12.04.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನಿಮ್ಮ ಈ ಬ್ರಾಹ್ಮಣ ಕುಲವು ಸಂಪೂರ್ಣ ಭಿನ್ನವಾಗಿದೆ, ನೀವು ಬ್ರಾಹ್ಮಣರೇ ಜ್ಞಾನಪೂರ್ಣರಾಗಿದ್ದೀರಿ, ನೀವು ಜ್ಞಾನ, ವಿಜ್ಞಾನ ಮತ್ತು ಅಜ್ಞಾನವನ್ನು ಅರಿತುಕೊಂಡಿದ್ದೀರಿ”

ಪ್ರಶ್ನೆ:
ಯಾವ ಸಹಜ ಪುರುಷಾರ್ಥದಿಂದ ನೀವು ಮಕ್ಕಳ ಮನಸ್ಸು ಎಲ್ಲಾ ಮಾತುಗಳಿಂದ ದೂರವಾಗುತ್ತಾ ಹೋಗುವುದು?

ಉತ್ತರ:
ಕೇವಲ ಆತ್ಮಿಕ ಸೇವೆಯಲ್ಲಿ ತೊಡಗಿರಿ, ಎಷ್ಟೆಷ್ಟು ಆತ್ಮಿಕ ಸೇವೆ ಮಾಡುತ್ತೀರೋ ಅಷ್ಟು ಎಲ್ಲಾ ಮಾತುಗಳಿಂದ ನಿಮ್ಮ ಬುದ್ಧಿಯು ಸ್ವತಃ ಅಲಿಪ್ತವಾಗುತ್ತಾ ಹೋಗುವುದು. ರಾಜ್ಯಪದವಿಯನ್ನು ಪಡೆಯುವ ಪುರುಷಾರ್ಥದಲ್ಲಿ ತೊಡಗುತ್ತೀರಿ ಆದರೆ ಆತ್ಮಿಕ ಸೇವೆಯ ಜೊತೆಜೊತೆಗೆ ಯಾರ ರಚನೆಯನ್ನು ರಚಿಸಿದ್ದೀರೋ ಅವರ ಸಂಭಾಲನೆಯನ್ನೂ ಮಾಡಬೇಕಾಗಿದೆ.

ಗೀತೆ:
ಯಾರು ತಂದೆಯ ಜೊತೆಯಿದ್ದಾರೆಯೋ ಅವರಿಗಾಗಿ ಜ್ಞಾನದ ಮಳೆ...............

ಓಂ ಶಾಂತಿ.
ತಂದೆಗೆ ಪ್ರಿಯತಮನೆಂತಲೂ ಕರೆಯಲಾಗುತ್ತದೆ. ಈಗ ತಂದೆಯ ಮುಂದೆ ಮಕ್ಕಳು ಕುಳಿತಿದ್ದೀರಿ. ನಿಮಗೆ ತಿಳಿದಿದೆ - ನಾವು ಯಾವುದೇ ಸಾಧು-ಸನ್ಯಾಸಿಗಳ ಮುಂದೆ ಕುಳಿತುಕೊಂಡಿಲ್ಲ. ಇವರು ಜ್ಞಾನಸಾಗರ ತಂದೆಯಾಗಿದ್ದಾರೆ, ಜ್ಞಾನದಿಂದಲೇ ಸದ್ಗತಿಯಾಗುತ್ತದೆ. ಜ್ಞಾನ, ವಿಜ್ಞಾನ ಮತ್ತು ಅಜ್ಞಾನವೆಂದು ಹೇಳಲಾಗುತ್ತದೆ. ವಿಜ್ಞಾನವೆಂದರೆ ಆತ್ಮಾಭಿಮಾನಿಯಾಗುವುದು, ನೆನಪಿನ ಯಾತ್ರೆಯಲ್ಲಿರುವುದು ಮತ್ತು ಜ್ಞಾನವೆಂದರೆ ಸೃಷ್ಟಿಚಕ್ರವನ್ನು ಅರಿತುಕೊಳ್ಳುವುದಾಗಿದೆ. ಜ್ಞಾನ, ವಿಜ್ಞಾನ ಮತ್ತು ಅಜ್ಞಾನದ ಅರ್ಥವನ್ನೂ ಮನುಷ್ಯರು ತಿಳಿದುಕೊಂಡಿಲ್ಲ. ನೀವೀಗ ಸಂಗಮಯುಗೀ ಬ್ರಾಹ್ಮಣರಾಗಿದ್ದೀರಿ. ನಿಮ್ಮ ಈ ಬ್ರಾಹ್ಮಣ ಕುಲವು ಭಿನ್ನವಾಗಿದೆ, ಅದನ್ನು ಯಾರೂ ತಿಳಿದುಕೊಂಡಿಲ್ಲ. ಬ್ರಾಹ್ಮಣರು ಸಂಗಮಯುಗದಲ್ಲಿರುತ್ತಾರೆ ಎಂಬ ಮಾತುಗಳು ಶಾಸ್ತ್ರಗಳಲಿಲ್ಲ. ಪ್ರಜಾಪಿತ ಬ್ರಹ್ಮಾರವರು ಇದ್ದು ಹೋಗಿದ್ದಾರೆ, ಅವರಿಗೆ ಆದಿದೇವನೆಂದು ಹೇಳುತ್ತಾರೆ ಎಂಬುದನ್ನು ತಿಳಿದುಕೊಂಡಿದ್ದಾರೆ ಆದರೆ ಆದಿದೇವಿ ಜಗದಂಬೆಯು ಯಾರಾಗಿದ್ದಾರೆ ಎಂಬುದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ಅವಶ್ಯವಾಗಿ ಬ್ರಹ್ಮನ ಮುಖವಂಶಾವಳಿಯೇ ಇರಬೇಕಲ್ಲವೆ! ಜಗದಂಬೆಯು ಬ್ರಹ್ಮಾರವರ ಸ್ತ್ರೀಯಲ್ಲ, ತಂದೆಯು ಇವರನ್ನು ದತ್ತು ಮಾಡಿಕೊಳ್ಳುತ್ತಾರೆ. ಹೇಗೆ ನೀವು ಮಕ್ಕಳನ್ನೂ ಸಹ ದತ್ತು ಮಾಡಿಕೊಳ್ಳುತ್ತಾರಲ್ಲವೆ. ಬ್ರಾಹ್ಮಣರಿಗೆ ದೇವತೆಗಳೆಂದು ಹೇಳುವುದಿಲ್ಲ. ಇಲ್ಲಿ ಬ್ರಹ್ಮನ ಮಂದಿರವಿದೆ, ಬ್ರಹ್ಮಾರವರು ಮನುಷ್ಯನಲ್ಲವೆ. ಬ್ರಹ್ಮಾರವರ ಜೊತೆ ಸರಸ್ವತಿಯೂ ಇದ್ದಾರೆ, ಮತ್ತೆ ದೇವಿಯರ ಮಂದಿರಗಳೂ ಇವೆ. ಎಲ್ಲರೂ ಇಲ್ಲಿನ ಮನುಷ್ಯರೇ ಆಗಿದ್ದಾರೆ. ಕೇವಲ ಒಬ್ಬರ ಮಂದಿರವನ್ನು ಮಾಡಿಸಿದ್ದಾರೆ. ಪ್ರಜಾಪಿತನಿಗೆ ಅನೇಕ ಪ್ರಜೆಗಳು ಇರಬೇಕಲ್ಲವೆ. ಈಗ ಎಲ್ಲರೂ ತಯಾರಾಗುತ್ತಿದ್ದಾರೆ. ಪ್ರಜಾಪಿತ ಬ್ರಹ್ಮಾನ ಕುಲವು ವೃದ್ಧಿಹೊಂದುತ್ತಿದೆ. ಎಲ್ಲರೂ ದತ್ತುಮಕ್ಕಳಾಗಿದ್ದೀರಿ, ಈಗ ನಿಮ್ಮನ್ನು ಬೇಹದ್ದಿನ ತಂದೆಯು ದತ್ತು ಮಕ್ಕಳನ್ನಾಗಿ ಮಾಡಿಕೊಂಡಿದ್ದಾರೆ. ಈ ಬ್ರಹ್ಮಾರವರೂ ಸಹ ಬೇಹದ್ದಿನ ತಂದೆಯ ಮಗುವಾದರು, ಇವರಿಗೂ ತಂದೆಯಿಂದಲೇ ಆಸ್ತಿಯು ಸಿಗುತ್ತದೆ. ಮೊಮ್ಮಕ್ಕಳಾದ ನಿಮಗೂ ಸಹ ಅವರಿಂದಲೇ ಆಸ್ತಿಯು ಸಿಗುತ್ತದೆ. ಈಗ ಯಾರಲ್ಲಿಯೂ ಜ್ಞಾನವಿಲ್ಲ ಏಕೆಂದರೆ ಜ್ಞಾನಸಾಗರನು ಒಬ್ಬರೇ ಆಗಿದ್ದಾರೆ. ಆ ತಂದೆಯು ಎಲ್ಲಿಯವರೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ಯಾರ ಸದ್ಗತಿಯೂ ಆಗುವುದಿಲ್ಲ. ನೀವೀಗ ಸದ್ಗತಿಗಾಗಿ ಭಕ್ತಿಯಿಂದ ಜ್ಞಾನದಲ್ಲಿ ಬಂದಿದ್ದೀರಿ. ಸತ್ಯಯುಗಕ್ಕೆ ಸದ್ಗತಿಯೆಂದು ಹೇಳಲಾಗುತ್ತದೆ ಮತ್ತು ಕಲಿಯುಗಕ್ಕೆ ದುರ್ಗತಿಯೆಂದು ಹೇಳಲಾಗುವುದು ಏಕೆಂದರೆ ರಾವಣರಾಜ್ಯವಾಗಿದೆ. ಸದ್ಗತಿಗೆ ರಾಮರಾಜ್ಯವೆಂತಲೂ, ಸೂರ್ಯವಂಶಿಯರೆಂತಲೂ ಹೇಳಲಾಗುತ್ತದೆ. ಯಥಾರ್ಥವಾದ ಹೆಸರು ಸೂರ್ಯವಂಶಿ, ಚಂದ್ರವಂಶಿ ಎಂದಾಗಿದೆ. ಮಕ್ಕಳಿಗೆ ತಿಳಿದಿದೆ - ನಾವೇ ಸೂರ್ಯವಂಶಿ ಕುಲದವರಾಗಿದ್ದೆವು, ಮತ್ತೆ 84 ಜನ್ಮಗಳನ್ನು ತೆಗೆದುಕೊಂಡೆವು. ಈ ಜ್ಞಾನವು ಯಾವುದೇ ಶಾಸ್ತ್ರಗಳಲ್ಲಿರಲು ಸಾಧ್ಯವಿಲ್ಲ ಏಕೆಂದರೆ ಶಾಸ್ತ್ರಗಳು ಭಕ್ತಿಮಾರ್ಗಕ್ಕಾಗಿಯೇ ಇದೆ. ಎಲ್ಲವೂ ವಿನಾಶವಾಗಲಿದೆ. ಇಲ್ಲಿಂದ ಯಾರು ಸಂಸ್ಕಾರ ತೆಗೆದುಕೊಂಡು ಹೋಗುವರೋ ಅವರು ಅಲ್ಲಿ ಎಲ್ಲವನ್ನೂ ಮಾಡತೊಡಗುತ್ತಾರೆ. ಹೇಗೆ ನಿಮ್ಮಲ್ಲಿಯೂ ಸಹ ರಾಜ್ಯಭಾರ ಮಾಡುವ ಸಂಸ್ಕಾರವು ನಿಮ್ಮ ಜೊತೆ ಬರುತ್ತದೆ, ನೀವು ರಾಜ್ಯಭಾರ ಮಾಡುತ್ತೀರಿ ಮತ್ತು ವಿಜ್ಞಾನಿಗಳು ಆ ರಾಜಧಾನಿಯಲ್ಲಿ ಬಂದು ಇಲ್ಲಿ ಯಾವ ಕಲೆಯನ್ನು ಕಲಿತುಕೊಂಡಿರುತ್ತಾರೆಯೋ ಅಲ್ಲಿ ಅದನ್ನು ಉಪಯೋಗಿಸುತ್ತಾರೆ. ಅವಶ್ಯವಾಗಿ ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಯಲ್ಲಿ ಬರುತ್ತಾರೆ ಅವರಲ್ಲಿ ಕೇವಲ ವಿಜ್ಞಾನದ ತಿಳುವಳಿಕೆಯಿರುತ್ತದೆ. ಅವರು ಆ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತಾರೆ. ಅದೂ ಸಹ ಸಂಸ್ಕಾರವಾಗಿದೆ ಏಕೆಂದರೆ ಅವರೂ ಪುರುಷಾರ್ಥ ಮಾಡುತ್ತಾರೆ. ಅವರ ಬಳಿ ವಿದ್ಯೆಯಿದೆ ಆದರೆ ನಿಮ್ಮಲ್ಲಿ ಮತ್ತ್ಯಾವುದೇ ವಿದ್ಯೆಯಿಲ್ಲ. ನೀವು ತಂದೆಯಿಂದ ರಾಜ್ಯಪದವಿಯನ್ನು ಪಡೆಯುತ್ತೀರಿ, ಉದ್ಯೋಗ-ವ್ಯವಹಾರಗಳನ್ನು ಮಾಡುವವರಲ್ಲಿಯೂ ಆ ಸಂಸ್ಕಾರವಿರುತ್ತದೆಯಲ್ಲವೆ. ಎಷ್ಟೊಂದು ಕಿರಿಕಿರಿಯಿರುತ್ತದೆ ಆದರೆ ಎಲ್ಲಿಯವರೆಗೆ ವಾನಪ್ರಸ್ಥ ಸ್ಥಿತಿಯನ್ನು ತಲುಪುವುದಿಲ್ಲವೋ, ಅಲ್ಲಿಯವರೆಗೆ ಗೃಹಸ್ಥವನ್ನೂ ಸಹ ಸಂಭಾಲನೆ ಮಾಡಬೇಕಾಗಿದೆ ಇಲ್ಲವಾದರೆ ಮಕ್ಕಳ ಸಂಭಾಲನೆಯನ್ನು ಯಾರು ಮಾಡುತ್ತಾರೆ! ಬಂದು ಇಲ್ಲಿಯೇ ಕುಳಿತುಬಿಡುವಂತಿಲ್ಲ. ಯಾವಾಗ ಈ ಕಾರ್ಯದಲ್ಲಿ ಪೂರ್ಣರೀತಿಯಲ್ಲಿ ತೊಡಗುವಿರೋ ಆಗ ಆ ಬಂಧನವೂ ಬಿಡುಗಡೆಯಾಗುವುದೆಂದು ಹೇಳುತ್ತಾರೆ, ಜೊತೆಯಲ್ಲಿ ತಮ್ಮ ರಚನೆಯನ್ನೂ ಸಹ ಅವಶ್ಯವಾಗಿ ಸಂಭಾಲನೆ ಮಾಡಬೇಕಾಗುತ್ತದೆ. ಹಾ! ಯಾರಾದರೂ ಬಹಳ ಚೆನ್ನಾಗಿ ಆತ್ಮಿಕ ಸೇವೆಯಲ್ಲಿ ತೊಡಗುತ್ತಾರೆಂದರೆ ಅವರಿಂದ ಮನಸ್ಸು ದೂರವಾಗುತ್ತದೆ. ಎಷ್ಟು ಸಮಯವನ್ನು ಈ ಆತ್ಮಿಕ ಸೇವೆಯಲ್ಲಿ ತೊಡಗಿಸುತ್ತೇವೆಯೋ ಅಷ್ಟೂ ಒಳ್ಳೆಯದೆಂದು ತಿಳಿಯುತ್ತೇವೆ. ಪತಿತರಿಂದ ಪಾವನರಾಗುವ ಮಾರ್ಗವನ್ನು ತಿಳಿಸಲು ತಂದೆಯು ಬಂದಿದ್ದಾರೆ ಅಂದಮೇಲೆ ಮಕ್ಕಳೂ ಸಹ ಇದೇ ಸೇವೆಯನ್ನು ಮಾಡಬೇಕಾಗಿದೆ. ಪ್ರತಿಯೊಬ್ಬರ ಲೆಕ್ಕವನ್ನು ನೋಡಲಾಗುತ್ತದೆ. ಬೇಹದ್ದಿನ ತಂದೆಯು ಕೇವಲ ಪತಿತರಿಂದ ಪಾವನರಾಗುವ ಮತವನ್ನು ಕೊಡುತ್ತಾರೆ. ಅವರು ಪಾವನರಾಗುವ ಮಾರ್ಗವನ್ನೇ ತಿಳಿಸುತ್ತಾರೆ. ಉಳಿದಂತೆ ಇದೆಲ್ಲವನ್ನೂ ನೋಡಿಕೊಳ್ಳುವುದು, ಸಂಭಾಲನೆ ಮಾಡುವುದು, ಸಲಹೆ ನೀಡುವುದು ಇವರ (ಬ್ರಹ್ಮಾ) ಕರ್ತವ್ಯವಾಗಿದೆ. ಶಿವತಂದೆಯೇ ತಿಳಿಸುತ್ತಾರೆ - ನನ್ನೊಂದಿಗೆ ಯಾವುದೇ ಉದ್ಯೋಗ-ವ್ಯವಹಾರಗಳ ಮಾತನ್ನು ಕೇಳಬೇಡಿ. ಪತಿತರಿಂದ ಪಾವನರನ್ನಾಗಿ ಮಾಡಲು ಬನ್ನಿ ಎಂದೇ ನೀವು ನನ್ನನ್ನು ಕರೆದಿರಿ ಅಂದಾಗ ನಾನು ಇವರ ಮೂಲಕ ನಿಮ್ಮನ್ನು ಪಾವನರನ್ನಾಗಿ ಮಾಡುತ್ತಿದ್ದೇನೆ. ಇವರೂ ಸಹ ತಂದೆಯಾಗಿದ್ದಾರೆ, ಇವರ ಮತದಂತೆ ನಡೆಯಿರಿ, ಅವರದು ಆತ್ಮೀಯ ಮತ, ಇವರದು ಸ್ಥೂಲಮತವಾಗಿದೆ. ಇವರ ಮೇಲೂ ಎಷ್ಟೊಂದು ಜವಾಬ್ದಾರಿಯಿದೆ! ಆದ್ದರಿಂದ ಸದಾ ಈ ಮಾತನ್ನು ಹೇಳುತ್ತಿರುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ ಎನ್ನುವುದು ತಂದೆಯ ಆದೇಶವಾಗಿದೆ ಆದ್ದರಿಂದ ಶಿವತಂದೆಯ ಮತದಂತೆ ನಡೆಯಿರಿ. ಉಳಿದಂತೆ ಮಕ್ಕಳು ಏನೆಲ್ಲವನ್ನೂ ಕೇಳಬೇಕೋ ನೌಕರಿಯಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಮಾತುಗಳನ್ನು ಈ ಸಾಕಾರ ತಂದೆಯೊಂದಿಗೆ ಕೇಳಿ, ಇವರು ಬಹಳ ಅನುಭವಿಯಾಗಿದ್ದಾರೆ, ಎಲ್ಲವನ್ನೂ ತಿಳಿಸುತ್ತಾರೆ. ನಾನು ಹೀಗೆ ಮಾಡುತ್ತೇನೆ ಎಂದು ಹೇಳುತ್ತಾರೆ. ಇವರನ್ನು ನೋಡಿ ನೀವು ಕಲಿಯಬೇಕಾಗಿದೆ. ಇವರು ಕಲಿಸುತ್ತಾ ಇರುತ್ತಾರೆ ಏಕೆಂದರೆ ಇವರು ಎಲ್ಲರಿಗಿಂತ ಮುಂದಿದ್ದಾರೆ. ಎಲ್ಲಾ ಬಿರುಗಾಳಿಗಳು ಮೊದಲು ಇವರ ಬಳಿಯೇ ಬರುತ್ತದೆ ಆದ್ದರಿಂದ ಇವರು ಎಲ್ಲರಿಗಿಂತ ಶಕ್ತಿಶಾಲಿಯಾಗಿದ್ದಾರೆ ಆದ್ದರಿಂದಲೇ ಶ್ರೇಷ್ಠಪದವಿಯನ್ನು ಪಡೆಯುತ್ತಾರೆ. ಮಾಯೆಯೂ ಸಹ ಶಕ್ತಿಶಾಲಿಯಾಗಿ ಹೋರಾಡುತ್ತದೆ, ಇವರು ಒಂದು ಕ್ಷಣದಲ್ಲಿ ಎಲ್ಲವನ್ನೂ ಬಿಡುವುದು ಇವರ ಪಾತ್ರವಿತ್ತು, ತಂದೆಯೂ ಇವರಿಂದ ಈ ಕಾರ್ಯವನ್ನು ಮಾಡಿಸಿದರು ಏಕೆಂದರೆ ಮಾಡಿ-ಮಾಡಿಸುವವರು ಶಿವತಂದೆಯಲ್ಲವೆ. ಇವರಿಗೆ ಸಾಕ್ಷಾತ್ಕಾರವಾದಕೂಡಲೆ ಎಲ್ಲವನ್ನೂ ಖುಷಿ-ಖುಷಿಯಿಂದ ಅರ್ಪಿಸಿಬಿಟ್ಟರು. ನಾನು ವಿಶ್ವದ ಮಾಲೀಕನಾಗುತ್ತೇನೆ ಅಂದಮೇಲೆ ಈ ಬಿಡುಗಾಸಿನ ವಸ್ತುಗಳನ್ನು ನಾನೇನು ಮಾಡಲಿ ಎಂದು ತಿಳಿದರು. ವಿನಾಶದ ಸಾಕ್ಷಾತ್ಕಾರವನ್ನೂ ಮಾಡಿದರು. ಇದರಿಂದ ಈ ಹಳೆಯ ಪ್ರಪಂಚವು ವಿನಾಶವಾಗಲಿದೆ, ಪುನಃ ನಮಗೆ ರಾಜ್ಯಭಾಗ್ಯವು ಸಿಗುತ್ತದೆ ಎಂಬುದನ್ನು ತಿಳಿದ ತಕ್ಷಣ ಎಲ್ಲವನ್ನೂ ತ್ಯಾಗ ಮಾಡಿದರು ಆದ್ದರಿಂದ ಈಗಂತೂ ತಂದೆಯ ಮತದಂತೆ ನಡೆಯಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ, ನಾಟಕದನುಸಾರ ಭಟ್ಟಿಯಾಗಬೇಕಿತ್ತು, ಇವರು ಏಕೆ ಬಂದು ಸಮರ್ಪಿತರಾದರೆಂದು ಮನುಷ್ಯರು ತಿಳಿದುಕೊಂಡಿದ್ದಾರೆಯೇ! ಇವರು ಯಾವುದೇ ಸಾಧು-ಸಂತರಲ್ಲ. ಇವರು ಸಾಧಾರಣವಾಗಿದ್ದಾರೆ. ಈ ಬ್ರಹ್ಮಾರವರು ಯಾರನ್ನೂ ಓಡಿಸಿಕೊಂಡು ಬರಲಿಲ್ಲ, ಕೃಷ್ಣಚರಿತ್ರೆಯೂ ಇಲ್ಲ. ಮನುಷ್ಯಮಾತ್ರರಿಗೆ ಯಾವುದೇ ಮಹಿಮೆಯಿಲ್ಲ. ಮಹಿಮೆಯೆಲ್ಲವೂ ಒಬ್ಬ ತಂದೆಯದಾಗಿದೆ. ತಂದೆಯೇ ಬಂದು ಎಲ್ಲರಿಗೆ ಸುಖ ನೀಡುತ್ತಾರೆ. ನಿಮ್ಮೊಂದಿಗೆ ಮಾತನಾಡುತ್ತಾರೆ. ನೀವಿಲ್ಲಿ ಯಾರಬಳಿಗೆ ಬಂದಿದ್ದೀರಿ? ನಿಮ್ಮ ಬುದ್ಧಿಯು ಅಲ್ಲಿಯೂ ಹೋಗುವುದು, ಇಲ್ಲಿಯೂ ಹೋಗುವುದು ನಿಮಗೆ ತಿಳಿದಿದೆ - ಶಿವತಂದೆಯ ನಿವಾಸಸ್ಥಾನವು ಪರಮಧಾಮವಾಗಿದೆ. ಈಗ ಇವರಲ್ಲಿ (ಬ್ರಹ್ಮಾ) ಬಂದಿದ್ದಾರೆ. ತಂದೆಯಿಂದ ನಮಗೆ ಸ್ವರ್ಗದ ಆಸ್ತಿಯು ಸಿಗಲಿದೆ. ಕಲಿಯುಗದ ನಂತರ ಅವಶ್ಯವಾಗಿ ಸ್ವರ್ಗವು ಬರುವುದು. ಕೃಷ್ಣನೂ ಸಹ ತಂದೆಯಿಂದ ಆಸ್ತಿಯನ್ನು ಪಡೆದುಹೋಗಿ ರಾಜ್ಯಭಾರ ಮಾಡುತ್ತಾನೆ. ಇದರಲ್ಲಿ ಚರಿತ್ರೆಯ ಮಾತೇ ಇಲ್ಲ. ಹೇಗೆ ರಾಜನ ಬಳಿ ರಾಜಕುಮಾರನು ಜನ್ಮಪಡೆಯುತ್ತಾನೆ, ಶಾಲೆಯಲ್ಲಿ ಓದಿ ದೊಡ್ಡವನಾದಮೇಲೆ ಸಿಂಹಾಸನಾಧೀಶನಾಗುತ್ತಾನೆ, ಇದರಲ್ಲಿ ಮಹಿಮೆ ಅಥವಾ ಚರಿತ್ರೆಯ ಮಾತಿಲ್ಲ. ಶ್ರೇಷ್ಠಾತಿಶ್ರೇಷ್ಠ ತಂದೆಯು ಒಬ್ಬರೇ ಆಗಿದ್ದಾರೆ, ಅವರಿಗೇ ಮಹಿಮೆಯಾಗುತ್ತದೆ. ಇವರೂ ಸಹ ತಮ್ಮ ಪರಿಚಯವನ್ನು ಕೊಡುತ್ತಾರೆ. ಒಂದುವೇಳೆ ನಾನು ಹೇಳುತ್ತೇನೆಂದು ಅವರು ಹೇಳಿದರೆ ಇವರು ತಮ್ಮ ಬಗ್ಗೆ ಹೇಳುತ್ತಾರೆಂದು ಮನುಷ್ಯರು ತಿಳಿಯುತ್ತಾರೆ. ಈ ಮಾತುಗಳನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಭಗವಂತನಿಗೆಂದೂ ಮನುಷ್ಯನೆಂದು ಹೇಳಲು ಸಾಧ್ಯವಿಲ್ಲ. ಅವರು ನಿರಾಕಾರನಾಗಿದ್ದಾರೆ, ಪರಮಧಾಮದ ನಿವಾಸಿಯಾಗಿದ್ದಾರೆ. ನಿಮ್ಮ ಬುದ್ಧಿಯು ಮೇಲೆ ಹೋಗುತ್ತದೆ ಮತ್ತೆ ಕೆಳಗೂ ಬರುತ್ತದೆ.

ತಂದೆಯು ದೂರದೇಶದಿಂದ ಪರದೇಶದಲ್ಲಿ ಬಂದು ನಮಗೆ ಓದಿಸಿ ಹಿಂತಿರುಗಿ ಹೋಗುತ್ತಾರೆ. ಸ್ವಯಂ ತಂದೆಯೇ ತಿಳಿಸುತ್ತಾರೆ - ಮಕ್ಕಳೇ, ನಾನು ಒಂದು ಸೆಕೆಂಡಿನಲ್ಲಿ ಬರುತ್ತೇನೆ, ತಡವಾಗುವುದಿಲ್ಲ, ಆತ್ಮವೂ ಸಹ ಸೆಕೆಂಡಿನಲ್ಲಿ ಒಂದು ಶರೀರವನ್ನು ಬಿಟ್ಟು ಇನ್ನೊಂದರಲ್ಲಿ ಪ್ರವೇಶ ಮಾಡುತ್ತದೆ. ಯಾರೂ ಅದನ್ನು ನೋಡಲು ಸಾಧ್ಯವಿಲ್ಲ. ಆತ್ಮವು ಬಹಳ ತೀಕ್ಷ್ಣವಾಗಿದೆ. ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವೂ ಇದೆ. ರಾವಣರಾಜ್ಯಕ್ಕೆ ಜೀವನಬಂಧನ ರಾಜ್ಯವೆಂದು ಹೇಳಲಾಗುತ್ತದೆ. ಮಗುವು ಜನ್ಮಪಡೆಯಿತೆಂದರೆ ತಂದೆಯಿಂದ ಆಸ್ತಿಯು ಸಿಕ್ಕಿತು ಹಾಗೆಯೇ ನೀವೂ ಸಹ ತಂದೆಯನ್ನು ಅರಿತುಕೊಂಡಿರಿ ಮತ್ತು ಸ್ವರ್ಗದ ಮಾಲೀಕರಾಗುವಿರಿ ಆದರೆ ಅದರಲ್ಲಿಯೂ ಪುರುಷಾರ್ಥದನುಸಾರ ನಂಬರ್ವಾರ್ ಪದವಿಗಳಿವೆ. ತಂದೆಯು ಬಹಳ ಚೆನ್ನಾಗಿ ತಿಳಿಸಿಕೊಡುತ್ತಿರುತ್ತಾರೆ. ಇಬ್ಬರು ತಂದೆಯರಿದ್ದಾರೆ, ಒಬ್ಬರು ಲೌಕಿಕ ತಂದೆ, ಇನ್ನೊಬ್ಬರು ಪಾರಲೌಕಿಕ ತಂದೆ. ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುವರು, ಸುಖದಲ್ಲಿ ಯಾರೂ ಮಾಡುವುದಿಲ್ಲ ಎಂಬ ಗಾಯನವಿದೆ. ನೀವೀಗ ತಿಳಿದುಕೊಂಡಿದ್ದೀರಿ - ನಾವು ಭಾರತವಾಸಿಗಳಿಗೆ ಬಹಳ ಸುಖವಿದ್ದಾಗ ತಂದೆಯನ್ನು ಸ್ಮರಿಸುತ್ತಿರಲಿಲ್ಲ ನಂತರ ನಾವು 84 ಜನ್ಮಗಳನ್ನು ಪಡೆದುಕೊಂಡೆವು, ಆತ್ಮದಲ್ಲಿ ತುಕ್ಕುಬೀಳುವುದರಿಂದ ದರ್ಜೆಯು ಕಡಿಮೆಯಾಗುತ್ತದೆ. 16 ಕಲಾಸಂಪೂರ್ಣರಿಂದ ನಂತರ 2 ಕಲೆಗಳು ಕಡಿಮೆಯಾಗಿಬಿಡುತ್ತವೆ. ಕಡಿಮೆ ಉತ್ತೀರ್ಣರಾಗುವ ಕಾರಣ ರಾಮನಿಗೆ ಬಿಲ್ಲು-ಬಾಣವನ್ನು ತೋರಿಸಿದ್ದಾರೆ. ಉಳಿದಂತೆ ಯಾವುದೇ ಧನಸ್ಸನ್ನು ಮುರಿಯಲಿಲ್ಲ. ಕೇವಲ ಇದೊಂದು ಚಿಹ್ನೆಯನ್ನು ತೋರಿಸಿಬಿಟ್ಟಿದ್ದಾರೆ. ಇವೆಲ್ಲಾ ಭಕ್ತಿಮಾರ್ಗದ ಮಾತುಗಳಾಗಿವೆ. ಭಕ್ತಿಯಲ್ಲಿ ಮನುಷ್ಯರು ಎಷ್ಟೊಂದು ಅಲೆದಾಡುತ್ತಾರೆ. ಈಗ ನಿಮಗೆ ಜ್ಞಾನವು ಸಿಕ್ಕಿದೆ ಆದ್ದರಿಂದ ಅಲೆದಾಟವು ನಿಂತುಹೋಗುತ್ತದೆ.

