13.09.25         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಎಲ್ಲದಕ್ಕಿಂತ ಮೊಟ್ಟ ಮೊದಲು ಇದೇ ಚಿಂತನೆ ಮಾಡಿ - ನಾನಾತ್ಮನ ಮೇಲೆ ಯಾವ ತುಕ್ಕು ಏರಿದೆಯೋ ಅದು ಹೇಗೆ ಇಳಿಯುವುದು, ಎಲ್ಲಿಯವರೆಗೆ ಆತ್ಮರೂಪಿ ಸೂಜಿಯ ಮೇಲೆ ತುಕ್ಕು ಏರಿರುವುದೋ ಅಲ್ಲಿಯವರೆಗೆ ಅಯಸ್ಕಾಂತ (ಶಿವ ತಂದೆ) ವು ಆಕರ್ಷಿಸುವುದಿಲ್ಲ"

ಪ್ರಶ್ನೆ:
ಪುರುಷೋತ್ತಮ ಸಂಗಮಯುಗದಲ್ಲಿ ಪುರುಷೋತ್ತಮರಾಗಲು ನೀವು ಯಾವ ಪುರುಷಾರ್ಥ ಮಾಡಬೇಕಾಗಿದೆ?

ಉತ್ತರ:
ಕರ್ಮಾತೀತರಾಗುವ ಪುರುಷಾರ್ಥವನ್ನು ಮಾಡಬೇಕಾಗಿದೆ. ಯಾವುದೇ ಕರ್ಮ ಸಂಬಂಧಗಳ ಕಡೆ ಬುದ್ಧಿಯು ಹೋಗದಿರಲಿ ಅರ್ಥಾತ್ ಕರ್ಮ ಬಂಧನವು ತನ್ನ ಕಡೆ ಸೆಳೆಯಬಾರದು. ಒಬ್ಬ ತಂದೆಯೊಂದಿಗೇ ಪೂರ್ಣ ಸಂಬಂಧವಿರಲಿ. ಯಾರೊಂದಿಗೂ ಮನಸ್ಸಿರಬಾರದು. ಇಂತಹ ಪುರುಷಾರ್ಥ ಮಾಡಿ ಅಲ್ಲಸಲ್ಲದ ಮಾತುಗಳಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ನೆನಪಿನಲ್ಲಿರುವ ಅಭ್ಯಾಸ ಮಾಡಿ.

ಗೀತೆ:
ಎದ್ದೇಳಿ ಪ್ರಿಯತಮೆಯರೇ ಎದ್ದೇಳಿ........

ಓಂ ಶಾಂತಿ.
ಆತ್ಮಿಕ ಮಕ್ಕಳು ಈ ಶರೀರದ ಮೂಲಕ ಗೀತೆಯನ್ನು ಕೇಳಿದಿರಾ? ಏಕೆಂದರೆ ತಂದೆಯು ಈಗ ಮಕ್ಕಳನ್ನು ಆತ್ಮಾಭಿಮಾನಿಗಳನ್ನಾಗಿ ಮಾಡುತ್ತಿದ್ದಾರೆ. ನಿಮಗೆ ಆತ್ಮದ ಜ್ಞಾನವೂ ಸಿಗುತ್ತದೆ. ಪ್ರಪಂಚದಲ್ಲಿ ಆತ್ಮದ ಯಥಾರ್ಥ ಜ್ಞಾನವಿರುವವರು ಯಾವ ಮನುಷ್ಯರೂ ಇಲ್ಲ. ಅಂದಮೇಲೆ ಪರಮಾತ್ಮನ ಜ್ಞಾನವಿರಲು ಹೇಗೆ ಸಾಧ್ಯ? ಇದನ್ನು ತಂದೆಯೇ ಕುಳಿತು ತಿಳಿಸುತ್ತಾರೆ. ಶರೀರದ ಜೊತೆಯಲ್ಲಿಯೇ ತಿಳಿಸುತ್ತಾರೆ. ಶರೀರವಿಲ್ಲದೆ ಆತ್ಮವು ಏನನ್ನೂ ಮಾಡಲು ಸಾಧ್ಯವಿಲ್ಲ. ನಾವು ಎಲ್ಲಿಯ ನಿವಾಸಿಗಳಾಗಿದ್ದೇವೆ, ಯಾರ ಮಕ್ಕಳಾಗಿದ್ದೇವೆಂದು ನೀವು ಯಥಾರ್ಥವಾಗಿ ತಿಳಿದುಕೊಂಡಿದ್ದೀರಿ. ಎಲ್ಲರೂ ಪಾತ್ರಧಾರಿಗಳಾಗಿದ್ದಾರೆ. ಭಿನ್ನ-ಭಿನ್ನ ಧರ್ಮದ ಆತ್ಮಗಳು ಯಾವಾಗ ಬರುತ್ತಾರೆಂಬುದೂ ಸಹ ನಿಮ್ಮ ಬುದ್ಧಿಯಲ್ಲಿದೆ, ತಂದೆಯು ವಿವರವಾಗಿ ತಿಳಿಸುವುದಿಲ್ಲ, ಸಾಹಸಿಗಳಾಗಿ ತಿಳಿಸುತ್ತಾರೆ. ಒಂದು ಸೆಕೆಂಡಿನಲ್ಲಿ ಇಂತಹ ತಿಳುವಳಿಕೆಯನ್ನು ಕೊಡುತ್ತಾರೆ ಅದರಿಂದ ನಿಮಗೆ ಸತ್ಯಯುಗದ ಆದಿಯಿಂದ ಹಿಡಿದು ಅಂತ್ಯದವರೆಗೆ ಹೇಗೆ ನಮ್ಮ ಪಾತ್ರವು ನಿಗಧಿಯಾಗಿದೆ ಎಂಬುದೆಲ್ಲವೂ ಅರ್ಥವಾಗಿ ಬಿಡುತ್ತದೆ. ತಂದೆ ಯಾರು? ಈ ನಾಟಕದಲ್ಲಿ ಅವರ ಪಾತ್ರವೇನು? ಮತ್ತು ತಂದೆಯು ಸರ್ವ ಶ್ರೇಷ್ಠನಾಗಿದ್ದಾರೆ. ಸರ್ವರ ಸದ್ಗತಿದಾತ, ದುಃಖಹರ್ತ-ಸುಖಕರ್ತನಾಗಿದ್ದಾರೆ ಎಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಶಿವ ಜಯಂತಿಯ ಗಾಯನವಿದೆ, ಶಿವ ಜಯಂತಿಯು ಎಲ್ಲದಕ್ಕಿಂತ ಶ್ರೇಷ್ಠವೆಂದು ಹೇಳುತ್ತಾರೆ. ವಿಶೇಷವಾಗಿ ಭಾರತದಲ್ಲಿಯೇ ಜಯಂತಿಯನ್ನಾಚರಿಸುತ್ತಾರೆ. ಯಾರ್ಯಾರ ರಾಜ್ಯದಲ್ಲಿ ಯಾವ ಉತ್ತಮ ಪುರುಷರ ಚರಿತ್ರೆಯು ಚೆನ್ನಾಗಿರುವುದೋ ಅವರ ಸ್ಟಾಂಪನ್ನೂ ಮಾಡುತ್ತಾರೆ. ಶಿವ ಜಯಂತಿಯನ್ನಾಚರಿಸುತ್ತಾರೆ, ಅಂದಮೇಲೆ ಎಲ್ಲರಿಗಿಂತ ಶ್ರೇಷ್ಠ ಜಯಂತಿಯು ಯಾರದಾಯಿತು? ಯಾರ ಸ್ಟಾಂಪನ್ನು ಮಾಡಿಸಬೇಕು ಎಂಬುದನ್ನು ತಿಳಿಸಿಕೊಡಿ. ಯಾವುದೇ ಸಾಧು-ಸಂತ ಅಥವಾ ಸಿಖ್ಖರ, ಮುಸಲ್ಮಾನರ ಹಾಗೂ ಬ್ರಿಟೀಷರಲ್ಲಿ ಯಾರಾದರೂ ತತ್ವಜ್ಞಾನಿಗಳಿದ್ದರೆ ಅವರ ಸ್ಟಾಂಪನ್ನು ಮಾಡಿಸುತ್ತಾರೆ. ಹೇಗೆ ರಾಣಾ ಪ್ರತಾಪ ಸಿಂಗ್ ಮೊದಲಾದವರ ಸ್ಟಾಂಪನ್ನು ಮಾಡಿಸುತ್ತಾರೆ ಆದರೆ ವಾಸ್ತವದಲ್ಲಿ ತಂದೆಯ ಸ್ಟಾಂಪ್ ಮಾಡಿಸಬೇಕು. ಇವರು ಎಲ್ಲರ ಸದ್ಗತಿ ಮಾಡುತ್ತಾರೆ. ಈ ಸಮಯದಲ್ಲಿ ತಂದೆಯು ಬಾರದೇ ಇದ್ದರೆ ಸದ್ಗತಿ ಹೇಗಾಗುವುದು ಏಕೆಂದರೆ ಈಗ ಎಲ್ಲರೂ ರೌರವ ನರಕದಲ್ಲಿ ಮುಳುಗುತ್ತಿದ್ದಾರೆ. ಎಲ್ಲರಿಗಿಂತ ಸರ್ವಶ್ರೇಷ್ಠನು ಪತಿತ-ಪಾವನನು ಶಿವ ತಂದೆಯಾಗಿದ್ದಾರೆ. ಶಿವನ ಮಂದಿರವನ್ನೂ ಬಹುತೇಕವಾಗಿ ಬಹಳ ಎತ್ತರದ ಸ್ಥಾನದಲ್ಲಿಯೇ ಕಟ್ಟಿಸುತ್ತಾರೆ ಏಕೆಂದರೆ ತಂದೆಯು ಸರ್ವ ಶ್ರೇಷ್ಠನಲ್ಲವೆ. ತಂದೆಯೇ ಬಂದು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ಅವರು ಬಂದಾಗಲೇ ಸದ್ಗತಿ ಮಾಡುತ್ತಾರೆ ಅಂದಮೇಲೆ ಆ ತಂದೆಯದೇ ನೆನಪಿರಬೇಕು. ಶಿವ ತಂದೆಯ ಸ್ಟಾಂಪನ್ನು ಹೇಗೆ ಮಾಡಿಸುವುದು? ಭಕ್ತಿಮಾರ್ಗದಲ್ಲಂತೂ ಶಿವ ಲಿಂಗವನ್ನು ಮಾಡಿಸುತ್ತಾರೆ. ಅವರೇ ಶ್ರೇಷ್ಠಾತಿ ಶ್ರೇಷ್ಠ ಆತ್ಮನಾದರು. ಶಿವನ ಮಂದಿರವನ್ನೇ ಸರ್ವಶ್ರೇಷ್ಠವೆಂದು ಎಲ್ಲರೂ ಒಪ್ಪುತ್ತಾರೆ. ಸೋಮನಾಥ ಮಂದಿರವು ಶಿವನ ಮಂದಿರವಲ್ಲವೆ. ಭಾರತವಾಸಿಗಳು ತಮೋಪ್ರಧಾನರಾಗಿರುವ ಕಾರಣ ಶಿವನು ಯಾರು? ಯಾರ ಪೂಜೆಯನ್ನು ಮಾಡುತ್ತೇವೆಂಬುದನ್ನೂ ತಿಳಿದುಕೊಂಡಿಲ್ಲ. ಅವರ ಕರ್ತವ್ಯವನ್ನೇ ಅರಿತಿಲ್ಲ. ರಾಣಾ ಪ್ರತಾಪ ಸಿಂಗನೂ ಸಹ ಯುದ್ಧ ಮಾಡಿದರು, ಅದು ಹಿಂಸೆಯಾಯಿತು. ಈ ಸಮಯದಲ್ಲಿ ಎಲ್ಲರೂ ಡಬಲ್ ಹಿಂಸಕರಾಗಿದ್ದಾರೆ. ವಿಕಾರದಲ್ಲಿ ಹೋಗುವುದು, ಕಾಮದ ಕಟಾರಿಯನ್ನು ನಡೆಸುವುದೂ ಸಹ ಹಿಂಸೆಯಲ್ಲವೆ. ಡಬಲ್ ಅಹಿಂಸಕರು ಈ ಲಕ್ಷ್ಮೀ-ನಾರಾಯಣರಾಗಿದ್ದಾರೆ. ಯಾವಾಗ ಮನುಷ್ಯರಿಗೆ ಪೂರ್ಣಜ್ಞಾನದ ಅರಿವಾಗುವುದೋ ಆಗ ಅರ್ಥ ಸಹಿತವಾಗಿ ಸ್ಟಾಂಪನ್ನು ಬಿಡುಗಡೆ ಮಾಡುವರು. ಸತ್ಯಯುಗದಲ್ಲಿ ಈ ಲಕ್ಷ್ಮೀ-ನಾರಾಯಣರ ಸ್ಟಾಂಪ್ ಮಾತ್ರವೇ ಬಿಡುಗಡೆಯಾಗುತ್ತದೆ. ಶಿವ ತಂದೆಯ ಜ್ಞಾನವಂತೂ ಅಲ್ಲಿರುವುದಿಲ್ಲ ಅಂದಮೇಲೆ ಅವಶ್ಯವಾಗಿ ಶ್ರೇಷ್ಠಾತಿ ಶ್ರೇಷ್ಠ ಲಕ್ಷ್ಮೀ-ನಾರಾಯಣರ ಸ್ಟಾಂಪ್ ಮಾತ್ರವೇ ಇರುವುದು. ಈಗಲೂ ಸಹ ಭಾರತದ ಸ್ಟಾಂಪ್ ಅದೇ ಇರಬೇಕಾಗಿದೆ. ಸರ್ವ ಶ್ರೇಷ್ಠನು ತ್ರಿಮೂರ್ತಿ ಶಿವನಾಗಿದ್ದಾರೆ. ಅವರು ಅವಿನಾಶಿಯಾಗಿರಬೇಕು ಏಕೆಂದರೆ ಭಾರತಕ್ಕೆ ಅವಿನಾಶಿ ರಾಜ್ಯ ಸಿಂಹಾಸನವನ್ನು ಕೊಡುತ್ತಾರೆ. ಪರಮಪಿತ ಪರಮಾತ್ಮನೇ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ನಿಮ್ಮಲ್ಲಿಯೂ ಸಹ ಬಹಳ ಮಂದಿ ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆಂಬುದನ್ನೇ ಮರೆತು ಹೋಗುತ್ತಾರೆ, ಮಾಯೆಯು ಮರೆಸಿ ಬಿಡುತ್ತದೆ. ತಂದೆಯನ್ನು ಅರಿತುಕೊಳ್ಳದ ಕಾರಣ ಭಾರತವಾಸಿಗಳು ಎಷ್ಟೊಂದು ತಪ್ಪುಗಳನ್ನು ಮಾಡುತ್ತಾ ಬಂದಿದ್ದಾರೆ. ಶಿವ ತಂದೆಯು ಏನು ಮಾಡುತ್ತಾರೆಂಬುದು ಯಾರಿಗೂ ತಿಳಿದಿಲ್ಲ. ಶಿವ ಜಯಂತಿಯ ಅರ್ಥವನ್ನು ತಿಳಿದುಕೊಂಡಿಲ್ಲ. ಈ ಜ್ಞಾನವು ತಂದೆಯ ವಿನಃ ಮತ್ತ್ಯಾರಿಗೂ ಇಲ್ಲ.

ಈಗ ನೀವು ಮಕ್ಕಳಿಗೆ ತಂದೆಯು ತಿಳಿಸುತ್ತಾರೆ, ನೀವು ಅನ್ಯರ ಮೇಲೂ ದಯೆ ತೋರಿಸಿ ಮತ್ತು ತಮ್ಮ ಮೇಲೂ ದಯೆ ತೋರಿಸಿಕೊಳ್ಳಿ. ಶಿಕ್ಷಕರು ಓದಿಸುತ್ತಾರೆ, ಇದೂ ದಯೆ ತೋರಿಸಿದಂತಾಯಿತಲ್ಲವೆ - ನಾನು ಶಿಕ್ಷಕನಾಗಿದ್ದೇನೆ, ನಿಮಗೆ ಓದಿಸುತ್ತೇನೆ. ವಾಸ್ತವದಲ್ಲಿ ಇದರ ಹೆಸರು ಪಾಠಶಾಲೆಯೆಂದು ಹೇಳುವುದಿಲ್ಲ. ಇದು ಬಹಳ ದೊಡ್ಡ ವಿಶ್ವ ವಿದ್ಯಾಲಯವಾಗಿದೆ. ಆ ಶಾಲಾ ಕಾಲೇಜುಗಳಂತೂ ಇಡೀ ವಿಶ್ವಕ್ಕಾಗಿ ಇಲ್ಲ, ಒಬ್ಬ ತಂದೆಯದೇ ವಿಶ್ವ ವಿದ್ಯಾಲಯವಾಗಿದೆ, ಇಡೀ ವಿಶ್ವದ ಸದ್ಗತಿ ಮಾಡುತ್ತಾರೆ ಆದ್ದರಿಂದ ಅವೆಲ್ಲಾ ಸುಳ್ಳು ಹೆಸರುಗಳಾಗಿವೆ. ವಾಸ್ತವದಲ್ಲಿ ವಿಶ್ವ ವಿದ್ಯಾಲಯವು ಇದೊಂದೇ ಆಗಿದೆ. ಇದರ ಮೂಲಕವೇ ಎಲ್ಲರೂ ಮುಕ್ತಿ-ಜೀವನ್ಮುಕ್ತಿಯಲ್ಲಿ ಹೋಗುತ್ತಾರೆ ಅರ್ಥಾತ್ ಸುಖ, ಶಾಂತಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ ಅಂದಮೇಲೆ ಇದು ಇಡೀ ವಿಶ್ವಕ್ಕಾಗಿ ಆಯಿತಲ್ಲವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಹೆದರಬೇಡಿ ಇದು ತಿಳಿಸುವ ಮಾತಾಗಿದೆ. ಈ ರೀತಿಯೂ ಆಗುತ್ತದೆ, ಆಪತ್ಕಾಲದಲ್ಲಿ ಯಾರೂ ಯಾರ ಮಾತನ್ನೂ ಕೇಳುವುದಿಲ್ಲ. ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವು ನಡೆಯುತ್ತದೆ. ಮತ್ತ್ಯಾವುದೇ ಧರ್ಮದಲ್ಲಿ ಆರಂಭದಿಂದ ರಾಜ್ಯಭಾರ ಮಾಡುವುದಿಲ್ಲ. ಅವರಂತೂ ಕೇವಲ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ. ಯಾವಾಗ ಅವರ ಸಂಖ್ಯೆಯು ಲಕ್ಷಾಂತರ ಅಂದಾಜಿನಲ್ಲಿ ವೃದ್ಧಿಯಾಗುವುದೋ ಆಗ ರಾಜ್ಯಭಾರ ಮಾಡುವರು. ಇಲ್ಲಂತೂ ತಂದೆಯು ಇಡೀ ವಿಶ್ವಕ್ಕಾಗಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ. ಇದೂ ಸಹ ತಿಳಿಸುವ ಮಾತಾಗಿದೆ. ಈ ಪುರುಷೋತ್ತಮ ಸಂಗಮಯುಗದಲ್ಲಿಯೇ ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ. ತಂದೆಯು ತಿಳಿಸಿದ್ದಾರೆ - ಕೃಷ್ಣ, ನಾರಾಯಣ, ರಾಮ ಮೊದಲಾದವರ ಕಪ್ಪಾಗಿ ತೋರಿಸಿರುವ ಚಿತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ತಿಳಿಸಿ, ಕೃಷ್ಣನನ್ನು