12.11.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಡ್ರಾಮಾದ ಆಟವನ್ನು ತಿಳಿದುಕೊಂಡಿದ್ದೀರಿ ಆದ್ದರಿಂದ ಅಭಿನಂದನೆಗಳನ್ನು ಹೇಳುವ ಅವಶ್ಯಕತೆಯೂ ಇಲ್ಲ”
ಪ್ರಶ್ನೆ:
ಸೇವಾಧಾರಿ
ಮಕ್ಕಳಲ್ಲಿ ಯಾವ ಹವ್ಯಾಸವು ಖಂಡಿತವಾಗಿಯೂ ಇರಬಾರದು?
ಉತ್ತರ:
ಬೇಡುವ ಹವ್ಯಾಸ.
ನೀವು ತಂದೆಯಿಂದ ಆಶೀರ್ವಾದ ಅಥವಾ ಕೃಪೆ ಇತ್ಯಾದಿಯನ್ನು ಬೇಡುವ ಅವಶ್ಯಕತೆಯಿಲ್ಲ. ನೀವು ಯಾರಿಂದಲೂ
ಹಣವನ್ನು ಬೇಡುವಂತಿಲ್ಲ. ಬೇಡುವುದಕ್ಕಿಂತ ಸಾಯುವುದು ಲೇಸು. ನಿಮಗೆ ತಿಳಿದಿದೆ - ಡ್ರಾಮಾನುಸಾರ
ಕಲ್ಪದ ಹಿಂದೆ ಯಾರು ಬೀಜವನ್ನು ಬಿತ್ತಿದ್ದರೋ ಅವರು ಅವಶ್ಯವಾಗಿ ಬಿತ್ತುವರು. ಯಾರು ತಮ್ಮ ಭವಿಷ್ಯ
ಪದವಿಯನ್ನು ಶ್ರೇಷ್ಠ ಮಾಡಿಕೊಳ್ಳಬೇಕೋ ಅವರು ಅವಶ್ಯವಾಗಿ ಸಹಯೋಗಿಗಳಾಗುತ್ತಾರೆ. ಕೇವಲ ಸರ್ವೀಸ್
ಮಾಡುವುದು ನಿಮ್ಮ ಕರ್ತವ್ಯವಾಗಿದೆ. ನೀವು ಯಾರಿಂದಲೂ ಬೇಡುವಂತಿಲ್ಲ. ಭಕ್ತಿಯಲ್ಲಿ ಬೇಡಲಾಗುತ್ತದೆ,
ಜ್ಞಾನದಲ್ಲಲ್ಲ.
ಗೀತೆ:
ನನಗೆ ಆಶ್ರಯ
ನೀಡುವವರು...................
ಓಂ ಶಾಂತಿ.
ಈಗ ತಂದೆ, ಶಿಕ್ಷಕ, ಸದ್ಗುರುವಿನ ಪ್ರತಿಯೂ ಸಹ ಅಭಿನಂದನೆಯ ಶಬ್ಧವು ಮಕ್ಕಳಲ್ಲಿ ಬರಬಾರದು ಏಕೆಂದರೆ
ಮಕ್ಕಳಿಗೆ ತಿಳಿದಿದೆ - ಈ ಆಟವು ಮಾಡಲ್ಪಟ್ಟಿದೆ, ಇದರಲ್ಲಿ ಅಭಿನಂದನೆಯ ಮಾತಿಲ್ಲ. ಇದನ್ನೂ ಸಹ
ಮಕ್ಕಳು ಡ್ರಾಮಾನುಸಾರ ತಿಳಿದುಕೊಂಡಿದ್ದೀರಿ. ಡ್ರಾಮಾ ಶಬ್ಧವೂ ಸಹ ನೀವು ಮಕ್ಕಳ ಬುದ್ಧಿಯಲ್ಲಿ
ಬರುತ್ತದೆ. ಆಟ ಎಂಬ ಶಬ್ಧವನ್ನು ಹೇಳಿದ ಕೂಡಲೆ ಆಟವೆಲ್ಲವೂ ನಿಮ್ಮ ಬುದ್ಧಿಯಲ್ಲಿ ಬಂದು ಬಿಡುತ್ತದೆ
ಅಂದರೆ ನೀವು ತಾವಾಗಿಯೇ ಸ್ವದರ್ಶನ ಚಕ್ರಧಾರಿಗಳಾಗಿ ಬಿಡುತ್ತೀರಿ. ಮೂರೂ ಲೋಕಗಳ ಜ್ಞಾನವು ನಿಮಗೆ
ಸ್ಮೃತಿಗೆ ಬಂದು ಬಿಡುತ್ತದೆ. ಮೂಲವತನ, ಸೂಕ್ಷ್ಮವತನ, ಸ್ಥೂಲವತನ. ಈಗ ಈ ಆಟವು ಮುಕ್ತಾಯವಾಗುತ್ತದೆ.
ತಂದೆಯು ಬಂದು ನಿಮ್ಮನ್ನು ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತಾರೆ. ಮೂರೂ ಕಾಲಗಳು, ಮೂರೂ ಲೋಕಗಳು,
ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಕಾಲವೆಂದು ಸಮಯಕ್ಕೆ ಹೇಳಲಾಗುತ್ತದೆ. ಇವೆಲ್ಲಾ
ಮಾತುಗಳನ್ನು ನೀವು ಬರೆದುಕೊಳ್ಳದಿದ್ದರೆ ನೆನಪಿರುವುದಿಲ್ಲ. ನೀವು ಮಕ್ಕಳು ಬಹಳಷ್ಟು ಅಂಶಗಳನ್ನು
ಮರೆತು ಹೋಗುತ್ತೀರಿ. ಡ್ರಾಮಾದ ಕಾಲಾವಧಿಯನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ನೀವು ತ್ರಿನೇತ್ರಿ,
ತ್ರಿಕಾಲದರ್ಶಿಗಳಾಗುತ್ತೀರಿ. ನಿಮಗೆ ಜ್ಞಾನದ ಮೂರನೆಯ ನೇತ್ರವು ಸಿಗುತ್ತದೆ. ಎಲ್ಲದಕ್ಕಿಂತ
ದೊಡ್ಡ ಮಾತೇನೆಂದರೆ ನೀವೀಗ ಆಸ್ತಿಕರಾಗಿ ಬಿಡುತ್ತೀರಿ. ಇಲ್ಲದಿದ್ದರೆ ನೀವು ನಿರ್ಧನಿಕರಾಗಿದ್ದಿರಿ.
