12.01.25    Avyakt Bapdada     Kannada Murli    15.11.2003     Om Shanti     Madhuban


ಮನಸ್ಸನ್ನು ಏಕಾಗ್ರ ಮಾಡಿ, ಏಕಾಗ್ರತೆಯ ಶಕ್ತಿಯ ಮೂಲಕ ಫರಿಶ್ತಾ ಸ್ಥಿತಿಯ ಅನುಭವ ಮಾಡಿ


ಇಂದು ಸರ್ವ ಖಜಾನೆಗಳ ಮಾಲೀಕ ತನ್ನ ನಾಲ್ಕೂ ಕಡೆಯ ಸಂಪನ್ನ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಂದು ಮಗುವನ್ನು ಸರ್ವಖಜಾನೆಗಳ ಮಾಲೀಕನನ್ನಾಗಿ ಮಾಡಿದ್ದಾರೆ. ಎಲ್ಲರಿಗೂ ಇಂತಹ ಖಜಾನೆಯು ಸಿಕ್ಕಿದೆ ಅಂದಾಗ ಇದನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸ್ವಯಂನ್ನು ಖಜಾನೆಗಳಿಂದ ಸಂಪನ್ನತೆಯ ಅನುಭವವನ್ನು ಮಾಡುತ್ತೀರಾ? ಎಲ್ಲದಕ್ಕಿಂತಲೂ ಶ್ರೇಷ್ಠ ಖಜಾನೆಯಾಗಿದೆ - ಜ್ಞಾನದ ಖಜಾನೆ, ಶಕ್ತಿಗಳ ಖಜಾನೆ, ಗುಣಗಳ ಖಜಾನೆ, ಜೊತೆಜೊತೆಯಲ್ಲಿ ತಂದೆ ಹಾಗೂ ಸರ್ವ ಬ್ರಾಹ್ಮಣ ಪರಿವಾರದಿಂದ ಆಶೀರ್ವಾದಗಳ ಖಜಾನೆ. ಆದ್ದರಿಂದ ಈ ಸರ್ವಖಜಾನೆಗಳೂ ಪ್ರಾಪ್ತಿಯಾಗಿವೆಯೇ ಎಂದು ಪರಿಶೀಲನೆ ಮಾಡಿಕೊಳ್ಳಿ? ಯಾವ ಆತ್ಮ ಸರ್ವಖಜಾನೆಗಳಿಂದ ಸಂಪನ್ನರಾಗಿದ್ದಾರೆ - ಅವರ ಚಿಹ್ನೆಯು ಸದಾ ಕಣ್ಣುಗಳಿಂದ, ಚಹರೆಯಿಂದ, ಚಲನೆಯಿಂದ ಖುಷಿಯು ಅನ್ಯರಿಗೂ ಸಹ ಅನುಭವವಾಗುತ್ತದೆ. ಅವರ ಸಂಪರ್ಕದಲ್ಲಿ ಯಾವುದೇ ಆತ್ಮ ಬಂದರೂ ಈ ಅನುಭವವನ್ನು ಮಾಡುತ್ತಾರೆ - ಈ ಆತ್ಮವು ಅಲೌಕಿಕ ಖುಷಿಯಿಂದ, ಅಲೌಕಿಕ ಭಿನ್ನತೆಯಿಂದ ಕಾಣುತ್ತದೆ. ತಮ್ಮ ಖುಷಿಯನ್ನು ನೋಡಿ ಅನ್ಯ ಆತ್ಮಗಳೂ ಸಹ ಸ್ವಲ್ಪ ಸಮಯಕ್ಕಾಗಿ ಖುಷಿಯ ಅನುಭವವನ್ನು ಮಾಡುತ್ತಾರೆ. ಹೇಗೆ ನೀವು ಬ್ರಾಹ್ಮಣ ಆತ್ಮಗಳ ಶ್ವೇತವಸ್ತ್ರ ಎಲ್ಲರಿಗೂ ಎಷ್ಟೊಂದು ಭಿನ್ನ ಮತ್ತು ಪ್ರಿಯವೆನಿಸುತ್ತದೆ. ಸ್ವಚ್ಛತೆ, ಸರಳತೆ ಮತ್ತು ಪವಿತ್ರತೆಯ ಅನುಭವ ಮಾಡಿಸುತ್ತದೆ. ದೂರದಿಂದಲೇ ಇವರು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದಾರೆ ಎಂದು ತಿಳಿಯುತ್ತಾರೆ. ಅದೇ ರೀತಿ ತಾವು ಬ್ರಾಹ್ಮಣ ಆತ್ಮಗಳ ಚಲನೆ ಮತ್ತು ಚಹರೆಯಿಂದ ಸದಾ ಖುಷಿಯ ಹೊಳಪು ಹಾಗೂ ಖುಷಿಯ ಅದೃಷ್ಟದ ನಶೆಯು ಕಾಣುತ್ತಿರುತ್ತದೆ ಏಕೆಂದರೆ ಇಂದಿನ ಎಲ್ಲಾ ಆತ್ಮಗಳು ಮಹಾನ್ ದುಃಖಿಯಾಗಿದ್ದಾರೆ. ಇಂತಹ ಆತ್ಮಗಳು ತಮ್ಮ ಖುಷಿಯಿಂದ ಕೂಡಿರುವ ಚಹರೆಯನ್ನು ನೋಡಿ, ಚಲನೆಯನ್ನು ನೋಡಿ ಒಂದು ಕ್ಷಣವಾದರೂ ಖುಷಿಯ ಅನುಭೂತಿಯನ್ನು ಮಾಡಲಿ. ಹೇಗೆ ಬಾಯಾರಿರುವ ಆತ್ಮನಿಗೆ ಒಂದುವೇಳೆ ಒಂದು ಹನಿಯಷ್ಟಾದರೂ ನೀರು ಸಿಕ್ಕಿದರೆ ಎಷ್ಟೊಂದು ಖುಷಿಯಾಗುತ್ತದೆ. ಹಾಗೆಯೇ ನಿಮ್ಮ ಖುಷಿಯ ಆಶ್ರಯ ಬಾಯಾರಿರುವ ಆತ್ಮಗಳಿಗೆ ಬಹಳ ಅತ್ಯವಶ್ಯಕತೆಯಿದೆ. ಈ ರೀತಿ ಸರ್ವಖಜಾನೆಗಳಿಂದ ಸದಾ ಸಂಪನ್ನರಾಗಿದ್ದೀರಾ, ಪ್ರತಿಯೊಬ್ಬ ಬ್ರಾಹ್ಮಣ ಆತ್ಮನೂ ಸ್ವಯಂನ್ನು ಸರ್ವಖಜಾನೆಯಿಂದ ಸಂಪನ್ನತೆಯ ಅನುಭವವನ್ನು ಸದಾ ಮಾಡುತ್ತೀರಾ ಅಥವಾ ಒಮ್ಮೊಮ್ಮೆ ಮಾಡುತ್ತೀರಾ? ಖಜಾನೆಯಂತೂ ಅವಿನಾಶಿಯಾಗಿದೆ. ನೀಡುವಂತಹ ದಾತನೂ ಸಹ ಅವಿನಾಶಿಯಾಗಿದ್ದಾರೆ ಅಂದಾಗ ತಮ್ಮ ಸಂಪನ್ನತೆಯು ಸದಾ ಅವಿನಾಶಿಯಾಗಿರಬೇಕಾಗಿದೆ ಏಕೆಂದರೆ ತಮ್ಮಲ್ಲಿರುವ ಅಲೌಕಿಕ ಖುಷಿಯು ಇಡೀ ಕಲ್ಪದಲ್ಲಿ ತಾವು ಬ್ರಾಹ್ಮಣರ ವಿನಃ ಮತ್ಯಾರಿಗೂ ಪ್ರಾಪ್ತಿಯಾಗುವುದಿಲ್ಲ. ಇಂದಿನ ಈ ಅಲೌಕಿಕ ಖುಷಿಯು ಅರ್ಧಕಲ್ಪದ ಪ್ರಾಲಬ್ಧದ ರೂಪದಲ್ಲಿ ನಡೆಯುತ್ತದೆ, ಅಂದಾಗ ಎಲ್ಲರಿಗೂ ಇಷ್ಟೊಂದು ಖುಷಿಯಿದೆಯೇ? ಸದಾ ಖುಷಿಯಿದೆಯೇ? ಎಲ್ಲರೂ ಖುಷಿಯಾಗಿದ್ದೀರಾ! ಈ ಮಾತಿನಲ್ಲಂತೂ ಎಲ್ಲರೂ ಕೈಯೆತ್ತಿದ್ದಾರೆ, ಒಳ್ಳೆಯದು ಸದಾ ಖುಷಿಯಾಗಿದ್ದೀರಾ? ಕೆಲಕೆಲವೊಮ್ಮೆ ಖುಷಿ ಹೋಗುವುದಿಲ್ಲವೆ? ಕೆಲವೊಮ್ಮೆ ಹೋಗಿಬಿಡುತ್ತದೆಯೇ! ಖುಷಿಯಾಗಿರುತ್ತೀರಿ ಆದರೆ ಸದಾ ಏಕರಸ ಖುಷಿಯಿರುವುದರಲ್ಲಿ ಅಂತರವಾಗಿಡುತ್ತದೆ. ಖುಷಿಯಾಗಿರುತ್ತೀರಿ ಆದರೆ ಪಸೆರ್ಂಟೇಜ್ನಲ್ಲಿ ವ್ಯತ್ಯಾಸ ಬಂದುಬಿಡುತ್ತದೆ.

