11.12.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಸಂಗಮಯುಗದಲ್ಲಿ ನೀವು ಬ್ರಾಹ್ಮಣ ಸಂಪ್ರದಾಯದವರಾಗಿದ್ದೀರಿ, ನೀವೀಗ ಮೃತ್ಯುಲೋಕದ ಮನುಷ್ಯರಿಂದ
ಅಮರಲೋಕದ ದೇವತೆಗಳಾಗಬೇಕಾಗಿದೆ.”
ಪ್ರಶ್ನೆ:
ನೀವು ಮಕ್ಕಳು
ಯಾವ ಜ್ಞಾನವನ್ನು ತಿಳಿದುಕೊಂಡಿರುವ ಕಾರಣ ಬೇಹದ್ದಿನ ಸನ್ಯಾಸ ಮಾಡುತ್ತೀರಿ?
ಉತ್ತರ:
ನಿಮಗೆ ಡ್ರಾಮಾದ
ಯಥಾರ್ಥ ಜ್ಞಾನವಿದೆ, ನೀವು ತಿಳಿದುಕೊಂಡಿದ್ದೀರಿ - ಡ್ರಾಮಾನುಸಾರ ಈಗ ಈ ಇಡೀ ಮೃತ್ಯುಲೋಕವು
ಭಸ್ಮೀಭೂತವಾಗಬೇಕಾಗಿದೆ. ಈಗ ಈ ಪ್ರಪಂಚವು ಕಾಸಿಗೂ ಬೆಲೆಯಿಲ್ಲದಂತಾಗಿದೆ. ನಾವು
ಮೌಲ್ಯವಂತರಾಗಬೇಕಾಗಿದೆ. ಇದರಲ್ಲಿ ಏನೆಲ್ಲವೂ ಆಗುತ್ತದೆಯೋ ಅದು ಕಲ್ಪದ ನಂತರ ಚಾಚೂ ತಪ್ಪದೆ
ಪುನರಾವರ್ತನೆಯಾಗುವುದು ಆದ್ದರಿಂದ ನೀವು ಇಡೀ ಪ್ರಪಂಚದಿಂದ ಬೇಹದ್ದಿನ ಸನ್ಯಾಸ ಮಾಡಿದ್ದೀರಿ.
ಗೀತೆ:
ಬರುವಂತಹ ನಾಳೆಗೆ
ನೀವು ಅದೃಷ್ಟವಂತರು........
ಓಂ ಶಾಂತಿ.
ಮಕ್ಕಳು ಗೀತೆಯ ಸಾಲನ್ನು ಕೇಳಿದಿರಿ. ಬರಲಿರುವುದು ಅಮರಲೋಕವಾಗಿದೆ, ಇದು ಮೃತ್ಯುಲೋಕವಾಗಿದೆ.
ಅಮರಲೋಕ ಮತ್ತು ಮೃತ್ಯುಲೋಕದ ನಡುವೆ ಇದು ಪುರುಷೋತ್ತಮ ಸಂಗಮಯುಗ. ಈಗ ತಂದೆಯು ಸಂಗಮದಲ್ಲಿ
ಆತ್ಮರಿಗೆ ಓದಿಸುತ್ತಾರೆ ಆದ್ದರಿಂದ ಮಕ್ಕಳೇ, ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳಿ ಎಂದು
ಹೇಳುತ್ತಾರೆ. ಈ ನಿಶ್ಚಯ ಮಾಡಿಕೊಳ್ಳಿ - ನಮಗೆ ಬೇಹದ್ದಿನ ತಂದೆಯು ಓದಿಸುತ್ತಾರೆ.
ಲಕ್ಷ್ಮೀ-ನಾರಾಯಣ ಅಥವಾ ಮೃತ್ಯುಲೋಕದ ಮನುಷ್ಯರಿಂದ ಅಮರಲೋಕದ ದೇವತೆಗಳಾಗುವುದೇ ನಮ್ಮ
ಗುರಿ-ಧ್ಯೇಯವಾಗಿದೆ. ಇಂತಹ ವಿದ್ಯೆಯನ್ನು ಎಂದೂ ಕಿವಿಗಳಿಂದ ಕೇಳಿರುವುದಿಲ್ಲ ಅಥವಾ ತಮ್ಮ
ಮಕ್ಕಳಿಗೆ ನೀವು ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳಿ ಎಂದು ಯಾರೂ ಹೇಳುತ್ತಿರುವುದನ್ನು
ನೋಡಿರುವುದಿಲ್ಲ. ಈ ನಿಶ್ಚಯ ಮಾಡಿಕೊಳ್ಳಿ - ಬೇಹದ್ದಿನ ತಂದೆಯು ನಮಗೆ ಓದಿಸುತ್ತಿದ್ದಾರೆ. ಯಾವ
ತಂದೆ? ಬೇಹದ್ದಿನ ತಂದೆ, ನಿರಾಕಾರ ಶಿವ. ಈಗ ನೀವು ತಿಳಿದುಕೊಂಡಿದ್ದೀರಿ - ನಾವು ಪುರುಷೋತ್ತಮ
ಸಂಗಮಯುಗದಲ್ಲಿದ್ದೇವೆ, ನೀವೀಗ ಬ್ರಾಹ್ಮಣ ಸಂಪ್ರದಾಯದವರಾಗಿದ್ದೀರಿ. ಮೊದಲು ಶೂದ್ರ
ಸಂಪ್ರದಾಯದವರಾಗಿದ್ದಿರಿ, ತಂದೆಯು ಬಂದು ಕಲ್ಲು ಬುದ್ಧಿಯವರಿಂದ ಪಾರಸ ಬುದ್ಧಿಯವರನ್ನಾಗಿ
ಮಾಡುತ್ತಾರೆ. ಮೊದಲು ಸತೋಪ್ರಧಾನ, ಪಾರಸ ಬುದ್ಧಿಯವರಾಗಿದ್ದಿರಿ, ಈಗ ಮತ್ತೆ ಆಗುತ್ತೀರಿ. ನಾವು
ಸತ್ಯಯುಗದ ಮಾಲೀಕರಾಗಿದ್ದೆವು ಎಂದು ಹೇಳಬಾರದು. ಸತ್ಯಯುಗದಲ್ಲಿ ವಿಶ್ವದ ಮಾಲೀಕರಾಗಿದ್ದೆವು,
ಮತ್ತೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ಏಣಿಯನ್ನು ಇಳಿಯುತ್ತಾ-ಇಳಿಯುತ್ತಾ ತಮೋಪ್ರಧಾನರಿಂದ
ಸತೋ, ರಜೋ, ತಮೋದಲ್ಲಿ ಬಂದಿದ್ದೀರಿ. ಮೊದಲು ಸತೋಪ್ರಧಾನರಾಗಿದ್ದಾಗ ಪಾರಸ ಬುದ್ಧಿಯವರಾಗಿದ್ದಿರಿ,
ನಂತರ ಆತ್ಮದಲ್ಲಿ ತುಕ್ಕು ಬೀಳುತ್ತದೆ. ಮನುಷ್ಯರು ಇದನ್ನು ತಿಳಿದುಕೊಂಡಿಲ್ಲ. ತಂದೆಯು
ತಿಳಿಸುತ್ತಾರೆ - ನೀವೂ ಸಹ ಏನನ್ನೂ ತಿಳಿದುಕೊಂಡಿರಲಿಲ್ಲ, ಅಂಧಶ್ರದ್ಧೆಯಿತ್ತು, ಅರಿಯದೆ ಯಾರದೇ
ಪೂಜೆ ಮಾಡುವುದು ಅಥವಾ ನೆನಪು ಮಾಡುವುದಕ್ಕೆ ಅಂಧಶ್ರದ್ಧೆಯೆಂದು ಹೇಳಲಾಗುತ್ತದೆ ಮತ್ತು ತಮ್ಮ
ಶ್ರೇಷ್ಠ ಧರ್ಮ ಮತ್ತು ಶ್ರೇಷ್ಠ ಕರ್ಮವನ್ನೂ ಸಹ ಮರೆಯುವುದರಿಂದ ಅವರು ಧರ್ಮ ಭ್ರಷ್ಟರು, ಕರ್ಮ
ಭ್ರಷ್ಟರಾಗಿ ಬಿಡುತ್ತಾರೆ. ಭಾರತವಾಸಿಗಳು ಈ ಸಮಯದಲ್ಲಿ ದೈವೀ ಧರ್ಮಕ್ಕಿಂತಲೂ ಭ್ರಷ್ಟರಾಗಿದ್ದಾರೆ.
