13.01.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ-
ಪತಿತನಿಂದ ಪಾವನ ಮಾಡುವಂತಹ ತಂದೆಯೊಂದಿಗೆ ನಿಮ್ಮದು ಬಹಳ-ಬಹಳ ಪ್ರೀತಿಯಿರಬೇಕು, ಬೆಳಗ್ಗೆ-ಬೆಳಗ್ಗೆ
ಎದ್ದು ಮೊಟ್ಟಮೊದಲು ಹೇಳಿರಿ- ಶಿವಬಾಬಾ ಗುಡ್ಮಾರ್ನಿಂಗ್"
ಪ್ರಶ್ನೆ:
ಅಕ್ಯುರೇಟ್
ನೆನಪಿಗಾಗಿ ಯಾವ ಧಾರಣೆಗಳಿರಬೇಕು? ಅಕ್ಯುರೇಟ್ ನೆನಪಿರುವವರ ಲಕ್ಷಣಗಳೇನಾಗಿರುತ್ತವೆ?
ಉತ್ತರ:
ಅಕ್ಯುರೇಟ್
ನೆನಪಿಗಾಗಿ ಧೈರ್ಯತೆ, ಗಂಭೀರತೆ ಮತ್ತು ತಿಳುವಳಿಕೆ ಇರಬೇಕು. ಈ ಧಾರಣೆಯ ಆಧಾರದಿಂದ ಯಾರು ನೆನಪು
ಮಾಡುತ್ತಾರೆಯೋ ಅವರ ನೆನಪು, ನೆನಪಿನೊಂದಿಗೆ ಮಿಲನವಾಗುತ್ತದೆ ಮತ್ತು ತಂದೆಯ ಕರೆಂಟ್(ಶಕ್ತಿ)
ಬರತೊಡಗುತ್ತದೆ. ಆ ಕರೆಂಟ್ನಿಂದ ಆಯಸ್ಸು ಹೆಚ್ಚಾಗುತ್ತದೆ, ಆರೋಗ್ಯವಂತರಾಗುತ್ತೀರಿ. ಹೃದಯವು
ಸಂಪೂರ್ಣವಾಗಿ ಶೀತಲವಾಗಿಬಿಡುತ್ತದೆ, ಆತ್ಮವು ಸತೋಪ್ರಧಾನವಾಗುತ್ತಾ ಸಾಗುತ್ತದೆ.
ಓಂ ಶಾಂತಿ.
ತಂದೆಯು ಹೇಳುತ್ತಾರೆ- ಮಧುರ ಮಕ್ಕಳೇ, ತತ್ತ್ವಂ ಅರ್ಥಾತ್ ನೀವು ಆತ್ಮರೂ ಸಹ ಶಾಂತ
ಸ್ವರೂಪರಾಗಿದ್ದೀರಿ. ನೀವು ಸರ್ವಆತ್ಮರ ಸ್ವಧರ್ಮವಿರುವುದೇ ಶಾಂತಿ. ಶಾಂತಿಧಾಮದಿಂದ ಇಲ್ಲಿಗೆ ಬಂದು
ಟಾಕಿ ಆಗುತ್ತೀರಿ. ಈ ಕರ್ಮೇಂದ್ರಿಯಗಳು ನಿಮಗೆ ಸಿಗುತ್ತದೆ- ಪಾತ್ರವನ್ನಭಿನಯಿಸುವುದಕ್ಕಾಗಿ.
ಆತ್ಮವು ಚಿಕ್ಕದು-ದೊಡ್ಡದು ಆಗುವುದಿಲ್ಲ. ಶರೀರವು ಚಿಕ್ಕದು ದೊಡ್ಡದಾಗುವುದು. ತಂದೆಯು
ಹೇಳುತ್ತಾರೆ- ನಾನಂತು ಶರೀರಯುಳ್ಳವನಾಗುವುದಿಲ್ಲ. ನಾನು ಮಕ್ಕಳೊಂದಿಗೆ ಸನ್ಮುಖದಲ್ಲಿ ಮಿಲನವಾಗಲು
ಬರಬೇಕಾಗುತ್ತದೆ. ಅದಕ್ಕಾಗಿ ತಿಳಿದುಕೊಳ್ಳಿರಿ- ಉದಾ: ತಂದೆಯಿದ್ದಾರೆ, ಅವರಿಂದ ಮಕ್ಕಳ
ಜನ್ಮವಾಗುತ್ತದೆ ಅಂದಮೇಲೆ ಆ ಮಗುವು ಹೀಗೆ ಹೇಳುವುದಿಲ್ಲ- ನಾನು ಪರಮಧಾಮದಿಂದ ಜನ್ಮವನ್ನು
ತೆಗೆದುಕೊಂಡು ಮಾತಾ-ಪಿತನೊಂದಿಗೆ ಮಿಲನವಾಗಲು ಬಂದಿದ್ದೇನೆ. ಭಲೆ ಯಾವುದೇ ಹೊಸಆತ್ಮವು ಯಾರದೇ
ಶರೀರದಲ್ಲಿ ಬರುತ್ತದೆ, ಅಥವಾ ಯಾವುದಾದರೂ ಹಳೆಯ ಆತ್ಮವು ಯಾರದೇ ಶರೀರದಲ್ಲಿಯಾದರೂ
ಪ್ರವೇಶಿಸುತ್ತದೆಯೆಂದರೆ ಹೀಗೆ ಹೇಳುವುದಿಲ್ಲ- ಮಾತಾಪಿತನೊಂದಿಗೆ ಮಿಲನವಾಗಲು ಬಂದಿರುವೆನು.
ಅವರನ್ನು ಸ್ವತಹವಾಗಿಯೇ ಮಾತಾಪಿತನೊಂದಿಗೆ ಭೇಟಿಯಾಗಿಬಿಡುತ್ತಾರೆ. ಇಲ್ಲಿ ಇದು ಹೊಸಮಾತಾಗಿದೆ.
ತಂದೆಯು ಹೇಳುವರು- ನಾನು ಪರಮಧಾಮದಿಂದ ಬಂದು ನೀವು ಮಕ್ಕಳ ಸನ್ಮುಖದಲ್ಲಿದ್ದೇನೆ. ಮಕ್ಕಳಿಗೆ ಪುನಃ
ಜ್ಞಾನವನ್ನು ಕೊಡುತ್ತೇನೆ ಏಕೆಂದರೆ ನಾನು ಜ್ಞಾನಸಾಗರ, ನಾಲೆಡ್ಜ್ಫುಲ್....... ನಾನು ಬರುವುದು
ನೀವು ಮಕ್ಕಳಿಗೆ ಓದಿಸುವುದಕ್ಕಾಗಿ, ರಾಜಯೋಗವನ್ನು ಕಲಿಸುವುದಕ್ಕಾಗಿ. ರಾಜಯೋಗವನ್ನು ಕಲಿಸುವವರು
ಭಗವಂತನೇ ಆಗಿದ್ದಾರೆ. ಕೃಷ್ಣನ ಆತ್ಮನಿಗೆ ಈಶ್ವರನ ಈ ಪಾತ್ರವಿಲ್ಲ. ಪ್ರತಿಯೊಬ್ಬರ ಪಾತ್ರವು
ತನ್ನದಾಗಿದೆ, ಈಶ್ವರನ ಪಾತ್ರವು ತನ್ನದಾಗಿದೆ. ಅಂದಮೇಲೆ ತಂದೆಯು ತಿಳಿಸುತ್ತಾರೆ- ಮಧುರ ಮಕ್ಕಳೇ,
ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳಿರಿ. ಹೀಗೆ ತಮ್ಮನ್ನು ತಿಳಿಯುವುದು ಎಷ್ಟು ಮಧುರವೆನಿಸುತ್ತದೆ!
