13.03.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಪದವಿಗೆ
ಆಧಾರ ವಿದ್ಯೆಯಾಗಿದೆ, ಯಾರು ಹಳೆಯ ಭಕ್ತರಿರುತ್ತಾರೆ ಅವರು ಚೆನ್ನಾಗಿ ಓದುತ್ತಾರೆ ಮತ್ತು ಒಳ್ಳೆಯ
ಪದವಿಯನ್ನೂ ಪಡೆಯುತ್ತಾರೆ”
ಪ್ರಶ್ನೆ:
ಯಾರು ತಂದೆಯ
ನೆನಪಿನಲ್ಲಿರುತ್ತಾರೆ ಅವರ ಲಕ್ಷಣಗಳೇನಾಗಿರುತ್ತದೆ?
ಉತ್ತರ:
ನೆನಪಿನಲ್ಲಿ
ಇರುವಂತಹವರಲ್ಲಿ ಒಳ್ಳೆಯ ಗುಣಗಳಿರುತ್ತವೆ. ಅವರು ಪವಿತ್ರರಾಗುತ್ತಾ ಹೋಗುತ್ತಾರೆ. ರಾಯಲ್ಟಿ
ಬರುತ್ತಾ ಹೋಗುತ್ತದೆ. ಪರಸ್ಪರರಲ್ಲಿ ಮಧುರ ಕ್ಷೀರಖಂಡವಾಗಿರುತ್ತಾರೆ. ಅನ್ಯರನ್ನು ನೋಡದೆ
ಸ್ವಯಂನ್ನು ನೋಡಿಕೊಳ್ಳುತ್ತಾರೆ. ಯಾರು ಮಾಡುತ್ತಾರೆಯೋ ಅವರು ಪಡೆಯುತ್ತಾರೆಂಬುದು ಅವರ
ಬುದ್ಧಿಯಲ್ಲಿರುತ್ತದೆ.
ಓಂ ಶಾಂತಿ.
ಭಾರತದ ಆದಿಸನಾತನ ದೇವಿ-ದೇವತಾಧರ್ಮದ ಶಾಸ್ತ್ರ ಗೀತೆಯಾಗಿದೆ ಎಂಬುದನ್ನು ತಂದೆಯು ನೀವು ಮಕ್ಕಳಿಗೆ
ತಿಳಿಸಿದ್ದಾರೆ. ಈ ಗೀತೆಯನ್ನು ಯಾರು ನುಡಿದರೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಇದು ಜ್ಞಾನದ
ಮಾತಾಗಿದೆ, ಈ ಹೋಲಿ ಮುಂತಾದ ಹಬ್ಬಗಳು ಯಾವುದೆಲ್ಲಾ ಇವೆಯೋ ಅವು ನಮ್ಮ ಹಬ್ಬಗಳಲ್ಲ, ಇವೆಲ್ಲವೂ
ಭಕ್ತಿಮಾರ್ಗದ ಹಬ್ಬಗಳಾಗಿವೆ. ಹಬ್ಬ ಎಂದರೆ ಕೇವಲ ಒಂದೇ ತ್ರಿಮೂರ್ತಿ ಶಿವಜಯಂತಿಯಾಗಿದೆ ಅಷ್ಟೆ.
ಕೇವಲ ಶಿವಜಯಂತಿಯೆಂದೂ ಸಹ ಹೇಳಬಾರದು, ತ್ರಿಮೂರ್ತಿ ಎಂಬ ಅಕ್ಷರವನ್ನು ಹಾಕಲಿಲ್ಲವೆಂದರೆ ಮನುಷ್ಯರು
ತಿಳಿದುಕೊಳ್ಳುವುದಿಲ್ಲ. ಹೇಗೆ ತ್ರಿಮೂರ್ತಿಯ ಚಿತ್ರವಿದೆ, ಕೆಳಗಡೆ ದೈವೀಸ್ವರಾಜ್ಯ ನಿಮ್ಮ
ಜನ್ಮಸಿದ್ಧ ಅಧಿಕಾರವೆಂದು ಬರೆಯುತ್ತೀರಿ. ಶಿವಭಗವಂತ ತಂದೆಯೂ ಸಹ ಆಗಿದ್ದಾರಲ್ಲವೆ. ಅವರು
ಅವಶ್ಯವಾಗಿ ಬಂದು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ರಾಜಯೋಗವನ್ನು ಕಲಿಯುವುದರಿಂದಲೇ
ಸ್ವರ್ಗಕ್ಕೆ ಮಾಲೀಕರಾಗುವುದು. ಚಿತ್ರದ ಒಳಗಡೆ ಬಹಳ ಜ್ಞಾನವಿದೆ! ಚಿತ್ರಗಳನ್ನು ಈ ರೀತಿ ಮಾಡಬೇಕು
ಅದನ್ನು ನೋಡಿ ಮನುಷ್ಯರಿಗೆ ಆಶ್ಚರ್ಯವಾಗಬೇಕು. ಅವರಲ್ಲಿಯೂ ಯಾರು ಬಹಳಷ್ಟು ಭಕ್ತಿಯನ್ನು
ಮಾಡಿರುತ್ತಾರೆಯೋ ಅವರೇ ಬಹಳ ಚೆನ್ನಾಗಿ ಜ್ಞಾನವನ್ನು ಅರ್ಥಮಾಡಿಕೊಳ್ಳುತ್ತಾರೆ. ಕಡಿಮೆ ಭಕ್ತಿ
ಮಾಡಿರುವಂತಹವರು ಜ್ಞಾನವನ್ನೂ ಸಹ ಕಡಿಮೆ ತಿಳಿದುಕೊಳ್ಳುತ್ತಾರೆ, ಕಡಿಮೆ ಪದವಿಯನ್ನೇ ಪಡೆಯುತ್ತಾರೆ.
ದಾಸ-ದಾಸಿಯರಲ್ಲಿಯೂ ಸಹ ನಂಬರ್ವಾರ್ ಇರುತ್ತಾರಲ್ಲವೆ. ಎಲ್ಲವೂ ವಿದ್ಯೆಯನ್ನೇ ಅವಲಂಭಿಸಿದೆ.
