12.11.24 Morning Kannada Murli Om Shanti
BapDada Madhuban
ಮಧುರ ಮಕ್ಕಳೇ - ತಂದೆಯು
ನೀವು ಮಕ್ಕಳನ್ನು ಶೃಂಗಾರ ಮಾಡಲು ಬಂದಿದ್ದಾರೆ, ಎಲ್ಲದಕ್ಕಿಂತ ಒಳ್ಳೆಯದು ಪವಿತ್ರತೆಯ
ಶೃಂಗಾರವಾಗಿದೆ"
ಪ್ರಶ್ನೆ:
ಪೂರ್ಣ 84
ಜನ್ಮಗಳನ್ನು ತೆಗೆದುಕೊಳ್ಳುವವರ ಮುಖ್ಯಲಕ್ಷಣಗಳೇನು?
ಉತ್ತರ:
1. ಅವರು ತಂದೆಯ
ಜೊತೆಜೊತೆಗೆ ಶಿಕ್ಷಕ ಮತ್ತು ಸದ್ಗುರು ಮೂವರನ್ನೂ ನೆನಪು ಮಾಡುತ್ತಾರೆ, ತಂದೆಯ ನೆನಪು ಬಂದರೆ
ಶಿಕ್ಷಕರ ಸಂಬಂಧವನ್ನು ಮರೆತುಹೋಗುತ್ತಾರೆಂದಲ್ಲ, ಯಾವಾಗ ಮೂವರನ್ನೂ ನೆನಪು ಮಾಡುವರೋ ಆಗಲೇ
ಕೃಷ್ಣಪುರಿಯಲ್ಲಿ ಹೋಗಲು ಸಾಧ್ಯ ಅರ್ಥಾತ್ ಆದಿಯಿಂದ ಪಾತ್ರವನ್ನಭಿನಯಿಸಲು ಸಾಧ್ಯ.
2. ಅವರನ್ನು ಎಂದೂ
ಮಾಯೆಯ ಬಿರುಗಾಳಿಗಳು ಸೋಲಿಸಲು ಸಾಧ್ಯವಿಲ್ಲ.
ಓಂ ಶಾಂತಿ.
ತಂದೆಯು ಮೊದಲು ಮಕ್ಕಳಿಗೆ ತಿಳಿಸುತ್ತಾರೆ, ನಾವು ತಂದೆಯ ಮುಂದೆ, ಶಿಕ್ಷಕನ ಮುಂದೆ ಮತ್ತು
ಸದ್ಗುರುವಿನ ಮುಂದೆ ಕುಳಿತಿದ್ದೇವೆಂದು ಮರೆಯುವುದಿಲ್ಲ ತಾನೆ! ಎಲ್ಲರೂ ನೆನಪಿನಲ್ಲಿ ಕುಳಿತಿಲ್ಲ
ಎಂದು ತಂದೆ ತಿಳಿಯುವುದಿಲ್ಲ ಆದರೂ ಸಹ ತಿಳಿಸುವುದು ತಂದೆಯ ಕರ್ತವ್ಯವಾಗಿದೆ. ಇದು ಅರ್ಥಸಹಿತ
ನೆನಪು ಮಾಡುವುದಾಗಿದೆ. ನಮ್ಮ ತಂದೆಯು ಬೇಹದ್ದಿನ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ
ಮತ್ತು ಸದ್ಗುರುವೂ ಆಗಿದ್ದಾರೆ, ಮಕ್ಕಳನ್ನು ಜೊತೆ ಕರೆದುಕೊಂಡು ಹೋಗುತ್ತಾರೆ. ತಂದೆಯು
ಬಂದಿರುವುದೇ ಮಕ್ಕಳ ಶೃಂಗಾರ ಮಾಡಲು, ಪವಿತ್ರತೆಯಿಂದ ಶೃಂಗಾರ ಮಾಡಲು ಬರುತ್ತಾರೆ, ಅಪಾರ ಧನವನ್ನು
ಕೊಡುತ್ತಾರೆ. ಹೊಸಪ್ರಪಂಚಕ್ಕಾಗಿಯೇ ಧನವನ್ನು ಕೊಡುತ್ತಾರೆ, ಅಲ್ಲಿಗೆ ನೀವು ಹೋಗಬೇಕಾಗಿದೆ. ನೀವು
ಮಕ್ಕಳು ನೆನಪು ಮಾಡಬೇಕಾಗಿದೆ. ಮಕ್ಕಳೂ ತಪ್ಪು ಮಾಡುತ್ತೀರಿ ಏನೆಂದರೆ ತಂದೆಯನ್ನೇ
ಮರೆತುಹೋಗುತ್ತೀರಿ. ಯಾವ ಪೂರ್ಣ ಖುಷಿಯಿರಬೇಕೋ ಅದು ಕಡಿಮೆಯಾಗಿಬಿಡುತ್ತದೆ. ಇಂತಹ ತಂದೆಯಂತೂ
ಎಂದಿಗೂ ಸಿಗುವುದಿಲ್ಲ. ನಿಮಗೆ ಗೊತ್ತಿದೆ - ಅವಶ್ಯವಾಗಿ ಆ ತಂದೆಯ ಮಕ್ಕಳಾಗಿದ್ದೇವೆ, ಅವರು ನಮಗೆ
ಓದಿಸುತ್ತಾರೆ ಆದ್ದರಿಂದ ಅವರು ಅವಶ್ಯವಾಗಿ ಶಿಕ್ಷಕನೂ ಆಗಿದ್ದಾರೆ. ನಮ್ಮ ವಿದ್ಯೆಯು ಹೊಸಪ್ರಪಂಚ,
ಅಮರಪುರಿಗಾಗಿ ಇದೆ. ಈಗ ನಾವು ಸಂಗಮಯುಗದಲ್ಲಿ ಕುಳಿತಿದ್ದೇವೆ. ಈ ನೆನಪಂತೂ ಅವಶ್ಯವಾಗಿ
ಮಕ್ಕಳಲ್ಲಿರಬೇಕು. ಪಕ್ಕಾ-ಪಕ್ಕಾ ನೆನಪು ಮಾಡಬೇಕು. ನಿಮಗೆ ತಿಳಿದಿದೆ - ಈ ಸಮಯದಲ್ಲಿ ಕಂಸಪುರಿ,
ಅಸುರೀ ಪ್ರಪಂಚದಲ್ಲಿದ್ದಾರೆ. ತಿಳಿದುಕೊಳ್ಳಿ, ಯಾರಿಗಾದರೂ ಸಾಕ್ಷಾತ್ಕಾರವಾಗುತ್ತದೆ ಆದರೆ
ಸಾಕ್ಷಾತ್ಕಾರದಿಂದ ಯಾರೂ ಕೃಷ್ಣಪುರಿ ಅಥವಾ ಅವರ ರಾಜ್ಯದಲ್ಲಿ ಹೋಗಲು ಸಾಧ್ಯವಿಲ್ಲ. ಆದರೆ ಯಾವಾಗ
ತಂದೆ, ಶಿಕ್ಷಕ ಮತ್ತು ಸದ್ಗುರು ಮೂವರನ್ನೂ ನೆನಪು ಮಾಡುತ್ತಿರುತ್ತಾರೆಯೋ ಆಗಲೇ ಹೋಗಲು ಸಾಧ್ಯ.
