13.11.24 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ –
ಎಲ್ಲರಿಗೂ ಮೊಟ್ಟಮೊದಲು ತಂದೆಯ ಪರಿಚಯದ ಪಾಠವನ್ನು ಪಕ್ಕಾ ಮಾಡಿಸಿ, ತಾವಾತ್ಮರು ಸಹೋದರ-
ಸಹೋದರರಾಗಿದ್ದೀರಿ"
ಪ್ರಶ್ನೆ:
ಯಾವ ಒಂದು
ಮಾತಿನಲ್ಲಿ ಶ್ರೀಮತವು ಮನುಷ್ಯ ಮತಕ್ಕೆ ಸಂಪೂರ್ಣ ವಿಪರೀತವಾಗಿದೆ?
ಉತ್ತರ:
ನಾವು
ಮೋಕ್ಷಮತದಲ್ಲಿ ಹೊರಟುಹೋಗುತ್ತೇವೆ ಎಂದು ಮನುಷ್ಯ ಮತವು ಹೇಳುತ್ತದೆ ಆದರೆ ಶ್ರೀಮತವು ಹೇಳುತ್ತದೆ
– ಈ ನಾಟಕವು ಅನಾದಿ-ಅವಿನಾಶಿಯಾಗಿದೆ, ಮೋಕ್ಷವು ಯಾರಿಗೂ ಸಿಗಲು ಸಾಧ್ಯವಿಲ್ಲ. ಈ
ಪಾತ್ರವನ್ನಭಿನಯಿಸುವುದು ಇಷ್ಟವಿಲ್ಲವೆಂದು ಭಲೆ ಯಾರಾದರೂ ಹೇಳಲಿ ಆದರೆ ಇದರಲ್ಲಿ ಏನೂ ಮಾಡಲೂ
ಸಾಧ್ಯವಿಲ್ಲ, ಪಾತ್ರವನ್ನಭಿನಯಿಸಲೇ ಬೇಕಾಗಿದೆ, ಶ್ರೀಮತವೇ ನಿಮ್ಮನ್ನು ಶ್ರೇಷ್ಠರನ್ನಾಗಿ
ಮಾಡುತ್ತದೆ. ಮನುಷ್ಯಮತವಂತೂ ಅನೇಕ ಪ್ರಕಾರದ್ದಾಗಿದೆ.
ಓಂ ಶಾಂತಿ.
ಈಗ ಇದನ್ನಂತೂ ಮಕ್ಕಳು ತಿಳಿದುಕೊಂಡಿದ್ದೀರಿ – ನಾವು ತಂದೆಯ ಸನ್ಮುಖದಲ್ಲಿ ಕುಳಿತುಕೊಂಡಿದ್ದೇವೆ,
ತಂದೆಗೂ ಗೊತ್ತಿದೆ - ಮಕ್ಕಳು ನನ್ನ ಸನ್ಮುಖದಲ್ಲಿ ಕುಳಿತಿದ್ದಾರೆ. ಇದೂ ಸಹ ನೀವು ಮಕ್ಕಳಿಗೆ
ತಿಳಿದಿದೆ - ತಂದೆಯು ನಮಗೆ ಶಿಕ್ಷಣವನ್ನು ಕೊಡುತ್ತಾರೆ, ಅದನ್ನು ಮತ್ತೆ ಅನ್ಯರಿಗೆ ಕೊಡಬೇಕಾಗಿದೆ.
ಮೊಟ್ಟಮೊದಲಿಗೆ ತಂದೆಯ ಪರಿಚಯವನ್ನೇ ಕೊಡಬೇಕಾಗಿದೆ ಏಕೆಂದರೆ ತಂದೆಯನ್ನು ಮತ್ತು ತಂದೆಯ
ಶಿಕ್ಷಣವನ್ನು ಮರೆತಿದ್ದಾರೆ. ಈಗ ತಂದೆಯು ಯಾವ ವಿದ್ಯೆಯನ್ನು ಓದಿಸುತ್ತಾರೆಯೋ ಇದು ಮತ್ತೆ 5000
ವರ್ಷಗಳ ನಂತರ ಸಿಗುತ್ತದೆ. ಈ ಜ್ಞಾನವು ಮತ್ತ್ಯಾರಿಗೂ ಇಲ್ಲ. ಮುಖ್ಯವಾದುದು ತಂದೆಯ ಪರಿಚಯವಾಯಿತು,
ಮತ್ತೆ ಇದೆಲ್ಲವನ್ನೂ ತಿಳಿಸಬೇಕಾಗಿದೆ - ನಾವೆಲ್ಲರೂ ಸಹೋದರ- ಸಹೋದರರಾಗಿದ್ದೇವೆ. ಇಡೀ ಪ್ರಪಂಚದ
ಆತ್ಮಗಳೆಲ್ಲರೂ ಪರಸ್ಪರ ಸಹೋದರ- ಸಹೋದರರಾಗಿದ್ದಾರೆ. ಎಲ್ಲರೂ ತಮಗೆ ಸಿಕ್ಕಿರುವ ಪಾತ್ರವನ್ನು ಈ
ಶರೀರದ ಮೂಲಕ ಅಭಿನಯಿಸುತ್ತಾರೆ. ಈಗಂತೂ ತಂದೆಯೇ ಹೊಸಪ್ರಪಂಚದಲ್ಲಿ ಕರೆದುಕೊಂಡು ಹೋಗಲು
ಬಂದಿದ್ದಾರೆ ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಈಗ ನಾವೆಲ್ಲಾ ಸಹೋದರರು ಪತಿತರಾಗಿದ್ದೇವೆ,
ಒಬ್ಬರೂ ಪಾವನರಿಲ್ಲ. ಎಲ್ಲಾ ಪತಿತರನ್ನು- ಪಾವನರನ್ನಾಗಿ ಮಾಡುವವರು ಒಬ್ಬ ತಂದೆಯಾಗಿದ್ದಾರೆ. ಇದು
ಪತಿತ ವಿಕಾರಿ ರಾವಣ ಪ್ರಪಂಚವಾಗಿದೆ. ರಾವಣನ ಅರ್ಥವೇ ಆಗಿದೆ - 5 ವಿಕಾರಗಳು ಸ್ತ್ರೀಯಲ್ಲಿ, 5
ವಿಕಾರಗಳು ಪುರುಷನಲ್ಲಿ. ತಂದೆಯು ಬಹಳ ಸರಳ ರೀತಿಯಲ್ಲಿ ತಿಳಿಸುತ್ತಾರೆ ಅಂದಾಗ ಮೊಟ್ಟಮೊದಲಿಗೆ
ಇದನ್ನು ತಿಳಿಸಿ - ನಾವಾತ್ಮಗಳ ತಂದೆಯು ಅವರಾಗಿದ್ದಾರೆ, ನಾವೆಲ್ಲರೂ ಸಹೋದರರಾಗಿದ್ದೇವೆ, ಇದು
ಸರಿಯೇ ಎಂದು ಕೇಳಿ ಬರೆಯಿರಿ - ನಾವೆಲ್ಲರೂ ಸಹೋದರರಾಗಿದ್ದೇವೆ, ನಮ್ಮ ತಂದೆಯು ಒಬ್ಬರೇ ಆಗಿದ್ದಾರೆ,
ನಾವೆಲ್ಲಾ ಆತ್ಮಗಳ ತಂದೆಯು ಪರಮಾತ್ಮನಾಗಿದ್ದಾರೆ, ಅವರಿಗೆ ತಂದೆಯೆಂದು ಹೇಳಲಾಗುತ್ತದೆ. ಇದನ್ನು
ಬುದ್ದಿಯಲ್ಲಿ ಪಕ್ಕಾ ಕುಳ್ಳರಿಸಿ, ಅದರಿಂದ ಸರ್ವವ್ಯಾಪಿಯ ಕೊಳಕು ಹೊರಟುಹೋಗಲಿ. ಮೊದಲಿಗೆ
ಪರಮಾತ್ಮನ ಪಾಠವನ್ನು ಓದಿಸಿ, ತಿಳಿಸಿ, ಇದನ್ನು ಮೊದಲು ಬಹಳ ಚೆನ್ನಾಗಿ ಬರೆಯಿರಿ – ಮೊದಲು
ಸರ್ವವ್ಯಾಪಿಯೆಂದು ಹೇಳುತ್ತಿದ್ದೆವು ಆದರೆ ಸರ್ವವ್ಯಾಪಿಯಲ್ಲ ಎಂಬುದನ್ನು ಈಗ ತಿಳಿದುಕೊಂಡಿದ್ದೇವೆ.
ನಾವೆಲ್ಲರೂ ಸಹೋದರರಾಗಿದ್ದೇವೆ. ಗಾಡ್ ಫಾದರ್, ಪರಮಪಿತ ಪರಮಾತ್ಮ, ಅಲ್ಲಾ ಎಂದು ಎಲ್ಲಾ ಆತ್ಮಗಳೂ
ಹೇಳುತ್ತಾರೆ ಅಂದಮೇಲೆ ಮೊದಲು ಈ ನಿಶ್ಚಯವನ್ನು ಇದರಲ್ಲಿ ಕುಳ್ಳರಿಸಬೇಕು - ನಾವಾತ್ಮಗಳಾಗಿದ್ದೇವೆ,
ಪರಮಾತ್ಮನಲ್ಲ, ನಮ್ಮಲ್ಲಿ ಪರಮಾತ್ಮನು ವ್ಯಾಪಕವಾಗಿಲ್ಲ, ಎಲ್ಲರಲ್ಲಿಯೂ ಆತ್ಮವು ವ್ಯಾಪಕವಾಗಿದೆ,
ಆತ್ಮವು ಶರೀರದ ಆಧಾರದಿಂದ ಪಾತ್ರವನ್ನಭಿನಯಿಸುತ್ತದೆ. ಇದನ್ನು ಪಕ್ಕಾ ಮಾಡಿಸಿ. ಮತ್ತೆ ಆ ತಂದೆಯು
ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ತಂದೆಯೇ ಶಿಕ್ಷಕನ ರೂಪದಲ್ಲಿ
ಕುಳಿತು ತಿಳಿಸುತ್ತಾರೆ, ಲಕ್ಷಾಂತರ ವರ್ಷಗಳ ಮಾತಿಲ್ಲ. ಈ ಚಕ್ರವು ಅನಾದಿ ಮಾಡಿ-ಮಾಡಲ್ಪಟ್ಟಂತಹ
ನಾಟಕವಾಗಿದೆ. ಒಂದೇ ರೀತಿ ಹೇಗೆಂಬುದನ್ನು ಅರಿತುಕೊಳ್ಳಬೇಕಾಗಿದೆ. ಸತ್ಯಯುಗ-ತ್ರೇತಾಯುಗವು
ಕಳೆದುಹೋಯಿತು, ಇದನ್ನು ಬರೆದುಕೊಳ್ಳಿ - ಅದಕ್ಕೆ ಸ್ವರ್ಗ ಮತ್ತು ಸೆಮಿ-ಸ್ವರ್ಗವೆಂದು
ಹೇಳಲಾಗುತ್ತದೆ. ಅಲ್ಲಿ ದೇವಿ-ದೇವತೆಗಳ ರಾಜ್ಯವು ನಡೆಯುತ್ತದೆ. ಸತ್ಯಯುಗದಲ್ಲಿ 16
ಕಲೆಗಳಿರುತ್ತವೆ, ತ್ರೇತಾಯುಗದಲ್ಲಿ 14 ಕಲೆಗಳು, ಸತ್ಯಯುಗದ ಪ್ರಭಾವವು ಬಹಳ ಭಾರಿಯಾಗಿದೆ, ಹೆಸರೇ
ಆಗಿದೆ ಸ್ವರ್ಗ, ಹೆವೆನ್, ಹೊಸಪ್ರಪಂಚವೆಂದು ಸತ್ಯಯುಗಕ್ಕೆ ಹೇಳಲಾಗುತ್ತದೆ. ಅದರ ಮಹಿಮೆಯನ್ನೇ
ಮಾಡಬೇಕಾಗಿದೆ. ಹೊಸಪ್ರಪಂಚದಲ್ಲಿ ಒಂದು ಆದಿಸನಾತನ ದೇವಿ- ದೇವತಾಧರ್ಮವಿರುತ್ತದೆ, ನಿಶ್ಚಯ
ಮಾಡಿಸಲು ನಿಮ್ಮ ಬಳಿ ಚಿತ್ರಗಳೂ ಇವೆ, ಈ ಸೃಷ್ಟಿಚಕ್ರವು ಸುತ್ತುತ್ತಾ ಇರುತ್ತದೆ, ಕಲ್ಪದ ಆಯಸ್ಸೇ
5000 ವರ್ಷಗಳಾಗಿದೆ. ಈಗ ಸೂರ್ಯವಂಶ, ಚಂದ್ರವಂಶವಂತೂ ಬುದ್ಧಿಯಲ್ಲಿ ಕುಳಿತುಕೊಂಡಿತು. ಈ
ವಿಷ್ಣುಪುರಿಯೇ ಬದಲಾಗಿ ರಾಮ-ಸೀತೆಯ ಪುರಿಯಾಗುತ್ತದೆ. ಅವರ ರಾಜ್ಯವು ನಡೆಯುತ್ತದೆಯಲ್ಲವೆ! ಎರಡು
ಯುಗಗಳು ಕಳೆದನಂತರ ದ್ವಾಪರಯುಗ, ರಾವಣರಾಜ್ಯವು ಬರುತ್ತದೆ. ದೇವತೆಗಳು ವಾಮಮಾರ್ಗದಲ್ಲಿ
ಹೊರಟುಹೋಗುತ್ತಾರೆ.
