11.09.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ನೀವು
ತಂದೆಯ ಬಳಿ ತಮ್ಮ ನಡುವಳಿಕೆಯನ್ನು ಸುಧಾರಣೆ ಮಾಡಿಕೊಳ್ಳಲು ಬಂದಿದ್ದೀರಿ, ತಾವೀಗ
ದೈವೀನಡುವಳಿಕೆಯನ್ನಾಗಿ ಮಾಡಿಕೊಳ್ಳಬೇಕಾಗಿದೆ”
ಪ್ರಶ್ನೆ:
ನೀವು ಮಕ್ಕಳು
ಕಣ್ಣುಮುಚ್ಚಿ ಕುಳಿತುಕೊಳ್ಳುವುದನ್ನು ನಿರಾಕರಿಸಲಾಗುತ್ತದೆ- ಏಕೆ?
ಉತ್ತರ:
ಏಕೆಂದರೆ
ದೃಷ್ಟಿಯಿಂದ ಪರಿವರ್ತನೆ ಮಾಡುವ ತಂದೆಯು ನಿಮ್ಮ ಸನ್ಮುಖದಲ್ಲಿದ್ದಾರೆ. ಒಂದುವೇಳೆ ಕಣ್ಣುಗಳನ್ನು
ಮುಚ್ಚಿರುತ್ತೀರೆಂದರೆ ಹೇಗೆ ಪರಿವರ್ತನೆಯಾಗುತ್ತೀರಿ! ಶಾಲೆಯಲ್ಲಿ ಕಣ್ಣುಗಳನ್ನು ಮುಚ್ಚಿ
ಕುಳಿತುಕೊಳ್ಳುವುದಿಲ್ಲ. ಕಣ್ಣು ಮುಚ್ಚಿದರೆ ಆಲಸ್ಯವು ಬರುತ್ತದೆ, ನೀವು ಮಕ್ಕಳು ಶಾಲೆಯಲ್ಲಿ
ಓದುತ್ತಿದ್ದೀರಿ. ಇದು ಆದಾಯದ ಮೂಲವಾಗಿದೆ. ಲಕ್ಷ ಪದುಮಗಳ ಸಂಪಾದನೆಯಾಗುತ್ತದೆ. ಸಂಪಾದನೆಯಲ್ಲಿ
ಆಕಳಿಕೆ-ಆಲಸ್ಯವು ಬರಲು ಸಾಧ್ಯವಿಲ್ಲ.
ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳ ಪ್ರತಿ ತಂದೆಯು ತಿಳಿಸುತ್ತಾರೆ. ಮಕ್ಕಳು ತಿಳಿದುಕೊಂಡಿದ್ದೀರಿ- ಆತ್ಮಿಕ
ತಂದೆಯು ಪರಮಧಾಮದಿಂದ ಬಂದು ನಮಗೆ ಓದಿಸುತ್ತಿದ್ದಾರೆ. ಏನನ್ನು ಓದಿಸುತ್ತಿದ್ದಾರೆ? ತಂದೆಯ ಜೊತೆ
ಆತ್ಮದ ಸಂಬಂಧದ ಜೋಡಣೆ ಮಾಡುವುದನ್ನು ಕಲಿಸುತ್ತಿದ್ದಾರೆ. ಇದಕ್ಕೆ ನೆನಪಿನ ಯಾತ್ರೆಯೆಂದು
ಹೇಳಲಾಗುತ್ತದೆ. ಇದನ್ನೂ ತಿಳಿಸಿದ್ದಾರೆ- ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಮಧುರ ಆತ್ಮಿಕ
ಮಕ್ಕಳು ಪವಿತ್ರರಾಗಿ ತಮ್ಮ ಪವಿತ್ರ ಶಾಂತಿಧಾಮಕ್ಕೆ ತಲುಪುತ್ತೀರಿ. ಎಷ್ಟೊಂದು ಸಹಜ
ತಿಳುವಳಿಕೆಯಾಗಿದೆ! ತಮ್ಮನ್ನು ಆತ್ಮವೆಂದು ತಿಳಿಯಿರಿ ಮತ್ತು ತಮ್ಮ ಪ್ರಿಯತಮನಾದ ಬೇಹದ್ದಿನ
ತಂದೆಯನ್ನು ನೆನಪು ಮಾಡಿದಾಗ ತಮ್ಮ ಜನ್ಮ-ಜನ್ಮಾಂತರದ ಪಾಪಗಳು ಕತ್ತರಿಸಿಹೋಗುತ್ತವೆ ಏಕೆಂದರೆ
ತಂದೆಯು ಪತಿತ-ಪಾವನನಾಗಿದ್ದಾರೆ ಮತ್ತು ಸರ್ವಶಕ್ತಿವಂತನಾಗಿದ್ದಾರೆ. ಈಗ ನೀವಾತ್ಮ ರೂಪಿ
ಬ್ಯಾಟರಿಯು ತಮೋಪ್ರಧಾನವಾಗಿಬಿಟ್ಟಿದೆ. ಆತ್ಮವು ಸತೋಪ್ರಧಾನವಿತ್ತು, ಈಗ ಸತೋಪ್ರಧಾನ ಮನೆಗೆ
ಹೋಗುವುದಕ್ಕಾಗಿ ಮತ್ತು ಶಾಂತಿಧಾಮವಾದ ಮನೆಗೆ ಹೋಗುವುದಕ್ಕಾಗಿ ಮತ್ತೆ ಅದನ್ನು ಹೇಗೆ
ಸತೋಪ್ರಧಾನವನ್ನಾಗಿ ಮಾಡುವುದು! ಮಕ್ಕಳು ಇದನ್ನು ಬಹಳಚೆನ್ನಾಗಿ ನೆನಪಿಡಬೇಕಾಗಿದೆ. ತಂದೆಯು
ಮಕ್ಕಳಿಗೆ ಈ ಡೋಸ್ನ್ನು ಕೊಡುತ್ತಾರೆ. ಈ ನೆನಪಿನ ಯಾತ್ರೆಯನ್ನು ನಡೆಯುತ್ತಾ-ಸುತ್ತಾಡುತ್ತಾ,
ಏಳುತ್ತಾ-ಕುಳಿತುಕೊಳ್ಳುತ್ತಾ ಮಾಡಬಹುದು. ಎಷ್ಟು ಸಾಧ್ಯವೋ ಅಷ್ಟು ಗೃಹಸ್ಥ ವ್ಯವಹಾರದಲ್ಲಿದ್ದರೂ
ಕಮಲಪುಷ್ಫ ಸಮಾನ ಪವಿತ್ರರಾಗಬೇಕಾಗಿದೆ. ತಂದೆಯನ್ನೂ ನೆನಪು ಮಾಡಬೇಕು ಮತ್ತು ಜೊತೆಗೆ
ದೈವೀಗುಣಗಳನ್ನೂ ಧಾರಣೆ ಮಾಡಬೇಕು ಏಕೆಂದರೆ ಪ್ರಪಂಚದವರ ನಡುವಳಿಕೆಯು ಆಸುರಿ ನಡುವಳಿಕೆಯಾಗಿದೆ.
ನೀವು ಮಕ್ಕಳು ದೈವೀ ನಡುವಳಿಕೆಯನ್ನಾಗಿ ಮಾಡಿಕೊಳ್ಳುವುದಕ್ಕಾಗಿ ಇಲ್ಲಿಗೆ ಬಂದಿದ್ದೀರಿ. ಈ
ಲಕ್ಷ್ಮೀ-ನಾರಾಯಣರ ನಡುವಳಿಕೆಯು ಬಹಳ ಮಧುರವಾಗಿತ್ತು, ಭಕ್ತಿಮಾರ್ಗದಲ್ಲಿ ಅವರ ಮಹಿಮೆಯ ಗಾಯನವಿದೆ.
ಭಕ್ತಿಮಾರ್ಗವು ಯಾವಾಗ ಆರಂಭವಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಈಗ ನೀವು
ತಿಳಿದುಕೊಂಡಿದ್ದೀರಿ ಮತ್ತು ರಾವಣರಾಜ್ಯವು ಯಾವಾಗ ಆರಂಭವಾಯಿತೆನ್ನುವುದೂ ಸಹ ತಿಳಿದುಕೊಂಡಿದ್ದೀರಿ.
ಈ ಸಂಪೂರ್ಣವಾದ ಜ್ಞಾನವನ್ನು ನೀವು ಮಕ್ಕಳು ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ನಾವು
ಜ್ಞಾನಸಾಗರ ಆತ್ಮಿಕ ತಂದೆಯ ಮಕ್ಕಳಾಗಿದ್ದೇವೆ. ಈಗ ಆತ್ಮಿಕ ತಂದೆಯು ನಮಗೆ ಓದಿಸಲು ಬರುತ್ತಾರೆ
ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಇದನ್ನೂ ತಿಳಿದುಕೊಂಡಿದ್ದೀರಿ- ಇವರೇನು ಸಾಧಾರಣವಾದ
ತಂದೆಯಲ್ಲ, ಇವರು ಆತ್ಮಿಕ ತಂದೆಯಾಗಿದ್ದಾರೆ, ಅವರು ನಮಗೆ ಓದಿಸಲು ಬಂದಿದ್ದಾರೆ. ಅವರ ನಿವಾಸ
ಸ್ಥಾನವು ಸದಾ ಬ್ರಹ್ಮಲೋಕವಾಗಿದೆ. ಎಲ್ಲರ ಲೌಕಿಕ ತಂದೆ ಇಲ್ಲಿಯೇ ಇದ್ದಾರೆ, ನಾವಾತ್ಮರಿಗೆ
ಓದಿಸುವವರು ಪರಮಪಿತ ಪರಮಾತ್ಮನಾಗಿದ್ದಾರೆ, ಅವರು ಬೇಹದ್ದಿನ ತಂದೆಯಾಗಿದ್ದಾರೆ ಎಂಬುದು ನಿಮಗೂ
ನಿಶ್ಚಯದಲ್ಲಿ ಇರಬೇಕು. ಭಕ್ತಿಮಾರ್ಗದಲ್ಲಿ ಲೌಕಿಕ ತಂದೆಯು ಇದ್ದರೂ ಸಹ ಪರಮಪಿತ ಪರಮಾತ್ಮನನ್ನು
ಕರೆಯುತ್ತಾರೆ. ಸ್ವಯಂ ತಂದೆಯೇ ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ, ನನ್ನ ಹೆಸರು ಒಂದೇ
ಆಗಿದೆ- ಶಿವ. ಭಲೆ ಅನೇಕ ಹೆಸರು, ಅನೇಕ ಮಂದಿರಗಳನ್ನು ನಿರ್ಮಿಸಿದ್ದಾರೆ ಆದರೆ ಅವೆಲ್ಲವೂ
ಭಕ್ತಿಮಾರ್ಗದ ಸಾಮಗ್ರಿಯಾಗಿದೆ. ನನ್ನ ಯಥಾರ್ಥವಾದ ಹೆಸರು ಶಿವ ಎನ್ನುವುದೇ ಆಗಿದೆ. ನೀವು
ಮಕ್ಕಳಿಗೂ ಆತ್ಮವೆಂದು ಹೇಳುತ್ತಾರೆ, ಸಾಲಿಗ್ರಾಮಗಳೆಂದು ಹೇಳಿದರೂ ಪರವಾಗಿಲ್ಲ. ಅನೇಕಾನೇಕ
ಸಾಲಿಗ್ರಾಮಗಳಿದ್ದೀರಿ, ಇದಕ್ಕೆ ಮೊದಲು ನೀವು ಹದ್ದಿನ(ಅಲ್ಪಕಾಲದ) ತಂದೆಯ ಬಳಿ ಇರುತ್ತಿದ್ದಿರಿ,
ಆಗ ಈ ಜ್ಞಾನ ಇರಲಿಲ್ಲ. ಉಳಿದಂತೆ ಅನೇಕಪ್ರಕಾರದ ಭಕ್ತಿಯನ್ನು ಮಾಡುತ್ತಾ ಇರುತ್ತಿದ್ದಿರಿ.
ಅರ್ಧಕಲ್ಪ ಭಕ್ತಿಯನ್ನು ಮಾಡಿದಿರಿ, ದ್ವಾಪರದಿಂದ ಭಕ್ತಿಯು ಆರಂಭವಾಗುತ್ತದೆ, ರಾವಣರಾಜ್ಯದ
ಆರಂಭವಾಗಿದೆ. ಇದು ಬಹಳ ಸಹಜವಾದ ಮಾತಾಗಿದೆ ಆದರೆ ಇಷ್ಟು ಸಹಜವಾದ ಮಾತನ್ನೂ ಸಹ ಕೆಲವರು ಕಷ್ಟವೆಂದು
ತಿಳಿಯುತ್ತಾರೆ. ರಾವಣರಾಜ್ಯವು ಯಾವಾಗ ಪ್ರಾರಂಭವಾಗುತ್ತದೆ ಎಂಬುದೂ ಸಹ ಯಾರೂ ತಿಳಿದುಕೊಂಡಿಲ್ಲ.
