12.09.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ-
ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೀರಿ ಮತ್ತು ಶೂದ್ರರು ಪಾದಗಳಿಗೆ ಸಮಾನರಾಗಿದ್ದೀರಿ. ಯಾವಾಗ
ಶೂದ್ರರಿಂದ ಬ್ರಾಹ್ಮಣರಾಗುವರೋ ಆಗಲೇ ದೇವತೆಗಳಾಗಲು ಸಾಧ್ಯ.”
ಪ್ರಶ್ನೆ:
ನಿಮ್ಮ ಶುಭ
ಭಾವನೆಯು ಯಾವುದಾಗಿದೆ. ಅದನ್ನೂ ಸಹ ಮನುಷ್ಯರು ವಿರೋಧಿಸುತ್ತಾರೆ?
ಉತ್ತರ:
ಈ ಹಳೆಯ
ಪ್ರಪಂಚವು ಸಮಾಪ್ತಿಯಾಗಿ ಹೊಸ ಪ್ರಪಂಚವು ಸ್ಥಾಪನೆಯಾಗಲಿ ಎನ್ನುವುದು ನಿಮ್ಮ ಶುಭಭಾವನೆಯಾಗಿದೆ.
ಇದಕ್ಕಾಗಿಯೇ ನೀವು ಹೇಳುತ್ತೀರಿ - ಈ ಹಳೆಯ ಪ್ರಪಂಚವು ಈಗ ವಿನಾಶವಾಯಿತೆಂದರೆ ಆಯಿತು. ಇದನ್ನೂ ಸಹ
ಮನುಷ್ಯರು ವಿರೋಧಿಸುತ್ತಾರೆ.
ಪ್ರಶ್ನೆ:
ಈ
ಇಂದ್ರಪ್ರಸ್ಥದ ಮುಖ್ಯ ನಿಯಮವೇನಾಗಿದೆ ?
ಉತ್ತರ:
ಯಾವುದೇ ಪತಿತ ಶೂದ್ರರನ್ನು ಈ ಇಂದ್ರಪ್ರಸ್ಥದ ಸಭೆಯಲ್ಲಿ ಕರೆತರುವಂತಿಲ್ಲ. ಒಂದುವೇಳೆ ಯಾರಾದರೂ
ಕರೆತಂದರೆ ಅವರ ಮೇಲೂ ಸಹ ಪಾಪವಾಗುತ್ತದೆ.
ಓಂ ಶಾಂತಿ.
ಆತ್ಮೀಯ ಮಕ್ಕಳ ಪ್ರತಿ ಆತ್ಮೀಯ ತಂದೆಯು ಕುಳಿತು ತಿಳಿಸುತ್ತಾರೆ. ಆತ್ಮಿಕ ಮಕ್ಕಳೂ ಸಹ
ತಿಳಿದುಕೊಂಡಿದ್ದೀರಿ - ನಾವು ನಮಗಾಗಿ ನಮ್ಮ ದೈವೀರಾಜ್ಯವನ್ನು ಪುನಃ ಸ್ಥಾಪನೆ ಮಾಡುತ್ತಿದ್ದೇವೆ.
ಏಕೆಂದರೆ ನೀವು ಬ್ರಹ್ಮಾಕುಮಾರ - ಕುಮಾರಿಯರಾಗಿದ್ದೀರಿ. ಆದ್ದರಿಂದ ನಿಮಗೆ ಗೊತ್ತಿದೆ ಆದರೆ
ಮಾಯೆಯು ನಿಮಗೂ ಮರೆಸಿಬಿಡುತ್ತದೆ. ನೀವು ದೇವತೆಗಳಾಗಲು ಬಯಸುತ್ತೀರಿ. ಆದರೆ ಮಾಯೆಯು ನಿಮ್ಮನ್ನು
ಬ್ರಾಹ್ಮಣರಿಂದ ಶೂದ್ರರನ್ನಾಗಿ ಮಾಡಿಬಿಡುತ್ತದೆ. ಶಿವತಂದೆಯನ್ನು ನೆನಪು ಮಾಡದಿರುವ ಕಾರಣ
ಬ್ರಾಹ್ಮಣರು ಶೂದ್ರರಾಗಿಬಿಡುತ್ತಾರೆ. ನಾವು ನಮ್ಮದೇ ಆದ ರಾಜ್ಯವನ್ನು ಸ್ಥಾಪನೆ
ಮಾಡುತ್ತಿದ್ದೇವೆಂದು ಮಕ್ಕಳಿಗೆ ಗೊತ್ತಿದೆ. ಯಾವಾಗ ರಾಜ್ಯವು ಸ್ಥಾಪನೆಯಾಗಿಬಿಡುವುದೋ ಆಗ ಈ ಹಳೆಯ
ಸೃಷ್ಟಿಯಲ್ಲಿರುವುದಿಲ್ಲ. ಎಲ್ಲರನ್ನು ಈ ವಿಶ್ವದಿಂದ ಶಾಂತಿಧಾಮಕ್ಕೆ ಕಳುಹಿಸುತ್ತಾರೆ. ಇದು
ನಿಮ್ಮ ಶುಭಭಾವನೆಯಾಗಿದೆ. ಆದರೆ ಈ ಪ್ರಪಂಚವು ಸಮಾಪ್ತಿಯಾಗಲೆಂದು ನೀವು ಹೇಳುವುದನ್ನು ಮನುಷ್ಯರು
ಅವಶ್ಯಕವಾಗಿ ವಿರೋಧಿಸುತ್ತಾರಲ್ಲವೆ! ಈ ಬ್ರಹ್ಮಕುಮಾರಿಯರು ಏನು ಹೇಳುತ್ತಾರೆ.
