11.11.24 Morning Kannada Murli Om Shanti
BapDada Madhuban
ಮಧುರ ಮಕ್ಕಳೇ –
ಸಂಪೂರ್ಣ ಗಮನವಿಡಿ, ಯಾವುದೇ ನಿಯಮಕ್ಕೆ ವಿರುದ್ಧವಾದ ನಡುವಳಿಕೆಯಲ್ಲಿ ನಡೆಯಬೇಡಿ, ಶ್ರೀಮತದ
ಉಲ್ಲಂಘನೆ ಮಾಡಿದರೆ ಕೆಳಗೆ ಬೀಳುತ್ತೀರಿ
ಪ್ರಶ್ನೆ:
ಪದಮಾಪತಿ ಗಳಾಗಲು
ಯಾವ ಎಚ್ಚರಿಕೆಯಿರಬೇಕು?
ಉತ್ತರ:
ಸದಾ ಗಮನವಿರಲಿ
- ಎಂತಹ ಕರ್ಮವನ್ನು ನಾವು ಮಾಡುತ್ತೇವೆಯೋ ನಮ್ಮನ್ನು ನೋಡಿ ಅನ್ಯರೂ ಮಾಡತೊಡಗುತ್ತಾರೆ. ಯಾವುದೇ
ಮಾತಿನ ಮಿಥ್ಯ ಅಹಂಕಾರವು ಬರಬಾರದು. ಮುರುಳಿಯನ್ನೆಂದೂ ತಪ್ಪಿಸಬಾರದು. ಮನಸಾ-ವಾಚಾ-ಕರ್ಮಣ ತಮ್ಮ
ಸಂಭಾಲನೆ ಮಾಡಿಕೊಳ್ಳಿ. ಈ ಕಣ್ಣುಗಳು ಮೋಸಗೊಳಿಸದಿರಲಿ ಆಗ ಪದಮಗಳ ಸಂಪಾದನೆಯನ್ನು ಜಮಾ
ಮಾಡಿಕೊಳ್ಳುತ್ತೀರಿ. ಇದಕ್ಕಾಗಿ ಅಂತರ್ಮುಖಿಯಾಗಿ ತಂದೆಯನ್ನು ನೆನಪು ಮಾಡಿ ಮತ್ತು ವಿಕರ್ಮಗಳಿಂದ
ಸುರಕ್ಷಿತವಾಗಿರಿ.
ಓಂ ಶಾಂತಿ.
ಆತ್ಮೀಯ ಮಕ್ಕಳಿಗೆ ತಂದೆಯು ತಿಳಿಸಿದ್ದಾರೆ, ಇಲ್ಲಿ ನೀವು ಮಕ್ಕಳು ಈ ವಿಚಾರದಿಂದ
ಕುಳಿತುಕೊಳ್ಳಬೇಕಾಗುತ್ತದೆ - ಅವರು ತಂದೆಯೂ ಆಗಿದ್ದಾರೆ, ಶಿಕ್ಷಕ ಮತ್ತು ಸದ್ಗುರುವೂ ಆಗಿದ್ದಾರೆ
ಮತ್ತು ಇದನ್ನೂ ಸಹ ನೀವು ಅನುಭವ ಮಾಡುತ್ತೀರಿ - ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ
ಪವಿತ್ರರಾಗಿ ಪವಿತ್ರಧಾಮದಲ್ಲಿ ಹೋಗಿ ತಲುಪುತ್ತೇವೆ. ಪವಿತ್ರಧಾಮದಿಂದಲೇ ನೀವು
ಕೆಳಗಿಳಿಯುತ್ತೀರೆಂದು ತಂದೆಯು ತಿಳಿಸುತ್ತಾರೆ. ಅದರ ಹೆಸರೇ ಆಗಿದೆ - ಪವಿತ್ರಧಾಮ.
ಸತೋಪ್ರಧಾನದಿಂದ ಸತೋ, ರಜೋ, ತಮೋ..... ನಾವೀಗ ಬಹಳ ಕೆಳಗೆ ಇಳಿದಿದ್ದೇವೆ ಅರ್ಥಾತ್
ವೇಶ್ಯಾಲಯದಲ್ಲಿದ್ದೇವೆ ಎಂಬುದನ್ನೂ ಸಹ ನೀವೀಗ ತಿಳಿದುಕೊಂಡಿದ್ದೀರಿ. ಭಲೆ ನೀವು ಈಗ
ಸಂಗಮಯುಗದಲ್ಲಿದ್ದೀರಿ ಆದರೆ ಜ್ಞಾನದಿಂದ ನೀವಿದನ್ನು ತಿಳಿದುಕೊಂಡಿದ್ದೀರಿ – ನಾವು ಬಹಳ ದೂರ
ಬಂದಿದ್ದೇವೆ ಆದರೂ ಸಹ ಒಂದುವೇಳೆ ನಾವು ಶಿವತಂದೆಯ ನೆನಪಿನಲ್ಲಿದ್ದರೆ ಶಿವಾಲಯವು ದೂರವಿಲ್ಲ.
ಶಿವತಂದೆಯನ್ನು ನೆನಪು ಮಾಡದಿದ್ದರೆ ಶಿವಾಲಯವು ಬಹಳ ದೂರವಿದ್ದಂತೆ, ಶಿಕ್ಷೆಗಳನ್ನು
ಅನುಭವಿಸಬೇಕಾಗುತ್ತದೆ ಅಂದಾಗ ಬಹಳ ದೂರವೆನಿಸುತ್ತದೆ. ಆದ್ದರಿಂದ ತಂದೆಯು ಮಕ್ಕಳಿಗೆ ಯಾವುದೇ
ಹೆಚ್ಚಿನ ಕಷ್ಟವನ್ನು ಕೊಡುವುದಿಲ್ಲ. ಒಂದನೆಯದಾಗಿ ಇದನ್ನು ಪದೇ-ಪದೇ ಹೇಳುತ್ತಾರೆ -
ಮನಸಾ-ವಾಚಾ-ಕರ್ಮಣಾ ಪವಿತ್ರರಾಗಬೇಕಾಗಿದೆ. ಈ ಕಣ್ಣುಗಳೂ ಸಹ ಬಹಳ ಮೋಸಗೊಳಿಸುತ್ತವೆ ಇದರಿಂದ ಬಹಳ
ಎಚ್ಚರಿಕೆಯಿಂದ ನಡೆಯಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ - ಧ್ಯಾನ ಮತ್ತು ಯೋಗವು ಸಂಪೂರ್ಣ
ಬೇರೆ-ಬೇರೆಯಾಗಿದೆ. ಯೋಗ ಎಂದರೆ ನೆನಪು, ಕಣ್ಣುಗಳನ್ನು ತೆರೆದೂ ಸಹ ನೀವು ಯೋಗ ಮಾಡಬಹುದು.
