11.05.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯು
ತಾವು ಮಕ್ಕಳನ್ನು ತಮ್ಮ ಸಮಾನ ಮಹಿಮಾಯೋಗ್ಯರನ್ನಾಗಿ ಮಾಡಲು ಬಂದಿದ್ದಾರೆ, ಯಾವುದು ತಂದೆಯ
ಮಹಿಮೆಯಿದೆಯೋ ಅದನ್ನು ನೀವೀಗ ಧಾರಣೆ ಮಾಡಿಕೊಳ್ಳುತ್ತೀರಿ”
ಪ್ರಶ್ನೆ:
ಭಕ್ತಿಮಾರ್ಗದಲ್ಲಿ ಪರಮಾತ್ಮ ಪ್ರಿಯತಮನನ್ನು ಪೂರ್ಣ ಅರಿತುಕೊಂಡಿಲ್ಲದಿದ್ದರೂ ಸಹ ಯಾವ ಶಬ್ಧಗಳನ್ನು
ಬಹಳ ಪ್ರೀತಿಯಿಂದ ಹೇಳುತ್ತಾರೆ ಮತ್ತು ನೆನಪು ಮಾಡುತ್ತಾರೆ?
ಉತ್ತರ:
ಬಹಳ
ಪ್ರೀತಿಯಿಂದ ಹೇಳುತ್ತಾರೆ ಮತ್ತು ನೆನಪು ಮಾಡುತ್ತಾರೆ - ಹೇ ಪ್ರಿಯತಮನೇ, ತಾವು ಬಂದರೆ ನಾವು
ಕೇವಲ ನಿಮ್ಮನ್ನೇ ನೆನಪು ಮಾಡುತ್ತೇವೆ. ಮತ್ತೆಲ್ಲರಿಂದ ಬುದ್ಧಿಯೋಗವನ್ನು ತೆಗೆದು ತಮ್ಮೊಂದಿಗೇ
ಜೋಡಿಸುತ್ತೇನೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ಬಂದಿದ್ದೇನೆ, ಅಂದಮೇಲೆ
ಆತ್ಮಾಭಿಮಾನಿಯಾಗಿರಿ. ನಿಮ್ಮ ಮೊದಲ ಕರ್ತವ್ಯವಾಗಿದೆ - ತಂದೆಯನ್ನು ಪ್ರೀತಿಯಿಂದ ನೆನಪು ಮಾಡುವುದು.
ಓಂ ಶಾಂತಿ.
ಮಧುರಾತಿ ಮಧುರ ಜೀವಾತ್ಮರಿಗೆ ಪರಮಪಿತ ಪರಮಾತ್ಮ ಕುಳಿತು ತಿಳಿಸುತ್ತಾರೆ - ನಾನು ಸಾಧಾರಣ ವೃದ್ಧನ
ತನುವಿನಲ್ಲಿ ಬರುತ್ತೇನೆ, ಬಂದು ಬಹಳ ಮಕ್ಕಳಿಗೆ ಓದಿಸುತ್ತೇನೆ. ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣ
ಮಕ್ಕಳಿಗೇ ತಿಳಿಸುತ್ತೇನೆ, ಅವಶ್ಯವಾಗಿ ಮುಖದ ಮೂಲಕವೇ ತಿಳಿಸುತ್ತಾರೆ. ಮತ್ತ್ಯಾರಿಗೆ
ತಿಳಿಸುತ್ತಾರೆ! ಹೇಳುತ್ತಾರೆ - ಮಕ್ಕಳೇ, ನೀವು ನನ್ನನ್ನು ಭಕ್ತಿ ಮಾರ್ಗದಲ್ಲಿ ಹೇ ಪತಿತ-ಪಾವನ
ಎಂದು ಕರೆಯುತ್ತಾ ಬಂದಿದ್ದೀರಿ. ಭಾರತ ಹಾಗೂ ಇಡೀ ಪ್ರಪಂಚದಲ್ಲಿ ಎಲ್ಲರೂ ಕರೆಯುತ್ತಾರೆ, ಭಾರತವೇ
ಪಾವನವಾಗಿತ್ತು, ಉಳಿದೆಲ್ಲರೂ ಶಾಂತಿಧಾಮದಲ್ಲಿದ್ದರು. ಮಕ್ಕಳಿಗೆ ಇದು ಸ್ಮೃತಿಯಿರಲಿ -
ಸತ್ಯ-ತ್ರೇತಾ ಯುಗವೆಂದು ಯಾವುದಕ್ಕೆ ಹೇಳಲಾಗುತ್ತದೆ, ದ್ವಾಪರ-ಕಲಿಯುಗವೆಂದು ಯಾವುದಕ್ಕೆ
ಹೇಳಲಾಗುತ್ತದೆ, ಅದರಲ್ಲಿ ಯಾರು-ಯಾರು ರಾಜ್ಯ ಮಾಡುತ್ತಿದ್ದರು ಎಂದು ನಿಮ್ಮ ಬುದ್ಧಿಯಲ್ಲಿ
ಸಂಪೂರ್ಣ ಜ್ಞಾನ ಇದೆ. ಹೇಗೆ ತಂದೆಗೆ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆಯೋ ಹಾಗೆಯೇ ನಿಮ್ಮ
ಬುದ್ಧಿಯಲ್ಲಿಯೂ ಇದೆ. ತಂದೆಯು ಯಾವ ಜ್ಞಾನವನ್ನು ಕೊಡುತ್ತಾರೆಯೋ ಅದು ಮಕ್ಕಳಲ್ಲಿಯೂ ಅವಶ್ಯವಾಗಿ
ಇರಬೇಕು. ತಂದೆಯು ಬಂದು ಮಕ್ಕಳನ್ನು ತಮ್ಮ ಸಮಾನರನ್ನಾಗಿ ಮಾಡುತ್ತಾರೆ. ಎಷ್ಟು ತಂದೆಯ
ಮಹಿಮೆಯಿದೆಯೋ ಅಷ್ಟು ಮಕ್ಕಳಿಗೂ ಇದೆ. ತಂದೆಯು ಮಕ್ಕಳನ್ನು ಹೆಚ್ಚು ಮಹಿಮಾವಂತರನ್ನಾಗಿ
ಮಾಡಿದ್ದಾರೆ. ಸದಾ ತಿಳಿದುಕೊಳ್ಳಿ – ಶಿವ ತಂದೆಯು ಇವರ (ಬ್ರಹ್ಮಾ) ಮೂಲಕ ಕಲಿಸುತ್ತಾರೆ, ಆತ್ಮವೇ
ಒಬ್ಬರು ಇನ್ನೊಬ್ಬರೊಂದಿಗೆ ಮಾತನಾಡುತ್ತದೆ ಆದರೆ ಮನುಷ್ಯರು ದೇಹಾಭಿಮಾನಿಗಳಾಗಿರುವ ಕಾರಣ ಇಂತಹವರು