ಆದ್ದರಿಂದ ವಿಕಾರದ
ಪದ್ಧತಿಯಾಗಿಬಿಡುತ್ತದೆ. ಸತ್ಯಯುಗ, ತ್ರೇತಾಯುಗದಲ್ಲಿ ಎಲ್ಲರೂ ನಿರ್ವಿಕಾರಿಗಳಾಗಿರುತ್ತಾರೆ, ಒಂದು
ಆದಿಸನಾತನ ದೇವಿ- ದೇವತಾಧರ್ಮವಿರುತ್ತದೆ. ಚಿತ್ರಗಳನ್ನೂ ತೋರಿಸಬೇಕು, ಹಾಗೆಯೇ ಬಾಯಿಂದಲೂ
ತಿಳಿಸಬೇಕು. ತಂದೆಯು ನಮಗೆ ಶಿಕ್ಷಕನಾಗಿ ಈ ರೀತಿ ಓದಿಸುತ್ತಾರೆ, ತಂದೆಯು ಬಂದು ತಾವೇ ತಮ್ಮ
ಪರಿಚಯವನ್ನು ಕೊಡುತ್ತಾರೆ ಮತ್ತು ತಿಳಿಸುತ್ತಾರೆ - ನಾನು ಪತಿತರನ್ನು ಪಾವನರನ್ನಾಗಿ ಮಾಡಲು
ಬರುತ್ತೇನೆ ಅಂದಮೇಲೆ ಶರೀರವು ಅವಶ್ಯವಾಗಿ ಬೇಕು ಇಲ್ಲದಿದ್ದರೆ ಹೇಗೆ ಮಾತನಾಡಲಿ, ನಾನು
ಚೈತನ್ಯನಾಗಿದ್ದೇನೆ, ಸತ್ಯನಾಗಿದ್ದೇನೆ ಮತ್ತು ಅಮರನಾಗಿದ್ದೇನೆ. ಸತೋ, ರಜೋ, ತಮೋದಲ್ಲಿ ಆತ್ಮವೇ
ಬರುತ್ತದೆ. ಆತ್ಮವೇ ಪತಿತ, ಆತ್ಮವೇ ಪಾವನವಾಗುತ್ತದೆ. ಆತ್ಮದಲ್ಲಿ ಎಲ್ಲಾ ಸಂಸ್ಕಾರವಿದೆ. ಹಿಂದಿನ
ಕರ್ಮ ಹಾಗೂ ವಿಕರ್ಮದ ಸಂಸ್ಕಾರವನ್ನು ಆತ್ಮವೇ ತೆಗೆದುಕೊಂಡು ಬರುತ್ತದೆ. ಸತ್ಯಯುಗದಲ್ಲಂತೂ
ವಿಕರ್ಮಗಳಾಗುವುದಿಲ್ಲ, ಕರ್ಮ ಮಾಡುತ್ತಾರೆ ಕರ್ಮವನ್ನಭಿನಯಿಸುತ್ತಾರೆ ಆದರೆ ಆ ಕರ್ಮವು
ಅಕರ್ಮವಾಗುತ್ತದೆ. ಗೀತೆಯಲ್ಲಿಯೂ ಈ ಶಬ್ದವಿದೆ, ಈಗ ನೀವು ಅದನ್ನು ಪ್ರತ್ಯಕ್ಷದಲ್ಲಿ
ಅರಿತುಕೊಳ್ಳುತ್ತಿದ್ದೀರಿ. ನಿಮಗೆ ತಿಳಿದಿದೆ-ತಂದೆಯು ಹಳೆಯ ಪ್ರಪಂಚವನ್ನು ಪರಿವರ್ತನೆ ಮಾಡಿ
ಹೊಸಪ್ರಪಂಚವನ್ನಾಗಿ ಮಾಡಲು ಬಂದಿದ್ದಾರೆ, ಅಲ್ಲಿ ಕರ್ಮಗಳು ಅಕರ್ಮಗಳಾಗಿಬಿಡುತ್ತವೆ, ಅದಕ್ಕೆ
ಸತ್ಯಯುಗವೆಂದು ಹೇಳಲಾಗುತ್ತದೆ ಮತ್ತು ಇಲ್ಲಿನ ಕರ್ಮಗಳು ವಿಕರ್ಮಗಳೇ ಆಗುತ್ತದೆ, ಇದಕ್ಕೆ
ಕಲಿಯುಗವೆಂದು ಹೇಳಲಾಗುತ್ತದೆ. ನೀವೀಗ ಸಂಗಮದಲ್ಲಿದ್ದೀರಿ. ತಂದೆಯು ಎರಡೂ ಮಾತುಗಳನ್ನು
ತಿಳಿಸುತ್ತಾರೆ. ಶಿಕ್ಷಕರು ಏನೇನು ತಿಳಿಸಿದರೆಂದು ಒಂದೊಂದು ಮಾತನ್ನೂ ಬಹಳ ಚೆನ್ನಾಗಿ
ತಿಳಿದುಕೊಳ್ಳಬೇಕು. ಒಳ್ಳೆಯದು- ನಂತರ ಗುರುವಿನ ಕರ್ತವ್ಯವೇನೆಂದರೆ ತಂದೆಯೇ ನಮ್ಮನ್ನು ಪತಿತರಿಂದ
ಪಾವನರನ್ನಾಗಿ ಮಾಡಲು ಅವರನ್ನು ಕರೆದಿದ್ದೀರಿ. ಆತ್ಮವು ಪಾವನವಾದರೆ ಮತ್ತೆ ಶರೀರವೂ
ಪಾವನವಾಗುತ್ತದೆ. ಎಂತಹ ಚಿನ್ನವೋ ಅಂತಹ ಆಭರಣಗಳಾಗುತ್ತವೆ. 24 ಕ್ಯಾರೇಟ್ ಚಿನ್ನವನ್ನು
ತೆಗೆದುಕೊಂಡು ಅದರಲ್ಲಿ ಲೋಹವನ್ನು ಸೇರಿಸದಿದ್ದರೆ ಆಭರಣಗಳೂ ಸಹ ಅಂತಹ ಸತೋಪ್ರಧಾನವಾಗಿಯೇ
ತಯಾರಾಗುತ್ತವೆ. ಲೋಹವನ್ನು ಸೇರಿಸುವುದರಿಂದ ತಮೋಪ್ರಧಾನವಾಗಿಬಿಡುತ್ತದೆ ಏಕೆಂದರೆ ಇದರಲ್ಲಿ
ತುಕ್ಕುಬೀಳುತ್ತದೆಯಲ್ಲವೆ. ಮೊದಲು ಭಾರತವು 24 ಕ್ಯಾರೇಟ್ ಅಪ್ಪಟ ಚಿನ್ನದಪಕ್ಷಿಯಾಗಿತ್ತು ಅರ್ಥಾತ್
ಹೊಸಪ್ರಪಂಚವಾಗಿತ್ತು ಅದು ಈಗ ತಮೋಪ್ರಧಾನವಾಗಿದೆ. ಮೊದಲು ಪವಿತ್ರ ಚಿನ್ನವಾಗಿರುತ್ತದೆ,
ಹೊಸಪ್ರಪಂಚ ಪವಿತ್ರ, ಹಳೆಯಪ್ರಪಂಚವು ಅಪವಿತ್ರವಾಗಿದೆ, ತುಕ್ಕು ಬೀಳುತ್ತಾ ಹೋಗುತ್ತದೆ. ಇದನ್ನು
ತಂದೆಯೇ ತಿಳಿಸುತ್ತಾರೆ ಮತ್ತಾವುದೇ ಮನುಷ್ಯ ಗುರುಗಳು ತಿಳಿದುಕೊಂಡಿಲ್ಲ. ತಂದೆಯೇ ಬಂದು
ಪಾವನರನ್ನಾಗಿ ಎಂದು ಕರೆಯುತ್ತಾರೆ. ವಾನಪ್ರಸ್ಥ ಸ್ಥಿತಿಯಲ್ಲಿ ಮನುಷ್ಯರನ್ನು ಗೃಹಸ್ಥದಿಂದ ಮುಕ್ತ
ಮಾಡಿಸುವುದು ಸದ್ಗುರುವಿನ ಕೆಲಸವಾಗಿದೆ. ಅಂದಾಗ ನಾಟಕದ ಯೋಜನೆಯನುಸಾರ ಈ ಎಲ್ಲಾ ಜ್ಞಾನವನ್ನು
ತಂದೆಯೇ ಬಂದು ಕೊಡುತ್ತಾರೆ. ಅವರು ಮನುಷ್ಯಸೃಷ್ಟಿಯ ಬೀಜರೂಪನಾಗಿದ್ದಾರೆ, ಅವರೇ ಇಡೀ ವೃಕ್ಷದ
ಜ್ಞಾನವನ್ನು ತಿಳಿಸುತ್ತಾರೆ. ಶಿವತಂದೆಯ ಹೆಸರು ಸದಾ ಶಿವ ಆಗಿದೆ. ಉಳಿದೆಲ್ಲಾ ಆತ್ಮಗಳು
ಪಾತ್ರವನ್ನಭಿನಯಿಸಲು ಬರುತ್ತಾರೆ ಆಗ ಭಿನ್ನ-ಭಿನ್ನ ಹೆಸರುಗಳನ್ನು ಹೊಂದುತ್ತಾರೆ. ತಂದೆಯನ್ನು
ಕರೆಯುತ್ತಾರೆ ಆದರೆ ಅವರು ನಿಮ್ಮನ್ನು ಪಾವನಪ್ರಪಂಚದಲ್ಲಿ ಕರೆದುಕೊಂಡು ಹೋಗಲು ಹೇಗೆ ಭಾಗ್ಯಶಾಲಿ
ರಥದಲ್ಲಿ ಬರುತ್ತಾರೆಂಬುದನ್ನು ಅವರು ತಿಳಿದುಕೊಂಡಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ ಯಾರು
ಬಹಳ ಜನ್ಮಗಳ ಅಂತಿಮದಲ್ಲಿದ್ದಾರೆ, ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಯೋ ಅವರ
ತನುವಿನಲ್ಲಿ ನಾನು ಬರುತ್ತೇನೆ. ರಾಜಾಧಿರಾಜರನ್ನಾಗಿ ಮಾಡಲು ನಾನು ಈ ಭಾಗ್ಯಶಾಲಿ ರಥದಲ್ಲಿ
ಪ್ರವೇಶ ಮಾಡುತ್ತೇನೆ. ಮೊದಲ ರಾಜಕುಮಾರನು ಶ್ರೀಕೃಷ್ಣನಾಗಿದ್ದಾನೆ, ಶ್ರೀಕೃಷ್ಣನು ಹೊಸಪ್ರಪಂಚದ
ಮಾಲೀಕನಾಗಿದ್ದಾನೆ. ಅವರೇ ಮತ್ತೆ ಕೆಳಗಿಳಿಯುತ್ತಾರೆ.
ಸೂರ್ಯವಂಶಿ, ಚಂದ್ರವಂಶಿ
ನಂತರ ವೈಶ್ಯ, ಶೂದ್ರವಂಶಿ ನಂತರ ಬ್ರಹ್ಮಾವಂಶಿಗಳಾಗುತ್ತಾರೆ. ಚಿನ್ನದಿಂದ ಬೆಳ್ಳಿ..... ಮತ್ತೆ
ನೀವೀಗ ಕಬ್ಬಿಣದಿಂದ ಚಿನ್ನವಾಗುತ್ತಿದ್ದೀರಿ. ಈಗ ತಂದೆಯು ತಿಳಿಸುತ್ತಾರೆ - ನಿಮ್ಮ ತಂದೆಯಾದ
ನನ್ನೊಬ್ಬನನ್ನೇ ನೆನಪು ಮಾಡಿ, ಯಾರಲ್ಲಿ ನಾನು ಪ್ರವೇಶ ಮಾಡಿದ್ದೇನೆಯೋ ಇವರಲ್ಲಿ ಸ್ವಲ್ಪವೂ
ಜ್ಞಾನವಿರಲಿಲ್ಲ. ಇವರಲ್ಲಿ ನಾನು ಪ್ರವೇಶ ಮಾಡುತ್ತೇನೆ ಆದ್ದರಿಂದ ಇವರಿಗೆ ಭಾಗ್ಯಶಾಲಿ ರಥವೆಂದು
ಹೇಳಲಾಗುತ್ತದೆ. ಸ್ವಯಂ ತಂದೆಯೇ ತಿಳಿಸುತ್ತಾರೆ – ನಾನು ಇವರ ಬಹಳ ಜನ್ಮಗಳ ಅಂತ್ಯದಲ್ಲಿ
ಬರುತ್ತೇನೆ. ಗೀತೆಯಲ್ಲಿ ಈ ಶಬ್ಧವು ನಿಖರವಾಗಿದೆ. ಗೀತೆಯನ್ನೇ ಸರ್ವಶಾಸ್ತ್ರಮಯಿ ಶಿರೋಮಣಿಯೆಂದು
ಕರೆಯಲಾಗುತ್ತದೆ.
ಈ ಸಂಗಮಯುಗದಲ್ಲಿಯೂ
ತಂದೆಯು ಬಂದು ಬ್ರಾಹ್ಮಣಕುಲ ಮತ್ತು ದೇವಿ-ದೇವತಾಕುಲದ ಸ್ಥಾಪನೆ ಮಾಡುತ್ತಾರೆ. ಅನ್ಯರ ಬಗ್ಗೆ
ಎಲ್ಲರಿಗೂ ತಿಳಿದಿದೆ ಆದರೆ ಈ ದೇವಿ-ದೇವತೆಗಳ ಬಗ್ಗೆ ಯಾರಿಗೂ ತಿಳಿದಿಲ್ಲ. ಬಹಳ ಜನ್ಮಗಳ
ಅಂತಿಮದಲ್ಲಿ ಅರ್ಥಾತ್ ಸಂಗಮಯುಗದಲ್ಲಿಯೇ ತಂದೆಯು ಬರುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು
ಬೀಜರೂಪನಾಗಿದ್ದೇನೆ, ಕೃಷ್ಣನಂತೂ ಸತ್ಯಯುಗದ ನಿವಾಸಿಯಾಗಿದ್ದಾನೆ. ಕೃಷ್ಣನನ್ನು ಅನ್ಯಸ್ಥಾನದಲ್ಲಿ
ಯಾರೂ ಸಹ ನೋಡಲು ಸಾಧ್ಯವಿಲ್ಲ ಏಕೆಂದರೆ ಪುನರ್ಜನ್ಮದಲ್ಲಿ ಬರುತ್ತಾ ನಾಮ, ರೂಪ, ದೇಶ, ಕಾಲ ಎಲ್ಲವೂ
ಬದಲಾಗುತ್ತದೆ.