ನೀವು ಮಧುರಮಕ್ಕಳು ತಿಳಿದುಕೊಂಡಿದ್ದೀರಿ- ತಂದೆಯು ಜ್ಞಾನಸಾಗರನಾಗಿದ್ದಾರೆ, ಅವರ ಬಳಿ ಏನಿದೆಯೋ
ಅದೆಲ್ಲವನ್ನೂ ಮಕ್ಕಳಿಗೆ ತಿಳಿಸುತ್ತಾರೆ. ಶಾಸ್ತ್ರಗಳು ಭಕ್ತಿಮಾರ್ಗದ್ದಾಗಿದೆ.
ಈಗ ನೀವು
ತಿಳಿದುಕೊಂಡಿದ್ದೀರಿ- ಜ್ಞಾನ, ಭಕ್ತಿ ನಂತರ ವೈರಾಗ್ಯ. ಈ ಮೂರು ಮುಖ್ಯವಾದುದಾಗಿದೆ.
ಸನ್ಯಾಸಿಗಳಿಗೂ ಗೊತ್ತಿದೆ- ಜ್ಞಾನ, ಭಕ್ತಿ ಮತ್ತು ವೈರಾಗ್ಯ ಆದರೆ ಸನ್ಯಾಸಿಗಳದು ಅಲ್ಪಕಾಲದ
ವೈರಾಗ್ಯವಾಗಿದೆ. ಅವರು ಬೇಹದ್ದಿನ ವೈರಾಗ್ಯವನ್ನು ಕಲಿಸುವುದಕ್ಕೆ ಸಾಧ್ಯವಿಲ್ಲ. ವೈರಾಗ್ಯದಲ್ಲಿ
ಎರಡು ಪ್ರಕಾರದ್ದಿದೆ. ಒಂದು ಅಲ್ಪಕಾಲದ ವೈರಾಗ್ಯ, ಇನ್ನೊಂದು ಬೇಹದ್ದಿನ ವೈರಾಗ್ಯ. ಅಲ್ಪಕಾಲದ
ವೈರಾಗ್ಯವು ಹಠಯೋಗಿ ಸನ್ಯಾಸಿಗಳ ವೈರಾಗ್ಯವಾಗಿದೆ. ನಿಮ್ಮದು ಬೇಹದ್ದಿನ ವೈರಾಗ್ಯವಾಗಿದೆ, ಇದು
ರಾಜಯೋಗವಾಗಿದೆ, ಮನುಷ್ಯರು ಮನೆಮಠವನ್ನು ಬಿಟ್ಟು ಕಾಡಿಗೆ ಹೊರಟುಹೋಗುತ್ತಾರೆ, ಅವರ ಹೆಸರನ್ನು
ಸನ್ಯಾಸಿಯೆಂದು ಇಡಲಾಗುತ್ತದೆ. ಹಠಯೋಗಿಗಳು ಪವಿತ್ರರಾಗಿರುವುದಕ್ಕಾಗಿ ಮನೆಮಠವನ್ನು ಬಿಡುತ್ತಾರೆ,
ಇದೂ ಸಹ ಒಳ್ಳೆಯದಾಗಿದೆ. ಭಾರತ ಬಹಳ ಪವಿತ್ರವಾಗಿತ್ತು, ಇಷ್ಟೊಂದು ಪವಿತ್ರಖಂಡವಂತು ಮತ್ತ್ಯಾವೂ
ಇರಲಿಲ್ಲ. ಭಾರತಕ್ಕೆ ಬಹಳ ಶ್ರೇಷ್ಠವಾದ ಮಹಿಮೆಯಿದೆ, ಇದನ್ನು ಭಾರತವಾಸಿಗಳಾದ ತಾವೇ
ತಿಳಿದುಕೊಂಡಿಲ್ಲ. ತಂದೆಯನ್ನು ಮರೆತಿರುವ ಕಾರಣದಿಂದ ಎಲ್ಲವನ್ನೂ ಮರೆತುಹೋಗುತ್ತಾರೆ ಅರ್ಥಾತ್
ನಾಸ್ತಿಕರು, ನಿರ್ಧನಿಕರಾಗಿಬಿಡುತ್ತಾರೆ. ಸತ್ಯಯುಗದಲ್ಲಿ ಎಷ್ಟೊಂದು ಶಾಂತಿ-ಸುಖವಿತ್ತು, ಈಗ
ಎಷ್ಟೊಂದು ದುಃಖ-ಅಶಾಂತಿಯಿದೆ! ಮೂಲವತನವಂತು ಶಾಂತಿಧಾಮವಾಗಿದೆ, ಅಲ್ಲಿ ನಾವಾತ್ಮರಿರುತ್ತಾರೆ.