ನಾವೇನಾಗಿದ್ದೆವು! ಈಗ ಏನಾಗುತ್ತಿದ್ದೇವೆ!
ಈ ಡ್ರಾಮಾವು ಎಷ್ಟು
ಅದ್ಭುತವಾಗಿ ಮಾಡಲ್ಪಟ್ಟಿದೆ, ಇದೂ ಸಹ ನೀವು ಈಗ ತಿಳಿಸುತ್ತೀರಿ. ಇದು ಪುರುಷೋತ್ತಮ
ಸಂಗಮಯುಗವಾಗಿದೆ, ಕೇವಲ ಇಷ್ಟು ನೆನಪಿದ್ದರೂ ಸಹ ಪರಿಪಕ್ವವಾಗಿಬಿಡುತ್ತೀರಿ- ನಾವು ಸತ್ಯಯುಗದಲ್ಲಿ
ಹೋಗುವವರಿದ್ದೇವೆ. ಈಗ ಸಂಗಮದಲ್ಲಿದ್ದೇವೆ ನಂತರ ತಮ್ಮ ಮನೆಗೆ ಹೋಗಬೇಕು ಆದ್ದರಿಂದ ಅವಶ್ಯವಾಗಿ
ಪಾವನರಾಗಬೇಕು. ಆಂತರ್ಯದಲ್ಲಿ ಬಹಳ ಖುಷಿಯಾಗಬೇಕು- ಓಹೋ! ಬೇಹದ್ದಿನ ತಂದೆಯು ಹೇಳುತ್ತಾರೆ-
ಮಧುರಾತಿ ಮಧುರ ಮಕ್ಕಳೇ ನನ್ನನ್ನು ನೆನಪು ಮಾಡಿರಿ, ಆಗ ನೀವು ಸತೋಪ್ರಧಾನರಾಗಿಬಿಡುತ್ತೀರಿ.
ವಿಶ್ವದ ಮಾಲೀಕರಾಗುತ್ತೀರಿ. ತಂದೆಯು ಮಕ್ಕಳನ್ನು ಎಷ್ಟೊಂದು ಪ್ರೀತಿ ಮಾಡುತ್ತಾರೆ. ಅದು ಹೀಗಲ್ಲ-
ಕೇವಲ ಟೀಚರ್ನ ರೂಪದಲ್ಲಿ ಓದಿಸಿ ಮತ್ತೆ ಮನೆಗೆ ಹೋಗಿಬಿಡುತ್ತಾರೆ. ಇವರಂತು ತಂದೆಯೂ, ಟೀಚರ್ ಸಹ
ಆಗಿದ್ದಾರೆ. ನಿಮಗೆ ಓದಿಸುತ್ತಾರೆ. ನೆನಪಿನ ಯಾತ್ರೆಯನ್ನೂ ಕಲಿಸಿಕೊಡುತ್ತಾರೆ.
ವಿಶ್ವದ ಮಾಲೀಕರನ್ನಾಗಿ
ಮಾಡುವಂತಹ, ಪತಿತರಿಂದ ಪಾವನರನ್ನಾಗಿ ಮಾಡುವಂತಹ ತಂದೆಯೊಂದಿಗೆ ಬಹಳ ಪ್ರೀತಿಯಿರಬೇಕು.
ಬೆಳಗ್ಗೆ-ಬೆಳಗ್ಗೆ ಎದ್ದಕೂಡಲೇ ಮೊಟ್ಟಮೊದಲು ಶಿವತಂದೆಯೊಂದಿಗೆ ಗುಡ್ಮಾರ್ನಿಂಗ್ ಮಾಡಬೇಕು.
ಗುಡ್ಮಾರ್ನಿಂಗ್ ಅರ್ಥಾತ್ ನೆನಪು ಮಾಡುತ್ತೀರೆಂದರೆ ಬಹಳ ಖುಷಿಯಲ್ಲಿರುತ್ತೀರಿ. ಮಕ್ಕಳು ತಮ್ಮ
ಹೃದಯದೊಂದಿಗೆ ಕೇಳಿಕೊಳ್ಳಬೇಕು- ನಾನು ಬೆಳಗ್ಗೆ ಎದ್ದು ಬೇಹದ್ದಿನ ತಂದೆಯನ್ನು ಎಷ್ಟು ನೆನಪು
ಮಾಡುತ್ತೇನೆ? ಮನುಷ್ಯರು ಭಕ್ತಿಯನ್ನೂ ಸಹ ಬೆಳಗ್ಗೆ ಮಾಡುತ್ತಾರಲ್ಲವೆ! ಭಕ್ತಿಯನ್ನು
ಎಷ್ಟುಪ್ರೀತಿಯಿಂದ ಮಾಡುತ್ತಾರೆ. ಆದರೆ ಬಾಬಾರವರು ತಿಳಿದಿದ್ದಾರೆ- ಕೆಲವುಮಕ್ಕಳು ಹೃದಯದಿಂದ,
ಬಹಳಪ್ರೀತಿಯಿಂದ ನೆನಪು ಮಾಡುವುದಿಲ್ಲ. ಬೆಳಗ್ಗೆ ಎದ್ದು ಬಾಬಾರವರೊಂದಿಗೆ ಗುಡ್ಮಾರ್ನಿಂಗ್
ಮಾಡಬೇಕು, ಜ್ಞಾನದ ಚಿಂತನೆಯಲ್ಲಿರುತ್ತೀರೆಂದರೆ ಖುಷಿಯ ನಶೆಯೇರುವುದು. ತಂದೆಗೆ ಗುಡ್ಮಾರ್ನಿಂಗ್
ಮಾಡುವುದಿಲ್ಲವೆಂದರೆ ಪಾಪಗಳ ಹೊರೆಯು ಹೇಗೆ ಇಳಿಯುತ್ತದೆ! ಮುಖ್ಯವಾಗಿರುವುದೇ ನೆನಪು, ಇದರಿಂದ
ಭವಿಷ್ಯಕ್ಕಾಗಿ ನಿಮ್ಮದು ಬಹಳ ಶ್ರೇಷ್ಠ ಸಂಪಾದನೆಯಾಗುತ್ತದೆ. ಕಲ್ಪ-ಕಲ್ಪಾಂತರಕ್ಕೂ ಈ ಸಂಪಾದನೆಯು
ಕೆಲಸಕ್ಕೆ ಬರುತ್ತದೆ. ಬಹಳ ಧೈರ್ಯ, ಗಂಭೀರತೆ, ತಿಳಿದುಕೊಂಡು ನೆನಪು ಮಾಡಬೇಕಾಗುತ್ತದೆ.