ಬಾಪ್ದಾದಾ ಆಟೋಮೆಟಿಕ್ ಟಿ.ವಿಯಿಂದ ಎಲ್ಲಾ ಮಕ್ಕಳ ಚಹರೆಯನ್ನು ನೋಡುತ್ತಿರುತ್ತಾರೆ ಆಗ ಏನು ಕಾಣಬಹುದು? ಆದ್ದರಿಂದ ಒಂದು ದಿನದ ತಮ್ಮ ಖುಷಿಯ ಚಾರ್ಟನ್ನು ಚೆಕ್ ಮಾಡಿಕೊಳ್ಳಿ ಅಮೃತವೇಳೆಯಿಂದ ಹಿಡಿದು ರಾತ್ರಿಯ ತನಕ ಒಂದೇ ರೀತಿ ಪಸೆರ್ಂಟೇಜಿನ ಖುಷಿಯು ಇರುತ್ತದೆಯೋ ಅಥವಾ ಬದಲಾಗುತ್ತಿರುತ್ತದೆಯೇ? ಪರಿಶೀಲನೆ ಮಾಡಿಕೊಳ್ಳುವುದಂತೂ ಬರುತ್ತದೆಯಲ್ಲವೆ. ಈಗಂತೂ ವಿಜ್ಞಾನದವರೂ ಸಹ ಪರಿಶೀಲನೆ ಮಾಡುವ ತುಂಬಾ ಸೂಕ್ಷ್ಮವಾದ ಸಾಧನಗಳನ್ನು ಕಂಡು ಹಿಡಿದಿದ್ದಾರೆ. ಅಂದಾಗ ತಾವೂ ಸಹ ಪರಿಶೀಲನೆ ಮಾಡಿಕೊಳ್ಳಿ ಮತ್ತು ಅದನ್ನು ಅವಿನಾಶಿಯನ್ನಾಗಿ ಮಾಡಿಕೊಳ್ಳಿ, ಬಾಪ್ದಾದಾರವರು ಎಲ್ಲಾ ಮಕ್ಕಳ ವರ್ತಮಾನ ಪುರುಷಾರ್ಥವನ್ನು ಪರಿಶೀಲನೆ ಮಾಡಿದರು. ಪುರುಷಾರ್ಥವನ್ನಂತೂ ಎಲ್ಲರು ಮಾಡುತ್ತಿದ್ದಾರೆ, ಕೆಲವರು ಯಥಾಶಕ್ತಿ, ಕೆಲವರು ಶಕ್ತಿಶಾಲಿಯಾಗಿ ಪುರುಷಾರ್ಥ ಮಾಡುತ್ತಿದ್ದಾರೆ. ಆದ್ದರಿಂದ ಇಂದು ಬಾಪ್ದಾದಾರವರು ಎಲ್ಲಾ ಮಕ್ಕಳ ಮನಸ್ಸಿನ ಸ್ಥಿತಿಯನ್ನು ಚೆಕ್ ಮಾಡಿದರು - ಏಕೆಂದರೆ ಮನ್ಮನಾಭವ ಎಂಬುದೇ ಮೂಲವಾಗಿದೆ. ಸೇವೆಯಲ್ಲಿಯೂ ನೋಡಿದಾಗ ಮನಸ್ಸಾ ಸೇವೆಯು ಶ್ರೇಷ್ಠ ಸೇವೆಯಾಗಿದೆ. ಮನಜೀತ್ ಜಗತ್ಜೀತ್ ಎಂದು ಹೇಳುತ್ತೀರಲ್ಲವೆ, ಆದುದರಿಂದ ಮನಸ್ಸಿನ ಗತಿ(ಸ್ಥಿತಿ)ಯನ್ನು ಪರಿಶೀಲನೆ ಮಾಡಿಕೊಂಡಿರಾ.... ಅಂದಾಗ ಏನನ್ನು ನೋಡಿದಿರಿ? ಮನಸ್ಸಿಗೆ ಮಾಲೀಕನಾಗಿ ಮನಸ್ಸನ್ನು ನಡೆಸುತ್ತೀರಿ ಆದರೆ ಒಮ್ಮೊಮ್ಮೆ ಮನಸ್ಸು ತಮ್ಮನ್ನೂ ನಡೆಸುತ್ತದೆ. ಮನಸ್ಸು ನಿಮ್ಮನ್ನು ಪರವಶರನ್ನಾಗಿ ಮಾಡಿಬಿಡುತ್ತದೆ. ಬಾಪ್ದಾದಾರವರೂ ಸಹ ನೋಡುತ್ತಾರೆ - ಪ್ರೀತಿಯಿಂದ ಮನಸ್ಸನ್ನು ತಂದೆಯ ಜೊತೆ ಜೋಡಿಸುತ್ತೀರಿ ಆದರೆ ಮನಸ್ಸಿನ ಸ್ಥಿತಿ ಏಕಾಗ್ರವಾಗುವುದಿಲ್ಲ.

