13.06.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಮೊದಲು ಪ್ರತಿಯೊಬ್ಬರಿಗೂ ಈ ಮಂತ್ರವನ್ನು ಮನಸ್ಸಿಗೆ ನಾಟುವಂತೆ ಪಕ್ಕಾ ಮಾಡಿಸಿ- ನೀವು ಆತ್ಮನಾಗಿದ್ದೀರಿ,ನೀವೀಗ ತಂದೆಯನ್ನು ನೆನಪು ಮಾಡಬೇಕು, ನೆನಪಿನಿಂದಲೇ ಪಾಪಗಳು ತುಂಡಾಗುತ್ತವೆ”

ಪ್ರಶ್ನೆ:
ಸತ್ಯಸೇವೆ ಯಾವುದಾಗಿದೆ, ಅದನ್ನು ತಾವೀಗ ಮಾಡುತ್ತಿದ್ದೀರಿ?

ಉತ್ತರ:
ಭಾರತವೇನು ಪತಿತವಾಗಿಬಿಟ್ಟಿದೆ, ಅದನ್ನು ಪಾವನವನ್ನಾಗಿ ಮಾಡುವುದೇ ಸತ್ಯ ಸತ್ಯಸೇವೆಯಾಗಿದೆ. ನೀವು ಭಾರತಕ್ಕೆ ಏನು ಸೇವೆ ಮಾಡುತ್ತೀರೆಂದು ಮನುಷ್ಯರು ಕೇಳುತ್ತಾರೆ ಆಗ ನೀವು ಅವರಿಗೆ ತಿಳಿಸಿ, ನಾವು ಶ್ರೀಮತದನುಸಾರ ಭಾರತದ ಇಂತಹ ಆತ್ಮೀಯ ಸೇವೆ ಮಾಡುತ್ತೇವೆ ಅದರಿಂದ ಭಾರತ ಡಬಲ್ ಕಿರೀಟಧಾರಿಯಾಗುತ್ತದೆ. ಭಾರತದಲ್ಲಿ ಯಾವ ಸುಖ-ಶಾಂತಿಯಿತ್ತು, ಅದನ್ನು ನಾವೀಗ ಸ್ಥಾಪನೆ ಮಾಡುತ್ತಿದ್ದೇವೆ.

ಓಂ ಶಾಂತಿ.
ಮೊಟ್ಟಮೊದಲ ಪಾಠವಾಗಿದೆ- ಮಕ್ಕಳೇ, ತಮ್ಮನ್ನು ಆತ್ಮನೆಂದು ತಿಳಿಯಿರಿ ಅಥವಾ ಮನ್ಮನಾಭವ. ಇದು ಸಂಸ್ಕೃತ ಶಬ್ಧವಾಗಿದೆ. ಮಕ್ಕಳು ಸರ್ವೀಸ್ ಮಾಡುವಾಗ ಮೊಟ್ಟಮೊದಲನೆಯದಾಗಿ ಅವರಿಗೆ ತಂದೆಯ ಬಗ್ಗೆ ಓದಿಸಬೇಕಾಗಿದೆ. ಯಾರೇ ಬರಲಿ ಅವರನ್ನು ಶಿವತಂದೆಯ ಚಿತ್ರದ ಮುಂದೆ ಕರೆದುಕೊಂಡು ಹೋಗಬೇಕು, ಮತ್ತ್ಯಾವುದೇ ಚಿತ್ರದ ಮುಂದೆ ಅಲ್ಲ. ಮೊಟ್ಟಮೊದಲು ತಂದೆಯ ಚಿತ್ರದ ಬಗ್ಗೆ ತಿಳಿಸಬೇಕು- ತಂದೆಯು ಹೇಳುತ್ತಾರೆ, ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ. ನಾನು ನಿಮ್ಮ ಪರಮ ತಂದೆಯೂ ಆಗಿದ್ದೇನೆ, ಪರಮಶಿಕ್ಷಕನೂ ಆಗಿದ್ದೇನೆ, ಪರಮ ಗುರುವೂ ಆಗಿದ್ದೇನೆ. ಎಲ್ಲರಿಗೆ ಈ ಪಾಠವನ್ನು ಕಲಿಸಬೇಕಾಗಿದೆ. ಪ್ರಾರಂಭವನ್ನೇ ಅಲ್ಲಿ ಮಾಡಬೇಕಾಗಿದೆ. ತಮ್ಮನ್ನು ಆತ್ಮವೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ ಏಕೆಂದರೆ ನೀವು ಪತಿತರಾಗಿದ್ದೀರಿ. ಈಗ ಮತ್ತೆ ಸತೋಪ್ರಧಾನರಾಗಬೇಕಾಗಿದೆ. ಈ ಪಾಠದಲ್ಲಿ ಎಲ್ಲಾ ಮಾತುಗಳು ಬಂದುಬಿಡುತ್ತವೆ. ಎಲ್ಲರೂ ಹೀಗೆ ಮಾಡುವುದಿಲ್ಲ. ತಂದೆಯು ತಿಳಿಸುತ್ತಾರೆ- ಮೊಟ್ಟಮೊದಲು ಶಿವತಂದೆಯ ಚಿತ್ರದ ಬಳಿಯೇ ಹೋಗಬೇಕು, ಇವರು ಬೇಹದ್ದಿನ ತಂದೆಯಾಗಿದ್ದಾರೆ, ಅವರು ತಿಳಿಸುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿ, ತಮ್ಮನ್ನು ಆತ್ಮನೆಂದು ತಿಳಿಯಿರಿ ಆಗ ದೋಣಿಯು ಪಾರಾಗುತ್ತದೆ. ನೆನಪು ಮಾಡುತ್ತಾ-ಮಾಡುತ್ತಾ ಪವಿತ್ರ ಪ್ರಪಂಚದಲ್ಲಿ ಹೋಗಬೇಕಾಗಿದೆ. ಈ ಪಾಠವನ್ನು ಕೊನೆಪಕ್ಷ ಮೂರು ನಿಮಿಷವಾದರೂ ಮತ್ತೆ-ಮತ್ತೆ ಪಕ್ಕಾ ಮಾಡಿಕೊಳ್ಳಬೇಕು- ತಂದೆಯನ್ನು ನೆನಪು ಮಾಡಿದಿರಾ? ತಂದೆ ತಂದೆಯೂ ಆಗಿದ್ದಾರೆ, ರಚನೆಯ ರಚಯಿತನೂ ಆಗಿದ್ದಾರೆ, ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದಿದ್ದಾರೆ ಏಕೆಂದರೆ ಮನುಷ್ಯಸೃಷ್ಟಿಯ ಬೀಜರೂಪವಾಗಿದ್ದಾರೆ. ಮೊಟ್ಟಮೊದಲು ಈ ನಿಶ್ಚಯ ಮಾಡಿಸಬೇಕು- ತಂದೆಯನ್ನು ನೆನಪು ಮಾಡುತ್ತೀರಾ? ಈ ಜ್ಞಾನವನ್ನು ತಂದೆ ತಿಳಿಸುತ್ತಾರೆ- ನಾವೂ ಸಹ ತಂದೆಯಿಂದಲೇ ಜ್ಞಾನವನ್ನು ಪಡೆದಿದ್ದೇವೆ ಅದನ್ನು ನಿಮಗೆ ತಿಳಿಸುತ್ತೇವೆ. ಮೊಟ್ಟಮೊದಲು ಈ ಮಂತ್ರವನ್ನು ಪಕ್ಕಾ ಮಾಡಿಸಿ- ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಆಗ ಧನಿಕರಾಗಿಬಿಡುತ್ತೀರಿ. ಇದನ್ನು ಕುರಿತು ತಿಳಿಸಬೇಕು. ಎಲ್ಲಿಯವರೆಗೆ ಇದು ಅರ್ಥವಾಗುವುದಿಲ್ಲವೋ ಅಲ್ಲಿಯವರೆಗೆ ಮುಂದೆ ಹೋಗಲೇಬಾರದು. ಹೀಗೆ ತಂದೆಯ ಪರಿಚಯವನ್ನು ಕುರಿತು 2-4 ಚಿತ್ರಗಳಿರಬೇಕು ಆಗ ಈ ಚಿತ್ರಗಳನ್ನು ಕುರಿತು ಚೆನ್ನಾಗಿ ತಿಳಿಸಿದಾಗ ಅವರ ಬುದ್ಧಿಯಲ್ಲಿ ಬಂದುಬಿಡುತ್ತದೆ- ನಾವು ತಂದೆಯನ್ನು ನೆನಪು ಮಾಡಬೇಕು, ಅವರೇ ಸರ್ವಶಕ್ತಿವಂತನಾಗಿದ್ದಾರೆ. ಅವರನ್ನು ನೆನಪು ಮಾಡುವುದರಿಂದ ಪಾಪಗಳು ತುಂಡಾಗುತ್ತವೆ. ತಂದೆಯ ಮಹಿಮೆಯಂತೂ ಸ್ಪಷ್ಟವಾಗಿದೆ, ಮೊಟ್ಟಮೊದಲು ಇದನ್ನು ಅವಶ್ಯವಾಗಿ ತಿಳಿಸಬೇಕು- ತಮ್ಮನ್ನು ಆತ್ಮನೆಂದು ತಿಳಿದು ನನ್ನೊಬ್ಬನನ್ನೇ ನೆನಪು ಮಾಡಿ, ದೇಹದ ಎಲ್ಲಾ ಸಂಬಂಧಗಳನ್ನು ಮರೆಯಿರಿ. ನಾನು ಸಿಖ್ಖ್ ಆಗಿದ್ದೇನೆ, ನಾನು ಇಂಥಹವನಾಗಿದ್ದೇನೆ, ಇದೆಲ್ಲವನ್ನೂ ಬಿಟ್ಟು ಒಬ್ಬತಂದೆಯನ್ನೇ ನೆನಪು ಮಾಡಿ. ಮೊಟ್ಟಮೊದಲು ಈ ಮುಖ್ಯಮಾತನ್ನು ಬುದ್ಧಿಯಲ್ಲಿ ಕುಳ್ಳರಿಸಿ ಆ ತಂದೆಯೇ ಸುಖ-ಶಾಂತಿ-ಪವಿತ್ರತೆಯ ಆಸ್ತಿಯನ್ನು ಕೊಡುವವರಾಗಿದ್ದಾರೆ. ತಂದೆಯೇ ನಡವಳಿಕೆಯನ್ನು ಸುಧಾರಣೆ ಮಾಡುತ್ತಾರೆ ಆದ್ದರಿಂದ ತಂದೆಗೆ ವಿಚಾರವು ಬಂದಿತು- ಇದು ಬಹಳ ಅವಶ್ಯಕವಾದ ಪಾಠವಾಗಿದೆ. ಈ ಪಾಠವನ್ನೇ ಮಕ್ಕಳು ಮೊದಲು ಪಕ್ಕಾ ಮಾಡಿಸುವುದಿಲ್ಲ. ಇದನ್ನು ಎಷ್ಟು ಮತ್ತೆ-ಮತ್ತೆ ಹೇಳುತ್ತೀರೋ ಅಷ್ಟು ಬುದ್ಧಿಯಲ್ಲಿರುತ್ತದೆ. ತಂದೆಯ ಪರಿಚಯದಲ್ಲಿ ಭಲೆ 5 ನಿಮಿಷಗಳಾದರೂ ಸರಿ ಬಿಡಬಾರದು. ಬಹಳ ಪ್ರೀತಿಯಿಂದ ತಂದೆಯ ಮಹಿಮೆಯನ್ನು ಕೇಳುತ್ತಾರೆ. ಈ ತಂದೆಯ ಚಿತ್ರವು ಮುಖ್ಯವಾಗಿದೆ. ಪೂರ್ಣ ಸರದಿಯು