11.10.26    Avyakt Bapdada     Kannada Murli    18.01.2012     Om Shanti     Madhuban


“ಸೇವೆಗಳ ಜೊತೆ-ಜೊತೆ ಒಬ್ಬರಿಗೊಬ್ಬರು ಸಹಯೋಗಿಗಳಾಗಿ ವಾಯುಮಂಡಲದಲ್ಲಿ ತೀರ್ವ ಪುರುಷಾರ್ಥದ ಅಲೆ ಹರಡಿಸಿ, ಮನಜೀತರಾಗಿ ಆತ್ಮಗಳ ಮನಸಾ ಸೇವೆ ಮಾಡಿ”


ಇಂದು ವಿಶೇಷ ಸ್ನೇಹದ ದಿನವಾಗಿದೆ. ನಾಲ್ಕಾರು ಕಡೆಯ ಮಕ್ಕಳು ಸ್ನೇಹ ಸ್ವರೂಪದಿಂದ ಮಿಲನ ಆಚರಿಸುತ್ತಿದ್ದಾರೆ. ತಾವೆಲ್ಲರೂ ಸಹ ಸ್ನೇಹ ಸ್ವರೂಪದಲ್ಲಿ ಮಗ್ನರಾಗಿರುವಿರಿ. ಇಂದು ಅಮೃತವೇಳೆಯಿಂದ ನಾಲ್ಕಾರು ಕಡೆಯ ಮಕ್ಕಳು ಅಮೃತವೇಳೆಗಿಂತಲೂ ಮುಂಚೆ ಸ್ನೇಹ ರೂಪದಿಂದ ಹೃದಯದ ಸ್ನೇಹವನ್ನು ಮುತ್ತುಗಳ ಮಾಲೆಗಳನ್ನು ತಗೆದುಕೊಂಡು ತಲುಪಿದ್ದರು. ಅನೇಕ ಪ್ರಕಾರದ ಭಿನ್ನ-ಭಿನ್ನ ಮನದ ಭಾವನೆಗಳನ್ನು ತಂದೆಯ ಮುಂದೆ ವರ್ಣನೆ ಮಾಡುತ್ತಿದ್ದರು. ತಾವು ತಿಳಿದಿರುವಿರಿ ಮಕ್ಕಳ ಸ್ನೇಹ ಎಷ್ಟು ಪ್ರಿಯವಾಗಿರುತ್ತದೆ. ಭಿನ್ನ-ಭಿನ್ನ ಭಾಷೆಗಳು, ಭಿನ್ನ-ಭಿನ್ನ ಭಾವಗಳಿಂದ ಬಾಪ್ದಾದಾರವರ ಮುಂದೆ ತಮ್ಮ ಹೃದಯದ ಮಾತನ್ನು ಹೇಳುತ್ತಿದ್ದರು ಮತ್ತು ನಯನಗಳಿಂದ ಮುಖದಿಂದ ತಮ್ಮ ಭಾವವನ್ನೂ ಸ್ಪಷ್ಟ ಮಾಡುತ್ತಿದ್ದರು. ಬಾಪ್ದಾದಾ ನಾಲ್ಕಾರು ಕಡೆಯ ಮಕ್ಕಳ ಸ್ನೇಹದ ಭಾವವನ್ನು ನೋಡಿ ಎಲ್ಲರ ಸ್ನೇಹದಲ್ಲಿ ಸಮಾವೇಶವಾದರು ಮತ್ತು ಹೃದಯದಿಂದ ಇದೇ ಮಾತು ಬಂದಿತು ವಾಹ್ ಮಕ್ಕಳೇ ವಾಹ್! ಮತ್ತು ಮಕ್ಕಳ ಮುಖದಿಂದ ವಾಹ್ ಬಾಬಾ ವಾಹ್!ದ ಗೀತೆ ಕೇಳುತ್ತಿತ್ತು. ಬಾಪ್ದಾದಾ ಪ್ರತಿಯೊಬ್ಬ ಮಗುವನ್ನು ನೋಡಿ ಮಕ್ಕಳ ಪ್ರೀತಿಯಲ್ಲಿ ಲೀನವಾಗಿದ್ದರು ಮತ್ತು ಮಕ್ಕಳು ತಂದೆಯ ಪ್ರೀತಿಯಲ್ಲಿ ಲೀನವಾಗಿದ್ದರು.

ಇಂದಿನದಿನ ತಂದೆ ಮಕ್ಕಳಿಗೆ ಬಾಲಕ್ ಸೋ ಮಾಲಿಕ್ ಮಾಡಲು ದೃಷ್ಟಿಯಿಂದ ನೋಡುತ್ತಿದ್ದರು. ಇಂದಿನ ದಿನ ಮಕ್ಕಳ ರಾಜ ತಿಲಕದ ದಿನವಾಗಿದೆ. ಇಂದಿನದಿನ ಬಾಪ್ದಾದಾ ಸ್ವಯಂ ಫರಿಶ್ತೆ ರೂಪದಲ್ಲಿದ್ದು ಮಕ್ಕಳನ್ನು ವಿಶ್ವ ಸೇವಾರ್ಥ ನಿಮಿತ್ತ ಮಾಡಿದರು. ಸ್ವಯಂ ಬೆನ್ನುಲು ಬಾದರು, ಮಕ್ಕಳನ್ನು ವಿಶ್ವದ ಸ್ಟೇಜಿನಲ್ಲಿ ಪ್ರತ್ಯಕ್ಷ ಮಾಡಿದರು. ಮತ್ತು ಬಾಪ್ದಾದಾ ಈಗ ಮಕ್ಕಳ ಸೇವೆಯನ್ನು ನೋಡಿ, ಯಾವ ಜವಾಬ್ದಾರಿ ಕೊಟ್ಟಿತ್ತು ಅದರ ರಿಜಲ್ಟ್ನ್ನು ನೋಡಿ ಮಕ್ಕಳಮೇಲೆ ಬಹಳ-ಬಹಳ ಖುಷಿಯಾಗಿದ್ದಾರೆ ಮತ್ತು ಹೃದಯದಿಂದ ಶುಭಾಷಯ ಕೊಡುತ್ತಿದ್ದಾರೆ. ಶುಭಾಷಯಗಳು, ಶುಭಾಷಯಗಳು.