ಈ ಜ್ಞಾನವು ನೀವು ಮಕ್ಕಳಿಗೆ ಸಿಗುತ್ತದೆ. ವಿದ್ಯಾರ್ಥಿಗಳ ಬುದ್ಧಿಯಲ್ಲಿ ಸದಾ ಜ್ಞಾನ
ಮಂಥನವಿರುತ್ತದೆ. ಇದು ಜ್ಞಾನವಲ್ಲವೆ. ಡ್ರಾಮಾನುಸಾರ ಸರ್ವಶ್ರೇಷ್ಠ ತಂದೆಯೇ ಜ್ಞಾನವನ್ನು
ಕೊಡುತ್ತಾರೆ. ಡ್ರಾಮಾ ಶಬ್ಧವು ನಿಮ್ಮ ಬಾಯಿಂದಲೇ ಬರುತ್ತದೆ. ಅದರಲಿಯೂ ಯಾವ ಮಕ್ಕಳು ಸೇವೆಯಲ್ಲಿ
ತತ್ಫರರಾಗಿರುತ್ತಾರೆ ಅವರ ಬಾಯಿಂದಲೇ ಬರುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ, ನಾವು
ಅನಾಥರಾಗಿದ್ದೆವು, ಈಗ ಬೇಹದ್ದಿನ ದಣಿ (ಮಾಲೀಕ) ಯು ಸಿಕ್ಕಿದ್ದಾರೆ ಆದ್ದರಿಂದ ಧನಿಕರಾಗಿದ್ದೇವೆ.
ಮೊದಲು ನೀವು ಬೇಹದ್ದಿನ ಅನಾಥರಾಗಿದ್ದಿರಿ. ಬೇಹದ್ದಿನ ತಂದೆಯು ಬೇಹದ್ದಿನ ಸುಖ ಕೊಡುವವರಾಗಿದ್ದಾರೆ.
ಇಂತಹ ಸುಖ ಕೊಡುವ ತಂದೆಯು ಮತ್ತ್ಯಾರೂ ಇರುವುದಿಲ್ಲ. ಹೊಸ ಪ್ರಪಂಚ ಮತ್ತು ಹಳೆಯ ಪ್ರಪಂಚ ಇದೆಲ್ಲವೂ
ನೀವು ಮಕ್ಕಳ ಬುದ್ಧಿಯಲ್ಲಿದೆ ಆದರೆ ಇದನ್ನು ಅನ್ಯರಿಗೂ ಯಥಾರ್ಥ ರೀತಿಯಿಂದ ತಿಳಿಸಿರಿ. ಅದರಿಂದ
ಅವರೂ ಈ ಈಶ್ವರೀಯ ಸೇವೆಯಲ್ಲಿ ತೊಡಗಲಿ. ಪ್ರತಿಯೊಬ್ಬರಿಗೂ ತಮ್ಮ ತಮ್ಮದೇ ಆದ
ಪರಿಸ್ಥಿತಿಗಳಿರುತ್ತವೆ. ಯಾರು ನೆನಪಿನ ಯಾತ್ರೆಯಲ್ಲಿರುವರೋ ಅವರೇ ತಿಳಿಸಬಲ್ಲರು. ನೆನಪಿನಿಂದಲೇ
ಬಲ ಸಿಗುತ್ತದೆಯಲ್ಲವೆ. ತಂದೆಯು ಬಹಳ ಹರಿತವಾದ ಖಡ್ಗವಾಗಿದ್ದಾರೆ ಅಂದಮೇಲೆ ನೀವು ಮಕ್ಕಳೂ ಸಹ
ಯೋಗದಿಂದ ಹರಿತವನ್ನು ತುಂಬಿಸಿಕೊಳ್ಳಬೇಕಾಗಿದೆ. ಯೋಗಬಲದಿಂದಲೇ ನೀವು ವಿಶ್ವದ ರಾಜ್ಯಭಾಗ್ಯವನ್ನು
ಪಡೆಯುತ್ತೀರಿ. ಯೋಗದಿಂದಲೇ ಬಲ ಸಿಗುತ್ತದೆ, ಜ್ಞಾನದಿಂದಲ್ಲ. ಮಕ್ಕಳಿಗೆ ತಿಳಿಸಿದ್ದೇನೆ, ಜ್ಞಾನವು
ಆದಾಯದ ಮೂಲವಾಗಿದೆ. ಯೋಗಕ್ಕೆ ಬಲವೆಂದು ಹೇಳಲಾಗುತ್ತದೆ ಅಂದಾಗ ಯೋಗವು ಒಳ್ಳೆಯದೋ ಅಥವಾ ಜ್ಞಾನವು
ಒಳ್ಳೆಯದೋ? ಯೋಗವೇ ಪ್ರಸಿದ್ಧವಾಗಿದೆ, ಯೋಗ ಅರ್ಥಾತ್ ತಂದೆಯ ನೆನಪು. ತಂದೆಯು ತಿಳಿಸುತ್ತಾರೆ - ಈ
ನೆನಪಿನಿಂದಲೇ ನಿಮ್ಮ ಪಾಪಗಳು ಕಳೆಯುತ್ತವೆ ಆದ್ದರಿಂದ ಯೋಗಕ್ಕಾಗಿಯೇ ತಂದೆಯು ಒತ್ತು ಕೊಟ್ಟು
ಹೇಳುತ್ತಾರೆ. ಜ್ಞಾನವು ಬಹಳ ಸಹಜ ಮಾತಾಗಿದೆ. ಭಗವಾನುವಾಚ - ನಾನು ನಿಮಗೆ ಸಹಜ ಜ್ಞಾನವನ್ನು
ತಿಳಿಸುತ್ತೇನೆ. 84 ಜನ್ಮಗಳ ಚಕ್ರದ ಜ್ಞಾನವನ್ನು ತಿಳಿಸುತ್ತೇನೆ, ಇದರಲ್ಲಿ ಎಲ್ಲವೂ ಬಂದು
ಬಿಡುತ್ತದೆ. ಇತಿಹಾಸ, ಭೂಗೋಳವಲ್ಲವೆ. ಜ್ಞಾನ ಮತ್ತು ಯೋಗ ಎರಡೂ ಸೆಕೆಂಡಿನ ಕೆಲಸವಾಗಿದೆ. ಕೇವಲ
ನಾವಾತ್ಮರಾಗಿದ್ದೇವೆ, ನಾವು ತಂದೆಯನ್ನು ನೆನಪು ಮಾಡಬೇಕಾಗಿದೆ ಆದರೆ ಇದರಲ್ಲಿಯೇ ಪರಿಶ್ರಮವಿದೆ.