ವಿನಾಶ-ವಿನಾಶವೆಂಬುದನ್ನೇ ಹೇಳುತ್ತಿರುತ್ತಾರೆ ಎಂದುಕೊಳ್ಳುತ್ತಾರೆ. ಆದರೆ ನಿಮಗಷ್ಟೇ ತಿಳಿದಿದೆ
- ಈ ವಿನಾಶದಲ್ಲಿಯೂ ಇಡೀ ಪ್ರಪಂಚ, ಅದರಲ್ಲಿಯೂ ವಿಶೇಷವಾಗಿ ಭಾರತದ ಕಲ್ಯಾಣವಿದೆ. ಈ ಮಾತನ್ನು
ಪ್ರಪಂಚದವರು ತಿಳಿದುಕೊಂಡಿಲ್ಲ. ವಿನಾಶವಾದಾಗ ಎಲ್ಲರೂ ಮುಕ್ತಿಧಾಮಕ್ಕೆ ಹೊರಟುಹೋಗುತ್ತಾರೆ. ಈಗ
ನೀವು ಈಶ್ವರೀಯ ಸಂಪ್ರದಾಯದವರಾಗಿದ್ದೀರಿ. ಮೊದಲು ಆಸುರೀ ಸಂಪ್ರದಾಯದವರಾಗಿದ್ದೀರಿ. ನಿಮಗೆ ಸ್ವಯಂ
ಈಶ್ವರನೇ ಹೇಳುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ. ಇದಂತೂ ತಂದೆಗೆ ಗೊತ್ತಿದೆ -
ಯಾರೂ ಸಹ ಸದಾ ನೆನಪಿನಲ್ಲಿರಲು ಸಾಧ್ಯವಿಲ್ಲ. ಒಂದುವೇಳೆ ಸದಾ ನೆನಪಿನಲ್ಲಿದ್ದಿದ್ದೆ ಆದರೆ
ವಿಕರ್ಮ ವಿನಾಶವಾಗಿಬಿಡುತ್ತದೆ. ಮತ್ತೆ ಕರ್ಮಾತೀತ ಸ್ಥಿತಿಯಾಗಿಬಿಡುತ್ತದೆ. ಈಗಂತೂ ಎಲ್ಲರೂ
ಪುರುಷಾರ್ಥಿಗಳಾಗಿದ್ದಾರೆ. ಯಾರು ಬ್ರಾಹ್ಮಣರಾಗುವರೋ ಅವರೇ ದೇವತೆಗಳಾಗುತ್ತಾರೆ. ಬ್ರಾಹ್ಮಣರ
ನಂತರ ದೇವತೆಗಳು. ತಂದೆಯು ತಿಳಿಸುತ್ತಾರೆ - ಬ್ರಾಹ್ಮಣರು ಶಿಖೆಗೆ ಸಮಾನ. ಹೇಗೆ ಮಕ್ಕಳು ಬಾಜೋಲಿ
(ಪಲ್ಟಿ ಆಟ) ಆಟವನ್ನು ಆಡುತ್ತಾರೆ. ಅದರಲ್ಲಿ ಮೊದಲು ತಲೆ ಮತ್ತು ಜುಟ್ಟು ಬರುತ್ತದೆ.
ಬ್ರಾಹ್ಮಣರಿಗೆ ಸದಾ ಜುಟ್ಟಿರುತ್ತದೆ. ನೀವು ಬ್ರಾಹ್ಮಣರಾಗಿದ್ದೀರಿ. ಮೊದಲು ಶೂದ್ರರು ಅರ್ಥಾತ್
ಪಾದಗಳಿಗೆ ಸಮಾನರಾಗಿದ್ದೀರಿ. ಈಗ ಬ್ರಾಹ್ಮಣರು ಶಿಖೆಯಾಗಿದ್ದೀರಿ. ನಂತರ ದೇವತೆಗಳಾಗುತ್ತೀರಿ.
ಮುಖಕ್ಕೆ ದೇವತೆಗಳೆಂದು, ಭುಜಗಳಿಗೆ ಕ್ಷತ್ರಿಯರೆಂದು, ಹೊಟ್ಟೆಗೆ ವೈಶ್ಯರೆಂದು, ಪಾದಗಳಿಗೆ
ಶೂದ್ರರೆಂದು ಹೇಳುತ್ತಾರೆ. ಶೂದ್ರರು ಅರ್ಥಾತ್ ಕ್ಷುದ್ರಬುದ್ಧಿ ಅರ್ಥಾತ್ ತುಚ್ಛಬುದ್ಧಿಯವರು.
ಯಾರು ತಂದೆಯನ್ನು ಅರಿತುಕೊಳ್ಳುವುದಿಲ್ಲ, ಅಲ್ಲದೆ ಇನ್ನೂ ತಂದೆಯ ನಿಂದನೆ ಮಾಡುತ್ತಿರುತ್ತಾರೆಯೋ
ಅವರಿಗೆ ತುಚ್ಛಬುದ್ಧಿಯವರೆಂದು ಹೇಳುತ್ತಾರೆ. ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ಯಾವಾಗ
ಭಾರತದಲ್ಲಿ ನಿಂದನೆಯಾಗುವುದೋ ಆಗ ನಾನು ಬರುತ್ತೇನೆ. ಯಾರು ಭಾರತವಾಸಿಗಳಾಗಿದ್ದಾರೆಯೋ ಅವರೊಂದಿಗೆ
ತಂದೆಯು ಮಾತನಾಡುತ್ತಾರೆ. ಯಧಾಯಧಾಹಿ ಧರ್ಮಸ್ಯ..... ತಂದೆಯು ಭಾರತದಲ್ಲಿಯೇ ಬರುತ್ತಾರೆ.
ಮತ್ತ್ಯಾವುದೇ ಸ್ಥಾನದಲ್ಲಿ ಬರುವುದಿಲ್ಲ. ಭಾರತವೇ ಅವಿನಾಶಿ ಖಂಡವಾಗಿದೆ. ತಂದೆಯೂ
ಅವಿನಾಶಿಯಾಗಿದ್ದಾರೆ, ಅವರೆಂದೂ ಜನನ-ಮರಣದಲ್ಲಿ ಬರುವುದಿಲ್ಲ. ಅವಿನಾಶಿ ತಂದೆಯು ಅವಿನಾಶಿ
ಆತ್ಮಗಳಿಗೆ ತಿಳಿಸಿಕೊಡುತ್ತಾರೆ. ಈ ಶರೀರವಂತೂ ವಿನಾಶಿಯಾಗಿದೆ. ಈಗ ನೀವು ಶರೀರದ ಪರಿವೆಯನ್ನು
ಬಿಟ್ಟು ತಮ್ಮನ್ನು ಆತ್ಮನೆಂದು ತಿಳಿಯಲು ತೊಡಗಿದ್ದೀರಿ. ತಂದೆಯ ತಿಳಿಸಿಕೊಟ್ಟಿದ್ದರು - ಹೋಲಿಯದು
ಕೋಕಿಯನ್ನು ಸುಡುತ್ತಾರೆ. ಆಗ ಕೋಕಿಯೆಲ್ಲವೂ ಸುಟ್ಟರೂ ಸಹ ಅದನ್ನು ಪೋಣಿಸಿರುವ ದಾರವು
ಸುಡುವುದಿಲ್ಲ. ಅಂದರೆ ಆತ್ಮ ಎಂದಿಗೂ ವಿನಾಶವಾಗುವುದಿಲ್ಲ. ಅದಕ್ಕಾಗಿಯೇ ಈ ಉದಾಹರಣೆಯಿದೆ. ಆತ್ಮವು
ಅವಿನಾಶಿಯೆಂಬುದು ಯಾವುದೇ ಮನುಷ್ಯ ಮಾತ್ರರಿಗೆ ಗೊತ್ತಿಲ್ಲ. ಅವರು ಆತ್ಮವು ನಿರ್ಲೇಪವಾಗಿದೆಯೆಂದು
ಹೇಳಿಬಿಡುತ್ತಾರೆ. ಆದರೆ ಈಗ ತಂದೆಯು ಹೇಳುತ್ತಾರೆ - ಆತ್ಮವು ನಿರ್ಲೇಪವಲ್ಲ. ಆತ್ಮವೇ ಈ ಶರೀರದ
ಮೂಲಕ ಒಳ್ಳೆಯ ಅಥವಾ ಕೆಟ್ಟ ಕರ್ಮವನ್ನು ಮಾಡುತ್ತದೆ. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು
ತೆಗೆದುಕೊಳ್ಳುತ್ತದೆ. ಕರ್ಮಭೋಗವನ್ನು ಭೋಗಿಸುತ್ತದೆ. ಅಂದಾಗ ಅದು ಲೆಕ್ಕಾಚಾರವನ್ನು ತೆಗೆದುಕೊಂಡು
ಬಂದಿತ್ತಲ್ಲವೇ ಆದ್ದರಿಂದಲೇ ಆಸುರೀ ಪ್ರಪಂಚದಲ್ಲಿ ಮನುಷ್ಯರು ಅಪಾರ ದುಃಖವನ್ನನುಭವಿಸುತ್ತಾರೆ.