ತಂದೆಯು ತಿಳಿಸುತ್ತಾರೆ - ವಾಸ್ತವದಲ್ಲಿ ನೀವು ಪ್ರವೃತ್ತಿ ಮಾರ್ಗದವರಾಗಿದ್ದೀರಿ. ಅದೇ ದೇವತೆಗಳು
ಯಾವಾಗ ಅಪವಿತ್ರರಾಗುವರೋ ಆಗ ದೇವಿ-ದೇವತೆಗಳೆಂದು ಹೇಳಲು ಸಾಧ್ಯವಿಲ್ಲ ಆದ್ದರಿಂದ ಹೆಸರನ್ನು
ಬದಲಾಯಿಸಿ ಹಿಂದೂ ಎಂದು ಇಟ್ಟು ಬಿಟ್ಟಿದ್ದಾರೆ. ಇದೂ ಸಹ ಡ್ರಾಮಾ ಪ್ಲಾನನುಸಾರ ಆಗುತ್ತದೆ. ಹೇ
ಪತಿತ-ಪಾವನ ಬನ್ನಿ ಎಂದು ಎಲ್ಲರೂ ಒಬ್ಬ ತಂದೆಯನ್ನೇ ಕರೆಯುತ್ತಾರೆ. ಅವರೊಬ್ಬರೇ ಪರಮಪಿತ
ಪರಮಾತ್ಮನಾಗಿದ್ದಾರೆ, ಜನನ-ಮರಣ ರಹಿತನಾಗಿದ್ದಾರೆ. ನಾಮ-ರೂಪದಿಂದ ಭಿನ್ನವಾದ ಯಾವುದೇ
ವಸ್ತುವೆಂದಲ್ಲ. ಆತ್ಮ ಹಾಗೂ ಪರಮಾತ್ಮನ ರೂಪವು ಬಹಳ ಸೂಕ್ಷ್ಮವಾಗಿದೆ, ಅದಕ್ಕೆ ನಕ್ಷತ್ರ ಅಥವಾ
ಬಿಂದುವೆಂದು ಹೇಳುತ್ತಾರೆ. ಶಿವನ ಪೂಜೆಯನ್ನು ಮಾಡುತ್ತಾರೆ, ಶರೀರವಂತೂ ಇಲ್ಲ. ಈಗ ಆತ್ಮ
ಬಿಂದುವಿನ ಪೂಜೆ ಮಾಡುವುದಕ್ಕೆ ಸಾಧ್ಯವಿಲ್ಲ ಆದ್ದರಿಂದ ಪೂಜೆಗಾಗಿ ಅದನ್ನು ದೊಡ್ಡ ಗಾತ್ರದಲ್ಲಿ
ಮಾಡುತ್ತಾರೆ. ನಾವು ಶಿವನ ಪೂಜೆ ಮಾಡುತ್ತೇವೆಂದು ಹೇಳುತ್ತಾರೆ ಆದರೆ ಅವರ ರೂಪವೇನು ಎಂಬುದನ್ನು
ತಿಳಿದುಕೊಂಡಿಲ್ಲ. ಇವೆಲ್ಲಾ ಮಾತುಗಳನ್ನು ತಂದೆಯು ಈ ಸಮಯದಲ್ಲಿಯೇ ಬಂದು ತಿಳಿಸುತ್ತಾರೆ. ತಂದೆಯು
ಹೇಳುತ್ತಾರೆ - ನೀವು ತಮ್ಮ ಜನ್ಮಗಳನ್ನು ಅರಿತಿಲ್ಲ. 84 ಲಕ್ಷ ಯೋನಿಗಳೆಂದು ಸುಳ್ಳು ಹೇಳಿ
ಬಿಟ್ಟಿದ್ದಾರೆ. ಈಗ ತಂದೆಯು ನೀವು ಮಕ್ಕಳಿಗೆ ಯಥಾರ್ಥವಾಗಿ ತಿಳಿಸಿಕೊಡುತ್ತಾರೆ. ನೀವೀಗ
ಬ್ರಾಹ್ಮಣರಾಗಿದ್ದೀರಿ ಮತ್ತು ದೇವತೆಗಳಾಗಬೇಕಾಗಿದೆ. ಕಲಿಯುಗೀ ಮನುಷ್ಯರು ಶೂದ್ರರಾಗಿದ್ದಾರೆ.