ಓದಿಸುತ್ತಾರೆ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಎಲ್ಲವನ್ನು ಮಾಡುವುದು ಆತ್ಮವೇ ಆಗಿದೆ. ಆತ್ಮವೇ
ಪಾತ್ರವನ್ನಭಿನಯಿಸುತ್ತದೆ, ಈಗ ದೇಹೀ-ಅಭಿಮಾನಿಗಳಾಗಬೇಕಾಗಿದೆ. ಪದೇ-ಪದೇ ತಮ್ಮನ್ನು ಆತ್ಮನೆಂದು
ತಿಳಿಯಬೇಕಾಗಿದೆ. ಎಲ್ಲಿಯವರೆಗೆ ತಮ್ಮನ್ನು ಆತ್ಮನೆಂದು ತಿಳಿಯುವುದಿಲ್ಲವೋ ಅಲ್ಲಿಯವರೆಗೆ
ತಂದೆಯನ್ನೂ ನೆನಪು ಮಾಡಲು ಸಾಧ್ಯವಿಲ್ಲ, ಮರೆತು ಹೋಗುತ್ತಾರೆ. ನೀವು ಯಾರ ಮಕ್ಕಳಾಗಿದ್ದೀರಿ ಎಂದು
ನಿಮ್ಮನ್ನು ಕೇಳಿದಾಗ, ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ ಎಂದು ಹೇಳುತ್ತೀರಿ. ವಿಜಿಟರ್
ಬುಕ್ನಲ್ಲಿಯೂ ಬರೆಯಲಾಗಿದೆ - ನಿಮ್ಮ ತಂದೆ ಯಾರು? ಆಗ ಕೂಡಲೇ ದೇಹದ ತಂದೆಯ ಹೆಸರನ್ನು
ತಿಳಿಸುತ್ತಾರೆ. ಒಳ್ಳೆಯದು - ಈಗ ಆತ್ಮದ ತಂದೆಯ ಹೆಸರನ್ನು ತಿಳಿಸಿ. ಆಗ ಕೆಲವರು ಕೃಷ್ಣನ, ಕೆಲವರು
ಹನುಮಂತನ ಹೆಸರನ್ನು ಬರೆಯುತ್ತಾರೆ. ಕೆಲವರು ನಮಗೆ ಗೊತ್ತಿಲ್ಲವೆಂದು ಬರೆಯುತ್ತಾರೆ. ಅರೆ! ನೀವು
ಲೌಕಿಕ ತಂದೆಯನ್ನು ಅರಿತುಕೊಂಡಿದ್ದೀರಿ ಮತ್ತು ಪಾರಲೌಕಿಕ ತಂದೆ, ಯಾರನ್ನು ನೀವು ಯಾವಾಗಲೂ
ದುಃಖದಲ್ಲಿ ನೆನಪು ಮಾಡುತ್ತೀರಿ, ಅವರನ್ನೇ ಅರಿತುಕೊಂಡಿಲ್ಲವೆ! ಹೇ ಭಗವಂತ ದಯೆ ತೋರಿಸಿ. ಹೇ
ಭಗವಂತ ಒಂದು ಮಗುವನ್ನು ಕೊಡಿ ಎಂದು ಬೇಡುತ್ತಾರಲ್ಲವೆ. ಈಗ ತಂದೆಯು ಬಹಳ ಸಹಜ ಮಾತನ್ನು
ತಿಳಿಸುತ್ತಾರೆ. ನೀವು ದೇಹಾಭಿಮಾನದಲ್ಲಿರುತ್ತೀರಿ, ಆದ್ದರಿಂದ ತಂದೆಯ ಆಸ್ತಿಯ ನಶೆಯೇರುವುದಿಲ್ಲ.
ನಿಮಗಂತೂ ಬಹಳ ನಶೆಯೇರಬೇಕು. ಭಕ್ತಿ ಮಾಡುವುದು ಭಗವಂತನೊಂದಿಗೆ ಮಿಲನ ಮಾಡುವುದಕ್ಕಾಗಿ, ಯಜ್ಞ, ತಪ,
ದಾನ-ಪುಣ್ಯ ಇತ್ಯಾದಿಗಳನ್ನು ಮಾಡುವುದೆಲ್ಲವೂ ಭಕ್ತಿಯಾಗಿದೆ. ಎಲ್ಲರೂ ಒಬ್ಬ ಭಗವಂತನನ್ನು ನೆನಪು
ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮ ಪತಿಯರಿಗೂ ಪತಿ, ತಂದೆಯರಿಗೂ
ತಂದೆಯಾಗಿದ್ದೇವೆ. ಎಲ್ಲಾ ತಂದೆಯರು ಭಗವಂತನನ್ನು ಅವಶ್ಯವಾಗಿ ನೆನಪು ಮಾಡುತ್ತಾರೆ, ಆತ್ಮರೇ ನೆನಪು
ಮಾಡುತ್ತಾರೆ. ಭೃಕುಟಿಯ ಮಧ್ಯದಲ್ಲಿ ಹೊಳೆಯುವ ನಕ್ಷತ್ರವೆಂದು ಭಲೆ ಹೇಳುತ್ತಾರೆ ಆದರೆ ಅರ್ಥವನ್ನು
ತಿಳಿಯದೆ ಹಾಗೆಯೇ ಹೇಳಿ ಬಿಡುತ್ತಾರೆ. ರಹಸ್ಯವೇನೂ ಗೊತ್ತಿಲ್ಲ, ನೀವು ಆತ್ಮನನ್ನೇ
ತಿಳಿದುಕೊಂಡಿಲ್ಲವೆಂದರೆ ಆತ್ಮದ ತಂದೆಯನ್ನು ಹೇಗೆ ತಿಳಿದುಕೊಳ್ಳುವಿರಿ? ಸಾಕ್ಷಾತ್ಕಾರವಂತೂ
ಭಕ್ತಿಮಾರ್ಗದ್ದಾಗುತ್ತದೆ, ಭಕ್ತಿಮಾರ್ಗದಲ್ಲಿ ಪೂಜೆಗಾಗಿ ದೊಡ್ಡ-ದೊಡ್ಡ ಲಿಂಗಗಳನ್ನು
ಇಟ್ಟುಕೊಳ್ಳುತ್ತಾರೆ ಏಕೆಂದರೆ ಒಂದುವೇಳೆ ಬಿಂದುವಿನ ರೂಪವನ್ನು ತೋರಿಸಿದರೆ ಯಾರೂ ತಿಳಿದುಕೊಳ್ಳಲು
ಸಾಧ್ಯವಿಲ್ಲ. ಇದು ಬಹಳ ಸೂಕ್ಷ್ಮ ಮಾತಾಗಿದೆ. ಪರಮಾತ್ಮನಿಗೆ ಅಖಂಡ ಜ್ಯೋತಿ ಸ್ವರೂಪನೆಂದು
