12.07.26    Avyakt Bapdada     Kannada Murli    31.12.2010     Om Shanti     Madhuban


“ಹಳೆಯ ವರ್ಷಕ್ಕೆ ಬೀಳ್ಕೊಡುಗೆ ಕೊಡುವುದರ ಜೊತೆ ಹಳೆಯ ಸಂಸ್ಕಾರಗಳಿಗೆ ಬೀಳ್ಕೊಡುಗೆ ಕೊಟ್ಟು ನಿರ್ವಿಘ್ನವಾಗಿರುವ ಧೃಡ ಸಂಕಲ್ಪ ಮಾಡಿ ಮತ್ತು ದಯಾಹೃದಯಿ, ಮಾಸ್ಟರ್ ದಾತರಾಗಿ ಮನಸ್ಸಾ ಸೇವೆಯ ಮೂಲಕ ದುಃಖಿ ಅಶಾಂತಿ ಆತ್ಮರಿಗೆ ಆಶ್ರಯ ಕೊಡಿ”


ಈ ದಿನ ಬಾಪ್ದಾದಾರವರು ನಾಲ್ಕಾರು ಕಡೆ ಮಕ್ಕಳಿಗೆ ಹೊಸ ವರ್ಷದ ಮತ್ತು ಹೊಸ ಪ್ರಪಂಚದ ಶುಭಾಶಯಗಳನ್ನು ಕೊಡಲು ಸೂಕ್ಷ್ಮವತನದಿಂದ ಸ್ಥೂಲವತನಕ್ಕೆ ಶುಭಾಶಯಗಳನ್ನು ಕೊಡಲು ಬಂದಿದ್ದಾರೆ. ಎಲ್ಲಾ ಮಕ್ಕಳೂ ಸಹ ಸ್ನೇಹ ಮತ್ತು ಪ್ರೀತಿಯಿಂದ ತಮ್ಮ ಮಧುಬನ ಮನೆಗೆ ತಲುಪಿ ಬಿಟ್ಟಿದ್ದಾರೆ. ಪ್ರಪಂಚದವರಂತೂ ಕೇವಲ ಹೊಸ ವರ್ಷವನ್ನು ಆಚರಣೆ ಮಾಡುತ್ತಾರೆ ಯಾವುದು ಒಂದು ದಿನ ಮಾತ್ರ ಇರುತ್ತದೆ. ತಾವು ಹೊಸ ಪ್ರಪಂಚದ ಆಚರಣೆಯನ್ನು ಸಂಗಮಯುಗದಲ್ಲಿ ಸದಾ ಆಚರಣೆ ಮಾಡುತ್ತಿರುತ್ತೀರಿ. ತಮ್ಮ ಎದುರಿನಲ್ಲಿ ಹೊಸ ಪ್ರಪಂಚ ಸದಾ ಸಮಾವೇಶ ಆಗಿದೆ. ನೆನಪು ಮಾಡಿ ಮತ್ತು ತಲುಪಿ ಬಿಡಿ. ಕಣ್ಣುಗಳಲ್ಲಿ ಸಮಾವೇಶ ಆಗಿದೆಯಲ್ಲವೇ. ಈಗೀಗ ಸಂಗಮಯುಗ ಆಗಿದೆ, ಇಂದು ಸಂಗಮಯುಗದಲ್ಲಿ ಇದ್ದೇವೆ ಮತ್ತು ನಾಳೆ ನಮ್ಮ ರಾಜ್ಯಕ್ಕೆ ಹೊರಟು ಹೋಗುತ್ತೇವೆ ಎಂಬ ಅನುಭವ ಆಗುತ್ತದೆ. ಈ ರೀತಿ ನಯನಗಳಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ. ಪ್ರಪಂಚದವರಂತೂ ಒಬ್ಬರಿಗೊಬ್ಬರು ಒಂದು ದಿನದ ಶುಭಾಶಯಗಳನ್ನು ನೀಡುತ್ತಾರೆ. ಆದರೆ ತಮಗೆ ಬಾಪ್ದಾದಾರವರು ಊಡುಗೊರೆ ರೂಪದಲ್ಲಿ ಸ್ವರ್ಣಿಮ ಪ್ರಪಂಚವನ್ನು ನೀಡಿದ್ದಾರೆ, ಯಾವುದು ಹೆಚ್ಚು ಸಮಯ ನಡೆಯುವುದಿದೆ. ಈ ರೀತಿ ನಯನಗಳಲ್ಲಿ ಸಮಾವೇಶ ಆಗಿದೆಯೇ ಯಾವುದರಿಂದ ಒಂದು ಸೆಕೆಂಡಿನಲ್ಲಿ ತಲುಪಬಹುದು. ಎಲ್ಲರ ಎದುರಿನಲ್ಲಿ ಸ್ವರ್ಣಿಮ ಪ್ರಪಂಚ ನಯನಗಳಲ್ಲಿ ಸಮಾವೇಶ ಆಗಿದೆ. ಒಂದು ಸೆಕೆಂಡಿನಲ್ಲಿ ತಲುಪಬಹುದಲ್ಲವೇ. ಇಂದು ಸಂಗಮ ಯುಗದಲ್ಲಿ ಇದ್ದೀರಿ, ನಾಳೆ ರಾಜ್ಯಾಧಿಕಾರಿ ಆಗಿ ರಾಜ್ಯ ಮಾಡುತ್ತೀರಿ.

ಈಗ ಸಮಯ ಅನುುಸಾರವಾಗಿ ತಾವು ಪೂರ್ವಜರ ಭಕ್ತರು ದುಃಖಿ ಮತ್ತು ಅಶಾಂತರಾಗಿರುವ ಕಾರಣ ತಾವು ಪೂರ್ವಜ ಆತ್ಮಗಳನ್ನು ಎಷ್ಟೊಂದು ಕೂಗುತ್ತಿದ್ದಾರೆ. ಶಬ್ದ ಕೇಳಿ ಬರುತ್ತದೆಯೇ? ಹೇಗೆ ದುಃಖ-ಅಶಾಂತಿಯಿಂದ ಕೂಗುತ್ತಿದ್ದಾರೆ? ನಮಗೆ ಶಾಂತಿ ನೀಡಿ, ಸುಖ ನೀಡಿ, ಖುಷಿ ನೀಡಿ ಎಂಬ ಶಬ್ದ ಕೇಳಿಬರುತ್ತದೆಯೇ? ಕೊಡಿ-ಕೊಡಿ ಎಂದು ಕೂಗುತ್ತಿದ್ದಾರೆ ಅಂದಾಗ ತಾವು ಆತ್ಮರು ದಯಾಹೃದಯಿ, ಕಲ್ಯಾಣಕಾರಿ ದಾತನ ಮಕ್ಕಳ ರೂಪದಲ್ಲಿ ಆತ್ಮರಿಗೆ ಮನಸಾ ಸೇವೆಯ ಮೂಲಕ ಕೊಡುವ ಕಾರ್ಯವನ್ನು ಮಾಡಬೇಕು. ಬಾಪ್ದಾದಾರವರಿಗೆ ಬಹಳ ದಯೆ ಬರುತ್ತದೆ. ಈ ದುಃಖಿ-ಅಶಾಂತಿ ಆತ್ಮಗಳ ಮೇಲೆ ತಮಗೂ ದಯೆ ಬರುತ್ತದೆಯಲ್ಲವೇ? (ಕೆಮ್ಮು ಬಂದಿದೆ) ಇಂದು ಬ್ರಹ್ಮಾಬಾಬಾರವರ ಕೆಮ್ಮು ಬಂದು ಬಿಟ್ಟಿದೆ. ತಮಗೂ ಸಹ ಆತ್ಮಗಳ ಮೇಲೆ ದಯೆ ಬರುತ್ತಿದೆಯಲ್ಲವೇ? ಈಗ ಈ ವರ್ಷದಲ್ಲಿ ಏಕೆಂದರೆ ಈ ದಿನ ಹೊಸ ವರ್ಷವು ಬರುತ್ತಿದೆ ಮತ್ತು ಹಳೆಯ ವರ್ಷ ಹೋಗುವುದಿದೆ. ಅಂದಾಗ ಹೋಗುವ ವರ್ಷದಲ್ಲಿ ತಾವು ಯಾವ ಪ್ಲಾನ್ನ್ನು ಮಾಡಿದ್ದೀರಿ? ವರ್ಷವಂತೂ ಹೋಗುತ್ತದೆ ಆದರೆ ತಾವೆಲ್ಲರೂ ತಮಗಾಗಿ ವರ್ಷದ ಜೊತೆ ಯಾವುದನ್ನು ಬೀಳ್ಕೊಡುಗೆ ಮಾಡುತ್ತೀರಾ? ಹೇಗೆ ವರ್ಷ ಬೀಳ್ಕೊಡುಗೆ ತೆಗೆದುಕೊಳ್ಳುತ್ತದೆ ಅದೇ ರೀತಿ ತಾವು ತಮ್ಮ ಜೀವನದಲ್ಲಿ ಯಾವುದಕ್ಕೆ ಬೀಳ್ಕೊಡುಗೆ ಕೊಡುತ್ತೀರಾ ಮತ್ತು ಯಾವುದು ಹೊಸದನ್ನು ತುಂಬಿಸಿಕೊಳ್ಳುತ್ತೀರಾ? ಸದಾ ಕಾಲಕ್ಕಾಗಿ ಬೀಳ್ಕೊಡುಗೆ ಕೊಡುತ್ತೀರಾ ಅಥವಾ ಸ್ವಲ್ಪ ಸಮಯಕ್ಕಾಗಿ ಕೊಡುತ್ತೀರಾ? ಏಕೆಂದರೆ ಇದುವರೆಗೆ ಯಾವ ಹಳೆಯ ಸಂಸ್ಕಾರ ಉಳಿದಿದೆ ಆ ಸಂಸ್ಕಾರಗಳನ್ನು ಮನಸ್ಸಿನಲ್ಲಿ ನೋಡಿಕೊಂಡು, ತಿಳಿದು ಸಮಾಪ್ತಿ ಮಾಡಲೇಬೇಕು ಎಂದು ಬಾಪ್ದಾದಾರವರು ಸೂಚನೆ ನೀಡಿದರು. ಬಾಪ್ದಾದಾರವರಿಗೆ ಈ ಹಳೆಯ ಸಂಸ್ಕಾರ ಪುರುಷಾರ್ಥದಲ್ಲಿ ವಿಘ್ನ ರೂಪದಲ್ಲಿ ಕಂಡುಬರುತ್ತದೆ. ಮಕ್ಕಳು ಒಂದು ಕಡೆ ಬಾಬಾರವರೇ ನನ್ನ ಸಂಸಾರ ಎಂದು ಹೇಳುತ್ತಾರೆ ನಂತರ ಹಳೆಯ ಸಂಸ್ಕಾರ ಎಲ್ಲಿಂದ ಬಂದಿದೆ? ಬಾಬಾರವರೇ ಸಂಸಾರ ಆದಾಗ ಈ ಹಳೆಯ ಸಂಸಾರ ಯಾವುದು ಪುರುಷಾರ್ಥದಲ್ಲಿ ವಿಘ್ನ ಹಾಕುತ್ತಿದೆ ಅದು ಸಮಾಪ್ತಿ ಆಗಬೇಕಲ್ಲವೇ? ಅಮೃತವೇಳೆ ಎಲ್ಲರೂ ವಾರ್ತಾಲಾಪ ಮಾಡಿದಾಗ ಎಲ್ಲರೂ ತಮ್ಮ ಚಾರ್ಟ್ ಕೊಡುತ್ತಾರೆ ಆದರೆ ಇದುವರೆಗೆ ಹಳೆಯ ಸಂಸ್ಕಾರವೇ ಪುರುಷಾರ್ಥವನ್ನು ನಿಧಾನ ಮಾಡುವುದು ಬಾಪ್ದಾದಾರವರು ನೋಡಿದ್ದಾರೆ.