ಧ್ಯಾನಕ್ಕೆ ಯೋಗವೆಂದು ಹೇಳಲಾಗುವುದಿಲ್ಲ. ಭೋಗವನ್ನು ತೆಗೆದುಕೊಂಡು ಹೋಗುತ್ತಾರೆಂದರೂ ಸಹ
ಆದೇಶದನುಸಾರವೇ ಹೋಗಬೇಕಾಗಿದೆ. ಇದರಲ್ಲಿ ಮಾಯೆಯು ಬಹಳ ಬರುತ್ತದೆ. ಮಾಯೆಯು ಒಮ್ಮೆಲೆ ಮೂಗನ್ನು
ಹಿಡಿದು ಉಸಿರು ಕಟ್ಟಿಸುತ್ತದೆ. ಹೇಗೆ ತಂದೆಯು ಶಕ್ತಿವಂತನಾಗಿದ್ದಾರೆಯೋ ಹಾಗೆ ಮಾಯೆಯೂ ಸಹ ಬಹಳ
ಶಕ್ತಿವಂತನಾಗಿದೆ, ಎಷ್ಟೆಂದರೆ ಇಡೀ ಪ್ರಪಂಚವನ್ನು ವೇಶ್ಯಾಲಯದಲ್ಲಿ ಬೀಳಿಸುವಷ್ಟು
ಶಕ್ತಿವಂತನಾಗಿದೆ, ಆದ್ದರಿಂದ ಇದರಲ್ಲಿ ಬಹಳ ಎಚ್ಚರವಹಿಸಬೇಕಾಗುತ್ತದೆ. ನಿಯಮಾನುಸಾರ ತಂದೆಯ
ನೆನಪಿರಬೇಕು. ಯಾವುದೇ ನಿಯಮಕ್ಕೆ ವಿರುದ್ಧವಾದ ಕೆಲಸ ಮಾಡಿದರೆ ಒಮ್ಮೆಲೆ ಬೀಳಿಸಿಬಿಡುತ್ತದೆ.
ಧ್ಯಾನದಲ್ಲಿ ಹೋಗುವ ಇಚ್ಛೆಯನ್ನೆಂದೂ ಇಟ್ಟುಕೊಳ್ಳಬಾರದು. ಇಚ್ಛಾಮಾತ್ರಂ ಅವಿದ್ಯಾ. ಒಂದುವೇಳೆ
ನೀವು ತಂದೆಯ ಆಜ್ಞೆಯಂತೆ ನಡೆಯುವುದಾದರೆ ನೀವು ಕೇಳದೆಯೇ ತಂದೆಯು ನಿಮ್ಮ ಎಲ್ಲಾ ಮನೋಕಾಮನೆಗಳನ್ನು
ಪೂರ್ಣ ಮಾಡಿಬಿಡುತ್ತಾರೆ. ಒಂದುವೇಳೆ ತಂದೆಯ ಆಜ್ಞೆಯನ್ನು ಪಾಲಿಸದೆ ಉಲ್ಟಾ ಮಾರ್ಗವನ್ನು ಹಿಡಿದರೆ
ಸ್ವರ್ಗದ ಬದಲಾಗಿ ನರಕದಲ್ಲಿಯೇ ಹೋಗಿ ಬೀಳಬಹುದು. ಆನೆಯನ್ನು ಮೊಸಳೆಯು ತಿಂದಿತೆಂಬ ಗಾಯನವಿದೆ,
ಅನೇಕರಿಗೆ ಜ್ಞಾನ ಕೊಡುವವರು, ಭೋಗವನ್ನಿಡುವಂತಹವರೂ ಸಹ ಇಂದು ಇಲ್ಲವೇ ಇಲ್ಲ ಏಕೆಂದರೆ ನಿಯಮಕ್ಕೆ
ವಿರುದ್ಧವಾದ ನಡವಳಿಕೆಯ ಕಾರಣ ಪೂರ್ಣ ಮಾಯಾವಿಗಳಾಗಿಬಿಡುತ್ತಾರೆ. ದೇವತೆಗಳಾಗುತ್ತಾ -ಆಗುತ್ತಾ
ದೆವ್ವಗಳಾಗಿಬಿಡುತ್ತಾರೆ. ತಂದೆಗೆ ಗೊತ್ತಿದೆ, ಬಹಳ ಒಳ್ಳೆಯ ಪುರುಷಾರ್ಥಿಗಳು
ದೇವತೆಗಳಾಗುವವರಿದ್ದರು ಇಂದು ಅಸುರರಾಗಿ ಅಸುರರ ಜೊತೆ ಇರುತ್ತಾರೆ, ವಿರೋಧಿಗಳಾಗಿಬಿಡುತ್ತಾರೆ.
ತಂದೆಯ ಮಕ್ಕಳಾಗಿಯು ಮತ್ತೆ ಮಾಯೆಗೆ ವಶರಾಗಿಬಿಡುತ್ತಾರೆ ಅವರಿಗೆ ವಿರೋಧಿಗಳೆಂದು ಹೇಳಲಾಗುತ್ತದೆ
ಆದ್ದರಿಂದ ತನ್ನಮೇಲೆ ಗಮನವನ್ನಾಡಬೇಕಾಗಿದೆ. ಶ್ರೀಮತದ ಉಲ್ಲಂಘನೆ ಮಾಡಿದರೆಂದರೆ ಅವರು ಬಿದ್ದರು.
ಅದು ತಿಳಿಯುವುದೇ ಇಲ್ಲ ತಂದೆ ಯಂತೂ ಮಕ್ಕಳಿಗೆ ಎಚ್ಚರಿಕೆ ನೀಡುತ್ತಾರೆ- ಮಕ್ಕಳೇ ಹೋಗಿ
ರಸಾತಳದಲ್ಲಿ ಬೀಳುವಂತಹ ಚಲನೆಯಲ್ಲಿ ನಡೆಯಬೇಡಿ.