ನಿಮ್ಮಲ್ಲಿಯೂ ಸಹ ಕೆಲವರೇ ಬಹಳ ಚೆನ್ನಾಗಿ ಯುಕ್ತಿಯಿಂದ ಮಾತನಾಡಲು ಸಾಧ್ಯವಿದೆ. ಒಳ್ಳೆಯ ಮಕ್ಕಳ
ಚಲನ-ವಲನವೂ ಸಹ ಚೆನ್ನಾಗಿರುತ್ತದೆ. ಗುಣವೂ ಸಹ ಚೆನ್ನಾಗಿರಬೇಕು. ಎಷ್ಟು ತಂದೆಯ
ನೆನಪಿನಲ್ಲಿರುತ್ತೀರೋ ಅಷ್ಟು ಪವಿತ್ರರಾಗುತ್ತಾ ಹೋಗುತ್ತೀರಿ ಮತ್ತು ಘನತೆಯೂ ಸಹ ಬರುತ್ತಾ
ಹೋಗುತ್ತದೆ. ಕೆಲವೊಮ್ಮೆ ಶೂದ್ರರ ನಡತೆಯು ಬಹಳ ಚೆನ್ನಾಗಿರುತ್ತದೆ, ಆದರೆ ಬ್ರಾಹ್ಮಣ ಮಕ್ಕಳ
ಚಲನೆಯು ಹೇಗಿರುತ್ತದೆಯೆಂದರೆ ಕೇಳಲೇಬೇಡಿ. ಆದ್ದರಿಂದ ಅವರುಗಳು ಇವರಿಗೆ ಈಶ್ವರನು ಓದಿಸುತ್ತಾರೆಯೇ!
ಎಂದು ಕೇಳುತ್ತಾರೆ. ಆದ್ದರಿಂದ ಮಕ್ಕಳ ನಡತೆಯು ಈ ರೀತಿಯಿರಬಾರದು, ಬಹಳ ಮಧುರ ಕ್ಷೀರಖಂಡವಾಗಿರಬೇಕು.
ಯಾರು ಮಾಡುತ್ತಾರೆಯೋ ಅವರೇ ಪಡೆಯುತ್ತಾರೆ. ಮಾಡಲಿಲ್ಲವೆಂದರೆ ಪಡೆಯುವುದಿಲ್ಲ. ತಂದೆಯು ಚೆನ್ನಾಗಿ
ತಿಳಿಸಿಕೊಡುತ್ತಿರುತ್ತಾರೆ. ಮೊಟ್ಟಮೊದಲು ಬೇಹದ್ದಿನ ತಂದೆಯ ಪರಿಚಯವನ್ನು ಕೊಡುತ್ತಾ ಇರಿ.
ತ್ರಿಮೂರ್ತಿಯ ಚಿತ್ರವು ಬಹಳ ಚೆನ್ನಾಗಿದೆ - ಸ್ವರ್ಗ ಮತ್ತು ನರಕವು ಎರಡೂ ಕಡೆಯಿದೆ. ಗೋಲದಲ್ಲಿಯೂ
ಸಹ ಇದು ಸ್ಪಷ್ಟವಾಗಿದೆ. ಯಾವುದೇ ಧರ್ಮದವರಿಗೆ ಈ ಗೋಲದ ಬಗ್ಗೆ ಅಥವಾ ವೃಕ್ಷದ ಬಗ್ಗೆ ನೀವು
ತಿಳಿಸಿಕೊಡಲು ಸಾಧ್ಯವಿದೆ. ಈ ಲೆಕ್ಕದಿಂದ ನೀವು ಸ್ವರ್ಗ, ಹೊಸಪ್ರಪಂಚದಲ್ಲಿ ಬರಲು ಸಾಧ್ಯವಿಲ್ಲ.
ಯಾವುದು ಎಲ್ಲದಕ್ಕಿಂತ ಶ್ರೇಷ್ಠಧರ್ಮವಿತ್ತೋ, ಎಲ್ಲದಕ್ಕಿಂತ ಸಾಹುಕಾರರಾಗಿದ್ದರೋ ಅವರೇ
ಎಲ್ಲರಿಗಿಂತ ಬಡವರಾಗಿದ್ದಾರೆ. ಯಾರು ಮೊಟ್ಟಮೊದಲು ಇದ್ದರು, ಅವರ ಸಂಖ್ಯೆಯೂ ಸಹ ಹೆಚ್ಚಾಗಿರಬೇಕು
ಆದರೆ ಹಿಂದೂಜನರು ಬೇರೆ-ಬೇರೆ ಧರ್ಮಗಳಲ್ಲಿ ಬಹಳ ಮತಾಂತರಗೊಂಡಿದ್ದಾರೆ. ತಮ್ಮ ಧರ್ಮವನ್ನು
ತಿಳಿದುಕೊಳ್ಳದೇ ಇರುವ ಕಾರಣ ಬೇರೆ-ಬೇರೆ ಧರ್ಮಗಳಲ್ಲಿ ಹೊರಟುಹೋಗಿದ್ದಾರೆ ಅಥವಾ ಹಿಂದೂ ಧರ್ಮವೆಂದು
ಹೇಳಿಬಿಡುತ್ತಾರೆ, ತಮ್ಮ ಧರ್ಮವನ್ನೇ ತಿಳಿದುಕೊಂಡಿಲ್ಲ. ಈಶ್ವರನನ್ನು ಹೇ ಶಾಂತಿದೇವ ಎಂದು ಬಹಳ
ಕೂಗುತ್ತಾರೆ ಆದರೆ ಶಾಂತಿಯ ಅರ್ಥವನ್ನೇ ತಿಳಿದುಕೊಂಡಿಲ್ಲ. ಒಬ್ಬರಿಗೊಬ್ಬರು ಶಾಂತಿಯ
ಪುರಸ್ಕಾರವನ್ನು ಕೊಡುತ್ತಿರುತ್ತಾರೆ. ಇಲ್ಲಿ ನೀವು ವಿಶ್ವದಲ್ಲಿ ಶಾಂತಿಯನ್ನು ಸ್ಥಾಪನೆ ಮಾಡಲು
ನಿಮಿತ್ತರಾಗಿರುವ ಮಕ್ಕಳಿಗೆ ತಂದೆಯು ವಿಶ್ವರಾಜ್ಯದ ಉಡುಗೊರೆಯನ್ನು ಕೊಡುತ್ತಾರೆ. ಈ ಬಹುಮಾನವೂ
