12.12.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯು
ಯಾವ ವಿದ್ಯೆಯನ್ನು ಓದಿಸುತ್ತಾರೆ, ಇದರಲ್ಲಿ ಅಪಾರ ಸಂಪಾದನೆಯಿದೆ ಆದ್ದರಿಂದ ವಿದ್ಯೆಯನ್ನು ಬಹಳ
ಚೆನ್ನಾಗಿ ಓದುತ್ತಾ ಇರಿ, ವಿದ್ಯೆಯೊಂದಿಗೆ ಸಂಬಂಧ (ಲಿಂಕ್) ವು ತುಂಡರಿಸದಿರಲಿ”
ಪ್ರಶ್ನೆ:
ಯಾರು ವಿನಾಶಕಾಲೇ
ವಿಪರೀತಬುದ್ಧಿಯವರಿದ್ದಾರೆ, ಅವರಿಗೆ ನಿಮ್ಮ ಯಾವ ಮಾತನ್ನು ಕೇಳಿ ನಗುಬರುತ್ತದೆ?
ಉತ್ತರ:
ಈಗ ವಿನಾಶಕಾಲವು
ಸಮೀಪವಿದೆ ಎಂದು ಈಗ ನೀವು ಹೇಳುತ್ತೀರಿ, ಇದರಿಂದ ಅವರಿಗೆ ನಗುಬರುತ್ತದೆ. ನಿಮಗೆ ತಿಳಿದಿದೆ -
ತಂದೆಯು ಇಲ್ಲಿ ಸದಾ ಕುಳಿತೇ ಇರುವುದಿಲ್ಲ. ಪಾವನರನ್ನಾಗಿ ಮಾಡುವುದು ತಂದೆಯ ಕರ್ತವ್ಯವಾಗಿದೆ.
ಯಾವಾಗ ಪಾವನರಾಗಿಬಿಡುವರೋ ಆಗ ಈ ಹಳೆಯ ಪ್ರಪಂಚವು ವಿನಾಶವಾಗುವುದು, ಹೊಸ ಪ್ರಪಂಚವು ಬರುವುದು.
ವಿನಾಶಕ್ಕಾಗಿಯೇ ಈ ಯುದ್ಧವಿದೆ. ನೀವು ದೇವತೆಗಳಾದ ಮೇಲೆ ಮತ್ತೆ ಇದೇ ಕಲಿಯುಗೀ ಪತಿತಸೃಷ್ಟಿಯಲ್ಲಿ
ಬರಲು ಸಾಧ್ಯವಿಲ್ಲ.
ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಮಕ್ಕಳೂ ತಿಳಿದುಕೊಂಡಿದ್ದೀರಿ - ನಾವು
ಬಹಳ ಬುದ್ಧಿಹೀನರಾಗಿಬಿಟ್ಟಿದ್ದೆವು. ಮಾಯಾರಾವಣನು ಬುದ್ಧಿಹೀನರನ್ನಾಗಿ ಮಾಡಿಬಿಟ್ಟಿದ್ದನು.
ಇದನ್ನೂ ಸಹ ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಅವಶ್ಯವಾಗಿ ಬರಲೇಬೇಕು ಅಂದಾಗ ಹೊಸ ಸೃಷ್ಟಿಯು
ಸ್ಥಾಪನೆಯಾಗುವುದಿದೆ. ಬ್ರಹ್ಮನ ಮೂಲಕ ಸ್ಥಾಪನೆ, ವಿಷ್ಣುವಿನ ಮೂಲಕ ಪಾಲನೆ, ಶಂಕರನ ಮೂಲಕ
ವಿನಾಶವೆಂದು ಮೂರುಚಿತ್ರಗಳಿವೆ. ಅಂದಾಗ ಮಾಡಿ-ಮಾಡಿಸುವವರು ತಂದೆಯಾಗಿದ್ದಾರಲ್ಲವೆ. ಈ
ತಂದೆಯೊಬ್ಬರೇ ಮಾಡುತ್ತಾರೆ ಮತ್ತು ಮಾಡಿಸುತ್ತಾರೆ. ಮೊದಲಿಗೆ ಯಾರ ಹೆಸರು ಬರುವುದು? ಯಾರು
ಮಾಡುತ್ತಾರೆ ಮತ್ತು ಯಾರ ಮೂಲಕ ಮಾಡಿಸುತ್ತಾರೆಯೋ ಅವರ ಹೆಸರು ಬರುವುದು. ಮಾಡಿ-ಮಾಡಿಸುವವರೆಂದು
ಹೇಳಲಾಗುತ್ತದೆಯಲ್ಲವೆ. ಬ್ರಹ್ಮಾರವರ ಮೂಲಕ ಹೊಸಪ್ರಪಂಚದ ಸ್ಥಾಪನೆ ಮಾಡಿಸುತ್ತಾರೆ. ಇದನ್ನೂ ಸಹ
ಮಕ್ಕಳು ತಿಳಿದುಕೊಂಡಿದ್ದೀರಿ - ನಮ್ಮ ಹೊಸಪ್ರಪಂಚವನ್ನು ನಾವು ಸ್ಥಾಪನೆ ಮಾಡುತ್ತಿದ್ದೇವೆ, ಅದರ
ಹೆಸರೇ ಆಗಿದೆ - ದೇವಿ-ದೇವತೆಗಳ ಪ್ರಪಂಚ. ಸತ್ಯಯುಗದಲ್ಲಿ ದೇವಿ-ದೇವತೆಗಳಿರುತ್ತಾರೆ, ಅನ್ಯ
ಯಾರಿಗೂ ದೇವಿ-ದೇವತೆಗಳೆಂದು ಹೇಳುವುದಿಲ್ಲ, ಅಲ್ಲಿ ಮನುಷ್ಯರಿರುವುದಿಲ್ಲ. ಒಂದು
ದೇವಿ-ದೇವತಾಧರ್ಮವೇ ಇರುತ್ತದೆ ಬೇರೆ ಯಾವುದೂ ಇರುವುದಿಲ್ಲ. ಈಗ ನೀವು ಮಕ್ಕಳು ಸ್ಮೃತಿಯಲ್ಲಿ
ಬಂದಿದ್ದೀರಿ. ಅವಶ್ಯವಾಗಿ ನಾವು ದೇವಿ-ದೇವತೆಗಳಾಗಿದ್ದೆವು, ಸಾಕ್ಷಿಗಳೂ ಇವೆ. ಇಸ್ಲಾಮಿ, ಬೌದ್ಧಿ,
ಕ್ರಿಶ್ಚಿಯನ್ ಮುಂತಾದವರೆಲ್ಲರ ತಮ್ಮ-ತಮ್ಮ ಸಾಕ್ಷಿಗಳಿವೆ. ನಮ್ಮ ರಾಜ್ಯವಿದ್ದಾಗ ಮತ್ತ್ಯಾರೂ
ಇರಲಿಲ್ಲ. ಈಗ ಮತ್ತೆಲ್ಲಾ ಧರ್ಮಗಳಿವೆ, ನಮ್ಮ ದೇವತಾಧರ್ಮವೇ ಇಲ್ಲ. ಗೀತೆಯಲ್ಲಿ ಬಹಳ ಒಳ್ಳೊಳ್ಳೆಯ
ಶಬ್ಧಗಳಿವೆ ಆದರೆ ಯಾರೂ ಅರಿತುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ - ವಿನಾಶಕಾಲೇ
ವಿಪರೀತಬುದ್ಧಿ ಮತ್ತು ವಿನಾಶಕಾಲೇ ಪ್ರೀತಿಬುದ್ಧಿ. ವಿನಾಶವಂತೂ ಈ ಸಮಯದಲ್ಲಿಯೇ ಆಗಬೇಕಾಗಿದೆ.