ಹೇಳುತ್ತಾರೆ, ಅವರಿಗೆ ಬಹಳ ದೊಡ್ಡ ರೂಪವಿದೆಯೆಂದು ಮನುಷ್ಯರು ಹೇಳುತ್ತಾರೆ. ಬ್ರಹ್ಮ ಸಮಾಜದವರು
ಜ್ಯೋತಿಯನ್ನು ಪರಮಾತ್ಮನೆಂದು ಹೇಳುತ್ತಾರೆ. ಪರಮಪಿತ ಪರಮಾತ್ಮನು ಬಿಂದುವಾಗಿದ್ದಾರೆಂದು
ಪ್ರಪಂಚದಲ್ಲಿ ಯಾರಿಗೂ ಗೊತ್ತಿಲ್ಲ ಆದ್ದರಿಂದ ಗೊಂದಲದಲ್ಲಿದ್ದಾರೆ. ಮಕ್ಕಳೂ ಸಹ ಹೇಳುತ್ತಾರೆ -
ಬಾಬಾ, ಯಾರನ್ನು ನೆನಪು ಮಾಡುವುದು. ಭಕ್ತಿಯಲ್ಲಿ ಪರಮಾತ್ಮನು ದೊಡ್ಡ ಲಿಂಗ ರೂಪದಲ್ಲಿದ್ದಾರೆಂದು
ನಾವು ಕೇಳಿದ್ದೆವು, ಈಗ ಬಿಂದುವನ್ನು ಹೇಗೆ ನೆನಪು ಮಾಡುವುದು? ತಂದೆಯು ತಿಳಿಸುತ್ತಾರೆ - ಅರೆ!
ನೀವಾತ್ಮರು ಬಿಂದುವಾಗಿದ್ದೀರಿ, ನಾನೂ ಬಿಂದುವಾಗಿದ್ದೇನೆ. ಆತ್ಮವನ್ನು ಕರೆಸುತ್ತಾರೆ ಅಂದಮೇಲೆ
ಅವಶ್ಯವಾಗಿ ಇಲ್ಲಿಯೇ ಬಂದು ಕುಳಿತುಕೊಳ್ಳುತ್ತಾರೆ. ಭಕ್ತಿ ಮಾರ್ಗದಲ್ಲಿ ಯಾವ ಸಾಕ್ಷಾತ್ಕಾರ
ಇತ್ಯಾದಿಗಳಾಗುತ್ತದೆಯೋ ಅದೆಲ್ಲವೂ ಭಕ್ತಿಯಾಗಿದೆ. ಭಕ್ತಿಯನ್ನೂ ಸಹ ಒಬ್ಬರಿಗೆ ಮಾಡುವುದಿಲ್ಲ,
ಅನೇಕರನ್ನು ಭಗವಂತರನ್ನಾಗಿ ಮಾಡಿ ಬಿಟ್ಟಿದ್ದಾರೆ. ಭಕ್ತರು ಯಾರು ಭಕ್ತಿ ಮಾಡುತ್ತಾ ಇರುತ್ತಾರೆಯೋ
ಅವರಿಗೆ ಭಗವಂತನೆಂದು ಹೇಗೆ ಹೇಳುವುದು? ಒಂದುವೇಳೆ ಪರಮಾತ್ಮ ಸರ್ವವ್ಯಾಪಿ ಎಂದು ಹೇಳುವುದಾದರೆ
ಮತ್ತೆ ಯಾರ ಭಕ್ತಿ ಮಾಡುತ್ತಾರೆ? ಅದರಲ್ಲಿಯೂ ಭಿನ್ನ-ಭಿನ್ನ ಪ್ರಕಾರದ ಭಕ್ತಿ ಮಾಡುತ್ತಾರೆ.
ತಂದೆಯು ತಿಳಿಸುತ್ತಾರೆ
- ಮಕ್ಕಳೇ, ನಾವು ಇನ್ನೂ ಅನೇಕ ವರ್ಷಗಳು ಜೀವಿಸುತ್ತೇವೆಂದು ತಿಳಿಯಬೇಡಿ, ಈಗ ಸಮಯವು ಬಹಳ
ಸಮೀಪಿಸುತ್ತಾ ಹೋಗುತ್ತಿದೆ. ನಿಶ್ಚಯವನ್ನಿಡಬೇಕಾಗಿದೆ, ತಂದೆಗೆ ಬ್ರಹ್ಮಾರವರ ಮೂಲಕ ಸ್ಥಾಪನೆ
ಮಾಡಿಸಬೇಕಾಗಿದೆ. ನಾನು ಇವರ ಮೂಲಕ ನಿಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು
ತಿಳಿಸುತ್ತೇನೆಂದು ಸ್ವಯಂ ತಂದೆಯೇ ಹೇಳುತ್ತಾರೆ. ಬ್ರಹ್ಮಾರವರ ಮೂಲಕ ಸ್ಥಾಪನೆಯೆಂದು ಹೇಳುತ್ತಾರೆ
ಆದರೆ ಇದನ್ನು ತಿಳಿದುಕೊಂಡಿಲ್ಲ – ಹೊಸ ಪ್ರಪಂಚಕ್ಕೆ ವಿಷ್ಣು ಪುರಿಯೆಂದು ಹೇಳಲಾಗುತ್ತದೆ ಅರ್ಥಾತ್
ವಿಷ್ಣುವಿನ ಎರಡು ರೂಪಗಳಾದ ಲಕ್ಷ್ಮೀ-ನಾರಾಯಣರು ರಾಜ್ಯ ಮಾಡುತ್ತಿದ್ದರು. ವಿಷ್ಣು ಯಾರೆಂಬುದು
ಯಾರಿಗೂ ತಿಳಿದಿಲ್ಲ. ನಿಮಗೆ ತಿಳಿದಿದೆ - ಈ ಬ್ರಹ್ಮಾ ಸರಸ್ವತಿಯೇ ಈ ವಿಷ್ಣುವಿನ ಎರಡು ರೂಪ
ಲಕ್ಷ್ಮೀ-ನಾರಾಯಣರಾಗಿ ಪಾಲನೆ ಮಾಡುತ್ತಾರೆ. ಬ್ರಹ್ಮನ ಮೂಲಕ ಸ್ಥಾಪನೆ, ವಿಷ್ಣು ಪುರಿ ಅರ್ಥಾತ್
ಮತ್ತೆ ಸ್ವರ್ಗದ ಪಾಲನೆ ಮಾಡುತ್ತಾರೆ. ನಿಮ್ಮ ಬುದ್ಧಿಯಲ್ಲಿ ಬರಬೇಕಾಗಿದೆ - ತಂದೆಯು ಜ್ಞಾನ
ಸಾಗರನಾಗಿದ್ದಾರೆ, ಮನುಷ್ಯ ಸೃಷ್ಟಿಯ ಬೀಜ ರೂಪನಾಗಿದ್ದಾರೆ. ಅವರು ಈ ಡ್ರಾಮಾದ
ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದಾರೆ, ಅವರೇ ಪತಿತ-ಪಾವನನಾಗಿದ್ದಾರೆ. ಆ ತಂದೆಯ
ಕರ್ತವ್ಯವೇ ನಿಮ್ಮ ಕರ್ತವ್ಯವಾಗಿದೆ. ನೀವೂ ಸಹ ಪತಿತರಿಂದ ಪಾವನರನ್ನಾಗಿ ಮಾಡುತ್ತೀರಿ.
