13.04.25    Avyakt Bapdada     Kannada Murli    31.12.2004     Om Shanti     Madhuban


ಈ ವರ್ಷದ ಆರಂಭದಿಂದ ಬೇಹದ್ದಿನ ವೈರಾಗ್ಯ ವೃತ್ತಿಯನ್ನು ಇಮರ್ಜ್ ಮಾಡಿಕೊಳ್ಳಿ -ಇದೇ ಮುಕ್ತಿಧಾಮದ ದ್ವಾರದ ಬೀಗದ ಕೈ (ಚಾಬಿ) ಆಗಿದೆ


ಇಂದು ನವಯುಗ ರಚಯಿತ ಬಾಪ್ದಾದಾ ತನ್ನ ಮಕ್ಕಳೊಂದಿಗೆ ಹೊಸ ವರ್ಷವನ್ನು ಆಚರಿಸಲು, ಪರಮಾತ್ಮ ಮಿಲನವನ್ನು ಮಾಡುವುದಕ್ಕಾಗಿ ಮಕ್ಕಳ ಸ್ನೇಹದಲ್ಲಿ ತನ್ನ ದೂರದೇಶದಿಂದ ಸಾಕಾರವತನದಲ್ಲಿ ಮಿಲನ ಮಾಡಲು ಬಂದಿದ್ದೇವೆ. ಪ್ರಪಂಚದಲ್ಲಿ ಹೊಸ ವರ್ಷದ ಶುಭಾಶಯಗಳನ್ನು ಒಬ್ಬಿಬ್ಬರಿಗೆ ಹೇಳುತ್ತಾರೆ ಆದರೆ ಬಾಪ್ದಾದಾ ಮಕ್ಕಳಿಗೆ ನವಯುಗ ಹಾಗೂ ಹೊಸ ವರ್ಷದ ಎರಡರ ಶುಭಾಶಯಗಳನ್ನು ನೀಡುತ್ತಿದ್ದಾರೆ. ಹೊಸವರ್ಷವನ್ನು ಒಂದುದಿನ ಆಚರಿಸುತ್ತಾರೆ. ನವಯುಗವನ್ನು ನೀವು ಸಂಗಮದಲ್ಲಿ ಸದಾ ಆಚರಿಸುತ್ತೀರಿ. ನೀವೆಲ್ಲರೂ ಪರಮಾತ್ಮನ ಪ್ರೀತಿಯ ಆಕರ್ಷಣೆಯಲ್ಲಿ ಸೆಳೆಯುತ್ತಾ ಇಲ್ಲಿ ತಲುಪಿದ್ದೀರಿ ಆದರೆ ಎಲ್ಲರಿಗಿಂತ ದೂರದೇಶದಿಂದ ಬಂದಿರುವಂತಹವರು ಯಾರು? ಡಬಲ್ ವಿದೇಶಿಯರೇ? ಅವರಂತೂ ಸಾಕಾರ ದೇಶದಲ್ಲಿ ಇರುತ್ತಾರೆ ಆದರೆ ಬಾಪ್ದಾದಾ ದೂರದೇಶಿ ಎಷ್ಟು ದೂರದಿಂದ ಬಂದಿದ್ದಾರೆ? ಎಷ್ಟು ಮೈಲುಗಳಿಂದ ಬಂದಿದ್ದಾರೆಂದು ಲೆಕ್ಕ ತೆಗೆಯಲು ಸಾಧ್ಯವೇ? ದೂರದೇಶಿ ಬಾಪ್ದಾದಾ ನಾಲ್ಕೂ ಕಡೆಯ ಮಕ್ಕಳನ್ನು ಸಮ್ಮುಖದಲ್ಲಿ ಡೈಮಂಡ್ ಹಾಲಿನಲ್ಲಿ ಕುಳಿತಿರುವವರನ್ನು ಅಥವಾ ಮಧುಬನದಲ್ಲಿ ಕುಳಿತಿರುವವರು, ಜ್ಞಾನಸರೋವರದಲ್ಲಿ ಕುಳಿತಿರುವವರು, ಗ್ಯಾಲರಿಯಲ್ಲಿ ಕುಳಿತಿರುವವರು, ಎಲ್ಲರ ಜೊತೆ, ದೂರ ಕುಳಿತಿರುವ ದೇಶ-ವಿದೇಶದಲ್ಲಿ ಎಲ್ಲರ ಜೊತೆ ಬಾಪ್ದಾದಾ ಮಿಲನ ಮಾಡುತ್ತಿದ್ದಾರೆ. ಬಾಪ್ದಾದಾ ನೋಡುತ್ತಿದ್ದೇವೆ - ಎಲ್ಲರೂ ಎಷ್ಟು ಪ್ರೀತಿಯಿಂದ ದೂರದಿಂದ ನೋಡುತ್ತಿದ್ದಾರೆ ಹಾಗೂ ಕೇಳುತ್ತಿದ್ದಾರೆ. ಆದ್ದರಿಂದ ನಾಲ್ಕೂ ಕಡೆಯ ಮಕ್ಕಳಿಗೆ ನವಯುಗ ಹಾಗೂ ಹೊಸ ವರ್ಷದ ಪದಮಾಗುಣ ಶುಭಾಶಯಗಳು, ಶುಭಾಶಯಗಳು, ಶುಭಾಶಯಗಳು. ಮಕ್ಕಳಿಗಂತೂ ನವಯುಗ ಕಣ್ಣುಗಳ ಮುಂದೆ ಇದೆಯಲ್ಲವೇ! ಈ ದಿನ ಸಂಗಮದಲ್ಲಿ ಇದ್ದೀರಿ, ನಾಳೆ ನವಯುಗದಲ್ಲಿ ರಾಜ್ಯಾಧಿಕಾರಿಯಾಗಿ ರಾಜ್ಯ ಮಾಡುತ್ತೀರಿ. ಇಷ್ಟು ಸಮೀಪತೆಯ ಅನುಭವ ಮಾಡುತ್ತಿದ್ದೀರಾ? ಇದು ಇಂದು ಮತ್ತು ನಾಳೆಯ ಮಾತಾಗಿದೆ. ನಿನ್ನೆ ಇತ್ತು ನಾಳೆ ಮತ್ತೆ ಬರುತ್ತದೆ. ತಮ್ಮ ನವಯುಗದ ಸ್ವರ್ಣಿಮಯುಗದ ಸ್ವರ್ಣಿಮ ಹುಡುಪು ನಿಮ್ಮ ಮುಂದೆ ಕಾಣುತ್ತಿದೆಯೇ? ಎಷ್ಟು ಸುಂದರವಾಗಿದೆ. ಸ್ಪಷ್ಟವಾಗಿ ಕಾಣುತ್ತಿದೆಯಲ್ಲವೇ. ಈ ದಿನ ಸಾಧಾರಣ ಉಡುಪಿನಲ್ಲಿ ನಾಳೆ ನವಯುಗದ ಸುಂದರ ಉಡುಪಿನಲ್ಲಿ ಹೊಳೆಯುತ್ತಾ ಕಾಣುತ್ತೀರಿ. ನವವರ್ಷದಲ್ಲಿ ಒಂದು ದಿನಕ್ಕೋಸ್ಕರ ಒಬ್ಬಿಬ್ಬರಿಗೆ ಉಡುಗೊರೆ ಕೊಡುತ್ತಾರೆ ಆದರೆ ನವಯುಗ ರಚಯಿತ ಬಾಪ್ದಾದಾ ನಿಮ್ಮೆಲ್ಲರಿಗೂ ಸ್ವರ್ಣಿಮ ಪ್ರಪಂಚದ ಉಡುಗೊರೆ ನೀಡಿದ್ದಾರೆ ಯಾವುದು ಅನೇಕ ಜನ್ಮಗಳು ನಡೆಯುವಂತಹದು. ಇದು ವಿನಾಶಿ ಉಡುಗೊರೆ ಅಲ್ಲ. ಅವಿನಾಶಿ ಉಡುಗೊರೆ, ತಂದೆ ತನ್ನ ಮಕ್ಕಳಿಗೆ ನೀಡಿದ್ದಾರೆ. ನೆನಪಿದೆಯಲ್ಲವೇ! ಯಾರೂ ಮರೆತಿಲ್ಲವೇ. ಸೆಕೆಂಡಿನಲ್ಲಿ ಬಂದು ಹೋಗಬಹುದು. ಈಗೀಗ ಸಂಗಮದಲ್ಲಿ, ಈಗೀಗ ತಮ್ಮ ಸ್ವರ್ಣಿಮ ಪ್ರಪಂಚದಲ್ಲಿ ತಲುಪಲು ಸಮಯ ಹಿಡಿಯುತ್ತದೆಯೇ? ತಮ್ಮ ರಾಜ್ಯ ಸ್ಮೃತಿ ಇರಲಿ, ಬರುತ್ತದೆಯಲ್ಲವೇ!

