12.12.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ – ಸತ್ಯ
ತಂದೆಯ ಮೂಲಕ ಸಂಗಮದಲ್ಲಿ ನಿಮಗೆ ಸತ್ಯದ ವರದಾನವು ಸಿಗುತ್ತದೆ ಆದ್ದರಿಂದ ಎಂದೂ ನೀವು ಸುಳ್ಳು
ಹೇಳುವಂತಿಲ್ಲ.”
ಪ್ರಶ್ನೆ:
ನಿರ್ವಿಕಾರಿಗಳಾಗಲು ತಾವು ಮಕ್ಕಳು ಅವಶ್ಯವಾಗಿ ಯಾವ ಪರಿಶ್ರಮ ಪಡಬೇಕಾಗಿದೆ?
ಉತ್ತರ:
ಆತ್ಮಾಭಿಮಾನಿಗಳಾಗುವ ಪರಿಶ್ರಮ ಪಡಬೇಕಾಗಿದೆ. ಭೃಕುಟಿಯ ಮಧ್ಯದಲ್ಲಿ ಆತ್ಮವನ್ನೇ ನೋಡುವ ಅಭ್ಯಾಸ
ಮಾಡಿ. ಆತ್ಮನಾಗಿ ಆತ್ಮನೊಂದಿಗೆ ಮಾತನಾಡಿ. ಆತ್ಮನಾಗಿ ಕೇಳಿರಿ, ದೇಹದ ಮೇಲೆ ದೃಷ್ಟಿ ಹೋಗಬಾರದು.
ಇದೇ ಮುಖ್ಯ ಪರಿಶ್ರಮವಾಗಿದೆ - ಈ ಪರಿಶ್ರಮದಲ್ಲಿಯೇ ವಿಘ್ನಗಳು ಬರುತ್ತವೆ. ಎಷ್ಟು ಸಾಧ್ಯವೋ ಈ
ಅಭ್ಯಾಸ ಮಾಡಿ - “ನಾನಾತ್ಮನಾಗಿದ್ದೇನೆ, ನಾನಾತ್ಮನಾಗಿದ್ದೇನೆ”.
ಗೀತೆ:
ಓಂ ನಮಃ ಶಿವಾಯ.......
ಓಂ ಶಾಂತಿ.
ಮಧುರ ಮಕ್ಕಳಿಗೆ ತಂದೆಯು ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆಯೆಂದು ಸ್ಮೃತಿ ತರಿಸಿದ್ದಾರೆ. ಈಗ
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ತಂದೆಯಿಂದ ಏನನ್ನು ಅರಿತಿದ್ದೇವೆಯೋ, ತಂದೆಯು ಯಾವ
ಮಾರ್ಗವನ್ನು ತಿಳಿಸಿದ್ದಾರೆಯೋ ಅದನ್ನು ಪ್ರಪಂಚದಲ್ಲಿ ಮತ್ತ್ಯಾರೂ ತಿಳಿದುಕೊಂಡಿಲ್ಲ. ತಾವೇ
ಪೂಜ್ಯ, ತಾವೇ ಪೂಜಾರಿ ಎಂಬುದರ ಅರ್ಥವನ್ನೂ ಸಹ ನಿಮಗೆ ತಿಳಿಸಿದ್ದಾರೆ. ಯಾರು ಪೂಜ್ಯ ವಿಶ್ವದ
ಮಾಲೀಕರಾಗುವರೋ ಅವರೇ ನಂತರ ಪೂಜಾರಿಯಾಗುತ್ತಾರೆ. ಪರಮಾತ್ಮನಿಗಾಗಿ ಈ ರೀತಿ ಹೇಳುವುದಿಲ್ಲ. ಈಗ
ನಿಮಗೆ ಸ್ಮೃತಿ ಬಂದಿದೆ - ಇದು ಸತ್ಯ ಮಾತಾಗಿದೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಸಮಾಚಾರವನ್ನು
ತಂದೆಯೇ ತಿಳಿಸುತ್ತಾರೆ. ಮತ್ತ್ಯಾರಿಗೂ ಜ್ಞಾನ ಸಾಗರನೆಂದು ಹೇಳಲಾಗುವುದಿಲ್ಲ. ಈ ಮಹಿಮೆಯು
ಶ್ರೀಕೃಷ್ಣನದಲ್ಲ. ಕೃಷ್ಣ ಎಂಬ ಹೆಸರಂತೂ ಶರೀರದ್ದಲ್ಲವೆ. ಅವರು ಶರೀರಧಾರಿಯಾಗಿದ್ದಾರೆ, ಅವರಲ್ಲಿ
ಸಂಪೂರ್ಣ ಜ್ಞಾನವಿರುವುದಿಲ್ಲ. ಅವರ ಆತ್ಮವೂ ಸಹ ಜ್ಞಾನವನ್ನು ತೆಗೆದುಕೊಳ್ಳುತ್ತಿದೆ. ಇದು
ಅದ್ಭುತ ಮಾತಾಗಿದೆ. ತಂದೆಯಲ್ಲವೆ. ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಈ ರೀತಿಯಂತೂ ಅನೇಕ
ಸಾಧು-ಸಂತರು ಭಿನ್ನ-ಭಿನ್ನ ಪ್ರಕಾರದ ಹಠಯೋಗಗಳನ್ನು ಕಲಿಸುತ್ತಿರುತ್ತಾರೆ. ಅದೆಲ್ಲವೂ
ಭಕ್ತಿಮಾರ್ಗವಾಗಿದೆ. ಸತ್ಯಯುಗದಲ್ಲಿ ನೀವು ಯಾರಿಗೂ ಪೂಜೆ ಮಾಡುವುದಿಲ್ಲ. ಅಲ್ಲಿ ನೀವು
ಪೂಜಾರಿಗಳಾಗಿರುವುದಿಲ್ಲ. ಅಲ್ಲಿ ಪೂಜ್ಯ ದೇವಿ-ದೇವತೆಗಳಿದ್ದರೆಂದು ಹೇಳಲಾಗುತ್ತದೆ. ಈಗ ಇಲ್ಲ.
