13.12.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಮ್ಮ
ಲಕ್ಷ್ಯ ಮತ್ತು ಲಕ್ಷ್ಯದಾತ ತಂದೆಯನ್ನು ನೆನಪು ಮಾಡಿ ಆಗ ದೈವೀಗುಣಗಳು ಬಂದುಬಿಡುತ್ತವೆ, ಅನ್ಯರಿಗೆ
ದುಃಖ ಕೊಡುವುದು, ನಿಂದನೆ ಮಾಡುವುದು ಇದೆಲ್ಲವೂ ಆಸುರೀ ಲಕ್ಷಣವಾಗಿದೆ”
ಪ್ರಶ್ನೆ:
ತಂದೆಗೆ ನೀವು
ಮಕ್ಕಳೊಂದಿಗೆ ಬಹಳ ಅತ್ಯುನ್ನತ ಪ್ರೀತಿಯಿದೆ ಎಂಬುದಕ್ಕೆ ಚಿಹ್ನೆಯೇನಾಗಿದೆ?
ಉತ್ತರ:
ತಂದೆಯಿಂದ ಯಾವ
ಮಧುರಾತಿ ಮಧುರ ಶಿಕ್ಷಣಗಳು ಸಿಗುತ್ತವೆಯೋ, ಈ ಶಿಕ್ಷಣವನ್ನು ಕೊಡುವುದೇ ಅವರ ಅತ್ಯುನ್ನತ
ಚಿಹ್ನೆಯಾಗಿದೆ. ತಂದೆಯ ಮೊದಲ ಶಿಕ್ಷಣವಾಗಿದೆ - ಮಧುರ ಮಕ್ಕಳೇ, ಶ್ರೀಮತವನ್ನು ಬಿಟ್ಟು ಯಾವುದೇ
ಉಲ್ಟಾ-ಸುಲ್ಟಾ ಕೆಲಸವನ್ನು ಮಾಡಬೇಡಿ, ನೀವು ವಿದ್ಯಾರ್ಥಿಗಳಾಗಿದ್ದೀರಿ ಅಂದಮೇಲೆ ನೀವು ಎಂದೂ
ಕಾನೂನು ತೆಗೆದುಕೊಳ್ಳಬಾರದು. ನೀವು ತಮ್ಮ ಮುಖದಿಂದ ಸದಾ ರತ್ನಗಳನ್ನೇ ಹೊರಹಾಕಿ ಕಲ್ಲುಗಳನ್ನಲ್ಲ.
ಓಂ ಶಾಂತಿ.
ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಈಗ ಈ ಲಕ್ಷ್ಮಿ-ನಾರಾಯಣರನ್ನಂತೂ ಬಹಳ ಚೆನ್ನಾಗಿ ನೋಡುತ್ತೀರಿ.
ಇದು ಗುರಿ-ಉದ್ದೇಶವಾಗಿದೆ ಅರ್ಥಾತ್ ನೀವು ಈ ಮನೆತನದವರಾಗಿದ್ದೀರಿ. ಎಷ್ಟೊಂದು ರಾತ್ರಿ-ಹಗಲಿನ
ಅಂತರವಿದೆ ಆದ್ದರಿಂದ ಪದೇ-ಪದೇ ಇವರನ್ನು ನೋಡುತ್ತಿರಬೇಕು, ನಾವು ಈ ರೀತಿಯಾಗಬೇಕು ಎಂದು ಚಿಂತನೆ
ಮಾಡಬೇಕಾಗಿದೆ. ಇವರ ಮಹಿಮೆಯನ್ನಂತೂ ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ. ಈ ಚಿತ್ರವನ್ನು
ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಖುಷಿಯಿರುವುದು. ಒಳಗೆ ಯಾವ ದ್ವಂದ್ವವಿರುತ್ತದೆಯೋ ಅದು
ಇರಬಾರದು. ಇದಕ್ಕೆ ದೇಹಾಭಿಮಾನವೆಂದು ಹೇಳಲಾಗುತ್ತದೆ. ದೇಹೀ-ಅಭಿಮಾನಿಗಳಾಗಿ ಈ
ಲಕ್ಷ್ಮಿ-ನಾರಾಯಣರನ್ನು ನೋಡುತ್ತೀರೆಂದರೆ ನಾವು ಈ ರೀತಿಯಾಗುತ್ತಿದ್ದೇವೆ ಎಂದು ತಿಳಿಯುತ್ತೀರಿ
ಆದ್ದರಿಂದ ಅವಶ್ಯವಾಗಿ ಇವರನ್ನು ನೋಡುತ್ತಿರಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವೇ
ಈ ರೀತಿಯಾಗಬೇಕಾಗಿದೆ, ಮಧ್ಯಾಜೀಭವ. ಇವರನ್ನು ನೋಡಿ, ನೆನಪು ಮಾಡಿ. ಒಂದು ದೃಷ್ಟಾಂತವನ್ನು
ತಿಳಿಸುತ್ತಾರೆ - ನಾನು ಕೋಣ ಆಗಿದ್ದೇನೆ, ಕೋಣ ಆಗಿದ್ದೇನೆ ಎಂದು ಆಲೋಚಿಸಿದನು. ಹೀಗೆ
ಆಲೋಚಿಸುತ್ತಾ ತನ್ನನ್ನು ಕೋಣವೆಂದೇ ತಿಳಿದುಕೊಳ್ಳತೊಡಗಿದನು. ನನಗೆ ಕೊಂಬಿದೆ, ನಾನು ಹೊರಗೆ
ಬರಲಾಗುವುದಿಲ್ಲವೆಂದು ತಿಳಿಯತೊಡಗಿದನು ಅಂದರೆ ನಿಮಗೆ ತಿಳಿದಿದೆ - ಇದು ನಮ್ಮ
ಗುರಿ-ಉದ್ದೇಶವಾಗಿದೆ - ನಾವು ಈ ರೀತಿಯಾಗಬೇಕಾಗಿದೆ ಆದರೆ ಹೇಗಾಗುತ್ತೀರಿ? ತಂದೆಯ ನೆನಪಿನಿಂದ.
ಪ್ರತಿಯೊಬ್ಬರೂ ತಮ್ಮೊಂದಿಗೆ ಕೇಳಿಕೊಳ್ಳಿ - ಅವಶ್ಯವಾಗಿ ನಾವು ಇವರನ್ನು ನೋಡಿ (ಲಕ್ಷ್ಮಿ-ನಾರಾಯಣ)
ತಂದೆಯನ್ನು ನೆನಪು ಮಾಡುತ್ತಿದ್ದೇವೆಯೇ? ನೀವಂತೂ ತಿಳಿದುಕೊಂಡಿದ್ದೀರಿ - ತಂದೆಯು ನಮ್ಮನ್ನು
ದೇವತೆಗಳನ್ನಾಗಿ ಮಾಡುತ್ತಾರೆ, ಅಂದಮೇಲೆ ಎಷ್ಟು ಸಾಧ್ಯವೋ ಅಷ್ಟು ತಂದೆಯನ್ನು ನೆನಪು ಮಾಡಬೇಕು.
ಇದನ್ನಂತೂ ತಂದೆಯು ತಿಳಿಸುತ್ತಾರೆ - ಮಕ್ಕಳಿಗೆ ನಿರಂತರ ನೆನಪಿರಲು ಸಾಧ್ಯವಿಲ್ಲ ಆದರೆ
ಪುರುಷಾರ್ಥ ಮಾಡಬೇಕು. ಭಲೆ ಗೃಹಸ್ಥವ್ಯವಹಾರದ ಕಾರ್ಯಗಳನ್ನು ಮಾಡುತ್ತಾ ಇವರನ್ನು (ಲಕ್ಷ್ಮಿ-ನಾರಾಯಣ)
ನೆನಪು ಮಾಡಿದರೆ ತಂದೆಯ ನೆನಪು ಅವಶ್ಯವಾಗಿ ಬರುವುದು. ತಂದೆಯನ್ನು ನೆನಪು ಮಾಡಿದರೆ ಅವಶ್ಯವಾಗಿ
ಇವರ ನೆನಪು ಬರುವುದು. ನಾವು ಈ ರೀತಿಯಾಗಬೇಕಾಗಿದೆ ಎಂದು ಇಡೀ ದಿನ ಇದೇ ಗುಂಗಿರಲಿ ಆಗ ಪರಸ್ಪರ
ಒಬ್ಬರು ಇನ್ನೊಬ್ಬರನ್ನು ಎಂದೂ ನಿಂದನೆ ಮಾಡುವುದಿಲ್ಲ. ಇವರು ಹೀಗಿದ್ದಾರೆ, ಇವರು ಹಾಗಿದ್ದಾರೆ.....
ಈ ಮಾತುಗಳಲ್ಲಿ ಯಾರು ತೊಡಗುವರೋ ಅವರು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ ಹಾಗೆಯೇ
ಉಳಿದುಬಿಡುತ್ತಾರೆ. ಎಷ್ಟು ಸಹಜ ಮಾಡಿ ತಿಳಿಸಿಕೊಡಲಾಗುತ್ತದೆ! ಇವರನ್ನೂ ನೆನಪು ಮಾಡಿ, ತಂದೆಯನ್ನೂ
ನೆನಪು ಮಾಡಿ ಆಗ ನೀವು ಈ ರೀತಿಯಾಗಿ ಬಿಡುತ್ತೀರಿ. ಇಲ್ಲಂತೂ ನೀವು ಸನ್ಮುಖದಲ್ಲಿ ಕುಳಿತಿದ್ದೀರಿ.
ಎಲ್ಲರ ಮನೆಯಲ್ಲಿ ಈ ಲಕ್ಷ್ಮಿ-ನಾರಾಯಣರ ಚಿತ್ರವು ಖಂಡಿತ ಇರಬೇಕು. ಎಷ್ಟು ಆಕ್ಯುರೇಟ್
ಚಿತ್ರವಾಗಿದೆ. ಇವರನ್ನು ನೆನಪು ಮಾಡಿದರೆ ತಂದೆಯ ನೆನಪು ಬರುವುದು. ಇಡೀ ದಿನ ಅನ್ಯ ಮಾತುಗಳ ಬದಲು
ಇದನ್ನೇ ತಿಳಿಸುತ್ತಾರೆ - ಇವರು ಹೀಗಿದ್ದಾರೆ, ಹಾಗಿದ್ದಾರೆ...... ಎಂದು ಅನ್ಯರ ನಿಂದನೆ
ಮಾಡುವುದಕ್ಕೆ ದುವಿದ ಅರ್ಥಾತ್ ದ್ವಂದ್ವವೆಂದು ಹೇಳಲಾಗುತ್ತದೆ. ನೀವು ತಮ್ಮ ಬುದ್ಧಿಯನ್ನು
ದೈವೀಬುದ್ಧಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ಅನ್ಯರಿಗೆ ದುಃಖ ಕೊಡುವುದು, ನಿಂದನೆ ಮಾಡುವುದು,
ಚಂಚಲತೆ ಮಾಡುವ ಸ್ವಭಾವವಿರಬಾರದು. ಇದರಲ್ಲಂತೂ ಅರ್ಧಕಲ್ಪ ಇದ್ದಿರಿ. ಈಗ ನೀವು ಮಕ್ಕಳಿಗೆ ಎಷ್ಟು
ಮಧುರ ಶಿಕ್ಷಣವು ಸಿಗುತ್ತಿದೆ! ಇದಕ್ಕಿಂತ ಶ್ರೇಷ್ಠ ಪ್ರೀತಿಯು ಬೇರೆ ಯಾರಿಂದಲೂ ಸಿಗುವುದಿಲ್ಲ.
ಯಾವುದೇ ಶ್ರೀಮತಕ್ಕೆ ವಿರುದ್ಧವಾಗಿ ಉಲ್ಟಾ-ಸುಲ್ಟಾ ಕೆಲಸವನ್ನು ಮಾಡಬಾರದು. ತಂದೆಯು
ಧ್ಯಾನಕ್ಕಾಗಿಯೂ ಆದೇಶ ನೀಡುತ್ತಾರೆ - ಕೇವಲ ಭೋಗವನ್ನು ಸ್ವೀಕಾರ ಮಾಡಿಸಿ ಬಂದುಬಿಡಿ,
ವೈಕುಂಠದಲ್ಲಿ ಹೋಗಿ ರಾಸವಿಲಾಸಗಳನ್ನು ಮಾಡಿ ಎಂದು ಹೇಳುವುದಿಲ್ಲ. ಈಗ ಧ್ಯಾನದಲ್ಲಿ
ಹೋಗುತ್ತೀರೆಂದರೆ ಮಾಯೆಯ ಪ್ರವೇಶತೆಯಾಗಿದೆ ಎಂದರ್ಥ. ಪತಿತರನ್ನಾಗಿ ಮಾಡುವುದು ಮಾಯೆಯ ನಂಬರ್ವನ್
ಕರ್ತವ್ಯವಾಗಿದೆ. ನಿಯಮಕ್ಕೆ ವಿರುದ್ಧವಾದ ಚಲನೆಯಿಂದ ಬಹಳ ನಷ್ಟವಾಗುತ್ತದೆ ಮತ್ತು ಒಂದುವೇಳೆ
ತನ್ನನ್ನು ಸಂಭಾಲನೆ ಮಾಡಿಕೊಳ್ಳದಿದ್ದಾಗ ಕಠಿಣ ಶಿಕ್ಷೆಗಳನ್ನನುಭವಿಸುವ ಸಾಧ್ಯತೆಯೂ ಇದೆ. ತಂದೆಯ
ಜೊತೆ-ಜೊತೆ ಧರ್ಮರಾಜನೂ ಇದ್ದಾರೆ, ಅವರ ಬಳಿ ಎಲ್ಲಾ ಲೆಕ್ಕವೂ ಇರುತ್ತದೆ. ರಾವಣನ ಜೈಲಿನಲ್ಲಿ
ಎಷ್ಟೊಂದು ವರ್ಷಗಳ ಕಾಲ ಶಿಕ್ಷೆಗಳನ್ನು ಅನುಭವಿಸಿದ್ದೀರಿ, ಹೊಸಪ್ರಪಂಚದಲ್ಲಿ ಎಷ್ಟು ಅಪಾರ
ಸುಖವಿದೆ. ಈಗ ತಂದೆಯು ತಿಳಿಸುತ್ತಾರೆ - ಮತ್ತೆಲ್ಲಾ ಮಾತುಗಳನ್ನು ಮರೆತು ಒಬ್ಬ ತಂದೆಯನ್ನು ನೆನಪು
ಮಾಡಿ. ಮತ್ತೆಲ್ಲಾ ದ್ವಂದ್ವಗಳನ್ನು ತೆಗೆದುಬಿಡಿ. ವಿಕಾರದಲ್ಲಿ ಯಾರು ತೆಗೆದುಕೊಂಡು ಹೋಗುತ್ತಾರೆ?
