12.03.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯು ಈಗ ನಿಮ್ಮ ಪಾಲನೆಯನ್ನು ಮಾಡುತ್ತಿದ್ದಾರೆ, ಓದಿಸುತ್ತಿದ್ದಾರೆ, ಮನೆಯಲ್ಲಿಯೇ ಕುಳಿತಿದ್ದಂತೆ ಸಲಹೆಯನ್ನು ನೀಡುತ್ತಿದ್ದಾರೆ ಅಂದಾಗ ಹೆಜ್ಜೆ-ಹೆಜ್ಜೆಯಲ್ಲಿ ಸಲಹೆಯನ್ನು ತೆಗೆದುಕೊಳ್ಳುತ್ತಾ ಇರಿ, ಆಗ ಶ್ರೇಷ್ಠ ಪದವಿ ಸಿಗುತ್ತದೆ”

ಪ್ರಶ್ನೆ:
ಶಿಕ್ಷೆಯಿಂದ ಬಿಡಿಸಿಕೊಳ್ಳಲು ಯಾವ ಪುರುಷಾರ್ಥವು ಬಹಳ ಸಮಯ ಬೇಕು?

ಉತ್ತರ:
ನಷ್ಟಮೋಹಿಗಳಾಗುವುದು. ಯಾರ ಮೇಲೂ ಸಹ ಮಮತ್ವವಿರಬಾರದು. ತನ್ನ ಹೃದಯದೊಂದಿಗೆ ಕೇಳಿಕೊಳ್ಳಬೇಕು - ನನಗೆ ಯಾರ ಮೇಲೂ ಮೋಹವು ಹೋಗಲಿಲ್ಲವೆ? ಯಾವುದೇ ಹಳೆಯ ಸಂಬಂಧವು ಅಂತ್ಯದಲ್ಲಿ ನೆನಪಿಗೆ ಬರಬಾರದು. ಯೋಗಬಲದಿಂದ ಎಲ್ಲಾ ಲೆಕ್ಕಾಚಾರವನ್ನು ಸಮಾಪ್ತಿ ಮಾಡಬೇಕು ಆಗಲೇ ಶಿಕ್ಷೆಯಿಲ್ಲದೆ ಶ್ರೇಷ್ಠ ಪದವಿಯು ಸಿಗುತ್ತದೆ.

ಓಂ ಶಾಂತಿ.
ಈಗ ನೀವು ಯಾರ ಸಮ್ಮುಖದಲ್ಲಿ ಕುಳಿತಿದ್ದೀರಿ? ಬಾಪ್ದಾದಾರವರ ಸಮ್ಮುಖದಲ್ಲಿ. ತಂದೆಯೆಂದೂ ಹೇಳಬೇಕಾಗುತ್ತದೆ, ದಾದಾ ಎಂದೂ ಸಹ ಹೇಳಬೇಕು. ತಂದೆಯೂ ಸಹ ಈ ದಾದಾರವರ ಮೂಲಕ ತಮ್ಮ ಸಮ್ಮುಖದಲ್ಲಿ ಕುಳಿತಿದ್ದಾರೆ. ಹೊರಗಡೆ ನೀವು ಇರುತ್ತೀರಿ. ಅಲ್ಲಿ ತಂದೆಯ ನೆನಪನ್ನು ಮಾಡಬೇಕಾಗುತ್ತದೆ. ಪತ್ರವನ್ನೂ ಬರೆಯಬೇಕಾಗುತ್ತದೆ. ಇಲ್ಲಿ ನೀವು ಸಮ್ಮುಖದಲ್ಲಿದ್ದೀರಿ. ಯಾರೊಂದಿಗೆ ಮಾತನಾಡುತ್ತೀರಿ? ಬಾಪ್ದಾದಾರವರ ಜೊತೆ. ಇವರು ಶ್ರೇಷ್ಠಾತಿಶ್ರೇಷ್ಠ ಅಥಾರಿಟಿಯಾಗಿದ್ದಾರೆ. ಬ್ರಹ್ಮಾರವರು ಸಾಕಾರಿ, ಶಿವತಂದೆ ನಿರಾಕಾರಿಯಾಗಿದ್ದಾರೆ, ಶ್ರೇಷ್ಠಾತಿಶ್ರೇಷ್ಠ ಅಥಾರಿಟಿ ಎಂಬುದನ್ನು ನೀವೀಗ ತಿಳಿದಿದ್ದೀರಿ. ತಂದೆಯೊಂದಿಗೆ ಹೇಗೆ ಮಿಲನವಾಗುತ್ತದೆ! ಬೇಹದ್ದಿನ ತಂದೆಯು ಯಾರನ್ನು ಪತಿತ-ಪಾವನನೆಂದು ಹೇಳಿ ಕರೆಯಲಾಗುತ್ತದೆ ಈಗ ಪ್ರತ್ಯಕ್ಷದಲ್ಲಿ ನೀವು ಅವರ ಸಮ್ಮುಖದಲ್ಲಿ ಕುಳಿತಿದ್ದೀರಿ. ತಂದೆಯು ಮಕ್ಕಳ ಪಾಲನೆಯನ್ನು ಮಾಡುತ್ತಿದ್ದಾರೆ, ಓದಿಸುತ್ತಿದ್ದಾರೆ. ಮನೆಯಲ್ಲಿ ಈ ರೀತಿ ನಡೆದುಕೊಳ್ಳಬೇಕೆಂದು ಮನೆಯಲ್ಲಿ ಕುಳಿತಿದ್ದರೂ ಸಹ ಮಕ್ಕಳಿಗೆ ಸಲಹೆ ಸಿಗುತ್ತಾ ಇರುತ್ತದೆ. ಈಗ ತಂದೆಯ ಶ್ರೀಮತದಂತೆ ನಡೆದಿದ್ದೇ ಆದರೆ ಶ್ರೇಷ್ಠಾತಿ ಶ್ರೇಷ್ಠರಾಗುತ್ತೀರಿ. ಮಕ್ಕಳಿಗೆ ತಿಳಿದಿದೆ - ನಾವು ಶ್ರೇಷ್ಠಾತಿಶ್ರೇಷ್ಠ ತಂದೆಯ ಮತದಿಂದ ಶ್ರೇಷ್ಟಾತಿಶ್ರೇಷ್ಠ ಪದವಿಯನ್ನು ಪಡೆಯುತ್ತೇವೆ. ಮನುಷ್ಯ ಸೃಷ್ಟಿಯಲ್ಲಿ ಶ್ರೇಷ್ಠಾತಿಶ್ರೇಷ್ಠ ಪದವಿಯೂ ಈ ಲಕ್ಷ್ಮೀ-ನಾರಾಯಣರದಾಗಿದೆ. ಇವರು ಇದ್ದು ಹೋಗಿದ್ದಾರೆ, ಮನುಷ್ಯರು ಹೋಗಿ ಇಂತಹ ಶ್ರೇಷ್ಠರಿಗೆ ನಮಸ್ಕಾರವನ್ನು ಮಾಡುತ್ತಾರೆ. ಮುಖ್ಯಮಾತು ಪವಿತ್ರತೆಯದಾಗಿದೆ, ಮನುಷ್ಯರಂತೂ ಮನುಷ್ಯರೇ ಆದರೆ ಎಲ್ಲಿ ಆ ವಿಶ್ವದ ಮಾಲೀಕರು, ಎಲ್ಲಿ ಈಗಿನ ಮನುಷ್ಯರು! ಈ ಭಾರತವು ಸಂಪೂರ್ಣ 5000 ವರ್ಷದ ಮೊದಲು ಸ್ವರ್ಗವಾಗಿತ್ತು. ನಾವೇ ವಿಶ್ವದ ಮಾಲೀಕರಾಗಿದ್ದೆವು ಎಂಬುದು ನಿಮ್ಮ ಬುದ್ಧಿಯಲ್ಲಿದೆ, ಮತ್ತ್ಯಾರದೇ ಬುದ್ಧಿಯಲ್ಲಿ ಇದು ಇಲ್ಲ. ಇವರಿಗೂ (ಬ್ರಹ್ಮಾ) ಮೊದಲು ತಿಳಿದಿತ್ತೇನು! ಸಂಪೂರ್ಣ ಘೋರ ಅಂಧಕಾರದಲ್ಲಿದ್ದರು. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ ಹೇಗಾಗುತ್ತಾರೆ? ಎಂಬುದು ಈಗ ತಂದೆಯು ಬಂದು ತಿಳಿಸಿದ್ದಾರೆ. ಇದು ಬಹಳ ಗುಹ್ಯ, ರಮಣೀಕ ಮಾತಾಗಿದೆ. ಮತ್ತೆ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ತಂದೆಯ ವಿನಃ ಈ ಜ್ಞಾನವನ್ನು ಯಾರೂ ಓದಿಸಲು ಸಾಧ್ಯವಿಲ್ಲ. ನಿರಾಕಾರ ತಂದೆಯು ಬಂದು ಓದಿಸುತ್ತಾರೆ. ಕೃಷ್ಣ ಭಗವಾನುವಾಚವಲ್ಲ. ನಾನು ನಿಮಗೆ ಓದಿಸಿ ಸುಖಿಗಳನ್ನಾಗಿ ಮಾಡುತ್ತೇನೆ ಎಂದು ತಂದೆಯು ಹೇಳುತ್ತಾರೆ ನಂತರ ನಾನು ನನ್ನ ನಿರ್ವಾಣಧಾಮದಲ್ಲಿ ಹೋಗಿಬಿಡುತ್ತೇನೆ. ಈಗ ನೀವು ಮಕ್ಕಳು ಸತೋಪ್ರಧಾನರಾಗುತ್ತಿದ್ದೀರಿ. ಇದರಲ್ಲಿ ಯಾವುದೇ ಖರ್ಚಿಲ್ಲ, ಕೇವಲ ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕು. ಯಾವುದೇ ಖರ್ಚಿಲ್ಲದೆ 21 ಜನ್ಮಕ್ಕಾಗಿ ನೀವು ವಿಶ್ವದ ಮಾಲೀಕರಾಗುತ್ತೀರಿ. ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಬಿಡಿಗಾಸನ್ನು ಕಳುಹಿಸುತ್ತಾರೆ. ಕಲ್ಪದ ಮೊದಲು ಯಾರೆಷ್ಟು ಖಜಾನೆಯಲ್ಲಿ ಹಾಕಿದ್ದಾರೆ, ಅಷ್ಟೇ ಈಗಲೂ ಹಾಕುತ್ತಾರೆ. ಹೆಚ್ಚೂ ಇಲ್ಲ, ಕಡಿಮೆ ಹಾಕಲೂ ಸಾಧ್ಯವಿಲ್ಲ. ಇದು ಬುದ್ಧಿಯಲ್ಲಿ ಜ್ಞಾನವಿದೆ ಆದ್ದರಿಂದ ಚಿಂತೆಯ ಯಾವುದೇ ಮಾತೂ ಇರುವುದಿಲ್ಲ. ಯಾವುದೇ ಚಿಂತೆಯಿಲ್ಲದೆ ನಾವು ನಮ್ಮ ಗುಪ್ತರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆನ್ನುವುದು ಬುದ್ಧಿಯಲ್ಲಿ ಸ್ಮರಣೆ ಮಾಡಬೇಕು. ನೀವು ಮಕ್ಕಳು ಬಹಳ ಖುಷಿಯಲ್ಲಿರಬೇಕು ಮತ್ತು ನಷ್ಟಮೋಹಿಗಳೂ ಸಹ ಆಗಬೇಕು. ಇಲ್ಲಿ ನಷ್ಟಮೋಹಿ ಆಗುವುದರಿಂದ ನಂತರ ನೀವು ಅಲ್ಲಿ ಮೋಹಜೀತ ರಾಜ-ರಾಣಿಯರಾಗುತ್ತೀರಿ. ನಿಮಗೆ ತಿಳಿದಿದೆ ಹಳೆಯ ಪ್ರಪಂಚವು ಈಗ ಸಮಾಪ್ತಿಯಾಗಲಿದೆ. ಹಿಂತಿರುಗಿ ಹೋಗಬೇಕಾಗಿದೆ ಅಂದಮೇಲೆ ಇದರಲ್ಲಿ ಮಮತ್ವವನ್ನು ಏಕೆ ಇಡಬೇಕು. ಯಾರಾದರೂ ರೋಗಗ್ರಸ್ಥರಾದರೆ ಈ ಕೇಸ್ ಭರವಸೆಯಿಲ್ಲವೆಂದು ವೈದ್ಯರು ಹೇಳಿಬಿಡುತ್ತಾರೆ. ಅವರೊಂದಿಗೆ ಮಮತ್ವವು ಹೊರಟುಹೋಗುತ್ತದೆ. ಆತ್ಮವು ಒಂದು ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ತೆಗೆದುಕೊಳ್ಳುತ್ತದೆ ಎಂಬುದು ತಿಳಿದಿದೆ. ಆತ್ಮವಂತೂ ಅವಿನಾಶಿಯಾಗಿದೆ. ಆತ್ಮವು ಹೊರಟುಹೋಯಿತು, ಶರೀರವು ಸಮಾಪ್ತಿಯಾಯಿತು, ಮತ್ತು ಅದನ್ನು ನೆನಪು ಮಾಡುವುದರಿಂದ ಏನು ಪ್ರಯೋಜನ! ಈಗ ತಂದೆಯು ಹೇಳುತ್ತಾರೆ - ನೀವು ನಷ್ಟಮೋಹಿಗಳಾಗಿ. ತನ್ನ ಹೃದಯದೊಂದಿಗೆ ಕೇಳಿಕೊಳ್ಳಬೇಕು - ನನಗೆ ಯಾರೊಂದಿಗೂ ಮೋಹವಿಲ್ಲವೆ? ಇಲ್ಲವೆಂದರೆ ಕೊನೆಯಲ್ಲಿ ಅವಶ್ಯವಾಗಿ ಅವರ ನೆನಪು ಬರುತ್ತದೆ. ನಷ್ಟಮೋಹಿಯಾಗಿದ್ದೇ ಆದರೆ ಈ ಪದವಿಯನ್ನು ಪಡೆಯುತ್ತೀರಿ. ಸ್ವರ್ಗದಲ್ಲಂತೂ ಎಲ್ಲರೂ ಬರುತ್ತಾರೆ, ಇದೇನೂ ದೊಡ್ಡ ಮಾತಲ್ಲ. ಶಿಕ್ಷೆಯನ್ನು ಭೋಗಿಸದೆ ಶ್ರೇಷ್ಠ ಪದವಿಯನ್ನು ಪಡೆಯುವುದು ದೊಡ್ಡ ಮಾತಾಗಿದೆ. ಯೋಗಬಲದಿಂದ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿದರೆ ಶಿಕ್ಷೆಯನ್ನು ಭೋಗಿಸುವುದಿಲ್ಲ. ಹಳೆಯ ಸಂಬಂಧಿಗಳೂ ಸಹ ನೆನಪಿಗೆ ಬರಬಾರದು. ಈಗ ನಮ್ಮದು ಬ್ರಾಹ್ಮಣರೊಂದಿಗೆ ಸಂಬಂಧವಿದೆ ನಂತರ ದೇವತೆಗಳೊಂದಿಗೆ ಸಂಬಂಧವಿರುತ್ತದೆ. ಈಗಿನ ಸಂಬಂಧವು ಎಲ್ಲದಕ್ಕಿಂತ ಶ್ರೇಷ್ಠ ಸಂಬಂಧವಾಗಿದೆ.