ಮೊದಲು ಚಿಕ್ಕಮಗು ಬಹಳ
ಸುಂದರವಾಗಿರುತ್ತಾ ನಂತರ ದೊಡ್ಡವರಾಗುತ್ತಾರೆ ಮತ್ತೆ ಶರೀರವನ್ನು ಬಿಟ್ಟು ಇನ್ನೊಂದು ಚಿಕ್ಕ
ಶರೀರವನ್ನು ತೆಗೆದುಕೊಳ್ಳುತ್ತಾರೆ, ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ನಾಟಕದಲ್ಲಿ
ನಿಗಧಿಯಾಗಿದೆ. ಇನ್ನೊಂದು ಶರೀರದಲ್ಲಂತೂ ಅವರಿಗೆ ಕೃಷ್ಣನೆಂದು ಹೇಳುವುದಿಲ್ಲ ಏಕೆಂದರೆ ಆ ಆತ್ಮವು
ಇನ್ನೊಂದು ಶರೀರವನ್ನು ತೆಗೆದುಕೊಂಡಾಗ ನಾಮ, ರೂಪ ಎಲ್ಲವೂ ಬದಲಾಗುತ್ತದೆ, ಸಮಯ, ಹಾವಭಾವ,
ತಿಥಿ-ತಾರೀಖು ಎಲ್ಲವೂ ಬದಲಾಗುತ್ತದೆ. ವಿಶ್ವದ ಚರಿತ್ರೆ-ಭೂಗೋಳವು ಚಾಚೂತಪ್ಪದೆ
ಪುನರಾವರ್ತನೆಯಾಗುತ್ತದೆಯೆಂದು ಹೇಳಲಾಗುತ್ತದೆ. ಅಂದಾಗ ಈ ನಾಟಕವು ಪುನರಾವರ್ತನೆಯಾಗುತ್ತಾ
ಇರುತ್ತದೆ. ಸತೋ, ರಜೋ, ತಮೋದಲ್ಲಿ ಬರಲೇಬೇಕಾಗಿದೆ. ಸೃಷ್ಟಿಯ ಹೆಸರು, ಯುಗದ ಹೆಸರು ಎಲ್ಲವೂ
ಬದಲಾಗುತ್ತದೆ. ಈಗ ಇದು ಸಂಗಮಯುಗವಾಗಿದೆ. ನಾನು ಸಂಗಮಯುಗದಲ್ಲಿಯೇ ಬರುತ್ತೇನೆ, ಇದನ್ನು ನಾವು
ಒಳಗೆ ಪಕ್ಕಾ ಮಾಡಿಕೊಳ್ಳಬೇಕಾಗಿದೆ. ನಮ್ಮ ತಂದೆಯು ಶಿಕ್ಷಕ, ಗುರುವಾಗಿದ್ದಾರೆ. ಮತ್ತು
ಸತೋಪ್ರಧಾನರಾಗುವ ಬಹಳ ಒಳ್ಳೆಯ ಯುಕ್ತಿಯನ್ನು ತಿಳಿಸುತ್ತಾರೆ. ಗೀತೆಯಲ್ಲಿಯೂ ಇದೆ, ದೇಹಸಹಿತ
ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ತಮ್ಮನ್ನು ಆತ್ಮನೆಂದು ಅವಶ್ಯವಾಗಿ ತಿಳಿಯಿರಿ. ಹಿಂತಿರುಗಿ
ತಮ್ಮ ಮನೆಗೆ ಹೋಗಬೇಕಾಗಿದೆ, ಭಕ್ತಿಮಾರ್ಗದಲ್ಲಿ ಭಗವಂತನ ಬಳಿಗೆ ಹೋಗಲು ಎಷ್ಟೊಂದು
ಪರಿಶ್ರಮಪಡುತ್ತಾರೆ! ಅದು ಮುಕ್ತಿಧಾಮವಾಗಿದೆ, ಕರ್ಮದಿಂದ ಮುಕ್ತ, ನಾವು ನಿರಾಕಾರಿ ಪ್ರಪಂಚದಲ್ಲಿ
ಹೋಗಿ ಕುಳಿತುಕೊಳ್ಳುತ್ತೇವೆ. ಪಾತ್ರಧಾರಿಯು ಮನೆಗೆ ಹೋದರೆಂದರೆ ಪಾತ್ರದಿಂದ ಮುಕ್ತರಾದರು. ನಾವು
ಮುಕ್ತಿಯನ್ನು ಹೊಂದಬೇಕೆಂದು ಎಲ್ಲರೂ ಬಯಸುತ್ತಾರೆ ಆದರೆ ಮುಕ್ತಿಯು ಯಾರಿಗೂ ಸಿಗಲು ಸಾಧ್ಯವಿಲ್ಲ.
ಈ ನಾಟಕವು ಅನಾದಿ-ಅವಿನಾಶಿಯಾಗಿದೆ. ನಾವು ಈ ಪಾತ್ರವನ್ನಭಿನಯಿಸಲು ನಮಗೆ ಇಷ್ಟವಿಲ್ಲವೆಂದು
ಯಾರಾದರೂ ಹೇಳಲಿ ಆದರೆ ಇದರಲ್ಲಿ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಈ ಅನಾದಿ ನಾಟಕವು ಮಾಡಲ್ಪಟ್ಟಿದೆ,
ಒಬ್ಬರೂ ಸಹ ಮುಕ್ತಿಯನ್ನು ಪಡೆಯಲು ಸಾಧ್ಯವಿಲ್ಲ. ಅದೆಲ್ಲವೂ ಅನೇಕ ಪ್ರಕಾರದ ಮನುಷ್ಯ ಮತಗಳಾಗಿವೆ.