ಮಾಯಾಭೂತ. ನಿಮ್ಮ ಗುರಿ-ಉದ್ದೇಶವೇ ಶ್ರೇಷ್ಠರಾಗುವುದಾಗಿದೆ. ರಾಜಯೋಗವಲ್ಲವೆ! ತಂದೆಯನ್ನು ನೆನಪು
ಮಾಡುವುದರಿಂದ ಈ ಆಸ್ತಿಯು ಸಿಗುವುದು ಆದ್ದರಿಂದ ಈ ವ್ಯವಹಾರದಲ್ಲಿ ತೊಡಗಬೇಕು, ಒಳಗಿನ
ಕೊಳಕೆಲ್ಲವನ್ನೂ ತೆಗೆಯಬೇಕು. ಮಾಯೆಯ ಪರಾಕಾಷ್ಠತೆಯೂ ಬಹಳ ಕಠಿಣವಾಗಿದೆ ಆದರೆ ಅದನ್ನು ದೂರ
ಮಾಡುತ್ತಿರಬೇಕಾಗಿದೆ. ಎಷ್ಟು ಸಾಧ್ಯವೋ ಅಷ್ಟು ನೆನಪಿನ ಯಾತ್ರೆಯಲ್ಲಿರಬೇಕಾಗಿದೆ. ಈಗಂತೂ ನಿರಂತರ
ನೆನಪಿರಲು ಸಾಧ್ಯವಿಲ್ಲ. ಕೊನೆಗೆ ನಿರಂತರತೆಯವರೆಗೆ ಬರುತ್ತೀರಿ, ಆಗಲೇ ಶ್ರೇಷ್ಠಪದವಿಯನ್ನು
ಪಡೆಯುತ್ತೀರಿ. ಒಂದುವೇಳೆ ಒಳಗೆ ದ್ವಂದ್ವ ಅಥವಾ ಕೆಟ್ಟವಿಚಾರಗಳಿದ್ದರೆ ಶ್ರೇಷ್ಠ ಪದವಿಯೂ ಸಿಗಲು
ಸಾಧ್ಯವಿಲ್ಲ. ಮಾಯೆಗೆ ವಶವಾಗಿಯೇ ಸೋಲನ್ನನುಭವಿಸುತ್ತಾರೆ.
ತಂದೆಯು ತಿಳಿಸುತ್ತಾರೆ
- ಮಕ್ಕಳೇ, ಕೆಟ್ಟಕೆಲಸದಿಂದ ಸೋಲನ್ನನುಭವಿಸಬೇಡಿ, ಅನ್ಯರ ನಿಂದನೆ ಮಾಡಿದರೆ ನಿಮ್ಮ ದುರ್ಗತಿಯೂ
ಆಗುತ್ತದೆ. ಈಗ ಸದ್ಗತಿಯಾಗಬೇಕೆಂದರೆ ಕೆಟ್ಟಕರ್ಮವನ್ನು ಮಾಡಬೇಡಿ. ತಂದೆಯು ನೋಡುತ್ತಾರೆ - ಮಾಯೆಯು
ಕುತ್ತಿಗೆಯವರೆಗೂ ನುಂಗಿಹಾಕುವುದು, ಇದು ತಿಳಿಯುವುದೇ ಇಲ್ಲ. ನಾವು ಬಹಳ ಚೆನ್ನಾಗಿ
ನಡೆಯುತ್ತಿದ್ದೇವೆಂದು ಎಂದು ತಮ್ಮನ್ನು ತಿಳಿಯುತ್ತಾರೆ ಆದರೆ ಇಲ್ಲ. ತಂದೆಯು ತಿಳಿಸುತ್ತಾರೆ -
ಮನಸ್ಸಾ-ವಾಚಾ-ಕರ್ಮಣಾ ಮುಖದಿಂದ ರತ್ನಗಳೇ ಬರಬೇಕು. ಕೆಟ್ಟಮಾತುಗಳನ್ನಾಡುವುದು ಕಲ್ಲುಗಳಾಗಿವೆ,
ಈಗ ನೀವು ಕಲ್ಲುಬುದ್ಧಿಯವರಿಂದ ಪಾರಸರಾಗುತ್ತೀರೆಂದರೆ ಎಂದೂ ಮುಖದಿಂದ ಕಲ್ಲುಗಳು ಬರಬಾರದು.