ನೆನ್ನೆಯೂ ಸಹ ತಂದೆಯು
ತಿಳಿಸಿದ್ದರು - ಅನೇಕ ಸಹೋದರರು ಪರಸ್ಪರ ಸಂಘಗಳನ್ನು ಮಾಡಿಕೊಳ್ಳುತ್ತಾರೆ. ಏನೆಲ್ಲವನ್ನೂ
ಮಾಡುತ್ತಾರೆಯೋ ಅದು ಒಂದುವೇಳೆ ಶ್ರೀಮತದ ಆಧಾರವಿಲ್ಲದೆ ಮಾಡುತ್ತಾರೆಂದರೆ ಸೇವಾಭಂಗವನ್ನೇ
ಮಾಡುತ್ತಾರೆ. ಶ್ರೀಮತದನುಸಾರ ಮಾಡದಿದ್ದರೆ ಕೆಳಗೆ ಬೀಳುತ್ತಾರೆ. ತಂದೆಯೂ ಸಹ ಆರಂಭದಲ್ಲಿ
ಸಂಘವನ್ನು ಮಾಡಿದ್ದರು. ಅದರಲ್ಲಿ ಎಲ್ಲರೂ ಮಾತೆಯರೇ ಇದ್ದರು ಏಕೆಂದರೆ ಜ್ಞಾನದ ಕಳಸವು ಮಾತೆಯರಿಗೇ
ಸಿಗುತ್ತದೆ. ವಂದೇ ಮಾತರಂ ಗಾಯನವಿದೆಯಲ್ಲವೆ! ಒಂದುವೇಳೆ ಗೋಪರು (ಸಹೋದರರು) ಸಂಘವನ್ನು
ಮಾಡುತ್ತಾರೆಂದರೆ ಗೋಪರಿಗೆ ವಂದನೆಯೆಂಬ ಗಾಯನವಿಲ್ಲ. ಶ್ರೀಮತದನುಸಾರ ಇಲ್ಲವೆಂದರೆ ಮಾಯೆಯ
ಜಾಲದಲ್ಲಿ ಹೋಗಿ ಸಿಕ್ಕಿಕೊಳ್ಳುತ್ತಾರೆ. ತಂದೆಯು ಮಾತೆಯರ ಸಂಘವನ್ನು ಕಟ್ಟಿ ಎಲ್ಲವನ್ನೂ ಅವರಿಗೇ
ಅರ್ಪಣೆ ಮಾಡಿಬಿಟ್ಟರು. ಬಹುತೇಕವಾಗಿ ಪುರುಷರೇ ದಿವಾಳಿಯಾಗುತ್ತಾರೆ, ಸ್ತ್ರೀಯರಲ್ಲ ಆದ್ದರಿಂದ
ತಂದೆಯು ಕಳಸವನ್ನು ಮಾತೆಯರಿಗೇ ಇಡುತ್ತಾರೆ. ಈ ಜ್ಞಾನಮಾರ್ಗದಲ್ಲಿ ಮಾತೆಯರೂ ಸಹ ದಿವಾಳಿಯಾಗಬಹುದು.
ಯಾರು ಪದಮಾಪದಮ ಭಾಗ್ಯಶಾಲಿಗಳಾಗು ವವರಿದ್ದಾರೆಯೋ ಅವರು ಮಾಯೆಗೆ ಸೋತುಹೋಗಿ
ದಿವಾಳಿಯಾಗಿಬಿಡುತ್ತಾರೆ. ಇದರಲ್ಲಿ ಸ್ತ್ರೀ-ಪುರುಷರಿಬ್ಬರೂ ದಿವಾಳಿಯಾಗುತ್ತಾರೆ ಮತ್ತು
ದಿವಾಳಿಯನ್ನಾಗಿಯೂ ಮಾಡುತ್ತಾರೆ. ಎಷ್ಟೊಂದು ಮಂದಿ ಹೀಗೆ ಸೋತುಹೋಗಿ ಹೊರಟುಹೋದರು ಅಂದರೆ
ದಿವಾಳಿಯಾದರು. ತಂದೆಯು ತಿಳಿಸುತ್ತಾರೆ - ಭಾರತವಾಸಿಗಳೇ ಪೂರ್ಣ ದಿವಾಳಿಯಾಗಿದ್ದಾರೆ, ಮಾಯೆಯು
ಎಷ್ಟು ಶಕ್ತಿಶಾಲಿಯಾಗಿದೆ! ನಾವು ಏನಾಗಿದ್ದೆವು, ಎಲ್ಲಿಂದ ಕೆಳಗೆ ಬಿದ್ದಿದ್ದೇವೆ ಎಂಬುದು
ತಿಳಿಯುವುದೇ ಇಲ್ಲ. ಇಲ್ಲಿಯೂ ಸಹ ಮೇಲೇರುತ್ತಾ-ಏರುತ್ತಾ ಮತ್ತೆ ಶ್ರೀಮತವನ್ನು ಮರೆತು ತಮ್ಮ
ಮನ್ಮತದಂತೆ ನಡೆಯುತ್ತಾರೆಂದರೆ ದಿವಾಳಿಯಾಗಿಬಿಡುತ್ತಾರೆ. ಮನುಷ್ಯರಂತೂ ದಿವಾಳಿಯಾಗಿ ಮತ್ತೆ 5-7
ವರ್ಷಗಳ ನಂತರ ಮತ್ತೆ ಎದ್ದುನಿಲ್ಲುತ್ತಾರೆ. ಇಲ್ಲಂತೂ 84 ಜನ್ಮಗಳಿಗೆ ದಿವಾಳಿಯಾಗುತ್ತಾರೆ.