ತಂದೆಯು ಸಂಗಮಯುಗದಲ್ಲಿ ಬರುತ್ತಾರೆ, ಯಾವಾಗ ಜಗತ್ತಿನ ಪರಿವರ್ತನೆಯಾಗುತ್ತದೆ. ತಂದೆಯು ನೀವು
ಮಕ್ಕಳಿಗೆ ಇದರ ಬದಲಾಗಿ ಎಲ್ಲವನ್ನೂ ಹೊಸದನ್ನೇ ಕೊಡುತ್ತಾರೆ. ಅವರು ಅಗಸನೂ ಆಗಿದ್ದಾರೆ,
ಅಕ್ಕಸಾಲಿಗನೂ ಆಗಿದ್ದಾರೆ, ದೊಡ್ಡವ್ಯಾಪಾರಿಯೂ ಆಗಿದ್ದಾರೆ. ಇಂತಹ ತಂದೆಯೊಂದಿಗೆ ಕೆಲವರೇ ವಿರಳ
ವ್ಯಾಪಾರ ಮಾಡುತ್ತಾರೆ. ಈ ವ್ಯಾಪಾರದಲ್ಲಂತೂ ಅಪಾರ ಲಾಭವಿದೆ. ವಿದ್ಯೆಯಲ್ಲಿ ಬಹಳಷ್ಟು
ಲಾಭವಾಗುತ್ತದೆ. ವಿದ್ಯೆಯು ಸಂಪಾದನೆಯ ಮೂಲವಾಗಿದೆ ಎಂದು ಮಹಿಮೆಯನ್ನು ಮಾಡಲಾಗುತ್ತದೆ. ಅದರಲ್ಲಿಯೂ
ಜನ್ಮ-ಜನ್ಮಾಂತರಕ್ಕಾಗಿ ಸಂಪಾದನೆಯಾಗಿದೆ. ಅಂದಾಗ ಇಂತಹ ವಿದ್ಯೆಯನ್ನು ಬಹಳ ಚೆನ್ನಾಗಿ ಓದಬೇಕಲ್ಲವೆ
ಮತ್ತು ನಿಮಗೆ ಬಹಳ ಸಹಜವಾಗಿಯೂ ಓದಿಸುತ್ತೇನೆ. ಕೇವಲ ಏಳು ದಿನಗಳಕಾಲ ತಿಳಿದುಕೊಂಡು ನಂತರ
ಎಲ್ಲಿಯಾದರೂ ಹೋಗಿ ನಿಮ್ಮ ಬಳಿ ಮುರುಳಿಯು ಬರುತ್ತಿರುತ್ತದೆ, ಇದರಿಂದ ಎಂದೂ ವಿದ್ಯೆಯೊಂದಿಗಿನ
ಸಂಬಂಧವು ತುಂಡರಿಸುವುದಿಲ್ಲ. ಇದು ಪರಮಾತ್ಮನ ಜೊತೆ ಆತ್ಮಗಳ ಸಂಬಂಧವಾಗಿದೆ. ‘ವಿನಾಶಕಾಲೇ
ವಿಪರೀತಬುದ್ಧಿ ವಿನಶ್ಯಂತಿ, ಪ್ರೀತಿಬುದ್ಧಿ ವಿಜಯಂತಿ’. ಈ ಶಬ್ಧವು ಗೀತೆಯಲ್ಲಿಯೂ ಇದೆ. ನೀವು
ತಿಳಿದುಕೊಂಡಿದ್ದೀರಿ - ಈ ಸಮಯದಲ್ಲಿ ಮನುಷ್ಯರು ಒಬ್ಬರು ಇನ್ನೊಬ್ಬರನ್ನು ಕಚ್ಚುತ್ತಾ
ಕುಟುಕುತ್ತಿರುತ್ತಾರೆ. ಇವರಲ್ಲಿರುವ ಕ್ರೋಧ ಹಾಗೂ ವಿಕಾರವು ಮತ್ತ್ಯಾರಲ್ಲಿಯೂ ಇರುವುದಿಲ್ಲ.
