13.02.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯು
ಯಾರಾಗಿದ್ದಾರೆ, ಹೇಗಿದ್ದಾರೆಯೋ ಅದೇ ರೀತಿಯಲ್ಲಿ ಅವರನ್ನು ಯಥಾರ್ಥವಾಗಿ ಅರಿತುಕೊಂಡು ನೆನಪು
ಮಾಡುವುದೇ ಮುಖ್ಯಮಾತಾಗಿದೆ, ಮನುಷ್ಯರಿಗೆ ಈ ಮಾತನ್ನು ಬಹಳ ಯುಕ್ತಿಯಿಂದ ತಿಳಿಸಬೇಕಾಗಿದೆ”
ಪ್ರಶ್ನೆ:
ಇಡೀ
ವಿಶ್ವಕ್ಕಾಗಿ ಯಾವ ವಿದ್ಯೆಯಿದೆ, ಅದನ್ನು ಇಲ್ಲಿಯೇ ನೀವು ಓದುತ್ತೀರಿ?
ಉತ್ತರ:
ನೀವೆಲ್ಲರೂ
ಆತ್ಮಗಳಾಗಿದ್ದೀರಿ, ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ ಆಗ ಪಾವನರಾಗಿಬಿಡುತ್ತೀರಿ, ಈ
ವಿದ್ಯೆಯು ಇಡೀ ವಿಶ್ವಕ್ಕಾಗಿ ಇದೆ. ಇಡೀ ವಿಶ್ವದ ತಂದೆಯು ಒಂದೇಬಾರಿ ಎಲ್ಲರನ್ನೂ ಪಾವನ ಮಾಡಲು
ಬರುತ್ತಾರೆ, ಅವರೇ ರಚಯಿತ ಮತ್ತು ರಚನೆಯ ಜ್ಞಾನವನ್ನು ಕೊಡುತ್ತಾರೆ ಆದ್ದರಿಂದ ವಾಸ್ತವದಲ್ಲಿ
ಇದೊಂದೇ ವಿಶ್ವವಿದ್ಯಾಲಯವಾಗಿದೆ, ಈ ಮಾತನ್ನು ಮಕ್ಕಳು ಸ್ಪಷ್ಟಮಾಡಿ ತಿಳಿಸಬೇಕಾಗಿದೆ.
ಓಂ ಶಾಂತಿ.
ಭಗವಾನುವಾಚ - ಈಗ ಆತ್ಮಿಕ ಮಕ್ಕಳು ತಿಳಿದುಕೊಂಡಿದ್ದೀರಿ, ಭಗವಂತ ಯಾರು? ಇದನ್ನು ಭಾರತದಲ್ಲಿ ಯಾರೂ
ಯಥಾರ್ಥವಾಗಿ ತಿಳಿದುಕೊಂಡಿಲ್ಲ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ನಾನು ಯಾರಾಗಿದ್ದೇನೆ,
ಹೇಗಿದ್ದೇನೆಯೋ ಯಥಾರ್ಥ ರೀತಿಯಲ್ಲಿ ನನ್ನನ್ನು ಯಾರೂ ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ ನಂಬರ್ವಾರ್
ಇದ್ದಾರೆ. ನಂಬರ್ವಾರ್ ಪುರುಷಾರ್ಥದನುಸಾರ ಅರಿತುಕೊಂಡಿದ್ದಾರೆ. ಭಲೇ ಇಲ್ಲಿಯೇ ಇರುತ್ತಾರೆ ಆದರೆ
ಯಥಾರ್ಥವಾಗಿ ತಿಳಿದುಕೊಳ್ಳುವುದಿಲ್ಲ. ಯಥಾರ್ಥವಾಗಿ ತಿಳಿದುಕೊಂಡು ತಂದೆಯನ್ನು ನೆನಪು ಮಾಡುವುದೇ
ಬಹಳ ಶ್ರಮದಾಯಕವಾಗಿದೆ. ಬಹಳ ಸಹಜವೆಂದು ಮಕ್ಕಳು ಹೇಳುತ್ತಾರೆ ಆದರೆ ನಾನು ಯಾರಾಗಿದ್ದೇನೆ, ನಾನು
ನಿರಂತರ ತಂದೆಯನ್ನು ನೆನಪು ಮಾಡಬೇಕು ಎಂಬ ಯುಕ್ತಿಯು ಬುದ್ಧಿಯಲ್ಲಿರುವುದಿಲ್ಲ. ನಾನಾತ್ಮ
ಅತಿಸೂಕ್ಷ್ಮವಾಗಿದ್ದೇನೆ, ನಮ್ಮ ತಂದೆಯು ಸೂಕ್ಷ್ಮಬಿಂದುವಾಗಿದ್ದಾರೆ, ಅರ್ಧ ಕಲ್ಪವಂತೂ ಯಾರೂ
ಭಗವಂತನ ಹೆಸರನ್ನೇ ಹೇಳುವುದಿಲ್ಲ. ಹೇ ಭಗವಂತ ಎಂದು ಹೇಳಿ ದುಃಖದಲ್ಲಿಯೇ ನೆನಪು ಮಾಡುತ್ತಾರೆ.
ಭಗವಂತ ಯಾರೆಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಈಗ ಮನುಷ್ಯರಿಗೆ ಹೇಗೆ ತಿಳಿಸುವುದು ಎಂಬುದರ
ಬಗ್ಗೆ ವಿಚಾರ ಸಾಗರ ಮಂಥನ ನಡೆಯಬೇಕು. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವೆಂದು
ಹೆಸರನ್ನು ಬರೆಯಲಾಗಿದೆ, ಇದೂ ಸಹ ಆತ್ಮಿಕ ಬೇಹದ್ದಿನ ತಂದೆಯ ಈಶ್ವರೀಯ ವಿಶ್ವವಿದ್ಯಾಲಯವಾಗಿದೆ
ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ಈಗ ಮನುಷ್ಯರು ತಿಳಿದುಕೊಳ್ಳಬೇಕಾದರೆ ಯಾವ ಹೆಸರನ್ನಿಡುವುದು.