ಶ್ರೇಷ್ಠಪದವಿಯನ್ನು ಪಡೆಯಲು ಸಾಧ್ಯವಿಲ್ಲ, ದಿವಾಳಿಯಾಗುತ್ತಾಲೇ ಇರುತ್ತಾರೆ. ತಂದೆಯ ಬಳಿ
ಭಾವಚಿತ್ರವಿದ್ದಿದ್ದರೆ ತಿಳಿಸುತ್ತಿದ್ದರು. ತಂದೆಯಂತೂ ಸರಿಯಾದ ಮಾತನ್ನೇ ಹೇಳುತ್ತಾರೆ ಎಂದು ನೀವೂ
ಸಹ ಹೇಳುತ್ತೀರಿ. ಇವರು ಎಷ್ಟು ದೊಡ್ಡ ಮಹಾರಥಿಯಾಗಿದ್ದರು, ಅನೇಕರನ್ನು ಮೇಲೆತ್ತುತ್ತಿದ್ದರು,
ಇಂದು ಅವರಿಲ್ಲ ದಿವಾಳಿಯಾಗಿದ್ದಾರೆ ಆದ್ದರಿಂದ ತಂದೆಯು ಪದೇ-ಪದೇ ಮಕ್ಕಳಿಗೆ ಸಾವಧಾನವನ್ನು
ತರಿಸುತ್ತಾರೆ. ತಮ್ಮ ಮತದಂತೆ ಸಂಘಗಳನ್ನು ಮಾಡಿಕೊಳ್ಳುವುದರಲ್ಲಿ ಏನೂ ಇಲ್ಲ. ಪರಸ್ಪರ ಸೇರಿ
ಅಲ್ಲಸಲ್ಲದ ಮಾತುಗಳನ್ನು ಮಾತನಾಡುವುದು, ಇವರು ಹೀಗೆ ಮಾಡುತ್ತಿದ್ದರು, ಅವರು ಹಾಗೆ
ಮಾಡುತ್ತಿದ್ದರು......ಇಡೀ ದಿನ ಇದನ್ನೇ ಮಾಡುತ್ತಿರುತ್ತಾರೆ. ತಂದೆಯ ಜೊತೆ ಬುದ್ಧಿಯೋಗವನ್ನು
ಜೋಡಿಸುವುದರಿಂದಲೇ ಸತೋಪ್ರಧಾನರಾಗುತ್ತೀರಿ. ತಂದೆಯ ಮಕ್ಕಳಾಗಿ ತಂದೆಯ ಜೊತೆ ಯೋಗವಿಲ್ಲವೆಂದರೆ
ಪದೇ-ಪದೇ ಬೀಳುತ್ತಾ ಇರುತ್ತೀರಿ, ಸಂಬಂಧವೇ ಕತ್ತರಿಸುತ್ತದೆ. ಸಂಬಂಧವು ಕತ್ತರಿಸಿದರೆ ಮಾಯೆಯು
ನಮಗೆ ಏಕೆ ಇಷ್ಟೊಂದು ತೊಂದರೆ ಮಾಡುತ್ತದೆ ಎಂದು ಗಾಬರಿಯಾಗಬಾರದು. ಪ್ರಯತ್ನಪಟ್ಟು ತಂದೆಯ ಜೊತೆ
ಸಂಬಂಧವನ್ನು ಜೋಡಿಸಬೇಕು ಇಲ್ಲದಿದ್ದರೆ ಬ್ಯಾಟರಿಯು ಹೇಗೆ ತುಂಬುತ್ತದೆ. ವಿಕರ್ಮಗಳಾಗುವುದರಿಂದ
ಬ್ಯಾಟರಿಯು ಖಾಲಿಯಾಗಿಬಿಡುತ್ತದೆ. ಪ್ರಾರಂಭದಲ್ಲಿ ಎಷ್ಟೊಂದು ಮಂದಿ ಬಂದು ತಂದೆಯ ಮಕ್ಕಳಾದರು.
ಭಟ್ಟಿಯಲ್ಲಿ ಬಂದರು ಅಂದಾಗ ಇಂದು ಅವರು ಎಲ್ಲಿದ್ದಾರೆ! ಬಿದ್ದುಹೋದರು ಏಕೆಂದರೆ ಹಳೆಯಪ್ರಪಂಚವು
ನೆನಪಿಗೆ ಬಂದಿತು. ಈಗ ತಂದೆಯು ತಿಳಿಸುತ್ತಾರೆ- ನಾನು ನಿಮಗೆ ಬೇಹದ್ದಿನ ವೈರಾಗ್ಯವನ್ನು
ತರಿಸುತ್ತೇನೆ, ಈ ಹಳೆಯ ಪ್ರಪಂಚದೊಂದಿಗೆ ಮನಸ್ಸನ್ನಿಡಬೇಡಿ. ಮನಸ್ಸನ್ನು ಸ್ವರ್ಗದೊಂದಿಗೆ
ಇಡಬೇಕಾಗಿದೆ. ಒಂದುವೇಳೆ ಇಂತಹ ಲಕ್ಷ್ಮೀ-ನಾರಾಯಣ ರಾಗಬೇಕೆಂದರೆ ಪರಿಶ್ರಮಪಡಬೇಕಾಗುತ್ತದೆ.
ಬುದ್ಧಿಯೋಗವು ಒಬ್ಬ ತಂದೆಯ ಜೊತೆ ಇರಬೇಕು. ಹಳೆಯ ಪ್ರಪಂಚದೊಂದಿಗೆ ವೈರಾಗ್ಯವನ್ನಿಟ್ಟು ಸುಖಧಾಮ
ಮತ್ತು ಶಾಂತಿಧಾಮವನ್ನು ನೆನಪು ಮಾಡಿ, ಎಷ್ಟು ಸಾಧ್ಯವೋ ಅಷ್ಟು ಏಳುತ್ತಾ-ಕುಳಿತುಕೊಳ್ಳುತ್ತಾ,
ನಡೆಯುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಿ. ಇದಂತೂ ಸಂಪೂರ್ಣ ಸಹಜವಾಗಿದೆ. ನರನಿಂದ
ನಾರಾಯಣನಾಗುವುದಕ್ಕಾಗಿಯೇ ನೀವಿಲ್ಲಿಗೆ ಬಂದಿದ್ದೀರಿ ಅಂದಮೇಲೆ ಎಲ್ಲರಿಗೂ ತಿಳಿಸಬೇಕು – ಈಗ
ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆಏಕೆಂದರೆ ಹಿಂತಿರುಗಿ ಹೋಗಬೇಕಾಗಿದೆ. ವಿಶ್ವದ
ಇತಿಹಾಸ-ಭೂಗೋಳದ ಪುನರಾವರ್ತನೆಯೆಂದರೆ ನರಕದಿಂದ ಸ್ವರ್ಗ ಮತ್ತೆ ಸ್ವರ್ಗದಿಂದ ನರಕವೆಂದರ್ಥ. ಈ
ಚಕ್ರವು ಸುತ್ತುತ್ತಲೇ ಇರುತ್ತದೆ.
