12.09.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ನಿಮ್ಮ
ವಿದ್ಯೆಯ ಪೂರ್ಣ ಆಧಾರ ಯೋಗದ ಮೇಲಿದೆ, ಯೋಗದಿಂದಲೇ ಆತ್ಮವು ಪವಿತ್ರವಾಗುತ್ತದೆ, ವಿಕರ್ಮ
ವಿನಾಶವಾಗುವುದು"
ಪ್ರಶ್ನೆ:
ಕೆಲವು ಮಕ್ಕಳು
ತಂದೆಯವರಾಗಿಯೂ ಕೈ ಬಿಟ್ಟು ಬಿಡುತ್ತಾರೆ ಕಾರಣವೇನಾಗಿರುವುದು?
ಉತ್ತರ:
1. ತಂದೆಯನ್ನು
ಪೂರ್ಣ ರೀತಿಯಿಂದ ತಿಳಿಯದೇ ಇರುವ ಕಾರಣ, ಪೂರ್ಣ ನಿಶ್ಚಯ ಬುದ್ಧಿಯವರಾಗದೇ ಇರುವ ಕಾರಣ 8-10
ವರ್ಷಗಳ ನಂತರವೂ ಸಹ ವಿಚ್ಛೇದನ ಕೊಡುತ್ತಾರೆ, ಕೈ ಬಿಟ್ಟು ಬಿಡುತ್ತಾರೆ. ಪದವಿಯು
ಭ್ರಷ್ಟವಾಗುತ್ತದೆ. 2. ವಿಕಾರೀ ದೃಷ್ಟಿಯಾಗುವ ಕಾರಣ ಮಾಯೆಯ ಗ್ರಹಚಾರ ಕುಳಿತುಬಿಡುತ್ತದೆ,
ಸ್ಥಿತಿಯು ಏರಿಳಿತವಾಗುತ್ತಿರುತ್ತದೆಯೆಂದರೂ ಸಹ ವಿದ್ಯೆಯು ಬಿಟ್ಟು ಹೋಗುತ್ತದೆ.
ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ -
ನಾವೆಲ್ಲರೂ ಆತ್ಮಿಕ ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ. ಇವರಿಗೆ ಬಾಪ್ದಾದಾ ಎಂದು
ಕರೆಯಲಾಗುತ್ತದೆ. ಹೇಗೆ ನೀವು ಆತ್ಮಿಕ ಮಕ್ಕಳಾಗಿದ್ದೀರೋ ಹಾಗೆಯೇ ಈ ಬ್ರಹ್ಮಾರವರೂ ಸಹ ಶಿವ ತಂದೆಯ
ಆತ್ಮಿಕ ಮಗನಾಗಿದ್ದಾರೆ. ಶಿವ ತಂದೆಗೆ ರಥವು ಅವಶ್ಯವಾಗಿ ಬೇಕಲ್ಲವೆ ಆದ್ದರಿಂದ ಹೇಗೆ ನೀವಾತ್ಮರಿಗೆ
ಕರ್ಮ ಮಾಡಲು ಕರ್ಮೇಂದ್ರಿಯಗಳು ಸಿಕ್ಕಿವೆಯೋ ಹಾಗೆಯೇ ಶಿವ ತಂದೆಗೂ ಈ ರಥವಿದೆ ಏಕೆಂದರೆ ಇದು ಕರ್ಮ
ಕ್ಷೇತ್ರವಾಗಿದೆ ಎಲ್ಲಿ ಕರ್ಮ ಮಾಡಬೇಕಾಗುತ್ತದೆ. ಆತ್ಮಗಳಿರುವ ಸ್ಥಾನವು ಮನೆಯಾಗಿದೆ, ಆತ್ಮಕ್ಕೆ
ಅರ್ಥವಾಗಿದೆ - ನಮ್ಮ ಮನೆಯು ಶಾಂತಿಧಾಮವಾಗಿದೆ, ಅಲ್ಲಿ ಈ ಆಟವಿರುವುದಿಲ್ಲ. ದೀಪಗಳೇನೂ
ಇರುವುದಿಲ್ಲ, ಕೇವಲ ನಾವಾತ್ಮರಿರುತ್ತೇವೆ. ಇಲ್ಲಿಗೆ ಪಾತ್ರವನ್ನಭಿನಯಿಸಲು ಬರುತ್ತೇವೆ. ಇದು
ಬೇಹದ್ದಿನ ನಾಟಕವಾಗಿದೆ ಎಂದು ನಿಮ್ಮ ಬುದ್ಧಿಯಲ್ಲಿದೆ. ಯಾರೆಲ್ಲಾ ಪಾತ್ರಧಾರಿಗಳಿದ್ದಾರೆಯೋ ಅವರ
ಆದಿಯಿಂದ ಅಂತ್ಯವರೆಗಿನ ಪಾತ್ರವನ್ನು ನೀವು ಮಕ್ಕಳು ನಂಬರ್ವಾರ್ ಪುರುಷಾರ್ಥದನುಸಾರ
ತಿಳಿದುಕೊಂಡಿದ್ದೀರಿ. ಇಲ್ಲಿ ಯಾವುದೇ ಸಾಧು-ಸಂತ ಮೊದಲಾದವರು ತಿಳಿಸುವುದಿಲ್ಲ. ನಾವು ಮಕ್ಕಳು
ಬೇಹದ್ದಿನ ತಂದೆಯ ಬಳಿ ಕುಳಿತಿದ್ದೇವೆ, ನಾವೀಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಆತ್ಮವು
ಖಂಡಿತವಾಗಿ ಪವಿತ್ರವಾಗಲೇಬೇಕಾಗಿದೆ. ಶರೀರವೂ ಇಲ್ಲಿಯೇ ಪವಿತ್ರವಾಗುತ್ತದೆಯೆಂದಲ್ಲ, ಆತ್ಮವು
ಪವಿತ್ರವಾಗುತ್ತದೆ. ಯಾವಾಗ ಪಂಚ ತತ್ವಗಳೂ ಸತೋಪ್ರಧಾನವಾಗುವುದೋ ಆಗ ಶರೀರವು ಪವಿತ್ರವಾಗುವುದು.