ಅಂದಾಗ ಈ ದಿನ ವರ್ಷಕ್ಕೆ ಬೀಳ್ಕೊಡುಗೆ ಕೊಡುತ್ತಾ ಈ ಸಂಸ್ಕಾರಗಳಿಗೂ ಬೀಳ್ಕೊಡುಗೆ ಕೊಡಲು ಸಾಧ್ಯವೇ! ಬೀಳ್ಕೊಡುಗೆ ಕೊಡಲು ಸಾಧ್ಯವೇ! ಕೈ ಎತ್ತಿ. ಕೊಡಬೇಕಾಗುತ್ತದೆ. ಕೈ ಎತ್ತುವುದು ಬಹಳ ಸಹಜವಾಗಿದೆ ಆದರೆ ಮನಸ್ಸಿನ ಕೈ ಎತ್ತಬೇಕು. ಎತ್ತುತ್ತಿದ್ದಾರೆ. ಹಳೆಯ ಸಂಸ್ಕಾರಗಳಿಗೆ ಸದಾ ಕಾಲಕ್ಕಾಗಿ.... ಕೈ ಎತ್ತುತ್ತಿದ್ದಾರೆ, ಮತ್ತೆ ಎತ್ತಿ. ಒಳ್ಳೆಯದು ಬಾಪ್ದಾದಾರವರನ್ನು ಮೆಜಾರಿಟಿ ಮಕ್ಕಳು ಕೈ ಎತ್ತಿ ಖುಷಿ ಮಾಡಿದ್ದಾರೆ. ಸಾಹಸವಂತ ಮಕ್ಕಳಾಗಿದ್ದಾರೆ ಎಂದು ಬಾಪ್ದಾದಾರವರಿಗೆ ಖುಷಿ ಇದೆ. ಎಲ್ಲಿ ಧೈರ್ಯ ಇರುತ್ತದೆ ಅಲ್ಲಿ ಬಾಪ್ದಾದಾರವರ ಸಹಯೋಗ ಸದಾ ಇರುತ್ತದೆ. ಈಗ ಯಾರು ಕೈ ಎತ್ತಿದ್ದಾರೆ ಅಂದರೆ ಪ್ರತಿಯೊಂದು ಸ್ಥಾನ ಚಿಕ್ಕದು-ದೊಡ್ಡದು ಸದಾ ಕಾಲಕ್ಕಾಗಿ ನಿರ್ವಿಘ್ನ ಆಗಿದೆಯಲ್ಲವೇ? ಏಕೆಂದರೆ ಬಾಪ್ದಾದಾರವರ ಬಳಿ ಯಾವ ರಿಜಲ್ಟ್ ಬರುತ್ತದೆ ಅದರ ಕಾರಣ ಹಳೆಯ ಸಂಸ್ಕಾರ ಇರುತ್ತದೆ. ಇಂದು ಸಂಸ್ಕಾರ ಸಂಕಲ್ಪದಿಂದ ಸಮಾಪ್ತಿ ಮಾಡುವುದು ಅರ್ಥಾತ್ ನಿರ್ವಿಘ್ನ ಭವದ ವರದಾನವನ್ನು ತೆಗೆದುಕೊಂಡಿದ್ದೀರಿ. ತೆಗೆದುಕೊಂಡಿದ್ದೀರಾ? ವರದಾನವನ್ನು ತೆಗೆದುಕೊಂಡಿದ್ದೀರಾ? ಧೈರ್ಯದ ಫಲವಂತೂ ಸಿಗುತ್ತದೆಯಲ್ಲವೇ. ಒಂದು ಹೆಜ್ಜೆಯ ಮಕ್ಕಳ ಧರ್ಯಕ್ಕೆ ಅನೇಕ ಹೆಜ್ಜೆಗಳ ತಂದೆಯ ಸಹಯೋಗ ಇದ್ದೇ ಇದೆ ಎನ್ನುವುದು ಬಾಪ್ದಾದಾರವರ ವರದಾನ ಸಿಕ್ಕಿದೆ. ಅಂದಾಗ ನಾವು ಹಳೆಯ ಸಂಸ್ಕಾರಗಳನ್ನು ಕೊಟ್ಟು ಬಿಟ್ಟಿದ್ದೇವೆ ಎಂಬ ಸಂಕಲ್ಪವನ್ನು ಇಂದಿನಿಂದ ನೆನಪು ಇಟ್ಟುಕೊಳ್ಳಬೇಕು. ಒಂದುವೇಳೆ ತಮ್ಮ ಬಳಿ ವಾಪಸ್ ಬಂದು ಬಿಟ್ಟರೆ ಏನು ಮಾಡುತ್ತೀರಿ? ವಾಪಸ್ ಕೊಟ್ಟಿರುವ ವಸ್ತು ತಮ್ಮ ಬಳಿ ಇಟ್ಟುಕೊಳ್ಳುವುದಿಲ್ಲ ಏಕೆಂದರೆ ಕೊಟ್ಟಿರುವ ವಸ್ತುವು ನನ್ನದಲ್ಲ. ತನ್ನದಲ್ಲ ಅಂದಾಗ ತಮ್ಮ ಬಳಿ ಹೇಗೆ ಇಟ್ಟುಕೊಳ್ಳಲು ಸಾಧ್ಯ? ತಂದೆಗೆ ಕೊಟ್ಟರೆ ತಂದೆಗೇ ಕೊಡುತ್ತೀರಲ್ಲವೇ. ಪಕ್ಕಾ ಅಲ್ಲವೇ ಕೊಟ್ಟು ಬಿಟ್ಟಿದ್ದೀರಲ್ಲವೇ! ಪಕ್ಕಾ? ಈಗ ಎರಡು-ಎರಡು ಕೈ ಎತ್ತಿ. ಪಕ್ಕಾ. ಹಿಂದಿನವರೂ ಸಹ ಎತ್ತುತ್ತಿದ್ದಾರೆ.

ಬಾಪ್ದಾದಾರವರಿಗೆ ಕಲಿಯುಗದಲ್ಲಿ ಇರುತ್ತಾ ತಂದೆಯ ಮೂಲಕ ಯಾವ ಪ್ರಾಪ್ತಿ ಆಗಿದೆ ಅದರ ಅನುಭವ ಈಗ ಸಂಗಮ ಯುಗದಲ್ಲಿ ಮಾಡುತ್ತೇವೆ ಎಂಬ ಖುಷಿ ಇದೆ. ಪ್ರಪಂಚದವರಿಗಾಗಿ ಕಲಿಯುಗವಾಗಿದೆ ಆದರೆ ತಮಗಾಗಿ ಸಂಗಮ ಯುಗ ಅರ್ಥಾತ್ ಸರ್ವ ಪ್ರಾಪ್ತಿಗಳ ಯುಗವಾಗಿದೆ. ಪರಮಾತ್ಮನ ಪ್ರಾಪ್ತಿಗಳು, ಸರ್ವ ಗುಣಗಳು, ಸರ್ವ ಪ್ರಾಪ್ತಿಗಳ ಖಜಾನೆ ಯಾವುದು ಪ್ರಾಪ್ತಿ ಆಗಿದೆ ಅದರ ಪ್ರಾಕ್ಟಿಕಲ್ ಅನುಭವ ಮಾಡುತ್ತೀರಿ. ಅಂದಾಗ ಈ ದಿನ ಬಾಪ್ದಾದಾರವರು ಯಾರೆಲ್ಲಾ ಕೈ ಎತ್ತಿದ್ದಾರೆ ಆ ಎಲ್ಲಾ ಮಕ್ಕಳು ಸನ್ಮುಖದಲ್ಲಿ ಕುಳಿತಿರಬಹುದು, ದೂರದಲ್ಲಿ ಕುಳಿತಿರಬಹುದು, ದೇಶ-ವಿದೇಶದಲ್ಲಿ ಕೇಳುತ್ತಿರುವ ಎಲ್ಲಾ ಮಕ್ಕಳಿಗೆ ಬಹಳ ಹೃದಯದಿಂದ ಏನು ಕೊಡುತ್ತಾರೆ? ಶುಭಾಶಯಗಳನ್ನಂತೂ ನೀಡುತ್ತಿದ್ದಾರೆ ಆದರೆ ಶುಭಾಶಯಗಳ ಜೊತೆ ಎಲ್ಲರ ಮಸ್ತಕದ ಮೇಲೆ ಕೈ ಇಡುತ್ತಿದ್ದಾರೆ. ತಾವೂ ಸಹ, ಬಾಪ್ದಾದಾರವರೂ ಸಹ ಬಾಹ್! ಮಕ್ಕಳೆ ವಾಹ್! ಎಂದು ಮನಸ್ಸಿನಲ್ಲೇ ನರ್ತನೇ ಮಾಡುತ್ತಿದ್ದಾರೆ. ಈಗ ತಾವೂ ಸಾಹ ಮನಸ್ಸಿನಲ್ಲಿಯೇ ನರ್ತನೆ ಮಾಡುತ್ತಿದ್ದೀರಾ? ಹಾಜಿ ಎಂದು ಹೇಳಿ.