ತಂದೆಯು ತಿಳಿಸಿದ್ದಾರೆ
- ಇಲ್ಲಿ ನೀವು ಸ್ವದರ್ಶನ ಚಕ್ರಧಾರಿಗಳಾಗಿ ಕುಳಿತುಕೊಳ್ಳಿ. ನಾವು ಎಷ್ಟೊಂದುಬಾರಿ ಚಕ್ರವನ್ನು
ಸುತ್ತಿದ್ದೇವೆ. ಈಗ ಪುನಃ ದೇವತೆಗಳಾಗುತ್ತಿದ್ದೇವೆ. ಪ್ರಪಂಚದಲ್ಲಿ ಯಾರೂ ಸಹ ಈ ರಹಸ್ಯವನ್ನು
ತಿಳಿದುಕೊಂಡಿರಲಿಲ್ಲ. ಈ ಜ್ಞಾನವು ದೇವತೆಗಳಿಗಿಲ್ಲ ಅವರಂತೂ ಪವಿತ್ರರಾಗಿದ್ದಾರೆ. ಶಂಖಧ್ವನಿ
ಮಾಡಲು ಅವರಲ್ಲಿ ಜ್ಞಾನವೇ ಇರುವುದಿಲ್ಲ, ಅವರು ಪವಿತ್ರರಾಗಿರುತ್ತಾರೆ. ಅವರಿಗೆ ಈ ಅಲಂಕಾರವನ್ನು
ಕೊಡುವ ಅವಶ್ಯಕತೆಯೇ ಇಲ್ಲ ಯಾವಾಗ ಇಬ್ಬರೂ ಒಟ್ಟಿಗೆ ಸೇರುತ್ತಾರೆಯೋ ಆಗ ಈ ಅಲಂಕಾರವನ್ನು
ತೋರಿಸಲಾಗುತ್ತದೆ. ನಿಮಗೂ ಸಹ ಈ ಅಲಂಕಾರವಿಲ್ಲ ಏಕೆಂದರೆ ನೀವು ಇಂದು ದೇವತೆಗಳಾಗುತ್ತಾ ಆಗುತ್ತಾ
ನಾಳೆ ಕೆಲವರು ಅಸುರರಾಗಿಬಿಡುತ್ತಾರೆ. ತಂದೆಯು ದೇವತೆಗಳನ್ನಾಗಿ ಮಾಡುತ್ತಾರೆ, ಮಾಯೆಯು
ಅಸುರರನ್ನಾಗಿ ಮಾಡಿಬಿಡುತ್ತದೆ. ತಂದೆಯು ತಿಳಿಸಿದಾಗ ನಿಜವಾಗಿಯೂ ನಮ್ಮ ಸ್ಥಿತಿಯು ಕೆಳಗೆ ಬಂದಿದೆ
ಎಂದು ತಿಳಿದುಬರುತ್ತದೆ. ಪಾಪ! ಎಷ್ಟೊಂದು ಮಂದಿ ಶಿವತಂದೆಯ ಖಜಾನೆಯಲ್ಲಿ ಜಮಾ ಮಾಡಿಸುತ್ತಾರೆ
ಮತ್ತೆ ಅಸುರರಾಗಿಬಿಡುತ್ತಾರೆ. ಇದಕ್ಕೆ ಕಾರಣ ಯೋಗದ ಕೊರತೆಯಾಗಿದೆ. ಯೋಗದಿಂದಲೇ
ಪವಿತ್ರರಾಗಬೇಕಾಗಿದೆ. ತಂದೆಯೇ ಬನ್ನಿ, ನಮ್ಮನ್ನು ಸ್ವರ್ಗದಲ್ಲಿ ಹೋಗುವುದಕ್ಕೆ ಯೋಗ್ಯರಾಗಲು
ಪತಿತರಿಂದ ಪಾವನರನ್ನಾಗಿ ಮಾಡಿ ಎಂದು ಕರೆಯುತ್ತೀರಿ. ಪಾವನರಾಗಿ ಶ್ರೇಷ್ಠಪದವಿಯನ್ನು
ಪಡೆಯುವುದಕ್ಕಾಗಿಯೇ ನೆನಪಿನ ಯಾತ್ರೆಯಿದೆ. ಯಾರು ಸತ್ತುಹೋಗುತ್ತಾರೆಯೋ ಅವರು ಜ್ಞಾನವನ್ನು
ಕೇಳಿರುವಕಾರಣ ಶಿವಾಲಯದಲ್ಲಿ ಅವಶ್ಯವಾಗಿ ಬರುತ್ತಾರೆ ಭಲೆ ಎಂತಹ ಪದವಿಯನ್ನೇ ಪಡೆಯಲಿ, ಒಂದು ಬಾರಿ
ನೆನಪು ಮಾಡಿದರೆಂದರೆ ಸ್ವರ್ಗದಲ್ಲಿ ಅವಶ್ಯವಾಗಿ ಬರುತ್ತಾರೆ ಬಾಕಿ ಶ್ರೇಷ್ಠಪದವಿಯನ್ನು ಪಡೆಯಲು
ಸಾಧ್ಯವಿಲ್ಲ. ಸ್ವರ್ಗದ ಹೆಸರನ್ನು ಕೇಳಿ ಖುಷಿಯಾಗಬೇಕು. ಅನುತ್ತೀರ್ಣರಾಗಿ ಬಿಡಿಗಾಸಿನ ಪದವಿಯನ್ನು
ಪಡೆದೆವೆಂದು ಖುಷಿಯಾಗಬಾರದು. ನಾನು ನೌಕರನಾಗಿದ್ದೇನೆ ಎಂದು ಭಾಸವಂತೂ ಆಗುತ್ತದೆಯಲ್ಲವೆ!