ನೀವು ಬ್ರಾಹ್ಮಣರ ಗುರಿ-ಧ್ಯೇಯವು ಮನುಷ್ಯರಿಂದ ದೇವತೆಗಳಾಗುವುದಾಗಿದೆ. ಇದು ಮೃತ್ಯುಲೋಕ, ಪತಿತ
ಪ್ರಪಂಚವಾಗಿದೆ. ಹೊಸ ಪ್ರಪಂಚವಿತ್ತು ಎಲ್ಲಿ ಈ ದೇವಿ-ದೇವತೆಗಳು ರಾಜ್ಯಭಾರ ಮಾಡುತ್ತಿದ್ದರು. ಇವರು
ಇಡೀ ವಿಶ್ವದ ಮಾಲೀಕರಾಗಿದ್ದರು. ಈಗಂತೂ ತಮೋಪ್ರಧಾನ ಪ್ರಪಂಚವಾಗಿದೆ. ಅನೇಕ ಧರ್ಮಗಳೂ ಇವೆ. ಈ
ದೇವಿ-ದೇವತಾ ಧರ್ಮವು ಪ್ರಾಯಲೋಪವಾಗಿ ಬಿಟ್ಟಿದೆ. ದೇವಿ-ದೇವತೆಗಳ ರಾಜ್ಯವು ಯಾವಾಗ ಇತ್ತು, ಎಷ್ಟು
ಸಮಯ ನಡೆಯಿತೆಂದು ಈ ವಿಶ್ವದ ಚರಿತ್ರೆ-ಭೂಗೋಳವನ್ನು ಯಾರೂ ತಿಳಿದುಕೊಂಡಿಲ್ಲ, ತಂದೆಯೇ ಬಂದು
ತಿಳಿಸಿ ಕೊಡುತ್ತಾರೆ. ಇದು ಈಶ್ವರೀಯ ವಿಶ್ವ ವಿದ್ಯಾಲಯವಾಗಿದೆ. ಇದರ ಗುರಿ-ಧ್ಯೇಯವೇ ಅಮರಲೋಕದ
ದೇವತೆಗಳನ್ನಾಗಿ ಮಾಡುವುದು. ಇದಕ್ಕೆ ಅಮರ ಕಥೆಯೆಂದೂ ಹೇಳಲಾಗುತ್ತದೆ. ನೀವು ಈ ಜ್ಞಾನದಿಂದ
ದೇವತೆಗಳಾಗಿ ಕಾಲದ ಮೇಲೆ ಜಯ ಗಳಿಸುತ್ತೀರಿ. ಅಲ್ಲಿ ಕಾಲವೆಂದೂ ಕಬಳಿಸುವುದಿಲ್ಲ. ಸಾಯುವ ಹೆಸರೇ
ಇರುವುದಿಲ್ಲ. ನೀವೀಗ ಡ್ರಾಮಾ ಪ್ಲಾನನುಸಾರ ಕಾಲದ ಮೇಲೆ ಜಯ ಗಳಿಸುತ್ತೀರಿ. ಭಾರತವಾಸಿಗಳೇ 5 ವರ್ಷ
ಅಥವಾ 10 ವರ್ಷದ ಯೋಜನೆ ಮಾಡುತ್ತಾರಲ್ಲವೆ. ನಾವು ರಾಮ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆಂದು
ತಿಳಿದುಕೊಳ್ಳುತ್ತಾರೆ. ಬೇಹದ್ದಿನ ತಂದೆಯದೂ ಸಹ ರಾಮ ರಾಜ್ಯವನ್ನು ಮಾಡುವ ಯೋಜನೆಯಿದೆ, ಅವರೆಲ್ಲರೂ
ಮನುಷ್ಯರಾಗಿದ್ದಾರೆ. ಮನುಷ್ಯರಂತೂ ರಾಮ ರಾಜ್ಯವನ್ನು ಸ್ಥಾಪನೆ ಮಾಡಲು ಸಾಧ್ಯವಿಲ್ಲ. ಸತ್ಯಯುಗಕ್ಕೇ
ರಾಮ ರಾಜ್ಯವೆಂದು ಹೇಳಲಾಗುತ್ತದೆ. ಮನುಷ್ಯರು ಎಷ್ಟೊಂದು ಭಕ್ತಿ ಮಾಡುತ್ತಾರೆ, ತೀರ್ಥ
ಯಾತ್ರೆಗಳನ್ನು ಮಾಡುತ್ತಾರೆ. ದಿನ ಅರ್ಥಾತ್ ಸತ್ಯ-ತ್ರೇತಾಯುಗದಲ್ಲಿ ಈ ದೇವತೆಗಳ ರಾಜ್ಯವಿತ್ತು
ಮತ್ತೆ ರಾತ್ರಿಯಲ್ಲಿ ಅಂದರೆ ದ್ವಾಪರ-ಕಲಿಯುಗದಲ್ಲಿ ಭಕ್ತಿಯು ಪ್ರಾರಂಭವಾಗುತ್ತದೆ. ಸತ್ಯಯುಗದಲ್ಲಿ
ಭಕ್ತಿಯಿರುವುದಿಲ್ಲ. ಜ್ಞಾನ, ಭಕ್ತಿ, ವೈರಾಗ್ಯ ಇದನ್ನು ತಂದೆಯೇ ತಿಳಿಸುತ್ತಾರೆ. ವೈರಾಗ್ಯವು
ಎರಡು ಪ್ರಕಾರದ್ದಾಗಿದೆ. ಒಂದು ಹಠಯೋಗಿ ನಿವೃತ್ತಿ ಮಾರ್ಗದವರ ವೈರಾಗ್ಯವಾಗಿದೆ. ಅವರು
ಮನೆ-ಮಠವನ್ನು ಬಿಟ್ಟು ಕಾಡಿಗೆ ಹೋಗುತ್ತಾರೆ. ನೀವಂತೂ ಈಗ ಇಡೀ ಮೃತ್ಯುಲೋಕದ ಬೇಹದ್ದಿನ ಸನ್ಯಾಸ
ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಈ ಇಡೀ ಪ್ರಪಂಚವೇ ಭಸ್ಮೀ ಭೂತವಾಗುವುದಿದೆ. ನಾಟಕವನ್ನು
ಬಹಳ ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ. ಇದು ಹೇನಿನ ತರಹ ಟಿಕ್ ಟಿಕ್ ಎಂದು ನಡೆಯುತ್ತಿರುತ್ತದೆ.
ಏನೆಲ್ಲವೂ ಆಗುತ್ತದೆಯೋ ಅದು ಮತ್ತೆ 5000 ವರ್ಷಗಳ ನಂತರ ಚಾಚೂ ತಪ್ಪದೆ ಪುನರಾವರ್ತನೆಯಾಗುವುದು.
ಇದನ್ನು ಬಹಳ ಚೆನ್ನಾಗಿ ತಿಳಿದುಕೊಂಡು ಬೇಹದ್ದಿನ ಸನ್ಯಾಸ ಮಾಡಬೇಕಾಗಿದೆ. ಯಾರಾದರೂ ವಿದೇಶಕ್ಕೆ
ಹೋಗುತ್ತಾರೆ, ಅಲ್ಲಿ ನಾವು ಈ ಜ್ಞಾನವನ್ನು ಓದಲು ಸಾಧ್ಯವೇ ಎಂದು ಕೇಳಿದಾಗ ತಂದೆಯು ಹೇಳುತ್ತಾರೆ
- ಹೌದು ನೀವು ಎಲ್ಲಿ ಬೇಕಾದರೂ ಕುಳಿತು ಓದಬಲ್ಲಿರಿ. ಇಲ್ಲಿ ಮೊದಲು 7 ದಿನಗಳ ಕೋರ್ಸನ್ನು
ತೆಗೆದುಕೊಳ್ಳಬೇಕಾಗುತ್ತದೆ. ಬಹಳ ಸಹಜವೂ ಆಗಿದೆ. ಆತ್ಮವು ಕೇವಲ ಇದನ್ನು ತಿಳಿದುಕೊಳ್ಳಬೇಕಾಗಿದೆ.