ಬಾಪ್ದಾದಾ ನೋಡಿದರು ಈಗಲೂ ತಂದೆಯ ಮೂಲಕ ಕೊಟ್ಟಿರುವ ವಿಶ್ವ ಸೇವಾದಾರಿಯ ವರದಾನ ಪ್ರತಿಯೊಂದು ಮಗು ಅತೀ ಸ್ನೇಹ ಮತ್ತು ಹೃದಯದಿಂದ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ರಿಜಲ್ಟ್ನ್ನೂ ಬಾಪ್ದಾದಾ ನೊಡಿದರು, ಪ್ರತಿಯೊಂದು ಮಗುವಿನ ಹೃದಯದಲ್ಲಿ ಲಗನ್ ಇದೆ ನನ್ನ ಬಾಬಾ ಮತ್ತು ತಂದೆಯ ಹೃದಯದಲ್ಲೂ ಸ್ನೇಹವಿದೆ ವಾಹ್ ನನ್ನ ಮಕ್ಕಳೇ. ವರ್ತಮಾನ ಸಮಯ ಮೆಜಾರಿಟಿ ಚಿಕ್ಕ ದೊಡ್ಡ ಸೆಂಟರ್ ನಿವಾಸಿ ಮಕ್ಕಳಲ್ಲಿ ಉಮ್ಮಂಗವಿದೆ ಈಗ ಬೇಗ ಬೇಗನೆ ನಾಲ್ಕಾರುಕಡೆ ತಂದೆಯನ್ನು ಪ್ರತ್ಯಕ್ಷ ಮಾಡಲೇಬೇಕು. ಈ ಉಮ್ಮಂಗ, ಈ ಉತ್ಸಾಹ ಬಾಪ್ದಾದಾರವರು ಚಕ್ಕರ್ ಹಾಕಿ ನೋಡಿದರು, ಚಿಕ್ಕ ದೊಡ್ಡ ಸೇವಾಕೇಂದ್ರದ ಮಕ್ಕಳ ಸೇವೆಯ ಉಮ್ಮಂಗ ಬಹಳ-ಬಹಳ-ಬಹಳ ಚೆನ್ನಾಗಿದೆ ಮತ್ತು ಮುಂದೆಯೂ ಚೆನ್ನಾಗಿರುತ್ತದೆ. ಅಂದಾಗ ಬಾಪ್ದಾದಾ ಇಂದು ಸ್ನೇಹದ ದಿನ ನಾಲ್ಕಾರು ಕಡೆಯ ಭಲೇ ದೇಶ, ಭಲೇ ವಿದೇಶದ ಎಲ್ಲಾ ಮಕ್ಕಳಿಗೆ ತಮ್ಮ ದೃಷ್ಟಿಯಿಂದ, ಹೃದಯದಿಂದ ಸ್ನೇಹ ಮತ್ತು ಸೇವೆಯ ರಿಟರ್ನ್ ಹೃದಯದ ಸ್ನೇಹ ನೆನಪು ಪ್ರೀತಿ ಪದಮಗುಣ ಕೊಡುತ್ತಿದ್ದಾರೆ.

ಈಗ ಸಮಯಾನುಸಾರ ಯಾವ ಉಮ್ಮಂಗವಿದೆ ತಂದೆಯನ್ನು ಪ್ರತ್ಯಕ್ಷ ಮಾಡಬೇಕು, ಅದು ನಿಧಾನ-ನಿಧಾನ ಆತ್ಮಾಗಳ ಹೃದಯದಲ್ಲೂ ಬರುತ್ತಿದೆ. ತಿಳಿಯುತ್ತಾರೆ ಬ್ರಹ್ಮಾಕುಮಾರಿಯರು ಸ್ವಲ್ಪ ಪಡೆದುಕೊಂಡಿದ್ದಾರೆ, ಪರಿವರ್ತನೆ ಆಗುತ್ತಿದೆ. ಮೊದಲು ಅವರು ತಿಳಿಯುತ್ತಿದ್ದರು ಏನು ಮಾಡುತ್ತ್ತಿದ್ದಾರೆ ಗೊತ್ತಿಲ್ಲ, ಈಗ ಇಲ್ಲಿಯವರೆಗೆ ಬಂದಿದ್ದಾರೆ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ. ಯಾವುದನ್ನು ನಾವು ಮಾಡಲಾಗುವುದಿಲ್ಲ ಅದನ್ನು ಇವರು ತಮ್ಮ ಸಂಘಟನೆಯಲ್ಲಿ ಸಫಲತೆ ಪಡೆದಿದ್ದಾರೆ ಅದಕ್ಕಾಗಿ ಇಂದು ಬಾಪ್ದಾದಾ ಮುಂದೆ ಕುಳಿತಿರುವ ಮಕ್ಕಳಿಗೆ ಅಥವಾ ನಾಲ್ಕಾರುಕಡೆ ಯಾರೆಲ್ಲಾ ಮಕ್ಕಳು ಕೇಳುತ್ತಿದ್ದಾರೆ, ನೋಡುತ್ತಿದ್ದಾರೆ ಎಲ್ಲಾ ಮಕ್ಕಳಿಗೆ ಹೃದಯದ ಸ್ನೇಹ, ಹೃದಯದ ಪ್ರೀತಿ ವಿಶೇಷ ಕೊಡುತ್ತಿದ್ದಾರೆ. ಈಗ ಮುಂದೆ ಏನು ಮಾಡಬೇಕು? ಸೇವೆಯ ಶುಭಾಶಯಗಳನ್ನಂತೂ ಬಾಪ್ದಾದಾ ಕೊಟ್ಟರು, ಈಗ ಬಾಪ್ದಾದಾ ಇದನ್ನೇ ಬಯಸುತ್ತಾರೆ ಈಗ ಪ್ರತಿಯೊಂದು ಮಗುವಿಗೂ ಈ ಉಮ್ಮಂಗ-ಉತ್ಸಾಹ, ದೃಢ ನಿಶ್ಚಯ, ತೀರ್ವ ಪುರುಷಾರ್ಥ ಮಾಡಬೇಕು. ಈಗ ತಂದೆಯ ಸಮಾನ ಫರಿಶ್ತಾ ಆಗಲೇಬೇಕು ಏಕೆಂದರೆ ಈಗ ಎಲ್ಲರಿಗೂ ತಂದೆಯ ಜೊತೆ ರಿಟರ್ನ್ಜರ್ನಿ ಮಾಡಬೇಕು. ಸಮಾನ ಫರಿಶ್ತಾ ಆಗಲೇಬೇಕು ಏಕೆಂದರೆ ಎಲ್ಲರ ಪ್ರತಿಜ್ಞೆ ಇದೆ ಜೊತೆಗೆ ಹೋಗುವೆವು, ಜೊತೆಗೇ ರಾಜ್ಯ ಮಾಡುವೆವು. ಅಂದಾಗ ಬ್ರಹ್ಮಾ ತಂದೆಯು ಫರಿಶ್ತಾ ಆದರು, ಅಂದಾಗ ಜೊತೆ ಹೇಗೆ ಹೋಗುವಿರಿ? ಬ್ರಹ್ಮಾ ತಂದೆಯು ಜೀವನದಲ್ಲೇ ಫರಿಶ್ತಾತನದ ಸ್ವರೂಪ ತೋರಿಸಿದರು. ಎಷ್ಟೊಂದು ಜವಾಬ್ದಾರಿ ಇತ್ತು! ಎಲ್ಲರನ್ನೂ ಯೋಗಿ ಮಾಡಲೇಬೇಕು ಆದರೆ ಇಷ್ಟೊಂದು ಜವಾಬ್ದಾರಿ ಇದ್ದರೂ ತಾವೆಲ್ಲರೂ ನೋಡಿದಿರಿ ಭಿನ್ನ ಮತ್ತು ಪ್ರಿಯ ಇದ್ದರು. ಸದಾ ನಿಶ್ಚಿಂತ ಚಕ್ರವರ್ತಿ ಆಗಿದ್ದರು, ಚಿಂತೆ ಇಲ್ಲ ನಿಶ್ಚಿಂತ ಚಕ್ರವರ್ತಿ. ಇದೇರೀತಿಯಲ್ಲಿ ತಾವು ಮಕ್ಕಳೂ ಸಹ ಈಗ ತಂದೆಯ ಸಮಾನ ನಿಶ್ಚಿಂತ ಚಕ್ರವರ್ತಿ ಪರಿಶ್ತಾ ಆಗಲೇಬೇಕು. ಈ ದೃಢ ಸಂಕಲ್ಪ ವಿದಯೇ, ಅಗಲೇ ಬೇಕು! ಇದನ್ನು ಯೊಚಿಸುವರೋ ಆಗಿಯೇ ಬಿಡುವೆವು.