ಚಿಕ್ಕಲೆಕ್ಕವನ್ನಂತು ಭಲೆ ಮಾಡಿ ಇದನ್ನು ಹೇಳಿಬಿಡುತ್ತಾರೆ- ನಾವು ಬಾಬಾರವರನ್ನು ಬಹಳ ನೆನಪು
ಮಾಡುತ್ತೇವೆ ಆದರೆ ಅಕ್ಯುರೇಟ್ ನೆನಪು ಮಾಡುವುದರಲ್ಲಿ ಪರಿಶ್ರಮವಿದೆ. ಯಾರು ತಂದೆಯನ್ನು ಹೆಚ್ಚು
ನೆನಪು ಮಾಡುತ್ತಾರೆ, ಅವರಿಗೆ ಕರೆಂಟ್ ಹೆಚ್ಚು ಸಿಗುತ್ತದೆ ಏಕೆಂದರೆ ನೆನಪಿನಿಂದ ನೆನಪು
ಸಿಗುತ್ತದೆ. ಯೋಗ ಮತ್ತು ಜ್ಞಾನ ಎರಡು ವಸ್ತುಗಳಿವೆ. ಯೋಗದ ವಿಷಯವು ಬೇರೆಯಾಗಿದೆ, ಬಹಳ
ಶ್ರೇಷ್ಠವಾದ ವಿಷಯವಾಗಿದೆ. ಯೋಗದಿಂದಲೇ ಆತ್ಮವು ಸತೋಪ್ರಧಾನವಾಗುತ್ತದೆ. ನೆನಪಿಲ್ಲದೆ
ಸತೋಪ್ರಧಾನರಾಗುವುದು ಅಸಂಭವವಿದೆ. ಬಹಳಚೆನ್ನಾಗಿ ಪ್ರೀತಿಯಿಂದ ನೆನಪು ಮಾಡುತ್ತೀರೆಂದರೆ
ಸ್ವತಹವಾಗಿ ಕರೆಂಟ್ ಸಿಗುತ್ತದೆ, ಆರೋಗ್ಯವಂತರು ಆಗಿಬಿಡುತ್ತೀರಿ. ಕರೆಂಟ್(ಶಕ್ತಿ) ಆಯಸ್ಸು
ಧೀರ್ಘಾಯಸ್ಸು ಆಗುತ್ತದೆ. ಮಕ್ಕಳೇ ನೆನಪು ಮಾಡುತ್ತೀರೆಂದರೆ ತಂದೆಯೂ ಸಹ ಸರ್ಚ್ಲೈಟ್ ಕೊಡುತ್ತಾರೆ.
ತಂದೆಯವರು ಎಷ್ಟು ಶ್ರೇಷ್ಠವಾದ ಖಜಾನೆಯನ್ನು ನೀವು ಮಕ್ಕಳಿಗೆ ಕೊಡುತ್ತಾರೆ.
ಮಧುರ ಮಕ್ಕಳು ಇದನ್ನು
ಪರಿಪಕ್ವವಾಗಿ ನೆನಪಿಟ್ಟುಕೊಳ್ಳಬೇಕಾಗಿದೆ, ಶಿವತಂದೆಯು ನಮಗೆ ಓದಿಸುತ್ತಿದ್ದಾರೆ. ಶಿವತಂದೆಯು
ಪತಿತ-ಪಾವನನೂ ಆಗಿದ್ದಾರೆ, ಸದ್ಗತಿದಾತನೂ ಆಗಿದ್ದಾರೆ. ಸದ್ಗತಿ ಅಂದರೆ ಸ್ವರ್ಗದ
ರಾಜ್ಯಭಾಗ್ಯವನ್ನು ಕೊಡುತ್ತಾರೆ. ತಂದೆಯು ಎಷ್ಟೊಂದು ಮಧುರವಾಗಿದ್ದಾರೆ. ಎಷ್ಟುಪ್ರೀತಿಯಿಂದ
ಮಕ್ಕಳಿಗೆ ಕುಳಿತು ಓದಿಸುತ್ತಾರೆ. ಬಾಬಾರವರು ದಾದಾರವರ ಮೂಲಕ ನಮಗೆ ಓದಿಸುತ್ತಾರೆ. ಬಾಬಾ
ಎಷ್ಟೊಂದು ಮಧುರವಿದ್ದಾರೆ. ಎಷ್ಟು ಪ್ರೀತಿ ಮಾಡುತ್ತಾರೆ! ಯಾವುದೇ ಕಷ್ಟಕೊಡುವುದಿಲ್ಲ. ಕೇವಲ
ಇಷ್ಟೇ ಹೇಳುತ್ತಾರೆ- ನನ್ನನ್ನು ನೆನಪು ಮಾಡಿರಿ ಮತ್ತು ಚಕ್ರವನ್ನು ನೆನಪು ಮಾಡಿರಿ. ತಂದೆಯ
ನೆನಪಿನಲ್ಲಿ ಹೃದಯವು ಸಂಪೂರ್ಣವಾಗಿ ಸ್ಥಿತವಾಗಿಬಿಡಬೇಕು. ಒಬ್ಬ ತಂದೆಯದೇ ನೆನಪು ಸತಾಯಿಸಬೇಕಾಗಿದೆ
ಏಕೆಂದರೆ ತಂದೆಯಿಂದ ಎಷ್ಟು ಶ್ರೇಷ್ಠವಾದ ಆಸ್ತಿಯು ಸಿಗುತ್ತದೆ. ತಮ್ಮನ್ನು ನೋಡಿಕೊಳ್ಳಬೇಕು-
ನಮ್ಮದು ತಂದೆಯಜೊತೆ ಎಷ್ಟು ಪ್ರೀತಿಯಿದೆ? ಎಲ್ಲಿಯವರೆಗೆ ನಮ್ಮಲ್ಲಿ ದೈವೀಗುಣಗಳಿವೆ? ಏಕೆಂದರೆ
ನೀವು ಮಕ್ಕಳೀಗ ಮಳ್ಳುಗಳಿಂದ ಹೂವಾಗುತ್ತಿದ್ದೀರಿ. ಎಷ್ಟೆಷ್ಟು ಯೋಗದಲ್ಲಿರುತ್ತೀರಿ, ಅಷ್ಟು
ಮುಳ್ಳುಗಳಿಂದ ಹೂವು, ಸತೋಪ್ರಧಾನರಾಗಿಬಿಡುತ್ತೀರಿ. ಹೂವಾಗಿಬಿಡುತ್ತೀರೆಂದರೆ ನಂತರ ಇಲ್ಲಿರಲು
ಸಾಧ್ಯವಿಲ್ಲ. ಹೂಗಳ ಉದ್ಯಾನವಿರುವುದೇ ಸ್ವರ್ಗ. ಯಾರು ಬಹಳ ಮುಳ್ಳುಗಳನ್ನು ಹೂವನ್ನಾಗಿ
ಮಾಡುತ್ತಾರೆಯೋ ಅವರನ್ನೇ ಸತ್ಯ ಸುಗಂಧಭರಿತ ಹೂವೆಂದು ಹೇಳುತ್ತಾರೆ. ಅವರೆಂದಿಗೂ ಯಾರಿಗೂ
ಮುಳ್ಳುಗಳನ್ನು ಚುಚ್ಚುವುದಿಲ್ಲ. ಕ್ರೋಧವೂ ಸಹ ದೊಡ್ಡಮುಳ್ಳು ಆಗಿದೆ, ಅನೇಕರಿಗೆ ದುಃಖವನ್ನು
ಕೊಡುತ್ತದೆ. ಈಗ ನೀವುಮಕ್ಕಳು ಮುಳ್ಳುಗಳ ಪ್ರಪಂಚದಿಂದ ದಡದಲ್ಲಿ ಬಂದುಬಿಟ್ಟಿದ್ದೀರಿ, ನೀವಿದ್ದೀರಿ
ಸಂಗಮದಲ್ಲಿದ್ದೀರಿ. ಹೇಗೆ ಮಾಲಿಯು ಹೂಗಳನ್ನು ಬೇರೆ ಪಾತ್ರೆಯಲ್ಲಿ ತೆಗೆದಿಡುತ್ತಾನೆ, ಹಾಗೆಯೇ
ನೀವು ಮಕ್ಕಳನ್ನೀಗ ಸಂಗಮಯುಗಿ ಪಾತ್ರೆಯಲ್ಲಿ(ಮಡಿಕೆ) ಬೇರೆಯಾಗಿಟ್ಟಿದ್ದಾರೆ. ನಂತರ ನೀವು ಹೂಗಳು
ಸ್ವರ್ಗದಲ್ಲಿ ಹೊರಟುಬಿಡುತ್ತೀರಿ, ಕಲಿಯುಗಿ ಮುಳ್ಳುಗಳು ಭಸ್ಮವಾಗಿಬಿಡುತ್ತದೆ.