ಇಲ್ಲಿ ಆತ್ಮಗಳೊಂದಿಗೆ ಮಾತನಾಡಲಾಗುತ್ತದೆ. ಹೌದು ಬಾಬಾ! ತಾವು ಸತ್ಯವನ್ನೇ ಹೇಳುತ್ತೀರಿ. ತಾವು
ತಂದೆಯೂ ಆಗಿದ್ದೀರಿ, ಓದಿಸುವ ಶಿಕ್ಷಕನೂ ಆಗಿದ್ದೀರೆಂದು ಆತ್ಮವೇ ಹೇಳುತ್ತದೆ. ಪರಮ ಆತ್ಮನೇ
ಓದಿಸುತ್ತಾರೆ. ಲೌಕಿಕ ವಿದ್ಯೆಯನ್ನೂ ಸಹ ಆತ್ಮವೇ ಶರೀರದ ಜೊತೆ ಓದಿಸುತ್ತದೆ ಆದರೆ ಆ ಆತ್ಮನೂ
ಪತಿತ, ಶರೀರವೂ ಪತಿತವಾಗಿದೆ. ನಾವು ನರಕವಾಸಿಗಳಾಗಿದ್ದೇವೆಂದು ಪ್ರಪಂಚದವರಿಗೆ ತಿಳಿದೇ ಇಲ್ಲ.
ಈಗ ನೀವು ತಿಳಿಯುತ್ತೀರಿ
- ನಾವಂತೂ ಈಗ ನಮ್ಮ ವತನಕ್ಕೆ ಹೊರಟೆವು. ಇದು ನಿಮ್ಮ ವತನವಲ್ಲ, ಇದು ರಾವಣನ ಪರವತನವಾಗಿದೆ,
ನಿಮ್ಮ ವತನದಲ್ಲಂತೂ ಅಪಾರ ಸುಖವಿರುತ್ತದೆ. ಕಾಂಗ್ರೆಸ್ಸಿನವರು ಪರರಾಜ್ಯದಲ್ಲಿದ್ದೇವೆ ಎಂದು
ತಿಳಿಯುವುದಿಲ್ಲ. ಮೊದಲು ಮುಸಲ್ಮಾನರ ರಾಜ್ಯದಲ್ಲಿ ಕುಳಿತಿದ್ದಿರಿ, ನಂತರ ಕ್ರಿಶ್ಚಿಯನ್ನರ
ರಾಜ್ಯದಲ್ಲಿ ಕುಳಿತುಕೊಂಡಿರಿ. ಈಗ ನಾವು ನಮ್ಮ ರಾಜ್ಯದಲ್ಲಿ ಹೋಗುತ್ತೇವೆಂದು ನಿಮಗೆ ತಿಳಿದಿದೆ.
ಮೊದಲು ನಾವು ರಾವಣರಾಜ್ಯವನ್ನೇ ನಮ್ಮ ರಾಜ್ಯವೆಂದು ತಿಳಿದಿದ್ದೆವು. ನಾವು ಮೊದಲು
ರಾಮರಾಜ್ಯದಲ್ಲಿದ್ದೆವು ಎಂಬುದನ್ನೇ ಮರೆತುಹೋಗಿದ್ದೇವೆ. ಮತ್ತೆ 84 ಜನ್ಮಗಳ ಚಕ್ರದಲ್ಲಿ
ಬರುವುದರಿಂದ ರಾವಣರಾಜ್ಯದಲ್ಲಿ, ದುಃಖದಲ್ಲಿ ಬರಬೇಕಾಯಿತು. ಪರರಾಜ್ಯದಲ್ಲಂತೂ ದುಃಖವೇ ಇರುತ್ತದೆ.
ಒಳಗೆ ಈ ಜ್ಞಾನವಿರಬೇಕು. ತಂದೆಯ ನೆನಪಂತೂ ಅವಶ್ಯವಾಗಿ ಬರುತ್ತದೆ ಆದರೆ ಮೂರು ಸಂಬಂಧಗಳನ್ನು ನೆನಪು
ಮಾಡಬೇಕು. ಈ ಜ್ಞಾನವನ್ನು ಮನುಷ್ಯರೇ ತೆಗೆದುಕೊಳ್ಳಲು ಸಾಧ್ಯ, ಪ್ರಾಣಿಗಳಂತೂ ಓದುವುದಿಲ್ಲ.
ಇದನ್ನೂ ಸಹ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ಯಾವುದೇ ವಕೀಲ ಮೊದಲಾದ
ವಿದ್ಯೆಯಿರುವುದಿಲ್ಲ. ತಂದೆಯು ಇಲ್ಲಿಯೇ ನಿಮ್ಮನ್ನು ಸಂಪನ್ನರನ್ನಾಗಿ ಮಾಡುತ್ತಿದ್ದಾರೆ ಅಂದಾಗ
ಎಲ್ಲರೂ ರಾಜರಾಗುವುದಿಲ್ಲ. ವ್ಯಾಪಾರವು ನಡೆಯುತ್ತಿರುತ್ತದೆ ಆದರೆ ಅಲ್ಲಿ ನಿಮಗೆ ಅಪಾರ
ಧನವಿರುತ್ತದೆ. ನಷ್ಟವಾಗುವ ನಿಯಮವೇ ಇಲ್ಲ. ಕಳ್ಳತನವೂ ಸಹ ಅಲ್ಲಿ ಆಗುವುದಿಲ್ಲ, ಹೆಸರೇ ಆಗಿದೆ -
ಸ್ವರ್ಗ ನಾವು ಅಂತಹ ಸ್ವರ್ಗದಲ್ಲಿದ್ದೆವು ನಂತರ ಪುನರ್ಜನ್ಮಗಳನ್ನು ತೆಗೆದುಕೊಳ್ಳುತ್ತಾ-
ತೆಗೆದುಕೊಳ್ಳುತ್ತಾ ಕೆಳಗಿಳಿಯುತ್ತೇವೆಂದು ಈಗ ನೀವು ಮಕ್ಕಳಿಗೆ ಸ್ಮೃತಿ ಬಂದಿದೆ. ಯಾರು 84
ಜನ್ಮಗಳನ್ನು ತೆಗೆದುಕೊಂಡಿದ್ದಾರೆಯೋ ಅವರಿಗೇ ತಂದೆಯು ಕಥೆಯನ್ನು ತಿಳಿಸುತ್ತಾರೆ. 84 ಜನ್ಮಗಳನ್ನು
ತೆಗೆದುಕೊಳ್ಳದಿರುವವರನ್ನೇ ಮಾಯೆಯು ಸೋಲಿಸುತ್ತದೆ. ಇದನ್ನೂ ಸಹ ತಂದೆಯು ತಿಳಿಸುತ್ತಿರುತ್ತಾರೆ.