ನಾವು ಸತೋಪ್ರಧಾನ ವಿಶ್ವದ ಮಾಲೀಕರಾಗಿದ್ದೆವು, ಆಗ ಸತೋಪ್ರಧಾನರಾಗಿದ್ದೆವು. ಈಗ ತಮೋಪ್ರಧಾನರಾಗಿ
ಬಿಟ್ಟಿದ್ದೇವೆ. 84 ಜನ್ಮಗಳಲ್ಲಿ ಇನ್ನೂ ಕನಿಷ್ಟರಾಗಿ ಬಿಟ್ಟಿದ್ದೇವೆ. ಈಗ ನಾವು
ಶ್ರೇಷ್ಠರಾಗುವುದು ಹೇಗೆ? ಈಗ ಕಲಿಯುಗವಾಗಿದೆ ಮತ್ತೆ ಅವಶ್ಯವಾಗಿ ಸತ್ಯಯುಗ ಬರುವುದು. ತಂದೆಯು
ಎಷ್ಟು ಸಹಜವಾಗಿ ತಿಳಿಸಿ ಕೊಡುತ್ತಾರೆ! 7 ದಿನಗಳ ಕೋರ್ಸನ್ನು ತಿಳಿದುಕೊಳ್ಳಬೇಕಾಗಿದೆ. ಹೇಗೆ ನಾವು
ಸತೋಪ್ರಧಾನರಿಂದ ತಮೋಪ್ರಧಾನರಾಗಿದ್ದೇವೆ, ಕಾಮ ಚಿತೆಯನ್ನೇರಿ ತಮೋಪ್ರಧಾನರಾಗಿದ್ದೇವೆ. ಈಗ ಜ್ಞಾನ
ಚಿತೆಯ ಮೇಲೆ ಕುಳಿತು ಸತೋಪ್ರಧಾನರಾಗಬೇಕಾಗಿದೆ. ವಿಶ್ವದ ಚರಿತ್ರೆ-ಭೂಗೋಳವು
ಪುನರಾವರ್ತನೆಯಾಗುತ್ತದೆ. ಚಕ್ರವು ಸುತ್ತುತ್ತದೆಯಲ್ಲವೆ. ಈಗ ಸಂಗಮಯುಗವಾಗಿದೆ. ಇದರ ನಂತರ
ಸತ್ಯಯುಗವಾಗುವುದು. ನಾವೀಗ ಕಲಿಯುಗೀ ವಿಕಾರಿಗಳಾಗಿದ್ದೇವೆ, ಅಂದಮೇಲೆ ನಾವೇ ಮತ್ತೆ ಸತ್ಯಯುಗೀ,
ನಿರ್ವಿಕಾರಿಗಳು ಹೇಗಾಗುವುದು? ಅದಕ್ಕಾಗಿ ತಂದೆಯು ಮಾರ್ಗವನ್ನು ತಿಳಿಸುತ್ತಾರೆ - ನಮ್ಮಲ್ಲಿ
ಯಾವುದೇ ಗುಣವಿಲ್ಲ, ನಮ್ಮನ್ನು ಇಂತಹ ಗುಣವಂತರನ್ನಾಗಿ ಮಾಡಿ ಎಂದು ಕೂಗುತ್ತಾರೆ. ಯಾರು ಕಲ್ಪದ
ಹಿಂದೆ ಆಗಿದ್ದರೋ ಅವರೇ ಪುನಃ ಆಗಬೇಕಾಗಿದೆ. ತಂದೆಯು ತಿಳಿಸುತ್ತಾರೆ – ಮೊಟ್ಟ ಮೊದಲು ತಮ್ಮನ್ನು
ಆತ್ಮನೆಂದು ತಿಳಿಯಿರಿ. ಆತ್ಮವೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ.
ನೀವೀಗ ಆತ್ಮಾಭಿಮಾನಿಯಾಗಬೇಕಾಗಿದೆ. ಈಗಲೇ ನಿಮಗೆ ಆತ್ಮಾಭಿಮಾನಿಗಳಾಗುವ ಶಿಕ್ಷಣ ಸಿಗುತ್ತದೆ. ನೀವು
ಸದಾ ಆತ್ಮಾಭಿಮಾನಿಯಾಗಿರುತ್ತೀರಿ ಎಂದಲ್ಲ. ಸತ್ಯಯುಗದಲ್ಲಂತೂ ಶರೀರದ ಹೆಸರಿರುತ್ತದೆ.
ಲಕ್ಷ್ಮೀ-ನಾರಾಯಣರ ಹೆಸರಿನ ಮೇಲೆ ಎಲ್ಲಾ ಕಾರೋಬಾರು ನಡೆಯುತ್ತದೆ. ಈಗ ಇದು ಸಂಗಮಯುಗವಾಗಿದೆ. ಈಗಲೇ
ತಂದೆಯು ತಿಳಿಸುತ್ತಾರೆ. ನೀವು ಅಶರೀರಿಯಾಗಿ ಬಂದಿದ್ದೀರಿ, ಮತ್ತೆ ಅಶರೀರಿಯಾಗಿ ಹೋಗಬೇಕಾಗಿದೆ.
ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ, ಇದು ಆತ್ಮಿಕ ಯಾತ್ರೆಯಾಗಿದೆ. ಆತ್ಮವು
ತನ್ನ ಆತ್ಮಿಕ ತಂದೆಯನ್ನು ನೆನಪು ಮಾಡುತ್ತದೆ. ತಂದೆಯನ್ನು ನೆನಪು ಮಾಡುವುದರಿಂದಲೇ ಪಾಪಗಳು
ಭಸ್ಮವಾಗುತ್ತವೆ. ಇದಕ್ಕೆ ಯೋಗಾಗ್ನಿಯೆಂದು ಹೇಳಲಾಗುತ್ತದೆ. ನೆನಪಂತೂ ನೀವು ಎಲ್ಲಿ ಬೇಕಾದರೂ
ಇದ್ದು ಮಾಡಬಲ್ಲಿರಿ ಆದರೆ ಮೊದಲು 7 ದಿನಗಳಲ್ಲಿ ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ, ನಾವು
ಹೇಗೆ ಏಣಿಯನ್ನು ಇಳಿಯುತ್ತೇವೆ ಎಂಬುದನ್ನು ತಿಳಿಸಿಕೊಡಲಾಗುತ್ತದೆ. ನಾವೀಗ ಇದೊಂದೇ ಜನ್ಮದಲ್ಲಿ
ಮೇಲೇರುತ್ತೇವೆ. ಮಕ್ಕಳು ವಿದೇಶದಲ್ಲಿದ್ದರೆ ಅಲ್ಲಿಗೂ ಮುರುಳಿ ತಲುಪುತ್ತದೆ. ಇದು ಶಾಲೆಯಲ್ಲವೆ.