ಆತ್ಮರು ಬೇಹದ್ದಿನ ಪಾತ್ರವನ್ನಭಿನಯಿಸಲು ತಮ್ಮ ಮನೆಯಿಂದ ಇಲ್ಲಿಗೆ ಬರುತ್ತೀರಿ. ಈಗ ಇದು
ಪುರುಷೋತ್ತಮ ಸಂಗಮಯುಗವಾಗಿದೆ. ಯಾವಾಗ ಬೇಹದ್ದಿನ ತಂದೆಯು ಹೊಸಪ್ರಪಂಚಕ್ಕೆ ಕರೆದುಕೊಂಡು
ಹೋಗುವುದಕ್ಕಾಗಿ ಬರುತ್ತಾರೆಯೋ ಆಗ ಅತ್ಯುತ್ತಮರನ್ನಾಗಿ ಮಾಡುತ್ತಾರೆ. ಭಗವಂತನನ್ನು
ಸರ್ವಶ್ರೇಷ್ಠನೆಂದು ಹೇಳುತ್ತಾರೆ ಆದರೆ ಅವರು ಯಾರು? ಯಾರಿಗೆ ಹೇಳುತ್ತಾರೆ? ಇದೇನನ್ನೂ
ತಿಳಿದುಕೊಂಡಿಲ್ಲ. ಒಂದು ಶಿವಲಿಂಗವನ್ನಿಟ್ಟುಬಿಟ್ಟಿದ್ದಾರೆ. ಇವರು ನಿರಾಕಾರ ಪರಮಾತ್ಮನೆಂದು
ತಿಳಿಯುತ್ತಾರೆ, ಅವರು ನಾವಾತ್ಮರ ತಂದೆಯಾಗಿದ್ದಾರೆ ಎಂಬುದನ್ನೂ ಸಹ ತಿಳಿದುಕೊಂಡಿಲ್ಲ ಆದರೆ ಕೇವಲ
ಪೂಜೆಯನ್ನು ಮಾಡುತ್ತಿರುತ್ತಾರೆ. ಅವರನ್ನು ಶಿವತಂದೆಯೆಂದು ಹೇಳುತ್ತಾರೆ, ರುದ್ರತಂದೆ ಅಥವಾ
ಬಬುಲ್ನಾಥ ತಂದೆಯೆಂದು ಹೇಳುವುದಿಲ್ಲ. ಶಿವತಂದೆಯ ನೆನಪಿದೆಯೇ? ಆಸ್ತಿಯ ನೆನಪಿದೆಯೇ? ಎಂದು ನೀವು
ಬರೆಯುತ್ತೀರಿ. ಶಿವತಂದೆಯನ್ನು ನೆನಪು ಮಾಡಿದರೆ ಪಾಪಗಳು ಭಸ್ಮವಾಗುತ್ತದೆ ಎಂಬ ಜಯಘೋಷವನ್ನು
ಮನೆ-ಮನೆಯಲ್ಲಿಯೂ ಹಾಕಬೇಕಾಗಿದೆ. ಏಕೆಂದರೆ ಪತಿತ-ಪಾವನನು ಒಬ್ಬ ತಂದೆಯೇ ಆಗಿದ್ದಾರೆ. ಈ ಪತಿತ
ಪ್ರಪಂಚದಲ್ಲಿ ಒಬ್ಬರೂ ಸಹ ಪಾವನರಿರಲು ಸಾಧ್ಯವಿಲ್ಲ. ಪಾವನ ಪ್ರಪಂಚದಲ್ಲಿ ಒಬ್ಬರೂ ಸಹ ಪತಿತರಿರಲು
ಸಾಧ್ಯವಿಲ್ಲ. ಶಾಸ್ತ್ರಗಳಲ್ಲಂತು ಬರೆದಿದ್ದಾರೆ- ಎಲ್ಲಾಕಡೆಯೂ ಪತಿತರಿದ್ದರು. ತ್ರೇತಾಯುಗದಲ್ಲಿ
ರಾವಣನಿದ್ದನು, ಸೀತೆಯನ್ನು ಅಪಹರಣ ಮಾಡಿದನೆಂದು ಹೇಳುತ್ತಾರೆ. ಕೃಷ್ಣನ ಜೊತೆಯಲ್ಲಿ ಕಂಸ, ಜರಾಸಂಧ,
ಹಿರಣ್ಯಕಷ್ಯಪ ಮುಂತಾದವರನ್ನು ತೋರಿಸಿದ್ದಾರೆ. ಕೃಷ್ಣನಿಗೆ ಕಳಂಕವನ್ನೂ ಹಾಕಿದ್ದಾರೆ.
ಸತ್ಯಯುಗದಲ್ಲಿ ಇವೆಲ್ಲವೂ ಇರಲು ಸಾಧ್ಯವಿಲ್ಲ. ಎಷ್ಟೊಂದು ಅಸತ್ಯವಾದ ಕಳಂಕಗಳನ್ನು ಹಾಕಿದ್ದಾರೆ.
ತಂದೆಗೂ ಸಹ ಕಳಂಕವನ್ನು ಹಾಕಿದ್ದಾರೆ, ದೇವತೆಗಳಿಗೂ ಹಾಕಿದ್ದಾರೆ. ಎಲ್ಲರ ನಿಂದನೆಯನ್ನು
ಮಾಡುತ್ತಿರುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ನೆನಪಿನ ಯಾತ್ರೆಯು ಆತ್ಮವನ್ನು
ಪವಿತ್ರವನ್ನಾಗಿ ಮಾಡುತ್ತದೆ. ಪಾವನರಾದ ನಂತರ ಪಾವನ ಪ್ರಪಂಚದಲ್ಲಿ ಹೋಗಬೇಕಾಗಿದೆ. ತಂದೆಯು 84
ಜನ್ಮಗಳ ಚಕ್ರದ ಬಗ್ಗೆಯೂ ತಿಳಿಸುತ್ತಾರೆ. ಈಗ ನಿಮ್ಮದು ಅಂತಿಮ ಜನ್ಮವಾಗಿದೆ ನಂತರ ಮನೆಗೆ
ಹೋಗಬೇಕಾಗಿದೆ. ಮನೆಗೆ ಹೋಗಬೇಕಾದರೆ ಶರೀರವು ಹೋಗಲು ಸಾಧ್ಯವಿಲ್ಲ. ಆತ್ಮರೆಲ್ಲರೂ ಹೋಗಬೇಕಾಗಿದೆ
ಆದ್ದರಿಂದ ಮಧುರಾತಿ ಮಧುರ ಮಕ್ಕಳೇ, ತಮ್ಮನ್ನು ಆತ್ಮವೆಂದು ತಿಳಿದು ಕುಳಿತುಕೊಳ್ಳಬೇಕು, ದೇಹವೆಂದು
ತಿಳಿಯಬಾರದು. ಅನ್ಯ ಸತ್ಸಂಗಗಳಲ್ಲಿ ದೇಹಾಭಿಮಾನಿಯಾಗಿಯೇ ಕುಳಿತುಕೊಳ್ಳುತ್ತೀರಿ, ಆದರೆ ಇಲ್ಲಿ
ದೇಹೀ-ಅಭಿಮಾನಿಯಾಗಿ ಕುಳಿತುಕೊಳ್ಳಿರಿ ಎಂದು ತಂದೆಯು ತಿಳಿಸುತ್ತಾರೆ. ಹೇಗೆ ನನ್ನಲ್ಲಿ ಈ
ಸಂಸ್ಕಾರವಿದೆ, ನಾನು ಜ್ಞಾನಸಾಗರನಾಗಿದ್ದೇನೆ..... ಅದೇ ರೀತಿ ನೀವು ಮಕ್ಕಳೂ ಸಹ ಆಗಬೇಕಾಗಿದೆ.