ಈಗ ನೀವಾತ್ಮಗಳು ಪುರುಷಾರ್ಥ ಮಾಡಿ ಪಾವನರಾಗುತ್ತಿದ್ದೀರಿ, ಅಲ್ಲಿ ಆತ್ಮ ಮತ್ತು ಶರೀರವೆರಡೂ
ಪವಿತ್ರವಾಗಿರುತ್ತದೆ. ಇಲ್ಲಿ ಎರಡೂ ಪವಿತ್ರವಾಗಿಲ್ಲ. ಆತ್ಮವು ಪವಿತ್ರವಾಗಿ ಬಿಟ್ಟರೆ ಈ ಹಳೆಯ
ಶರೀರವನ್ನು ಬಿಟ್ಟು ಬಿಡುತ್ತದೆ, ಮತ್ತೆ ಹೊಸ ತತ್ವಗಳಿಂದ ಹೊಸ ಶರೀರವಾಗುತ್ತದೆ. ನೀವು
ತಿಳಿದುಕೊಂಡಿದ್ದೀರಿ - ನಾನಾತ್ಮನು ಬೇಹದ್ದಿನ ತಂದೆಯನ್ನು ನೆನಪು ಮಾಡುತ್ತೇನೆಯೇ ಅಥವಾ ಇಲ್ಲವೇ?
ಇದನ್ನು ಪ್ರತಿಯೊಬ್ಬರೂ ತನ್ನೊಂದಿಗೆ ಕೇಳಿಕೊಳ್ಳಬೇಕಾಗಿದೆ. ಎಲ್ಲವೂ ವಿದ್ಯೆಯ ಮೇಲೆ
ಆಧಾರಿತವಾಗಿದೆ. ವಿದ್ಯೆಯಂತೂ ಸಹಜವಾಗಿದೆ, ಚಕ್ರವು ಹೇಗೆ ಸುತ್ತುತ್ತದೆ ಎಂಬುದು ಅರ್ಥವಾಗಿ
ಬಿಟ್ಟಿದೆ ಆದರೆ ಮುಖ್ಯವಾದುದು ನೆನಪಿನ ಯಾತ್ರೆಯಾಗಿದೆ, ಇದು ಗುಪ್ತವಾಗಿದೆ ಆದರೆ ಕಾಣುವುದಿಲ್ಲ.
ಇವರು ಬಹಳ ನೆನಪು ಮಾಡುತ್ತಾರೆ ಅಥವಾ ಕಡಿಮೆ ಮಾಡುತ್ತಾರೆ ಎಂದು ತಂದೆಯು ಹೇಳುವುದಿಲ್ಲ. ಬೇಕೆಂದರೆ
ಇವರು ಜ್ಞಾನದಲ್ಲಿ ಬಹಳ ತೀಕ್ಷ್ಣವಾಗಿದ್ದಾರೆಂದು ಹೇಳಬಲ್ಲರು. ನೆನಪು ಸ್ಥೂಲವಾಗಿ ಕಾಣುವುದಲ್ಲ,
ಜ್ಞಾನವನ್ನು ಬಾಯಿಂದ ಹೇಳಲಾಗುತ್ತದೆ. ನೆನಪಂತೂ ಅಜಪಾಜಪವಾಗಿದೆ. ಜಪ ಅಕ್ಷರವು
ಭಕ್ತಿಮಾರ್ಗದ್ದಾಗಿದೆ, ಜಪ ಎಂದರೆ ಯಾರದೇ ನಾಮವನ್ನು ಜಪಿಸುವುದೆಂದರ್ಥ. ಇಲ್ಲಿ ಆತ್ಮವು ತನ್ನ
ತಂದೆಯನ್ನು ನೆನಪು ಮಾಡಬೇಕಾಗಿದೆ.
ನೀವು
ತಿಳಿದುಕೊಂಡಿದ್ದೀರಿ - ತಂದೆಯನ್ನು ನಾವು ನೆನಪು ಮಾಡುತ್ತಾ-ಮಾಡುತ್ತಾ ಪವಿತ್ರರಾಗುತ್ತಾ,
ಆಗುತ್ತಾ ಮುಕ್ತಿಧಾಮ, ಶಾಂತಿಧಾಮವನ್ನು ತಲುಪುತ್ತೇವೆ. ಈ ನಾಟಕದಿಂದ ಮುಕ್ತರಾಗಿ
ಬಿಡುತ್ತೇವೆಂದಲ್ಲ. ಮುಕ್ತಿಯ ಅರ್ಥವಾಗಿದೆ - ದುಃಖದಿಂದ ಮುಕ್ತರಾಗಿ ಶಾಂತಿಧಾಮಕ್ಕೆ ಹೋಗಿ ಮತ್ತೆ
ಸುಖಧಾಮದಲ್ಲಿ ಬರುತ್ತೇವೆ. ಯಾರು ಪವಿತ್ರರಾಗುವರೋ ಅವರು ಸುಖವನ್ನನುಭವಿಸುವರು. ಅಪವಿತ್ರ
ಮನುಷ್ಯರು ಅವರ ಸೇವೆ ಮಾಡುತ್ತಾರೆ. ಪವಿತ್ರರಿಗೆ ಮಹಿಮೆಯಿದೆ, ಇದರಲ್ಲಿಯೇ ಪರಿಶ್ರಮವಿದೆ.
ಕಣ್ಣುಗಳು ಬಹಳ ಮೋಸ ಮಾಡುತ್ತವೆ, ಕೆಳಗೆ ಬೀಳುತ್ತಾರೆ. ಏರಿಳಿತಗಳಂತೂ ಎಲ್ಲರಿಗೆ ಆಗುತ್ತದೆ.
ಎಲ್ಲರ ಮೇಲೆ ಗ್ರಹಚಾರವು ಹಿಡಿಯುತ್ತದೆ. ಮಕ್ಕಳು ತಿಳಿಸಬಹುದೆಂದು ಭಲೆ ತಂದೆಯು ಹೇಳುತ್ತಾರೆ ಆದರೂ
ಮತ್ತೆ ಹೇಳುತ್ತಾರೆ - ತಾಯಿಗುರು ಬೇಕು ಏಕೆಂದರೆ ತಾಯಿ-ಗುರುವಿನ ಪದ್ಧತಿಯು ನಡೆಯುತ್ತದೆ. ಮೊದಲು
ತಂದೆಯರದಿತ್ತು, ಈಗ ಮೊಟ್ಟ ಮೊದಲು ಮಾತೆಯರಿಗೇ ಕಳಶವು ಸಿಗುತ್ತದೆ. ಮಾತೆಯರು ಬಹುತೇಕ
ಮಂದಿಯಿದ್ದಾರೆ. ಕನ್ಯೆಯರು ಪವಿತ್ರತೆಗಾಗಿ ಶ್ರೀರಕ್ಷೆಯನ್ನು ಕಟ್ಟುತ್ತಾರೆ. ಕಾಮ
ಮಹಾಶತ್ರುವಾಗಿದೆ, ಇದನ್ನು ಗೆಲ್ಲಿರಿ ಎಂದು ಭಗವಂತನೇ ತಿಳಿಸಿದ್ದಾರೆ. ರಕ್ಷಾಬಂಧನವು ಪವಿತ್ರತೆಯ
ಸಂಕೇತವಾಗಿದೆ. ಇದಕ್ಕಾಗಿ ಅವರು ಶ್ರೀರಕ್ಷೆಯನ್ನು ಕಟ್ಟುತ್ತಾರೆ ಆದರೆ ಪವಿತ್ರರಂತೂ ಆಗುವುದಿಲ್ಲ.
