11.06.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ:- ಈಗ ನೀವು ಸಂಪೂರ್ಣರಾಗಬೇಕಾಗಿದೆ ಏಕೆಂದರೆ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಮತ್ತು ಪುನಃ ಪಾವನ ಪ್ರಪಂಚಕ್ಕೆ ಬರಬೇಕಾಗಿದೆ”

ಪ್ರಶ್ನೆ:
ಸಂಪೂರ್ಣ ಪಾವನರಾಗುವ ಯುಕ್ತಿ ಯಾವುದು?

ಉತ್ತರ:
ಸಂಪೂರ್ಣ ಪಾವನರಾಗಲು ಪೂರ್ಣ ಭಿಕಾರಿ (ಬಡವರು) ಆಗಬೇಕು. ದೇಹ ಸಹಿತವಾಗಿ ಎಲ್ಲಾ ಸಂಬಂಧಗಳನ್ನು ಮರೆಯಿರಿ ಮತ್ತು ನನ್ನನ್ನು ನೆನಪು ಮಾಡಿರಿ ಆಗ ಪಾವನರಾಗುತ್ತಿರಿ. ಈಗ ನೀವು ಈ ಕಣ್ಣುಗಳಿಂದ ಏನೇನು ನೋಡುತ್ತೀರಿ ಇದೆಲ್ಲವೂ ವಿನಾಶವಾಗಲಿದೆ ಆದ್ದರಿಂದ ಹಣ, ಸಂಪತ್ತು, ವೈಭವ ಮುಂತಾದುದೆಲ್ಲವನ್ನೂ ಮರೆತು ಪೂರ್ಣ ಭಿಕಾರಿಗಳಾಗಿರಿ. ಇಂತಹ ಭಿಕಾರಿಗಳೇ ರಾಜಕುಮಾರರಾಗುತ್ತಾರೆ.

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆ ತಿಳಿಸುತ್ತಾರೆ. ಮಕ್ಕಳು ಇದನ್ನಂತೂ ಬಹಳ ಚೆನ್ನಾಗಿ ತಿಳಿದುಕೊಂಡಿರುವಿರಿ- ಪ್ರಾರಂಭದಲ್ಲಿ ಎಲ್ಲ್ಲಾ ಆತ್ಮಗಳು ಪವಿತ್ರರಾಗಿರುತ್ತವೆ. ನಾವೇ ಪಾವನರಾಗಿದ್ದೆವು. ಪತಿತ ಮತ್ತು ಪಾವನ ಎಂದು ಆತ್ಮಕ್ಕೆ ಹೇಳಲಾಗುತ್ತದೆ. ಆತ್ಮವು ಪಾವನವಾಗಿದ್ದಾಗ ಸುಖವಿರುತ್ತದೆ. ಇದು ಬುದ್ಧಿಯಲ್ಲಿ ಬರುತ್ತದೆ - ನಾವು ಪಾವನರಾದಾಗ ಪ್ರಪಂಚದ ಮಾಲೀಕರಾಗುತ್ತೇವೆ ಇದಕ್ಕಾಗಿಯೇ ಪುರುಷಾರ್ಥ ಮಾಡುತ್ತಿದ್ದೇವೆ. 5000 ವರ್ಷಗಳ ಮೊದಲು ಪಾವನ ಪ್ರಪಂಚ ಇತ್ತು. ಅದರಲ್ಲಿ ಅರ್ಧ ಕಲ್ಪ ನೀವು ಪಾವನರಾಗಿದ್ದಿರಿ, ಇನ್ನು ಅರ್ಧ ಕಲ್ಪ ಉಳಿಯಿತು. ಈ ಮಾತುಗಳನ್ನು ಬೇರೆ ಯಾರೂ ತಿಳಿಯಲು ಸಾಧ್ಯವಿಲ್ಲ. ನಿಮಗೆ ತಿಳಿದಿದೆ - ಪತಿತ ಮತ್ತು ಪಾವನ, ಸುಖ ಮತ್ತು ದುಃಖ, ಹಗಲು ಮತ್ತು ರಾತ್ರಿ ಅರ್ಧ ಅರ್ಧ ಇರುತ್ತದೆ. ಯಾರು ಬಹಳ ಭಕ್ತಿ ಮಾಡಿದ್ದಾರೆ, ಯಾರು ಬುದ್ಧಿವಂತರಿದ್ದಾರೆ ಅವರೇ ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ನೀವು ಪಾವನರಾಗಿದ್ದಿರಿ. ಹೊಸ ಪ್ರಪಂಚದಲ್ಲಿ ಕೇವಲ ನೀವೇ ಇದ್ದಿರಿ, ಇನ್ನುಳಿದ ಆತ್ಮರು ಶಾಂತಿಧಾಮದಲ್ಲಿದ್ದರು. ಮೊಟ್ಟಮೊದಲು ನಾವು ಪಾವನರಾಗಿದ್ದೆವು ಮತ್ತು ಬಹಳ ಕಡಿಮೆ ಸಂಖ್ಯೆಯಲ್ಲಿದ್ದೆವು ನಂತರ ನಂಬರವಾರಾಗಿ ಮನುಷ್ಯ ಸೃಷ್ಟಿ ವೃದ್ಧಿಹೊಂದುತ್ತದೆ. ಈಗ ನೀವು ಮಧುರ ಮಕ್ಕಳಿಗೆ ಯಾರು ತಿಳಿಸುತ್ತಿದ್ದಾರೆ? ತಂದೆ. ಆತ್ಮಗಳಿಗೆ ಪರಮಾತ್ಮ ತಂದೆ ತಿಳಿಸುತ್ತಾರೆ, ಇದಕ್ಕೆ ಸಂಗಮ ಎಂದು ಹೇಳಲಾಗುತ್ತದೆ. ಇದಕ್ಕೆ ಕುಂಭ ಎಂದುಕರೆಯುತ್ತಾರೆ. ಮನುಷ್ಯರು ಈ ಸಂಗಮ ಯುಗವನ್ನು ಮರೆತುಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ - 4 ಯುಗಗಳಿವೆ, ಐದನೇಯದು ಅತೀ ಚಿಕ್ಕದಾದ ಈ ಸಂಗಮ ಯುಗವಾಗಿದೆ. ಇದರ ಆಯುಷ್ಯ ಬಹಳ ಕಡಿಮೆ ಇದೆ. ತಂದೆಯು ತಿಳಿಸುತ್ತಾರೆ - ನಾನು ವಾನಪ್ರಸ್ಥದಲ್ಲಿ, ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿಯೂ ಅಂತ್ಯದಲ್ಲಿ ಪ್ರವೇಶ ಮಾಡುತ್ತೇನೆ. ತಂದೆ ಇವರಲ್ಲಿ ಪ್ರವೇಶ ಮಾಡಿದ್ದಾರೆ, ಇವರ ಚರಿತ್ರೆಯನ್ನು ತಿಳಿಸಿದ್ದಾರೆ. ಮಕ್ಕಳೇ ನಾನು ಆತ್ಮಗಳೊಂದಿಗೆ ಮಾತನಾಡುತ್ತೇನೆ. ಪವಿತ್ರ ಜೀವಾತ್ಮ, ಅಪವಿತ್ರ ಜೀವಾತ್ಮ. ನೀವು ಮಕ್ಕಳ ಬುದ್ಧಿಯಲ್ಲಿಯೂ ಇದೆ - ಸತ್ಯಯುಗದಲ್ಲಿ ಬಹಳ ಕಡಿಮೆ ದೇವಿ ದೇವತೆಗಳಿರುತ್ತಾರೆ ಮತ್ತು ತಮಗಾಗಿಯೂ ಹೇಳುತ್ತೀರಿ - ನಾವು ಜೀವಾತ್ಮರು ಸತ್ಯಯುಗದಲ್ಲಿ ಪಾವನರಾಗಿದ್ದೆವು ಮತ್ತೆ ನಾವೇ 84 ಜನ್ಮಗಳ ನಂತರ ಪತಿತರಾಗಿದ್ದೇವೆ. ಪತಿತರಿಂದ ಪಾವನ ಮತ್ತು ಪಾವನರಿಂದ ಪತಿತ- ಈ ಚಕ್ರವೂ ಸುತ್ತುತ್ತಲೇ ಇರುತ್ತದೆ. ನೆನಪು ಸಹ ಆ ಪತಿತ ಪಾವನ ತಂದೆಯನ್ನೇ ಮಾಡುತ್ತಾರೆ. ಆದ್ದರಿಂದ ತಂದೆ 5000 ವರ್ಷಗಳಲ್ಲಿ ಒಂದೇ ಬಾರಿ ಬರುತ್ತಾರೆ, ಬಂದು ಸ್ವರ್ಗದ ಸ್ಥಾಪನೆ ಮಾಡುತ್ತಾರೆ. ಭಗವಂತ ಒಬ್ಬನೇ, ಅವಶ್ಯವಾಗಿ ಅವರೇ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡುತ್ತಾರೆ, ಹಾಗಾದರೆ ಹೊಸದನ್ನು ಹಳೆಯದನ್ನಾಗಿ ಮಾಡುವವರು ಯಾರು? ರಾವಣ. ಏಕೆಂದರೆ ರಾವಣನೇ ದೇಹಾಭಿಮಾನಿಯನ್ನಾಗಿ ಮಾಡುತ್ತಾನೆ. ಶತ್ರುವನ್ನು ಸುಡುತ್ತಾರೆ ಮಿತ್ರನನ್ನಲ್ಲ. ಸರ್ವರ ಮಿತ್ರ ತಂದೆ ಒಬ್ಬರೇ ಆಗಿದ್ದಾರೆ, ಅವರು ಸದ್ಗತಿ ಕೊಡುತ್ತಾರೆ. ಅವರನ್ನು ಎಲ್ಲರೂ ನೆನಪು ಮಾಡುತ್ತಾರೆ ಏಕೆಂದರೆ ಅವರು ಎಲ್ಲರಿಗೂ ಸುಖ ಕೊಡುವವರು ಆಗಿದ್ದಾರೆ. ಅಂದಮೇಲೆ ಅವಶ್ಯವಾಗಿ ದುಃಖ ಕೊಡುವವರು ಯಾರಾದರೂ ಇರಲೇಬೇಕು. ಅವನೇ ಪಂಚ ವಿಕಾರ ರೂಪಿ ರಾವಣ. ಅರ್ಧ ಕಲ್ಪ ರಾಮರಾಜ್ಯ, ಇನ್ನರ್ಧ ಕಲ್ಪ ರಾವಣನ ರಾಜ್ಯ. ಸ್ವಸ್ತಿಕ ಬರೆಯುತ್ತಾರೆ. ಇದರ ಅರ್ಥವನ್ನು ತಂದೆ ತಿಳಿಸುತ್ತಾರೆ. ಇದರಲ್ಲಿ ಸರಿಸಮವಾಗಿ ನಾಲ್ಕು ಭಾಗಗಳಿವೆ. ಸ್ವಲ್ಪವೂ ಹೆಚ್ಚು ಕಡಿಮೆ ಇರುವುದಿಲ್ಲ. ಈ ನಾಟಕವೂ ಬಹಳ ಸರಿಯಾಗಿದೆ. ನಾವು ಬಹಳ ದುಃಖಿಯಾಗಿದ್ದೇವೆ ಆದ್ದರಿಂದ ನಾಟಕದಿಂದ ಬಿಡುಗಡೆ ಆಗಬೇಕು, ಇದಕ್ಕಿಂತ ಜ್ಯೋತಿ ಜ್ಯೋತಿಯಲ್ಲಿ ಸಮಾವೇಶವಾಗಬೇಕು ಅಥವಾ ಬ್ರಹ್ಮ್ ತತ್ವದಲ್ಲಿ ಹೋಗಿ ಲೀನವಾಗಿಬಿಡಬೇಕು ಎಂದು ಕೆಲವರು ತಿಳಿಯುತ್ತಾರೆ. ಆದರೆ ಯಾರೂ ಹೋಗಲು ಸಾಧ್ಯವಿಲ್ಲ. ಏನೇನೋ ವಿಚಾರ ಮಾಡುತ್ತಾರೆ, ಭಕ್ತಿಮಾರ್ಗದಲ್ಲಿ ಭಿನ್ನ ಭಿನ್ನ ಪ್ರಯತ್ನಗಳನ್ನೂ ಮಾಡುತ್ತಾರೆ. ಸನ್ಯಾಸಿಗಳು ಶರೀರ ಬಿಟ್ಟರೆ ಸ್ವರ್ಗ ಅಥವಾ ವೈಕುಂಠಕ್ಕೆ ಹೋದರು ಎಂದು ಹೇಳುವುದಿಲ್ಲ. ಪ್ರವೃತ್ತಿ ಮಾರ್ಗದವರು ಶರೀರ ಬಿಟ್ಟರೆ ಸ್ವರ್ಗಕ್ಕೆ ಹೋದರು ಎಂದು ಹೇಳುತ್ತಾರೆ. ಆತ್ಮಗಳಿಗೆ ಸ್ವರ್ಗವು ನೆನಪಿದೆ ಅಲ್ಲವೆ! ನಿಮಗಂತೂ ಎಲ್ಲರಿಗಿಂತ ಹೆಚ್ಚು ನೆನಪಿದೆ. ನಿಮಗೆ ಇಬ್ಬರ ಇತಿಹಾಸ ಭೂಗೋಳ ಗೊತ್ತಿದೆ, ಬೇರೆ ಯಾರಿಗೂ ಗೊತ್ತಿಲ್ಲ. ನಿಮಗೂ ಗೊತ್ತಿರಲಿಲ್ಲ. ತಂದೆಯು ಕುಳಿತು ಮಕ್ಕಳಿಗೆ ಎಲ್ಲಾ ರಹಸ್ಯವನ್ನು ತಿಳಿಸುತ್ತಾರೆ.

ಇದು ಮನುಷ್ಯ ಸೃಷ್ಟಿ ರೂಪಿ ವೃಕ್ಷವಾಗಿದೆ. ವೃಕ್ಷಕ್ಕೆ ಅವಶ್ಯವಾಗಿ ಬೀಜವೂ ಇರುತ್ತದೆ. ಪಾವನ ಪ್ರಪಂಚವು ಹೇಗೆ ಪತಿತ ಆಗುತ್ತದೆ, ಮತ್ತೆ ನಾನು ಹೇಗೆ ಪಾವನ ಮಾಡುತ್ತೇನೆ ಎನ್ನುವುದನ್ನು ತಂದೆಯೇ ತಿಳಿಸುತ್ತಾರೆ. ಪಾವನ ಪ್ರಪಂಚಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಸ್ವರ್ಗವು ಕಳೆದುಹೋಯಿತು, ಪುನಃ ಅವಶ್ಯವಾಗಿ ಪುನರಾವರ್ತನೆ ಆಗುತ್ತದೆ. ಆದ್ದರಿಂದಲೇ ವಿಶ್ವದ ಇತಿಹಾಸ ಪುನರಾವರ್ತನೆ ಆಗುತ್ತದೆ ಅರ್ಥಾತ್ ವಿಶ್ವವೇ ಹಳೆಯದರಿಂದ ಹೊಸದು ಹೊಸದರಿಂದ ಹಳೆಯದಾಗುತ್ತದೆ. ಪುನರಾವರ್ತನೆಯೆಂದರೇನೆ ಡ್ರಾಮವಾಗಿದೆ. ಡ್ರಾಮ ಶಬ್ದವು ಬಹಳ ಚೆನ್ನಾಗಿದೆ, ಶೋಭಿಸುತ್ತದೆ. ಚಕ್ರವು ಚಾಚೂ ತಪ್ಪದೇ ಸುತ್ತುತ್ತದೆ. ನಾಟಕಕ್ಕೆ ಚಾಚೂ ತಪ್ಪದೇ ಎಂದು ಹೇಳಲು ಸಾಧ್ಯವಿಲ್ಲ. ಯಾರಾದರೂ ಖಾಯಿಲೆಗೊಳಗಾದರೆ ರಜೆ ತೆಗೆದುಕೊಳ್ಳುತ್ತಾರೆ. ನೀವು ಮಕ್ಕಳ ಬುದ್ಧಿಯಲ್ಲಿದೆ - ನಾವು ಪೂಜ್ಯ ದೇವತೆಗಳಾಗಿದ್ದೆವು ನಂತರ ಪೂಜಾರಿಗಳಾದೆವು. ತಂದೆಯು ಬಂದು ಪತಿತರಿಂದ ಪಾವನರಾಗುವ ಯುಕ್ತಿಯನ್ನು ತಿಳಿಸುತ್ತಾರೆ, ಇದನ್ನು 5000 ವರ್ಷಗಳ ಹಿಂದೆಯೂ ತಿಳಿಸಿದ್ದರು. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕೇವಲ ನನ್ನನ್ನು ನೆನಪು ಮಾಡಿ. ತಂದೆಯು ಮೊಟ್ಟ ಮೊದಲು ನಿಮ್ಮನ್ನು ಆತ್ಮಾಭಿಮಾನಿಯನ್ನಾಗಿ ಮಾಡುತ್ತಾರೆ. ಇದೇ ಮೊಟ್ಟಮೊದಲ ಪಾಠವನ್ನು ಓದಿಸುತ್ತಾರೆ - ಮಕ್ಕಳೇ, ತಮ್ಮನ್ನು ಆತ್ಮವೆಂದು ತಿಳಿಯಿರಿ. ತಂದೆಯನ್ನು ನೆನಪು ಮಾಡಿರಿ. ನಿಮಗೆ ಎಷ್ಟೊಂದು ನೆನಪು ತರಿಸುತ್ತೇನೆ ಆದರೂ ಮರೆತುಹೋಗುತ್ತೀರಿ! ನಾಟಕದ ಅಂತ್ಯವು ಬರುವವರೆಗೂ ಮರೆಯುತ್ತಲೇ ಇರುತ್ತೀರಿ. ಅಂತಿಮದಲ್ಲಿ ವಿನಾಶದ ಸಮಯ ಬಂದಾಗ ವಿದ್ಯಾಭ್ಯಾಸವು ಪೂರ್ಣವಾಗುವುದು ಮತ್ತೆ ನೀವು ಶರೀರ ಬಿಟ್ಟುಬಿಡುತ್ತೀರಿ. ಹೇಗೆ ಸರ್ಪವು ಸಹ ಒಂದು ಹಳೆಯ ಪೆÇರೆಯನ್ನು ಬಿಡುತ್ತದೆ. ತಂದೆ ತಿಳಿಸುತ್ತಾರೆ - ನೀವು ಕುಳಿತುಕೊಂಡಾಗ, ನಡೆಯುವಾಗ ತಿರುಗಾಡುವಾಗ ಆತ್ಮಾಭಿಮಾನಿಯಾಗಿರಿ. ಮೊದಲು ನಿಮಗೆ ದೇಹಾಭಿಮಾನವಿತ್ತು ಎಂದು ತಂದೆಯು ತಿಳಿಸುತ್ತಾರೆ. ದೇಹಾಭಿಮಾನದಲ್ಲಿ ಬರುವುದರಿಂದ ಪಂಚ ವಿಕಾರಗಳು ನಿಮ್ಮನ್ನು ಹಿಡಿದುಕೊಳ್ಳುತ್ತವೆ, ಆತ್ಮಾಭಿಮಾನಿಯಾದರೆ ಯಾವ ವಿಕಾರವೂ ಹಿಡಿದುಕೊಳ್ಳುವುದಿಲ್ಲ. ಈಗ ಆತ್ಮಭಿಮಾನಿಗಳಾಗಿ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ಈ ಸಂಗಮ ಯುಗದಲ್ಲಿ ಆತ್ಮಗಳಿಗೆ ಪರಮಾತ್ಮ ತಂದೆಯ ಪ್ರೀತಿ ಸಿಗುತ್ತದೆ. ಇದಕ್ಕೆ ಕಲ್ಯಾಣಕಾರಿ ಸಂಗಮ ಯುಗವೆಂದು ಹೇಳಲಾಗುತ್ತದೆ, ಈಗಲೇ ತಂದೆ ಮತ್ತು ಮಕ್ಕಳು ಮಿಲನ ಮಾಡುತ್ತೀರಿ. ನೀವು ಆತ್ಮಗಳು ಶರೀರದಲ್ಲಿದ್ದೀರಿ, ತಂದೆಯೂ ಸಹ ಶರೀರದಲ್ಲಿಯೇ ಬಂದು ಆತ್ಮ ನಿಶ್ಚಯ ಮಾಡಿಸುತ್ತಾರೆ. ಯಾವಾಗ ಎಲ್ಲರನ್ನೂ ಹಿಂತಿರುಗಿ ಕರೆದುಕೊಂಡು ಹೋಗಬೇಕಾಗಿರುತ್ತದೆ ಆಗ ಒಂದೇ ಬಾರಿ ತಂದೆ ಬರುತ್ತಾರೆ ಮತ್ತು ಹೇಗೆ ನಿಮ್ಮನ್ನು ಹಿಂತಿರುಗಿ ಕರೆದುಕೊಂಡು ಹೋಗುತ್ತೇನೆ ಎನ್ನುವುದನ್ನು ತಿಳಿಸುತ್ತಾರೆ. ನೀವೂ ಹೇಳುತ್ತಿರಿ - ನಾವು ಪತಿತರಾಗಿದ್ದೇವೆ, ನೀವು ಪಾವನರಾಗಿದ್ದಿರಿ, ನೀವು ಬಂದು ನಮ್ಮನ್ನು ಪಾವನರನ್ನಾಗಿ ಮಾಡಿರಿ. ಆದರೆ ತಂದೆ ಬಂದು ಹೇಗೆ ಪಾವನ ಮಾಡುತ್ತಾರೆ ಎನ್ನುವುದು ನೀವು ಮಕ್ಕಳಿಗೆ ಗೊತ್ತಿಲ್ಲ. ಎಲ್ಲಿಯವರೆಗೆ ತಂದೆ ಬಂದು ಪಾವನ ಮಾಡುವುದಿಲ್ಲವೋ ಅಲ್ಲಿಯವರೆಗೆ ಹೇಗೆ ತಿಳಿಯುತ್ತೀರಿ! ನೀವು ಇದನ್ನೂ ತಿಳಿದುಕೊಂಡಿದ್ದೀರಿ – ಆತ್ಮವು ಚಿಕ್ಕ ನಕ್ಷತ್ರವಾಗಿದೆ, ತಂದೆಯೂ ಸೂಕ್ಷ್ಮ ನಕ್ಷತ್ರವಾಗಿದ್ದಾರೆ. ಆದರೆ ಅವರು ಜ್ಞಾನಸಾಗರ, ಶಾಂತಿಯ ಸಾಗರರಾಗಿದ್ದಾರೆ, ನಿಮ್ಮನ್ನೂ ತಮ್ಮ ಸಮಾನ ಮಾಡುತ್ತಾರೆ. ಈ ಜ್ಞಾನವು ನೀವು ಮಕ್ಕಳಿಗಿದೆ. ಮತ್ತೆ ನೀವು ಇದನ್ನು ಎಲ್ಲರಿಗೂ ತಿಳಿಸುತ್ತಿರಿ. ಸತ್ಯಯುಗದಲ್ಲಿದ್ದಾಗ ಜ್ಞಾನ ತಿಳಿಸುತ್ತೀರೇನು? ಇಲ್ಲ. ಜ್ಞಾನಸಾಗರ ತಂದೆ ಒಬ್ಬರೇ ಆಗಿದ್ದಾರೆ, ನಿಮಗೆ ಈ ಸಮಯದಲ್ಲಿಯೇ ಓದಿಸುತ್ತಾರೆ. ಎಲ್ಲರ ಜೀವನ ಕಥೆ ಇರಬೇಕಲ್ಲವೆ! ಅದನ್ನು ತಂದೆಯು ತಿಳಿಸುತ್ತಲೇ ಇರುತ್ತಾರೆ. ಆದರೆ ನೀವು ಪದೇ ಪದೇ ಮರೆತುಹೋಗುತ್ತಿರಿ. ಮಾಯೆಯ ಜೊತೆ ನಿಮ್ಮ ಯುದ್ಧವಾಗಿದೆ. ನೀವಿದನ್ನು ಅನುಭವ ಮಾಡುತ್ತೀರಿ. ನಾವು ತಂದೆಯನ್ನು ನೆನಪು ಮಾಡುತ್ತೇವೆ ಮತ್ತು ಮರೆತುಹೋಗುತ್ತೇವೆ. ಮಾಯೆಯೇ ನಿಮ್ಮ ಶತ್ರುವಾಗಿದೆ, ನಿಮ್ಮನ್ನು ಮರೆಸಿಬಿಡುತ್ತದೆ ಅರ್ಥಾತ್ ತಂದೆಯಿಂದ ವಿಮುಖರನ್ನಾಗಿ ಮಾಡುತ್ತದೆ. ನೀವು ಮಕ್ಕಳೂ ಸಹ ಕಲ್ಪದಲ್ಲಿ ಒಂದು ಬಾರಿ ಮಾತ್ರ ತಂದೆಯ ಸನ್ಮುಖದಲ್ಲಿರುತ್ತೀರಿ. ತಂದೆಯೂ ಸಹ ಒಂದೇ ಬಾರಿ ನಿಮಗೆ ಆಸ್ತಿ ಕೊಡುತ್ತಾರೆ. ಪುನಃ ತಂದೆ ಸನ್ಮುಖದಲ್ಲಿ ಬರುವ ಅವಶ್ಯಕತೆ ಇರುವುದಿಲ್ಲ. ಪಾಪಾತ್ಮರಿಂದ ಪುಣ್ಯಾತ್ಮರು, ಸ್ವರ್ಗದ ಮಾಲೀಕರನ್ನಾಗಿ ಮಾಡಿದರೆಂದರೆ ಅಷ್ಟೇ ಮತ್ತೆ ಬಂದು ಇನ್ನೇನು ಮಾಡುತ್ತಾರೆ? ನೀವು ಕರೆದಿರಿ ನಾನು ನನ್ನ ಸಮಯಾನುಸಾರ ಬಂದೆನು, ಪ್ರತಿ 5000 ವರ್ಷಗಳ ನಂತರ ನಾನು ನನ್ನ ಸಮಯದಲ್ಲಿ ಬರುತ್ತೇನೆ, ಇದು ಯಾರಿಗೂ ಗೊತ್ತಿಲ್ಲ. ಶಿವರಾತ್ರಿ ಏಕೆ ಆಚರಿಸುತ್ತಾರೆ, ಅವರು ಏನು ಮಾಡಿದರು? ಇದನ್ನು ಯಾರೂ ತಿಳಿದುಕೊಂಡಿಲ್ಲ. ಆದ್ದರಿಂದ ಶಿವರಾತ್ರಿಯಂದು ರಜೆ ಸಹ ಕೊಡುವುದಿಲ್ಲ. ಮತ್ತೆಲ್ಲದಕ್ಕೂ ರಜೆ ಕೊಡುತ್ತಾರೆ ಆದರೆ ಶಿವ ತಂದೆಯು ಬರುತ್ತಾರೆ, ಇಷ್ಟೊಂದು ಪಾತ್ರವನ್ನಭಿನಯಿಸುತ್ತಾರೆ, ಆದರೆ ಅವರ ಬಗ್ಗೆ ಯಾರಿಗೂ ತಿಳಿದಿಲ್ಲ. ಅರ್ಥವನ್ನೇ ತಿಳಿದುಕೊಂಡಿಲ್ಲ. ಭಾರತದಲ್ಲಿ ಎಷ್ಟೊಂದು ಅಜ್ಞಾನವಿದೆ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಶಿವ ತಂದೆಯೇ ಸರ್ವಶ್ರೇಷ್ಠವಾಗಿದ್ದಾರೆ, ಆದುದರಿಂದ ಅವಶ್ಯವಾಗಿ ಮನುಷ್ಯರನ್ನು ಸರ್ವ ಶ್ರೇಷ್ಠರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಇವರಿಗೆ ಜ್ಞಾನ ತಿಳಿಸಿದೆನು, ಯೋಗ ಕಲಿಸಿದೆನು ನಂತರ ಇವರು ನರನಿಂದ ನಾರಾಯಾಣರಾದರು. ಅವರು ಈ ಜ್ಞಾನವನ್ನು ಕೇಳಿದ್ದಾರೆ, ಈ ಜ್ಞಾನವು ಭಾರತಕ್ಕಾಗಿಯೇ ಇದೆ ಮತ್ತೆ ಯಾರಿಗೂ ಶೋಭಿಸುವುದಿಲ್ಲ ಆದ್ದರಿಂದ ನೀವೇ ಪುನಃ ದೇವತೆಗಳಾಗಬೇಕಾಗಿದೆ, ಮತ್ತ್ಯಾರೂ ಆಗುವುದಿಲ್ಲ. ಇದು ನರನಿಂದ ನಾರಾಯಣನಾಗುವ ಕಥೆ ಆಗಿದೆ. ಉನ್ನುಳಿದ ಧರ್ಮಗಳನ್ನು ಸ್ಥಾಪನೆ ಮಾಡಿದವರು ಪುನರ್ಜನ್ಮ ಪಡೆಯುತ್ತಾ ಪಡೆಯುತ್ತಾ ತಮೋಪ್ರಧಾನರಾಗಿದ್ದಾರೆ, ಅವರೆಲ್ಲರೂ ಪುನಃ ಸತೋಪ್ರಧಾನ ಆಗಬೇಕಾಗಿದೆ. ಆ ಪದವಿಯನುಸಾರವಾಗಿ ಪುನರಾವರ್ತನೆ ಆಗುತ್ತದೆ. ಶ್ರೇಷ್ಠ ಪಾತ್ರಧಾರಿಯಾಗಲು ನೀವು ಎಷ್ಟು ಪುರುಷಾರ್ಥ ಮಾಡುತ್ತಿದ್ದೀರಿ. ಪುರುಷಾರ್ಥ ಯಾರು ಮಾಡಿಸುತ್ತಾರೆ? ತಂದೆ. ನೀವು ಶ್ರೇಷ್ಠ ಆದನಂತರ ಎಂದೂ ನೆನಪು ಮಾಡುವುದಿಲ್ಲ. ಸ್ವರ್ಗದಲ್ಲಿ ನೆನಪು ಮಾಡುವಿರೇನು! ಶ್ರೇಷ್ಠಾತಿ ಶ್ರೇಷ್ಠ ತಂದೆಯಾಗಿದ್ದಾರೆ ಅಂದ ಮೇಲೆ ಶ್ರೇಷ್ಠರನ್ನಾಗಿಯೇ ಮಾಡುತ್ತಾರೆ. ನಾರಾಯಣನಿಗಿಂತ ಮೊದಲು ಶ್ರೀ ಕೃಷ್ಣ. ಆದರೂ ನರನಿಂದ ನಾರಾಯಣ ಎಂದು ಏಕೆ ಹೇಳುತ್ತಿರಿ? ನರನಿಂದ ಕೃಷ್ಣ ಎಂದು ಏಕೆ ಹೇಳುವುದಿಲ್ಲ? ಮೊದಲು ನಾರಾಯಣ ಆಗುತ್ತಾರೆಯೇ. ಮೊದಲು ಶ್ರೀ ಕೃಷ್ಣ ರಾಜಕುಮಾರನಾಗುತ್ತಾನೆ. ಮಕ್ಕಳು ಹೂವಾಗಿರುತ್ತಾರೆ. ಅವರು ನಂತರ ಯುಗಲ್(ದಂಪತಿ) ಆಗುತ್ತಾರೆ. ಬ್ರಹ್ಮಚಾರಿಗಳ ಮಹಿಮೆ ಅಗುತ್ತದೆ, ಚಿಕ್ಕ ಮಕ್ಕಳಿಗೆ ಸತೋಪ್ರಧಾನ ಎಂದು ಹೇಳಲಾಗುತ್ತದೆ, ನೀವು ಮಕ್ಕಳಿಗೆ ನಾವು ಮೊದಲು ರಾಜಕುಮಾರ ಆಗುತ್ತೇವೆ ಎನ್ನುವ ವಿಚಾರ ಬರಬೇಕು. ಗಾಯನವೂ ಇದೆ - ಭಿಕಾರಿಯಿಂದ ರಾಜಕುಮಾರ. ಭಿಕಾರಿ ಎಂದು ಯಾರಿಗೆ ಕರೆಯುತ್ತಾರೆ? ಆತ್ಮಕ್ಕೆ ಶರೀರದ ಜೊತೆ ಇದ್ದಾಗ ಭಿಕಾರಿ ಅಥವಾ ಸಾಹುಕಾರ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಎಲ್ಲರೂ ಭಿಕಾರಿಯಾಗಿದ್ದಾರೆ ಎಂದು ನೀವು ತಿಳಿದಿದ್ದೀರಿ. ಎಲ್ಲವೂ ಸಮಾಪ್ತಿ ಆಗಲಿದೆ. ನೀವು ಈ ಸಮಯದಲ್ಲಿಯೇ ಶರೀರ ಸಹಿತವಾಗಿ ಭಿಕಾರಿಗಳಾಗಬೇಕು. ಏನೇನು ಬಿಡುಗಾಸಿದೆಯೋ ಅದು ಸಮಾಪ್ತಿ ಆಗಲಿದೆ, ಆತ್ಮವು ಭಿಕಾರಿ ಆಗಬೇಕಾಗಿದೆ. ಎಲ್ಲವನ್ನೂ ಬಿಡಬೇಕು ಆಗ ರಾಜಕುಮಾರ ಆಗಲು ಸಾಧ್ಯ. ನಿಮಗೂ ತಿಳಿದಿದೆ - ಹಣ, ಅಧಿಕಾರ ಎಲ್ಲವನ್ನೂ ಬಿಟ್ಟು ಭಿಕಾರಿಯಾದಾಗ ನಾವು ಮನೆಗೆ ಹೋಗುತ್ತೇವೆ ನಂತರ ರಾಜಕುಮಾರರಾಗಿ ಬರುತ್ತೇವೆ. ಈಗ ಏನೆಲ್ಲ ಇದೆ ಅದನ್ನು ಬಿಡಬೇಕು. ಹಳೆಯ ಯಾವ ವಸ್ತುಗಳು ಕೆಲಸಕ್ಕೆ ಬರುವುದಿಲ್ಲ. ಆತ್ಮ ಪವಿತ್ರ ಆಗುತ್ತದೆ ನಂತರ ಇಲ್ಲಿ ಪಾತ್ರವನ್ನಭಿನಯಿsಸಲು ಕಲ್ಪದ ಹಿಂದಿನಂತೆ ಬರುತ್ತದೆ. ಎಷ್ಟು ನೀವು ಧಾರಣೆ ಮಾಡುತ್ತೀ ಅಷ್ಟು ಶ್ರೇಷ್ಠ ಪದವಿ ಪಡೆಯುತ್ತೀರಿ, ಭಲೆ ಈ ಸಮಯದಲ್ಲಿ ಯಾರ ಬಳಿಯಾದರೂ 5 ಕೋಟಿಯಷ್ಟು ಹಣವಿರಬಹುದು ಆದರೆ ಎಲ್ಲವೂ ಸಮಾಪ್ತಿ ಆಗುತ್ತದೆ. ನಾವು ಪುನಃ ನಮ್ಮ ಹೊಸ ಪ್ರಪಂಚಕ್ಕೆ ಹೋಗುತ್ತೇವೆ. ಇಲ್ಲಿ ನೀವು ಹೊಸ ಪ್ರಪಂಚಕ್ಕೆ ಹೋಗಲು ಬಂದಿರುವಿರಿ. ಯಾವುದೇ ಸತ್ಸಂಗದಲ್ಲಿ ಹೊಸ ಪ್ರಪಂಚಕ್ಕಾಗಿ ಓದುತ್ತಿದ್ದೇವೆ ಎಂದು ತಿಳಿಯುವುದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿದೆ – ತಂದೆಯು ನಮ್ಮನ್ನು ಮೊದಲು ಭಿಕಾರಿಯನ್ನಾಗಿ ಮಾಡಿ ನಂತರ ರಾಜಕುಮಾರರನ್ನಾಗಿ ಮಾಡುತ್ತಾರೆ. ದೇಹದ ಎಲ್ಲಾ ಸಂಬಂಧಗಳನ್ನು ಬಿಡುತ್ತೀರೆಂದಾಗ ಭಿಕಾರಿಗಳಾದಿರಿ ಅಲ್ಲವೆ. ಎನೂ ಇಲ್ಲ. ಈಗ ಭಾರತದಲ್ಲಿ ಎನೂ ಇಲ್ಲದಂತಾಗಿದೆ. ಭಾರತವು ಈಗ ಭಿಕಾರಿ,ದಿವಾಳಿಯಾಗಿದೆ. ನಂತರ ಸಂಪದ್ಭರಿತ ವಾಗುತ್ತದೆ. ಯಾರಾಗುತ್ತಾರೆ? ಆತ್ಮವು ಶರೀರದ ಮೂಲಕ ಆಗುತ್ತದೆ. ಈಗ ರಾಜ ರಾಣಿಯರೂ ಇಲ್ಲ. ಅವರೂ ಬಡವರಾಗಿದ್ದಾರೆ. ರಾಜ ರಾಣಿಯರಿಗೆ ಕಿರೀಟವೂ ಇಲ್ಲ, ಆ (ಪವಿತ್ರತೆಯ) ಕಿರೀಟವು ಇಲ್ಲ, ರತ್ನಜಡಿತವಾದ ಕಿರೀಟವೂ ಇಲ್ಲ. ಅಂಧಕಾರ ನಗರಿಯಾಗಿದೆ, ತಂದೆಯನ್ನು ಸರ್ವವ್ಯಾಪಿಯೆಂದು ಹೇಳುತ್ತಾರೆ ಅಂದರೆ ಎಲ್ಲರಲ್ಲಿ ಭಗವಂತನಿದ್ದಾರೆ, ಎಲ್ಲರೂ ಒಂದೇ ಸಮಾನರಾಗಿದ್ದಾರೆ. ನಾಯಿ ಬೆಕ್ಕು ಎಲ್ಲದರಲ್ಲಿ ಭಗವಂತನಿದ್ದಾರೆಂದು ಹೇಳುತ್ತಾರೆ. ಇದಕ್ಕೆ ಅಂಧಕಾರ ನಗರಿಯೆಂದು ಹೇಳಲಾಗುತ್ತದೆ. ಆಗ ನೀವು ಬ್ರಾಹ್ಮಣರ ರಾತ್ರಿಯಾಗಿದೆ, ಈಗ ತಿಳಿಯುತ್ತೀರಿ - ಜ್ಞಾನದ ಹಗಲು ಬರುತ್ತಿದೆ, ಸತ್ಯಯುಗದಲ್ಲಿ ಎಲ್ಲರೂ ಜಾಗೃತ ಜ್ಯೋತಿಗಳಾಗಿರುತ್ತಾರೆ. ಈಗಂತೂ ದೀಪವು ನಂದಿಹೋಗುವ ಸ್ಥಿತಿಯಲ್ಲಿದೆ. ಭಾರತದಲ್ಲಿಯೇ ದೀಪವನ್ನು ಬೆಳಗಿಸುವ ಪದ್ಧತಿ ಇದೆ, ಬೇರೆ ಯಾರೂ ದೀಪವನ್ನು ಬೆಳಗಿಸುವುದಿಲ್ಲ. ನಿಮ್ಮ ಜ್ಯೋತಿಯು ನಂದಿ ಹೋಗುವ ಸ್ಥಿತಿಯಲ್ಲಿದೆ. ಸತೋಪ್ರಧಾನ ವಿಶ್ವದ ಮಾಲೀಕರಾಗಿದ್ದಿರಿ, ಆ ಶಕ್ತಿಯು ಕಡಿಮೆ ಆಗುತ್ತಾ ಆಗುತ್ತಾ ಈಗ ಸ್ವಲ್ಪವೂ ಶಕ್ತಿ ಇಲ್ಲದಂತಾಗಿದೆ. ಪುನಃ ನಿಮಗೆ ಶಕ್ತಿಯನ್ನು ನೀಡಲು ತಂದೆಯು ಬಂದಿದ್ದಾರೆ. ಅವರಿಂದ ಬ್ಯಾಟರಿಯು ತುಂಬುತ್ತದೆ.ಆತ್ಮಕ್ಕೆ ಪರಮಾತ್ಮ ತಂದೆಯ ನೆನಪಿನಲ್ಲಿರುವುದರಿಂದ ಬ್ಯಾಟರಿ ತುಂಬುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತ-ಪಿತ ಬಾಪ್ದಾದಾ ಅವರ ನೆನಪು ಪೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈಗ ನಾಟಕವು ಮುಕ್ತಾಯವಾಗುತ್ತಿದೆ, ನಾವು ಹಿಂತಿರುಗಿ ಹೋಗಬೇಕಾಗಿದೆ. ಆದ್ದರಿಂದ ಆತ್ಮವನ್ನು ತಂದೆಯ ನೆನಪಿನಿಂದ ಸತೋಪ್ರಧಾನ, ಪಾವನವನ್ನಾಗಿ ಮಾಡಿಕೊಳ್ಳಬೇಕು. ತಂದೆಯ ಸಮಾನ ಜ್ಞಾನದ ಸಾಗರ, ಶಾಂತಿಯ ಸಾಗರ ಈ ಸಮಯದಲ್ಲಿಯೇ ಆಗಬೇಕಾಗಿದೆ.

2. ಈ ದೇಹದಿಂದಲೂ ಪೂರ್ಣ ಭಿಕಾರಿಗಳಾಗಲು ಬುದ್ಧಿಯಲ್ಲಿರಲಿ - ಈ ಕಣ್ಣುಗಳಿಂದ ಏನೇನು ನೋಡುತ್ತೇವೆ ಅದು ಸಮಾಪ್ತಿ ಆಗಲಿದೆ. ನಾವು ಭಿಕಾರಿಗಳಿಂದ ರಾಜಕುಮಾರರಾಗ ಬೇಕಾಗಿದೆ, ನಮ್ಮ ವಿದ್ಯೆ ಹೊಸ ಪ್ರಪಂಚಕ್ಕಾಗಿದೆ.

ವರದಾನ:
ಚಮತ್ಕಾರ ತೋರಿಸುವ ಬದಲು ಅವಿನಾಶಿ ಭಾಗ್ಯದ ಹೊಳೆಯುತ್ತಿರುವ ನಕ್ಷತ್ರ ಮಾಡುವಂತಹ ಸಿದ್ಧಿಸ್ವರೂಪ ಭವ.

ಇತ್ತೀಚಿನ ದಿನಗಳಲ್ಲಿ ಅಲ್ಪಕಾಲದ ಸಿದ್ಧಿಯವರು ಯಾರಿದ್ದಾರೆ ಅವರು ಕೊನೆಯಲ್ಲಿ ಮೇಲಿನಿಂದ ಬಂದಿರುವ ಕಾರಣ ಸತೋಪ್ರಧಾನ ಸ್ಥಿತಿಯ ಪ್ರಮಾಣ ಪವಿತ್ರತೆಯ ಫಲಸ್ವರೂಪ ಅಲ್ಪಕಾಲದ ಚಮತ್ಕಾರ ತೋರಿಸುತ್ತಾರೆ ಆದರೆ ಅವರ ಸಿದ್ಧಿ ಸದಾಕಾಲ ಇರುವುದಿಲ್ಲ ಏಕೆಂದರೆ ಸ್ವಲ್ಪ ಸಮಯದಲ್ಲೇ ಅವರು ಸತೋ, ರಜೋ, ತಮೋ ಮೂರೂ ಸ್ಟೇಜ್ಗಳನ್ನು ಪಾಸ್ ಮಾಡುತ್ತಾರೆ. ತಾವು ಪವಿತ್ರ ಆತ್ಮರು ಸದಾ ಸಿದ್ಧಿ ಸ್ವರೂಪರಾಗಿರುವಿರಿ, ಚಮತ್ಕಾರ ತೋರಿಸುವ ಬದಲು ಹೊಳೆಯುತ್ತಿರುವ ಜ್ಯೋತಿಸ್ವರೂಪರನ್ನಾಗಿ ಮಾಡುವಂತಹವರಾಗಿರುವಿರಿ. ಅವಿನಾಶಿ ಭಾಗ್ಯದ ಹೊಳೆಯುವ ನಕ್ಷತ್ರ ಮಾಡುವಂತಹವರು, ಆದ್ದರಿಂದ ಎಲ್ಲರೂ ತಮ್ಮ ಬಳಿಯೇ ಹನಿ ಪಡೆಯಲು ಬರುತ್ತಾರೆ.

ಸ್ಲೋಗನ್:
ಬೇಹದ್ದಿನ ವೈರಾಗ್ಯ ವೃತ್ತಿಯ ವಾಯುಮಂಡಲವಿದ್ದರೆ ಸಹಯೋಗಿ ಸಹಜಯೋಗಿಗಳಾಗಿಬಿಡುವಿರಿ.