ಇದು ವಿಶ್ವವಿದ್ಯಾಲಯವಾಗಿದೆ ಎಂಬುದನ್ನು ಮನುಷ್ಯರಿಗೆ ಹೇಗೆ ತಿಳಿಸಿಕೊಡುವುದು? ಯುನಿವರ್ಸ್ನಿಂದ
ಯುನಿವರ್ಸಿಟಿ ಎಂಬ ಶಬ್ಧವು ಬಂದಿದೆ, ಯುನಿವರ್ಸ್ ಎಂದರೆ ಇಡೀ ವಿಶ್ವ, ಅದರ ಹೆಸರನ್ನು
ಯುನಿವರ್ಸಿಟಿ ಎಂದು ಇಡಲಾಗಿದೆ. ಅದರಲ್ಲಿ ಎಲ್ಲಾ ಮನುಷ್ಯರು ಓದಬಹುದಾಗಿದೆ. ಇಡೀ ವಿಶ್ವದವರೆಲ್ಲರೂ
ಓದುವುದಕ್ಕಾಗಿ ಯುನಿವರ್ಸಿಟಿಯಿದೆ. ವಾಸ್ತವದಲ್ಲಿ ಇಡೀ ವಿಶ್ವಕ್ಕಾಗಿ ಒಬ್ಬರೇ ತಂದೆಯು ಬರುತ್ತಾರೆ,
ಅವರದು ಇದೊಂದೇ ವಿಶ್ವವಿದ್ಯಾಲಯವಾಗಿದೆ, ಇಲ್ಲಿ ಗುರಿ-ಧ್ಯೇಯವೂ ಒಂದೇ ಆಗಿದೆ. ತಂದೆಯೇ ಬಂದು ಇಡೀ
ವಿಶ್ವವನ್ನು ಪಾವನ ಮಾಡುತ್ತಾರೆ, ಯೋಗವನ್ನು ಕಲಿಸುತ್ತಾರೆ. ಇದು ಎಲ್ಲಾ ಧರ್ಮದವರಿಗಾಗಿ ಇದೆ.
ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮವೆಂದು ತಿಳಿಯಿರಿ, ಇಡೀ ವಿಶ್ವದ ತಂದೆಯು ನಿರಾಕಾರ
ಪರಮಪಿತ ಪರಮಾತ್ಮನಾಗಿದ್ದಾರೆ ಅಂದಾಗ ಇದರ ಹೆಸರನ್ನು ನಿರಾಕಾರ ಪರಮಪಿತ ಪರಮಾತ್ಮನ ಆತ್ಮೀಯ
ವಿಶ್ವವಿದ್ಯಾಲಯವೆಂದು ಏಕೆ ಇಡಬಾರದು! ವಿಚಾರ ಮಾಡಬೇಕಾಗುತ್ತದೆಯಲ್ಲವೆ. ಇಂದಿನ ಮನುಷ್ಯರು ಇಡೀ
ವಿಶ್ವದಲ್ಲಿ ಒಬ್ಬರೂ ಸಹ ತಂದೆಯನ್ನರಿತುಕೊಂಡಿಲ್ಲ. ರಚಯಿತನನ್ನು ಅರಿತುಕೊಂಡರೆ ರಚನೆಯನ್ನೂ
ಅರಿತುಕೊಳ್ಳುವರು. ರಚಯಿತನ ಮೂಲಕವೇ ರಚನೆಯನ್ನು ಅರಿತುಕೊಳ್ಳಲಾಗುತ್ತದೆ. ತಂದೆಯು ಮಕ್ಕಳಿಗೆ
ಎಲ್ಲವನ್ನೂ ತಿಳಿಸಿಕೊಡುತ್ತಾರೆ, ಮತ್ತ್ಯಾರೂ ತಿಳಿದುಕೊಂಡಿಲ್ಲ. ಋಷಿ-ಮುನಿಗಳೂ ಸಹ ಗೊತ್ತಿಲ್ಲ,
ಗೊತ್ತಿಲ್ಲವೆಂದು ಹೇಳುತ್ತಾ ಹೋದರು ಆದ್ದರಿಂದ ತಂದೆಯು ತಿಳಿಸುತ್ತಾರೆ - ನಿಮಗೆ ಮೊದಲು ಈ ರಚಯಿತ
ಮತ್ತು ರಚನೆಯ ಜ್ಞಾನವಿರಲಿಲ್ಲ, ಈಗ ರಚಯಿತನೇ ತಿಳಿಸುತ್ತಾರೆ. ಬಂದು ನಮಗೆ ಸುಖ-ಶಾಂತಿಯನ್ನು ಕೊಡಿ
ಎಂದು ನನ್ನನ್ನು ಎಲ್ಲರೂ ಕರೆಯುತ್ತಾರೆ ಏಕೆಂದರೆ ಈಗ ದುಃಖ-ಅಶಾಂತಿಯಿದೆ, ಅವರ ಹೆಸರೇ ಆಗಿದೆ -
ದುಃಖಹರ್ತ, ಸುಖಕರ್ತ. ಅವರು ಯಾರು? ಭಗವಂತ. ಅವರು ಹೇಗೆ ದುಃಖವನ್ನು ಹರಣ ಮಾಡಿ ಸುಖವನ್ನು
ಕೊಡುತ್ತಾರೆಂಬುದನ್ನು ಯಾರೂ ತಿಳಿದುಕೊಂಡಿಲ್ಲ ಆದ್ದರಿಂದ ಈಗ ಇಷ್ಟು ಸ್ಪಷ್ಟಮಾಡಿ ಬರೆಯಬೇಕು
ಅದರಿಂದ ನಿರಾಕಾರ ಪರಮಾತ್ಮನೇ ಈ ಜ್ಞಾನವನ್ನು ಕೊಡುತ್ತಾರೆಂಬುದನ್ನು ಅರಿತುಕೊಳ್ಳಬೇಕು. ಇದರ ಮೇಲೆ
ವಿಚಾರ ಸಾಗರಮಂಥನ ಮಾಡಬೇಕು. ತಂದೆಯು ತಿಳಿಸುತ್ತಾರೆ - ಮನುಷ್ಯರೆಲ್ಲರೂ