ಅವೆಲ್ಲವೂ ಆರ್ಟಿಫಿಷಿಯಲ್ ರಾಖಿಗಳಾಗಿವೆ. ಯಾರೂ ಪಾವನರನ್ನಾಗಿ ಮಾಡುವುದಿಲ್ಲ, ಇಲ್ಲಂತೂ ಜ್ಞಾನವು
ಬೇಕಾಗಿದೆ. ನೀವೀಗ ಶ್ರೀರಕ್ಷೆಯನ್ನು ಕಟ್ಟುತ್ತೀರಿ, ಅರ್ಥವನ್ನೂ ತಿಳಿಸುತ್ತೀರಿ, ಈ ಪ್ರತಿಜ್ಞೆ
ಮಾಡಿಸುತ್ತೀರಿ - ಹೇಗೆ ಸಿಖ್ಖರಿಗೆ ಕಂಕಣದ ಸಂಕೇತವಿರುತ್ತದೆ ಆದರೆ ಪವಿತ್ರರಂತೂ ಆಗುವುದಿಲ್ಲ.
ಪತಿತರನ್ನು ಪಾವನರನ್ನಾಗಿ ಮಾಡುವವರು, ಸರ್ವರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ, ಅವರು
ದೇಹಧಾರಿಯಲ್ಲ. ಸ್ಥೂಲಗಂಗೆಯಂತೂ ಈ ಕಣ್ಣಿಗೇ ಕಾಣುತ್ತದೆ. ಯಾವ ತಂದೆಯು ಸದ್ಗತಿದಾತನಾಗಿದ್ದಾರೆ
ಅವರನ್ನು ಈ ಕಣ್ಣುಗಳಿಂದ ನೋಡಲಾಗುವುದಿಲ್ಲ. ಆತ್ಮವೇನು ಎಂಬುದನ್ನು ಯಾರೂ ನೋಡಲು ಸಾಧ್ಯವಿಲ್ಲ.
ನಮ್ಮ ಶರೀರದಲ್ಲಿ ಆತ್ಮವಿದೆಯೆಂದು ಹೇಳುತ್ತಾರೆ ಆದರೆ ಅದನ್ನು ನೋಡಿದ್ದೀರಾ? ಅದಕ್ಕೆ ಇಲ್ಲವೆಂದು
ಹೇಳುತ್ತಾರೆ. ಹೆಸರಿರುವ ಮತ್ತೆಲ್ಲಾ ವಸ್ತುಗಳು ಕಣ್ಣುಗಳಿಗೆ ಕಾಣುತ್ತವೆ. ಆತ್ಮಕ್ಕೂ ಹೆಸರಿದೆ,
ಭೃಕುಟಿಯ ಮಧ್ಯದಲ್ಲಿ ಹೊಳೆಯುವ ನಕ್ಷತ್ರವೆಂದೂ ಹೇಳುತ್ತಾರೆ ಆದರೆ ಕಣ್ಣಿಗೆ ಕಾಣುವುದಿಲ್ಲ.
ಪರಮಾತ್ಮನನ್ನೂ ನೆನಪು ಮಾಡುತ್ತಾರೆ ಆದರೆ ಅವರೂ ಕಾಣುವುದಿಲ್ಲ. ಲಕ್ಷ್ಮೀ-ನಾರಾಯಣರನ್ನು ಈ
ಕಣ್ಣುಗಳಿಂದ ನೋಡಬಹುದಾಗಿದೆ, ಭಲೆ ಲಿಂಗ ಪೂಜೆ ಮಾಡುತ್ತಾರೆ ಆದರೆ ಅದೇನೂ ಯಥಾರ್ಥ ರೀತಿಯಿಲ್ಲ
ಅಲ್ಲವೆ! ನೋಡುತ್ತಿದ್ದರೂ ಸಹ ಪರಮಾತ್ಮ ಯಾರೆಂಬುದನ್ನು ಯಾರೂ ಅರಿತುಕೊಂಡಿಲ್ಲ. ಆತ್ಮವು ಅತಿ
ಚಿಕ್ಕದಾದ ಬಿಂದುವಾಗಿದೆ, ಕಣ್ಣಿಗೆ ಕಾಣುವುದಿಲ್ಲ. ಆತ್ಮನನ್ನಾಗಲಿ, ಪರಮಾತ್ಮನನ್ನಾಗಲಿ ನೋಡಲು
ಸಾಧ್ಯವಿಲ್ಲ, ಕೇವಲ ಅರಿತುಕೊಳ್ಳಬಹುದು. ತಂದೆಯು ಇವರಲ್ಲಿ ಬಂದಿದ್ದಾರೆಂದು ನೀವೀಗ
ತಿಳಿದುಕೊಂಡಿದ್ದೀರಿ. ಈ ಶರೀರಕ್ಕೆ ತನ್ನ ಆತ್ಮವೂ ಇದೆ ಮತ್ತೆ ಪರಮಪಿತ ಪರಮಾತ್ಮನು ಹೇಳುತ್ತಾರೆ
- ನಾನು ಇವರ ರಥದಲ್ಲಿ ವಿರಾಜಮಾನನಾಗಿದ್ದೇನೆ, ಆದ್ದರಿಂದ ಬಾಪ್ದಾದಾ ಎಂದು ಹೇಳುತ್ತೀರಿ.