ತಂದೆಯಂತೂ ತಿಳಿಸಬೇಕಾಗುತ್ತದೆ - ಎಲ್ಲಾ ಮಕ್ಕಳಿಗೆ ತಿಳಿಸುವುದು ತಂದೆಯ ಅಧಿಕಾರವಾಗಿದೆ. ಪರಸ್ಪರ
ಸಹೋದರರು ಸಹೋದರರಿಗೆ ಎಚ್ಚರಿಕೆ ನೀಡುವುದಲ್ಲ, ಶಿಕ್ಷಕನ ಕೆಲಸವಾಗಿದೆ - ಶಿಕ್ಷಣ ಕೊಡುವುದು. ಅವರು
ಏನು ಬೇಕಾದರೂ ಹೇಳಬಹುದು ಆದ್ದರಿಂದ ವಿದ್ಯಾರ್ಥಿಗಳು ಎಂದೂ ತಮ್ಮ ಕೈಯಲ್ಲಿ ಕಾನೂನು
ತೆಗೆದುಕೊಳ್ಳಬಾರದು. ನೀವು ವಿದ್ಯಾರ್ಥಿಗಳಾಗಿದ್ದೀರಲ್ಲವೆ. ತಂದೆಯೂ ತಿಳಿಸಬಹುದಾಗಿದೆ. ಮಕ್ಕಳಿಗೆ
ತಂದೆಯ ಆದೇಶವು ಸಿಗುತ್ತದೆ - ಒಬ್ಬ ತಂದೆಯನ್ನು ನೆನಪು ಮಾಡಿ, ಈಗ ನಿಮ್ಮ ಅದೃಷ್ಟವು ತೆರೆದಿದೆ,
ಶ್ರೀಮತದಂತೆ ನಡೆಯದೇ ಇರುವುದರಿಂದ ನಿಮ್ಮ ಅದೃಷ್ಟವು ಕೆಡುವುದು ಮತ್ತೆ ಬಹಳ ಪಶ್ಚಾತ್ತಾಪ
ಪಡಬೇಕಾಗುವುದು. ತಂದೆಯ ಶ್ರೀಮತದನುಸಾರ ನಡೆಯದೇ ಇರುವುದರಿಂದ ಒಂದನೆಯದಾಗಿ ಶಿಕ್ಷೆಗಳನ್ನು
ಅನುಭವಿಸಬೇಕಾಗುತ್ತದೆ, ಎರಡನೆಯದಾಗಿ ಪದವಿಯೂ ಭ್ರಷ್ಟವಾಗುತ್ತದೆ. ಇದು ಜನ್ಮ-ಜನ್ಮಾಂತರ,
ಕಲ್ಪ-ಕಲ್ಪಾಂತರದ ಆಟವಾಗಿದೆ, ತಂದೆಯೇ ಬಂದು ಓದಿಸುತ್ತಾರೆ ಆದ್ದರಿಂದ ಬುದ್ಧಿಯಲ್ಲಿರಬೇಕು -
ತಂದೆಯು ನಮ್ಮ ಶಿಕ್ಷಕನಾಗಿದ್ದಾರೆ, ಇವರಿಂದ ಈ ಹೊಸಜ್ಞಾನವು ಸಿಗುತ್ತದೆ - ತಮ್ಮನ್ನು ಆತ್ಮವೆಂದು
ತಿಳಿಯಿರಿ. ಆತ್ಮಗಳು ಮತ್ತು ಪರಮಾತ್ಮನ ಮೇಳವೆಂದು ಹೇಳಲಾಗುತ್ತದೆಯಲ್ಲವೆ. 5000 ವರ್ಷಗಳ ನಂತರ
ಮತ್ತೆ ಮಿಲನ ಮಾಡುತ್ತೇವೆ ಆದ್ದರಿಂದ ಇಲ್ಲಿ ಎಷ್ಟು ಆಸ್ತಿಯನ್ನು ತೆಗೆದುಕೊಳ್ಳಬೇಕೋ ಅಷ್ಟು
ತೆಗೆದುಕೊಳ್ಳಬಲ್ಲಿರಿ. ಇಲ್ಲವಾದರೆ ಬಹಳ-ಬಹಳ ಪಶ್ಚಾತ್ತಾಪ ಪಡುವಿರಿ ಮತ್ತು ಅಳುವಿರಿ. ಎಲ್ಲವೂ
ಸಾಕ್ಷಾತ್ಕಾರವಾಗುವುದು. ಹೇಗೆ ಶಾಲೆಯಲ್ಲಿ ಮಕ್ಕಳು ಒಂದು ತರಗತಿಯಿಂದ ಇನ್ನೊಂದು ತರಗತಿಗೆ
ವರ್ಗಾಯಿತರಾದಾಗ ಕೊನೆಯಲ್ಲಿ ಕುಳಿತುಕೊಳ್ಳುವವರನ್ನು ಎಲ್ಲರೂ ನೋಡುತ್ತಾರೆ. ಹಾಗೆಯೇ ಇಲ್ಲಿಯೂ ಸಹ
ವರ್ಗಾಯಿತರಾಗುತ್ತೀರಿ. ನಿಮಗೆ ತಿಳಿದಿದೆ - ಇಲ್ಲಿ ಶರೀರವನ್ನು ಬಿಟ್ಟುಹೋದರೆ ಸತ್ಯಯುಗದಲ್ಲಿ
ರಾಜಕುಮಾರ-ಕುಮಾರಿಯರ ಕಾಲೇಜಿನಲ್ಲಿ ಭಾಷೆಯನ್ನು ಕಲಿಯುತ್ತೇವೆ. ಇಲ್ಲಿಯ ಭಾಷೆಯನ್ನು ಎಲ್ಲರೂ
ಓದಬೇಕಾಗುತ್ತದೆ, ಮಾತೃಭಾಷೆಯಾಗಿದೆ. ಅನೇಕರಲ್ಲಿ ಪೂರ್ಣಜ್ಞಾನವಿಲ್ಲ ಎಂದರೆ ಮತ್ತೆ ನಿಯಮಿತವಾಗಿ
ಓದುವುದೂ ಇಲ್ಲ. ಒಂದೆರಡುಬಾರಿ ತಪ್ಪಿಸಿದರೆ ನಿತ್ಯವೂ ಮುರುಳಿಯನ್ನು ತಪ್ಪಿಸುವ
ಹವ್ಯಾಸವಾಗಿಬಿಡುತ್ತದೆ. ಮಾಯೆಯ ಶಿಷ್ಯರ ಸಂಗವಾಗಿದೆ. ಶಿವತಂದೆಯ ಶಿಷ್ಯರು ಕೆಲವರೇ ಇದ್ದೀರಿ
ಉಳಿದೆಲ್ಲರೂ ಮಾಯೆಯ ಶಿಷ್ಯರಾಗಿದ್ದೀರಿ. ನೀವು ಶಿವತಂದೆಯ ಶಿಷ್ಯರಾಗುತ್ತೀರೆಂದರೆ ಮಾಯೆಗೆ ಸಹನೆ
ಮಾಡಲಾಗುವುದಿಲ್ಲ ಆದ್ದರಿಂದ ತಮ್ಮನ್ನು ಬಹಳ ರಕ್ಷಣೆ ಮಾಡಿಕೊಳ್ಳಬೇಕು. ಪತಿತ, ಕೊಳಕು
ಮನುಷ್ಯರಿಂದ ಬಹಳ ಸಂಭಾಲನೆ ಮಾಡಿಕೊಳ್ಳಬೇಕು. ಹಂಸಗಳು ಮತ್ತು ಕೊಕ್ಕರೆಗಳಿದ್ದಾರಲ್ಲವೆ. ತಂದೆಯು
ರಾತ್ರಿಯೂ ಸಹ ಶಿಕ್ಷಣವನ್ನು ಕೊಟ್ಟಿದ್ದಾರೆ, ಇಡೀ ದಿನದಲ್ಲಿ ಯಾರಾದರೊಬ್ಬರ ನಿಂದನೆ ಮಾಡದೇ
ಇರುವಹಾಗಿಲ್ಲ, ಅವರ ಚಿಂತನೆ ಮಾಡುವುದಕ್ಕೆ ದೈವೀಗುಣವೆಂದು ಹೇಳಲಾಗುವುದಿಲ್ಲ, ದೇವತೆಗಳು ಇಂತಹ
ಕೆಲಸ ಮಾಡುವುದಿಲ್ಲ. ತಂದೆಯು ತಿಳಿಸುತ್ತಾರೆ - ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ಎಂದು.
ಆದರೂ ಸಹ ನಿಂದನೆ ಮಾಡುತ್ತಿರುತ್ತಾರೆ. ಜನ್ಮ-ಜನ್ಮಾಂತರದಿಂದ ನಿಂದನೆ ಮಾಡುತ್ತಾ ಬಂದಿದ್ದೀರಿ.