ಈಗ ಟೀಚರ್ಸ್ ನೋಡಿಕೊಳ್ಳಬೇಕು. ಯಾರೆಲ್ಲಾ ಟೀಚರ್ಸ್ ಬಂದಿದ್ದಾರೆ ಕೈ ಎತ್ತಿ. ವಿದೇಶದ ಟೀಚರ್ಸ್ ಸಹ ಇದ್ದಾರಲ್ಲವೇ. ಬಾಪ್ದಾದಾರವರಿಗಂತೂ ಪ್ರತಿಯೊಬ್ಬ ಮಗುವಿನ ಧೃಢ ಸಂಕಲ್ಪ ಕೇಳಿ ಈಗ ಬಾಪ್ದಾದಾರವರು ಏನು ಬಯಸುತ್ತಾರೋ ತಂದೆಯ ಸಮಾನ ಮಕ್ಕಳು ಲಕ್ಷ್ಯ ಇಟ್ಟುಕೊಂಡಿದ್ದಾರೆ, ಸಂಪನ್ನ, ಸಂಪೂರ್ಣರಾಗುವ ಲಕ್ಷ್ಯ ಇಟ್ಟುಕೊಂಡಿರುವುದನ್ನು ನೋಡಿ ಬಾಪ್ದಾದಾರವರಿಗೆ ಖುಷಿ ಆಗುತ್ತದೆ, ಅದರಲ್ಲಿ ನಿರ್ವಿಘ್ನರಾಗುವ ಧೃಡ ಸಂಕಲ್ಪ ಸಂಪನ್ನ ಸಮಯವನ್ನೂ ಸಮೀಪ ತೆಗೆದುಕೊಂಡು ಬರುತ್ತದೆ. ಬಾಪ್ದಾದಾರವರಿಗೆ ಎಲ್ಲಾ ಮಕ್ಕಳು ಯಾವ ಸಂಕಲ್ಪ ಮಾಡಿದ್ದಾರೆ ಅದನ್ನು ಸಂಪನ್ನ ಮಾಡುತ್ತಾರೆ ಎಂಬ ಖುಷಿಯೂ ಸಹ ಇದೆ ಮತ್ತು ಪ್ರಪಂಚದವರು ದುಃಖಿ, ಅಶಾಂತಿ ಆಗಿದ್ದಾರೆ ಅವರಿಗೂ ಸಹ ಯಾವುದಾದರೂ ಆಶ್ರಯ ಕೊಡುತ್ತಿರುತ್ತಾರೆ ಏಕೆಂದರೆ ಬಾಪ್ದಾದಾರವರಿಗೆ ಮಕ್ಕಳ ಕೂಗು, ಚೀರಾಟ ಸಹನೆ ಆಗುವುದಿಲ್ಲ. ತಮ್ಮ ಪರಿವಾರ ಆಗಿದೆಯಲ್ಲವೇ! ಅಂದಾಗ ಬಹಳ ದುಃಖ-ಅಶಾಂತಿ ಹೆಚ್ಚಾಗುತ್ತಿದೆ, ಈಗ ದಯಾಹೃದಯಿ ಆಗಿ. ನಡೆಯುತ್ತಾ-ಓಡಾಡುತ್ತಾ ಅಮೃತವೇಳೆ ಆತ್ಮಗಳಿಗೆ ಮನಸ್ಸಾ ಸೇವೆ ಖಂಡಿತ ಮಾಡುತ್ತೇವೆ ಎಂಬ ಸಂಕಲ್ಪವನ್ನು ಜೊತೆಯಲ್ಲಿ ಮಾಡಿ. ಈ ಸಂಕಲ್ಪ ಮಾಡಲು ಸಾಧ್ಯವೇ? ಹೇಗೆ ಸಂಕಲ್ಪ ಮಾಡಿದರೆ ಸಂಸ್ಕಾರವನ್ನು ಸದಾ ಕಾಲಕ್ಕಾಗಿ ಸಮಾಪ್ತಿ ಮಾಡುತ್ತೀರಿ. ಸದಾ ಕಾಲಕ್ಕಾಗಿ ಸಂಕಲ್ಪ ಮಾಡಿದ್ದೀರಲ್ಲವೇ? ಸ್ವಲ್ಪ ಸಮಯಕ್ಕೆ ಅಲ್ಲ ತಾನೇ? ಹೇಗೆ ಸಂಸ್ಕಾರವನ್ನು ಸಮಾಪ್ತಿ ಮಾಡಿ ತಂದೆಯ ಸಮಾನರಾಗುತ್ತೀರಿ ಅದೇ ರೀತಿ ದಾತನ ಮಕ್ಕಳಾಗಿ ಮಾಸ್ಟರ್ ದಾತನ ಸ್ವರೂಪದಿಂದ ಮನಸ್ಸಾ ಸೇವೆಯನ್ನೂ ಸಹ ಮಾಡಬೇಕು. ಇದಕ್ಕಾಗಿ ತಯಾರಾಗಿದ್ದೀರಾ? ಮನಸ್ಸಾ ಸೇವೆಯನ್ನು ಮಾಡಲು ತಯಾರಾಗಿದ್ದೀರಾ? ಮನಸ್ಸಾ ಸೇವೆ ಮಾಡುವವರು ಕೈ ಎತ್ತಿ. ಇಡೀ ದಿನದಲ್ಲಿ ಸಮಯ ಸಿಕ್ಕಿದಾಗ ಮನಸ್ಸಾ ಸೇವೆ ಖಂಡಿತ ಮಾಡಬೇಕು ಏಕೆಂದರೆ ತಾವು ಮಕ್ಕಳೇ ಸುಖಮಯ ಸಂಸಾರವನ್ನು ತೆಗೆದುಕೊಂಡು ಬರಬೇಕು. ತಂದೆ ತಾವು ಮಕ್ಕಳನ್ನು ಈ ಸೇವೆಗಾಗಿ ರೈಟ್ ಹ್ಯಾಂಡ್ ಅನ್ನಾಗಿ ಮಾಡಿಕೊಂಡಿದ್ದಾರೆ. ಕೈಯಿಂದ ಕೊಡಲಾಗುತ್ತದೆಯಲ್ಲವೇ ಅಂದಮೇಲೆ ತಾವು ತಂದೆಯ ರೈಟ್ ಹ್ಯಾಂಡ್ ಆಗಿದ್ದೀರಿ, ಬಾಪ್ದಾದಾ ತಾವು ರೈಟ್ ಹ್ಯಾಂಡ್ ಅರ್ಥಾತ್ ಕೈಗಳ ಮೂಲಕ ಎಲ್ಲರಿಗೂ ಯಾವುದಾರೂ ಕೊಡುತ್ತಿರುವ ಸೇವೆಯನ್ನು ಕೊಡಲು ಬಯಸುತ್ತಾರೆ. ಅವರು ಕೊಡಿ-ಕೊಡಿ ಎಂದು ಕೂಗುತ್ತಿದ್ದಾರೆ, ಮತ್ತೆ ತಾವು ದುಃಖಿಗಳಿಗೆ ಸುಖ ಕೊಡಿ, ಚಿಂತಿತರಿಗೆ ಶಾಂತಿ ಕೊಟ್ಟು ಪುಣ್ಯ ಕಾರ್ಯವನ್ನು ಮಾಡಿ. ಈಗ ತಾವು ಮಕ್ಕಳು ತಮ್ಮನ್ನು ತಾವು ತಿಳಿದುಕೊಂಡಿದ್ದೀರಿ, ತಂದೆಯನ್ನು ತಿಳಿದುಕೊಂಡಿದ್ದೀರಿ, ಆಸ್ತಿಗೆ ಅಧಿಕಾರಿ ಆಗಿದ್ದೀರಿ ಅಂದಾಗ ಅನ್ಯರನ್ನೂ ಮಾಡಿ. ಏಕೆಂದರೆ ಈಗ ಎಲ್ಲರೂ ಮುಕ್ತಿಯನ್ನು ಬಯಸುತ್ತಿದ್ದಾರೆ. ಎಲ್ಲರಿಗೂ ಮುಕ್ತಿ ಕೊಟ್ಟು ತಾವು ತಂದೆಯ ವರದಾನದ ಮೂಲಕ ರಾಜ್ಯಾಧಿಕಾರಿ ಆಗುತ್ತೀರಿ, ಆದ್ದರಿಂದ ತಂದೆ ಈಗ ಪ್ರತಿಯೊಬ್ಬರಿಗೆ “ನಿರ್ವಿಘ್ನ ಭವ”, “ಸೇವಾಧಾರಿ ಭವ” ಎಂಬ ಸಂಕಲ್ಪವನ್ನು ಕೊಡುತ್ತಿದ್ದಾರೆ. ಯಾವ ಮಕ್ಕಳು ತಂದೆಯವರಾಗಿ ಬಿಟ್ಟಿದ್ದಾರೆ, ಆ ಮಕ್ಕಳಿಗೆ ಸಂಗಮಯುಗಿ ಬ್ರಾಹ್ಮಣ ಜೀವನದ ಮಹಿಮೆಯ ಅನುಭವ ಆಗುತ್ತಿದೆ ಮತ್ತು ಆಗುತ್ತಲೇ ಇರುತ್ತದೆ. ಯಾರು ತಮ್ಮನ್ನು ಹೊಸಬರಿರಲಿ, ಹಳಬರು ಆದರೂ ಬಂದಿರಲಿ ಆದರೆ ತಮ್ಮನ್ನು ತಾವು ತಂದೆಯ ಆಸ್ತಿಗೆ ಅಧಿಕಾರಿ ಎಂದು ತಿಳಿಯುತ್ತಾರೆ. ಅತೀಂದ್ರಿಯ ಸುಖದ ಉಯ್ಯಾಲೆಯಲ್ಲಿ ತೂಗುತ್ತಿರುತ್ತಾರೆ. ಮತ್ತು ಮುಂಚೆಯೂ ಸಹ ಸಂಸ್ಕಾರಗಳ ಮೇಲೆ ವಿಜಯಿ ಆಗುವ ಸಂಕಲ್ಪ ಮಾಡಿದ್ದೀರಿ ಆ ಎಲ್ಲಾ ಆತ್ಮಗಳು ಕೋಟಿಯಲ್ಲಿ ಕೆಲವರಾಗಿದ್ದೀರಾ ಅಥವಾ ಕೆಲವರಲ್ಲಿ ಕೆಲವರು ಆಗಿದ್ದೀರಾ? ಮಗು ಹೇಳಿತ್ತಲ್ಲವೇ, ಜನಕ ಮಗು 108ರ ಮಾಲೆ, 16000 ಮಾಲೆಯನ್ನು ಮುಖ್ಯವಾಗಿ ಸೇರಿಸಿ ಎಂದು ಅಂದಾಗ ನಾವು 16,000 ಅಥವಾ 108ರ ಮಾಲೆಯಲ್ಲಿ ಬಂದೇ ಬರುತ್ತೇವೆ ಎಂದು ತಿಳಿದಿರುವವರು ಕೈ ಎತ್ತಿ.