ಪ್ರಪಂಚದಲ್ಲಿ ಒಬ್ಬ ತಂದೆಗೆ 3-4 ಜನ ಮಕ್ಕಳಿದ್ದರೆ ಅವರಲ್ಲಿ ಕೆಲವರು ಬಹಳ ಉತ್ತಮ
ಉದ್ಯೋಗದಲ್ಲಿರುತ್ತಾರೆ, ಇನ್ನೂ ಕೆಲವರು ಬಹಳ ಕನಿಷ್ಟ ಮಟ್ಟದಲ್ಲಿರುತ್ತಾರೆ. ಇಲ್ಲಿ ನಿಮಗೆ
ತಂದೆಯು ಒಂದೇ ಉದ್ಯೋಗವನ್ನು ಕಲಿಸುತ್ತಾರೆ - ನೀವು ಪತಿತರನ್ನು ಪಾವನರನ್ನಾಗಿ ಮಾಡಿರಿ. ಎಲ್ಲರಿಗೆ
ಈ ಲಕ್ಷ್ಯವನ್ನು ಕೊಡಿ, ಶಿವ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ. ಗೀತೆಯಲ್ಲಿ
ಕೃಷ್ಣ ಭಗವಾನುವಾಚವೆಂದು ಉಲ್ಟಾ ಬರೆದಿದ್ದಾರೆ, ನೀವು ತಿಳಿಸಬೇಕಾಗಿದೆ - ಭಗವಂತನು ನಿರಾಕಾರ
ಪುನರ್ಜನ್ಮ ರಹಿತನಾಗಿದ್ದಾರೆ. ಕೇವಲ ಇದೇ ತಪ್ಪಾಗಿದೆ. ಈಗ ನೀವು ಮಕ್ಕಳು ಕೃಷ್ಣ ಪುರಿಗೆ
ಮಾಲೀಕರಾಗುತ್ತಿದ್ದೀರಿ. ಕೆಲವರು ರಾಜಧಾನಿಯಲ್ಲಿ ಬರುತ್ತಾರೆ, ಕೆಲವರು ಪ್ರಜೆಗಳಲ್ಲಿ ಬರುತ್ತಾರೆ.
ಕೃಷ್ಣ ಪುರಿಯೆಂದು ಹೇಳಲಾಗುತ್ತದೆ ಏಕೆಂದರೆ ಕೃಷ್ಣನು ಎಲ್ಲರಿಗೆ ಪ್ರಿಯನಾಗಿದ್ದಾನೆ. ಮಕ್ಕಳು
ಪ್ರಿಯರೆನಿಸುತ್ತಾರಲ್ಲವೆ. ಮಕ್ಕಳಿಗೂ ಸಹ ತಂದೆ-ತಾಯಿಯೊಂದಿಗೆ ಪ್ರೀತಿಯುಂಟಾಗುತ್ತದೆ. ಈಗ ತಂದೆಯು
ತಿಳಿಸುತ್ತಾರೆ - ನೀವು ತಮ್ಮನ್ನು ಶರೀರವೆಂದು ತಿಳಿಯಬೇಡಿ, ಪದೇ-ಪದೇ ತನ್ನನ್ನು ಆತ್ಮ ನಿಶ್ಚಯ
ಮಾಡಿಕೊಳ್ಳಿ, ಆತ್ಮಾಭಿಮಾನಿಯಾಗಿ. ತಂದೆಯು ನಿರಾಕಾರನಾಗಿದ್ದಾರೆ, ತಿಳಿಸುವುದಕ್ಕಾಗಿ ಇಲ್ಲಿಯೇ
ಶರೀರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಶರೀರವಿಲ್ಲದೆ ತಿಳಿಸಲು ಸಾಧ್ಯವಿಲ್ಲ. ನಿಮಗಂತೂ ತಮ್ಮದೇ
ಆದ ಶರೀರವಿದೆ, ಆದರೆ ತಂದೆಯು ಈ (ಬ್ರಹ್ಮಾ) ಶರೀರವನ್ನು ಲೋನ್ ಆಗಿ ತೆಗೆದುಕೊಳ್ಳುತ್ತಾರೆ, ಬಾಕಿ
ಇದರಲ್ಲಿ ಪ್ರೇರಣೆಯ ಮಾತಿಲ್ಲ. ಸ್ವಯಂ ತಂದೆಯೇ ತಿಳಿಸುತ್ತಾರೆ - ನಾನು ಈ ಶರೀರ ಧಾರಣೆ ಮಾಡಿ
ಮಕ್ಕಳಿಗೆ ಓದಿಸುತ್ತೇನೆ ಏಕೆಂದರೆ ನೀವಾತ್ಮರು ಈಗ ತಮೋಪ್ರಧಾನರಾಗಿ ಬಿಟ್ಟಿದ್ದೀರಿ ಮತ್ತೆ
ಸತೋಪ್ರಧಾನರನ್ನಾಗಿ ಮಾಡಬೇಕಾಗಿದೆ. ಪತಿತ-ಪಾವನ ಬನ್ನಿ ಎಂದು ಹಾಡುತ್ತಾರೆ ಆದರೆ ಅರ್ಥವನ್ನು
