಲ್ಲಿ ಪ್ರತಿಫಲವು ಸಿಗುವುದೆಂದು ಅವರ ಬುದ್ಧಿಯಲ್ಲಿ ಬರುವುದು. ಒಂದುವೇಳೆ ಅದರಲ್ಲಿ ಮಮತ್ವವು ಇದ್ದಿತು, ಇದು ನನ್ನ ವಸ್ತುವಾಗಿದೆ ಎಂದು ತಿಳಿದರೆ ಪ್ರತಿಫಲವು ಅಲ್ಲಿ ಸಿಗುವುದಿಲ್ಲ. ದಾನವು ಇನ್ನೊಂದು ಜನ್ಮಕ್ಕಾಗಿಯೇ ಮಾಡಲಾಗುತ್ತದೆ. ಯಾವಾಗ ಇನ್ನೊಂದು ಜನ್ಮದಲ್ಲಿ ಸಿಗುತ್ತದೆಯೆಂದಮೇಲೆ ಮತ್ತೆ ಈ ಜನ್ಮದಲ್ಲಿ ಮಮತ್ವವನ್ನೇಕೆ ಇಟ್ಟುಕೊಳ್ಳುವುದು! ಆದ್ದರಿಂದ ತಮ್ಮ ಮಮತ್ವವನ್ನು ಕಳೆಯಲೆಂದು ಟ್ರಸ್ಟಿಮಾಡಿಕೊಳ್ಳುತ್ತಾರೆ. ಯಾರಾದರೂ ಒಳ್ಳೆಯ ಸಾಹುಕಾರರ ಮನೆಯಲ್ಲಿ ಜನ್ಮಪಡೆದರು, ಅವರು ಒಳ್ಳೆಯ ಕರ್ಮ ಮಾಡಿದ್ದಾರೆಂದು ಹೇಳುತ್ತಾರೆ. ಕೆಲವರು ರಾಜ-ರಾಣಿಯ ಬಳಿ ಜನ್ಮಪಡೆಯುತ್ತಾರೆ ಏಕೆಂದರೆ ದಾನಪುಣ್ಯವನ್ನು ಮಾಡಿರುತ್ತಾರೆ. ಆದರೆ ಅದೆಲ್ಲವೂ ಅಲ್ಪಕಾಲ ಒಂದುಜನ್ಮದ ಮಾತಾಗಿದೆ. ಈಗಂತೂ ನೀವು ಈ ವಿದ್ಯೆಯನ್ನು ಓದುತ್ತೀರಿ, ಈ ವಿದ್ಯೆಯಿಂದ ನಾವು ದೇವತೆಗಳಾಗಬೇಕೆಂದು ನಿಮಗೆ ತಿಳಿದಿದೆ ಅಂದಮೇಲೆ ದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಇಲ್ಲಿ ಯಾವ ದಾನ ಮಾಡುತ್ತೀರೋ ಅದರಿಂದ ಈ ಆತ್ಮಿಕ ವಿಶ್ವವಿದ್ಯಾಲಯ, ಆಸ್ಪತ್ರೆಗಳನ್ನು ತೆರೆಯುತ್ತೇವೆ. ದಾನ ಮಾಡುತ್ತೀರೆಂದರೆ ಮತ್ತೆ ಅದರಿಂದ ಮಮತ್ವವನ್ನು ಕಳೆಯಬೇಕು ಏಕೆಂದರೆ ನಿಮಗೆ ತಿಳಿದಿದೆ - ನಾವು ಭವಿಷ್ಯ 21 ಜನ್ಮಗಳಿಗಾಗಿ ತಂದೆಯಿಂದ ಪಡೆಯುತ್ತೇವೆ. ತಂದೆಯು ಮನೆ-ಮೊದಲಾದವನ್ನು ಕಟ್ಟಿಸುತ್ತಾರೆ. ಇವಂತೂ ತಾತ್ಕಾಲಿಕ. ಇವಿಲ್ಲದಿದ್ದರೆ ಇಷ್ಟೊಂದು ಮಂದಿ ಮಕ್ಕಳು ಎಲ್ಲಿರುತ್ತಾರೆ? ಎಲ್ಲವನ್ನೂ ಶಿವತಂದೆಗೇ ನೀಡುತ್ತಾರೆ ಏಕೆಂದರೆ ಅವರೇ ಮಾಲೀಕನಾಗಿದ್ದಾರೆ. ಅವರು ಈ ಬ್ರಹ್ಮಾರವರ ಮೂಲಕ ಕಾರ್ಯವನ್ನು ಮಾಡಿಸುತ್ತಾರೆ. ಶಿವತಂದೆಯಂತೂ ರಾಜ್ಯ ಮಾಡುವುದಿಲ್ಲ, ತಾವು ಸ್ವಯಂ ದಾತನಾಗಿದ್ದಾರೆ. ಅವರಿಗೆ ಯಾವುದರಲ್ಲಿ ಮಮತ್ವವಿರುತ್ತದೆ! ಈಗ ತಂದೆಯು ಶ್ರೀಮತವನ್ನು ಕೊಡುತ್ತಾರೆ - ಮಕ್ಕಳೇ, ಮೃತ್ಯುವು ಸನ್ಮುಖದಲ್ಲಿ ನಿಂತಿದೆ, ನೀವು ಮೊದಲು ಯಾರಿಗಾದರೂ ಕೊಡುತ್ತಿದ್ದಾಗ ಮೃತ್ಯುವಿನ ಮಾತಿರಲಿಲ್ಲ. ಈಗ ತಂದೆಯು ಬಂದಿದ್ದಾರೆ ಅಂದಮೇಲೆ ಈ ಹಳೆಯಪ್ರಪಂಚವೇ ಸಮಾಪ್ತಿಯಾಗಲಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನು ಈ ಪತಿತಪ್ರಪಂಚವನ್ನು ಸಮಾಪ್ತಿ ಮಾಡುವುದಕ್ಕಾಗಿಯೇ ಬಂದಿದ್ದೇನೆ. ಈ ರುದ್ರಯಜ್ಞದಲ್ಲಿ ಇಡೀ ಪ್ರಪಂಚವೇ ಸ್ವಾಹಾ ಆಗಲಿದೆ. ಏನೆಲ್ಲವನ್ನೂ ತಮ್ಮ ಭವಿಷ್ಯಕ್ಕಾಗಿ ಮಾಡಿಕೊಳ್ಳುತ್ತೀರಿ ಅದು ಹೊಸಪ್ರಪಂಚದಲ್ಲಿ ಸಿಗುವುದು ಇಲ್ಲವೆಂದರೆ ಎಲ್ಲವೂ ಇಲ್ಲಿಯೇ ಸಮಾಪ್ತಿಯಾಗಿಬಿಡುವುದು. ಯಾರಾದರೊಬ್ಬರು ತಿಂದುಬಿಡುವರು. ಇತ್ತೀಚೆಗೆ ಮನುಷ್ಯರು ಸಾಲವಾಗಿಯೂ ಕೊಡುತ್ತಾರೆ. ವಿನಾಶವಾದರೆ ಎಲ್ಲವೂ ಸಮಾಪ್ತಿಯಾಗಿಬಿಡುತ್ತದೆ. ಯಾರು ಯಾರಿಗೂ ಏನನ್ನೂ ಕೊಡುವುದಿಲ್ಲ. ಎಲ್ಲವೂ ಉಳಿದುಬಿಡುತ್ತದೆ. ಇಂದು ಚೆನ್ನಾಗಿರುತ್ತಾರೆ ನಾಳೆ ದಿವಾಳಿಯಾಗಿಬಿಡುತ್ತಾರೆ. ಯಾರಿಗೂ ಹಣವೇನೂ ಸಿಗುವುದಿಲ್ಲ. ತಿಳಿದುಕೊಳ್ಳಿ, ಯಾರಿಗಾದರೂ ಹಣವನ್ನು ಕೊಟ್ಟು ಅವರು ಶರೀರವನ್ನು ಬಿಟ್ಟರೆ ಮತ್ತೆ ಯಾರು ಅವರಿಗೆ ಹಣವನ್ನು ಹಿಂದಿರುಗಿಸುತ್ತಾರೆ! ಆದ್ದರಿಂದ ಈಗ ಏನು ಮಾಡಬೇಕು? ಭಾರತದ 21 ಜನ್ಮಗಳ ಕಲ್ಯಾಣಕ್ಕಾಗಿ ಮತ್ತು ತಮ್ಮ 21 ಜನ್ಮಗಳ ಕಲ್ಯಾಣಕ್ಕಾಗಿ ತನ್ನದೆಲ್ಲವನ್ನೂ ಸಫಲ ಮಾಡಿಕೊಳ್ಳಬೇಕು, ನೀವು ತಮಗಾಗಿಯೇ ಮಾಡಿಕೊಳ್ಳುತ್ತೀರಿ ಏಕೆಂದರೆ ನಿಮಗೆ ತಿಳಿದಿದೆ - ಶ್ರೀಮತದನುಸಾರ ನಾವು ಶ್ರೇಷ್ಠಪದವಿಯನ್ನು ಪಡೆಯುತ್ತೇವೆ. ಇದರಿಂದ 21 ಜನ್ಮಗಳ ಸುಖ-ಶಾಂತಿಯು ಸಿಗುತ್ತದೆ ಅಂದಾಗ ಇದಕ್ಕೆ ಅವಿನಾಶಿ ತಂದೆಯ ಆತ್ಮಿಕ ಆಸ್ಪತ್ರೆ ಮತ್ತು ವಿಶ್ವವಿದ್ಯಾಲಯವೆಂದು ಹೇಳಲಾಗುತ್ತದೆ. ಇದರಿಂದ ಆರೋಗ್ಯ, ಐಶ್ವರ್ಯ, ಸಂತೋಷ ಎಲ್ಲವೂ ಸಿಗುತ್ತದೆ. ಇಲ್ಲಿ ಯಾರಿಗಾದರೂ ಆರೋಗ್ಯವಿದೆ-ಐಶ್ವರ್ಯವಿಲ್ಲವೆಂದರೆ ಸಂತೋಷವೂ ಇರಲು ಸಾಧ್ಯವಿಲ್ಲ. ಎರಡೂ ಇದ್ದಾಗ ಸಂತೋಷದಿಂದ ಇರುತ್ತಾರೆ. ತಂದೆಯು ನಿಮಗೆ 21 ಜನ್ಮಗಳಿಗಾಗಿ ಇವೆರಡನ್ನು ಕೊಡುತ್ತಾರೆ. ಅದನ್ನು 21 ಜನ್ಮಗಳಿಗಾಗಿ ಜಮಾ ಮಾಡಿಕೊಳ್ಳಬೇಕಾಗಿದೆ. ಈಗ ಯುಕ್ತಿಯನ್ನು ರಚಿಸುವುದು ಮಕ್ಕಳ ಕರ್ತವ್ಯವಾಗಿದೆ. ತಂದೆಯು ಬರುವುದರಿಂದ ಬಡಮಕ್ಕಳ ಅದೃಷ್ಟದ ಬಾಗಿಲು ತೆರೆಯುತ್ತದೆ. ತಂದೆಯು ಬಡವರ ಬಂಧುವಾಗಿದ್ದಾರೆ. ಸಾಹುಕಾರರ ಅದೃಷ್ಟದಲ್ಲಿ ಈ ಮಾತುಗಳು ಇಲ್ಲವೇ ಇಲ್ಲ. ಈ ಸಮಯದ ಭಾರತವು ಎಲ್ಲದಕ್ಕಿಂತ ಬಡದೇಶವಾಗಿದೆ. ಯಾರು ಸಾಹುಕಾರರಾಗಿದ್ದರೋ ಅವರೇ ಈಗ ಬಡವರಾಗಿದ್ದಾರೆ. ಈ ಸಮಯದಲ್ಲಿ ಎಲ್ಲರೂ ಪಾಪಾತ್ಮರಾಗಿದ್ದಾರೆ. ಎಲ್ಲಿ ಪುಣ್ಯಾತ್ಮರಿರುವರೋ ಅಲ್ಲಿ ಒಬ್ಬರೂ ಪಾಪಾತ್ಮರಿರಲು ಸಾಧ್ಯವಿಲ್ಲ. ಅದು ಸತೋಪ್ರಧಾನ ಸತ್ಯಯುಗವಾಗಿದೆ, ಇದು ತಮೋಪ್ರಧಾನ ಕಲಿಯುಗವಾಗಿದೆ. ತಾವೀಗ ಸತೋಪ್ರಧಾನರಾಗುವ ಪುರುಷಾರ್ಥ ಮಾಡುತ್ತಿದ್ದೀರಿ. ತಂದೆಯೇ ನಿಮಗೆ ಸ್ಮೃತಿ ತರಿಸುತ್ತಾರೆ ಆದ್ದರಿಂದ ನೀವು ತಿಳಿದುಕೊಳ್ಳುತ್ತೀರಿ - ಅವಶ್ಯವಾಗಿ ನಾವೇ ಸ್ವರ್ಗವಾಸಿಗಳಾಗುತ್ತೇವೆ ಮತ್ತೆ ನಾವೇ 84 ಜನ್ಮಗಳನ್ನು ಪಡೆದುಕೊಂಡೆವು ಆದರೆ 84 ಲಕ್ಷಯೋನಿಗಳೆಂದು ಹೇಳಿರುವುದು ಸುಳ್ಳಾಗಿದೆ. ಇಷ್ಟೊಂದು ಜನ್ಮಗಳವರೆಗೆ ಪ್ರಾಣಿಗಳ ಯೋನಿಯಲ್ಲಿರಲು ಸಾಧ್ಯವೆ? ಇದು ಅಂತಿಮದ ಮನುಷ್ಯನ ಪದವಿಯೇ? ಈಗ ಹಿಂತಿರುಗಿ ಹೋಗಬೇಕಾಗಿದೆಯೇ?

ಈಗ ತಂದೆಯು ತಿಳಿಸುತ್ತಾರೆ - ಮೃತ್ಯುವು ಸನ್ಮುಖದಲ್ಲಿ ನಿಂತಿದೆ 40-50ಸಾವಿರ ವರ್ಷಗಳಂತೂ ಇಲ್ಲ್ಲ. ಮನುಷ್ಯರಂತೂ ಸಂಪೂರ್ಣ ಅಂಧಕಾರದಲ್ಲಿದ್ದಾರೆ ಆದ್ದರಿಂದ ಕಲ್ಲುಬುದ್ಧಿಯವರೆಂದು ಹೇಳಲಾಗುತ್ತದೆ. ನೀವೀಗ ಕಲ್ಲುಬುದ್ಧಿಯವರಿಂದ ಪಾರಸಬುದ್ಧಿಯವರಾಗುತ್ತೀರಿ, ಈ ಮಾತುಗಳನ್ನು ಸನ್ಯಾಸಿ ಮೊದಲಾದವರು ತಿಳಿಸಲು ಸಾಧ್ಯವಿಲ್ಲ. ಈಗ ತಂದೆಯು ನಿಮಗೆ ಪುನಃ ಸ್ಮೃತಿ ತರಿಸುತ್ತಾರೆ - ಮಕ್ಕಳೇ, ಹಿಂತಿರುಗಿ ಹೋಗಬೇಕಾಗಿದೆ. ಎಷ್ಟು ಸಾಧ್ಯವೋ ತಮ್ಮ ಬ್ಯಾಗ್-ಬ್ಯಾಗೇಜನ್ನು ವರ್ಗಾವಣೆ ಮಾಡಿ - ಬಾಬಾ, ಇದೆಲ್ಲವನ್ನೂ ತೆಗೆದುಕೊಳ್ಳಿ. ನಾವು ಸತ್ಯಯುಗದಲ್ಲಿ 21 ಜನ್ಮಗಳಿಗಾಗಿ ಪಡೆದುಕೊಳ್ಳುತ್ತೇವೆ. ಈ ಬಾಬಾರವರೂ ಸಹ ದಾನ ಪುಣ್ಯಗಳನ್ನು ಮಾಡುತ್ತಿದ್ದರು, ಬಹಳ ಆಸಕ್ತಿಯಿತ್ತು. ವ್ಯಾಪಾರಿಗಳೂ ಸಹ ದಾನ-ಧರ್ಮಗಳಿಗಾಗಿ ಹಣವನ್ನು ತೆಗೆಯುತ್ತಾರೆ, ಈ ಬ್ರಹ್ಮಾರವರೂ ಸಹ ಒಂದಾಣೆಯನ್ನು ದಾನಕ್ಕಾಗಿ ತೆಗೆಯುತ್ತಿದ್ದರು. ಯಾರೇ ಬಾಗಿಲಿಗೆ ಬಂದರೂ ಖಾಲಿಕೈಯಲ್ಲಿ ಹೋಗಬಾರದು. ಈಗ ಭಗವಂತನು ಸನ್ಮುಖದಲ್ಲಿ ಬಂದಿದ್ದಾರೆ, ಇದು ಯಾರಿಗೂ ತಿಳಿದಿಲ್ಲ. ಮನುಷ್ಯರು