ವಾಸ್ತವದಲ್ಲಿ ಇದು ಈಶ್ವರೀಯ ವಿಶ್ವ ವಿದ್ಯಾಲಯವಾಗಿದೆ. ಗೀತೆಯದೇ ರಾಜಯೋಗವಾಗಿದೆ ಆದರೆ
ಶ್ರೀಕೃಷ್ಣನಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ಬ್ರಹ್ಮಾ-ವಿಷ್ಣು-ಶಂಕರನಿಗೂ ದೇವತೆಯೆಂದು
ಹೇಳಲಾಗುತ್ತದೆ. ನೀವೀಗ ಪುರುಷಾರ್ಥ ಮಾಡಿ ಪುನಃ ದೇವತೆಗಳಾಗುತ್ತೀರಿ. ಪ್ರಜಾಪಿತ ಬ್ರಹ್ಮಾನೂ ಸಹ
ಅವಶ್ಯವಾಗಿ ಇಲ್ಲಿಯೇ ಇರಬೇಕಲ್ಲವೆ. ಪ್ರಜಾಪಿತನು ಮನುಷ್ಯನಾಗಿದ್ದಾರೆ ಅಂದಮೇಲೆ ರಚನೆಯನ್ನೂ
ಇಲ್ಲಿಯೇ ರಚಿಸಲಾಗುತ್ತದೆ. ಹಮ್ ಸೋ, ಸೋ ಹಮ್ನ ಅರ್ಥವನ್ನು ತಂದೆಯು ಬಹಳ ಸಹಜವಾಗಿ ತಿಳಿಸಿದ್ದಾರೆ.
ಭಕ್ತಿಮಾರ್ಗದಲ್ಲಂತೂ ಆತ್ಮವೇ ಪರಮಾತ್ಮನೆಂದು ಹೇಳುತ್ತಾರೆ ಆದ್ದರಿಂದ ಪರಮಾತ್ಮನಿಗೆ
ಸರ್ವವ್ಯಾಪಿಯೆಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಎಲ್ಲರಲ್ಲಿ ಆತ್ಮವು ವ್ಯಾಪಕವಾಗಿದೆ,
ನಾನು ಹೇಗೆ ವ್ಯಾಪಕನಾಗಿರಲಿ! ನೀವು ನನ್ನನ್ನು ಹೇ ಪತಿತ-ಪಾವನ ಬನ್ನಿ, ನಮ್ಮನ್ನು ಪಾವನ ಮಾಡಿ
ಎಂದು ಕರೆಯುತ್ತೀರಿ. ನಿರಾಕಾರ ಆತ್ಮರೆಲ್ಲರೂ ಬಂದು ತಮ್ಮ-ತಮ್ಮ ರಥವನ್ನು ತೆಗೆದುಕೊಳ್ಳುತ್ತೀರಿ.
ಪ್ರತಿಯೊಬ್ಬ ಅಕಾಲಮೂರ್ತಿ ಆತ್ಮನ ಸಿಂಹಾಸನವು ಇದಾಗಿದೆ. ಇದಕ್ಕೆ ಸಿಂಹಾಸನವೆಂದಾದರೂ ಹೇಳಿ ಅಥವಾ
ರಥವೆಂದಾದರೂ ಹೇಳಿ. ತಂದೆಗಂತೂ ತನ್ನದೇ ಆದ ರಥವಿಲ್ಲ, ಅವರು ನಿರಾಕಾರನೆಂದೇ ಗಾಯನವಿದೆ.
ಸೂಕ್ಷ್ಮಶರೀರವಾಗಲಿ, ಸ್ಥೂಲ ಶರೀರವಾಗಲಿ ಇಲ್ಲ. ನಿರಾಕಾರನು ಸ್ವಯಂ ರಥದಲ್ಲಿ ಯಾವಾಗ
ಕುಳಿತುಕೊಳ್ಳುವರೋ ಆಗ ಮಾತನಾಡುವರು. ರಥವಿಲ್ಲದೆ ಪತಿತರನ್ನು ಪಾವನ ಮಾಡುವುದು - ಹೇಗೆ? ನಾನು
ನಿರಾಕಾರನು ಬಂದು ಇವರ ಶರೀರವನ್ನು ಲೋನ್ ಆಗಿ ಪಡೆಯುತ್ತೇನೆ. ಸ್ವಲ್ಪ ಸಮಯಕ್ಕಾಗಿ
ತೆಗೆದುಕೊಂಡಿದ್ದೇನೆ. ಇವರಿಗೆ ಭಾಗ್ಯಶಾಲಿ ರಥವೆಂದು ಹೇಳಲಾಗುತ್ತದೆ. ತಂದೆಯೇ ಸೃಷ್ಟಿಯ
ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಿ ನೀವು ಮಕ್ಕಳನ್ನು ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತಾರೆ.
ಮತ್ತ್ಯಾವ ಮನುಷ್ಯರೂ ಈ ಜ್ಞಾನವನ್ನು ಅರಿತುಕೊಳ್ಳಲು ಸಾಧ್ಯವಿಲ್ಲ. ಈ ಸಮಯದಲ್ಲಿ ಎಲ್ಲರೂ
ನಾಸ್ತಿಕರಾಗಿದ್ದಾರೆ. ತಂದೆಯು ಬಂದು ಆಸ್ತಿಕರನ್ನಾಗಿ ಮಾಡುತ್ತಾರೆ. ರಚಯಿತ-ರಚನೆಯ ರಹಸ್ಯವನ್ನು
ತಂದೆಯು ನಿಮಗೆ ತಿಳಿಸುತ್ತಾರೆ. ಈಗ ನಿಮ್ಮ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ನೀವೇ ಈ
ಜ್ಞಾನದಿಂದ ಇಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಈ ಜ್ಞಾನವು ಕೇವಲ ಈಗಷ್ಟೇ ನೀವು
ಬ್ರಾಹ್ಮಣರಿಗೆ ಸಿಗುತ್ತದೆ. ತಂದೆಯು ಸಂಗಮದಲ್ಲಿಯೇ ಬಂದು ಈ ಜ್ಞಾನವನ್ನು ಕೊಡುತ್ತಾರೆ. ಸದ್ಗತಿ
ನೀಡುವವರು ಒಬ್ಬ ತಂದೆಯೇ ಆಗಿದ್ದಾರೆ. ಮನುಷ್ಯರು ಮನುಷ್ಯರಿಗೆ ಸದ್ಗತಿ ನೀಡಲು ಸಾಧ್ಯವಿಲ್ಲ.
ಅವರೆಲ್ಲರೂ ಭಕ್ತಿಮಾರ್ಗದ ಗುರುಗಳಾಗಿದ್ದಾರೆ. ಸದ್ಗುರು ಒಬ್ಬರೇ ಆಗಿದ್ದಾರೆ ಅವರಿಗೆ ವಾಹ್!