ತಿಳಿದುಕೊಂಡಿಲ್ಲ. ತಂದೆಯು ಹೇಗೆ ಬಂದು ಪಾವನರನ್ನಾಗಿ ಮಾಡುತ್ತಾರೆ ಎಂಬುದನ್ನು ನೀವೀಗ
ತಿಳಿದುಕೊಂಡಿದ್ದೀರಿ. ಇದೂ ಸಹ ನಿಮಗೆ ತಿಳಿದಿದೆ - ಸತ್ಯಯುಗದಲ್ಲಿ ಕೇವಲ ನಮ್ಮದೇ ಚಿಕ್ಕ
ವೃಕ್ಷವಿರುವುದು, ನೀವು ಸ್ವರ್ಗದಲ್ಲಿ ಹೋಗುತ್ತೀರಿ. ಬಾಕಿ ಯಾವ ಇಷ್ಟೊಂದು ಖಂಡಗಳಿವೆಯೋ ಅವುಗಳ
ಹೆಸರು, ಗುರುತೂ ಇರುವುದಿಲ್ಲ. ಭಾರತ ಖಂಡವೇ ಸ್ವರ್ಗವಾಗುವುದು. ಪರಮಪಿತ ಪರಮಾತ್ಮನು ಬಂದು
ಸ್ವರ್ಗದ ಸ್ಥಾಪನೆ ಮಾಡುತ್ತಾರೆ, ಈಗ ನರಕವಾಗಿದೆ. ಭಾರತ ಖಂಡವೇ ಪ್ರಾಚೀನವಾಗಿದೆ, ಎಲ್ಲಿ
ದೇವತೆಗಳ ರಾಜ್ಯವಿತ್ತೋ ಈಗ ಇಲ್ಲ. ಇಲ್ಲಿ ಅವರ ಮಂದಿರಗಳಿವೆ, ಚಿತ್ರಗಳಿವೆ ಅಂದಾಗ ಭಾರತದ್ದೇ
ಮಾತಾಯಿತು. ಇದು ಯಾವುದೇ ಭಾರತವಾಸಿಗಳ ಬುದ್ಧಿಯಲ್ಲಿ ಬರುವುದಿಲ್ಲ - ಭಾರತವು ಸ್ವರ್ಗವಾಗಿತ್ತು,
ಈ ಲಕ್ಷ್ಮೀ-ನಾರಾಯಣರು ಮಾಲೀಕರಾಗಿದ್ದರು, ಮತ್ತ್ಯಾವುದೇ ಖಂಡವಿರಲಿಲ್ಲ. ಈಗಂತೂ ಅನೇಕ ಧರ್ಮಗಳು
ಬಂದು ಬಿಟ್ಟಿದೆ. ಭಾರತವಾಸಿಗಳು ಧರ್ಮ ಭ್ರಷ್ಟರು, ಕರ್ಮ ಭ್ರಷ್ಟರಾಗಿ ಬಿಟ್ಟಿದ್ದಾರೆ. ಕೃಷ್ಣನಿಗೆ
ಶ್ಯಾಮ ಸುಂದರನೆಂದು ಹೇಳುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಅವಶ್ಯವಾಗಿ ಇವರು
ಕಪ್ಪಾಗಿದ್ದರಲ್ಲವೆ. ಕೃಷ್ಣನಿಗೆ ಸರ್ಪವು ಕಚ್ಚಿತು ಆದ್ದರಿಂದ ಕಪ್ಪಾಗಿ ಬಿಟ್ಟನೆಂದು ಹೇಳುತ್ತಾರೆ.
ಕೃಷ್ಣನಂತೂ ಸತ್ಯಯುಗದ ರಾಜಕುಮಾರನಾಗಿದ್ದನು ಅಂದಮೇಲೆ ಹೇಗೆ ಕಪ್ಪಾಗಿ ಬಿಟ್ಟನು! ನೀವೀಗ ಈ
ಮಾತುಗಳನ್ನು ತಿಳಿದುಕೊಂಡಿದ್ದೀರಿ. ಕೃಷ್ಣನ ತಂದೆ-ತಾಯಿಯೂ ಸಹ ಈಗ ಓದುತ್ತಿದ್ದಾರೆ. ತಂದೆ,
ತಾಯಿಗಿಂತಲೂ ಶ್ರೀಕೃಷ್ಣನು ಉತ್ತಮನೆಂದು ಗಾಯನವಿದೆ. ತಂದೆ-ತಾಯಿಯ ಹೆಸರಿಲ್ಲ, ಇಲ್ಲದಿದ್ದರೆ ಯಾವ
ತಂದೆ-ತಾಯಿಯಿಂದ ಇಂತಹ ಮಗು ಜನ್ಮ ಪಡೆದನೋ, ಆ ತಂದೆ-ತಾಯಿಯೂ ಸಹ ಎಷ್ಟು ಪ್ರಿಯರಾಗಬೇಕು ಆದರೆ
ಇಲ್ಲ. ಮಹಿಮೆಯೆಲ್ಲವೂ ರಾಧೆ-ಕೃಷ್ಣನಿಗೇ ಇದೆ, ಅವರ ತಂದೆ-ತಾಯಿಗೆ ಏನೂ ಇಲ್ಲ. ನಿಮ್ಮ
ಬುದ್ಧಿಯಲ್ಲಿ ಜ್ಞಾನವಿದೆ, ಜ್ಞಾನವು ದಿನ ಭಕ್ತಿಯು ರಾತ್ರಿಯಾಗಿದೆ. ಅಂಧಕಾರ ರಾತ್ರಿಯಲ್ಲಿ
ಮನುಷ್ಯರು ಅಲೆದಾಡುತ್ತಿರುತ್ತಾರೆ.
