14.01.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನಿಮ್ಮ ದೃಷ್ಟಿಯು ಶರೀರದ ಕಡೆ ಹೋಗಬಾರದು, ತಮ್ಮನ್ನು ಆತ್ಮನೆಂದು ತಿಳಿಯಿರಿ, ಶರೀರವನ್ನು ನೋಡಬೇಡಿ”

ಪ್ರಶ್ನೆ:
ಪ್ರತಿಯೊಬ್ಬ ಬ್ರಾಹ್ಮಣಮಗು ವಿಶೇಷವಾಗಿ ಯಾವ ಎರಡು ಮಾತುಗಳ ಮೇಲೆ ಗಮನವಿಡಬೇಕಾಗಿದೆ?

ಉತ್ತರ:
1. ವಿದ್ಯೆಯ ಮೇಲೆ. 2. ದೈವೀಗುಣಗಳು. ಕೆಲವು ಮಕ್ಕಳಲ್ಲಿ ಕ್ರೋಧದ ಅಂಶವೂ ಸಹ ಇಲ್ಲ, ಇನ್ನೂ ಕೆಲವರಂತೂ ಕ್ರೋಧದಲ್ಲಿ ಬಂದು ಬಹಳ ಹೊಡೆದಾಡುತ್ತಾರೆ. ಮಕ್ಕಳು ವಿಚಾರ ಮಾಡಬೇಕು - ನಾವು ದೈವೀಗುಣಗಳನ್ನು ಧಾರಣೆ ಮಾಡಿ ದೇವತೆಗಳಾಗಬೇಕಾಗಿದೆ ಅಂದಾಗ ಎಂದೂ ಸಹ ಕೋಪದಲ್ಲಿ ಬಂದು ಮಾತನಾಡಬಾರದು. ತಂದೆಯು ತಿಳಿಸುತ್ತಾರೆ - ಒಂದುವೇಳೆ ಯಾವುದೇ ಮಕ್ಕಳಲ್ಲಿ ಕ್ರೋಧವಿದ್ದರೆ ಅವರು ಭೂತನಾಥ-ಭೂತನಾಥಿನಿಯಾಗಿದ್ದಾರೆ. ಅಂತಹ ಭೂತಗಳೊಂದಿಗೆ ನೀವು ಮಾತನಾಡಲೂಬಾರದು.

ಗೀತೆ:
ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೇನೆ.................