ಕಲ್ಲುಬುದ್ಧಿಯವರಾಗಿದ್ದಾರೆ, ಈಗ ನಿಮ್ಮನ್ನು ತಂದೆಯು ಪಾರಸಬುದ್ಧಿಯವರನ್ನಾಗಿ ಮಾಡುತ್ತಿದ್ದಾರೆ,
ವಾಸ್ತವದಲ್ಲಿ ಯಾರು ಕೊನೆಪಕ್ಷ 50ಕ್ಕಿಂತಲೂ ಅಧಿಕ ಅಂಕಗಳನ್ನು ತೆಗೆದುಕೊಳ್ಳುವರೋ ಅವರಿಗೇ
ಪಾರಸಬುದ್ಧಿಯವರೆಂದು ಹೇಳಲಾಗುತ್ತದೆ. ಅನುತ್ತೀರ್ಣರಾಗುವವರು ಪಾರಸಬುದ್ಧಿಯವರಲ್ಲ. ರಾಮನೂ ಸಹ
ಕಡಿಮೆ ಅಂಕಗಳನ್ನು ತೆಗೆದುಕೊಂಡಿದ್ದರಿಂದ ಕ್ಷತ್ರಿಯರನ್ನಾಗಿ ತೋರಿಸಿದ್ದಾರೆ. ರಾಮನಿಗೆ
ಬಿಲ್ಲು-ಬಾಣವನ್ನು ಏಕೆ ತೋರಿಸಿದ್ದಾರೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಶ್ರೀಕೃಷ್ಣನು
ಎಲ್ಲರನ್ನೂ ಕೊಂದನೆಂದು ಶ್ರೀಕೃಷ್ಣನಿಗೆ ಸ್ವದರ್ಶನಚಕ್ರವನ್ನು ತೋರಿಸುತ್ತಾರೆ ಮತ್ತು ರಾಮನಿಗೆ
ಬಿಲ್ಲು-ಬಾಣವನ್ನು ತೋರಿಸುತ್ತಾರೆ. ಒಂದು ವಿಶೇಷವಾದ ಪತ್ರಿಕೆಯು ಬರುತ್ತದೆ, ಅದರಲ್ಲಿ
ತೋರಿಸಿದ್ದಾರೆ - ಕೃಷ್ಣನು ಹೇಗೆ ಸ್ವದರ್ಶನಚಕ್ರದಿಂದ ಅಕಾಸುರ-ಬಕಾಸುರ ಅನೇಕರನ್ನು
ಕೊಲ್ಲುತ್ತಾನೆಂದು. ಇಬ್ಬರನ್ನು ಹಿಂಸಕರನ್ನಾಗಿ ಮಾಡಿಬಿಟ್ಟಿದ್ದಾರೆ ಮತ್ತು ಡಬಲ್ ಹಿಂಸಕರನ್ನಾಗಿ
ಮಾಡಿಬಿಟ್ಟಿದ್ದಾರೆ. ಅವರಿಗೂ ಸಹ ಮಕ್ಕಳಾದರಲ್ಲವೇ ಎಂದು ಕೇಳುತ್ತಾರೆ. ಅರೆ! ಅವರಂತೂ ನಿರ್ವಿಕಾರಿ
ದೇವಿ ದೇವತೆಗಳಾಗಿದ್ದಾರೆ, ಅಲ್ಲಿ ರಾವಣರಾಜ್ಯವೇ ಇರುವುದಿಲ್ಲ. ಈ ಸಮಯದಲ್ಲಿ ರಾವಣ
ಸಂಪ್ರದಾಯವೆಂದು ಹೇಳಲಾಗುತ್ತದೆ.
ನಾವು ಯೋಗಬಲದಿಂದ
ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೇವೆಂದು ನೀವು ತಿಳಿಸುತ್ತೀರಿ ಅಂದಮೇಲೆ ಯೋಗಬಲದಿಂದ
ಮಕ್ಕಳಾಗಲು ಸಾಧ್ಯವಿಲ್ಲವೆ! ಅದು ನಿರ್ವಿಕಾರಿ ಪ್ರಪಂಚವಾಗಿದೆ, ಈಗ ನೀವು ಶೂದ್ರರಿಂದ
ಬ್ರಾಹ್ಮಣರಾಗಿದ್ದೀರಿ. ಬಹಳ ಚೆನ್ನಾಗಿ ತಿಳಿಸಬೇಕು ಅದರಿಂದ ಮನುಷ್ಯರು ಇವರಲ್ಲಿ ಸಂಪೂರ್ಣ
ಜ್ಞಾನವಿದೆ ಎಂಬುದನ್ನು ಅರಿತುಕೊಳ್ಳಬೇಕು. ಈ ಮಾತನ್ನು ಸ್ವಲ್ಪ ಅರಿತುಕೊಂಡರೂ ಸಹ ಇವರು
ಬ್ರಾಹ್ಮಣಕುಲದವರೆಂದು ಕರೆಯಲಾಗುತ್ತದೆ. ಇನ್ನೂ ಕೆಲವರನ್ನು ನೋಡಿದಾಗ ಇವರು ಬ್ರಾಹ್ಮಣ
ಕುಲದವರಲ್ಲವೆಂದು ತಿಳಿಯಬಹುದು, ಬರುವುದಂತೂ ಅನೇಕ ಪ್ರಕಾರದವರು ಬರುತ್ತಾರಲ್ಲವೆ ಅಂದಾಗ ಆತ್ಮೀಯ
ನಿರಾಕಾರ ಪರಮಪಿತ ಪರಮಾತ್ಮನ ಆತ್ಮೀಯ ವಿಶ್ವವಿದ್ಯಾಲಯವೆಂದು ಬರೆದು ನೋಡಿ ಏನಾಗುತ್ತದೆ?