ದಾದಾರವರನ್ನಂತೂ ಈ ಕಣ್ಣುಗಳಿಂದ ನೋಡುತ್ತೀರಿ, ತಂದೆಯನ್ನು ನೋಡಲು ಆಗುವುದಿಲ್ಲ. ತಂದೆಯು ಜ್ಞಾನ
ಸಾಗರನಾಗಿದ್ದಾರೆ, ಅವರು ಈ (ಬ್ರಹ್ಮಾ) ಶರೀರದ ಮೂಲಕ ಜ್ಞಾನವನ್ನು ತಿಳಿಸುತ್ತಿದ್ದಾರೆ. ಜ್ಞಾನ
ಸಾಗರ, ಪತಿತ-ಪಾವನನಾಗಿದ್ದಾರೆಂಬುದನ್ನು ತಿಳಿದುಕೊಂಡಿದ್ದೀರಿ. ನಿರಾಕಾರನು ಹೇಗೆ ಮಾರ್ಗವನ್ನು
ತಿಳಿಸುವರು? ಪ್ರೇರಣೆಯಿಂದ ಯಾವುದೇ ಕೆಲಸವಾಗುವುದಿಲ್ಲ. ಭಗವಂತನೇ ಬರುತ್ತಾರೆ ಎಂಬುದು ಯಾರಿಗೂ
ತಿಳಿದಿಲ್ಲ. ಶಿವ ಜಯಂತಿಯನ್ನಾಚರಿಸುತ್ತಾರೆಂದರೆ ಅವಶ್ಯವಾಗಿ ಇಲ್ಲಿಗೆ ಬರುವರಲ್ಲವೆ? ನೀವು
ತಿಳಿದುಕೊಂಡಿದ್ದೀರಿ - ನಮಗೀಗ ಅವರೇ ಓದಿಸುತ್ತಿದ್ದಾರೆ. ಇವರಲ್ಲಿ (ಬ್ರಹ್ಮಾ) ಬಂದು
ಓದಿಸುತ್ತಾರೆ. ತಂದೆಯನ್ನು ಪೂರ್ಣ ರೀತಿಯಿಂದ ತಿಳಿದುಕೊಳ್ಳದಿರುವ ಕಾರಣ, ನಿಶ್ಚಯ ಬುದ್ಧಿಯವರಾಗದ
ಕಾರಣ 8-10 ವರ್ಷಗಳಾದರೂ ವಿಚ್ಚೇದನವನ್ನು ಕೊಡುತ್ತಾರೆ, ಮಾಯೆಯು ಸಂಪೂರ್ಣ ಅಂಧರನ್ನಾಗಿ
ಮಾಡಿಬಿಡುತ್ತದೆ. ತಂದೆಯ ಮಕ್ಕಳಾಗಿಯೂ ಮತ್ತೆ ಬಿಟ್ಟು ಬಿಡುತ್ತಾರೆಂದರೆ ಪದವಿಯು
ಭ್ರಷ್ಟವಾಗುತ್ತದೆ, ಈಗ ನೀವು ಮಕ್ಕಳಿಗೆ ತಂದೆಯ ಪರಿಚಯ ಸಿಕ್ಕಿದೆ ಅಂದಮೇಲೆ ಅನ್ಯರಿಗೂ
ಕೊಡಬೇಕಾಗಿದೆ. ಋಷಿ-ಮುನಿ ಮೊದಲಾದವರೆಲ್ಲರೂ ನಮಗೂ ಗೊತ್ತಿಲ್ಲ, ಗೊತ್ತಿಲ್ಲವೆಂದು ಹೇಳುತ್ತಾ
ಹೋದರು. ಮೊದಲು ನೀವೂ ತಿಳಿದುಕೊಂಡಿರಲಿಲ್ಲ, ಈಗ ತಿಳಿದುಕೊಂಡಿದ್ದೇವೆಂದು ನೀವು ಹೇಳುತ್ತೀರಿ
ಅಂದಮೇಲೆ ಆಸ್ತಿಕರಾಗಿ ಬಿಟ್ಟಿರಿ. ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ನೀವು
ತಿಳಿದುಕೊಂಡಿದ್ದೀರಿ. ಇಡೀ ಪ್ರಪಂಚ ಮತ್ತು ನೀವೂ ಸಹ ಈ ವಿದ್ಯೆಗೆ ಮೊದಲು ನಾಸ್ತಿಕರಾಗಿದ್ದಿರಿ.
ಈಗ ತಂದೆಯು ತಿಳಿಸಿರುವುದರಿಂದ ನೀವು ಹೇಳುತ್ತೀರಿ - ನಮಗೆ ಪರಮಪಿತ ಪರಮಾತ್ಮ ತಿಳಿಸಿದ್ದಾರೆ,
ಆಸ್ತಿಕರನ್ನಾಗಿ ಮಾಡಿದ್ದಾರೆ. ನಾವು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು
ತಿಳಿದುಕೊಂಡಿರಲಿಲ್ಲ, ತಂದೆಯು ರಚಯಿತನಾಗಿದ್ದಾರೆ. ಅವರೇ ಸಂಗಮದಲ್ಲಿ ಬಂದು ಹೊಸ ಪ್ರಪಂಚದ
ಸ್ಥಾಪನೆಯನ್ನು ಮಾಡುತ್ತಾರೆ ಮತ್ತು ಹಳೆಯ ಪ್ರಪಂಚದ ವಿನಾಶ ಮಾಡುತ್ತಾರೆ. ಹಳೆಯ ಪ್ರಪಂಚದ
ವಿನಾಶಕ್ಕಾಗಿಯೇ ಈ ಮಹಾಭಾರತ ಯುದ್ಧವಿದೆ. ಇದಕ್ಕಾಗಿ ಆ ಸಮಯದಲ್ಲಿ ಕೃಷ್ಣನಿದ್ದನೆಂದು
ತಿಳಿಯುತ್ತಾರೆ. ನೀವೀಗ ತಿಳಿದುಕೊಳ್ಳುತ್ತೀರಿ - ನಿರಾಕಾರ ತಂದೆಯಿದ್ದರು, ಅವರನ್ನು ನೋಡಲು
ಸಾಧ್ಯವಿಲ್ಲ. ಕೃಷ್ಣನಿಗಾದರೆ ಚಿತ್ರವಿದೆ, ಕಣ್ಣಿಂದ ನೋಡುತ್ತೀರಿ, ಶಿವನನ್ನು ನೋಡಲು
ಸಾಧ್ಯವಿಲ್ಲ. ಕೃಷ್ಣನು ಸತ್ಯಯುಗದ ಮೊದಲ ರಾಜಕುಮಾರನಾಗಿದ್ದಾನೆ ಮತ್ತೆ ಅದೇ ಮುಖ ಲಕ್ಷಣಗಳಿರಲು
ಸಾಧ್ಯವಿಲ್ಲ. ಕೃಷ್ಣನೂ ಯಾವಾಗ ಹೇಗೆ ಬಂದನೆಂದು ಯಾರಿಗೂ ತಿಳಿದಿಲ್ಲ. ಕೃಷ್ಣನನ್ನು ಕಂಸನ
ಸೆರೆಮನೆಯಲ್ಲಿ ತೋರಿಸುತ್ತಾರೆ. ಕಂಸನು ಸತ್ಯಯುಗದಲ್ಲಿದ್ದನೇ? ಇದು ಸಾಧ್ಯವಿಲ್ಲ. ಅಸುರರಿಗೆ ಕಂಸ
ಎಂದು ಹೇಳಲಾಗುತ್ತದೆ, ಈ ಸಮಯದಲ್ಲಿ ಎಲ್ಲವೂ ಆಸುರೀ ಸಂಪ್ರದಾಯವಲ್ಲವೆ. ಒಬ್ಬರು ಇನ್ನೊಬ್ಬರನ್ನು
ಕೊಲ್ಲುತ್ತಾ, ಕಡಿಯುತ್ತಿರುತ್ತಾರೆ. ದೈವೀ ಪ್ರಪಂಚವಿತ್ತು ಎಂಬುದನ್ನೇ ಮರೆತು ಹೋಗಿದ್ದಾರೆ.