ಸಹ ನಂಬರ್ವಾರ್ ಪುರುಷಾರ್ಥದನುಸಾರ ಸಿಗುತ್ತದೆ. ನೀಡುವಂತಹವರು ಭಗವಂತ ತಂದೆಯಾಗಿದ್ದಾರೆ,
ಬಹುಮಾನವು ಎಷ್ಟು ದೊಡ್ಡದಾಗಿದೆ, ಸೂರ್ಯವಂಶಿ ರಾಜ್ಯ! ಈಗ ನೀವು ಮಕ್ಕಳ ಬುದ್ಧಿಯಲ್ಲಿ ಇಡೀ
ವಿಶ್ವದ ಚರಿತ್ರೆ-ಭೂಗೋಳ, ವರ್ಣಗಳು ಮುಂತಾದುದೆಲ್ಲವೂ ಇದೆ. ವಿಶ್ವದ ರಾಜ್ಯವನ್ನು
ತೆಗೆದುಕೊಳ್ಳಬೇಕೆಂದರೆ ಸ್ವಲ್ಪ ಪರಿಶ್ರಮವನ್ನೂ ಸಹ ಪಡಬೇಕಾಗಿದೆ. ವಿಷಯವಂತೂ ಬಹಳ ಸಹಜವಾಗಿದೆ,
ಶಿಕ್ಷಕರು ಯಾವ ಕೆಲಸವನ್ನು ಕೊಡುತ್ತಾರೆ ಅದನ್ನು ಮಾಡಿತೋರಿಸಬೇಕು. ಅಂದಾಗ ಯಾರು
ಪೂರ್ಣಜ್ಞಾನಿಗಳಾಗಿದ್ದಾರೆ, ಯಾರಲ್ಲಿ ಪೂರ್ಣಜ್ಞಾನವಿದೆಯೆಂದು ತಂದೆಯು ನೋಡುತ್ತಾರೆ. ಕೆಲವು
ಮಕ್ಕಳಂತೂ ಮುರುಳಿಯ ಬಗ್ಗೆಯೂ ಸಹ ಗಮನವನ್ನೇ ಕೊಡುವುದಿಲ್ಲ, ನಿತ್ಯವೂ ಮುರುಳಿಯನ್ನು ಓದುವುದಿಲ್ಲ.
ಯಾರು ಮುರುಳಿಯನ್ನು ಓದುವುದಿಲ್ಲವೋ ಅವರು ಯಾರ ಕಲ್ಯಾಣವನ್ನು ಮಾಡುತ್ತಾರೆ! ಬಹಳ ಮಕ್ಕಳು ಯಾರದೇ
ಕಲ್ಯಾಣ ಮಾಡುವುದಿಲ್ಲ. ತನ್ನದೂ ಮಾಡಿಕೊಳ್ಳುವುದಿಲ್ಲ, ಅನ್ಯರದನ್ನೂ ಮಾಡುವುದಿಲ್ಲ ಆದ್ದರಿಂದ
ಕುದುರೆಸವಾರರು, ಕಾಲಾಳುಗಳು ಎಂದು ಕರೆಯಲಾಗುತ್ತದೆ. ಕೆಲವರಷ್ಟೆ ಮಹಾರಥಿಗಳು, ಯಾರ್ಯಾರು
ಮಹಾರಥಿಗಳೆಂದು ಸ್ವಯಂ ಸಹ ತಿಳಿದುಕೊಳ್ಳಲು ಸಾಧ್ಯವಿದೆ. ಬಾಬಾ ಗುಲ್ಜಾರ್ರವರನ್ನು,
ಕುಮಾರಿಕಾರವರನ್ನು, ಮನೋಹರ್ರವರನ್ನು ಕಳುಹಿಸಿಕೊಡಿ ಎಂದು ಕೇಳುತ್ತಾರೆ. ಏಕೆಂದರೆ ಸ್ವಯಂ
ಕುದುರೆಸವಾರರಾಗಿರುತ್ತಾರೆ. ಅವರು ಮಹಾರಥಿಗಳಾಗಿದ್ದಾರೆ. ತಂದೆಯು ಎಲ್ಲಾ ಮಕ್ಕಳನ್ನು ಚೆನ್ನಾಗಿ
ತಿಳಿದುಕೊಳ್ಳಲು ಸಾಧ್ಯವಿದೆ. ಯಾರ ಮೇಲಾದರೂ ಗ್ರಹಚಾರವು ಕುಳಿತುಕೊಳ್ಳುತ್ತದೆಯಲ್ಲವೆ. ಕೆಲವೊಮ್ಮೆ
ಒಳ್ಳೊಳ್ಳೆಯ ಮಕ್ಕಳಿಗೂ ಸಹ ಮಾಯೆಯ ಬಿರುಗಾಳಿಯು ಬರುವುದರಿಂದ ಬೇತಾಳರಾಗಿಬಿಡುತ್ತಾರೆ. ಜ್ಞಾನದ
ಕಡೆ ಗಮನವೇ ಹೋಗುವುದಿಲ್ಲ. ಬಾಬಾರವರಿಗೆ ಪ್ರತಿಯೊಬ್ಬರ ಸೇವೆಯಿಂದ ತಿಳಿಯುತ್ತದೆಯಲ್ಲವೆ. ಸೇವೆ
ಮಾಡುವಂತಹವರು ತಮ್ಮ ಪೂರ್ಣ ಸಮಾಚಾರವನ್ನು ತಂದೆಗೆ ಕೊಡುತ್ತಾ ಹೋಗುತ್ತಾರೆ.
ಗೀತೆಯ ಭಗವಂತ ನಮ್ಮನ್ನು
ವಿಶ್ವದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ ಎಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ.