ಮಧುರ ಮಕ್ಕಳು
ತಿಳಿದಿದ್ದಾರೆ- ಪಾರಲೌಕಿಕ ತಂದೆಯಿಂದ ನಮಗೆ ಅವಿನಾಶಿ ಆಸ್ತಿಯು ಸಿಗುತ್ತದೆ. ಯಾರು
ಸತ್ಯ-ಸತ್ಯವಾದ ಮಕ್ಕಳಿದ್ದಾರೆ, ಯಾರದು ತಂದೆಯೊಂದಿಗೆ ಸಂಪೂರ್ಣವಾದ ಪ್ರೀತಿಯಿದೆ, ಅವರಿಗೆ ಬಹಳ
ಖುಷಿಯಿರುತ್ತದೆ. ನಾವು ವಿಶ್ವದ ಮಾಲೀಕರಾಗುತ್ತೇವೆ. ಹೌದು, ಪುರುಷಾರ್ಥದಿಂದಲೇ ವಿಶ್ವದ
ಮಾಲೀಕರನ್ನಾಗಿ ಮಾಡಲಾಗುತ್ತದೆ, ಕೇವಲ ಹೇಳುವುದರಿಂದಲ್ಲ. ಯಾರು ಅನನ್ಯಮಕ್ಕಳಿದ್ದಾರೆ, ಅವರಿಗೆ
ಸದಾ ಇದು ನೆನಪಿರುತ್ತದೆ- ನಾವು ನಮಗಾಗಿ ಮತ್ತೆ ಅದೇ ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಯನ್ನು
ಸ್ಥಾಪನೆ ಮಾಡುತ್ತಿದ್ದೇವೆ. ತಂದೆಯು ಹೇಳುತ್ತಾರೆ- ಮಧುರ ಮಕ್ಕಳೇ, ನೀವು ಎಷ್ಟು ಅನೇಕರ
ಕಲ್ಯಾಣವನ್ನು ಮಾಡುತ್ತೀರಿ, ಅಷ್ಟೇ ನಿಮಗೆ ರಿಟರ್ನ್ ಸಿಗುತ್ತದೆ. ಅನೇಕರಿಗೆ ಮಾರ್ಗವನ್ನು
ತಿಳಿಸುತ್ತೀರೆಂದರೆ ಅನೇಕರ ಆಶೀರ್ವಾದವು ಸಿಗುತ್ತದೆ. ಜ್ಞಾನರತ್ನಗಳಿಂದ ಜೋಳಿಗೆಯನ್ನು
ತುಂಬಿಕೊಂಡು ನಂತರ ದಾನ ಮಾಡಬೇಕು. ಜ್ಞಾನಸಾಗರನು ನಿಮಗೆ ರತ್ನಗಳ ತಟ್ಟೆಗಳನ್ನು ತುಂಬಿ-ತುಂಬಿ
ಕೊಡುತ್ತಾರೆ. ಅದನ್ನು ಯಾರು ಮತ್ತೆ ದಾನ ಮಾಡುತ್ತಾರೆಯೋ ಅವರೇ ಎಲ್ಲರಿಗೂ ಪ್ರಿಯವೆನಿಸುತ್ತಾರೆ.
ಮಕ್ಕಳ ಆಂತರ್ಯದಲ್ಲಿ ಎಷ್ಟೊಂದು ಖುಷಿಯಾಗಬೇಕು! ಬುದ್ಧಿವಂತ ಮಕ್ಕಳ್ಯಾರು ಆಗಿರುತ್ತಾರೆಯೋ ಅವರು
ಹೇಳುವರು- ನಾವು ತಂದೆಯಿಂದ ಸಂಪೂರ್ಣವಾಗಿಯೇ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ, ಒಂದೇಸಾರಿ
ಹಿಡಿದುಕೊಂಡುಬಿಡುತ್ತೇವೆ. ತಂದೆಯೊಂದಿಗೆ ಬಹಳ ಪ್ರೀತಿಯಿರುತ್ತದೆ ಏಕೆಂದರೆ ಗೊತ್ತಿದೆ- ಪ್ರಾಣ
ಕೊಡುವಂತಹ ತಂದೆಯು ಸಿಕ್ಕಿದ್ದಾರೆ. ಇಂತಹ ಜ್ಞಾನದ ವರದಾನವನ್ನು ಕೊಡುತ್ತಾರೆ, ಅದರಿಂದ ನಾವು
ಎಂತಹವರಿಂದ ಎಂತಹವರಾಗಿಬಿಡುತ್ತೇವೆ. ದಿವಾಳಿಗಳಿಂದ ಸಂಪದ್ಭರಿತರಾಗಿಬಿಡುತ್ತೇವೆ, ಇಷ್ಟೂ
ಭಂಡಾರವನ್ನು ಸಂಪನ್ನ ಮಾಡಿಕೊಂಡುಬಿಡುತ್ತೇವೆ. ತಂದೆಯನ್ನೆಷ್ಟು ನೆನಪು ಮಾಡುವಿರಿ ಅಷ್ಟು
ಪ್ರೀತಿಯಿರುತ್ತದೆ, ಆಕರ್ಷಣೆಯಾಗುತ್ತದೆ. ಸೂಜಿ ಸ್ವಚ್ಛವಾಗಿರುತ್ತದೆಯೆಂದರೆ ಅಯಸ್ಕಾಂತದ ಕಡೆಗೆ
ಸೆಳೆದುಬಿಡುತ್ತದೆಯಲ್ಲವೆ. ತಂದೆಯ ನೆನಪಿನಿಂದ ತುಕ್ಕು ಬಿಡುತ್ತದೆ. ಒಬ್ಬತಂದೆಯನ್ನಲ್ಲದೆ
ಮತ್ತ್ಯಾರೂ ನೆನಪಿಗೆ ಬರಬಾರದು. ಹೇಗೆ ಸ್ತ್ರೀಯ ಪತಿಯಜೊತೆ ಎಷ್ಟೊಂದು ಪ್ರೀತಿಯಿರುತ್ತದೆ.