ನೆನಪಿನ ಯಾತ್ರೆಯಲ್ಲಿದ್ದಾಗ ಶರೀರದ ವಿಸ್ಮೃತಿಯಾಗುತ್ತಾ ಹೋಗುತ್ತದೆ. ಗಂಟೆ ಗಟ್ಟಲೆ ಹೀಗೆ
ಅಶರೀರಿಯಾಗಿ ಕುಳಿತುಕೊಂಡರೆ ಆಗ ಎಷ್ಟು ಪಾವನರಾಗಿ ಬಿಡುವಿರಿ! ಮನುಷ್ಯರು ಕೆಲವರು 6 ಗಂಟೆ,
ಕೆಲವರು 8 ಗಂಟೆಗಳು ನಿದ್ರೆ ಮಾಡುತ್ತಾರೆ ಅಂದರೆ ಅಶರೀರಿಯಾಗಿ ಬಿಡುತ್ತಾರಲ್ಲವೆ. ಆ ಸಮಯದಲ್ಲಿ
ಯಾವುದೇ ವಿಕರ್ಮವಾಗುವುದಿಲ್ಲ, ಆತ್ಮವು ಸುಸ್ತಾಗಿ ಮಲಗಿ ಬಿಡುತ್ತದೆ ಆದರೆ ಇದರಿಂದ ಪಾಪ
ವಿನಾಶವಾಗುತ್ತದೆಯೆಂದಲ್ಲ. ಇದು ಕೇವಲ ನಿದ್ರೆಯಾಗಿದೆ, ಈ ಸಮಯದಲ್ಲಿ ಯಾವುದೇ
ವಿಕರ್ಮವಾಗುವುದಿಲ್ಲ. ನಿದ್ರೆ ಮಾಡದಿದ್ದರೆ ಪಾಪವನ್ನೇ ಮಾಡುತ್ತಿರುತ್ತಾರೆ ಆದ್ದರಿಂದ ನಿದ್ರೆಯೂ
ಸಹ ಒಂದು ಸುರಕ್ಷತೆಯಾಗಿದೆ. ಇಡೀ ದಿನ ಸೇವೆ ಮಾಡಿ ಆತ್ಮವು ನಾನೀಗ ಮಲಗುತ್ತೇನೆ, ಅಶರೀರಿಯಾಗಿ
ಬಿಡುತ್ತೇನೆಂದು ಹೇಳುತ್ತದೆ. ನಿಮಗೆ ಶರೀರವಿದ್ದರೂ ಸಹ ಅಶರೀರಿಯಾಗಬೇಕಾಗಿದೆ. ನಾನಾತ್ಮ, ಈ
ಶರೀರದಿಂದ ಭಿನ್ನ ಶಾಂತ ಸ್ವರೂಪನಾಗಿದ್ದೇನೆ. ಆತ್ಮದ ಮಹಿಮೆಯನ್ನು ಮನುಷ್ಯರು ಎಂದೂ
ಕೇಳಿರುವುದಿಲ್ಲ. ಆತ್ಮವು ಸತ್ಚಿತ್ ಆನಂದ ಸ್ವರೂಪನಾಗಿದೆ. ಸತ್ಚಿತ್ ಪರಮಾತ್ಮನು ಸತ್ಯ,
ಚೈತನ್ಯನಾಗಿದ್ದಾರೆ, ಸುಖ-ಶಾಂತಿಯ ಸಾಗರನಾಗಿದ್ದಾರೆಂದು ಮಹಿಮೆ ಮಾಡುತ್ತಾರೆ ಮತ್ತೆ ನಿಮಗೆ
ಅದೆಲ್ಲದರಲ್ಲಿ ಮಾಸ್ಟರ್ ಎಂದು ಹೇಳುತ್ತಾರೆ ಅಂದಾಗ ತಂದೆಯು ಯುಕ್ತಿಗಳನ್ನು ತಿಳಿಸುತ್ತಿರುತ್ತಾರೆ.
ಈ ರೀತಿಯೂ ಅಲ್ಲ, ಇಡೀ ದಿನ ನಿದ್ರೆ ಮಾಡಬೇಕೆಂದಲ್ಲ. ನೀವು ನೆನಪಿನಲ್ಲಿದ್ದು ಪಾಪ ವಿನಾಶ
ಮಾಡಿಕೊಳ್ಳಬೇಕಾಗಿದೆ. ಎಷ್ಟು ಸಾಧ್ಯವೋ ತಂದೆಯನ್ನು ನೆನಪು ಮಾಡಬೇಕಾಗಿದೆ. ನಮ್ಮ ತಂದೆಯು
ಮೇಲಿನಿಂದ ದಯೆ ಅಥವಾ ಕೃಪೆ ಮಾಡುತ್ತಾರೆಂದಲ್ಲ. ಅವರ ಗಾಯನವಿದೆ - ದಯಾಹೃದಯಿ ಚಕ್ರವರ್ತಿ.
ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ ಮಾಡುವುದು ಅವರ ಪಾತ್ರವಿದೆ. ಭಕ್ತರು ಮಹಿಮೆ ಮಾಡುತ್ತಾರೆ.
ನೀವು ಮಾಡುವುದಿಲ್ಲ ಆದ್ದರಿಂದ ದಿನ-ಪ್ರತಿದಿನ ಹಾಡು ಮೊದಲಾದುವುಗಳೂ ಸಹ ಕಡಿಮೆಯಾಗತೊಡಗುತ್ತದೆ.
ಶಾಲೆಯಲ್ಲಿ ಎಂದಾದರೂ ಯಾವಾಗಲೂ ಹಾಡುಗಳನ್ನು ಹಾಡುತ್ತಾರೆಯೇ? ಮಕ್ಕಳು ಶಾಂತಿಯಿಂದ
ಕುಳಿತಿರುತ್ತಾರೆ. ಶಿಕ್ಷಕರು ಬಂದಾಗ ಎದ್ದು ನಿಲ್ಲುತ್ತಾರೆ ನಂತರ ಕುಳಿತುಕೊಳ್ಳುತ್ತಾರೆ. ಈ
ತಂದೆಯು ತಿಳಿಸುತ್ತಾರೆ - ನನಗಂತೂ ಓದಿಸುವ ಪಾತ್ರವು ಸಿಕ್ಕಿದೆ ಅಂದಮೇಲೆ ಓದಿಸಲೇಬೇಕಾಗಿದೆ. ನೀವು
ಮಕ್ಕಳು ಎದ್ದು ನಿಲ್ಲುವ ಅವಶ್ಯಕತೆಯೂ ಇಲ್ಲ. ಆತ್ಮವು ಕುಳಿತು ಕೇವಲ ಕೇಳಬೇಕಾಗಿದೆ. ನಿಮ್ಮ
ಮಾತುಗಳು ಇಡೀ ಪ್ರಪಂಚಕ್ಕಿಂತ ಭಿನ್ನವಾಗಿದೆ. ಅಲ್ಲಿ ನೀವೇನು ಎದ್ದು ನಿಲ್ಲಬೇಡಿ ಎಂದು ಮಕ್ಕಳಿಗೆ
ಹೇಳುತ್ತಾರೆಯೇ? ಹೇಳುವುದಿಲ್ಲ. ಅದೆಲ್ಲವನ್ನೂ ಭಕ್ತಿ ಮಾರ್ಗದಲ್ಲಿ ಮಾಡುತ್ತಾರೆ, ಇಲ್ಲಿ ಅಲ್ಲ.
