12.04.26    Avyakt Bapdada     Kannada Murli    30.11.2009     Om Shanti     Madhuban


“ತಂದೆಗೆ ಮತ್ತು ಸರ್ವರಿಗೆ ಪ್ರಿಯರಾಗಲು ಸಂತುಷ್ಟಮಣಿ ಆಗಿ ಪ್ರತಿಯೊಂದು ಪರಿಸ್ಥಿತಿಯ ಪ್ರಭಾವದಿಂದ ಮುಕ್ತರಾಗಿ”


ಈ ದಿನ ಎಲ್ಲಾ ಕಡೆಯ ಸಂತುಷ್ಟಮಣಿಗಳನ್ನು ನೋಡುತ್ತಿದ್ದೇವೆ. ಸಂತುಷ್ಟಮಣಿಗಳು ಎಲ್ಲಾ ಕಡೆ ತಮ್ಮ ಮಣಿಯ ಹೊಳಪನ್ನು ಹರಡಿಸುತ್ತಿದ್ದಾರೆ. ಎಲ್ಲದಕ್ಕಿಂತ ಅತಿ ದೊಡ್ಡ ಸ್ಥಿತಿ ಸಂತುಷ್ಟತೆಯಾಗಿದೆ. ಸದಾ ಸಂತುಷ್ಟವಾಗಿರುವುದು ಎಲ್ಲರಿಗೆ ಪ್ರಿಯವಾಗುತ್ತದೆ. ತಂದೆಗಂತೂ ಪ್ರಿಯವಾಗಿಯೇ ಇದೆ. ಯಾರಿಗೆ ಸರ್ವ ಪ್ರಾಪ್ತಿಗಳಾಗಿದೆಯೋ ಅವರೇ ಸದಾ ಸಂತುಷ್ಟರಾಗಿರಲು ಸಾಧ್ಯ. ಪ್ರಾಪ್ತಿಗಳಿಗೆ ಆಧಾರ ಸಂತುಷ್ಟತೆಯಾಗಿದೆ. ಆದ್ದರಿಂದ ಅಂತಹ ಆತ್ಮಗಳು ಸರ್ವ ಬ್ರಾಹ್ಮಣ ಆತ್ಮರಿಗೆ ಪ್ರಿಯವಾಗಿದ್ದಾರೆ. ಸರ್ವ ಪ್ರಾಪ್ತಿಗಳು ಅರ್ಥಾತ್ ಸದಾ ಸಂತುಷ್ಟವಾಗಿರುವುದು. ಸಂತುಷ್ಟ ಆತ್ಮರ ಪ್ರಭಾವ ವಾಯುಮಂಡಲದಲ್ಲೂ ಸಹ ಆಗುತ್ತದೆ ಮತ್ತು ಸರ್ವ ಪ್ರಾಪ್ತಿಗಳು ಪರಮಾತ್ಮನ ಕೊಡುಗೆ ಆಗಿದೆ. ಪರಮಾತ್ಮ ತಂದೆಯ ಮೂಲಕ ಸರ್ವ ಶಕ್ತಿಗಳು ಸರ್ವ ಗುಣಗಳು, ಸರ್ವ ಖಜಾನೆಗಳು ಪ್ರಾಪ್ತಿ ಮಾಡಿಕೊಂಡಿರುವ ಆತ್ಮ ಸದಾ ಸಂತುಷ್ಟವಾಗಿರುತ್ತದೆ. ಸಂತುಷ್ಟ ಆತ್ಮನ ಸ್ಥಿತಿ ಸದಾ ಪ್ರಗತಿಯ ಕಡೆ ಇರುತ್ತದೆ. ಪರಿಸ್ಥಿತಿ ಸಂತುಷ್ಟ ಆತ್ಮನ ಮೇಲೆ ಪ್ರಭಾವ ಹಾಕಲು ಸಾಧ್ಯವಿಲ್ಲ ಏಕೆಂದರೆ ಎಲ್ಲಿ ಸಂತುಷ್ಟತೆ ಇದೆಯೋ ಅಲ್ಲಿ ಸರ್ವ ಶಕ್ತಿಗಳು, ಸರ್ವ ಗುಣಗಳು ಸ್ವತಃವಾಗಿಯೇ ಬರುತ್ತದೆ. ಒಂದು ಸಂತುಷ್ಟತೆ ಅನೇಕ ಗುಣಗಳನ್ನು ತನ್ನದನ್ನಾಗಿ ಮಾಡಿಕೊಳ್ಳುತ್ತದೆ ಅಂದಾಗ ಪ್ರತಿಯೊಬ್ಬರು ನಾನು ಸದಾ ಸಂತುಷ್ಟ ಆತ್ಮನಾಗಿದ್ದೇನೆ? ಎಂದು ತಮ್ಮನ್ನು ತಾವು ಕೇಳಿಕೊಳ್ಳಿ. ಸಂತುಷ್ಟ ಆತ್ಮ ಸದಾ ಸರ್ವರಿಗೆ, ತಂದೆಗೆ ಸಮೀಪ ಮತ್ತು ಸಮಾನ ಸ್ಥಿತಿಯಲ್ಲಿ ಇರುತ್ತಾರೆ ಆದರೆ ಈ ಸ್ಥಿತಿಯಲ್ಲಿ ಇರಲು ಬಹಳ ಸಾಕ್ಷಿ ಸ್ಥಿತಿ ಬೇಕಾಗಿದೆ, ತ್ರಿಕಾಲದರ್ಶಿ ಸ್ಥಿತಿ ಬೇಕಾಗಿದೆ. ಪ್ರತಿಯೊಂದು ಕರ್ಮ ತ್ರಿಕಾಲದರ್ಶಿ ಅರ್ಥಾತ್ ಪ್ರತಿಯೊಂದು ಮಾತನ್ನು ಮೂರು ಕಾಲಗಳನ್ನು ಪರಿಶೀಲನೆ ಮಾಡಿ ನಂತರ ಕರ್ಮ ಮಾಡುವವರು. ಇದಕ್ಕಾಗಿ ಎರಡು ಮಾತುಗಳು ಅವಶ್ಯವಾಗಿ ಬೇಕಾಗಿದೆ. ಅವೆರಡು ಮಾತುಗಳು ಸಂಬಂಧ ಮತ್ತು ಸಂಪತ್ತು. ಸಂಬಂಧವೂ ಅವಿನಾಶಿ ಮತ್ತು ಸಂಪತ್ತು ಅವಿನಾಶಿಯಾಗಿದೆ. ಅವು ಅವಿನಾಶಿ ತಂದೆಯ ಮೂಲಕ ಪ್ರಾಪ್ತಿ ಆಗುತ್ತವೆ. ಅವಿನಾಶಿ ಸಂಪತ್ತು ಮತ್ತು ಸಂಬಂಧ ಪ್ರಾಪ್ತಿ ಆದಾಗ ಆತ್ಮ ಸದಾ ಸಂತುಷ್ಟ ಮತ್ತು ತಂದೆಗೆ ಸರ್ವ ಆತ್ಮಗಳಿಗೆ ಅತೀ ಪ್ರಿಯ ಆಗಿ ಬಿಡುತ್ತದೆ. ಯಾವುದೇ ಪರಿಸ್ಥಿತಿ ಮಾಯೆಯ ರೂಪದಲ್ಲಿ ಬಂದಾಗ ಗಾಬರಿ ಆಗುವುದಿಲ್ಲ. ಬೇಹದ್ದಿನ ಪರದೆ ಮೇಲೆ ಮಿಕ್ಕಿ ಮೌಸ್ ಆಟ ನಡೆಯುತ್ತಿದೆ ಎಂದು ಅನುಭವ ಮಾಡುತ್ತಾರೆ. ಚಿಂತಿತರಾಗುವುದಿಲ್ಲ. ಮಿಕ್ಕಿ ಮೌಸ್ನ ಆಟವನ್ನು ನೋಡಿ ಮನೋರಂಜನೆ ಮಾಡುತ್ತಾರೆ. ಮಾಯೆಯ ಭಿನ್ನ-ಭಿನ್ನ ರೂಪ, ಭಿನ್ನ-ಭಿನ್ನ ಮಿಕ್ಕಿ ಮೌಸ್ನ ರೂಪದಲ್ಲಿ ಅನುಭವ ಮಾಡುತ್ತಾರೆ. ಈ ರೀತಿ ಸ್ಥಿತಿಯ ಅನುಭವ ತಂದೆಯ ಮೂಲಕ ಸರ್ವರಿಗೆ ಪ್ರಾಪ್ತಿ ಆಗಲೇಬೇಕು ಮತ್ತು ಮಾಡಿದ್ದಾರೆ.