ಒಳಗೆ ದ್ವಂದ್ವವಿರುತ್ತದೆ, ಇದೂ ಸಹ ಒಳಗಿನ ಘರ್ಷಣೆಯಾಗಿದೆ. ಸುಮ್ಮನೆ ತಮ್ಮನ್ನು ಕೊಲೆ
ಮಾಡಿಕೊಳ್ಳುತ್ತಾರೆ. ಅನೇಕರಿಗೆ ನಷ್ಟವುಂಟುಮಾಡುತ್ತಾರೆ, ಯಾರು ಹೇಗೇ ಇರಲಿ ನಿಮ್ಮದೇನು
ಹೋಗುತ್ತದೆ! ಎಲ್ಲರ ಸಹಾಯಕ ಒಬ್ಬ ತಂದೆಯಾಗಿದ್ದಾರೆ. ಈಗಂತೂ ಶ್ರೀಮತದಂತೆ ನಡೆಯಬೇಕಾಗಿದೆ.
ಮನುಷ್ಯಮತವು ಬಹಳ ಕೊಳಕರನ್ನಾಗಿ ಮಾಡುತ್ತದೆ. ಪರಸ್ಪರ ಒಬ್ಬರು ಇನ್ನೊಬ್ಬರ ನಿಂದನೆ
ಮಾಡುತ್ತಿರುತ್ತಾರೆ. ನಿಂದನೆ ಮಾಡುವುದು ಮಾಯಾಭೂತವಾಗಿದೆ. ಇದು ಪತಿತ ಪ್ರಪಂಚವಾಗಿದೆ. ನಾವೀಗ
ಪತಿತರಿಂದ ಪಾವನರಾಗುತ್ತೇವೆ ಎಂದು ನೀವು ತಿಳಿದುಕೊಳ್ಳುತ್ತೀರಿ ಅಂದಮೇಲೆ ಈ ಅವಗುಣಗಳೆಲ್ಲವೂ
ಕೆಟ್ಟದ್ದಾಗಿದೆ. ತಿಳಿಸಲಾಗುತ್ತದೆ - ಇಂದಿನಿಂದ ಎಂದೂ ಇಂತಹ ಕರ್ಮ ಮಾಡುವುದಿಲ್ಲವೆಂದು ತಮ್ಮ
ಕಿವಿಯನ್ನು ಹಿಡಿದುಕೊಳ್ಳಬೇಕು. ಒಂದುವೇಳೆ ಏನೇ ನೋಡುತ್ತೀರೆಂದರೂ ತಂದೆಗೆ ತಿಳಿಸಬೇಕು,
ನಿಮ್ಮದೇನು ಹೋಗುತ್ತದೆ! ನೀವು ಒಬ್ಬರು ಇನ್ನೊಬ್ಬರ ನಿಂದನೆಯನ್ನು ಏಕೆ ಮಾಡುತ್ತೀರಿ! ತಂದೆಯು
ಎಲ್ಲವನ್ನೂ ಕೇಳುತ್ತಾರಲ್ಲವೆ. ತಂದೆಯು ಇವರ ಕಿವಿಗಳು ಮತ್ತು ಕಣ್ಣುಗಳನ್ನು ಆಧಾರವಾಗಿ
ತೆಗೆದುಕೊಂಡಿದ್ದಾರಲ್ಲವೆ. ಇದರ ಮೂಲಕ ತಂದೆಯೂ ನೋಡುತ್ತಾರೆ ಮತ್ತು ಈ ದಾದಾರವರೂ ನೋಡುತ್ತಾರೆ.
ವಾತಾವರಣ ಮತ್ತು ಕೆಲಕೆಲವರ ಚಲನೆಯಂತೂ ಬಹಳ ವಿರುದ್ಧವಾಗಿ ನಡೆಯುತ್ತದೆ. ಯಾರಿಗೆ
ತಂದೆಯಿರುವುದಿಲ್ಲವೋ ಅವರಿಗೆ ಅನಾಥರೆಂದು ಹೇಳಲಾಗುತ್ತದೆ. ಅವರು ತಮ್ಮ ತಂದೆಯನ್ನೂ
ತಿಳಿದುಕೊಂಡಿಲ್ಲ, ನೆನಪೂ ಮಾಡುವುದಿಲ್ಲ. ಸುಧಾರಣೆಯಾಗುವ ಬದಲು ಇನ್ನೂ ಹಾಳಾಗುತ್ತಾರೆ ಇದರಿಂದ
ತಮ್ಮ ಪದವಿಯನ್ನೇ ಕಳೆದುಕೊಳ್ಳುತ್ತಾರೆ. ಶ್ರೀಮತದಂತೆ ನಡೆಯದಿದ್ದರೆ ಅವರು ದೊಡ್ಡವರಿಲ್ಲದ
ಅನಾಥರಾಗಿದ್ದಾರೆ. ತಂದೆ-ತಾಯಿಯ ಶ್ರೀಮತದಂತೆ ನಡೆಯುವುದಿಲ್ಲ. ತ್ವಮೇವ ಮಾತಾಶ್ಚ ಪಿತಾ.......
ಬಂಧು ಇತ್ಯಾದಿಯೂ ಆಗುತ್ತಾರೆ.
ಆದರೆ ಗ್ರೇಟ್ ಗ್ರೇಟ್
ಗ್ರಾಂಡ್ ಫಾದರ್ ಇಲ್ಲದಿದ್ದರೆ ಮತ್ತೆ ತಾಯಿಯೆಲ್ಲಿರುವರು! ಇಷ್ಟೂ ಬುದ್ಧಿಯಿಲ್ಲ. ಮಾಯೆಯು
ಬುದ್ಧಿಯನ್ನು ಒಮ್ಮೆಲೆ ತಿರುಗಿಸಿಬಿಡುತ್ತದೆ. ಬೇಹದ್ದಿನ ತಂದೆಯ ಆಜ್ಞೆಯನ್ನು ಪಾಲಿಸದಿದ್ದರೆ
ಶಿಕ್ಷೆ ಸಿಗುತ್ತದೆ, ಸ್ವಲ್ಪವೂ ಸದ್ಗತಿಯಾಗುವುದಿಲ್ಲ. ತಂದೆಯು ನೋಡಿದರೆ ಇವರ ಗತಿಯು ಏನಾಗುವುದು
ಎಂದು ಹೇಳುತ್ತಾರಲ್ಲವೆ. ಇವರು ಎಕ್ಕದ ಹೂಗಳಾಗಿದ್ದಾರೆ, ಇವರನ್ನು ಯಾರೂ ಇಷ್ಟಪಡುವುದಿಲ್ಲ
ಅಂದಮೇಲೆ ಸುಧಾರಣೆಯಾಗಬೇಕಲ್ಲವೆ ಇಲ್ಲದಿದ್ದರೆ ಪದವಿ ಭ್ರಷ್ಟರಾಗಿಬಿಡುತ್ತಾರೆ.
ಜನ್ಮ-ಜನ್ಮಾಂತರಕ್ಕಾಗಿ ನಷ್ಟವುಂಟಾಗುವುದು ಆದರೆ ದೇಹಾಭಿಮಾನಿಗಳ ಬುದ್ಧಿಯಲ್ಲಿ
ಕುಳಿತುಕೊಳ್ಳುವುದೇ ಇಲ್ಲ. ಆತ್ಮಾಭಿಮಾನಿಗಳೇ ತಂದೆಯೊಂದಿಗೆ ಪ್ರೀತಿಯಿಡಲು ಸಾಧ್ಯ.
