11.07.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಡೆಡ್ಸೈಲೆನ್ಸ್ ಅರ್ಥಾತ್ ಅಶರೀರಿ ಆಗುವ ಸಮಯವು ಇದಾಗಿದೆ, ಇದೇ ಸ್ಥಿತಿಯಲ್ಲಿ ಇರುವ ಅಭ್ಯಾಸ ಮಾಡಿ”

ಪ್ರಶ್ನೆ:
ಎಲ್ಲದಕ್ಕಿಂತ ಉನ್ನತ ಗುರಿ ಯಾವುದು? ಅದು ಹೇಗೆ ಪ್ರಾಪ್ತಿ ಆಗುತ್ತದೆ?

ಉತ್ತರ:
ಸಂಪೂರ್ಣ ನಿರ್ವಿಕಾರಿದೃಷ್ಠಿಯವರಾಗುವುದು (ಸಿವಿಲ್ ಐ) ಶ್ರೇಷ್ಠ ಗುರಿಯಾಗಿದೆ. ಕರ್ಮೇಂದ್ರಿಯಗಳಲ್ಲಿ ಸ್ವಲ್ಪವೂ ಚಂಚಲತೆ ಬರಬಾರದು, ಆಗಲೇ ಸಂಪೂರ್ಣ ನಿರ್ವಿಕಾರಿಗಳಾಗುತ್ತೀರಿ. ಈ ಸ್ಥಿತಿ ಆದಾಗ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ. ಏರಿದರೆ ವೈಕುಂಠ ರಸ ಎಂದು ಗಾಯನವೂ ಸಹ ಇದೆ ಅರ್ಥಾತ್ ಏರಿದರೆ ರಾಜರಿಗಿಂತಲೂ ರಾಜರು ಆಗುತ್ತಾರೆ ಇಲ್ಲವೆಂದರೆ ಒಮ್ಮೆಲೆ ಪ್ರಜಾಪದವಿ. ಈಗ ಪರಿಶೀಲನೆ ಮಾಡಿಕೊಳ್ಳಿ, ನನ್ನ ವೃತ್ತಿಯು ಹೇಗಿದೆ, ಯಾವುದೇ ತಪ್ಪು ಆಗುತ್ತಿಲ್ಲವೇ?

ಓಂ ಶಾಂತಿ.
ಆತ್ಮಾಭಿಮಾನಿಗಳಾಗಿ ಕುಳಿತುಕೊಳ್ಳಬೇಕು. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿಯಿರಿ. ಈಗ ತಂದೆಯು ಆಲ್ರೌಂಡರ್ ಮಕ್ಕಳನ್ನು ಪ್ರಶ್ನೆ ಮಾಡುತ್ತಾರೆ - ಸತ್ಯಯುಗದಲ್ಲಿ ಆತ್ಮಾಭಿಮಾನಿಗಳಾಗಿರುತ್ತಾರೋ ಅಥವಾ ದೇಹಾಭಿಮಾನಿಗಳೋ? ಅಲ್ಲಂತೂ ಸಹಜವಾಗಿಯೇ ಆತ್ಮಾಭಿಮಾನಿ ಆಗಿರುತ್ತಾರೆ, ಪದೇ-ಪದೇ ನೆನಪು ಮಾಡುವ ಅವಶ್ಯಕತೆಯೇ ಇರುವುದಿಲ್ಲ. ಹಾ! ಈಗ ಈ ಶರೀರಕ್ಕೆ ವಯಸ್ಸಾಯಿತು, ಈಗ ಇದನ್ನು ಬಿಟ್ಟು ಇನ್ನೊಂದು ಹೊಸದನ್ನು ತೆಗೆದುಕೊಳ್ಳಬೇಕು ಎಂದು ಅಲ್ಲಿ ಇಷ್ಟನ್ನಂತೂ ತಿಳಿಯುತ್ತಾರೆ. ಹೇಗೆ ಸರ್ಪದ ಉದಾಹರಣೆ ಇದೆಯೋ ಹಾಗೆಯೇ ಆತ್ಮವು ಈ ಹಳೆಯ ಶರೀರವನ್ನು ಬಿಟ್ಟು ಹೊಸದನ್ನು ತೆಗೆದುಕೊಳ್ಳುತ್ತದೆ. ಭಗವಂತನು ಉದಾಹರಣೆಯನ್ನು ಕೊಟ್ಟು ತಿಳಿಸುತ್ತಾರೆ - ತಾವು ಎಲ್ಲಾ ಮನುಷ್ಯರಿಗೆ ಜ್ಞಾನದ ಬೂ-ಬೂ(ಧ್ವನಿ) ಮಾಡಿ. ತಮ್ಮ ಸಮಾನ ಜ್ಞಾನವಂತರನ್ನಾಗಿ ಮಾಡಬೇಕಾಗಿದೆ. ಅದರಿಂದ ಅವರೂ ಸಹ ಸತ್ಯಯುಗಿ ನಿರ್ವಿಕಾರಿಗಳಾಗಿಬಿಡಬೇಕು. ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವುದು ಸರ್ವ ಶ್ರೇಷ್ಠ ವಿದ್ಯೆಯಾಗಿದೆ. ಮನುಷ್ಯರನ್ನು ದೇವತೆಗಳನ್ನಾಗಿ ಮಾಡಿದರು... ಎಂಬ ಗಾಯನವಿದೆಯಲ್ಲವೇ ಅಂದಾಗ ಯಾರು ಮಾಡಿದರು? ದೇವತೆಗಳಂತೂ ಮಾಡಲಿಲ್ಲ. ಅಂದಮೇಲೆ ಭಗವಂತನೇ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ, ಮನುಷ್ಯರು ಈ ಮಾತುಗಳನ್ನು ಅರಿತುಕೊಂಡಿಲ್ಲ. ತಮ್ಮ ಗುರಿ-ಉದ್ದೇಶವೇನೆಂದು ನಿಮ್ಮನ್ನು ಎಲ್ಲಾ ಕಡೆ ಪ್ರಶ್ನಿಸುತ್ತಾರೆ ಎಂದಮೇಲೆ ಗುರಿ-ಉದ್ದೇಶದ ಬರವಣೆಗೆಯ ಚಿಕ್ಕ ಕಾರ್ಡ್ನ್ನು ಏಕೆ ಮುದ್ರಿಸಬಾರದು? ಯಾರೇ ಕೇಳಿದರೂ ಅದನ್ನು ಕೊಟ್ಟರೆ ತಿಳಿದುಕೊಳ್ಳುತ್ತಾರೆ. ತಂದೆಯು ಬಹಳ ಚೆನ್ನಾಗಿ ತಿಳಿಸಿದ್ದಾರೆ, ಈ ಸಮಯದಲ್ಲಿ ಕಲಿಯುಗಿ ಪತಿತ ಪ್ರಪಂಚವಾಗಿದೆ, ಇದರಲ್ಲಿ ಅಪರಮಪಾರ ದುಃಖವಿದೆ, ಈಗ ನಾವು ಮನುಷ್ಯರನ್ನು ಸತ್ಯಯುಗಿ ಪಾವನ ಮಹಾನ್ ಸುಖಧಾಮದಲ್ಲಿ ಕರೆದುಕೊಂಡು ಹೋಗುವ ಸೇವೆ ಮಾಡುತ್ತಿದ್ದೇವೆ ಅಥವಾ ಮಾರ್ಗವನ್ನು ತಿಳಿಸುತ್ತಿದ್ದೇವೆ ಅಂದರೆ ನಾವು ಅದ್ವೈತ ಜ್ಞಾನವನ್ನು ಕೊಡುತ್ತೇವೆ ಎಂದಲ್ಲ. ಅವರು ಶಾಸ್ತ್ರಗಳ ಜ್ಞಾನವನ್ನು ಅದ್ವೈತ ಜ್ಞಾನವೆಂದು ತಿಳಿಯುತ್ತಾರೆ. ವಾಸ್ತವದಲ್ಲಿ ಅದು ಅದ್ವೈತ ಜ್ಞಾನವೆಂದು ತಿಳಿಯುವುದೂ ತಪ್ಪಾಗಿದೆ. ಮನುಷ್ಯರಿಗೆ ಸ್ಪಷ್ಟವಾಗಿ ತಿಳಿಸಬೇಕು. ಹೀಗೆ ಬರವಣಿಗೆ ಮುದ್ರಿಸಿದ ಪತ್ರಿಕೆ ಇದ್ದಾಗ ಅದರಿಂದ ಅವರು ಇವರ ಉದ್ದೇಶವೇನು ಎಂಬುವುದನ್ನು ಬಹಳ ಬೇಗನೇ ತಿಳಿದುಕೊಳ್ಳುತ್ತಾರೆ. ಕಲಿಯುಗಿ ಪತಿತ ಭ್ರಷ್ಟಾಚಾರಿ ಪ್ರಪಂಚವನ್ನು ಅಪಾರ ದುಃಖದಿಂದ ಬಿಡಿಸಿ ಸತ್ಯಯುಗಿ ಪವಿತ್ರ, ಶ್ರೇಷ್ಠಾಚಾರಿ ಅಪಾರ ಸುಖದ ಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತೀರಿ. ತಂದೆಯು ಈ ಪ್ರಬಂಧವನ್ನು ಮಕ್ಕಳಿಗೆ ಕೊಡುತ್ತಾರೆ, ಹೀಗೆ ಸ್ಪಷ್ಟವಾಗಿ ಬರೆಯಬೇಕು. ಎಲ್ಲಾ ಸ್ಥಾನಗಳಲ್ಲಿ ಇಂತಹ ನಿಮ್ಮ ಪತ್ರಿಕೆಯನ್ನು ಇಟ್ಟಿರಬೇಕು, ತಕ್ಷಣ ಅದನ್ನು ತೆಗೆದುಕೊಡುವಂತಿರಬೇಕು, ಅದರಿಂದ ನಾವು ದುಃಖಧಾಮದಲ್ಲಿದ್ದೇವೆ, ಕೆಸರಿನಲ್ಲಿ ಇದ್ದೇವೆ ಎಂದು ಅವರಿಗೆ ತಿಳಿಯಬೇಕು. ನಾವು ಕಲಿಯುಗಿ ಪತಿತ ದುಃಖಧಾಮದ ಮನುಷ್ಯರಾಗಿದ್ದೇವೆ, ಇವರು ನಮ್ಮನ್ನು ಅಪಾರ ಸುಖದಲ್ಲಿ ಕರೆದುಕೊಂಡು ಹೋಗುತ್ತಾರೆಂಬುದು ಮನುಷ್ಯರಿಗೆ ತಿಳಿದಿಲ್ಲ ಆದರಿಂದ ಇಂತಹ ಒಂದು ಒಳ್ಳೆಯ ಕಾರ್ಡ್ನ್ನು ಮುದ್ರಿಸಿಡಬೇಕು. ಹೇಗೆ ನೀವು ಸತ್ಯಯುಗಿಗಳೋ ಅಥವಾ ಕಲಿಯುಗಿಗಳೋ ಎಂದು ಬ್ರಹ್ಮಾ ತಂದೆಯೂ ಸಹ ಕಾರ್ಡನ್ನು ಮಾಡಿಸಿದರು. ಆದರೆ ಮನುಷ್ಯರು ಏನು ತಿಳಿದುಕೊಳ್ಳುತ್ತಾರೆ? ರತ್ನಗಳನ್ನೂ ಸಹ ಕಲ್ಲುಗಳು