ಇದು ಶ್ರೇಷ್ಠರನ್ನಾಗಿ ಮಾಡಿ ಮಾಡಲು ಶ್ರೀಮತವಾಗಿದೆ. ಮನುಷ್ಯರಿಗೆ ಶ್ರೇಷ್ಠರೆಂದು ಹೇಳುವುದಿಲ್ಲ,
ದೇವತೆಗಳಿಗೆ ಶ್ರೇಷ್ಠರೆಂದು ಹೇಳಲಾಗುತ್ತದೆ. ಅವರ ಮುಂದೆ ಎಲ್ಲರೂ ನಮಸ್ಕಾರ ಮಾಡುತ್ತಾರೆ ಅಂದಾಗ
ಅವರು ಶ್ರೇಷ್ಠರಾದರಲ್ಲವೆ ಆದರೆ ಇದೂ ಸಹ ಯಾರಿಗೂ ತಿಳಿದಿಲ್ಲ. ಈಗ ನೀವು ತಿಳಿದುಕೊಳ್ಳುತ್ತೀರಿ -
84 ಜನ್ಮಗಳಂತೂ ತೆಗೆದುಕೊಳ್ಳಲೇಬೇಕಾಗಿದೆ. ಶ್ರೀಕೃಷ್ಣನು ದೇವತೆಯಾಗಿದ್ದಾನೆ, ದೇವತೆ, ವೈಕುಂಠದ
ಮೊದಲನೆಯ ರಾಜಕುಮಾರನಾಗಿದ್ದಾನೆ. ಕೃಷ್ಣನು ಗೀತೆಯನ್ನೂ ತಿಳಿಸಲಿಲ್ಲ, ಕೇವಲ ದೇವತೆಯಾಗಿದ್ದನು
ಆದ್ದರಿಂದ ಎಲ್ಲರೂ ಆತನನ್ನು ಪೂಜಿಸುತ್ತಾರೆ. ದೇವತೆಗಳು ಪಾವನರಾಗಿದ್ದಾರೆ. ಪೂಜಿಸುವವರು
ಪತಿತರಾಗಿದ್ದಾರೆ. ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲ. ತಾವು ನಮ್ಮನ್ನು ಈ ರೀತಿ ಮಾಡಿ ಎಂದು
ಹೇಳುತ್ತಾರೆ. ಶಿವನ ಮುಂದೆ ಹೋಗಿ ನಮಗೆ ಮುಕ್ತಿ ಕೊಡಿ ಎಂದು ಹೇಳುತ್ತಾರೆ. ಅವರು
ಜೀವನ್ಮುಕ್ತರಾದ್ದರಿಂದ ಎಂದೂ ಜೀವನಬಂಧನದಲ್ಲಿ ಬರುವುದಿಲ್ಲ ಆದ್ದರಿಂದ ಮುಕ್ತಿಯನ್ನು ಕೊಡಿ ಎಂದು
ಅವರನ್ನೇ ಕರೆಯುತ್ತಾರೆ. ಜೀವನ್ಮುಕ್ತಿಯನ್ನೂ ಸಹ ಅವರೇ ಕೊಡುತ್ತಾರೆ.
ಈಗ ನೀವು
ತಿಳಿದುಕೊಂಡಿದ್ದೀರಿ - ನಾವೆಲ್ಲರೂ ಮಮ್ಮಾ-ಬಾಬಾರವರ ಮಕ್ಕಳಾಗಿದ್ದೇವೆ. ಅವರಿಂದ ನಮಗೆ ಅಪಾರ ಧನವು
ಸಿಗುತ್ತದೆ, ಮನುಷ್ಯರಂತೂ ಬುದ್ದಿಹೀನತೆಯಿಂದ ಬೇಡುತ್ತಿರುತ್ತಾರೆ. ಬುದ್ಧಿಹೀನರೆಂದರೆ ಅವಶ್ಯವಾಗಿ
ದುಃಖಿಯೇ ಆಗುತ್ತಾರಲ್ಲವೆ. ಆಪಾರ ದುಃಖವನ್ನು ಅನುಭವಿಸಬೇಕಾಗುತ್ತದೆ ಅಂದಾಗ ಇವೆಲ್ಲಾ ಮಾತುಗಳನ್ನು
ಮಕ್ಕಳು ಬುದ್ಧಿಯಲ್ಲಿಟ್ಟು ಕೊಳ್ಳಬೇಕಾಗಿದೆ. ಒಬ್ಬ ಬೇಹದ್ದಿನ ತಂದೆಯನ್ನು ಅರಿತುಕೊಳ್ಳದ ಕಾರಣ
ಎಷ್ಟೊಂದು ಪರಸ್ಪರ ಹೊಡೆದಾಡುತ್ತಿರುತ್ತಾರೆ, ಅನಾಥರಾಗಿಬಿಟ್ಟಿದ್ದಾರೆ. ಹೇಗೆ ಅವರು ಹದ್ದಿನ
ಅನಾಥರಿರುತ್ತಾರೆಯೋ ಹಾಗೆಯೇ ಇವರು ಬೇಹದ್ದಿನ ಅನಾಥರಾಗಿದ್ದಾರೆ. ತಂದೆಯು ಹೊಸಪ್ರಪಂಚವನ್ನು
ಸ್ಥಾಪನೆ ಮಾಡುತ್ತಾರೆ. ಈಗ ಇರುವುದೇ ಪತಿತ ಆತ್ಮಗಳ ಪತಿತ ಪ್ರಪಂಚವಾಗಿದೆ. ಪಾವನ ಪ್ರಪಂಚವೆಂದು
ಸತ್ಯಯುಗಕ್ಕೆ, ಹಳೆಯ ಪ್ರಪಂಚವೆಂದು ಕಲಿಯುಗಕ್ಕೆ ಹೇಳಲಾಗುವುದು ಅಂದಾಗ ಬುದ್ದಿಯಲ್ಲಿ ಇವೆಲ್ಲಾ
ಮಾತುಗಳಿವೆಯಲ್ಲವೆ! ಹಳೆಯ ಪ್ರಪಂಚದ ವಿನಾಶವಾದಮೇಲೆ ಎಲ್ಲರೂ ಹೊಸಪ್ರಪಂಚದಲ್ಲಿ
ವರ್ಗಾವಣೆಯಾಗುತ್ತೀರಿ. ಈಗ ನಾವು ತಾತ್ಕಾಲಿಕವಾಗಿ ಸಂಗಮಯುಗದಲ್ಲಿ ನಿಂತಿದ್ದೇವೆ. ಹಳೆಯ
ಪ್ರಪಂಚದಿಂದ ಹೊಸದಾಗುತ್ತಿದೆ, ಹೊಸಪ್ರಪಂಚದ ಬಗ್ಗೆಯೂ ತಿಳಿದಿದೆ, ನಿಮ್ಮ ಬುದ್ದಿಯು ಈಗ
ಹೊಸಪ್ರಪಂಚದಲ್ಲಿ ಹೋಗಬೇಕು. ಏಳುತ್ತಾ-ಕುಳಿತುಕೊಳ್ಳುತ್ತಾ ಇದೇ ಬುದ್ದಿಯಲ್ಲಿರಲಿ - ನಾವು
ವಿದ್ಯೆಯನ್ನು ಓದುತ್ತಿದ್ದೇವೆ, ತಂದೆಯು ನಮಗೆ ಓದಿಸುತ್ತಾರೆ. ವಿದ್ಯಾರ್ಥಿಗೆ ಇದು ನೆನಪಿರಬೇಕು
- ಆದರೂ ಸಹ ಆ ನೆನಪು ನಂಬರ್‌ವಾರ್ ಪುರುಷಾರ್ಥದನುಸಾರವೇ ಇರುತ್ತದೆ. ತಂದೆಯೂ ಸಹ ನಂಬರ್‌ವಾರ್
ಪುರುಷಾರ್ಥದನುಸಾರ ನೆನಪು, ಪ್ರೀತಿಯನ್ನು ಕೊಡುತ್ತಾರೆ. ಚೆನ್ನಾಗಿ ಓದುವವರನ್ನು ಶಿಕ್ಷಕರು
ಹೆಚ್ಚಿನದಾಗಿ ಪ್ರೀತಿ ಮಾಡುತ್ತಾರೆ. ಎಷ್ಟೊಂದು ಅಂತರವಾಗುತ್ತದೆ! ಈಗ ತಂದೆಯಂತೂ
ತಿಳಿಸುತ್ತಿರುತ್ತಾರೆ. ಇದನ್ನು ಮಕ್ಕಳು ಧಾರಣೆ ಮಾಡಬೇಕಾಗಿದೆ. ಒಬ್ಬ ತಂದೆಯ ವಿನಃ ಮತ್ತ್ಯಾರ
ಕಡೆಯೂ ಬುದ್ಧಿಯು ಹೋಗಬಾರದು. ತಂದೆಯನ್ನು ನೆನಪು ಮಾಡದಿದ್ದರೆ ಪಾಪಗಳು ಹೇಗೆ ತುಂಡಾಗುತ್ತವೆ?