ಬಲಿಹಾರಿಯಾಗುವುದು ಚಿಕ್ಕಮ್ಮನ ಮನೆಯಂತಲ್ಲ. ದೊಡ್ಡ-ದೊಡ್ಡ ವ್ಯಕ್ತಿಗಳು ಬಲಿಹಾರಿಯಾಗಲು
ಸಾಧ್ಯವಿಲ್ಲ, ಅವರು ಬಲಿಹಾರಿಯ ಅರ್ಥವನ್ನೂ ತಿಳಿದುಕೊಂಡಿಲ್ಲ, ಅವರಿಗೆ ಬಲಿಹಾರಿಯಾಗುವುದರಲ್ಲಿ
ಹೃದಯ ವಿಧೀರ್ಣವಾಗುತ್ತದೆ. ಅನೇಕರು ಬಂಧನಮುಕ್ತರು ಇದ್ದಾರೆ, ಮಕ್ಕಳು ಮೊದಲಾದವರು ಯಾರೂ ಇಲ್ಲ.
ಬಾಬಾ, ತಾವೇ ನಮ್ಮ ಸರ್ವಸ್ವವಾಗಿದ್ದೀರಿ ಎಂದು ಹೇಳುತ್ತೀರಿ. ಹೀಗೆ ಕೇವಲ ಬಾಯಿಂದ ಹೇಳುತ್ತಾರೆ
ಆದರೆ ಸತ್ಯವಾಗಿ ಅಲ್ಲ. ತಂದೆಗೂ ಸಹ ಅಸತ್ಯವನ್ನೇ ಹೇಳಿಬಿಡುತ್ತಾರೆ. ಬಲಿಹಾರಿಯಾಗುತ್ತಾರೆಂದರೆ
ತಮ್ಮ ಮಮತ್ವವನ್ನು ತೆಗೆದುಹಾಕಬೇಕು. ಈಗಂತೂ ಅಂತಿಮ ಸಮಯವಾಗಿದೆಯೆಂದರೆ ಶ್ರೀಮತದಂತೆ
ನಡೆಯಬೇಕಾಗಿದೆ. ತನ್ನ ಸಂಪತ್ತಿನಿಂದಲೂ ಸಹ ಮಮತ್ವವು ಹೊರಟುಹೋಗಬೇಕು. ಹೀಗೆ ಅನೇಕರು
ಬಂಧನಮುಕ್ತರಾಗಿದ್ದಾರೆ. ಶಿವತಂದೆಯನ್ನು ತನ್ನವರನ್ನಾಗಿ ಮಾಡಿಕೊಂಡಿದ್ದಾರೆ, ಹೇಗೆ ದತ್ತು
ಮಾಡಿಕೊಳ್ಳುತ್ತಾರಲ್ಲವೆ. ಇವರು ನಮ್ಮ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಅವರ ಪೂರ್ಣ
ಆಸ್ತಿಯನ್ನು ಪಡೆಯಲು ನಾವು ಅವರನ್ನು ತಮ್ಮವರನ್ನಾಗಿ ಮಾಡಿಕೊಳ್ಳುತ್ತೇವೆ. ಯಾರು
ಮಕ್ಕಳಾಗಿಬಿಟ್ಟಿದ್ದಾರೆಯೋ ಅವರು ಮನೆತನದಲ್ಲಿ ಅವಶ್ಯವಾಗಿ ಬರುತ್ತಾರೆ ಆದರೆ ಅದರಲ್ಲಿ
ಪದವಿಗಳೆಷ್ಟಿದೆ, ಎಷ್ಟೊಂದು ಮಂದಿ ದಾಸ-ದಾಸಿಯರಿದ್ದಾರೆ, ಒಬ್ಬರು ಇನ್ನೊಬ್ಬರ ಮೇಲೆ ಆಜ್ಞೆ
ನಡೆಸುತ್ತಾರೆ. ದಾಸಿಯರಲ್ಲಿಯೂ ನಂಬರ್ವಾರ್ ಆಗುತ್ತಾರೆ. ಶ್ರೀಮಂತ ಮನೆತನದಲ್ಲಿ ಹೊರಗಿನ
ದಾಸ-ದಾಸಿಯರಂತೂ ಒಳಗೆ ಬರುವುದಿಲ್ಲ. ಯಾರು ತಂದೆಯ ಮಕ್ಕಳಾಗಿದ್ದಾರೆಯೋ ಅವರೇ ಆಗಬೇಕಾಗಿದೆ.
ಇಂತಿಂತಹ ಮಕ್ಕಳಿದ್ದಾರೆ, ಕೆಲವರಲ್ಲಿ ಒಂದು ಬಿಡಿಗಾಸಿನಷ್ಟೂ ಬುದ್ಧಿಯಿಲ್ಲ.
ಮಮ್ಮಾರವರನ್ನು ನೆನಪು
ಮಾಡಿ ಹಾಗೂ ನನ್ನ ರಥವನ್ನು ನೆನಪು ಮಾಡಿ ಎಂದು ತಂದೆಯು ಹೇಳುವುದಿಲ್ಲ. ತಂದೆಯು
ತಿಳಿಸುವುದೇನೆಂದರೆ ನನ್ನೊಬ್ಬನನ್ನೇ ನೆನಪು ಮಾಡಿ, ದೇಹದ ಎಲ್ಲಾ ಬಂಧನಗಳನ್ನು ಬಿಟ್ಟು ತನ್ನನ್ನು
ಆತ್ಮವೆಂದು ತಿಳಿಯಿರಿ. ತಂದೆಯು ತಿಳಿಸುತ್ತಾರೆ - ಪ್ರೀತಿಯಿಟ್ಟುಕೊಳ್ಳಬೇಕೆಂದರೆ ಒಬ್ಬರೊಂದಿಗೇ
ಇಡಿ ಆಗ ದೋಣಿಯು ಪಾರಾಗುವುದು. ತಂದೆಯ ಆದೇಶದಂತೆ ನಡೆಯಿರಿ, ಮೋಹಜೀತ ರಾಜನ ಕಥೆಯೂ ಇದೆಯಲ್ಲವೆ.