ಆಯಸ್ಸೂ ಸಹ ಕಡಿಮೆಯಿರುತ್ತದೆ. ಆದರೆ ಈ ಮನುಷ್ಯರು ದುಃಖವನ್ನೂ ಸಹ ಸುಖವೆಂದು ತಿಳಿದು
ಕುಳಿತಿದ್ದಾರೆ. ನಿರ್ವಿಕಾರಿಗಳಾಗಿ ಎಂದು ನೀವು ಮಕ್ಕಳು ಹೇಳಿದರೂ ಸಹ ವಿಕಾರವಿಲ್ಲದೆ ನಾವಿರಲು
ಸಾಧ್ಯವಿಲ್ಲವೆಂದು ಹೇಳುತ್ತಾರೆ. ಏಕೆಂದರೆ ಶೂದ್ರ ಸಂಪ್ರದಾಯದವರಲ್ಲವೆ.
ಕ್ಷುದ್ರಬುದ್ಧಿಯವರಾಗಿದ್ದಾರೆ. ನೀವು ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೀರಿ. ಶಿಖೆಯು
ಎಲ್ಲದಕ್ಕಿಂತ ಮೇಲಿರುತ್ತದೆ. ಅಂದಾಗ ನೀವು ದೇವತೆಗಳಿಗಿಂತಲೂ ಶ್ರೇಷ್ಠರಾಗಿದ್ದೀರಿ. ನೀವು ಈ
ಸಮಯದಲ್ಲಿ ದೇವತೆಗಳಿಗಿಂತಲೂ ಉತ್ತಮರಾಗಿದ್ದೀರಿ. ಏಕೆಂದರೆ ತಂದೆಯ ಜೊತೆಯಿದ್ದೀರಿ. ತಂದೆಯು ಈ
ಸಮಯದಲ್ಲಿ ನಿಮಗೆ ಓದಿಸುತ್ತಾರೆ. ಅವರು ವಿಧೇಯ ಸೇವಕರಾಗಿದ್ದಾರಲ್ಲವೆ. ತಂದೆಯು ಮಕ್ಕಳ ವಿಧೇಯ
ಸೇವಕನಾಗಿರುತ್ತಾರೆ. ಮಕ್ಕಳಿಗೆ ಜನ್ಮ ನೀಡಿ, ಸಂಭಾಲನೆ ಮಾಡಿ, ಓದಿಸಿ ದೊಡ್ಡವರನ್ನಾಗಿ ಮಾಡಿ
ವೃದ್ಧರಾದಾಗ ತನ್ನ ಪೂರ್ಣ ಆಸ್ತಿಯನ್ನು ಮಕ್ಕಳಿಗೆ ಕೊಟ್ಟು ತಾನು ಗುರುಗಳನ್ನು ಮಾಡಿಕೊಂಡು
ಎಲ್ಲರಿಂದ ದೂರ ಹೋಗಿ ಕುಳಿತುಕೊಳ್ಳುತ್ತಾರೆ. ವಾನಪ್ರಸ್ಥಿಗಳಾಗುತ್ತಾರೆ. ಮುಕ್ತಿಧಾಮಕ್ಕೆ ಹೋಗಲು
ಗುರುಗಳನ್ನಾಗಿ ಮಾಡಿಕೊಳ್ಳುತ್ತಾರೆ. ಆದರೆ ಅವರು ಮುಕ್ತಿಧಾಮಕ್ಕೆ ಹೋಗಲು ಸಾಧ್ಯವಿಲ್ಲ ಅಂದಾಗ
ತಂದೆ-ತಾಯಿ ಮಕ್ಕಳ ಸಂಭಾಲನೆ ಮಾಡುತ್ತಾರೆ. ತಿಳಿದುಕೊಳ್ಳಿ, ತಾಯಿಯೂ ಅಸ್ವಸ್ಥವಾದಾಗ ಮಕ್ಕಳು
ಕೊಳಕು ಮಾಡಿದರೆ ಆಗ ತಂದೆಯೇ ಅದನ್ನು ಸ್ವಚ್ಛ ಮಾಡಬೇಕಾಗುತ್ತದೆ. ಅಲ್ಲವೆ, ಅಂದಾಗ ತಂದೆ-ತಾಯಿಯು
ಮಕ್ಕಳ ಸೇವಕರಾದರಲ್ಲವೆ. ಅವರ ಪೂರ್ಣ ಆಸ್ತಿಯನ್ನು ಮಕ್ಕಳಿಗೆ ಕೊಟ್ಟುಬಿಡುತ್ತಾರೆ. ಬೇಹದ್ದಿನ
ತಂದೆಯೂ ಸಹ ಹೇಳುತ್ತಾರೆ - ನಾನು ಬಂದಾಗ ಯಾವುದೇ ಚಿಕ್ಕಮಕ್ಕಳ ಬಳಿ ಬರುವುದಿಲ್ಲ. ನೀವಂತೂ
ದೊಡ್ಡವರಾಗಿದ್ದೀರಿ ಅಂದಾಗ ನಾನು ಕುಳಿತು ನಿಮಗೆ ಶಿಕ್ಷಣವನ್ನು ಕೊಡುತ್ತೇನೆ. ನೀವು ಶಿವತಂದೆಯ
ಮಕ್ಕಳಾಗುತ್ತೀರೆಂದರೆ ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತೀರಿ. ಅದಕ್ಕಿಂತ ಮೊದಲು
ಶೂದ್ರಕುಮಾರ-ಕುಮಾರಿಯರಾಗಿದ್ದೀರಿ, ವೇಶ್ಯಾಲಯದಲ್ಲಿದ್ದಿರಿ. ಈಗ ನೀವು ವೇಶ್ಯಾಲಯದಲ್ಲಿ
ಇರುವಂತಹವರಲ್ಲ. ಇಲ್ಲಿ ಯಾವ ವಿಕಾರಿಗಳಿರಲು ಸಾಧ್ಯವಿಲ್ಲ. ನಿಯಮವೇ ಇಲ್ಲ. ಈ ಸ್ಥಾನವು
ಬ್ರಹ್ಮಕುಮಾರ-ಕುಮಾರಿಯರಾಗುವುದಕ್ಕಾಗಿಯೇ ಇದೆ. ಕೆಲವರು ತಿಳುವಳಿಕೆಯಿಲ್ಲದ ಮಕ್ಕಳಿದ್ದಾರೆ.