ಈ ಚಿತ್ರದ ಮುಂದೆ ಇರಬೇಕು. ತಂದೆಯ ಸಂದೇಶವನ್ನು ಎಲ್ಲರಿಗೂ ಕೊಡಬೇಕು ನಂತರದ ಪಾಠವು ರಚನೆಯ ಜ್ಞಾನವಾಗಿದೆ- ಈ ಚಕ್ರವು ಹೇಗೆ ತಿರುಗುತ್ತದೆ, ಹೇಗೆ ಮಸಾಲೆಯನ್ನು ಕುಟ್ಟಿ-ಕುಟ್ಟಿ ಸಂಪೂರ್ಣ ನುಣ್ಣಗೆ ಮಾಡಲಾಗುತ್ತದೆಯಲ್ಲವೆ! ಅಂದಾಗ ನೀವು ಈಶ್ವರೀಯ ಸಂಸ್ಥೆಯಾಗಿದ್ದೀರಿ ಆದ್ದರಿಂದ ಬಹಳ ಚೆನ್ನಾಗಿ ಒಂದೊಂದು ಮಾತನ್ನು ಕುಟ್ಟಿ-ಕುಟ್ಟಿ ಬುದ್ಧಿಯಲ್ಲಿ ಕೂರಿಸಬೇಕು ಏಕೆಂದರೆ ತಂದೆಯನ್ನು ಅರಿಯದ ಕಾರಣ ಎಲ್ಲರೂ ನಿರ್ಧನಿಕರಾಗಿಬಿಟ್ಟಿದ್ದಾರೆ ಆದ್ದರಿಂದ ತಂದೆಯ ಪರಿಚಯ ಕೊಡಬೇಕು- ತಂದೆ ಪರಮಪಿತನಾಗಿದ್ದಾರೆ, ಪರಮ ಶಿಕ್ಷಕರಾಗಿದ್ದಾರೆ, ಪರಮ ಸದ್ಗುರುವಾಗಿದ್ದಾರೆ- ಈ ಮೂರು ಹೇಳುವುದರಿಂದ ಸರ್ವವ್ಯಾಪಿಯ ಮಾತೇ ಬುದ್ಧಿಯಿಂದ ಹೊರಟುಹೋಗುತ್ತದೆ. ಇದನ್ನು ಮೊಟ್ಟಮೊದಲು ಬುದ್ಧಿಯಲ್ಲಿ ಕೂರಿಸಿ. ತಂದೆಯನ್ನು ನೆನಪು ಮಾಡಬೇಕಾಗಿದೆ ಆಗಲೇ ನೀವು ಪತಿತರಿಂದ ಪಾವನರಾಗಲು ಸಾಧ್ಯ, ದೈವೀಗುಣಗಳನ್ನೂ ಧಾರಣೆ ಮಾಡಬೇಕು. ಸತೋಪ್ರಧಾನರಾಗಬೇಕು. ನೀವು ಅವರಿಗೆ ತಂದೆಯ ನೆನಪು ತರಿಸಿ ಅದರಲ್ಲಿ ನೀವು ಮಕ್ಕಳ ಕಲ್ಯಾಣವೂ ಇದೆ, ನೀವೂ ಸಹ ಮನ್ಮನಾಭವ ಆಗಿರುತ್ತೀರಿ.

ನೀವು ಸಂದೇಶವನ್ನು ಕೊಡುತ್ತೀರೆಂದರೆ ತಂದೆಯ ಪರಿಚಯವನ್ನೇ ಕೊಡಬೇಕು- ನಮ್ಮ ತಂದೆ ತಂದೆಯೂ ಆಗಿದ್ದಾರೆ, ಶಿಕ್ಷಕ ಮತ್ತು ಗುರುವೂ ಆಗಿದ್ದಾರೆಂದು ತಿಳಿದಿರುವಂತಹ ಮನುಷ್ಯರು ಒಬ್ಬರೂ ಇಲ್ಲ. ತಂದೆಯ ಪರಿಚಯವನ್ನು ಕೇಳಿದರೆ ಅವರು ಬಹಳ ಖುಷಿಯಾಗಿಬಿಡುತ್ತಾರೆ. ಭಗವಾನುವಾಚ- ನನ್ನೊಬ್ಬನನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ, ಗೀತೆಯ ಜೊತೆ ಮತ್ತೆ ಮಹಾಭಾರತ ಯುದ್ಧವನ್ನೂ ತೋರಿಸಿದ್ದಾರೆ, ಈಗಂತೂ ಯಾವುದೇ ಯುದ್ಧದ ಮಾತಿಲ್ಲ, ನಿಮ್ಮ ಯುದ್ಧವು ತಂದೆಯನ್ನು ನೆನಪು ಮಾಡುವುದರಲ್ಲಿದೆ. ವಿದ್ಯೆಯಂತೂ ಬೇರೆಯಾಗಿದೆ ಬಾಕಿ ಯುದ್ಧವು ನೆನಪಿನಲ್ಲಿದೆ ಏಕೆಂದರೆ ಎಲ್ಲರೂ ದೇಹಾಭಿಮಾನಿಗಳಾಗಿದ್ದಾರೆ. ನೀವೀಗ ದೇಹೀ-ಅಭಿಮಾನಿಯಾಗಿರುತ್ತೀರಿ. ತಂದೆಯನ್ನು ನೆನಪು ಮಾಡುವವರಾಗಿದ್ದೀರಿ. ಮೊಟ್ಟಮೊದಲು ಈ ಪಾಠವನ್ನು ಪಕ್ಕಾ ಮಾಡಿಸಿ, ಅವರು ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಈಗ ನಾವು ಅವರದನ್ನು ಕೇಳುವುದೇ ಅಥವಾ ನೀವು ಹೇಳುವುದನ್ನು ಕೇಳುವುದೇ? ಅದಕ್ಕೆ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಈಗ ನೀವು ಶ್ರೇಷ್ಠರಾಗಲು ಪೂರ್ಣ ಶ್ರೀಮತದಂತೆ ನಡೆಯಬೇಕು. ನಾನು ಇದೇ ಸೇವೆ ಮಾಡುತ್ತೇನೆ. ಈಶ್ವರೀಯ ಮತದಂತೆ ನಡೆಯುತ್ತೀರೆಂದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ತಂದೆಯ ಶ್ರೀಮತವೂ ಇದಾಗಿದೆ- ನನ್ನೊಬ್ಬನನ್ನೇ ನೆನಪು ಮಾಡಿ. ಸೃಷ್ಟಿಚಕ್ರದ ಯಾವ ಜ್ಞಾನವನ್ನು ತಿಳಿಸುತ್ತಾರೆ, ಇದೂ ಸಹ ಅವರ ಮತವಾಗಿದೆ. ನೀವು ಪವಿತ್ರರಾಗಿ ತಂದೆಯನ್ನು ನೆನಪು ಮಾಡುತ್ತೀರೆಂದರೆ ನಾನು ನಿಮ್ಮನ್ನು ಜೊತೆ ಕರೆದುಕೊಂಡು ಹೋಗುತ್ತೇನೆಂದು ತಂದೆಯು ತಿಳಿಸುತ್ತಾರೆ. ತಂದೆಯು ಬೇಹದ್ದಿನ ಆತ್ಮಿಕ ಮಾರ್ಗದರ್ಶಕನೂ ಆಗಿದ್ದಾರೆ, ಅವರನ್ನು ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನರನ್ನಾಗಿ ಮಾಡಿ, ಈ ಪತಿತ ಪ್ರಪಂಚದಿಂದ ಕರೆದುಕೊಂಡು ಹೋಗಿ ಎಂದು ಕರೆಯುತ್ತಾರೆ. ಅವರು ಸ್ಥೂಲ ಮಾರ್ಗದರ್ಶಕನಾಗಿದ್ದಾರೆ, ಇವರು ಆತ್ಮಿಕ ಮಾರ್ಗದರ್ಶಕರಾಗಿದ್ದಾರೆ, ನಮಗೆ ಓದಿಸುತ್ತಾರೆ. ನಡೆಯುತ್ತಾ-ತಿರುಗಾಡುತ್ತಾ, ಏಳುತ್ತಾ-ಕುಳಿತುಕೊಳ್ಳುತ್ತಾ ತಂದೆಯನ್ನು ನೆನಪು ಮಾಡುತ್ತಾ ಇರಿ. ಇದರಲ್ಲಿ ತಮ್ಮನ್ನು ಸುಸ್ತು ಮಾಡಿಕೊಳ್ಳುವ ಅವಶ್ಯಕತೆಯೂ ಇಲ್ಲ ಎಂದು ತಂದೆಯು ತಿಳಿಸುತ್ತಾರೆ. ಬಾಬಾರವರು ನೋಡುತ್ತಾರೆ- ಕೆಲಕೆಲವೊಮ್ಮೆ ಮಕ್ಕಳು ಮುಂಜಾನೆಯ ಸಮಯದಲ್ಲಿ ಬಂದು ಕುಳಿತುಕೊಳ್ಳುತ್ತಾರೆಂದರೆ ಬಹಳ ಸುಸ್ತಾಗಿರುತ್ತಾರೆ. ಇದಂತೂ ಬಹಳ ಸಹಜ ಮಾರ್ಗವಾಗಿದೆ ಆದ್ದರಿಂದ ಹಠದಿಂದ ಕುಳಿತುಕೊಳ್ಳಬಾರದು. ಭಲೆ ಓಡಾಡಿ-ತಿರುಗಾಡಿ ಆದರೆ ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡಿ. ಆಂತರ್ಯದಲ್ಲಿ ಬಾಬಾ, ಬಾಬಾ ಎಂದು ಬಹಳ ಉತ್ಸಾಹ ಉಕ್ಕಿಬರಬೇಕು. ಯಾರು ಪ್ರತೀ ಉಸಿರಿನಲ್ಲಿ ತಂದೆಯನ್ನು ನೆನಪು ಮಾಡುವರೋ ಅವರಿಗೆ ಅಷ್ಟು ಉತ್ಸಾಹ ಹುಕ್ಕಿಬರುತ್ತದೆ. ಯಾವುದಾದರೂ ಅನ್ಯಮಾತುಗಳು ಬುದ್ಧಿಯಲ್ಲಿ ನೆನಪಿದ್ದರೆ ಅದನ್ನು ತೆಗೆದುಹಾಕಬೇಕು. ತಂದೆಯ ಜೊತೆ ಬಹಳ ಪ್ರೀತಿಯಿರಬೇಕು ಆ ಅತೀಂದ್ರಿಯ ಸುಖವು ಅನುಭೂತಿ ಯಾಗುತ್ತಿರಬೇಕು. ಯಾವಾಗ ನೀವು ತಂದೆಯ ನೆನಪಿನಲ್ಲಿ ತೊಡಗುತ್ತೀರೋ ಆಗಲೇ ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ ನಂತರ ನಿಮ್ಮ ಖುಷಿಗೆ ಪಾರವೇ ಇಲ್ಲ. ಇವೆಲ್ಲಾ ಮಾತುಗಳ ವರ್ಣನೆ ಇಲ್ಲಿಯೇ ಆಗುತ್ತದೆ ಆದ್ದರಿಂದ ಗಾಯನವಿದೆ- ಅತೀಂದ್ರಿಯ ಸುಖವನ್ನು ಗೋಪ-ಗೋಪಿಯರಿಂದಲೇ ಕೇಳಿ, ಯಾರಿಗೆ ಭಗವಂತ ತಂದೆಯೇ ಓದಿಸುತ್ತಾರೆ.