ಅದೇ ಪೂಜ್ಯರು ಈಗ ಪೂಜಾರಿಗಳಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಇವರೂ ಸಹ ಪೂಜೆ
ಮಾಡುತ್ತಿದ್ದರಲ್ಲವೆ. ಇಡೀ ಪ್ರಪಂಚವು ಈ ಸಮಯದಲ್ಲಿ ಪೂಜಾರಿಯಾಗಿದೆ, ಹೊಸ ಪ್ರಪಂಚದಲ್ಲಿ ಒಂದೇ
ಪೂಜ್ಯ ದೇವಿ-ದೇವತಾ ಧರ್ಮವಿರುತ್ತದೆ. ಮಕ್ಕಳಿಗೆ ಸ್ಮೃತಿಯಲ್ಲಿ ಬಂದಿದೆ - ಅವಶ್ಯವಾಗಿ ಡ್ರಾಮಾ
ಪ್ಲಾನನುಸಾರ ಇದು ಸತ್ಯವಾಗಿದೆ. ಇದು ಅದೇ ಗೀತಾ ಭಾಗವಾಗಿದೆ. ಕೇವಲ ಗೀತೆಯಲ್ಲಿ ಹೆಸರನ್ನು
ಬದಲಾಯಿಸಿದ್ದಾರೆ. ಇದನ್ನು ತಿಳಿಸುವುದಕ್ಕಾಗಿಯೇ ನೀವು ಪರಿಶ್ರಮ ಪಡುತ್ತೀರಿ. 2500 ವರ್ಷಗಳಿಂದಲೂ
ಗೀತೆಯು ಕೃಷ್ಣನದೆಂದೇ ತಿಳಿಯುತ್ತಾ ಬಂದಿದ್ದಾರೆ. ಈಗ ಒಂದು ಜನ್ಮದಲ್ಲಿ ಗೀತೆಯನ್ನು ನಿರಾಕಾರ
ಭಗವಂತನು ತಿಳಿಸಿದರೆಂದು ಅರ್ಥವಾಗಬೇಕಾದರೆ ಸಮಯವಂತೂ ಹಿಡಿಸುತ್ತದೆಯಲ್ಲವೆ. ಭಕ್ತಿಯ ಬಗ್ಗೆಯೂ
ತಿಳಿಸಿದ್ದಾರೆ. ವೃಕ್ಷವು ಎಷ್ಟು ಉದ್ದಗಲವಾಗಿದೆ! ನೀವು ಇದನ್ನು ಬರೆಯಿರಿ - ತಂದೆಯು ನಮಗೆ
ರಾಜಯೋಗವನ್ನು ಕಲಿಸುತ್ತಿದ್ದಾರೆ. ಯಾವ ಮಕ್ಕಳಿಗೆ ಇದು ನಿಶ್ಚಯವಾಗಿ ಬಿಡುವುದೋ ಅವರು ಅನ್ಯರಿಗೂ
ನಿಶ್ಚಯದಿಂದ ತಿಳಿಸುತ್ತಾರೆ. ನಿಶ್ಚಯವಿಲ್ಲದೇ ಇದ್ದರೆ ಹೇಗೆ ತಿಳಿಸುವುದು! ಯಾವುದೇ ಏರುಪೇರು
ಆಗುವುದಿಲ್ಲವೇ ಎಂದು ಸ್ವಯಂ ತಬ್ಬಿಬ್ಬಾಗುತ್ತಿರುತ್ತಾರೆ. ಈಗ ಇನ್ನೂ ನಿರ್ಭಯರಾಗಿಲ್ಲ. ಯಾವಾಗ
ಪೂರ್ಣ ದೇಹೀ-ಅಭಿಮಾನಿಯಾಗಿಬಿಡುವಿರೋ ಆಗ ನಿರ್ಭಯರಾಗುತ್ತೀರಿ. ಹೆದರಿಕೆಯು
ಭಕ್ತಿಮಾರ್ಗದಲ್ಲಿರುತ್ತದೆ. ನೀವೆಲ್ಲರೂ ಮಹಾವೀರರಾಗಿದ್ದೀರಿ. ಮಾಯೆಯ ಮೇಲೆ ಹೇಗೆ ಜಯ
ಗಳಿಸುವುದೆಂದು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ನೀವು ಮಕ್ಕಳಿಗೆ ಈಗ ಸ್ಮೃತಿ ಬಂದಿದೆ.
ಮೊದಲೂ ಸಹ ತಂದೆಯು ಹೇಳಿದ್ದರು - ಮನ್ಮನಾಭವ. ಪತಿತ-ಪಾವನ ತಂದೆಯೇ ಬಂದು ಇದನ್ನು ತಿಳಿಸುತ್ತಾರೆ.
ಭಲೆ ಗೀತೆಯಲ್ಲಿ ಶಬ್ಧವಿದೆ ಆದರೆ ಆ ರೀತಿ ಯಾರೂ ತಿಳಿಸುವುದಿಲ್ಲ. ತಂದೆಯು ತಿಳಿಸುತ್ತಾರೆ -
ಮಕ್ಕಳೇ, ದೇಹೀ-ಅಭಿಮಾನಿಭವ. ಗೀತೆಯಲ್ಲಿ ಹಿಟ್ಟಿನಲ್ಲಿ ಉಪ್ಪಿನಷ್ಟು ಶಬ್ಧಗಳಂತೂ ಇವೆಯಲ್ಲವೆ.
ತಂದೆಯು ಪ್ರತಿಯೊಂದು ಮಾತಿನ ನಿಶ್ಚಯವನ್ನು ಮಾಡಿಸುತ್ತಾರೆ. ನಿಶ್ಚಯಬುದ್ಧಿ ವಿಜಯಂತಿ.
ನೀವೀಗ ತಂದೆಯಿಂದ
ಆಸ್ತಿಯನ್ನು ಪಡೆಯುತ್ತಿದ್ದೀರಿ. ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕಾಗಿದೆ. ಎಲ್ಲರೂ ಇಲ್ಲಿ ಬಂದು
ಕುಳಿತುಕೊಳ್ಳುವ ಅವಶ್ಯಕತೆಯಿಲ್ಲ. ಸರ್ವೀಸ್ ಮಾಡಬೇಕು. ಸೇವಾಕೇಂದ್ರಗಳನ್ನು ತೆರೆಯಬೇಕಾಗಿದೆ.