ಅನೇಕರು ಗೀತೆಯನ್ನೂ ಸಹ ಕಂಠಪಾಠವನ್ನು ಮಾಡಿಕೊಳ್ಳುತ್ತಾರೆ. ಸಾವಿರಾರು ರೂಪಾಯಿಗಳನ್ನು
ಸಂಪಾದಿಸಿಕೊಳ್ಳುತ್ತಾರೆ. ನೀವು ಬ್ರಾಹ್ಮಣ ಸಂಪ್ರದಾಯದವರು ನಂತರ ಮತ್ತೆ
ದೈವೀಸಂಪ್ರದಾಯದವರಾಗುತ್ತೀರಿ. ಈಶ್ವರನ ಸಂತಾನರೆಂದು ಎಲ್ಲರೂ ತಮ್ಮನ್ನು ಹೇಳಿಕೊಳ್ಳುತ್ತಾರೆ,
ಮತ್ತೆ ನಾವೆಲ್ಲರೂ ಈಶ್ವರನಾಗಿದ್ದೇವೆಂದು ಹೇಳಿಬಿಡುತ್ತಾರೆ. ಯಾರಿಗೆ ಏನು ಬರುತ್ತದೆಯೋ
ಹೇಳುತ್ತಿರುತ್ತಾರೆ. ಭಕ್ತಿಮಾರ್ಗದಲ್ಲಿ ಮನುಷ್ಯರ ಸ್ಥಿತಿಯೇನಾಗಿಬಿಟ್ಟಿದೆ! ಈ ಪ್ರಪಂಚವೇ
ಕಬ್ಬಿಣದ ಯುಗ, ಪತಿತವಾಗಿದೆ. ಈ ಚಿತ್ರದಿಂದ ಬಹಳ ಚೆನ್ನಾಗಿ ತಿಳಿಸಿಕೊಡಲು ಸಾಧ್ಯವಿದೆ,
ಜೊತೆಯಲ್ಲಿ ದೈವೀಗುಣಗಳೂ ಸಹ ಇರಬೇಕು. ಒಳಗೂ-ಹೊರಗೂ ಸತ್ಯವಾಗಿರಬೇಕು. ಆತ್ಮವೇ ಅಸತ್ಯವಾಗಿದೆ,
ಅದನ್ನು ಮತ್ತೆ ಸತ್ಯತಂದೆಯು ಸತ್ಯವನ್ನಾಗಿ ಮಾಡುತ್ತಾರೆ. ತಂದೆಯೇ ಬಂದು ಸ್ವರ್ಗದ ಮಾಲೀಕರನ್ನಾಗಿ
ಮಾಡುತ್ತಾರೆ, ದೈವೀಗುಣವನ್ನು ಧಾರಣೆ ಮಾಡಿಸುತ್ತಾರೆ. ನಾವು ಲಕ್ಷ್ಮೀ-ನಾರಾಯಣರಂತಹ
ಗುಣವಂತರಾಗುತ್ತಿದ್ದೇವೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ತಮ್ಮನ್ನು
ಪರಿಶೀಲಿಸಿಕೊಳ್ಳುತ್ತಾ ಇರಿ - ನಮ್ಮಲ್ಲಿ ಯಾವುದೇ ಆಸುರಿಯ ಗುಣವಿಲ್ಲವೆ? ನಡೆಯುತ್ತಾ-ನಡೆಯುತ್ತಾ
ಮಾಯೆಯ ಪೆಟ್ಟು ಈ ರೀತಿ ಬೀಳುತ್ತದೆ ಇದರಿಂದ ಅನೇಕರು ಬಿದ್ದುಹೋಗುತ್ತಾರೆ.
ನಿಮ್ಮ ಪಾಲಿಗೆ ಜ್ಞಾನ
ಮತ್ತು ವಿಜ್ಞಾನವೇ ಹೋಲಿ-ದುರಿಯಾ ಆಗಿದೆ. ಅವರೂ ಸಹ ಹೋಲಿ ಮತ್ತು ದುರಿಯಾ ಹಬ್ಬವನ್ನು
ಆಚರಿಸುತ್ತಾರೆ ಆದರೆ ಅದರ ಅರ್ಥವೇನೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ವಾಸ್ತವದಲ್ಲಿ ಇದು
ಜ್ಞಾನ ಮತ್ತು ವಿಜ್ಞಾನವಾಗಿದೆ. ಇದರಿಂದ ತಮ್ಮನ್ನು ಬಹಳ ಶ್ರೇಷ್ಠರನ್ನಾಗಿ ಮಾಡಿಕೊಳ್ಳುತ್ತೀರಿ.
ಅವರಾದರೂ ಏನೇನೋ ಮಾಡುತ್ತಾರೆ, ಧೂಳನ್ನು ಎರಚುತ್ತಾರೆ ಏಕೆಂದರೆ ಇದು ರೌರವ ನರಕವಾಗಿದೆ.
