11.09.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ನೀವು
ಇಡೀ ಪ್ರಪಂಚದ ಸತ್ಯ-ಸತ್ಯವಾದ ಮಿತ್ರರಾಗಿದ್ದೀರಿ, ಅಂದಮೇಲೆ ನಿಮಗೆ ಯಾರೊಂದಿಗೂ
ಶತ್ರುತ್ವವಿರಬಾರದು"
ಪ್ರಶ್ನೆ:
ನೀವು ಆತ್ಮಿಕ
ಸೈನಿಕರಾಗಿದ್ದೀರಿ, ನಿಮಗೆ ತಂದೆಯ ಯಾವ ಆದೇಶವು ಸಿಕ್ಕಿದೆ, ಅದನ್ನು ಕಾರ್ಯದಲ್ಲಿ ತರಬೇಕಾಗಿದೆ?
ಉತ್ತರ:
ನಿಮಗೆ ತಂದೆಯ
ಆದೇಶವಾಗಿದೆ - ಸದಾ ಬ್ಯಾಡ್ಜ್ನ್ನು ಹಾಕಿಕೊಂಡಿರಿ, ಯಾರಾದರೂ ಇದೇನು? ನೀವು ಯಾರು? ಎಂದು ಕೇಳಿದರೆ
ತಿಳಿಸಿ, ನಾವು ಇಡೀ ಪ್ರಪಂಚದಿಂದ ಕಾಮಾಗ್ನಿಯನ್ನು ಆರಿಸುವಂತಹ ಅಗ್ನಿಶಾಮಕ ದಳದವರಾಗಿದ್ದೇವೆ. ಈ
ಸಮಯದಲ್ಲಿ ಇಡೀ ಪ್ರಪಂಚದಲ್ಲಿ ಕಾಮಾಗ್ನಿಯು ಹತ್ತಿಕೊಂಡಿದೆ. ನಾವು ಎಲ್ಲರಿಗೆ ಸಂದೇಶ ಕೊಡುತ್ತೇವೆ
- ಈಗ ಪವಿತ್ರರಾಗಿ ದೈವೀ ಗುಣಗಳನ್ನು ಧಾರಣೆ ಮಾಡಿ ಆಗ ನಿಮ್ಮ ಜೀವನದ ದೋಣಿಯು ಪಾರಾಗುವುದು.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಸಹಜವಾಗಿ ನೆನಪಿನಲ್ಲಿ ಕುಳಿತಿದ್ದೀರಿ, ಕೆಲಕೆಲವರಿಗೆ
ಕಷ್ಟವೆನಿಸುತ್ತದೆ. ನಾವು ಟೈಟ್ ಅಥವಾ ಹಠವಾಗಿ ಕುಳಿತುಕೊಳ್ಳಬೇಕೇನೋ ಎಂದು ತಬ್ಬಿಬ್ಬಾಗುತ್ತಾರೆ
ಆದರೆ ತಂದೆಯು ತಿಳಿಸುತ್ತಾರೆ - ಇಂತಹ ಮಾತೇನೂ ಇಲ್ಲ. ಹೇಗಾದರೂ ಕುಳಿತುಕೊಳ್ಳಿ ಕೇವಲ ತಂದೆಯನ್ನು
ನೆನಪು ಮಾಡಿ. ಇದರಲ್ಲಿ ಯಾವುದೇ ಕಷ್ಟದ ಮಾತಿಲ್ಲ. ಆ ಹಠಯೋಗಿಗಳು ಹೀಗೆ ಟೈಟ್ ಆಗಿ
ಕುಳಿತುಕೊಳ್ಳುತ್ತಾರೆ. ಕಾಲಿನ ಮೇಲೆ ಕಾಲು ಹಾಕಿಕೊಂಡು (ಪದ್ಮಾಸನ) ಕುಳಿತುಕೊಳ್ಳುತ್ತಾರೆ.
ಇಲ್ಲಂತೂ ತಂದೆಯು ತಿಳಿಸುತ್ತಾರೆ - ಆರಾಮವಾಗಿ ಕುಳಿತುಕೊಳ್ಳಿ, ತಂದೆ ಮತ್ತು 84 ಜನ್ಮಗಳ
ಚಕ್ರವನ್ನು ನೆನಪು ಮಾಡಿ. ಇದು ಸಹಜ ನೆನಪಾಗಿದೆ. ಏಳುತ್ತಾ-ಕುಳಿತುಕೊಳ್ಳುತ್ತಾ ಬುದ್ಧಿಯಲ್ಲಿರಲಿ.
(ಅಲ್ಲಿ ಮುಂದೆ ಕುಳಿತಿರುವ ಚಿಕ್ಕ ಮಗುವನ್ನು ತೋರಿಸುತ್ತಾ) ಹೇಗೆ ನೋಡಿ, ಈ ಚಿಕ್ಕ ಮಗು ತನ್ನ
ತಂದೆಯ ಪಕ್ಕದಲ್ಲಿ ಕುಳಿತಿದೆ. ಈ ಮಗುವಿಗೆ ಬುದ್ಧಿಯಲ್ಲಿ ತಂದೆ-ತಾಯಿಯ ನೆನಪೇ ಇರುತ್ತದೆ ಹಾಗೆಯೇ
ನೀವೂ ಮಕ್ಕಳಲ್ಲವೆ. ತಂದೆಯನ್ನು ನೆನಪು ಮಾಡುವುದು ಬಹಳ ಸಹಜವಾಗಿದೆ. ನಾವು ತಂದೆಯ
ಮಕ್ಕಳಾಗಿದ್ದೇವೆ. ತಂದೆಯಿಂದಲೇ ಆಸ್ತಿಯನ್ನು ಪಡೆಯಬೇಕಾಗಿದೆ. ಶರೀರ ನಿರ್ವಹಣಾರ್ಥವಾಗಿ ಭಲೆ
ಗೃಹಸ್ಥ ವ್ಯವಹಾರದಲ್ಲಿರಿ, ಕೇವಲ ಬುದ್ಧಿಯಿಂದ ಅನ್ಯರ ನೆನಪನ್ನು ತೆಗೆದು ಹಾಕಿ. ಕೆಲವರು
ಹನುಮಂತನನ್ನು, ಕೆಲವರು ಸಾಧು-ಸಂತ ಮೊದಲಾದವರನ್ನು ನೆನಪು ಮಾಡುತ್ತಿದ್ದಿರಿ. ಈಗ ಆ ನೆನಪನ್ನೇ
ಬಿಡಬೇಕಾಗಿದೆ. ನೆನಪನ್ನಂತೂ ಮಾಡುತ್ತೀರಲ್ಲವೆ. ಪೂಜೆಗಾಗಿ ಪೂಜಾರಿಯು ಮಂದಿರಕ್ಕೆ
ಹೋಗಬೇಕಾಗುತ್ತದೆ ಆದರೆ ಇಲ್ಲಿ ಎಲ್ಲಿಗೂ ಹೋಗುವ ಅವಶ್ಯಕತೆಯಿಲ್ಲ. ಯಾರಾದರೂ ಸಿಗಲಿ ಅವರಿಗೆ
ತಿಳಿಸಿ – ಶಿವ ತಂದೆಯ ಹೇಳಿಕೆಯಾಗಿದೆ, ನನ್ನೊಬ್ಬನನ್ನು ನೆನಪು ಮಾಡಿ. ಶಿವ ತಂದೆಯು
ನಿರಾಕಾರನಾಗಿದ್ದಾರೆ ಅಂದಮೇಲೆ ಅವರು ಅವಶ್ಯವಾಗಿ ಸಾಕಾರದಲ್ಲಿಯೇ ಬಂದು ತಿಳಿಸುತ್ತಾರೆ - ಮಕ್ಕಳೇ,
ನನ್ನೊಬ್ಬನನ್ನೇ ನೆನಪು ಮಾಡಿ. ನಾನು ಪತಿತ-ಪಾವನನಾಗಿದ್ದೇನೆ, ಇದಂತೂ ಸರಿಯಾದ ಶಬ್ಧವಲ್ಲವೆ.
ನನ್ನನ್ನು ನೆನಪು ಮಾಡಿ. ನೀವೆಲ್ಲರೂ ಪತಿತರಾಗಿದ್ದೀರಿ. ಇದು ಪತಿತ-ತಮೋಪ್ರಧಾನ ಪ್ರಪಂಚವಲ್ಲವೆ
ಆದ್ದರಿಂದ ಮಕ್ಕಳು ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ. ಇದು ಒಳ್ಳೆಯ ಮಾತಲ್ಲವೆ. ಯಾವುದೇ
ಗುರು ಮೊದಲಾದವರ ಮಹಿಮೆ ಮಾಡುವುದಿಲ್ಲ. ತಂದೆಯು ಕೇವಲ ಇಷ್ಟನ್ನೇ ತಿಳಿಸುತ್ತಾರೆ - ನನ್ನನ್ನು
ನೆನಪು ಮಾಡಿದರೆ ನಿಮ್ಮ ಪಾಪಗಳು ಕಳೆಯುತ್ತವೆ. ಇದು ಯೋಗಬಲ ಅಥವಾ ಯೋಗಾಗ್ನಿಯಾಗಿದೆ. ಗೀತೆಯ
ಭಗವಂತನು ನಿರಾಕಾರನೇ ಆಗಿದ್ದಾರೆ ಎಂದು ಬೇಹದ್ದಿನ ತಂದೆಯು ಸತ್ಯವನ್ನೇ ಹೇಳುತ್ತಾರಲ್ಲವೆ.
ಕೃಷ್ಣನ ಮಾತಿಲ್ಲ. ಭಗವಂತನು ತಿಳಿಸುತ್ತಾರೆ - ಕೇವಲ ನನ್ನನ್ನು ನೆನಪು ಮಾಡಿ, ಇದನ್ನು ಬಿಟ್ಟರೆ
ಮತ್ತ್ಯಾವುದೇ ಉಪಾಯವಿಲ್ಲ. ಪಾವನರಾಗಿ ಹೋದಾಗಲೇ ಶ್ರೇಷ್ಠಪದವಿಯನ್ನು ಪಡೆಯುವಿರಿ, ಇಲ್ಲದಿದ್ದರೆ
ಪದವಿಯು ಕಡಿಮೆಯಾಗುವುದು. ನಾವು ನಿಮಗೆ ತಂದೆಯ ಸಂದೇಶವನ್ನು ಕೊಡುತ್ತೇವೆ. ನಾನು
ಸಂದೇಶಿಯಾಗಿದ್ದೇನೆ, ಇದನ್ನು ತಿಳಿಸುವುದರಲ್ಲಿ ಯಾವುದೇ ತೊಂದರೆಯಿಲ್ಲ. ಮಾತೆಯರು, ಅಹಲ್ಯೆಯರು,
ಕುಬ್ಜೆಯರೂ ಸಹ ಶ್ರೇಷ್ಠ ಪದವಿಯನ್ನು ಪಡೆಯಬಹುದಾಗಿದೆ. ಭಲೆ ಇಲ್ಲಿರುವವರಾಗಿರಲಿ,
ಗೃಹಸ್ಥದಲ್ಲಿರುವವರೇ ಆಗಿರಲಿ ಹಾಗೆಂದು ಇಲ್ಲಿರುವವರು ಹೆಚ್ಚು ನೆನಪು ಮಾಡುತ್ತಾರೆಂದಲ್ಲ. ತಂದೆಯು
ತಿಳಿಸುತ್ತಾರೆ - ಹೊರಗೆ ಇರುವವರೂ ಸಹ ಬಹಳ ನೆನಪಿನಲ್ಲಿರಬಹುದು. ಬಹಳ ಸರ್ವೀಸ್ ಮಾಡಬಹುದು.