ದ್ರೌಪದಿಯು ರಕ್ಷಣೆಗಾಗಿ ಕರೆದಳು ಎಂದು ಗಾಯನವಿದೆ. ತಂದೆಯು ತಿಳಿಸಿದ್ದಾರೆ - ನೀವೆಲ್ಲರೂ
ದ್ರೌಪದಿಯರಾಗಿದ್ದೀರಿ. ಭಗವಾನುವಾಚ - ತಂದೆಯು ತಿಳಿಸುತ್ತಾರೆ, ಮಕ್ಕಳೇ ಈಗ ವಿಕಾರದಲ್ಲಿ ಹೋಗಬೇಡಿ,
ನಾನು ನಿಮ್ಮನ್ನು ಸ್ವರ್ಗದಲ್ಲಿ ಕರೆದುಕೊಂಡು ಹೋಗುವೆನು. ನೀವು ಕೇವಲ ತಂದೆಯಾದ ನನ್ನನ್ನು ನೆನಪು
ಮಾಡಿ, ಈಗ ವಿನಾಶಕಾಲವಾಗಿದೆಯಲ್ಲವೆ. ಯಾರ ಮಾತನ್ನೂ ಕೇಳಬೇಡಿ, ಹೊಡೆದಾಡುತ್ತಿರುತ್ತಾರೆ.
ಶಾಂತವಾಗಿರಿ ಎಂದು ಅವರು ಎಷ್ಟೇ ಹೇಳಲಿ ಆದರೆ ಶಾಂತವಾಗಿರುವುದಿಲ್ಲ. ತಮ್ಮ ಮಕ್ಕಳು ಮೊದಲಾದವರಿಂದ
ಅಗಲಿ ಯುದ್ಧದ ಮೈದಾನದಲ್ಲಿ ಹೋಗುತ್ತಾರೆ. ಎಷ್ಟೊಂದು ಮಂದಿ ಸಾಯುತ್ತಲೇ ಇರುತ್ತಾರೆ. ಮನುಷ್ಯರಿಗೆ
ಬೆಲೆಯೇ ಇಲ್ಲ. ಬೆಲೆ ಹಾಗೂ ಮಹಿಮೆಯೆಂದರೆ ಈ ದೇವಿ-ದೇವತೆಗಳಿಗಿದೆ. ಈಗ ನೀವು ಈ ರೀತಿಯಾಗುವ
ಪುರುಷಾರ್ಥ ಮಾಡುತ್ತಿದ್ದೀರಿ. ನಿಮ್ಮ ಮಹಿಮೆಯು ವಾಸ್ತವದಲ್ಲಿ ಈ ದೇವತೆಗಳಿಗಿಂತಲೂ
ಹೆಚ್ಚಿನದಾಗಿದೆ ಏಕೆಂದರೆ ನಿಮಗೆ ಈಗ ತಂದೆಯೇ ಓದಿಸುತ್ತಿದ್ದಾರೆ. ಎಷ್ಟು ಶ್ರೇಷ್ಠವಿದ್ಯೆಯಾಗಿದೆ.
ಓದುವವರು ಬಹಳ ಜನ್ಮಗಳ ಅಂತಿಮದಲ್ಲಿ ಸಂಪೂರ್ಣ ತಮೋಪ್ರಧಾನರಾಗಿದ್ದಾರೆ ಆದರೆ ನಾನಂತೂ (ಶಿವತಂದೆ)
ಸದಾ ಸತೋಪ್ರಧಾನನಾಗಿದ್ದೇನೆ.
ತಂದೆಯು ತಿಳಿಸುತ್ತಾರೆ
- ನಾನು ನೀವು ಮಕ್ಕಳ ವಿಧೇಯ ಸೇವಕನಾಗಿ ಬಂದಿದ್ದೇನೆ. ವಿಚಾರ ಮಾಡಿ, ನಾವು ಎಷ್ಟೊಂದು
ಪತಿತರಾಗಿಬಿಟ್ಟಿದ್ದೇವೆ. ತಂದೆಯೇ ನಮ್ಮನ್ನು ವಾಹ್! ವಾಹ್! ಅರ್ಥಾತ್ ಶ್ರೇಷ್ಠರನ್ನಾಗಿ
ಮಾಡುತ್ತಾರೆ! ಭಗವಂತನೇ ಕುಳಿತು ಮನುಷ್ಯರಿಗೆ ಓದಿಸಿ ಎಷ್ಟೊಂದು ಶ್ರೇಷ್ಠರನ್ನಾಗಿ ಮಾಡುತ್ತಾರೆ!
ಆ ಸ್ವಯಂ ತಂದೆಯೇ ಹೇಳುತ್ತಾರೆ - ನಾನು ಬಹಳ ಜನ್ಮಗಳ ಅಂತಿಮದಲ್ಲಿ ನಿಮ್ಮೆಲ್ಲರನ್ನೂ
ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ ಮಾಡಲು ಬಂದಿದ್ದೇನೆ. ಈಗ ನಿಮಗೆ ಓದಿಸುತ್ತಿದ್ದೇನೆ, ನಾನು
ನಿಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡಿದ್ದೆನು ಮತ್ತೆ ನೀವು ನರಕವಾಸಿಗಳು ಹೇಗಾದಿರಿ ಮತ್ತು ಯಾರು
ಮಾಡಿದರು? ವಿನಾಶಕಾಲೇ ವಿಪರೀತಬುದ್ಧಿ ವಿನಶ್ಯಂತಿ, ಪ್ರೀತಿಬುದ್ಧಿ ವಿಜಯಂತಿ ಎಂದು ಗಾಯನವೂ ಇದೆ.
ಎಷ್ಟೆಷ್ಟು ಪ್ರೀತಿಬುದ್ಧಿಯವರಾಗಿರುತ್ತೀರೋ ಅರ್ಥಾತ್ ಬಹಳ ನೆನಪು ಮಾಡುತ್ತೀರೋ ಅಷ್ಟು ಲಾಭವಿದೆ.
ಯುದ್ಧದ ಮೈದಾನವಲ್ಲವೆ! ಗೀತೆಯಲ್ಲಿ ಯಾವ ಯುದ್ಧದ ಮಾತನ್ನು ತಿಳಿಸುತ್ತಾರೆ ಎಂಬ ಮಾತನ್ನೂ ಯಾರೂ
ಅರಿತುಕೊಳ್ಳುವುದಿಲ್ಲ. ಅವರಂತೂ ಕೌರವರು ಮತ್ತು ಪಾಂಡವರ ಯುದ್ಧವನ್ನು ತೋರಿಸಿದ್ದಾರೆ.