ಬಾಪ್ದಾದಾ ನೋಡುತ್ತಾರೆ ನಿರ್ಭಯ ಏಕಾಗ್ರ ಬುದ್ಧಿಯವರಾಗಿ ಯಾವುದೇ ಪರಿಸ್ಥಿತಿಯಲ್ಲಿ ಏರುಪೇರು ಆಗುವುದಿಲ್ಲ. ಈ ರೀತಿ ವಿಜಯಿ ಆತ್ಮಗಳು ಸದಾ ತಂದೆಯ ಪ್ರತಿಯೊಬ್ಬ ಮಗುವಿನಲ್ಲಿ ಪ್ರತಿಯೊಬ್ಬ ಮಗು ವಿಜಯಿ ಆಗಿ ತಂದೆಗೆ ತನ್ನ ವಿಜಯದ ಸ್ವರೂಪವನ್ನು ತೋರಿಸಲಿ ಎಂಬ ಶುಭ ಆಸೆ ಇದೆ. ಪ್ರತಿಯೊಬ್ಬರು ತಮ್ಮೊಂದಿಗೆ ತಾವು ನಾನು ಯಾರಾಗಿದ್ದೇನೆ? ಎಂದು ಕೇಳಿಕೊಳ್ಳಿ. ಬಾಪ್ದಾದಾರವರು ಮೊದಲೂ ತಿಳಿಸಿದ್ದಾರೆ ಕೆಲವೊಮ್ಮೆ ಎಂಬ ಶಬ್ದ ಸಮಯ ಪ್ರಮಾಣ ಈಗ ಬ್ರಾಹ್ಮಣ ಶಬ್ದ ಕೋಶದಿಂದ ಸಮಾಪ್ತಿ ಮಾಡಿ ಬಿಡಿ. ತಂದೆಯಿಂದ ಸದಾ ಕಾಲಕ್ಕಾಗಿ ಆಸ್ತಿಯನ್ನು ಪಡೆಯಬೇಕೆಂದರೆ ಪ್ರತಿಯೊಂದು ಪ್ರಾಪ್ತಿ ಸದಾ ಪ್ರಾಪ್ತಿ ಆಗಬೇಕು ಏಕೆಂದರೆ ತಂದೆಯ ಹೃದಯದ ಆಸೆಗಳನ್ನು ಪೂರ್ಣ ಮಾಡುವವರು ಆಸೆಗಳ ದೀಪಕರಾಗಿದ್ದೀರಿ. ಅವರ ಸಂಕಲ್ಪದಲ್ಲೂ ಸಹ ಕೆಲವೊಮ್ಮೆ ಎಂಬ ಶಬ್ದ ಬರಲು ಸಾಧ್ಯವಿಲ್ಲ ಏಕೆ? ಸದಾ ತಂದೆಯ ಜೊತೆ ಮತ್ತು ತಂದೆಗೆ ಜೊತೆಗಾರರಾಗಿದ್ದಾರೆ. ಜೊತೆಯಲ್ಲಿ ಇರುವವರೂ ಸಹ ಆಗಿದ್ದಾರೆ ಮತ್ತು ಜೊತೆಗಾರರಾಗಿ ವಿಶ್ವ ಪರಿವರ್ತನೆಯ ಕಾರ್ಯವನ್ನು ಮಾಡುವವರಾಗಿದ್ದಾರೆ.