ಇಲ್ಲಿಯೂ ತಂದೆಯಿಂದ ರಿಫ್ರೆಷ್ ಆಗಿ ಹೋಗುತ್ತೀರೆಂದರೆ ಆಂತರ್ಯದಲ್ಲಿ ಎಷ್ಟೊಂದು ಖುಷಿಯಿರಬೇಕು! ಈ
ಛೀ ಛೀ ಪ್ರಪಂಚವಂತೂ ಇನ್ನು ಕೆಲವೇ ದಿನಗಳಿವೆ. ಕೃಷ್ಣನ ಮಂದಿರವನ್ನು ಸುಖಧಾಮವೆಂದು ಹೇಳುತ್ತಾರೆ
ಅಂದಮೇಲೆ ಮಕ್ಕಳಿಗೆ ಅಪಾರ ಖುಷಿಯಿರಬೇಕು. ಯಾವಾಗ ನೀವೇ ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಿ,
ನಿಮ್ಮನ್ನೇ ಸ್ವರ್ಗದ ಮಾಲೀಕರನ್ನಾಗಿ ಮಾಡಿದ್ದೆನು. ಬಾಬಾ, 5000 ವರ್ಷಗಳ ಹಿಂದೆಯೂ ಸಹ ನಾವು
ತಮ್ಮೊಂದಿಗೆ ಮಿಲನ ಮಾಡಿದ್ದೆವು, ಈಗ ಪುನಃ ಮಿಲನ ಮಾಡುತ್ತೇವೆಂದು ಮಕ್ಕಳೂ ಹೇಳುತ್ತೀರಿ. ಈಗ
ತಂದೆಯನ್ನು ನೆನಪು ಮಾಡುವುದರಿಂದ ಮಾಯೆಯ ಮೇಲೆ ಜಯ ಗಳಿಸಬೇಕಾಗಿದೆ. ಈಗ ಈ ದುಃಖಧಾಮದಲ್ಲಂತೂ
ಇರುವಂತಿಲ್ಲ. ನೀವು ಸುಖಧಾಮದಲ್ಲಿ ಹೋಗುವುದಕ್ಕಾಗಿಯೇ ಓದುತ್ತೀರಿ. ಎಲ್ಲರೂ ತಮ್ಮ
ಲೆಕ್ಕಾಚಾರಗಳನ್ನು ಮುಗಿಸಿ ಹಿಂತಿರುಗಿ ಹೋಗಬೇಕಾಗಿದೆ. ನಾನು ಹೊಸ ಪ್ರಪಂಚದ ಸ್ಥಾಪನೆ
ಮಾಡುವುದಕ್ಕಾಗಿಯೇ ಬಂದಿದ್ದೇನೆ. ಬಾಕಿ ಎಲ್ಲಾ ಆತ್ಮಗಳು ಮುಕ್ತಿಧಾಮಕ್ಕೆ ಹೊರಟು ಹೋಗುವರು. ನಾನು
ಕಾಲರ ಕಾಲ ಮಹಾಕಾಲನಾಗಿದ್ದೇನೆ, ಎಲ್ಲರನ್ನೂ ಶರೀರದಿಂದ ಬಿಡಿಸಿ ಆತ್ಮಗಳನ್ನು ಕರೆದುಕೊಂಡು
ಹೋಗುತ್ತೇನೆ. ಬಾಬಾ, ನಾವು ಬೇಗನೆ ಹೋಗಬೇಕು, ಇಲ್ಲಿ ಇರಬಾರದು, ಇದು ಹಳೆಯ ಪ್ರಪಂಚ, ಹಳೆಯ
ಶರೀರವಾಗಿದೆ ಎಂದು ಎಲ್ಲರೂ ಹೇಳುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನು ಎಲ್ಲರನ್ನೂ
ಕರೆದುಕೊಂಡು ಹೋಗುತ್ತೇನೆ, ಯಾರನ್ನೂ ಬಿಡುವುದಿಲ್ಲ. ಹೇ ಪತಿತ-ಪಾವನ ಬನ್ನಿ ಎಂದು ನೀವೆಲ್ಲರೂ
ಕರೆದಿರಿ. ಭಲೆ ನೆನಪು ಮಾಡುತ್ತಿರುತ್ತಾರೆ ಆದರೆ ಅರ್ಥವೇನನ್ನೂ ತಿಳಿದುಕೊಳ್ಳುವುದಿಲ್ಲ.
ಪತಿತ-ಪಾವನನೆಂದು ಎಷ್ಟೊಂದು ಭಜನೆ ಮಾಡುತ್ತಿರುತ್ತಾರೆ - ರಘುಪತಿ ರಾಘವ ರಾಜಾರಾಂ...... ಎಂದು
ಹೇಳುತ್ತಿರುತ್ತಾರೆ. ಶಿವ ತಂದೆಯಂತು ರಾಜನಾಗುವುದಿಲ್ಲ, ರಾಜ್ಯಭಾರ ಮಾಡುವುದಿಲ್ಲ. ಅವರಿಗೆ
ರಾಜಾರಾಂ ಎಂದು ಹೇಳುವುದು ತಪ್ಪಾಗಿದೆ. ಮಾಲೆಯನ್ನು ಜಪಿಸುವಾಗ ರಾಮ-ರಾಮ ಎಂದು ಹೇಳುತ್ತಾರೆ.
ಅದರಲ್ಲಿ ಭಗವಂತನ ನೆನಪು ಬರುತ್ತದೆ. ಭಗವಂತನು ಶಿವನಾಗಿದ್ದಾರೆ. ಮನುಷ್ಯರು ಅನೇಕ
ಹೆಸರುಗಳನ್ನಿಟ್ಟಿದ್ದಾರೆ. ಹೇಗೆ ಕೃಷ್ಣನಿಗೂ ಸಹ ಶ್ಯಾಮ ಸುಂದರ, ವೈಕುಂಠನಾಥ, ಬೆಣ್ಣೆ
ಕದ್ದವನೆಂದು ಅನೇಕ ಹೆಸರುಗಳನ್ನಿಡುತ್ತಾರೆ. ನೀವೀಗ ಕೃಷ್ಣನಿಗೆ ಬೆಣ್ಣೆ ಕದ್ದವನೆಂದು ಹೇಳುವಿರಾ?
ಖಂಡಿತವಾಗಿಯೂ ಇಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ಭಗವಂತನು ಒಬ್ಬ ನಿರಾಕಾರನಾಗಿದ್ದಾರೆ.