ಎಂದು ತಿಳಿದು ಎಸಿಯುತ್ತಾರೆ. ಇವು ಜ್ಞಾನರತ್ನಗಳಾಗಿವೆ. ಶಾಸ್ತ್ರಗಳಲ್ಲಿ ರತ್ನಗಳಿವೆ ಎಂದು ಅವರು ತಿಳಿಯುತ್ತಾರೆ. ನೀವು ಸ್ಪಷ್ಟ ಮಾಡಿ ಈ ರೀತಿ ತಿಳಿಸಿ, ಇಲ್ಲಂತೂ ಅಪಾರ ದುಃಖವಿದೆ ಎಂದು ಅವರಿಗೆ ತಿಳಿಯಬೇಕು. ದುಃಖದ ಪಟ್ಟಿಯನ್ನು ಬರೆಯಿರಿ ಅದರಲ್ಲಿ ಕೊನೆ ಪಕ್ಷ 101 ಪ್ರಕಾರದ ದುಃಖವನ್ನಂತು ಅವಶ್ಯವಾಗಿ ಬರೆದಿರಿ. ಈ ದುಃಖಧಾಮದಲ್ಲಿ ಅಪಾರ ದುಃಖವಿದೆ. ಇದೆಲ್ಲವನ್ನು ಬರೆಯಿರಿ, ಪೂರ್ಣ ಪಟ್ಟಿಯನ್ನು ತೆಗೆಯಿರಿ. ಇನ್ನೊಂದು ಕಡೆ ಅಪಾರ ಸುಖ ಅಲ್ಲಿ ದುಃಖದ ಹೆಸರೂ ಇರುವುದಿಲ್ಲ, ನಾವು ಅಂತಹ ರಾಜ್ಯ ಅಥವಾ ಸುಖಧಾಮದ ಸ್ಥಾಪನೆ ಮಾಡುತ್ತಿದ್ದೇವೆ. ಇದನ್ನು ನೋಡಿದ ತಕ್ಷಣ ಮನುಷ್ಯರ ಬಾಯಿ ಬಂದ್ ಆಗಿಬಿಡಬೇಕು. ಈ ಸಮಯದಲ್ಲಿ ದುಃಖಧಾಮವಾಗಿದೆ ಎಂದು ಅವರಿಗೆ ಏನು ತಿಳಿದಿದೆ ಇದನ್ನಂತೂ ಅವರು ಸ್ವರ್ಗವೆಂದು ತಿಳಿದು ಕುಳಿತಿದ್ದಾರೆ. ದೊಡ್ಡ-ದೊಡ್ಡ ಮಹಲ್, ಹೊಸ-ಹೊಸ ಮಂದಿರ ಇತ್ಯಾದಿಗಳನ್ನು ನಿರ್ಮಿಸುತ್ತಿರುತ್ತಾರೆ, ಆದರೆ ಇದೆಲ್ಲವೂ ಸಮಾಪ್ತಿ ಆಗುವುದಿದೆ ಎಂದು ಅವರಿಗೆ ತಿಳಿದಿದೆಯೇ? ಅವರಿಗೆ ಲಂಚದ ಹಣವಂತೂ ಬಹಳ ಇದೆ. ತಂದೆಯು ತಿಳಿಸಿದ್ದಾರೆ - ಇದೆಲ್ಲವೂ ಮಾಯೆಯದಾಗಿದೆ. ವಿಜ್ಞಾನದವರ ಅಭಿಮಾನ, ವಾಹನಗಳು, ವಿಮಾನಗಳು, ಇವೆಲ್ಲವೂ ಮಾಯೆಯ ಶೋ ಆಗಿದೆ. ಇದೂ ಸಹ ನಿಯಮವಾಗಿದೆ, ಯಾವಾಗ ತಂದೆಯು ಸ್ವರ್ಗ ಸ್ಥಾಪನೆ ಮಾಡುತ್ತಾರೆಯೋ ಆಗ ಮಾಯೆಯೂ ಸಹ ತನ್ನ ಆಡಂಬರವನ್ನು ತೋರಿಸುತ್ತದೆ. ಇದಕ್ಕೆ ಮಾಯೆಯ ಶೋ ಎಂದು ಹೇಳಲಾಗುತ್ತದೆ.

ಈಗ ನೀವು ಮಕ್ಕಳು ಇಡೀ ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡುತ್ತಿದ್ದೀರಿ. ಒಂದುವೇಳೆ ಎಲ್ಲಿಯಾದರೂ ಮಾಯೆಯ ಪ್ರವೇಶತೆ ಆಗಿಬಿಡುತ್ತದೆ ಎಂದರೆ ಮಕ್ಕಳಿಗೆ ಮನಸ್ಸು ತಿನ್ನುತ್ತದೆ. ಯಾರಾದರೂ ಯಾರ ನಾಮ-ರೂಪದಲ್ಲಿ ಸಿಕ್ಕಿಕೊಳ್ಳುತ್ತಾರೆಂದರೆ ಇದು ವಿಕಾರವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಕಲಿಯುಗದಲ್ಲಿ ವಿಕಾರಿತನವಿದೆ (ಕ್ರಿಮಿನಲೈಸೇಷನ್) ಸತ್ಯಯುಗದಲ್ಲಿ ನಿರ್ವಿಕಾರಿ (ಸಿವಿಲೈಸೇಷನ್). ದೇವತೆಗಳ ಮುಂದೆ ನಿರ್ವಿಕಾರಿಗಳು, ನಾವು ವಿಕಾರಿಗಳು ಎಂದು ಎಲ್ಲರೂ ತಲೆ ಬಾಗುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಪ್ರತಿಯೊಬ್ಬರು ತಮ್ಮ ಸ್ಥಿತಿಯನ್ನು