ಅಂದಾಗ ಹೇಳಿ ಈ ಸದಾ ಕಾಲದ ವರದಾನ ಬಾಪ್ದಾದಾರವರ ಮೂಲಕ ಪ್ರಾಪ್ತಿ ಮಾಡಿಕೊಂಡು ಬಿಟ್ಟಿದ್ದೀರಲ್ಲವೇ. ಇವರಂತೂ ಜನ್ಮ ಪಡೆದುಕೊಳ್ಳುತ್ತಲೇ ಬಾಪ್ದಾದಾ ಪ್ರತಿಯೊಬ್ಬ ಮಗುವಿಗೆ ಸದಾ ಯೋಗಿ ಭವ, ಪವಿತ್ರ ಭವ ಎಂಬ ವರದಾನವನ್ನು ಕೊಡುತ್ತಾರೆ. ಈ ವರದಾನದ ಮೂಲಕ ಯಾವುದೆಲ್ಲಾ ಪ್ರಾಪ್ತಿಗಳು ಆಗುತ್ತದೋ ಅದು ಸದಾಕಾಲಕ್ಕಾಗಿ ಆಗುತ್ತದೆ. ಕೆಲವೊಮ್ಮೆ ಆಗುವುದಿಲ್ಲ ಸದಾ ಕಾಲಕ್ಕಾಗಿ ಆಗುತ್ತದೆ. ಅಂದಾಗ ಎಲ್ಲಾ ಮಕ್ಕಳು ಸದಾ ಕಾಲಕ್ಕಾಗಿ ಅಧಿಕಾರಿ ಆಗಿದ್ದಾರೆ ಏಕೆಂದರೆ ತಂದೆಯ ಪ್ರತಿಯೊಬ್ಬ ಮಗುವಿನಲ್ಲಿ ಭಲೆ ಕೊನೆಯ ಮಗು ಆಗಿರಬಹುದು ಆದರೆ ತಂದೆಗೆ ಪ್ರತಿಯೊಬ್ಬ ಮಗುವಿನ ಮೇಲೆ ಹೃದಯದ ಪ್ರೀತಿ ಇದೆ ಏಕೆಂದರೆ ಯಾರು ದೊಡ್ಡ ದೊಡ್ಡವರು ಇರುತ್ತಾರೆ ಅವರು ತಮ್ಮನ್ನು ತಾವು ಬುದ್ಧಿವಂತರು ಎಂದು ತಿಳಿಯುತ್ತಾರೆ ಅವರೂ ತಂದೆಯನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಆದರೆ ಬಾಪ್ದಾದಾರವರ ಕೊನೆಯ ಮಗು ತಂದೆಯನ್ನು ತಿಳಿದುಕೊಂಡಿದ್ದಾರೆ, ಹೃದಯದಿಂದ ನನ್ನ ಬಾಬಾ ಎಂದು ಹೇಳುತ್ತಾರೆ ಆದ್ದರಿಂದ ತಂದೆಗೆ ಪ್ರತಿಯೊಬ್ಬ ಮಗುವಿನ ಮೇಲೆ ಅವಿನಾಶಿ ಪ್ರೀತಿ ಇದೆ. ಆದ್ದರಿಂದ ಪ್ರತಿಯೊಬ್ಬ ಮಗುವಿಗೆ ತಂದೆಯ ವರದಾನವಿದೆ. ಪ್ರತಿನಿತ್ಯ ಭಲೆ ನಂಬರ್ವಾರ್ ಆಗಿರಬಹುದು ಆದರೆ ಒಂದೇ ಸಮಯದಲ್ಲಿ ಒಂದೇ ವರದಾನವನ್ನು ಎಲ್ಲ ಮಕ್ಕಳಿಗೆ ಒಟ್ಟಿಗೆ ಬಾಪ್ದಾದಾರವರು ಕೊಡುತ್ತಾರೆ. ಪ್ರತಿನಿತ್ಯ ಬಾಪ್ದಾದಾರವರ ಪ್ರತಿಯೊಬ್ಬ ಮಕ್ಕಳು ನಂಬರ್ವಾರ್ ಆಗಿದ್ದಾರೆ ಆದರೆ ನನ್ನ ಬಾಬಾ ಎಂದು ಹೇಳಿದರೆ ವರದಾನಕ್ಕೆ ಅಧಿಕಾರಿ ಆಗಿ ಬಿಟ್ಟಿದ್ದಾರೆ. ಪ್ರತಿಯೊಬ್ಬ ಮಗುವಿಗೆ ಭಲೆ ಎಲ್ಲೇ ಇರಲಿ, ಭಾರತದಲ್ಲಿ ಇರಲಿ, ವಿದೇಶದಲ್ಲಿ ಇರಲಿ ಆದರೆ ವರದಾನ ಎಲ್ಲರಿಗೆ ಒಬ್ಬ ಬಾಪ್ದಾದಾರವರ ಮೂಲಕವೇ ಸಿಗುತ್ತದೆ ಮತ್ತೆ ವರದಾನವನ್ನು ಪ್ರಾಪ್ತಿ ಮಾಡಿಕೊಂಡು ಖುಷಿ ಆಗುತ್ತಾರೆ ಆದರೆ ಎರಡೂ ಪ್ರಕಾರದ ಮಕ್ಕಳು ಇದ್ದಾರೆ, ಒಂದು ರೀತಿ ಮಕ್ಕಳು ವರದಾನವನ್ನು ನೋಡಿ ಖಂಡಿತ ಖುಷಿ ಆಗುತ್ತಾರೆ, ಯಾರು ಕೇವಲ ವರದಾನವನ್ನು ನೋಡಿ ಖುಷಿ ಆಗುವುದಿಲ್ಲ, ಇದು ನನ್ನ ವರದಾನ ಆಗಿದೆ ಎಂದು ವರ್ಣನೆ ಮಾಡುವುದಿಲ್ಲ ಆದರೆ ವರದಾನವನ್ನು ಫಲೀಭೂತ ಮಾಡುತ್ತಾರೆ ಅವರೇ ಮೊದಲಿನ ನಂಬರ್ ಪಡೆದುಕೊಳ್ಳುತ್ತಾರೆ. ವರದಾನದಿಂದ ಲಾಭವನ್ನು ಪಡೆದುಕೊಂಡು ವರದಾನದ ಫಲವನ್ನು ತೆಗೆಯುತ್ತಾರೆ. ಬೀಜವಾಗಿದೆ ಆದರೆ ಬೀಜವನ್ನು ಫಲೀಭೂತ ಮಾಡಿಲ್ಲವೆಂದರೆ ಫಲವನ್ನು ತೆಗೆದಿಲ್ಲವೆಂದರೆ ಕೇವಲ ಖುಷಿ ಆಗುತ್ತದೆ, ವರದಾನದಿಂದ ಫಲ ತೆಗೆಯಲು ಹೇಗೆ ಯಾವುದಾದರೂ ಬೀಜವಿರುತ್ತದೆ ಅದರ ಫಲವನ್ನು ತೆಗೆಯಲು ಇದಕ್ಕೆ ನೀರು ಮತ್ತು ಬಿಸಿಲು ಬೇಕು ಆಗಲೇ ಫಲ ಬರುತ್ತದೆ. ಅಂದಾಗ ಇಲ್ಲೂ ಸಹ ಪ್ರತಿಯೊಬ್ಬ ಮಗು ವರದಾನದ ಫಲ ತೆಗೆಯಬೇಕು ಯಾವುದರಿಂದ ವಿಸ್ತಾರ ಆಗುತ್ತಿರಲಿ. ತಮ್ಮ ಮನದಲ್ಲಿಯೇ ವರದಾನದ ಫಲದಿಂದ ವೃದ್ಧಿ ಆಗುತ್ತಿರಲಿ, ಇಲ್ಲೂ ಸಹ ವರದಾನದ ಫಲವನ್ನು ತೆಗೆಯಲು ಪದೇ-ಪದೇ ವರದಾನವನ್ನು ಸ್ಮೃತಿಗೆ ತರಿಸಿಕೊಳ್ಳಿ ಎಂದು ಬಾಬಾ ಹೇಳುತ್ತಾರೆ. ಸ್ಮೃತಿ ಸ್ವರೂಪದ ಸ್ಥಿತಿಯಲ್ಲಿ ಸ್ಥಿತರಾಗಿ. ಪದೇ-ಪದೇ ಸ್ಮರಣೆ ಮಾಡುವುದಲ್ಲ ಆದರೆ ಸ್ಮೃತಿ ಇರಬೇಕು. ಇದು ನೀರನ್ನು ಕೊಡುವುದು ಮತ್ತು ಸ್ವರೂಪದಲ್ಲಿ ಸ್ಥಿತರಾಗುವುದು ಬಿಸಿಲು ಕೊಡುವುದು. ಅಂದಾಗ ಇದು ಫಲೀಭೂತ ಆಗುವುದರಿಂದ ಸ್ವಯಂನಲ್ಲೂ ಬಹಳ ಶಕ್ತಿ ತುಂಬುತ್ತದೆ ಮತ್ತು ಬೇರೆಯವರಿಗೂ ಆ ಫಲದ ಮೂಲಕ ಶಕ್ತಿಯ ಅನುಭವ ಮಾಡಿಸಬಹುದು.