ಹೊಸಬರೂ ಸಹ ಕೈ ಎತ್ತುತ್ತಿದ್ದಾರೆ, ಶುಭಾಶಯಗಳು. ನಿಶ್ಚಯ ಬುದ್ಧಿಯವರೇ ವಿಜಯಿ ಆಗುತ್ತಾರೆ. ಬಾಪ್ದಾದಾರವರಿಗೂ ಸಹ ಗೊತ್ತಿದೆ, ಯಾರು ನಿಶ್ಚಯ ಬುದ್ಧಿಯವರಿರುತ್ತಾರೆ ಅವರು ಮುಂದುವರೆಯುತ್ತಾರೆ. ಒಳ್ಳೆಯದು. ಇಲ್ಲಿ ಎದುರಿನಲ್ಲಿ ಕುಳಿತಿದ್ದೀರಲ್ಲವೇ ಕೈ ಎತ್ತಿ. ಯಾರು ಮೊದಲನೇ ಬಾರಿ ಬಂದಿದ್ದಾರೆ ಕೈ ಎತ್ತಿ. ಎಲ್ಲರ ಕಡೆಯಿಂದ ತಮಗೆ ಶುಭಾಶಯಗಳನ್ನು ನೀಡುತ್ತಿದ್ದಾರೆ. ಯಾವ ನಿಶ್ಚಯ ಮಾಡಿದ್ದೀರಿ ಅದನ್ನು ಅಮೃತವೇಳೆ ಪ್ರತಿದಿನ ರಿವೈಜ್ ಮಾಡುತ್ತಿರಿ. ಬಾಪ್ದಾದಾರವರಿಗೆ ಮಕ್ಕಳನ್ನು ನೋಡಿ ಖುಷಿ ಆಗುತ್ತದೆ. ಸಮಯ ಟೂ ಲೇಟ್ಗಿಂತ ಮೊದಲು ತಾವು ಆಸ್ತಿಗೆ ಅಧಿಕಾರಿ ಆಗಿದ್ದೀರಿ. ಆದ್ದರಿಂದ ಪರಿವಾರ ಇಲ್ಲಿಗೆ ಬಂದಿರುವವರು ಮತ್ತು ತಮ್ಮ-ತಮ್ಮ ಸೆಂಟರಿನಲ್ಲಿ ಇರುವವರು ಎಲ್ಲಾ ಮಕ್ಕಳ ಕಡೆಯಿಂದ ಬಾಪ್ದಾದಾರವರು ತಮ್ಮೆಲ್ಲರಿಗೂ ಶುಭಾಶಯಗಳನ್ನು ನೀಡುತ್ತಿದ್ದಾರೆ. ಈಗ ತಾವು ಒಂದು ಅದ್ಭುತ ಮಾಡಬೇಕು. ಸಾಹಸವಿದೆಯೇ ಹೇಳಿ? ಸಾಹಸವಿದೆಯೇ? ತಾವು ಮೊದಲಿನಿಂದಲೇ ನಿರ್ವಿಘ್ನರಾಗಿರಬೇಕು. ನಿಶ್ಚಯ ಮತ್ತು ನಶೆಯಲ್ಲಿ ನಂಬರ್ವನ್ ಆಗಿರಬೇಕು. ಬಾಪ್ದಾದಾರವರಿಗೆ ಖುಷಿ ಆಗುತ್ತದೆ, ಹಳಬರಂತೂ ಹಳಬರೇ ಆಗಿದ್ದಾರೆ. ಆದರೆ ಹೊಸಬರು ಸ್ವಲ್ಪ ಸಮದಲ್ಲಿ ಅದ್ಭುತ ಮಾಡಿ ತೋರಿಸುತ್ತಾರೆ. ಒಳ್ಳೆಯದು.