ನಿಮ್ಮದೂ ನಿಶ್ಚಿತಾರ್ಥವಾಗಿದೆಯಲ್ಲವೆ. ನಿಶ್ಚಿತಾರ್ಥದ ಖುಷಿಯು ಕಡಿಮೆಯಿರುತ್ತದೆಯೇನು?
ಶಿವತಂದೆಯು ಹೇಳ್ವರು- ಮಧುರ ಮಕ್ಕಳೇ, ನಿಮ್ಮದು ನಮ್ಮಜೊತೆ ನಿಶ್ಚಿತಾರ್ಥವಾಗಿದೆ, ಬ್ರಹ್ಮಾರವರ
ಜೊತೆಯಲ್ಲಲ್ಲ. ನಿಶ್ಚಿತಾರ್ಥವು ಪರಿಪಕ್ವವಾಯಿತೆಂದರೆ ಅವರದೇ ನೆನಪು ಸತಾಯಿಸಬೇಕು.
ತಂದೆಯು ತಿಳಿಸುತ್ತಾರೆ-
ಮಧುರ ಮಕ್ಕಳೇ, ತಪ್ಪು ಮಾಡದಿರಿ. ಸ್ವದರ್ಶನ ಚಕ್ರಧಾರಿ ಆಗಿರಿ, ಲೈಟ್ಹೌಸ್ ಆಗಿರಿ. ಸ್ವದರ್ಶನ
ಚಕ್ರಧಾರಿಯಾಗುವ ಅಭ್ಯಾಸವು ಚೆನ್ನಾಗಿ ಆಗಿಬಿಡುತ್ತದೆಯೆಂದರೆ, ನೀವು ಹೇಗೆಂದರೆ ಜ್ಞಾನಸಾಗರನೇ
ಆಗಿಬಿಡುತ್ತೀರಿ. ಹೇಗೆ ವಿದ್ಯಾರ್ಥಿಯು ಓದಿ ಟೀಚರ್ ಆಗಿಬಿಡುತ್ತಾರಲ್ಲವೆ. ನಿಮ್ಮ ವ್ಯವಹಾರವೇ
ಇದಾಗಿದೆ. ಎಲ್ಲರನ್ನೂ ಸ್ವದರ್ಶನ ಚಕ್ರಧಾರಿಯನ್ನಾಗಿ ಮಾಡಿರಿ, ಆಗಲೇ ಚಕ್ರವರ್ತಿ ರಾಜಾ ರಾಣಿ
ಆಗುವಿರಿ ಆದ್ದರಿಂದ ಬಾಬಾರವರ ಸದಾ ಮಕ್ಕಳೊಂದಿಗೆ ಕೇಳುತ್ತಾರೆ- ಸ್ವದರ್ಶನ ಚಕ್ರಧಾರಿಯಾಗಿ
ಕುಳಿತಿದ್ದೀರಾ? ತಂದೆಯೂ ಸಹ ಸ್ವದರ್ಶನ ಚಕ್ರಧಾರಿಯಾಗಿದ್ದಾರಲ್ಲವೆ. ತಂದೆಯು ಬಂದಿದ್ದಾರೆ- ನೀವು
ಮಧುರ ಮಕ್ಕಳನ್ನು ಹಿಂತಿರುಗೆ ಕರೆದುಕೊಂಡು ಹೋಗುವುದಕ್ಕಾಗಿ. ನೀವು ಮಕ್ಕಳಿಲ್ಲದೆ ನಮಗೂ
ಆರಾಮವೆನಿಸುವುದಿಲ್ಲ. ಯಾವಾಗ ಸಮಯವಾಗುತ್ತದೆ ಆಗ ಆರಾಮವೆನಿಸುವುದಿಲ್ಲ, ಈಗ ನಾವು ಹೋಗೋಣ ಸಾಕು
ಎಂದು ಮಕ್ಕಳು ಬಹಳ ಕರೆಯುತ್ತಾರೆ, ಬಹಳ ದುಃಖಿಯಾಗುತ್ತಾರೆ. ದಯೆ ಬರುತ್ತದೆ. ಈಗ ನೀವು ಮಕ್ಕಳು
ಮನೆಗೆ ನಡೆಯಬೇಕಾಗಿದೆ. ಮತ್ತೆ ಅಲ್ಲಿಂದ ನೀವು ತಾವಾಗಿಯೇ ಸುಖಧಾಮಕ್ಕೆ ಹೊರಟುಹೋಗುತ್ತೀರಿ. ಅಲ್ಲಿ
ನಾನು ನಿಮ್ಮ ಜೊತೆಗಾರನಾಗುವುದಿಲ್ಲ. ತಮ್ಮ ಸ್ಥಿತಿಯನುಸಾರವಾಗಿ ನಿಮ್ಮ ಆತ್ಮವು ಹೊರಟುಹೋಗುತ್ತದೆ.
ನೀವು ಮಕ್ಕಳಿಗೆ ಇದು
ನಶೆಯಿರಬಏಕು- ನಾವು ಆತ್ಮಿಕ ವಿಶ್ವವಿದ್ಯಾಲದಲ್ಲಿ ಓದುತ್ತಿದ್ದೇವೆ. ನಾವು ಈಶ್ವರೀಯ ವಿದ್ಯಾರ್ಥಿ
ಆಗಿದ್ದೇವೆ. ನಾವು ಮನುಷ್ಯನಿಂದ ದೇವತೆಯಾಗುವ ಅಥವಾ ವಿಶ್ವದ ಮಾಲೀಕರಾಗುವುದಕ್ಕಾಗಿ
ಓದುತ್ತಿದ್ದೇವೆ. ಇದರಿಂದ ನಾವು ಇಡೀ ಮಿನಿಸ್ಟರಿಯನ್ನು ಪಾಸ್ ಮಾಡಿಬಿಡುತ್ತೇವೆ. ಹೆಲ್ತ್ನ
ಎಜುಕೇಷನ್ ಸಹ ಓದುತ್ತೇವೆ, ಚಲನೆಯನ್ನು ಸುಧಾರಣೆ ಮಾಡಿಕೊಳ್ಳುವುದನ್ನೂ ಓದುತ್ತೇವೆ. ಹೆಲ್ತ್
ಮಿನಿಸ್ಟರಿ, ಫುಡ್ ಮಿನಿಸ್ಟರಿ, ಲ್ಯಾಂಡ್ ಮಿನಿಸ್ಟರಿ, ಬಿಲ್ಡಿಂಗ್ ಮಿನಿಸ್ಟರ್, ಎಲ್ಲವೂ
ಇದರಲ್ಲಿಯೇ ಬಂದುಬಿಡುತ್ತದೆ.