ಅಂದಾಗ ಬಾಪ್ದಾದಾ ಈಗ ಏನು ಬಯಸುತ್ತಾರೆ? ಏಕೆಂದರೆ ಬಾಪ್ದಾದಾರವರು ಸ್ವಲ್ಪ ಸಮಯದಿಂದ ಸಮಯದ ವಾರ್ನಿಂಗ್ ಕೊಡುತ್ತಲೇ ಇದ್ದಾರೆ. ಪ್ರತಿಯೊಬ್ಬ ಮಗುವಿನ ವಿದ್ಯೆಯ ಫಲಿತಾಂಶದ ಸಮಯ ಅಚಾನಕ್ ಬರುವುದಿದೆ. ಅದಕ್ಕಾಗಿ ಸದಾ ಎವರ್ರೆಡಿ. ಜೊತೆ-ಜೊತೆಗೆ ಬಾಪ್ದಾದಾ ಈಗ ಹಾರುವ ಕಲೆಯ ತೀವ್ರ ಪುರುಷಾರ್ಥದ ಸಮಯವಾಗಿದೆ ಎಂಬ ಸೂಚನೆಯೂ ಸಹ ಕೊಡುತ್ತಿದ್ದಾರೆ, ನಡೆಯುತ್ತಿದ್ದೇವೆ ಅಲ್ಲ ಹಾರುತ್ತಿದ್ದೇವೆ. ಸಾಧಾರಣವಾಗಿ ತಮ್ಮ ದಿನಚರಿಯನ್ನು ಕಳೆಯುವುದು, ಈಗ ಅಂತಹ ಸಾಧಾರಣ ಪುರುಷಾರ್ಥದ ಸಮಯ ಕಳೆದು ಹೋಗಿದೆ ಆದ್ದರಿಂದ ಬಾಪ್ದಾದಾ ಪ್ರತಿಯೊಂದು ಸೆಕೆಂಡ್, ಪ್ರತಿಯೊಂದು ಸಂಕಲ್ಪ ಚೆಕ್ ಮಾಡಿಕೊಳ್ಳಿ ಎಂದು ಸೂಚನೆ ಕೊಡುತ್ತಿದ್ದಾರೆ. ತಮ್ಮ ತೀವ್ರ ಪುರುಷಾರ್ಥ ಮಾಡದೆ ಒಂದು ಗಂಟೆ ಸಾಧಾರಣ ಪುರುಷಾರ್ಥದಲ್ಲಿ ಇದ್ದರೆ ಆ ಒಂದು ಗಂಟೆಯಲ್ಲಿ ಅಚಾನಕ್ ಒಂದುವೇಳೆ ಫೈನಲ್ ಪೇಪರ್ನ ಸಮಯ ಬಂದರೆ ಅಂತಿಮ ಗತಿ ಆಗುತ್ತದೆ. ಆ ಒಂದು ಗಂಟೆಯ ಸಾಧಾರಣ ಪುರುಷಾರ್ಥ ಎಷ್ಟು ನಷ್ಟ ಮಾಡುತ್ತದೆ. ಆದ್ದರಿಂದ ಬಾಪ್ದಾದಾ ಪ್ರತಿಯೊಬ್ಬ ಮಗುವಿಗೆ ಪ್ರತಿಯೊಂದು ಸಂಕಲ್ಪ, ಪ್ರತಿಯೊಂದು ಸೆಕೆಂಡ್ ಸಮಯದ ಮಹತ್ವವನ್ನು ಸಮಯ ಅನುಸಾರವಾಗಿ ಸೂಚನೆ ಕೊಡುತ್ತಿದ್ದಾರೆ. ಏರುಪೇರಿನ ಸಮಯದಲ್ಲಿ ಅಚಲರಾಗಿರುವ ಪುರುಷಾರ್ಥ ತೀವ್ರ ಪುರುಷಾರ್ಥಿಯೇ ಮಾಡಲು ಸಾಧ್ಯವಾಗುತ್ತದೆ. ಸಾಧಾರಣ ಪುರುಷಾರ್ಥಿ ಎವರ್ರೆಡಿ ಆಗುವುದರಲ್ಲಿ ಸಮಯವನ್ನು ಉಪಯೋಗಿಸುತ್ತಾರೆ ಮತ್ತು ಬಾಪ್ದಾದಾರವರು ಸೆಕೆಂಡಿನಲ್ಲಿ ಬಿಂದು ಅರ್ಥಾತ್ ಫುಲ್ಸ್ಟಾಪ್ ಎಂದು ಹೇಳಿದ್ದಾರೆ. ಒಂದುವೇಳೆ ತೀವ್ರ ಪುರುಷಾರ್ಥಿ ಆಗಲಿಲ್ಲವೆಂದರೆ ಏನು ಆಗುತ್ತದೆ? ಅನುಭವಿಯಂತೂ ಆಗಿದ್ದೀರಿ. ಫುಲ್ಸ್ಟಾಪ್ಗೆ ಬದಲಾಗಿ ಪ್ರಶ್ನಾರ್ಥಕ ಆಗುವುದಿಲ್ಲ ತಾನೇ? ಬಿಂದು ಎಷ್ಟು ಸಹಜವಾಗಿದೆ ಮತ್ತು ಪ್ರಶ್ನಾರ್ಥಕ ಚಿನ್ಹೆ ಎಷ್ಟು ಡೊಂಕು ಆಗಿದೆ? ಫುಲ್ಸ್ಟಾಪ್ ಇಟ್ಟರೆ ಎಲ್ಲಾ ಸ್ಟಾಪ್ ಆಗಿ ಬಿಡಬೇಕು. ಅಲ್ಪವಿರಾಮದ ಚಿನ್ಹೆಯೂ ಇರಬಾರದು, ಆಶ್ಚರ್ಯದ ಚಿನ್ಹೆಯೂ ಸಹ ಇರಬಾರದು. ಏನು ಮಾಡುವುದು? ಇದು ಯೋಚನೆ ಮಾಡುವ ಸಮಯವೂ ಸಹ ಸಿಗುವುದಿಲ್ಲ. ಅಂದಾಗ ಯಾವುದಾದರೂ ಮಗು ಇಷ್ಟು ತೀವ್ರ ಪುರುಷಾರ್ಥ ಮಾಡುವುದೇ ಪೇಪರಿನಲ್ಲಿ ಪಾಸ್ ಆಗುವುದು ಎಂದು ಯೋಚನೆ ಮಾಡಲು ಸಾಧ್ಯವಿಲ್ಲ.