ವರ್ತಮಾನ ಸಮಯದ ಮನಸ್ಸಿನ ಏಕಾಗ್ರತೆಯು ಏಕರಸ ಸ್ಥಿತಿಯ ಅನುಭೂತಿಯನ್ನು ಮಾಡಿಸುತ್ತದೆ. ಅಂದಾಗ ಈಗಿನ ಫಲಿತಾಂಶವನ್ನು ನೋಡಿದಾಗ ಮನಸ್ಸನ್ನು ಏಕಾಗ್ರ ಮಾಡಲು ಬಯಸುತ್ತೀರಿ ಆದರೆ ಮಧ್ಯಮಧ್ಯದಲ್ಲಿ ಮನಸ್ಸು ಅಲೆದಾಡಿಬಿಡುತ್ತದೆ. ಏಕಾಗ್ರತೆಯ ಶಕ್ತಿಯು ಫರಿಶ್ತಾ ಸ್ಥಿತಿಯ ಅನುಭವವನ್ನು ಸಹಜವಾಗಿ ಮಾಡಿಸುತ್ತದೆ. ಮನಸ್ಸು ವ್ಯರ್ಥ ಮಾತುಗಳ ರೂಪದಲ್ಲಿ ವ್ಯರ್ಥ ಸಂಕಲ್ಪಗಳ ರೂಪದಲ್ಲಿ, ವ್ಯರ್ಥ ವ್ಯವಹಾರದ ರೂಪದಲ್ಲಿ ಅಲೆದಾಡಿಸುತ್ತದೆ. ಹೇಗೆ ಕೆಲವರಿಗೆ ಶರೀರದಿಂದಲೂ ಏಕಾಗ್ರರಾಗಿ ಕುಳಿತುಕೊಳ್ಳುವುದಕ್ಕೆ ಅಭ್ಯಾಸವಿರುವುದಿಲ್ಲ, ಕೆಲವರಿಗೆ ಅಭ್ಯಾಸವಿರುತ್ತದೆ ಆದುದರಿಂದ ಮನಸ್ಸನ್ನು ಎಲ್ಲಿ ಬೇಕೋ, ಹೇಗೆ ಬೇಕೋ, ಎಷ್ಟು ಸಮಯ ಬೇಕೋ ಅಷ್ಟೂ ಸಮಯದವರೆಗೆ ಏಕಾಗ್ರರಾಗಿರುವುದಕ್ಕೆ ಹೇಳಲಾಗುತ್ತದೆ - ಮನಸ್ಸು ಹತೋಟಿಯಲ್ಲಿದೆ ಎಂದು. ಏಕಾಗ್ರತೆಯ ಶಕ್ತಿಯು ಸಹಜವಾಗಿ ನಿರ್ವಿಘ್ನರನ್ನಾಗಿ ಮಾಡಿಬಿಡುತ್ತದೆ. ಯುದ್ಧ (ಅಲೆದಾಟ) ಮಾಡಬೇಕಾಗುವುದಿಲ್ಲ. ಏಕಾಗ್ರತೆಯ ಶಕ್ತಿಯಿಂದ ತಾನೇ ತಾನಾಗಿ ಒಬ್ಬ ತಂದೆಯನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎಂಬ ಅನುಭೂತಿಯು ಸದಾಕಾಲ ಆಗುತ್ತಿರುತ್ತದೆ. ಈ ಅನುಭವವು ತಾನೇ ತಾನಾಗಿ ಆಗುತ್ತದೆ, ಅನುಭವಕ್ಕಾಗಿ ಪರಿಶ್ರಮ ಪಡಬೇಕಾಗಿಲ್ಲ. ಏಕಾಗ್ರತೆಯ ಶಕ್ತಿಯಿಂದ ಸ್ವತಹವಾಗಿ ಏಕರಸ ಫರಿಶ್ತಾ ಸ್ವರೂಪದ ಅನುಭೂತಿಯಾಗುತ್ತದೆ. ಬ್ರಹ್ಮಾತಂದೆಯ ಜೊತೆ ಪ್ರೀತಿಯಿದೆಯಲ್ಲವೆ - ಅಂದಾಗ ಬ್ರಹ್ಮಾ ತಂದೆಯ ಸಮಾನರಾಗುವುದು ಅರ್ಥಾತ್ ಪರಿಸ್ತಾ (ಸೂಕ್ಷ್ಮದೇವತೆ) ಆಗುವುದಾಗಿದೆ. ಏಕಾಗ್ರತೆಯ ಶಕ್ತಿಯಿಂದ ಸ್ವತಃವಾಗಿ ಸರ್ವರ ಪ್ರತಿ ಸ್ನೇಹ, ಕಲ್ಯಾಣ, ಸನ್ಮಾನದ ವೃತ್ತಿ ಇದ್ದೇ ಇರುತ್ತದೆ ಏಕೆಂದರೆ ಏಕಾಗ್ರತೆ ಎಂದರೆ ಸ್ವಮಾನದಲ್ಲಿರುವ ಸ್ಥಿತಿಯಾಗಿದೆ. ಫರಿಶ್ತಾ ಸ್ಥಿತಿಯೂ ಸಹ ಸ್ವಮಾನದ ಸ್ಥಿತಿಯಾಗಿದೆ. ಬ್ರಹ್ಮಾತಂದೆಯನ್ನು ನೋಡುತ್ತಾ ವರ್ಣನೆಯನ್ನೂ ಈ ರೀತಿ ಮಾಡುತ್ತೀರಿ - ಹೇಗೆ ಬ್ರಹ್ಮಾತಂದೆಯ ಜೀವನದಲ್ಲಿ ಸಂಪನ್ನತೆಯ ಸಮೀಪ ಬರುತ್ತಿದ್ದಾಗ ಏನು ನೋಡಿದಿರಿ? ನಡೆಯುತ್ತಾ ಓಡಾಡುತ್ತಾ ಫರಿಶ್ತಾ ರೂಪವನ್ನು ನೋಡಿದಿರಲ್ಲವೆ. ದೇಹದ ಪರಿವೆಯ ಅನುಭೂತಿಯಾಗುತ್ತಿತ್ತೆ? ಬ್ರಹ್ಮಾ ಬಾಬಾ ನಿಮ್ಮ ಮುಂದೆ ಓಡಾಡುವಾಗ ದೇಹವು ಕಾಣುತ್ತಿತ್ತೆ ಅಥವಾ ಫರಿಶ್ತಾ ರೂಪ ಕಾಣುತ್ತಿತ್ತೆ? ಕರ್ಮ ಮಾಡುತ್ತಾ, ಮಾತನಾಡುತ್ತಾ, ಮಕ್ಕಳಿಗೆ ಸಲಹೆಯನ್ನು ಕೊಡುತ್ತಾ ಉಮ್ಮಂಗ-ಉತ್ಸಾಹವನ್ನು ಮಕ್ಕಳಲ್ಲಿ ತುಂಬುತ್ತಾ ದೇಹದಿಂದ ಭಿನ್ನರಾಗಿ ಸೂಕ್ಷ್ಮ ಪ್ರಕಾಶ ರೂಪದ ಅನುಭೂತಿ ಮಾಡಿದರು. ನೀವೂ ಸಹ ಹೇಳುತ್ತೀರಲ್ಲವೆ ಹೇಗೆ ಬ್ರಹ್ಮಾತಂದೆಯು ಮಾತನಾಡುತ್ತಾ-ಮಾತನಾಡುತ್ತಾ ಈ ರೀತಿ ಅನುಭವವಾಗುತ್ತಿತ್ತು - ಬ್ರಹ್ಮಾ ಬಾಬಾ ಮಾತನಾಡುತ್ತಿದ್ದರೂ ಅವರು ಇಲ್ಲಿಲ್ಲ ಸೂಕ್ಷ್ಮಲೋಕದಲ್ಲಿದ್ದಾರೆ ಎಂದು ಭಾಸವಾಗುತ್ತಿತ್ತು. ನೋಡುತ್ತಿದ್ದಾರೆ ಆದರೆ ಅದರಲ್ಲಿ ಅಲೌಕಿಕ ದೃಷ್ಟಿಯಾಗಿತ್ತು, ಆದರೆ ದೇಹದ ದೃಷ್ಟಿ ಇರಲಿಲ್ಲ. ಈ ರೀತಿ ದೇಹಭಾನದಿಂದ ದೂರ, ಬೇರೆಯವರೂ ಸಹ ದೇಹದ ಪರಿವೆಯಲ್ಲಿ ಬಾರದಿರಲಿ, ಭಿನ್ನತೆಯ ರೂಪದಲ್ಲಿ ಕಾಣುತ್ತಿರಲಿ ಇದಕ್ಕೆ ದೇಹದಲ್ಲಿರುತ್ತಾ ಫರಿಶ್ತಾ ಸ್ವರೂಪವೆಂದು ಹೇಳಲಾಗುತ್ತದೆ. ಪ್ರತೀ ಮಾತಿನಲ್ಲಿ, ವೃತ್ತಿಯಲ್ಲಿ, ದೃಷ್ಟಿಯಲ್ಲಿ, ಕರ್ಮದಲ್ಲಿ ಭಿನ್ನತನದ ಅನುಭವವಾಗಲಿ. ಇವರು ಮಾತನಾಡುತ್ತಿದ್ದಾರೆ ಆದರೆ ನ್ಯಾರಾ-ನ್ಯಾರಾ, ಪ್ಯಾರಾ-ಪ್ಯಾರಾ ಅನುಭವವಾಗುತ್ತದೆ. ಆತ್ಮಿಕ ರೀತಿಯ ಅನುಭವವಾಗುತ್ತಿರುತ್ತದೆ. ಈ ರೀತಿ ಫರಿಶ್ತಾತನದ ಅನುಭೂತಿ ಸ್ವಯಂ ತಾವೂ ಮಾಡಿ, ಮತ್ತು ಅನ್ಯರಿಗೂ ಮಾಡಿಸಿ ಏಕೆಂದರೆ ಫರಿಶ್ತಾ ಆಗದೇ ದೇವತೆಗಳಾಗುವುದಿಲ್ಲ. ಫರಿಶ್ತಾ ಸೋ ದೇವತೆಯಾಗುವುದು. ಅಂದಾಗ ನಂಬರ್ವನ್ ಬ್ರಹ್ಮಾತಂದೆಯ ಆತ್ಮನೂ ಪ್ರತ್ಯಕ್ಷ ಸಾಕಾರ ರೂಪದಲ್ಲಿಯೂ ಸಹ ಫರಿಶ್ತಾ ರೂಪವನ್ನು ಅನುಭವವನ್ನು ಮಾಡಿಸಿದರು ಮತ್ತು ಫರಿಶ್ತಾ ಆಗಿಬಿಟ್ಟರು. ಆ ಫರಿಶ್ತಾ ಸ್ವರೂಪದೊಂದಿಗೆ ತಾವೆಲ್ಲರೂ ಸಹ ಸೂಕ್ಷ್ಮದೇವತೆಗಳಿಗೆ ಪರಮಧಾಮದಲ್ಲಿ ಹಿಂತಿರುಗಿ ಹೋಗಬೇಕು. ಅದಕ್ಕಾಗಿ ಮನಸ್ಸಿನ ಏಕಾಗ್ರತೆಯ ಕಡೆ ಗಮನ ಕೊಡಬೇಕು. ನಿಮ್ಮ ಆದೇಶದಂತೆ ಮನಸ್ಸನ್ನು ನಡೆಸಿ. ಮಾಡುವುದಾದರೆ ಮನಸ್ಸಿನ ಮೂಲಕ ಕರ್ಮವನ್ನು ಮಾಡಿ, ಕರ್ಮ ಮಾಡಬಾರದೆಂದಮೇಲೆ ಮನಸ್ಸು ಮಾಡು ಎಂದು ಹೇಳಿದರೆ ಇದು ಮಾಲೀಕತನವಲ್ಲ. ಈಗಂತೂ ಕೆಲವು ಮಕ್ಕಳು ಈ ರೀತಿ ಹೇಳುತ್ತಾರೆ ನಾವು ಇಷ್ಟಪಡುವುದಿಲ್ಲ ಆದರೆ ಆಗಿಹೋಯಿತು. ನಾವು ಅಂದುಕೊಂಡಿರಲಿಲ್ಲ. ಆದರೆ ಆಗಿಹೋಯಿತು. ಇದಾಗಿದೆ ಮನಸ್ಸಿನ ಮನಸ್ಸಿಗೆ ವಶೀಭೂತರಾಗಿರುವ ಸ್ಥಿತಿಯೆಂದು ಹೇಳಲಾಗುತ್ತದೆ. ಇಂತಹ ಸ್ಥಿತಿ ಅಥವಾ ಅನುಭವ ಇಷ್ಟವಾಗುವುದಿಲ್ಲವಲ್ಲವೆ! ಆದುದರಿಂದ ಬ್ರಹ್ಮಾತಂದೆಯನ್ನು ಅನುಸರಣೆ ಮಾಡಿ, ಬ್ರಹ್ಮಾ ತಂದೆಯ ಮುಂದೆ ನಿಂತುಕೊಂಡಾಗ ಏನು ಅನುಭವವಾಗುತ್ತಿತ್ತು? ಫರಿಶ್ತಾ ಆಗಿ ನಿಂತಿದ್ದಾರೆ, ಸೂಕ್ಷ್ಮದೇವತೆಯಾಗಿ ದೃಷ್ಟಿ ಕೊಡುತ್ತಿದ್ದಾರೆ ಎಂದು ಅನುಭವವಾಗುತ್ತದೆಯಲ್ಲವೆ. ಆದ್ದರಿಂದ ಮನಸ್ಸಿನ ಏಕಾಗ್ರತಾಶಕ್ತಿಯು ಸಹಜವಾಗಿ ಫರಿಶ್ತೆಯನ್ನಾಗಿ ಮಾಡುತ್ತದೆ. ಬ್ರಹ್ಮಾತಂದೆಯೂ ಸಹ ಮಕ್ಕಳಿಗೆ ಸಮಾನರಾಗಿ ಎಂದೇ ಹೇಳುತ್ತಾರೆ. ಶಿವತಂದೆಯು ನಿರಾಕಾರಿಯಾಗಿ ಎಂದು ಹೇಳುತ್ತಾರೆ ಬ್ರಹ್ಮಾತಂದೆಯು ಸೂಕ್ಷ್ಮದೇವತೆಯಾಗಿ ಎಂದು ಹೇಳುತ್ತಾರೆ ಅಂದಮೇಲೆ ಏನು ಯೋಚಿಸಿದಿರಿ? ಆದರೆ ಫಲಿತಾಂಶದಲ್ಲಿ ಏನು ನೋಡಲಾಯಿತು? ಮನಸ್ಸಿನ ಏಕಾಗ್ರತೆ ಕಡಿಮೆಯಿದೆ. ಮಧ್ಯಮಧ್ಯದಲ್ಲಿ ಮನಸ್ಸು ಅಲೆದಾಡುತ್ತದೆ. ಎಲ್ಲಿಗೆ ಹೋಗಬಾರದೆಯೋ ಅಲ್ಲಿಗೆ ಹೋಗುತ್ತದೆ ಅಂದಾಗ ಅದಕ್ಕೆ ಏನು ಹೇಳಲಾಗುತ್ತದೆ? ಅಲೆದಾಡುತ್ತಿದೆ ಎಂದು ಹೇಳಲಾಗುತ್ತದೆಯಲ್ಲವೆ! ಆದುದರಿಂದ ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಮಾಲೀಕತನದ ಸ್ಥಿತಿಯ ಆಸನಲ್ಲಿ ಸೆಟ್ ಆಗಿಬಿಡಿ. ಯಾವಾಗ ಈ ಆಸನದಲ್ಲಿ ಸೆಟ್ ಆಗುತ್ತೀರೋ ಆಗ ಅಪ್ಸೆಟ್ ಆಗುವುದಿಲ್ಲವೆ, ಯಾವಾಗ ಸೆಟ್ ಆಗುವುದಿಲ್ಲ ಅಪ್ಸೆಟ್ (ಏರುಪೇರು) ಆಗುತ್ತೀರಿ. ಆದ್ದರಿಂದ ಭಿನ್ನ-ಭಿನ್ನವಾದ ಶ್ರೇಷ್ಠ ಸ್ಥಿತಿಯ ಆಸನದಲ್ಲಿ ಸೆಟ್ ಆಗಿ ಆಗ ಇದಕ್ಕೆ ಏಕಾಗ್ರತೆಯ ಶಕ್ತಿಯೆಂದು ಹೇಳಲಾಗುತ್ತದೆ. ಸರಿಯಿದೆಯಲ್ಲವೇ! ಅಂದಾಗ ಬ್ರಹ್ಮಾ ತಂದೆಯ ಜೊತೆ ಪ್ರೀತಿಯಿದೆಯಲ್ಲವೆ? ಎಷ್ಟು ಪ್ರೀತಿಯಿದೆ? ಎಷ್ಟಿದೆ? ಬಹಳ ಇದೆ. ಬಹಳ ಪ್ರೀತಿಯಿದೆ ಬ್ರಹ್ಮಾತಂದೆಯ ಜೊತೆ ಪ್ರೀತಿಗೆ ರಿಟರ್ನ್ ಏನು ಕೊಡುತ್ತೀರಿ? ಬ್ರಹ್ಮಾತಂದೆಗೂ ನಿಮ್ಮ ಮೇಲೆ ಪ್ರೀತಿಯಿದೆ ಆದುದರಿಂದ ನಿಮಗೂ ಪ್ರೀತಿಯಿದೆಯಲ್ಲವೆ. ರಿಟರ್ನ್ ಏನು ಕೊಡುತ್ತೀರಿ? ಸಮಾನರಾಗುವುದೇ ರಿಟರ್ನ್ ಕೊಡುವುದಾಗಿದೆ. ಒಳ್ಳೆಯದು.