ತಂದೆಯು ಸ್ವಯಂ ತಾನೇ ಎದ್ದು ನಮಸ್ತೆ ಮಾಡುತ್ತಾರೆ. ಶಾಲೆಯಲ್ಲಿ ಮಕ್ಕಳು ತಡವಾಗಿ ಬಂದರೆ ಶಿಕ್ಷಕರು
ಏಟು ಕೊಡುತ್ತಾರೆ ಇಲ್ಲವೆ ಹೊರಗಡೆ ನಿಲ್ಲಿಸುತ್ತಾರೆ ಆದ್ದರಿಂದ ಸಮಯದಲ್ಲಿ ತಲುಪಬೇಕೆಂಬ
ಭಯವಿರುತ್ತದೆ. ಇಲ್ಲಾದರೆ ಭಯದ ಮಾತಿಲ್ಲ. ತಂದೆಯು ತಿಳಿಸುತ್ತಿರುತ್ತಾರೆ - ಮಕ್ಕಳೇ,
ಮುರುಳಿಗಳಂತು ಅವಶ್ಯವಾಗಿ ಸಿಗುತ್ತವೆ ಆದ್ದರಿಂದ ಪ್ರತಿನಿತ್ಯವೂ ಓದಬೇಕಾಗಿದೆ. ಮುರುಳಿಯನ್ನು
ಓದಿದರೆ ಮಾತ್ರ ನಿಮ್ಮದು ಹಾಜರಾತಿ ಹಾಕಲಾಗುತ್ತದೆ, ಇಲ್ಲವೆಂದರೆ ಗೈರು ಹಾಜರಿಯಾಗುವುದು ಏಕೆಂದರೆ
ತಂದೆಯು ತಿಳಿಸುತ್ತಾರೆ - ನಿಮಗೆ ಗುಹ್ಯ-ಗುಹ್ಯವಾದ ಮಾತುಗಳನ್ನು ತಿಳಿಸುತ್ತೇನೆ. ಒಂದುವೇಳೆ ನೀವು
ಮುರುಳಿಯನ್ನು ತಪ್ಪಿಸಿದರೆ ಗುಹ್ಯ ಮಾತುಗಳೂ ಸಹ ತಪ್ಪಿ ಹೋಗುವುದು. ಇದು ಹೊಸ ಮಾತುಗಳಾಗಿವೆ.
ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ನಿಮ್ಮ ಚಿತ್ರಗಳನ್ನು ನೋಡಿಯೇ ಚಕ್ರಿತರಾಗಿ ಬಿಡುತ್ತಾರೆ
ಏಕೆಂದರೆ ಯಾವುದೇ ಶಾಸ್ತ್ರಗಳಲ್ಲಿಯೂ ಇಲ್ಲ. ಭಗವಂತನೇ ಈ ಚಿತ್ರಗಳನ್ನು ಮಾಡಿಸಿದ್ದಾರೆ. ನಿಮ್ಮದು
ಇದು ಚಿತ್ರಶಾಲೆಯಾಗಿದೆ. ಬ್ರಾಹ್ಮಣ ಕುಲದವರು ಯಾರು ದೇವತೆಗಳಾಗುವವರಿದ್ದಾರೆಯೋ ಅವರ ಬುದ್ಧಿಯಲ್ಲಿ
ಈ ಮಾತುಗಳು ಕುಳಿತುಕೊಳ್ಳುತ್ತವೆ. ಹಾ! ಇದು ಸರಿಯಾದ ಜ್ಞಾನವಾಗಿದೆ, ನಾವು ಕಲ್ಪದ ಮೊದಲೂ ಸಹ
ಓದಿದ್ದೆವು, ಅವಶ್ಯವಾಗಿ ಭಗವಂತನೇ ಓದಿಸುತ್ತಾರೆಂದು ಹೇಳುತ್ತಾರೆ.
ಭಕ್ತಿಮಾರ್ಗದ
ಶಾಸ್ತ್ರಗಳಲ್ಲಿ ಮೊಟ್ಟ ಮೊದಲನೆಯದು ಗೀತೆಯಾಗಿದೆ ಏಕೆಂದರೆ ಮೊಟ್ಟ ಮೊದಲನೇ ಧರ್ಮವೇ ಇದಾಗಿದೆ.