ವಿಚಾರಸಾಗರ ಮಂಥನ ಮಾಡಿ ಶಬ್ಧಗಳನ್ನು ಸೇರಿಸಬೇಕಾಗುತ್ತದೆ. ಇದರಲ್ಲಿ ಬರೆಯುವ ಬಹಳ ಯುಕ್ತಿಯು ಬೇಕು
ಅದರಿಂದ ಮನುಷ್ಯರು ತಿಳಿದುಕೊಳ್ಳಲಿ, ಇಲ್ಲಿ ಈ ಜ್ಞಾನವನ್ನು ಪರಮಾತ್ಮನು ತಿಳಿಸುತ್ತಾರೆ ಅಥವಾ
ರಾಜಯೋಗವನ್ನು ಕಲಿಸುತ್ತಾರೆ. ಈ ಶಬ್ಧವು ಸಾಮಾನ್ಯವಾಗಿದೆ. ಒಂದು ಸೆಕೆಂಡಿನಲ್ಲಿ ಸ್ವರ್ಗದ
ಜೀವನ್ಮುಕ್ತಿಯ ಪ್ರಾಪ್ತಿಯಾಗುತ್ತದೆ. ಇಂತಿಂತಹ ಶಬ್ಧಗಳಿರಲಿ, ಅದು ಮನುಷ್ಯರ ಬುದ್ಧಿಯಲ್ಲಿ
ಕುಳಿತುಕೊಳ್ಳಲಿ. ಬ್ರಹ್ಮಾರವರ ಮೂಲಕ ವಿಷ್ಣುಪುರಿಯ ಸ್ಥಾಪನೆಯಾಗುತ್ತದೆ, ತಂದೆ ಮತ್ತು
ಆಸ್ತಿಯನ್ನು ನೆನಪು ಮಾಡಿ, ಇದು ಮನ್ಮನಾಭವದ ಅರ್ಥವಾಗಿದೆ. ನೀವು ಬ್ರಹ್ಮಾ ಮುಖವಂಶಾವಳಿ
ಬ್ರಾಹ್ಮಣ ಕುಲಭೂಷಣ ಸ್ವದರ್ಶನಚಕ್ರಧಾರಿಗಳಾಗಿದ್ದೀರಿ. ಅವರು ವಿಷ್ಣುವಿಗೆ ಸ್ವದರ್ಶನಚಕ್ರವನ್ನು
ತೋರಿಸುತ್ತಾರೆ, ಕೃಷ್ಣನಿಗೂ ನಾಲ್ಕುಭುಜಗಳನ್ನು ತೋರಿಸುತ್ತಾರೆ ಅಂದಾಗ ನಾಲ್ಕುಭುಜಗಳಿರಲು ಹೇಗೆ
ಸಾಧ್ಯ. ತಂದೆಯು ಎಷ್ಟು ಚೆನ್ನಾಗಿ ತಿಳಿಸಿಕೊಡುತ್ತಾರೆ. ಮಕ್ಕಳು ಬಹಳ ವಿಶಾಲಬುದ್ಧಿಯವರು,
ಪಾರಸಬುದ್ಧಿಯವರಾಗಬೇಕಾಗಿದೆ, ಸತ್ಯಯುಗದಲ್ಲಿ ಯಥಾರಾಜ-ರಾಣಿ ತಥಾ ಪ್ರಜಾ. ಎಲ್ಲರಿಗೆ
ಪಾರಸಬುದ್ಧಿಯವರೆಂದು ಹೇಳುತ್ತಾರಲ್ಲವೆ. ಅದು ಚಿನ್ನದ ಪ್ರಪಂಚ, ಇದು ಕಲ್ಲುಗಳ ಪ್ರಪಂಚವಾಗಿದೆ.
ನಿಮಗೆ ಮನುಷ್ಯರಿಂದ ದೇವತೆಗಳಾಗುವ ಜ್ಞಾನವು ಸಿಗುತ್ತಿದೆ, ನೀವು ಶ್ರೀಮತದನುಸಾರ ಪುನಃ ತಮ್ಮ
ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೀರಿ. ರಾಜ-ಮಹಾರಾಜರು ಹೇಗಾಗಬಲ್ಲಿರಿ ಎಂದು ತಂದೆಯು ನಮಗೆ
ಯುಕ್ತಿಯನ್ನು ತಿಳಿಸುತ್ತಾರೆ. ಅನ್ಯರಿಗೆ ತಿಳಿಸುವುದಕ್ಕಾಗಿ ನಿಮ್ಮ ಬುದ್ಧಿಯಲ್ಲಿ ಈ ಜ್ಞಾನವನ್ನು
ತುಂಬಲಾಗುತ್ತದೆ. ಗೋಲದ ಚಿತ್ರದಲ್ಲಿಯೂ ಬಹಳ ಸಹಜವಾಗಿ ತಿಳಿಸಿಕೊಡಬಹುದಾಗಿದೆ. ಈ ಸಮಯದಲ್ಲಿ
ಎಷ್ಟೊಂದು ಜನಸಂಖ್ಯೆಯಿದೆ ನೋಡಿ! ಸತ್ಯಯುಗದಲ್ಲಿ ಕೆಲವರೇ ಇರುತ್ತಾರೆ ಅಂದಮೇಲೆ ಸಂಗಮವಂತೂ
ಇದೆಯಲ್ಲವೆ. ಬ್ರಾಹ್ಮಣರು ಕೆಲವರೇ ಇರುವರಲ್ಲವೆ. ಬ್ರಾಹ್ಮಣರ ಯುಗವೂ ಚಿಕ್ಕದಾಗಿದೆ, ಬ್ರಾಹ್ಮಣರ
ನಂತರ ದೇವತೆಗಳು ನಂತರ ವೃದ್ಧಿಯನ್ನು ಹೊಂದುತ್ತಾರೆ. ಬಾಜೋಲಿಯು ಇರುತ್ತದೆಯಲ್ಲವೆ. ಅಂದಾಗ ಏಣಿಯ
ಚಿತ್ರದ ಜೊತೆಗೆ ವಿರಾಟರೂಪವೂ ಇರುವುದು. ತಿಳಿಸಿದಾಗ ಇದು ಸ್ಪಷ್ಟವಾಗುವುದು, ಯಾರು ನಿಮ್ಮ
ಕುಲದವರಾಗಿರುವರೋ ಅವರ ಬುದ್ಧಿಯಲ್ಲಿ ರಚಯಿತ ಮತ್ತು ರಚನೆಯ ಜ್ಞಾನವು ಸಹಜವಾಗಿ ಕುಳಿತುಕೊಳ್ಳುವುದು.