ಡಬಲ್ ವಿದೇಶಿ ಮಕ್ಕಳೂ ಸಹ ಬಂದಿದ್ದಾರೆ. ಡಬಲ್ ವಿದೇಶಿಗಳಿಂದ ಮಧುಬನದ ಶೃಂಗಾರವಾಗಿಬಿಡುತ್ತದೆ. ಇದೂ ಚೆನ್ನಾಗಿದೆ ಅಂತರರಾಷ್ಟ್ರೀಯವಾಗಿಬಿಡುತ್ತದೆಯಲ್ಲವೆ! ನೋಡಿ ಮಧುಬನದಲ್ಲಿಯೂ ವರ್ಗೀಕರಣದ ಸೇವೆ ನಡೆಯುತ್ತಿದೆ ಇದರಿಂದ ಸಮಾಚಾರವು ನಾಲ್ಕೂ ಕಡೆಯೂ ಹರಡುತ್ತದೆ. ನೀವು ನೋಡುತ್ತಿದ್ದೀರಿ - ಯಾವಾಗಿನಿಂದ ವರ್ಗೀಕರಣದ ಸೇವೆ ಪ್ರಾರಂಭವಾಯಿತೋ ಆಗಿನಿಂದ ಗಣ್ಯವ್ಯಕ್ತಿಗಳಿಗೆ ಸಂದೇಶ ಹೆಚ್ಚಾಗಿ ತಲುಪಿದೆ. ವಿ.ವಿ.ಪ.ಪಿಗಳಿಗೆ ಮಾತಂತೂ ಬಿಡಿ ಅವರಿಗೆ ಸಮಯವೆಲ್ಲಿದೆ. ಹಾಗೆಯೇ ದೊಡ್ಡ-ದೊಡ್ಡ ಕಾರ್ಯಕ್ರಮಗಳನ್ನು ಮಾಡಿದ್ದೀರಿ ಅದರಿಂದಲೂ ಸಂದೇಶ ತಲುಪುತ್ತದೆ. ಈಗ ದೆಹಲಿ ಮತ್ತು ಕಲ್ಕತ್ತಾದಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೀರಲ್ಲವೆ? ಒಳ್ಳೆಯ ಪ್ಲಾನ್ ಮಾಡುತ್ತಿದ್ದೀರಿ. ಉತ್ತಮವಾದ ಶ್ರಮಪಡುತ್ತಿದ್ದೀರಿ. ಬಾಪ್ದಾದಾರವರ ಬಳಿಗೆ ಎಲ್ಲಾ ಸಮಾಚಾರಗಳೂ ತಲುಪುತ್ತಿರುತ್ತವೆ. ಹಾಗೆಯೇ ದೆಹಲಿಯಿಂದ ವಿದೇಶದವರೆಗೂ ಸಂದೇಶ ತಲುಪಬೇಕಾಗಿದೆ. ಮಾಧ್ಯಮ ವರ್ಗದವರು (ಮೀಡಿಯಾ) ಏನು ಮಾಡುತ್ತೀರಿ? ಕೇವಲ ಭಾರತದವರೆಗೂ ತಲುಪಿಸುತ್ತಿದ್ದೀರಾ. ವಿದೇಶದಿಂದ ದೆಹಲಿಯಲ್ಲಿ ಇಂತಹ ಕಾರ್ಯಕ್ರಮವಾಯಿತು, ಕಲ್ಕತ್ತಾದಲ್ಲಿ ಇಂತಹ ಕಾರ್ಯಕ್ರಮವಾಯಿತು ಎಂಬ ಸಂದೇಶವು ಭಾರತಕ್ಕೆ ತಲುಪಬೇಕು. ಅಲ್ಲಿ-ಇಲ್ಲಿಯ ತಂದೆಯ ಸೇವೆಯ ಸಂದೇಶವು ತಲುಪುತ್ತಿದೆ ಎಂದು ಭಾರತಕ್ಕೆ ಬರಲಿ. ಕಾರ್ಯಕ್ರಮವು ಭಾರತದಲ್ಲಾಗಲಿ ಹಾಗೂ ಭಾರತದ ಸೇವಾ ಸಮಾಚಾರವು ವಿದೇಶದ ಸಮಾಚಾರ ಪತ್ರಗಳಿಂದ ಭಾರತಕ್ಕೆ ತಲುಪಲಿ ಆಗ ಸಂದೇಶವು ಹರಡುತ್ತದೆ. ಭಾರತದಿಂದ ತಂದೆಯ ಸಂದೇಶವು ವಿದೇಶಕ್ಕೆ ತಲುಪಲಿ, ಹಾಗೆಯೇ ವಿದೇಶದಿಂದ ತಂದೆಯ ಸಂದೇಶವು ಭಾರತಕ್ಕೆ ತಲುಪಲಿ ಆಗ ತುಂಬಾ ಪ್ರಭಾವವಿರುತ್ತದೆ. ಚೆನ್ನಾಗಿದೆ. ಏನೆಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದೀರಿ ಚೆನ್ನಾಗಿ ಮಾಡುತ್ತಿದ್ದೀರಿ. ಬಾಪ್ದಾದಾರವರೂ ಸಹ ದೆಹಲಿಯವರೆವಿಗೂ ಪ್ರೀತಿಯ ಪರಿಶ್ರಮಕ್ಕೆ ಅಭಿನಂದನೆಗಳನ್ನು ನೀಡುತ್ತಿದ್ದಾರೆ. ಕಲ್ಕತ್ತಾದವರಿಗೂ ಸಹ ಮೊದಲೇ ಶುಭಾಷಯಗಳು ಸ್ವೀಕಾರವಾಗಲಿ ಏಕೆಂದರೆ ಸಹಯೋಗ, ಸ್ನೇಹ ಮತ್ತು ಧೈರ್ಯ... ಯಾವಾಗ ಈ ಮೂರೂ ಮಾತುಗಳು ಒಂದುಕಡೆ ಸೇರುತ್ತದೆಯೋ ಆಗ ಬಾಬಾರವರ ಸಂದೇಶವು ಜೋರಾಗಿ ತಲುಪುತ್ತದೆ. ಬಾಬಾರವರ ಸಂದೇಶದ ಕೂಗು ತಲುಪಲೇಬೇಕು. ಏಕೆ ತಲುಪುವುದಿಲ್ಲ? ಈಗ ಮಾಧ್ಯಮದವರು ಈ ಕಮಾಲ್ ಮಾಡಬೇಕು. ನಾವೆಲ್ಲರೂ ಟಿ.ವಿ. ಯಲ್ಲಿ ನೋಡಿದೆವು. ಇದು ಬಂದಿತ್ತು ಎಂದರಷ್ಟೇ ಸಾಲದು. ಆದಂತೂ ಭಾರದಲ್ಲಿ ಮಾತ್ರ ಬರುತ್ತಿದೆ. ಈಗ ಇನ್ನೂ ವಿದೇಶದವರೆವಿಗೂ ತಲುಪಿಸಿ, ಈ ವರ್ಷ ಬಾಬಾರವರ ಸಂದೇಶದ ಕೂಗನ್ನು ತಲುಪಿಸಲು ಎಷ್ಟು ಧೈರ್ಯ ಮತ್ತು ಸಾಹಸದಿಂದ ಆಚರಣೆ ಮಾಡುತ್ತೀರೆಂದು ಬಾಪ್ದಾದಾ ಈ ವರ್ಷ ನೋಡುತ್ತಾರೆ. ಡಬಲ್ ವಿದೇಶಿಯರಿಗೆ ಬಹಳ ಉಮ್ಮಂಗವಿದೆಯೆಂದು ಬಾಪ್ದಾದಾರವರಿಗೆ ಸಮಾಚಾರ ಸಿಕ್ಕಿದೆ. ಇದೆಯಲ್ಲವೆ? ಚೆನ್ನಾಗಿದೆ. ಪರಸ್ಪರ ಒಬ್ಬರನ್ನೊಬ್ಬರು ನೋಡಿ ಉಮ್ಮಂಗ ಬರುತ್ತದೆ, ಓಟೇ ಸೋ ಬ್ರಹ್ಮಾಬಾಪ್ ಸಮಾನ್ (ಬ್ರಹ್ಮಾತಂದೆಯ ಸಮಾನ ನಂಬರ್ಒನ್), ಚೆನ್ನಾಗಿದೆ. ಆದುದರಿಂದ ದಾದಿಜೀಯವರಿಗೂ ಈ ಸಂಕಲ್ಪ ಬರುತ್ತದೆ, ದಾದೀಜಿಯವರಿಗೂ ಸಹ ಸೇವೆಯಲ್ಲಿ ನಿರಂತರಾಗಿರುವ ವಿಧಿ ಇಷ್ಟವಾಗುತ್ತದೆ. ಚೆನ್ನಾಗಿದೆ. ನಿಮಿತ್ತರಾಗಿದ್ದಾರಲ್ಲವೆ.