ಕೌರವಸಂಪ್ರದಾಯ ಮತ್ತು ಪಾಂಡವಸಂಪ್ರದಾಯವೂ ಇದೆ ಆದರೆ ಯಾವುದೇ ಯುದ್ಧವಿಲ್ಲ. ಯಾರು ತಂದೆಯನ್ನು
ಅರಿತುಕೊಂಡಿದ್ದಾರೆ, ತಂದೆಯ ಜೊತೆ ಪ್ರೀತಿಬುದ್ಧಿಯವರಾಗಿದ್ದಾರೆಯೋ ಅವರಿಗೇ ಪಾಂಡವರೆಂದು
ಹೇಳಲಾಗುತ್ತದೆ ಮತ್ತು ಯಾರು ತಂದೆಯಿಂದ ವಿಪರೀತಬುದ್ಧಿಯವರಾಗಿರುತ್ತಾರೆಯೋ ಅವರಿಗೇ ಕೌರವರೆಂದು
ಹೇಳಲಾಗುತ್ತದೆ. ಇವು ಬಹಳ ಒಳ್ಳೊಳ್ಳೆಯ ತಿಳಿದುಕೊಳ್ಳುವಂತಹ ಮಾತುಗಳಾಗಿವೆ.
ಈಗ ಸಂಗಮಯುಗವಾಗಿದೆ -
ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಹೊಸಪ್ರಪಂಚದ ಸ್ಥಾಪನೆಯೂ ಆಗುತ್ತಿದೆ, ಈಗ ಬುದ್ಧಿಗೆ ಕೆಲಸ
ಕೊಡಬೇಕಾಗಿದೆ. ಪ್ರಪಂಚವು ಎಷ್ಟು ದೊಡ್ಡದಾಗಿದೆ ಆದರೆ ಸತ್ಯಯುಗದಲ್ಲಿ ಕೆಲವರೇ ಮನುಷ್ಯರಿರುತ್ತಾರೆ.
ಆಗಿನ್ನೂ ಮಾನವ ವಂಶವೃಕ್ಷವು ಬಹಳ ಚಿಕ್ಕದಾಗಿರುತ್ತದೆಯಲ್ಲವೆ. ಅದೇ ವೃಕ್ಷವು ಮತ್ತೆ
ದೊಡ್ಡದಾಗುತ್ತಾ ಹೋಗುತ್ತದೆ. ಈ ಮನುಷ್ಯಸೃಷ್ಟಿ ರೂಪಿ ವೃಕ್ಷವು ಹೇಗೆ ತಲೆಕೆಳಕಾದ ವೃಕ್ಷವಾಗಿದೆ
ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಇದಕ್ಕೆ ಕಲ್ಪವೃಕ್ಷವೆಂದು ಕರೆಯಲಾಗುತ್ತದೆ. ವೃಕ್ಷದ
ಜ್ಞಾನವೂ ಬೇಕಲ್ಲವೆ. ಅನ್ಯವೃಕ್ಷಗಳ ಜ್ಞಾನವಂತೂ ಬಹಳ-ಬಹಳ ಸಹಜವಾಗಿದೆ, ಅದನ್ನು ಬಹುಬೇಗನೆ
ತಿಳಿಸಿಬಿಡುತ್ತಾರೆ. ಈ ವೃಕ್ಷದ ಜ್ಞಾನವೂ ಸಹ ಇಷ್ಟೂ ಸಹಜವಾಗಿದೆ ಆದರೆ ಇದು ಮಾನವವಂಶವೃಕ್ಷವಾಗಿದೆ,
ಮನುಷ್ಯರಿಗೆ ತಮ್ಮ ವೃಕ್ಷದ ಬಗ್ಗೆ ತಿಳಿಯುವುದೇ ಇಲ್ಲ. ‘ಗಾಡ್ ಈಸ್ ಕ್ರಿಯೇಟರ್’ (ಭಗವಂತನು
ರಚಯಿತನಾಗಿದ್ದಾರೆ) ಎಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಚೈತನ್ಯವಾಗಿದ್ದಾರಲ್ಲವೆ! ತಂದೆಯು
ಸತ್ಯ, ಚೈತನ್ಯನಾಗಿದ್ದಾರೆ, ಜ್ಞಾನಸಾಗರನಾಗಿದ್ದಾರೆ. ಅವರಲ್ಲಿ ಯಾವ ಜ್ಞಾನವಿದೆ ಎಂಬುದನ್ನು ಯಾರೂ
ತಿಳಿದುಕೊಂಡಿಲ್ಲ. ತಂದೆಯೇ ಬೀಜರೂಪ, ಚೈತನ್ಯನಾಗಿದ್ದಾರೆ, ಅವರಿಂದಲೇ ಇಡೀ ರಚನೆಯಾಗುತ್ತದೆ
ಅಂದಾಗ ತಂದೆಯೇ ಕುಳಿತು ತಿಳಿಸಿಕೊಡುತ್ತಾರೆ. ಮನುಷ್ಯರಿಗೆ ತಮ್ಮ ವಂಶವೃಕ್ಷದ ಬಗ್ಗೆಯೇ
ತಿಳಿದಿಲ್ಲ, ಅನ್ಯವೃಕ್ಷಗಳನ್ನು ಕುರಿತು ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಆ ವೃಕ್ಷದ ಬೀಜವು
ಚೈತನ್ಯವಾಗಿದ್ದರೆ ಎಲ್ಲವೂ ತಿಳಿಸುತ್ತಿತ್ತು ಅಲ್ಲವೆ ಆದರೆ ಅದು ಜಡವಾಗಿದೆ. ಅಂದಾಗ ಈಗ ನೀವು
ಮಕ್ಕಳೇ ರಚಯಿತ ಮತ್ತು ರಚನೆಯ ರಹಸ್ಯವನ್ನು ಅರಿತುಕೊಂಡಿದ್ದೀರಿ. ಅವರು ಸತ್ಯ ಮತ್ತು ಚೈತನ್ಯ,
ಜ್ಞಾನಸಾಗರನಾಗಿದ್ದಾರೆ. ಚೈತನ್ಯದಲ್ಲಂತೂ ಮಾತನಾಡಬಲ್ಲರು ಅಲ್ಲವೆ! ಮನುಷ್ಯನ ಶರೀರವು
ಎಲ್ಲದಕ್ಕಿಂತ ಶ್ರೇಷ್ಠ, ಅಮೂಲ್ಯವೆಂದು ಗಾಯನವಾಗಿದೆ. ಇದರ ಮೌಲ್ಯವನ್ನು ಹೇಳಲು ಸಾಧ್ಯವಿಲ್ಲ.