ಈಗ ನೀವು ಮಕ್ಕಳಿಗೆ
ತಿಳಿಸಲಾಗುತ್ತದೆ – ಮನೆಯಲ್ಲಿಯೇ ಇರಿ, ಈ ಸೇವೆಯನ್ನು ಮಾಡುತ್ತಾ ಇರಿ. ಯಾರು ಬಂದರೂ ಇದನ್ನು
ತಿಳಿಸಿ - ನೀವು ಒಬ್ಬ ಪ್ರಿಯತಮನಿಗೆ ಅರ್ಧಕಲ್ಪದ ಪ್ರಿಯತಮೆಯರಾಗಿದ್ದೀರಿ. ಭಕ್ತಿಮಾರ್ಗದಲ್ಲಿ
ಎಲ್ಲರೂ ಅವರನ್ನು ನೆನಪು ಮಾಡುತ್ತಾರೆ ಅಂದಮೇಲೆ ಪ್ರಿಯತಮೆಯರಾದರಲ್ಲವೆ. ಆದರೆ ಪ್ರಿಯತಮೆಯನ್ನು
ಪೂರ್ಣ ತಿಳಿದುಕೊಂಡಿಲ್ಲ. ಬಹಳ ಪ್ರೀತಿಯಿಂದ ನೆನಪು ಮಾಡುತ್ತಾರೆ - ಹೇ ಪ್ರಿಯತಮನೇ, ನೀವು ಬಂದರೆ
ನಾವು ಕೇವಲ ತಮ್ಮನ್ನೇ ನೆನಪು ಮಾಡುತ್ತೇವೆ, ಮತ್ತೆಲ್ಲರಿಂದ ಬುದ್ಧಿ ಯೋಗವನ್ನು ತೆಗೆದು
ತಮ್ಮೊಂದಿಗೆ ಜೋಡಿಸುತ್ತೇವೆ, ಹೀಗೆ ಹಾಡುತ್ತಿದ್ದಿರಲ್ಲವೆ. ಆದರೆ ತಂದೆಯಿಂದ ನಮಗೆ ಯಾವ ಆಸ್ತಿಯು
ಸಿಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಈಗ ತಂದೆಯು ತಿಳಿಸುತ್ತಾರೆ - ನೀವು ಆತ್ಮಾಭಿಮಾನಿಗಳಾಗಿ
ತಂದೆಯನ್ನು ನೆನಪು ಮಾಡುವುದು ನೀವು ಮಕ್ಕಳ ಮೊದಲ ಕರ್ತವ್ಯವಾಗಿದೆ. ಮಗನು ಯಾವಾಗಲೂ ತಂದೆಯನ್ನು
ಮತ್ತು ಮಗಳು ತಾಯಿಯನ್ನು ನೆನಪು ಮಾಡುತ್ತಾಳೆ, ಜೊತೆಗಾರರಲ್ಲವೆ. ನಮ್ಮ ತಂದೆಯ ಆಸ್ತಿಗೆ ನಾನು
ವಾರಸುಧಾರನಾಗುತ್ತೇನೆಂದು ಮಗನು ತಿಳಿಯುತ್ತಾನೆ ಆದರೆ ಮಗಳು ಆ ರೀತಿ ಹೇಳುವುದಿಲ್ಲ. ನಾನಂತೂ
ತಂದೆಯ ಮನೆಯಿಂದ ಮಾವನ ಮನೆಗೆ ಹೋಗಬೇಕಾಗಿದೆ ಎಂದು ಮಗಳು ತಿಳಿಯುತ್ತಾಳೆ. ಈಗ ನಿಮ್ಮದು ನಿರಾಕಾರ
ಮತ್ತು ಸಾಕಾರ ತಂದೆಯ ಮನೆಯಾಗಿದೆ. ಹೇ ಪರಮಪಿತ ಪರಮಾತ್ಮ, ದಯೆ ತೋರಿಸಿ, ದುಃಖಹರಿಸಿ ಸುಖ ಕೊಡಿ.
ನಮ್ಮನ್ನು ಮುಕ್ತರನ್ನಾಗಿ ಮಾಡಿ, ನಮಗೆ ಮಾರ್ಗದರ್ಶಕರಾಗಿ ಎಂದು ಕರೆಯುತ್ತಾರೆ ಆದರೆ ಅದರ
ಅರ್ಥವನ್ನು ದೊಡ್ಡ-ದೊಡ್ಡ ವಿದ್ವಾಂಸ, ಆಚಾರ್ಯರೂ ಸಹ ತಿಳಿದುಕೊಂಡಿಲ್ಲ. ತಂದೆಯು ಸರ್ವರ
ಮುಕ್ತಿದಾತನಾಗಿದ್ದಾರೆ. ಅವರೇ ಎಲ್ಲರ ಕಲ್ಯಾಣಕಾರಿಯಾಗಿದ್ದಾರೆ. ಬಾಕಿ ಮನುಷ್ಯರು ತಮ್ಮದೇ
ಕಲ್ಯಾಣ ಮಾಡಿಕೊಳ್ಳಲು ಸಾಧ್ಯವಿಲ್ಲ ಅಂದಮೇಲೆ ಅನ್ಯರಿಗೇನು ಮಾಡುತ್ತಾರೆ! ಇಲ್ಲಿ ತಂದೆಯು
ತಿಳಿಸುತ್ತಾರೆ - ನಾನು ಗುಪ್ತವಾಗಿ ಬರುತ್ತೇನೆ, ಖುದಾ ದೋಸ್ತನ ಕಥೆಯನ್ನು ಕೇಳಿದ್ದೀರಲ್ಲವೆ. ಈಗ
ಇದು ಕಲಿಯುಗ ಮತ್ತು ಸತ್ಯಯುಗದ ನಡುವಿನ ಸೇತುವೆಯಾಗಿದೆ. ಆ ತೀರವನ್ನು ಸೇರಬೇಕಾಗಿದೆ. ಈಗ ಖುದಾ
ತಂದೆಯೂ ಆಗಿದ್ದಾರೆ, ಜೊತೆಗಾರನೂ ಆಗಿದ್ದಾರೆ. ಮಾತಾಪಿತ, ಶಿಕ್ಷಕನ ಪಾತ್ರವನ್ನು ಅಭಿನಯಿಸುತ್ತಾನೆ.
ಇಲ್ಲಿ ನಿಮಗೆ ಸಾಕ್ಷಾತ್ಕಾರವಾದರೆ ಜಾದು ಜಾದುವೆಂದು ಹೇಳಿ ಬಿಡುತ್ತಾರೆ. ಸಾಕ್ಷಾತ್ಕಾರವಂತೂ ನೌಧಾ
ಭಕ್ತಿ ಮಾಡುವವರಿಗೂ ಸಹ ಆಗುತ್ತದೆ. ಬಹಳ ತೀವ್ರ ಭಕ್ತರಿರುತ್ತಾರೆ, ದರ್ಶನ ನೀಡಿ ಇಲ್ಲದಿದ್ದರೆ
ನಾವು ತಲೆಯನ್ನು ಕತ್ತರಿಸಿಕೊಳ್ಳುತ್ತೇವೆ ಎಂದು ಹೇಳಿದಾಗ ಸಾಕ್ಷಾತ್ಕಾರವಾಗುತ್ತದೆ, ಅದಕ್ಕೆ ನೌಧಾ
ಭಕ್ತಿಯೆಂದು ಹೇಳಲಾಗುತ್ತದೆ. ಇಲ್ಲಿ ನೌಧಾಭಕ್ತಿಯ ಮಾತಿಲ್ಲ. ಮನೆಯಲ್ಲಿ ಕುಳಿತು-ಕುಳಿತಿದ್ದಂತೆಯೇ
ಅನೇಕರಿಗೆ ಸಾಕ್ಷಾತ್ಕಾರವಾಗುತ್ತಿರುತ್ತದೆ. ದಿವ್ಯ ದೃಷ್ಟಿಯ ಬೀಗದ ಕೈ ನನ್ನ ಬಳಿಯಿದೆ.