ಅಂದಾಗ ಈಗಲೂ ಸಹ ಕಾರಣದಿಂದ ಅಥವಾ ಕಾರಣ ಇಲದೆ ಇದ್ದರೂ ಏಕೆ? ಏನು? ಹೇಗೆ?... ಎಂಬುದು ಕೆಲವು ಮಕ್ಕಳ ಚಾರ್ಟಿನಲ್ಲಿ ಕಂಡು ಬರುವುದು ಬಾಪ್ದಾದಾರವರು ನೋಡುತ್ತಿದ್ದೇವೆ. ಬಹಳ ಮಕ್ಕಳ ಚಾರ್ಟಿನಲ್ಲಿ ಬಾಪ್ದಾದಾ ನೋಡಿದ್ದಾರೆ ವ್ಯರ್ಥ ಸಂಕಲ್ಪಗಳ ಅಲೆಗಳು ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ವ್ಯರ್ಥದ ವೇಗ ತೀವ್ರವಾಗುತ್ತದೆ ಯಾವುದರಿಂದ ಸಾಧಾರಣ ಸಂಕಲ್ಪಗಳ ಒಂದು ಗಂಟೆ ಮತ್ತು ಫಾಸ್ಟ್ ಸಂಕಲ್ಪಗಳ ಒಂದು ನಿಮಿಷವಾಗಿದೆ. ಆದ್ದರಿಂದ ಈ ದಿನ ಎಲ್ಲರ ಪ್ರಿಯ ಬಾಪ್ದಾದಾರವರ ಪ್ರಿಯ ಸಂತುಷ್ಟ ಆತ್ಮಗಳು ಯಾರಾಗಿದ್ದಾರೆ ಎಂಬುದು ನೋಡುತ್ತಿದ್ದಾರೆ. ಸಂತುಷ್ಟ ಆತ್ಮನ ಸಂಕಲ್ಪದಲ್ಲೂ ಸಹ ಏಕೆ, ಏನು ಎಂಬ ಭಾಷೆ ಸ್ವಪ್ನದಲ್ಲೂ ಬರುವುದಿಲ್ಲ. ಏಕೆಂದರೆ ಆ ಆತ್ಮನಿಗೆ ಮೂರು ವಿಶೇಷ ಮಾತುಗಳು, ಮೂರು ಬಿಂದುಗಳು ಆತ್ಮ, ಪರಮಾತ್ಮ ಮತ್ತು ಡ್ರಾಮಾ, ಮೂರನ್ನೂ ಸಮಯದಲ್ಲಿ ಕಾರ್ಯದಲ್ಲಿ ತೊಡಗಿಸಬಹುದು ಏಕೆಂದರೆ ಅಂತಹ ಸಮಯದಲ್ಲಿ ಶಕ್ತಿಗಳ ಖಜಾನೆಯ ಅವಶ್ಯವಾಗಿದೆ ಮತ್ತು ಮಾಸ್ಟರ್ ಸರ್ವಶಕ್ತಿವಂತ ಅವರಾಗಿದ್ದಾರೆ, ಯಾರು ಯಾವ ಸಮಯದಲ್ಲಿ ಯಾವ ಶಕ್ತಿಗೆ ಆರ್ಡರ್ ಮಾಡುತ್ತಾರೆ ಆ ಶಕ್ತಿ ಹಾಜಿರಾಗಿ ಬಿಡಬೇಕು. ಸಹನೆ ಶಕ್ತಿ ಬೇಕಾದರೆ ಎದುರಿಸುವ ಶಕ್ತಿ ಬಂದರೆ ಶಕ್ತಿಯೇ ಆಗಿದೆ ಆದರೆ ಆ ಸಮಯದಲ್ಲಿ ಕೆಲಸಕ್ಕೆ ಬರುವುದಿಲ್ಲ ಅಂದಾಗ ಸರ್ವ ಖಜಾನೆಗಳಿಗೆ ಮೂರು ಬಿಂದುಗಳು ಬೀಗದ ಕೈ ಆಗಿದೆ. ತಾವು, ತಂದೆ ಮತ್ತು ಡ್ರಾಮ ಆಗಿದೆ.