ಯಾವುದೇ ದೇಹಧಾರಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಬ್ರಹ್ಮಾ, ವಿಷ್ಣು, ಶಂಕರನಿಗೂ
ಹೇಳುವುದಿಲ್ಲ ಅಂದಮೇಲೆ ಮನುಷ್ಯರು ತಮಗೆ ಭಗವಂತನೆಂದು ಹೇಳಿಕೊಳ್ಳಲು ಹೇಗೆ ಸಾಧ್ಯ! ವೈಜಯಂತಿ
ಮಾಲೆಯು ಕೇವಲ 108 ಮಣಿಗಳದೆಂದು ಗಾಯನವಿದೆ. ಶಿವ ತಂದೆಯು ಸ್ವರ್ಗದ ಸ್ಥಾಪನೆ ಮಾಡಿದರು. ಅದಕ್ಕೆ
ಈ ದೇವತೆಗಳು ಮಾಲೀಕರಾಗಿದ್ದಾರೆ. ಅವಶ್ಯವಾಗಿ ಅವರು ಅದಕ್ಕಿಂತ ಮೊದಲು ಈ ಪುರುಷಾರ್ಥ
ಮಾಡಿರಬೇಕಲ್ಲವೆ. ಆ ಸಮಯಕ್ಕೆ ಕಲಿಯುಗದ ಅಂತ್ಯ, ಸತ್ಯಯುಗದ ಆದಿಯ ಸಂಗಮಯುಗವೆಂದು ಹೇಳಲಾಗುತ್ತದೆ,
ಅದು ಇದೇ ಸಮಯವಾಗಿದೆ. ಇದು ಕಲ್ಪದ ಸಂಗಮಯುಗವಾಗಿದೆ. ಇದನ್ನು ಮನುಷ್ಯರು ಯುಗೇ ಯುಗೇ ಎಂದು ಹೇಳಿ
ಬಿಟ್ಟಿದ್ದಾರೆ. ಅವತಾರವೆಂಬ ಹೆಸರನ್ನೂ ಮರೆತು ಅವರನ್ನು ಕಲ್ಲು ಮುಳ್ಳು, ಕಣ ಕಣದಲ್ಲಿದ್ದಾರೆಂದು
ಹೇಳಿದ್ದಾರೆ. ಇದೂ ನಾಟಕವಾಗಿದೆ. ಯಾವ ಮಾತು ಕಳೆದು ಹೋಗುವುದೋ ಅದಕ್ಕೆ ನಾಟಕವೆಂದು ಹೇಳಲಾಗುತ್ತದೆ.
ಯಾರೊಂದಿಗಾದರೂ ಜಗಳವಾಯಿತು, ಕಳೆದು ಹೋಯಿತು ಎಂದರೆ ಮತ್ತೆ ಅದರ ಚಿಂತನೆ ಮಾಡಬಾರದು. ಒಳ್ಳೆಯದು -
ಯಾರಾದರೂ ಹೆಚ್ಚು-ಕಡಿಮೆ ಮಾತನಾಡಿದರೂ ಸಹ ನೀವು ಅದನ್ನು ಮರೆತು ಹೋಗಿ. ಕಲ್ಪದ ಮೊದಲೂ ಹೀಗೆ
ಮಾತನಾಡಿದ್ದರು. ಈ ನೆನಪಿದ್ದರೆ ಮತ್ತೆ ಮುನಿಸಿಕೊಳ್ಳುತ್ತಿರುತ್ತಾರೆ ಆದ್ದರಿಂದ ಆ ಮಾತನ್ನು
ಮತ್ತೆಂದೂ ಹೇಳಲೂಬೇಡಿ, ನೀವು ಮಕ್ಕಳು ಸರ್ವೀಸ್ ಮಾಡಬೇಕಲ್ಲವೆ. ಸೇವೆಯಲ್ಲಿ ಯಾರೂ
ವಿಘ್ನರೂಪವಾಗಬಾರದು. ಸೇವೆಯಲ್ಲಿ ನಿರ್ಬಲತೆಯನ್ನು ತೋರಿಸಬಾರದು. ಶಿವ ತಂದೆಯ ಸೇವೆಯಲ್ಲವೆ.
ಅದರಲ್ಲೆಂದೂ ನಾ (ಇಲ್ಲ) ಎಂದು ಹೇಳಬಾರದು. ಇಲ್ಲವಾದರೆ ತಮ್ಮ ಪದವಿ ಭ್ರಷ್ಟ ಮಾಡಿಕೊಳ್ಳುವಿರಿ.
ತಂದೆಗೆ ಸಹಯೋಗಿಗಳಾಗಿದ್ದೀರೆಂದರೆ ಪೂರ್ಣ ಸಹಯೋಗ ಕೊಡಬೇಕಾಗಿದೆ. ತಂದೆಯ ಸೇವೆ ಮಾಡುವುದರಲ್ಲಿ
ಮೋಸ ಮಾಡಬಾರದು. ಎಲ್ಲರಿಗೆ ಸಂದೇಶವನ್ನು ಕೊಡಲೇಬೇಕಾಗಿದೆ. ತಂದೆಯು ತಿಳಿಸುತ್ತಿರುತ್ತಾರೆ -
ಮಕ್ಕಳೇ, ಮ್ಯೂಸಿಯಂನ ಹೆಸರನ್ನು ಈ ರೀತಿಯಿಡಿ, ಮನುಷ್ಯರು ಅದನ್ನು ನೋಡುತ್ತಿದ್ದಂತೆಯೇ ಒಳಗೆ
ಪ್ರವೇಶಿಸಿ ತಿಳಿದುಕೊಳ್ಳಲಿ ಏಕೆಂದರೆ ಇದು ಹೊಸದಲ್ಲವೆ! ಮನುಷ್ಯರು ಹೊಸವಸ್ತುವನ್ನು ನೋಡಿ ಒಳಗೆ
ಪ್ರವೇಶಿಸುತ್ತಾರೆ. ಈಗಂತೂ ವಿದೇಶದಿಂದಲೂ ಸಹ ಭಾರತದ ಪ್ರಾಚೀನ ಯೋಗವನ್ನು ಕಲಿಯಲು ಬರುತ್ತಾರೆ.
ಪ್ರಾಚೀನವೆಂದರೆ ಹಳೆಯದಕ್ಕಿಂತ ಹಳೆಯದು. ಅದು ಭಗವಂತನೇ ಕಲಿಸಿರುವುದಾಗಿದೆ ಯಾವುದಕ್ಕೆ 5000
ವರ್ಷಗಳಾಯಿತು. ಸತ್ಯ-ತ್ರೇತಾಯುಗದಲ್ಲಿ ಯೋಗವಿರುವುದಿಲ್ಲ. ಯಾರು ಕಲಿಸಿದರೋ ಅವರಂತೂ ಹೊರಟು ಹೋದರು
ಮತ್ತೆ 5000 ವರ್ಷಗಳ ನಂತರ ಯಾವಾಗ ಬರುವರೋ ಆಗಲೇ ರಾಜಯೋಗವನ್ನು ಕಲಿಸುವರು. ಪ್ರಾಚೀನ ಅರ್ಥಾತ್
5000 ವರ್ಷಗಳ ಮೊದಲೂ ಸಹ ಭಗವಂತನು ಕಲಿಸಿಕೊಟ್ಟಿದ್ದರು, ಅದೇ ಭಗವಂತನು ಮತ್ತೆ ಸಂಗಮದಲ್ಲಿಯೇ ಬಂದು
ರಾಜಯೋಗವನ್ನು ಕಲಿಸುತ್ತಾರೆ, ಇದರಿಂದ ಪಾವನರಾಗುತ್ತೀರಿ. ಈ ಸಮಯದಲ್ಲಿ ತತ್ವಗಳೂ ಸಹ
ತಮೋಪ್ರಧಾನವಾಗಿವೆ. ಈಗ ನೀರೂ ಸಹ ಎಷ್ಟು ನಷ್ಟವನ್ನುಂಟು ಮಾಡುತ್ತದೆ. ಹಳೆಯ ಪ್ರಪಂಚದಲ್ಲಿ
ಉಪದ್ರವಗಳಾಗುತ್ತಿರುತ್ತವೆ. ಸತ್ಯಯುಗದಲ್ಲಿ ಉಪದ್ರವಗಳ ಮಾತೇ ಇಲ್ಲ. ಅಲ್ಲಿ ಪ್ರಕೃತಿಯು ದಾಸಿಯಾಗಿ
ಬಿಡುತ್ತದೆ. ಇಲ್ಲಿ ಪ್ರಕೃತಿಯು ಶತ್ರುವಾಗಿ ದುಃಖ ಕೊಡುತ್ತದೆ. ಈ ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ
ದುಃಖದ ಮಾತೇ ಇರಲಿಲ್ಲ. ಸತ್ಯಯುಗವಂತು ಈಗ ಮತ್ತೆ ಅದು ಸ್ಥಾಪನೆಯಾಗುತ್ತಿದೆ. ತಂದೆಯು ಪ್ರಾಚೀನ
ರಾಜಯೋಗವನ್ನು ಕಲಿಸುತ್ತಿದ್ದಾರೆ ಮತ್ತೆ 5000 ವರ್ಷಗಳ ನಂತರವೂ ಕಲಿಸುತ್ತಾರೆ. ಯಾರ ಪಾತ್ರವಿದೆಯೋ
ಅವರೇ ಅಭಿನಯಿಸುತ್ತಾರೆ. ಬೇಹದ್ದಿನ ತಂದೆಯೂ ಸಹ ಪಾತ್ರವನ್ನಭಿನಯಿಸುತ್ತಿದ್ದಾರೆ. ತಂದೆಯು
ತಿಳಿಸುತ್ತಾರೆ - ನಾನು ಇವರಲ್ಲಿ ಪ್ರವೇಶ ಮಾಡಿ, ಸ್ಥಾಪನೆ ಮಾಡಿ ಹೊರಟು ಹೋಗುತ್ತೇನೆ. ಆಹಾಕಾರದ
ನಂತರ ಮತ್ತೆ ಜಯ ಜಯಕಾರವಾಗುವುದು. ಹಳೆಯ ಪ್ರಪಂಚವು ಸಮಾಪ್ತಿಯಾಗುತ್ತದೆ. ಈ ಲಕ್ಷ್ಮೀ-ನಾರಾಯಣರ
ರಾಜ್ಯವಿದ್ದಾಗ ಹಳೆಯ ಪ್ರಪಂಚವೇ ಇರಲಿಲ್ಲ, ಇದು 5000 ವರ್ಷಗಳ ಮಾತಾಗಿದೆ. ಲಕ್ಷಾಂತರ ವರ್ಷಗಳ
ಮಾತಿರಲು ಸಾಧ್ಯವಿಲ್ಲ ಆದ್ದರಿಂದ ತಂದೆಯು ಹೇಳುತ್ತಾರೆ, ಈಗ ಮತ್ತೆಲ್ಲಾ ಮಾತುಗಳನ್ನು ಬಿಟ್ಟು
ತಮ್ಮ ಕಲ್ಯಾಣ ಮಾಡಿಕೊಳ್ಳಲು ಈ ಸರ್ವೀಸಿನಲ್ಲಿ ತೊಡಗಿರಿ. ಮುನಿಸಿಕೊಂಡು ಸರ್ವೀಸಿನಲ್ಲಿ ಮೋಸ
ಮಾಡಬೇಡಿ. ಇದು ಈಶ್ವರೀಯ ಸೇವೆಯಾಗಿದೆ, ಇದರಲ್ಲಿ ಬಹಳಷ್ಟು ಮಾಯೆಯ ಬಿರುಗಾಳಿಗಳು ಬರುತ್ತವೆ ಆದರೆ
ತಂದೆಯ ಸೇವೆಯಲ್ಲಿ ವಿಘ್ನರೂಪವಾಗಬೇಡಿ. ತಂದೆಯು ಸೇವಾರ್ಥವಾಗಿ ಆದೇಶವನ್ನು ಕೊಡುತ್ತಿರುತ್ತಾರೆ.
ಮಿತ್ರ-ಸಂಬಂಧಿ ಮೊದಲಾದವರು ಯಾರೇ ಬರಲಿ ಎಲ್ಲರಿಗೆ ಸತ್ಯ ಮಿತ್ರರು ನೀವಾಗಿದ್ದೀರಿ. ನೀವೇ
ಬ್ರಹ್ಮಾಕುಮಾರ-ಕುಮಾರಿಯರು ಇಡೀ ಪ್ರಪಂಚದ ಮಿತ್ರರಾಗಿದ್ದೀರಿ ಏಕೆಂದರೆ ನೀವು ತಂದೆಗೆ
ಸಹಯೋಗಿಗಳಾಗಿದ್ದೀರಿ. ಮಿತ್ರರಲ್ಲಿ ಯಾವುದೇ ಶತೃತ್ವವಿರಬಾರದು. ಯಾವುದೇ ಮಾತು ಬಂದರೆ ಹೇಳಿ, ಶಿವ
ತಂದೆಯನ್ನು ನೆನಪು ಮಾಡಿ ಎಂದು. ತಂದೆಯ ಶ್ರೀಮತದ ಮೇಲೆ ತೊಡಗಬೇಕಾಗಿದೆ ಇಲ್ಲವಾದರೆ ತಮ್ಮದೇ ನಷ್ಟ
ಮಾಡಿಕೊಳ್ಳುತ್ತೀರಿ. ರೈಲಿನಲ್ಲಿ ಪ್ರಯಾಣಿಸುವಾಗ ಅಲ್ಲಂತೂ ಎಲ್ಲರೂ ಬಿಡುವಾಗಿರುತ್ತೀರಿ. ಸೇವೆ