ಶ್ಯಾಮ ಸುಂದರನೆಂದು ಏಕೆ ಹೇಳುತ್ತಾರೆ? ಸುಂದರನಾಗಿದ್ದನು ಮತ್ತೆ ಹೇಗೆ ಶ್ಯಾಮನಾಗಿದ್ದಾನೆ? ಭಾರತವೇ ಸ್ವರ್ಗವಾಗಿತ್ತು, ಈಗ ನರಕವಾಗಿದೆ. ನರಕವೆಂದರೆ ಕಪ್ಪು, ಸ್ವರ್ಗವೆಂದರೆ ಸುಂದರ. ರಾಮ ರಾಜ್ಯಕ್ಕೆ ದಿನವೆಂತಲೂ, ರಾವಣ ರಾಜ್ಯಕ್ಕೆ ರಾತ್ರಿಯೆಂತಲೂ ಹೇಳಲಾಗುತ್ತದೆ ಅಂದಮೇಲೆ ದೇವತೆಗಳನ್ನು ಏಕೆ ಕಪ್ಪಾಗಿ ಮಾಡಿದ್ದಾರೆಂಬುದನ್ನು ನೀವು ತಿಳಿಸಬಹುದು. ತಂದೆಯು ತಿಳಿಸುತ್ತಾರೆ - ನೀವೀಗ ಪುರುಷೋತ್ತಮ ಸಂಗಮಯುಗದಲ್ಲಿದ್ದೀರಿ, ಅವರಂತೂ ಇಲ್ಲ. ನೀವಿಲ್ಲಿ ಕುಳಿತಿದ್ದೀರಲ್ಲವೆ. ಇಲ್ಲಿ ನೀವು ಸಂಗಮಯುಗದಲ್ಲಿದ್ದೀರಿ, ಆ ದೇವತೆಗಳಂತೆ ಪುರುಷೋತ್ತಮರಾಗುವ ಪುರುಷಾರ್ಥ ಮಾಡುತ್ತಿದ್ದೀರಿ. ವಿಕಾರಿ ಪತಿತ ಮನುಷ್ಯರೊಂದಿಗೆ ನಿಮ್ಮ ಯಾವುದೇ ಸಂಬಂಧವಿಲ್ಲ. ಹಾ! ಇನ್ನೂ ಕರ್ಮಾತೀತ ಸ್ಥಿತಿಯಾಗಿಲ್ಲ. ಆದ್ದರಿಂದ ಕರ್ಮ ಸಂಬಂಧಗಳ ಕಡೆಯೂ ಬುದ್ಧಿಯು ಹೋಗುತ್ತದೆ. ಕರ್ಮಾತೀತರಾಗುವುದಕ್ಕಾಗಿ ನೆನಪಿನ ಯಾತ್ರೆಯು ಬೇಕು. ತಂದೆಯು ತಿಳಿಸುತ್ತಾರೆ - ನೀವಾತ್ಮಗಳಾಗಿದ್ದೀರಿ, ಪರಮಾತ್ಮ ತಂದೆಯ ಜೊತೆ ನಿಮಗೆ ಎಷ್ಟೊಂದು ಪ್ರೀತಿಯಿರಬೇಕು, ಓಹೋ! ನಮಗೆ ತಂದೆಯು ಓದಿಸುತ್ತಾರೆಂದು. ಆದರೆ ಈ ಉಮ್ಮಂಗವು ಯಾರಿಗೂ ಇಲ್ಲ. ಮಾಯೆಯು ಪದೇ-ಪದೇ ದೇಹಾಭಿಮಾನದಲ್ಲಿ ತರುತ್ತದೆ. ಯಾವಾಗ ಶಿವ ತಂದೆಯು ನಾವಾತ್ಮಗಳೊಂದಿಗೆ ಮಾತನಾಡುತ್ತಿದ್ದಾರೆಂದು ನಿಮಗೆ ತಿಳಿದಿದೆ, ಅಂದಮೇಲೆ ಆ ಆಕರ್ಷಣೆ, ಆ ಖುಷಿಯಿರಬೇಕಲ್ಲವೆ. ಯಾವ ಸೂಜಿ (ಆತ್ಮ) ಯ ಮೇಲೆ ಸ್ವಲ್ಪವೂ ತುಕ್ಕು ಇರುವುದಿಲ್ಲವೋ ಅದನ್ನು ಅಯಸ್ಕಾಂತದ ಮುಂದಿಟ್ಟಾಗ ಬೇಗನೆ ಆಕರ್ಷಣೆಯಾಗಿ ಬಿಡುತ್ತದೆ. ಸ್ವಲ್ಪವೇನಾದರೂ ತುಕ್ಕು ಉಳಿದುಕೊಂಡಿದ್ದರೆ ಅದು ಹಿಡಿದುಕೊಳ್ಳುವುದಿಲ್ಲ, ಆಕರ್ಷಿತವಾಗುವುದಿಲ್ಲ. ಯಾವ ಕಡೆ ತುಕ್ಕು ಇರುವುದಿಲ್ಲವೋ ಆ ಕಡೆಯಿಂದ ಅಯಸ್ಕಾಂತವು ಸೆಳೆಯುತ್ತದೆ. ಮಕ್ಕಳಲ್ಲಿ ಯಾವಾಗ ನೆನಪಿನ ಯಾತ್ರೆಯಿರುವುದೋ ಆಗಲೇ ಆಕರ್ಷಣೆಯಾಗುವುದು. ತುಕ್ಕು ಇದ್ದರೆ ಸೆಳೆಯುವುದಿಲ್ಲ. ಪ್ರತಿಯೊಬ್ಬರೂ ತಿಳಿದುಕೊಳ್ಳಬಹುದು - ನಮ್ಮ ಸೂಜಿಯು ಸಂಪೂರ್ಣ ಪವಿತ್ರವಾಗಿ ಬಿಟ್ಟರೆ ಅದು ಆಕರ್ಷಿತವಾಗುವುದು. ಈಗ ಆಕರ್ಷಿತವಾಗುವುದಿಲ್ಲ ಏಕೆಂದರೆ ತುಕ್ಕು ಏರಿದೆ. ನೀವು ಬಹಳ ನೆನಪಿನಲ್ಲಿದ್ದಾಗಲೇ ವಿಕರ್ಮಗಳು ಭಸ್ಮವಾಗುತ್ತದೆ. ಒಂದುವೇಳೆ ಯಾವುದೇ ಪಾಪ ಮಾಡುತ್ತೀರೆಂದರೆ ಅದಕ್ಕೆ ನೂರು ಪಟ್ಟು ಶಿಕ್ಷೆಯಾಗುತ್ತದೆ. ತುಕ್ಕು ಏರುವ ಕಾರಣ ನೆನಪು ಮಾಡಲು ಆಗುವುದಿಲ್ಲ. ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ, ಇದನ್ನು ಮರೆಯುವ ಕಾರಣವೇ ತುಕ್ಕು ಏರುತ್ತದೆ. ಆದ್ದರಿಂದ ಆ ಆಕರ್ಷಣೆ, ಆ ಪ್ರೀತಿಯಿರುವುದಿಲ್ಲ. ತುಕ್ಕು ಇಳಿದಿದ್ದರೆ ಪ್ರೀತಿ ಮತ್ತು ಖುಷಿಯು ಇರುತ್ತದೆ. ಚಹರೆಯು ಪ್ರಸನ್ನಚಿತ್ತವಾಗಿರುತ್ತದೆ. ಭವಿಷ್ಯದಲ್ಲಿ ನೀವು ಹೀಗೆ ಆಗುವಿರಿ. ಸರ್ವೀಸ್ ಮಾಡದಿದ್ದರೆ ಹಳೆಯ ಕಳೆದು ಹೋದ ಮಾತುಗಳನ್ನೇ ಮಾತನಾಡುತ್ತಿರುತ್ತಾರೆ. ತಂದೆಯೊಂದಿಗೆ ಬುದ್ಧಿಯೋಗವನ್ನೇ ಮುರಿದು ಬಿಡುತ್ತಾರೆ. ಏನೆಲ್ಲಾ ಹೊಳಪಿತ್ತೊ ಅದೂ ಸಹ ಮಾಯವಾಗುತ್ತದೆ. ತಂದೆಯೊಂದಿಗೆ ಪ್ರೀತಿಯಿರುವುದಿಲ್ಲ. ಯಾರು ಚೆನ್ನಾಗಿ ತಂದೆಯನ್ನು ನೆನಪು ಮಾಡುವರೋ ಅವರಿಗೆ ಪ್ರೀತಿಯಿರುವುದು. ತಂದೆಗೂ ಸಹ ಅವರೊಂದಿಗೆ ಆಕರ್ಷಣೆಯಾಗುವುದು. ಈ ಮಗು ಚೆನ್ನಾಗಿ ಸೇವೆ ಮಾಡುತ್ತದೆ ಮತ್ತು ಯೋಗದಲ್ಲಿರುತ್ತದೆ ಎಂದು ತಂದೆಯ ಪ್ರೀತಿಯು ಅವರ ಮೇಲಿರುತ್ತದೆ. ಅವರು ತನ್ನಮೇಲೆ ಗಮನವನ್ನಿಡುತ್ತಾರೆ, ನನ್ನಿಂದ ಯಾವುದೇ ಪಾಪವಾಗಲಿಲ್ಲವೆ? ಒಂದುವೇಳೆ ನೆನಪು ಮಾಡಲೇ ಇಲ್ಲವೆಂದರೆ ತುಕ್ಕು ಹೇಗೆ ಬಿಡುತ್ತದೆ? ಆದ್ದರಿಂದ ಮಕ್ಕಳೇ, ಚಾರ್ಟನ್ನಿಡಿ ಆಗ ತುಕ್ಕು ಇಳಿಯುವುದೆಂದು ತಂದೆಯು ಹೇಳುತ್ತಾರೆ. ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕೆಂದರೆ ತುಕ್ಕನ್ನು ಇಳಿಸಿಕೊಳ್ಳಬೇಕು. ಇಳಿಯುತ್ತದೆ ಆದರೆ ಮತ್ತೆ ಏರುತ್ತದೆ. ಇದರಿಂದ ನೂರುಪಟ್ಟು ಶಿಕ್ಷೆಯಾಗುವುದು. ತಂದೆಯನ್ನು ನೆನಪು ಮಾಡಲಿಲ್ಲವೆಂದರೆ ಯಾವುದಾದರೊಂದು ಪಾಪವನ್ನು ಮಾಡಿ ಬಿಡುತ್ತಾರೆ. ತುಕ್ಕು ಇಳಿಯದ ಹೊರತು ನೀವು ನನ್ನ ಬಳಿ ಬರಲು ಸಾಧ್ಯವಿಲ್ಲ, ಇಲ್ಲವೆಂದರೆ ಶಿಕ್ಷೆಯನ್ನನುಭವಿಸಬೇಕಾಗುವುದೆಂದು ತಂದೆಯು ತಿಳಿಸುತ್ತಾರೆ. ಪೆಟ್ಟು ಸಿಗುವುದು, ಪದವಿಯೂ ಭ್ರಷ್ಟವಾಗುವುದು ಅಂದಮೇಲೆ ತಂದೆಯಿಂದ ಆಸ್ತಿಯೇನು ಸಿಕ್ಕಿತು? ಇನ್ನೂ ತುಕ್ಕು ಏರುವಂತಹ ಯಾವುದೇ ಕರ್ಮವನ್ನು ಮಾಡಬೇಡಿ. ಮೊದಲು ತಮ್ಮ ತುಕ್ಕನ್ನು ಇಳಿಸಿಕೊಳ್ಳುವ ಆಲೋಚನೆ ಮಾಡಿ. ತನ್ನ ಬಗ್ಗೆ ಆಲೋಚಿಸಲಿಲ್ಲವೆಂದರೆ ಇವರ ಅದೃಷ್ಟದಲ್ಲಿಲ್ಲವೆಂದು ತಂದೆಯು ತಿಳಿಯುತ್ತಾರೆ. ವಿದ್ಯಾರ್ಹತೆಯೂ ಬೇಕಲ್ಲವೆ. ಒಳ್ಳೆಯ ನಡವಳಿಕೆ ಬೇಕು, ಲಕ್ಷ್ಮೀ-ನಾರಾಯಣರ ನಡವಳಿಕೆಯ ಗಾಯನವಿದೆ. ಈ ಸಮಯದ ಮನುಷ್ಯರು ಅವರ ಮುಂದೆ ತನ್ನ ನಡವಳಿಕೆಯ ವರ್ಣನೆ ಮಾಡುತ್ತಾರೆ. ಶಿವ ತಂದೆಯನ್ನಂತೂ ತಿಳಿದುಕೊಂಡೇ ಇಲ್ಲ. ಸದ್ಗತಿ ಮಾಡುವವರು ಅವರೇ ಅಲ್ಲವೆ. ಆದರೆ ಸನ್ಯಾಸಿಗಳ ಬಳಿ ಹೋಗುತ್ತಾರೆ, ಸರ್ವರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ. ತಂದೆಯೇ ಸ್ವರ್ಗದ ಸ್ಥಾಪನೆ ಮಾಡುತ್ತಾರೆ ಮತ್ತೆ ಕೆಳಗಿಳಿಯಲೂ ಬೇಕಾಗಿದೆ. ತಂದೆಯ ವಿನಃ ಯಾರೂ ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ. ಮನುಷ್ಯರು ಆಳವಾದ ಗುಣಿಯಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ. ಇದಕ್ಕಿಂತಲೂ ಗಂಗೆಯಲ್ಲಿ ಹೋಗಿ ಕುಳಿತುಕೊಂಡರೆ ಸ್ವಚ್ಛವಾಗುವರು ಏಕೆಂದರೆ ಗಂಗೆಯು ಪತಿತ-ಪಾವನಿ ಎಂದು ಹೇಳುತ್ತಾರಲ್ಲವೆ. ಮನುಷ್ಯರು ಶಾಂತಿಯನ್ನು ಬಯಸುತ್ತಾರೆ, ಆದರೆ ಅಂದಾಗ ಅವರು ಯಾವಾಗ ಮನೆಗೆ ಹೋಗುವರೋ ಆಗಲೇ ಪಾತ್ರವು ಪೂರ್ಣವಾಗುವುದು. ನಾವಾತ್ಮಗಳ ಮನೆಯು ನಿರ್ವಾಣಧಾಮವಾಗಿದೆ. ಇಲ್ಲಿ ಶಾಂತಿಯು ಎಲ್ಲಿಂದ ಬರುವುದು? ತಪಸ್ಸು ಮಾಡುತ್ತಾರೆ, ಅದೂ ಸಹ ಕರ್ಮವಾಯಿತಲ್ಲವೆ. ಭಲೆ ಅದರಿಂದ ಶಾಂತಿಯಾಗಿ ಕುಳಿತುಕೊಳ್ಳಬಹುದು ಆದರೆ ಶಿವ ತಂದೆಯನ್ನಂತೂ ತಿಳಿದುಕೊಂಡೇ ಇಲ್ಲ. ಅದೆಲ್ಲವೂ ಭಕ್ತಿಮಾರ್ಗವಾಗಿದೆ. ಪುರುಷೋತ್ತಮ ಸಂಗಮಯುಗವು ಇದೊಂದೇ ಆಗಿದೆ, ಯಾವಾಗ ತಂದೆಯು ಬರುತ್ತಾರೆ. ಆತ್ಮವು ಸ್ವಚ್ಛವಾಗಿ ಮುಕ್ತಿ-ಜೀವನ್ಮುಕ್ತಿಯಲ್ಲಿ ಹೊರಟು ಹೋಗುತ್ತದೆ. ಯಾರು ಪರಿಶ್ರಮ ಪಡುವರೋ ಅವರು ರಾಜ್ಯಭಾರ ಮಾಡುತ್ತಾರೆ. ಯಾರು ಪರಿಶ್ರಮ ಮಾಡುವುದಿಲ್ಲವೋ ಅವರು ಶಿಕ್ಷೆಗಳನ್ನನುಭವಿಸುತ್ತಾರೆ. ಆರಂಭದಲ್ಲಿಯೂ ಶಿಕ್ಷೆಗಳ ಸಾಕ್ಷಾತ್ಕಾರ ಮಾಡಿಸಿದರು, ಅದೇ ರೀತಿ ಅಂತಿಮದಲ್ಲಿಯೂ ಸಾಕ್ಷಾತ್ಕಾರವಾಗುವುದು ಆಗ ನಾವು ಶ್ರೀಮತದಂತೆ ನಡೆಯಲಿಲ್ಲ ಆದ್ದರಿಂದ ಈ ಸ್ಥಿತಿಯಾಯಿತೆಂಬುದನ್ನು ನೋಡುತ್ತೀರಿ. ಆದ್ದರಿಂದ ಮಕ್ಕಳು ಕಲ್ಯಾಣಕಾರಿಗಳಾಗಬೇಕಾಗಿದೆ. ತಂದೆ ಮತ್ತು ರಚನೆಯ ಪರಿಚಯವನ್ನು ಕೊಡಬೇಕಾಗಿದೆ. ಹೇಗೆ ಸೂಜಿಯನ್ನು ಚಂದನದ ತೈಲದಲ್ಲಿ ಹಾಕಿದಾಗ ತುಕ್ಕು ಬಿಟ್ಟು ಹೋಗುತ್ತದೆಯೋ ಹಾಗೆಯೇ ತಂದೆಯ ನೆನಪಿನಲ್ಲಿರುವುದರಿಂದ ತುಕ್ಕು ಬಿಡುತ್ತದೆ, ಇಲ್ಲದಿದ್ದರೆ ತಂದೆಯ ಪ್ರತಿ ಆ ಪ್ರೀತಿ, ಆ ಆಕರ್ಷಣೆಯಿರುವುದಿಲ್ಲ. ಪ್ರೀತಿಯೆಲ್ಲವೂ ಮಿತ್ರ ಸಂಬಂಧಿಗಳು ಮೊದಲಾದವರ ಕಡೆ ಹೊರಟು ಹೋಗುತ್ತದೆ. ಹೋಗಿ ಮಿತ್ರ ಸಂಬಂಧಿಗಳ ಬಳಿ ಇರುತ್ತಾರೆ. ತುಕ್ಕು ಹಿಡಿದಿರುವ ಆ ಸಂಗವೆಲ್ಲಿ ಮತ್ತು ಈ ಸಂಗವೆಲ್ಲಿ! ತುಕ್ಕು ಹಿಡಿದಿರುವ ವಸ್ತುವಿನ ಜೊತೆಯಲ್ಲಿದ್ದರೆ ಅದಕ್ಕೂ ತುಕ್ಕು ಹಿಡಿದು ಬಿಡುವುದು. ತುಕ್ಕನ್ನು ಇಳಿಸುವುದಕ್ಕಾಗಿ ತಂದೆಯು ಬರುತ್ತಾರೆ. ನೆನಪಿನಿಂದಲೇ ಪಾವನರಾಗುತ್ತೀರಿ. ಅರ್ಧಕಲ್ಪದಿಂದ ಬಹಳ ಜೋರಾಗಿ ತುಕ್ಕು ಹಿಡಿದಿದೆ, ಈಗ ಅಯಸ್ಕಾಂತವಾದ ತಂದೆಯು ಹೇಳುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ. ಎಷ್ಟು ನನ್ನ ಜೊತೆ ನಿಮ್ಮ ಬುದ್ಧಿಯೋಗವಿರುವುದೋ ಅಷ್ಟು ತುಕ್ಕು ಕಳೆಯುವುದು. ಹೊಸ ಪ್ರಪಂಚವಂತೂ ಬರಲೇಬೇಕಾಗಿದೆ. ಸತ್ಯಯುಗದಲ್ಲಿ ಮೊಟ್ಟ ಮೊದಲಿಗೆ ದೇವಿ-ದೇವತೆಗಳ ಬಹಳ ಚಿಕ್ಕ ವೃಕ್ಷವಿರುತ್ತದೆ ನಂತರ ವೃದ್ಧಿಯಾಗುತ್ತದೆ. ಇಲ್ಲಿಂದಲೇ ನಿಮ್ಮ ಬಳಿ ಬಂದು ಪುರುಷಾರ್ಥ ಮಾಡುತ್ತಿರುತ್ತಾರೆ. ಯಾರೂ ಮೇಲಿಂದ ಬರುವುದಿಲ್ಲ. ಹೇಗೆ ಅನ್ಯ ಧರ್ಮದವರ ಅನುಯಾಯಿಗಳು ಮೇಲಿಂದ ಧರ್ಮಪಿತರ ಹಿಂದೆ ಬರುತ್ತಾರೆ, ಇಲ್ಲಂತೂ ನಿಮ್ಮ ರಾಜಧಾನಿಯು ತಯಾರಾಗುತ್ತಿದೆ. ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ ಮತ್ತು ತಂದೆಯ ಶ್ರೀಮತದಂತೆ ನಡೆಯುವುದರ ಮೇಲಿದೆ. ಬುದ್ಧಿಯೋಗವು ಹೊರಗಡೆ ಹೋಗುತ್ತಿದೆಯೆಂದರೂ ಸಹ ತುಕ್ಕು ಹಿಡಿಯುತ್ತದೆ. ಇಲ್ಲಿಗೆ ಬರುತ್ತೀರೆಂದರೆ ಎಲ್ಲಾ ಲೆಕ್ಕಾಚಾರಗಳನ್ನು ಮುಗಿಸಿ ಜೀವಿಸಿದ್ದಂತೆಯೇ ಎಲ್ಲವನ್ನೂ ಸಮಾಪ್ತಿ ಮಾಡಿಕೊಂಡು ಬರುತ್ತಾರೆ. ಸನ್ಯಾಸಿಗಳೂ ಸಹ ಸನ್ಯಾಸ ಮಾಡುತ್ತಾರೆ ಆದರೂ ಬಹಳಷ್ಟು ಸಮಯದವರೆಗೆ ಎಲ್ಲವೂ ನೆನಪಿಗೆ ಬರುತ್ತಿರುತ್ತದೆ.

ನೀವು ಮಕ್ಕಳಿಗೆ ತಿಳಿದಿದೆ, ಈಗ ನಮಗೆ ಸತ್ಯ ತಂದೆಯ ಸಂಗವು ಸಿಗುತ್ತದೆ. ನಾವು ನಮ್ಮ ತಂದೆಯ ನೆನಪಿನಲ್ಲಿಯೇ ಇರುತ್ತೇವೆ, ಮಿತ್ರ ಸಂಬಂಧಿಗಳು ಮೊದಲಾದವರನ್ನೂ ಅರಿತುಕೊಂಡಿದ್ದೀರಲ್ಲವೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ, ಕರ್ಮ ಮಾಡುತ್ತಾ ತಂದೆಯನ್ನು ನೆನಪು ಮಾಡುತ್ತಾರೆ. ಪವಿತ್ರರೂ ಆಗಬೇಕು, ಅನ್ಯರಿಗೂ ಕಲಿಸಿಕೊಡಬೇಕಾಗಿದೆ. ಯಾರ ಅದೃಷ್ಟದಲ್ಲಿರುವುದೋ ಅವರೇ ನಡೆಯತೊಡಗುತ್ತಾರೆ. ಬ್ರಾಹ್ಮಣ ಕುಲದವರೇ ಅಲ್ಲವೆಂದರೆ ದೇವತಾ ಕುಲದಲ್ಲಿ ಹೇಗೆ ಬರುವರು? ಯಾರದೇ ಬುದ್ಧಿಯಲ್ಲಿ ಸಹಜವಾಗಿ ಕುಳಿತುಕೊಳ್ಳಲಿ ಎಂದು ತಂದೆಯು ಬಹಳ ಸಹಜವಾದ ವಿಚಾರಗಳನ್ನು ತಿಳಿಸುತ್ತಾರೆ. ವಿನಾಶ ಕಾಲೇ ವಿಪರೀತ ಬುದ್ಧಿಯವರ ಚಿತ್ರವೂ ಸ್ಪಷ್ಟವಾಗಿದೆ. ಈಗ ಆ ಸ್ವರ್ಗವಂತೂ ಇಲ್ಲ, ದೈವೀ ರಾಜಧಾನಿಯಿತ್ತು ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತಿತ್ತು. ಈಗಂತೂ ಪಂಚಾಯಿತಿ ರಾಜ್ಯವಾಗಿದೆ. ಇದನ್ನು ತಿಳಿಸಿದರೂ ಪರವಾಗಿಲ್ಲ ಆದರೆ ತುಕ್ಕು ಕಳೆದಾಗಲೇ ಯಾರಿಗಾದರೂ ಬಾಣವು ನಾಟುವುದು. ಮೊದಲು ತನ್ನ ತುಕ್ಕನ್ನು ತೆಗೆಯುವ ಪ್ರಯತ್ನ ಪಡಬೇಕು. ತನ್ನ ಚಲನೆಯನ್ನು ನೋಡಿಕೊಳ್ಳಬೇಕು - ಹಗಲು-ರಾತ್ರಿ ನಾನು ಏನು ಮಾಡುತ್ತೇನೆ? ಅಡಿಗೆ ಮನೆಯಲ್ಲಿ ಭೋಜನವನ್ನು ತಯಾರಿಸುತ್ತಾ, ರೊಟ್ಟಿಯನ್ನು ಮಾಡುತ್ತಲೂ ಎಷ್ಟು ಸಾಧ್ಯವೋ ಅಷ್ಟು ನೆನಪಿನಲ್ಲಿರಿ. ತಿರುಗಾಡಲು ಹೋಗುತ್ತೀರೆಂದರೂ ನೆನಪಿನಲ್ಲಿರಿ. ತಂದೆಯು ಎಲ್ಲರ ಸ್ಥಿತಿಯನ್ನು ತಿಳಿದುಕೊಂಡಿದ್ದಾರಲ್ಲವೆ. ಪರಚಿಂತನೆ ಮಾಡುತ್ತಾರೆಂದರೆ ತುಕ್ಕು ಇನ್ನೂ ಏರುತ್ತಾ ಹೋಗುತ್ತದೆ. ಆದ್ದರಿಂದ ಪರಚಿಂತನೆಯ ಯಾವುದೇ ಮಾತುಗಳನ್ನು ಕೇಳಬೇಡಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಹೇಗೆ ತಂದೆಯು ಶಿಕ್ಷಕನ ರೂಪದಲ್ಲಿ ಓದಿಸಿ ಎಲ್ಲರ ಮೇಲೆ ದಯೆ ತೋರಿಸುತ್ತಾರೆ ಹಾಗೆಯೇ ತಾವೂ ಸಹ ತನ್ನ ಹಾಗೂ ಅನ್ಯರ ಮೇಲೂ ದಯೆ ತೋರಬೇಕಾಗಿದೆ. ವಿದ್ಯೆ ಮತ್ತು ಶ್ರೀಮತದ ಮೇಲೆ ಪೂರ್ಣ ಗಮನವನ್ನಿಡಬೇಕು, ತನ್ನ ಚಲನೆಯನ್ನು ಸುಧಾರಣೆ ಮಾಡಿಕೊಳ್ಳಬೇಕಾಗಿದೆ.

2. ಪರಸ್ಪರ ಯಾವುದೇ ಹಳೆಯ ಕಳೆದು ಹೋದ ಪರಚಿಂತನೆಯ ಮಾತುಗಳನ್ನಾಡುತ್ತಾ ತಂದೆಯಿಂದ ಬುದ್ಧಿಯೋಗವನ್ನು ಕತ್ತರಿಸಬಾರದು. ಯಾವುದೇ ಪಾಪ ಕರ್ಮವನ್ನು ಮಾಡಬಾರದು. ನೆನಪಿನಲ್ಲಿದ್ದು ತುಕ್ಕನ್ನು ಇಳಿಸಿಕೊಳ್ಳಬೇಕಾಗಿದೆ.

ವರದಾನ:
ಧೃಡತೆಯ ಮೂಲಕ ಬಂಜರು ಭೂಮಿಯಲ್ಲಿಯೂ ಫಲವನ್ನು ಉತ್ಪಾದಿಸುವ ಸಫಲತಾ ಸ್ವರೂಪ ಭವ.

ಯಾವುದೇ ಮಾತಿನಲ್ಲಿ ಸಫಲತಾ ಸ್ವರೂಪರಾಗುವುದಕ್ಕಾಗಿ ಧೃಡತೆ ಮತ್ತು ಸ್ನೇಹದ ಸಂಘಟನೆಯಿರಬೇಕು. ಈ ಧೃಡತೆಯು ಬಂಜರು ಭೂಮಿಯಲ್ಲಿಯೂ ಫಲವನ್ನು ಉತ್ಪನ್ನ ಮಾಡಿ ಬಿಡುತ್ತದೆ. ಹೇಗೆ ಇತ್ತೀಚೆಗೆ ವಿಜ್ಞಾನಿಗಳು ಮರಳಿನಲ್ಲಿಯೂ ಫಲವನ್ನು ಉತ್ಪಾದಿಸುವ ಪ್ರಯತ್ನದಲ್ಲಿದ್ದಾರೆ, ಹಾಗೆಯೇ ತಾವು ಶಾಂತಿಯ ಶಕ್ತಿಯ ಮೂಲಕ ಸ್ನೇಹದ ನೀರನ್ನು ಕೊಡುತ್ತಾ ಫಲೀಭೂತರಾಗಿರಿ. ಧೃಡತೆಯ ಮೂಲಕ ಭರವಸೆಯಿಲ್ಲದಿರುವವರಿಗೂ ಸಹ ಭರವಸೆಯ ದೀಪಕವನ್ನು ಬೆಳಗಿಸಬಹುದು, ಏಕೆಂದರೆ ಸಾಹಸದಿಂದ ತಂದೆಯ ಸಹಯೋಗವು ಸಿಕ್ಕಿ ಬಿಡುತ್ತದೆ.

ಸ್ಲೋಗನ್:
ತಮ್ಮನ್ನು ಸದಾ ಪ್ರಭುವಿನ ಉಡುಗೊರೆಯೆಂದು ತಿಳಿದು ನಡೆಯುತ್ತೀರೆಂದರೆ ಕರ್ಮದಲ್ಲಿ ಆತ್ಮೀಯತೆಯು ಬರುತ್ತದೆ.

ಅವ್ಯಕ್ತ ಸೂಚನೆ:- ಈಗ ಲಗನ್ನಿನ (ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೋಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.

ಸಾರಥಿ ಅರ್ಥಾತ್ ಆತ್ಮ-ಅಭಿಮಾನಿ ಏಕೆಂದರೆ ಆತ್ಮವೇ ಸಾರಥಿಯಾಗಿದೆ. ಬ್ರಹ್ಮಾ ತಂದೆಯು ಈ ವಿಧಿಯಿಂದ ನಂಬರ್ಒನ್ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಂಡರು, ಅಂದಾಗ ಫಾಲೋ ಫಾದರ್ ಮಾಡಬೇಕು. ಹೇಗೆ ತಂದೆಯು ದೇಹವನ್ನು ಅಧೀನ ಮಾಡಿಕೊಂಡು ಪ್ರವೇಶ ಮಾಡುತ್ತಾರೆ ಅರ್ಥಾತ್ ಸಾರಥಿಯಾಗುತ್ತಾರೆ ದೇಹದ ಅಧೀನನಾಗುವುದಿಲ್ಲ, ಅದಕ್ಕೆ ಭಿನ್ನ ಹಾಗು ಪ್ರಿಯರಾಗಿದ್ದಾರೆ. ಅದರಂತೆಯೇ ತಾವೆಲ್ಲಾ ಬ್ರಾಹ್ಮಣರು ಸಹ ತಂದೆಯ ಸಮಾನ ಸಾರಥಿಯ ಸ್ಥಿತಿಯಲ್ಲಿ ಸ್ಥಿತರಾಗಿ. ಸಾರಥಿ ಸ್ವತಃ ಸಾಕ್ಷಿಯಾಗಿ ಏನೇ ಮಾಡಿದರು, ನೋಡಿದರು, ಕೇಳಿದರು ಹಾಗು ಎಲ್ಲವನ್ನು ಮಾಡುತ್ತ ಮಾಯೆಯ ಪ್ರಭಾವದಿಂದ ನಿರ್ಲಿಪ್ತವಾಗಿರುತ್ತಾರೆ.