ಮಧುರಾತಿ ಮಧುರ ಮಕ್ಕಳಿಗೆ
ತಂದೆಯು ಕುಳಿತು ತಿಳಿಸುತ್ತಾರೆ- ಯಾವಾಗ ಯಾವುದೇ ಸಭೆಯಲ್ಲಿ ಭಾಷಣ ಮಾಡುತ್ತೀರಿ ಅಥವಾ ಯಾರಿಗೇ
ತಿಳಿಸುತ್ತೀರೆಂದರೆ ಗಳಿಗೆ-ಗಳಿಗೆಗೂ ಹೇಳಿರಿ- ತಮ್ಮನ್ನು ಆತ್ಮನೆಂದು ತಿಳಿದು ಪರಮಪಿತ
ಪರಮಾತ್ಮನನ್ನು ನೆನಪು ಮಾಡಿರಿ. ಈ ನೆನಪಿನಿಂದಲೇ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ನೀವು
ಪಾವನರಾಗಿಬಿಡುತ್ತೀರಿ. ಗಳಿಗೆ-ಗಳಿಗೆಗೂ ಇದರ ನೆನಪು ಮಾಡಬೇಕು. ಆದರೆ ಇದನ್ನೂ ಸಹ ನೀವು ಆಗ
ಹೇಳಬಹುದು, ಯಾವಾಗ ಸ್ವಯಂ ತಾವು ನೆನಪಿನಲ್ಲಿರುತ್ತೀರಿ. ಈ ಮಾತಿನ ಬಗ್ಗೆ ಮಕ್ಕಳಲ್ಲಿ ಬಹಳ
ಬಲಹೀನತೆಯಿದೆ. ಸಂಪೂರ್ಣವಾಗಿ ನೀವು ಮಕ್ಕಳಿಗೆ ಖುಷಿಯಿರುತ್ತದೆ, ನೆನಪಿನಲ್ಲಿದ್ದಾಗ ಅನ್ಯರಿಗೂ
ತಿಳಿಸುವುದರ ಪ್ರಭಾವ ಬೀರುತ್ತದೆ. ನಿಮ್ಮ ಮಾತುಗಳು ಬಹಳಹೆಚ್ಚು ಇರಬಾರದು. ಆತ್ಮಾಭಿಮಾನಿಯಾಗಿದ್ದು
ಸ್ವಲ್ಪವೇ ತಿಳಿಸುತ್ತೀರೆಂದರೂ ಬಾಣನಾಟುತ್ತದೆ. ತಂದೆಯು ಹೇಳುವರು- ಮಕ್ಕಳೇ, ಕಳೆದುಹೋದುದನ್ನು
ಕಳೆದುಬಿಡಿ. ಈಗ ಮೊದಲು ತಮ್ಮನ್ನು ಸುಧಾರಣೆ ಮಾಡಿಕೊಳ್ಳಿರಿ. ಸ್ವಯಂ ನೆನಪು ಮಾಡುವುದಿಲ್ಲ,
ಅನ್ಯರಿಗೆ ಹೇಳುತ್ತಿರುತ್ತೀರಿ- ಈ ಮೋಸವೂ ಇಲ್ಲಿ ನಡೆಯಲು ಸಾಧ್ಯವಿಲ್ಲ. ಒಳಗೆ ಅವಶ್ಯವಾಗಿ ಮನಸ್ಸು
ತಿನ್ನುತ್ತಿರುತ್ತದೆ. ತಂದೆಯೊಂದಿಗೆ ಸಂಪೂರ್ಣವಾದ ಪ್ರೀತಿಯಿಲ್ಲವೆಂದರೆ ಶ್ರೀಮತದಂತೆ
ನಡೆಯುವುದಿಲ್ಲ. ಬೇಹದ್ದಿನ ತಂದೆಯಂತೆ ಶಿಕ್ಷಣವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ತಂದೆಯು
ಹೇಳುತ್ತಾರೆ- ಮಧುರ ಮಕ್ಕಳೇ, ಈ ಹಳೆಯ ಪ್ರಪಂಚವನ್ನೀಗ ಮರೆತುಬಿಡಿ. ಅಂತ್ಯದಲ್ಲಂತು ಇದೆಲ್ಲವನ್ನು
ಮರೆಯಲೇಬೇಕಾಗುತ್ತದೆ. ಬುದ್ಧಿಯು ತಮ್ಮ ಶಾಂತಿಧಾಮ ಮತ್ತು ಸುಖಧಾಮದಲ್ಲಿ ತೊಡಗಿಬಿಡುತ್ತದೆ.
ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ತಂದೆಯಬಳಿ ಹೊರಟುಹೋಗಬೇಕು. ಪತಿತ ಆತ್ಮವಂತು ಹೋಗಲು
ಸಾಧ್ಯವಿಲ್ಲ. ಅದಿರುವುದೇ ಪಾವನ ಆತ್ಮರ ಮನೆ. ಈ ಶರೀರವು ಐದು ತತ್ವಗಳಿಂದಾಗಿದೆ. ಅಂದಮೇಲೆ 5
ತತ್ವಗಳು ಇಲ್ಲಿರುವುದಕ್ಕಾಗಿ ಸೆಳೆಯುತ್ತದೆ ಏಕೆಂದರೆ ಆತ್ಮಕ್ಕೆ ಇದು ಹೇಗೆಂದರೆ ಆಸ್ತಿಯನ್ನು
ತೆಗೆದುಕೊಂಡುಬಿಟ್ಟಿದೆ, ಆದ್ದರಿಂದ ಶರೀರದಲ್ಲಿ ಮಮತ್ವವಾಗಿಬಿಟ್ಟಿದೆ. ಈಗ ಇದು ನನ್ನ ಮನೆಯಾಗಿದೆ,
ಇದರೊಂದಿಗಿನ ಮಮತ್ವವನ್ನು ತೆಗೆದುಬಿಡಬೇಕು. ಅಲ್ಲಂತು ಈ 5 ತತ್ವಗಳಿರುವುದೇ ಇಲ್ಲ.
ಸತ್ಯಯುಗದಲ್ಲಿಯೂ ಶರೀರವು ಯೋಗಬಲದಿಂದಾಗುತ್ತದೆ. ಸತೋಪ್ರಧಾನ ಪ್ರಕೃತಿಯಾಗುತ್ತದೆ ಆದ್ದರಿಂದ
ಸೆಳೆಯುವುದಿಲ್ಲ, ದುಃಖವಾಗುವುದಿಲ್ಲ. ಇದು ಬಹಳ ಸೂಕ್ಷ್ಮವಾದ, ತಿಳಿದುಕೊಳ್ಳುವ ಮಾತುಗಳಾಗಿವೆ.
ಇಲ್ಲಿ 5 ತತ್ವಗಳ ಬಳವು ಆತ್ಮನನ್ನು ಸೆಳೆಯುತ್ತದೆ ಆದ್ದರಿಂದ ಶರೀರಬಿಡುವ ಮನಸ್ಸಾಗುವುದಿಲ್ಲ.