ತಂದೆಯು ಬಂದು ಆತ್ಮಗಳಿಗೆ ತಿಳಿಸುತ್ತಾರೆ.
ನೀವು ರೂಪವೂ ಆಗಿದ್ದೀರಿ,
ಭಸಂತರೂ ಆಗಿದ್ದೀರಿ, ತಂದೆಯು ಜ್ಞಾನಸಾಗರನಾಗಿದ್ದಾರೆ. ಅವರಿಂದ ನಿಮಗೆ ರತ್ನಗಳು ಸಿಗುತ್ತವೆ. ಇವು
ಜ್ಞಾನರತ್ನಗಳಾಗಿವೆ. ಈ ರತ್ನಗಳಿಂದ ಆ ಸ್ಥೂಲರತ್ನಗಳೂ ಸಹ ಹೇರಳವಾಗಿ ಸಿಗುತ್ತವೆ. ಈ
ಲಕ್ಷ್ಮಿ-ನಾರಾಯಣರ ಬಳಿ ನೋಡಿ, ಎಷ್ಟೊಂದು ರತ್ನಗಳಿವೆ! ವಜ್ರವೈಡೂರ್ಯಗಳ ಮಹಲಿನಲ್ಲಿರುತ್ತಾರೆ.
ಹೆಸರೇ ಆಗಿದೆ ಸ್ವರ್ಗ, ಅದಕ್ಕೆ ನೀವು ಮಾಲೀಕರಾಗುವವರಿದ್ದೀರಿ. ಯಾರಾದರೂ ಬಡವರಿಗೆ ಆಕಸ್ಮಿಕವಾಗಿ
ದೊಡ್ಡಲಾಟರಿಯು ಸಿಕ್ಕಿಬಿಟ್ಟರೆ ಅವರು ಅದರಲ್ಲಿ ಹುಚ್ಚರಾಗಿಬಿಡುತ್ತಾರಲ್ಲವೆ. ತಂದೆಯೂ ಸಹ
ತಿಳಿಸುತ್ತಾರೆ - ನಿಮಗೆ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ. ಆದ್ದರಿಂದ ಮಾಯೆಯು ಎಷ್ಟೊಂದು
ಪೈಪೋಟಿ ನಡೆಸುತ್ತದೆ. ನಿಮಗೆ ಮುಂದೆಹೋದಂತೆ ತಿಳಿಯುತ್ತದೆ - ಮಾಯೆಯು ಎಷ್ಟು ಒಳ್ಳೊಳ್ಳೆಯ
ಮಕ್ಕಳನ್ನೂ ಸಹ ನುಂಗಿಬಿಡುತ್ತದೆ, ಒಮ್ಮೆಲೆ ತಿಂದುಬಿಡುತ್ತದೆ. ನೀವು ಸರ್ಪವನ್ನು ನೋಡಿದ್ದೀರಿ -
ಅದು ಕಪ್ಪೆಯನ್ನು ಹೇಗೆ ಹಿಡಿದುಕೊಳ್ಳುತ್ತದೆ ಮತ್ತು ಆನೆಯನ್ನು ಮೊಸಳೆಯು ಹಿಡಿದುಕೊಳ್ಳುತ್ತದೆ,
ಸರ್ಪವು ಕಪ್ಪೆಯನ್ನು ಒಮ್ಮೆಲೇ ಎಲ್ಲವನ್ನೂ ನುಂಗಿಬಿಡುತ್ತದೆ. ಮಾಯೆಯೂ ಸಹ ಇದೇ ರೀತಿಯಾಗಿದೆ.
ಮಕ್ಕಳನ್ನು ಜೀವಿಸಿದ್ದಂತೆಯೇ ಹಿಡಿದುಕೊಂಡು ಒಮ್ಮೆಲೇ ಸಮಾಪ್ತಿ ಮಾಡಿಬಿಡುತ್ತದೆ ನಂತರ ಅಂತಹವರು
ಎಂದೂ ತಂದೆಯ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ನಿಮ್ಮಲ್ಲಿ ಯೋಗಬಲದ ಶಕ್ತಿಯು ಬಹಳ ಕಡಿಮೆಯಿದೆ,
ಎಲ್ಲವೂ ಯೋಗಬಲದ ಮೇಲೆ ಆಧಾರಿತವಾಗಿದೆ. ಹೇಗೆ ಸರ್ಪವು ಕಪ್ಪೆಯನ್ನು ನುಂಗುತ್ತದೆಯೋ ಅದೇ ರೀತಿ
ನೀವು ಮಕ್ಕಳೂ ಸಹ ಇಡೀ ರಾಜ್ಯಭಾಗ್ಯವನ್ನು ನುಂಗಿಬಿಡುತ್ತೀರಿ. ಇಡೀ ವಿಶ್ವದ ರಾಜ್ಯಭಾಗ್ಯವನ್ನು
ಸೆಕೆಂಡಿನಲ್ಲಿ ಪಡೆಯುತ್ತೀರಿ. ತಂದೆಯು ಎಷ್ಟು ಸಹಜವಾದ ಯುಕ್ತಿಯನ್ನು ತಿಳಿಸುತ್ತಾರೆ! ಯಾವುದೇ
ಆಯುಧಗಳ ಮಾತಿಲ್ಲ. ತಂದೆಯು ಜ್ಞಾನ-ಯೋಗದ ಅಸ್ತ್ರಶಸ್ತ್ರಗಳನ್ನು ಕೊಡುತ್ತಾರೆ. ಇದಕ್ಕೆ ಅವರು
ಸ್ಥೂಲಆಯುಧಗಳನ್ನು ತೋರಿಸಿದ್ದಾರೆ.