ವಿಕಾರದಲ್ಲಿ ಹೋಗುವ ಪತಿತರಿಗೆ ಶೂದ್ರರೆಂದು ಹೇಳಲಾಗುತ್ತದೆ. ಅವರಿಗೆ ಇಲ್ಲಿರುವ ನಿಯಮವಿಲ್ಲ.
ಬರುವಂತಿಲ್ಲವೆಂದು ತಿಳಿಯುವುದೇ ಇಲ್ಲ. ಇಂದ್ರಸಭೆಯ ಮಾತಿದೆಯಲ್ಲವೆ. ಸತ್ಯವಾದ ಇಂದ್ರಸಭೆಯಂತೂ
ಇಲ್ಲಿದೆ. ಇಲ್ಲಿ ಜ್ಞಾನದ ಮಳೆಯಾಗುತ್ತದೆ. ಯಾರಾದರೂ ಬ್ರಹ್ಮಕುಮಾರ-ಕುಮಾರಿಯು ಅಪವಿತ್ರರನ್ನು
ಮುಚ್ಚಿಟ್ಟು ಸಭೆಯಲ್ಲಿ ಕರೆತಂದರೆ ಕಲ್ಲಾಗಿಬಿಡಿ (ಕಲ್ಲುಬುದ್ಧಿ) ಎಂದು ಇಬ್ಬರಿಗೂ ಶಾಪ
ಸಿಕ್ಕಿಬಿಡುತ್ತದೆ. ಇದು ಸತ್ಯ-ಸತ್ಯವಾದ ಇಂದ್ರಪ್ರಸ್ಥವಾಗಿದೆಯಲ್ಲವೆ. ಇದೇನೂ
ಶೂದ್ರಕುಮಾರ-ಕುಮಾರಿಯವರ ಸತ್ಸಂಗವಲ್ಲ. ದೇವತೆಗಳು ಪವಿತ್ರವಾಗಿರುತ್ತಾರೆ. ಶೂದ್ರರು
ಪತಿತರಾಗಿರುತ್ತಾರೆ. ತಂದೆಯು ಬಂದು ಪತಿತರನ್ನು ಪಾವನ ದೇವತೆಗಳನ್ನಾಗಿ ಮಾಡುತ್ತಾರೆ. ಈಗ ನೀವು
ಪತಿತರಿಂದ ಪಾವನರಾಗುತ್ತಿದ್ದೀರಿ. ಅಂದಾಗ ಇದು ಇಂದ್ರಸಭೆಯಾಯಿತು. ಒಂದುವೇಳೆ ಕೇಳದೆಯೇ ಯಾರಾದರೂ
ವಿಕಾರಿಗಳನ್ನು ಕರೆತಂದರೆ ಬಹಳಷ್ಟು ಶಿಕ್ಷೆಯು ಸಿಗುತ್ತದೆ. ಕಲ್ಲುಬುದ್ಧಿಯವರಾಗಿಬಿಡುತ್ತಾರೆ.
ಇಲ್ಲಿ ನೀವು ಪಾರಸಬುದ್ಧಿಯವರಾಗುತ್ತಿದ್ದೀರಲ್ಲವೆ. ಆದ್ದರಿಂದ ಯಾರು ಪತಿತರನ್ನು ಕರೆತರುತ್ತಾರೆಯೋ
ಅವರಿಗೂ ಸಹ ಶಾಪವು ಸಿಗುತ್ತದೆ. ನೀವು ವಿಕಾರಿಗಳನ್ನು ಮುಚ್ಚಿಟ್ಟುಕೊಂಡು ಏಕೆ ಕರೆತಂದಿರಿ?
ಇಂದ್ರ (ತಂದೆ)ನೊಂದಿಗೆ ಕೇಳಿಯೂ ಇಲ್ಲ. ಅಂದಾಗ ಎಷ್ಟೊಂದು ಶಿಕ್ಷೆ ಸಿಗುತ್ತದೆ. ಇವು
ಗುಪ್ತಮಾತುಗಳಾಗಿವೆ. ಈಗ ನೀವು ದೇವತೆಗಳಾಗುತ್ತಿದ್ದೀರಿ. ಬಹಳ ಕಠಿಣ ನಿಯಮಗಳಿವೆ. ಇಲ್ಲವೆಂದರೆ
ಸ್ಥಿತಿಯೇ ಕೆಳಗೆ ಬಂದುಬಿಡುತ್ತದೆ. ಒಮ್ಮೆಲೆ ಕಲ್ಲುಬುದ್ಧಿಯವರಾಗಿ ಬಿಡುತ್ತಾರೆ. ಈಗ ಇರುವುದೇ
ಕಲ್ಲುಬುದ್ಧಿ. ಪಾರಸಬುದ್ಧಿಯವರಾಗುವ ಪುರುಷಾರ್ಥವನ್ನೇ ಮಾಡುವುದಿಲ್ಲ. ಇವನ್ನು ತಿಳಿದುಕೊಂಡಿಲ್ಲ.
ಇದನ್ನು ನೀವು ಮಕ್ಕಳೇ ಅರಿತುಕೊಳ್ಳುತ್ತೀರಿ. ಇಲ್ಲಿ ಬ್ರಹ್ಮಕುಮಾರ-ಕುಮಾರಿಯರಿರುತ್ತೀರಿ.
ಅವರನ್ನು ದೇವತಾ ಅರ್ಥಾತ್ ಕಲ್ಲುಬುದ್ಧಿಯವರಿಂದ ಪಾರಸಬುದ್ಧಿಯವರನ್ನಾಗಿ ಮಾಡುತ್ತಿದ್ದಾರೆ.