ಇಲ್ಲವೆಂದರೆ ಇದರಲ್ಲಿ ಇನ್ನೂ ಖುಷಿಯಾಗಬೇಕು. ಪಾವನನಾಗಿ ಶರೀರವನ್ನು ಹೀಗೆ ಬಿಡುತ್ತೇನೆ,
ಹೇಗೆಂದರೆ ಬೆಣ್ಣೆಯಿಂದ ಕೂದಲು ತೆಗೆದಂತೆ. ಅಂದಮೇಲೆ ಶರೀರದೊಂದಿಗೆ, ಎಲ್ಲಾ ವಸ್ತುಗಳೊಂದಿಗಿನ
ಮಮತ್ವವನ್ನು ಸಂಪೂರ್ಣವಾಗಿ ಸಮಾಪ್ತಿ ಮಾಡಿಬಿಡಬೇಕು, ಇದರೊಂದಿಗೆ ನಮ್ಮದೇನೂ ಸಂಬಂಧವಿಲ್ಲ. ಅಷ್ಟೇ,
ನಾವು ತಂದೆಯಬಳಿ ಹೋಗಿಬಿಡುತ್ತೇವೆ. ಈ ಪ್ರಪಂಚದಲ್ಲಿ ನಮ್ಮ ಬ್ಯಾಗ್-ಬ್ಯಾಗೇಜ್ನ್ನು ತಯಾರು ಮಾಡಿ
ಮುಂಚಿತವಾಗಿಯೇ ಕಳಿಸಿಬಿಡುತ್ತೇವೆ. ಜೊತೆಯಲ್ಲಂತು ನಡೆಯಲು ಸಾಧ್ಯವಿಲ್ಲ. ಬಾಕಿ ಆತ್ಮರು
ಹೋಗಬೇಕಾಗಿದೆ. ಶರೀರವನ್ನೂ ಇಲ್ಲಿಯೇ ಬಿಟ್ಟಿದ್ದೇವೆ. ಬಾಬಾರವರು ಹೊಸಶರೀರದ ಸಾಕ್ಷಾತ್ಕಾರವನ್ನೂ
ಮಾಡಿಸಿಬಿಟ್ಟಿದ್ದಾರೆ. ವಜ್ರವೈಡೂರ್ಯಗಳ ಮಹಲು ಸಿಕ್ಕಿಬಿಡುತ್ತದೆ. ಇಂತಹ ಸುಖಧಾಮದಲ್ಲಿ
ಹೋಗುವುದಕ್ಕಾಗಿ ಎಷ್ಟೊಂದು ಪರಿಶ್ರಮಪಡಬೇಕಾಗಿದೆ. ಸುಸ್ತಾಗಬಾರದು. ಹಗಲು-ರಾತ್ರಿ ಬಹಳ ಸಂಪಾದನೆ
ಮಾಡಬೇಕು ಆದ್ದರಿಂದ ಬಾಬಾರವರು ಹೇಳುತ್ತಾರೆ- ನಿದ್ರೆಯನ್ನೂ ಗೆಲ್ಲುವವರಾಗಿದ್ದು ಮಕ್ಕಳೇ
ನನ್ನೊಬ್ಬನನ್ನೇ ನೆನಪು ಮಾಡಿರಿ ಮತ್ತು ವಿಚಾರಸಾಗರ ಮಥನ ಮಾಡಿರಿ. ಡ್ರಾಮಾದ ರಹಸ್ಯವನ್ನು
ಬುದ್ಧಿಯಲ್ಲಿ ಇಟ್ಟುಕೊಳ್ಳುವುದರಿಂದ, ಬುದ್ಧಿಯು ಸಂಪೂರ್ಣವಾಗಿ ಶೀತಲವಾಗಿಬಿಡುತ್ತದೆ. ಯಾರು
ಮಹಾರಥಿ ಮಕ್ಕಳಿರುತ್ತಾರೆಯೋ ಅವರೆಂದಿಗೂ ಅಲುಗಾಡುವುದಿಲ್ಲ. ಶಿವತಂದೆಯನ್ನು ನೆನಪು
ಮಾಡುತ್ತೀರೆಂದರೆ ಅವರು ಅದನ್ನು ಸಂಭಾಲನೆಯೂ ಮಾಡುವರು.
ತಂದೆಯು ನೀವು ಮಕ್ಕಳನ್ನು
ದುಃಖದಿಂದ ಬಿಡಿಸಿ ಶಾಂತಿಯ ದಾನವನ್ನು ಕೊಡುವರು. ನೀವೂ ಸಹ ಶಾಂತಿಯ ಶಾಂತಿಯ ದಾನವನ್ನು ಕೊಡಬೇಕು.
ನಿಮ್ಮ ಈ ಬೇಹದ್ದಿನ ಶಾಂತಿ ಅರ್ಥಾತ್ ಯೋಗಬಲವು ಅನ್ಯರನ್ನೂ ಸಂಪೂರ್ಣವಾಗಿ ಶಾಂತಗೊಳಿಸಿಬಿಡುತ್ತದೆ.
ತಕ್ಷಣದಲ್ಲಿ ಗೊತ್ತಾಗಿಬಿಡುತ್ತದೆ, ಇದು ನಮ್ಮ ಮನೆಯೇ ಅಥವಾ ಅಲ್ಲವೆ ಎಂದು. ಆತ್ಮನಿಗೆ
ತಕ್ಷಣದಲ್ಲಿ ಆಕರ್ಷಣೆಯಾಗುತ್ತದೆ- ಇವರು ನಮ್ಮ ಬಾಬಾ ಆಗಿದ್ದಾರೆ. ನಾಡಿಯನ್ನೂ ನೋಡಬೇಕಾಗುತ್ತದೆ.