ಅರ್ಜುನನಿಗೂ ಸಹ ನಾನು ದಿವ್ಯ ದೃಷ್ಟಿಯನ್ನು ಕೊಟ್ಟೆನಲ್ಲವೆ - ಈ ವಿನಾಶ ನೋಡಿ, ತನ್ನ ರಾಜ್ಯವನ್ನು
ನೋಡಿ ಎಂದು. ಈಗ ನನ್ನೊಬ್ಬನನ್ನೇ ನೆನಪು ಮಾಡಿದರೆ ನೀವು ಈ ರೀತಿಯಾಗುತ್ತೀರಿ. ವಿಷ್ಣು
ಯಾರೆಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಮಂದಿರವನ್ನು ಕಟ್ಟಿಸುವವರು ತಾವೇ
ತಿಳಿದುಕೊಂಡಿರುವುದಿಲ್ಲ. ವಿಷ್ಣುವಿನ ಮೂಲಕ ಪಾಲನೆಯಾಗುತ್ತದೆ, ನಾಲ್ಕು ಭುಜಗಳ ಅರ್ಥವೇ ಆಗಿದೆ -
2 ಭುಜಗಳು ಪುರುಷನದು, 2 ಭುಜಗಳು ಸ್ತ್ರೀಯದು. ವಿಷ್ಣುವಿನ ಎರಡು ರೂಪಗಳು
ಲಕ್ಷ್ಮೀ-ನಾರಾಯಣರಾಗಿದ್ದಾರೆ ಆದರೆ ಏನನ್ನೂ ತಿಳಿದುಕೊಳ್ಳುವುದಿಲ್ಲ. ಯಾವುದರ ಜ್ಞಾನವೂ ಇಲ್ಲ.
ಶಿವ ತಂದೆಯದಾಗಲಿ, ವಿಷ್ಣುವಿನದಾಗಲಿ ಏನೂ ಗೊತ್ತಿಲ್ಲ. ಮೊಟ್ಟ ಮೊದಲು ತಂದೆಯ ಆಕರ್ಷಣೆಯಿತ್ತು,
ಅನೇಕರು ಬರುತ್ತಿದ್ದರು. ಯಜ್ಞದ ಆದಿಯಲ್ಲಿ ಅಂಗಳವೆಲ್ಲವೂ ತುಂಬಿ ಹೋಗುತ್ತಿತ್ತು. ಜಡ್ಜ್,
ಮ್ಯಾಜಿಸ್ಟ್ರೇಟ್ ಎಲ್ಲರೂ ಬರುತ್ತಿದ್ದರು ನಂತರ ವಿಕಾರದ ಜಗಳವು ಪ್ರಾರಂಭವಾಯಿತು.
ಮಕ್ಕಳಾಗದಿದ್ದರೆ ಸೃಷ್ಟಿಯು ಹೇಗೆ ನಡೆಯುವುದು? ಇದಂತೂ ಸೃಷ್ಟಿಯನ್ನು ವೃದ್ಧಿ ಮಾಡುವ
ಖಾಯಿದೆಯಾಗಿದೆ ಎಂದು ಹೇಳ ತೊಡಗಿದರು. ಭಗವಾನುವಾಚ - ಕಾಮ ಮಹಾಶತ್ರುವಾಗಿದೆ, ಅದರ ಮೇಲೆ ಜಯ
ಗಳಿಸಬೇಕೆಂಬ ಗೀತೆಯ ಮಾತನ್ನೇ ಮರೆತು ಹೋದರು. ಸ್ತ್ರೀ-ಪುರುಷ ಇಬ್ಬರೂ ಒಟ್ಟಿಗೆ ಬಂದರೆ ಅವರಿಗೆ
ಜ್ಞಾನ ಕೊಡಿ, ಒಬ್ಬರೇ ಕೊಡಬೇಡಿ ಎಂದು ಹೇಳತೊಡಗಿದರು. ಇಬ್ಬರು ಬರಬೇಕಲ್ಲವೆ. ಇಬ್ಬರು ಒಟ್ಟಿಗೆ
ಬಂದರೂ ಸಹ ಒಬ್ಬರು ಜ್ಞಾನವನ್ನು ಚೆನ್ನಾಗಿ ತಿಳಿದುಕೊಳ್ಳುತ್ತಾರೆ, ಕೆಲವರು
ತಿಳಿದುಕೊಳ್ಳುವುದಿಲ್ಲ. ಅದೃಷ್ಟದಲ್ಲಿಲ್ಲವೆಂದರೆ ಏನು ಮಾಡಲು ಸಾಧ್ಯ! ಒಬ್ಬರು ಹಂಸ, ಇನ್ನೊಬ್ಬರು
ಕೊಕ್ಕರೆಯಾಗಿ ಬಿಡುತ್ತಾರೆ. ಇಲ್ಲಿ ನೀವು ಬ್ರಾಹ್ಮಣರು ದೇವತೆಗಳಿಗಿಂತಲೂ ಉತ್ತಮರಾಗಿದ್ದೀರಿ.
ನಿಮಗೇ ತಿಳಿದಿದೆ - ನಾವು ಈಶ್ವರೀಯ ಸಂತಾನರಾಗಿದ್ದೇವೆ, ಶಿವ ತಂದೆಯ ಮಕ್ಕಳಾಗಿದ್ದೇವೆ.