ಈಗ ಬಾಪ್ದಾದಾರವರು ಹೊಸಬರಾಗಿರಲಿ, ಹಳಬರಾಗಿರಲಿ ಎಲ್ಲರಿಗೆ ಒಂದು ಸೆಕೆಂಡಿನ ಕಾರ್ಯವನ್ನು ಕೊಡುತ್ತಾರೆ. ಈಗೀಗ ಒಂದು ಸೆಕೆಂಡಿನಲ್ಲಿ ತಮ್ಮನ್ನು ತಾವು ಎಲ್ಲಾ ಸಂಕಲ್ಪಗಳಿಂದ ದೂರ ಮಾಡಿಕೊಂಡು ಒಂದು ಸೆಕೆಂಡಿನಲ್ಲಿ ಬಿಂದು ರೂಪದಲ್ಲಿ ಸ್ಥಿತ ಮಾಡಲು ಸಾಧ್ಯವೇ? ಮಾಡುತ್ತೀರಾ? ಒಂದು ಸೆಕೆಂಡಿನಲ್ಲಿ ನಾನು ಬಿಂದು ಆಗಿದ್ದೇನೆ, ಯಾವುದೇ ಸಂಕಲ್ಪವಿಲ್ಲ. ಬಿಂದು ಆಗಿದ್ದೇನೆ. ಯಾರು ಸೆಕೆಂಡಿನಲ್ಲಿ ಬಿಂದು ರೂಪದ ಸ್ಥಿತಿಯಲ್ಲಿ ಸ್ಥಿತರಾಗಿರುವವರು ಕೈ ಎತ್ತಿ. ಸೆಕೆಂಡಿನಲ್ಲಿ ಹಾಕಿದ್ದೀರಾ? ಒಳ್ಳೆಯದು. ಈಗ ಈ ಅಭ್ಯಾಸ 15 ದಿನ ಇಡೀ ದಿನದಲ್ಲಿ ಪ್ರತಿಯೊಂದು ಗಂಟೆಯಲ್ಲಿ ಬಿಂದು ಹಾಕಿ, ಈ ಅಭ್ಯಾಸ ಪ್ರತಿಯೊಬ್ಬರು ಮಾಡಬೇಕು ಮತ್ತು ಆ ವಾತಾವರಣದಲ್ಲಿ ಇದ್ದು ತಮ್ಮ ಕಾರ್ಯದಲ್ಲಿ ಇರುತ್ತಾ ಒಂದು ಸೆಕೆಂಡಿನಲ್ಲಿ ಬಿಂದು ರೂಪದಲ್ಲಿ ಸಫಲತೆ ಸಿಕ್ಕಿದೆಯೇ? ಎಂದು ಪರೀಕ್ಷಿಸಿಕೊಳ್ಳಿ ಏಕೆಂದರೆ ಇಲ್ಲಂತೂ ವಾಯುಮಂಡಲವೂ ಸಹ ಇದೆ ಆದರೆ ತಮ್ಮ-ತಮ್ಮ ಸ್ಥಾನದಲ್ಲಿ ಇದ್ದು ಸೆಕೆಂಡಿನಲ್ಲಿ ಬಿಂದು ಸ್ವರೂಪದಲ್ಲಿ ಸ್ಥಿತರಾಗಬಹುದೇ? ಈ ಅಭ್ಯಾಸವನ್ನು ಮಾಡಬೇಕು ಏಕೆಂದರೆ ಬಾಪ್ದಾದಾ ಎಷ್ಟು ಮುಂದುವರೆಯುತ್ತಾ ಹೋಗುತ್ತೀರಿ ಅಷ್ಟು ಒಂದು ಸೆಕೆಂಡಿನಲ್ಲಿ ಬಿಂದು ಸ್ಥಿತಿಯಲ್ಲಿ ಸ್ಥಿತರಾಗುವ ಅವಶ್ಯಕತೆ ಇರುತ್ತದೆ ಎಂದು ಹೇಳಿದರು. ಆದ್ದರಿಂದ ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳಿ ಮತ್ತು ತಮ್ಮ-ತಮ್ಮ ಸ್ಥಾನದಲ್ಲಿ ರಿಪೋರ್ಟ್ ಟೀಚರ್ಗೆ ಬರೆದು ಕೊಡಬೇಕು ನಂತರ ಟೀಚರ್ ಮೂಲಕ ಇಲ್ಲಿದ್ದರೂ, ಇಲ್ಲದೆ ಇದ್ದರೂ, ಎಲ್ಲರ ಕ್ಲಾಸ್ಗಳಲ್ಲಿ ಇದು ಹೋಂವರ್ಕ್ ಆಗಿದೆ. ಇದರ ರಿಜಲ್ಟ್ ಬಾಪ್ದಾದಾರವರ ಬಳಿ ಬಂದಾಗ ನೋಡುತ್ತೇವೆ, ಇದರಿಂದ ತಾವು 108 ಅಥವಾ 16,000 ರ ಮಾಲೆಯ ಅಧಿಕಾರಿ ಆಗಿದ್ದೀರಾ ಎಂದು ಗೊತ್ತಾಗುತ್ತದೆ. ಸೆಕೆಂಡಿನಲ್ಲಿ ದಿನದ ದಿನಚರಿಯಲ್ಲಿ ಎಷ್ಟು ಸಫಲ ಆಯಿತು ಅದರಿಂದ ತಾವು ಎಷ್ಟು ಯೋಗ್ಯರಾಗಿದ್ದೀರಿ ಎಂದು ಗೊತ್ತಾಗುತ್ತದೆ. ಏಕೆಂದರೆ ಕೈ ಎತ್ತಿಸುತ್ತೇವೆ, ಯಾರು ಪ್ರಾಕ್ಟಿಕಲ್ ಧಾರಣೆಯಲ್ಲಿ ನಾನು 108 ಅಥವಾ 16,000 ಮಾಲೆಯಲ್ಲಿ ಬರುತ್ತೇವೆ ಎಂದು ತಾವು ರಿಜಲ್ಟ್ ಬರೆಯಬೇಕು, ಅದರಿಂದ ದಾದಿಯರು ಹೆಸರು ಕೊಟ್ಟಾಗ ಕೆಲವರು ನಾವೂ ಬರಬಹುದು ಎಂದು ತಿಳಿಯುತ್ತಾರೆ, ಅದರಿಂದ ಈ ರಿಪೋರ್ಟ್ನಿಂದ ಗೊತ್ತಾಗಿ ಬಿಡುತ್ತದೆ.