ಹೊಸಪ್ರಪಂಚದ ಸ್ಥಾಪನೆ ಮತ್ತು ಹಳೆಯ ಪ್ರಪಂಚದ ವಿನಾಶದ ಕರ್ತವ್ಯ ನಡೆಯುತ್ತಾ ಇದೆ. ನೀವು ಈಶ್ವರೀಯ
ಸಂತಾನರಿಗೂ ಸಹ ಮಾಯೆಯು ಈ ರೀತಿ ಪೆಟ್ಟು ಕೊಡುತ್ತದೆ ಅದರಿಂದ ಒಂದೇಸಾರಿ ಜೋರಾಗಿ ಕೆಸರಿನಲ್ಲಿ
ಬಿದ್ದುಬಿಡುತ್ತಾರೆ. ಮತ್ತೆ ಅದರಿಂದ ಎತ್ತುವುದು ಬಹಳ ಕಷ್ಟವಾಗುತ್ತದೆ. ಇದರಲ್ಲಿ ಆಶೀರ್ವಾದ
ಮುಂತಾದುದರ ಯಾವುದೇ ಮಾತಿಲ್ಲ. ಮತ್ತೆ ಈ ಮಾರ್ಗದಲ್ಲಿ ನಡೆಯುವುದು ಬಹಳ ಕಷ್ಟವಾಗುತ್ತದೆ
ಆದ್ದರಿಂದ ಬಹಳ ಎಚ್ಚರದಿಂದಿರಬೇಕು. ಮಾಯೆಯ ಯುದ್ಧದಿಂದ ಪಾರಾಗಲು ಎಂದೂ ದೇಹಾಭಿಮಾನದಲ್ಲಿ
ಮುಳುಗಬೇಡಿ. ಸದಾ ಎಲ್ಲರೂ ಸಹೋದರ-ಸಹೋದರಿಯರಾಗಿದ್ದೇವೆ ಎಂಬ ಎಚ್ಚರಿಕೆಯಿರಲಿ. ತಂದೆಯು ಏನನ್ನು
ಕಲಿಸಿದ್ದಾರೆಯೋ ಅದನ್ನೇ ಸಹೋದರಿಯು ಕಲಿಸುತ್ತಾರೆ. ತಂದೆಗೆ ಬಲಿಹಾರಿಯಾಗಬೇಕು, ಸಹೋದರಿಯರಿಗಲ್ಲ.
ಬ್ರಹ್ಮಾರವರಿಗೂ ಸಹ ಬಲಿಹಾರಿಯಲ್ಲ. ಇದನ್ನು ಸಹ ಪುರುಷಾರ್ಥದಿಂದ ಕಲಿಸಲಾಗುತ್ತದೆ.
ಪುರುಷಾರ್ಥವನ್ನು ಚೆನ್ನಾಗಿ ಮಾಡುವುದು ಅಂದರೆ ತನ್ನ ಕಲ್ಯಾಣವನ್ನು ಮಾಡಿಕೊಳ್ಳುವುದು. ನಮಗೂ ಸಹ
ಕಲಿಸುತ್ತಾರೆ ಅಂದಮೇಲೆ ನಾವು ನಮ್ಮ ಕಲ್ಯಾಣವನ್ನು ಮಾಡಿಕೊಳ್ಳಬೇಕಾಗಿದೆ.
ಈ ದಿನ ಹೋಲಿಯಾಗಿದೆ.
ಹೋಲಿಯ ಜ್ಞಾನವನ್ನೂ ಸಹ ತಿಳಿಸಿಕೊಡಲಾಗುತ್ತದೆ. ಜ್ಞಾನ ಮತ್ತು ವಿಜ್ಞಾನ, ಓದಿಗೆ ಜ್ಞಾನವೆಂದು
ಹೇಳಲಾಗುತ್ತದೆ, ವಿಜ್ಞಾನವೆಂದರೇನು, ಇದು ಯಾರಿಗೂ ಸಹ ಗೊತ್ತಿಲ್ಲ. ವಿಜ್ಞಾನವೆಂದರೆ
ಜ್ಞಾನಕ್ಕಿಂತ ಮೇಲೆ ಇರುವುದು. ಜ್ಞಾನವು ನಿಮಗೆ ಇಲ್ಲಿ ಸಿಗುತ್ತದೆ, ಇದರಿಂದ ನೀವು
ಪ್ರಾಲಬ್ಧವನ್ನು ಪಡೆಯುತ್ತೀರಿ ಬಾಕಿ ಅದು ಶಾಂತಿಧಾಮವಾಗಿದೆ. ಇಲ್ಲಿ ಪಾತ್ರವನ್ನು ಅಭಿನಯಿಸುತ್ತಾ
ಸುಸ್ತಾದಾಗ ನಂತರ ಶಾಂತಿಧಾಮದಲ್ಲಿ ಹೋಗಲು ಬಯಸುತ್ತಾರೆ. ಈಗ ನಿಮ್ಮ ಬುದ್ಧಿಯಲ್ಲಿ ಇಡೀ ಚಕ್ರದ
ಜ್ಞಾನವಿದೆ - ನಾವೀಗ ಸ್ವರ್ಗದಲ್ಲಿ ಹೋಗುತ್ತೇವೆ ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ
ನರಕದಲ್ಲಿ ಬರುತ್ತೇವೆ ಮತ್ತೆ ಅದೇ ಸ್ಥಿತಿಯಾಗುತ್ತದೆ. ಇದು ನಡೆಯುತ್ತಲೇ ಇರುತ್ತದೆ. ಇದರಿಂದ
ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವರು ಈ ಡ್ರಾಮಾವನ್ನು ಮಾಡಿದ್ದಾದರೂ ಏಕೆ? ಎಂದು
ಕೇಳುತ್ತಾರೆ. ಅರೆ! ಇದಂತೂ ಹೊಸಪ್ರಪಂಚ ಮತ್ತು ಹಳೆಯ ಪ್ರಪಂಚದ ಆಟವಾಗಿದೆ, ಅನಾದಿಯಾಗಿ
ಮಾಡಲ್ಪಟ್ಟದ್ದಾಗಿದೆ. ವೃಕ್ಷದ ಬಗ್ಗೆ ತಿಳಿಸಿಕೊಡುವುದು ಬಹಳ ಚೆನ್ನಾಗಿದೆ. ಎಲ್ಲದಕ್ಕಿಂತ
ಮುಖ್ಯವಾದ ಮಾತು - ತಂದೆಯನ್ನೇ ನೆನಪು ಮಾಡಿದ್ದೇ ಆದರೆ ಪಾವನರಾಗಿಬಿಡುತ್ತೀರಿ, ಮುಂದೆಹೋದಂತೆ
ತಮಗೆ ಅರ್ಥವಾಗುತ್ತಾ ಹೋಗುತ್ತದೆ. ಯಾರ್ಯಾರು ಈ ಕುಲದವರಾಗಿದ್ದಾರೆಯೋ, ಯಾರು ಅನ್ಯಧರ್ಮಗಳಲ್ಲಿ
ಮತಾಂತರಗೊಂಡಿದ್ದಾರೆ ಅವರೂ ಸಹ ಬರುತ್ತಾರೆ. ಯಾವಾಗ ಎಲ್ಲರೂ ಬರುತ್ತಾರೆ ಮನುಷ್ಯರು ಆಗ
ಆಶ್ಚರ್ಯಪಡುತ್ತಾರೆ. ಎಲ್ಲರಿಗೂ ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಗಳಾಗಿರಿ ಎಂದು ಹೇಳಬೇಕು.
ನಿಮಗೆ ಓದುವುದೇ ದೊಡ್ಡ ಹಬ್ಬವಾಗಿದೆ, ಇದರಿಂದ ನಿಮಗೆ ಎಷ್ಟೊಂದು ಸಂಪಾದನೆಯಾಗುತ್ತದೆ, ಅವರುಗಳು
ಈ ಹಬ್ಬಗಳನ್ನು ಆಚರಿಸುವುದರಲ್ಲಿ ಎಷ್ಟೊಂದು ಹಣ ಮುಂತಾದುದನ್ನು ಹಾಳುಮಾಡುತ್ತಾರೆ. ಎಷ್ಟೊಂದು
ಜಗಳವಾಗುತ್ತದೆ! ಪಂಚಾಯಿತಿ ರಾಜ್ಯದಲ್ಲಿ ಎಷ್ಟೊಂದು ಜಗಳವೇ ಜಗಳವಿದೆ, ಯಾರಿಗಾದರೂ ಲಂಚವನ್ನು
ಕೊಟ್ಟು ಸಾಯಿಸಲು ಪ್ರಯತ್ನಪಡುತ್ತಾರೆ, ಇಂತಹದು ಅನೇಕ ಉದಾಹರಣೆಗಳಿವೆ. ಸತ್ಯಯುಗದಲ್ಲಿ ಯಾವುದೇ
ಉಪದ್ರವವಾಗುವುದಿಲ್ಲ ಎಂಬುದನ್ನು ಮಕ್ಕಳು ತಿಳಿದುಕೊಂಡಿದ್ದೀರಿ. ರಾವಣರಾಜ್ಯದಲ್ಲಿ ಬಹಳಷ್ಟು
ಉಪದ್ರವಗಳಿವೆ, ಈಗ ತಮೋಪ್ರಧಾನತೆಯಿದೆಯಲ್ಲವೆ. ಒಬ್ಬರಿಗೊಬ್ಬರ ಮತವು ಹೊಂದಾಣಿಕೆಯಾಗದೇ ಇರುವ
ಕಾರಣ ಎಷ್ಟೊಂದು ಜಗಳವಿದೆ. ಆದ್ದರಿಂದ ಈ ಹಳೆಯ ಪ್ರಪಂಚವನ್ನು ಮರೆತು ಒಂಟಿಯಾಗಿಬಿಡಿ, ಮನೆಯನ್ನು
ನೆನಪು ಮಾಡಿ ಎಂದು ತಂದೆಯು ಹೇಳುತ್ತಾರೆ. ತಮ್ಮ ಸುಖಧಾಮವನ್ನೂ ನೆನಪು ಮಾಡಿ, ಯಾರೊಂದಿಗೂ ಹೆಚ್ಚು
ಮಾತನ್ನೂ ಸಹ ಮಾತನಾಡಬೇಡಿ ಇಲ್ಲವೆಂದರೆ ಬಹಳ ಹಾನಿಯಾಗುತ್ತದೆ. ಬಹಳ ಮಧುರವಾಗಿ ಶಾಂತಿ,
ಪ್ರೀತಿಯಿಂದ ಮಾತನಾಡುವುದು ಒಳ್ಳೆಯದು. ಹೆಚ್ಚು ಮಾತನಾಡದೇ ಇರುವುದೂ ಒಳ್ಳೆಯದು. ಶಾಂತಿಯಿಂದ
ಇರುವುದು ಎಲ್ಲದಕ್ಕಿಂತ ಒಳ್ಳೆಯದು. ನೀವು ಮಕ್ಕಳೂ ಶಾಂತಿಯಿಂದ ವಿಜಯವನ್ನು ಪಡೆಯುತ್ತೀರಿ. ಒಬ್ಬ
ತಂದೆಯ ವಿನಃ ಬೇರೆ ಯಾರ ಮೇಲೂ ಪ್ರೀತಿಯನ್ನಿಡಬೇಡಿ. ಎಷ್ಟು ತಂದೆಯಿಂದ ಆಸ್ತಿಯನ್ನು
ತೆಗೆದುಕೊಳ್ಳಲು ಬಯಸುತ್ತೀರೋ ಅಷ್ಟನ್ನು ತೆಗೆದುಕೊಳ್ಳಿ. ಇಲ್ಲವೆಂದರೆ ಲೌಕಿಕ ತಂದೆಯ ಆಸ್ತಿಯ
ಮೇಲೆ ಎಷ್ಟೊಂದು ಜಗಳವಾಗುತ್ತದೆ! ಇದರಲ್ಲಿ ಯಾವುದೇ ಪ್ರಕಾರದ ಕಿರಿಕಿರಿಯಿಲ್ಲ. ಎಷ್ಟು ಬೇಕೋ
ಅಷ್ಟು ತಮ್ಮ ಓದಿನಿಂದ ಪಡೆಯಲು ಸಾಧ್ಯವಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸತ್ಯತಂದೆ
ಸತ್ಯವಂತರನ್ನಾಗಿ ಮಾಡಲು ಬಂದಿದ್ದಾರೆ ಆದ್ದರಿಂದ ಸತ್ಯವಂತರಾಗಿ ನಡೆಯಬೇಕು. ನನ್ನಲ್ಲಿ ಯಾವುದೇ
ಆಸುರಿ ಗುಣವಿಲ್ಲವೆ? ಎಂದು ತನ್ನನ್ನು ನೋಡಿಕೊಳ್ಳಬೇಕು. ನಾನು ಹೆಚ್ಚು ಮಾತನಾಡುತ್ತಿಲ್ಲವೆ? ಬಹಳ
ಮಧುರವಾಗಿ ಶಾಂತಿ ಮತ್ತು ಪ್ರೀತಿಯಿಂದ ಮಾತನಾಡಬೇಕು.