ಮೊದಲ ನಂಬರಿನಲ್ಲಿ ಮಕ್ಕಳಿರುತ್ತಾರೆ, ಮಕ್ಕಳಂತೂ ಆಸ್ತಿಗೆ ಮಾಲೀಕರಾಗುತ್ತಾರೆ. ಸ್ತ್ರೀಯಂತೂ
ಅರ್ಧಾಂಗಿಯಾಗಿದ್ದಾಳೆ, ಮಕ್ಕಳು ಪೂರ್ಣ ಮಾಲೀಕರಾಗಿಬಿಡುತ್ತಾರೆ ಆದ್ದರಿಂದ ಬುದ್ಧಿಯು ಆಕಡೆ
ಹೊರಟುಹೋಗುತ್ತದೆ. ತಂದೆಯನ್ನು ಈಗ ಪೂರ್ಣ ಮಾಲೀಕನನ್ನಾಗಿ ಮಾಡಿಕೊಳ್ಳುತ್ತೀರೆಂದರೆ ಇದೆಲ್ಲವನ್ನೂ
ನಿಮಗೆ ಕೊಟ್ಟುಬಿಡುತ್ತಾರೆ. ಲೇವಾ ದೇವಿಯ ಮಾತೇ ಇಲ್ಲ, ಇದು ತಿಳುವಳಿಕೆಯ ಮಾತಾಗಿದೆ. ಭಲೆ ನೀವು
ಕೇಳುತ್ತೀರಿ ಆದರೆ ನಾಳೆಯ ದಿನವೇ ಎಲ್ಲವೂ ಮರೆತುಹೋಗುತ್ತದೆ. ಬುದ್ಧಿಯಲಿದ್ದರೆ ಅನ್ಯರಿಗೂ
ತಿಳಿಸಿಕೊಡುತ್ತೀರಿ. ತಂದೆಯನ್ನು ನೆನಪು ಮಾಡುವುದರಿಂದ ನೀವು ಸ್ವರ್ಗದ ಮಾಲೀಕರಾಗುವಿರಿ, ಇದು
ಬಹಳ ಸಹಜವಾಗಿದೆ, ಕೇವಲ ನೀವು ಬಾಯಿಂದ ಹೇಳುತ್ತಾ ಇರಿ. ಗುರಿ-ಉದ್ದೇಶವನ್ನು ತಿಳಿಸುತ್ತಾ ಇರಿ.
ವಿಶಾಲಬುದ್ಧಿಯವರು ಬಹಳ ಬೇಗ ಅರಿತುಕೊಳ್ಳುತ್ತಾರೆ. ಅಂತ್ಯದಲ್ಲಿ ಈ ಚಿತ್ರ ಮೊದಲಾದುವುಗಳೇ
ಕೆಲಸಕ್ಕೆ ಬರುತ್ತವೆ. ಇದರಲ್ಲಿ ಪೂರ್ಣಜ್ಞಾನವು ತುಂಬಿದೆ. ಲಕ್ಷ್ಮಿ-ನಾರಾಯಣ ಮತ್ತು
ರಾಧೆ-ಕೃಷ್ಣರ ಸಂಬಂಧವೇನು? ಇದನ್ನು ಯಾರೂ ತಿಳಿದುಕೊಂಡಿಲ್ಲ. ಲಕ್ಷ್ಮಿ-ನಾರಾಯಣರು ಅವಶ್ಯವಾಗಿ
ಅಲ್ಲಿಗೆ ರಾಜಕುಮಾರ-ಕುಮಾರಿಯರಾಗಿರುತ್ತಾರೆ. ಬಿಕಾರಿಗಳಿಂದ ರಾಜಕುಮಾರರಾಗುತ್ತಾರಲ್ಲವೆ.
ಬಿಕಾರಿಯಿಂದ ರಾಜನಾಗುತ್ತಾರೆಂದು ಹೇಳುವುದಿಲ್ಲ, ರಾಜಕುಮಾರರಾದ ನಂತರವೇ ರಾಜರಾಗುತ್ತಾರೆ. ಈಗಂತೂ
ಬಹಳ ಸಹಜವಾಗಿದೆ ಆದ್ದರಿಂದ ಮಾಯೆಯು ಯಾರನ್ನಾದರೂ ಹಿಡಿದುಕೊಳ್ಳುತ್ತದೆ. ಅನ್ಯರ ನಿಂದನೆ ಮಾಡುವುದು,
ಗೇಲಿ ಮಾಡುವುದು, ಇದು ಅನೇಕರಿಗೆ ಅಭ್ಯಾಸವಾಗಿಬಿಟ್ಟಿದೆ. ಅವರಿಗೆ ಮತ್ತ್ಯಾವ ಕೆಲಸವೇ ಇಲ್ಲ.
ತಂದೆಯನ್ನು ನೆನಪೇ ಮಾಡುವುದಿಲ್ಲ, ಒಬ್ಬರು ಇನ್ನೊಬ್ಬರನ್ನು ನಿಂದನೆ ಮಾಡುವ ವ್ಯವಹಾರವನ್ನೇ
ಮಾಡುತ್ತಾರೆ. ಇದು ಮಾಯೆಯ ಪಾಠವಾಗಿದೆ. ತಂದೆಯ ಪಾಠವಂತೂ ಸಂಪೂರ್ಣ ನೇರವಾಗಿದೆ. ಅಂತಿಮದಲ್ಲಿ ಈ
ಸನ್ಯಾಸಿ ಮೊದಲಾದವರು ಜಾಗೃತರಾಗುತ್ತಾರೆ. ಜ್ಞಾನವು ಈ ಬ್ರಹ್ಮಾಕುಮಾರ-ಕುಮಾರಿಯರಲ್ಲಿದೆ ಎಂದು
ಹೇಳುತ್ತಾರೆ. ಕುಮಾರ-ಕುಮಾರಿಯರಂತೂ ಪವಿತ್ರರಾಗಿರುತ್ತಾರಲ್ಲವೆ. ಪ್ರಜಾಪಿತ ಬ್ರಹ್ಮನ
ಮಕ್ಕಳಾಗಿದ್ದಾರೆ, ನಮ್ಮಲ್ಲಿ ಯಾವುದೇ ಕೆಟ್ಟವಿಚಾರವೂ ಸಹ ಬರಬಾರದು. ಕೆಲವರಿಗೆ ಈಗಲೂ ಸಹ
ಕೆಟ್ಟವಿಚಾರಗಳು ಬರುತ್ತವೆ ನಂತರ ಇದಕ್ಕೆ ಪ್ರತಿಯಾಗಿ ಶಿಕ್ಷೆಯೂ ಬಹಳ ಕಠಿಣವಾಗಿದೆ. ತಂದೆಯಂತೂ
ಬಹಳಷ್ಟು ತಿಳಿಸುತ್ತಾರೆ ಆದರೂ ಸಹ ನಿಮ್ಮ ಚಲನೆಯು ಸರಿಯಿಲ್ಲದಿದ್ದರೆ ಇಲ್ಲಿರಲು
ಸಾಧ್ಯವಾಗುವುದಿಲ್ಲ. ಸ್ವಲ್ಪ ಶಿಕ್ಷೆಯನ್ನೂ ಕೊಡಬೇಕಾಗುತ್ತದೆ. ನೀವು ಯೋಗ್ಯರಲ್ಲ, ತಂದೆಗೆ ಮೋಸ
ಮಾಡುತ್ತೀರಿ, ನೀವು ತಂದೆಯನ್ನು ನೆನಪೂ ಮಾಡುವುದಿಲ್ಲ, ಸ್ಥಿತಿಯೂ ಕೆಳಗೆ ಬಂದುಬಿಡುತ್ತದೆ.