ಒಳ್ಳೆಯದು. ಎಲ್ಲರೂ ಹಾರುವ ಕಲೆಯುಳ್ಳವರಾಗಿದ್ದೀರಿ ಅಲ್ಲವೆ? ಹಾರುವಕಲೆಯು ಅತೀ ವೇಗದ ಕಲೆಯಾಗಿದೆ. ನಡೆಯುವ ಕಲೆ, ಏರುವಕಲೆಯು ತೀವ್ರವೇಗದ್ದಾಗಿಲ್ಲ. ಹಾರುವ ಕಲೆಯು ತೀವ್ರಗತಿಯ ಕಲೆಯೂ ಆಗಿದೆ ಹಾಗೂ ಪ್ರಥಮ ಸ್ಥಾನದಲ್ಲಿ ತರುವ ಕಲೆಯೂ ಆಗಿದೆ. ಒಳ್ಳೆಯದು.

ಮಾತೆಯರು ಏನು ಮಾಡುತ್ತೀರಿ? ಮಾತೆಯರು ತಮ್ಮ ಸ್ನೇಹಿತರನ್ನು (ಸಮಾನಸ್ಥರು) ಜಾಗೃತ ಮಾಡಿ. ಕಡಿಮೆಯೆಂದರೆ ಕಡಿಮೆ ಯಾವ ಮಾತೆಯರೂ ಸಹ ನನಗೆ ಗೊತ್ತಿಲ್ಲವೆಂದು ದೂರು ಕೊಡಬಾರದು. ಮಾತೆಯರ ಸಂಖ್ಯೆಯು ಸದಾ ಹೆಚ್ಚಾಗಿರುತ್ತದೆ. ಅದು ಬಾಪ್ದಾದಾರವರಿಗೂ ಖುಷಿಯಾಗುತ್ತದೆ ಹಾಗೂ ಈ ಗ್ರೂಪ್ನಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. (ಮಾತೆಯರು. ಅಣ್ಣಂದಿರು, ಕುಮಾರರು......) ಈ ಗ್ರೂಪ್ನಲ್ಲಿ ಕುಮಾರರ ಸಂಖ್ಯೆಯು ಹೆಚ್ಚಾಗಿದೆ. ನೋಡಿ, ಕುಮಾರರು ತಮ್ಮ ಸ್ನೇಹಿತರನ್ನು ಜಾಗೃತ ಮಾಡಿ. ಒಳ್ಳೆಯದು. ಕುಮಾರರು ಈ ಕಮಾಲ್ನ್ನು ಮಾಡಿ ತೋರಿಸಬೇಕು ಸ್ವಪ್ನ ಮಾತ್ರದಲ್ಲಿಯೂ ಪವಿತ್ರತೆಯ ಪರಿಪಕ್ವವಾಗಿರುವಂತಹ ಅದ್ಭುತ ಮಾಡಿ ತೋರಿಸಬೇಕು. ಬಾಪ್ದಾದಾ ಈ ಮಾತನ್ನು ಚಾಲೆಂಜ್ ಮಾಡಿ ತೋರಿಸುವಂತಹವರಾಗಬೇಕು ಎಂದು ಹೇಳಿದರು, ಬ್ರಹ್ಮಾಕುಮಾರರಾದ ಯುವಕುಮಾರರು ಡಬಲ್ ಕುಮಾರರಲ್ಲವೆ. ಬ್ರಹ್ಮಾಕುಮಾರನೂ ಆಗಿದ್ದೀರಿ, ಶರೀರದಿಂದಲೂ ಕುಮಾರರಾಗಿದ್ದೀರಿ. ಅಂದಾಗ ಪವಿತ್ರತೆಯ ಅರ್ಥವು ಪ್ರತ್ಯಕ್ಷ ಜೀವನದಲ್ಲಿರಲಿ. ನಿಮ್ಮ ಪವಿತ್ರತೆಯನ್ನು ಪರಿಶೀಲನೆ ಮಾಡಿ ಎಂದು ಆದೇಶ ಮಾಡೋಣವೇ? ಆದೇಶ ಮಾಡೋಣವೇ? ಮಾಡೋಣವೇ? ಈ ಮಾತಿನಲ್ಲಿ ಕೈ ಮೇಲಕ್ಕೆತ್ತುತ್ತಿಲ್ಲ. ಪರಿಶೀಲನೆ ಮಾಡುವಂತಹ ಯಂತ್ರಗಳು ಇರುತ್ತವೆ. ಸ್ವಪ್ನದಲ್ಲಿಯೂ ಅಪವಿತ್ರತೆಯ ಸಾಹಸವನ್ನಿಡಬೇಡಿ. ಕುಮಾರಿಯರೂ ಸಹ ಅದೇ ರೀತಿ ಇರಬೇಕು, ಕುಮಾರಿಯೆಂದರೆ ಪೂಜ್ಯ ಪವಿತ್ರ ಕುಮಾರಿ. ಕುಮಾರ ಮತ್ತು ಕುಮಾರಿಯರು ಬಾಪ್ದಾದಾರವರ ಜೊತೆಗೆ ಈ ರೀತಿ ಪ್ರತಿಜ್ಞೆ ಮಾಡಿ- ನಾವೆಲ್ಲರೂ ಸ್ವಪ್ನ ಸಂಕಲ್ಪದಲ್ಲಿಯೂ ಪವಿತ್ರರಾಗಿದ್ದೇವೆಂದು, ಆಗ ಕುಮಾರ ಹಾಗೂ ಕುಮಾರಿಯರ ಪವಿತ್ರತೆಯ ಸಮಾರಂಭವನ್ನು ಆಚರಣೆ ಮಾಡುತ್ತಾರೆ. ಈಗ ಸ್ವಲ್ಪ-ಸ್ವಲ್ಪ ಇದೆ. ಬಾಪ್ದಾದಾರವರಿಗೆ ಗೊತ್ತಿದೆ. ಅಪವಿತ್ರತೆ ಅವಿದ್ಯಾ ಆಗಿರಲಿ ಏಕೆಂದರೆ ಹೊಸಜನ್ಮವನ್ನು ತೆಗೆದು ಕೊಂಡಿದ್ದೀರಲ್ಲವೆ. ಅಂದಾಗ ಅಪವಿತ್ರತೆಯು ನಿಮ್ಮ ಹಿಂದಿನ ಜನ್ಮದ ಮಾತಾಗಿದೆ. ಇದು ಮರುಜೀವ ಜನ್ಮ, ಜನ್ಮವೇ ಬ್ರಹ್ಮನ ಮುಖದಿಂದ ಆದಂತಹ ಪವಿತ್ರ ಜನ್ಮವಾಗಿದೆ. ಆದುದರಿಂದ ಪವಿತ್ರ ಜನ್ಮದ ಮರ್ಯಾದೆಯು ಬಹಳ ಅವಶ್ಯಕತೆಯಿದೆ. ಕುಮಾರ-ಕುಮಾರಿಯರು ಈ ಬಾವುಟ (ಪವಿತ್ರತೆ) ವನ್ನು ಹಾರಿಸಬೇಕು. ಪವಿತ್ರರಾಗಿದ್ದೇವೆ, ಪವಿತ್ರ ಸಂಸ್ಕಾರವನ್ನು ವಿಶ್ವದಲ್ಲಿ ಹರಡುತ್ತೇವೆಂದು ಘೋಷಣೆಯು ನಾಲ್ಕೂ ಕಡೆಯೂ ಹರಡಬೇಕು. ಕುಮಾರಿಯರು ಕೇಳಿದಿರಲ್ಲವೆ. ನೋಡಿ ಎಷ್ಟೊಂದು ಕುಮಾರಿಯರಿದ್ದಾರೆ. ಈಗ ಈ ಸಂದೇಶವನ್ನು ಕುಮಾರರು