ಭಗವಾನುವಾಚ- ನನ್ನನ್ನು ನೆನಪು ಮಾಡಿ. ತಂದೆಯ ಮಹಿಮೆಯನ್ನೇ ತಿಳಿಸಬೇಕು. ಸದ್ಗತಿಯ ಆಸ್ತಿಯಂತೂ ಒಬ್ಬ ತಂದೆಯಿಂದಲೇ ಸಿಗುತ್ತದೆ. ಎಲ್ಲರಿಗೆ ಸದ್ಗತಿಯಂತೂ ಅವಶ್ಯವಾಗಿ ಸಿಗುತ್ತದೆ. ಮೊದಲು ಎಲ್ಲರೂ ಶಾಂತಿಧಾಮಕ್ಕೆ ಹೋಗುತ್ತಾರೆ. ತಂದೆಯು ನಮಗೆ ಸದ್ಗತಿ ನೀಡುತ್ತಿದ್ದಾರೆಂದು ಬುದ್ಧಿಯಲ್ಲಿರಬೇಕು. ಶಾಂತಿಧಾಮ, ಸುಖಧಾಮವೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನಂತೂ ತಿಳಿಸಿದ್ದಾರೆ. ಶಾಂತಿಧಾಮದಲ್ಲಿ ಎಲ್ಲಾ ಆತ್ಮರಿರುತ್ತಾರೆ. ಅದು ಮಧುರಮನೆ, ಶಾಂತಿಧಾಮವಾಗಿದೆ. ಶಾಂತಿಯ ಗೋಪುರವಾಗಿದೆ (ಟವರ್ ಆಫ್ ಸೈಲೆನ್ಸ್- ಶಾಂತಿಯ ಶಿಖರ) ಅದನ್ನು ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ವಿಜ್ಞಾನಿಗಳ ಬುದ್ಧಿಯಂತೂ ಈ ಕಣ್ಣುಗಳಿಂದ ಇಲ್ಲಿ ಯಾವ ವಸ್ತುಗಳನ್ನು ನೋಡುವರೋ ಅದನ್ನು ಕುರಿತು ವಿಚಾರ ನಡೆಯುತ್ತದೆ. ಆತ್ಮವನ್ನು ಈ ಸ್ಥೂಲಕಣ್ಣುಗಳಿಂದ ಯಾರೂ ನೋಡಲು ಸಾಧ್ಯವಿಲ್ಲ, ಆದರೆ ತಿಳಿಯಬಹುದು. ಯಾವಾಗ ಆತ್ಮವನ್ನೇ ನೋಡಲು ಸಾಧ್ಯವಿಲ್ಲವೆಂದರೆ ತಂದೆಯನ್ನು ಹೇಗೆ ನೋಡಬಲ್ಲಿರಿ! ಇದು ತಿಳಿದುಕೊಳ್ಳುವ ಮಾತಲ್ಲವೆ. ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಭಗವಾನುವಾಚ- ನನ್ನನ್ನು ನೆನಪು ಮಾಡಿ ಆಗ ಪಾಪಗಳು ಭಸ್ಮವಾಗುತ್ತವೆ, ಇದನ್ನು ಯಾರು ಹೇಳಿದರು? ಪೂರ್ಣ ಅರಿತುಕೊಳ್ಳದಿರುವ ಕಾರಣ ಕೃಷ್ಣನಿಗೆ ಹೇಳಿಬಿಡುತ್ತಾರೆ. ಕೃಷ್ಣನನ್ನಂತೂ ಬಹಳ ನೆನಪು ಮಾಡುತ್ತಾರೆ. ದಿನ-ಪ್ರತಿದಿನ ವ್ಯಭಿಚಾರಿಯಾಗುತ್ತಾ ಹೋಗುತ್ತಾರೆ. ಭಕ್ತಿಯಲ್ಲಿಯೂ ಸಹ ಮೊದಲು ಒಬ್ಬ ಶಿವನ ಭಕ್ತಿಯನ್ನು ಮಾಡುತ್ತಾ ಹೋಗುತ್ತಾರೆ. ಇದು ಅವ್ಯಭಿಚಾರಿ ಭಕ್ತಿಯಾಗಿದೆ ನಂತರ ಲಕ್ಷ್ಮಿ-ನಾರಾಯಣರ ಭಕ್ತಿಯು ನಡೆಯುತ್ತದೆ. ಸರ್ವಶ್ರೇಷ್ಠರಂತೂ ಭಗವಂತನಾಗಿದ್ದಾರೆ, ಅವರೇ ಈ ವಿಷ್ಣುವಾಗುವ ಆಸ್ತಿಯನ್ನು ಕೊಡುತ್ತಾರೆ, ನೀವು ಶಿವವಂಶಿಯವರಾಗಿ ವಿಷ್ಣುಪುರಿಯ ಮಾಲೀಕರಾಗುತ್ತೀರಿ. ಯಾವಾಗ ಮೊದಲ ಪಾಠವನ್ನು ಚೆನ್ನಾಗಿ ಓದುತ್ತೀರೋ ಆಗಲೇ ಮಾಲೆಯಾಗುತ್ತದೆ. ತಂದೆಯನ್ನು ನೆನಪು ಮಾಡುವುದು ಯಾವುದೇ ಚಿಕ್ಕಮ್ಮನ ಮನೆಯಂತಲ್ಲ. ಮನಸ್ಸು-ಬುದ್ಧಿಯನ್ನು ಎಲ್ಲಾ ಕಡೆಯಿಂದ ತೆಗೆದು ಒಬ್ಬರ ಕಡೆ ಜೋಡಿಸಬೇಕು. ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಅದರಿಂದ ಬುದ್ಧಿಯೋಗವನ್ನು ತೆಗೆಯಿರಿ.