ಈ ದಿನವನ್ನು ವಿದಾಯಿ (ಬೀಳ್ಕೊಡಿಗೆ)ಯ ದಿನ ಎಂದು ಹೇಳಲಾಗುತ್ತದೆ ಹಾಗೂ 12 ಗಂಟೆಯ ನಂತರ ಶುಭಾಶಯಗಳ ದಿನ ಆಗುತ್ತದೆ. ಆದ್ದರಿಂದ ವಿದಾಯಿಯ ದಿನ ವರ್ಷದ ವಿದಾಯಿಯ ಜೊತೆ-ಜೊತೆಗೆ ತಾವೆಲ್ಲರೂ ವರ್ಷದ ಜೊತೆ ಬೇರ್ಯಾವುದರ ವಿದಾಯಿ ನೀಡುತ್ತೀರಿ? ಚೆಕ್ ಮಾಡಿಕೊಳ್ಳಿ ಸದಾ ಕಾಲಕ್ಕೋಸ್ಕರ ವಿದಾಯಿ ನೀಡಿದ್ದೀರಾ ಅಥವಾ ಸ್ವಲ್ಪ ಸಮಯಕ್ಕೋಸ್ಕರ ನೀಡಿದ್ದೀರಾ? ಬಾಪ್ದಾದಾ ಹಿಂದೆಯು ತಿಳಿಸಿದರು ಸಮಯದ ವೇಗ ತೀವ್ರ ಗತಿಯಿಂದ ಹೋಗುತ್ತಿದೆ, ಆದ್ದರಿಂದ ಇಡೀ ವರ್ಷದ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಿ - ನನ್ನ ಪುರುಷಾರ್ಥದ ವೇಗ ತೀವ್ರವಾಗಿದೆಯೇ? ಅಥವಾ ಹೇಗೆಂದರೆ ಹಾಗೆ ಇರುತ್ತದೆಯೇ? ಪ್ರಪಂಚದಲ್ಲಿ ಪರಿಸ್ಥಿತಿಯನ್ನು ನೋಡುತ್ತಾ ಈಗ ತಮ್ಮ ವಿಶೇಷ ಎರಡು ಸ್ವರೂಪಗಳನ್ನು ಇಮರ್ಜ್ ಮಾಡಿಕೊಳ್ಳಿ. ಈ ಎರಡು ಸ್ವರೂಪಗಳಾಗಿದೆ - ಒಂದು ಸರ್ವರ ಪ್ರತಿ ದಯಾ ಹೃದಯಿ ಹಾಗೂ ಕಲ್ಯಾಣಕಾರಿ ಮತ್ತು ಎರಡನೆಯದು ಪ್ರತಿಯೊಂದು ಆತ್ಮನ ಪ್ರತಿ ಸದಾ ದಾತನ ಮಗು ಮಾಸ್ಟರ್ ದಾತಾ. ವಿಶ್ವದ ಆತ್ಮಗಳು ಶಕ್ತಿಹೀನ, ದುಃಖಿ, ಅಶಾಂತಿಯಿಂದ ಚೀರುತ್ತಿದ್ದಾರೆ. ತಂದೆಯ ಮುಂದೆ, ನೀವು ಪೂಜ್ಯ ಆತ್ಮರ ಮುಂದೆ ಮೊರೆ ಇಡುತ್ತಿದ್ದಾರೆ - ಸ್ವಲ್ಪ ಸಮಯಕ್ಕಾದರೂ ಸುಖವನ್ನು ನೀಡಿ, ಶಾಂತಿಯನ್ನು ನೀಡಿ, ಖುಷಿಯನ್ನು ನೀಡಿ, ಧೈರ್ಯವನ್ನು ನೀಡಿ ಎಂದು. ತಂದೆಯಂತೂ ಮಕ್ಕಳ ದುಃಖ, ಕಷ್ಟಗಳನ್ನು ನೋಡಲು ಆಗುವುದಿಲ್ಲ, ಕೇಳಲು ಆಗುವುದಿಲ್ಲ. ನೀವೆಲ್ಲಾ ಪೂಜ್ಯ ಆತ್ಮರಿಗೂ ದಯೆ ಬರುತ್ತದೆಯೇ? ಕೊಡಿ, ಕೊಡಿ, ಕೊಡಿ........ಎಂದು ಎಲ್ಲರೂ ಬೇಡುತ್ತಿದ್ದಾರೆ ಆದ್ದರಿಂದ ದಾತನ ಮಕ್ಕಳು ಸ್ವಲ್ಪ ಅಂಚಲಿಯನ್ನಾದರೂ ನೀಡಿ. ತಂದೆಯೂ ಸಹ ಮಕ್ಕಳನ್ನು ಜೊತೆಗಾರರನ್ನಾಗಿ ಮಾಡಿಕೊಂಡು, ಮಾಸ್ಟರ್ ದಾತನನ್ನಾಗಿ ಮಾಡಿ, ತಮ್ಮ ರೈಟ್ ಹ್ಯಾಂಡ್ನ್ನಾಗಿ ಮಾಡಿಕೊಂದು ಇದೇ ಸಂಕೇತವನ್ನು ನೀಡುತ್ತಾರೆ - ವಿಶ್ವದ ಎಲ್ಲಾ ಆತ್ಮಗಳಿಗೂ ಮುಕ್ತಿಯನ್ನು ಕೊಡಿಸಬೇಕು, ಮುಕ್ತಿಧಾಮಕ್ಕೆ ಹೋಗಬೇಕು, ಆದ್ದರಿಂದ ಹೇ! ದಾತನ ಮಕ್ಕಳೇ ತಮ್ಮ ಶ್ರೇಷ್ಠ ಸಂಕಲ್ಪದಿಂದ ಮನಸಾ ಶಕ್ತಿಯಿಂದ, ವಾಣಿಯಿಂದಾದರೂ, ಸಂಬಂಧ-ಸಂಪರ್ಕದಿಂದಾದರೂ ಶುಭಭಾವನೆ, ಶುಭಕಾಮನೆಯಿಂದಾದರೂ ವೈಬ್ರೇಷನ್, ವಾಯುಮಂಡಲದ ಮೂಲಕವಾದರೂ ಯಾವುದೇ ಯುಕ್ತಿಯಿಂದ ಮುಕ್ತಿಯನ್ನು ನೀಡಿ. ಮುಕ್ತಿ ಕೊಡಿ ಎಂದು ಚೀರುತ್ತಿದ್ದಾರೆ, ಬಾಪ್ದಾದಾ ತಮ್ಮ ರೈಟ್ ಹ್ಯಾಂಡ್ಗಳಿಗೆ ಹೇಳುತ್ತಾರೆ - ದಯೆ ತೋರಿಸಿ.