ಈಗ ಬಾಪ್ದಾದ ನೋಡಿದರು ಸಮಯಾನುಸಾರ ಎಷ್ಟು ಸೇವೆಯ ಉಮ್ಮಂಗ-ಉತ್ಸಾಹ ಪ್ರಾಕ್ಟಿಕಲ್ನಲ್ಲಿದೆ ಅಷ್ಟೇ ಈಗ ತೀರ್ವ ಪುರುಷಾರ್ಥಿ ಆಗಬೇಕು ಮತ್ತು ಮಾಡಬೇಕು, ಸಂಪನ್ನರಾಗಬೇಕು ಮತ್ತು ಮಾಡಬೇಕು. ಈ ಪಾಯಿಂಟ್ನ ಮೇಲೆಯೂ ಈಗ ಸ್ವಯಂ ಕೂಡಾ ಉಮ್ಮಂಗ-ಉತ್ಸಾಹದಲ್ಲಿ ಇರಬೇಕು ಮತ್ತು ವಾಯುಮಂಡಲದಲ್ಲೂ ಉಮ್ಮಂಗ-ಉತ್ಸಾಹ ಕೊಡಿಸಬೇಕು. ಒಬ್ಬರಿಗೊಬ್ಬರು ಸಹಯೋಗಿಗಳಾಗಿ ಈಗ ವಾಯುಮಂಡಲದಲ್ಲಿ ತೀರ್ವ ಪುರುಷಾರ್ಥದ ಅಲೆ ಹರಡಿಸಿ. ಹೇಗೆ ಒಬ್ಬರಿಗೊಬ್ಬರು ಸೇವೆಯ ಉಮ್ಮಂಗ ವಾಯುಮಂಡಲದಲ್ಲಿ ಹರಡಿದ್ದೀರಿ ಹಾಗೆಯೇ ಈಗ ಬಾಪ್ದಾದಾ ಮ್ಕಕಳಲ್ಲಿ ಇದೇ ಶುಭ ಆಸೆ ಇಡುತ್ತಾರೆ ಈ ಅಲೆ ವಾಯುಮಂಡಲದಲ್ಲಿ ಹರಡಿರಿ. ಬಾಪ್ದಾದಾ ಖುಷಿಯಾಗಿದ್ದಾರೆ ಆದರೆ ಈಗಲೂ ಪುರುಷಾರ್ಥ ಇದೆ, ತೀರ್ವ ಪುರುಷಾರ್ಥ ಮಾಡಬೇಕು. ಈಗ ಪ್ರತೀ ಮಗುವಿನಲ್ಲಿ ಬಾಪ್ದಾದಾರವರಿಗೆ ಇದೇ ಆಸೆ ಇದೆ ಪ್ರತಿಯೊಂದು ಮಗು ತಂದೆಯ ಆಸೆಯ ನಕ್ಷತ್ರವಲ್ಲವೇ? ಯಾರು ತಿಳಿಯುವಿರಿ ನಾವು ತಂದೆಯ ಆಸೆಯ ನಕ್ಷತ್ರವಾಗಿ ಈ ಉಮ್ಮಂಗ-ಉತ್ಸಾಹ ವಾಯುಮಂಡಲದಲ್ಲಿ ಹರಡಿಸುವೆವು ಅವರು ಕೈ ಎತ್ತಿ. ಒಳ್ಳೆಯದು. ಕೈಯನ್ನಂತೂ ಬಹಳ ಚೆನ್ನಾಗಿ ಎತ್ತುತ್ತೀರಿ. ಬಾಪ್ದಾದಾ ಕೈಗಳನ್ನು ನೋಡಿ ಖುಷಿಯಾಗುತ್ತಾರೆ. ಮೆಜಾರಿಟಿ ಕೈ ಎತ್ತಿದ್ದಾರೆ, ಹಿಂದೆ ಕುಳಿತಿರುವವರದ್ದು ಕಾಣುತ್ತಿಲ್ಲ ಆದರೆ ಮುಂದಿರುವವರದ್ದು ಕಾಣಿಸಿತು. ಈಗ ಎತ್ತುತ್ತಿದ್ದಾರೆ ಹಿಂದಿನವರೂ ಸಹ, ಶುಭಾಶಯಗಳು, ಶುಭಾಷಯಗಳು. ಒಳ್ಳೆಯದು.

ಬಾಪ್ದಾದಾ ನೋಡಿದರು ವಿಶೇಷ ಮನದಲ್ಲಿ ಯಾವುದೇ ಮಾತಿನ ಉಮ್ಮಂಗ-ಉತ್ಸಾಹ ಬರುತ್ತದೆ ಎಂದರೆ ಆ ಕಾರ್ಯ ಸಾಕಾರ ರೂಪದಲ್ಲಿ ಒಳ್ಳೆಯದಾಗುತ್ತದೆ. ಅದಕ್ಕಾಗಿ ಬಾಪ್ದಾದಾ ಈಬಾರಿ ಸ್ನೇಹದ ದಿನದಲ್ಲಿ ಈ ಹೊಂವರ್ಕ್ ಕೊಡತ್ತಿದ್ದಾರೆ ಪ್ರತಿಯೊಂದು ಮಗು ಮನಸ್ಸಿನಕಾರಣ ಯಾವ ಸಂಕಲ್ಪ ಮತ್ತು ಸಮಯ ವ್ಯರ್ಥ ಹೋಗುತ್ತದೆ, ಒಂದುವೇಳೆ ಯಾವಾಗಲೇ ಯಾವುದೇ ವ್ಯರ್ಥ ಸಂಕಲ್ಪ ಬರುತ್ತದೆ ಎಂದರೆ ಎಲ್ಲರಿಗೂ ಅನುಭವವಾಗುತ್ತದೆ ಅದರಲ್ಲಿ ಸಮಯ ಎಷ್ಟು ವ್ಯರ್ಥ ಹೋಗುತ್ತದೆ. ಶಕ್ತಿ ಎಷ್ಟು ವ್ಯರ್ಥ ಹೋಗುತ್ತದೆ. ಅಂದಾಗ ಬಾಪ್ದಾದಾ ಈ ಹೋಂವರ್ಕ್ ಕೊಡಲು ಬಯಸುತ್ತಿದ್ದಾರೆ ಈ ಎರಡು ತಿಂಗಳು ಪ್ರತಿಯೊಂದು ಮಗು ಮನಸ್ಸಿನ ವ್ಯರ್ಥ ಸಂಕಲ್ಪ ಮತ್ತು ವ್ಯರ್ಥ ಸಮಯದ ಉಳಿತಾಯದ ತಮ್ಮ ಪ್ರತಿ ವಿಧಿ ಮಾಡಿಕೊಳ್ಳಿ. ಈ ಎರಡು ತಿಂಗಳಲ್ಲಿ ಪ್ರತಿಯೊಬ್ಬರೂ ತಮ್ಮ ಚಾರ್ಟ್ ಇಡಿ ವ್ಯರ್ಥ ಸಮಯ, ವ್ಯರ್ಥ ಸಂಕಲ್ಪದ ಮೇಲೆ ಎಷ್ಟೊಂದು ಕಂಟ್ರೊಲ್ ಮಾಡಿದಿರಿ? ಏಕೆಂದರೆ ಈಗ ಸಮಯದ ಪ್ರಮಾಣ ತಾವೆಲ್ಲರೂ ಮನಸಾ ಶಕ್ತಿ ಮೂಲಕ ಆತ್ಮಗಳ ಮನಸಾ ಸೇವೆ ಮಾಡುವ ಸಮಯ ಬರುತ್ತದೆ. ಅದಕ್ಕಾಗಿ ಸದಾ ಮನದ ಮೇಲೆ ಅಟೆನ್ಷನ್ ಇರುವ ಅವಶ್ಯಕತೆ ಇದೆ. ಹೇಳಲಾಗಿದೆ ಮನಜೀತ್ ಜಗತ್ಜೀತ್. ಅಂದಾಗ ಮನ್ಮನಾಭವದ ವಾಯುಮಂಡಲದಲ್ಲಿ ಮನಸ್ಸಿನ ವ್ಯರ್ಥವನ್ನು ಸಮಾಪ್ತಿ ಮಾಡಬೇಕು. ಮಾಡಬಲ್ಲಿರಾ? ಮಾಡುವಿರಾ? ಅವರು ಕೈ ಎತ್ತಿ. ಬಾಪ್ದಾದಾ ಬಹುಮಾನ ಕೊಡುವರು. ತಮ್ಮ ರಿಜಲ್ಟ್ ತಾವೇ ನೋಡಿಕೊಳ್ಳಿ. ಮನಸ್ಸು ಖುಷಿಇದ್ದರೆ ಮನಸ್ಸಿನ ಖುಷಿ ಹಂಚಬಲ್ಲಿರಿ. ಈ ಪುರುಷಾರ್ಥದಲ್ಲಿ ನಂಬರ್ ಎಲ್ಲರೂ ಹೆಚ್ಚು ತೆಗೆದುಕೊಳ್ಳುವ ಅಟೆನ್ಷನ್ ಇಡಿ. ವ್ಯರ್ಥ ಸಮಾಪ್ತಿ, ಸಂಕಲ್ಪ ಸಮಯ ಎರಡೂ ಸಮಾಪ್ತಿ ಮತ್ತು ಸಮರ್ಥ ಸಂಕಲ್ಪ, ಸಮರ್ಥ ಸಮಯ ಬರುವಂತಹ ಸಮಯದಲ್ಲಿ ವಾಯುಮಂಡಲದಲ್ಲಿ ಹರಡುವುದು.