ಬೇಹದ್ದಿನ ತಂದೆ ಮತ್ತು ಹದ್ದಿನ ತಂದೆಯ ವ್ಯತ್ಯಾಸವನ್ನೂ ತಿಳಿಸುತ್ತಾರೆ. ಬೇಹದ್ದಿನ ತಂದೆಯು
ಕುಳಿತು ನಿಮಗೆ ಪೂರ್ಣಜ್ಞಾನವನ್ನು ತಿಳಿಸುತ್ತಾರೆ. ಮುಂಚೆ ತಿಳಿದುಕೊಂಡಿರಲಿಲ್ಲ, ಈಗ
ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ, ಅದರ ಆದಿ-ಮಧ್ಯ-ಅಂತ್ಯವೇನಾಗಿದೆ, ನಂತರ ಸೃಷ್ಟಿಯ ಆಯಸ್ಸು
ಎಷ್ಟಾಗಿದೆ ಎನ್ನುವುದೆಲ್ಲವನ್ನೂ ತಿಳಿಸುತ್ತಾರೆ. ಭಕ್ತಿಮಾರ್ಗದಲ್ಲಂತು ಕಲ್ಪದ ಆಯಸ್ಸನ್ನು
ಲಕ್ಷಾಂತರ ವರ್ಷಗಳೆಂದು ತಿಳಿಸಿ ಕಗ್ಗತ್ತಲಿನಲ್ಲಿ ಹಾಕಿಬಿಟ್ಟಿದ್ದಾರೆ. ಅದರಿಂದ ಕೆಳಗಿಳಿಯುತ್ತಲೇ
ಬಂದಿದ್ದಾರೆ. ನಾವು ಎಷ್ಟು ಭಕ್ತಿ ಮಾಡಿದ್ದೆವೆಯೋ ಅಷ್ಟು ತಂದೆಯನ್ನು ನಾವು ಸೆಳೆಯುತ್ತೇವೆ.
ತಂದೆಯು ಬಂದು ನಮ್ಮನ್ನು ಪಾವನರನ್ನಾಗಿ ಮಾಡುತ್ತಾರೆ ಎಂದೂ ಹೇಳುತ್ತೀರಲ್ಲವೆ. ತಂದೆಯನ್ನು
ಆಕರ್ಷಿಸುತ್ತೀರಿ ಏಕೆಂದರೆ ಪತಿತರಾಗಿದ್ದೀರಿ, ಬಹಳ ದುಃಖಿಗಳಾಗಿಬಿಟ್ಟಿದ್ದೀರಿ. ನಾವು ತಂದೆಯನ್ನು
ಕರೆಯುತ್ತೇವೆ, ನಾವು ಬಂದು 5000 ವರ್ಷಗಳು ಪೂರ್ಣವಾಯಿತೆಂದು ತಂದೆಯೂ ನೋಡುತ್ತಾರೆ, ಆಗ ಮತ್ತೆ
ಬರುತ್ತಾರೆ. ಈ ವಿದ್ಯೆಯು ಹಳೆಯ ಪ್ರಪಂಚಕ್ಕಾಗಿ ಇರುವುದಲ್ಲ, ನೀವಾತ್ಮರು ಧಾರಣೆ ಮಾಡಿಕೊಂಡಿ
ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತೀರಿ. ಹೇಗೆ ನಾನು ಜ್ಞಾನಸಾಗರನಾಗಿದ್ದೇನೆಯೋ ಹಾಗೆಯೇ ನೀವೂ ಸಹ
ಜ್ಞಾನನದಿಗಳಾಗಿದ್ದೀರಿ. ಜ್ಞಾನವು ಈ ಹಳೆಯ ಪ್ರಪಂಚಕ್ಕಾಗಿ ಇರುವುದಲ್ಲ, ಇದಂತು ಛೀ ಛೀ ಪ್ರಪಂಚ,
ಛೀ ಛೀ ಶರೀರವಾಗಿದೆ, ಇದನ್ನು ಇಲ್ಲಿಯೇ ಬಿಡಬೇಕಾಗಿದೆ. ಶರೀರವು ಇಲ್ಲಿ ಪವಿತ್ರರಾಗಿರಲು
ಸಾಧ್ಯವಿಲ್ಲ. ನಾನು ಆತ್ಮರ ತಂದೆಯಾಗಿದ್ದೇನೆ, ಆತ್ಮಗಳನ್ನೇ ಪವಿತ್ರರನ್ನಾಗಿ ಮಾಡಲು ಬಂದಿದ್ದೇನೆ
ಎಂಬ ಮಾತುಗಳನ್ನು ಮನುಷ್ಯರು ಅರಿತುಕೊಂಡಿಲ್ಲ. ಸಂಪೂರ್ಣವಾಗಿ ಕಲ್ಲುಬುದ್ಧಿ, ಪತಿತರಾಗಿದ್ದಾರೆ
ಆದ್ದರಿಂದ ಪತಿತ-ಪಾವನ..... ಎಂದು ಹಾಡುತ್ತಾರೆ. ಆತ್ಮವೇ ಪತಿತವಾಗಿದೆ, ಆತ್ಮವೇ ಎಲ್ಲವನ್ನೂ
ಮಾಡುತ್ತದೆ. ಭಕ್ತಿಯನ್ನು ಆತ್ಮವೇ ಮಾಡುತ್ತದೆ, ಆತ್ಮವೇ ಶರೀರವನ್ನು ತೆಗೆದುಕೊಳ್ಳುತ್ತದೆ.
ಈಗ ತಂದೆಯು
ತಿಳಿಸುತ್ತಾರೆ- ನಾನು ನೀವಾತ್ಮರನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ. ನಾನು ಬೇಹದ್ದಿನ ತಂದೆಯು
ನೀವಾತ್ಮರ ಕರೆಗೆ ಓಗೊಟ್ಟು ಬಂದಿದ್ದೇನೆ. ನೀವು ಎಷ್ಟೊಂದು ಕರೆದಿರಿ, ಹೇ ಪತಿತ-ಪಾವನ, ಓ
ಗಾಡ್-ಫಾದರ್ ಬಂದು ಈ ಹಳೆಯ ಪ್ರಪಂಚದ ದುಃಖದ ಭೂತಗಳಿಂದ ಮುಕ್ತರನ್ನಾಗಿ ಮಾಡಿರಿ. ಅದರಿಂದ
ನೀವೆಲ್ಲರೂ ಮನೆಗೆ ಹೊರಟುಹೋಗಬೇಕು ಎಂದು ಇಲ್ಲಿಯವರೆಗೂ ಕೂಗುತ್ತಾ ಇರುತ್ತಾರೆ. ನಮ್ಮ ಮನೆಯು
ಎಲ್ಲಿದೆ, ಮನೆಗೆ ಹೇಗೆ ಮತ್ತು ಯಾವಾಗ ಹೋಗುತ್ತೇವೆ ಎಂಬುದು ಮತ್ತ್ಯಾರಿಗೂ ಗೊತ್ತಿಲ್ಲ.