ಈಗ ನೀವು ಜ್ಞಾನಸಾಗರ ತಂದೆಗೆ ಮಕ್ಕಳಾಗಿದ್ದೀರಿ, ಎಲ್ಲದರ ಜ್ಞಾನವು ಬುದ್ಧಿಯಲ್ಲಿದೆ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ? ಎಂಬುದು ಮೊದಲು ತಿಳಿದಿತ್ತೇನು? ಈಗ ತಂದೆಯು ತಿಳಿಸಿದ್ದಾರೆ - ತಂದೆಯಿಂದ ಆಸ್ತಿಯು ಸಿಗುತ್ತದೆ ಎಂದು, ಆದ್ದರಿಂದಲೇ ತಂದೆಯ ಜೊತೆ ಪ್ರೀತಿಯಿದೆಯಲ್ಲವೆ. ತಂದೆಯ ಮೂಲಕ ಸ್ವರ್ಗದ ರಾಜ್ಯಭಾಗ್ಯವು ಸಿಗುತ್ತದೆ. ಅವರಿಗೆ ಈ ರಥವು ನಿಗಧಿಯಾಗಿದೆ. ಭಾರತದಲ್ಲಿಯೇ ಭಗೀರಥನ ಗಾಯನವಿದೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ. ನೀವು ಮಕ್ಕಳ ಬುದ್ಧಿಯಲ್ಲಿ ಈಗ 84 ಜನ್ಮಗಳ ಏಣಿಯ ಜ್ಞಾನವಿದೆ, ನೀವು ತಿಳಿದುಕೊಂಡಿದ್ದೀರಿ - ಇದು 84 ಜನ್ಮಗಳ ಚಕ್ರವನ್ನು ನಾವು ಸುತ್ತಲೇಬೇಕಾಗಿದೆ. 84 ಜನ್ಮಗಳ ಚಕ್ರದಿಂದ ಬಿಡುಗಡೆಯಾಗಲೂ ಸಾಧ್ಯವಿಲ್ಲ. ಏಣಿಯನ್ನು ಇಳಿಯುವುದರಲ್ಲಿ ಬಹಳ ಸಮಯ ಹಿಡಿಸುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಏರುವುದರಲ್ಲಿ ಕೇವಲ ಈ ಅಂತಿಮ ಜನ್ಮವಷ್ಟೇ ಹಿಡಿಸುತ್ತದೆ ಆದ್ದರಿಂದ ನಿಮ್ಮನ್ನು ತ್ರಿಲೋಕಿನಾಥರೆಂದೂ ಕರೆಯಲಾಗುತ್ತದೆ, ತ್ರಿಕಾಲದರ್ಶಿಗಳೂ ಆಗುತ್ತೀರಿ. ನಾವು ತ್ರಿಲೋಕಿನಾಥರು ಆಗುವವರಿದ್ದೇವೆ ಎಂಬುದು ಮೊದಲು ನಿಮಗೆ ತಿಳಿದಿತ್ತೇನು? ತಂದೆಯು ಈಗ ಸಿಕ್ಕಿದ್ದಾರೆ, ಶಿಕ್ಷಣವನ್ನು ನೀಡುತ್ತಿದ್ದಾರೆ ಆದ್ದರಿಂದ ನೀವು ತಿಳಿದುಕೊಳ್ಳುತ್ತೀರಿ. ತಂದೆಯ ಬಳಿ ಯಾರೇ ಬರುತ್ತಾರೆಂದರೆ ತಂದೆಯು ಕೇಳುತ್ತಾರೆ - ಮೊದಲು ಈ ಡ್ರೆಸ್ಸಿನಲ್ಲಿ ಇದೇ ಮನೆಯಲ್ಲಿ ಎಂದಾದರೂ ಮಿಲನ ಮಾಡಿದ್ದೀರೇ? ಹೌದು ಬಾಬಾ, ಕಲ್ಪ-ಕಲ್ಪವೂ ಮಿಲನ ಮಾಡುತ್ತೇವೆಂದು ಹೇಳುತ್ತೀರಿ. ಇದರಿಂದ ಬ್ರಹ್ಮಾಕುಮಾರಿಯು ಸರಿಯಾಗಿ ತಿಳಿಸಿಕೊಟ್ಟಿದ್ದಾರೆ ಎಂಬುದು ಅರ್ಥವಾಗುತ್ತದೆ. ನೀವು ಮಕ್ಕಳು ಸ್ವರ್ಗದ ವೃಕ್ಷವನ್ನು ಎದುರಿನಲ್ಲಿ ನೋಡುತ್ತಿದ್ದೀರಿ. ಸಮೀಪವಿದೆಯಲ್ಲವೆ. ಮನುಷ್ಯರು ತಂದೆಗೆ ನಾಮ-ರೂಪದಿಂದ ಭಿನ್ನ ಎಂದು ಹೇಳುತ್ತಾರೆ ಮತ್ತೆ ಮಕ್ಕಳು ಎಲ್ಲಿಂದ ಬರುತ್ತಾರೆ! ಅವರೂ ಸಹ ನಾಮ-ರೂಪದಿಂದ ಭಿನ್ನರಾಗಬೇಕು! ಏನೆಲ್ಲಾ ಅಕ್ಷರವನ್ನು ಹೇಳುತ್ತಾರೋ ಇದು ಸಂಪೂರ್ಣ ತಪ್ಪಾಗಿದೆ. ಯಾರು ಕಲ್ಪದ ಮೊದಲು ತಿಳಿದಿದ್ದರೋ ಅವರ ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ಪ್ರದರ್ಶನಿಯಲ್ಲಿ ನೋಡಿ, ಹೇಗ್ಹೇಗೆ ಬರುತ್ತಾರೆ! ಕೆಲವರು ಹೇಳಿಕೆ-ಕೇಳಿಕೆಯ ಮಾತಿನ ಮೇಲೆ ಇದೆಲ್ಲವೂ ಕಲ್ಪನೆಯಾಗಿದೆ ಎಂದು ಬರೆಯುತ್ತಾರೆ ಅಂದಾಗ ಅವರೆಲ್ಲರೂ ನಮ್ಮ ಕುಲದವರಲ್ಲವೆಂದು ತಿಳಿದುಕೊಳ್ಳಲಾಗುತ್ತದೆ. ಅನೇಕ ಪ್ರಕಾರದ ಮನುಷ್ಯರಿದ್ದಾರೆ, ನಿಮ್ಮ ಬುದ್ಧಿಯಲ್ಲಿ ಇಡೀ ವೃಕ್ಷ, ಡ್ರಾಮಾ, 84ರ ಚಕ್ರವು ಬಂದುಬಿಟ್ಟಿದೆ. ಈಗ ಪುರುಷಾರ್ಥವನ್ನು ಮಾಡಬೇಕು. ಅದೂ ಸಹ ಡ್ರಾಮಾನುಸಾರವೇ ಆಗುತ್ತದೆ. ಡ್ರಾಮಾದಲ್ಲಿ ನೊಂದಣಿಯಾಗಿದೆ. ಡ್ರಾಮಾದಲ್ಲಿ ಪುರುಷಾರ್ಥ ಮಾಡುವಂತಿದ್ದರೆ ಮಾಡುತ್ತೇನೆ - ಈ ರೀತಿ ಹೇಳುವುದೂ ಸಹ ತಪ್ಪಾಗಿದೆ. ಡ್ರಾಮಾವನ್ನು ಪೂರ್ಣವಾಗಿ ತಿಳಿದುಕೊಂಡಿಲ್ಲ. ಅವರನ್ನು ನಾಸ್ತಿಕರೆಂದು ಕರೆಯಲಾಗುತ್ತದೆ. ಅವರು ತಂದೆಯೊಂದಿಗೆ ಪ್ರೀತಿಯನ್ನಿಡಲು ಸಾಧ್ಯವಿಲ್ಲ. ಡ್ರಾಮಾದ ರಹಸ್ಯವನ್ನು ಉಲ್ಟಾ ತಿಳಿದುಕೊಳ್ಳುವುದರಿಂದ ಬಿದ್ದುಹೋಗುತ್ತಾರೆ. ಆಗ ಇವರ ಅದೃಷ್ಟದಲ್ಲಿ ಇಲ್ಲವೆಂದು ತಿಳಿದುಕೊಳ್ಳಲಾಗುತ್ತದೆ. ಅನೇಕ ಪ್ರಕಾರದ ವಿಘ್ನಗಳು ಬರುತ್ತದೆ, ಅದರ ಚಿಂತೆಯನ್ನು ಮಾಡಬಾರದು. ಯಾವುದು ಒಳ್ಳೆಯ ಮಾತಿದೆ ಅದನ್ನು ನಿಮಗೆ ತಿಳಿಸಲಾಗುತ್ತದೆ ಅದನ್ನು ಕೇಳಿ ಎಂದು ತಂದೆಯು ಹೇಳುತ್ತಾರೆ. ತಂದೆಯನ್ನು ನೆನಪು ಮಾಡುವುದರಿಂದ ಬಹಳ ಖುಷಿಯಿರುತ್ತದೆ. ಈಗ 84 ಜನ್ಮಗಳ ಚಕ್ರವು ಸಮಾಪ್ತಿಯಾಗಲಿದೆ, ಮನೆಗೆ ಹೋಗಬೇಕಾಗಿದೆ ಎಂಬುದು ಬುದ್ಧಿಯಲ್ಲಿದೆ. ಈ ರೀತಿಯಾಗಿ ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಬೇಕು. ನೀವು ಪತಿತರು ಹೋಗಲು ಸಾಧ್ಯವಿಲ್ಲ. ಮೊದಲು ಅವಶ್ಯವಾಗಿ ಪ್ರಿಯತಮ ಬೇಕು ನಂತರ ದಿಬ್ಬಣ. ಭೋಲಾನಾಥನ ಮೆರವಣೆಗೆ ಗಾಯನ ಮಾಡಲ್ಪಟ್ಟಿದೆ. ಎಲ್ಲರೂ ನಂಬರ್ವಾರ್ ಆಗಿ ಹೋಗಲೇಬೇಕು. ಇಷ್ಟೊಂದು ಆತ್ಮಗಳ ಗುಂಪು ಹೇಗೆ ನಂಬರ್ವಾರ್ ಆಗಿ ಹೋಗುತ್ತಾರೆ! ಮನುಷ್ಯರು ಪೃಥ್ವಿಯ ಮೇಲೆ ಎಷ್ಟೊಂದು ಜಾಗವನ್ನು ತೆಗೆದುಕೊಳ್ಳುತ್ತಾರೆ, ಎಷ್ಟೊಂದು ಪೀಠೋಪಕರಣ ಮುಂತಾದವು ಬೇಕಾಗುತ್ತದೆ. ಆತ್ಮವಾದರೂ ಬಿಂದುವಾಗಿದೆ, ಆತ್ಮನಿಗೆ ಏನು ಬೇಕು? ಏನೂ ಬೇಡ. ಆತ್ಮವು ಎಷ್ಟೊಂದು ಚಿಕ್ಕ ಜಾಗವನ್ನು ತೆಗೆದುಕೊಳ್ಳುತ್ತದೆ. ಈ ಸಾಕಾರಿವೃಕ್ಷ ಮತ್ತು ನಿರಾಕಾರಿ ವೃಕ್ಷದಲ್ಲಿ ಎಷ್ಟೊಂದು ವ್ಯತ್ಯಾಸವಿದೆ. ಅದು ಬಿಂದುವಿನ (ಪರಂಧಾಮದಲ್ಲಿ) ವೃಕ್ಷವಾಗಿದೆ, ಎಲ್ಲಾ ಮಾತನ್ನು ತಂದೆಯು ಬುದ್ಧಿಯಲ್ಲಿ ಕುಳ್ಳರಿಸುತ್ತಾರೆ. ನಿಮ್ಮ ವಿನಃ ಈ ಎಲ್ಲಾ ಮಾತನ್ನು ಪ್ರಪಂಚದವರ್ಯಾರೂ ಕೇಳಲು ಸಾಧ್ಯವಿಲ್ಲ, ತಂದೆಯೂ ಸಹ ತನ್ನ ಮನೆ ಮತ್ತು ರಾಜಧಾನಿಯ ನೆನಪನ್ನು ತರಿಸುತ್ತಾರೆ. ನೀವು ಮಕ್ಕಳು ರಚಯಿತನನ್ನು ತಿಳಿದುಕೊಳ್ಳುವುದರಿಂದ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ನೀವು ತ್ರಿಕಾಲದರ್ಶಿ ಆಸ್ತಿಕರಾಗಿದ್ದೀರಿ. ಪ್ರಪಂಚದಲ್ಲಿ ಯಾರೂ ಆಸ್ತಿಕರಿಲ್ಲ. ಅದು ಹದ್ದಿನ ವಿದ್ಯೆಯಾಗಿದೆ, ಇದು ಬೇಹದ್ದಿನ ವಿದ್ಯೆಯಾಗಿದೆ. ಅಲ್ಲಿ ಅನೇಕ ಶಿಕ್ಷಕರು ಓದಿಸುತ್ತಾರೆ, ಇಲ್ಲಂತೂ ಒಬ್ಬರೇ ಶಿಕ್ಷಕ, ಓದಿಸುವವರಾಗಿದ್ದಾರೆ. ಇದು ಅದ್ಭುತವಾಗಿದೆ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ ಹಾಗೂ ಸದ್ಗುರುವೂ ಸಹ ಆಗಿದ್ದಾರೆ. ಈ ಶಿಕ್ಷಕರು ಇಡೀ ವಿಶ್ವದವರಾಗಿದ್ದಾರೆ ಆದರೆ ಎಲ್ಲರೂ ಓದುವುದಿಲ್ಲ. ತಂದೆಯನ್ನು ಎಲ್ಲರೂ ತಿಳಿದುಕೊಂಡಿದ್ದೇ ಆದರೆ ಅನೇಕರು ತಂದೆಯನ್ನು ನೋಡಲು ಓಡಿಬರಬೇಕು. ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಆಡಂನಲ್ಲಿ ತಂದೆಯು ಬಂದಿದ್ದಾರೆ ಅಂದಾಗ ಒಮ್ಮೆಲೇ ಓಡಿಬರಬೇಕು. ಯುದ್ಧ ಪ್ರಾರಂಭವಾದಾಗ ತಂದೆಯ ಪ್ರತ್ಯಕ್ಷತೆಯಾಗುತ್ತದೆ. ನಂತರ ಯಾರೂ ಸಹ ಬರಲು ಸಾಧ್ಯವಿಲ್ಲ. ಈಗ ಅನೇಕ ಧರ್ಮಗಳ ವಿನಾಶವೂ ಸಹ ಆಗಲಿದೆ. ಮೊಟ್ಟಮೊದಲು ಒಂದೇ ಭಾರತವಿತ್ತು ಬೇರೆ ಯಾವುದೇ ಖಂಡವಿರಲಿಲ್ಲ. ಈಗ ನೀವು ಮಕ್ಕಳ ಬುದ್ಧಿಯಲ್ಲಿ ಭಕ್ತಿಮಾರ್ಗದ ಮಾತೂ ಸಹ ಇದೆ. ಬುದ್ಧಿಯಿಂದ ಮರೆತು ಹೋಗುತ್ತದೆಯೇನು! ಆದರೆ ನೆನಪಾಗುತ್ತದೆ - ಇದು ಜ್ಞಾನವಾಗಿದೆ, ಭಕ್ತಿಯ ಪಾತ್ರವು ಪೂರ್ಣವಾಯಿತು, ಈಗ ನಾವು ಹಿಂತಿರುಗಿ ಹೋಗಬೇಕಾಗಿದೆ. ಈ ಪ್ರಪಂಚದಲ್ಲಿರಬಾರದು. ಮನೆಗೆ ಹೋಗಲು ಖುಷಿಯಿರಬೇಕಲ್ಲವೆ. ನಿಮ್ಮದು ಈಗ ವಾನಪ್ರಸ್ಥ ಸ್ಥಿತಿಯಾಗಿದೆ ಎಂಬುದನ್ನು ಮಕ್ಕಳಿಗೆ ತಿಳಿಸಲಾಗಿದೆ. ನೀವು ಎರಡು ಪೈಸೆಯನ್ನು ಈ ರಾಜಧಾನಿಯನ್ನು ಸ್ಥಾಪನೆ ಮಾಡುವುದರಲ್ಲಿ ತೊಡಗಿಸುತ್ತೀರಿ ಅದೂ ಸಹ ಕಲ್ಪದಹಿಂದಿನಂತೆ ಯಾರು ಮಾಡುತ್ತೀರೋ ಅವರು ಪಡೆಯುತ್ತೀರಿ. ನೀವೂ ಸಹ ಕಲ್ಪದ ಮೊದಲಿನವರಾಗಿದ್ದೀರಿ. ತಂದೆಯೇ, ತಾವೂ ಸಹ ಕಲ್ಪದ ಮೊದಲಿನವರಾಗಿದ್ದವರಾಗಿದ್ದೀರಿ ಎಂದು ಹೇಳುತ್ತೀರಿ. ನಾವೇ ಕಲ್ಪ-ಕಲ್ಪವೂ ತಂದೆಯಿಂದ ಓದುತ್ತೇವೆ. ಶ್ರೀಮತದಂತೆ ನಡೆದು ಶ್ರೇಷ್ಠರಾಗಬೇಕು. ಈ ಮಾತು ಮತ್ತ್ಯಾರದೇ ಬುದ್ಧಿಯಲ್ಲಿರುವುದಿಲ್ಲ. ಈಗ ನಮ್ಮ ರಾಜಧಾನಿಯು ಶ್ರೀಮತದ ಆಧಾರದ ಮೇಲೆ ಸ್ಥಾಪನೆಯಾಗುತ್ತಿದೆ ಎಂದು ಖುಷಿಯಿರಬೇಕು. ತಂದೆಯು ಕೇವಲ ನೀವು ಪವಿತ್ರರಾಗಿ ಎಂದು ಹೇಳುತ್ತಾರೆ. ನೀವು ಪವಿತ್ರರಾದರೆ ಇಡೀ ಪ್ರಪಂಚವು ಪಾವನವಾಗುತ್ತದೆ, ಎಲ್ಲರೂ ಹಿಂತಿರುಗಿ ಹೋಗಿಬಿಡುತ್ತಾರೆ. ಬಾಕಿ ಅನ್ಯಮಾತುಗಳಲ್ಲಿ ನಾವು ಏಕೆ ಚಿಂತೆ ಮಾಡಬೇಕು! ಯಾವ ರೀತಿ ಶಿಕ್ಷೆಯನ್ನು ಭೋಗಿಸುತ್ತೇವೆ, ಹೇಗಾಗುತ್ತದೆ, ಇದರಲ್ಲಿ ನಮ್ಮದೇನು ಹೋಗುತ್ತದೆ? ನಾವು ನಮ್ಮ ಚಿಂತನೆಯನ್ನು