2. ಮುರುಳಿಯ ಮೇಲೆ
ಪೂರ್ಣಗಮನವನ್ನು ಕೊಡಬೇಕು. ನಿತ್ಯವೂ ಮುರುಳಿಯನ್ನು ಓದಬೇಕು, ತನ್ನ ಮತ್ತು ಅನ್ಯರ ಕಲ್ಯಾಣ
ಮಾಡಬೇಕು. ಶಿಕ್ಷಕರು ಯಾವ ಕೆಲಸವನ್ನು ಕೊಡುತ್ತಾರೆ ಅದನ್ನು ಮಾಡಿ ತೋರಿಸಬೇಕು.
ವರದಾನ:
ಹೋಲಿ ಶಬ್ಧದ
ಅರ್ಥ ಜೀವನದಲ್ಲಿ ತಂದು ಪುರುಷಾರ್ಥದ ತೀವ್ರತೆಯನ್ನು ಹೆಚ್ಚಿಸುವಂತಹ ತೀವ್ರ ಪುರುಷಾರ್ಥಿ ಭವ
ಹೋಲಿ ಅರ್ಥಾತ್ ಯಾವ ಮಾತು
ಆಗಿ ಹೋಯಿತು, ಕಳೆದುಹೋಯಿತು ಅದನ್ನು ಸಂಪೂರ್ಣವಾಗಿ ಸಮಾಪ್ತಿ ಮಾಡುವುದು. ಕಳೆದು ಹೋಗಿರುವುದನ್ನು
ಬಿಟ್ಟು ಮುಂದುವರೆಯುವುದೇ ಹೋಲಿ ಆಚರಿಸುವುದಾಗಿದೆ. ಕಳೆದು ಹೋಗಿರುವ ಮಾತನ್ನು ಈ ರೀತಿ ಅನುಭವ
ಮಾಡಿ ಹೇಗೆ ಬಹಳ ಹಳೆಯದು ಯಾವುದೋ ಜನ್ಮದ ಮಾತಾಗಿದೆ, ಯಾವಾಗ ಈ ಸ್ಥಿತಿಯಾಗುತ್ತದೆ ಆಗ
ಪುರುಷಾರ್ಥದ ತೀವ್ರತೆ ಹೆಚ್ಚಾಗುವುದು. ತಮ್ಮದು ಅಥವಾ ಅನ್ಯ ಕಳೆದು ಹೋಗಿರುವ ಮಾತುಗಳನ್ನು ಎಂದೂ
ಚಿಂತನೆ ಮಾಡಬೇಡಿ, ಚಿತ್ತ, ಬುದ್ಧಿಯಲ್ಲಿಟ್ಟುಕೊಳ್ಳಬೇಡಿ ಮತ್ತು ವರ್ಣನೆಯಂತೂ ಎಂದೂ ಮಾಡಬೇಡಿ,
ಆಗಲೇ ತೀವ್ರ ಪುರುಷಾರ್ಥಿಯಾಗಲು ಸಾಧ್ಯ.
ಸ್ಲೋಗನ್:
ಸ್ನೇಹವೇ ಸಹಜ
ನೆನಪಿನ ಸಾಧನವಾಗಿದೆ ಆದ್ದರಿಂದ ಸದಾ ಸ್ನೇಹಿಯಾಗಿರಿ ಮತ್ತು ಸ್ನೇಹಿಯರನ್ನಾಗಿ ಮಾಡಿ.
ಮಾತೇಶ್ವರೀ ಜೀಯವರ
ಅಮೂಲ್ಯ ಮಹಾವಾಕ್ಯ
“ಗುಪ್ತ ಬಾಂಧೇಲಿ
ಗೋಪಿಕೆಯರ ಗಾಯನವಾಗಿದೆ”
ಗೀತೆ:
ಬಿನ್ ದೇಕೆ ಪ್ಯಾರ್ ಕರೂಂ,
ಘರ್ ಬೈಠೆ ಯಾದ್ ಕರೂಂ......( ನೋಡದೆ ಪ್ರೀತಿ ಮಾಡುವೆ, ಮನೆಯಲ್ಲಿ ಕುಳಿತು ನೆನಪು ಮಾಡುವೆ.....)
ಈ ಗೀತೆಯನ್ನು ಯಾರೊ
ಬಂದನದಲ್ಲಿರುವ ಗೋಪಿಕೆ ಪ್ರೀತಿಯಿಂದ ಹಾಡಿರುವುದಾಗಿದೆ, ಇದಾಗಿದೆ ಕಲ್ಪ-ಕಲ್ಪದ ವಿಚಿತ್ರ ಆಟ.
ನೋಡದೆಯೇ ಪ್ರೀತಿ ಮಾಡುತ್ತಾರೆ, ಪ್ರಪಂಚದವರಿಗೆ ಪಾಪ ಏನು ಗೊತ್ತು, ಕಲ್ಪದ ಹಿಂದಿನ ಪಾತ್ರ
ಪುನರಾವರ್ತನೆಯಾಗುತ್ತಿದೆ ಎಂದು. ಆದರೆ ಆ ಗೋಪಿಕೆಯರು ಮನೆ-ಮಠ ಬಿಟ್ಟಿಲ್ಲ ಆದರೆ ನೆನಪಿನಲ್ಲಿ
ಕರ್ಮ ಬಂಧನವನ್ನು ಚುಕ್ತು ಮಾಡುತ್ತಿದ್ದಾರೆ ಎಂದು, ಆದ್ದರಿಂದ ಇವರು ಎಷ್ಟು ಖುಷಿಯಿಂದ
ಜೂóಮ್-ಜೂóಮ್ ಎಂದು ಖುಷಿಯಿಂದ ಹಾಡುತ್ತಿದ್ದಾರೆ. ಆದ್ದರಿಂದ ವಾಸ್ತವದಲ್ಲಿ ಮನೆ ಬಿಡುವಂತಹ
ಮಾತಲ್ಲ. ಮನೆಯಲ್ಲೇ ಕುಳಿತು ನೋಡದೆ ಆ ಸುಖದಲ್ಲಿರುತ್ತಾ ಸೇವೆ ಮಾಡಬೇಕು. ಯಾವ ಸೇವೆ ಮಾಡಬೇಕು?