ಎಷ್ಟು ದೊಡ್ಡ ಮಾಯೆಯ ಬಿರುಗಾಳಿಯಾಗಿದೆ, ಅನೇಕರನ್ನು ಮಾಯೆಯು ಸೋಲಿಸುವ ಪ್ರಯತ್ನಪಡುತ್ತದೆ.
ಮುಂದೆಹೋದಂತೆ ನೀವು ಬಹಳಷ್ಟು ಓದುತ್ತೀರಿ, ಕೇಳುತ್ತೀರಿ. ತಂದೆಯಬಳಿ ಎಲ್ಲರ
ಭಾವಚಿತ್ರಗಳಿದ್ದಿದ್ದರೆ ಇವರು ಇಷ್ಟು ದಿನಗಳಿದ್ದರು, ತಂದೆಯ ಮಗುವಾಗಿ ಮತ್ತೆ ಮಾಯೆಯು
ತಿಂದುಬಿಟ್ಟಿತು ಎಂದು ವಿಚಿತ್ರವನ್ನು ತೋರಿಸುತ್ತಿದ್ದರು. ಸತ್ತುಹೋದರೆಂದರೆ ಹೋಗಿ ಮಾಯೆಯ ಜೊತೆ
ಸೇರಿದರು. ಇಲ್ಲಿ ಈ ಸಮಯದಲ್ಲಿ ಯಾರಾದರೂ ಶರೀರಬಿಡುತ್ತಾರೆಂದರೆ ಇದೇ ಪ್ರಪಂಚಕ್ಕೆ ಬಂದು
ಜನ್ಮಪಡೆಯುತ್ತಾರೆ. ನೀವು ಶರೀರಬಿಟ್ಟರೆ ತಂದೆಯ ಜೊತೆ ಬೇಹದ್ದಿನ ಮನೆಯಲ್ಲಿ ಹೋಗುತ್ತೀರಿ. ಅಲ್ಲಿ
ತಂದೆ- ತಾಯಿ, ಮಕ್ಕಳು ಎಲ್ಲರೂ ಇದ್ದಾರಲ್ಲವೆ. ಪರಿವಾರವೇ ಈ ರೀತಿಯಿರುತ್ತದೆ. ಮೂಲವತನದಲ್ಲಿ ತಂದೆ
ಮತ್ತು ಸಹೋದರರಿರುತ್ತಾರೆ, ಮತ್ತ್ಯಾವ ಸಂಬಂಧವಿರುವುದಿಲ್ಲ. ಇಲ್ಲಿ ತಂದೆ ಮತ್ತು ಸಹೋದರ-
ಸಹೋದರಿಯರಿದ್ದಾರೆ ಮತ್ತೆ ವೃದ್ಧಿಯನ್ನು ಹೊಂದುತ್ತಾ ಹೋಗುತ್ತಾರೆ. ಚಿಕ್ಕಪ್ಪ, ದೊಡ್ಡಪ್ಪ,
ಇತ್ಯಾದಿ ಬಹಳ ಸಂಬಂಧಗಳಾಗಿಬಿಡುತ್ತವೆ. ಈ ಸಂಗಮದಲ್ಲಿ ನೀವು ಪ್ರಜಾಪಿತ ಬ್ರಹ್ಮನ ಮಕ್ಕಳಾದರೆ
ಸಹೋದರ- ಸಹೋದರಿಯರಾಗುತ್ತೀರಿ. ಶಿವತಂದೆಯ ನೆನಪು ಮಾಡುತ್ತೀರೆಂದರೆ ಸಹೋದರ- ಸಹೋದರರಾಗಿದ್ದೀರಿ.
ಇವೆಲ್ಲಾ ಮಾತುಗಳನ್ನು ಬಹಳ ಚೆನ್ನಾಗಿ ನೆನಪು ಮಾಡಬೇಕಾಗಿದೆ, ಅನೇಕ ಮಕ್ಕಳು ಮರೆತುಹೋಗುತ್ತಾರೆ,
ತಂದೆಯಂತೂ ತಿಳಿಸುತ್ತಿರುತ್ತಾರೆ. ಮಕ್ಕಳನ್ನು ತಲೆಯ ಮೇಲೆ ಕೂರಿಸಿಕೊಳ್ಳುವುದು ತಂದೆಯ
ಕರ್ತವ್ಯವಾಗಿದೆ. ಆದ್ದರಿಂದಲೇ ನಮಸ್ತೆ-ನಮಸ್ತೆ ಎನ್ನುತ್ತಿರುತ್ತಾರೆ, ಅರ್ಥವನ್ನೂ ತಿಳಿಸುತ್ತಾರೆ,
ಭಕ್ತಿಮಾಡುವಂತಹ ಸಾಧು-ಸಂತ ಮುಂತಾದವರ್ಯಾರೂ ಸಹ ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸುವುದಿಲ್ಲ.
ಅವರು ಮುಕ್ತಿಗಾಗಿಯೇ ಪುರುಷಾರ್ಥ ಮಾಡುತ್ತಿರುತ್ತಾರೆ. ಅವರು ನಿವೃತ್ತಿಮಾರ್ಗದವರಾಗಿದ್ದಾರೆ,
ಅವರು ರಾಜಯೋಗವನ್ನು ಹೇಗೆ ಕಲಿಸುತ್ತಾರೆ! ರಾಜಯೋಗವು ಪ್ರವೃತ್ತಿಮಾರ್ಗದ್ದಾಗಿದೆ. ಪ್ರಜಾಪಿತ
ಬ್ರಹ್ಮನಿಗೆ ನಾಲ್ಕುಭುಜಗಳನ್ನು ತೋರಿಸುತ್ತಾರೆಂದರೆ ಪ್ರವೃತ್ತಿಮಾರ್ಗವಾಯಿತಲ್ಲವೆ. ಇಲ್ಲಿ
ತಂದೆಯು ಇವರನ್ನು ದತ್ತು ಮಾಡಿಕೊಂಡಿರುವುದರಿಂದ ಬ್ರಹ್ಮಾ-ಸರಸ್ವತಿಯೆಂದು ಹೆಸರಿಟ್ಟಿದ್ದಾರೆ.