ಮತ್ತೆ ಅರ್ಧ ಕಲ್ಪದ ನಂತರ ಅನೇಕ ಶಾಸ್ತ್ರಗಳು ರಚಿಸಲ್ಪಡುತ್ತವೆ. ಮೊದಲು ಇಬ್ರಾಹಿಂನು ಬಂದಾಗ
ಒಬ್ಬರೇ ಇದ್ದರು ನಂತರ ಒಬ್ಬರ ಹಿಂದೆ ಇನ್ನೊಬ್ಬರು, ಇಬ್ಬರ ಹಿಂದೆ ನಾಲ್ಕು ಮಂದಿಯಾದರು. ಆಗ
ಧರ್ಮದ ವೃದ್ಧಿಯಾಗುತ್ತಾ ಆಗುತ್ತಾ ಲಕ್ಷಾಂತರ ಮಂದಿಯಾದಾಗ ಶಾಸ್ತ್ರಗಳು ರಚಿಸಲ್ಪಡುತ್ತವೆ. ಧರ್ಮ
ಸ್ಥಾಪನೆಯಾದ ಅರ್ಧ ಸಮಯದ ನಂತರವೇ ಶಾಸ್ತ್ರಗಳು ರಚನೆಯಾಗುತ್ತವೆ. ಲೆಕ್ಕವಿದೆಯಲ್ಲವೆ. ಮಕ್ಕಳಿಗೆ
ಬಹಳ ಖುಷಿಯಿರಬೇಕು - ತಂದೆಯಿಂದ ನಮಗೆ ಆಸ್ತಿಯು ಸಿಗುತ್ತದೆ. ನೀವು ತಿಳಿದುಕೊಂಡಿದ್ದೀರಿ, ತಂದೆಯು
ನಮಗೆ ಇಡೀ ಸೃಷ್ಟಿಚಕ್ರದ ಜ್ಞಾನವನ್ನು ತಿಳಿಸಿಕೊಡುತ್ತಾರೆ. ಇದು ಬೇಹದ್ದಿನ
ಚರಿತ್ರೆ-ಭೂಗೋಳವಾಗಿದೆ. ಎಲ್ಲರಿಗೆ ತಿಳಿಸಿ, ಇಲ್ಲಿ ವಿಶ್ವದ ಚರಿತ್ರೆ-ಭೂಗೋಳವನ್ನು
ತಿಳಿಸಲಾಗುತ್ತದೆ. ಅದನ್ನು ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ಭಲೆ ವಿಶ್ವದ ನಕ್ಷೆಯನ್ನು
ಬಿಡಿಸುತ್ತಾರೆ ಆದರೆ ಅದರಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವು ಯಾವಾಗ ಇತ್ತು, ಎಷ್ಟು ಸಮಯ ನಡೆಯಿತು
ಎಂಬುದನ್ನು ಎಲ್ಲಿ ತೋರಿಸುತ್ತಾರೆ? ವಿಶ್ವವು ಒಂದೇ ಆಗಿದೆ, ಭಾರತದಲ್ಲಿಯೇ ಇವರು ರಾಜ್ಯಭಾರ ಮಾಡಿ
ಹೋಗಿದ್ದಾರೆ. ಈಗ ಇಲ್ಲ. ಈ ಮಾತುಗಳು ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಅವರು ಕಲ್ಪದ
ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ. ನೀವು ಮಧುರಾತಿ ಮಧುರ ಮಕ್ಕಳಿಗೆ ಹೆಚ್ಚು
ಕಷ್ಟವನ್ನು ಕೊಡುವುದಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಪಾವನರಾಗಬೇಕಾಗಿದೆ.
ಪಾವನರಾಗುವುದಕ್ಕಾಗಿಯೇ ಭಕ್ತಿಮಾರ್ಗದಲ್ಲಿ ಎಷ್ಟೊಂದು ಅಲೆದಾಡುತ್ತೀರಿ! ಈಗ ನಿಮಗೆ ಅರ್ಥವಾಗಿದೆ
- ಹೀಗೆ ಅಲೆಯುತ್ತಾ-ಅಲೆಯುತ್ತಾ 2500 ವರ್ಷಗಳು ಕಳೆದು ಹೋಯಿತು. ಈಗ ಪುನಃ ರಾಜ್ಯಭಾಗ್ಯವನ್ನು
ಕೊಡಲು ತಂದೆಯು ಬಂದಿದ್ದಾರೆ. ನಿಮಗೆ ಇದೇ ನೆನಪಿದೆ. ಹಳೆಯದರಿಂದ ಹೊಸದು ಮತ್ತು ಹೊಸದರಿಂದ ಹಳೆಯದು
ಅವಶ್ಯವಾಗಿ ಆಗುತ್ತದೆ. ನೀವೀಗ ಹಳೆಯ ಭಾರತದ ಮಾಲೀಕರಾಗಿದ್ದೀರಿ ಮತ್ತೆ ಹೊಸ ಭಾರತದ
ಮಾಲೀಕರಾಗುವಿರಿ. ಒಂದು ಕಡೆ ನೋಡಿದರೆ ಭಾರತದ ಬಹಳಷ್ಟು ಮಹಿಮೆ ಹಾಡುತ್ತಿರುತ್ತಾರೆ, ಇನ್ನೊಂದು
ಕಡೆ ಬಹಳ ನಿಂದನೆ ಮಾಡುತ್ತಿರುತ್ತಾರೆ. ಆ ಗೀತೆಯೂ ನಿಮ್ಮ ಬಳಿ ಇದೆ. ನೀವು ತಿಳಿಸುತ್ತೀರಿ - ಈಗ
ಏನೇನು ನಡೆಯುತ್ತಿದೆ, ಇವೆರಡೂ ಗೀತೆಗಳನ್ನು ಕೇಳಿಸಬೇಕು. ನೀವು ಇದನ್ನು ತಿಳಿಸಿ -
ರಾಮರಾಜ್ಯವೆಲ್ಲಿ! ಈಗಿನ ಭಾರತವೆಲ್ಲಿ?