ಸ್ವರ್ಗದಲ್ಲಿ ನಿಮಗೆ ಈ ಜ್ಞಾನವೇ ಇರುವುದಿಲ್ಲ. ನಿರಾಕಾರಿ ಪ್ರಪಂಚ, ಮುಕ್ತಿಧಾಮದಲ್ಲಿದ್ದಾಗಲೂ ಈ
ಜ್ಞಾನವಿರುವುದಿಲ್ಲ. ಈ ಜ್ಞಾನವು ಶರೀರದ ಜೊತೆಯಲ್ಲಿಯೇ ಸಮಾಪ್ತಿಯಾಗಿ ಬಿಡುತ್ತದೆ. ಈಗ ನಿಮಗೆ
ಜ್ಞಾನವಿದೆ - ಒಬ್ಬ ತಂದೆಯು ಓದಿಸುತ್ತಿದ್ದಾರೆ. ಈಗ ಈ ಆಟವು ಮುಕ್ತಾಯವಾಗುತ್ತದೆ. ಎಲ್ಲಾ
ಪಾತ್ರಧಾರಿಗಳು ಹಾಜರಿದ್ದಾರೆ. ತಂದೆಯೂ ಬಂದಿದ್ದಾರೆ. ಅಳಿದುಳಿದ ಆತ್ಮಗಳೂ ಸಹ ಬರುತ್ತಿದ್ದಾರೆ,
ಯಾವಾಗ ಎಲ್ಲರೂ ಬಂದು ಬಿಡುವರೋ ಆಗ ವಿನಾಶವಾಗುವುದು ಮತ್ತೆ ತಂದೆಯು ಎಲ್ಲರನ್ನೂ ಕರೆದುಕೊಂಡು
ಹೋಗುವರು, ಎಲ್ಲರೂ ಹೋಗಬೇಕಾಗಿದೆ. ಈ ಪತಿತ ಪ್ರಪಂಚದ ವಿನಾಶವಾಗಲಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಪತಿತರಿಂದ
ಪಾವನರನ್ನಾಗಿ ಮಾಡುವ ಕರ್ತವ್ಯ ಯಾವುದು ತಂದೆಯದಾಗಿದೆಯೋ ಅದೇ ಕರ್ತವ್ಯ ಮಾಡಬೇಕಾಗಿದೆ. ಎಲ್ಲರಿಗೆ
ಲಕ್ಷ್ಯವನ್ನು ಕೊಡಬೇಕು - ತಂದೆಯನ್ನು ನೆನಪು ಮಾಡಿ ಮತ್ತು ಪಾವನರಾಗಿರಿ.
2. ಈ ಬ್ರಾಹ್ಮಣ ಜೀವನವು
ದೇವತೆಗಳಿಗಿಂತಲೂ ಉತ್ತಮ ಜೀವನವಾಗಿದೆ, ಈ ನಶೆಯಲ್ಲಿ ಇರಬೇಕಾಗಿದೆ. ಮತ್ತೆಲ್ಲದರಿಂದ
ಬುದ್ಧಿಯೋಗವನ್ನು ತೆಗೆದು ಒಬ್ಬ ಪ್ರಿಯತಮನನ್ನು ನೆನಪು ಮಾಡಬೇಕಾಗಿದೆ.
ವರದಾನ:
ತ್ಯಾಗ ಹಾಗೂ
ಸ್ನೇಹದ ಶಕ್ತಿಯ ಮೂಲಕ ಸೇವೆಯಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಸ್ನೇಹಿ-ಸಹಯೋಗಿ ಭವ.
ಹೇಗೆ ಆರಂಭದಲ್ಲಿ
ಜ್ಞಾನದ ಶಕ್ತಿಯು ಕಡಿಮೆಯಿತ್ತು ಆದರೆ ತ್ಯಾಗ ಹಾಗೂ ಸ್ನೇಹದ ಆಧಾರದಿಂದ ಸಫಲತೆಯು ಸಿಕ್ಕಿತು.
ಬುದ್ಧಿಯಲ್ಲಿ ಹಗಲು-ರಾತ್ರಿ ಬಾಬಾ ಮತ್ತು ಯಜ್ಞದ ಕಡೆ ಲಗನ್ ಇತ್ತು. ಬಹಳ ಪ್ರೀತಿಯಿಂದ ಬಾಬಾ
ಮತ್ತು ಯಜ್ಞ ಎಂಬ ಶಬ್ಧವು ಹೊರ ಬರುತ್ತಿತ್ತು. ಇದೇ ಸ್ನೇಹವು ಎಲ್ಲರನ್ನೂ ಸಹಯೋಗದಲ್ಲಿ ಕರೆತಂದಿತು.
ಇದೇ ಶಕ್ತಿಯಿಂದ ಕೇಂದ್ರವಾಯಿತು. ಸಾಕಾರನ ಸ್ನೇಹದಿಂದಲೇ ಮನ್ಮನಾಭವ ಆದೆವು, ಸಾಕಾರನ ಸ್ನೇಹವೇ
ಸಹಯೋಗಿಯನ್ನಾಗಿ ಮಾಡಿತು. ಈಗಲೂ ತ್ಯಾಗ ಹಾಗೂ ಸ್ನೇಹದ ಶಕ್ತಿಯಿಂದ ಮುತ್ತಿಗೆ ಹಾಕುತ್ತೀರೆಂದರೆ
ಸಫಲತೆಯು ಸಿಕ್ಕಿ ಬಿಡುವುದು.
ಸ್ಲೋಗನ್:
ಸೂಕ್ಷ್ಮ ದೇವತೆ
ಆಗಬೇಕೆಂದರೆ ವ್ಯರ್ಥ ಮಾತು ಅಥವ ಬೇಸರ ಪಡಿಸುವ ಮಾತುಗಳಿಂದ ಮುಕ್ತರಾಗಿರಿ.
ಅವ್ಯಕ್ತ ಸೂಚನೆ:– “ಸದಾ
ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ”
ಯಾವುದೇ ಮಾತು ಬರಲಿ
ಪ್ರಕೃತಿಯಿಂದ ಆಗಲಿ, ವ್ಯಕ್ತಿಗಳಿಂದ ಆಗಲಿ, ಯಾವುದು ಸಹ ಅಚಲ ಸ್ಥಿತಿಯ ಆಸನವನ್ನು ಸ್ವಲ್ಪವು
ಅಲುಗಾಡಿಸಬಾರದು. ಇಷ್ಟು ಪಕ್ಕಾ ಆಗಿದ್ದೀರಿ ಅಲ್ಲವೇ! ನೋಡಿ ಹೇಗೆ ಶರೀರ ಒಂದು ವೇಳೆ ಆಸನದ ಮೇಲೆ
ಸ್ಥಿರವಾಗಿ ಇರುವುದಿಲ್ಲ ಎಂದರೆ ಏರು ಪೇರು ಮಾಡುತ್ತದೆ! ಇದೇ ರೀತಿ ಮನಸ್ಸು ಏರುಪೇರು
ಮಾಡುವುದಿಲ್ಲವೇ? ಸದಾ ಅಡೋಲ, ಸ್ವಲ್ಪವು ಏರು ಪೇರು ಇರದಿರಲಿ. ಒಂದುವೇಳೆ ಕೆಲವೊಮ್ಮೆ ಏರುಪೇರು
ಕೆಲವೊಮ್ಮೆ ಸ್ಥಿರ ಆಗಿರುತ್ತೀರಿ ಎಂದರೆ ಸಿಂಹಾಸನವು ಸಹ ಕೆಲವೊಮ್ಮೆ ಸಿಗುವುದು, ಕೆಲವೊಮ್ಮೆ
ಸಿಗುವುದಿಲ್ಲ.