ತಂದೆಯು ಮಧುರಾತಿ ಮಧುರ
ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಯಾವುದೇ ನಿಯಮವನ್ನು ಉಲ್ಲಂಘನೆ ಮಾಡಬೇಡಿ. ಇಲ್ಲವಾದಲ್ಲಿ
ಅಂತಹವರನ್ನು ಐದು ಭೂತಗಳು ಹಿಡಿದುಕೊಳ್ಳುತ್ತವೆ. ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರ - ಇವು
ಅರ್ಧಕಲ್ಪದ ದೊಡ್ಡ-ದೊಡ್ಡ ಭೂತಗಳಾಗಿವೆ. ನೀವು ಈ ಭೂತಗಳನ್ನು ಓಡಿಸಲು ಬಂದಿದ್ದೀರಿ. ಯಾವ ಆತ್ಮವು
ಶುದ್ಧ ಪವಿತ್ರವಾಗಿತ್ತೋ ಅದು ಈಗ ಅಪವಿತ್ರ, ಅಶುದ್ಧ, ದುಃಖಿ, ರೋಗಿಯಾಗಿಬಿಟ್ಟಿದೆ. ಈ
ಪ್ರಪಂಚದಲ್ಲಿ ಅಪಾರ ದುಃಖವಿದೆ. ತಂದೆಯು ಬಂದು ಜ್ಞಾನದ ಮಳೆಯನ್ನು ಸುರಿಸುತ್ತಾರೆ. ನೀವು ಮಕ್ಕಳ
ಮುಖಾಂತರವೇ ಮಾಡುತ್ತಾರೆ. ನಿಮಗಾಗಿ ಸ್ವರ್ಗವನ್ನು ರಚಿಸುತ್ತಾರೆ. ನೀವೇ ಯೋಗಬಲದಿಂದ
ದೇವತೆಗಳಾಗುತ್ತೀರಿ ತಂದೆಯಂತೂ ಆಗುವುದಿಲ್ಲ. ತಂದೆಯು ಸೇವಕನಾಗಿದ್ದಾರೆ. ಶಿಕ್ಷಕರೂ ಸಹ
ವಿದ್ಯಾರ್ಥಿಗಳಿಗೆ ಸೇವಕರಾಗಿದ್ದಾರೆ. ಸೇವೆ ಮಾಡಿ ಮಕ್ಕಳಿಗೆ ಓದಿಸುತ್ತಾರೆ. ನಾನು ನಿಮ್ಮ ವಿಧೇಯ
ಸೇವಕನಾಗಿದ್ದೇನೆಂದು ಶಿಕ್ಷಕರು ಹೇಳುತ್ತಾರೆ. ಬ್ಯಾರಿಸ್ಟರ್, ಇಂಜಿನಿಯರ್ ಮೊದಲಾದವರನ್ನಾಗಿ
ಮಾಡುತ್ತಾರೆಂದರೆ ಸೇವಕರಾದರಲ್ಲವೆ. ಹಾಗೆಯೇ ಗುರುಗಳೂ ಸಹ ಮಾರ್ಗವನ್ನು ತಿಳಿಸುತ್ತಾರೆ. ಸೇವಕನಾಗಿ
ಮುಕ್ತಿಧಾಮಕ್ಕೆ ಕರೆದುಕೊಂಡು ಹೋಗುವ ಸೇವೆ ಮಾಡುತ್ತಾರೆ. ಆದರೆ ಈಗಿನ ಗುರುಗಳು ಯಾರೂ ಕರೆದುಕೊಂಡು
ಹೋಗಲು ಸಾಧ್ಯವಿಲ್ಲ. ಏಕೆಂದರೆ ಅವರೂ ಸಹ ಪತಿತರಾಗಿದ್ದಾರೆ. ಒಬ್ಬರೇ ಸದ್ಗುರು ಯಾರು ಸದಾ
ಪವಿತ್ರರಾಗಿದ್ದಾರೆ. ಉಳಿದೆಲ್ಲರೂ ಪತಿತರಾಗಿದ್ದಾರೆ. ಇಡೀ ಪ್ರಪಂಚವೇ ಪತಿತವಾಗಿದೆ. ಸತ್ಯಯುಗಕ್ಕೆ
ಪಾವನ ಪ್ರಪಂಚವೆಂದು ಕಲಿಯುಗಕ್ಕೆ ಪತಿತ ಪ್ರಪಂಚವೆಂದು ಕರೆಯಲಾಗುತ್ತದೆ. ಸತ್ಯಯುಗಕ್ಕೆ
ಪೂರ್ಣಸ್ವರ್ಗವೆಂದು ಹೇಳುತ್ತಾರೆ. ತ್ರೇತಾಯುಗದಲ್ಲಿಯೂ ಸಹ ಎರಡು ಕಲೆಗಳು ಕಡಿಮೆಯಾಗಿಬಿಡುತ್ತದೆ.
ಈ ಮಾತುಗಳನ್ನು ನೀವು ಮಕ್ಕಳೇ ಅರಿತುಕೊಂಡು ಧಾರಣೆ ಮಾಡಿಕೊಳ್ಳುತ್ತೀರಿ. ಪ್ರಪಂಚದ ಮನುಷ್ಯರಿಗಂತೂ
ಏನೂ ಗೊತ್ತಿಲ್ಲ. ಇಡೀ ಪ್ರಪಂಚವು ಸ್ವರ್ಗದಲ್ಲಿ ಹೋಗುತ್ತದೆ ಎಂದಲ್ಲ. ಯಾರು ಕಲ್ಪದ ಮೊದಲು ಇದ್ದರೋ
ಅದೇ ಭಾರತವಾಸಿಗಳು ಪುನಃ ಬರುತ್ತಾರೆ ಮತ್ತು ಸತ್ಯಯುಗ-ತ್ರೇತಾಯುಗದಲ್ಲಿ ದೇವತೆಗಳಾಗುತ್ತಾರೆ.
ಅವರೇ ನಂತರ ದ್ವಾಪರದಲ್ಲಿ ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತಾರೆ. ಹಾಗೆ ನೋಡಿದರೆ
ಹಿಂದೂಧರ್ಮದಲ್ಲಿ ಇಲ್ಲಿಯವರೆಗೂ ಯಾವ ಆತ್ಮಗಳು ಮೇಲಿಂದ ಇಳಿಯುತ್ತಿದ್ದಾರೆಯೋ ಅವರೂ ಸಹ ತಮ್ಮನ್ನು
ಹಿಂದೂಗಳೆಂದು ಕರೆಸಿಕೊಳ್ಳುತ್ತಾರೆ. ಆದರೆ ಅವರಂತೂ ದೇವತೆಗಳಾಗುವುದಿಲ್ಲ. ಮತ್ತು ಸ್ವರ್ಗದಲ್ಲಿಯೂ
ಬರುವುದಿಲ್ಲ. ಅವರು ಇದೇ ರೀತಿ ಪುನಃ ದ್ವಾಪರದ ನಂತರ ತನ್ನ ಸಮಯದಲ್ಲಿ ಇಳಿಯುತ್ತಾರೆ ಮತ್ತು
ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತಾರೆ. ದೇವತೆಗಳಂತೂ ನೀವೇ ಆಗಿದ್ದೀರಿ. ನಿಮ್ಮದೇ
ಆದಿಯಿಂದ ಅಂತ್ಯದವರೆಗೆ ಪಾತ್ರವಿದೆ. ಇದು ನಾಟಕದಲ್ಲಿ ಬಹಳ ಯುಕ್ತಿಯಿದೆ. ಅನೇಕರ ಬುದ್ಧಿಯಲ್ಲಿ
ಕುಳಿತುಕೊಳ್ಳುವುದಿಲ್ಲ. ಅಂದಮೇಲೆ ಅವರು ಶ್ರೇಷ್ಠಪದವಿಯನ್ನೂ ಪಡೆಯಲು ಸಾಧ್ಯವಿಲ್ಲ.
ಇದು ಸತ್ಯನಾರಾಯಣನ
ಕಥೆಯಾಗಿದೆ. ಆ ಮನುಷ್ಯರಂತೂ ಅಸತ್ಯ ಕಥೆಗಳನ್ನು ತಿಳಿಸುತ್ತಾರೆ. ಅದರಿಂದ ಯಾರೂ
ಲಕ್ಷ್ಮೀ-ನಾರಾಯಣರಾಗುವುದಿಲ್ಲ. ಇಲ್ಲಿ ನೀವು ಪ್ರತ್ಯಕ್ಷ ರೂಪದಲ್ಲಿ ಆಗುತ್ತೀರಿ. ಕಲಿಯುಗದಲ್ಲಿ
ಎಲ್ಲರೂ ಅಸತ್ಯವಂತರಾಗಿದ್ದಾರೆ. ಸುಳ್ಳುಮಾಯೆ, ಸುಳ್ಳುಕಾಯ.... ರಾವಣರಾಜ್ಯವೇ ಸುಳ್ಳಾಗಿದೆ.
ಸತ್ಯಖಂಡವನ್ನು ತಂದೆಯು ಸ್ಥಾಪನೆ ಮಾಡುತ್ತಾರೆ. ಇದೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ನೀವು
ಬ್ರಾಹ್ಮಣ ಮಕ್ಕಳೇ ತಿಳಿದುಕೊಂಡಿದ್ದೀರಿ. ಏಕೆಂದರೆ ಇದು ವಿದ್ಯೆಯಾಗಿದೆ. ಇದರಲ್ಲಿ ಯಾರಾದರೂ ಬಹಳ
ಕಡಿಮೆ ಓದುತ್ತಾರೆಂದರೆ ಅನುತ್ತೀರ್ಣರಾಗಿಬಿಡುತ್ತಾರೆ. ಈ ವಿದ್ಯೆಯನ್ನು ಒಮ್ಮೆ ಮಾತ್ರವೇ ಓದಲು
ಸಾಧ್ಯ ನಂತರ ಓದುವುದು ಪರಿಶ್ರಮವಾಗುತ್ತದೆ. ಪ್ರಾರಂಭದಲ್ಲಿ ಯಾರು ಓದಿ ಶರೀರವನ್ನು ಬಿಟ್ಟರೋ ಅವರು
ಸಂಸ್ಕಾರವನ್ನು ತೆಗೆದುಕೊಂಡು ಹೋಗಿದ್ದಾರೆ. ಇನ್ನೊಂದು ಜನ್ಮದಲ್ಲಿ ಪುನಃ ಬಂದು ಓದುತ್ತಾರೆ.
ನಾಮ-ರೂಪವಂತೂ ಬದಲಾಗುತ್ತದೆ. ಆತ್ಮಕ್ಕೆ ಪೂರ್ಣ 84 ಜನ್ಮಗಳ ಪಾತ್ರವು ಸಿಗುತ್ತದೆ. ಅದನ್ನು
ಭಿನ್ನ-ಭಿನ್ನ ನಾಮರೂಪ, ದೇಶ, ಕಾಲಗಳಲ್ಲಿ ಪಾತ್ರವನ್ನಭಿನಯಿಸುತ್ತದೆ. ಎಷ್ಟು ಸೂಕ್ಷ್ಮ ಆತ್ಮಕ್ಕೆ
ಎಷ್ಟು ದೊಡ್ಡ ಶರೀರವು ಸಿಗುತ್ತದೆ! ಆತ್ಮ ಎಲ್ಲರಲ್ಲಿಯೂ ಇರುತ್ತದೆಯಲ್ಲವೆ. ಇಷ್ಟು ಸೂಕ್ಷ್ಮ
ಆತ್ಮವು ಇಷ್ಟು ಚಿಕ್ಕದಾದ ಸೊಳ್ಳೆಯಲ್ಲಿಯೂ ಇದೆ. ಇವು ಬಹಳ ಸೂಕ್ಷ್ಮ ಅರಿತುಕೊಳ್ಳುವ ಮಾತುಗಳಾಗಿವೆ.
ಯಾವ ಮಕ್ಕಳು ಬಹಳ ಚೆನ್ನಾಗಿ ಅರಿತುಕೊಳ್ಳುವರೋ ಅವರೇ ಮಾಲೆಯ ಮಣಿಯಾಗುತ್ತಾರೆ. ಉಳಿದವರು ಹೋಗಿ
ಬಹಳ ಕಡಿಮೆ ಪದವಿಯನ್ನು ಪಡೆಯುತ್ತಾರೆ. ಈಗ ನಿಮ್ಮ ಹೂದೋಟವು ತಯಾರಾಗುತ್ತಿದೆ. ಮೊದಲು ನೀವು
ಮುಳ್ಳುಗಳಾಗಿದ್ದೀರಿ. ಆದ್ದರಿಂದ ತಂದೆಯು ತಿಳಿಸುತ್ತಾರೆ-ಕಾಮವಿಕಾರದ ಮುಳ್ಳು ಬಹಳ ಕೆಟ್ಟದಾಗಿದೆ.
ಇದು ಆದಿ-ಮಧ್ಯ-ಅಂತ್ಯ ದುಃಖವನ್ನು ಕೊಡುತ್ತದೆ. ದುಃಖಕ್ಕೆ ಮೂಲಕಾರಣವೇ ಕಾಮವಿಕಾರವಾಗಿದೆ.
ಕಾಮವನ್ನು ಜಯಿಸುವುದರಿಂದ ಜಗತ್ಜೀತರಾಗುತ್ತೀರಿ. ಇದರಲ್ಲಿಯೇ ಅನೇಕರಿಗೆ ಕಷ್ಟದ ಅನುಭವವಾಗುತ್ತದೆ.