ನಾಟಕದಲ್ಲಿ ನೋಡಿ, ಹೇಗೆ ನಿಗಧಿಯಾಗಿದೆ! ವಾನಪ್ರಸ್ಥ ಸ್ಥಿತಿಯಲ್ಲಿಯೇ ಮನುಷ್ಯರು 60 ವರ್ಷಗಳ
ನಂತರ ಗುರುಗಳನ್ನಾಗಿ ಮಾಡಿಕೊಳ್ಳುತ್ತಾರೆ. ಇವರಲ್ಲಿಯೂ 60 ವರ್ಷಗಳ ನಂತರ ತಂದೆಯು ಪ್ರವೇಶ
ಮಾಡಿದ್ದರೆಂದರೆ ತಂದೆ, ಶಿಕ್ಷಕ, ಗುರುವಾಗಿಬಿಟ್ಟರು. ಈಗಂತೂ ನಿಯಮವೇ ಕೆಟ್ಟುಹೋಗಿದೆ.
ಚಿಕ್ಕಮಗುವನ್ನೂ ಸಹ ಗುರು ಮಾಡಿಸಿಬಿಡುತ್ತಾರೆ. ಇವರಂತೂ ನಿರಾಕಾರನಾಗಿದ್ದಾರೆ, ನೀವಾತ್ಮಗಳಿಗೆ
ಇವರು ತಂದೆಯೂ ಆಗುತ್ತಾರೆ, ಶಿಕ್ಷಕ, ಸದ್ಗುರುವೂ ಆಗುತ್ತಾರೆ. ನಿರಾಕಾರಿ ಪ್ರಪಂಚಕ್ಕೆ ಆತ್ಮಗಳ
ಪ್ರಪಂಚವೆಂದು ಹೇಳುತ್ತಾರೆ. ಪ್ರಪಂಚವೇ ಇಲ್ಲವೆಂದು ಹೇಳುವುದಿಲ್ಲ, ಅದಕ್ಕೆ ಶಾಂತಿಧಾಮವೆಂದು
ಹೇಳಲಾಗುತ್ತದೆ, ಅಲ್ಲಿ ಆತ್ಮಗಳಿರುತ್ತಾರೆ. ಒಂದುವೇಳೆ ಪರಮಾತ್ಮನಿಗೆ ನಾಮ-ರೂಪ- ದೇಶ-ಕಾಲವೇ
ಇಲ್ಲವೆಂದರೆ ಮತ್ತೆ ಮಕ್ಕಳೆಲ್ಲಿಂದ ಬರುತ್ತೀರಿ!
ನೀವು ಮಕ್ಕಳೇ ವಿಶ್ವದ
ಇತಿಹಾಸ - ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತದೆ ಎಂದು ತಿಳಿದುಕೊಂಡಿದ್ದೀರಿ. ಚೈತನ್ಯದ್ದೇ
ಇತಿಹಾಸವಿರುತ್ತದೆ. ಭೂಗೋಳವು ಜಡವಸ್ತುವಿಗೆ ಇರುತ್ತದೆ. ನಾವು ಎಲ್ಲಿಯವರೆಗೆ ರಾಜ್ಯ ಮಾಡುತ್ತೇವೆ
ಎಂದು ನೀವಾತ್ಮಗಳಿಗೆ ತಿಳಿದಿದೆ. ಚರಿತ್ರೆಯನ್ನು ಹಾಡಲಾಗುತ್ತದೆ, ಇದಕ್ಕೆ ಕಥೆಯೆಂದು ಹೇಳುತ್ತಾರೆ.
ಭೂಗೋಳವು ದೇಶದ್ದಾಗಿರುತ್ತದೆ, ಚೈತನ್ಯವೇ ರಾಜ್ಯ ಮಾಡಿದರು, ಜಡವಂತೂ ರಾಜ್ಯ ಮಾಡಲಿಲ್ಲ. ಎಷ್ಟು
ಸಮಯದಲ್ಲಿ ಯಾರ ರಾಜ್ಯವಿತ್ತು, ಕ್ರಿಶ್ಚಿಯನ್ನರು ಭಾರತದಲ್ಲಿ ಯಾವಾಗಿನಿಂದ ಎಲ್ಲಿಯವರೆಗೆ ರಾಜ್ಯ
ಮಾಡಿದರು, ಈ ವಿಶ್ವದ ಇತಿಹಾಸ ಭೂಗೋಳವನ್ನು ಯಾರೂ ತಿಳಿದುಕೊಂಡೇ ಇಲ್ಲ. ಸತ್ಯಯುಗಕ್ಕೆ ಲಕ್ಷಾಂತರ
ವರ್ಷಗಳಾಯಿತೆಂದು ಹೇಳುತ್ತಾರೆ. ಅದರಲ್ಲಿ ಯಾರು ರಾಜ್ಯ ಮಾಡಿಹೋದರು, ಎಷ್ಟು ಸಮಯ ರಾಜ್ಯ
ಮಾಡಿದರೆಂದು ಯಾರಿಗೂ ತಿಳಿದಿಲ್ಲ, ಇದಕ್ಕೆ ಚರಿತ್ರೆಯೆಂದು ಹೇಳಲಾಗುತ್ತದೆ. ಆತ್ಮವು ಚೈತನ್ಯ,
ಶರೀರವು ಜಡವಾಗಿದೆ. ಇದೇ ಆಟವೇ ಜಡ ಮತ್ತು ಚೈತನ್ಯದ್ದಾಗಿದೆ. ಮನುಷ್ಯನ ಜೀವನವೇ ಉತ್ತಮವೆಂದು
ಹೇಳಲಾಗುತ್ತದೆ. ಮನುಷ್ಯರ ಜನಸಂಖ್ಯೆಯನ್ನೇ ಎಣಿಕೆ ಮಾಡಲಾಗುತ್ತದೆ, ಪ್ರಾಣಿಗಳ ಎಣಿಕೆ ಮಾಡಲು
ಸಾಧ್ಯವಿಲ್ಲ. ಇಡೀ ಆಟವು ನಿಮ್ಮ ಮೇಲಿದೆ. ಚರಿತ್ರೆ, ಭೂಗೋಳವನ್ನೂ ಸಹ ನೀವು ಕೇಳುತ್ತೀರಿ, ತಂದೆಯು
ಇವರಲ್ಲಿ ಬಂದು ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಇದಕ್ಕೆ ಬೇಹದ್ದಿನ ಇತಿಹಾಸ-ಭೂಗೋಳವೆಂದು
ಹೇಳಲಾಗುತ್ತದೆ. ಈ ಜ್ಞಾನವಿಲ್ಲದಿರುವ ಕಾರಣ
ಎಷ್ಟೊಂದು ಬುದ್ಧಿಹೀನರಾಗಿಬಿಟ್ಟಿದ್ದೀರಿ. ಮನುಷ್ಯರಾಗಿಯೂ ಪ್ರಪಂಚದ ಇತಿಹಾಸ - ಭೂಗೋಳವನ್ನು
ಅರಿತುಕೊಳ್ಳದಿದ್ದರೆ ಆ ಮನುಷ್ಯರು ಏನು ಕೆಲಸಕ್ಕೆ ಬರುತ್ತಾರೆ! ಈಗ ತಂದೆಯ ಮೂಲಕ ನೀವು ವಿಶ್ವದ
ಚರಿತ್ರೆ ಭೂಗೋಳವನ್ನು ಕೇಳುತ್ತಿದ್ದೀರಿ. ಈ ವಿದ್ಯೆಯು ಎಷ್ಟು ಚೆನ್ನಾಗಿದೆ! ಯಾರು ಓದಿಸುತ್ತಾರೆ?