ತಂದೆಯು ಬಡವರ
ಬಂಧುವಾಗಿದ್ದಾರೆ. ಬಡ ಮಕ್ಕಳೇ ಬರುತ್ತಾರೆ. ಸಾಹುಕಾರರಿಗೆ ತಮ್ಮದೇ ಆದ ನಶೆಯಿರುತ್ತದೆ ಅಂದಾಗ
ಕಲ್ಪದ ಮೊದಲು ಯಾರು ಬಂದಿದ್ದರೋ ಅವರೇ ಬರುವರು. ಯಾವುದೇ ಚಿಂತೆಯ ಮಾತಿಲ್ಲ. ಶಿವ ತಂದೆಗೆ ಎಂದೂ
ಯಾವುದೇ ಚಿಂತೆಯಿರಲು ಸಾಧ್ಯವಿಲ್ಲ. ಚಿಂತೆಯು ಈ ದಾದಾರವರಿಗೆ ಇರುವುದು ಏಕೆಂದರೆ ನಾನು ನಂಬರ್ವನ್
ಪಾವನನಾಗಬೇಕೆಂಬ ಚಿಂತೆಯು ಇವರಿಗೆ ಇದೆ. ಇದರಲ್ಲಿ ಗುಪ್ತ ಪುರುಷಾರ್ಥವಿದೆ. ಚಾರ್ಟ್ ಇಟ್ಟಾಗಲೇ
ಇವರ ಪುರುಷಾರ್ಥವು ತೀವ್ರವಾಗಿದೆ ಎಂಬುದು ಅರ್ಥವಾಗುತ್ತದೆ. ತಂದೆಯು ಯಾವಾಗಲೂ ತಿಳಿಸುತ್ತಾ
ಇರುತ್ತಾರೆ - ಮಕ್ಕಳೇ, ಡೈರಿಯನ್ನಿಡಿ. ಅನೇಕ ಮಕ್ಕಳು ಬರೆಯುತ್ತಾರೆ, ಇದರಿಂದ ಬಹಳಷ್ಟು
ಸುಧಾರಣೆಯೂ ಆಗಿದೆ. ಈ ಯುಕ್ತಿಯು ಬಹಳ ಚೆನ್ನಾಗಿದೆ ಆದ್ದರಿಂದ ಎಲ್ಲರೂ ಇದನ್ನು ಅವಶ್ಯವಾಗಿ
ಮಾಡಬೇಕು. ದಿನಚರಿಯನ್ನಿಡುವುದರಿಂದ ನಿಮಗೆ ಬಹಳ ಲಾಭವಾಗುವುದು. ದಿನಚರಿಯನ್ನಿಡುವುದು ಎಂದರೆ
ತಂದೆಯನ್ನು ನೆನಪು ಮಾಡುವುದು, ಅದರಲ್ಲಿ ಎಷ್ಟು ತಂದೆಯ ನೆನಪು ಮಾಡಿದೆವೆಂದು ಬರೆಯಬೇಕಾಗಿದೆ. ಈ
ದಿನಚರಿಯೂ ಸಹ ಸಹಯೋಗಿಯಾಗುವುದು, ಪುರುಷಾರ್ಥವು ಚೆನ್ನಾಗಿರುವುದು. ಎಷ್ಟೊಂದು ಲಕ್ಷಾಂತರ,
ಕೋಟ್ಯಾಂತರ ಡೈರಿಗಳಾಗುತ್ತವೆ, ಎಲ್ಲದಕ್ಕಿಂತ ಮುಖ್ಯ ಮಾತು - ಜ್ಞಾನದ ಎಲ್ಲಾ ಅಂಶಗಳನ್ನು
ಬರೆದಿಟ್ಟುಕೊಳ್ಳಬೇಕಾಗಿದೆ, ಇದನ್ನೆಂದೂ ಮರೆಯಬಾರದು. ಕೇಳುವ ಸಮಯದಲ್ಲಿಯೇ ಡೈರಿಯಲ್ಲಿ
ಬರೆದುಕೊಳ್ಳಬೇಕು. ರಾತ್ರಿಯಲ್ಲಿ ಲೆಕ್ಕವನ್ನು ತೆಗೆಯಬೇಕು. ಆಗ ನಮಗೆ ನಷ್ಟವಾಗುತ್ತಿದೆ ಎಂಬುದು
ಅರ್ಥವಾಗುತ್ತದೆ ಏಕೆಂದರೆ ಈಗ ಜನ್ಮ-ಜನ್ಮಾಂತರದ ವಿಕರ್ಮಗಳನ್ನು ಭಸ್ಮ ಮಾಡಿಕೊಳ್ಳಬೇಕಾಗಿದೆ.
ತಂದೆಯು ಮಾರ್ಗ
ತಿಳಿಸುತ್ತಾರೆ - ಮಕ್ಕಳೇ, ತಮ್ಮ ಮೇಲೆ ದಯೆ ಅಥವಾ ಕೃಪೆ ಮಾಡಿಕೊಳ್ಳಿ. ಶಿಕ್ಷಕರು ಓದಿಸುತ್ತಾರೆ,
ಆಶೀರ್ವಾದವನ್ನು ಮಾಡುವುದಿಲ್ಲ. ಆಶೀರ್ವಾದ, ಕೃಪೆ, ದಯೆ ಇತ್ಯಾದಿಯನ್ನು ಬೇಡುವುದಕ್ಕಿಂತ
ಸಾಯುವುದು ಲೇಸು, ಯಾರಿಂದಲೂ ಹಣವನ್ನೂ ಬೇಡಬಾರದು. ತಂದೆಯು ಇದನ್ನು ಖಡ್ಡಾಯವಾಗಿ ನಿಷೇಧಿಸಿದ್ದಾರೆ.
ತಂದೆಯು ತಿಳಿಸುತ್ತಾರೆ - ಡ್ರಾಮಾನುಸಾರ ಯಾರು ಕಲ್ಪದ ಹಿಂದೆ ಬೀಜವನ್ನು ಬಿತ್ತಿದ್ದರೋ,
ಆಸ್ತಿಯನ್ನು ಪಡೆದಿದ್ದರೋ ಅವರು ತಾವಾಗಿಯೇ ಮಾಡುತ್ತಾರೆ. ನೀವು ಯಾವುದೇ ಕೆಲಸಕ್ಕಾಗಿ ಬೇಡಬೇಡಿ.
ಯಾರು ಮಾಡುವುದಿಲ್ಲವೋ ಅವರು ಪಡೆಯುವುದೂ ಇಲ್ಲ. ಮನುಷ್ಯರು ದಾನ-ಪುಣ್ಯ ಮಾಡುತ್ತಾರೆಂದರೆ ಅದಕ್ಕೆ
ಪ್ರತಿಫಲವು ಸಿಗುತ್ತದೆಯಲ್ಲವೆ. ರಾಜನ ಮನೆ ಅಥವಾ ಸಾಹುಕಾರರ ಮನೆಯಲ್ಲಿ ಜನ್ಮ ಪಡೆಯುತ್ತಾರೆ. ಯಾರು