ಇಲ್ಲಿಯವರೆಗು ಲೆಕ್ಕವನ್ನು ತೆಗೆಯಿರಿ. ಮೆಗಾ ಪ್ರೋಗ್ರಾಂ ಮಾಡಿದ್ದೀರಾ, ಸಮ್ಮೇಳನಗಳನ್ನು ಮಾಡಿದ್ದೀರಾ, ಭಾರತದಲ್ಲಿ ಅಥವಾ ವಿದೇಶದಲ್ಲಿ ಸೇವಾಕೇಂದ್ರಗಳನ್ನು ತೆರೆದಿದ್ದೀರಿ ಆದರೆ ಒಟ್ಟು ವಿಶ್ವದ ಆತ್ಮಗಳ ಸಂಖ್ಯೆಯ ಲೆಕ್ಕದಲ್ಲಿ ಎಷ್ಟು % ಆತ್ಮಗಳಿಗೆ ಮುಕ್ತಿಯ ದಾರಿಯನ್ನು ತೋರಿಸಿದ್ದೀರಿ? ಕೇವಲ ಭಾರತದ ಕಲ್ಯಾಣಕಾರಿಯೋ ಅಥವಾ ವಿದೇಶದ 5 ಖಂದಗಳ, ಎಲ್ಲೆಲ್ಲಿ ಸೇವಾಕೇಂದ್ರಗಳನ್ನು ತೆರೆದಿದ್ದೀರೋ ಅಲ್ಲಿಯ ಕಲ್ಯಾಣಕಾರಿಯ ಅಥವಾ ವಿಶ್ವದ ಕಲ್ಯಾಣಕಾರಿಗಳೋ? ವಿಶ್ವದ ಕಲ್ಯಾಣ ಮಾಡುವುದಕ್ಕೋಸ್ಕರ ಪ್ರತಿಯೊಬ್ಬ ಮಗು ತಂದೆಯ ರೈಟ್ ಹ್ಯಾಂಡ್ ಆಗಬೇಕು. ಯಾರಿಗೆ ಏನೇ ಕೊಟ್ಟರೂ ಯಾವುದರಿಂದ ಕೊಡುತ್ತಾರೆ? ಕೈಗಳಿಂದಲೇ ನೀಡುತ್ತಾರಲ್ಲವೇ. ಆದ್ದರಿಂದ ಬಾಪ್ದಾದಾರವರಿಗೆ ನೀವು ಕೈಗಳಾಗಿದ್ದೀರಾ? ಬಾಪ್ದಾದಾ ರೈಟ್ ಹ್ಯಾಂಡ್ಸ್ನ್ನು ಕೇಳುತ್ತಿದ್ದಾರೆ - ಎಷ್ಟು % ಕಲ್ಯಾಣ ಮಾಡಿದ್ದೀರಿ? ಲೆಕ್ಕ ತೆಗೆದು ತಿಳಿಸಿ? ಪಾಂಡವರು ಲೆಕ್ಕ ಮಾಡುವುದರಲ್ಲಿ ಚತುರರಲ್ಲವೇ. ಆದ್ದರಿಂದ ಬಾಪ್ದಾದಾ ಹೇಳುತ್ತಾರೆ - ಈಗ ಸ್ವ ಪುರುಷಾರ್ಥ ಹಾಗೂ ಸೇವೆಯ ಭಿನ್ನ-ಭಿನ್ನ ವಿಧಿಗಳಿಂದ ಪುರುಷಾರ್ಥವನ್ನು ತೀವ್ರ ಮಾಡಿಕೊಳ್ಳಿ. ಸ್ವ ಸ್ಥಿತಿಯಲ್ಲೂ ವಿಶೇಷ ನಾಲ್ಕು ಮಾತುಗಳನ್ನು ಚೆಕ್ ಮಾಡಿಕೊಳ್ಳಿ - ಇದಕ್ಕೇ ತೀವ್ರಪುರುಷಾರ್ಥ ಎಂದು ಹೇಳಲಾಗುತ್ತದೆ.

ಒಂದು ಮಾತೇನೆಂದರೆ ಮೊದಲು ಇದನ್ನು ಪರಿಶೀಲನೆ ಮಾಡಿಕೊಳ್ಳಿ - ನಿಮಿತ್ತ ಭಾವವಿದೆಯೇ? ಯಾವುದೇ ರಾಯಲ್ ರೂಪದ ನಾನು ಎಂಬುದು ಇಲ್ಲವೇ? ನನ್ನತನವು ಇಲ್ಲವೇ? ಸಾಧಾರಣ ವ್ಯಕ್ತಿಗಳ ನಾನು ಮತ್ತು ನನ್ನದೂ ಎಂಬುದು ಸಾಧಾರಣವಾಗಿರುತ್ತದೆ, ದೊಡ್ಡರೂಪದಲ್ಲಿ ಇರುತ್ತದೆ ಆದರೆ ಬ್ರಾಹ್ಮಣ ಜೀವನದ ನಾನು ಮತ್ತು ನನ್ನ ತನವು ಬಹಳ ಸೂಕ್ಷ್ಮ ಮತ್ತು ರಾಯಲ್ ಆಗಿದೆ. ಅಂತಹವರ ಭಾಷೆಯು ಹೇಗಿರುತ್ತದೆ ಎಂದು ತಿಳಿದಿದೆಯೇ? ಇದಂತೂ ನಡೆಯುತ್ತದೆ, ಇದಂತೂ ಆಗುತ್ತದೆ. ನಡೆಯುತ್ತಿದ್ದೇವೆ, ನೋಡುತ್ತಿದ್ದೇವೆ.......ಅಂದಾಗ ಒಂದು ನಿಮಿತ್ತಭಾವ ಪ್ರತಿಯೊಂದು ಮಾತಿನಲ್ಲಿ ನಿಮಿತ್ತ ಭಾವವಿದೆಯೇ? ಪ್ರತಿಯೊಂದು ಮಾತಿನಲ್ಲಿ ನಿಮಿತ್ತ ಭಾವವಿದೆಯೇ! ಭಲೆ ಸೇವೆಯಲ್ಲಿ ಇರಬಹುದು, ಸ್ಥಿತಿಯಲ್ಲಿ ಇರಬಹುದು ಅಥವಾ ಸಂಬಂಧ-ಸಂಪರ್ಕದಲ್ಲಿ ಇರಬಹುದು, ಚಲನೆ ಮತ್ತು ಚಹರೆಯು ನಿಮಿತ್ತ ಭಾವದ್ದಾಗಿರಲಿ. ಮತ್ತು ಅವರ ವಿಶೇಷತೆಯು ಇದೂ ಸಹ ಇರುತ್ತದೆ - ನಿಮಿತ್ತ ಭಾವ, ನಿರ್ಮಾನ ಭಾವ. ನಿಮಿತ್ತ ಮತ್ತು ನಿರ್ಮಾನಭಾವದಿಂದ ನಿರ್ಮಾಣ ಮಾಡಿ ಅಂದಾಗ ಮೂರು ಮಾತುಗಳನ್ನು ಕೇಳಿದಿರಿ - ನಿಮಿತ್ತ, ನಿರ್ಮಾನ ಮತ್ತು ನಿರ್ಮಾಣ ಹಾಗೂ ನಾಲ್ಕನೆಯ ಮಾತಾಗಿದೆ - ನಿರ್ವಾಣ. ಯಾವಾಗ ಬೇಕೋ ಆಗ ನಿರ್ವಾಣಧಾಮದಲ್ಲಿ ತಲುಪಿಬಿಡಿ. ನಿರ್ವಾಣ ಸ್ಥಿತಿಯಲ್ಲಿ ಸ್ಥಿತರಾಗಿ ಏಕೆಂದರೆ ಸ್ವಯಂ ನಿರ್ವಾಣ ಸ್ಥಿತಿಯಲ್ಲಿ ಇದ್ದಾಗ ಅನ್ಯರನ್ನೂ ನಿರ್ವಾಣಧಾಮಕ್ಕೆ ತಲುಪಿಸಬಲ್ಲಿರಿ. ಈಗ ಎಲ್ಲರೂ ಮುಕ್ತಿಯನ್ನು ಬಯಸುತ್ತಾರೆ. ನಮ್ಮನ್ನು ಮುಕ್ತ ಮಾಡಿ ಮುಕ್ತ ಮಾಡಿ ಎಂದು ಚೀರಾಡುತ್ತಿದ್ದಾರೆ, ಆದ್ದರಿಂದ ಈ ನಾಲ್ಕೂ ಮಾತುಗಳು ಒಳ್ಳೆಯ %ನಲ್ಲಿ ಪ್ರತ್ಯಕ್ಷ ಜೀವನದಲ್ಲಿ ಇರುವುದು ಎಂದರೆ ಅವರು ತೀವ್ರಪುರುಷಾರ್ಥಿಗಳೆಂದರ್ಥ. ಆಗಲೇ ವಾಹ್! ಮಕ್ಕಳೇ ವಾಹ್! ಎಂದು ಬಾಪ್ದಾದಾ ಹೇಳುತ್ತೇವೆ. ವಾಹ್! ಬಾಬಾ ವಾಹ್! ವಾಹ್! ಡ್ರಾಮಾ ವಾಹ್! ಪುರುಷಾರ್ಥವೇ ವಾಹ್! ಎಂದು ತಾವೂ ಹೇಳುತ್ತೀರಿ ಆದರೆ ಏನು ಮಾಡುತ್ತೀರಿ ಎಂದು ತಿಳಿದಿದೆಯೇ? ತಿಳಿದಿದೆಯೇ? ಕೆಲವೊಮ್ಮೆ ವಾಹ್ ಎಂದು ಹೇಳುತ್ತೀರಿ ಇನ್ನೂ ಕೆಲವೊಮ್ಮೆ ವೈ (ಏಕೆ?) ಎಂದು ಹೇಳುತ್ತೀರಿ. ವಾಹ್ನ ಬದಲು ವೈ ಮತ್ತು ವೈಯಿಂದ ಹಾಯ್ (ಅಯ್ಯೋ) ಆಗಿಬಿಡುತ್ತದೆ. ಅಂದಾಗ ಈಗ ವೈ ಅಲ್ಲ ವಾಹ್ ಎನ್ನಿರಿ. ತಮಗೂ ಸಹ ಯಾವುದು ಇಷ್ಟವಾಗುತ್ತದೆ. ವಾಹ್ ಎನ್ನುವುದೋ ವೈ ಎನ್ನುವುದೋ? ಯಾವುದು ಇಷ್ಟವಾಗುತ್ತದೆ? ವಾಹ್! ವಾಹ್ ಅಲ್ಲವೇ. ಎಂದು ವೈ ಎನ್ನುವುದಿಲ್ಲವೇ? ತಪ್ಪಾಗಿ ಬಂದು ಬಿಡುತ್ತದೆಯಲ್ಲವೇ!