ನೀವು ಮಕ್ಕಳು ಈ
ಸಮಯದಲ್ಲಿ ಹೇಳುತ್ತೀರಿ - ನಾವು ಹೇಗಿದ್ದವರು ಏನಾಗಿಬಿಟ್ಟಿದ್ದೇವೆ! ನೀವು ಏನು ಬೇಕಾದರೂ ಹೇಳಿ,
ನಾವು ಅವಶ್ಯವಾಗಿ ಆ ರೀತಿಯಿದ್ದೆವು. ಭಲೆ ಮನುಷ್ಯರೇ ಆಗಿದ್ದೆವು ಆದರೆ ಗುಣ ಮತ್ತು
ಅವಗುಣಗಳಿರುತ್ತವೆಯಲ್ಲವೆ. ದೇವತೆಗಳಲ್ಲಿ ದೈವೀಗುಣಗಳಿವೆ ಆದ್ದರಿಂದ ತಾವು ಸರ್ವಗುಣ ಸಂಪನ್ನರು.......
ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ಅವರಿಗೆ ಮಹಿಮೆ ಮಾಡುತ್ತಾರೆ. ಈ ಸಮಯದಲ್ಲಿ ಇಡೀ
ಪ್ರಪಂಚವೇ ನಿರ್ಗುಣವಾಗಿದೆ ಅರ್ಥಾತ್ ಒಂದು ದೈವೀಗುಣವೂ ಇಲ್ಲ. ಯಾವ ತಂದೆಯು ಗುಣಗಳನ್ನು
ಕಲಿಸುವವರಾಗಿದ್ದಾರೆಯೋ ಅವರನ್ನೇ ಅರಿತುಕೊಂಡಿಲ್ಲ ಆದ್ದರಿಂದ ವಿನಾಶಕಾಲೇ ವಿಪರೀತಬುದ್ಧಿಯೆಂದು
ಹೇಳುತ್ತಾರೆ. ಈ ಸಂಗಮಯುಗದಲ್ಲಿ ವಿನಾಶವಂತೂ ಆಗಲೇಬೇಕಾಗಿದೆ. ಈಗ ಹಳೆಯ ಪ್ರಪಂಚದ ವಿನಾಶ ಮತ್ತು
ಹೊಸ ಪ್ರಪಂಚದ ಸ್ಥಾಪನೆಯಾಗುತ್ತದೆ, ಇದಕ್ಕೆ ವಿನಾಶಕಾಲವೆಂದು ಕರೆಯಲಾಗುತ್ತದೆ. ಇದು ಅಂತಿಮ
ವಿನಾಶವಾಗಿದೆ, ಇದರ ನಂತರ ಅರ್ಧಕಲ್ಪದವರೆಗೆ ಯಾವುದೇ ಯುದ್ಧವು ನಡೆಯುವುದೇ ಇಲ್ಲ. ಮನುಷ್ಯರಿಗೆ
ಇದು ಸ್ವಲ್ಪವೂ ತಿಳಿದಿಲ್ಲ. ವಿನಾಶಕಾಲೇ ವಿಪರೀತ ಬುದ್ಧಿಯವರಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಈ
ಹಳೆಯ ಪ್ರಪಂಚದ ವಿನಾಶವಾಗುವುದಲ್ಲವೆ. ಈ ಹಳೆಯ ಪ್ರಪಂಚದಲ್ಲಿ ಎಷ್ಟೊಂದು ಆಪತ್ತುಗಳಿವೆ, ನಿತ್ಯವೂ
ಸಾಯುತ್ತಲೇ ಇರುತ್ತಾರೆ. ತಂದೆಯು ಈ ಸಮಯದ ಸ್ಥಿತಿಯನ್ನು ತಿಳಿಸುತ್ತಾರೆ, ಬಹಳ ಅಂತರವಂತೂ
ಇದೆಯಲ್ಲವೆ. ಇಂದಿನ ಭಾರತದ ಸ್ಥಿತಿಯು ಈ ರೀತಿಯಾಗಿದೆ, ನಾಳೆಯ ಭಾರತವು ಹೇಗಿರುವುದು? ಇಂದು
ಎಲ್ಲಿದ್ದೀರಿ ನಾಳೆ ನೀವು ಎಲ್ಲಿರುತ್ತೀರಿ? ನೀವು ತಿಳಿದುಕೊಂಡಿದ್ದೀರಿ - ಮೊದಲು ಹೊಸ ಪ್ರಪಂಚವು
ಎಷ್ಟು ಚಿಕ್ಕದಾಗಿತ್ತು, ಅಲ್ಲಂತೂ ಮಹಲುಗಳಲ್ಲಿ ಎಷ್ಟೊಂದು ವಜ್ರವೈಡೂರ್ಯಗಳಿರುತ್ತವೆ.
ಭಕ್ತಿಮಾರ್ಗದಲ್ಲಿಯೂ ನಿಮ್ಮ ಮಂದಿರಗಳೇನೂ ಕಡಿಮೆಯಿರುವುದಿಲ್ಲ. ಕೇವಲ ಒಂದೇ ಸೋಮನಾಥ
ಮಂದಿರವಿರುವುದಿಲ್ಲ. ಯಾರಾದರೂ ಒಬ್ಬರು ಕಟ್ಟಿಸಿರುವುದನ್ನು ನೋಡಿ ಅನ್ಯರೂ ಕಟ್ಟಿಸುತ್ತಾರೆ
ಅಂದಮೇಲೆ ಒಂದು ಸೋಮನಾಥ ಮಂದಿರದಿಂದಲೇ ಎಷ್ಟೊಂದು ಲೂಟಿ ಮಾಡಿದ್ದಾರೆ! ನಂತರ ಕುಳಿತು ತಮ್ಮ
ನೆನಪಾರ್ಥವನ್ನು ಮಾಡುತ್ತಾರೆ ಆದ್ದರಿಂದ ಗೋಡೆಗಳಲ್ಲಿ ಕಲ್ಲುಗಳಿಂದ ಮಂದಿರಗಳನ್ನು ಕಟ್ಟಲು
ತೊಡಗುತ್ತಾರೆ, ಈ ಕಲ್ಲುಗಳಿಗೆ ಏನು ಬೆಲೆಯಿರುತ್ತದೆ? ಇಷ್ಟು ಚಿಕ್ಕದಾದ ವಜ್ರಕ್ಕೂ ಎಷ್ಟೊಂದು
ಬೆಲೆಯಿದೆ! ಇವರು (ಬ್ರಹ್ಮಾ) ವಜ್ರವ್ಯಾಪಾರಿಯಾಗಿದ್ದರು. ಒಂದು ಹರಳಿನಷ್ಟು ವಜ್ರಕ್ಕೆ 90 ರೂ.ಗಳು
ಬೆಲೆಯಿರುತ್ತಿತ್ತು. ಈಗಂತೂ ಅದರ ಬೆಲೆಯು ಸಾವಿರಾರು ರೂಪಾಯಿಗಳಾಗಿದೆ. ಸಿಗುವುದೂ ಇಲ್ಲ, ಬೆಲೆಯು
ಬಹಳ ಹೆಚ್ಚಾಗಿದೆ. ಈ ಸಮಯದಲ್ಲಿ ವಿದೇಶ ಮೊದಲಾದ ಕಡೆ ಹಣವು ಬಹಳಷ್ಟಿದೆ ಆದರೆ ಸತ್ಯಯುಗದ ಮುಂದೆ
ಇದೇನೂ ಇಲ್ಲ.