ಮುಕ್ತಿಯಲ್ಲಿ ಹೋಗುವುದಕ್ಕಾಗಿ ಎಷ್ಟೊಂದು ತಲೆಕೆಡಿಸಿಕೊಳ್ಳುತ್ತಾರೆ! ಎಷ್ಟೊಂದು ಮಂದಿ
ಗುರುಗಳನ್ನು ಮಾಡಿಕೊಳ್ಳುತ್ತಾರೆ! ಜನ್ಮ-ಜನ್ಮಾಂತರದಿಂದಲೂ ತಲೆಕೆಡಿಸಿಕೊಳ್ಳುತ್ತಾ ಬಂದಿದ್ದಾರೆ.
ಆ ಗುರುಗಳು ಜೀವನ್ಮುಕ್ತಿಯ ಸುಖವನ್ನಂತು ತಿಳಿದುಕೊಂಡಿಲ್ಲ. ಕೇವಲ ಅವರು ಮುಕ್ತಿಯನ್ನು
ಬಯಸುತ್ತಾರೆ, ವಿಶ್ವದಲ್ಲಿ ಶಾಂತಿಯು ಹೇಗಾಗುತ್ತದೆ ಎಂಬುದನ್ನೂ ಕೇಳುತ್ತಾರೆ. ಸನ್ಯಾಸಿಗಳೂ ಸಹ
ಮುಕ್ತಿಯನ್ನೇ ತಿಳಿದುಕೊಂಡಿದ್ದಾರೆ, ಜೀವನ್ಮುಕ್ತಿಯನ್ನು ತಿಳಿದುಕೊಂಡಿಲ್ಲ ಆದರೆ
ಮುಕ್ತಿ-ಜೀವನ್ಮುಕ್ತಿಯೆರಡನ್ನೂ ತಂದೆಯೇ ಕೊಡುತ್ತಾರೆ. ನೀವು ಜೀವನ್ಮುಕ್ತಿಯಲ್ಲಿದ್ದಾಗ
ಉಳಿದವರೆಲ್ಲರೂ ಮುಕ್ತಿಯಲ್ಲಿರುತ್ತಾರೆ. ಈಗ ನೀವು ಜೀವನ್ಮುಕ್ತರಾಗಲು ಜ್ಞಾನವನ್ನು
ತೆಗೆದುಕೊಳ್ಳುತ್ತಿದ್ದೀರಿ. ನೀವೇ ಎಲ್ಲರಿಗಿಂತ ಹೆಚ್ಚಿನ ಸುಖವನ್ನು ನೋಡಿದ್ದೀರಿ, ನಂತರ
ಎಲ್ಲರಿಗಿಂತಲೂ ಹೆಚ್ಚಿನ ದುಃಖವನ್ನೂ ನೀವೇ ನೋಡಿದ್ದೀರಿ. ಆದಿಸನಾತನ ದೇವಿ-ದೇವತಾಧರ್ಮದ ನೀವೇ
ಧರ್ಮಭ್ರಷ್ಟ, ಕರ್ಮಭ್ರಷ್ಟರಾಗಿಬಿಟ್ಟಿದ್ದೀರಿ. ನೀವು ಮೊದಲು ಪವಿತ್ರ ಪ್ರವೃತ್ತಿ
ಮಾರ್ಗದವರಾಗಿದ್ದಿರಿ, ಈ ಲಕ್ಷ್ಮೀ-ನಾರಾಯಣರು ಪವಿತ್ರ ಪ್ರವೃತ್ತಿ ಮಾರ್ಗದವರಾಗಿದ್ದಾರೆ.
ಮನೆ-ಮಠವನ್ನು ಬಿಡುವುದು- ಸನ್ಯಾಸಿಗಳ ಧರ್ಮವಾಗಿದೆ, ಸನ್ಯಾಸಿಗಳೂ ಸಹ ಮೊದಲು ಚೆನ್ನಾಗಿದ್ದರು,
ನೀವೂ ಸಹ ಮೊದಲು ಚೆನ್ನಾಗಿದ್ದಿರಿ, ಈಗಷ್ಟೇ ತಮೋಪ್ರಧಾನರಾಗಿದ್ದೀರಿ. ತಂದೆಯು ತಿಳಿಸುತ್ತಾರೆ-
ಇದು ಡ್ರಾಮಾದ ಆಟವಾಗಿದೆ. ಈ ವಿದ್ಯೆಯು ಹೊಸ ಪ್ರಪಂಚಕ್ಕಾಗಿಯೇ ಇದೆ. ಪತಿತ ಶರೀರ, ಪತಿತ
ಪ್ರಪಂಚದಲ್ಲಿ ಡ್ರಾಮಾನುಸಾರವಾಗಿ ನಾವು ಮತ್ತೆ 5000 ವರ್ಷಗಳ ನಂತರ ಬರಲೇಬೇಕಾಗುತ್ತದೆ. ಕಲ್ಪವು
ಲಕ್ಷಾಂತರ ವರ್ಷಗಳದ್ದೂ ಅಲ್ಲ, ನಾನು ಸರ್ವವ್ಯಾಪಿಯೂ ಅಲ್ಲ. ಸರ್ವವ್ಯಾಪಿಯೆಂದು ಹೇಳುತ್ತಾರೆ,
ನೀವು ನನ್ನ ನೊಂದಣಿ ಮಾಡುತ್ತಾ ಬಂದಿದ್ದೀರಿ, ಆದರೂ ಸಹ ನಾನು ನಿಮಗೆ ಎಷ್ಟೊಂದು ಉಪಕಾರ
ಮಾಡುತ್ತೇನೆ. ಶಿವತಂದೆಯ ನಿಂದನೆಯು ಎಷ್ಟೊಂದು ಮಾಡಿದ್ದಾರೆಯೋ, ಅವರಿಗಾಗಿ ನೀವು ಸರ್ವವ್ಯಾಪಿ
ಎಂದು ಹೇಳುತ್ತಲೇ ಬಂದಿದ್ದೀರಿ. ಯಾವಾಗ ನಿಂದನೆಯು ಮಿತಿಯಾಗುತ್ತದೆಯೋ ಆಗ ನಾನು ಬಂದು ಉಪಕಾರ
ಮಾಡುತ್ತೇನೆ. ಇದು ಪುರುಷೋತ್ತಮ ಸಂಗಮಯುಗ, ಕಲ್ಯಾಣಕಾರಿ ಯುಗವಾಗಿದೆ. ಈಗ ನಿಮ್ಮನ್ನು
ಪವಿತ್ರರನ್ನಾಗಿ ಮಾಡಲು ಬರುತ್ತೇನೆ. ಪಾವನರಾಗಲು ಎಷ್ಟು ಸಹಜವಾದ ಯುಕ್ತಿಯನ್ನು ತಿಳಿಸುತ್ತಾರೆ.