ಇವರು ನಮ್ಮ ಕುಲದವರೋ ಅಥವಾ ಅಲ್ಲವೆ? ಎಂದು ಅವರ ಚಹರೆಯಿಂದಲೇ ತಿಳಿದುಬಿಡುತ್ತದೆ. ಒಂದುವೇಳೆ
ನಮ್ಮ ಕುಲದವರಲ್ಲವೆಂದರೆ ಬಿಸಿತವೆಯಂತೆ ಕೇಳುತ್ತಾರೆ. ಬುದ್ಧಿವಂತರು ಗಮನವಿಟ್ಟು ಕೇಳುವರು.
ಯಾರಿಗಾದರೂ ಒಂದುಬಾರಿ ಬಾಣವು ನಾಟಿತೆಂದರೆ ಮತ್ತೆ ಬರುತ್ತಾ ಇರುತ್ತಾರೆ. ಕೆಲವರು ಪ್ರಶ್ನೆ
ಕೇಳುತ್ತಾರೆ ಮತ್ತು ಇನ್ನು ಕೆಲವರು ಒಳ್ಳೆಯ ಹೂಗಳಾಗಿದ್ದರೆ ನಿತ್ಯವು ತಾವೇ ಬಂದು ತಿಳಿದುಕೊಂಡು
ಹೋಗುವರು. ಚಿತ್ರಗಳಿಂದ ಯಾರು ಬೇಕಾದರೂ ಅರಿತುಕೊಳ್ಳಬಹುದಾಗಿದೆ. ಅವಶ್ಯವಾಗಿ ತಂದೆಯು
ದೇವಿ-ದೇವತಾಧರ್ಮದ ಸ್ಥಾಪನೆ ಮಾಡುತ್ತಿದ್ದಾರೆ. ಕೆಲವರು ಕೇಳದೆಯೇ ತಾವೇ ಅರಿತುಕೊಳ್ಳುತ್ತಾ
ಹೋಗುತ್ತಾರೆ, ಇನ್ನೂ ಕೆಲವರು ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ, ಏನನ್ನೂ
ತಿಳಿದುಕೊಳ್ಳುವುದಿಲ್ಲ. ಅಂತಹವರಿಗೆ ಪುನಃ ತಿಳಿಸಬೇಕಾಗುತ್ತದೆ. ಅವರ ಬಳಿ ವಾದ ಮಾಡುವಂತಿಲ್ಲ.
ವಾದ ಮಾಡಿದರೆ ಈಶ್ವರನು ನಿಮ್ಮ ರಕ್ಷಣೆ ಮಾಡುವುದಿಲ್ಲವೆಂದು ಹೇಳುತ್ತಾರೆ. ಅವರು ಯಾವ ರಕ್ಷಣೆ
ಮಾಡುತ್ತಾರೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ತಮ್ಮ ಕರ್ಮಗಳ ಲೆಕ್ಕಾಚಾರವಂತೂ ಪ್ರತಿಯೊಬ್ಬರೂ
ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ. ಇನ್ನೂ ಕೆಲವರ ಆರೋಗ್ಯವು ಸರಿಯಿಲ್ಲದಿದ್ದಾಗ ರಕ್ಷಣೆ ಮಾಡಿ ಎಂದು
ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಪತಿತರಿಂದ ಪಾವನ ಮಾಡಲು ಬರುತ್ತೇನೆ. ಆ
ವೃತ್ತಿಯನ್ನು ನೀವೇ ಕಲಿಯುತ್ತೀರಿ. ತಂದೆಯು ಪಂಚವಿಕಾರಗಳ ಮೇಲೆ ಜಯವನ್ನು ಪ್ರಾಪ್ತಿ
ಮಾಡಿಸುತ್ತಾರೆ ಆಗ ಅವು ಇನ್ನೂ ಜೋರಾಗಿ ಎದುರಿಸುತ್ತದೆ. ಬಹಳ ಜೋರಾಗಿ ವಿಕಾರಗಳ ಬಿರುಗಾಳಿಗಳು
ಬರುತ್ತದೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ತಂದೆಯ ಮಕ್ಕಳಾದಾಗ ಇವೆಲ್ಲಾ ಖಾಯಿಲೆಗಳು ಇನ್ನೂ
ಹೆಚ್ಚಿನದಾಗಿ ಹೊರಬರುತ್ತವೆ. ಬಹಳ ಹೆಚ್ಚಿನ ಬಿರುಗಾಳಿಗಳು ಬರುತ್ತವೆ, ಇದು ಮುಷ್ಠಿಯುದ್ಧವಾಗಿದೆ.