ತಂದೆಯ ನೆನಪಿನಲಿದ್ದು ನಂತರ ನೋಡಿರಿ- ಈ ಆತ್ಮವು ನಮ್ಮ ಕುಲದ್ದಾಗಿದೆಯೇ! ಒಂದುವೇಳೆ ಆಗಿದ್ದಾರೆ
ಒಂದೇಸಾರಿಗೆ ಶಾಂತವಾಗಿಬಿಡುತ್ತದೆ. ಯಾರು ಈ ಕುಲದವರಾಗಿರುತ್ತಾರೆಯೋ, ಅವರಿಗೇ ಈ ಮಾತುಗಳಲ್ಲಿ
ರುಚಿಯುಂಟಾಗುತ್ತದೆ. ಮಕ್ಕಳು ನೆನಪು ಮಡುತ್ತಾರೆಂದರೆ ತಂದೆಯೂ ಸಹ ಪ್ರೀತಿ ಮಾಡುವರು. ಆತ್ಮನನ್ನು
ಪ್ರೀತಿ ಮಾಡಲಾಗುತ್ತದೆ. ಇದೂ ಸಹ ಗೊತ್ತಿದೆ- ಯಾರು ಬಹಳ ಭಕ್ತಿ ಮಾಡಿದ್ದಾರೆಯೋ ಅವರೇ ಹೆಚ್ಚು
ಓದುತ್ತಾರೆ. ಅವರ ಚಹರೆಯಿಂದ ತಿಳಿದುಬರುತ್ತದೆ- ತಂದೆಯಲ್ಲಿ ಎಷ್ಟು ಪ್ರೀತಿಯಿದೆ! ಆತ್ಮವು
ತಂದೆಯನ್ನು ನೋಡುತ್ತದೆ. ತಂದೆಯು ನಾವಾತ್ಮರಿಗೆ ಓದಿಸುತ್ತಿದ್ದಾರೆ. ತಂದೆಯೂ ಸಹ ತಿಳಿಯುತ್ತಾರೆ-
ನಾವು ಇಷ್ಟುಚಿಕ್ಕ ಬಿಂದು ಆತ್ಮರಿಗೆ ಓದಿಸುತ್ತಿದ್ದೇನೆ. ಮುಂದೆನಡೆದಂತೆ ನಿಮ್ಮ ಈ ಸ್ಥಿತಿಯು
ತಯಾರಾಗಿಬಿಡುತ್ತದೆ. ತಿಳಿಯುತ್ತೀರಿ- ನಾವು ಸಹೋದರ-ಸಹೋದರನಿಗೆ ಓದಿಸುತ್ತೇವೆ. ಮುಖವು
ಸಹೋದರಿಯಾಗಿದ್ದರೂ ದೃಷ್ಟಿಯು ಆತ್ಮದ ಕಡೆಗೆ ಹೋಗಲಿ. ಶರೀರದ ಮೇಲೆ ದೃಷ್ಟಿಯು ಹೋಗಲೇಬಾರದು,
ಇದರಲ್ಲಿ ಬಹಳ ಪರಿಶ್ರಮವಿದೆ. ಇದು ಬಹಳ ಸೂಕ್ಷ್ಮವಾದ ಮಾತಾಗಿದೆ. ಬಹಳಶ್ರೇಷ್ಠವಾದ ವಿದ್ಯೆಯಾಗಿದೆ.
ತೂಕ ಮಾಡಿದರೆ ಈ ವಿದ್ಯೆಯಕಡೆ ಬಹಳ ಭಾರವಾಗಿಬಿಡುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕತಂದೆಯ ಆತ್ಮಿಕಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಮ್ಮ
ಜೋಳಿಗೆಯನ್ನು ಜ್ಞಾನರತ್ನಗಳಿಂದ ತುಂಬಿಕೊಂಡು ನಂತರ ದಾನವನ್ನೂ ಮಾಡಬೇಕಾಗಿದೆ. ಯಾರು ದಾನ ಮಾಡುವರು
ಅವರು ಎಲ್ಲರಿಗೂ ಪ್ರಿಯವೆನಿಸುತ್ತಾರೆ. ಅವರಿಗೆ ಅಪಾರಖುಷಿಯು ಇರುತ್ತದೆ.
2. ಪ್ರಾಣದಾನ ಕೊಡುವಂತಹ
ತಂದೆಯನ್ನು ಬಹಳಪ್ರೀತಿಯಿಂದ ನೆನಪು ಮಾಡುತ್ತಾ ಎಲ್ಲರಿಗೂ ಶಾಂತಿಯ ದಾನವನ್ನು ಕೊಡಬೇಕಾಗಿದೆ.
ಸ್ವದರ್ಶನ ಚಕ್ರವನ್ನು ತಿರುಗಿಸುತ್ತಾ ಜ್ಞಾನದ ಸಾಗರನಾಗಬೇಕಾಗಿದೆ.
ವರದಾನ:
ಅಂತಃವಾಹಕ
ಶರೀರದ ಮೂಲಕ ಸೇವೆಯನ್ನು ಮಾಡುವವರು ಕರ್ಮಬಂಧನ ಮುಕ್ತ ಡಬಲ್ ಲೈಟ್ ಭವ
ಹೇಗೆ ಸ್ಥೂಲ ಶರೀರದ
ಮೂಲಕ ಸಾಕಾರಿ ಈಶ್ವರೀಯ ಸೇವೆಯಲ್ಲಿ ಬಿಜಿûಯಾಗಿರುತ್ತೀರಿ ಅಷ್ಟು ತಮ್ಮ ಆಕಾರಿ ಶರೀರದ ಮೂಲಕ
ಅಂತಃವಾಹಕ ಸೇವೆಯೂ ಜೊತೆ-ಜೊತೆ ಮಾಡಬೇಕಾಗಿದೆ. ಹೇಗೆ ಬ್ರಹ್ಮಾನ ಮೂಲಕ ಸ್ಥಾಪನೆಯ ವೃದ್ಧಿಯಾಯಿತು
ಹಾಗೆಯೇ ಈಗ ನಿಮ್ಮ ಸೂಕ್ಷ್ಮ ಶರೀರದೊಂದಿಗೆ ಮೂಲಕ, ಶಿವ ಶಕ್ತಿಯ ಕಂಬೈಂಡ್ ರೂಪದ ಸಾಕ್ಷಾತ್ಕಾರದ
ಮೂಲಕ ಸಾಕ್ಷಾತ್ಕಾರ ಮತ್ತು ಸಂದೇಶ ಸಿಗುವು ಕಾರ್ಯವಾಗಬೇಕಾಗಿದೆ. ಆದರೆ ಈ ಸೇವೆಗಾಗಿ ಕರ್ಮ
ಮಾಡುತ್ತ ಯಾವುದೇ ಕರ್ಮಬಂಧನದಿಂದ ಮುಕ್ತ ಸದಾ ಡಬಲ್ ಲೈಟ್ ರೂಪದಲ್ಲಿರಿ.
ಸ್ಲೋಗನ್:
ಮನನ
ಮಾಡುವುದರಿಂದ ಯಾವ ಖುಷಿ ರೂಪಿ ಬೆಣ್ಣೆ ಸಿಗುವುದು – ಅದು ಜೀವನವನ್ನು ಶಕ್ತಿಶಾಲಿಯನ್ನಾಗಿ
ಮಾಡುತ್ತದೆ.
ತಮ್ಮ ಶಕ್ತಿಶಾಲಿ ಮನಸ್ಸಾ
ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ
ನಮಗೆ ಸೇವೆಯ ಅವಕಾಶ
ಸಿಕ್ಕಿಲ್ಲವೆಂದು ಯಾರು ಹೇಳುವುದಕ್ಕೆ ಸಾಧ್ಯವಿಲ್ಲ. ಯಾರು ಹೇಳಲು ಸಾಧ್ಯವಿಲ್ಲವೆಂದರೆ ಮನಸ್ಸಾ
ವಾಯುಮಂಡಲದಿಂದ ಸುಖದ ವೃತ್ತಿ, ಸುಖಮಯ ಸ್ಥಿತಿಯಿಂದ ಸೇವೆ ಮಾಡಿ. ಆರೋಗ್ಯ ಸರಿಯಿಲ್ಲವೆಂದರೆ
ಮನೆಯಲ್ಲಿ ಕುಳಿತಲ್ಲಿಯೇ ಸಹಯೋಗಿಯಾಗಿ, ಕೇವಲ ಮನಸ್ಸಿನಲ್ಲಿ ಶುದ್ಧ ಸಂಕಲ್ಪಗಳ ಸ್ಟಾಕ್ ಜಮಾ ಮಾಡಿ,
ಶುಭ ಭಾವನೆಗಳಿಂದ ಸಂಪನ್ನರಾಗಿ.