ನೀವು ರಕ್ಷಣಾ ದಳದವರಾಗಿದ್ದೀರಿ. ಈಶ್ವರೀಯ ಮಿಷಿನ್ ಆಗಿದ್ದೀರಲ್ಲವೆ. ಮೊದಲು ಶೂದ್ರ ಮಾಯಾವೀ
ಸಂಘದವರಾಗಿದ್ದಿರಿ, ನೀವೀಗ ಈಶ್ವರೀಯ ಸಂಘದವರಾಗಿದ್ದೀರಿ. ನಿಮ್ಮ ಮಹತ್ವಿಕೆಯು ಬಹಳಷ್ಟಿದೆ. ಈ
ಲಕ್ಷ್ಮೀ-ನಾರಾಯಣರ ಮಹಿಮೆಯೇನಿದೆ, ಎಂತಹ ರಾಜರೋ ಆ ರೀತಿಯಾಗಿ ರಾಜ್ಯಭಾರ ಮಾಡುತ್ತಾರೆ ಬಾಕಿ
ಲಕ್ಷ್ಮೀ-ನಾರಾಯಣರಿಗೆ ಸರ್ವಗುಣ ಸಂಪನ್ನರು, ವಿಶ್ವದ ಮಾಲೀಕರೆಂದು ಹೇಳುತ್ತಾರೆ ಏಕೆಂದರೆ ಆ
ಸಮಯದಲ್ಲಿ ಮತ್ತ್ಯಾವುದೇ ರಾಜ್ಯವಿರುವುದಿಲ್ಲ. ಹೇಗೆ ವಿಶ್ವದ ಮಾಲೀಕರಾಗುವುದೆಂದು ಈಗ ನೀವು
ಮಕ್ಕಳು ಅರಿತುಕೊಂಡಿದ್ದೀರಿ. ಈಗ ನೀವೇ ದೇವತೆಗಳಾಗುತ್ತೀರಿ ಅಂದಮೇಲೆ ಅವರಿಗೆ ಹೇಗೆ ತಲೆ
ಬಾಗಿಸುವಿರಿ! ನೀವು ಜ್ಞಾನಪೂರ್ಣರಾಗಿ ಬಿಟ್ಟಿದ್ದೀರಿ. ಯಾರಿಗೆ ಜ್ಞಾನವಿಲ್ಲವೋ ಅವರು ತಲೆ
ಬಾಗುತ್ತಿರುತ್ತಾರೆ. ನೀವು ಎಲ್ಲರ ಪರಿಚಯವನ್ನು ಈಗ ಅರಿತುಕೊಂಡಿದ್ದೀರಿ. ಯಾವ ಚಿತ್ರಗಳು
ಸರಿಯಾಗಿದೆ ಮತ್ತು ಯಾವುದು ತಪ್ಪಾಗಿವೆ ಎಂಬುದನ್ನೂ ಸಹ ನೀವು ತಿಳಿಸಬಲ್ಲಿರಿ. ರಾವಣ ರಾಜ್ಯವನ್ನು
ಕುರಿತು ಸಹ ನೀವು ತಿಳಿಸುತ್ತೀರಿ. ಇದು ರಾವಣ ರಾಜ್ಯವಾಗಿದೆ, ಇದಕ್ಕೆ ಬೆಂಕಿ ಬೀಳುತ್ತಿದೆ.
ಬಿದುರಿನ ಕಾಡಿಗೆ ಬೆಂಕಿ ಬೀಳುವುದು ವಿಶ್ವಕ್ಕೂ ಬಿದುರಿನ ಕಾಡು ಎಂದು ಹೇಳಲಾಗುತ್ತದೆ. ಯಾವ
ಶಬ್ಧಗಳ ಗಾಯನವಿದೆಯೋ ಅದರ ಮೇಲೆ ತಿಳಿಸಲಾಗುತ್ತದೆ. ಭಕ್ತಿಮಾರ್ಗದಲ್ಲಂತೂ ಅನೇಕ ಚಿತ್ರಗಳನ್ನು
ಮಾಡಿದ್ದಾರೆ. ವಾಸ್ತವದಲ್ಲಿ ಮೊಟ್ಟ ಮೊದಲನೆಯದು ಶಿವ ತಂದೆಯ ಪೂಜೆಯಾಗಿದೆ ನಂತರ
ಬ್ರಹ್ಮಾ-ವಿಷ್ಣು-ಶಂಕರನದಾಗಿದೆ. ತ್ರಿಮೂರ್ತಿ ಚಿತ್ರವನ್ನು ಮಾಡಿಸಿರುವುದು ಸರಿಯಾಗಿದೆ ನಂತರ ಈ
ಲಕ್ಷ್ಮೀ-ನಾರಾಯಣ. ತ್ರಿಮೂರ್ತಿಯಲ್ಲಿ ಬ್ರಹ್ಮಾ-ಸರಸ್ವತಿಯೂ ಬಂದು ಬಿಡುತ್ತಾರೆ. ಭಕ್ತಿ
ಮಾರ್ಗದಲ್ಲಿ ಎಷ್ಟೊಂದು ಚಿತ್ರಗಳನ್ನು ಮಾಡುತ್ತಾರೆ. ಹನುಮಂತನ ಪೂಜೆ ಮಾಡುತ್ತಾರೆ. ನೀವು
ಮಹಾವೀರರಾಗುತ್ತಿದ್ದೀರಲ್ಲವೆ. ಮಂದಿರದಲ್ಲಿಯೂ ಕೆಲವರನ್ನು ಆನೆಯ ಮೇಲೆ ಸವಾರಿ, ಇನ್ನೂ ಕೆಲವು
ದೇವತೆಗಳನ್ನು ಕುದುರೆಯ ಮೇಲೆ ಸವಾರಿಯನ್ನು ತೋರಿಸಿದ್ದಾರೆ ಆದರೆ ಈ ರೀತಿ ಏನೂ ಇಲ್ಲ. ತಂದೆಯು
ಮಹಾರಥಿ ಎಂದು ಹೇಳುತ್ತಾರೆ, ಮಹಾರಥಿ ಎಂದರೆ ಆನೆಯ ಮೇಲೆ ಸವಾರಿ ಎಂದರ್ಥ. ಇದರಿಂದ ಅವರು ಆನೆಯ
ಮೇಲೆ ಸವಾರಿಯನ್ನು ತೋರಿಸಿ ಬಿಟ್ಟಿದ್ದಾರೆ. ಇದನ್ನೂ ತಿಳಿಸಿದ್ದಾರೆ - ಹೇಗೆ ಗಜವನ್ನು ಗ್ರಾಹವು
ತಿನ್ನುತ್ತದೆ! ತಂದೆಯು ತಿಳಿಸುತ್ತಾರೆ - ಯಾರು ಮಹಾರಥಿ ಆಗಿದ್ದಾರೆಯೋ ಅವರನ್ನೂ ಸಹ ಕೆಲವೊಮ್ಮೆ
ಮಾಯಾ ಮೊಸಳೆಯು ನುಂಗಿ ಬಿಡುತ್ತದೆ. ನಿಮಗೀಗ ಜ್ಞಾನದ ತಿಳುವಳಿಕೆಯು ಬಂದಿದೆ. ಒಳ್ಳೊಳ್ಳೆಯ