ತಂದೆ. ತಂದೆಯೇ ಶ್ರೇಷ್ಠಾತಿಶ್ರೇಷ್ಠ ಪದವಿಯನ್ನು ಕೊಡಿಸುವವರಾಗಿದ್ದಾರೆ, ಈ ಲಕ್ಷ್ಮೀನಾರಾಯಣ ಅವರ
ಜೊತೆ ಯಾರು ಸ್ವರ್ಗದಲ್ಲಿರುತ್ತಾರೆಯೋ ಅವರದು ಶ್ರೇಷ್ಠಾತಿಶ್ರೇಷ್ಠ ಪದವಿಯಾಗಿದೆಯಲ್ಲವೆ. ಅಲ್ಲಿ
ವಕೀಲ ಮೊದಲಾದ ಕೆಲಸಗಳನ್ನು ಮಾಡುವುದಿಲ್ಲ. ಅಲ್ಲಂತೂ ಕೇವಲ ಕಲಿಯಬೇಕಾಗಿದೆ, ಕಲಿಯದಿದ್ದರೆ ಮನೆ
ಇತ್ಯಾದಿಗಳನ್ನು ಯಾರು ಮಾಡುತ್ತಾರೆ ? ತಾನೇ ಆಗಲು ಬಿಡುವುದಿಲ್ಲ. ಇದೆಲ್ಲಾ ರಹಸ್ಯವು ಈಗ ನೀವು
ಮಕ್ಕಳ ಬುದ್ಧಿಯಲ್ಲಿ ನಂಬರ್ ವಾರ್ ಪುರುಷಾರ್ಥದನುಸಾರ ಇರುತ್ತದೆ. ಈ ಚಕ್ರವು ಹೇಗೆ ಸುತ್ತುತ್ತದೆ?
ಇಷ್ಟೊಂದು ಸಮಯ ನಾವು ರಾಜ್ಯ ಮಾಡುತ್ತಿದ್ದೆವು, ನಂತರ ರಾವಣರಾಜ್ಯದಲ್ಲಿ ಬರುತ್ತೇವೆ ಎಂಬುದೆಲ್ಲವೂ
ನಿಮಗೆ ತಿಳಿದಿದೆ. ನಾವು ರಾವಣರಾಜ್ಯದಲ್ಲಿದ್ದೇವೆ ಎಂಬುದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ.
ತಂದೆಯೇ ನಮ್ಮನ್ನು ರಾವಣರಾಜ್ಯದಿಂದ ಬಿಡಿಸಿ ಎಂದು ಹೇಳುತ್ತಾರೆ. ಕಾಂಗ್ರೆಸ್ಸಿನವರು
ಕ್ರಿಶ್ಚಿಯನ್ನರ ರಾಜ್ಯದಿಂದ ತಮ್ಮನ್ನು ಬಿಡಿಸಿದರು, ಈಗ ತಂದೆಯೇ ನಮ್ಮನ್ನು ಬಿಡಿಸಿ ಎಂದು ಮತ್ತೆ
ಹೇಳುತ್ತಾರೆ. ಅಂದಮೇಲೆ ಈಗ ಸ್ಮೃತಿಗೆ ಬರುತ್ತದೆಯಲ್ಲವೆ. ಇವರು ಹೀಗೇಕೆ ಹೇಳುತ್ತಾರೆ ಎಂಬುದನ್ನು
ತಿಳಿದುಕೊಂಡಿಲ್ಲ. ಈಗ ನಿಮಗೆ ತಿಳಿದಿದೆ - ಇಡೀ ಸೃಷ್ಟಿಯಲ್ಲಿಯೇ ರಾವಣರಾಜ್ಯವಿದೆ. ರಾಮರಾಜ್ಯವು
ಬೇಕೆಂದು ಎಲ್ಲರೂ ಹೇಳುತ್ತಾರೆಂದರೆ ಇದರಿಂದ ಬಿಡಿಸುವವರು ಯಾರು? ಪರಮಾತ್ಮನೇ ನಮ್ಮನ್ನು ಬಿಡಿಸಿ
ಮಾರ್ಗದರ್ಶಕನಾಗಿ ಕರೆದುಕೊಂಡು ಹೋಗುತ್ತಾರೆಂದು ತಿಳಿಯುತ್ತಾರೆ. ಭಾರತವಾಸಿಗಳಿಗೆ ಇಷ್ಟೊಂದು
ಬುದ್ದಿಯಿಲ್ಲ. ಇವರಂತೂ ಸಂಪೂರ್ಣ ತಮೋಪ್ರಧಾನರಾಗಿದ್ದಾರೆ. ಕ್ರಿಶ್ಚಿಯನ್ನರು ಅಷ್ಟೊಂದು
ದುಃಖವನ್ನೂ ತೆಗೆದುಕೊಳ್ಳುವುದಿಲ್ಲ, ಅಷ್ಟು ಸುಖವನ್ನೂ ಪಡೆಯುವುದಿಲ್ಲ. ಭಾರತವಾಸಿಗಳೇ
ಎಲ್ಲರಿಗಿಂತ ಹೆಚ್ಚಿನ ಸುಖಿಯಾಗುತ್ತಾರೆ ಮತ್ತು ದುಃಖಿಯೂ ಆಗಿದ್ದಾರೆ, ಲೆಕ್ಕವಾಗಿದೆಯಲ್ಲವೆ. ಈಗ
ಎಷ್ಟೊಂದು ದುಃಖವಿದೆ! ಯಾರು ಧಾರ್ಮಿಕ ವ್ಯಕ್ತಿಗಳಿದ್ದಾರೆಯೋ ಅವರು ಓ ಗಾಡ್ ಫಾದರ್, ಲಿಬರೇಟರ್
ಎಂದು ನೆನಪು ಮಾಡುತ್ತಾರೆ, ಈಗ ನಿಮ್ಮ ಹೃದಯದಲ್ಲಿಯೂ ಇದೆ – ಬಾಬಾ ಬಂದು ನಮ್ಮ ದುಃಖವನ್ನು ಹರಣ