ಡಬಲ್ ವಿದೇಶಿಯರು ವೈ, ವೈ ಎಂದು ಹೇಳುತ್ತೀರಾ? ಹೇಳುತ್ತೀರಾ? ಕೆಲ-ಕೆಲವೊಮ್ಮೆ ಹೇಳಿಬಿಡುತ್ತೀರಾ? ಯಾರು ಎಂದಿಗೂ ವೈ ಎಂದು ಹೇಳುವುದಿಲ್ಲವೋ ಅವರು ಕೈಯನ್ನು ಎತ್ತಿರಿ, ಡಬಲ್ ವಿದೇಶಿಯರು ಮಾತ್ರ. ಬಹಳ ಕಡಿಮೆ ಜನ ಸಂಖ್ಯೆ ಇದ್ದಾರೆ. ಒಳ್ಳೆಯದು ಭಾರತವಾಸಿಗಳು ಯಾರು ವಾಹ್! ವಾಹ್! ಎನ್ನುವ ಬದಲು ಏಕೆ, ಏನು ಎನ್ನುತ್ತೀರೋ ಅವರು ಕೈ ಎತ್ತಿರಿ. ಏಕೆ? ಏನು? ಎನ್ನುತ್ತೀರಾ? ನಿಮಗೆ ಯಾರು ಅನುಮತಿ ಕೊಟ್ಟರು? ಸಂಸ್ಕಾರಗಳೇ? ಹಳೆಯ ಸಂಸ್ಕಾರ ತಮಗೆ ವೈನ ಅನುಮತಿ ಕೊಟ್ಟಿದೆ ಮತ್ತು ತಂದೆಯು ಹೇಳುತ್ತೇವೆ - ವಾಹ್!ವಾಹ್! ಎನ್ನಿರಿ, ವೈ? ವೈ? ಅಲ್ಲ. ಅಂದಾಗ ಈ ಹೊಸ ವರ್ಷದಲ್ಲಿ ಏನು ಮಾಡುತ್ತೀರಿ? ವಾಹ್!ವಾಹ್! ಎನ್ನುವಿರಾ? ಅಥವಾ ಕೆಲ-ಕೆಲವೊಮ್ಮೆ ವೈ ಎನ್ನುವುದಕ್ಕೆ ಅನುಮತಿ ಕೊಡುವುದೇ? ವೈ ಎನ್ನುವುದು ಒಳ್ಳೆಯದಲ್ಲ. ಹೇಗೆ ವಾಹ್! ವಾಹ್! ಎನ್ನುವುದು ಎಷ್ಟು ಚೆನ್ನಾಗಿದೆ. ಹಾ! ಹೇಳಿ ವಾಹ್! ವಾಹ್! ವಾಹ್!