ಹರಡುತ್ತಾರೆಯೋ ಅಥವಾ ಕುಮಾರಿಯರು ಹರಡುತ್ತೀರೋ? ಎಂದು ನೋಡುತ್ತಾರೆ. ಅದಕ್ಕಾಗಿ ಬ್ರಹ್ಮತಂದೆಯನ್ನು ಅನುಸರಿಸಿ. ಬ್ರಾಹ್ಮಣ ಜೀವನವೆಂದರೆ ಅಪವಿತ್ರತೆಯ ಹೆಸರು, ಚಿಹ್ನೆಯೂ ಇರಬಾರದು. ಮಾತೆಯರಲ್ಲಿ ಮೋಹವಿದ್ದರೂ ಸಹ ಅಪವಿತ್ರತೆಯಾಗಿದೆ. ಮಾತೆಯರು ಬ್ರಾಹ್ಮಣರಲ್ಲವೆ. ಆದುದರಿಂದ ಮಾತೆಯರಾಗಿರಲಿ, ಕುಮಾರರಾಗಿರಲಿ, ಕುಮಾರಿಯರಾಗಿರಲಿ, ಅಧರ್ ಕುಮಾರರಲ್ಲಿಯೂ ಯಾವುದೇ ಅಪವಿತ್ರತೆಯಿರಬಾರದು. ಬ್ರಾಹ್ಮಣರೆಂದರೆ ಪವಿತ್ರ ಆತ್ಮ. ಒಂದುವೇಳೆ ಯಾವುದೇ ಅಪವಿತ್ರತೆಯ ಕಾರ್ಯವಾದರೆ ಅದು ದೊಡ್ಡ ಪಾಪವಾಗಿದೆ. ಈ ಪಾಪಕ್ಕೂ ಬಹಳ ಕಠಿಣ ಶಿಕ್ಷೆಯಿದೆ. ಆದುದರಿಂದ ಇದೆಲ್ಲವೂ ನಡೆಯುತ್ತದೆ ಎಂದು ತಿಳಿಯಬಾರದು. ಅಲ್ಪಸ್ವಲ್ಪ ನಡೆಯುತ್ತದೆ ಎಂದೂ ಸಹ ತಿಳಿಯಬಾರದು. ಇದು ಮೊದಲನೆಯ ಸಬ್ಜೆಕ್ಟ್ ಆಗಿದೆ. ಪವಿತ್ರತೆಯ ನವೀನತೆಯಾಗಿದೆ. ಬ್ರಹ್ಮಾತಂದೆಯೂ ಸಹ ಪವಿತ್ರತೆಯ ಕಾರಣ ನಿಂಧನೆ (ಬೈಗುಳ) ಕೇಳಿದರು. ಈ ರೀತಿ ಆಗಿಹೋಯಿತು ಎಂದು ಹೇಳುತ್ತಾ ತಪ್ಪಿಸಿಕೊಳ್ಳುವಂತಿಲ್ಲ. ಇದರಲ್ಲಿ ಹುಡುಗಾಟಿಕೆ ಮಾಡಬೇಡಿ. ಯಾರೇ ಬ್ರಾಹ್ಮಣರಾಗಿರಲಿ, ಅವರು ಸಮರ್ಪಣೆಯಾಗಿರಲಿ, ಪ್ರವತ್ತಿಯಲ್ಲಿರಲಿ, ಸೇವಾಧಾರಿಯಾಗಿರಲಿ, ಈ ಮಾತಿನಲ್ಲಿ ಧರ್ಮರಾಜನು ಬಿಡುವುದಿಲ್ಲ. ಆಗ ಬ್ರಹ್ಮಾತಂದೆಯು ಧರ್ಮರಾಜನ ಜೊತೆ (ಸಹಯೋಗ) ಸೇರಿಕೊಳ್ಳುತ್ತಾರೆ. ಆದುದರಿಂದ ಕುಮಾರ-ಕುಮಾರಿಯರು ಎಲ್ಲಿಯೇ ಇರಲಿ, ಮಧುಬನದಲ್ಲಿಯೇ ಇರಲಿ, ಸೇವಾಕೇಂದ್ರದಲ್ಲಿರಲಿ ಆದರೆ ಇದರ ಪ್ರಭಾವ (ಗಾಯ), ಇದರ ಪ್ರಭಾವ ಸಂಕಲ್ಪ ಮಾತ್ರದ ಗಾಯವೂ ಸಹ ಅತೀ ದೊಡ್ಡ ಗಾಯವಾಗಿದೆ. ಪವಿತ್ರ ಮನ್ ರಕೊ, ಪವಿತ್ರ ತನ್ ರಕೆ ಎಂಬ ಹಾಡನ್ನು ಹಾಡುತ್ತಿರಲ್ಲವೆ. ಇದು ನಿಮ್ಮ ಹಾಡಲ್ಲವೆ. ಅಂದಾಗ ಮನಸ್ಸು ಪವಿತ್ರವಾಗಿದೆಯೆಂದರೆ ಜೀವನ ಪವಿತ್ರವಾಗಿದೆ ಎಂದರ್ಥ. ಈ ಮಾತನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಸ್ವಲ್ಪ ಆಗಿಬಿಟ್ಟರೆ ಏನಾಯಿತು. ಅದು ಸ್ವಲ್ಪವಲ್ಲ, ತುಂಬಾ ಆಗಿದೆ. ಬಾಪ್ದಾದಾ ಗಂಭೀರ ರೂಪದಲ್ಲಿ ಸೂಚನೆ ಕೊಡುತ್ತಿದ್ದಾರೆ ಅಂದಾಗ ಈ ಮಾತಿನಲ್ಲಿ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಲೆಕ್ಕಾಚಾರವನ್ನು ಯಾರೇ ಆಗಿರಲಿ ಚೆನ್ನಾಗಿ ತೆಗೆದುಕೊಳ್ಳುತ್ತಾರೆ. ಅದರಿಂದ ಸಾವಧಾನವಾಗಿರಿ, ಗಮನವಿರಲಿ. ಎಲ್ಲರೂ ಗಮನಕೊಟ್ಟು ಕೇಳಿದಿರಾ. ಎರಡೂ ಕಿವಿಗಳನ್ನು ತೆರೆದು ಕೇಳಿ, ಅಪವಿತ್ರತೆಯು ವೃತ್ತಿಯಲ್ಲಿಯೂ, ದೃಷ್ಟಿಯಲ್ಲಿಯೂ ಸಾಹ ಸ್ಪರ್ಶವಾಗಬಾರದು. ಸಂಕಲ್ಪದಲ್ಲಿ ಇಲ್ಲವೆಂದಾಗ ವೃತ್ತಿ-ದೃಷ್ಟಿ ಹೇಗಿರುತ್ತದೆ! ಏಕೆಂದರೆ ಸಂಪೂರ್ಣ ಪವಿತ್ರವಾಗುವಂತಹ ಸಮಯವು ಸಮೀಪಕ್ಕೆ ಬರುತ್ತಾ ಇದೆ. ಪವಿತ್ರತೆಯ ಮಾತಿನಲ್ಲಿ ಈ ರೀತಿಯ ಅಪವಿತ್ರತೆಯೂ ಸಹ ಸಂಪೂರ್ಣ ಬಿಳಿಯ ಕಾಗದದ ಮೇಲೆ ಕಪ್ಪು ಕಲೆಯಾಗಿದೆ. ಒಳ್ಳೆಯದು ಎಲ್ಲರೂ ಎಲ್ಲಾ ಕಡೆಯಿಂದ ಬಂದಿದ್ದೀರಿ, ಎಲ್ಲಾ ಕಡೆಯಿಂದ ಬಂದಿರುವಂತಹ ಮಕ್ಕಳಿಗೆ ಶುಭಾಷಯಗಳು.