ಬಾಪ್ದಾದಾರವರಿಗೆ ಒಂದು ಸಂಕಲ್ಪ ಇದೆ ಹೇಳುವುದೇ? ಮಾಡಬೇಕಾಗುತ್ತದೆ. ಯಾರು ಮಾಡಲು ಸಿದ್ಧರಾಗಿದ್ದಾರೆ, ಅವರು ಕೈ ಎತ್ತಿ, ಮಾಡಬೇಕಾಗುತ್ತದೆ, ಮಾಡಬೇಕಾಗುತ್ತದೆ. ಕೈ ಎತ್ತುತ್ತಿದ್ದಾರೆ, ಮನಸ್ಸಿನ ಕೈ ಎತ್ತುತ್ತಿದ್ದೀರಾ? ಅಥವಾ ಶರೀರದ ಕೈ ಎತ್ತುತ್ತಿದ್ದೀರಾ? ಮನಸ್ಸಿನ ಕೈ ಪಕ್ಕಾ ಆಗುತ್ತದೆ, ಬಾಪ್ದಾದಾರವರು ಸಮಯ ಪ್ರಮಾಣ ಪ್ರತಿಯೊಬ್ಬ ಮಕ್ಕಳ ಮೇಲೆ 15 ದಿನದ ನಂತರ ಮತ್ತೆ ಬಾಬಾರವರ ಮಿಲನ ಇರುತ್ತದೆ, ಅಂದಾಗ ಈ 15 ದಿನಗಳಲ್ಲಿ ಪ್ರಾಕ್ಟಿಸ್ಗಾಗಿ ವಿಶೇಷ ಅಭ್ಯಾಸ ಮಾಡಲಿ ಎಂಬ ಶುಭ ಆಸೆ ಇಟ್ಟುಕೊಳ್ಳುತ್ತಾರೆ. ಸದಾ ಅಂತೂ ಇರಬೇಕು ಆದರೆ 15 ದಿನದ ಟ್ರೈಯಲ್ ಮಾಡಿ. ಮತ್ತು ತಮ್ಮ-ತಮ್ಮ ಸಂಬಂಧಿತ ಸೇವಾಕೇಂದ್ರದವರಿಂದಲೂ ಮಾಡಿಸಿ. ಸುತ್ತುತ್ತಾ, ಪೋನ್ ಮಾಡಿ ಅವರಿಗೆ ನೆನಪಿಗೆ ತರಿಸಿ. ಅವರಿಗೆ ಹೋಂವರ್ಕ್ ಮಾಡುತ್ತಿದ್ದೀರಾ ಎಂದು ನೆನಪು ಮಾಡಿ. ಹೋಂವರ್ಕ್ ಏನಾಗಿದೆ? ಸಹಜವಾಗಿದೆಯೇ? ಪ್ರತಿಯೊಂದು ಭಿನ್ನ-ಭಿನ್ನ ಪರಿಸ್ಥಿತಿಯನ್ನು, ಮಾತುಗಳನ್ನು ಕ್ರಾಸ್ ಮಾಡುತ್ತೀರಿ ಆದರೆ ಈ 15 ದಿನಗಳು ಪ್ರತಿಯೊಬ್ಬರ ಸಂಕಲ್ಪ, ವಾಣಿ ಮತ್ತು ಕರ್ಮದಲ್ಲಿ ಕಡಿಮೆ ಪಕ್ಷ 80% ಅಂಕೆಗಳು ತೆಗೆದುಕೊಳ್ಳಬೇಕು, ಆದರೂ ಬಾಪ್ದಾದಾ 20% ಮಾರ್ಕ್ಸ್ ಕೊಟ್ಟು ಬಿಡುತ್ತಾರೆ. ಇಷ್ಟ ಆಗಿದೆಯೇ? ಇಷ್ಟ ಆಗಿದೆಯೇ? ಕೊಡುವುದೇ? ಈ ಕೆಲಸ ಕೊಡುವುದೇ? ಒಳ್ಳೆಯದು 15 ದಿನ ಮಾಡಬೇಕು, ಮಾಯೆಯೂ ಸಹ ಕೇಳುತ್ತದೆ, ಮಾತುಗಳೂ ಬರುತ್ತದೆ, ಮಾತುಗಳನ್ನು ನೋಡಬಾರದು, ಪಾಸ್ ಆಗಬೇಕು. ಇದನ್ನು ನೆನಪಿಟ್ಟುಕೊಳ್ಳಬೇಕು. 15 ದಿನ ಯಾವುದೇ ದೊಡ್ಡ ಮಾತಲ್ಲ, ಆದರೆ ಬಾಪ್ದಾದಾರವರ ಬಳಿ ಪ್ರತಿಯೊಬ್ಬರು ಸತ್ಯ ಹೃದಯ, ಸ್ವಚ್ಛ ಹೃದಯ, ಸ್ವಪ್ನದಲ್ಲೂ ಸಂಕಲ್ಪ, ವಾಣಿ ಮತ್ತು ಕರ್ಮದಲ್ಲಿ ಪಾಸ್ ಆಗಿ ತೋರಿಸಬೇಕು. ಆಗುತ್ತದೆಯೇ? ಆಗುತ್ತದೆಯೇ? ಟೀಚರ್ಸ್ ಹೇಳಿ ಆಗುತ್ತದೆಯೇ? 15 ದಿನ ಏನೂ ಇಲ್ಲ ಆದರೆ ಬಾಪ್ದಾದಾ ಟ್ರಯಲ್ಗಾಗಿ ಸಂಕಲ್ಪವೂ ವ್ಯರ್ಥ ಆಗಬಾರದು, ಯುದ್ಧ ಮಾಡಬಾರದು, ವಿಜಯಿ ಆಗಬೇಕು, 15 ದಿನಗಳಿಗಾಗಿ ಸಂಪೂರ್ಣ ವಿಜಯಿ ಆಗಬೇಕು ಎಂದು ಹೇಳುತ್ತೇವೆ. ಕಷ್ಟವಾಗುತ್ತದೋ ಅಥವಾ ಸಹಜವಾಗುತ್ತದೋ, ಸಹಜವಾಗಿದೆಯೇ ಕೈ ಎತ್ತಿ. ಸಹಜವಾಗಿದೆಯೇ? ಅಂದಾಗ ಬಾಪ್ದಾದಾರವರು ಈ 15 ದಿನದ ರಿಜಲ್ಟ್ ನೋಡುತ್ತೇವೆ ಮತ್ತು ಮುಂದುವರೆಸುತ್ತೇವೆ. 15 ದಿನ ಯಾರಾದರೂ ಮಾಡಬಹುದಲ್ಲವೇ. ಮಾಡಬಹುದಲ್ಲವೇ? ಮಧುಬನದವರು ಕೈ ಎತ್ತಿ, ಮುಂದೆ ಮಧುಬನದವರು ಕುಳಿತಿದ್ದಾರೆ, ಬಹಳ ಒಳ್ಳೆಯದು. ವಿದೇಶದವರು ಮತ್ತು ಭಾರತದವರು ಎಲ್ಲರೂ ಮಾಡಬೇಕು, ಹಳ್ಳಿಯವರು ಅಥವಾ ದೊಡ್ಡ ನಗರದವರು ಎಲ್ಲರೂ 15 ದಿನದ ರಿಕಾರ್ಡ್ ಇಡಬೇಕು. ಏಕೆ? ಏನು? ಎಂಬ ಏನು ಮಾಡಲಿ, ಮಾತೇ ಆ ರೀತಿ ಇದೆ ಎಂದು ಹೇಳಬಾರದು. 80% ತೆಗೆದುಕೊಳ್ಳಲೇಬೇಕು. ಆದರೂ ಬಾಪ್ದಾದಾ ಹಗುರ ಮಾಡುತ್ತಿದ್ದಾರೆ, 20% ಬಿಟ್ಟಿದ್ದಾರೆ ಏಕೆಂದರೆ ಬಾಪ್ದಾದಾ ನೋಡುತ್ತಿದ್ದಾರೆ ಕೆಲವುಕಡೆ ನಡೆಯುತ್ತಾ-ನಡೆಯುತ್ತಾ ಮಾಯೆ ಹುಡುಗಾಟಿಕೆ ಮತ್ತು ಆಲಸ್ಯ, ಇದು ಇತ್ತು, ಇದು ಇತ್ತು ಎನ್ನುವುದು ರಾಯಲ್ ಆಲಸ್ಯ ಆಗಿದೆ. ಹುಡುಗಾಟಿಕೆ ತೀವ್ರ ಪುರುಷಾರ್ಥದಲ್ಲಿ ಕೊರತೆ ಮಾಡುತ್ತದೆ ಏಕೆಂದರೆ ಈಗ ಬಾಪ್ದಾದಾ ಎಲ್ಲರೂ ಯಾರೆಲ್ಲಾ ವಿದ್ಯಾರ್ಥಿ ಆಗಿದ್ದಾರೆ ಪ್ರತಿಯೊಬ್ಬ ವಿದ್ಯಾರ್ಥಿಗೆ ಮೊದಲು ಈ 15 ದಿನದ ಟ್ರೈಯಲ್ ಮಾಡಿಸಿ ಸ್ವಲ್ಪ ಸಮಯ ಅದೇ ಅಭ್ಯಾಸ ಮಾಡಿಸಲು ಬಯಸುತ್ತಾರೆ. ಎಲ್ಲರಿಂದ ಕೈ ಎತ್ತಿಸುವುದೇ, ಎವರ್ರೆಡಿ ಆಗಿದ್ದೀರಾ? ಎಲ್ಲರೂ ಕೈ ಎತ್ತಬಹುದೇ? ಸಮಯದ ಅಭ್ಯಾಸವೂ ಬೇಕು. ಆದ್ದರಿಂದ ಈ ಸ್ವಲ್ಪ ಅಭ್ಯಾಸ ಮಾಡಿಸುತ್ತೇವೆ. ಒಳ್ಳೆಯದು ಈಗ ಏನು ಮಾಡಬೇಕು?