ಮಹಾರಥಿಗಳನ್ನು ಮಾಯೆಯು ನುಂಗಿ ಬಿಡುತ್ತದೆ. ಇದು ಜ್ಞಾನದ ಮಾತುಗಳಾಗಿವೆ. ಇದರ ವರ್ಣನೆಯನ್ನು ಯಾರೂ
ಮಾಡಲು ಸಾಧ್ಯವಿಲ್ಲ. ತಂದೆಯು ತಿಳಿಸಿದ್ದಾರೆ - ನಿರ್ವಿಕಾರಿಗಳಾಗಬೇಕು. ದೈವೀ ಗುಣಗಳನ್ನು ಧಾರಣೆ
ಮಾಡಿಕೊಳ್ಳಬೇಕಾಗಿದೆ. ಕಲ್ಪ-ಕಲ್ಪವೂ ತಂದೆಯು ತಿಳಿಸುತ್ತಾರೆ - ಕಾಮ ಮಹಾಶತ್ರುವಾಗಿದೆ. ಇದರಲ್ಲಿ
ಪರಿಶ್ರಮವಿದೆ. ಇದರ ಮೇಲೆ ನೀವು ವಿಜಯ ಗಳಿಸುತ್ತೀರಿ. ಪ್ರಜಾಪಿತನ ಮಕ್ಕಳೆಂದರೆ
ಸಹೋದರ-ಸಹೋದರಿಯರಾದಿರಿ. ವಾಸ್ತವದಲ್ಲಿ ಮೂಲತಃ ನೀವು ಆತ್ಮರಾಗಿದ್ದೀರಿ. ಆತ್ಮವು ಆತ್ಮನೊಂದಿಗೆ
ಮಾತನಾಡುತ್ತದೆ. ಆತ್ಮವೇ ಈ ಕಿವಿಗಳಿಂದ ಕೇಳುತ್ತದೆ. ಇದನ್ನು ನೆನಪಿಡಬೇಕಾಗಿದೆ. ನಾವು ಆತ್ಮನಿಗೆ
ತಿಳಿಸುತ್ತೇವೆ, ದೇಹಕ್ಕಲ್ಲ. ಮೂಲತಃ ನಾವಾತ್ಮರು ಸಹೋದರ-ಸಹೋದರರಾಗಿದ್ದೇವೆ ಮತ್ತು ಪರಸ್ಪರ
ಸಹೋದರ-ಸಹೋದರಿಯರೂ ಆಗಿದ್ದೇವೆ. ಸಹೋದರರಿಗೇ ತಿಳಿಸಲಾಗುತ್ತದೆ - ದೃಷ್ಟಿಯು ಆತ್ಮದ ಕಡೆ ಹೋಗಬೇಕು.
ನಾವು ಸಹೋದರರಿಗೆ ತಿಳಿಸುತ್ತೇವೆ, ಸಹೋದರನೇ ಕೇಳುತ್ತಿದ್ದೀರಾ? ಹಾ ನಾನಾತ್ಮನು ಕೇಳುತ್ತೇನೆ.
ಬಿಕಾನೇರ್ನಲ್ಲಿ ಒಬ್ಬ ಮಗುವಿದ್ದಾರೆ, ಅವರು ಸದಾ ಆತ್ಮ, ಆತ್ಮ ಎಂದು ಬರೆಯುತ್ತಾರೆ. ನಾನಾತ್ಮನು
ಈ ಶರೀರದ ಮೂಲಕ ಬರೆಯುತ್ತಿದ್ದೇನೆ. ನಾನಾತ್ಮನಿಗೆ ಈ ವಿಚಾರವಿದೆ. ನಾನಾತ್ಮ ಇದನ್ನು ಮಾಡುತ್ತೇನೆ
ಅಂದಾಗ ಈ ಆತ್ಮಾಭಿಮಾನಿಯಾಗುವುದು ಪರಿಶ್ರಮದ ಮಾತಲ್ಲವೆ. ನಾನಾತ್ಮ ನಮಸ್ಕಾರ ಮಾಡುತ್ತೇನೆ. ಹೇಗೆ
ಆತ್ಮಿಕ ಮಕ್ಕಳೇ ಎಂದು ತಂದೆಯು ಹೇಳುತ್ತಾರೆ ಅಂದಾಗ ಭೃಕುಟಿಯ ಕಡೆ ನೋಡಬೇಕಾಗಿದೆ. ಆತ್ಮವೇ
ಕೇಳುವಂತದ್ದಾಗಿದೆ. ನಾನು ಆತ್ಮನಿಗೇ ತಿಳಿಸುತ್ತೇನೆ. ನಿಮ್ಮ ದೃಷ್ಟಿಯೂ ಸಹ ಆತ್ಮದ ಕಡೆಯೇ
ಹೋಗಬೇಕು. ಆತ್ಮವು ಭೃಕುಟಿಯ ಮಧ್ಯದಲ್ಲಿದೆ. ಶರೀರದ ಮೇಲೆ ದೃಷ್ಟಿ ಬೀಳುವುದರಿಂದ ವಿಘ್ನಗಳು
ಬೀಳುತ್ತವೆ. ಆತ್ಮನೊಂದಿಗೆ ಮಾತನಾಡಬೇಕಾಗಿದೆ, ಆತ್ಮವನ್ನೇ ನೋಡಬೇಕಾಗಿದೆ. ದೇಹಾಭಿಮಾನವನ್ನು ಬಿಡಿ,
ಆತ್ಮಕ್ಕೆ ಗೊತ್ತಿದೆ - ತಂದೆಯೂ ಸಹ ಇಲ್ಲಿ ಭೃಕುಟಿಯ ಮಧ್ಯದಲ್ಲಿ ಕುಳಿತಿದ್ದಾರೆ. ಅವರಿಗೆ ನಾವು
ನಮಸ್ತೆ ಮಾಡುತ್ತೇವೆ. ಬುದ್ಧಿಯಲ್ಲಿ ಈ ಜ್ಞಾನವಿದೆ - ನಾವಾತ್ಮರಾಗಿದ್ದೇವೆ, ಆತ್ಮವೇ
ಕೇಳಿಸಿಕೊಳ್ಳುತ್ತದೆ. ಮೊದಲು ಈ ಜ್ಞಾನವಿರಲಿಲ್ಲ. ಈ ದೇಹವು ಪಾತ್ರವನ್ನು ಅಭಿನಯಿಸುವುದಕ್ಕಾಗಿ
ಸಿಕ್ಕಿದೆ ಆದ್ದರಿಂದ ದೇಹಕ್ಕೆ ಹೆಸರನ್ನಿಡಲಾಗುತ್ತದೆ. ಈ ಸಮಯದಲ್ಲಿ ನೀವು ಆತ್ಮಾಭಿಮಾನಿಯಾಗಿ
ಹಿಂತಿರುಗಿ ಹೋಗಬೇಕಾಗಿದೆ. ಈ ಹೆಸರುಗಳನ್ನು ಪಾತ್ರವನ್ನು ಅಭಿನಯಿಸುವುದಕ್ಕಾಗಿ ಇಡಲಾಗಿದೆ.