ಮಾಯೆಯು ಪದೇ-ಪದೇ ನಿಮ್ಮ ಬುದ್ಧಿ ಯೋಗವನ್ನು ಕತ್ತರಿಸುತ್ತದೆ, ಮಾಯೆಯು ಬಹಳ ಮೋಸ ಮಾಡುತ್ತದೆ.
ತಂದೆಯು ಉದಾಹರಣೆಯನ್ನು ಕೊಡುತ್ತಾರೆ- ಭಕ್ತಿ ಮಾರ್ಗದಲ್ಲಿ ನಾವು ಲಕ್ಷ್ಮಿಯ ಪೂಜೆಯನ್ನು ಬಹಳ
ಮಾಡುತ್ತಿದ್ದೆವು, ಲಕ್ಷ್ಮಿಯು ಕಾಲು ಒತ್ತುತ್ತಿರುವ ನೋಡಿದಾಕ್ಷಣ ಅದರಿಂದ ಲಕ್ಷ್ಮಿಯನ್ನು
ಮುಕ್ತರನ್ನಾಗಿ ಮಾಡಿಸಿದೆವು. ಅವರ ನೆನಪಿನಲ್ಲಿ ಕುಳಿತು ಕೊಂಡಾಗ ಅಲ್ಲಿ ಇಲ್ಲಿ ಹೋದರೆ ಬುದ್ಧಿಯೇ
ಬೇರೆಕಡೆ ಏಕೆ ಹೋಗುತ್ತೀರಾ ಎಂದು ತನಗೆ ತಾನೇ ಪೆಟ್ಟುಕೊಟ್ಟುಕೊಳ್ಳುತ್ತಿದ್ದೆನು. ಕೊನೆಗೆ
ವಿನಾಶದ ದೃಶ್ಯವನ್ನೂ ನೋಡಿದೆನು, ಸ್ಥಾಪನೆಯನ್ನೂ ನೋಡಿದೆನು, ಸಾಕ್ಷಾತ್ಕಾರ ಆಸೆಯು ಪೂರ್ಣವಾಯಿತು.
ಈಗ ಈ ಹೊಸಪ್ರಪಂಚವು ಬರುತ್ತದೆ - ನಾನು ಈ ರೀತಿಯಾಗುತ್ತೇನೆ, ಈ ಹಳೆಯ ಪ್ರಪಂಚದ ವಿನಾಶವು
ಆಗಿಬಿಡುತ್ತದೆ ಎಂದು ತಿಳಿಯಿತು, ಪಕ್ಕಾ ನಿಶ್ಚಯವಾಗಿ ಬಿಟ್ಟಿತು. ನಮ್ಮ ರಾಜಧಾನಿಯ ಸ್ಥಾಪನೆಯ
ಸಾಕ್ಷಾತ್ಕಾರವಾಯಿತು, ಅಂದಮೇಲೆ ಈ
ರಾವಣರಾಜ್ಯವನ್ನು ಏನು ಮಾಡುವುದು! ಯಾವ ಸ್ವರ್ಗದ ರಾಜ್ಯಭಾಗ್ಯವು ಸಿಗುತ್ತದೆಯೆಂದು ತಿಳಿಯಿತು.
ಬುದ್ದಿಯು ಈಶ್ವರೀಯ ಬುದ್ಧಿಯಾಯಿತು. ಈಶ್ವರನು
ಪ್ರವೇಶ ಮಾಡಿ ಈ ಬುದ್ಧಿಯನ್ನು ನಡೆಸಿದರು. ಜ್ಞಾನದ ಕಳಸವಂತೂ ಮಾತೆಯರಿಗೆ ಸಿಗುತ್ತದೆಯೆಂದಾಗ
ಮಾತೆಯರಿಗೆ ನೀವು ಎಲ್ಲವನ್ನೂ ಸಂಭಾಲನೆ ಮಾಡಿ, ಎಲ್ಲವನ್ನು ಕಲಿಸಿಕೊಡಿ ಎಂದು ಎಲ್ಲವನ್ನೂ
ಕೊಟ್ಟುಬಿಟ್ಟೆವು. ಕಲಿಸುತ್ತಾ - ಕಲಿಸುತ್ತಾ ಇಲ್ಲಿಯವರೆಗೆ ಬಂದು ಬಿಟ್ಟೆವು. ಒಬ್ಬರು
ಇನ್ನೊಬ್ಬರಿಗೆ ತಿಳಿಸುತ್ತಾ- ತಿಳಿಸುತ್ತಾ ನೋಡಿ, ನಾವು ಎಷ್ಟೊಂದು ಮಂದಿಯಾಗಿಬಿಟ್ಟಿದ್ದೇವೆ.
ಆತ್ಮವು ಪವಿತ್ರವಾಗುತ್ತಾ ಹೋಗುತ್ತದೆ, ಮತ್ತೆ ಆತ್ಮಕ್ಕೆ ಪವಿತ್ರವಾದ ಶರೀರವೇ ಬೇಕು, ಇದನ್ನು
ತಿಳಿದುಕೊಳ್ಳುತ್ತೀರಿ ಆದರೂ ಸಹ ಮಾಯೆಯು ಮತ್ತೆ ಮರೆಸಿ ಬಿಡುತ್ತದೆ.