ಮೊದಲನೇ ಬಾರಿ ಎಷ್ಟು ಜನ ಬಂದಿದ್ದಾರೆ ಅವರು ಎದ್ದು ನಿಲ್ಲಿ : ಒಳ್ಳೆಯದು, ತಮಗೆ ಬಾಪ್ದಾದಾರವರ ಮುಂದೆ ಬರುವ ದಿನದ ಬಹಳ ಬಹಳ ಶುಭಾಶಯಗಳು, ಶುಭಾಶಯಗಳು. ತಂದೆಯ ದೃಷ್ಟಿ ಮಕ್ಕಳ ಮೇಲೆ ಇದೆ ಮತ್ತು ಮಕ್ಕಳ ದೃಷ್ಟಿ ತಂದೆಯ ಮೇಲೆ ಬಿತ್ತು ಅಂದಾಗ ಬಹಳ-ಬಹಳ ಶುಭಾಶಯಗಳು. ಒಳ್ಳೆಯದು. ಕೇಕ್ ಇಲ್ಲ ಆದರೆ ಖುಷಿಯ ಕೇಕ್ನ್ನು ಕಟ್ ಮಾಡಿ. ಒಳ್ಳೆಯದು, ಈಗ ತಡವಾಗಿ ಬಂದಿದ್ದೀರಿ ಆದರೆ ಫಾಸ್ಟ್ ಹೋಗಿ ಮೊದಲನೇ ನಂಬರ್ ಪಡೆದುಕೊಳ್ಳಬಹುದು. ಆದ್ದರಿಂದ ಬಾಪ್ದಾದಾರವರ ಕಡೆಯಿಂದ ಮತ್ತು ತಮ್ಮ ಸರ್ವ ಸಹೋದರ-ಸಹೋದರಿಯರಿಗೆ ಶುಭಾಶಯಗಳು-ಶುಭಾಶಯಗಳು. ಕೊನೆಗೆ ಬರುವವರೂ ಸಹ ಫಾಸ್ಟ್ ಹೋಗಿ ಫಸ್ಟ್ನಲ್ಲಿ ಬರುವ ಉದಾಹರಣೆಯೂ ಸಹ ಇರುತ್ತದೆ. ಒಳ್ಳೆಯದು.

ಎಲ್ಲಾ ಕಡೆ ಬಾಪ್ದಾದಾರವರ ಆಸೆಗಳನ್ನು ಪೂರ್ಣ ಮಾಡುವ ಆಸೆಯ ದೀಪಗಳು, ಏಕೆ, ಏನು ಎಂಬ ಭಾಷೆಯಿಂದ ದೂರ ಇರುವ, ಸದಾ ಏಕರಸ, ಸದಾ ಒಬ್ಬ ಬಾಬಾ ಬೇರೆ ಯಾರೂ ಇಲ್ಲ, ತಂದೆಯಲ್ಲಿಯೇ ವಿಶೇಷ ಜೀವನದ ಮೂರು ಸಂಬಂಧಗಳು ತಂದೆ, ಶಿಕ್ಷಕ, ಸದ್ಗುರುವಿನ ಅನುಭವ ಮಾಡುವ, ತಂದೆಯಿಂದ ಆಸ್ತಿಯನ್ನು, ಟೀಚರ್ಯಿಂದ ವಿದ್ಯೆಯ ಆಸ್ತಿಯನ್ನು ಮತ್ತು ಸದ್ಗುರುವಿನಿಂದ ವರದಾನಗಳ ಆಸ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ಪದಮಾಗುಣ ಭಾಗ್ಯವಂತ ಪ್ರತಿಯೊಬ್ಬ ಮಗುವಿಗೆ ಬಾಪ್ದಾದಾರವರ ನೆನಪು, ಪ್ರೀತಿ ಮತ್ತು ನಮಸ್ತೆ.

ದಾದಿಯವರ ಜೊತೆ: ಎಲ್ಲರೂ ಸಹಯೋಗ ಕೊಟ್ಟಿದ್ದಾರೆ, ಎಲ್ಲರೂ ಚೆನ್ನಾಗಿ ಮಾಡಿದ್ದೀರಿ, ಹೇಗೆ ಮಾಡಬೇಕು ಎಂದು ಯಾರೂ ಯೋಚನೆ ಮಾಡಬೇಕಾಗಿಲ್ಲ, ಮಾಡಲೇಬೇಕು. ಒಬ್ಬರಿಗೊಬ್ಬರ ಸಹಯೋಗದಿಂದ ಎಲ್ಲಾ ಕಾರ್ಯಕ್ರಮಗಳು ಬಹಳ ಚೆನ್ನಾಗಿ ಆಗಿದೆ. ಸಂದೇಶವಂತೂ ಹರಡಿದೆ. ಸಂದೇಶ ಸಿಕ್ಕಿದೆ, ಈಗ ಮುಂದುವರೆಯಿರಿ ಏಕೆಂದರೆ ಟಾಪಿಕ್ ಆಗಿದೆ ವರದಾನವನ್ನು ತೆಗೆದುಕೊಳ್ಳುವುದು ಅಂದಾಗ ಯೋಗದ ಪ್ರೋಗ್ರಾಮ್ನಿಂದ ಅನುಭವ ಮಾಡಿದ್ದೀರಿ.