ನೀವು ಭಕ್ತಿಮಾರ್ಗದಲ್ಲಿ ಬಹಳ ಅಲೆದಾಡುತ್ತಾ ಬಂದಿದ್ದೀರಿ, ಕೊಳದಲ್ಲಿ ಸ್ನಾನ ಮಾಡುವುದಕ್ಕಾಗಿ
ಹೋಗುತ್ತಾರೆ, ಇದರಿಂದ ಪಾವನರಾಗಿಬಿಡುತ್ತೇವೆ ಎಂದು ತಿಳಿಯುತ್ತಾರೆ. ಈಗ ಆ ನೀರೆಲ್ಲಿ! ಮತ್ತು
ಪತಿತ-ಪಾವನ ತಂದೆಯೆಲ್ಲಿ! ಅದೆಲ್ಲವೂ ಭಕ್ತಿಮಾರ್ಗವಾಗಿದೆ, ಇದು ಜ್ಞಾನಮಾರ್ಗವಾಗಿದೆ. ಮನುಷ್ಯರು
ಎಷ್ಟೊಂದು ಘೋರ ಅಂಧಕಾರದಲ್ಲಿದ್ದಾರೆ. ಕುಂಭಕರ್ಣನ ನಿದ್ರೆಯಲ್ಲಿ ಮಲಗಿದ್ದಾರೆ. ಇದಂತು ನಿಮಗೆ
ತಿಳಿದಿದೆ- ವಿನಾಶಕಾಲೇ ವಿಪರೀತ ಬುದ್ಧಿ ವಿನಃಶ್ಯಂತಿ. ಈಗ ನಿಮ್ಮದು ನಂಬರ್ವಾರ್
ಪುರುಷಾರ್ಥದನುಸಾರವಾಗಿ ಪ್ರೀತಿಬುದ್ಧಿಯಿದೆ. ಸಂಪೂರ್ಣವಿಲ್ಲ ಏಕೆಂದರೆ ಮಾಯೆಯು ಪದೇ-ಪದೇ
ಮರೆಸಿಬಿಡುತ್ತದೆ. ಇದು ಪಂಚವಿಕಾರಗಳ ಯುದ್ಧವಾಗಿದೆ. ಪಂಚವಿಕಾರಗಳಿಗೆ ರಾವಣನೆಂದು ಹೇಳಲಾಗುತ್ತದೆ.
ರಾವಣನ ತಲೆಯ ಮೇಲೆ ಕತ್ತೆಯ ತಲೆಯನ್ನು ತೋರಿಸುತ್ತಾರೆ. ಮನುಷ್ಯರೂ ಸಹ ಕತ್ತೆಯ
ಬುದ್ಧಿಯವರಾಗಿಬಿಟ್ಟಿದ್ದಾರೆ.
ತಂದೆಯು ಇದನ್ನೂ ಸಹ
ತಿಳಿಸಿದ್ದಾರೆ- ಶಾಲೆಯಲ್ಲಿ ಎಂದೂ ಸಹ ಕಣ್ಣುಗಳನ್ನು ಮುಚ್ಚಿ ಕುಳಿತುಕೊಳ್ಳುವುದಿಲ್ಲ. ಈ ರೀತಿ
ಕಣ್ಣು ಮುಚ್ಚಿ ಕುಳಿತುಕೊಂಡು ಭಗವಂತನನ್ನು ನೆನಪು ಮಾಡಿ ಎಂದು ಭಕ್ತಿಮಾರ್ಗದಲ್ಲಿ ಶಿಕ್ಷಣವನ್ನು
ಕೊಡುತ್ತಾರೆ. ಇಲ್ಲಂತು ತಂದೆಯು ತಿಳಿಸುತ್ತಾರೆ- ಇದಂತು ಶಾಲೆಯಾಗಿದೆ. ಅರೆ! ದೇವತೆಗಳೂ ಸಹ
ದೃಷ್ಟಿಯಿಂದ ಸೃಷ್ಟಿಯಾಗುತ್ತಾರೆ ಎಂಬ ಗಾಯನವಿದೆಯಲ್ಲವೆ, ದೃಷ್ಟಿಯಿಂದ ಮನುಷ್ಯರನ್ನು
ದೇವತೆಗಳನ್ನಾಗಿ ಮಾಡುವವರೇ ಜಾದೂಗಾರನಾಗಿದ್ದಾರೆ. ತಂದೆಯು ಕುಳಿತು ಆತ್ಮರೂಪಿ ಬ್ಯಾಟರಿಯನ್ನು
ಚಾರ್ಚ್ ಮಾಡುತ್ತಿರಬೇಕಾದರೆ ಕಣ್ಣುಮುಚ್ಚಿ ಕುಳಿತುಕೊಳ್ಳುವುದನ್ನು ಏನೆಂದು ಹೇಳುವುದು!
ಶಾಲೆಯಲ್ಲಿ ಕಣ್ಣುಗಳನ್ನು ಮುಚ್ಚಿ ಕುಳಿತುಕೊಳ್ಳುವುದಿಲ್ಲ. ಆ ರೀತಿ ಕುಳಿತುಕೊಂಡರೆ ಆಲಸ್ಯವು
ಬಂದುಬಿಡುತ್ತದೆ. ಶಾಲೆಯಲ್ಲಿ ಎಂದೂ ಸಹ ಆಕಳಿಸುವುದಿಲ್ಲ. ವಿದ್ಯೆಯು ಆದಾಯದ ಮೂಲವಾಗಿದೆ, ಪದುಮಗಳ
ಸಂಪಾದನೆಯಿದೆ. ಇಲ್ಲಿ ಆತ್ಮರನ್ನು ಸುಧಾರಣೆ ಮಾಡಬೇಕಾಗಿದೆ. ಈ ಗುರಿ-ಉದ್ದೇಶವು ಸನ್ಮುಖದಲ್ಲಿದೆ.