ಬಾಪ್ದಾದಾ ಒಂದು ಮಾತಿನಲ್ಲಿ ಮಕ್ಕಳನ್ನು ನೋಡಿ ಖುಷಿಯಾಗಿದ್ದಾರೆ. ಯಾವ ಮಾತಿನಲ್ಲಿ? ಪ್ರತಿಯೊಂದು ಮಗುವೂ ಸೇವೆಯಂತೂ ಮಾಡಿದರು ಆದರೆ ಜೊತೆಗೆ ಬಾಪ್ದಾದಾರವರು ಏನು ಸೂಚನೆಇದೆ ಡಬಲ್ ರಾಜರಾಗಿ. ತಿಳಿದಿರುವಿರಲ್ಲವೇ! ಒಂದು ಸ್ವರಾಜ್ಯಾಧಿಕಾರಿ ಮತ್ತು ಇನ್ನೊಂದು ಭವಿಷ್ಯ ರಾಜ್ಯಾಧಿಕಾರಿ. ಸ್ವರಾಜ್ಯಧಿಕಾರಿ ಮತ್ತು ತಂದೆಗೆ ನಷೆ ಇದೆ ಈ ರೀತಿ ಇನ್ಯಾವ ತಂದೆ ಇಲ್ಲ ಯಾರ ಪ್ರತಿಯೊಂದು ಮಗು ಸ್ವರಾಜ್ಯಾಧಿಕಾರಿ ಯಾಗಿರುವರು. ತಾವೆಲ್ಲರೂ ಸ್ವರಾಜ್ಯಾಧಿಕಾರಿಗಳಲ್ಲವೇ! ಸ್ವಯಂ ಮೇಲೆ ಆತ್ಮ ರಾಜ್ಯಮಾಡುವುದು. ಕರ್ಮೇಂದ್ರಿಯಗಳ ವಶ ಅಲ್ಲ, ರಾಜ್ಯ ಅಧಿಕಾರಿ. ಅಂದಾಗ ತಂದೆ ಇದನ್ನೇ ಬಯಸುತ್ತಾರೆ ಪ್ರತಿಯೊಂದು ಮಗು ಸ್ವರಾಜ್ಯ ಅಧಿಕಾರಿ ಸದಾ ಇರಲಿ, ಕೆಲವೊಮ್ಮೆ ಅಲ್ಲ. ಆಗಬಲ್ಲಿರೇ? ಈ ಎರಡು ತಿಂಗಳು ಕೊಡಲಾಗಿದೆ, ಇದರಲ್ಲಿ ನೋಟ್ ಮಾಡಿಕೊಳ್ಳಿ ಸ್ವರಾಜ್ಯ ಅಧಿಕಾರಿ ಆಗಿದ್ದಿರಾ? ಅಥವಾ ಕರ್ಮೇಂದ್ರಿಯಗಳ ವಶ ಆಗಿದ್ದಿರಾ? ಈಗ ಕರ್ಮಾತೀತರಾಗಬೇಕು, ಸಮಯ ಸಮೀಪ ಬರುತ್ತಿದೆ. ಅಂದಾಗ ಏನು ಮಾಡಬೇಕು? ನಡೆಯುತ್ತಾ-ತಿರುಗಾಡುತ್ತಾ ಸ್ವರಾಜ್ಯಾಧಿಕಾರಿ ಆಗಲೇಬೇಕು.ಈ ಸಂಸ್ಕಾರ ತಾವು ಬ್ರಾಹ್ಮಣ ಮಕ್ಕಳದ್ದೇ ಆಗಿದೆ. ಡಬಲ್ ರಾಜ್ಯ, ಸ್ವರಾಜ್ಯ ಮತ್ತು ನಂತರ ಭವಿಷ್ಯದಲ್ಲಿ ವಿಶ್ವ ರಾಜ್ಯ. ಬಾಪ್ದಾದಾ ಚಕ್ಕರ್ ಹಾಕುತ್ತಾ ಮಕ್ಕಳ ರಿಜಲ್ಟ್ ಬರೆದುಕೊಳ್ಳುತ್ತಾರೆ ಅಂದಾಗ ಸದಾ ಸ್ವರಾಜ್ಯಾಧಿಕಾರಿ ಇದರಲ್ಲಿ ಈಗ ಅಟೆನ್ಷನ್ ಬೇಕಾಗಿದೆ. ಎರಡು ಕಾರ್ಯ ಬಾಪ್ದಾದಾರವರು ಕೊಟ್ಟಿದ್ದಾರೆ ಒಂದು ಈ ಎರಡು ತಿಂಗಳು ಸ್ವರಾಜ್ಯಾಧಿಕಾರಿ ಎಲ್ಲಿಯವರೆಗೆ ಇರುವಿರಿ? ಆ ತಮ್ಮ ರಿಜಲ್ಟ್ ನೋಡಿಕೊಳ್ಳಬೇಕು ಮತ್ತು ಜೊತೆ-ಜೊತೆಗೆ ಮನದ ಕಂಟ್ರೋಲಿಂಗ್ ಪವರ್, ರೂಲಿಂಗ್ ಪವರ್ಮೂಲಕ ವ್ಯರ್ಥ ಸಮಾಪ್ತಿ ಮಾಡಬೇಕು. ಇದರಲ್ಲಿ ಯಾರು ನಂಬರ್ ತೆಗೆದುಕೊಳ್ಳುವಿರಿ ಅವರಿಗೆ ಬಾಪ್ದಾದಾ ಬಹುಮಾನ ಕೊಡುವರು. ಇಷ್ಟವಿದೆಯೇ? ಮಾಡಬೇಕಲ್ಲವೇ! ಮಾಡುವಿರೇ? ಮಾಡುವಿರಲ್ಲವೇ! ತಲೆ ಅಲುಗಾಡಿಸಿ. ಒಳ್ಳೆಯದು.