ಟರ್ನ್ ಪಂಜಾಬ್ ಜೋನಿನ ಸೇವಾಧಾರಿಗಳೊಂದಿಗೆ: ಪಂಜಾಬ್ಗೆ ಡ್ರಾಮಾನುಸಾರ ಸನ್ಯಾಸಿಗಳ, ಮಹಾತ್ಮಗಳ ಸೇವೆಯ ಅವಕಾಶ ಸಿಕ್ಕಿದೆ ಮತ್ತು ಮಾಡುತ್ತಿದ್ದಾರೆ. ಪಂಜಾಬ್ನಲ್ಲಿ ಸ್ಥಾಪನೆಯ ಸಮಯದಲ್ಲಿ ಹೇಗೆ ಸೇವೆ ಪ್ರಾರಂಭವಾಗಿದೆ ಅದೇ ರೀತಿ ಸಹಯೋಗಿ ಮತ್ತು ವಾರೀಸ್ ಕ್ವಾಲಿಟಿಯವರು ನಿಮಿತ್ತರಾಗಿದ್ದಾರೆ. ಎಷ್ಟು ತೊಂದರೆ ಕೊಡುವವರಿದ್ದರು, ಅಷ್ಟೇ ಒಳ್ಳೆಯ (ಹುಲಿಯ ತರಹ) ಕ್ವಾಲಿಟಿಯವರು ಬಂದಿದ್ದಾರೆ. ಈಗ ಪಂಜಾಬ್ನವರು ಏನು ಮಾಡಬೇಕು? ಈ ವಿಶೇಷತೆಯಂತೂ ಈಗ ಇದೆ, ಈಗ ಪಂಜಾಬ್ನವರು ಪ್ರಸಿದ್ಧ ಆಗುವವರನ್ನು ತಯಾರು ಮಾಡಿ ಯಾರು ಸಭೆಯಲ್ಲಿ ಮೈಕ್ ಆಗಿ ತಮ್ಮ ಅನುಭವವನ್ನು ತಿಳಿಸಲಿ, ಮೈಕ್ ದೊಡ್ಡದಾಗಲಿ, ಚಿಕ್ಕದು ಬೇಡ. ಹೇಗೆ ಸರ್ಕಾರದ ವಿ.ಐ.ಪಿ ಅಂತೂ ಬೇರೆ ಇರುತ್ತಾರೆ, ಆದರೆ ಮಹಾತ್ಮರಲ್ಲೂ ಸಹ ವಿ.ಐ.ಪಿ ಇರುತ್ತಾರೆ. ಆ ರೀತಿ ಯಾವುದಾದರೂ ದೊಡ್ಡ ಮೈಕ್ ತಯಾರು ಮಾಡಿ ಯಾರು ತಮ್ಮ ಅನುಭವದಿಂದ ಅನ್ಯರನ್ನು ಉಮ್ಮಂಗದಲ್ಲಿ ತೆಗೆದುಕೊಂಡು ಬರಲಿ. ಈ ರೀತಿ ಯಾರನ್ನಾದರನ್ನೂ ತಯಾರು ಮಾಡಿ, ಆಗುತ್ತದೆಯೇ ಏಕೆಂದರೆ ಈಗಿನ ಕಾಲದಲ್ಲಿ ಎಲ್ಲರೂ ಸಾಧು-ಸಂತರ ಸೇವೆಯಂತೂ ದ್ವಾಪರದಿಂದ ಶುರು ಆಗಿದೆ ಆದರೆ ತಮ್ಮ ಸಮಾನ ದೊಡ್ಡ ಗುರು ಬೇರೆಯವರನ್ನು ಶಿಷ್ಯರನ್ನಾಗಿ ಮಾಡಿಕೊಳ್ಳುವ ಉದಾಹರಣೆ ಇರುವುದಿಲ್ಲ ಮತ್ತು ಬಾಪ್ದಾದಾರವರು ತಮಗಿಂತಲೂ ಬುದ್ಧಿವಂತ ಮಕ್ಕಳನ್ನು ತಯಾರು ಮಾಡಿದ್ದಾರೆ ಯಾರು ಪಬ್ಲಿಕ್ನಲ್ಲಿ ಬರುತ್ತಾರೆ, ಆದ್ದರಿಂದ ಪಂಜಾಬ್ನವರು ಯಾವುದಾದರೂ ನವೀನತೆಯನ್ನು ಮಾಡಿ ತೋರಿಸಿ, ವಿ.ಐ.ಪಿ. ಎಲ್ಲಾ ಕಡೆಯಿಂದ ಬರುತ್ತಾರೆ ಆದರೆ ತಾವು ಈ ರೀತಿ ಕರೆದುಕೊಂಡು ಬನ್ನಿ ಯಾರಿಂದ ಎಲ್ಲರೂ ಕೇಳಿ ಜಾಗೃತರಾಗಲಿ, ಸಂದೇಶ ಸಿಕ್ಕಿ ಬಿಡಲಿ, ಆಗುತ್ತದೆಯೇ? ನೋಡುತ್ತೇವೆ. ಸ್ವಲ್ಪ ಸಮಯವಂತೂ ಹಿಡಿಸುತ್ತದೆ ಆದರೆ ಈ ರೀತಿ ಯಾರಾದರೂ ಮಾಡಿ ತೋರಿಸಿ. ಬಾಕಿ ವೃದ್ಧಿಯಂತೂ ಆಗುತ್ತಿದೆ.

ವರದಾನ:
ತಂದೆಯ ಹಸ್ತ ಹಾಗೂ ಸಂಗದ ಸ್ಮೃತಿಯಿಂದ ಕಷ್ಟವನ್ನು ಸಹಜಗೊಳಿಸುವಂತಹ ನಿಶ್ಚಿಂತ ಭವ.

ಹೇಗೆ ಯಾವುದೇ ಹಿರಿಯರ ಕೈಯಲ್ಲಿ ಕೈ ಇರುತ್ತದೆಯೆಂದರೆ ಸ್ಥಿತಿಯು ನಿಶ್ಚಿಂತವಾಗಿರುತ್ತದೆ. ಹಾಗೆಯೇ ಪ್ರತಿಯೊಂದು ಕರ್ಮದಲ್ಲಿ ಇದನ್ನೇ ತಿಳಿಯಬೇಕು - ಬಾಪ್ದಾದಾರವರು ನನ್ನ ಜೊತೆಯೂ ಇದ್ದಾರೆ ಹಾಗೂ ನಮ್ಮ ಈ ಅಲೌಕಿಕ ಜೀವನದ ಕೈ ಅವರ ಕೈಯಲ್ಲಿದೆ ಅರ್ಥಾತ್ ಜೀವನವು ಅವರಿಗೆ ಅರ್ಪಣೆಯಾಗಿದೆ. ಹೀಗಿದ್ದಾಗ ಜವಾಬ್ದಾರಿಯೂ ಅವರದಾಗಿ ಬಿಡುತ್ತದೆ. ಎಲ್ಲ ಹೊರೆಯನ್ನು ತಂದೆಯ ಮೇಲಿಟ್ಟು ಸ್ವಯಂನ್ನು ಹಗುರ ಮಾಡಿ ಬಿಡಿ. ಹೊರೆಯನ್ನಿಳಿಸುವ ಅಥವಾ ಕಷ್ಟವನ್ನು ಸಹಜಗೊಳಿಸುವ ಸಾಧನವೇ ಆಗಿದೆ ತಂದೆಯ ಹಸ್ತ ಹಾಗೂ ಜೊತೆ (ಸಂಗ).

ಸ್ಲೋಗನ್:
ಪುರುಷಾರ್ಥದಲ್ಲಿ ಸತ್ಯತೆಯಿದ್ದರೆ ಬಾಪ್ದಾದಾರವರ ವಿಶೇಷ ಸಹಯೋಗದ ಅನುಭವ ಮಾಡುವಿರಿ.

ಅವ್ಯಕ್ತ ಸೂಚನೆ:– “ಮಹಾನರಾಗಲು ಮಧುರತೆ ಮತ್ತು ನಮ್ರತೆಯ ಗುಣ ಧಾರಣೆ ಮಾಡಿ”

ಒಂದುವೇಳೆ ನಿಮ್ಮ ಜೊತೆ ಯಾರಾದರೂ ಘರ್ಷಣೆ ಮಾಡಿದರೆ ನೀವು ಅವರಿಗೆ ತಮ್ಮ ಸ್ನೇಹದ ನೀರನ್ನು ಕೊಡಿ. ನೀವು ನಿಮ್ಮ ಮಧುರತೆ ಮತ್ತು ನಮ್ರತೆಯ ಗುಣವನ್ನು ಬಿಡಬೇಡಿರಿ. ನಮ್ರತೆಯ ವಸ್ತ್ರವನ್ನು ಧರಿಸಿರಿ. ಈ ನಮ್ರತೆಯ ಕವಚ ಸುರಕ್ಷತೆಯ ಸಾಧನವಾಗಿದೆ. ಸಂಸ್ಕಾರಗಳ ರಾಸ ಮಿಲನ ಮಾಡಲು ಎಲ್ಲದಕ್ಕಿಂತ ಸಹಜ ವಿಧಿಯಾಗಿದೆ - ಸ್ವಯಂ ನಮ್ರಚಿತ್ತ ಮತ್ತು ಮಧುರತೆ ಸಂಪನ್ನರಾಗಿ ಬಿಡಿ, ಅನ್ಯರಿಗೆ ಶ್ರೇಷ್ಠ ಸೀಟ್ ಕೊಟ್ಟು ಬಿಡಿ.