ಮಾಡಲು ಬಹಳ ಒಳ್ಳೆಯ ಅವಕಾಶವಿದೆ ಅದಕ್ಕಾಗಿ ಬ್ಯಾಡ್ಜ್ ಬಹಳ ಒಳ್ಳೆಯ ವಸ್ತುವಾಗಿದೆ. ಇದನ್ನು
ಪ್ರತಿಯೊಬ್ಬರೂ ಹಾಕಿಕೊಂಡಿರಬೇಕು. ತಾವು ಯಾರು ಎಂದು ಯಾರಾದರೂ ಕೇಳಿದರೆ ತಿಳಿಸಿ, ನಾವು ಅಗ್ನಿ
ಶಾಮಕ ದಳದವರಾಗಿದ್ದೇವೆ. ಹೇಗೆ ಆ ಅಗ್ನಿ ಶಾಮಕ ದಳದವರು ಸ್ಥೂಲ ಬೆಂಕಿಯನ್ನು ಆರಿಸುವುದಕ್ಕಾಗಿ
ಇರುತ್ತಾರೆ, ಈ ಸಮಯದಲ್ಲಿ ಇಡೀ ಸೃಷ್ಟಿಯಲ್ಲಿ ಎಲ್ಲರೂ ಕಾಮಾಗ್ನಿಯಲ್ಲಿ ಸುಟ್ಟು ಹೋಗಿದ್ದಾರೆ
ಆದ್ದರಿಂದ ತಂದೆಯು ಹೇಳುತ್ತಾರೆ - ಕಾಮ ಮಹಾಶತ್ರುವಿನ ಮೇಲೆ ಜಯ ಗಳಿಸಿರಿ. ತಂದೆಯನ್ನು ನೆನಪು
ಮಾಡಿ ಪವಿತ್ರರಾಗಿ, ದೈವೀ ಗುಣಗಳನ್ನು ಧಾರಣೆ ಮಾಡಿ ಆಗ ದೋಣಿಯು ಪಾರಾಗುವುದು. ಈ ಬ್ಯಾಡ್ಜ್
ಶ್ರೀಮತದನುಸಾರವೇ ಮಾಡಲ್ಪಟ್ಟಿದೆ, ಬಹಳ ಕೆಲವರೇ ಮಕ್ಕಳು ಈ ಬ್ಯಾಡ್ಜ್ನಿಂದ ಸರ್ವೀಸ್ ಮಾಡುತ್ತಾರೆ.
ತಂದೆಯು ಮುರುಳಿಗಳಲ್ಲಿ ಎಷ್ಟೊಂದು ತಿಳಿಸುತ್ತಿರುತ್ತಾರೆ ಅಂದಮೇಲೆ ಪ್ರತಿಯೊಬ್ಬ ಬ್ರಾಹ್ಮಣನ ಬಳಿ
ಈ ಬ್ಯಾಡ್ಜ್ ಇರಬೇಕು. ಯಾರೇ ಸಿಕ್ಕಿದರೂ ಸಹ ಅವರಿಗೆ ಇದರ ಮೇಲೆ ತಿಳಿಸಿಕೊಡಿ, ಇವರು
ತಂದೆಯಾಗಿದ್ದಾರೆ, ಇವರನ್ನು ನೆನಪು ಮಾಡಬೇಕಾಗಿದೆ. ನಾವು ಈ ಸಾಕಾರ ಮನುಷ್ಯರ ಮಹಿಮೆ
ಮಾಡುತ್ತಿಲ್ಲ. ಸರ್ವರ ಸದ್ಗತಿದಾತನು ಒಬ್ಬರೇ ನಿರಾಕಾರ ತಂದೆಯಾಗಿದ್ದಾರೆ, ಅವರನ್ನು ನೆನಪು
ಮಾಡಬೇಕಾಗಿದೆ. ನೆನಪಿನ ಬಲದಿಂದಲೇ ನಿಮ್ಮ ಪಾಪಗಳು ಕಳೆಯುವುದು ನಂತರ ಅಂತಿಮ ಗತಿ ಸೋ ಗತಿಯಾಗುವುದು.
ದುಃಖಧಾಮದಿಂದ ಮುಕ್ತರಾಗುವಿರಿ ನಂತರ ನೀವು ವಿಷ್ಣು ಪುರಿಯಲ್ಲಿ ಬರುತ್ತೀರಿ, ಇದು ಎಷ್ಟು ಒಳ್ಳೆಯ
ಶುಭ ಸಮಾಚಾರವಾಗಿದೆ! ನೀವು ಈ ಪುಸ್ತಕಗಳನ್ನೂ ಸಹ ಕೊಡಬಹುದು. ತಿಳಿಸಿ, ನೀವು ಬಡವರಾಗಿದ್ದೀರಿ
ಆದ್ದರಿಂದ ನಿಮಗೆ ಉಚಿತವಾಗಿ ಕೊಡುತ್ತೇವೆ. ಸಾಹುಕಾರರಂತೂ ಹಣವನ್ನು ಕೊಡಲೇಬೇಕು ಏಕೆಂದರೆ ಈ
ಪುಸ್ತಕಗಳನ್ನು ಬಹಳಷ್ಟು ಮುದ್ರಿಸಬೇಕಾಗಿದೆ. ಇದು ಇಂತಹ ವಸ್ತುವಾಗಿದೆ, ಇದರಿಂದ ನೀವು
ಬಿಕಾರಿಗಳಿಂದ ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ಯಾವುದೇ ಧರ್ಮದವರಿರಲಿ, ಎಲ್ಲರಿಗೂ ತಿಳಿಸಿ -
ವಾಸ್ತವದಲ್ಲಿ ನೀವು ಆತ್ಮರಾಗಿದ್ದೀರಿ. ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ,
ಈಗ ವಿನಾಶವು ಸನ್ಮುಖದಲ್ಲಿದೆ, ಈ ಪ್ರಪಂಚವು ಪರಿವರ್ತನೆಯಾಗಲಿದೆ ಆದ್ದರಿಂದ ಶಿವ ತಂದೆಯನ್ನೂ
ನೆನಪು ಮಾಡಿರಿ ಆಗ ವಿಷ್ಣು ಪುರಿಯಲ್ಲಿ ಬಂದು ಬಿಡುತ್ತೀರಿ. ತಿಳಿಸಿ, ತಮಗೆ ಪದುಮಗಳಷ್ಟು ಬೆಲೆ
ಬಾಳುವ ಈ (ಪುಸ್ತಕ) ವಸ್ತುವನ್ನು ಕೊಡುತ್ತಿದ್ದೇವೆ. ಈ ಬ್ಯಾಡ್ಜ್ನಿಂದ ಸರ್ವೀಸ್ ಮಾಡಿ ಎಂದು
ತಂದೆಯು ಬಹಳಷ್ಟು ತಿಳಿಸಿದ್ದಾರೆ ಆದರೆ ಬ್ಯಾಡ್ಜ್ ಹಾಕಿಕೊಳ್ಳುವುದೇ ಇಲ್ಲ, ಕೆಲವರಿಗೆ
ನಾಚಿಕೆಯಾಗುತ್ತದೆ. ಬ್ರಾಹ್ಮಣಿಯರು ಯಾರು ಪಾರ್ಟಿಯನ್ನು ಕರೆದುಕೊಂಡು ಬರುತ್ತೀರಿ ಅಥವಾ
ಎಲ್ಲಿಯಾದರೂ ಕಛೇರಿಗಳಿಗೆ ಒಂಟಿಯಾಗಿ ಹೋಗುತ್ತೀರೆಂದರೆ ಈ ಬ್ಯಾಡ್ಜ್ ಅವಶ್ಯವಾಗಿ ಹಾಕಿಕೊಂಡಿರಬೇಕು.