ಈಗ ತಂದೆಯು
ತಿಳಿಸುತ್ತಾರೆ - ಎಲ್ಲರೂ ವಿನಾಶಕಾಲೇ ವಿಪರೀತ ಬುದ್ಧಿಯವರಾಗಿದ್ದಾರೆ. ವಿನಾಶವು ಸಮೀಪವಿದೆ ಎಂದು
ನೀವು ಹೇಳಿದಾಗ ಮನುಷ್ಯರು ನಗುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಎಷ್ಟು ಸಮಯ ಇಲ್ಲಿಯೇ
ಕುಳಿತುಕೊಳ್ಳುವೆನು ನನಗೆ ಇಲ್ಲಿ ಮಜಾ ಇರುತ್ತದೆಯೇ? ನಾನಂತೂ ಸುಖಿಯೂ ಆಗುವುದಿಲ್ಲ, ದುಃಖಿಯೂ
ಆಗುವುದಿಲ್ಲ, ಪಾವನರನ್ನಾಗಿ ಮಾಡುವುದೇ ತಂದೆಯ ಕರ್ತವ್ಯವಾಗಿದೆ. ನೀವು ಈ ಶ್ರೇಷ್ಠರಾಗಿದ್ದಿರಿ,
ಈಗ ಕನಿಷ್ಟರಾಗಿದ್ದೀರಿ. ಮತ್ತೆ ನಿಮ್ಮನ್ನೇ ಶ್ರೇಷ್ಠರನ್ನಾಗಿ ಮಾಡುತ್ತೇನೆ. ನಮ್ಮನ್ನೇ ಮತ್ತೆ
ಅಂತಹ ಶ್ರೇಷ್ಠರನ್ನಾಗಿ ಮಾಡುತ್ತಾರೆಂದು ನಿಮಗೆ ತಿಳಿದಿದೆ. ನಾವು ಈ ದೈವೀ ಮನೆತನದವರಾಗಿದ್ದೆವು,
ರಾಜ್ಯಭಾಗ್ಯವಿತ್ತು ಮತ್ತೆ ಇಂತಹ ರಾಜ್ಯಭಾಗ್ಯವನ್ನು ಕಳೆದುಕೊಂಡೆವು ನಂತರ ಅನ್ಯರು ಬರುತ್ತಾ
ಹೋದರು. ಈಗ ಈ ಚಕ್ರವು ಮುಕ್ತಾಯವಾಗುತ್ತದೆಯೆಂದು ನಿಮಗೆ ಅರಿವು ಮೂಡಿದೆ. ಈಗ ನೀವು
ತಿಳಿದುಕೊಳ್ಳುತ್ತೀರಿ - ಈಗ ಲಕ್ಷಾಂತರ ವರ್ಷಗಳ ಮಾತೇ ಇಲ್ಲ. ಇದು ವಿನಾಶದ ಯುದ್ಧವಾಗಿದೆ,
ಒಂದುಕಡೆ ಬಹಳ ಆರಾಮದಿಂದ ಸಾಯುತ್ತಾರೆ, ಯಾವುದೇ ಕಷ್ಟವಾಗುವುದಿಲ್ಲ ಏಕೆಂದರೆ ಆಸ್ಪತ್ರೆ ಮೊದಲಾದವು
ಇರುವುದೇ ಇಲ್ಲ ಅಂದಮೇಲೆ ಅವರಿಗಾಗಿ ಯಾರು ಕುಳಿತು ಸೇವೆ ಮಾಡುತ್ತಾರೆ ಮತ್ತು ಯಾರು ಅಳುತ್ತಾರೆ?
ಅಲ್ಲಂತೂ ಈ ಪದ್ಧತಿಯೇ ಇರುವುದಿಲ್ಲ, ಅವರ ಮೃತ್ಯುವು ಬಹಳ ಸಹಜವಾಗಿರುತ್ತದೆ ಆದರೆ ಇಲ್ಲಿ
ದುಃಖಿಯಾಗಿ ಸಾಯುತ್ತಾರೆ ಏಕೆಂದರೆ ನೀವು ಬಹಳಷ್ಟು ಸುಖವನ್ನು ಪಡೆದಿದ್ದೀರಿ ಆದ್ದರಿಂದ ನೀವು
ದುಃಖವನ್ನೂ ನೋಡಬೇಕಾಗಿದೆ. ಇಲ್ಲಿಯೇ ರಕ್ತದ ನದಿಗಳು ಹರಿಯುತ್ತವೆ, ಈ ಯುದ್ಧವು ಮತ್ತೆ
ಶಾಂತವಾಗಿಬಿಡುವುದೆಂದು ಅವರು ತಿಳಿಯುತ್ತಾರೆ ಆದರೆ ಇದು ಶಾಂತವಾಗುವುದಿಲ್ಲ. ಬೆಕ್ಕಿಗೆ ಚಲ್ಲಾಟ
ಇಲಿಗೆ ಪ್ರಾಣಸಂಕಟ. ನೀವು ದೇವತೆಗಳಾಗುತ್ತೀರಿ ಮತ್ತೆ ಇದೇ ಕಲಿಯುಗೀ ಛೀ ಛೀ ಸೃಷ್ಟಿಯ ಮೇಲೆ ನೀವು
ಬರಲು ಸಾಧ್ಯವಿಲ್ಲ. ಗೀತೆಯಲ್ಲಿಯೂ ಇದೆ - ಭಗವಾನುವಾಚ, ವಿನಾಶವನ್ನೂ ನೋಡಿ, ಸ್ಥಾಪನೆಯನ್ನೂ ನೋಡಿ.