ಸದ್ಗುರು ವಾಹ್! ಎಂದು ಹೇಳಲಾಗುತ್ತದೆ. ಇದಕ್ಕೆ ಪಾಠಶಾಲೆಯೆಂದೂ ಹೇಳಲಾಗುವುದು. ನರನಿಂದ
ನಾರಾಯಣನಾಗುವುದು - ಇಲ್ಲಿನ ಗುರಿಧ್ಯೇಯವಾಗಿದೆ. ಅವೆಲ್ಲವೂ ಭಕ್ತಿಮಾರ್ಗದ ಕಥೆಗಳಾಗಿವೆ.
ಗೀತೆಯಿಂದಲೂ ಸಹ ಯಾವುದೇ ಪ್ರಾಪ್ತಿಯಾಗುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನೀವು
ಮಕ್ಕಳಿಗೆ ಸನ್ಮುಖದಲ್ಲಿ ಬಂದು ಓದಿಸುತ್ತೇನೆ. ಇದರಿಂದ ನೀವು ಈ ಪದವಿಯನ್ನು ಪಡೆಯುತ್ತೀರಿ.
ಇದರಲ್ಲಿ ಮುಖ್ಯವಾದುದು ಪವಿತ್ರರಾಗುವ ಮಾತಾಗಿದೆ. ತಂದೆಯ ನೆನಪಿನಲ್ಲಿರಬೇಕಾಗಿದೆ. ಇದರಲ್ಲಿಯೇ
ಮಾಯೆಯು ವಿಘ್ನಗಳನ್ನು ಹಾಕುತ್ತದೆ. ತಮ್ಮ ಆಸ್ತಿಯನ್ನು ಪಡೆದುಕೊಳ್ಳುವುದಕ್ಕಾಗಿ ನೀವು ತಂದೆಯನ್ನು
ನೆನಪು ಮಾಡುತ್ತೀರಿ. ಈ ಜ್ಞಾನವು ಎಲ್ಲಾ ಮಕ್ಕಳ ಬಳಿ ಮುರುಳಿ ಹೋಗುತ್ತದೆ. ಎಂದೂ ಮುರುಳಿಯನ್ನು
ತಪ್ಪಿಸಬಾರದು. ಮುರುಳಿಯನ್ನು ತಪ್ಪಿಸಿದಿರೆಂದರೆ ಗೈರು ಹಾಜರಿಯಾಗುತ್ತದೆ. ಮುರುಳಿಯಿಂದ ನೀವು
ಎಲ್ಲಿಯೇ ಇದ್ದರೂ ಸಹ ರಿಫ್ರೆಷ್ ಆಗುತ್ತಿರುತ್ತೀರಿ. ಶ್ರೀಮತದಂತೆ ನಡೆಯಬೇಕಾಗುತ್ತದೆ. ಹೊರಗಡೆ
ಹೋಗುತ್ತೀರೆಂದರೆ ಖಂಡಿತ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ, ವೈಷ್ಣವರಾಗಿರಬೇಕಾಗಿದೆ. ವೈಷ್ಣವರು
ಎರಡು ಪ್ರಕಾರದವರಿರುತ್ತಾರೆ. ವೈಷ್ಣವ, ವಲ್ಲಭಾಚಾರಿಗಳೂ ಇರುತ್ತಾರೆ ಆದರೆ ವಿಕಾರದಲ್ಲಿ
ಹೋಗುತ್ತಾರೆ. ಪವಿತ್ರರಾಗಿರುವುದಿಲ್ಲ, ನೀವು ಪವಿತ್ರರಾಗಿ ವಿಷ್ಣು ವಂಶಿಯರಾಗುತ್ತೀರಿ.
ಸತ್ಯಯುಗದಲ್ಲಿ ನೀವು ವೈಷ್ಣವರಾಗಿರುತ್ತೀರಿ, ವಿಕಾರದಲ್ಲಿ ಹೋಗುವುದಿಲ್ಲ. ಅದು ಅಮರಲೋಕ, ಇದು
ಮೃತ್ಯುಲೋಕವಾಗಿದೆ, ಇಲ್ಲಿ ವಿಕಾರದಲ್ಲಿ ಹೋಗುತ್ತಾರೆ. ನೀವೀಗ ವಿಷ್ಣು ಪುರಿಯಲ್ಲಿ ಹೋಗುತ್ತೀರಿ,
ಅಲ್ಲಿ ವಿಕಾರವಿರುವುದಿಲ್ಲ. ಅದು ನಿರ್ವಿಕಾರಿ ಪ್ರಪಂಚವಾಗಿದೆ. ಯೋಗಬಲದಿಂದ ನೀವು ವಿಶ್ವದ
ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ಹೇಗೆ ಅವರಿಬ್ಬರೂ (ಇರಾಕ್-ಇರಾನ್) ಪರಸ್ಪರ ಹೊಡೆದಾಡುತ್ತಾರೆ
ಮಧ್ಯದಲ್ಲಿ ಬೆಣ್ಣೆಯು ನಿಮಗೆ ಸಿಗುತ್ತದೆ. ನೀವು ತಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ.
ಎಲ್ಲರಿಗೆ ಇದೇ ಸಂದೇಶವನ್ನು ಕೊಡಬೇಕಾಗಿದೆ. ಚಿಕ್ಕ ಮಕ್ಕಳಿಗೂ ಹಕ್ಕಿದೆ. ಶಿವ ತಂದೆಯ ಮಕ್ಕಳಲ್ಲವೆ
ಆದ್ದರಿಂದ ಎಲ್ಲರಿಗೆ ಹಕ್ಕಿದೆ. ಎಲ್ಲರಿಗೆ ಇದನ್ನು ತಿಳಿಸಿ - ತಮ್ಮನ್ನು ಆತ್ಮನೆಂದು ತಿಳಿಯಿರಿ.
ಮಾತಾಪಿತರಲ್ಲಿ ಜ್ಞಾನವಿದ್ದರೆ ಮಕ್ಕಳಿಗೂ ಸಹ ಶಿವ ತಂದೆಯನ್ನು ನೆನಪು ಮಾಡಿ ಎಂದು ಕಲಿಸುತ್ತಾರೆ.