ಇದರ ಬಗ್ಗೆ ನೀವು ತಿಳಿಸಿದಾಗ ಬಹಳ ಖುಷಿ ಪಡುತ್ತಾರೆ. ತಿಳಿಸಿಕೊಡಿ, ನಾವು ಒಬ್ಬ ತಂದೆಯನ್ನೇ
ಒಪ್ಪುತ್ತೇವೆ. ಅವರೇ ಎಲ್ಲರಿಗೆ ಸುಖ, ಶಾಂತಿಯನ್ನು ಕೊಡುವವರಾಗಿದ್ದೇವೆ. ಅವರನ್ನು ನೆನಪು ಮಾಡಿರಿ.
ಪತಿತ ಆತ್ಮನಂತೂ ಹೋಗಲು ಸಾಧ್ಯವಿಲ್ಲ, ಈಗ ಈ ಹಳೆಯ ಪ್ರಪಂಚವು ಬದಲಾಗುತ್ತಿದೆ. ಹೀಗೆ ರಸ್ತೆಯಲ್ಲಿ
ಸರ್ವೀಸ್ ಮಾಡುತ್ತಾ ಬರಬೇಕು. ನಿಮ್ಮ ಹೆಸರು ಬಹಳ ಪ್ರಸಿದ್ಧವಾಗುವುದು ಆದರೆ ಕೆಲವರು
ಬ್ಯಾಡ್ಜ್ನ್ನು ಹಾಕಿಕೊಂಡು ಸರ್ವೀಸ್ ಮಾಡುವುದಿಲ್ಲ. ಭಹುಷಃ ನಾಚಿಕೆಯಾಗುತ್ತದೆಯೆಂದು ತಂದೆಯು
ತಿಳಿದುಕೊಳ್ಳುತ್ತಾರೆ. ಮೊದಲನೆಯದಾಗಿ ಬ್ಯಾಡ್ಜ್, ಏಣಿಯ ಚಿತ್ರ ಅಥವಾ ತ್ರಿಮೂರ್ತಿ, ಗೋಲ ಮತ್ತು
ಕಲ್ಪವೃಕ್ಷದ ಚಿತ್ರವು ಜೊತೆಯಲ್ಲಿರಲಿ. ಪರಸ್ಪರ ಕುಳಿತು ಒಬ್ಬರು ಇನ್ನೊಬ್ಬರಿಗೆ ತಿಳಿಸಿ ಆಗ
ಎಲ್ಲರೂ ಬಂದು ಸೇರುತ್ತಾರೆ. ಇದೇನು ಎಂದು ಕೇಳುತ್ತಾರೆ ಆಗ ತಿಳಿಸಿ, ಶಿವ ತಂದೆಯು ಇವರ ಮೂಲಕ ಈ
ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದಾರೆ. ಈಗ ತಂದೆಯು ತಿಳಿಸುತ್ತಿದ್ದಾರೆ - ನನ್ನನ್ನು
ನೆನಪು ಮಾಡಿ, ಪವಿತ್ರರಾಗಿ. ಅಪವಿತ್ರರಂತೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಇಂತಹ ಮಧುರಾತಿ
ಮಧುರ ಮಾತುಗಳನ್ನು ತಿಳಿಸಿ ಕೊಡಬೇಕು ಆಗ ಎಲ್ಲರೂ ಖುಷಿಯಿಂದ ಕೇಳುತ್ತಾರೆ ಆದರೆ ಕೆಲವರ
ಬುದ್ಧಿಯಲ್ಲಿ ಕುಳಿತುಕೊಳ್ಳುವುದೇ ಇಲ್ಲ. ಸೇವಾಕೇಂದ್ರಕ್ಕೆ ಮುರುಳಿಯನ್ನು ಕೇಳಲು ಹೋದಾಗಲೂ ಸಹ
ಬ್ಯಾಡ್ಜ್ ಹಾಕಿಕೊಂಡಿರಬೇಕು. ಹೇಗೆ ಮಿಲಿಟರಿಯವರಿಗೂ ಸಹ ಬ್ಯಾಡ್ಜ್ ಹಾಕಲ್ಪಟ್ಟಿರುತ್ತದೆ,
ಅವರಿಗೆಂದಾದರೂ ನಾಚಿಕೆಯಾಗುತ್ತದೆಯೇ? ನೀವೂ ಸಹ ಆತ್ಮೀಯ ಸೈನಿಕರಲ್ಲವೆ. ತಂದೆಯು ಸಲಹೆ
ನೀಡುತ್ತಾರೆಂದರೆ ಕಾರ್ಯದಲ್ಲೇಕೆ ತರುವುದಿಲ್ಲ! ಬ್ಯಾಡ್ಜ್ ಹಾಕಿಕೊಂಡಿದ್ದಾಗ ನಾವು ಶಿವ ತಂದೆಯ
ಮಕ್ಕಳೆಂದು ತಂದೆಯ ನೆನಪಿರುವುದು. ದಿನ-ಪ್ರತಿದಿನ ಸೇವಾಕೇಂದ್ರಗಳು ತೆರೆಯುತ್ತಾ ಹೋಗುತ್ತವೆ.