ಈಶ್ವರೀಯ ದೈವೀ ಪ್ರಪಂಚವನ್ನು ಈಶ್ವರನು ಸ್ಥಾಪನೆ ಮಾಡಿದರು. ನಂಬರ್ವಾರ್ ಪುರುಷಾರ್ಥದನುಸಾರ ಇದು
ನಿಮ್ಮ ಬುದ್ಧಿಯಲ್ಲಿದೆ. ನೀವೀಗ ಈಶ್ವರೀಯ ಪರಿವಾರದವರಾಗಿದ್ದೀರಿ, ಸತ್ಯಯುಗದಲ್ಲಿ ದೈವೀ
ಪರಿವಾರದವರಾಗುತ್ತೀರಿ. ಈ ಸಮಯದಲ್ಲಿ ಈಶ್ವರನು ನಿಮ್ಮನ್ನು ಸ್ವರ್ಗದ ದೇವಿ-ದೇವತೆಗಳನ್ನಾಗಿ ಮಾಡಲು
ಯೋಗ್ಯರನ್ನಾಗಿ ಮಾಡುತ್ತಿದ್ದಾರೆ, ತಂದೆಯು ಓದಿಸುತ್ತಿದ್ದಾರೆ. ಈ ಸಂಗಮಯುಗವನ್ನು ಯಾರೂ
ತಿಳಿದುಕೊಂಡಿಲ್ಲ. ಯಾವುದೇ ಶಾಸ್ತ್ರಗಳಲ್ಲಿ ಈ ಪುರುಷೋತ್ತಮಯುಗದ ಮಾತಿಲ್ಲ. ಪುರುಷೋತ್ತಮ ಯುಗ
ಅರ್ಥಾತ್ ಎಲ್ಲಿ ಪುರುಷೋತ್ತಮರಾಗುತ್ತೀರಿ. ಸತ್ಯಯುಗಕ್ಕೂ ಪುರುಷೋತ್ತಮ ಯುಗವೆಂದು ಹೇಳುತ್ತಾರೆ.
ಈ ಸಮಯದಲ್ಲಿ ಮನುಷ್ಯರು ಪುರುಷೋತ್ತಮರಿಲ್ಲ, ಈಗಂತೂ ಕನಿಷ್ಟ ತಮೋಪ್ರಧಾನರೆಂದು ಹೇಳಬಹುದು.
ಇವೆಲ್ಲಾ ಮಾತುಗಳನ್ನು ನೀವು ಬ್ರಾಹ್ಮಣರ ವಿನಃ ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ತಂದೆಯು
ತಿಳಿಸುತ್ತಾರೆ - ಇದು ಆಸುರೀ ಭ್ರಷ್ಟಾಚಾರಿ ಪ್ರಪಂಚವಾಗಿದೆ. ಸತ್ಯಯುಗದಲ್ಲಿ ಈ ರೀತಿಯ
ವಾತಾವರಣವಿರುವುದಿಲ್ಲ. ಅದು ಶ್ರೇಷ್ಠಾಚಾರಿ ಪ್ರಪಂಚವಾಗಿದೆ, ಅದರ ಚಿತ್ರಗಳೂ ಇವೆ. ಅವಶ್ಯವಾಗಿ
ಇವರು ಶ್ರೇಷ್ಠಾಚಾರಿ ಪ್ರಪಂಚದ ಮಾಲೀಕರಾಗಿದ್ದರು. ಭಾರತದ ರಾಜರು ಇದ್ದು ಹೋಗಿದ್ದಾರೆ, ಅವರನ್ನು
ಈಗ ಪೂಜಿಸುತ್ತಾರೆ. ಪೂಜ್ಯ, ಪವಿತ್ರರಾಗಿದ್ದವರೇ ನಂತರ ಪೂಜಾರಿಗಳಾದರು. ಭಕ್ತಿಮಾರ್ಗಕ್ಕೆ ಪೂಜಾರಿ,
ಜ್ಞಾನ ಮಾರ್ಗಕ್ಕೆ ಪೂಜ್ಯ ಎಂದು ಕರೆಯಲಾಗುತ್ತದೆ. ಪೂಜ್ಯರಿಂದ ಪೂಜಾರಿ, ಪೂಜಾರಿಯಿಂದ ಮತ್ತೆ
ಪೂಜ್ಯರು ಹೇಗಾಗುತ್ತಾರೆ, ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಈ ಪ್ರಪಂಚದಲ್ಲಿ ಯಾರೂ
ಪೂಜ್ಯರಿರಲು ಸಾಧ್ಯವಿಲ್ಲ. ಪರಮಪಿತ ಪರಮಾತ್ಮ ಮತ್ತು ದೇವತೆಗಳಿಗೇ ಪೂಜ್ಯರೆಂದು ಹೇಳಲಾಗುತ್ತದೆ.
ಪರಮಪಿತ ಪರಮಾತ್ಮನು ಎಲ್ಲರ ಪೂಜ್ಯನಾಗಿದ್ದಾರೆ, ಎಲ್ಲಾ ಧರ್ಮದವರು ಅವರನ್ನು ಪೂಜೆ ಮಾಡುತ್ತಾರೆ
ಅಂತಹ ತಂದೆಯ ಅವತರಣೆಯು ಇಲ್ಲಿಯೇ ಆಗುತ್ತದೆಯೆಂದು ಗಾಯನವಿದೆ. ಶಿವ ಜಯಂತಿಯಿದೆಯಲ್ಲವೆ ಆದರೆ ಅವರ
ಜನ್ಮವು ಭಾರತದಲ್ಲಿಯೇ ಆಗುತ್ತದೆಯೆಂದು ಮನುಷ್ಯರಿಗೆ ತಿಳಿದಿಲ್ಲ. ಇತ್ತೀಚೆಗೆ ಶಿವ ಜಯಂತಿಯ
ರಜಾದಿನವನ್ನು ಕೊಡುತ್ತಾರೆ. ಜಯಂತಿಯನ್ನಾಚರಿಸಿ ಅಥವಾ ಬಿಡಿ ಅದು ನಿಮ್ಮಿಷ್ಟ. ಇದೇನೂ ಅಫಿಷಿಯಲ್
ರಜಾದಿನವಲ್ಲ. ಯಾರು ಶಿವ ಜಯಂತಿಯ ಬಗ್ಗೆ ತಿಳಿದುಕೊಂಡಿಲ್ಲವೋ ಅವರು ತಮ್ಮ ಕೆಲಸಕ್ಕೆ ಹೊರಟು
ಹೋಗುತ್ತಾರೆ. ಬಹಳ ಧರ್ಮಗಳಿವೆಯಲ್ಲವೆ. ಸತ್ಯಯುಗದಲ್ಲಿ ಇಂತಹ ಮಾತುಗಳಿರುವುದೇ ಇಲ್ಲ, ಅಲ್ಲಿ ಈ
ವಾತಾವರಣವೇ ಇಲ್ಲ. ಸತ್ಯಯುಗವು ಹೊಸ ಪ್ರಪಂಚ, ಒಂದು ಧರ್ಮವಿರುತ್ತದೆ. ನಮ್ಮ ನಂತರ ಚಂದ್ರವಂಶಿ
ರಾಜ್ಯವು ಬರುವುದೆಂಬುದು ಅಲ್ಲಿನ ದೇವತೆಗಳಿಗೆ ತಿಳಿದಿರುವುದೇ ಇಲ್ಲ. ಇಂತಿಂತಹವರು
ಇದ್ದುಹೋಗಿದ್ದಾರೆಂಬುದೆಲ್ಲವನ್ನೂ ಇಲ್ಲಿ ನೀವು ತಿಳಿದುಕೊಳ್ಳುತ್ತೀರಿ. ನೀವು
ಸತ್ಯಯುಗದಲ್ಲಿದ್ದಾಗ ಅಲ್ಲಿ ಯಾವ ಭೂತ ಕಾಲವನ್ನು ನೆನಪು ಮಾಡಿಕೊಳ್ಳುತ್ತೀರಿ? ಕಲಿಯುಗವಂತೂ
ಭೂತಕಾಲವಾಯಿತು, ಅದರ ಇತಿಹಾಸ-ಭೂಗೋಳವನ್ನು ಕೇಳುವುದರಿಂದೇನು ಲಾಭ!
ನಾವು ಶಿವ ತಂದೆಯ ಬಳಿ
ಕುಳಿತಿದ್ದೇವೆ, ಅವರು ತಂದೆ-ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ಎಲ್ಲರ ಸದ್ಗತಿ ಮಾಡಲು ಬಂದಿದ್ದಾರೆ.
ಎಲ್ಲಾ ಆತ್ಮಗಳನ್ನು ಅವಶ್ಯವಾಗಿ ಕರೆದುಕೊಂಡು ಹೋಗುತ್ತಾರೆಂದು ನಿಮಗೆ ತಿಳಿದಿದೆ. ಮನುಷ್ಯರಂತೂ
ಇದೆಲ್ಲವೂ ಮಣ್ಣು ಪಾಲಾಗುವುದೆಂದು ದೇಹಾಭಿಮಾನದಲ್ಲಿ ಬಂದು ಹೇಳುತ್ತಾರೆ ಆದರೆ ಇದನ್ನು
ತಿಳಿದುಕೊಳ್ಳುವುದಿಲ್ಲ, ಆತ್ಮಗಳಂತು ಹೊರಟು ಹೋಗುತ್ತಾರೆ ಆದರೆ ಈ ಶರೀರಗಳು ಮಣ್ಣಿನಿಂದಾಗಿದೆ,
ಹಳೆಯ ಶರೀರಗಳು ಸಮಾಪ್ತಿಯಾಗುತ್ತವೆ. ನಾವಾತ್ಮಗಳು ಒಂದು ಶರೀರವನ್ನು ಬಿಟ್ಟು ಹೋಗಿ ಇನ್ನೊಂದನ್ನು
ತೆಗೆದುಕೊಳ್ಳುತ್ತೇವೆ. ಈ ಪ್ರಪಂಚದಲ್ಲಿ ನಮ್ಮದು ಇದು ಅಂತಿಮ ಜನ್ಮವಾಗಿದೆ, ಎಲ್ಲರೂ
ಪತಿತರಾಗಿದ್ದಾರೆ. ಸದಾ ಪಾವನರು ಯಾರೂ ಇರಲು ಸಾಧ್ಯವಿಲ್ಲ. ಸತೋಪ್ರಧಾನರಿಂದ ಸತೋ, ರಜೋ, ತಮೋ
ಆಗಿಯೇ ಆಗುತ್ತಾರೆ. ಮನುಷ್ಯರಂತೂ ಇದೆಲ್ಲವೂ ಈಶ್ವರನ ರೂಪವೇ ಆಗಿದೆ, ಈಶ್ವರನು ಆಟ-ಪಾಠ ಮಾಡಲು
ತನ್ನ ಅನೇಕ ರೂಪಗಳನ್ನು ಧರಿಸಿಕೊಂಡಿದ್ದಾರೆಂದು ಹೇಳಿ ಬಿಡುತ್ತಾರೆ. ಲೆಕ್ಕವೇನನ್ನೂ
ತಿಳಿದುಕೊಂಡಿಲ್ಲ, ಆಟವಾಡಿಸುವವರನ್ನೂ ತಿಳಿದುಕೊಂಡಿಲ್ಲ. ತಂದೆಯೇ ಕುಳಿತು ವಿಶ್ವದ
ಚರಿತ್ರೆ-ಭೂಗೋಳವನ್ನು ತಿಳಿಸುತ್ತಾರೆ. ಆಟದಲ್ಲಿ ಪ್ರತಿಯೊಬ್ಬರ ಪಾತ್ರವು ಬೇರೆ-ಬೇರೆಯಾಗಿದೆ,
ಎಲ್ಲರ ಸ್ಥಾನವು ಬೇರೆ-ಬೇರೆಯಾಗಿದೆ. ಯಾರು ಯಾವ ಸ್ಥಾನದಲ್ಲಿರುವರೋ ಅಂತಹ ಮಹಿಮೆಯಿರುತ್ತದೆ,
ಇವೆಲ್ಲಾ ಮಾತುಗಳನ್ನು ತಂದೆಯು ಸಂಗಮಯುಗದಲ್ಲಿಯೇ ತಿಳಿಸುತ್ತಾರೆ. ಸತ್ಯಯುಗದಲ್ಲಿ ಮತ್ತೆ
ಸತ್ಯಯುಗದ ಪಾತ್ರವು ನಡೆಯುತ್ತದೆ, ಅಲ್ಲಿ ಈ ಮಾತುಗಳಿರುವುದಿಲ್ಲ ಇಲ್ಲಿ ನಿಮಗೆ ಸೃಷ್ಟಿಚಕ್ರದ
ಜ್ಞಾನವು ಬುದ್ಧಿಯಲ್ಲಿ ಸುತ್ತುತ್ತಿರುತ್ತದೆ. ನಿಮ್ಮ ಹೆಸರೇ ಆಗಿದೆ, ಸ್ವದರ್ಶನ ಚಕ್ರಧಾರಿಗಳು.