ಹೆಸರಿಲ್ಲದೆ ಕಾರೋಬಾರು ನಡೆಯಲು ಸಾಧ್ಯವಿಲ್ಲ. ಸತ್ಯಯುಗದಲ್ಲಿಯೂ ಸಹ ಕಾರೋಬಾರು
ನಡೆಯುತ್ತದೆಯಲ್ಲವೆ ಆದರೆ ನೀವು ಸತೋಪ್ರಧಾನರಾಗಿ ಬಿಡುತ್ತೀರಿ ಆದ್ದರಿಂದ ಅಲ್ಲಿ ಯಾವುದೇ
ವಿಕರ್ಮವಾಗುವುದಿಲ್ಲ. ವಿಕರ್ಮವಾಗುವಂತಹ ಕೆಲಸವನ್ನೇ ನೀವು ಮಾಡುವುದಿಲ್ಲ. ಮಾಯೆಯ ರಾಜ್ಯವೇ
ಇರುವುದಿಲ್ಲ. ಈಗ ತಂದೆಯು ತಿಳಿಸುತ್ತಾರೆ - ನೀವಾತ್ಮಗಳು ಹಿಂತಿರುಗಿ ಹೋಗಬೇಕಾಗಿದೆ. ಇದಂತೂ
ಹಳೆಯ ಶರೀರವಾಗಿದೆ. ಮತ್ತೆ ನೀವು ಸತ್ಯ-ತ್ರೇತಾಯುಗದಲ್ಲಿ ಹೋಗುತ್ತೀರಿ, ಅಲ್ಲಿ ಜ್ಞಾನದ
ಅವಶ್ಯಕತೆಯೇ ಇರುವುದಿಲ್ಲ. ಇಲ್ಲಿ ನಿಮಗೆ ಜ್ಞಾನವನ್ನು ಏಕೆ ಕೊಡುತ್ತೇನೆ? ಏಕೆಂದರೆ
ದುರ್ಗತಿಯನ್ನು ಪಡೆದಿದ್ದೀರಿ. ಕರ್ಮವನ್ನಂತೂ ಅಲ್ಲಿಯೂ ಮಾಡಬೇಕಾಗಿದೆ ಆದರೆ ಅದು ಅಕರ್ಮವಾಗಿ
ಬಿಡುತ್ತದೆ. ಈಗ ತಂದೆಯು ತಿಳಿಸುತ್ತಾರೆ - ಕೈಕೆಲಸ ಮಾಡುತ್ತಿರಲಿ, ಬುದ್ಧಿಯು ತಂದೆಯನ್ನು ನೆನಪು
ಮಾಡಲಿ... ಆತ್ಮವು ತಂದೆಯನ್ನು ನೆನಪು ಮಾಡುತ್ತದೆ. ಸತ್ಯಯುಗದಲ್ಲಿ ನೀವು ಪಾವನರಾಗಿದ್ದಾಗ ಎಲ್ಲಾ
ಕಾರೋಬಾರು ಪಾವನವಾಗಿರುತ್ತದೆ. ತಮೋಪ್ರಧಾನ ರಾವಣ ರಾಜ್ಯದಲ್ಲಿ ನಿಮ್ಮ ಕಾರೋಬಾರು ಕೋಟಾ ಆಗಿ
ಬಿಡುತ್ತದೆ ಆದ್ದರಿಂದ ಮನುಷ್ಯರು ತೀರ್ಥ ಯಾತ್ರೆಗಳಿಗೆ ಹೋಗುತ್ತಾರೆ. ತೀರ್ಥ ಯಾತ್ರೆ
ಮೊದಲಾದುವುಗಳಿಗೆ ಹೋಗುವಂತಾಗಲು ಸತ್ಯಯುಗದಲ್ಲಿ ಅವರು ಯಾವುದೇ ಪಾಪ ಮಾಡುವುದಿಲ್ಲ. ಅಲ್ಲಿ ನೀವು
ಏನೆಲ್ಲಾ ಕಾರ್ಯವನ್ನು ಮಾಡುತ್ತೀರಿ ಅದು ಸತ್ಯವನ್ನೇ ಮಾಡುತ್ತೀರಿ. ಸತ್ಯ ತಂದೆಯ ವರದಾನವು
ಸಿಕ್ಕಿರುತ್ತದೆ. ವಿಕಾರದ ಮಾತೇ ಇರುವುದಿಲ್ಲ. ಕಾರೋಬಾರಿನಲ್ಲಿಯೂ ಸುಳ್ಳು ಹೇಳುವ
ಅವಶ್ಯಕತೆಯಿರುವುದಿಲ್ಲ. ಇಲ್ಲಂತೂ ಲೋಭವಿರುವ ಕಾರಣ ಸುಳ್ಳು, ಕಳ್ಳತನ ಮಾಡುತ್ತಾರೆ, ಅಲ್ಲಿ ಈ
ಮಾತುಗಳಿರುವುದಿಲ್ಲ. ಡ್ರಾಮಾನುಸಾರ ನೀವು ಇಂತಹ ಹೂಗಳಾಗಿ ಬಿಡುತ್ತೀರಿ, ಅದು ನಿರ್ವಿಕಾರಿ
ಪ್ರಪಂಚ, ಇದು ವಿಕಾರಿ ಪ್ರಪಂಚವಾಗಿದೆ. ಇಡೀ ಆಟವು ಬುದ್ಧಿಯಲ್ಲಿದೆ. ಈ ಸಮಯದಲ್ಲಿಯೇ ಪವಿತ್ರರಾಗಲು
ಪರಿಶ್ರಮ ಪಡಬೇಕಾಗುವುದು. ಯೋಗಬಲದಿಂದಲೇ ನೀವು ವಿಶ್ವದ ಮಾಲೀಕರಾಗುತ್ತೀರಿ. ಯೋಗಬಲವು
ಮುಖ್ಯವಾಗಿದೆ. ತಂದೆಯು ತಿಳಿಸುತ್ತಾರೆ - ಭಕ್ತಿಮಾರ್ಗದ ಯಜ್ಞ, ತಪ ಮೊದಲಾದುವುಗಳಿಂದ ಯಾರೂ
ನನ್ನನ್ನು ಪ್ರಾಪ್ತಿ ಮಾಡಿಕೊಳ್ಳುವುದಿಲ್ಲ. ಇನ್ನೂ ಸತೋ, ರಜೋ, ತಮೋದಲ್ಲಿ ಬರಲೇಬೇಕಾಗಿದೆ.