ಮಾಡಿ, ಅಥವಾ ಸುಖಧಾಮದಲ್ಲಿ ಕರೆದುಕೊಂಡು ಹೋಗಿ, ಶಾಂತಿಧಾಮಕ್ಕೆ ಕರೆದುಕೊಂಡು ಹೋಗಿ ಎಂದು
ಹೇಳುತ್ತಾರೆ ಆದರೆ ಶಾಂತಿಧಾಮ ಮತ್ತು ಸುಖಧಾಮಕ್ಕೆ ಕರೆದುಕೊಂಡು ಹೋಗಿ ಎಂದು ಹೇಳುತ್ತೀರಿ. ಈಗ
ತಂದೆಯು ಬಂದಿದ್ದಾರೆಂದರೆ ಬಹಳ ಖುಷಿಯಾಗಬೇಕು. ಭಕ್ತಿಮಾರ್ಗದಲ್ಲಿ ಎಷ್ಟೊಂದು ಕನರಸವಿದೆ, ಅದರಲ್ಲಿ
ಯಥಾರ್ಥ ಮಾತುಗಳಂತೂ ಯಾವುದೂ ಇಲ್ಲ. ಹಿಟ್ಟಿನಲ್ಲಿ ಉಪ್ಪಿನಷ್ಟು ಸತ್ಯವಿದೆ. ಚಂಡಿಕ ದೇವಿಯ
ಮೇಳವಾಗುತ್ತದೆ, ಈಗ ಚಂಡಿಕಾ ದೇವಿಯ ಮೇಳವು ಏಕೆ ಆಗುತ್ತದೆ? ಯಾರಿಗೆ ಚಂಡಿಕಾ ಎಂದು ಹೇಳಲಾಗುತ್ತದೆ?
ತಂದೆಯು ತಿಳಿಸಿದ್ದಾರೆ - ಇಲ್ಲಿಂದಲೇ ಚಂಡಾಲರ ಜನ್ಮವನ್ನೂ ತೆಗೆದುಕೊಳ್ಳುತ್ತಾರೆ. ಇಲ್ಲಿ
ತಿಂದು-ಕುಡಿದು ಕೊಟ್ಟಮೇಲೂ ಸಹ ಮತ್ತೆ ನಾವು ಏನು ಕೊಟ್ಟೆವು ಅದನ್ನು ಕೊಡಿ, ನಾವಿದನ್ನು
ಒಪ್ಪುವುದಿಲ್ಲ ಎಂದು ಹೇಳುತ್ತಾರೆ. ಸಂಶಯವು ಬಂದುಬಿಡುತ್ತದೆಯೆಂದರೆ ಅವರು ಹೋಗಿ ಏನಾಗುತ್ತಾರೆ?
ಇಂತಹ ಚಂಡಿಕಾ ದೇವಿಯ ಮೇಳವು ಆಗುತ್ತದೆ ಏಕೆಂದರೆ ಸತ್ಯಯುಗದಲ್ಲಂತೂ ಹೋಗುತ್ತಾರಲ್ಲವೆ!
ಸ್ವಲ್ಪಸಮಯ ಸಹಯೋಗಿಗಳಾದ್ದರಿಂದ ಸ್ವರ್ಗದಲ್ಲಿ ಬಂದುಬಿಡುತ್ತಾರೆ. ಆ ಭಕ್ತರಿಗಂತೂ ಗೊತ್ತೇ ಇಲ್ಲ,
ಜ್ಞಾನವಂತೂ ಯಾರ ಬಳಿಯೂ ಇಲ್ಲ. ಅದು ಚಿತ್ರಗಳ ಗೀತೆಯಾಗಿದೆ, ಎಷ್ಟೊಂದು ಹಣವನ್ನು ಸಂಪಾದಿಸುತ್ತಾರೆ.
ಇತ್ತೀಚಿನ ಚಿತ್ರಗಳನ್ನು ಎಲ್ಲರೂ ಪ್ರೀತಿಸುತ್ತಾರೆ. ಅದಕ್ಕೆ ಕಲೆಯೆಂದು ತಿಳಿಯುತ್ತಾರೆ.
ದೇವತೆಗಳ ಚಿತ್ರಗಳು ಹೇಗಿರುತ್ತವೆ ಎಂದು ಮನುಷ್ಯರಿಗೇನು ಗೊತ್ತು? ನೀವು ಮೂಲತಃ ಹೇಗಿದ್ದೀರಿ
ನಂತರ ಏನಾಗಿಬಿಟ್ಟಿದ್ದೀರಿ? ಅಲ್ಲಿ ಯಾರು ಅಂಧರು, ಕಿವುಡರು ಇರುವುದಿಲ್ಲ. ದೇವತೆಗಳಿಗೆ
ಸ್ವಾಭಾವಿಕ ಸೌಂದರ್ಯವಿರುತ್ತದೆ ಆದ್ದರಿಂದ ಎಲ್ಲವನ್ನೂ ತಿಳಿಸಿ ಮತ್ತೆ ಹೇಳುತ್ತಾರೆ - ಮಕ್ಕಳೇ,
ತಂದೆಯನ್ನು ನೆನಪು ಮಾಡಿ, ತಂದೆಯು ತಂದೆಯೂ ಆಗಿದ್ದಾರೆ, ಶಿಕ್ಷಕ, ಸದ್ಗುರುವೂ ಆಗಿದ್ದಾರೆ. ಮೂರೂ
ರೂಪಗಳಲ್ಲಿ ನೆನಪು ಮಾಡಿ ಆಗ ಮೂರು ಆಸ್ತಿಗಳು ಸಿಗುತ್ತವೆ. ಅಂತಿಮದಲ್ಲಿ ಬರುವವರು ಮೂರೂ
ರೂಪಗಳಲ್ಲಿ ನೆನಪು ಮಾಡಲು ಸಾಧ್ಯವಿಲ್ಲ ಮತ್ತೆ ಭಕ್ತಿಯಲ್ಲಿ ಹೊರಟುಹೋಗುತ್ತಾರೆ.