ಕೊನೆಯಲ್ಲಿ ನಾನು ಏನಾಗುತ್ತೇನೆ, ನನ್ನಿಂದ ಯಾವ ವಿಕರ್ಮವಾದ ಕಾರಣ ಇಂತಹ ಗತಿಯಾಗಿದೆ! ಎಂದು
ಎಲ್ಲವೂ ಸಾಕ್ಷಾತ್ಕಾರವಾಗುತ್ತದೆ. ಹೆಜ್ಜೆ ಹೆಜ್ಜೆಯಲ್ಲಿ ಎಚ್ಚರವಹಿಸಿ ನಡೆಯುವುದರಿಂದ ನೀವು
ಪದಮಾಪದಮಪತಿಗಳಾಗ ಬಹುದು. ಮಂದಿರಗಳಲ್ಲಿ ದೇವತೆಗಳಿಗೆ ಕಮಲದ ಅಲಂಕಾರವನ್ನು ತೋರಿಸುತ್ತಾರೆ.
ದರ್ಜೆಯಲ್ಲಿ ಅಂತರವಾಗಿಬಿಡುತ್ತದೆ. ಇಂದಿನ ರಾಜ್ಯಭಾರದಲ್ಲಿ ಎಷ್ಟೊಂದು ಹೊಡೆದಾಟವಿರುತ್ತದೆ!
ಇದೆಲ್ಲವೂ ಅಲ್ಪಕಾಲದ್ದಾಗಿದೆ, ಸದಾಕಾಲದ ರಾಜರಂತೂ ಆಗಲು ಸಾಧ್ಯವಿಲ್ಲ ಆದ್ದರಿಂದ ಈಗ ತಂದೆಯು
ತಿಳಿಸುತ್ತಾರೆ, ನೀವು ಲಕ್ಷ್ಮೀ- ನಾರಾಯಣರಾಗಬೇಕೆಂದರೆ ಪುರುಷಾರ್ಥವನ್ನೂ ಅದೇ ರೀತಿ ಮಾಡಬೇಕು.
ನಾವು ಎಷ್ಟು ಕಲ್ಯಾಣವನ್ನು ಮಾಡುತ್ತೇವೆ? ಅಂತರ್ಮುಖಿಯಾಗಿ ಎಷ್ಟು ಸಮಯ ತಂದೆಯ
ನೆನಪಿನಲ್ಲಿರುತ್ತೇವೆ? ಈಗ ನಾವು ನಮ್ಮ ಮಧುರಮನೆಗೆ ಹೋಗುತ್ತಿದ್ದೇವೆ ನಂತರ ಸುಖಧಾಮದಲ್ಲಿ
ಬರುತ್ತೇವೆ. ಇದೆಲ್ಲಾ ಜ್ಞಾನದ ಮಂಥನವು ಒಳಗೆ ನಡೆಯುತ್ತಿರಲಿ. ತಂದೆಯಲ್ಲಿ ಜ್ಞಾನ ಮತ್ತು ಯೋಗ
ಎರಡೂ ಇದೆ. ಇದು ನಿಮ್ಮಲ್ಲಿಯೂ ಇರಬೇಕು ಏಕೆಂದರೆ ನಿಮಗೆ ತಿಳಿದಿದೆ - ನಮಗೆ ಶಿವತಂದೆಯು
ಓದಿಸುತ್ತಾರೆಂದರೆ ಜ್ಞಾನವೂ ಆಯಿತು ಮತ್ತು ನೆನಪೂ ಆಯಿತು. ಜ್ಞಾನ ಮತ್ತು ಯೋಗ ಎರಡೂ ಜೊತೆ-ಜೊತೆಗೆ
ನಡೆಯುತ್ತದೆ. ಯೋಗದಲ್ಲಿ ಕುಳಿತುಕೊಳ್ಳಿ, ತಂದೆಯನ್ನು ನೆನಪು ಮಾಡುತ್ತಾ ಇರಿ ಹಾಗೂ ಜ್ಞಾನವು
ಮರೆತು ಹೋಗಲಿ ಎಂದಲ್ಲ. ತಂದೆಯು ಯೋಗವನ್ನು ಕಲಿಸುತ್ತಾರೆಂದರೆ ಜ್ಞಾನವನ್ನು ಮರೆತುಹೋಗುತ್ತಾರೆಯೇ?
ಅವರಲ್ಲಿ ಹೇಗೆ ಪೂರ್ಣ ಜ್ಞಾನವಿದೆಯೋ ಹಾಗೆಯೇ ನೀವು ಮಕ್ಕಳಲ್ಲಿಯೂ ಜ್ಞಾನವಿರಬೇಕು ಮತ್ತು ಓದಬೇಕು.
ಎಂತಹ ಕರ್ಮವನ್ನು ಮಾಡುತ್ತೇನೆಯೋ ನನ್ನನ್ನು ನೋಡಿ ಅನ್ಯರೂ ಮಾಡುತ್ತಾರೆ. ನಾನು ಮುರುಳಿಯನ್ನು
ಓದದಿದ್ದರೆ ಅನ್ಯರೂ ಓದುವುದಿಲ್ಲ. ಮಿಥ್ಯ ಅಹಂಕಾರವು ಬಂದುಬಿಟ್ಟರೆ ತಕ್ಷಣ ಮಾಯೆಯು ಪ್ರವೇಶ
ಮಾಡಿಬಿಡುತ್ತದೆ ಆದ್ದರಿಂದ ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತವನ್ನು ತೆಗೆದುಕೊಳ್ಳುತ್ತಾ ಇರಬೇಕಾಗಿದೆ
ಇಲ್ಲದಿದ್ದರೆ ಯಾವುದಾದರೊಂದು ವಿಕರ್ಮಗಳಾಗಿಬಿಡುತ್ತದೆ. ಅನೇಕ ಮಕ್ಕಳು ತಪ್ಪು ಮಾಡಿ ತಂದೆಗೆ
ತಿಳಿಸುವುದಿಲ್ಲ ಆದ್ದರಿಂದ ತಮ್ಮ ಸತ್ಯನಾಶ ಮಾಡಿಕೊಳ್ಳುತ್ತಾರೆ. ತಪ್ಪು ಮಾಡುವುದರಿಂದ ಮಾಯೆಯು
ಪೆಟ್ಟನ್ನು ಕೊಡುತ್ತದೆ. ಕಾಸಿಗೂ ಬೆಲೆಯಿಲ್ಲದವರನ್ನಾಗಿ ಮಾಡಿಬಿಡುತ್ತದೆ. ಅಹಂಕಾರದಲ್ಲಿ
ಬರುವುದರಿಂದ ಮಾಯೆಯು ಬಹಳ ವಿಕರ್ಮಗಳನ್ನು ಮಾಡಿಸುತ್ತದೆ, ಹೀಗೆ ಪುರುಷರ ಸಂಘಗಳನ್ನು ಸ್ಥಾಪಿಸಿ
ಎಂದು ತಂದೆಯು ಹೇಳಿದ್ದಾರೆಯೇ! ಸಂಘದಲ್ಲಿ ಒಬ್ಬರು ಅಥವಾ ಇಬ್ಬರು ಬುದ್ಧಿವಂತ ಮಕ್ಕಳು ಅವಶ್ಯವಾಗಿ
ಇರಬೇಕು. ಅವರ ಸಲಹೆಯಂತೆ ಕೆಲಸವು ನಡೆಯಬೇಕು, ಕಳಸವನ್ನಂತೂ ಲಕ್ಷ್ಮಿಯ ಮೇಲೆ ಇಡಲಾಗುತ್ತದೆಯಲ್ಲವೆ!