ಒಳ್ಳೆಯದು. ದೂರದೇಶದಲ್ಲಿ ಮಕ್ಕಳು ಕೇಳುತ್ತಿದ್ದಾರೆ, ನೋಡುತ್ತಿದ್ದಾರೆ, ಭಾರತದಲ್ಲಿ ಹಾಗೂ ವಿದೇಶದಲ್ಲಿ ಇರುವ ಎಲ್ಲಾ ಮಕ್ಕಳೊಂದಿಗೂ ಕೇಳುತ್ತೇವೆ, ವಾಹ್! ವಾಹ್! ಎನ್ನುತ್ತೀರೋ ವೈ? ವೈ? ಎನ್ನುತ್ತೀರೋ. ಈಗ ಬೀಳ್ಕೊಡುಗೆಯ ದಿನವಾಗಿದೆಯಲ್ಲವೇ! ಇಂದು ವರ್ಷದ ಬೀಳ್ಕೊಡುಗೆಯ ಕೊನೆಯ ದಿನವಾಗಿದೆ, ಆದ್ದರಿಂದ ಎಲ್ಲರೂ ಈಗಿನಿಂದ ವೈ? ಎನ್ನುವುದಿಲ್ಲ, ಆಲೋಚನೆಯನ್ನೂ ಮಾಡುವುದಿಲ್ಲ ಎಂದು ಸಂಕಲ್ಪ ಮಾಡಿ. ಪ್ರಶ್ನಾರ್ಥಕ ಚಿಹ್ನೆ ಅಷ್ಟೇ ಅಲ್ಲ. ಆಶ್ಚರ್ಯದ ಚಿಹ್ನೆಯು ಇರಬಾರದು, ಕೇವಲ ಬಿಂದುವನ್ನಿಡಿ. ಪ್ರಶ್ನಾರ್ಥಕ ಚಿನ್ಹೆಯನ್ನು ನೋಡಿ ಎಷ್ಟೋಂದು ಅಂಕು-ದೊಂಕಾಗಿದೆ ಮತ್ತು ಬಿಂದು ಎಷ್ಟು ಸಹಜವಾಗಿದೆ. ಕೇವಲ ನಯನಗಳಲ್ಲಿ ಬಿಂದು ತಂದೆಯನ್ನು ಸಮಾವೇಶ ಮಾಡಿಕೊಳ್ಳಿ. ಹೇಗೆ ನಯನಗಳಲ್ಲಿ ನೋಡುವ ಬಿಂದು (ಪಾಪೆ) ಸಮಾವೇಶವಾಗಿದೆಯಲ್ಲವೇ! ಹಾಗೆಯೇ ಸದಾ ನಯನಗಳಲ್ಲಿ ಬಿಂದು ತಂದೆಯನ್ನು ಸಮಾವೇಶ ಮಾಡಿಕೊಳ್ಳಿ. ಸಮಾವೇಶ ಮಾಡಿಕೊಳ್ಳಲು ಬರುತ್ತದೆಯಲ್ಲವೇ? ಅಥವಾ ಅದನ್ನು ಅಳವಡಿಸಲು ಆಗುವುದಿಲ್ಲ, ಮೇಲೆ-ಕೆಳಗೆ ಆಗಿಬಿಡುತ್ತದೆ? ಅಂದಾಗ ಏನು ಮಾಡುತ್ತೀರಿ? ಯಾವುದಕ್ಕೆ ಬೀಳ್ಕೊಡಿಗೆ ನೀಡುತ್ತೀರಿ? ಏಕೆ ಎನ್ನುವುದಕ್ಕೆ ಬೀಳ್ಕೊಡಿಗೆ ನೀಡುತ್ತೀರಾ? ಎಂದೂ ಸಹ ಆಶ್ಚರ್ಯಕ ಚಿಹ್ನೆಯೂ ಸಹ ಬರಬಾರದು. ಇದು ಹೇಗೆ! ಹೀಗೂ ಆಗುತ್ತದೆಯೇ? ಹೀಗಾಗಬಾರದಿತ್ತು, ಏಕೆ ಆಗುತ್ತದೆ! ಈ ರೀತಿ ಪ್ರಶ್ನಾರ್ಥಕ ಚಿಹ್ನೆ ಅಷ್ಟೇ ಅಲ್ಲ. ಆಶ್ಚರ್ಯದ ಚಿಹ್ನೆಯೂ ಇರಬಾರದು. ಕೇವಲ ತಂದೆ ಮತ್ತು ನಾನು. ಇದಂತೂ ನಡದೆ ನಡೆಯುತ್ತದೆ ಎಂದು ಕೆಲವು ಮಕ್ಕಳು ಹೇಳುತ್ತಾರೆ. ಬಾಪ್ದಾದಾರವರಿಗೆ ವಾರ್ತಾಲಾಪದಲ್ಲಿ ಬಹಳ ರಮಣೀಕ ಮಾತುಗಳನ್ನು ಹೇಳುತ್ತಾರೆ. ಸನ್ಮುಖದಲ್ಲಂತೂ ಹೇಳುವುದಕ್ಕೆ ಆಗುವುದಿಲ್ಲ. ಆದ್ದರಿಂದ ಬಾಪ್ದಾದಾರವರಿಗೆ ವಾರ್ತಾಲಾಪದಲ್ಲಿ ಎಲ್ಲವನ್ನು ಹೇಳಿಬಿಡುತ್ತಾರೆ. ಒಳ್ಳೆಯದು. ಏನಾದರೂ ನಡೆಯಲಿ ಆದರೆ ತಾವು ನಡೆಯಬಾರದು, ತಾವಂತೂ ಈಗ ಹಾರಬೇಕಾಗಿದೆ, ಅಂದಮೇಲೆ ನಡೆಯುವ ಮಾತುಗಳನ್ನೇಕೆ ನೋಡುತ್ತೀರಿ, ತಾವೂ ಹಾರಿ ಮತ್ತು ಎಲ್ಲರನ್ನು ಹಾರಿಸಿ. ಶುಭಭಾವನೆ, ಶುಭಕಾಮನೆಯು ಇಷ್ಟು ಶಕ್ತಿಶಾಲಿಯಾಗಿದೆ, ಈ ಶುಭಭಾವನೆ, ಶುಭಕಾಮನೆಯ ಹೊರತು ನಡುವೆ ಯಾವುದೇ ವೈ? ಬರಬಾರದು. ಅಂದಾಗ ಇಷ್ಟೂ ಶಕ್ತಿಶಾಲಿಯಾಗಿದ್ದೀರಾ - ಯಾವುದೇ ಅಶುಭಭಾವನೆವುಳ್ಳವರನ್ನೂ ಸಹ ಶುಭಭಾವನೆಯಲ್ಲಿ ಪರಿವರ್ತಿಸಲು ಆಗುತ್ತದೆಯೇ! ಒಂದುವೇಳೆ ಪರಿವರ್ತಿಸಲು ಸಾಧ್ಯವಿಲ್ಲವೆಂದರೆ ಎರಡನೆಯದು ತಮ್ಮ ಶುಭಭಾವನೆ-ಶುಭಕಾಮನೆಯ ಅವಿನಾಶಿಯಾಗಿದೆಯೇ! ಕೆಲ-ಕೆಲವೊಮ್ಮೆ ಅಲ್ಲ, ಅವಿನಾಶಿಯಾಗಿದ್ದರೆ ತಮ್ಮ ಮೇಲೆ ಅಶುಭಭಾವನೆಯ ಪ್ರಭಾವವು ಬೀಳಲು ಸಾಧ್ಯವಿಲ್ಲ ಆದರೆ ಪ್ರಶ್ನೆಗಳಲ್ಲಿ ಹೊರಟು ಹೋಗುತ್ತೀರಿ - ಇದು ಏಕಾಗುತ್ತಿದೆ? ಇದು ಎಲ್ಲಿಯವರೆಗೆ ನಡೆಯುತ್ತದೆ, ಹೇಗೆ ನಡೆಯುತ್ತದೆ? ಇದರಿಂದ ಶುಭಭಾವನೆಯ ಶಕ್ತಿಯು ಕಡಿಮೆಯಾಗಿಬಿಡುತ್ತದೆ. ವಾಸ್ತವದಲ್ಲಿ ಶುಭಭಾವನೆ, ಶುಭಕಾಮನೆಯ ಸಂಕಲ್ಪ ಶಕ್ತಿಯಲ್ಲಿ ಬಹಳ ಶಕ್ತಿಯಿದೆ. ನೋಡಿ - ತಾವೆಲ್ಲರೂ ಬಾಪ್ದಾದಾರವರ ಬಳಿ ಬಂದಿರಿ. ಮೊದಲನೆಯ ದಿನವನ್ನು ನೆನಪು ಮಾಡಿಕೊಳ್ಳಿ, ಬಾಪ್ದಾದಾ ಏನು ಮಾಡಿದರು? ಪತಿತರೇ ಬರಲಿ, ಪಾಪಿಗಳೇ ಬರಲಿ, ಸಾಧರಣರೇ ಬರಲಿ, ಭಿನ್ನ-ಭಿನ್ನ ವೃತ್ತಿಯವರು ಬಂದರು ಆದರೂ ಸಹ ಬಾಪ್ದಾದಾ ಏನು ಮಾಡಿದೆವು? ಶುಭಭಾವನೆಯನ್ನೇ ಇಟ್ಟೆವಲ್ಲವೇ! ಎಲ್ಲರೂ ನನ್ನವರಾಗಿದ್ದೀರಿ, ಮಾಸ್ಟರ್ ಸರ್ವ ಶಕ್ತಿವಂತರಾಗಿದ್ದೀರಿ, ಹೃದಯಸಿಂಹಾಸನಗಳಾಗಿದ್ದೀರಿ - ಈ ಶುಭಭಾವನೆ, ಶುಭಕಾಮನೆಯನ್ನೇ ಇಟ್ಟೆವು ಆದ್ದರಿಂದಲೇ ಎಲ್ಲರೂ ತಂದೆಯ ಮಕ್ಕಳಾಗಿಬಿಟ್ಟಿರಿ. ಹೇ! ಪಾಪಿಗಳೇ ಏಕೆ ಬಂದಿರಿ ಎಂದು ತಂದೆಯು ಹೇಳಲಿಲ್ಲ. ನನ್ನ ಮಕ್ಕಳು ಮಾಸ್ಟರ್ ಸರ್ವಶಕ್ತಿವಂತ ಮಕ್ಕಳು ಎನ್ನುವ ಶುಭಭಾವನೆಯನ್ನು ಇಟ್ಟೆವು. ಯಾವಾಗ ತಂದೆಯೇ ತಮ್ಮೆಲ್ಲರ ಮೇಲೆ ಶುಭಭಾವನೆ, ಶುಭಕಾಮನೆಯನ್ನು ಇಟ್ಟಿದ್ದರಿಂದ ತಮ್ಮೆಲ್ಲರ ಹೃದಯವು ಏನು ಹೇಳಿತು? ನನ್ನ ಬಾಬಾ ಎಂದು ಹೇಳಿತು. ನಾವೂ ಸಹ ನನ್ನ ಮಕ್ಕಳೇ ಎಂದು ಹೇಳಿದೆವು. ಇದೇ ರೀತಿ ಒಂದುವೇಳೆ ತಾವೆಲ್ಲರೂ ಸಹ ಶುಭಭಾವನೆ, ಶುಭಕಾಮನೆಯನ್ನು ಇಟ್ಟುಕೊಂದು ನಡೆಯುತ್ತೀರೆಂದರೆ ಎಲ್ಲರೂ ಹೇಗೆ ಕಾಣುವವರು? ನನ್ನ ಕಲ್ಪದ ಹಿಂದಿನ ಮಧುರ ಸಹೋದರನಾಗಿದ್ದಾರೆ, ಇವರು ನನ್ನ ಪ್ರಿಯ ಸಹೋದರಿಯಾಗಿದ್ದಾರೆ ಎನ್ನುವ ದೃಷ್ಟಿಯಲ್ಲಿ ಎಲ್ಲರೂ ಕಾಣುತ್ತಾರೆ ಆಗ ಪರಿವರ್ತನೆಯಾಗಿಬಿಡುತ್ತದೆ.