ಮಾಡಬೇಕು. ಅನ್ಯಧರ್ಮದ ಮಾತಿನಲ್ಲಿ ನಾವೇಕೆ ಹೋಗಬೇಕು. ನಾವು ಆದಿಸನಾತನ ದೇವಿ-ದೇವತಾಧರ್ಮದವರಾಗಿದ್ದೇವೆ, ವಾಸ್ತವದಲ್ಲಿ ಇದರ ಹೆಸರು ಭಾರತವೆಂದಾಗಿದೆ, ನಂತರ ಹಿಂದೂಸ್ಥಾನವೆಂದು ಹೆಸರನ್ನಿಟ್ಟುಬಿಟ್ಟಿದ್ದಾರೆ. ಹಿಂದೂ ಎನ್ನುವುದು ಯಾವುದೇ ಧರ್ಮವಲ್ಲ. ನಾವು ದೇವತಾ ಧರ್ಮದವರಾಗಿದ್ದೇವೆ ಎಂದು ಬರೆಯುತ್ತೇವೆ ಅವರು ಹಿಂದೂಗಳೆಂದು ಬರೆಯುತ್ತಾರೆ ಏಕೆಂದರೆ ದೇವಿ-ದೇವತಾಧರ್ಮವು ಯಾವಾಗ ಇತ್ತೆಂಬುದು ತಿಳಿದುಕೊಂಡೇ ಇಲ್ಲ. ಯಾರೂ ಸಹ ತಿಳಿದುಕೊಂಡಿಲ್ಲ, ಈಗ ಇಷ್ಟೆಲ್ಲಾ ಬಿ.ಕೆ.ಗಳಿದ್ದಾರೆ, ಇದು ಕುಟುಂಬವಾಯಿತಲ್ಲವೆ, ಮನೆಯಾಯಿತಲ್ಲವೆ! ಬ್ರಹ್ಮಾರವರು ಪ್ರಜಾಪಿತ, ಎಲ್ಲರ ಮುತ್ತಜ್ಜನಾಗಿದ್ದಾರೆ. ಮೊಟ್ಟಮೊದಲು ನೀವು ಬ್ರಾಹ್ಮಣರಾಗುತ್ತೀರಿ ನಂತರ ವರ್ಣಗಳಲ್ಲಿ ಬರುತ್ತೀರಿ.

ನಿಮ್ಮದು ಈ ಕಾಲೇಜ್ ಅಥವಾ ಯುನಿವರ್ಸಿಟಿಯೂ ಆಗಿದೆ, ಆಸ್ಪತ್ರೆಯೂ ಆಗಿದೆ. ಜ್ಞಾನಾಂಜನವನ್ನು ಸದ್ಗುರು ಕೊಟ್ಟರು, ಅಜ್ಞಾನದ ಅಂಧಕಾರ ವಿನಾಶವಾಯಿತು...... ಯೋಗಬಲದಿಂದ ನೀವು ಸದಾಕಾಲ ಆರೋಗ್ಯವಂತ, ಐಶ್ವರ್ಯವಂತರಾಗುತ್ತೀರಿ. ಪ್ರಾಕೃತಿಕ ಚಿಕಿತ್ಸೆಯನ್ನು ಮಾಡುತ್ತಾರಲ್ಲವೆ, ಈಗ ನಿಮ್ಮ ಆತ್ಮನ ಚಿಕಿತ್ಸೆಯಾಗುವುದರಿಂದ ನಂತರ ಶರೀರವೂ ಸಹ ಆರೋಗ್ಯವಾಗಿರುತ್ತದೆ. ಇದು ಆಧ್ಯಾತ್ಮಿಕ ಪ್ರಾಕೃತಿಕ ಚಿಕಿತ್ಸೆಯಾಗಿದೆ. ಆರೋಗ್ಯ, ಐಶ್ವರ್ಯ, ಸಂತೋಷವು 21 ಜನ್ಮದವರೆಗೆ ಸಿಗುತ್ತದೆ. ಮೇಲೆ ಆತ್ಮೀಯ ಪ್ರಾಕೃತಿಕ ಚಿಕಿತ್ಸೆಯೆಂದು ಬರೆಯಿರಿ. ಮನುಷ್ಯರನ್ನು ಪವಿತ್ರರನ್ನಾಗಿ ಮಾಡುವ ಯುಕ್ತಿಯನ್ನು ಬರೆಯುವುದರಲ್ಲಿ ಯಾವುದೇ ಅಭ್ಯಂತರವಿಲ್ಲ. ಆತ್ಮವೇ ಪತಿತವಾಗಿದೆ ಆದ್ದರಿಂದಲೇ ಕರೆಯುತ್ತದೆಯಲ್ಲವೆ. ಆತ್ಮವು ಮೊದಲು ಸತೋಪ್ರಧಾನ ಪವಿತ್ರವಾಗಿತ್ತು ನಂತರ ಅಪವಿತ್ರವಾಗಿದೆ ಈಗ ಪುನಃ ಹೇಗೆ ಪವಿತ್ರವಾಗುವುದು? ಭಗವಾನುವಾಚ - ಮನ್ಮನಾಭವ. ನನ್ನನ್ನು ನೆನಪು ಮಾಡಿದ್ದೇ ಆದರೆ ನಾನು ಗ್ಯಾರಂಟಿ ಕೊಡುತ್ತೇನೆ ನೀವು ಪವಿತ್ರರಾಗಿಬಿಡುತ್ತೀರಿ. ತಂದೆಯು ಎಷ್ಟೊಂದು ಯುಕ್ತಿಗಳನ್ನು ತಿಳಿಸಿಕೊಡುತ್ತಾರೆ. ಆದರೆ ಯಾರೂ ಸಹ ಈ ರೀತಿ ಬೋರ್ಡನ್ನು ಹಾಕಿಲ್ಲ. ಮುಖ್ಯಚಿತ್ರವನ್ನಿಟ್ಟಿದ್ದೀರಿ. ಒಳಗಡೆ ಯಾರೇ ಬರುತ್ತಾರೆಂದರೆ ಅವರಿಗೆ ಹೇಳಿ - ನೀವು ಆತ್ಮರು ಪರಮಧಾಮದಲ್ಲಿರುವವರಾಗಿದ್ದೀರಿ. ಇಲ್ಲಿ ಈ ಕರ್ಮೇಂದ್ರಿಯಗಳು ಪಾತ್ರವನ್ನಭಿನಯಿಸಲು ಸಿಕ್ಕಿವೆ. ಈ ಶರೀರವು ವಿನಾಶವಾಗುತ್ತದೆಯಲ್ಲವೆ. ತಂದೆಯನ್ನು ನೆನಪು ಮಾಡಿದ್ದೇ ಆದರೆ ವಿಕರ್ಮವು ವಿನಾಶವಾಗುತ್ತದೆ. ಈಗ ನಿಮ್ಮ ಆತ್ಮವು ಅಪವಿತ್ರವಾಗಿದೆ ನಂತರ ಪವಿತ್ರವಾಗಿದ್ದೇ ಆದರೆ ಮನೆಗೆ ಹೊರಟುಹೋಗಿಬಿಡುತ್ತದೆ. ತಿಳಿಸಿಕೊಡುವುದು ಬಹಳ ಸಹಜವಾಗಿದೆ. ಯಾರು ಕಲ್ಪದ ಹಿಂದಿನವರಾಗಿದ್ದೀರಿ ಅವರೇ ಬಂದು ಹೂವಾಗುತ್ತೀರಿ. ಇದರಲ್ಲಿ ಭಯಪಡುವ ಯಾವುದೇ ಮಾತಿಲ್ಲ. ನೀವು ಒಳ್ಳೆಯ ಮಾತನ್ನೇ ತಿಳಿಯುತ್ತೀರಿ. ಆ ಗುರುಜನರು ಮಂತ್ರವನ್ನು ಕೊಡುತ್ತಾರೆ. ಶಿವತಂದೆಯೂ ಸಹ ಮನ್ಮನಾಭವದ ಮಂತ್ರವನ್ನು ಕೊಟ್ಟು ರಚಯಿತ ಮತ್ತು ರಚನೆಯ ರಹಸ್ಯವನ್ನು ತಿಳಿಸುತ್ತಾರೆ. ಗೃಹಸ್ಥವ್ಯವಹಾರದಲ್ಲಿರುತ್ತಾ ಕೇವಲ ತಂದೆಯನ್ನು ನೆನಪು ಮಾಡಿ. ಅನ್ಯರಿಗೂ ಸಹ ಪರಿಚಯವನ್ನು ಕೊಡಿ. ಲೈಟ್ಹೌಸ್ ಆಗಿ.

ತಾವು ಮಕ್ಕಳಿಗೆ ದೇಹೀ ಅಭಿಮಾನಿಗಳಾಗುವ ಬಹಳ ಗುಪ್ತ ಪರಿಶ್ರಮಪಡಬೇಕು. ಹೇಗೆ ತಂದೆಯು ತಿಳಿದುಕೊಂಡಿದ್ದಾರೆ - ನಾನು ಆತ್ಮನಿಗೆ ಓದಿಸುತ್ತಾ ಇದ್ದೇನೆ, ಹಾಗೆಯೇ ನೀವು ಮಕ್ಕಳೂ ಸಹ ಆತ್ಮಾಭಿಮಾನಿಗಳಾಗುವ ಶ್ರಮಪಡಿ. ಬಾಯಿಂದ ಶಿವ-ಶಿವ ಎಂದು ಹೇಳಬೇಕಾಗಿಲ್ಲ. ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕು ಏಕೆಂದರೆ ಪಾಪದ ಹೊರೆಯು ಬಹಳ ಇದೆ. ನೆನಪಿನಿಂದಲೇ ಪಾವನರಾಗುತ್ತೀರಿ, ಕಲ್ಪದ ಮೊದಲೂ ಯಾರು ಎಷ್ಟು ಆಸ್ತಿಯನ್ನು ತೆಗೆದುಕೊಂಡಿದ್ದಾರೆಯೋ ಅವರೇ ಮತ್ತೆ-ಮತ್ತೆ ತೆಗೆದುಕೊಳ್ಳುತ್ತಾರೆ. ಸ್ವಲ್ಪವೂ ಹೆಚ್ಚು ಕಡಿಮೆಯಾಗಲು ಸಾಧ್ಯವಿಲ್ಲ. ದೇಹೀ ಅಭಿಮಾನಿಯಾಗಿ ತಂದೆಯನ್ನು ನೆನಪು ಮಾಡಿದ್ದೇ ಆದರೆ ನಂತರ ಮಾಯೆಯ ಪೆಟ್ಟು ತಿನ್ನಲು ಸಾಧ್ಯವಿಲ್ಲ ಎಂಬುದು ಮುಖ್ಯಮಾತಾಗಿದೆ. ದೇಹಾಭಿಮಾನದಲ್ಲಿ ಬರುವುದರಿಂದ ಒಂದಲ್ಲ ಒಂದು ವಿಕರ್ಮವಾಗುತ್ತದೆ. ನಂತರ ನೂರುಪಟ್ಟು ಪಾಪವಾಗಿಬಿಡುತ್ತದೆ. ಏಣಿಯನ್ನು ಇಳಿಯುವುದರಲ್ಲಿ 84 ಜನ್ಮಗಳು ಹಿಡಿಸಿದೆ. ನಂತರ ಏರುವಕಲೆ ಒಂದೇ ಜನ್ಮದಲ್ಲಾಗುತ್ತದೆ. ತಂದೆಯು ಬರುತ್ತಾರೆಂದರೆ ಲಿಫ್ಟ್ನದೂ ಸಹ ಸಂಶೋಧನೆ ನಡೆಯುತ್ತದೆ. ಮೊದಲಂತೂ ಸೊಂಟಕ್ಕೆ ಕೈಹಾಕಿ ಮೆಟ್ಟಿಲು ಹತ್ತುತ್ತಿದ್ದರು. ಈಗ ಸಹಜವಾಗಿ ಲಿಫ್ಟ್ ಬಂದಿದೆ. ಇದೂ ಸಹ ಲಿಫ್ಟ್ ಆಗಿದೆ, ಒಂದು ಸೆಕೆಂಡಿನಲ್ಲಿ ಮುಕ್ತಿ-ಜೀವನ್ಮುಕ್ತಿಗೆ ಹೋಗುತ್ತಾರೆ. ಜೀವನಬಂಧನದಲ್ಲಿ ಬರುವುದರಲ್ಲಿ 5000 ವರ್ಷಗಳು, 84 ಜನ್ಮಗಳು ಹಿಡಿಸುತ್ತದೆ. ಜೀವನ್ಮುಕ್ತಿಯಲ್ಲಿ ಹೋಗಲು ಒಂದು ಜನ್ಮವೇ ಹಿಡಿಸುತ್ತದೆ. ಎಷ್ಟೊಂದು ಸಹಜವಾಗಿದೆ! ನಿಮ್ಮಲ್ಲಿಯೂ ಸಹ ಯಾರು ಹಿಂದೆ ಬರುತ್ತಾರೆಯೋ ಅವರೂ ಸಹ ತಕ್ಷಣ ಮೇಲೇರಿಬಿಡುತ್ತಾರೆ. ಕಳೆದುಹೋದ ವಸ್ತುವನ್ನು ಕೊಡಲು ತಂದೆಯು ಬಂದಿದ್ದಾರೆಂದು ತಿಳಿದಿದೆ, ಅವರ ಮತದಂತೆ ಅವಶ್ಯವಾಗಿ ನಡೆಯಬೇಕು. ಒಳ್ಳೆಯದು.