ನೋಡಿಕೊಳ್ಳಿ. ದೊಡ್ಡ-ದೊಡ್ಡವರೂ ಸಹ ತಮ್ಮನ್ನು ನೋಡಿಕೊಳ್ಳಿ. ನಮ್ಮ ಬುದ್ಧಿಯೂ ಯಾರ ನಾಮ-ರೂಪದಲ್ಲಂತೂ ಹೋಗುವುದಿಲ್ಲವೇ. ಇಂತಹವರು ಬಹಳ ಒಳ್ಳೆಯವರಾಗಿದ್ದಾರೆ, ಅವರಿಗೆ ಇದು ಮಾಡೋಣ ಎಂದು ಮನಸ್ಸಿನಲ್ಲಿ ಬರುತ್ತದೆಯೇ? ಇದಂತೂ ತಂದೆಗೆ ಗೊತ್ತಿದೆ, ಈ ಸಮಯದಲ್ಲಿ ಸಂಪೂರ್ಣ ನಿರ್ವಿಕಾರಿಗಳು ಯಾರೂ ಇಲ್ಲ, ಹಾಗೆಯೇ ಪಾಸ್ವಿತ್ ಆನರ್ 8 ರತ್ನಗಳೇ ಆಗಿದ್ದಾರೆ, ಅವರದೇ ಈ ಸಮಯದಲ್ಲಿ ಸಂಪೂರ್ಣ ನಿರ್ವಿಕಾರಿ ತನವು ಇರಲು ಸಾಧ್ಯ. 108 ರತ್ನಗಳೂ ಸಹ ಈ ರೀತಿ ಇಲ್ಲ. ಸ್ವಲ್ಪವೂ ಸಹ ಚಂಚಲತೆಯು ಬರಬಾರದು. ಇದು ಪರಿಶ್ರಮವಿದೆ. ಕೆಲವರೇ ವಿರಳ ಈ ರೀತಿ ಇರುತ್ತಾರೆ. ಕಣ್ಣುಗಳು ಒಂದಲ್ಲ ಒಂದು ಮೋಸ ಮಾಡುತ್ತಿರುತ್ತದೆ ಅಂದರೆ ನಾಟಕವೇನು ಯಾರನ್ನೂ ಬೇಗನೇ ನಿರ್ವಿಕಾರಿಗಳನ್ನಾಗಿ ಮಾಡುವುದಿಲ್ಲ. ಹೆಚ್ಚಿನ ಪುರುಷಾರ್ಥ ಮಾಡಿ ಎಲ್ಲಿಯೂ ನಮ್ಮ ಕಣ್ಣುಗಳು ಮೋಸ ಮಾಡುತ್ತಿಲ್ಲವೇ ಎಂದು ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಬೇಕು. ವಿಶ್ವದ ಮಾಲೀಕರಾಗುವುದು ಅತೀ ದೊಡ್ಡ ಗುರಿಯಾಗಿದೆ. ಏರಿದರೆ ವೈಕುಂಠದ ರಸ...... ಅರ್ಥಾತ್ ಏರಿದರೆ ರಾಜರಿಗಿಂತಲೂ ರಾಜರಾಗುತ್ತಾರೆ. ಬಿದ್ದರೆ ಪ್ರಜೆಗಳಲ್ಲಿ ಹೊರಟು ಹೋಗುತ್ತಾರೆ. ಇತ್ತೀಚಿಗಂತೂ ಇದು ವಿಕಾರಿ ಸಮಯ ಆಗಿದೆ ಎಂದು ಹೇಳುತ್ತಾರೆ. ಭಲೆ ಎಷ್ಟೇ ಹಿರಿಯ ವ್ಯಕ್ತಿಗಳಾಗಿರಬಹುದು, ತಿಳಿದುಕೊಳ್ಳಿ, ರಾಣಿಯೇ ಆಗಿರಬಹುದು, ಅವರಿಗೂ ಸಹ ನನ್ನನ್ನು ಯಾರೂ ಹಾರಿಸಿಕೊಂಡು ಹೋಗದಿರಲಿ ಎಂದು ಭಯವಿರುತ್ತದೆ. ಪ್ರತಿಯೊಬ್ಬ ಮನುಷ್ಯನಲ್ಲಿ ಅಶಾಂತಿ ಇದೆ. ನನ್ನ ಮಕ್ಕಳಲ್ಲಿಯೂ ಕೆಲವರು ಎಷ್ಟೊಂದು ಅಶಾಂತಿಯನ್ನು ಹರಡುತ್ತಾರೆ. ನೀವು ಶಾಂತಿ ಸ್ಥಾಪನೆ ಮಾಡುತ್ತಿದ್ದೀರಿ ಅಂದಾಗ ಮೊದಲು ಸ್ವಯಂ ಶಾಂತಿಯಲ್ಲಿ ಇರಿ ಆಗ ಅನ್ಯರಲ್ಲೂ ಆ ಬಲ ತುಂಬುತ್ತದೆ. ಅಲ್ಲಂತೂ ಬಹಳ ಶಾಂತಿಯ ರಾಜ್ಯವು ನಡೆಯುತ್ತದೆ. ಕಣ್ಣುಗಳು ನಿರ್ವಿಕಾರಿ ಆಗಿಬಿಡುತ್ತದೆ, ಆದ್ದರಿಂದ ತಂದೆಯು ತಿಳಿಸುತ್ತಾರೆ, ಇಂದು ನಾನು ಆತ್ಮನ ವೃತ್ತಿ ಹೇಗಿತ್ತು? ಎಂದು ತಮ್ಮ ಪರಿಶೀಲನೆ ಮಾಡಿಕೊಳ್ಳಿ. ಇದರಲ್ಲಿ ಬಹಳ ಶ್ರಮವಿದೆ, ತಮ್ಮ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ಬೇಹದ್ದಿನ ತಂದೆಗೂ ಸಹ ಸತ್ಯವನ್ನು ತಿಳಿಸುವುದಿಲ್ಲ. ಹೆಜ್ಜೆ-ಹೆಜ್ಜೆಯಲ್ಲಿ ತಪ್ಪುಗಳು ಆಗುತ್ತವೆ. ಸ್ವಲ್ಪವೂ ಆ ವಿಕಾರಿ ದೃಷ್ಟಿಯಿಂದ ನೋಡಿದಿರಿ, ತಪ್ಪಾಯಿತು ಎಂದರೆ ಅದನ್ನು ತಕ್ಷಣ ನೋಟ್ ಮಾಡಿಕೊಳ್ಳಿ. ಸುಧಾರಣೆ ಆಗುವವರೆಗೆ ಪ್ರತಿನಿತ್ಯವು 10-20 ತಪ್ಪುಗಳನ್ನಂತೂ ಮಾಡುತ್ತಲೇ ಇರುತ್ತೀರಿ. ಆದರೆ ತಂದೆಗೆ ಯಾರೂ ಸತ್ಯವನ್ನು ತಿಳಿಸುವುದಿಲ್ಲ. ದೇಹಾಭಿಮಾನಿಗಳಿಂದ ಒಂದಲ್ಲ ಒಂದು ಪಾಪವು ಅವಶ್ಯವಾಗಿ ಆಗುತ್ತದೆ. ಅದು ಒಳಗೆ ತಿನ್ನುತ್ತಿರುತ್ತದೆ. ತಪ್ಪು ಎಂದು ಯಾವುದಕ್ಕೆ ಹೇಳುತ್ತಾರೆ ಎಂಬುದೂ ಸಹ ಕೆಲವರಿಗೆ ತಿಳಿಯುವುದಿಲ್ಲ. ಪ್ರಾಣಿಗಳು ತಿಳಿಯುತ್ತವೆಯೇ? ನೀವೂ ಸಹ ಈ ಜ್ಞಾನ ಸಿಗುವ ಮುಂಚೆ ಕೋತಿ ಬುದ್ಧಿಯವರಾಗಿದ್ದೀರಿ. ಈಗ ಕೆಲವರು 50%, ಕೆಲವರು 10% ಹೀಗೆ ಪರಿವರ್ತನೆ ಆಗುತ್ತಾ ಹೋಗುತ್ತಿದ್ದಾರೆ. ಈ ಕಣ್ಣುಗಳಂತೂ ಬಹಳ ಮೋಸ ಮಾಡುವಂತಹದ್ದಾಗಿವೆ. ಎಲ್ಲದಕ್ಕಿಂತ ತೀಕ್ಷ್ಣವಾದವು ಕಣ್ಣುಗಳು ಆಗಿವೆ. ತಂದೆಯು ತಿಳಿಸುತ್ತಾರೆ - ನೀವು ಆತ್ಮಗಳು ಅಶರೀರಿ ಆಗಿ ಬಂದಿದ್ದೀರಿ, ಶರೀರ ಇರಲಿಲ್ಲ. ಈಗಲೂ ಸಹ ನಿಮಗೆ ಇದರ ನಂತರ ಯಾವ ಶರೀರವನ್ನು ಪಡೆಯುತ್ತೀರಿ, ಯಾವ ಸಂಬಂಧದಲ್ಲಿ ಹೋಗುತ್ತೇವೆ ಎಂದು ಗೊತ್ತಿದೆಯೇ? ತಿಳಿಯುವುದಿಲ್ಲ, ಗರ್ಭದಲ್ಲಿ ಬಹಳ ಆಳವಾದ ಶಾಂತಿಯಲ್ಲಿ ಇರುತ್ತೀರಿ, ಆತ್ಮವು ಸಂಫೂರ್ಣ ಶಾಂತವಾಗಿರುತ್ತದೆ. ಯಾವಾಗ ಶರೀರ ಬೆಳವಣಿಗೆ ಆಗುವುದೋ ಆಗ ತಿಳಿಯುತ್ತದೆ ಅಂದಮೇಲೆ ನೀವು ಈ ರೀತಿಯಾಗಿ ಹೋಗಬೇಕಾಗಿದೆ. ನಾವು ಈಗ ಹಳೆಯ ಶರೀರವನ್ನು ಬಿಟ್ಟು ಹೋಗಬೇಕಾಗಿದೆ ನಂತರ ಯಾವಾಗ ಶರೀರವನ್ನು ಪಡೆಯುತ್ತೇವೆಯೋ ಆಗ ಸ್ವರ್ಗದಲ್ಲಿ ನಮ್ಮ ಪಾತ್ರವನ್ನು ಅಭಿನಯಿಸುತ್ತೇವೆ. ಇದು ಸಂಪೂರ್ಣ ಶಾಂತಿಯ ಅನುಭವ ಮಾಡುವ ಸಮಯವಾಗಿದೆ. ಭಲೆ ಆತ್ಮವು ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ. ಯಾವಾಗ ಶರೀರವು ಬೆಳವಣಿಗೆ ಹೊಂದುತ್ತದೆಯೋ ಆಗ ಸಂಸ್ಕಾರವು ಇಮರ್ಜ್ ಆಗುತ್ತದೆ. ಈಗ ನೀವು ಮನೆಗೆ ಹೋಗಬೇಕಾಗಿದೆ. ಆದ್ದರಿಂದ ಹಳೆಯ ಪ್ರಪಂಚ, ಹಳೆಯ ಶರೀರದ ಪರಿವೆಯನ್ನು ತೆಗೆಯಬೇಕು. ಏನೂ ಸಹ ನೆನಪು ಇರಬಾರದು. ಬಹಳ ಪಥ್ಯೆಯನ್ನಿಡಬೇಕು (ಪತ್ಯೆ) ಯಾವುದು ಒಳಗೆ ಇರುವುದೋ ಅದೇ ಹೊರಗೆ ಬರುತ್ತದೆ. ಶಿವತಂದೆಯಲ್ಲಿಯೂ ಸಹ ಜ್ಞಾನವಿದೆ. ತಿಳಿಸುತ್ತಾರೆ ನನ್ನದೂ ಪಾತ್ರವಿದೆ, ನನಗಾಗಿಯೇ ಜ್ಞಾನಸಾಗರ.... ಎಂದು ಹೇಳುತ್ತಾರೆ. ಮಹಿಮೆ ಮಾಡುತ್ತಾರೆ, ಅರ್ಥವೇನನ್ನೂ ತಿಳಿದುಕೊಂಡಿಲ್ಲ. ಈಗ ನೀವು ಅರ್ಥ ಸಹಿತ ತಿಳಿದುಕೊಂಡಿದ್ದೀರಿ. ಬಾಕಿ ಆತ್ಮದ ಬುದ್ಧಿ ಹೀಗೆ ಕಾಸಿಗೂ ಬೆಲೆ ಇಲ್ಲದಂತೆ ಆಗಿಬಿಡುತ್ತದೆ ಎಂದಾಗ ತಂದೆಯು ನಿಮ್ಮನ್ನು ಎಷ್ಟೊಂದು ಬುದ್ಧಿವಂತರನ್ನಾಗಿ ಮಾಡುತ್ತಾರೆ. ಭಲೆ ಮನುಷ್ಯರ ಬಳಿಯಂತೂ ಕೋಟಿಗಳು, ಪದಮಗಳು ಇರಬಹುದು ಆದರೆ ಇದೆಲ್ಲವೂ ಮಾಯೆಯ ಆಡಂಬರವಾಗಿದೆಯಲ್ಲವೇ. ವಿಜ್ಞಾನದಲ್ಲಿ ನಮ್ಮ ಕೆಲಸಕ್ಕೆ ಬರುವ ವಸ್ತುಗಳು ಸತ್ಯಯುಗದಲ್ಲಿಯೂ ಬರುತ್ತದೆ, ಅದನ್ನು ತಯಾರಿಸುವವರು ಅಲ್ಲಿಯೂ ಹೋಗುತ್ತಾರೆ, ರಾಜರಂತೂ ಆಗುವುದಿಲ್ಲ. ಇವರು ಕೊನೆಯಲ್ಲಿ ನಿಮ್ಮ ಬಳಿ ಬರುತ್ತಾರೆ ಮತ್ತೆ ಅನ್ಯರಿಗೂ ಕಲಿಸುತ್ತಾರೆ. ಒಬ್ಬ ತಂದೆಯಿಂದ ನೀವು ಎಷ್ಟೊಂದು ಕಲಿಯುತ್ತೀರಿ. ಒಬ್ಬ ತಂದೆಯು ಪ್ರಪಂಚವನ್ನು ಹೇಗಿದ್ದದ್ದನ್ನು ಹೇಗೆ ಮಾಡುತ್ತಾರೆ! ಸದಾ ಮೊಟ್ಟಮೊದಲು ಒಬ್ಬರು ಅನ್ವೇಷಣೆ ಮಾಡುತ್ತಾರೆ ನಂತರ ಹರಡುತ್ತಾರೆ. ಹೇಗೆ ಬಾಂಬುಗಳು ತಯಾರಿಸುವವರೂ ಸಹ ಒಬ್ಬರೇ ಇದ್ದರು ನಂತರ ಇದರಿಂದ ಪ್ರಪಂಚವು ವಿನಾಶ ಆಗಿಬಿಡುವುದೆಂದು ತಿಳಿಯಿತು, ಆಗ ಅನ್ಯರು ಮಾಡುತ್ತಾ ಹೋದರು. ಸತ್ಯಯುಗದಲ್ಲಿಯೂ ವಿಜ್ಞಾನವು ಬೇಕಲ್ಲವೇ. ಸಮಯವಿದೆ, ಕಲಿತು ಬುದ್ಧಿವಂತರಾಗಿಬಿಡುತ್ತೀರಿ. ತಂದೆಯ ಪರಿಚಯ ಸಿಕ್ಕಿತು ಎಂದರೆ ಸ್ವರ್ಗದಲ್ಲಿ ಬಂದು ನೌಕರ-ಚಾಕರರಾಗುತ್ತಾರೆ. ಅಲ್ಲಿ ಎಲ್ಲವೂ ಸುಖದ ಮಾತುಗಳು ಇರುತ್ತವೆ, ಯಾವುದು ಸುಖಧಾಮದಲ್ಲಿ ಇತ್ತೋ ಅದು ಪುನಃ ಆಗುತ್ತದೆ. ಅಲ್ಲಿ ಯಾವುದೇ ರೋಗ, ದುಃಖದ ಮಾತುಗಳು ಇಲ್ಲ. ಇಲ್ಲಂತೂ ಅಪರಮಪಾರ ದುಃಖವಿದೆ, ಅಲ್ಲಿ ಅಪರಮಪಾರ ಸುಖವಿದೆ. ಈಗ ನಾವು ಅದನ್ನು ಸ್ಥಾಪನೆ ಮಾಡುತ್ತಿದ್ದೇವೆ. ದುಃಖಹರ್ತ-ಸುಖಕರ್ತ ತಂದೆ ಒಬ್ಬರೇ ಆಗಿದ್ದಾರೆ. ಮೊಟ್ಟಮೊದಲು ತಮ್ಮ ಸ್ಥಿತಿಯನ್ನು ಈ ರೀತಿ ಮಾಡಿಕೊಳ್ಳಬೇಕು, ಇದರಲ್ಲಿ ಕೇವಲ ಪಂಡಿತತನವಿರಬಾರದು. ಇಂತಹ ಒಂದು ಪಂಡಿತನ ಕಥೆಯೂ ಇದೆ, ರಾಮ ನಾಮವನ್ನು ಹೇಳಿದರೆ ನದಿಯನ್ನು ದಾಟಿಬಿಡುತ್ತೇವೆ ಎಂದು ಹೇಳಿದರು.... ಕೇವಲ ಹೇಳಿದರಷ್ಟೇ ತಾನು ಮಾತ್ರ ಧಾರಣೆ ಮಾಡಲಿಲ್ಲ. ಇದು ಈ ಸಮಯದ ಮಾತಾಗಿದೆ. ನೀವು ತಂದೆಯ ನೆನಪಿನಿಂದ ವಿಷಯಸಾಗರದಿಂದ ಕ್ಷೀರಸಾಗರದೆಡೆಗೆ ಹೋಗುತ್ತಿದ್ದೀರಿ. ಇಲ್ಲಿ ನೀವು ಮಕ್ಕಳ ಸ್ಥಿತಿಯು ಬಹಳ ಚೆನ್ನಾಗಿ ಇರಬೇಕು. ಯೋಗಬಲವಿಲ್ಲ, ವಿಕಾರಿ ದೃಷ್ಟಿ ಇದ್ದರೆ ಅಂತಹವರ ಬಾಣವೂ ನಾಟುವುದಿಲ್ಲ, ಆದ್ದರಿಂದ ಕಣ್ಣುಗಳು ಬಹಳ ನಿರ್ವಿಕಾರಿ ಆಗಬೇಕು. ತಂದೆಯ ನೆನಪಿನಲ್ಲಿ ಇದ್ದು ಯಾರಿಗೇ ಜ್ಞಾನ ಕೊಡುತ್ತೀರೆಂದರೆ ಬಹಳ ಬೇಗನೇ ಬಾಣವು ನಾಟುವುದು. ಜ್ಞಾನದ ಕತ್ತಿಯಲ್ಲಿ ಯೋಗದ ಹರಿತವಿರಬೇಕು. ಜ್ಞಾನದಿಂದ ಧನದ ಸಂಪಾದನೆ ಆಗುತ್ತದೆ. ಶಕ್ತಿಯು ನೆನಪಿನದ್ದಾಗಿದೆ. ಅನೇಕ ಮಕ್ಕಳು ನೆನಪು ಮಾಡುವುದೇ ಇಲ್ಲ. ಅವರಿಗೆ ತಿಳಿದೇ ಇಲ್ಲ ತಂದೆಯೇ ತಿಳಿಸುತ್ತಾರೆ. ಮನುಷ್ಯರಿಗೆ ಇದನ್ನು ತಿಳಿಸಬೇಕು, ಇದು ದುಃಖಧಾಮವಾಗಿದೆ, ಸತ್ಯಯುಗವು ಸುಖಧಾಮವಾಗಿದೆ. ಕಲಿಯುಗದಲ್ಲಿ ಸುಖದ ಹೆಸರೇ ಇಲ್ಲ. ಒಂದುವೇಳೆ ಇದ್ದರೂ ಅದು ಕಾಗವಿಷ್ಟ ಸಮಾನವಾಗಿದೆ. ಸತ್ಯಯುಗದಲ್ಲಂತೂ ಅಪಾರ ಸುಖವಿರುತ್ತದೆ. ಮನುಷ್ಯರು ಅರ್ಥವನ್ನಂತೂ ತಿಳಿದುಕೊಂಡಿಲ್ಲ. ಮುಕ್ತಿಗಾಗಿಯೇ ತಲೆಕೆಡಿಸಿಕೊಳ್ಳುತ್ತಿರುತ್ತಾರೆ. ಜೀವನ್ಮುಕ್ತಿಯು ಯಾರಿಗೂ ಗೊತ್ತಿಲ್ಲ ಅಂದಾಗ ಜ್ಞಾನವನೂ ಸಹ ಕೊಡಲು ಹೇಗೆ ಸಾಧ್ಯ! ಅವರು ಬರುವುದೇ ರಜೋಪ್ರಧಾನ ಸಮಯದಲ್ಲಿ ಅಂದಮೇಲೆ ರಾಜಯೋಗವನ್ನು ಹೇಗೆ ಕಲಿಸುತ್ತಾರೆ. ಇಲ್ಲಂತೂ ಸುಖವು ಕಾಗವಿಷ್ಟ ಸಮಾನವಾಗಿದೆ. ರಾಜಯೋಗದಿಂದ ಏನಾಗಿತ್ತು ಎಂಬುದನ್ನು ತಿಳಿದುಕೊಂಡಿಲ್ಲ, ಇದೆಲ್ಲಾ ನಾಟಕವು ನಡೆಯುತ್ತಿದೆ, ನೀವು ಮಕ್ಕಳು ಅರಿತಿದ್ದೀರಿ. ಪತ್ರಿಕೆಗಳಲ್ಲಿಯೂ ನಿಮ್ಮ ನಿಂದನೆ ಬರೆಯುತ್ತಾರೆ, ಇವೆಲ್ಲವೂ ಆಗಲೇಬೇಕಾಗಿದೆ. ಅಬಲೆಯರಿಗೆ ಭಿನ್ನ-ಭಿನ್ನ ದುಃಖಗಳು ಬರುತ್ತವೆ. ಪ್ರಪಂಚದಲ್ಲಿ ಅನೇಕ ಪ್ರಕಾರದ ದುಃಖವಿದೆ. ಈಗ ಯಾವುದಾದರೂ ಸುಖವಿದೆಯೇ? ಭಲೆ ಎಷ್ಟೇ ಸಾಹುಕಾರರಾಗಿರಬಹುದು, ರೋಗಿಯಾದರೂ, ಅಂಧರಾದರೆಂದರೆ ದುಃಖವಂತೂ ಆಗುತ್ತದೆಯಲ್ಲವೇ. ದುಃಖ ಪಟಿಯಲ್ಲಿ ಎಲ್ಲವನ್ನು ಬರೆಯಿರಿ. ರಾವಣರಾಜ್ಯ, ಕಲಿಯುಗದ ಅಂತ್ಯದಲ್ಲಿ ಇವೆಲ್ಲಾ ಮಾತುಗಳಿವೆ. ಸತ್ಯಯುಗದಲ್ಲಿ ದುಃಖದ ಒಂದು ಮಾತೂ ಇರುವುದಿಲ್ಲ. ಸತ್ಯಯುಗವಂತೂ ಮೊದಲು ಇತ್ತಲ್ಲವೇ? ಈಗ ಸಂಗಮಯುಗವಾಗಿದೆ. ತಂದೆಯು ಸಂಗಮಯುಗದಲ್ಲಿಯೇ ಬರುತ್ತಾರೆ. ಈಗ ನಿಮಗೆ 5000 ವರ್ಷಗಳಲ್ಲಿ ನಾವು ಎಂತೆಂತಹ ಜನ್ಮವನ್ನು ಪಡೆಯುತ್ತೇವೆ, ಹೇಗೆ ಸುಖದಿಂದ ದುಃಖದಲ್ಲಿ ಬರುತ್ತೇವೆ ಎಂದು ತಿಳಿದಿದೆ. ಯಾರಿಗೆ ಪೂರ್ಣ ಜ್ಞಾನವು ಬುದ್ಧಿಯಲ್ಲಿ ಇದೆಯೋ, ಧಾರಣೆ ಇದೆಯೋ ಅವರು ತಿಳಿದುಕೊಳ್ಳಬಹುದು. ತಂದೆಯು