ಅವರ ರಾಜಧಾನಿಯನ್ನು ನೋಡಬೇಕಾದರೆ ದಿಲ್ವಾಲಾ ಮಂದಿರವನ್ನು ನೋಡಿರಿ. ಅದು ಜಡ ದಿಲ್ವಾಲ
ಮಂದಿರವಾಗಿದೆ, ಇದು (ಮಧುಬನ) ಚೈತನ್ಯ ದಿಲ್ವಾಲಾ ಮಂದಿರವಾಗಿದೆ. ದೇವತೆಗಳೂ ಇದ್ದಾರೆ, ಸ್ವರ್ಗವೂ
ಇದೆ. ಸರ್ವರ ಸದ್ಗತಿದಾತನು ಅಬುವಿನಲ್ಲಿಯೇ ಬರುತ್ತಾರೆ ಆದ್ದರಿಂದ ಅತಿದೊಡ್ಡ ತೀರ್ಥಸ್ಥಾನವೂ ಸಹ
ಅಬುಪರ್ವತವಾಯಿತು. ಯಾರೆಲ್ಲಾ ಧರ್ಮಸ್ಥಾಪಕರು ಮತ್ತು ಗುರುಗಳಿದ್ದಾರೆಯೋ, ಅವರೆಲ್ಲರ ಸದ್ಗತಿಯನ್ನು
ತಂದೆಯು ಇಲ್ಲಿಗೆ ಬಂದು ಕೊಡುತ್ತಾರೆ. ಇದು ಎಲ್ಲದಕ್ಕಿಂತ ಅತಿದೊಡ್ಡ ತೀರ್ಥಸ್ಥಾನವಾಗಿದೆ, ಆದರೆ
ಗುಪ್ತವಾಗಿದೆ. ಇದನ್ನು ಯಾರೂ ತಿಳಿದುಕೊಂಡಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಯಾವ
ಸಂಸ್ಕಾರವು ತಂದೆಯಲ್ಲಿದೆಯೋ ಅದೇ ಸಂಸ್ಕಾರಗಳನ್ನು ಧಾರಣೆ ಮಾಡಿಕೊಳ್ಳಬೇಕು. ತಂದೆಯ ಸಮಾನ
ಜ್ಞಾನಸಾಗರನಾಗಬೇಕು. ಆತ್ಮಾಭಿಮಾನಿಯಾಗುವ ಅಭ್ಯಾಸವನ್ನು ಮಾಡಬೇಕಾಗಿದೆ.
2. ಆತ್ಮವೆಂಬ
ಬ್ಯಾಟರಿಯನ್ನು ಸತೋಪ್ರಧಾನವನ್ನಾಗಿ ಮಾಡಿಕೊಳ್ಳಲು ನಡೆಯುತ್ತಾ-ತಿರುಗಾಡುತ್ತಾ ನೆನಪಿನ
ಯಾತ್ರೆಯಲ್ಲಿರಬೇಕಾಗಿದೆ. ದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಬಹಳ-ಬಹಳ ಮಧುರರಾಗಬೇಕಾಗಿದೆ.
ವರದಾನ:
ತ್ರಿಕಾಲದರ್ಶಿಯಾಗಿ ದಿವ್ಯ ಬುದ್ಧಿಯ ವನ್ನು ಕಾರ್ಯದಲ್ಲಿ ತೊಡಗಿಸುವಂತಹ ಸಫಲತಾ ಸಂಪನ್ನ ಭವ.
ಬಾಪ್ದಾದಾರವರು ಎಲ್ಲಾ
ಮಕ್ಕಳಿಗೂ ದಿವ್ಯ ಬುದ್ಧಿಯ ವರದಾನವನ್ನು ಕೊಟ್ಟಿದ್ದಾರೆ. ದಿವ್ಯ ಬುದ್ಧಿಯಿಂದಲೇ ತಂದೆಯನ್ನು
ಸ್ವಯಂ ಅನ್ನು ಮತ್ತು ಮೂರೂ ಕಾಲಗಳನ್ನು ಸ್ಪಷ್ಟವಾಗಿ ತಿಳಿಯಲು ಸಾಧ್ಯ. ಸರ್ವ ಶಕ್ತಿಗಳನ್ನು ಧಾರಣೆ
ಮಾಡಲು ಸಾಧ್ಯ. ದಿವ್ಯ ಬುದ್ಧಿಯುಳ್ಳ ಆತ್ಮ ಯಾವುದೇ ಸಂಕಲ್ಪವನ್ನು ಕಾರ್ಯದಲ್ಲಿ ಅಥವಾ ವಾಣಿಯಲ್ಲಿ
ತರುವ ಮೊದಲು ಪ್ರತಿ ಮಾತು ಅಥವಾ ಕರ್ಮದ ಮೂರೂ ಕಾಲಗಳನ್ನು ತಿಳಿದು ನಂತರ ಕಾರ್ಯ ರೂಪದಲ್ಲಿ
ತರುತ್ತಾರೆ. ಅವರ ಮುಂದೆ. ಭೂತ ಮತ್ತು ಭವಿಷ್ಯ ಸಹ ಇಷ್ಟು ಸ್ಪಷ್ಟವಾಗಿರುತ್ತದೆ ಹೇಗೆ ವರ್ತಮಾನ
ಸ್ಪಷ್ಟವಾಗಿರುವುದು ಹಾಗೆ. ಈ ರೀತಿಯ ದಿವ್ಯ ಬುದ್ಧಿಯುಳ್ಳವರು ತ್ರಿಕಾಲದರ್ಶಿಯಾಗಿರುವ ಕಾರಣ ಸದಾ
ಸಫಲತಾ ಸಂಪನ್ನರಾಗಿರುತ್ತಾರೆ.
ಸ್ಲೋಗನ್:
ಸಂಪೂರ್ಣ
ಪವಿತ್ರತೆಯನ್ನು ಧಾರಣೆ ಮಾಡುವಂತಹವರೇ ಪರಮಾನಂದದ ಅನುಭವ ಮಾಡಲು ಸಾಧ್ಯ.