ಧಾರಣೆಗಾಗಿ ಮುಖ್ಯಸಾರ-
1.ಯಾವುದೇ ಚಿಂತೆಯಿಲ್ಲದೆ ತಮ್ಮ ಗುಪ್ತರಾಜಧಾನಿಯನ್ನು ಶ್ರೀಮತದಂತೆ ಸ್ಥಾಪನೆ ಮಾಡಬೇಕು. ವಿಘ್ನಗಳನ್ನು ಲೆಕ್ಕಿಸಬಾರದು. ಕಲ್ಪದ ಮೊದಲು ಯಾರು ಸಹಾಯವನ್ನು ಮಾಡಿದ್ದಾರೆ ಅವರು ಈಗಲೂ ಸಹ ಅವಶ್ಯವಾಗಿ ಮಾಡುತ್ತಾರೆ ಎಂಬುದು ಬುದ್ಧಿಯಲ್ಲಿರಲಿ, ಯಾವುದೇ ಚಿಂತೆಯ ಮಾತಿಲ್ಲ.

2.ಈಗ ನಮ್ಮದು ವಾನಪ್ರಸ್ಥ ಸ್ಥಿತಿಯಾಗಿದೆ, ನಾವು ಹಿಂತಿರುಗಿ ಮನೆಗೆ ಹೋಗುತ್ತಾ ಇದ್ದೇವೆ ಎಂದು ಸದಾ ಖುಷಿಯಿರಲಿ. ಆತ್ಮಾಭಿಮಾನಿಯಾಗುವ ಬಹಳ ಗುಪ್ತ ಪರಿಶ್ರಮಪಡಬೇಕು, ಯಾವುದೇ ವಿಕರ್ಮವನ್ನು ಮಾಡಬಾರದು.

ವರದಾನ:
ಯವುದೇ ವಿಕರಾಳ ಸಮಸ್ಯೆಯನ್ನೂ ಸಹ ಶೀತಲವನ್ನಾಗಿ ಮಾಡುವಂತಹ ಸಂಪೂರ್ಣ ನಿಶ್ಚಯಬುದ್ಧಿ ಭವ

ಹೇಗೆ ತಂದೆಯ ಮೇಲೆ ನಿಶ್ಚಯವಿದೆ ಅದೇರೀತಿ ಸ್ವಯಂನ ಮೇಲೆ ಹಾಗೂ ಡ್ರಾಮಾ ಮೇಲೂ ಸಹ ಸಂಪೂರ್ಣ ನಿಶ್ಚಯವಿರಲಿ. ಸ್ವಯಂನ ಮೇಲೆ ಒಂದುವೇಳೆ ಬಲಹೀನ ಸಂಕಲ್ಪ ಉತ್ಪನ್ನವಾದರೆ ಬಲಹೀನತೆಯ ಸಂಸ್ಕಾರವಾಗಿಬಿಡುತ್ತದೆ, ಇದರಿಂದ ವ್ಯರ್ಥಸಂಕಲ್ಪ ರೂಪಿ ಬಲಹೀನತೆಯ ಕೀಟಾಣುಗಳನ್ನು ನಿಮ್ಮೊಳಗೆ ಪ್ರವೇಶವಾಗಲು ಬಿಡಬೇಡಿ. ಜೊತೆ-ಜೊತೆಗೆ ಯವುದೇ ಡ್ರಾಮಾದ ಸೀನ್ ನೋಡುವಿರಿ, ಹಲ್-ಚಲ್ನ ಸೀನ್ನಲ್ಲಿಯೂ ಸಹ ಕಲ್ಯಾಣದ ಅನುಭವವಾಗಲಿ, ವಾತಾವರಣ ಅಲುಗಾಡುವಂತಹದೇ ಆಗಿರಲಿ, ಸಮಸ್ಯೆ ವಿಕರಾಳ ರೂಪದ್ದಾಗಿರಲಿ ಆದರೆ ಸದಾ ನಿಶ್ಚಯಬುದ್ಧಿ ವಿಜಯಿಗಳಾದರೆ ವಿಕರಾಳ ಸಮಸ್ಯೆಯೂ ಸಹ ಶೀತಲವಾಗಿಬಿಡುವುದು.

ಸ್ಲೋಗನ್:
ಯಾರಿಗೆ ತಂದೆ ಮತ್ತು ಸೇವೆಯ ಮೇಲೆ ಪ್ರೀತಿಯಿದೆ ಅವರಿಗೆ ಪರಿವಾರದ ಪ್ರೀತಿ ಸ್ವತಃವಾಗಿ ಸಿಗುತ್ತದೆ.

ಅವ್ಯಕ್ತ ಸೂಚನೆ - ಸತ್ಯ ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ

ಹೇಗೆ ಪರಮಾತ್ಮ ಒಬ್ಬರಾಗಿದ್ದಾರೆ ಇದು ಭಿನ್ನ-ಭಿನ್ನ ಧರ್ಮದವರ ಮಾನ್ಯತೆಯೂ ಸಹ ಆಗಿದೆ. ಇದೇ ರೀತಿ ಯಥಾರ್ಥ ಸತ್ಯ ಜ್ಞಾನ ಒಬ್ಬ ತಂದೆಯದ್ದೆ ಆಗಿದೆ ಅಥವಾ ಒಂದೇ ದಾರಿಯಾಗಿದೆ, ಈ ಶಬ್ದ ಯಾವಾಗ ಮೊಳಗುವುದು ಆಗ ಆತ್ಮಗಳಿಗೆ ಅನೇಕ ಕಡೆ ಅಲೆದಾಡುವುದು ಸಮಾಪ್ತಿಯಾಗುವುದು. ಈಗ ಇದನ್ನು ತಿಳಿಯುತ್ತಾರೆ- ಇದು ಸಹ ಒಂದು ಮಾರ್ಗವಾಗಿದೆ. ಈ ಸತ್ಯತೆಯ ಪರಿಚಯದ ಹಾಗೂ ಸತ್ಯ ಜ್ಞಾನದ ಅಲೆಯನ್ನು ಹರಡಿಸಿ ಆಗ ಪ್ರತ್ಯಕ್ಷತೆಯ ಬಾವುಟದ ಕೆಳಗಡೆ ಸರ್ವ ಆತ್ಮರು ಆಸರೆಯನ್ನು ತೆಗೆದುಕೊಳ್ಳುವರು.