ಅಂದಮೇಲೆ ಈ ವರ್ಷದಲ್ಲಿ ಏನಾದರೂ ಮಾಡಿ ತೋರಿಸಿ, ಕೇವಲ ಕೈಯನ್ನು ಎತ್ತಬೇಡಿ. ಕೈ ಎತ್ತುವುದು ಬಹಳ ಸಹಜ, ಆದರೆ ಮನಸ್ಸಿನ ಕೈ ಎತ್ತಿ, ಬಹಳಷ್ಟು ಸೇವೆ ಏಕೆ ಉಳಿದಿದೆ? ಬಾಪ್ದಾದಾ ನೋಡುತ್ತೇವೆ, ವಿಶ್ವದ ಆತ್ಮಗಳ ಮೇಲೆ ಬಹಳ ದಯೆ ಬರುತ್ತದೆ. ಈಗ ಪ್ರಕೃತಿಯೂ ಸಹ ಬೇಸತ್ತಿದೆ. ಸ್ವಯಂ ಪ್ರಕೃತಿಯೇ ಬೇಸತ್ತಿದೆ ಎಂದರೆ ಏನು ಮಾಡುವುದು? ಆತ್ಮಗಳಿಗೆ ತೊಂದರೆ ನೀಡುತ್ತಿದೆ. ಆದ್ದರಿಂದ ತಂದೆಗೆ ಮಕ್ಕಳನ್ನು ನೋಡಿ ಅನುಕಂಪ ಮಾಡುತ್ತದೆ. ತಮ್ಮೆಲ್ಲರಿಗೆ ಅನುಕಂಪ ಮೂಡುತ್ತಿಲ್ಲವೇ? ಕೇವಲ ಸಮಾಚಾರವನ್ನು ಕೇಳಿ ಇಷ್ಟೋಂದು ಆತ್ಮಗಳು ಹೊರಟು ಹೋದರು ಎಂಬುದನ್ನು ಕೇಳಿ ಸುಮ್ಮನಾಗಿಬಿಡುತ್ತೀರಿ. ಆ ಆತ್ಮಗಳು ಸಂದೇಶದಿಂದಂತೂ ವಂಚಿತರಾದರು ಆದ್ದರಿಂದ ಈಗ ದಾತರಾಗಿ, ದಯಾಹೃದಯಗಳಾಗಿ. ಈ ವರ್ಷದ ಆರಂಭದಿಂದ ತಮ್ಮಲ್ಲಿ ಬೇಹದ್ದಿನ ವೈರಾಗ್ಯ ವೃತಿಯನ್ನು ಇಮರ್ಜ್ ಮಾಡಿಕೊಳ್ಳಿ. ಆಗಲೇ ಎಲ್ಲರ ಮೇಲೆ ದಯೆ ಮೂಡುತ್ತದೆ. ಕೇವಲ ವೈರಾಗ್ಯ ವೃತ್ತಿ ಅಲ್ಲ ಬೇಹದ್ದಿನ ವೈರಾಗ್ಯ ವೃತ್ತಿ. ಈ ದೇಹದ ದೇಹ ಬಾನದ ಸ್ಮೃತಿಯೂ ಸಹ ಬೇಹದ್ದಿನ ವೈರಾಗ್ಯಕ್ಕೆ ಕೊರತೆಯಾಗಿದೆ. ಚಿಕ್ಕ-ಚಿಕ್ಕ ಮಿತವಾದ ಮಾತುಗಳು ಸ್ಥಿತಿಯನ್ನು ಏರು-ಪೇರು ಮಾಡುತ್ತವೆ, ಕಾರಣ? ಬೇಹದ್ದಿನ ವೈರಾಗ್ಯ ವೃತ್ತಿಯು ಕಡಿಮೆ ಇದೆ, ಸೆಳತೆ ಇದೆ. ವೈರಾಗ್ಯವಿಲ್ಲ. ಸೆಳೆತವಿದೆ. ಯಾವಾಗ ಸಂಪೂರ್ಣ ಬೇಹದ್ದಿನ ವೈರಾಗಿಗಳಾಗಿಬಿಡುತ್ತೀರೋ, ವೃತ್ತಿಯಲ್ಲಿಯೂ ವೈರಾಗ್ಯ, ದೃಷ್ಟಿ, ಸಂಬಂಧ-ಸಂಪರ್ಕ, ಸೇವೆ ಎಲ್ಲದರಲ್ಲೂ ಬೇಹದ್ದಿನ ವೈರಾಗಿಗಳಾಗಿ...... ಆಗ ಮುಕ್ತಿಧಾಮದ ಬಾಗಿಲು ತೆರೆಯುವುದು. ಈಗಂತೂ ಯಾವ ಆತ್ಮಗಳು ಬರುತ್ತಿದ್ದಾರೆಯೋ ಅವರೆಲ್ಲರೂ ಮತ್ತೆ ಜನ್ಮ ತೆಗೆದುಕೊಳ್ಳುತ್ತಾರೆ ಮತ್ತೆ ದುಃಖಿ ಆಗುತ್ತಾರೆ. ಈಗ ಮುಕ್ತಿಧಾಮದ ಬಾಗಿಲನ್ನು ತೆರೆಯಲು ತಾವೇ ನಿಮಿತ್ತರಾಗಿದ್ದೀರಲ್ಲವೇ? ಬ್ರಹ್ಮಾ ತಂದೆಯ ಜೊತೆಗಾರರಾಗಿದ್ದೀರಲ್ಲವೇ! ಅಂದಾಗ ಬೇಹದ್ದಿನ ವೈರಾಗ್ಯ ವೃತ್ತಿಯೇ ಬಾಗಿಲನ್ನು ತೆರೆಯುವ ಕೀಲಿ ಕೈಯಾಗಿದೆ. ಈಗಿನ್ನೂ ಕೀಲಿಯನ್ನು ಹಾಕಿಲ್ಲ, ಅದನ್ನು ಇನ್ನೂ ತಯಾರು ಮಾಡಿಯೇ ಇಲ್ಲ. ಬ್ರಹ್ಮಾತಂದೆಯೂ ಸಹ ಕಾಯುತ್ತಿದ್ದಾರೆ. ಅಡ್ವಾನ್ಸ್ ಪಾರ್ಟಿಯೂ ಸಹ ನಿರೀಕ್ಷಣೆ ಮಾಡುತ್ತಿದೆ, ಪ್ರಕೃತಿಯೂ ನೋಡುತ್ತಿದೆ, ಬಹಳ ಬೇಸತ್ತಿದೆ. ಮಾಯೆಯೂ ಕೂಡ ತನ್ನ ದಿನಗಳನ್ನು ಎಣಿಕೆ ಮಾಡುತ್ತಿದೆ. ಈಗ ಹೇಳಿ ಮಾಸ್ಟರ್ ಸರ್ವ ಶಕ್ತಿವಂತರೇ ಹೇಳಿ ಏನು ಮಾಡುವಿರಿ?

ಈ ವರ್ಷದಲ್ಲಿ ಯಾವುದಾದರೂ ನವೀನತೆಯನ್ನು ಮಾಡಿ ತೋರಿಸುತ್ತೀರಲ್ಲವೇ! ಹೊಸ ವರ್ಷವೆಂದು ಹೇಳುತ್ತೀರಿ ಅಂದಮೇಲೆ ನವೀನತೆಯನ್ನು ಮಾಡುತ್ತೀರಲ್ಲವೇ! ಈಗ ಬೇಹದ್ದಿನ ವೈರಾಗ್ಯದ ಮುಕ್ತಿಧಾಮಕ್ಕೆ ಹೋಗುವ ಕೀಲಿಕೈಯನ್ನು ತಯಾರಿ ಮಾಡಿಕೊಳ್ಳಿ. ತಾವೆಲ್ಲರೂ ಸಹ ಮೊದಲು ಮುಕ್ತಿಧಾಮಕ್ಕೆ ಹೋಗಬೇಕಾಗಿದೆಯಲ್ಲವೇ! ಬ್ರಹ್ಮಾತಂದೆಯೊಂದಿಗೆ ಪ್ರತಿಜ್ಞೆ ಮಾಡಿದ್ದೀರಿ – ಜೊತೆಯಲ್ಲಿಯೇ ನಡೆಯುತ್ತೇವೆ, ಜೊತೆಯಲ್ಲಿಯೇ ಬರುತ್ತೇವೆ, ಜೊತೆಯಲ್ಲಿಯೇ ರಾಜ್ಯ ಮಾಡುತ್ತೇವೆ, ಜೊತೆಯಲ್ಲಿಯೇ ಭಕ್ತಿ ಮಾಡುತ್ತೇವೆ ಅಂದಮೇಲೆ ಈಗ ತಯಾರಿ ಮಾಡಿಕೊಳ್ಳಿ, ಈ ವರ್ಷದಲ್ಲಿ ಮಾಡುತ್ತೀರಾ ಅಥವಾ ಇನ್ನೊಂದು ವರ್ಷವು ಬೇಕಾ? ಈ ವರ್ಷದಲ್ಲಿ ಮಾಡಿಯೇ ಮಾಡುತ್ತೇವೆ ಎಂದು ಯಾರು ತಿಳಿಯುವಿರೋ ಅವರು ಕೈ ಎತ್ತಿರಿ. ಮಾಡುತ್ತೀರಾ? ಮಾಡಿದ್ದೇ ಅದರೆ ಅಡ್ವಾನ್ಸ್ ಪಾರ್ಟಿಯವರು ತಮಗೆ ಬಹಳ ಶುಭಾಶಯಗಳನ್ನು ಹೇಳುವರು, ಅವರೂ ಸಹ ದಣಿದಿದ್ದಾರೆ. ಒಳ್ಳೆಯದು, ಶಿಕ್ಷಕಿ ಸಹೋದರಿಯರು ಏನು ಹೇಳುತ್ತೀರಿ? ಮೊದಲನೇ ಸಾಲಿನವರು ಏನು ಹೇಳುತ್ತೀರಿ? ಮೊದಲನೇ ಸಾಲಿನ ಪಾಂಡವರು ಮತ್ತು ಶಕ್ತಿಯರು, ಯಾರು ಮಾಡುವಿರೋ ಮೊದಲು ಕೈ ಎತ್ತಿರಿ. ಅರ್ಧ ಅಲ್ಲ. ಅರ್ಧ ಎತ್ತುತ್ತೀರೆಂದರೆ ಅರ್ಧ ಮಾಡುತ್ತೀರಿ ಎಂದು ಹೇಳುತ್ತೇವೆ, ಆದ್ದರಿಂದ ಉದ್ದನೆಯದಾಗಿ ಕೈಯನ್ನು ಎತ್ತಿರಿ. ಒಳ್ಳೆಯದು. ಶುಭಾಶಯಗಳು, ಶುಭಾಶಯಗಳು. ಡಬಲ್ ವಿದೇಶಿಗಳಿಂದಲೂ ಕೈಯನ್ನು ಎತ್ತಿಸುತ್ತೇವೆ. ಡಬಲ್ ವಿದೇಶಿಯರೇ ಪರಸ್ಪರ ಯಾರು ಎತ್ತಿಲ್ಲವೋ ನೋಡಿಕೊಳ್ಳಿ. ಒಳ್ಳೆಯದು. ಈ ಸಿಂಧಿ ಗ್ರೂಪಿನವರೂ ಸಹ ಕೈಯನ್ನು ಎತ್ತುತ್ತಿದ್ದಾರೆ, ಚಮತ್ಕಾರವಾಗಿದೆ. ಸಿಂಧಿ ಗ್ರೂಪಿನವರೂ ಸಹ ಮಾಡುತ್ತೀರಾ? ಅಂದಾಗ ಡಬಲ್ ಶುಭಾಶಯಗಳು ಬಹಳ ಒಳ್ಳೆಯದು. ಪರಸ್ಪರ ಒಬ್ಬರು ಇನ್ನೊಬ್ಬರಿಗೆ ಜೊತೆಯನ್ನು ಕೊಡುತ್ತಾ, ಶುಭಭಾವನೆ ಇಡುತ್ತಾ ಜೊತೆಯಲ್ಲಿ ಕೈಯಲ್ಲಿ ಕೈ ಕೊಡುತ್ತಾ ಮಾಡಲೇಬೇಕಾಗಿದೆ. ಒಳ್ಳೆಯದು. (ಸಭೆಯಲ್ಲಿ ಯಾರದೋ ಶಬ್ದವು ಕೇಳಿ ಬಂದಿತು) ಎಲ್ಲರೂ ಕುಳಿತುಕೊಳ್ಳಿ, ಇದು ಹೊಸದೇನಲ್ಲ (ನಥಿಂಗ್ ನ್ಯೂ).