ಜ್ಞಾನವು ಬಹಳ ಸಹಜ ಹಾಗೂ ರಮಣೀಕವಾಗಿದೆ, ಪರಿಶ್ರಮವೂ ಇದೆ. ಈ ಯೋಗಕ್ಕೇ ಮಹಿಮೆಯಿದೆ, ಇದರಿಂದ ನೀವು
ಸತೋಪ್ರಧಾನರಾಗಬೇಕಾಗಿದೆ. ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ ಮಾಡುವ ಮಾರ್ಗವನ್ನು ತಂದೆಯೇ
ತಿಳಿಸುತ್ತಾರೆ. ಮತ್ತ್ಯಾರೂ ಈ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ಭಲೆ ಕೆಲವರು ಚಂದ್ರ
ಗ್ರಹದವರೆಗೂ ಹೋಗುತ್ತಾರೆ, ಕೆಲವರು ಸಾಗರದ ಆಳದಲ್ಲಿ ಹೋಗುತ್ತಾರೆ ಆದರೆ ಅದೇನೂ ರಾಜಯೋಗವಲ್ಲ.
ಅದರಿಂದ ನರನಿಂದ ನಾರಾಯಣನಂತೂ ಆಗಲು ಸಾಧ್ಯವಿಲ್ಲ. ನಾವು ಆದಿಸನಾತನ ದೇವಿ-ದೇವತಾ
ಧರ್ಮದವರಾಗಿದ್ದೆವು, ಈಗ ಪುನಃ ಆಗುತ್ತಿದ್ದೇವೆಂದು ಇಲ್ಲಿ ನೀವು ತಿಳಿದುಕೊಳ್ಳುತ್ತೀರಿ. ಸ್ಮೃತಿ
ಬಂದಿದೆ. ತಂದೆಯು ಕಲ್ಪದ ಮೊದಲೂ ಸಹ ಇದನ್ನು ತಿಳಿಸಿದ್ದರು. ನಿಶ್ಚಯ ಬುದ್ಧಿ ವಿಜಯಂತಿ.
ನಿಶ್ಚಯವಿಲ್ಲದಿದ್ದರೆ ಅವರು ಕೇಳುವುದಕ್ಕೆ ಬರುವುದೇ ಇಲ್ಲ. ನಿಶ್ಚಯ ಬುದ್ಧಿಯವರಿಂದ ಮತ್ತೆ ಸಂಶಯ
ಬುದ್ಧಿಯವರಾಗಿ ಬಿಡುತ್ತಾರೆ. ಬಹಳ ಒಳ್ಳೊಳ್ಳೆಯ ಮಹಾರಥಿಗಳೂ ಸಹ ಸಂಶಯದಲ್ಲಿ ಬಂದು ಬಿಡುತ್ತಾರೆ.
ಮಾ0ಯೆಯ ಸ್ವಲ್ಪ ಬಿರುಗಾಳಿ ಬಂದರೂ ಸಾಕು ದೇಹಾಭಿಮಾನವು ಬಂದು ಬಿಡುತ್ತದೆ.
ಈ ಬಾಪ್-ದಾದಾ ಇಬ್ಬರೂ
ಕಂಬೈಂಡ್ ಆಗಿದ್ದಾರಲ್ಲವೆ. ಶಿವ ತಂದೆಯು ಜ್ಞಾನವನ್ನು ಕೊಡುತ್ತಾರೆ ಮತ್ತೆ ಹೊರಟು ಹೋಗುತ್ತಾರೆಯೇ
ಅಥವಾ ಏನಾಗುತ್ತದೆ ಎಂಬುದನ್ನು ಯಾರು ತಿಳಿಸುವರು? ಬಾಬಾ ತಾವು ಸದಾ ಇರುತ್ತೀರಾ ಅಥವಾ ಹೊರಟು
ಹೋಗುತ್ತೀರಾ ಎಂದು ತಂದೆಯೊಂದಿಗೆ ಕೇಳುವವರು ಯಾರು? ತಂದೆಯೊಂದಿಗೆ ಕೇಳಲು ಸಾಧ್ಯವಿಲ್ಲ ಅಲ್ಲವೆ.
ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಪತಿತರಿಂದ ಪಾವನರಾಗುವ ಮಾರ್ಗವನ್ನು ತಿಳಿಸುತ್ತೇನೆ.
ಬರುತ್ತೇನೆ, ಹೋಗುತ್ತೇನೆ, ನಾನು ಬಹಳ ಕೆಲಸಗಳನ್ನು ಮಾಡಬೇಕಾಗುತ್ತದೆ. ಮಕ್ಕಳ ಬಳಿ ಹೋಗುತ್ತೇನೆ,
ಅವರಿಂದ ಕಾರ್ಯ ಮಾಡಿಸುತ್ತೇನೆ, ಇದರಲ್ಲಿ ಯಾವುದೇ ಸಂಶಯದ ಮಾತನ್ನು ತರಬಾರದು. ತಮ್ಮ
ಕರ್ತವ್ಯವಾಗಿದೆ - ತಂದೆಯನ್ನು ನೆನಪು ಮಾಡುವುದು. ಸಂಶಯದಲ್ಲಿ ಬರುವುದರಿಂದ ಬಿದ್ದು ಹೋಗುತ್ತಾರೆ.