ಬಾಪ್ದಾದಾ ಇಂದು ಎಲ್ಲರದ್ದೂ ಯಾವ ಸ್ನೇಹವಿದೆ ಅದನ್ನು ಸ್ವೀಕಾರ ಮಾಡಿದರು. ಅಮೃತವೇಳೆ ವತನದಲ್ಲಿಯೂ ಬಹಳ ಮಕ್ಕಳ ಹೊಳಪು ಇತ್ತು. ಅಡ್ವಾನ್ಸ್ ಪಾರ್ಟಿಯವರೂ ವತನದಲ್ಲಿ ಇಂದು ತಮ್ಮ ಹೃದಯದ ಸ್ನೇಹ ಕೊಡುವುದಕ್ಕೆ, ತೆಗೆದುಕೊಳ್ಳುವುದಕ್ಕೆ ಬಂದಿದ್ದರು. ಈಗ ಅವರು ತಂದೆಯೊಂದಿಗೆ ಕೇಳುತ್ತಾರೆ ಈ ನಮ್ಮ ಪಾತ್ರ ಎಲ್ಲಿಯವರೆಗೆ? ಏನು ಉತ್ತರ ಕೊಡುವುದು? ಮೊದಲಿನ ಲೈನ್ನವರು ಹೇಳಿ ಏನು ಉತ್ತರ ಕೊಡುವುದು? ಏನು ಹೇಳುವುದು? (ದಾದೀ ಜಾನಕೀಯವರು ಹೇಳಿದರು ನಾವು ರೆಡಿ) ತಾವು ಒಬ್ಬರೇ ಹೋಗುವಿರೇ? (ಎಲ್ಲರೂ ಹೋಗುವೆವು) ತಮ್ಮ ಪ್ರೀತಿ ಇದೆಯಲ್ಲವೇ, ಈರೀತಿ ಬಿಟ್ಟು ಹೇಗೆ ರಾಜ್ಯ ಮಾಡುವಿರಿ. (ಅಡ್ವಾನ್ಸ್ ಪಾರ್ಟಿಯವರು ನಮ್ಮನ್ನು ಏಕೆ ಬಿಟ್ಟು ಹೋದರು) ಅವರ ಪಾತ್ರ ಇತ್ತಲ್ಲವೇ. ಅವರು ಹೋಗಲೇ ಬೇಕಾಗಿತ್ತು. ಈಗ ನೀವು ಇದನ್ನು ಪ್ರಯತ್ನಮಾಡಿ ಬೇಗ ಬೇಗನೆ ಸಂಘಟನೆ ತಯಾರುಮಾಡಿ. ಯಾವ ಎರಡು ತಿಂಗಳ ಕೆಲಸ ಕೊಟ್ಟಿದೆಯಲ್ಲವೇ, ಒಂದುವೇಳೆ ಈ ಕೆಲಸ ತಾವು ಎಲ್ಲರಿಗೂ ಮಾಡಿಸಿದರೆ, ರಿಜಲ್ಟ್ ತೆಗೆಸಿದರೆ ಬೇಗನೆ ಆಗಿಬಿಡುವುದು. (ತಂದೆಯ ಸ್ನೇಹದಲ್ಲಿ ಮಾಡಿಸುತ್ತೇವೆ) ಸ್ನೇಹವಂತೂ ಇದೆ, ಸ್ನೇಹದಲ್ಲಿ ಎಲ್ಲರೂ ಪಾಸ್ಆಗಿರುವಿರಿ. ಬಾಪ್ದಾದಾ ಸಹ ನೋಡುತ್ತಾರೆ ಸ್ನೇಹ ಎಲ್ಲರದ್ದೂ ಇದೆ ಆದರೆ ಸ್ನೇಹದ ಜೊತೆ ಶಕ್ತಿಯೂ ಬೇಕು. ಅದಕ್ಕಾಗಿ ಅಮೃತವೇಳೆಯನ್ನು ಶಕ್ತಿಶಾಲಿ ಮಾಡಿ, ಕುಳಿತುಕೊಳ್ಳುತ್ತಾರೆ, ಬಾಪ್ದಾದಾ ಕುಳಿತುಕೊಳ್ಳುವುದಕ್ಕೆ ಶುಭಾಷಯ ಕೊಡುತ್ತಾರೆ ಆದರೆ ಕುಳಿತುಕೊಳ್ಳುವ ವಾಯುಮಂಡಲ ಶಕ್ತಿಶಾಲಿ ಬೇಕಾಗಿದೆ, ಕೆಲವರು ಹಾಗೆ ಕುಳಿತುಕೊಳ್ಳುತ್ತಾರೆ, ಕೆಲವರು ಹೀಗೆ ಕುಳಿತುಕೊಳ್ಳುತ್ತಾರೆ. ಒಂದುವೇಳೆ ತಾವು ಫೋಟೋ ತೆಗೆದರೆ, ಸ್ವತಃ ತಮಗೆ ಅನಿಸುತ್ತದೆ ಇನ್ನೂ ಸ್ವಲ್ಪ ಆಗಬೇಕಾಗಿದೆ. ಯಾವುದನ್ನು ಬಾಪ್ದಾದಾ ಜ್ವಾಲಾಮುಖಿ ಯೋಗ ಹೇಳಿದ್ದಾರೆ, ಅದರಮೇಲೆ ಈಗ ಇನ್ನೂ ಆಳದ ಅಟೆನ್ಷನ್ ಕೊಡಿ. ಪುರುಷಾರ್ಥ ಎಲ್ಲರೂ ಮಾಡುವಿರಿ ಆದರೆ ಪುರುಷಾರ್ಥದ ಮುಂದೆ ತೀರ್ವ ಶಬ್ದ ಸೇರಿಸಿ. ಈಗ ಬಾಪ್ದಾದಾರವರು ಪ್ರತಿಯೊಂದು ಮಗುವಿಗೆ ಈ ಎರಡು ತಿಂಗಳು ಕೊಟ್ಟಿದ್ದಾರೆ, ಇದರಲ್ಲಿ ಅಟೆನ್ಷನ್ ಕೊಟ್ಟರೆ ಜೊತೆಗೆ ಬಾಪ್ದಾದಾ ಸಹ ಎಕ್ಸ್ಟ್ರಾ ತಮಗೆ ಸಹಯೋಗ ಕೊಡುವರು. ಮನಸ್ಸಿನ ಮಾಲೀಕರು, ಮನಸ್ಸನ್ನು ಈರೀತಿ ನಡೆಸಿ ಹೇಗೆ ಕಾಲು ಮತ್ತು ಕೈಯನ್ನು ನಡೆಸುವಿರಿ. ಏನು ಬಯಸುವಿರಿ ಅದನ್ನು ಮಾಡುವಿರಲ್ಲವೇ. ಈಗ ತಾವು ಇಲ್ಲಿ ಬೇಡ ಇಲ್ಲಿ ಇಡು ಎಂದರೆ ಇಡುವಿರಲ್ಲವೇ. ಹಾಗೆಯೇ ಮನಸ್ಸಿನ ಕಂಟ್ರೊಲ್, ಏನು ಬೇಕೋ ಅದನ್ನೇ ಮನಸ್ಸು ಸಂಕಲ್ಪ ಮಾಡಲಿ. ಪ್ರತೀದಿನ ರಾತ್ರಿ ರಿಜಲ್ಟ್ ನೋಡಿ ಇಂದು ಮನಸ್ಸಿನ ರೂಲಿಗ್ಪವರ್, ಕಂಟ್ರೋಲಿಗ್ ಪವರ್ ಎಲ್ಲಿಯವರೆಗೆ ಇದೆ? ಈಗ ವ್ಯರ್ಥವನ್ನು ಸಮಾಪ್ತಿ ಬೇಗ-ಬೇಗನೆ ಮಾಡಬೇಕಾಗಿದೆ ಈಗ ಸಮರ್ಥರಾಗಿ ವಾಯುಮಂಡಲದಲ್ಲಿ ಸಮರ್ಥತನದ ಶಕ್ತಿ ಹರಡಿಸಿ. ಬಾಪ್ದಾದಾರವರಂತೂ ಮಕ್ಕಳ ದುಃಖ ನೋವು, ಕರೆಯನ್ನು ಕೇಳಿ ಮಕ್ಕಳ ಮೂಲಕ ಬೇಗನೆ ಸಮಾಪ್ತಿ ಮಾಡಲು ಬಯಸುತ್ತಾರೆ. ಕೇಳಿದ್ದೀರಲ್ಲವೇ, ಪುರುಷಾರ್ಥ ಎಲ್ಲರೂ ಮಾಡುತ್ತಿರುವಿರಿ ಆದರೆ ಈಗ ತೀರ್ವ ಸೇರಿಸಿ. ಮಾಡಲೇಬೇಕು, ಮಾಡೋಣ, ನೋಡೋಣ... ಈ ಗೆ-ಗೆ ನಡೆಯುವುದಿಲ್ಲ.