ಬಹಳ ಪರಿಶ್ರಮದಿಂದ ಪವಿತ್ರರಾಗುತ್ತಾರೆ. ಯಾರು ಕಲ್ಪದ ಹಿಂದೆ ಆಗಿದ್ದರೋ ಅವರೇ ಆಗುತ್ತಾರೆ. ಯಾರು
ಪುರುಷಾರ್ಥ ಮಾಡಿ ಶ್ರೇಷ್ಠಪದವಿಯನ್ನು ಪಡೆಯುತ್ತಾರೆ ಎಂಬುದನ್ನು ತಿಳಿಯಬಹುದು. ನರನಿಂದ ನಾರಾಯಣ
ನಾರಿಯಿಂದ ಲಕ್ಷ್ಮಿಯಾಗುತ್ತಾರಲ್ಲವೆ. ಹೊಸ ಪ್ರಪಂಚದಲ್ಲಿ ಸ್ತ್ರೀ-ಪುರುಷರಿಬ್ಬರೂ ಪಾವನರಿದ್ದರು.
ಈಗ ಪತಿತರಾಗಿದ್ದಾರೆ. ಪಾವನರಾಗಿದ್ದಾಗ ಸತೋಪ್ರಧಾನರಾಗಿದ್ದರು. ಈಗ ತಮೋಪ್ರಧಾನರಾಗಿಬಿಟ್ಟಿದ್ದಾರೆ.
ಆದ್ದರಿಂದ ಇಲ್ಲಿ ಇಬ್ಬರೂ ಪುರುಷಾರ್ಥ ಮಾಡಬೇಕಾಗಿದೆ. ಈ ಜ್ಞಾನವನ್ನು ಸನ್ಯಾಸಿಗಳು ಕೊಡಲು
ಸಾಧ್ಯವಿಲ್ಲ. ಅವರ ಧರ್ಮವೇ ಬೇರೆಯಾಗಿದೆ. ನಿವೃತ್ತಿಮಾರ್ಗವಾಗಿದೆ. ಇಲ್ಲಿ ಭಗವಂತನು
ಸ್ತ್ರೀ-ಪುರುಷರಿಬ್ಬರಿಗೂ ಓದಿಸುತ್ತಾರೆ. ಇಬ್ಬರಿಗೂ ತಿಳಿಸುತ್ತಾರೆ- ಈಗ ಶೂದ್ರರಿಂದ
ಬ್ರಾಹ್ಮಣರಾಗಿ ನಂತರ ಲಕ್ಷ್ಮೀ-ನಾರಾಯಣರಾಗಬೇಕಾಗಿದೆ. ಎಲ್ಲರೂ ಆಗುವುದಿಲ್ಲ. ಲಕ್ಷ್ಮೀ-ನಾರಾಯಣರ
ರಾಜ್ಯವಿರುತ್ತದೆ. ಅವರು ರಾಜ್ಯವನ್ನು ಹೇಗೆ ಪಡೆದರೆಂಬುದನ್ನು ಯಾರೂ ತಿಳಿದುಕೊಂಡಿಲ್ಲ.
ಸತ್ಯಯುಗದಲ್ಲಿ ಇವರ ರಾಜ್ಯವಿತ್ತು ಎಂಬುದನ್ನೂ ತಿಳಿದುಕೊಳ್ಳುತ್ತಾರೆ. ಆದರೆ ಮತ್ತೆ
ಸತ್ಯಯುಗಕ್ಕೆಲಕ್ಷಾಂತರ ವರ್ಷಗಳೆಂದು ಹೇಳಿದರೆ ಇದು ಅಜ್ಞಾನವಾಯಿತಲ್ಲವೆ. ಇದು ಮುಳ್ಳುಗಳ
ಕಾಡಾಗಿದೆ. ಅದು ಹೂದೋಟವಾಗಿದೆ. ಇಲ್ಲಿಗೆ ಬರುವುದಕ್ಕೆ ಮೊದಲು ನೀವು ಅಸುರರಾಗಿದ್ದೀರಿ. ಈಗ ನೀವು
ಅಸುರರಿಂದ ದೇವತೆಗಳಾಗುತ್ತಿದ್ದೀರಿ. ಯಾರು ಮಾಡುತ್ತಾರೆ? ಬೇಹದ್ದಿನ ತಂದೆ. ದೇವತೆಗಳ
ರಾಜ್ಯವಿದ್ದಾಗ ಬೇರೆ ಯಾರೂ ಇರಲಿಲ್ಲ. ಇದನ್ನೂ ಸಹ ನೀವು ತಿಳಿದುಕೊಳ್ಳುತ್ತೀರಿ. ಯಾರು ಇದನ್ನು
ತಿಳಿದುಕೊಳ್ಳುವುದಿಲ್ಲವೋ ಅವರಿಗೆ ಪತಿತರೆಂದು ಹೇಳಲಾಗುತ್ತದೆ. ಇದು ಬ್ರಹ್ಮಕುಮಾರ-ಕುಮಾರಿಯರ
ಸಭೆಯಾಗಿದೆ. ಒಂದುವೇಳೆ ಯಾರಾದರೂ ಪತಿತ ಕೆಲಸವನ್ನು ಮಾಡುತ್ತಾರೆಂದರೆ ತಮ್ಮನ್ನು ಶ್ರಾಪಿತರನ್ನಾಗಿ
ಮಾಡಿಕೊಳ್ಳುತ್ತಾರೆ. ಕಲ್ಲುಬುದ್ಧಿಯವರಾಗಿಬಿಡುತ್ತಾರೆ. ಚಿನ್ನದ ಬುದ್ಧಿ, ನರನಿಂದ
ನಾರಾಯಣರಾಗುವಂತಹವರಲ್ಲ ಎಂಬ ಸಾಕ್ಷಿಯು ಸಿಕ್ಕಿಬಿಡುತ್ತದೆ. ಹೋಗಿ ಮೂರನೇ ದರ್ಜೆಯ
ದಾಸ-ದಾಸಿಯರಾಗುತ್ತಾರೆ. ಈಗಲೂ ಸಹ ರಾಜರ ಬಳಿ ದಾಸ-ದಾಸಿಯರಿದ್ದಾರೆ. ಈ ಗಾಯನವಿದೆ-ಕೆಲವರದು ಮಣ್ಣು
ಪಾಲಾಗುತ್ತದೆ. ಕೆಲವರು ಸರ್ಕಾರದ ಪಾಲಾಗುತ್ತದೆ.... ಬೆಂಕಿಯ ಉಂಡೆ(ಬಾಂಬ್)ಗಳು ಬಂದಾಗ ವಿಷದ
ಉಂಡೆ(ಬಾಂಬ್)ಗಳೂ ಬೀಳುತ್ತವೆ. ಅವಶ್ಯಕವಾಗಿ ಎಲ್ಲರ ಮೃತ್ಯುವಾಗುವುದು. ಇನ್ನೂ ಮುಂದೆ ಮನುಷ್ಯರ
ಹಾಗೂ ಆಯುಧಗಳ ಅವಶ್ಯಕತೆಯೇ ಇರುವುದಿಲ್ಲ ಅಂತಹವಸ್ತುಗಳನ್ನು ತಯಾರಿಸುತ್ತಿದ್ದಾರೆ, ಅಲ್ಲಿಂದ
ಕುಳಿತು-ಕುಳಿತಿದ್ದಂತೆಯೇ ಇಂತಹ ಬಾಂಬುಗಳನ್ನು ಎಸೆಯುತ್ತಾರೆ. ಅದರ ಹೊಗೆಯು ಈ ರೀತಿ ಹರಡುತ್ತದೆ.