ಸ್ಥಿತಿಯು ಕೆಳಗೆ ಬರುವುದೇ ಶಿಕ್ಷೆಯಾಗಿದೆ. ಶ್ರೀಮತದಂತೆ ನಡೆಯದೇ ಇದ್ದರೆ ಪದವಿ
ಭ್ರಷ್ಟಮಾಡಿಕೊಳ್ಳುತ್ತೀರಿ. ತಂದೆಯ ಆದೇಶದಂತೆ ನಡೆಯದೇ ಇದ್ದರೆ ಇನ್ನು ಭೂತ ಪ್ರವೇಶತೆಯಾಗುತ್ತದೆ.
ಬಹಳ ದೊಡ್ಡ ಕಠಿಣ ಶಿಕ್ಷೆಗಳು ಈಗಲೇ ಸಿಗದಿರಲೆಂದು ತಂದೆಗೆ ಕೆಲಕೆಲವೊಮ್ಮೆ ವಿಚಾರ ಬರುತ್ತದೆ.
ಶಿಕ್ಷೆಗಳು ಬಹಳ ಗುಪ್ತವಾಗಿರುತ್ತದೆಯಲ್ಲವೆ. ಎಲ್ಲಿಯೂ ಕಠಿಣ ಶಿಕ್ಷೆಯು ಬರದಿರಲಿ. ಕೆಲವರು ಕೆಳಗೆ
ಬೀಳುತ್ತಾರೆ, ಶಿಕ್ಷೆಯನ್ನನುಭವಿಸುತ್ತಾರೆ. ತಂದೆಯಂತೂ ಮಕ್ಕಳಿಗೆ ಸನ್ನೆಯಿಂದಲೇ
ತಿಳಿಸುತ್ತಿರುತ್ತಾರೆ. ಅನೇಕರು ತಮ್ಮ ಅದೃಷ್ಟಕ್ಕೆ ಗೆರೆಯೆಳೆದುಕೊಳ್ಳುತ್ತಾರೆ. ತಂದೆಯು ಬಹಳ
ಎಚ್ಚರಿಕೆ ನೀಡುತ್ತಾರೆ - ಈಗ ಹುಡುಗಾಟಿಕೆ ಮಾಡುವ ಸಮಯವಲ್ಲ, ತಮ್ಮನ್ನು ಸುಧಾರಣೆ ಮಾಡಿಕೊಳ್ಳಿ,
ಅಂತಿಮ ಘಳಿಗೆಯು ಬರುವುದರಲ್ಲಿ ಇನ್ನೇನೂ ತಡವಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಯಾವುದೇ
ನಿಯಮಕ್ಕೆ ವಿರುದ್ಧವಾದ ಶ್ರೀಮತಕ್ಕೆ ವಿರುದ್ಧವಾದ ನಡವಳಿಕೆಯಲ್ಲಿ ನಡೆಯಬಾರದು. ತಮ್ಮನ್ನು ತಾವೇ
ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ಛೀ ಛೀ ಪತಿತ, ಕೊಳಕು ಮನುಷ್ಯರಿಂದ ತಮ್ಮನ್ನು ಸಂಭಾಲನೆ
ಮಾಡಿಕೊಳ್ಳಬೇಕಾಗಿದೆ.
2. ಬಂಧನ
ಮುಕ್ತರಾಗಿದ್ದರೆ ಸಂಪೂರ್ಣ ಬಲಿಹಾರಿಯಾಗಬೇಕಾಗಿದೆ. ತಮ್ಮ ಮಮತ್ವವನ್ನು ಕಳೆಯಬೇಕಾಗಿದೆ. ಎಂದೂ
ಯಾರದೇ ನಿಂದನೆ ಅಥವಾ ಪರಚಿಂತನೆ ಮಾಡಬಾರದು. ಕೊಳಕು ಕೆಟ್ಟವಿಚಾರಗಳಿಂದ ಸ್ವಯಂನ್ನು
ಮುಕ್ತವಾಗಿಟ್ಟುಕೊಳ್ಳಬೇಕಾಗಿದೆ.
ವರದಾನ:
ಸಮರ್ಥ ಸ್ಥಿತಿಯ
ಸ್ವಿಚ್ ಆನ್ ಮಾಡಿಕೊಂಡು ವ್ಯರ್ಥದ ಅಂಧಕಾರವನ್ನು ಸಮಾಪ್ತಿಗೊಳಿಸುವಂತಹ ಅವ್ಯಕ್ತ ಫರಿಶ್ತಾ ಭವ.
ಹೇಗೆ ಸ್ಥೂಲ ಲೈಟ್ನ
ಸ್ವಿಚ್ ಆನ್ ಮಾಡುವುದರಿಂದ ಅಂಧಕಾರವು ಸಮಾಪ್ತಿಯಾಗಿ ಬಿಡುತ್ತದೆ. ಹಾಗೆಯೇ ಸಮರ್ಥ ಸ್ಥಿತಿಯಾಗಿದೆ-
ಸ್ವಿಚ್. ಈ ಸ್ವಿಚ್ನ್ನು ಆನ್ ಮಾಡುತ್ತೀರೆಂದರೆ ವ್ಯರ್ಥದ ಅಂಧಕಾರವು ಸಮಾಪ್ತಿಯಾಗಿ ಬಿಡುತ್ತದೆ.
ಒಂದೊಂದು ವ್ಯರ್ಥ ಸಂಕಲ್ಪವನ್ನು ಸಮಾಪ್ತಿ ಮಾಡುವ ಪರಿಶ್ರಮದಿಂದ ಮುಕ್ತರಾಗಿ ಬಿಡುತ್ತೀರಿ. ಯಾವಾಗ
ಸ್ಥಿತಿಯು ಸಮರ್ಥವಾಗಿರುತ್ತದೆಯೆಂದರೆ ಮಹಾದಾನಿ-ವರದಾನಿ ಆಗಿಬಿಡುತ್ತೀರಿ. ಏಕೆಂದರೆ ದಾತಾನ
ಅರ್ಥವೇ ಆಗಿದೆ- ಸಮರ್ಥ. ಸಮರ್ಥರೇ ಕೊಡಲು ಸಾಧ್ಯವಾಗುವುದು ಮತ್ತು ಎಲ್ಲಿ ಸಮರ್ಥತೆಯಿದೆ ಅಲ್ಲಿ
ವ್ಯರ್ಥವು ಸಮಾಪ್ತಿಯಾಗಿ ಬಿಡುತ್ತದೆ. ಅಂದಮೇಲೆ ಅವ್ಯಕ್ತ ಫರಿಶ್ತೆಗಳ ಶ್ರೇಷ್ಠ ಕಾರ್ಯವು ಇದೇ
ಆಗಿದೆ.
ಸ್ಲೋಗನ್:
ಸತ್ಯತೆಯ
ಆಧಾರದಿಂದ ಸರ್ವ ಆತ್ಮರ ಹೃದಯದ ಆಶೀರ್ವಾದಗಳನ್ನು ಪ್ರಾಪ್ತಿ ಮಾಡಿಕೊಳ್ಳುವವರೇ ಭಾಗ್ಯವಂತ
ಆತ್ಮರಾಗಿದ್ದಾರೆ.