ದಾನಪುಣ್ಯಗಳನ್ನು ಮಾಡುತ್ತಾ-ಮಾಡುತ್ತಾ ಶರೀರಬಿಡುತ್ತಾರೆ ಅಂದಮೇಲೆ ಮತ್ತೆಲ್ಲಿ ಸಿಗುವುದು? ಪವಿತ್ರರಾಗುವುದೇ ಇಲ್ಲ. ತಂದೆಯೊಂದಿಗೆ ಪ್ರೀತಿಯನ್ನಿಟ್ಟುಕೊಳ್ಳುವುದಿಲ್ಲ. ತಂದೆಯು ತಿಳಿಸಿದ್ದಾರೆ - ಯಾದವರು ಮತ್ತು ಕೌರವರದು ವಿನಾಶಕಾಲೇ ವಿಪರೀತ ಬುದ್ಧಿಯಾಗಿದೆ. ಪಾಂಡವರದು ವಿನಾಶ ಕಾಲದಲ್ಲಿ ಪ್ರೀತಬುದ್ಧಿಯಾಗಿದೆ. ಯುರೋಪಿಯನ್ನರು ಯಾದವರಾಗಿದ್ದಾರೆ, ಅಣ್ವಸ್ತ್ರಗಳನ್ನು ತಯಾರು ಮಾಡುತ್ತಿರುತ್ತಾರೆ. ಶಾಸ್ತ್ರಗಳಲ್ಲಿ ಏನೇನನ್ನೋ ಬರೆದುಬಿಟ್ಟಿದ್ದಾರೆ. ಬಹಳಷ್ಟು ಶಾಸ್ತ್ರಗಳು ನಾಟಕದನುಸಾರ ರಚಿಸಲ್ಪಟ್ಟಿದೆ. ಇದರಲ್ಲಿ ಪ್ರೇರಣೆ ಮೊದಲಾದ ಮಾತಿಲ್ಲ. ಪ್ರೇರಣೆ ಎಂದರೆ ವಿಚಾರ. ಆದರೆ ಹೀಗೆ ಪ್ರೇರಣೆಯಿಂದ ತಂದೆಯು ಓದಿಸುವುದಿಲ್ಲ. ತಂದೆಯು ತಿಳಿಸುತ್ತಾರೆ - ಇವರೂ ಸಹ ಒಬ್ಬ ವ್ಯಾಪಾರಿಯಾಗಿದ್ದರು, ಒಳ್ಳೆಯ ಕೀರ್ತಿಯಿತ್ತು. ಎಲ್ಲರೂ ಗೌರವ ಕೊಡುತ್ತಿದ್ದರು. ತಂದೆಯು ಪ್ರವೇಶ ಮಾಡಿದ ನಂತರ ಇವರಿಗೆ ನಿಂದಿಸುವುದನ್ನು ಆರಂಭಿಸಿಬಿಟ್ಟರು. ಶಿವತಂದೆಯನ್ನೇ ಅರಿತುಕೊಂಡಿಲ್ಲ ಮತ್ತು ಅವರಿಗೆ ನಿಂದನೆಯನ್ನು ಮಾಡಲು ಸಾಧ್ಯವಿಲ್ಲ. ಇವರೇ ನಿಂದನೆಯನ್ನು ಸಹಿಸುತ್ತಾರೆ. ನಾನು ಬೆಣ್ಣೆಯನ್ನು ತಿನ್ನಲಿಲ್ಲವೆಂದು ಕೃಷ್ಣನು ಹೇಳಿದನಲ್ಲವೆ! ಹಾಗೆಯೇ ಇವರೂ ಸಹ ಹೇಳುತ್ತಾರೆ - ಈ ಕೆಲಸವೆಲ್ಲವೂ ಶಿವತಂದೆಯದಾಗಿದೆ, ನಾನೇನೂ ಮಾಡುವುದಿಲ್ಲ. ಅವರೇ ಜಾದೂಗರನಾಗಿದ್ದಾರೆ, ನಾನಲ್ಲ. ಪಾಪ, ಇವರಿಗೆ ನಿಂದನೆ ಮಾಡಿಬಿಡುತ್ತಾರೆ. ಇವರೇನು (ಬ್ರಹ್ಮಾ) ಯಾರನ್ನಾದರೂ ಓಡಿಸಿಕೊಂಡು ಬಂದರೆ? ನೀವಿಲ್ಲಿ ಬನ್ನಿ ಎಂದು ಯಾರಿಗೂ ಹೇಳಲಿಲ್ಲ. ಎಲ್ಲರೂ ತಾವಾಗಿಯೇ ಓಡುತ್ತಾ ಬಂದರು ಆದರೆ ಸುಮ್ಮನೆ ಇವರ ಮೇಲೆ ದೋಷವನ್ನು ಹಾಕಿದ್ದಾರೆ, ಎಷ್ಟೊಂದು ದೋಷವನ್ನು ಸಹಿಸಿದ್ದಾರೆ. ಶಾಸ್ತ್ರಗಳಲ್ಲಿ ಏನೇನೋ ಮಾತುಗಳನ್ನು ಬರೆದಿದ್ದಾರೆ. ತಂದೆಯು ತಿಳಿಸುತ್ತಾರೆ - ಇದು ಕಲ್ಪದ ನಂತರವೂ ಆಗುತ್ತದೆ, ಇವೆಲ್ಲವೂ ಜ್ಞಾನದ ಮಾತುಗಳಾಗಿವೆ. ಇದನ್ನು ಯಾವುದೇ ಮನುಷ್ಯರು ಮಾಡಲು ಸಾಧ್ಯವಿಲ್ಲ. ಅದರಲ್ಲೂ ಬ್ರಿಟಿಷರ ರಾಜ್ಯದಲ್ಲಿ ಯಾರ ಬಳಿಯಾದರೂ ಇಷ್ಟೊಂದು