ಒಳ್ಳೆಯದು. ಮನಸ್ಸನ್ನು ಆದೇಶದ ಪ್ರಮಾಣ ನಡೆಸಿ. ಒಂದು ಸೆಕೆಂಡಿನಲ್ಲಿ ಎಲ್ಲಿ ಬೇಕೋ ಮನಸ್ಸು ಎಲ್ಲಿ ಏಕಾಗ್ರವಾಗಬೇಕು. ಈ ಎಕ್ಸರ್ಸೈಜ್ (ವ್ಯಾಯಾಮ) ಮಾಡಿ. ಒಳ್ಳೆಯದು. ಬಹಳಷ್ಟು ಸ್ಥಾನದಲ್ಲಿ ಮಕ್ಕಳು ಕೇಳುತ್ತಿದ್ದಾರೆ. ಕೆಲವು ಸ್ಥಾನದಲ್ಲಿ ನೆನಪು ಮಾಡುತ್ತಿದ್ದಾರೆ. ಕೇಳುತ್ತಲೂ ಇದ್ದಾರೆ. ಇದನ್ನು ಕೇಳಿ ಖುಷಿಯಾಗುತ್ತಿದೆ - ವಿಜ್ಞಾನದ ಈ ಸಾಧನಗಳು ವಾಸ್ತವಿಕವಾಗಿ ನಿಮ್ಮ ಸುಖಕ್ಕಾಗಿಯೇ ಇದೆ.

ನಾಲ್ಕೂ ಕಡೆಯ ಸರ್ವಖಜಾನೆಗಳಿಂದ ಸದಾ ಸಂಪನ್ನ ಮಕ್ಕಳಿಗೆ, ಸದಾ ಖುಷಿಯ ಅದೃಷ್ಟವುಳ್ಳ ಖುಷಿಯಿಂದ ಹರಡಿರುವ ಚಹರೆ ಹಾಗೂ ಚಲನೆಯಿಂದ ಖುಷಿಯ ಆಶ್ರಯವನ್ನು ಕೊಡುವಂತಹ ವಿಶ್ವಕಲ್ಯಾಣಕಾರಿ ಮಕ್ಕಳಿಗೆ, ಸದಾ ಮನಸ್ಸಿನ ಮಾಲೀಕರಾಗಿ ಏಕಾಗ್ರತೆಯ ಶಕ್ತಿಯ ಮೂಲಕ ಮನಸ್ಸನ್ನು ಕಂಟ್ರೋಲ್ ಮಾಡುವಂತಹ ಮನಜೀತ್ ಜಗತ್ ಜೀತ್ ಮಕ್ಕಳಿಗೆ, ಸದಾ ಬ್ರಾಹ್ಮಣ ಜೀವನದ ವಿಶೇಷತೆ ಪವಿತ್ರತೆಯ ವ್ಯಕ್ತಿತ್ವವುಳ್ಳಂತಹ ಶ್ರೇಷ್ಠ ಬ್ರಾಹ್ಮಣ ಆತ್ಮ ಸದಾ ಡಬಲ್ಲೈಟ್ ಆಗಿ ಫರಿಶ್ತಾ ಜೀವನದಲ್ಲಿ ಬ್ರಹ್ಮಾ ತಂದೆಯನ್ನು ಅನುಸರಿಸುವಂತಹವರಿಗೆ, ಇಂತಹ ಬ್ರಹ್ಮಾ ತಂದೆಯ ಸಮಾನ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. ನಾಲ್ಕೂ ಕಡೆಯಲ್ಲಿ ಕೇಳುವಂತಹವರು, ನೆನಪು ಮಾಡುವಂತಹ ಸರ್ವಮಕ್ಕಳಿಗೂ ಸಹ ಬಹಳ-ಬಹಳ-ಬಹಳ ಹೃದಯಪೂರ್ವಕ ಆಶೀರ್ವಾದದೊಂದಿಗೆ ನೆನಪು, ಪ್ರೀತಿ ಹಾಗೂ ಸರ್ವರಿಗೂ ನಮಸ್ತೆ.

ವರದಾನ:
ಸಾಕಾರ ತಂದೆಯನ್ನು ಫಾಲೋ ಮಾಡಿ ನಂಬರ್ಒನ್ ತೆಗೆದುಕೊಳ್ಳುವಂತಹ ಸಂಪೂರ್ಣ ಫರಿಶ್ತಾ ಭವ

ನಂಬರ್ಒನ್ ಬರುವ ಸಹಜ ಸಾಧನವಾಗಿದೆ -ಯಾರು ನಂಬರ್ಒನ್ ಬ್ರಹ್ಮಾ ತಂದೆಯಾಗಿದ್ದಾರೆ, ಅವರೊಬ್ಬರನ್ನೇ ನೋಡಿರಿ. ಅನೇಕರನ್ನು ನೋಡುವ ಬದಲಾಗಿ ಒಬ್ಬರನ್ನು ನೋಡಿ ಮತ್ತು ಒಬ್ಬರನ್ನು ಫಾಲೋ ಮಾಡಿ. ನಾವೇ ಫರಿಶ್ತೆಗಳು ಎನ್ನುವ ಮಂತ್ರ ಪಕ್ಕಾ ಮಾಡಿಕೊಳ್ಳಿ ಆಗ ಅಂತರ ಅಳಿಸಿ ಹೋಗುವುದು, ಸೈಯನ್ಸ್ (ವಿಜ್ಞಾನ)ನ ಯಂತ್ರ ತಮ್ಮ ಕೆಲಸ ಮಾಡುವುದು ಆರಂಭ ಮಾಡುವುದು ಮತ್ತು ನೀವು ಸಂಪೂರ್ಣ ಫರಿಶ್ತೆ ದೇವತೆಯಾಗಿ ಹೊಸ ಪ್ರಪಂಚದಲ್ಲಿ ಅವತರಿತವಾಗುತ್ತಾರೆ. ಸಂಪೂರ್ಣ ಫರಿಶ್ತೆಯಾಗಿ ಅರ್ಥಾತ್ ಸಾಕಾರ ತಂದೆಯನ್ನು ಫಾಲೋ ಮಾಡುವುದು.

ಸ್ಲೋಗನ್:
ಮಾನ(ಮರ್ಯಾದೆಯ)ದ ತ್ಯಾಗದಲ್ಲಿ ಸರ್ವರ ಮಾನನೀಯರಾಗುವುದರ ಭಾಗ್ಯ ಸಮಾವೇಶವಾಗಿದೆ.

ತಮ್ಮ ಶಕ್ತಿಶಾಲಿ ಮನಸ್ಸಾ ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ

ಹೇಗೆ ಬಾಪ್ದಾದಾರವರಿಗೆ ದಯೆ ಬರುತ್ತದೆ, ಹಾಗೆಯೇ ನೀವು ಮಕ್ಕಳಿಗೂ ಸಹ ಮಾಸ್ಟರ್ ದಯಾಹೃದಯಿಗಳಾಗಿ ಮನಸ್ಸಾ ತಮ್ಮ ವೃತ್ತಿಯಿಂದ ವಾಯುಮಂಡಲದ ಮೂಲಕ ಆತ್ಮಗಳಿಗೆ ತಂದೆಯ ಮೂಲಕ ಸಿಕ್ಕಿರುವ ಶಕ್ತಿ ಕೊಡಿ. ಯಾವಾಗ ಸ್ವಲ್ಪ ಸಮಯದಲ್ಲಿ ಇಡೀ ವಿಶ್ವದ ಸೇವೆ ಸಂಪನ್ನ ಮಾಡಬೇಕು, ತತ್ವಗಳ ಸಹಿತ ಎಲ್ಲರಿಗೆ ಪಾವನರನ್ನಾಗಿ ಮಾಡಬೇಕೆಂದರೆ ತೀವ್ರಗತಿಯ ಸೇವೆಯನ್ನು ಮಾಡಿ.