ಲಕ್ಷ್ಮೀ-ನಾರಾಯಣರಿಗೆ ಸ್ವದರ್ಶನ ಚಕ್ರವನ್ನು ಕೊಡುವಂತಿಲ್ಲ. ಇವು ಇಲ್ಲಿಯದಾಗಿವೆ. ಮೂಲವತನದಲ್ಲಿ
ಕೇವಲ ಆತ್ಮಗಳಿರುತ್ತಾರೆ, ಸೂಕ್ಷ್ಮವತನದಲ್ಲಿ ಏನೂ ಇಲ್ಲ. ಪ್ರಾಣಿಗಳು, ಮನುಷ್ಯರು, ಪಶು-ಪಕ್ಷಿ
ಇತ್ಯಾದಿಯೆಲ್ಲವೂ ಇಲ್ಲಿರುತ್ತದೆ. ಸತ್ಯಯುಗದಲ್ಲಿ ನವಿಲು ಮೊದಲಾದುವುಗಳನ್ನು ತೋರಿಸುತ್ತಾರೆ.
ಅಲ್ಲಿ ನವಿಲು ಗರಿಯನ್ನು ತೆಗೆದು ಧರಿಸುತ್ತಾರೆಂದಲ್ಲ, ನವಿಲಿಗೆ ಅಲ್ಲಿ ದುಃಖ ಕೊಡುವರೇ? ನವಿಲಿನ
ಬಿದ್ದು ಹೋಗಿರುವ ಗರಿಯನ್ನೂ ಸಹ ಕಿರೀಟದಲ್ಲಿ ಇಟ್ಟುಕೊಳ್ಳುತ್ತಾರೆಂದಲ್ಲ. ಕಿರೀಟದಲ್ಲಿ ತಪ್ಪು
ಸಂಕೇತವನ್ನು ತೋರಿಸಿ ಬಿಟ್ಟಿದ್ದಾರೆ. ಅಲ್ಲಿ ಎಲ್ಲಾ ವಸ್ತುಗಳು ಅತಿ ಸುಂದರವಾಗಿರುತ್ತವೆ. ಕೊಳಕು
ಪ್ರಪಂಚದ ಹೆಸರು, ಗುರುತೂ ಇರುವುದಿಲ್ಲ. ನೋಡಿ ತಿರಸ್ಕಾರ ಬರುವಂತಹ ವಸ್ತುಗಳೇನೂ ಇರುವುದಿಲ್ಲ,
ಇಲ್ಲಾದರೆ ತಿರಸ್ಕಾರ ಬರುತ್ತದೆಯಲ್ಲವೆ. ಅಲ್ಲಿ ಪ್ರಾಣಿಗಳಿಗೂ ದುಃಖವಿರುವುದಿಲ್ಲ. ಸತ್ಯಯುಗವು
ಎಷ್ಟು ಸುಂದರವಾಗಿರಬಹುದು, ಹೆಸರೇ ಸ್ವರ್ಗ, ಹೆವೆನ್, ಹೊಸ ಪ್ರಪಂಚ!! ಇಲ್ಲಂತೂ ಹಳೆಯ
ಪ್ರಪಂಚದಲ್ಲಿ ನೋಡಿ, ಮಳೆಯ ಕಾರಣ ಮನೆಗಳು ಬೀಳುತ್ತಿರುತ್ತವೆ, ಮನುಷ್ಯರು ಮರಣ ಹೊಂದುತ್ತಾರೆ.
ಭೂಕಂಪವಾದರೆ ಎಲ್ಲವೂ ಬಿದ್ದು ಸತ್ತು ಹೋಗುವರು. ಸತ್ಯಯುಗದಲ್ಲಿ ಬಹಳ ಕೆಲವರೇ ಇರುತ್ತಾರೆ
ನಂತರದಲ್ಲಿ ವೃದ್ಧಿ ಹೊಂದುತ್ತಾರೆ. ಮೊದಲು ಸೂರ್ಯವಂಶಿಯರಿರುತ್ತಾರೆ, ಯಾವಾಗ ಪ್ರಪಂಚವು 25%
ಹಳೆಯದಾಗುವುದು ಆಗ ಚಂದ್ರವಂಶಿಯರಿರುತ್ತಾರೆ. ಸತ್ಯಯುಗವು 1250 ವರ್ಷಗಳಿರುತ್ತದೆ. ಅದು 100%
ಹೊಸ ಪ್ರಪಂಚವಾಗಿದೆ ಎಲ್ಲಿ ದೇವಿ-ದೇವತೆಗಳು ರಾಜ್ಯ ಮಾಡುತ್ತಾರೆ. ನಿಮ್ಮಲ್ಲಿಯೂ ಬಹಳ ಮಂದಿ ಈ
ಮಾತುಗಳನ್ನು ಮರೆತು ಹೋಗುತ್ತಾರೆ. ರಾಜಧಾನಿಯು ಸ್ಥಾಪನೆಯಾಗಲೇಬೇಕಾಗಿದೆ. ಇದರಲ್ಲಿ
ಹೃದಯಾಘಾತವಾಗಬಾರದು. ಪುರುಷಾರ್ಥದ ಮಾತಾಗಿದೆ. ತಂದೆಯು ಎಲ್ಲಾ ಮಕ್ಕಳಿಂದ ಸಮಾನ ಪುರುಷಾರ್ಥ
ಮಾಡಿಸುತ್ತಾರೆ. ನೀವು ತಮಗಾಗಿ ವಿಶ್ವದಲ್ಲಿ ಸ್ವರ್ಗದ ರಾಜಧಾನಿಯನ್ನು ಸ್ಥಾಪನೆ ಮಾಡುತ್ತೀರಿ
ಅಂದಾಗ ನಾವು ಏನಾಗುತ್ತೇವೆಂದು ತಮ್ಮನ್ನು ನೋಡಿಕೊಳ್ಳಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಈ
ಪುರುಷೋತ್ತಮ ಯುಗದಲ್ಲಿ ಸ್ವರ್ಗದ ದೇವಿ-ದೇವತೆಗಳಾಗುವ ವಿದ್ಯೆಯನ್ನು ಓದಿ ಸ್ವಯಂನ್ನು
ಯೋಗ್ಯನನ್ನಾಗಿ ಮಾಡಿಕೊಳ್ಳಬೇಕಾಗಿದೆ. ಪುರುಷಾರ್ಥದಲ್ಲಿ ಹೃದಯಾಘಾತವಾಗಬಾರದು.
2. ಈ ಬೇಹದ್ದಿನ ಆಟದಲ್ಲಿ
ಪ್ರತಿಯೊಬ್ಬರ ಪಾತ್ರ ಮತ್ತು ಸ್ಥಾನವು ಬೇರೆ-ಬೇರೆಯಾಗಿದೆ, ಹೇಗೆ ಯಾರ ಸ್ಥಾನವಿರುತ್ತದೆ ಹಾಗೆ
ಮಾನ್ಯತೆ ಸಿಗುತ್ತದೆ, ಇದೆಲ್ಲಾ ರಹಸ್ಯವನ್ನು ತಿಳಿದು ಪ್ರಪಂಚದ ಚರಿತ್ರೆ-ಭೂಗೋಳವನ್ನು ಸ್ಮರಣೆ
ಮಾಡಿ ಸ್ವದರ್ಶನ ಚಕ್ರಧಾರಿಗಳಾಗಬೇಕಾಗಿದೆ.
ವರದಾನ:
ತಂದೆಯ ಎಲ್ಲಾ
ಶ್ರೀಮತವನ್ನು ಪಾಲನೆ ಮಾಡುವಂತಹ ಸತ್ಯ ಸ್ನೇಹಿ ಪ್ರಿಯತಮೆ ಭವ.
ಯಾವ ಮಕ್ಕಳು ಸದಾ ಒಬ್ಬ
ತಂದೆಯ ಸ್ನೇಹದಲ್ಲಿ ಲವಲೀನರಾಗಿರುತ್ತಾರೆ, ಅವರಿಗೆ ತಂದೆಯ ಪ್ರತಿ ಮಾತು ಪ್ರಿಯವೆನಿಸುತ್ತದೆ.
ಪ್ರಶ್ನೆ ಸಮಾಪ್ತಿಯಾಗಿ ಬಿಡುತ್ತದೆ. ಬ್ರಾಹ್ಮಣ ಜನ್ಮದ ಅಡಿಪಾಯ ಸ್ನೇಹವಾಗಿದೆ. ಯಾರು ಸ್ನೇಹಿ
ಪ್ರಿಯತಮೆ ಆತ್ಮರಿದ್ದಾರೆ ಅವರಿಗೆ ತಂದೆಯ ಶ್ರೀಮತವನ್ನು ಪಾಲನೆ ಮಾಡುವುದರಲ್ಲಿ ಕಷ್ಟದ
ಅನುಭವವಾಗುವುದಿಲ್ಲ. ಸ್ನೇಹದ ಕಾರಣ ಸದಾ ಇದೇ ಉಲ್ಲಾಸವಿರುತ್ತದೆ. ಬಾಬಾ ಏನು ತಿಳಿಸಿದ್ದಾರೆ ಅದು
ನನಗೆ ಹೇಳಿದ್ದಾರೆ - ನಾನು ಮಾಡಬೇಕು ಎಂದು. ಸ್ನೇಹಿ ಆತ್ಮಗಳು ವಿಶಾಲ ಹೃದಯಿಗಳಾಗಿರುತ್ತಾರೆ,
ಆದ್ದರಿಂದ ಅವರಿಗೆ ಎಲ್ಲಾ ದೊಡ್ಡ ಮಾತುಗಳೂ ಚಿಕ್ಕದಾಗಿ ಬಿಡುತ್ತವೆ.
ಸ್ಲೋಗನ್:
ಯಾವುದೇ ಮಾತಿನ
ಬಗ್ಗೆ ಚಿಂತೆ ಮಾಡುವುದು - ಇದೂ ಸಹಾ ಫೇಲ್ನ ನಿಶಾನಿಯಾಗಿದೆ.
ಅವ್ಯಕ್ತ ಸೂಚನೆ:- ಈಗ
ಲಗನ್ನಿನ (ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೋಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.
ಜ್ವಾಲಾ ಸ್ವರೂಪದ
ಸ್ಥಿತಿಯ ಅನುಭವ ಮಾಡುವುದಕ್ಕೆ ನಿರಂತರ ನೆನಪಿನ ಜ್ವಾಲೆ ಪ್ರಜ್ವಲಿತವಾಗಲಿ. ಇದರ ಸಹಜ ವಿಧಿಯಾಗಿದೆ
- ಸದಾ ತನ್ನನ್ನು “ಸಾರಥಿ” ಮತ್ತು “ಸಾಕ್ಷಿ” ತಿಳಿದು ನಡೆಯಿರಿ. ಆತ್ಮ ಈ ರಥದ ಸಾರಥಿಯಾಗಿದೆ - ಈ
ಸ್ಮೃತಿ ಸ್ವತಃವಾಗಿ ಈ ರಥ(ದೇಹ)ದಿಂದ ಅಥವಾ ಯಾವುದೇ ಪ್ರಕಾರದ ದೇಹಭಾನದಿಂದ ಭಿನ್ನರನ್ನಾಗಿ ಮಾಡಿ
ಬಿಡುತ್ತದೆ. ಸ್ವಯಂನ್ನು ಸಾರಥಿ ತಿಳಿದುಕೊಳ್ಳುವುದರಿಂದ ಸರ್ವ ಕರ್ಮೇಂದ್ರಿಗಳನ್ನು ತಮ್ಮ
ನಿಯಂತ್ರಣದಲ್ಲಿರುತ್ತದೆ. ಸೂಕ್ಷ್ಮ ಶಕ್ತಿಗಳು “ಮನಸ್ಸು-ಬುದ್ಧಿ-ಸಂಸ್ಕಾರ”ಗಳೂ ಸಹ ಆದೇಶದ
ಪ್ರಮಾಣವಿರುತ್ತದೆ.