ನೀವು ಮಕ್ಕಳ ಜೋಳಿಗೆಯನ್ನು ತುಂಬುತ್ತಾರೆ. ಧನ ದಾನ ಮಾಡಿದರೆ ಅದು ಎಂದಿಗೂ ಮುಗಿಯುವುದಿಲ್ಲ ಎಂಬ ಗಾಯನವಿದೆ. ಜ್ಞಾನ ಧನದ ದಾನ ಮಾಡಲಿಲ್ಲವೆಂದರೆ ಅವರ ಬಳಿ ಇಲ್ಲವೇ ಇಲ್ಲವೆಂದರ್ಥ, ಅಂದಮೇಲೆ ಮತ್ತೆ ಸಿಗುವುದೇ ಇಲ್ಲ. ಲೆಕ್ಕವಿದೆಯಲ್ಲವೇ! ಕೊಡುವುದೇ ಇಲ್ಲವೆಂದಾಗ ಸಿಗುವುದಾದರೂ ಎಲ್ಲಿ! ವೃದ್ಧಿಯೂ ಎಲ್ಲಿ ಆಗುತ್ತದೆ! ಇವೆಲ್ಲವೂ ಅವಿನಾಶಿ ಜ್ಞಾನ ರತ್ನಗಳಾಗಿವೆ. ಪ್ರತಿಯೊಂದು ಮಾತಿನಲ್ಲಿ ನಂಬರ್ವಾರಂತೂ ಇರುತ್ತಾರಲ್ಲವೇ. ಇದೂ ಸಹ ನಿಮ್ಮ ಆತ್ಮಿಕ ಸೇನೆ ಆಗಿದೆ, ಕೆಲವು ಆತ್ಮಗಳು ಹೋಗಿ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಇನ್ನೂ ಕೆಲವು ಆತ್ಮರು ಪ್ರಜಾಪದವಿಯನ್ನು ಪಡೆಯುತ್ತಾರೆ. ಹೇಗೆ ಕಲ್ಪದ ಹಿಂದೆ ಪಡೆದಿದ್ದರು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಮ್ಮ ಸಂಭಾಲನೆ (ರಕ್ಷಣೆ) ಮಾಡಿಕೊಳ್ಳಲು ಹೆಜ್ಜೆ-ಹೆಜ್ಜೆಯಲ್ಲಿ (1) ಇಂದು ನಾನು ಆತ್ಮನ ವೃತ್ತಿ ಹೇಗಿತ್ತು? (2) ಕಣ್ಣುಗಳು ನಿರ್ವಿಕಾರಿ ಆಗಿತ್ತೇ? (3) ದೇಹಾಭಿಮಾನಕ್ಕೆ ವಶರಾಗಿ ಯಾವುದೇ ಪಾಪವಾಯಿತೇ? ಎಂದು ಪರಿಶೀಲನೆ ಮಾಡಿಕ್ಕೊಳ್ಳಬೇಕು.

2. ಬುದ್ಧಿಯಲ್ಲಿ ಅವಿನಾಶಿ ಜ್ಞಾನ ಧನದ ಧಾರಣೆ ಮಾಡಿ ಮತ್ತು ದಾನ ಮಾಡಬೇಕಾಗಿದೆ. ಜ್ಞಾನದ ಕತ್ತಿಯಲ್ಲಿ ನೆನಪಿನ ಹರಿತವನ್ನು ಅವಶ್ಯವಾಗಿ ತುಂಬಬೇಕಾಗಿದೆ.

ವರದಾನ:
ಸತ್ಯತೆಯ ಅಧಿಕಾರವನ್ನು ಧಾರಣೆ ಮಾಡಿ ಸರ್ವರನ್ನು ಆಕರ್ಷಿತ ಮಾಡುವಂತಹ ನಿರ್ಭಯ ಮತ್ತು ವಿಜಯೀ ಭವ.

ತಾವು ಆತ್ಮರು ಸತ್ಯತೆಯ ಶಕ್ತಿಶಾಲಿ ಶ್ರೇಷ್ಠ ಆತ್ಮರಾಗಿರುವಿರಿ. ಸತ್ಯ ಜ್ಞಾನ, ಸತ್ಯ ತಂದೆ. ಸತ್ಯ ಪ್ರಾಪ್ತಿ, ಸತ್ಯ ನೆನಪು, ಸತ್ಯಗುಣ, ಸತ್ಯ ಶಕ್ತಿಗಳು ಎಲ್ಲಾ ಪ್ರಾಪ್ತಿಯಾಗಿವೆ. ಇಷ್ಟು ದೊಡ್ಡ ಅಧಿಕಾರಿತನದ ನಶೆಯಿದ್ದರೆ ಇದು ಸತ್ಯತೆಯ ಅಧಿಕಾರಿತನ ಪ್ರತಿ ಆತ್ಮರನ್ನು ಆಕರ್ಷಣೆ ಮಾಡುತ್ತಿರುತ್ತದೆ. ಸುಳ್ಳಿನ ಖಂಡದಲ್ಲಿಯೂ ಇಂಥಹ ಸತ್ಯತೆಯ ಶಕ್ತಿ ಉಳ್ಳವರು ವಿಜಯಿಗಳಾಗುತ್ತಾರೆ. ಸತ್ಯತೆಯ ಪ್ರಾಪ್ತಿ ಖುಷಿ ಮತ್ತು ನಿರ್ಭಯತೆಯಾಗಿದೆ. ಸತ್ಯ ಹೇಳುವವರು ನಿರ್ಭಯರಾಗಿರುತ್ತಾರೆ. ಅವರಿಗೆ ಎಂದೂ ಭಯವಾಗುವುದಿಲ್ಲ.

ಸ್ಲೋಗನ್:
ವಾಯುಮಂಡಲವನ್ನು ಪರಿವರ್ತನೆ ಮಾಡುವ ಸಾಧನೆಯಾಗಿದೆ- ಸಕಾರಾತ್ಮಕ ಸಂಕಲ್ಪ ಮತ್ತು ಶಕ್ತಿಶಾಲಿ ವೃತ್ತಿ.