ಈಗೀಗ ಸೆಕೆಂಡಿನಲ್ಲಿ ಬಿಂದು ಆಗಿ ಬಿಂದು ತಂದೆಯನ್ನು ನೆನಪು ಮಾಡಿ ಮತ್ತ್ಯಾವುದೇ ಮಾತುಗಳಿದ್ದರೂ ಸಹ ಅದಕ್ಕೆ ಬಿಂದುವನ್ನಿಡಿ, ಬಿಂದುವನ್ನಿಡಲು ಆಗುತ್ತದೆಯೇ? ಕೇವಲ ಒಂದು ಸೆಕೆಂಡಿನಲ್ಲಿ ನಾನು ತಂದೆಯವನು, ತಂದೆಯು ನನ್ನವರು. ಒಳ್ಳೆಯದು.

ನಾಲ್ಕಾರೂ ಕಡೆಯ ಸರ್ವಹೊಸ ಯುಗದ ಮಾಲೀಕ ಮಕ್ಕಳಿಗೆ, ನಾಲ್ಕಾರೂ ಕಡೆ ಹೊಸ ವರ್ಷವನ್ನು ಆಚರಿಸುವ ಒಲವು-ಉತ್ಸಾಹದಲ್ಲಿರುವಂತಹ ಮಕ್ಕಳಿಗೆ, ಸದಾ ಹಾರುತ್ತಾ ಇರಬೇಕು ಮತ್ತು ಹಾರಿಸುತ್ತಾ ಇರಬೇಕು - ಇಂತಹ ಹಾರುವಕಲೆಯುಳ್ಳಂತಹ ಮಕ್ಕಳಿಗೆ ಸದಾ ತೀವ್ರಪುರುಷಾರ್ಥದ ಮೂಲಕ ವಿಜಯಮಾಲೆಯ ಮಣಿಗಳಾಗುವಂತಹ ವಿಜಯೀರತ್ನಗಳಿಗೆ ಬಾಪ್ದಾದಾರವರ ಹೊಸವರ್ಷ ಹಾಗೂ ಹೊಸಯುಗದ ಆಶೀರ್ವಾದಗಳ ಜೊತೆಜೊತೆ ಪದಮಗುಣದಷ್ಟು ಶುಭಾಷಯಗಳು-ಶುಭಾಷಯಗಳನ್ನು ತುಂಬಿದ ತಟ್ಟೆಯನ್ನು ಕೊಡುತ್ತಿದ್ದೇವೆ. ಒಂದು ಕೈಯಿಂದ ಚಪ್ಪಾಳೆ ತಟ್ಟಿ. ಒಳ್ಳೆಯದು.

ವರದಾನ:
ಏಕಾಗ್ರತೆಯ ಅಭ್ಯಾಸದ ಮೂಲಕ ಏಕರಸದ ಸ್ಥಿತಿಯ ಅನುಭವ ಮಾಡುವಂತಹ ಸರ್ವ ಸಿ-ಸ್ವರೂಪ ಭವ

ಎಲ್ಲಿ ಏಕಾಗ್ರತೆಯಿರುತ್ತದೆ ಅಲ್ಲಿ ಸ್ವತಃವಾಗಿ ಏಕರಸ ಸ್ಥಿತಿ ಇರುತ್ತದೆ. ಏಕಾಗ್ರತೆಯಿಂದ ಸಂಕಲ್ಪ, ಮಾತು ಮತ್ತು ಕರ್ಮದ ವ್ಯರ್ಥತನ ಸಮಾಪ್ತಿಯಾಗಿಬಿಡುತ್ತದೆ ಮತ್ತು ಸಮರ್ಥತನ ಬಂದುಬಿಡುತ್ತದೆ. ಏಕಾಗ್ರತ ಅರ್ಧಾತ್ ಒಂದೇ ಶ್ರೇÀ್ಠ ಸಂಕಲ್ಪದಲ್ಲಿ ಸ್ಥಿತರಾಗುವುದು. ಹೇಗೆ ಒಂದು ರೂಪಿ ಸಂಕಲ್ಪದಲ್ಲಿ ಇಡೀ ವೃಕ್ಷರೂಪಿ ವಿಸ್ತಾರ ಸಮಾವೇಶವಾಗಿರುತ್ತದೆ. ಏಕಾಗ್ರತೆಯನ್ನು ಹಚ್ಚಿಸಿಕೊಳ್ಳಿ ಆಗ ಸರ್ವ ಪ್ರಕಾರದ ಹಲ್ಚಲ್ ಸಮಾಪ್ತಿಯಾಗಿಬಿಡುತ್ತದೆ. ಎಲ್ಲಾ ಸಂಕಲ್ಪ, ಮಾತು ಮತ್ತು ಕರ್ಮ ಸಹಜವಾಗಿ ಸಿದ್ಧವಾಗಿಬಿಡುತ್ತದೆ. ಅದಕ್ಕಾಗಿ ಏಕಾಂತವಾಸಿಗಳಾಗಿ.

ಸ್ಲೋಗನ್:
ಒಮ್ಮೆ ಮಾಡಿದ ತಪ್ಪನ್ನು ಪದೇ-ಪದೇ ಯೋಚಿಸುವುದು ಅರ್ಥಾತ್ ಕೊಳೆಯ ಮೇಲೆ ಕೂಳೆ ಮಾಡುತ್ತಿರುವುದು ಆದ್ದರಿಂದ ಕಳೆದುಹೋದದಕ್ಕೆ ಬಿಂದು ಹಾಕಿಬಿಡಿ.

ಅವ್ಯಕ್ತ ಸೂಚನೆ: ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ

ಹೇಗೆ ಈ ಸಮಯ ಆತ್ಮ ಮತ್ತು ಶರೀರ ಕಂಬೈಂಡ್ ಆಗಿದೆ, ಹಾಗೆಯೇ ತಂದೆ ಮತ್ತು ನೀವು ಕಂಬೈಂಡ್ ಆಗಿರಿ. ಕೇವಲ ಇದನ್ನು ನೆನಪಿಟ್ಟುಕೊಳ್ಳಿ ‘ನನ್ನ ಬಾಬಾ’. ತಮ್ಮ ಮಸ್ತಕದಲ್ಲಿ ಸದಾ ಜೊತೆಯ ತಿಲಕವಿಟ್ಟುಕೊಳ್ಳಿ. ಯಾರು ಸುಮಂಗಲಿಯಾಗಿರುತ್ತಾರೆ, ಜೊತೆಯಾಗಿರುತ್ತಾರೆ ಅವರು ಎಂದೂ ಮರೆಯುವುದಿಲ್ಲ. ಜೊತೆಗಾರರನ್ನು ಸದಾ ಜೊತೆ ಇಟ್ಟುಕೊಳ್ಳಿರಿ. ಒಂದುವೇಳೆ ಜೊತೆಯಿದ್ದರೆ ಜೊತೆ ಹೋಗುವರು. ಜೊತೆಯಿರಬೇಕು, ಜೊತೆ ಹೋಗಬೇಕು, ಪ್ರತಿ ಸೆಕೆಂಡ್, ಪ್ರತಿ ಸಂಕಲ್ಪದಲ್ಲಿ ಜೊತೆಯಿದ್ದೇ ಇದ್ದಾರೆ.