ಸ್ನೇಹದ ದೃಷ್ಟಿಯನ್ನೂ ಇಂದು ನೋಡಿದರು, ಪ್ರತಿಯೊಬ್ಬರ ಹೃದಯದಲ್ಲಿ ಎಷ್ಟೊಂದು ಪ್ರೀತಿ ಇದೆ ಆದರೆ ಎಷ್ಟು ಪ್ರೀತಿ ಇದೆಯಲ್ಲವೇ, ಜೊತೆಯಲ್ಲಿ ಅಷ್ಟೇ ಶಕ್ತಿಯೂಬೇಕು. ಈಗ ಶಕ್ತಿಗಳನ್ನು ತುಂಬಿ. ಎಂದಿಗೂ ಯಾರೇ ಅಕ್ಕಂದಿರು ತಮ್ಮನ್ನು ಕೇವಲ ಶಕ್ತಿಯಲ್ಲ, ಶಿವಶಕ್ತಿ ಎಂದು ತಿಳಿಯಿರಿ. ಶಿವಶಕ್ತಿ, ತಂದೆ ಜೊತೆಗಿದ್ದಾರೆ. ಪಾಂಡವರ ಜೊತೆ ಪಾಂಡವ ಪತಿ ಜೊತೆಗಿದ್ದಾರೆ. ಅಂದಾಗ ಈಗ ಏನುಮಾಡುವಿರಿ? ಯಾವುದನ್ನು ಬಾಪ್ದಾದಾ ಹೇಳಿದ್ದಾರೆ ಪುರುಷಾರ್ಥದ ಮುಂದೆ ತೀರ್ವ ಶಬ್ದ ಹಾಕಿ. ವಾಯುಮಂಡಲ ಮಾಡಿರಿ. ಒಬ್ಬರಿಗೊಬ್ಬರು ಸಹಯೋಗಿಯಾಗಿ ಪ್ರತಿಯೊಬ್ಬರು ತಮ್ಮ-ತಮ್ಮ ಸ್ಥಾನದಲ್ಲಿ ಇರುತ್ತೀರಿ, ಸ್ಥಾನವನ್ನು ಶಕ್ತಿಶಾಲಿ ಮಾಡಿ, ಜೊತೆಗಾರರನ್ನು ಶಕ್ತಿಶಾಲಿ ಮಾಡಿ. ಅಂದಾಗ ಏನು ಮಾಡುವಿರಿ ಈಗ?ನವಿನತೆ ಮಾಡುವಿರಲ್ಲವೇ! ಯಾವಾಗ ನನ್ನಬಾಬಾ ಹೇಳುವಿರಿ, ಅಂದಾಗ ‘ನನ್ನ’ ರೀತಿ ಆಗಬೇಕಲ್ಲವೇ? ಪ್ರತಿಯೊಬ್ಬರೂ ತಮ್ಮ ಹೃದಯದಲ್ಲಿ ದೃಢ ಸಂಕಲ್ಪ ಮಾಡಿ, ಒಳೊಳ್ಳೆಯ ಸಂಕಲ್ಪ ಮಾಡುವಿರಿ, ಅಮೃತವೇಳೆ ಬಾಪ್ದಾದಾ ನೋಡುತ್ತಾರೆ ಸಂಕಲ್ಪ ಚೆನ್ನಾಗಿ ಮಾಡುತ್ತೀರಿ ಇದನ್ನು ಮಾಡುತ್ತೇವೆ, ಇದನ್ನು ಮಾಡುತ್ತೇವೆ ಆದರೆ ಯಾವಾಗ ಕರ್ಮಯೋಗಿ ಆಗುವಿರಿ, ಸಂಬಂಧ-ಸಂಪರ್ಕದಲ್ಲಿ ಬರುತ್ತೀರಿ ಅದರಲ್ಲಿ ವ್ಯತ್ಯಾಸ ಆಗುತ್ತದೆ. ಕರ್ಮ ಯೋಗಿಯ ಸ್ಥಿತಿ ಅದರಲ್ಲಿ ಅಟೆನ್ಷನ್ ಹೆಚ್ಚು ಬೇಕು. ಒಳ್ಳೆಯದು.

ಎಲ್ಲರೂ ಖುಷಿಯಂತೂ ಇರುವಿರಲ್ಲವೇ! ಖುಷಿ ಇರುವರೇ? ನೋಡಿ ಹೊಸ-ಹೊಸಬರೂ ಎಷ್ಟೊಂದು ಬರುತ್ತಾರೆ. ಯಾರು ಹೊಸಬರು ಮೊದಲ ಬಾರಿ ಬಂದಿದ್ದೀರಿ ಅವರು ಕೈ ಎತ್ತಿ. ನೋಡಿ ಎಷ್ಟೊಂದು ಇದ್ದಾರೆ? ಅರ್ಧ ಕ್ಲಾಸ್ ಹೊಸಬರೇ ಇದ್ದಾರೆ. ಬಾಪ್ದಾದಾ ಮುಂದಿರುವ ಹೊಸ ಮಕ್ಕಳನ್ನು ನೋಡಿ ಖುಷಿಯಾಗಿದ್ದಾರೆ ಏಕೆಂದರೆ ಕೊನೆಯ ಸಮಾಪ್ತಿಯ ಸಮಯದ ಮೊದಲು ಬಂದಿರುವರು. ಆದರೆ ಎಷ್ಟು ತಡವಾಗಿ ಬಂದಿರುವಿರಿ ಅಷ್ಟೇ ತೀರ್ವ ಪುರುಷಾರ್ಥ ಮಾಡಬೇಕಾಗುತ್ತದೆ ಏಕೆಂದರೆ ಈ ಸ್ವಲ್ಪ ಸಮಯದಲ್ಲಿ ತಮಗೆ 21 ಜನ್ಮಗಳ ಭವಿಷ್ಯ ಮಾಡಿಕೊಳ್ಳಬೇಕಾಗಿದೆ. ಅಷ್ಟೊಂದು ಅಟೆನ್ಷನ್ ಇಡಬೇಕಾಗುತ್ತದೆ. ಸಮಯವನ್ನು ಉಳಿಸಿ, ಸೆಕೆಂಡ್ನ್ನೂ ವ್ಯರ್ಥವಾಗಿ ಕಳೆಯಬೇಡಿ. ತೀರ್ವ ಪುರುಷಾರ್ಥಿಯಾಗಿರಿ, ಸಾಧಾರಣ ಪುರುಷಾರ್ಥದಿಂದ ಮುಟ್ಟುವುದು ಕಷ್ಟ. ಆದರೂ ಬಾಪ್ದಾದಾ ಬಂದಿರುವ ಮಕ್ಕಳಿಗೆ ಹೃದಯದಿಂದ ಶುಭಾಷಯ ಕೊಡುತ್ತಿದ್ದಾರೆ. ಶುಭಾಷಯ ಕೊಡುತ್ತಿದ್ದಾರೆ. ಒಳ್ಳೆಯದು.