ನನ್ನೊಬ್ಬನನ್ನೇ ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಇದರಲ್ಲಿ ತಬ್ಬಿಬ್ಬಾಗಬಾರದು. ತಂದೆಯು ಈ ರಥದಲ್ಲಿ ಕುಳಿತಿದ್ದಾರೆ, ಅವರ ಮಹಿಮೆಯನ್ನೂ ಮಾಡುತ್ತಾರೆ, ಅವರು ನಿರಾಕಾರನಾಗಿದ್ದಾರೆ. ಇವರ ಮೂಲಕ ನಿಮಗೆ ಪದೇ-ಪದೇ ಈ ನೆನಪು ತರಿಸುತ್ತಾರೆ- ಮಕ್ಕಳೇ, ನೀವು ಮನ್ಮನಾಭವ ಆಗಿರಿ ಅಂದರೆ ಎಲ್ಲರ ಮೇಲೂ ಉಪಕಾರ ಮಾಡುತ್ತೀರಿ. ನೀವು ಭೋಜನವನ್ನು ತಯಾರಿಸುವವರಿಗೂ ಹೇಳುತ್ತೀರಿ. ಶಿವತಂದೆಯನ್ನು ನೆನಪು ಮಾಡುತ್ತಾ ಭೋಜನವನ್ನು ತಯಾರಿಸಿ ಆಗ ತಿನ್ನುವವರ ಬುದ್ಧಿಯೂ ಸಹ ಶುದ್ಧವಾಗಿಬಿಡುತ್ತದೆ. ಒಬ್ಬರು ಇನ್ನೊಬ್ಬರಿಗೆ ನೆನಪು ತರಿಸಬೇಕು. ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಯದಲ್ಲಿ ನೆನಪು ಮಾಡುತ್ತಿರುತ್ತಾರೆ. ಕೆಲವರು ಅರ್ಧಗಂಟೆ ಕುಳಿತುಕೊಳ್ಳುತ್ತಾರೆ, ಕೆಲವರು 10 ನಿಮಿಷ ಕುಳಿತುಕೊಳ್ಳುತ್ತಾರೆ. ಒಳ್ಳೆಯದು, 5 ನಿಮಿಷವಾದರೂ ಪ್ರೀತಿಯಿಂದ ನೆನಪು ಮಾಡಿದರೆ ರಾಜಧಾನಿಯಲ್ಲಿ ಬಂದುಬಿಡುತ್ತೀರಿ. ರಾಜ-ರಾಣಿಯರು ಎಲ್ಲರನ್ನೂ ಪ್ರೀತಿ ಮಾಡುತ್ತಾರೆ, ಅಂದಮೇಲೆ ನೀವೂ ಸಹ ಪ್ರೀತಿಯ ಸಾಗರರಾಗುತ್ತೀರಿ ಆದ್ದರಿಂದ ಎಲ್ಲರ ಮೇಲೆ ಪ್ರೀತಿಯಿರುತ್ತದೆ, ಪ್ರೀತಿಯೇ ಪ್ರೀತಿ. ತಂದೆಯು ಪ್ರೀತಿಯ ಸಾಗರನಾಗಿದ್ದಾರೆ ಅಂದಮೇಲೆ ಮಕ್ಕಳಿಗೂ ಸಹ ಅವಶ್ಯವಾಗಿ ಇಂತಹ ಪ್ರೀತಿಯಿರಬೇಕು ಆದ್ದರಿಂದಲೇ ಸತ್ಯಯುಗದಲ್ಲಿಯೂ ಅಂತಹ ಪ್ರೀತಿಯಿರುತ್ತದೆ. ರಾಜ-ರಾಣಿಯರಿಗೂ ಬಹಳ ಪ್ರೀತಿಯಿರುತ್ತದೆ. ಮಕ್ಕಳಿಗೂ ಬಹಳ ಪ್ರೀತಿಯಿರುತ್ತದೆ. ಪ್ರೀತಿಯು ಬೇಹದ್ದಿನದಾಗಿದೆ, ಇಲ್ಲಂತೂ ಪ್ರೀತಿಯ ಹೆಸರೂ ಇಲ್ಲ. ಇಲ್ಲಂತೂ ಪೆಟ್ಟುಗಳಿವೆ, ಅಲ್ಲಿ ಈ ಕಾಮದ ಕತ್ತಿಯ ಹಿಂಸೆಯೂ ಆಗುವುದಿಲ್ಲ ಆದ್ದರಿಂದ ಭಾರತದ ಮಹಿಮೆಯು ಅಪರಮಪಾರವೆಂದು ಗಾಯನವಿದೆ. ಭಾರತದಂತಹ ಪವಿತ್ರದೇಶ ಯಾವುದೂ ಇಲ್ಲ. ಇದು ಎಲ್ಲದಕ್ಕಿಂತ ದೊಡ್ಡ ತೀರ್ಥಸ್ಥಾನವಾಗಿದೆ. ತಂದೆಯು ಭಾರತದಲ್ಲಿಯೇ ಬಂದು ಎಲ್ಲರ ಸೇವೆ ಮಾಡುತ್ತಾರೆ. ಎಲ್ಲರಿಗೆ ಓದಿಸುತ್ತಾರೆ. ಮುಖ್ಯವಾದುದು ವಿದ್ಯೆಯಾಗಿದೆ. ನೀವು ಭಾರತದ ಯಾವ ಸೇವೆ ಮಾಡುತ್ತೀರಿ ಎಂದು ಯಾರಾದರೂ ಕೇಳಿದರೆ ತಿಳಿಸಿ- ನೀವು ಭಾರತವು ಪಾವನವಾಗಲೆಂದೇ ಬಯಸುತ್ತೀರಿ. ಈಗ ಪತಿತವಾಗಿದೆಯಲ್ಲವೆ ಆದ್ದರಿಂದ ನಾವು ಶ್ರೀಮತದನುಸಾರ ಭಾರತವನ್ನು ಪಾವನವನ್ನಾಗಿ ಮಾಡುತ್ತೇವೆ. ಎಲ್ಲರಿಗೆ ಹೇಳುತ್ತೇವೆ- ತಂದೆಯನ್ನು ನೆನಪು ಮಾಡಿ ಆಗ ಪತಿತರಿಂದ ಪಾವನರಾಗುತ್ತೀರಿ. ನಾವು ಈ ಆತ್ಮಿಕ ಸೇವೆ ಮಾಡುತ್ತಿದ್ದೇವೆ. ಯಾವ ಭಾರತವು ಕಿರೀಟಧಾರಿಯಾಗಿತ್ತು, ಸುಖ-ಶಾಂತಿಯಿತ್ತು ಅದನ್ನು ಪುನಃ ಸ್ಥಾಪಿಸುತ್ತಿದ್ದೇವೆ. ಶ್ರೀಮತದನುಸಾರ ಕಲ್ಪದ ಹಿಂದಿನ ತರಹ ನಾಟಕದ ಯೋಜನೆಯನುಸಾರ ಈ ಶಬ್ಧಗಳನ್ನು ಪೂರ್ಣ ನೆನಪು ಮಾಡಿ. ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗಲೆಂದು ಮನುಷ್ಯರು ಬಯಸುತ್ತಾರೆ ಅಂದಾಗ ನಾವು ಅದನ್ನು ಮಾಡುತ್ತಿದ್ದೇವೆ. ಭಗವಾನುವಾಚ- ತಂದೆಯು ನಾವು ಮಕ್ಕಳಿಗೆ ತಿಳಿಸುತ್ತಿದ್ದಾರೆ- ತಂದೆಯಾದ ನನ್ನನ್ನು ನೆನಪು ಮಾಡಿ. ಇದು ತಂದೆಗೂ ಗೊತ್ತಿದೆ, ನೀವು ತಂದೆಯು ಹೇಳುವಷ್ಟು ಸಮಯವೇನೂ ನೆನಪು ಮಾಡುವುದಿಲ್ಲ, ಇದರಲ್ಲಿಯೇ ಪರಿಶ್ರಮವಿದೆ. ನೆನಪಿನಿಂದಲೇ ನಿಮ್ಮ ಕರ್ಮಾತೀತ ಸ್ಥಿತಿಯು ಬರುವುದು. ನೀವು ಸ್ವದರ್ಶನ ಚಕ್ರಧಾರಿಗಳಾಗಬೇಕಾಗಿದೆ. ಇದರ ಅರ್ಥವೂ ಸಹ ಯಾರಿಗೂ ಬುದ್ಧಿಯಲ್ಲಿಲ್ಲ. ಶಾಸ್ತ್ರಗಳಲ್ಲಂತೂ ಎಷ್ಟೊಂದು ಮಾತುಗಳನ್ನು ಬರೆದುಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ- ನೀವು ಏನೆಲ್ಲವನ್ನೂ ಓದಿದ್ದೀರೋ ಅದೆಲ್ಲವನ್ನೂ ಮರೆತುಹೋಗಬೇಕು, ತಮ್ಮನ್ನು ಆತ್ಮವೆಂದು ತಿಳಿಯಬೇಕಾಗಿದೆ. ಅದೇ ಜೊತೆ ಬರುತ್ತದೆ ಮತ್ತೇನೂ ಬರುವುದಿಲ್ಲ. ಈ ವಿದ್ಯೆಯು ಜೊತೆಯಲ್ಲಿ ಬರುವುದು ಅದಕ್ಕಾಗಿ ಪ್ರಯತ್ನಪಡುತ್ತಿದ್ದೇವೆ.

ಚಿಕ್ಕ-ಚಿಕ್ಕ ಮಕ್ಕಳನ್ನೂ ಸಹ ಕಡಿಮೆಯೆಂದು ತಿಳಿಯಬೇಡಿ. ಎಷ್ಟು ಚಿಕ್ಕವರೋ ಅಷ್ಟು ದೊಡ್ಡಹೆಸರನ್ನು ತರುತ್ತಾರೆ. ಚಿಕ್ಕ-ಚಿಕ್ಕ ಕನ್ಯೆಯರು ಕುಳಿತು ದೊಡ್ಡ-ದೊಡ್ಡ ವೃದ್ಧರಿಗೆ ತಿಳಿಸಿದರೆ ಕಮಾಲ್ ಮಾಡಿ ತೋರಿಸುತ್ತಾರೆ. ಅವರನ್ನೂ ಸಹ ತಮ್ಮ ಸಮಾನರನ್ನಾಗಿ ಮಾಡಿಕೊಳ್ಳಬೇಕು. ಯಾರೇ ಪ್ರಶ್ನೆ ಕೇಳಿದರೂ ಸಹ ಪ್ರತ್ಯುತ್ತರ ನೀಡುವಂತಿರಬೇಕು, ಆ ರೀತಿ ತಯಾರು ಮಾಡಿ. ಎಲ್ಲಿಯೇ ಮ್ಯೂಸಿಯಂ, ಸೇವಾಕೇಂದ್ರಗಳಿದ್ದರೆ ಚಿಕ್ಕ-ಚಿಕ್ಕವರನ್ನು ಕಳುಹಿಸಿಕೊಡಿ. ಇಂತಹ ಗ್ರೂಪನ್ನು ತಯಾರು ಮಾಡಿ. ಇದೇ ಸಮಯವಾಗಿದೆ, ಹೀಗೆ ಈ ತರಹ ಸರ್ವೀಸ್ ಮಾಡಿ, ದೊಡ್ದ-ದೊಡ್ದ ವೃದ್ಧರಿಗೂ ಸಹ ಚಿಕ್ಕಕುಮಾರಿಯರು ಕುಳಿತು ತಿಳಿಸಿದರೆ ಕಮಾಲ್ ಆಗುವುದು. ನೀವು ಯಾರ ಮಕ್ಕಳೆಂದು ಯಾರಾದರೂ ಕೇಳಿದರೆ ತಿಳಿಸಿ, ನಾವು ಶಿವತಂದೆಯ ಮಕ್ಕಳಾಗಿದ್ದೇವೆ, ಅವರು ನಿರಾಕಾರನಾಗಿದ್ದಾರೆ, ಬ್ರಹ್ಮನ ತನುವಿನಲ್ಲಿ ಬಂದು ನಮಗೆ ಓದಿಸುತ್ತಾರೆ. ಈ ವಿದ್ಯೆಯಿಂದಲೇ ನಾವು ಲಕ್ಷ್ಮೀ-ನಾರಾಯಣರಾಗಬೇಕಾಗಿದೆ. ಸತ್ಯಯುಗದ ಆದಿಯಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತಲ್ಲವೆ. ಇವರನ್ನು ಹೀಗೆ ಮಾಡಿದವರು ಯಾರು? ಅವಶ್ಯವಾಗಿ ಅಂತಹ ಕರ್ಮವನ್ನು ಮಾಡಿರುತ್ತಾರಲ್ಲವೆ. ತಂದೆಯು ಕುಳಿತು ಕರ್ಮ-ಅಕರ್ಮ-ವಿಕರ್ಮದ ಗತಿಯನ್ನು ತಿಳಿಸುತ್ತಾರೆ. ಶಿವತಂದೆಯು