ಒಳ್ಳೊಳ್ಳೆಯ ಶಕ್ತಿಶಾಲಿಗಳನ್ನೂ ಸಹ ಸೋಲಿಸಿಬಿಡುತ್ತದೆ ಆದ್ದರಿಂದಲೇ ಗೊತ್ತಿಲ್ಲದೆಯೇ ಕುದೃಷ್ಟಿಯು
ಬಂದುಬಿಡುತ್ತದೆ, ರಿಜಿಸ್ಟರ್ ಹಾಳಾಗಿಬಿಡುತ್ತದೆಯೆಂದು ಹೇಳುತ್ತಾರಲ್ಲವೆ. ಕುದೃಷ್ಟಿಯವರೊಂದಿಗೆ
ಮಾತನಾಡಲೂಬಾರದು. ತಂದೆಯು ಎಲ್ಲಾ ಸೇವಾಕೇಂದ್ರಗಳ ಮಕ್ಕಳಿಗೆ ತಿಳಿಸುತ್ತಾರೆ - ಕುದೃಷ್ಟಿಯವರು
ಅನೇಕರಿದ್ದಾರೆ, ಒಂದುವೇಳೆ ಹೆಸರನ್ನು ಹೇಳಿದರೆ ಇನ್ನೂ ವಿರೋಧಿಗಳಾಗಿಬಿಡುತ್ತಾರೆ. ತಮ್ಮ
ಸತ್ಯನಾಶ ಮಾಡಿಕೊಳ್ಳುವವರು ಉಲ್ಟಾಕೆಲಸಗಳನ್ನು ಮಾಡತೊಡಗುತ್ತಾರೆ. ಕಾಮವಿಕಾರವು ಮೂಗನ್ನು
ಹಿಡಿಯುತ್ತದೆ, ಮಾಯೆಯು ಬಿಡುವುದೇ ಇಲ್ಲ. ಕೆಟ್ಟಕರ್ಮ, ಕುದೃಷ್ಟಿ, ಕುವಚನ, ಎಲ್ಲವೂ
ಬಂದುಬಿಡುತ್ತದೆ ಆಗ ಕೆಟ್ಟಚಲನೆಯಾಗಿಬಿಡುತ್ತದೆ ಆದ್ದರಿಂದ ಬಹಳ-ಬಹಳ ಎಚ್ಚರಿಕೆಯಿಂದಿರಬೇಕಾಗಿದೆ.
ಯಾವಾಗ ನೀವು ಮಕ್ಕಳು
ಪ್ರದರ್ಶನಿ ಮೊದಲಾದುವುಗಳನ್ನು ಮಾಡುತ್ತೀರೋ ಆಗ ಯಾರೇ ಬರಲಿ ಸಹಜವಾಗಿ ತಿಳಿದುಕೊಳ್ಳುವಂತಹ
ಯುಕ್ತಿಯನ್ನು ರಚಿಸಿ ಈ ಗೀತಾಜ್ಞಾನವನ್ನು ಸ್ವಯಂ ತಂದೆಯೇ ಓದಿಸುತ್ತಾರೆ. ಇದರಲ್ಲಿ ಯಾವುದೇ
ಶಾಸ್ತ್ರ ಮೊದಲಾದುವುಗಳ ಮಾತಿಲ್ಲ. ಇದು ವಿದ್ಯೆಯಾಗಿದೆ. ಯಾವುದೇ ಪುಸ್ತಕದ ಗೀತೆಯಂತೂ ಇಲ್ಲಿಲ್ಲ,
ಇಲ್ಲಿ ತಂದೆಯೇ ಓದಿಸುತ್ತಾರೆ. ಕೈಯಲ್ಲಿ ಪುಸ್ತಕವನ್ನೇನು ಹಿಡಿದುಕೊಳ್ಳುವುದಿಲ್ಲ ಅಂದಾಗ ಈ ಗೀತೆ
ಎಂಬ ಹೆಸರು ಎಲ್ಲಿಂದ ಬಂದಿತು? ಇವೆಲ್ಲಾ ವೇದ-ಶಾಸ್ತ್ರಗಳು ಕೊನೆಯಲ್ಲಿಯೇ ರಚಿಸಲ್ಪಡುತ್ತದೆ.
ಅನೇಕ ಮಠ-ಪಂಥಗಳಿವೆ, ಎಲ್ಲರದೂ ತಮ್ಮ-ತಮ್ಮ ಶಾಸ್ತ್ರಗಳಿವೆ. ರೆಂಬೆ-ಕೊಂಬೆಗಳು ಯಾವುದೆಲ್ಲವೂ
ಇದೆಯೋ ಅರ್ಥಾತ್ ಚಿಕ್ಕ-ಚಿಕ್ಕ ಮಠ-ಪಂಥ, ಅವರದೂ ಸಹ ತಮ್ಮ-ತಮ್ಮ ಶಾಸ್ತ್ರಗಳಿವೆ ಅಂದಮೇಲೆ
ಅವೆಲ್ಲವೂ ಮಕ್ಕಳು-ಮರಿಗಳಾಗಿವೆ. ಆ ಶಾಸ್ತ್ರಗಳಿಂದ ಮುಕ್ತಿಯು ಸಿಗಲು ಸಾಧ್ಯವಿಲ್ಲ.
ಸರ್ವಶಾಸ್ತ್ರಮಯಿ ಶಿರೋಮಣಿ ಗೀತೆಯೆಂದು ಗಾಯನವಿದೆ, ಗೀತೆಯ ಜ್ಞಾನವನ್ನು ತಿಳಿಸುವವರು
ಇದ್ದಾರಲ್ಲವೆ. ಈ ಜ್ಞಾನವನ್ನು ತಂದೆಯು ಬಂದು ತಿಳಿಸುತ್ತಾರೆ, ಯಾವುದೇ ಶಾಸ್ತ್ರ ಮೊದಲಾದವು
ಕೈಯಲ್ಲಿಲ್ಲ. ನಾನು ಶಾಸ್ತ್ರಗಳನ್ನು ಓದಿಲ್ಲ ಆದ್ದರಿಂದ ನಿಮಗೂ ಓದಿಸುವುದಿಲ್ಲ. ಮನುಷ್ಯರು
ಕಲಿಯುತ್ತಾರೆ, ಕಲಿಸುತ್ತಾರೆ ಆದರೆ ಇಲ್ಲಿ ಶಾಸ್ತ್ರಗಳ ಮಾತಿಲ್ಲ. ತಂದೆಯು
ಜ್ಞಾನಪೂರ್ಣನಾಗಿದ್ದಾರೆ. ತಿಳಿಸುತ್ತಾರೆ - ನಾನು ನಿಮಗೆ ಎಲ್ಲಾ ವೇದ-ಶಾಸ್ತ್ರಗಳ ಸಾರವನ್ನು
ತಿಳಿಸುತ್ತೇನೆ, ಮುಖ್ಯವಾದುದು ನಾಲ್ಕು ಧರ್ಮಶಾಸ್ತ್ರಗಳಾಗಿವೆ, ಬ್ರಾಹ್ಮಣಧರ್ಮದ ಯಾವುದಾದರೂ
ಗ್ರಂಥವಿದೆಯೇ? ಎಷ್ಟೊಂದು ತಿಳಿದುಕೊಳ್ಳುವ ಮಾತುಗಳಾಗಿವೆ. ಇವೆಲ್ಲಾ ಮಾತುಗಳನ್ನು ತಂದೆಯೇ
ವಿಸ್ತಾರವಾಗಿ ತಿಳಿಸಿಕೊಡುತ್ತಾರೆ. ಮನುಷ್ಯರೆಲ್ಲರೂ ಕಲ್ಲುಬುದ್ಧಿಯವರಾಗಿದ್ದಾರೆ ಆದ್ದರಿಂದಲೇ
ಇಷ್ಟೊಂದು ಕಂಗಾಲರಾಗಿದ್ದಾರೆ. ಸತ್ಯಯುಗದಲ್ಲಿ ದೇವತೆಗಳಿದ್ದರು, ಅಲ್ಲಿ ಚಿನ್ನದ ಮಹಲುಗಳಿತ್ತು,
ಚಿನ್ನದ ಗಣಿಗಳಿತ್ತು, ಈಗಂತೂ ಅಪ್ಪಟಚಿನ್ನವೇ ಇಲ್ಲ. ಕಥೆಯೆಲ್ಲವೂ ಭಾರತದ್ದೇ ಆಗಿದೆ. ನೀವು
ದೇವಿ-ದೇವತೆಗಳು ಪಾರಸಬುದ್ಧಿಯವರಾಗಿದ್ದೀರಿ. ಇಡೀ ವಿಶ್ವದ ಮೇಲೆ ರಾಜ್ಯಭಾರ ಮಾಡುತ್ತಿದ್ದೀರಿ.