ಟೀಚರ್ಸ್ ಅಕ್ಕಂದಿರು ಬಹಳ ಬಂದಿದ್ದಾರೆ:- ಟೀಚರ್ಸ್ನ್ನು ನೋಡಿ ಬಾಪ್ದಾದಾ ಬಹಳ ಖುಷಿಯಾಗುತ್ತಾರೆ ಏಕೆಂದರೆ ಯಾರು ನಿಮಿತ್ತ ಟೀಚರ್ಸ್ ಆಗಿರುವಿರಿ, ಅವರು ಬಾಪ್ದಾದಾರವರನ್ನು ಪ್ರತ್ಯಕ್ಷ ಮಾಡಲು ನಿಮಿತ್ತರಾಗಿದ್ದಾರೆ. ಯಾರೇ ಟೀಚರ್ನ್ನು ನೋಡಿ ಖುಷಿಯಾಗುತ್ತದೆ ಏಕೆಂದರೆ ಟೀಚರ್ಸ್ ಎಂದರೇ ಯಾರ ಚಹರೆಯಿಂದಲೇ ಭವಿಷ್ಯ ಕಾಣಿಸುತ್ತದೆ. ಭವಿಷ್ಯ ತಮ್ಮದು ಏನಾಗಿದೆ? ಭವಿಷ್ಯವಾಗಿದೆ ಸದಾ ದಿಲ್ಖುಷ್, ಸದಾ ಅಧಿಕಾರಿ, ಅಧಿನರಾಗುವವರಲ್ಲ. ಟೀಚರ್ಸ್ರ ಚಹರೆ ಇದನ್ನು ಸಾಕ್ಷಾತ್ಕಾರ ಮಾಡಿಸುತ್ತದೆ. ಪ್ರತಿಯೊಬ್ಬ ಟೀಚರ್ ಸದಾ ಇದನ್ನೇ ತಿಳಿಯಿರಿ ಹೇಳಲಿ, ಹೇಳದಿರಲಿ ಆದರೆ ತಮ್ಮ ಚಹರೆ ವರ್ತಮಾನ ಸಮಯದ ಪ್ರಾಪ್ತಿ ಮತ್ತು ಭವಿಷ್ಯದ ಪ್ರಾಪ್ತಿ ತಮ್ಮ ಚಹರೆ ತೊರಿಸುತ್ತದೆ. ಸದಾ ಈ ಅಟೆನ್ಷನ್ ಇಡೀ ನಮ್ಮ ಚಹರೆ ಈರೀತಿ ಸಾಕ್ಷಾತ್ಕಾರ ಮಾಡಿಸುವುದಾಗಿದೆಯೇ? ಯಾರೇ ಟೀಚರ್ನ ಮುಂದೆ ಬರಲಿ, ಟೀಚರ್ನ್ನು ನೋಡಿ ಖುಷಿಯ ಕಾರಂಜಿಯಾಗಲಿ, ಖುಷಿ ಅವರ ಜೀವನದಲ್ಲಿ ಕಾಣಿಸಲಿ. ಈರೀತಿಯ ಮುಗುಳುನಗೆ ಮತ್ತು ಖುಷಿಯ ಅದೃಷ್ಟವಾಗಲಿ. ಬಾಪ್ದಾದಾ ನೋಡಿದರು ಪ್ರತಿಯೊಬ್ಬ ಟೀಚರ್ನ ಲಕ್ಷ್ಯ ಚೆನ್ನಾಗಿದೆ. ಮಾಡಲೇಬೇಕು. ಆಗಲೇಬೇಕು. ಈ ರೀತಿ ಇದೆಯಲ್ಲವೇ? ಲಕ್ಷ್ಯ ಏನಾಗಿದೆ / ಇದೇ ಲಕ್ಷ್ಯವಲ್ಲವೆ! ಅಂದಾಗ ಈ ಲಕ್ಷ್ಯ ಲಕ್ಷಣದಲ್ಲಿ ಕಾಣಿಸುತ್ತದೆ ಮತ್ತು ಹೆಚ್ಚು ಕಾಣಿಸಬೇಕು. ಯಾರೇ ಬರಲಿ ಅವಶ್ಯವಾಗಿ ಖುಷಿ ತೆಗೆದುಕೊಂಡು ಹೋಗಲಿ ಏಕೆಂದರೆ ಖುಷಿ ಪ್ರತಿಯೊಬ್ಬ ಮನುಷ್ಯನಿಗೆ ಅವಶ್ಯಕವಿದೆ. ಬಯಸುತ್ತಾರೆ ಆದರೆ ಆಗಲು ಆಗುವುದಿಲ್ಲ ಅಂದಾಗ ಟೀಚರ್ಸ್ ಎಂದರೆ ಚಹರೆ ಮೂಲಕ ಸೇವೆ ಮಾಡಿ. ಅನುಭವ ಮಾಡಿ ಇದು ಏನಾಯಿತು. ಈಗ ಮುಂದೆ ಹೋಗಿ ತಮ್ಮ ಚೆಹರೆ ಮತ್ತು ಚಲನೆ ಸೇವೆ ಹೆಚ್ಚು ಮಾಡುತ್ತದೆ ಏಕೆಂದರೆ ಹೇಗೆ ಸಮಯ ನಾಜೂಕು ಬರುತ್ತದೆ ಅಂದಾಗ ಸಮಯ ಕಡಿಮೆ ಸಿಗುತ್ತದೆ ಆದರೆ ಬೇಡಿಕೆ ಹೆಚ್ಚುತ್ತದೆ, ಸ್ವಲ್ಪ ಸಿಗಲಿ, ಸ್ವಲ್ಪ ಸಿಗಲಿ. ಅದಕ್ಕಾಗಿ ಟೀಚರ್ಸ್ ಸದಾ ಈ ರೀತಿ ಎವರೆಡಿ ಇರಬೇಕಾಗಿದೆ, ಯಾರೇ ಬರಲಿ ಅವರು ಕನಿಷ್ಟ ಸ್ವಲ್ಪ ತೆಗೆದುಕೊಂಡೇ ಹೋಗಬೇಕು. ಚಹರೆ ಮತ್ತು ಚಲನೆಯ ಮೂಲಕ ಏನಾದರೂ ಸ್ವಲ್ಪ ತೆಗೆದುಕೊಂಡು ಹೋಗಲಿ. ದಾತಾನ ಮಕ್ಕಳಲ್ಲವೇ! ಬಾಪ್ದಾದಾರವರಂತೂ ಟೀಚರ್ಸ್ನ್ನು ನೋಡಿ ಬಹಳ ಖುಷಿಯಾಗುತ್ತಾರೆ. ಹೃದಯದಲ್ಲೇ ಗುಣ ಗಾಯನ ಮಾಡುತ್ತಾರೆ ವಾಹ್ ಟೀಚರ್ಸ್ ವಾಹ್. ಏಕೆಂದರೆ ಪ್ರತಿಯೊಬ್ಬ ಟೀಚರ್ ಸೇವೆಯಂತೂ ಮಾಡುತ್ತಾರೆ ಮತ್ತು ತಮ್ಮ ರಿಜಲ್ಟ್ ರಾತ್ರಿಯೂ ನೊಡಿಕೊಳ್ಳುತ್ತಾರೆ ಇಂದಿನ ಸೇವೆ ಏನಾಯಿತು. ತಮ್ಮ ಚಾರ್ಟನ್ನು ತಾವೇ ನೋಡಿಕೊಳ್ಳುತ್ತಾರೆ. ಯಾವ ಲಕ್ಷ್ಯ ಇಟ್ಟಿದ್ದಾರೆ ಸೇವೆಯದ್ದು ಅದು ಆಯಿತೇ. ಒಂದುವೇಳೆ ಆಗಿಲ್ಲವೆಂದರೆ ಕಾರಣ, ಅಕಾರಣಗಳಿಂದ, ಆದರೆ ಮುಂದಿನದಿನದಲ್ಲಿ ಡಬಲ್ ಮಾಡಿ. ಖಾಲಿ ಬಿಡಬೇಡಿ ಏಕೆಂದರೆ ಟೀಚರ್ಸ್ ಎಂದರೆ ನಿಮಿತ್ತ ದಾತಾನ ಮಕ್ಕಳು ದಾತಾ. ಬಾಪ್ದಾದಾ ಅಂತೂ ಖುಷಿಯಾಗುತ್ತಾರೆ ಭಲೇ ಚಿಕ್ಕ ಸೆಂಟರ್ನವರಿರಲಿ ಭಲೇ ದೊಡ್ಡ ಸೆಮಟರಿನವರಿರಲಿ ಆದರೆ ತ್ಯಾಗ ಮಾಡಿ ಸೇವಾ ಸ್ಥಾನದಲ್ಲಿ ಬರುವುದು ಇದೂಸಹ ಧೈರ್ಯವಿದೆಯಲ್ಲವೇ. ಅಂದಾಗ ಬಾಪ್ದಾದಾ ತಮ್ಮ ಧೈರ್ಯದಲ್ಲಂತೂ ಖುಷಿಯಾಗಿದ್ದಾರೆ. ಈಗ ಇನ್ನೂ ಜೊತೆಗಾರರನ್ನಾಗಿ ಮಾಡಿಕೊಳ್ಳಿ. ಹೆಚ್ಚಿನ ಟೀಚರ್ಸ್ನ್ನು ತೆಗೆಯಿರಿ. ಏಕೆಂದರೆ ಸೇವೆ ಹೆಚ್ಚಲೇ ಬೇಕು. ಈಗ ಸ್ವಲ್ಪ ಜಗಳವಾಗುತ್ತದೆ ನಂತರ ಎಲ್ಲರೂ ಇಷ್ಟದಿಂದ ತಮ್ಮ ಮುಂದೆ ಬರುವರು. ಸರ್ವಿಸ್ ಹೆಚ್ಚುವುದಿದೆ, ಕಡಿಮೆಯಾಗುವುದಿಲ್ಲ. ಒಳ್ಳೆಯದು.