ಪವಿತ್ರರಾಗಿ ಪವಿತ್ರರನ್ನಾಗಿ ಮಾಡುವಂತಹ, ನಿಮಗೆ ಈಗ ಮೂರನೇ ನೇತ್ರ ಸಿಕ್ಕಿದೆ. ಆದಿಯಿಂದ ಹಿಡಿದು
ಅಂತ್ಯದ ವರೆಗೆ ಬೀಜ ಮತ್ತು ವೃಕ್ಷದ ರಹಸ್ಯ ನಿಮ್ಮ ದೃಷ್ಠಿಯಲ್ಲಿದೆ. ಆದ್ದರಿಂದ ಬಲಿಹಾರಿ ಈ
ಜೀವನದ್ದಾಗಿದೆ, ಈ ಜ್ಞಾನದ ಮೂಲಕ 21 ಜನ್ಮಕ್ಕಾಗಿ ಸೌಭಾಗ್ಯವನ್ನು ಮಾಡಿಕೊಳ್ಳುತ್ತಿರುವಿರಿ,
ಇದರಲ್ಲಿ ಒಂದುವೇಳೆ ಏನಾದರೂ ಲೋಕ ಮರ್ಯಾದೆ, ವಿಕಾರಿ ಕುಲ ಮರ್ಯಾದೆ ಇದ್ದಲ್ಲಿ ಅವರು ಸೇವೆ ಮಾಡಲು
ಸಾದ್ಯವಿಲ್ಲ, ಇದಾಗಿದೆ ನಮ್ಮ ಬಲಹೀನತೆ. ಬಹಳ ಜನರಿಗೆ ವಿಚಾರ ಬರುತ್ತೆ ಈ ಬ್ರಹ್ಮಾಕುಮಾರಿಯರು ಮನೆ
ತೊರೆಯುತ್ತಾರೆ ಎಂದು ಆದರೆ ಇಲ್ಲಿ ಮನೆ ತೊರೆಯುವ ಮಾತೆ ಇಲ್ಲ, ಮನೆಯಲ್ಲಿ ಕುಳಿತೆ
ಪವಿತ್ರವಾಗಿರಬೇಕು ಮತ್ತು ಸೇವೆ ಮಾಡಬೇಕು, ಇದರಲ್ಲಿ ಯಾವುದೇ ಕಠಿಣತೆ ಇಲ್ಲ. ಪವಿತ್ರರಾದಾಗ
ಮಾತ್ರ ಪವಿತ್ರ ಪ್ರಪಂಚಕ್ಕೆ ಹೋಗಲು ಅಧಿಕಾರಿ ಯಾಗುವಿರಿ. ಉಳಿದಂತೆ ಯಾರು ಹೋಗಲು
ಇಚ್ಛಿಸುವುದಿಲ್ಲ, ಅವರಂತೂ ಕಲ್ಪದ ಮೊದಲಿನ ಶತೃತ್ವದ ಪಾತ್ರಮಾಡುತ್ತಾರೆ, ಇದರಲ್ಲಿ ಯಾರದೇ
ದೋಷವಿಲ್ಲ. ಹೇಗೆ ನಾವು ಪರಮಾತ್ಮನ ಕಾರ್ಯವನ್ನು ತಿಳಿದಿರುವೆವು ಅದೇ ರೀತಿ ಡ್ರಾಮದೊಳಗೆ
ಪ್ರತಿಯೊಬ್ಬರ ಪಾತ್ರವನ್ನು ತಿಳಿದಿದ್ದಾರೆ ಆದ್ದರಿಂದ ಇದರಲ್ಲಿ ತಿರಸ್ಕಾರ ಬರಲು ಸಾಧ್ಯವಿಲ್ಲ.
ಇಂತಹ ತೀವ್ರ ಪುರುಷಾರ್ಥಿ ಗೋಪಿಕೆಯರು ರೇಸ್ ಮಾಡಿ ವಿಜಯಮಾಲೆಯಲ್ಲಿಯೂ ಸಹ ಬರಲು ಸಾಧ್ಯ. ಒಳ್ಳೆಯದು.
ಓಂಶಾಂತಿ.
ಅವ್ಯಕ್ತ ಸೂಚನೆ - ಸತ್ಯ
ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ
ಏನೆಲ್ಲ ಜ್ಞಾನದ ಗುಹೆಯ
ಮಾತುಗಳು ಇದೆ, ಅದನ್ನು ಸ್ಪಷ್ಟ ಮಾಡುವ ವಿಧಿ ನಿಮ್ಮ ಬಳಿ ಬಹಳ ಒಳ್ಳೆಯದು ಇದೆ ಹಾಗೂ ಸ್ಪಷ್ಟೀಕರಣ
ಇದೆ. ಒಂದೊಂದು ಮಾತನ್ನು ಸಹ ಲಾಜಿಕಲ್ ಆಗಿ ಸ್ಪಷ್ಟ ಮಾಡಬಹುದು. ತಾವು ಅಥಾರಿಟಿಯವರಾಗಿದ್ದೀರಿ.
ಯಾವುದೇ ರೀತಿಯ ಮನೋಮಯ ಅಥವಾ ಕಲ್ಪನೆಯ ಮಾತಿಲ್ಲ. ಯಥಾರ್ಥವಾಗಿದೆ ಹಾಗೂ ಅನುಭವವಿದೆ. ಅನುಭವದ
ಅಥಾರಿಟಿ, ಸತ್ಯತೆಯ ಅಥಾರಿಟಿ... ಎಷ್ಟು ಅಥಾರಿಟಿ ಇದೆ! ಅಂದ ಮೇಲೆ ಅಥೋರಿಟಿ ಹಾಗೂ ಸ್ನೇಹ-
ಎರಡನ್ನು ಜೊತೆ ಜೊತೆಯಲಿ ಕಾರ್ಯದಲ್ಲಿ ತೊಡಗಿಸಿ.