ಸದಾ ಸೆಕೆಂಡಿನಲ್ಲಿ ಯಾವ ರೂಪ ಅನುಭವ ಮಾಡಲು ಬಯಸುತ್ತೀರೋ ಆ ರೂಪವನ್ನು ಅನುಭವ ಮಾಡಲು ಸಾಧ್ಯವೇ? ಎಂದು ಬಾಪ್ದಾದಾರವರು ಕೇಳುತ್ತಾರೆ. 5 ಸ್ವರೂಪಗಳು ಯಾವುದನ್ನು ತಿಳಿಸಿದ್ದೇವೆ ಅದೂ ಸಹ ಯಾವಾಗ ಬೇಕೋ ಆಗ ಸೆಕೆಂಡಿನಲ್ಲಿ ಸ್ವರೂಪ ಆಗಲು ಸದಹ್ಯವೇ? ಇದನ್ನು ಅಭ್ಯಾಸ ಮಾಡಿ ನಾನು ಯಾವುದನ್ನು ಬಯಸುತ್ತೇನೆ ಆ ಸ್ಥಿತಿಯಲ್ಲಿ ಸೆಕೆಂಡಿನಲ್ಲಿ ಇರಲು ಸಾಧ್ಯವೇ ಅಥವಾ ಸಮಯ ಹಿಡಿಸುತ್ತದೆಯೇ ಎಂದು ತಮ್ಮದು ತಮಗೆ ಗೊತ್ತಾಗುತ್ತದೆ. ಕೈ ಎತ್ತುವುದರಲ್ಲಿ ಬಾಪ್ದಾದಾರವರು ಖುಷಿ ಆಗಿದ್ದಾರೆ. ಮೆಜಾರಿಟಿ ಕೈ ಎತ್ತುತ್ತಾರೆ. ಈಗ ಕೈ ಎತ್ತಿದ್ದೀರಿ ಆದರೆ ಅಭ್ಯಾಸ ಮಾಡುತ್ತಾ-ಮಾಡುತ್ತಾ ಹೇಗೆ ಈಗ ದ್ವಾಪರ-ಕಲಿಯುಗದ ಅಭ್ಯಾಸದಲ್ಲಿ ದೇಹಾಭಿಮಾನದಲ್ಲಿ ಬರುವುದು ಸಹಜ ಆಗಿ ಬಿಟ್ಟಿದೆ ಅದೇ ರೀತಿ ಯಾವ ಸ್ವರೂಪದಲ್ಲಿ ಸ್ಥಿತರಾಗಲು ಬಯಸುತ್ತೀರಿ ಅದು ಅಷ್ಟು ಸಹಜ ಆಗಬೇಕು. ಏಕೆಂದರೆ ಸಮಯ ಅಂತಹದ್ದು ಬರುವುದಿದೆ ಆ ಸಮಯದಲ್ಲಿ ತಮಗೆ ಈ ಅಭ್ಯಾಸದ ಅವಶ್ಯಕತೆ ಇರುತ್ತದೆ. ಈ ಅಭ್ಯಾಸ ಪ್ರತಿಯೊಬ್ಬರು ತಮ್ಮ-ತಮ್ಮ ಕಾರ್ಯಗಳಲ್ಲಿ ಇರುತ್ತಾ ಮಾಡಿ ಮತ್ತು ರಿಜಲ್ಟ್ ನಿಮಿತ್ತ ಟೀಚರ್ಗೆ ಕೊಡುತ್ತಿರಿ. ಈ ವರ್ಷದ ಸಮಾಪ್ತಿಯಲ್ಲಿ ಇದನ್ನು ಅಭ್ಯಾಸ ಮಾಡುತ್ತಿರಬೇಕು. ತಮಗೆ ತಾವೇ ಮಾಡಿ. ತಮಗೆ ತಾವೇ ಟೀಚರ್ ಆಗಿ ಆದರೆ ರಿಜಲ್ಟ್ನ್ನು ತೋರಿಸಲು ತಮ್ಮ ಚಾರ್ಟ್ ಕೊಡುತ್ತಿದ್ದರೆ ಅಟೆನ್ಷನ್ ಇರುತ್ತದೆ. ಕೈಯನ್ನು ಎಲ್ಲಿ ಬೇಕೋ ಅಲ್ಲಿ ಇರಿಸಬಹುದಲ್ಲವೇ, ಅದೇ ರೀತಿ ಮನಸ್ಸನ್ನು ಯಾವ ಸ್ಥಿತಿಯಲ್ಲಿ ಇರಿಸಬೇಕೋ ಆ ಸ್ಥಿತಿಯಲ್ಲಿ ಇರಿಸಬೇಕು, ಮಹಾಮಂತ್ರವೂ ಸಹ ನೆನಪಾರ್ಥದಲ್ಲಿ ಮನ್ಮನಾಭವ ಆಗಿದೆ. ಮನಸ್ಸಿನ ಡ್ರಿಲ್ನಲ್ಲಿ ಎಷ್ಟು ಸಫಲತೆ ಇದೆ, ಅದನ್ನು ತಮಗೆ ತಾವೇ ಅನುಭವ ಮಾಡಿ. ಒಬ್ಬೊಬ್ಬ ಮಗು ಈಗ ಸಂಗಮ ಯುಗದ ಸುಖ, ಸಂಗಮ ಯುಗದ ಪ್ರಾಪ್ತಿಗಳು, ಪ್ರತಿಯೊಂದು ಪ್ರಾಪ್ತಿಯ ಅನುಭವಿ ಆಗಲಿ ಎಂದು ಬಾಪ್ದಾದಾರವರು ಬಯಸುತ್ತಾರೆ. ಪ್ರತಿಯೊಂದು ಪ್ರಾಪ್ತಿ, ಪ್ರತಿಯೊಂದು ಶಕ್ತಿ, ಜ್ಞಾನದ ರಹಸ್ಯವನ್ನು, ಯೋಗದ ಪ್ರತಿಯೊಂದು ವಿಧಿಯನ್ನು, ಧಾರಣೆಯಲ್ಲೂ ಪ್ರತಿಯೊಂದು ಧಾರಣೆಯ ಅನುಭವಿ ಆಗಿದ್ದೀರಾ? ಎಂದು ತಮ್ಮನ್ನು ತಾವು ಚೆಕ್ ಮಾಡಿಕೊಳ್ಳಬೇಕು. ತಮ್ಮ ಪೂರ್ತಿ ಚೆಕಿಂಗ್ ಮಾಡಿಕೊಳ್ಳುತ್ತಿರಿ ಮತ್ತು ಮುಂದುವರೆಯುತ್ತಿರಿ. ಅಂದಮೇಲೆ ಈ ದಿನ ಬಾಪ್ದಾದಾ ಚೆಕಿಂಗ್ ಮತ್ತು ಪ್ರಾಪ್ತಿಗಳನ್ನು ಚೆಕ್ ಮಾಡಿಕೊಳ್ಳಲು ಹೇಳುತ್ತಿದ್ದಾರೆ. ಯಾವುದೇ ಪ್ರಾಪ್ತಿಯಲ್ಲಿ ಕೊರತೆ ಇದ್ದರೆ ಡ್ರಾಮಾನುಸಾರ ಪರೀಕ್ಷೆಗಳು ಸಮಯದನುಸಾರವಾಗಿ ಅದೇ ಬರುತ್ತದೆ. ಆದ್ದರಿಂದ ಎಲ್ಲಾ ಸಬ್ಜೆಕ್ಟ್ಗಳಲ್ಲಿ ಸಂಪೂರ್ಣ ಮತ್ತು ಸಂಪನ್ನತೆಯ ಚೆಕಿಂಗ್ ಮಾಡಿಕೊಳ್ಳಿ ಮತ್ತು ಪರಿವರ್ತನೆ ಆಗಿ.