ಮಾಯೆಯು ಬಹಳ ಜೋರಾಗಿ ಪೆಟ್ಟು ಕೊಡುತ್ತದೆ. ತಂದೆಯು ಹೇಳಿದ್ದಾರೆ - ನಾನು ಇವರ ಬಹಳ ಜನ್ಮಗಳ
ಅಂತಿಮ ಜನ್ಮದಲ್ಲಿಯೂ ಅಂತ್ಯದಲ್ಲಿ ಪ್ರವೇಶಿಸುತ್ತೇನೆ. ಮಕ್ಕಳಿಗೆ ನಿಶ್ಚಯವೂ ಇದೆ - ಅವಶ್ಯವಾಗಿ
ತಂದೆಯೇ ನಮಗೆ ಈ ಜ್ಞಾನವನ್ನು ಕೊಡುತ್ತಿದ್ದಾರೆ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಆದರೂ ಸಹ ಈ
ನಿಶ್ಚಯದಿಂದ ಎಷ್ಟೊಂದು ಮಂದಿ ಕೆಳಗೆ ಬೀಳುತ್ತಾರೆ, ಇದು ತಂದೆಗೆ ಗೊತ್ತಿದೆ. ನೀವು
ಪಾವನರಾಗಬೇಕೆಂದರೆ ನನ್ನೊಬ್ಬನನ್ನೇ ನೆನಪು ಮಾಡಿ. ಮತ್ತ್ಯಾರ ಮಾತುಗಳ ಹಿಂದೆ ಬೀಳಬೇಡಿ ಎಂದು
ತಂದೆಯು ತಿಳಿಸುತ್ತಾರೆ. ನೀವು ಇಂತಹ ಮಾತುಗಳನ್ನಾಡುತ್ತೀರಿ. ಇದರಿಂದಲೇ ಪಕ್ಕಾ
ನಿಶ್ಚಯವಿಲ್ಲವೆಂಬುದು ಅರ್ಥವಾಗುತ್ತದೆ. ಮೊದಲು ಒಂದು ಮಾತನ್ನು ತಿಳಿದುಕೊಳ್ಳಿ, ಅದರಿಂದ ನಿಮ್ಮ
ಪಾಪ ನಾಶವಾಗುತ್ತದೆ. ಉಳಿದಂತೆ ವ್ಯರ್ಥ ಮಾತುಗಳನ್ನಾಡುವ ಅವಶ್ಯಕತೆಯಿಲ್ಲ. ತಂದೆಯ ನೆನಪಿನಿಂದ
ವಿಕರ್ಮ ವಿನಾಶವಾಗುತ್ತದೆ ಅಂದಮೇಲೆ ಅನ್ಯ ಮಾತುಗಳಲ್ಲಿ ಏಕೆ ಬರುತ್ತೀರಿ! ಯಾರಾದರೂ
ಪ್ರಶ್ನೋತ್ತರಗಳಲ್ಲಿ ತಬ್ಬಿಬ್ಬಾದರೆ ಅವರಿಗೆ ತಿಳಿಸಿ - ನೀವು ಇವೆಲ್ಲಾ ಮಾತುಗಳನ್ನು ಬಿಟ್ಟು
ಒಬ್ಬ ತಂದೆಯ ನೆನಪಿನಲ್ಲಿರುವ ಪುರುಷಾರ್ಥ ಮಾಡಿ. ಸಂಶಯದಲ್ಲಿ ಬಂದರೆ ವಿದ್ಯೆಯನ್ನೇ ಬಿಟ್ಟು
ಬಿಡುತ್ತಾರೆ ಮತ್ತೆ ಅಂತಹವರ ಕಲ್ಯಾಣವಾಗುವುದಿಲ್ಲ. ನಾಡಿ ನೋಡಿ ತಿಳಿಸಬೇಕಾಗಿದೆ.
ಸಂಶಯದಲ್ಲಿದ್ದರೆ ಒಂದು ಮಾತಿನ ಮೇಲೆ ನಿಲ್ಲಿಸಿ ಬಿಡಬೇಕು. ಬಹಳ ಯುಕ್ತಿಯಿಂದ ತಿಳಿಸಬೇಕಾಗುತ್ತದೆ.
ಮಕ್ಕಳಿಗೆ ಮೊದಲು ಈ ನಿಶ್ಚಯವಿರಬೇಕು - ತಂದೆಯು ಬಂದಿದ್ದಾರೆ, ನಮ್ಮನ್ನು ಪಾವನರನ್ನಾಗಿ
ಮಾಡುತ್ತಿದ್ದಾರೆ. ಇದಂತೂ ಖುಷಿಯಿರುತ್ತದೆ. ಓದದಿದ್ದರೆ ಅನುತ್ತೀರ್ಣರಾಗುತ್ತಾರೆ. ಅವರಿಗೆ
ಖುಷಿಯೂ ಹೇಗೆ ಬರುವುದು! ಶಾಲೆಯಲ್ಲಿ ವಿದ್ಯೆಯಂತೂ ಒಂದೇ ಆಗಿರುತ್ತದೆ ಆದರೆ ಕೆಲವರು ಅದನ್ನು ಓದಿ
ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುತ್ತಾರೆ. ಇನ್ನೂ ಕೆಲವರು 5-10 ರೂಪಾಯಿಗಳನ್ನು
ಸಂಪಾದಿಸುತ್ತಾರೆ. ನರನಿಂದ ನಾರಾಯಣನಾಗುವುದೇ ನಿಮ್ಮ ಗುರಿಯಾಗಿದೆ. ರಾಜಧಾನಿಯು
ಸ್ಥಾಪನೆಯಾಗುತ್ತದೆ. ನೀವು ಮನುಷ್ಯರಿಂದ ದೇವತೆಗಳಾಗುತ್ತೀರಿ. ದೇವತೆಗಳದು ದೊಡ್ಡ ರಾಜಧಾನಿಯಾಗಿದೆ.
ಅದರಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವುದು ವಿದ್ಯೆ ಮತ್ತು ಚಲನೆಯ ಮೇಲೆ ಅವಲಂಭಿಸಿದೆ. ನಿಮ್ಮ
ಚಲನೆಯು ಬಹಳ ಚೆನ್ನಾಗಿರಬೇಕು. ತಂದೆಯು ತನಗಾಗಿಯೂ ಹೇಳುತ್ತಾರೆ, ಕರ್ಮಾತೀತ ಸ್ಥಿತಿಯಾಗಿಲ್ಲ.