ಅದು ತಕ್ಷಣ ಸಮಾಪ್ತಿ ಮಾಡಿಬಿಡುತ್ತದೆ. ಇಷ್ಟು ಕೋಟ್ಯಾಂತರ ಮನುಷ್ಯರ ವಿನಾಶವಾಗುವುದಿದೆ. ಇದು
ಕಡಿಮೆ ಮಾತೇನು! ಸತ್ಯಯುಗದಲ್ಲಿ ಕೆಲವೇ ಮಂದಿ ಇರುತ್ತಾರೆ. ಉಳಿದವರೆಲ್ಲರೂ ಶಾಂತಿಧಾಮಕ್ಕೆ
ಹೊರಟುಹೋಗುತ್ತಾರೆ. ಎಲ್ಲಿ ನಾವಾತ್ಮಗಳಿರುತ್ತೇವೆ. ಸುಖಧಾಮವು ಸ್ವರ್ಗವಾಗಿದೆ. ದುಃಖಧಾಮದಲ್ಲಿ
ನರಕವಿದೆ. ಈ ಚಕ್ರವು ಸುತ್ತುತ್ತಾ ಇರುತ್ತದೆ. ಪತಿತರಾಗಿಬಿಡುವುದರಿಂದ ದುಃಖಧಾಮವಾಗುತ್ತದೆ.
ಮತ್ತೆ ತಂದೆಯು ಸುಖಧಾಮದಲ್ಲಿ ಕರೆದುಕೊಂಡು ಹೋಗುತ್ತಾರೆ. ಪರಮಪಿತ ಪರಮಾತ್ಮನು ಈಗ ಸರ್ವರ ಸದ್ಗತಿ
ಮಾಡುತ್ತಾರೆಂದರೆ ಖುಷಿಯಿರಬೇಕಲ್ಲವೆ. ಇದಕ್ಕೆ ಮನುಷ್ಯರು ಹೆದರುತ್ತಾರೆ. ಈ ಮೃತ್ಯವಿನಿಂದಲೇ
ಗತಿ-ಸದ್ಗತಿ ಸಿಗುವುದೆಂದು ಯಾರೂ ತಿಳಿದಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ
ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ಸಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಹೂದೋಟದಲ್ಲಿ
ಹೋಗಲು ಒಳಗಿರುವ ಕಾಮ-ಕ್ರೋಧದ ಮುಳ್ಳುಗಳನ್ನು ತೆಗೆಯಬೇಕು. ಶ್ರಾಪ ಸಿಗುವಂತಹ ಯಾವುದೇ ಕರ್ಮವನ್ನು
ಮಾಡಬಾರದು.
2. ಸತ್ಯಖಂಡದ ಸ್ಥಾಪನೆ
ಮಾಡಲು ಸತ್ಯನಾರಾಯಣನ ಸತ್ಯಕಥೆಯನ್ನು ಕೇಳಬೇಕು ಮತ್ತು ಅನ್ಯರಿಗೂ ಹೇಳಬೇಕಾಗಿದೆ. ಈ
ಅಸತ್ಯಖಂಡದಿಂದ ದೂರವಾಗಬೇಕಾಗಿದೆ.
ವರದಾನ:
ಬೆಳಕಿನ
ಆಧಾರದಿಂದ ಜ್ಞಾನ-ಯೋಗದ ಶಕ್ತಿಗಳನ್ನು ಪ್ರಯೋಗ ಮಾಡುವಂತಹ ಪ್ರಯೋಗಶಾಲಿ ಆತ್ಮ ಭವ.
ಹೇಗೆ ಪ್ರಕೃತಿಯ ಬೆಳಕು
ವಿಜ್ಞಾನದ ಅನೇಕ ಪ್ರಕಾರದ ಪ್ರಯೋಗಗಳನ್ನು ಕಾರ್ಯ ರೂಪದಲ್ಲಿ ಮಾಡಿ ತೋರಿಸುತ್ತದೆ, ಹಾಗೆ ನೀವು
ಅವಿನಾಶಿ ಪರಮಾತ್ಮ ಲೈಟ್, ಆತ್ಮಿಕ ಲೈಟ್ ಮತ್ತು ಜೊತೆ-ಜೊತೆಗೆ ಪ್ರಾಕ್ಟಿಕಲ್ ಸ್ಥಿತಿಯನ್ನು
ಬೆಳಕಿನ ಮೂಲಕ ಜ್ಞಾನ ಯೋಗದ ಶಕ್ತಿಯನ್ನು ಪ್ರಯೋಗ ಮಾಡಿ. ಒಂದುವೇಳೆ ಸ್ಥಿತಿ ಮತ್ತು ಸ್ವರೂಪ
ಡಬ್ಬಲ್ ಲೈಟ್ ಇದ್ದಾಗ ಪ್ರಯೋಗದ ಸಫಲತೆ ಬಹಳ ಸಹಜವಾಗಿ ಆಗುವುದು. ಯಾವಾಗ ಪ್ರತಿಯೊಬ್ಬರು ಸ್ವಯಂನ
ಮೇಲೆ ಪ್ರಯೋಗದಲ್ಲಿ ತೊಡಗುವಿರಿ ಆಗ ಪ್ರಯೋಗಶಾಲಿ ಆತ್ಮಗಳ ಶಕ್ತಿಶಾಲಿ ಸಂಗಟನೆಯಾಗಿ ಬಿಡುವುದು.
ಸ್ಲೋಗನ್:
ವಿಘ್ನಗಳ ವಂಶ
ಮತ್ತು ಅಂಶವನ್ನು ಸಮಾಪ್ತಿ ಮಾಡುವಂತಹವರೆ ವಿಘ್ನವಿನಾಶಕರಾಗಿದ್ದಾರೆ.