ಕನ್ಯೆಯರು, ಮಾತೆಯರು ಕುಳಿತುಕೊಂಡರೆ, ಯಾರೇನೂ ಮಾಡಲು ಆಗಲಿಲ್ಲ. ಯಾವುದೇ ಮಿತ್ರಸಂಬಂಧಿಗಳು ಬರುತ್ತಿದ್ದರೆಂದರೆ ಒಮ್ಮೆಲೆ ಓಡಿಸಿಬಿಡುತ್ತಿದ್ದರು. ತಂದೆಯಂತೂ ಭಲೆ ಇವರಿಗೆ ತಿಳಿಸಿ ಕರೆದುಕೊಂಡು ಹೋಗಿ, ನಾನೇನು ಇದಕ್ಕೆ ನಿರಾಕರಿಸುವುದಿಲ್ಲವೆಂದು ಹೇಳುತ್ತಿದ್ದರು ಆದರೆ ಇಲ್ಲಿಗೆ ಬಂದವರನ್ನು ಹಿಂತಿರುಗಿ ಕರೆದುಕೊಂಡು ಹೋಗಲು ಯಾರಿಗೂ ಧೈರ್ಯವಿರುತ್ತಿರಲಿಲ್ಲ, ತಂದೆಯ ಶಕ್ತಿಯಿತ್ತಲ್ಲವೆ, ಇದು ಹೊಸದೇನಲ್ಲ. ಇದು ಕಲ್ಪದ ನಂತರವೂ ಆಗುವುದು, ನಿಂದನೆಯನ್ನೂ ಸಹನೆ ಮಾಡಬೇಕಾಗುವುದು. ದ್ರೌಪದಿಯ ಮಾತೂ ಇದೆ - ನೀವೆಲ್ಲರೂ ದ್ರೌಪದಿಯರು, ಅವರು ದುಶ್ಯಾಸನರಾಗಿದ್ದಾರೆ. ಕೇವಲ ಒಬ್ಬರ ಮಾತಲ್ಲ, ಶಾಸ್ತ್ರಗಳಲ್ಲಿ ಈ ಅಸತ್ಯ ಮಾತುಗಳನ್ನು ಯಾರು ಬರೆದರು? ತಂದೆಯು ತಿಳಿಸುತ್ತಾರೆ - ಇದು ಸಹ ನಾಟಕದಲ್ಲಿ ಪಾತ್ರವಿದೆ, ಈಗ ಯಾರಲ್ಲಿಯೂ ಆತ್ಮದ ಜ್ಞಾನವಿಲ್ಲ, ಸಂಪೂರ್ಣ ದೇಹಾಭಿಮಾನಿಗಳಾಗಿಬಿಟ್ಟಿದ್ದಾರೆ. ದೇಹೀ ಅಭಿಮಾನಿಗಳಾಗುವುದರಲ್ಲಿ ಪರಿಶ್ರಮವಿದೆ, ರಾವಣನು ಸಂಪೂರ್ಣ ತಲೆಕೆಳಕಾಗಿ ಮಾಡಿಬಿಟ್ಟಿದ್ದಾನೆ, ಈಗ ಅದನ್ನು ತಂದೆಯು ಸರಿಪಡಿಸುತ್ತಾರೆ.

ಆತ್ಮಾಭಿಮಾನಿಗಳಾಗುವುದರಿಂದ ಸ್ವತಃ ಸ್ಮೃತಿಯಿರುತ್ತದೆ - ನಾವಾತ್ಮಗಳಾಗಿದ್ದೇವೆ, ಈ ದೇಹವು ನುಡಿಸಲು ಒಂದು ವಾಧ್ಯವಾಗಿದೆ. ಈ ಸ್ಮೃತಿಯಿದ್ದರೂ ಸಹ ದೈವೀಗುಣಗಳು ಬರುತ್ತಾ ಹೋಗುತ್ತವೆ. ನೀವು ಯಾರಿಗೂ ದುಃಖವನ್ನು ಕೊಡುವಂತಿಲ್ಲ. ಭಾರತದಲ್ಲಿಯೇ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇದು 5000 ವರ್ಷಗಳ ಮಾತಾಗಿದೆ. ಒಂದುವೇಳೆ ಯಾರಾದರೂ ಲಕ್ಷಾಂತರ ವರ್ಷಗಳೆಂದು ಹೇಳುವರೆಂದರೆ ಅವರು ಘೋರ ಅಂಧಕಾರದಲ್ಲಿದ್ದಾರೆ. ನಾಟಕದನುಸಾರ ಯಾವಾಗ ಸಮಯವು ಮುಕ್ತಾಯವಾಗುತ್ತದೆಯೋ ಆಗ ಪುನಃ ತಂದೆಯು ಬಂದು ತಿಳಿಸುತ್ತಾರೆ - ಮಕ್ಕಳೇ, ನನ್ನ ಶ್ರೀಮತದಂತೆ ನಡೆಯಿರಿ, ಮೃತ್ಯು ಸನ್ಮುಖದಲ್ಲಿ ನಿಂತಿದೆ. ಶ್ರೀಮತದಂತೆ ನಡೆಯಲಿಲ್ಲವೆಂದರೆ ಒಳಗಿನ ಇಚ್ಛೆಗಳೆಲ್ಲವೂ ಉಳಿದುಬಿಡುವುದು. ಮೃತ್ಯುವಂತೂ ಖಂಡಿತ ಇದೆ, ಇದು ಅದೇ ಮಹಾಭಾರತ ಯುದ್ಧವಾಗಿದೆ. ಎಷ್ಟು ತಮ್ಮ ಕಲ್ಯಾಣವನ್ನು