ನಾನೂ ಸಹ ಸಂಪೂರ್ಣನಾಗಬೇಕಾಗಿದೆ. ಈಗಿನ್ನೂ ಆಗಿಲ್ಲ. ಜ್ಞಾನವು ಬಹಳ ಸಹಜವಾಗಿದೆ, ತಂದೆಯನ್ನು
ನೆನಪು ಮಾಡುವುದೂ ಸಹ ಸಹಜವಾಗಿದೆ ಆದರೆ ಮಾಡಬೇಕಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಯಾವುದೇ
ಮಾತಿನಲ್ಲಿ ಸಂಶಯ ಬುದ್ಧಿಯವರಾಗಿ ವಿದ್ಯೆಯನ್ನು ಬಿಡಬಾರದು. ಮೊದಲು ಪಾವನರಾಗುವುದಕ್ಕಾಗಿ ಒಬ್ಬ
ತಂದೆಯನ್ನು ನೆನಪು ಮಾಡಬೇಕು. ಅನ್ಯ ಮಾತುಗಳಲ್ಲಿ ಹೋಗಬಾರದು.
2. ಶರೀರದ ಕಡೆ ಗಮನ
ಹೋಗುವುದರಿಂದ ವಿಘ್ನಗಳು ಬರುತ್ತವೆ ಆದ್ದರಿಂದ ಭೃಕುಟಿಯನ್ನು ನೋಡಬೇಕಾಗಿದೆ. ಆತ್ಮನೆಂದು ತಿಳಿದು
ಆತ್ಮನೊಂದಿಗೆ ಮಾತನಾಡಬೇಕಾಗಿದೆ. ಆತ್ಮಾಭಿಮಾನಿಯಾಗಬೇಕಾಗಿದೆ. ನಿರ್ಭಯರಾಗಿ ಸೇವೆ ಮಾಡಬೇಕಾಗಿದೆ.
ವರದಾನ:
ಸದಾ ತಂದೆಯ
ಅವಿನಾಶಿ ಮತ್ತು ನಿಸ್ವಾರ್ಥ ಪ್ರೇಮದಲ್ಲಿ ಲವಲೀನರಾಗಿರುವ ಮಾಯಾ ಫ್ರೂಫ್ ಭವ.
ಯಾವ ಮಕ್ಕಳು ಸದಾ ತಂದೆಯ
ಪ್ರೀತಿಯಲ್ಲಿ ಲವಲೀನರಾಗಿರುತ್ತಾರೆ ಅವರನ್ನು ಮಾಯೆ ಆಕರ್ಷಣೆ ಮಾಡಲು ಸಾಧ್ಯವಿಲ್ಲ. ಹೇಗೆ ವಾಟರ್
ಫ್ರೂಫ್ ಬಟ್ಟೆಯಿರುತ್ತದೆ ಅದರ ಮೇಲೆ ಒಂದು ಹನಿ ನೀರೂ ಸಹ ನಿಲ್ಲುವುದಿಲ್ಲ. ಅದೇರೀತಿ ಯಾರು
ಲಗನ್ನಲ್ಲಿ ಲವಲೀನರಾಗಿರುತ್ತಾರೆ ಅವರು ಮಾಯಾ ಫ್ರೂಫ್ ಆಗಿ ಬಿಡುತ್ತಾರೆ. ಮಾಯೆಯ ಯಾವುದೇ ಯುದ್ಧ,
ಯುದ್ಧ ಮಾಡಲು ಸಾಧ್ಯವಿಲ್ಲ. ಏಕೆಂದರೆ ತಂದೆಯ ಪ್ರೀತಿ ಅವಿನಾಶಿಯಾಗಿದೆ ಮತ್ತು ನಿಸ್ವಾರ್ಥವಾಗಿದೆ,
ಯಾರು ಇದರ ಅನುಭವಿಗಳಾಗಿರುತ್ತಾರೆ ಅವರು ಅಲ್ಪಕಾಲದ ಪ್ರೀತಿಯಲ್ಲಿ ಸಿಕ್ಕಿ ಹಾಕಿಕೊಳ್ಳಲು
ಸಾಧ್ಯವಿಲ್ಲ. ಒಂದು ತಂದೆ ಮತ್ತು ನಾನು, ಇವರ ಮಧ್ಯೆ ಯಾರೇ ಮೂರನೆಯವರು ಬರಲು ಸಾಧ್ಯವಿಲ್ಲ.
ಸ್ಲೋಗನ್:
ನ್ಯಾರೆ-ಪ್ಯಾರೆ
ಆಗಿ ಕರ್ಮ ಮಾಡುವಂತಹವರೇ ಸೆಕೆಂಡ್ನಲ್ಲಿ ಫುಲ್ಸ್ಟಾಪ್ ಹಾಕಲು ಸಾಧ್ಯ.
ಅವ್ಯಕ್ತ ಸೂಚನೆ:- ಈಗ
ಸಂಪನ್ನ ಅಥವಾ ಕರ್ಮಾತೀತರಾಗುವುದರಲ್ಲಿ ತತ್ಪರರಾಗಿರಿ.
ಕರ್ಮಾತೀತ ಅರ್ಥಾತ್
ಕರ್ಮಕ್ಕೆ ವಶರಾಗುವವರಲ್ಲಾ ಆದರೆ ಮಾಲೀಕರಾಗಿ, ಆಥಾರಿಟಿ (ಅಧಿಕಾರಿ)ಯಾಗಿ ಕರ್ಮೇಂದ್ರಿಯಗಳ
ಸಂಬಂಧದಲ್ಲಿ ಬನ್ನಿ, ವಿನಾಶಿ ಸಂಪಾದನೆಯಿಂದ ಭಿನ್ನರಾಗಿ ಕರ್ಮೇಂದ್ರಿಯಗಳಿಂದ ಕರ್ಮ ಮಾಡಿಸಿರಿ.
ಆತ್ಮ ಮಾಲೀಕಕ್ಕೆ ಕರ್ಮವು ತನ್ನ ಅಧೀನ ಮಾಡಿಕೊಳ್ಳದಿರಲಿ ಆದರೆ ಅಧಿಕಾರಿಯಾಗಿ ಕರ್ಮ
ಮಾಡಿಸುತ್ತಿರಲಿ. ಮಾಡಿಸುವವರಾಗಿ ಕರ್ಮ ಮಾಡಿಸಿರಿ - ಇದಕ್ಕೆ ಹೇಳಲಾಗುತ್ತದೆ ಸಂಬಂಧದಲ್ಲಿ
ಬರುವುದು. ಕರ್ಮಾತೀತ ಆತ್ಮ ಸಂಬಂಧದಲ್ಲಿ ಬರುತ್ತದೆ ಬಂಧನದಲ್ಲಿ ಅಲ್ಲ.