ನಾವು ಸ್ವರ್ಗದ ಮಾಲೀಕರಾಗಿದ್ದವರು ಈಗ ನರಕದ ಮಾಲೀಕರಾಗಿದ್ದೇವೆ, ಮತ್ತೆ
ಪಾರಸಬುದ್ಧಿಯವರಾಗುತ್ತೇವೆಂದು ಈಗ ಸ್ಮೃತಿಯಲ್ಲಿ ಬಂದಿದೆ. ಈ ಜ್ಞಾನವು ನೀವು ಮಕ್ಕಳ
ಬುದ್ಧಿಯಲ್ಲಿಯೇ ಇದೆ, ಇದನ್ನು ಅನ್ಯರಿಗೂ ತಿಳಿಸಬೇಕಾಗಿದೆ. ನಾಟಕದನುಸಾರ ಪಾತ್ರವು ನಡೆಯುತ್ತಾ
ಇರುತ್ತದೆ. ಯಾವ ಸಮಯವು ಕಳೆಯುತ್ತಾಹೋಗುತ್ತದೆಯೋ, ನಂತರವೂ ಸಹ ನಿಖರವಾಗಿ ಪುರುಷಾರ್ಥವನ್ನಂತೂ
ಮಾಡಿಸುತ್ತಾರಲ್ಲವೆ. ಸ್ವಯಂ ಭಗವಂತನೇ ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಪುರುಷಾರ್ಥ
ಮಾಡಿಸುತ್ತಾರೆಂದು ಯಾವ ಮಕ್ಕಳಿಗೆ ನಶೆಯಿರುವುದೋ ಅವರ ಚಹರೆಯು ಬಹಳ ಪ್ರಸನ್ನತೆಯಿಂದ ಕೂಡಿರುತ್ತದೆ.
ತಂದೆಯು ಮಕ್ಕಳಿಗೆ ಪುರುಷಾರ್ಥ ಮಾಡಿಸಲು, ಪ್ರಾಲಬ್ಧವನ್ನು ರೂಪಿಸುವುದಕ್ಕಾಗಿಯೇ ಬರುತ್ತಾರೆ.
ಇದನ್ನು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ, ನೀವೇ ತಿಳಿದುಕೊಂಡಿದ್ದೀರಿ. ಭಗವಂತನೇ ಸ್ವರ್ಗದ
ಮಾಲೀಕರನ್ನಾಗಿ ಮಾಡುವ ಪುರುಷಾರ್ಥ ಮಾಡಿಸುತ್ತಾರೆಂದರೆ ಖುಷಿಯಾಗಬೇಕು. ಚಹರೆಯು ಬಹಳ ಖುಷಿ ಮತ್ತು
ಪ್ರಸನ್ನತೆಯಿಂದಿರಬೇಕು. ತಂದೆಯ ನೆನಪಿನಿಂದ ನೀವು ಸದಾ ಹರ್ಷಿತರಾಗಿರುತ್ತೀರಿ, ತಂದೆಯನ್ನು
ಮರೆತಾಗಲೇ ಬೇಸರವಾಗುತ್ತದೆ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುವುದರಿಂದ
ಪ್ರಸನ್ನಚಿತ್ತರಾಗುತ್ತೀರಿ. ಪ್ರತಿಯೊಬ್ಬರ ಸೇವೆಯಿಂದಲೇ ತಿಳಿಯಲಾಗುತ್ತದೆ. ತಂದೆಗೆ ಮಕ್ಕಳ
ಸುಗಂಧವಂತೂ ಬರುತ್ತದೆಯಲ್ಲವೆ. ಸುಪುತ್ರ ಮಕ್ಕಳಿಂದ ಸುಗಂಧವು ಬರುತ್ತದೆ, ಕುಪುತ್ರರಿಂದ
ದುರ್ಗಂಧವು ಬರುತ್ತದೆ. ಉದ್ಯಾನವನದಲ್ಲಿ ಸುಗಂಧಭರಿತ ಹೂಗಳನ್ನೇ ತೆಗೆದುಕೊಳ್ಳಲು ಮನಸ್ಸಾಗುತ್ತದೆ.