ಸಾಕ್ಷಾತ್ಕಾರವಾಯಿತಲ್ಲವೆ! ಇಂತಿಂತಹವರು ಇಂತಹ ಪದವಿಯನ್ನು ಪಡೆಯುತ್ತಾರೆ ಎಂಬುದೆಲ್ಲವೂ
ಅಂತಿಮದಲ್ಲಿ ಸಾಕ್ಷಾತ್ಕಾರವಾಗುತ್ತದೆ. ಆ ಸಮಯದಲ್ಲಿ ಅಳುತ್ತಾರೆ, ಬಹಳ ಪಶ್ಚಾತ್ತಾಪಪಡುತ್ತಾರೆ,
ಶಿಕ್ಷೆಯನ್ನನುಭವಿಸುತ್ತಾರೆ, ತಮ್ಮ ತಲೆಚಚ್ಚಿಕೊಳ್ಳುತ್ತಾರೆ ಆದರೆ ಏನು ಮಾಡಲು ಸಾಧ್ಯ? ಇದಂತೂ
21 ಜನ್ಮಗಳಿಗೆ ಲಾಟರಿಯಾಗಿದೆ. ಸ್ಮೃತಿಯಂತೂ ಬರುತ್ತದೆಯಲ್ಲವೆ! ಸಾಕ್ಷಾತ್ಕಾರವಿಲ್ಲದೆ ಯಾರಿಗೂ
ಶಿಕ್ಷೆಯು ಸಿಗುವುದಿಲ್ಲ. ನ್ಯಾಯಧರ್ಮಸಭೆಯು ಕುಳಿತುಕೊಳ್ಳುತ್ತದೆಯಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸ್ವಯಂನಲ್ಲಿ
ಜ್ಞಾನರತ್ನಗಳನ್ನು ಧಾರಣೆ ಮಾಡಿಕೊಂಡು ರೂಪಭಸಂತರಾಗಬೇಕಾಗಿದೆ. ಜ್ಞಾನರತ್ನಗಳಿಂದ ವಿಶ್ವದ
ರಾಜ್ಯಭಾಗ್ಯದ ಲಾಟರಿಯನ್ನು ಪಡೆದುಕೊಳ್ಳಬೇಕಾಗಿದೆ.
2. ಈ ವಿನಾಶಕಾಲದಲ್ಲಿ
ತಂದೆಯೊಂದಿಗೆ ಪ್ರೀತಿಯನ್ನಿಟ್ಟು ಒಬ್ಬ ತಂದೆಯ ನೆನಪಿನಲ್ಲಿರಬೇಕಾಗಿದೆ. ಅಂತಿಮ ಸಮಯದಲ್ಲಿ
ಪಶ್ಚಾತ್ತಾಪ ಪಡುವಂತಹ ಅಥವಾ ದುರಾದೃಷ್ಟರಾಗುವಂತಹ ಯಾವುದೇ ಕರ್ಮವನ್ನು ಈಗ ಮಾಡಬಾರದು.
ವರದಾನ:
ಸದಾ ಸ್ನೇಹಿಯಾಗಿ
ಹಾರುವ ಕಲೆಯ ಪ್ರಾಪ್ತಿ ಮಾಡಿಕೊಳ್ಳುವಂತಹ ನಿಶ್ಚಿತ ವಿಜಯಿ, ನಿಶ್ಚಿಂತ ಭವ.
ಸ್ನೇಹಿ ಮಕ್ಕಳಿಗೆ
ಬಾಪ್ದಾದಾರವರಿಂದ ಹಾರುವ ಕಲೆಯ ವರದಾನ ಸಿಕ್ಕಿ ಬಿಡುವುದು. ಹಾರುವ ಕಲೆಯ ಮೂಲಕ ಸೆಕೆಂಡ್ ನಲ್ಲಿ
ಬಾಪ್ದಾದಾರವರ ಬಳಿ ತಲುಪಿ ಬಿಟ್ಟಲ್ಲಿ ಎಂತಹದೇ ಸ್ವರೂಪದಲ್ಲಿ ಬಂದಂತ ಮಾಯೆ ನಿಮ್ಮನ್ನು
ಸ್ಪರ್ಷಿಸಲೂ ಸಾಧ್ಯವಿಲ್ಲ. ಪರಮಾತ್ಮನ ಛತ್ರಛಾಯೆಯ ಒಳಗೆ ಮಾಯೆಯ ನೆರಳು ಸಹಾ ಬರಲು ಸಾಧ್ಯವಿಲ್ಲ,
ಸ್ನೇಹ, ಪರಿಶ್ರಮವನ್ನು ಮನೋರಂಜನೆಯಲ್ಲಿ ಪರಿವರ್ತನೆ ಮಾಡಿ ಬಿಡುವುದು. ಸ್ನೇಹ ಪ್ರತಿ ಕರ್ಮದಲ್ಲಿ
ನಿಶ್ಚಿತ ವಿಜಯೀ ಸ್ಥಿತಿಯ ಅನುಭವವನ್ನು ಮಾಡಿಸುವುದು, ಸ್ನೇಹಿ ಮಕ್ಕಳು ಎಲ್ಲಾ ಸಮಯ
ನಿಶ್ಚಿಂತವಾಗಿರುತ್ತಾರೆ.
ಸ್ಲೋಗನ್:
ನಥಿಂಗ್ ನ್ಯೂ (ಯಾವುದೂ
ಹೊಸದಲ್ಲ) ಎನ್ನುವ ಸ್ಮೃತಿಯಿಂದ ಸದಾ ಅಚಲರಾಗಿರಿ ಆಗ ಖುಷಿಯಲ್ಲಿ ನಾಟ್ಯವಾಡುತ್ತಿರುವಿರಿ.