ಶಿವ ತಂದೆಯ ವಿನಃ ಬೇರೆ ಯಾರೂ ಇಲ್ಲ. ಒಬ್ಬರ ನೆನಪಿನಿಂದಲೇ ತಮೋಪ್ರಧಾನರಿಂದ ಸತೋಪ್ರಧಾನರಾಗಿ
ಬಿಡುತ್ತೀರಿ. ಇದರಲ್ಲಿ ವಿದ್ಯಾಭ್ಯಾಸವು ಬಹಳ ಚೆನ್ನಾಗಿರಬೇಕು, ವಿದೇಶದಲ್ಲಿದ್ದರೂ ಸಹ ನೀವು
ಓದಬಲ್ಲಿರಿ. ಇದರಲ್ಲಿ ಪುಸ್ತಕ ಇತ್ಯಾದಿಗಳೇನೂ ಬೇಕಾಗಿಲ್ಲ. ಎಲ್ಲಿಯಾದರೂ ನೀವು ಕುಳಿತು
ಓದಬಲ್ಲಿರಿ. ಬುದ್ಧಿಯಿಂದ ನೆನಪು ಮಾಡಬಲ್ಲಿರಿ. ಈ ವಿದ್ಯೆಯು ಇಷ್ಟು ಸಹಜವಾಗಿದೆ. ಯೋಗ ಅಥವಾ
ನೆನಪಿನಿಂದ ಬಲ ಸಿಗುತ್ತದೆ. ನೀವೀಗ ವಿಶ್ವದ ಮಾಲೀಕರಾಗುತ್ತಿದ್ದೀರಿ. ತಂದೆಯು ರಾಜಯೋಗವನ್ನು
ಕಲಿಸಿ ಪಾವನರನ್ನಾಗಿ ಮಾಡುತ್ತಾರೆ. ಅದು ಹಠಯೋಗ ಇದು ರಾಜಯೋಗವಾಗಿದೆ. ಇದರಲ್ಲಿ ಪತ್ಯವು ಬಹಳ
ಚೆನ್ನಾಗಿ ಇರಬೇಕು. ಈ ಲಕ್ಷ್ಮೀ-ನಾರಾಯಣರಂತೂ ಸರ್ವಗುಣ ಸಂಪನ್ನರಾಗಬೇಕಲ್ಲವೆ. ಆಹಾರ-ಪಾನೀಯಗಳು
ಪತ್ಯವೂ ಬೇಕು. ಎರಡನೆಯದಾಗಿ ತಂದೆಯನ್ನು ನೆನಪು ಮಾಡಬೇಕು ಆಗ ಜನ್ಮ-ಜನ್ಮಾಂತರದ ಪಾಪಗಳು
ಕಳೆಯುತ್ತವೆ. ಇದಕ್ಕೆ ರಾಜ್ಯ ಪ್ರಾಪ್ತಿಗಾಗಿ ಸಹಜ ರಾಜಯೋಗವೆಂದೇ ಹೇಳಲಾಗುತ್ತದೆ. ಒಂದುವೇಳೆ
ರಾಜ್ಯಭಾಗ್ಯವನ್ನು ಪಡೆಯಲಿಲ್ಲವೆಂದರೆ ಬಡವರಾಗಿ ಬಿಡುತ್ತೀರಿ. ಶ್ರೀಮತದಂತೆ ಪೂರ್ಣರೀತಿಯಲ್ಲಿ
ನಡೆಯುವುದರಿಂದಲೇ ಶ್ರೇಷ್ಠರಾಗುತ್ತೀರಿ. ಈಗ ಭ್ರಷ್ಟರಿಂದ ಶ್ರೇಷ್ಠರಾಗಬೇಕಾಗಿದೆ. ಅದಕ್ಕಾಗಿ
ತಂದೆಯನ್ನು ನೆನಪು ಮಾಡಿ. ಕಲ್ಪದ ಮೊದಲೂ ಸಹ ನೀವೇ ಈ ಜ್ಞಾನವನ್ನು ಪಡೆದುಕೊಂಡಿದ್ದಿರಿ, ಅದನ್ನು
ಪುನಃ ನೀವು ಈಗ ಪಡೆಯುತ್ತೀರಿ. ಸತ್ಯಯುಗದಲ್ಲಿ ಮತ್ತ್ಯಾವುದೇ ರಾಜ್ಯವಿರಲಿಲ್ಲ. ಅದಕ್ಕೆ
ಸುಖಧಾಮವೆಂದು ಹೇಳಲಾಗುತ್ತದೆ. ಈಗ ಇದು ದುಃಖಧಾಮವಾಗಿದೆ ಮತ್ತು ಎಲ್ಲಿಂದ ನಾವಾತ್ಮರು
ಬಂದಿದ್ದೇವೆಯೋ ಅದು ಶಾಂತಿಧಾಮವಾಗಿದೆ. ಪ್ರಪಂಚದಲ್ಲಿ ಮನುಷ್ಯರು ಏನೇನು ಮಾಡುತ್ತಾರೆಂದು ಶಿವ
ತಂದೆಗೆ ಆಶ್ಚರ್ಯವೆನಿಸುತ್ತದೆ. ಮಕ್ಕಳು ಕಡಿಮೆಯಾಗಲೆಂದು ಅದಕ್ಕಾಗಿಯೂ ಎಷ್ಟೊಂದು ತಲೆ
ಕೆಡಿಸಿಕೊಳ್ಳುತ್ತಿರುತ್ತಾರೆ ಆದರೆ ಇದಂತೂ ತಂದೆಯ ಕೆಲಸವಾಗಿದೆ ಎಂಬುದನ್ನು ತಿಳಿದುಕೊಳ್ಳುವುದೇ
ಇಲ್ಲ. ತಂದೆಯು ಬಹು ಬೇಗನೆ ಒಂದು ಧರ್ಮದ ಸ್ಥಾಪನೆ ಮಾಡಿ ಉಳಿದೆಲ್ಲಾ ಅನೇಕ ಧರ್ಮಗಳ ವಿನಾಶ
ಮಾಡಿಸುತ್ತಾರೆ - ಒಂದೇ ಏಟಿಗೆ. ಅವರಂತೂ ಜನಸಂಖ್ಯೆಯನ್ನು ಕಡಿಮೆ ಮಾಡಲು ಎಷ್ಟೊಂದು ಔಷಧಿಗಳನ್ನು
ಕಂಡು ಹಿಡಿಯುತ್ತಾರೆ ಆದರೆ ತಂದೆಯ ಬಳಿಯಂತೂ ಒಂದೇ ಔಷಧಿಯಿದೆ. ಒಂದು ಧರ್ಮದ ಸ್ಥಾಪನೆಯಾಗಬೇಕಾಗಿದೆ.
ಆ ಸಮಯವೂ ಬರುವುದು ಯಾವಾಗ ಎಲ್ಲರೂ ಸಹ ಇವರಂತೂ ಪವಿತ್ರರಾಗುತ್ತಿದ್ದಾರೆ ಎಂದು ಹೇಳುತ್ತಾರೆ.
ಮತ್ತೆ ಔಷಧಿ ಮೊದಲಾದುವುಗಳ ಅವಶ್ಯಕತೆಯಾದರೂ ಏನಿದೆ? ತಂದೆಯು ನಿಮಗೆ ಮನ್ಮನಾಭವದ ಇಂತಹ ಔಷಧಿಯನ್ನು
ಕೊಟ್ಟಿದ್ದಾರೆ ಅದರಿಂದ ನೀವು 21 ಜನ್ಮಗಳಿಗಾಗಿ ಪವಿತ್ರರಾಗಿ ಬಿಡುತ್ತೀರಿ. ಒಳ್ಳೆಯದು.