ಮಾಡಿಕೊಳ್ಳುತ್ತೀರೋ ಅಷ್ಟು ಒಳ್ಳೆಯದು, ಇಲ್ಲವಾದರೆ ನೀವು ಖಾಲಿ ಕೈಯಲ್ಲಿ ಹೋಗುತ್ತೀರಿ. ಇಡೀ ಪ್ರಪಂಚವು ಖಾಲಿಕೈಯಲ್ಲಿ ಹೋಗುವುದಿದೆ. ಕೇವಲ ನೀವು ಮಕ್ಕಳೇ ಕೈತುಂಬಿಕೊಂಡು ಅರ್ಥಾತ್ ಧನವಂತರಾಗಿ ಹೋಗುತ್ತೀರಿ. ಇದರಲ್ಲಿ ತಿಳಿದುಕೊಳ್ಳುವ ಬಹಳ ವಿಶಾಲಬುದ್ಧಿಯು ಬೇಕು. ಎಷ್ಟೊಂದು ಧರ್ಮಗಳ ಮನುಷ್ಯರಿದ್ದಾರೆ, ಪ್ರತಿಯೊಬ್ಬರದೂ ತಮ್ಮ-ತಮ್ಮ ಪಾತ್ರವು ನಡೆಯುತ್ತದೆ. ಒಬ್ಬರ ಪಾತ್ರವು ಇನ್ನೊಬ್ಬರಿಗೆ ಹೋಲುವುದಿಲ್ಲ. ಎಲ್ಲರ ಮುಖಲಕ್ಷಣಗಳು ಬೇರೆ-ಬೇರೆಯಾಗಿದೆ. ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ. ಆಶ್ಚರ್ಯಕರವಾದ ಮಾತುಗಳಲ್ಲವೆ. ತಮ್ಮನ್ನು ಆತ್ಮವೆಂದು ತಿಳಿಯಿರಿ, ನಾವಾತ್ಮಗಳು 84 ಜನ್ಮಗಳ ಚಕ್ರವನ್ನು ಸುತ್ತುತ್ತೇವೆ, ನಾವಾತ್ಮಗಳು ಈ ನಾಟಕದಲ್ಲಿ ಪಾತ್ರಧಾರಿಗಳಾಗಿದ್ದೀರೆಂದು ಈಗ ತಂದೆಯು ತಿಳಿಸುತ್ತಾರೆ. ಈ ನಾಟಕದಿಂದ ನೀವು ಮುಕ್ತರಾಗಲು ಸಾಧ್ಯವಿಲ್ಲ, ಮೋಕ್ಷ ಪಡೆಯಲೂ ಸಾಧ್ಯವಿಲ್ಲ. ಮತ್ತೆ ಪ್ರಯತ್ನಪಡುವುದೂ ಸಹಾ ವ್ಯರ್ಥವಾಗಿದೆ. ತಂದೆಯು ತಿಳಿಸುತ್ತಾರೆ - ನಾಟಕದಿಂದ ಯಾರಾದರೂ ಬಿಡುಗಡೆಯಾಗಿ ಬೇರೆಯವರು ಬಂದು ಸೇರ್ಪಡೆಯಾಗಲು ಸಾಧ್ಯವಿಲ್ಲ. ಇಷ್ಟೆಲ್ಲಾ ಜ್ಞಾನವು ಎಲ್ಲರ ಬುದ್ಧಿಯಲ್ಲಿರಲು ಸಾಧ್ಯವಿಲ್ಲ. ಇಡೀ ದಿನ ಹೀಗೆ ಜ್ಞಾನದ ಮನನ ಚಿಂತನೆ ಮಾಡಬೇಕಾಗಿದೆ. ಒಂದು ಘಳಿಗೆ, ಅರ್ಧಘಳಿಗೆ........ ನೆನಪು ಮಾಡುತ್ತಾ ಅದನ್ನು ಇನ್ನೂ ಹೆಚ್ಚಿಸಿಕೊಳ್ಳುತ್ತಾ ಹೋಗಿ. ಭಲೆ 8 ಗಂಟೆಗಳ ಸಮಯ ಸ್ಥೂಲ ಸೇವೆಯನ್ನು ಮಾಡಿ, ವಿಶ್ರಾಂತಿಯನ್ನೂ ಮಾಡಿ ಆದರೆ ಈ ಆತ್ಮಿಕ ಸರ್ಕಾರದ ಸೇವೆಯಲ್ಲಿಯೂ ಸಮಯವನ್ನು ಕೊಡಿ. ನೀವು ತಮ್ಮದೇ ಸೇವೆ ಮಾಡಿಕೊಳ್ಳಿ, ಇದು ಮುಖ್ಯಮಾತಾಗಿದೆ. ನೆನಪಿನ ಯಾತ್ರೆಯಲ್ಲಿರಿ ಬಾಕಿ ಜ್ಞಾನದಿಂದ ಶ್ರೇಷ್ಠಪದವಿಯನ್ನು ಪಡೆಯಬೇಕಾಗಿದೆ. ತಮ್ಮ ನೆನಪಿನ ಚಾರ್ಟನ್ನು ಇಟ್ಟುಕೊಳ್ಳಿ, ಜ್ಞಾನವು ಬಹಳ ಸಹಜವಾಗಿದೆ. ಹೇಗೆ ತಂದೆಯ ಬುದ್ಧಿಯಲ್ಲಿದೆ - ನಾನು ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದೇನೆ, ಇದರ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿದ್ದೇನೆ. ನಾವೂ ಸಹ ತಂದೆಯ ಮಕ್ಕಳಾಗಿದ್ದೇವೆ. ಈ ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ತಂದೆಯು ನಾವು ಮಕ್ಕಳಿಗೆ ತಿಳಿಸಿಕೊಟ್ಟಿದ್ದಾರೆ. ಹೇಗೆ ಸ್ಥೂಲಸಂಪಾದನೆಗಾಗಿಯೂ ನೀವು 8-10 ಗಂಟೆಗಳ ಸಮಯವನ್ನು ಕೊಡುತ್ತೀರಲ್ಲವೆ. ಒಳ್ಳೆಯ ಗ್ರಾಹಕರು ಸಿಕ್ಕಿದ್ದರೆ ರಾತ್ರಿಯ ಸಮಯದಲ್ಲಿಯೂ ಸಹ ಆಕಳಿಕೆ ಬರುವುದಿಲ್ಲ. ಒಂದುವೇಳೆ ಆಕಳಿಕೆ ಬಂದಿತೆಂದರೆ ಇವರು ಸುಸ್ತಾಗಿದ್ದಾರೆ ಎಂದು ತಿಳಿಯಲಾಗುತ್ತದೆ. ಬುದ್ಧಿಯು ಎಲ್ಲಿಯೋ ಅಲೆದಾಡುತ್ತಿರುತ್ತದೆ, ಸೇವಾಕೇಂದ್ರಗಳಲ್ಲಿಯೂ ಸಹ ಬಹಳ ಎಚ್ಚರಿಕೆಯಿಂದಿರಬೇಕಾಗುತ್ತದೆ. ಯಾವ ಮಕ್ಕಳು ಅನ್ಯರ ಚಿಂತನೆ ಮಾಡುವುದಿಲ್ಲವೋ ತಮ್ಮ ವಿದ್ಯಾಭ್ಯಾಸದಲ್ಲಿಯೇ ಮಸ್ತರಾಗಿರುವರೋ ಅವರ ಉನ್ನತಿಯು ಸದಾ ಆಗುತ್ತಿರುವುದು. ಆದ್ದರಿಂದ ನೀವು ಅನ್ಯರ ಚಿಂತನೆ ಮಾಡಿ ತಮ್ಮ ಪದವಿಯನ್ನು ಭ್ರಷ್ಟಮಾಡಿಕೊಳ್ಳಬಾರದು ಆದ್ದರಿಂದ ಕೆಟ್ಟದ್ದನ್ನು ಹೇಳಬೇಡಿ, ಕೆಟ್ಟದ್ದನ್ನು ಕೇಳಬೇಡಿ, ಯಾರಾದರೂ ಕೆಟ್ಟದಾಗಿ ಮಾತನಾಡುತ್ತಾರೆಂದರೆ ಒಂದು ಕಿವಿಯಿಂದ ಕೇಳಿ ಇನ್ನೊಂದರಿಂದ ಬಿಟ್ಟುಬಿಡಿ. ಸದಾ ತಮ್ಮನ್ನು ನೋಡಿಕೊಳ್ಳಿ ಅನ್ಯರನ್ನಲ್ಲ. ತಮ್ಮ ವಿದ್ಯಾಭ್ಯಾಸವನ್ನು ಬಿಡಬಾರದು. ಅನೇಕರು ಹೀಗೆ ತಮ್ಮ ವಿದ್ಯಾಭ್ಯಾಸದೊಂದಿಗೆ ಮುನಿಸಿಕೊಳ್ಳುತ್ತಾರೆ. ಬರುವುದನ್ನು ನಿಲ್ಲಿಸಿಬಿಡುತ್ತಾರೆ ನಂತರ ಮತ್ತೆ ಬರುತ್ತಾರೆ. ಬರಲಿಲ್ಲವೆಂದರೆ ಅವರು ಹೋಗುವುದಾದರೂ ಎಲ್ಲಿ? ಶಾಲೆಯು ಇದೊಂದೇ ಆಗಿದೆ. ತಮ್ಮ ಕಾಲಿನ ಮೇಲೆ ತಾವು ಕೊಡಲಿಯನ್ನು ಹಾಕಿಕೊಳ್ಳಬಾರದು ಆದ್ದರಿಂದ ನೀವು ತಮ್ಮ ವಿದ್ಯಾಭ್ಯಾಸದಲ್ಲಿ ಮಸ್ತರಾಗಿರಿ. ಬಹಳ ಖುಷಿಯಲ್ಲಿರಿ. ಸ್ವಯಂ ಭಗವಂತನೇ ಓದಿಸುತ್ತಾರೆಂದಮೇಲೆ ಇನ್ನೇನು ಬೇಕು! ಭಗವಂತನು ನಮ್ಮ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ, ಅವರೊಂದಿಗೆ ಬುದ್ಧಿಯೋಗವನ್ನು ಜೋಡಿಸಬೇಕಾಗಿದೆ. ಅವರು ಇಡೀ ಪ್ರಪಂಚದ ನಂಬರ್ವನ್ ಪ್ರಿಯತಮನಾಗಿದ್ದಾರೆ, ನಿಮ್ಮನ್ನು ನಂಬರ್ವನ್ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ.