ನಮಗೆ ಓದಿಸುತ್ತಾರೆ, ಅವರು ತಂದೆ-ಶಿಕ್ಷಕ-ಗುರುವಾಗಿದ್ದಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ಇದೊಂದೇ ಮೂಲಮಾತಿನ ಬಗ್ಗೆ ಅವರಿಗೆ ತಿಳಿಸಬೇಕು. ಮೊಟ್ಟಮೊದಲು ತಂದೆಯ ಪರಿಚಯವಾಗಿದೆ. ತಂದೆಯನ್ನು ತಿಳಿದುಕೊಂಡರೆ ನಂತರ ಇಷ್ಟೊಂದು ಪ್ರಶ್ನೆಗಳನ್ನು ಯಾರೂ ಕೇಳುವುದಿಲ್ಲ. ತಂದೆಯ ವಿನಃ ನೀವು ಉಳಿದ ಚಿತ್ರಗಳ ಬಗ್ಗೆ ತಿಳಿಸುತ್ತೀರೆಂದರೆ ತಲೆಕೆಡಿಸಿಬಿಡುತ್ತಾರೆ. ಮೊದಲಮಾತು ತಂದೆಯ ಪರಿಚಯವಾಗಿದೆ. ನಾವು ಶ್ರೀಮತದಂತೆ ನಡೆಯುತ್ತೇವೆ. ಇಂತಹವರೂ ಬರುತ್ತಾರೆ- ನಾವು ಭಗವಂತನನ್ನೇ ತಿಳಿದುಕೊಂಡೆವೆಂದರೆ ಇನ್ನು ಉಳಿದ ಚಿತ್ರಗಳನ್ನು ನೋಡುವುದೇನಿದೆ, ನಾವು ತಂದೆಯನ್ನು ಅರಿತುಕೊಂಡಿದ್ದರಿಂದ ಎಲ್ಲವನ್ನೂ ತಿಳಿದುಕೊಂಡೆವೆಂದು ಹೇಳುತ್ತಾರೆ. ಭಿಕ್ಷೆಯು ಸಿಕ್ಕಿತೆಂದರೆ ಹೊರಟುಹೋಗುತ್ತಾರೆ. ನೀವು ಬಹಳ ಒಳ್ಳೆಯ ಭಿಕ್ಷೆಯನ್ನು ಕೊಡುತ್ತೀರಿ. ತಂದೆಯ ಪರಿಚಯವನ್ನು ಕೊಡುವುದರಿಂದಲೇ ತಂದೆಯನ್ನು ಎಷ್ಟು ನೆನಪು ಮಾಡುವರೋ ಅಷ್ಟು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತಾರೆ. ಒಳ್ಳೆಯದು.

ಧಾರಣೆಗಾಗಿ ಮುಖ್ಯಸಾರ-
1. ಅತೀಂದ್ರಿಯ ಸುಖದ ಅನುಭವ ಮಾಡುವುದಕ್ಕಾಗಿ ಆಂತರ್ಯದಿಂದ ಬಾಬಾ, ಬಾಬಾ ಎಂದು ಉಕ್ಕುತ್ತಿರಲಿ, ಹಠದಿಂದಲ್ಲ. ಪ್ರೀತಿಯಿಂದ ತಂದೆಯನ್ನು ನಡೆಯುತ್ತಾ-ತಿರುಗಾಡುತ್ತಾ ನೆನಪು ಮಾಡಿ. ಬುದ್ಧಿಯನ್ನು ಎಲ್ಲಾ ಕಡೆಯಿಂದ ತೆಗೆದು ಒಬ್ಬರಲ್ಲಿ ಜೋಡಿಸಿ.

2. ಹೇಗೆ ತಂದೆಯು ಪ್ರೀತಿಯ ಸಾಗರನಾಗಿದ್ದಾರೆಯೋ ಹಾಗೆಯೇ ತಂದೆಯ ಸಮಾನ ಪ್ರೀತಿಯ ಸಾಗರರಾಗಬೇಕು. ಎಲ್ಲರ ಮೇಲೆ ಉಪಕಾರ ಮಾಡಬೇಕು. ತಂದೆಯ ನೆನಪಿನಲ್ಲಿ ಇರಬೇಕು ಮತ್ತು ಎಲ್ಲರಿಗೂ ತಂದೆಯ ನೆನಪನ್ನು ತರಿಸಬೇಕು.

ವರದಾನ:
ಶಾಂತಿಯ ಶಕ್ತಿಯ ಸಾಧನಗಳ ಮೂಲಕ ವಿಶ್ವವನ್ನು ಶಾಂತಮಾಡುವಂತಹ ಆತ್ಮೀಯ ಶಸ್ತ್ರಧಾರಿ ಭವ.

ಶಾಂತಿಯ ಶಕ್ತಿಯ ಸಾಧನವಾಗಿದೆ ಶುಭ ಸಂಕಲ್ಪ, ಶುಭಭಾವನೆ ಮತ್ತು ನಯನಗಳ ಭಾಷೆ. ಹೇಗೆ ಬಾಯಿನ ಭಾಷೆಯ ಮೂಲಕ ತಂದೆಯ ಮತ್ತು ರಚನೆಯ ಪರಿಚಯವನ್ನು ಕೊಡುವಿರಿ, ಅದೇರೀತಿ ಶಾಂತಿಯ ಶಕ್ತಿಯ ಆಧಾರದ ಮೇಲೆ ನಯನಗಳ ಬಾಷೆಯ ಮೂಲಕ ನಯನಗಳ ಮೂಲಕ ತಂದೆಯ ಅನುಭವ ಮಾಡಿಸಬಲ್ಲಿರಿ. ಸ್ಥೂಲ ಸೇವೆಯ ಸಾಧನೆಗಳಿಗಿಂತಲೂ ಶಾಂತಿಯ ಶಕ್ತಿ ಅತೀ ಹೆಚ್ಚು ಶ್ರೇಷ್ಠವಾಗಿದೆ. ಆತ್ಮೀಯ ಸೇನೆಯ ವಿಶೇಷ ಶಸ್ತ್ರ ಇದಾಗಿದೆ - ಈ ಶಸ್ತ್ರದ ಮೂಲಕ ಅಶಾಂತ ವಿಶ್ವವನ್ನು ಶಾಂತವನ್ನಾಗಿ ಮಾಡಬಲ್ಲಿರಿ.

ಸ್ಲೋಗನ್:
ನಿರ್ವಿಘ್ನರಾಗಿರುವುದು ಮತ್ತು ನಿರ್ವಿಘ್ನರನ್ನಾಗಿ ಮಾಡುವುದು- ಇದೇ ಸತ್ಯ ಸೇವೆಯ ಪ್ರತ್ಯಕ್ಷತೆಯಾಗಿದೆ.