ಧಾರಣೆಗಾಗಿ ಮುಖ್ಯಸಾರ-
1. ಪವಿತ್ರರಾಗಿ
ಪಕ್ಕಾ ವೈಷ್ಣವರಾಗಬೇಕಾಗಿದೆ, ಆಹಾರ-ಪಾನೀಯಗಳ ಪೂರ್ಣ ಪತ್ಯವನ್ನಿಟ್ಟುಕೊಳ್ಳಬೇಕಾಗಿದೆ.
ಶ್ರೇಷ್ಠರಾಗಲು ಶ್ರೀಮತದಂತೆ ಅವಶ್ಯವಾಗಿ ನಡೆಯಬೇಕಾಗಿದೆ.
2. ಮುರುಳಿಯಿಂದ
ಸ್ವಯಂನ್ನು ರಿಫ್ರೆಷ್ ಮಾಡಿಕೊಳ್ಳಬೇಕು. ಎಲ್ಲಿಯೇ ಇದ್ದರೂ ಸತೋಪ್ರಧಾನರಾಗುವ ಪುರುಷಾರ್ಥ
ಮಾಡಬೇಕಾಗಿದೆ. ಮುರುಳಿಯನ್ನು ಒಂದು ದಿನವೂ ತಪ್ಪಿಸಬಾರದು.
ವರದಾನ:
ಸ್ವ-ಕಲ್ಯಾಣದ
ಪ್ರತ್ಯಕ್ಷ ಪ್ರಮಾಣದ ಮುಖಾಂತರ ವಿಶ್ವ ಕಲ್ಯಾಣದ ಸೇವೆಯಲ್ಲಿ ಸದಾ ಸಫಲತಾ ಮೂರ್ತಿ ಭವ.
ಹೇಗೆ ಇತ್ತೀಚಿನ
ದಿನಗಳಲ್ಲಿ ಶಾರೀರಿಕ ರೋಗ ಹೃದಯಾಘಾತ ಹೆಚ್ಚಾಗಿ ಆಗುತ್ತಿದೆ ಹಾಗೆಯೆ ಆಧ್ಯಾತ್ಮಿಕ ಉನ್ನತಿಯಲ್ಲಿ
ಮಾನಸಿಕ ಖಿನ್ನತೆಯ ರೋಗ ಹೆಚ್ಚಾಗಿದೆ. ಈ ರೀತಿ ಮಾನಸಿಕ ಖಿನ್ನತೆಗೊಳಗಾದ ಆತ್ಮಗಳಲ್ಲಿ
ಪ್ರಾಕ್ಟಿಕಲ್ ಪರಿವರ್ತನೆಯನ್ನು ನೋಡಿದಾಗ ಮಾತ್ರ ಸಾಹಸ ಅಥವಾ ಶಕ್ತಿ ಬರಲು ಸಾಧ್ಯ. ಬಹಳಷ್ಟು
ಕೇಳಿದ್ದಾರೆ ಆದರೆ ಈಗ ನೋಡಲು ಇಚ್ಛೆ ಪಡುತ್ತಾರೆ. ಪ್ರಮಾಣದ ಮುಖಾಂತರ ಪರಿವರ್ತನೆ ಇಷ್ಟ
ಪಡುತ್ತಾರೆ. ಆದ್ದರಿಂದ ವಿಶ್ವ ಕಲ್ಯಾಣಕ್ಕಾಗಿ ಸ್ವ-ಕಲ್ಯಾಣವನ್ನು ಮೊದಲು ಸ್ಯಾಂಪಲ್ ರೂಪದಲ್ಲಿ
ತೋರಿಸಿ. ವಿಶ್ವ ಕಲ್ಯಾಣದ ಸೇವೆಯಲ್ಲಿ ಸಫಲತಾ ಮೂರ್ತಿಗಳಾಗಲು ಪ್ರತ್ಯಕ್ಷ ಪ್ರಮಾಣವೇ ಸಾಧನವಾಗಿದೆ,
ಇದರಿಂದಲೇ ತಂದೆಯ ಪ್ರತ್ಯಕ್ಷತೆಯಾಗುವುದು. ಏನು ಹೇಳುವಿರಿ ಅದನ್ನು ನಿಮ್ಮ ಸ್ವರೂಪದಿಂದ
ಕಾರ್ಯರೂಪದಲ್ಲಿ ಕಂಡು ಬಂದಾಗ ಒಪ್ಪುತ್ತಾರೆ.
ಸ್ಲೋಗನ್:
ಬೇರೆಯವರ
ವಿಚಾರವನ್ನು ತಮ್ಮ ವಿಚಾರದೊಂದಿಗೆ ಸೇರಿಸುವುದು-ಇದೇ ಅವರಿಗೆ ಗೌರವ ಕೊಡುವುದಾಗಿದೆ.
ಅವ್ಯಕ್ತ ಸೂಚನೆ:- ಈಗ
ಸಂಪನ್ನ ಅಥವಾ ಕರ್ಮಾತೀತರಾಗುವುದರಲ್ಲಿ ತತ್ಪರರಾಗಿರಿ.
ಕರ್ಮಾತೀತರಾಗಲು ಚೆಕ್
ಮಾಡಿ ಎಲ್ಲಿಯವರೆಗೆ ಕರ್ಮ ಬಂಧನದಿಂದ ಭಿನ್ನರಾಗಿದ್ದೇವೆ? ಲೌಕಿಕ ಮತ್ತು ಪಾರಲೌಕಿಕ, ಕರ್ಮ ಮತ್ತು
ಸಂಬಂಧ ಎರಡರಲ್ಲಿ ಸ್ವಾರ್ಥ ಭಾವದಿಂದ ಮುಕ್ತ ಎಲ್ಲಿಯವರೆಗೂ ಆಗಿದ್ದೇನೆ? ಯಾವಾಗ ಕರ್ಮಗಳ
ಲೆಕ್ಕಾಚಾರ ಅಥವಾ ಯಾವುದೇ ವ್ಯರ್ಥ ಸ್ವಭಾವ-ಸಂಸ್ಕಾರಕ್ಕೆ ವಶರಾಗುವುದರಿಂದ ಮುಕ್ತರಾಗುತ್ತೀರಿ ಆಗ
ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳಬಹುದು. ಯಾವುದೇ ಸೇವೆ, ಸಂಘಟನೆ, ಪ್ರಕೃತಿಯ
ಪರಿಸ್ಥಿತಿ ಸ್ವಸ್ಥಿತಿ ಅಥವಾ ಶ್ರೇಷ್ಠ ಸ್ಥಿತಿಯನ್ನು ಅಲುಗಾಡಿಸಬಾರದು. ಈ ಬಂಧನದಿಂದಲೂ
ಮುಕ್ತರಾಗಿರುವುದೇ ಕರ್ಮಾತೀತ ಸ್ಥಿತಿಯ ಸಮೀಪತೆಯಾಗಿದೆ.