ಗಾಯನವೂ ಇದೆ – ಅಮೃತವನ್ನು ಕುಡಿಸುತ್ತಿದ್ದರು ಆದರೂ ಮತ್ತೆ ಯಜ್ಞದಲ್ಲಿ ವಿಘ್ನಗಳನ್ನು
ಹಾಕುತ್ತಿದ್ದರು ಅಂದರೆ ಇಲ್ಲಿಯೂ ಅನೇಕ ಪ್ರಕಾರದ ವಿಘ್ನಗಳನ್ನು ಹಾಕುವವರಿದ್ದಾರೆ, ಇಡೀ ದಿನ ಇದೇ
ಅಲ್ಲಸಲ್ಲದ ಮಾತುಗಳನ್ನಾಡುತ್ತಿರುತ್ತಾರೆ, ಇದು ಬಹಳ ಕೆಟ್ಟದಾಗಿದೆ. ಯಾವುದೇ ಮಾತಿದ್ದರೆ ತಂದೆಗೆ
ದೂರು ಕೊಡಬೇಕು, ಸುಧಾರಣೆ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ. ನೀವು ತಮ್ಮ ಕೈಯಲ್ಲಿ ಕಾನೂನನ್ನು
ತೆಗೆದುಕೊಳ್ಳಬೇಡಿ. ನೀವು ತಂದೆಯ ನೆನಪಿನಲ್ಲಿರಿ, ಎಲ್ಲರಿಗೆ ತಂದೆಯ ಪರಿಚಯ ಕೊಡುತ್ತಾ ಇರಿ ಆಗ ಈ
ರೀತಿಯಾಗಬಲ್ಲಿರಿ. ಮಾಯೆಯು ಬಹಳ ಕಠಿಣವಾಗಿದೆ, ಯಾರನ್ನೂ ಬಿಡುವುದಿಲ್ಲ. ಸದಾ ತಂದೆಗೆ
ಸಮಾಚಾರವನ್ನು ಬರೆಯಬೇಕು, ತಂದೆಯಿಂದ ಸಲಹೆಯನ್ನು ತೆಗೆದುಕೊಳ್ಳುತ್ತಾ ಇರಬೇಕು, ವಾಸ್ತವದಲ್ಲಿ
ತಂದೆಯ ಸಲಹೆಯಂತೂ ಸದಾ ಸಿಗುತ್ತಿರುತ್ತದೆ. ಮಕ್ಕಳು ತಿಳಿಯುತ್ತೀರಲ್ಲವೆ - ತಂದೆಯು ತಾವಾಗಿಯೇ ಈ
ಮಾತಿನ ಬಗ್ಗೆ ತಿಳಿಸಿಕೊಟ್ಟರು. ನಾನಂತೂ ವಿದ್ಯೆಯನ್ನು ಓದಿಸುತ್ತೇನೆ ಇದರಲ್ಲಿ ಅಂತರ್ಯಾಮಿಯ
ಮಾತಿಲ್ಲ. ಹಾ! ಇವರೆಲ್ಲರೂ ನನ್ನ ಮಕ್ಕಳಾಗಿದ್ದಾರೆ, ಪ್ರತಿಯೊಂದು ಶರೀರದಲ್ಲಿ ನನ್ನ
ಮಕ್ಕಳಿದ್ದಾರೆ ಎಂದು ನನಗೆ ಗೊತ್ತಿದೆ ಅಂದರೆ ತಂದೆಯು ಎಲ್ಲರಲ್ಲಿಯೂ ವಿರಾಜಮಾನರಾಗಿದ್ದಾರೆ
ಎಂದಲ್ಲ. ಮನುಷ್ಯರಂತೂ ಉಲ್ಟಾ ತಿಳಿದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ, ಮಕ್ಕಳೇ, ನನಗೆ
ತಿಳಿದಿದೆ - ಎಲ್ಲಾ ಆತ್ಮಗಳು ಸಿಂಹಾಸನದಲ್ಲಿ ವಿರಾಜಮಾನರಾಗಿದ್ದೀರಿ. ಇದು ಎಷ್ಟೊಂದು ಸಹಜ
ಮಾತಾಗಿದೆ! ಎಲ್ಲಾ ಚೈತನ್ಯ ಆತ್ಮಗಳು ತಮ್ಮ-ತಮ್ಮ ಸಿಂಹಾಸನದಲ್ಲಿ ಕುಳಿತಿದ್ದೀರಿ ಆದರೂ ಸಹ
ಪರಮಾತ್ಮನನ್ನು ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ. ಇದು ಮೊಟ್ಟಮೊದಲನೆಯ ತಪ್ಪಾಗಿದೆ. ಈ
ಕಾರಣದಿಂದಲೇ ಭಾರತವು ಇಷ್ಟೊಂದು ಕೆಳಗಿಳಿದಿದೆ. ತಂದೆಯು ತಿಳಿಸುತ್ತಾರೆ - ನೀವು ನನ್ನನ್ನು ಬಹಳ
ನಿಂದನೆ ಮಾಡಿದ್ದೀರಿ, ವಿಶ್ವದ ಮಾಲೀಕರನ್ನಾಗಿ ಮಾಡುವವರಿಗೇ ನೀವು ನಿಂದನೆ ಮಾಡಿದ್ದೀರಿ.
ಆದ್ದರಿಂದ ತಂದೆಯು ತಿಳಿಸುತ್ತಾರೆ - ಯಧಾಯಧಾಹೀ ಧರ್ಮಸ್ಯ..... ಹೊರಗಿನವರು ಭಾರತವಾಸಿಗಳಿಂದಲೇ ಈ
ಸರ್ವವ್ಯಾಪಿಯ ಜ್ಞಾನವನ್ನು ಕಲಿಯುತ್ತಾರೆ, ಹೇಗೆ ಭಾರತವಾಸಿಗಳು ಅವರಿಂದ ಕಲೆಗಳನ್ನು ಕಲಿಯುತ್ತಾರೆ,
ಅದೇ ರೀತಿ ಅವರು ಇದನ್ನು- ಉಲ್ಟಾ ಕಲಿಯುತ್ತಾರೆ. ನೀವಂತೂ ಮೊದಲನೆಯದಾಗಿ ತಂದೆಯನ್ನು ನೆನಪು
ಮಾಡಬೇಕಾಗಿದೆ ಮತ್ತು ತಂದೆಯ ಪರಿಚಯವನ್ನು ಎಲ್ಲರಿಗೆ ಕೊಡಬೇಕಾಗಿದೆ. ನೀವು ಅಂಧರಿಗೆ
ಊರುಗೋಲಾಗಿದ್ದೀರಿ. ಊರುಗೋಲಿನಿಂದ ಮಾರ್ಗವನ್ನು ತೋರಿಸುತ್ತಾರಲ್ಲವೆ! ಒಳ್ಳೆಯದು-
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯ
ಆಜ್ಞೆಯನುಸಾರ ಪ್ರತಿಯೊಂದು ಕರ್ಮವನ್ನು ಮಾಡಬೇಕಾಗಿದೆ. ಎಂದೂ ಶ್ರೀಮತದ ಉಲ್ಲಂಘನೆ ಯಾಗಬಾರದು ಆಗ
ನೀವು ಕೇಳದಿದ್ದರೂ ಎಲ್ಲಾ ಮನೋಕಾಮನೆಗಳು ಈಡೇರುತ್ತವೆ. ಧ್ಯಾನ, ಸಾಕ್ಷಾತ್ಕಾರದ ಇಚ್ಛೆಯನ್ನಿಟ್ಟು
ಕೊಳ್ಳಬಾರದು. ಇಚ್ಛಾಮಾತ್ರಂ ಅವಿದ್ಯಾ ಆಗಬೇಕಾಗಿದೆ.
2. ಪರಸ್ಪರ ಸೇರಿ
ಅಲ್ಲಸಲ್ಲದ (ಪರಚಿಂತನೆ) ಮಾತುಗಳನ್ನಾಡ ಬಾರದು. ಅಂತರ್ಮುಖಿಯಾಗಿ ನಾವು ತಂದೆಯ ನೆನಪಿನಲ್ಲಿ ಎಷ್ಟು
ಸಮಯ ಇರುತ್ತೇವೆ, ಜ್ಞಾನದ ಮಂಥನವು ಒಳಗೆ ನಡೆಯುತ್ತದೆಯೇ ಎಂದು ತಮ್ಮ ಪರಿಶೀಲನೆ
ಮಾಡಿಕೊಳ್ಳಬೇಕಾಗಿದೆ.
ವರದಾನ:
ಪ್ರತಿಯೊಂದು
ಆತ್ಮನ ಸಂಬಂಧ ಸಂಪರ್ಕದಲ್ಲಿ ಬರುತ್ತಾ ಎಲ್ಲರಿಗೆ ದಾನ ಕೊಡುವ ಮಹಾದಾನಿ, ವರದಾನಿ ಭವ.
ಇಡೀ ದಿನದಲ್ಲಿ ಯಾರೆಲ್ಲಾ
ಸಂಬಂಧ-ಸಂಪರ್ಕದಲ್ಲಿ ಬರುತ್ತಾರೆ ಅವರಿಗೆ ಯಾವುದಾದರೂ ಶಕ್ತಿಯ, ಜ್ಞಾನದ, ಗುಣದ ದಾನ ಮಾಡಿ. ತಮ್ಮ
ಹತ್ತಿರ ಜ್ಞಾನದ್ದೂ ಖಜಾನೆ ಇದೆ ಅಂದಾಗ ಶಕ್ತಿಗಳ ಮತ್ತು ಗುಣಗಳ ಖಜಾನೆಯೂ ಸಹ ಇದೆ. ಆದ್ದರಿಂದ
ದಾನ ಕೊಡದೆ ಖಾಲಿಯಾಗಿ ಯಾರೂ ಹೋಗಬಾರದು ಆಗ ಮಹಾದಾನಿ ಎಂದು ಹೇಳಲಾಗುತ್ತದೆ. ದಾನಿ ಶಬ್ದದ ಆತ್ಮಿಕ
ಅರ್ಥವೇ ಸಹಯೋಗ ಕೊಡುವುದು. ಅಂದಾಗ ತಮ್ಮ ಶ್ರೇಷ್ಠ ಸ್ಥಿತಿಯ ವಾಯುಂಡಲದ ಮೂಲಕ ಮತ್ತು ತಮ್ಮ
ವೃತ್ತಿಯ ಪ್ರಕಂಪನಗಳ ಮೂಲಕ ಪ್ರತಿಯೊಂದು ಆತ್ಮನಿಗೆ ಸಹಯೋಗ ಕೊಟ್ಟಾಗ ವರದಾನಿ ಎಂದು ಹೇಳಲಾಗುತ್ತದೆ.
ಸ್ಲೋಗನ್:
ಯಾರು ಬಾಪ್ ದಾದಾ
ಮತ್ತು ಪರಿವಾರಕ್ಕೆ ಸಮೀಪವಾಗಿರುತ್ತಾರೆ ಅವರ ಮುಖದ ಮೇಲೆ ಸಂತುಷ್ಟತೆ, ಆತ್ಮೀಯತೆ ಮತ್ತು
ಪ್ರಸನ್ನತೆಯ ಮುಗುಳ್ನಗು ಇರುತ್ತದೆ.