ಎಕ್ಕದ ಹೂವನ್ನು ಯಾರು ತಾನೆ ತೆಗೆದುಕೊಳ್ಳುತ್ತಾರೆ! ತಂದೆಯನ್ನು ಯಥಾರ್ಥ ರೀತಿಯಲ್ಲಿ ನೆನಪು
ಮಾಡುವುದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಮಾಯೆಯ
ಮುಷ್ಠಿಯುದ್ಧದಲ್ಲಿ ಸೋಲಬಾರದು. ಗಮನವಿರಲಿ - ಎಂದೂ ಮುಖದಿಂದ ಕೆಟ್ಟವಚನಗಳು ಬರಬಾರದು. ಕುದೃಷ್ಟಿ,
ಕೆಟ್ಟಚಲನೆ, ಕೆಟ್ಟಕರ್ಮ ಆಗಬಾರದು.
2. ಸುಂದರ-ಸುಗಂಧಭರಿತ
ಹೂಗಳಾಗಬೇಕಾಗಿದೆ. ನಶೆಯಿರಲಿ - ಸ್ವಯಂ ಭಗವಂತನೇ ನಮಗೆ ಓದಿಸುತ್ತಾರೆ. ತಂದೆಯ ನೆನಪಿನಲ್ಲಿದ್ದು
ಸದಾ ಹರ್ಷಿತರಾಗಿರಬೇಕಾಗಿದೆ, ಎಂದೂ ಬಾಡಿಹೋಗಬಾರದು.
ವರದಾನ:
ಚ್ಯಾಲೆಂಜ್
ಮತ್ತು ಪ್ರಾಕ್ಟಿಕಲ್ ಎರಡರ ಸಮಾನತೆಯ ಮೂಲಕ ಪಾಪಗಳಿಂದ ಸುರಕ್ಷಿತರಾಗಿರುವಂತಹ ವಿಶ್ವ ಸೇವಾಧಾರಿ
ಭವ
ನೀವು ಮಕ್ಕಳು ಯಾವ
ಚ್ಯಾಲೆಂಜ್ ಮಾಡುವಿರಿ ಆ ಚ್ಯಾಲೆಂಜ್ ಮತ್ತು ಪ್ರಾಕ್ಟಿಕಲ್ ಜೀವನದಲ್ಲಿ ಸಮಾನತೆಯಿರಲಿ, ಇಲ್ಲದೇ
ಹೋದರೆ ಪುಣ್ಯಾತ್ಮರ ಬದಲು ಹೊರೆಯುಳ್ಳ ಆತ್ಮರಾಗಿಬಿಡುವಿರಿ. ಈ ಪಾಪ ಮತ್ತು ಪುಣ್ಯದ ರೀತಿಯನ್ನು
ತಿಳಿದು ಸ್ವಯಂ ಅನ್ನು ರಕ್ಷಿಸಿಕೊಳ್ಳಿ ಏಕೆಂದರೆ ಸಂಕಲ್ಪಮಾತ್ರದಲ್ಲಿಯೂ ಯಾವುದೇ ಪ್ರಕಾರದ
ವಿಕಾರದ ಬಲಹೀನತೆ, ವ್ಯರ್ಥಮಾತು, ವ್ಯರ್ಥ ಭಾವನೆ, ತಿರಸ್ಕಾರ ಅಥವಾ ಈಷ್ರ್ಯೆಯ ಭಾವನೆ ಪಾಪದ
ಖಾತೆಯನ್ನು ಹೆಚ್ಚಿಸುತ್ತದೆ ಆದ್ದರಿಂದ ಪುಣ್ಯಾತ್ಮ ಭವದ ವರದಾನದ ಮೂಲಕ ಸ್ವಯಂ ಅನ್ನು
ಸುರಕ್ಷಿತವಾಗಿರಿಸಿಕೊಂಡು ವಿಶ್ವ ಸೇವಾಧಾರಿಗಳಾಗಿ. ಸಂಗಟಿತ ರೂಪದಲ್ಲಿ ಏಕಮತ, ಏಕರಸ ಸ್ಥಿತಿಯ
ಅನುಭವವನ್ನು ಮಾಡಿಸಿ.
ಸ್ಲೋಗನ್:
ಪವಿತ್ರತೆಯ
ಮೇಣದ ಬೆಳಕು ನಾಲ್ಕೂಕಡೆ ಇನ್ನೂ ಹೊತ್ತಿಸಿ ಆಗ ತಂದೆಯನ್ನು ಸಹಜವಾಗಿ ನೋಡಬಹುದು.
ಅವ್ಯಕ್ತ ಸೂಚನೆ:
ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ
ಪ್ರತ್ಯಕ್ಷತೆಯ
ಬಾವುಟವನ್ನು ಹಾರಿಸುವ ಮೊದಲು ಕೇವಲ ಎರಡು ಶಬ್ದ ಪ್ರತಿ ಕರ್ಮದಲ್ಲಿ ತರುವುದು. ಒಬ್ಬರ ಸರ್ವ
ಸಂಬಂಧ, ಸಂಪರ್ಕದಲ್ಲಿ ಪರಸ್ಪರದಲ್ಲಿ ಏಕತೆ. ಅನೇಕ ಸಂಸ್ಕಾರವಿದ್ದರೂ, ಅನೇಕತೆಯಲ್ಲಿ ಏಕತೆ ಮತ್ತು
ದೃಢತೆ, ಇದು ಸಫಲತೆಯ ಸಾಧನವಾಗಿದೆ. ಕೆಲ-ಕೆಲವೊಮ್ಮೆ ಏಕತೆಯು ಅಲುಗಾಡುತ್ತದೆ. ಇವರು ಇದನ್ನು
ಮಾಡಲಿ, ಆಗ ನಾನು ಮಾಡುವೆನು.. .. ಇಲ್ಲ. ನಿಮ್ಮ ಸ್ಲೋಗನ್ ಆಗಿದೆ ಸ್ವ ಪರಿವರ್ತನೆಯಿಂದ ವಿಶ್ವ
ಪರಿವರ್ತನೆ, ವಿಶ್ವ ಪರಿವರ್ತನೆಯಿಂದ ಸ್ವ ಪರಿವರ್ತನೆಯಲ್ಲ.