“ಹೇ ಶಿವತಂದೆ” ಎಂದು ಹೇಳುವುದು ಕರೆಯುವ ಶಬ್ಧವಾಗಿದೆ. ನೀವು “ಹೇ” ಶಬ್ಧವನ್ನು ಹೇಳುವಂತಿಲ್ಲ. ತಂದೆಯನ್ನು ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ಕೂಗುವುದೆಂದರೆ ಭಕ್ತಿಯ ಅಂಶವು ಬಂದುಬಿಟ್ಟಿತೆಂದರ್ಥವಾಗಿದೆ. ಹೇ ಭಗವಂತ ಎಂದು ಹೇಳುವುದೂ ಸಹ ಭಕ್ತಿಯ ಹವ್ಯಾಸವಾಗಿದೆ. ಹೇ ಭಗವಂತ ಎಂದು ಹೇಳಿ ನೆನಪು ಮಾಡಿ ಎಂದು ತಂದೆಯೇನು ಹೇಳಿದ್ದಾರೆಯೇ! ತಂದೆಯು ತಿಳಿಸುತ್ತಾರೆ - ಅಂತರ್ಮುಖಿಯಾಗಿ ನನ್ನನ್ನು ನೆನಪು ಮಾಡಿ, ಸ್ಮರಣೆಯನ್ನು ಮಾಡುವಂತಿಲ್ಲ, ಸ್ಮರಣೆ ಎನ್ನುವ ಶಬ್ಧವು ಭಕ್ತಿಮಾರ್ಗದ್ದಾಗಿದೆ. ಈಗ ನಿಮಗೆ ತಂದೆಯ ಪರಿಚಯವು ಸಿಕ್ಕಿತೆಂದಮೇಲೆ ಈಗ ತಂದೆಯ ಶ್ರೀಮತದಂತೆ ನಡೆಯಿರಿ. ಹೇಗೆ ಲೌಕಿಕ ಮಕ್ಕಳು ದೇಹಧಾರಿ ತಂದೆಯನ್ನು ನೆನಪು ಮಾಡುವರೋ ಹಾಗೆಯೇ ಪ್ರೀತಿಯಿಂದ ಈ ತಂದೆಯನ್ನು ನೆನಪು ಮಾಡಿರಿ. ತಾವೇ ದೇಹಾಭಿಮಾನದಲ್ಲಿದ್ದರೆ ನೆನಪೂ ಸಹ ದೇಹಧಾರಿ ತಂದೆಯನ್ನೇ ಮಾಡುತ್ತಾರೆ. ಪಾರಲೌಕಿಕ ತಂದೆಯಂತೂ ದೇಹೀ-ಅಭಿಮಾನಿಯಾಗಿದ್ದಾರೆ. ಇವರಲ್ಲಿ ಬಂದಾಗಲೂ ಸಹ ದೇಹಾಭಿಮಾನಿಯಾಗುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಈ ತನುವನ್ನು ಕೇವಲ ಬಾಡಿಗೆಯಾಗಿ ತೆಗೆದುಕೊಂಡಿದ್ದೇನೆ. ನಿಮಗೆ ಜ್ಞಾನವನ್ನು ತಿಳಿಸುವುದಕ್ಕಾಗಿ ಇದನ್ನು ಲೋನ್ ಆಗಿ ಪಡೆದಿದ್ದೇನೆ. ನಾನು ಜ್ಞಾನಸಾಗರನಾಗಿದ್ದೇನೆ ಆದರೆ ನಿಮಗೆ ಜ್ಞಾನವನ್ನು ಹೇಗೆ ತಿಳಿಸಲಿ. ನಾನು ಗರ್ಭದಲ್ಲಿ ಹೋಗುವುದಿಲ್ಲ, ಅಂದಮೇಲೆ ಹೇಗೆ ತಿಳಿಸಲಿ! ನನ್ನ ಗತಿ-ಮತವೇ ಭಿನ್ನವಾಗಿದೆ, ನಾನು ಇವರಲ್ಲಿ ಬರುತ್ತೇನೆ, ಇದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ಬ್ರಹ್ಮಾರವರ ಮೂಲಕ ಸ್ಥಾಪನೆ ಎಂದು ಹೇಳುತ್ತಾರೆ ಆದರೆ ಬ್ರಹ್ಮಾರವರ ಮೂಲಕ ಹೇಗೆ ಸ್ಥಾಪನೆ ಮಾಡುತ್ತಾರೆ? ಪ್ರೇರಣೆಯಿಂದ ಮಾಡುವರೇ! ತಂದೆಯು ತಿಳಿಸುತ್ತಾರೆ - ನಾನು ಸಾಧಾರಣ ತನುವಿನಲ್ಲಿ ಬರುತ್ತೇನೆ, ಇವರಿಗೆ ಬ್ರಹ್ಮನೆಂದು ಹೆಸರನ್ನಿಡುತ್ತೇನೆ ಏಕೆಂದರೆ ಸನ್ಯಾಸ ಮಾಡುತ್ತಾರಲ್ಲವೆ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈಗ ಬ್ರಾಹ್ಮಣರ ಮಾಲೆಯು ತಯಾರಾಗುವುದಿಲ್ಲ ಏಕೆಂದರೆ ಬಿಟ್ಟುಹೋಗುತ್ತಿರುತ್ತಾರೆ. ಯಾವಾಗ ಬ್ರಾಹ್ಮಣರು ಸಂಪೂರ್ಣರಾಗಿಬಿಡುವಿರೋ ಆಗ ರುದ್ರಮಾಲೆಯಾಗುತ್ತದೆ ನಂತರ ವಿಷ್ಣುವಿನ ಮಾಲೆಯಲ್ಲಿ ಹೋಗುತ್ತಾರೆ. ಮಾಲೆಯಲ್ಲಿ ಬರಲು ನೆನಪಿನ ಯಾತ್ರೆಯು ಬೇಕು. ಈಗ ನಿಮ್ಮ ಬುದ್ಧಿಯಲ್ಲಿದೆ - ನಾವೇ ಮೊಟ್ಟಮೊದಲು ಸತೋಪ್ರಧಾನರಾಗುತ್ತೇವೆ ನಂತರ ಸತೋ, ರಜೋ, ತಮೋದಲ್ಲಿ ಬರುತ್ತೇವೆ. ಹಮ್ ಸೋ, ಸೋ ಹಮ್ನ ಅರ್ಥವೂ ಇದೆಯಲ್ಲವೆ. ಓಂನ ಅರ್ಥವೇ ಬೇರೆಯಾಗಿದೆ, ಓಂ ಎಂದರೆ ನಾನು ಆತ್ಮ ಮತ್ತೆ ಅದೇ ಆತ್ಮವು ಹೇಳುತ್ತದೆ - ನಾನು ದೇವತೆಯಿಂದ ಕ್ಷತ್ರಿಯ, ವೈಶ್ಯ..... ಇದಕ್ಕೆ ಅವರು ಆತ್ಮವೇ ಪರಮಾತ್ಮನೆಂದು ಹೇಳಿಬಿಡುತ್ತಾರೆ. ನಿಮ್ಮ ಓಂ ಮತ್ತು ಹಮ್ ಸೋ, ಸೋ ಹಮ್ನ ಅರ್ಥವು ಸಂಪೂರ್ಣ ಭಿನ್ನವಾಗಿದೆ. ನಾವಾತ್ಮಗಳಾಗಿದ್ದೇವೆ ನಂತರ ಆತ್ಮವು ವರ್ಣಗಳಲ್ಲಿ ಬರುತ್ತದೆ. ನಾವಾತ್ಮಗಳೇ ಮೊದಲು ದೇವತಾ, ಕ್ಷತ್ರಿಯರಾಗುತ್ತೇವೆ. ಆತ್ಮವೇ ಪರಮಾತ್ಮನೆಂದಲ್ಲ, ಸಂಪೂರ್ಣ ಜ್ಞಾನವಿಲ್ಲದಿರುವ ಕಾರಣ ಅರ್ಥವನ್ನೇ ಕೆಡಿಸಿಬಿಟ್ಟಿದ್ದಾರೆ. ಅಹಂ ಬ್ರಹ್ಮಾಸ್ಮಿ ಎಂದು ಹೇಳುತ್ತಾರೆ, ಇದು ಸಹ ತಪ್ಪಾಗಿದೆ. ತಂದೆಯು ತಿಳಿಸುತ್ತಾರೆ - ನಾನು ರಚನೆಯ ಮಾಲೀಕನಂತೂ ಆಗುವುದಿಲ್ಲ, ಈ ರಚನೆಯ ಮಾಲೀಕರು ನೀವಾಗಿದ್ದೀರಿ, ಇಡೀ ವಿಶ್ವಕ್ಕೂ ನೀವೇ ಮಾಲೀಕರಾಗುತ್ತೀರಿ. ಬಹ್ಮ್ ಎನ್ನುವುದು ತತ್ವವಾಗಿದೆ, ನೀವಾತ್ಮಗಳೇ ಈ ರಚನೆಯ ಮಾಲೀಕರಾಗುತ್ತೀರಿ. ತಂದೆಯು ಈಗ ಎಲ್ಲಾ ವೇದ-ಶಾಸ್ತ್ರಗಳ ಯಥಾರ್ಥ ಅರ್ಥವನ್ನು ತಿಳಿಸುತ್ತಾರೆ. ಈಗ ಓದುತ್ತಾ ಇರಬೇಕಾಗಿದೆ. ತಂದೆಯು ನಿಮಗೆ ಹೊಸ-ಹೊಸಮಾತುಗಳನ್ನು ತಿಳಿಸುತ್ತಾ ಇರುತ್ತಾರೆ. ಭಕ್ತಿಯೇನು ಹೇಳುತ್ತದೆ, ಜ್ಞಾನವೇನು ಹೇಳುತ್ತದೆ. ಭಕ್ತಿಮಾರ್ಗದಲ್ಲಿ ಮಂದಿರಗಳನ್ನು ಕಟ್ಟಿಸಿದಿರಿ, ಜಪ-ತಪಗಳನ್ನು ಮಾಡಿದಿರಿ, ಹಣವನ್ನು ವ್ಯರ್ಥ ಮಾಡಿದಿರಿ. ನಿಮ್ಮ ಮಂದಿರಗಳನ್ನು ಅನೇಕರು ಲೂಟಿ ಮಾಡಿದರು, ಇದೂ ಸಹ ನಾಟಕದಲ್ಲಿ ಪಾತ್ರವಿದೆ, ಮತ್ತೆ ಅವಶ್ಯವಾಗಿ ಅವರಿಂದಲೇ ಮರಳಿ ಸಿಗುತ್ತದೆ. ಈಗಲೂ ನೋಡಿ, ವಿದೇಶಿಯರು ಎಷ್ಟೊಂದು ಕೊಡುತ್ತಿದ್ದಾರೆ! ದಿನ-ಪ್ರತಿದಿನ ಹೆಚ್ಚಿಸುತ್ತಿರುತ್ತಾರೆ. ಅವರು ಎಷ್ಟನ್ನು ಇಲ್ಲಿಂದ ತೆಗೆದುಕೊಂಡು ಹೋಗಿದ್ದಾರೆಯೋ ಅಷ್ಟು ಪೂರ್ಣಲೆಕ್ಕವನ್ನು ಕೊಡುತ್ತಾರೆ. ಯಾರು ನಿಮ್ಮ ಹಣವನ್ನು ತಿಂದಿದ್ದಾರೆಯೋ ಅವರದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಭಾರತವು ಅವಿನಾಶಿ ಖಂಡವಾಗಿದೆಯಲ್ಲವೆ, ತಂದೆಯ ಜನ್ಮಸ್ಥಾನವಾಗಿದೆ. ಇಲ್ಲಿಯೇ ತಂದೆಯು ಬರುತ್ತಾರೆ. ತಂದೆಯ ಖಂಡದಿಂದಲೇ ತೆಗೆದುಕೊಂಡು ಹೋಗುತ್ತಾರೆ ಅಂದಮೇಲೆ ಮರಳಿ ಕೊಡಬೇಕಾಗುತ್ತದೆ. ಸಮಯದಲ್ಲಿ ನೋಡಿ, ಹೇಗೆ ಸಿಗುತ್ತದೆ! ಈ ಮಾತುಗಳನ್ನು ನೀವೇ ತಿಳಿದುಕೊಂಡಿದ್ದೀರಿ. ವಿನಾಶವು ಯಾವ ಸಮಯದಲ್ಲಾಗುವುದು ಎಂದು ಅವರಿಗೇನು ತಿಳಿದಿದೆ. ಸರ್ಕಾರವೂ ಸಹ ಈ ಮಾತುಗಳನ್ನು ಒಪ್ಪುವುದಿಲ್ಲ, ನಾಟಕದಲ್ಲಿ ನಿಗಧಿಯಾಗಿದೆ, ಸಾಲವನ್ನು ತೆಗೆದುಕೊಳ್ಳುತ್ತಲೇ ಇರುತ್ತಾರೆ ಅಂದರೆ ಹಣವೆಲ್ಲವೂ ಹಿಂದಿರುಗುತ್ತಿದೆ. ನಿಮಗೆ ತಿಳಿದಿದೆ - ನಮ್ಮ ರಾಜಧಾನಿಯಿಂದ ಬಹಳಷ್ಟು ಹಣವನ್ನು ತೆಗೆದುಕೊಂಡು ಹೋಗಿದ್ದಾರೆ, ಅದನ್ನು ಮತ್ತೆ ಹಿಂದಿರುಗಿಸುತ್ತಿದ್ದಾರೆ. ನಿಮಗೆ ಯಾವುದೇ ಮಾತಿನ ಚಿಂತೆಯಿಲ್ಲ. ಕೇವಲ ತಂದೆಯನ್ನು ನೆನಪು ಮಾಡುವುದೇ ಚಿಂತೆಯಿರುತ್ತದೆ. ನೆನಪಿನಿಂದಲೇ ಪಾಪಗಳು ಭಸ್ಮವಾಗುತ್ತವೆ. ಜ್ಞಾನವು ಬಹಳ ಸಹಜವಾಗಿದೆ, ಈಗ ಯಾರೆಷ್ಟು ಪುರುಷಾರ್ಥ ಮಾಡುವರೋ ಅವರಿಗೆ ಅಷ್ಟು ಸಿಗುತ್ತದೆ. ಶ್ರೀಮತವಂತೂ ಸಿಗುತ್ತಾ ಇರುತ್ತದೆ, ಅವಿನಾಶಿ ಸರ್ಜನ್ರಿಂದ ಪ್ರತಿಯೊಂದು ಮಾತಿನಲ್ಲಿ ಮತವನ್ನು ತೆಗೆದುಕೊಳ್ಳಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಎಷ್ಟು ಸಾಧ್ಯವೊ ಅಷ್ಟು ಸಮಯವನ್ನು ತೆಗೆದು ಈ ಆತ್ಮಿಕ ಸೇವೆ ಮಾಡಬೇಕಾಗಿದೆ. ಆತ್ಮಿಕ ಸೇವೆಯ ಸಂಸ್ಕಾರವನ್ನು ಮಾಡಿಕೊಳ್ಳಬೇಕಾಗಿದೆ. ಪತಿತರನ್ನು ಪಾವನ ಮಾಡುವ ಸೇವೆ ಮಾಡಬೇಕಾಗಿದೆ.

2. ಅಂತರ್ಮುಖಿಯಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಮುಖದಿಂದ ‘ಹೇ’ ಶಬ್ಧವು ಬರಬಾರದು. ಹೇಗೆ ತಂದೆಗೆ ಅಹಂಕಾರವಿಲ್ಲವೋ ಹಾಗೆಯೇ ನಿರಹಂಕಾರಿಗಳಾಗಬೇಕಾಗಿದೆ.

ವರದಾನ:
ಮನಸಾ ಸಂಕಲ್ಪ ಹಾಗೂ ವೃತ್ತಿಯ ಮೂಲಕ ಶ್ರೇಷ್ಠ ವೈಬ್ರೇಷನ್ನ ಸುಗಂಧ ಹರಡುವಂತಹ ಶಿವ ಶಕ್ತಿ ಕಂಬೈಂಡ್ ಭವ

ಹೇಗೆ ಇತ್ತೀಚೆಗೆ ಸ್ಥೂಲ ಸುಗಂಧದ ಸಾಧನೆಗಳಿಂದ ಗುಲಾಬಿ, ಶ್ರೀಗಂಧ ಹಾಗೂ ಚಿನ್ನ-ಭಿನ್ನ ಪ್ರಕಾರದ ಸುಗಂಧ ಹರಡಿಸುತ್ತಾರೆ ಹಾಗೆ ನೀವು ಶಿವ ಶಕ್ತಿ ಕಂಬೈಂಡ್ ಆಗಿ ಮನಸಾ ಸಂಕಲ್ಪ ಹಾಗೂ ವೃತ್ತಿಯ ಮೂಲಕ ಸುಖ-ಶಾಂತಿ, ಪ್ರೇಮ, ಆನಂದದ ಸುಗಂಧವನ್ನು ಹರಡಿ. ಪ್ರತಿದಿನ ಅಮೃತವೇಳೆ ಭಿನ್ನ-ಭಿನ್ನ ಶ್ರೇಷ್ಠ ವೈಬ್ರೇಷನ್ನ ಚಿಲುಮೆಯ ರೀತಿ ಆತ್ಮಗಳ ಮೇಲೆ ಗುಲಾಬಿ ನೀರನ್ನು ಸಿಂಪಡಿಸಿ. ಕೇವಲ ಸಂಕಲ್ಪದ ಆಟೋಮೆಟಿಕ್ ಸ್ವಿಚ್ ಆನ್ ಮಾಡಿ. ಆಗ ವಿಶ್ವದಲ್ಲಿ ಏನು ಅಶುದ್ಧ ವೃತ್ತಿಗಳ ದುಗರ್ಂಧವಿದೆ ಅದು ಸಮಾಪ್ತಿಯಾಗಿಬಿಡುತ್ತದೆ.

ಸ್ಲೋಗನ್:
ಸುಖದಾತನ ಮೂಲಕ ಸುಖದ ಭಂಡಾರ ಪ್ರಾಪ್ತಿಯಾಗುವುದು - ಇದೆ ಅವರ ಪ್ರೀತಿಯ ನಿಶಾನಿಯಾಗಿದೆ.

ಅವ್ಯಕ್ತ ಸೂಚನೆ: ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ

ಎಷ್ಟು ಶಕ್ತಿಯರ ಶಕ್ತಿಯಿದೆ ಅಷ್ಟೇ ಪಾಂಡವರದ್ದು ವಿಶಾಲ ಶಕ್ತಿಯಿದೆ ಅದಕ್ಕೆ ಚತುರ್ಭುಜ ರೂಪ ತೋರಿಸುತ್ತಾರೆ. ಶಕ್ತಿಯರು ಮತ್ತು ಪಾಂಡವರು ಇವರಿಬ್ಬರು ಕಂಬೈಂಡ್ ರೂಪದಿಂದಲೇ ವಿಶ್ವ ಸೇವೆಯ ಕಾರ್ಯದಲ್ಲಿ ಸಫಲತೆ ಪ್ರಾಪ್ತಿಯಾಗುತ್ತದೆ. ಇದಕ್ಕಾಗಿ ಸದಾ ಒಬ್ಬರಿಬ್ಬರಿಗೆ ಸಹಯೋಗಿಗಳಾಗಿರಿ. ಜವಾಬ್ದಾರಿಯ ಕಿರೀಟ ಸದಾ ಧರಿಸಿರಲಿ.