ತಂದೆಯು ತಿಳಿಸುತ್ತಾರೆ
- ಸೂಕ್ಷ್ಮ ವತನದಲ್ಲಿ ಏನೆಲ್ಲವನ್ನೂ ನೀವು ನೋಡುತ್ತೀರೋ ಎಲ್ಲವೂ ಸಾಕ್ಷಾತ್ಕಾರದ ಮಾತುಗಳಾಗಿವೆ.
ಬಾಕಿ ಚರಿತ್ರೆ-ಭೂಗೋಳವೆಲ್ಲವೂ ಇಲ್ಲಿಯದಾಗಿದೆ. ಇದರ ಆಯಸ್ಸು ಯಾರಿಗೂ ತಿಳಿದಿಲ್ಲ. ಈಗ ನೀವು
ಮಕ್ಕಳಿಗೆ ತಂದೆಯು ತಿಳಿಸಿದ್ದಾರೆ ಮತ್ತೆ ನೀವು ಯಾರಿಗಾದರೂ ಇದನ್ನು ತಿಳಿಸಬಹುದು. ಮೊಟ್ಟಮೊದಲು
ತಂದೆಯ ಪರಿಚಯ ಕೊಡಬೇಕಾಗಿದೆ. ಅವರು ಬೇಹದ್ದಿನ ಪಾರಲೌಕಿಕ ತಂದೆಯಾಗಿದ್ದಾರೆ, ಲೌಕಿಕ ತಂದೆಗೆ
ಪರಮಾತ್ಮನೆಂದು ಹೇಳಲಾಗುವುದಿಲ್ಲ. ಪರಮಾತ್ಮನು ಒಬ್ಬರೇ ಆಗಿದ್ದಾರೆ. ಅವರಿಗೆ ಭಗವಂತನೆಂದು
ಹೇಳಲಾಗುತ್ತದೆ. ಆವರು ಜ್ಞಾನಪೂರ್ಣನಾಗಿದ್ದಾರೆ ಆದ್ದರಿಂದ ಜ್ಞಾನವನ್ನು ಕಲಿಸುತ್ತಾರೆ. ಈ
ಈಶ್ವರೀಯ ಜ್ಞಾನವು ಆದಾಯದ ಮೂಲವಾಗಿದೆ. ಜ್ಞಾನವೂ ಸಹ ಉತ್ತಮ, ಮಧ್ಯಮ, ಕನಿಷ್ಟವಿರುತ್ತದೆಯಲ್ಲವೆ!
ತಂದೆಯು ಶ್ರೇಷ್ಠಾತಿಶ್ರೇಷ್ಠನಾಗಿದ್ದಾರೆ ಅಂದಾಗ ವಿದ್ಯೆಯೂ ಶ್ರೇಷ್ಠಾತಿಶ್ರೇಷ್ಠವಾಗಿದೆ. ಪದವಿಯೂ
ಶ್ರೇಷ್ಠವಾಗಿದೆ. ಚರಿತ್ರೆ- ಭೂಗೋಳವನ್ನಂತೂ ಬೇಗನೆ ಅರಿತುಕೊಳ್ಳುತ್ತಾರೆ. ಉಳಿದಂತೆ
ನೆನಪಿನಯಾತ್ರೆಯಲ್ಲಿ ಯುದ್ದವು ನಡೆಯುತ್ತದೆ. ಇದರಲ್ಲಿ ನೀವು ಸೋಲುತ್ತೀರೆಂದರೆ ಜ್ಞಾನದಲ್ಲಿಯೂ
ಸೋಲುತ್ತೀರಿ. ಸೋತು ಓಡಿಹೋಗುತ್ತಾರೆಂದರೆ ಜ್ಞಾನದಲ್ಲಿಯೂ ಓಡಿಹೋಗುತ್ತಾರೆ. ಪುನಃ ಹೇಗಿದ್ದವರು
ಹಾಗೆಯೇ ಉಳಿಯುತ್ತಾರೆ, ಇನ್ನೂ ಕನಿಷ್ಟಮಟ್ಟಕ್ಕೆ ಇಳಿಯುತ್ತಾರೆ. ತಂದೆಯ ಮುಂದೆ ಚಲನೆಯಿಂದಲೇ
ದೇಹಾಭಿಮಾನವು ತಕ್ಷಣ ಪ್ರಸಿದ್ಧವಾಗಿಬಿಡುತ್ತದೆ. ಬ್ರಾಹ್ಮಣರ ಮಾಲೆಯೂ ಇದೆ ಆದರೆ ನಾವು ಹೇಗೆ
ನಂಬರ್‌ವಾರ್ ಇಲ್ಲಿ ಕುಳಿತುಕೊಳ್ಳುವುದೆಂದು ಕೆಲವರಿಗೆ ತಿಳಿದೇ ಇಲ್ಲ, ದೇಹಾಭಿಮಾನವಿದೆಯಲ್ಲವೆ!
ನಿಶ್ಚಯವುಳ್ಳವರಿಗೆ ಅವಶ್ಯವಾಗಿ ಅಪಾರ ಖುಷಿಯಿರುವುದು. ನಾನು ಈ ಶರೀರವನ್ನು ಬಿಟ್ಟುಹೋಗಿ
ರಾಜಕುಮಾರನಾಗುತ್ತೇನೆಂದು ಯಾರಿಗೆ ನಿಶ್ಚಯವಿದೆ? (ಎಲ್ಲರೂ ಕೈಯನ್ನೆತ್ತಿದರು) ಮಕ್ಕಳಲ್ಲಿ
ಎಷ್ಟೊಂದು ಖುಷಿಯಿರುತ್ತದೆ! ನಿಮ್ಮೆಲ್ಲರಲ್ಲಿಯೂ ಪೂರ್ಣ ದೈವೀಗುಣಗಳಿರಬೇಕು. ಯಾವಾಗ
ನಿಶ್ಚಯವಿದೆಯೆಂದರೆ ನಿಶ್ಚಯಬುದ್ಧಿಯವರು ವಿಜಯಮಾಲೆಯಲ್ಲಿ ಪೋಣಿಸಲ್ಪಡುತ್ತಾರೆ ಅಂದರೆ
ರಾಜಕುಮಾರನಾಗುತ್ತಾರೆ. ಇಂತಹ ಒಂದು ದಿನವು ಅವಶ್ಯವಾಗಿ ಬರುತ್ತದೆ, ವಿದೇಶಿಯರು ಎಲ್ಲರಿಗಿಂತ
ಹೆಚ್ಚಿನದಾಗಿ ಅಬುಪರ್ವತಕ್ಕೆ ಬರುತ್ತಾರೆ, ಮತ್ತೆಲ್ಲಾ ತೀರ್ಥಯಾತ್ರೆಗಳನ್ನು ಬಿಟ್ಟುಬಿಡುತ್ತಾರೆ.