ಮಾಡಬೇಕಾಗಿದೆಯೋ ಅವರು ತಾವಾಗಿಯೇ ಮಾಡುತ್ತಾರೆ, ನೀವು ಬೇಡುವಂತಿಲ್ಲ. ಕಲ್ಪದ ಹಿಂದೆ ಯಾರೆಷ್ಟು
ಮಾಡಿದ್ದಾರೆಯೋ ಅವರಿಂದ ಡ್ರಾಮಾ ಮಾಡಿಸುತ್ತದೆ. ಇದರಲ್ಲಿ ಬೇಡುವ ಅವಶ್ಯಕತೆಯೇನಿದೆ? ತಂದೆಯಂತೂ
ಹೇಳುತ್ತಿರುತ್ತಾರೆ - ಮಕ್ಕಳೇ, ಸೇವೆಗಾಗಿ ಹುಂಡಿಯಂತೂ ಅವಶ್ಯವಾಗಿ ತುಂಬುತ್ತಿರುತ್ತದೆ. ಹಣ ಕೊಡಿ
ಎಂದು ನಾವು ಕೇಳಬೇಕೆ? ಭಕ್ತಿಮಾರ್ಗದ ಮಾತು ಜ್ಞಾನಮಾರ್ಗದಲ್ಲಿರುವುದಿಲ್ಲ. ಯಾರು ಕಲ್ಪದ ಹಿಂದೆ
ಸಹಯೋಗ ನೀಡಿದ್ದರೋ ಅವರು ಈಗಲೂ ಮಾಡುತ್ತಿರುತ್ತಾರೆ, ತಾವಾಗಿಯೇ ಎಂದೂ ಬೇಡಬಾರದು. ತಂದೆಯು
ತಿಳಿಸುತ್ತಾರೆ - ಮಕ್ಕಳೇ, ನೀವು ಚಂದಾ ಎತ್ತುವಂತಿಲ್ಲ. ಇದನ್ನು ಸನ್ಯಾಸಿಗಳು ಮಾಡುತ್ತಾರೆ,
ಭಕ್ತಿಮಾರ್ಗದಲ್ಲಿ ಸ್ವಲ್ಪ ಮಾಡಿದರೂ ಸಹ ಅದಕ್ಕೆ ಒಂದು ಜನ್ಮಕ್ಕಾಗಿ ಪ್ರತಿಫಲವು ಸಿಗುತ್ತದೆ ಆದರೆ
ಇಲ್ಲಿ ಇದು ಜನ್ಮ-ಜನ್ಮಾಂತರದ ಮಾತಾಗಿದೆ ಅಂದಮೇಲೆ ಜನ್ಮ-ಜನ್ಮಾಂತರಕ್ಕಾಗಿ ಎಲ್ಲವನ್ನು ಸಫಲ
ಮಾಡಿಕೊಳ್ಳುವುದು ಒಳ್ಳೆಯದಲ್ಲವೆ. ಇವರ ಹೆಸರೇ ಆಗಿದೆ – ಭೋಲಾ ಭಂಡಾರಿ. ನೀವು ಪುರುಷಾರ್ಥ ಮಾಡಿ
ಆಗ ವಿಜಯ ಮಾಲೆಯಲ್ಲಿ ಪೋಣಿಸಲ್ಪಡುವಿರಿ. ಭಂಡಾರವು ಭರ್ಪೂರ್, ಕಾಲ ಕಂಟಕ ದೂರ, ಸತ್ಯಯುಗದಲ್ಲಿ
ಎಂದೂ ಅಕಾಲ ಮೃತ್ಯುವಾಗುವುದಿಲ್ಲ. ಇಲ್ಲಿ ಮನುಷ್ಯರು ಮೃತ್ಯುವಿಗೆ ಎಷ್ಟೊಂದು ಹೆದರುತ್ತಾರೆ.
ಏನಾದರೂ ಸ್ವಲ್ಪ ಹೆಚ್ಚು ಕಡಿಮೆಯಾದರೂ ಸಹ ಮೃತ್ಯು ನೆನಪಿಗೆ ಬಂದು ಬಿಡುತ್ತದೆ. ಸತ್ಯಯುಗದಲ್ಲಿ ಈ
ಸಂಕಲ್ಪವೇ ಇರುವುದಿಲ್ಲ. ಇದು ಛೀ ಛೀ ಮೃತ್ಯುಲೋಕವಾಗಿದೆ. ನೀವೀಗ ಅಮರಪುರಿಗೆ ಹೋಗುತ್ತೀರಿ.
ಭಾರತವೇ ಅಮರಲೋಕವಾಗಿತ್ತು, ಈಗ ಮೃತ್ಯುಲೋಕವಾಗಿದೆ.
ನಿಮ್ಮ ಅರ್ಧ ಕಲ್ಪದ
ಸಮಯವು ಪತಿತತನದಿಂದಲೇ ಕಳೆಯಿತು, ಕೆಳಗಿಳಿಯುತ್ತಲೇ ಬಂದಿದ್ದೀರಿ. ಜಗನ್ನಾಥ ಪುರಿಯಲ್ಲಿ ಕೊಳಕು
ಚಿತ್ರಗಳಿವೆ, ಬ್ರಹ್ಮಾ ತಂದೆಯು ಅನುಭವಿಯಲ್ಲವೆ. ನಾಲ್ಕಾರು ಕಡೆ ಸುತ್ತಿ ಬಂದಿದ್ದಾರೆ.
ಸುಂದರರಿಂದ ಕಪ್ಪಾಗಿದ್ದಾರೆ, ಹಳ್ಳಿಯ ಬಾಲಕನಾಗಿದ್ದರು. ವಾಸ್ತವದಲ್ಲಿ ಇಡೀ ಭಾರತವೇ ಒಂದು
ಹಳ್ಳಿಯಾಗಿದೆ. ನೀವು ಹಳ್ಳಿಯ ಬಾಲಕರಾಗಿದ್ದೀರಿ, ಈಗ ನೀವು ತಿಳಿಯುತ್ತೀರಿ - ನಾವು ವಿಶ್ವದ
ಮಾಲೀಕರಾಗುತ್ತೇವೆ. ನಾವಂತೂ ಬಾಂಬೆಯಲ್ಲಿದ್ದೇವೆಂದು ತಿಳಿಯಬೇಡಿ. ಬಾಂಬೆಯೂ ಸಹ ಸ್ವರ್ಗದ ಮುಂದೆ
ಏನೇನೂ ಇಲ್ಲ. ಒಂದು ಕಲ್ಲಿನ ಸಮಾನವೂ ಇಲ್ಲ. ನಾವು ಹಳ್ಳಿಯ ಬಾಲಕರು ನಿರ್ಧನಿಕರಾಗಿ ಬಿಟ್ಟಿದ್ದೇವೆ.
ಈಗ ಪುನಃ ಸ್ವರ್ಗದ ಮಾಲೀಕರಾಗುತ್ತಿದ್ದೇವೆ ಅಂದಮೇಲೆ ಖುಷಿಯಿರಬೇಕು. ಹೆಸರೇ ಆಗಿದೆ - ಸ್ವರ್ಗ.