ತಂದೆಯು ತಿಳಿಸುತ್ತಾರೆ - ನೀವಾತ್ಮಗಳು ಬಹಳ ಪತಿತರಾಗಿದ್ದೀರಿ, ಹಾರಲು ಸಾಧ್ಯವಿಲ್ಲ ಏಕೆಂದರೆ ಆತ್ಮದ ರೆಕ್ಕೆಗಳು ತುಂಡರಿಸಲ್ಪಟ್ಟಿದೆ. ರಾವಣನು ಎಲ್ಲಾ ಆತ್ಮಗಳ ರೆಕ್ಕೆಗಳನ್ನು ತುಂಡರಿಸಿಬಿಟ್ಟಿದ್ದಾನೆ. ನನ್ನ ವಿನಃ ಮತ್ತ್ಯಾರು ನಿಮ್ಮನ್ನು ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ. ಎಲ್ಲಾ ಪಾತ್ರಧಾರಿಗಳೂ ಇಲ್ಲಿಯೇ ಇದ್ದಾರೆ, ವೃದ್ಧಿಹೊಂದುತ್ತಿರುತ್ತಾರೆ. ಯಾರೂ ಹಿಂತಿರುಗಿ ಹೋಗುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸ್ವಯಂನ ಚಿಂತನೆ ಮತ್ತು ವಿದ್ಯಾಭ್ಯಾಸದಲ್ಲಿ ಮಸ್ತರಾಗಿರಬೇಕಾಗಿದೆ, ಅನ್ಯರನ್ನು ನೋಡಬಾರದು. ಒಂದುವೇಳೆ ಯಾರಾದರೂ ಒಳ್ಳೆಯದಾಗಿ ಮಾತಾಡಲಿಲ್ಲವೆಂದರೆ ಒಂದು ಕಿವಿಯಿಂದ ಕೇಳಿ ಇನ್ನೊಂದರಿಂದ ಬಿಟ್ಟುಬಿಡಬೇಕಾಗಿದೆ. ಮುನಿಸಿಕೊಂಡು ವಿದ್ಯಾಭ್ಯಾಸವನ್ನು ಬಿಡಬಾರದು.

2. ಜೀವಿಸಿದ್ದಂತೆಯೇ ಎಲ್ಲವನ್ನೂ ದಾನ ಮಾಡಿ ತಮ್ಮ ಮಮತ್ವವನ್ನು ಕಳೆಯಬೇಕಾಗಿದೆ. ತಂದೆಗೆ ಸಂಪೂರ್ಣ ಅರ್ಪಣೆ ಮಾಡಿ ಟ್ರಸ್ಟಿಯಾಗಿ ಹಗುರರಾಗಿರಬೇಕಾಗಿದೆ. ದೇಹೀ-ಅಭಿಮಾನಿಯಾಗಿ ಸರ್ವ ದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ.

ವರದಾನ:
ಭಿನ್ನತೆಯನ್ನು ಅಳಿಸಿ ಏಕತೆಯನ್ನು ತರುವಂತಹ ಸತ್ಯ ಸೇವಾಧಾರಿ ಭವ

ಬ್ರಾಹ್ಮಣ ಪರಿವಾರದ ವಿಶೇಷತೆಯಾಗಿದೆ- ಅನೇಕತೆಯಲ್ಲೂ ಏಕತೆಯಿಂದಿರುವುದು. ತಮ್ಮ ಏಕತೆಯ ಮೂಲಕವೇ ಇಡೀ ವಿಶ್ವದಲ್ಲಿ ಒಂದು ಧರ್ಮ ಒಂದು ರಾಜ್ಯದ ಸ್ಥಾಪನೆಯಾಗುತ್ತದೆ. ಆದ್ದರಿಂದ ವಿಶೇಷ ಗಮನಕೊಟ್ಟು ಭಿನ್ನತೆಯನ್ನು ಅಳಿಸಿ ಮತ್ತು ಏಕತೆಯನ್ನು ತನ್ನಿ. ಆಗ ಹೇಳಲಾಗುತ್ತದೆ ಸತ್ಯ ಸೇವಾಧಾರಿ. ಸೇವಾಧಾರಿ ಸ್ವಯಂ ಪ್ರತಿ ಅಲ್ಲ ಆದರೆ ಸೇವಾ ಪ್ರತಿಯಾಗಿರುತ್ತಾರೆ. ಸ್ವಯಂನ ಎಲ್ಲವನ್ನೂ ಸೇವೆಯ ಪ್ರತಿ ಸ್ಥಾಹ ಮಾಡುವಿರಿ, ಹೇಗೆ ಸಾಕಾರ ತಂದೆ ಸೇವೆಯಲ್ಲಿ ಮೂಳೆ-ಮೂಳೆಯೂ ಸಹ ಸ್ವಾಹ ಮಾಡಿದರು, ಅದೇ ರೀತಿ ತಮ್ಮ ಎಲ್ಲಾ ಕರ್ಮೇಂದ್ರಿಯದ ಮೂಲಕ ಸೇವೆಯಾಗುತ್ತಿರುತ್ತದೆ.

ಸ್ಲೋಗನ್:
ಪರಮಾತ್ಮನ ಪ್ರೀತಿಯಲ್ಲಿ ಮುಳುಗಿ ಹೋಗಿಬಿಡಿ ಆಗ ದುಃಖಗಳ ಪ್ರಪಂಚ ಮರೆತುಹೋಗಿಬಿಡುತ್ತದೆ.

ಅವ್ಯಕ್ತ ಸೂಚನೆ: ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ

ಸದಾ ಸ್ಮೃತಿ ಇಟುಕೊಳ್ಳಿ ಕಂಬೈಂಡ್ ಆಗಿದ್ದೇವು, ಕಂಬೈಂಡ್ ಆಗಿದ್ದೇವೆ ಮತ್ತು ಕಂಬೈಂಡ್ ಆಗಿರುವಿರಿ. ಯಾರಲ್ಲೂ ಅನೇಕ ಬಾರಿಯ ಕಂಬೈಂಡ್ ಸ್ವರೂಪವನ್ನು ಬೇರ್ಪಡಿಸಲು ಸಾಧ್ಯವಿಲ್ಲ.