ವರದಾನ:
ಸ್ವಮಾನದ ಸೀಟ್ ಮೇಲೆ ಸ್ಥಿತರಾಗಿದ್ದು ಮಾಯೆಯನ್ನು ಶರಾಣಾಗತಿ (ಸರೆಂಡರ್) ಮಾಡಿಸುವಂತಹ ಶ್ರೇಷ್ಠ ಸೇವಾಧಾರಿ ಭವ.

ಸಂಗಮ ಯುಗದಲ್ಲಿ ಎಲ್ಲದಕ್ಕಿಂತಲೂ ಶ್ರೇಷ್ಠ ಸ್ವಮಾನವಾಗಿದೆ ಮಾಸ್ಟರ್ ಸರ್ವ ಶಕ್ತಿವಾನ್ ನ ಸ್ಮತಿಯಲ್ಲಿರುವುದು. ಹೇಗೆ ಯಾರಾದರೂ ದೊಡ್ಡ ಆಫೀಸರ್ ಅಥವಾ ರಾಜಾ ಯಾವಾಗ ಸ್ವಮಾನದ ಸೀಟ್ ಮೇಲೆ ಸ್ಥಿತರಾಗುತ್ತಾರೆಂದರೆ ಅವರಿಗೆ ಬೇರೆಯವರೂ ಸಹ ಸ್ವಮಾನವನ್ನು ಕೊಡುತ್ತಾರೆ, ಒಂದುವೇಳೆ ಸ್ವಯಂ ಸೀಟ್ ಮೇಲೆ ಇಲ್ಲದೇ ಇದ್ದಾಗ ಅವರ ಆದೇಶವನ್ನು ಯಾರೂ ಮಾನ್ಯ ಮಾಡುವುದಿಲ್ಲ, ಹಾಗೆಯೆ ನೀವೂ ಸಹ ಸ್ವಮಾನದಾರಿಗಳಾಗಿ ತಮ್ಮ ಶ್ರೇಷ್ಠ ಸ್ವಮಾನದ ಸೀಟ್ ಮೇಲೆ ಸೆಟ್ ಆಗಿದ್ದಾಗ ಮಾಯೆ ನಿಮ್ಮ ಮುಂದೆ ಸರೆಂಡರ್ ಆಗಿ ಬಿಡುವುದು.

ಸ್ಲೋಗನ್:
ಸಾಕ್ಷಿತನದ ಸ್ಥಿತಿಯ ಮೇಲಿದ್ದು ಹೃದಯರಾಮನ ಜೊತೆಯ ಅನುಭವ ಮಾಡುವಂತಹವರೆ ಲವಲೀನ ಆತ್ಮರಾಗಿದ್ದಾರೆ.

ಅವ್ಯಕ್ತ ಸೂಚನೆ:- ಪರೋಪಕಾರದ ಭಾವನೆಯಿಂದ ಸಂಪನ್ನರಾಗಿ ಅಪಕಾರಿ ಮೇಲೆಯೂ ಉಪಕಾರ ಮಾಡಿ.

ಅಪಕಾರಿಯರ ಮೇಲೂ ಉಪಕಾರವನ್ನು ಮಾಡುವುದು, ಇದೇ ಜ್ಞಾನಿತ್ವ ಆತ್ಮಗಳ ಕರ್ತವ್ಯವಾಗಿದೆ. ಹೇಗೆ ತಂದೆಯು ನಿಂದನೆಯನ್ನು ಕಲ್ಯಾಣಕಾರಿಯ ದೃಷ್ಟಿಯಿಂದ ನೋಡಿದರು. ಉಪಕಾರಿಗಳ ಮೇಲೆ ಉಪಕಾರವಂತು ಪ್ರಪಂಚದವರು ಮಾಡುತ್ತಾರೆ, ಭಕ್ತ ಆತ್ಮರು ಮಾಡುತ್ತಾರೆ ಆದರೆ ಜ್ಞಾನಿ ತ್ವ ಆತ್ಮರ ಅರ್ಥವಾಗಿದೆ ಸರ್ವರ ಪ್ರತಿ ಕಲ್ಯಾಣದ ಭಾವನೆ, ಅಕಲ್ಯಾಣದ ಸಂಕಲ್ಪ ಮಾತ್ರವೂ ಇರಬಾರದು. ಅಪಕಾರಿಗಳ ಮೇಲೆಯೂ ಉಪಕಾರ ಮಾಡಿ ಆಗ ವಿಶ್ವ ಕಲ್ಯಾಣಕಾರಿ ಎಂದೂ ಹೇಳಲಾಗುತ್ತದೆ.