ಮಹಲುಗಳಲ್ಲಿ ಎಷ್ಟೊಂದು ವಜ್ರ ರತ್ನಗಳು ಪೋಣಿಸಲ್ಪಟ್ಟಿರುತ್ತವೆ. ಸೋಮನಾಥ ಮಂದಿರವು ಎಷ್ಟೊಂದು
ವಜ್ರ ರತ್ನಗಳಿಂದ ತುಂಬಿತ್ತು. ಮೊಟ್ಟ ಮೊದಲು ದ್ವಾರದ ಆರಂಭದಲ್ಲಿ ಶಿವನ ಮಂದಿರಗಳನ್ನೇ
ಕಟ್ಟಿಸುತ್ತೀರಿ, ಎಷ್ಟೊಂದು ಸಾಹುಕಾರನಾಗಿತ್ತು. ಈಗಂತೂ ಭಾರತವು ಒಂದು ಹಳ್ಳಿಯಂತಾಗಿದೆ,
ಸತ್ಯಯುಗದಲ್ಲಿ ಬಹಳ-ಬಹಳ ಸಂಪದ್ಭರಿತವಾಗಿತ್ತು, ಪ್ರಪಂಚದಲ್ಲಿ ಈ ಮಾತುಗಳನ್ನು ನಿಮ್ಮ ವಿನಃ ಯಾರೂ
ತಿಳಿದುಕೊಂಡಿಲ್ಲ. ನಾವು ನೆನ್ನೆಯ ದಿನ ರಾಜರಾಗಿದ್ದೆವು, ಇಂದು ಗುಲಾಮರಾಗಿದ್ದೇವೆ ಮತ್ತೆ
ವಿಶ್ವದ ಮಾಲೀಕರಾಗುತ್ತೇವೆ ಎಂದು ನೀವು ಹೇಳುತ್ತೀರಿ. ನೀವು ಮಕ್ಕಳು ತಮ್ಮ ಭಾಗ್ಯಕ್ಕಾಗಿ
ಅಭಿನಂದನೆಗಳನ್ನು ಹೇಳಬೇಕು, ನಾವು ಪದಮಾಪದಮ ಭಾಗ್ಯಶಾಲಿಗಳಾಗಿದ್ದೇವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ವಿಕರ್ಮಗಳಿಂದ ಪಾರಾಗಲು ಈ ಶರೀರದಲ್ಲಿರುತ್ತಾ ಅಶರೀರಿಯಾಗುವ ಪುರುಷಾರ್ಥ ಮಾಡಬೇಕಾಗಿದೆ. ನೆನಪಿನ
ಯಾತ್ರೆಯು ಇಷ್ಟು ಶಕ್ತಿಶಾಲಿಯಾಗಿರಲಿ ಅದರಿಂದ ಶರೀರದ ವಿಸ್ಮೃತಿಯಾಗುತ್ತಾ ಹೋಗಲಿ.
2. ಜ್ಞಾನದ ಮಂಥನ ಮಾಡಿ
ಆಸ್ತಿಕರಾಗಬೇಕಾಗಿದೆ. ಮುರುಳಿಯನ್ನೆಂದೂ ತಪ್ಪಿಸಬಾರದು. ತನ್ನ ಉನ್ನತಿಗಾಗಿ ಡೈರಿಯಲ್ಲಿ ನೆನಪಿನ
ಚಾರ್ಟನ್ನು ಬರೆದುಕೊಳ್ಳಬೇಕಾಗಿದೆ.
ವರದಾನ:
ಆತ್ಮೀಯ
ಶಕ್ತಿಯನ್ನು ಎಲ್ಲಾ ಕರ್ಮದಲ್ಲಿ ಉಪಯೋಗಿಸಿವಂತಹ ಯುಕ್ತಿಯುಕ್ತ ಜೀವನ್ಮುಕ್ತ ಭವ.
ಈ ಬ್ರಾಹ್ಮಣ ಜೀವನದ
ವಿಶೆಷತೆಯಾಗಿದೆ ಆತ್ಮೀಯತೆ. ಆತ್ಮೀಯತೆಯ ಶಕ್ತಿಯಿಂದಲೇ ಸ್ವಯಂಅನ್ನು ಹಾಗೂ ಸರ್ವರನ್ನೂ ಪರಿವರ್ತನೆ
ಮಾಡಲು ಸಾಧ್ಯ. ಈ ಶಕ್ತಿಯಿಂದ ಅನೇಕ ಪ್ರಕಾರದ ಶಾರೀರಿಕ ಬಂಧನಗಳಿಂದ ಮುಕ್ತಿ ದೊರಕುವುದು. ಆದರೆ
ಯುಕ್ತಿಯುಕ್ತರಾಗಿ ಎಲ್ಲಾ ಕರ್ಮದಲ್ಲಿ ಲೂಸ್(ಸಡಿಲ) ಆಗುವ ಬದಲಾಗಿ, ಆತ್ಮೀಯ ಶಕ್ತಿಯನ್ನು
ಉಪಯೋಗಿಸಿ. ಮನಸಾ-ವಾಚಾ ಮತ್ತು ಕರ್ಮಣ ಮೂರರಲ್ಲಿಯೂ ಜೊತೆ-ಜೊತೆಯಲ್ಲಿ ಆತ್ಮೀಯತೆಯ ಶಕ್ತಿಯ
ಅನುಭವವಾಗಲಿ. ಯಾರು ಈ ಮೂರರಲ್ಲಿಯೂ ಯುಕ್ತಯುಕ್ತರಾಗಿರುತ್ತಾರೆ ಅವರೇ ಜೀವನ್ಮುಕ್ತರಾಗಿರುತ್ತಾರೆ.
ಸ್ಲೋಗನ್:
ಸತ್ಯತೆಯ
ವಿಶೇಷತೆಯ ಮೂಲಕ ಖುಶಿ ಮತ್ತು ಶಕ್ತಿಯ ಅನುಭೂತಿ ಮಾಡುತ್ತಾ ಹೋಗಿ.
ಅವ್ಯಕ್ತ ಸೂಚನೆ:-
ಅಶರೀರಿ ಅಥವಾ ವಿದೇಹಿ ಸ್ಥಿತಿಯ ಅಭ್ಯಾಸ ಹೆಚ್ಚಿಸಿ.
ಏನೆಲ್ಲ ಪರಿಸ್ಥಿತಿಗಳು
ಬರುತ್ತಿದೆ ಹಾಗೂ ಬರಲಿದೆ, ಅದಕ್ಕಾಗಿ ವಿದೇಹಿ ಸ್ಥಿತಿಯ ಅಭ್ಯಾಸ ಬಹಳ ಬೇಕಾಗಿದೆ ಆದ್ದರಿಂದ ಬೇರೆ
ಎಲ್ಲಾ ಮಾತುಗಳನ್ನು ಬಿಟ್ಟು- ಹೀಗಾಗಿ ಬಿಟ್ಟರೆ, ಹಾಗಾಗಿ ಬಿಟ್ಟರೆ.... ಏನು ಆಗುವುದು, ಈ
ಪ್ರಶ್ನೆಗಳನ್ನು ಬಿಟ್ಟು ಬಿಡಿ, ಈಗ ವಿದೇಹಿ ಸ್ಥಿತಿಯ ಅಭ್ಯಾಸವನ್ನು ಹೆಚ್ಚಿಸಿಕೊಳ್ಳಿ. ವಿದೇಹಿ
ಮಕ್ಕಳಿಗೆ ಯಾವುದೇ ಪರಿಸ್ಥಿತಿ ಏರುಪೇರು ಪ್ರಭಾವ ಬೀರುವುದಿಲ್ಲ.