7 ದಿನಗಳು ಇಲ್ಲಿ ಕುಳಿತು
ಓದಿ ಎಂದು ನೀವು ಹೇಳಿದರೆ ನಾಳೆ ಬರುತ್ತೇನೆಂದು ಹೇಳುತ್ತಾರೆ. ನಾಳೆಯ ದಿನಕ್ಕೆ ಮಾಯೆಯು ಅವರನ್ನು
ಸಮಾಪ್ತಿ ಮಾಡಿಬಿಡುತ್ತದೆ, ಮತ್ತೆ ಬರುವುದೇ ಇಲ್ಲ. ಭಗವಂತನು ಓದಿಸುತ್ತಾರೆಂದರೆ ಬಂದು
ಭಗವಂತನಿಂದ ಓದುವುದೇ ಇಲ್ಲ. ಆಯಿತು, ಅವಶ್ಯವಾಗಿ ಬರುತ್ತೇನೆಂದು ಹೇಳುತ್ತಾರೆ ಆದರೆ ಮಾಯೆಯು
ಬಾರಿಸಿಬಿಡುತ್ತದೆ. ನಿಯಮಿತವಾಗಿ ಬರಲು ಬಿಡುವುದಿಲ್ಲ. ಕಲ್ಪದ ಹಿಂದೆ ಯಾರು ಪುರುಷಾರ್ಥ
ಮಾಡಿದ್ದಾರೆಯೋ ಅವರು ಅವಶ್ಯವಾಗಿ ಮಾಡುತ್ತಾರೆ. ಇದರ ವಿನಃ ಮತ್ತ್ಯಾವ ಅಂಗಡಿಯಿಲ್ಲ. ನೀವು ಬಹಳ
ಪುರುಷಾರ್ಥ ಮಾಡುತ್ತೀರಿ,ದೊಡ್ಡ-ದೊಡ್ಡ ಮ್ಯೂಸಿಯಂಗಳನ್ನು ಮಾಡುತ್ತೀರಿ. ಯಾರು ಕಲ್ಪದ ಹಿಂದೆ
ತಿಳಿದುಕೊಂಡಿದ್ದರೋ ಅವರೇ ಬಂದು ತಿಳಿದುಕೊಳ್ಳುತ್ತಾರೆ. ವಿನಾಶವೂ ಆಗಲಿದೆ, ಸ್ಥಾಪನೆಯೂ ಸಹ
ಆಗುತ್ತಾ ಹೋಗುತ್ತದೆ. ಆತ್ಮವು ಓದಿ ಸುಂದರವಾದ ಶರೀರವನ್ನು ತೆಗೆದುಕೊಳ್ಳುತ್ತದೆ. ಈ
ಗುರಿ-ಉದ್ದೇಶವಿದೆಯಲ್ಲವೆ. ಈ ನೆನಪು ಏಕೆ ಬರಬಾರದು. ಈಗ ನಾವು ನಮ್ಮ ಪುರುಷಾರ್ಥದನುಸಾರ
ಹೊಸಪ್ರಪಂಚದಲ್ಲಿ ಹೋಗುತ್ತೇವೆ. ಒಳ್ಳೆಯದು-
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್‌ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಬುದ್ಧಿಯಲ್ಲಿ
ಸದಾ ನೆನಪಿರಲಿ - ನಾವು ಸ್ವಲ್ಪ ಸಮಯಕ್ಕಾಗಿ ಸಂಗಮಯುಗದಲ್ಲಿ ಕುಳಿತಿದ್ದೇವೆ, ಹಳೆಯ ಪ್ರಪಂಚದ
ವಿನಾಶವಾದರೆ ನಾವು ಹೊಸಪ್ರಪಂಚದಲ್ಲಿ ವರ್ಗಾವಣೆಯಾಗಿ ಬಿಡುತ್ತೇವೆ ಆದ್ದರಿಂದ ಇದರಿಂದ
ಬುದ್ಧಿಯೋಗವನ್ನು ತೆಗೆಯಬೇಕು.
2. ಎಲ್ಲಾ ಆತ್ಮಗಳಿಗೆ
ತಂದೆಯ ಪರಿಚಯವನ್ನು ಕೊಟ್ಟು ಕರ್ಮ-ಅಕರ್ಮ- ವಿಕರ್ಮದ ಗುಹ್ಯಗತಿಯನ್ನು ತಿಳಿಸಬೇಕು, ಮೊದಲು ತಂದೆಯ
ಪಾಠವನ್ನು ಪಕ್ಕಾ ಮಾಡಿಸಬೇಕಾಗಿದೆ.
ವರದಾನ:
ಶ್ರೇಷ್ಠ
ಪ್ರಾಪ್ತಿಗಳ ಪ್ರತ್ಯಕ್ಷ ಫಲದ ಮೂಲಕ ಸದಾ ಖುಷಿಯಾಗಿರುವ ಸದಾ ಆರೋಗ್ಯವಂತ (ಎವರಹೆಲ್ದಿ) ಭವ.
ಸಂಗಮಯುಗದಲ್ಲಿ ಈಗೀಗ
ಮಾಡಿದ್ದೇವೆ ಮತ್ತೆ ಈಗೀಗ ಶ್ರೇಷ್ಠ ಪ್ರಾಪ್ತಿಯ ಅನುಭೂತಿ ಆಯಿತು - ಇದೇ ಪ್ರತ್ಯಕ್ಷ ಫಲ ಆಗಿದೆ.
ಎಲ್ಲದಕ್ಕಿಂತ ಶ್ರೇಷ್ಠ ಫಲ ಸಮೀಪತೆಯ ಅನುಭವ ಆಗುವುದು. ಈಗಿನ ಸಮಯದಲ್ಲಿ ಸಾಕಾರ ಪ್ರಪಂಚದಲ್ಲಿ
ಹಣ್ಣು ತಿಂದಾಗ ಆರೋಗ್ಯವಂತರಾಗಿರುತ್ತಾರೆ ಎಂದು ಹೇಳುತ್ತಾರೆ. ಆರೋಗ್ಯವಾಗಿರಲು ಸಾಧನೆ ಫಲ ಎಂದು
ಹೇಳುತ್ತಾರೆ, ತಾವು ಮಕ್ಕಳು ಪ್ರತಿಯೊಂದು ಸೆಕೆಂಡ್ ಪ್ರತ್ಯಕ್ಷ ಫಲವನ್ನು ತಿನ್ನುತ್ತಲೇ
ಇರುತ್ತೀರಿ. ಆದ್ದರಿಂದ ಎವರಹೆಲ್ದಿ ಆಗಿಯೇ ಇದ್ದೀರಿ. ಒಂದುವೇಳೆ ಯಾರಾದರೂ ತಮ್ಮ ಕ್ಷೇಮ ಸಮಾಚಾರ
ಕೇಳಿದಾಗ ಹೇಳಿ ಸದಾ ಖುಷಿಯಾಗಿರುತ್ತೇವೆ ಹಾಗೂ ಫರಿಸ್ಥಾ ಆಗಿದ್ದೇವೆ ಎಂದು.
ಸ್ಲೋಗನ್:
ಸರ್ವರ
ಆಶೀರ್ವಾದದ ಖಜಾನೆಯಿಂದ ಸಂಪನ್ನರಾದಾಗ ಪುರುಷಾರ್ಥದಲ್ಲಿ ಪರಿಶ್ರಮ ಮಾಡಬೇಕಾಗಿಲ್ಲ.