ಈ ದಿನ ಬಾಪ್ದಾದಾ ತಮ್ಮೆಲ್ಲರ ಸಾಧರಣ ಸ್ವರೂಪದಲ್ಲೂ ತಮ್ಮ ಭವಿಷ್ಯದ ರೂಪ, ಪ್ರಾಪ್ತಿಗಳ ರೂಪವನ್ನು ನೋಡುತ್ತಿದ್ದೇವೆ. ಒಳ್ಳೆಯದು. ಎಲ್ಲಾ ಕಡೆಯ ಅಗಲಿ ಹೋಗಿ ಸಿಕ್ಕಿರುವ ಮಕ್ಕಳು, ಬಾಪ್ದಾದಾರವರ ಹೃದಯ ಸಿಂಹಾಸನ ಮಕ್ಕಳಿಗೆ, ಬಾಪ್ದಾದಾರವರ ಆಜ್ಞಾಕಾರಿ, ತೀವ್ರ ಪುರುಷಾರ್ಥಿ ಮಕ್ಕಳಿಗೆ ಬಹಳ-ಬಹಳ ಹೃದಯದ ಪ್ರೀತಿ ಮತ್ತು ಬಾಪ್ದಾದಾರವರ ಶುಭಾಶಯಗಳು-ಶುಭಾಶಯಗಳು-ಶುಭಾಶಯಗಳು. ಬಾಪ್ದಾದಾರವರಿಗೂ ಮಕ್ಕಳನ್ನು ನೋಡಿ ಖುಷಿ ಆಗುತ್ತದೆ. ವಾಹ್, ವಾಹ್! ನನ್ನ ಮಕ್ಕಳೇ ವಾಹ್!

ಇಡೀ ವರ್ಷ ನಿರ್ವಿಘ್ನ ಮತ್ತು ಖುಷ್ಮಿಸಾಜ್ (ಪ್ರಸನ್ನಚಿತ್ತ) ಆಗಿರಿ. ತಮ್ಮ ಚಲನೆ ಮತ್ತು ಚಹರೆಯಿಂದ ಎಲ್ಲರಿಗೂ ಖುಷಿ ಮತ್ತು ಮುಗುಳ್ನಗುವುದನ್ನು ಕಲಿಸಿ ಕೊಡಿ. ಸದಾ ಹಾರುತ್ತಾ ಇರಿ ಮತ್ತು ಹಾರಿಸುತ್ತಾ ಇರಿ. ನಡೆಯುವುದಲ್ಲ, ಹಾರುತ್ತಾ ಇರಿ. ಹಾರುವ ಕಲೆ ಸರ್ವರಿಗೂ ಪ್ರಿಯವಾಗಿದೆ ಅಂದಮೇಲೆ ಹಾರುತ್ತಾ ಹಾರುತ್ತಾ ಸಂದೇಶ ಕೊಡಬೇಕು. ಎಲ್ಲರೂ ತಮ್ಮನ್ನು ನೋಡಿ ಖುಷಿಯ ಉಯ್ಯಾಲೆಯಲ್ಲಿ ತೂಗುವುದಕ್ಕೆ ತೊಡಗಲಿ. ಹ್ಯಾಪಿ ಹ್ಯಾಪಿ ಹ್ಯಾಪಿ ನ್ಯೂ ಇಯರ್.

ವರದಾನ:
ಈಶ್ವರೀಯ ಭಾಗ್ಯದಲ್ಲಿ ಪ್ರಕಾಶತೆಯ ಕಿರೀಟವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಸರ್ವ ಪ್ರಾಪ್ತಿ ಸ್ವರೂಪ ಭವ.

ಪ್ರಪಂಚದಲ್ಲಿ ಭಾಗ್ಯದ ಸಂಕೇತವಾಗಿ ರಾಜ್ಯಭಾಗ್ಯವಿರುತ್ತದೆ ಹಾಗೂ ರಾಜ್ಯಭಾಗ್ಯದ ಸಂಕೇತವು ಕಿರೀಟವಾಗಿರುತ್ತದೆ. ಇದೇ ರೀತಿ ಈಶ್ವರೀಯ ಭಾಗ್ಯದ ಸಂಕೇತವು ಪ್ರಕಾಶತೆಯ ಕಿರೀಟವಾಗಿದೆ. ಮತ್ತು ಈ ಕಿರೀಟದ ಪ್ರಾಪ್ತಿಗೆ ಆಧಾರವಾಗಿದೆ - ಪವಿತ್ರತೆ. ಸಂಪೂರ್ಣ ಪವಿತ್ರ ಆತ್ಮರು ಪ್ರಕಾಶತೆಯ ಕಿರೀಟಧಾರಿ ಆಗುವುದರ ಜೊತೆ-ಜೊತೆಗೆ ಸರ್ವ ಪ್ರಾಪ್ತಿಗಳಿಂದಲೂ ಸಂಪನ್ನರಾಗಿ ಇರುತ್ತಾರೆ. ಒಂದುವೇಳೆ ಯಾವುದೇ ಪ್ರಾಪ್ತಿಯ ಕೊರತೆಯಿದೆ ಎಂದರೆ ಪ್ರಕಾಶತೆಯ ಕಿರೀಟವು ಸ್ಪಷ್ಟವಾಗಿ ಕಾಣಿಸುವುದಿಲ್ಲ.

ಸ್ಲೋಗನ್:
ತನ್ನ ಆತ್ಮಿಕ ಸ್ಥಿತಿಯಲ್ಲಿ ಸ್ಥಿತರಾಗುವವರೇ ಮನಸಾ ಮಹಾದಾನಿ ಆಗಿದ್ದಾರೆ.

ಅವ್ಯಕ್ತ ಸೂಚನೆ:- ಜ್ವಾಲಾ ಸ್ವರೂಪ ಸ್ಥಿತಿಯಲ್ಲಿರುತ್ತಾ ಶಕ್ತಿಶಾಲಿ ನೆನಪಿನ ಅನುಭವ ಮಾಡಿ.

ಈಗೀಗ ಒಳ್ಳೆಯದು-ಒಳ್ಳೆಯದು ಎಂದು ಹೇಳುತ್ತಾರೆ, ಆದರೆ ಒಳ್ಳೆಯವರಾಗಬೇಕೆನ್ನುವ ಪ್ರೇರಣೆ ಸಿಗುತ್ತಿಲ್ಲ. ಅದಕ್ಕೆ ಒಂದೇ ಸಾಧನವಿದೆ - ಸಂಘಟಿತ ರೂಪದಲ್ಲಿ ಜ್ವಾಲಾ ಸ್ವರೂಪರಾಗಿ. ಒಬ್ಬೊಬ್ಬರು ಚೈತನ್ಯ ಲೈಟ್ ಹೌಸ್ ಆಗಿರಿ. ಸೇವಾಧಾರಿಯಾಗಿದ್ದೀರಿ, ಸ್ನೇಹಿಯಾಗಿದ್ದೀರಿ, ಒಂದೇ ಬಲ ಒಂದೇ ಭರವಸೆಯವರಾಗಿದ್ದೀರಿ, ಇದೆಲ್ಲವೂ ಸರಿಯಿದೆ ಆದರೆ ಮಾಸ್ಟರ್ ಸರ್ವ ಶಕ್ತಿವಂತನ ಸ್ಟೇಜ್, ಸ್ಟೇಜ್ ಮೇಲೆ ಬಂದರೆ ಎಲ್ಲರೂ ನಿಮ್ಮ ಮುಂದೆ ಪತಂಗಗಳ ಸಮಾನ ಸುತ್ತುವರು.