ಭಾರತದ ರಾಜಯೋಗವನ್ನು ಕಲಿಯಬೇಕು, ಯಾರು ಸ್ವರ್ಗವನ್ನು ಸ್ಥಾಪನೆ ಮಾಡಿದರೆಂದು ಅವರು
ತಿಳಿಯಬಯಸುತ್ತಾರೆ. ಪುರುಷಾರ್ಥ ಮಾಡಲಾಗುತ್ತದೆ, ಕಲ್ಪದ ಹಿಂದೆ ಇದು ಆಗಿದ್ದರೆ ಅವಶ್ಯವಾಗಿ
ಮ್ಯೂಸಿಯಂ ಆಗಿಬಿಡುತ್ತದೆ. ತಿಳಿಸಬೇಕು ಆಗ ಇಂತಹ ಪ್ರದರ್ಶನಿಯನ್ನು ಸದಾಕಾಲಕ್ಕಾಗಿ ಇಡಬಯಸುತ್ತೇವೆ.
ನಾಲೈದು ವರ್ಷಗಳಿಗಾಗಿ ಭೋಗ್ಯಕ್ಕೆ ಮನೆಯನ್ನು ತೆಗೆದುಕೊಂಡಾದರೂ ಇರಬಹುದು, ನಾವು ಸುಖಧಾಮವನ್ನಾಗಿ
ಮಾಡಲು ಭಾರತದ ಸೇವೆಯನ್ನು ಮಾಡುತ್ತೇವೆ. ಇದರಲ್ಲಿ ಅನೇಕರ ಕಲ್ಯಾಣವಾಗುವುದು. ಒಳ್ಳೆಯದು-
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್‌ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಅಪಾರ
ಖುಷಿಯಲ್ಲಿರಲು ಸದಾ ಸ್ಮೃತಿಯಿರಲಿ - ಸ್ವಯಂ ತಂದೆಯೇ ನಮ್ಮ ಶೃಂಗಾರ ಮಾಡುತ್ತಿದ್ದಾರೆ. ಅವರು ನಮಗೆ
ಅಪಾರ ಧನವನ್ನು ಕೊಡುತ್ತಾರೆ. ನಾವು ಹೊಸಪ್ರಪಂಚ, ಅಮರಪುರಿಗೆ ಹೋಗುವುದಕ್ಕಾಗಿ ಓದುತ್ತಿದ್ದೇವೆ.
2. ವಿಜಯಮಾಲೆಯಲ್ಲಿ
ಪೋಣಿಸಲ್ಪಡಲು ನಿಶ್ಚಯಬುದ್ದಿಯವರಾಗಿ ದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಕೊಟ್ಟ ವಸ್ತುವನ್ನು
ಹಿಂತಿರುಗಿ ತೆಗೆದುಕೊಳ್ಳುವ ಸಂಕಲ್ಪವು ಎಂದಿಗೂ ಬರಬಾರದು. ಸಂಶಯಬುದ್ಧಿಯವರಾಗಿ ತಮ್ಮ ಪದವಿಯನ್ನು
ಕಳೆದುಕೊಳ್ಳಬಾರದು.
ವರದಾನ:
ಕ್ರೋಧಿ
ಆತ್ಮರಿಗೆ ದಯೆಯ ಶೀತಲ ಜಲದ ಮೂಲಕ ಗುಣ ದಾನ ಕೊಡುವಂತಹ ವರದಾನಿ ಆತ್ಮ ಭವ.
ತಮ್ಮ ಮುಂದೆ ಯಾರೇ
ಕ್ರೋಧಾಗ್ನಿಯಲ್ಲಿ ಸುಡುತ್ತಿರುವವರು ಬಂದರು, ತಮಗೆ ನಿಂದನೆ ಮಾಡಿದರು, ಗ್ಲಾನಿ ಮಾಡಿದರು.... ಆಗ
ಇಂತಹ ಆತ್ಮನಿಗೂ ಸಹ ತಮ್ಮ ಶುಭ ಭಾವನೆ, ಶುಭ ಕಾಮನೆಯ ಮೂಲಕ, ವೃತ್ತಿಯ ಮೂಲಕ, ಸ್ಥಿತಿಯ ಮೂಲಕ ಗುಣ
ದಾನ ಅಥವಾ ಸಹನಶೀಲತೆಯ ಶಕ್ತಿಯ ವರದಾನವನ್ನು ಕೊಡಿ. ಕ್ರೋಧಿ ಆತ್ಮನು ಪರವಶನಾಗಿದ್ದಾನೆ, ಇಂತಹ
ಪರವಶ ಆತ್ಮನಿಗೆ ದಯೆಯ ಶೀತಲ ಜಲದ ಮೂಲಕ ಶಾಂತ ಮಾಡಿ ಬಿಡಿ, ಇದು ತಾವು ವರದಾನಿ ಆತ್ಮರ
ಕರ್ತವ್ಯವಾಗಿದೆ. ಚೈತನ್ಯದಲ್ಲಿ ಯಾವಾಗ ತಮ್ಮಲ್ಲಿ ಇಂತಹ ಸಂಸ್ಕಾರವು ತುಂಬಿರುತ್ತದೆ. ಆಗಲೇ ಜಡ
ಚಿತ್ರಗಳ ಮೂಲಕ ಭಕ್ತರಿಗೆ ವರದಾನವು ಸಿಗುತ್ತದೆ.
ಸ್ಲೋಗನ್:
ನೆನಪಿನ ಮೂಲಕ
ಸರ್ವಶಕ್ತಿಗಳ ಖಜಾನೆಯನ್ನು ಅನುಭವ ಮಾಡುವವರೇ ಶಕ್ತಿ ಸಂಪನ್ನರಾಗುತ್ತಾರೆ.