ಒಬ್ಬರಲ್ಲ ಒಬ್ಬರು ಬಂದೇ ಬರುತ್ತಾರೆ. ಇಂತಹ ನಗರದಲ್ಲಿ ತಮ್ಮ ಸೇವಾಕೇಂದ್ರವಿಲ್ಲವೆಂದು
ಹೇಳುತ್ತಾರೆ ಆಗ ತಿಳಿಸಿ, ಯಾರಾದರೂ ಮನೆ ಇತ್ಯಾದಿಗಳ ಪ್ರಬಂಧ ಮಾಡಿ ನಿಮಂತ್ರಣ ಕೊಟ್ಟರೆ ನಾವು
ಬಂದು ಸರ್ವೀಸ್ ಮಾಡುತ್ತೇವೆ. ಸಾಹಸ ಮಕ್ಕಳದು, ಸಹಯೋಗ ತಂದೆಯದು. ತಂದೆಯಂತೂ ಮಕ್ಕಳಿಗೇ
ಹೇಳುತ್ತಾರೆ - ಸೇವಾಕೇಂದ್ರಗಳನ್ನು ತೆರೆಯಿರಿ, ಸರ್ವೀಸ್ ಮಾಡಿ. ಇವೆಲ್ಲವೂ ಶಿವ ತಂದೆಯ
ಅಂಗಡಿಗಳಲ್ಲವೆ! ತಂದೆಯು ಮಕ್ಕಳ ಮೂಲಕ ನಡೆಸುತ್ತಿದ್ದಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಎಂದೂ
ಪರಸ್ಪರ ಮುನಿಸಿಕೊಂಡು ಸರ್ವೀಸಿನಲ್ಲಿ ಮೋಸ ಮಾಡಬಾರದು, ವಿಘ್ನರೂಪವಾಗಬಾರದು. ತನ್ನ
ನಿರ್ಬಲತೆಯನ್ನು ತೋರಿಸಬಾರದು, ತಂದೆಗೆ ಸಂಪೂರ್ಣ ಸಹಯೋಗಿಗಳಾಗಬೇಕು.
2. ಎಂದಾದರೂ
ಯಾರೊಂದಿಗಾದರೂ ಜಗಳವಾಯಿತು, ಅದು ಕಳೆದು ಹೋಯಿತೆಂದರೆ ಮತ್ತೆ ಅದರ ಚಿಂತನೆ ಮಾಡಬಾರದು, ಯಾರಾದರೂ
ಹೆಚ್ಚು ಕಡಿಮೆ ಮಾತನಾಡಿದರೂ ಸಹ ನೀವು ಅದನ್ನು ಮರೆತು ಬಿಡಿ. ಕಲ್ಪದ ಹಿಂದೆಯೂ ಹೀಗೆ
ಮಾತನಾಡಿದ್ದರು, ಆ ಮಾತನ್ನು ಮತ್ತೆಂದೂ ಮಾತನಾಡಲೂಬೇಡಿ.
ವರದಾನ:
ಶಾಂತಿಯ ದೂತರಾಗಿ
ಸರ್ವರಿಗೆ ಶಾಂತಿಯ ಸಂದೇಶ ಕೊಡುವಂತಹ ಮಾಸ್ಟರ್ ಶಾಂತಿ,ಶಕ್ತಿದಾತಾ ಭವ.
ತಾವು ಮಕ್ಕಳು ಶಾಂತಿಯ
ಸಂದೇಶವಾಹಕರು ಶಾಂತಿಯ ದೂತರಾಗಿರುವಿರಿ. ಎಲ್ಲೇ ಇದ್ದರೂ ಸದಾ ನಿಮ್ಮನ್ನು ಶಾಂತಿ ದೂತ ಎಂದು
ತಿಳಿದು ನಡೆಯಿರಿ.ಶಾಂತಿಯ ದೂತರಾಗಿರುವಿರಿ. ಶಾಂತಿಯ ಸಂದೇಶ ಕೊಡುವಂತಹವರು ಇದರಲ್ಲಿ ಸ್ವಯಂ ಸಹಾ
ಶಾಂತಿ ಸ್ವರೂಪ ಶಕ್ತಿಶಾಲಿಗಳಾಗಿರುವಿರಿ ಮತ್ತು ಬೇರೆಯವರಿಗೂ ಸಹಾ ಶಾಂತಿಯನ್ನು ಕೊಡುತ್ತಿರುವಿರಿ.
ಅವರು ಅಶಾಂತಿ ಕೊಟ್ಟರೂ ನೀವು ಶಾಂತಿಯನ್ನು ಕೊಡಿ. ಅವರು ಬೆಂಕಿ ಹಚ್ಚಲಿ ನೀವು ನೀರನ್ನು ಹಾಕಿ.
ಇದೇ ನೀವು ಶಾಂತಿಯ ಮೆಸೆಂಜರ್, ಮಾಸ್ಟರ್ ಶಾಂತಿ, ಶಕ್ತಿ ದಾತಾ ಮಕ್ಕಳ ಕರ್ತವ್ಯವಾಗಿದೆ.
ಸ್ಲೋಗನ್:
ಹೇಗೆ ಶಬ್ಧದಲ್ಲಿ
ಬರುವುದು ಸಹಜ ಎನ್ನಿಸುತ್ತದೆ ಹಾಗೆಯೆ ಶಬ್ಧದಿಂದ ದೂರ ಹೋಗುವುದೂ ಸಹಾ ಸಹಜವಾಗಬೇಕು.
ಅವ್ಯಕ್ತ ಸೂಚನೆ:- ಈಗ
ಲಗನ್ನಿನ (ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೋಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.
ಯೋಗದಲ್ಲಿ ಸದಾ ಲೈಟ್
ಹೌಸ್ ಮತ್ತು ಮೈಟ್ ಹೌಸ್ನ ಸ್ಥಿತಿಯ ಅನುಭವ ಮಾಡಿ. ಜ್ಞಾನವು ಲೈಟ್ ಆಗಿದೆ ಮತ್ತು ಯೋಗವು ಮೈಟ್
ಆಗಿದೆ. ಜ್ಞಾನ ಮತ್ತು ಯೋಗ – ಎರಡು ಶಕ್ತಿಗಳು ಲೈಟ್ ಮತ್ತು ಮೈಟ್ ಸಂಪನ್ನವಾಗಿರಲಿ - ಇದಕ್ಕೆ
ಹೇಳಲಾಗುತ್ತದೆ ಮಾಸ್ಟರ್ ಸರ್ವಶಕ್ತಿವಂತ. ಇಂತಹ ಶಕ್ತಿಶಾಲಿ ಆತ್ಮರು ಯಾವುದೇ ಪರಿಸ್ಥಿತಿಗಳನ್ನು
ಸೆಕೆಂಡಿನಲ್ಲಿ ಪಾರು ಮಾಡಿ ಬಿಡುತ್ತಾರೆ.