ಓಂ ಶಾಂತಿ.
ಮಕ್ಕಳು ಗೀತೆಯನ್ನು ಕೇಳಿದಿರಿ. ಅನ್ಯ ಯಾವುದೇ ಸತ್ಸಂಗಗಳಲ್ಲಿ ಹಾಡಿನ ಬಗ್ಗೆ ತಿಳಿಸುವುದಿಲ್ಲ. ಅಲ್ಲಿ ಶಾಸ್ತ್ರಗಳನ್ನು ತಿಳಿಸುತ್ತಾರೆ. ಹೇಗೆ ಗುರುದ್ವಾರದಲ್ಲಿ ಗ್ರಂಥದ ಎರಡು ವಚನಗಳನ್ನು ತೆಗೆಯುತ್ತಾರೆ ಮತ್ತೆ ಕಥೆಯನ್ನು ರಚಿಸುವವರು ಕುಳಿತು ಅದರ ವಿಸ್ತಾರ ಮಾಡುತ್ತಾರೆ. ಹಾಡಿನ ಬಗ್ಗೆ ತಿಳಿಸಿಕೊಡುವುದು ಎಲ್ಲಿಯೂ ಇರುವುದಿಲ್ಲ. ಈಗ ತಂದೆಯು ತಿಳಿಸುತ್ತಾರೆ - ಇವೆಲ್ಲಾ ಹಾಡುಗಳು ಭಕ್ತಿಮಾರ್ಗದ್ದಾಗಿದೆ. ಮಕ್ಕಳಿಗೆ ತಿಳಿಸಲಾಗಿದೆ - ಜ್ಞಾನವೇ ಬೇರೆಯಾಗಿದೆ, ಇದು ನಿರಾಕಾರ ಶಿವನಿಂದಲೇ ಸಿಗುತ್ತದೆ. ಇದರಿಂದಲೇ ಆತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ. ಜ್ಞಾನವು ಅನೇಕ ಪ್ರಕಾರದ್ದಿರುತ್ತದೆ. ಯಾರೊಂದಿಗಾದರೂ ಹೇಳಲಾಗುತ್ತದೆ - ಈ ರತ್ನಗಂಬಳಿಯು ಹೇಗೆ ತಯಾರಾಗುತ್ತದೆ ಎಂದು ನಿಮಗೆ ತಿಳುವಳಿಕೆಯಿದೆಯೇ? ಹೀಗೆ ಪ್ರತಿಯೊಂದು ವಸ್ತುವಿನ ಜ್ಞಾನವಿರುತ್ತದೆ. ಅಲ್ಲಿ ಎಲ್ಲವೂ ದೈಹಿಕ ಮಾತುಗಳಾಗಿವೆ. ಮಕ್ಕಳಿಗೆ ತಿಳಿದಿದೆ - ನಾವಾತ್ಮಗಳ ಆತ್ಮಿಕ ತಂದೆಯು ಅವರೊಬ್ಬರೇ ಆಗಿದ್ದಾರೆ, ಅವರ ರೂಪವು ಕಾಣುವುದಿಲ್ಲ. ಆ ನಿರಾಕಾರನ ಚಿತ್ರವೂ ಸಹ ಸಾಲಿಗ್ರಾಮಗಳ ಮಾದರಿಯಲ್ಲಿದೆ. ಅವರನ್ನೇ ಪರಮಾತ್ಮನೆಂದು ಹೇಳುತ್ತಾರೆ, ಅವರಿಗೆ ನಿರಾಕಾರನೆಂದು ಕರೆಯಲಾಗುತ್ತದೆ. ಮನುಷ್ಯರ ತರಹ ಆಕಾರವಿಲ್ಲ, ಪ್ರತಿಯೊಂದು ವಸ್ತುವಿನ ಆಕಾರವು ಅವಶ್ಯವಾಗಿ ಇರುತ್ತದೆ. ಅದೆಲ್ಲದರಲ್ಲಿ ಚಿಕ್ಕದಕ್ಕಿಂತ ಚಿಕ್ಕ ಆಕಾರವು ಆತ್ಮದ್ದಾಗಿದೆ, ಅದಕ್ಕೆ ಸೃಷ್ಟಿಯೆಂದೇ ಹೇಳಲಾಗುತ್ತದೆ. ಆತ್ಮವು ಬಹಳ ಸೂಕ್ಷ್ಮವಾಗಿದೆ, ಅದು ಈ ಕಣ್ಣುಗಳಿಗೆ ಕಾಣುವುದಿಲ್ಲ. ನೀವು ಮಕ್ಕಳಿಗೆ ಈಗ ದಿವ್ಯದೃಷ್ಟಿಯು ಸಿಗುತ್ತದೆ, ಇದರಿಂದ ಎಲ್ಲವನ್ನೂ ಸಾಕ್ಷಾತ್ಕಾರ ಮಾಡುತ್ತೀರಿ. ಯಾರು ಕಳೆದುಹೋಗಿದ್ದಾರೆಯೋ ಅವರನ್ನು ದಿವ್ಯದೃಷ್ಟಿಯಿಂದ ನೋಡಲಾಗುತ್ತದೆ. ಮೊಟ್ಟಮೊದಲನೆಯದಾಗಿ ಇವರು ಬಂದು ಹೋಗಿದ್ದಾರೆ, ಈಗ ಮತ್ತೆ ಬಂದಿದ್ದಾರೆ ಆದ್ದರಿಂದ ಅವರ ಸಾಕ್ಷಾತ್ಕಾರವೂ ಆಗುತ್ತದೆ. ನೋಡಲು ಬಹಳ ಸೂಕ್ಷ್ಮವಾಗಿದ್ದಾರೆ, ಇದರಿಂದಲೇ ಅರಿತುಕೊಳ್ಳಬಹುದು, ಪರಮಪಿತ ಪರಮಾತ್ಮನ ವಿನಃ ಆತ್ಮನ ಜ್ಞಾನವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಮನುಷ್ಯರು ಹೇಗೆ ಆತ್ಮದ ಜ್ಞಾನವನ್ನು ಯಥಾರ್ಥವಾಗಿ ತಿಳಿದುಕೊಂಡಿಲ್ಲವೋ ಹಾಗೆಯೇ ಪರಮಾತ್ಮನನ್ನು ಯಥಾರ್ಥವಾಗಿ ಅರಿತುಕೊಂಡಿಲ್ಲ. ಪ್ರಪಂಚದಲ್ಲಿ ಮನುಷ್ಯರದು ಅನೇಕ ಮತಗಳಿವೆ. ಆತ್ಮವು ಪರಮಾತ್ಮನಲ್ಲಿ ಲೀನವಾಗುತ್ತದೆ ಎಂದು ಕೆಲವರು ಹೇಳುತ್ತಾರೆ, ಇನ್ನೂ ಕೆಲವರು ಇನ್ನೂ ಕೆಲವೊಂದು ರೀತಿಯಲ್ಲಿ ಹೇಳುತ್ತಾರೆ. ಈಗ ನೀವು ಮಕ್ಕಳು ಅರಿತುಕೊಂಡಿದ್ದೀರಿ, ಅದರಲ್ಲಿಯೂ ನಂಬರ್ವಾರ್ ಪುರುಷಾರ್ಥದನುಸಾರ ಎಲ್ಲರ ಬುದ್ಧಿಯಲ್ಲಿ ಏಕರಸವಾಗಿ ಕುಳಿತುಕೊಳ್ಳುವುದಿಲ್ಲ. ಪದೇ-ಪದೇ ಬುದ್ಧಿಯಲ್ಲಿ ಕುಳ್ಳರಿಸಬೇಕಾಗುತ್ತದೆ. ನಾವು ಆತ್ಮಗಳಾಗಿದ್ದೇವೆ, ಆತ್ಮವೇ 84 ಜನ್ಮಗಳ ಪಾತ್ರವನ್ನಭಿನಯಿಸಬೇಕಾಗುತ್ತದೆ. ಈಗ ತಂದೆಯು ತಿಳಿಸುತ್ತಾರೆ - ತನ್ನನ್ನು ಆತ್ಮನೆಂದು ತಿಳಿದು ನಾನು ಪರಮಪಿತ ಪರಮಾತ್ಮನನ್ನು ಅರಿಯಿರಿ ಮತ್ತು ನೆನಪು ಮಾಡಿ. ನಾನು ಇವರಲ್ಲಿ ಪ್ರವೇಶ ಮಾಡಿ ನೀವು ಮಕ್ಕಳಿಗೆ ಜ್ಞಾನವನ್ನು ಕೊಡುತ್ತೇನೆ. ನೀವು ಮಕ್ಕಳು ತಮ್ಮನ್ನು ಆತ್ಮವೆಂದು ತಿಳಿಯುವುದಿಲ್ಲ ಆದ್ದರಿಂದ ನಿಮ್ಮ ದೃಷ್ಟಿಯು ಶರೀರದಕಡೆ ಹೋಗುತ್ತದೆ. ವಾಸ್ತವದಲ್ಲಿ ನಿಮಗೆ ಇವರೊಂದಿಗೆ (ಬ್ರಹ್ಮಾ) ಯಾವುದೇ ಕೆಲಸವಿಲ್ಲ, ಸರ್ವರ ಸದ್ಗತಿದಾತನು ಶಿವತಂದೆಯಾಗಿದ್ದಾರೆ, ಅವರ ಮತದಂತೆ ಎಲ್ಲರಿಗೂ ಸುಖಕೊಡುತ್ತೇವೆ. ನಾವು ಎಲ್ಲರಿಗೆ ಸುಖ ಕೊಡುತ್ತೇವೆಂದು ಇವರಿಗೂ (ಬ್ರಹ್ಮಾ) ಅಹಂಕಾರವು ಬರುವುದಿಲ್ಲ. ಯಾರು ತಂದೆಯನ್ನು ಪೂರ್ಣ ನೆನಪು ಮಾಡುವುದಿಲ್ಲವೋ ಅವರಿಂದ ಅವಗುಣಗಳು ಬಿಟ್ಟುಹೋಗುವುದಿಲ್ಲ. ತಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳುವುದಿಲ್ಲ, ಮನುಷ್ಯರಂತೂ ಆತ್ಮವನ್ನಾಗಲಿ, ಪರಮಾತ್ಮನನ್ನಾಗಲಿ ಅರಿತುಕೊಂಡಿಲ್ಲ. ಸರ್ವವ್ಯಾಪಿಯ ಜ್ಞಾನವನ್ನೂ ಸಹ ಭಾರತವಾಸಿಗಳೇ ಹರಡಿದ್ದಾರೆ. ನಿಮ್ಮಲ್ಲಿಯೂ ಸಹ ಸೇವಾಧಾರಿ ಮಕ್ಕಳೇ ಇದನ್ನು ಅರಿತುಕೊಳ್ಳುತ್ತಾರೆ, ಉಳಿದವರೆಲ್ಲರೂ ಅಷ್ಟೊಂದು ತಿಳಿದುಕೊಳ್ಳುವುದಿಲ್ಲ. ಒಂದುವೇಳೆ ತಂದೆಯ ಪೂರ್ಣಪರಿಚಯ ಮಕ್ಕಳಿಗೆ ಇದ್ದಿದ್ದೇ ಆದರೆ ತಂದೆಯನ್ನು ನೆನಪು ಮಾಡುವರು ಮತ್ತು ತನ್ನಲ್ಲಿ ದೈವೀಗುಣಗಳನ್ನು ಧಾರಣೆ ಮಾಡಿಕೊಳ್ಳುವರು.

ಶಿವತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ - ಇವು ಹೊಸ nಮಾತುಗಳಾಗಿವೆ, ಬ್ರಾಹ್ಮಣರೂ ಸಹ ಅವಶ್ಯವಾಗಿ ಬೇಕು. ಪ್ರಜಾಪಿತ ಬ್ರಹ್ಮನ ಸಂತಾನರು ಯಾವಾಗ ಆಗುತ್ತಾರೆ ಎಂಬುದು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಬ್ರಾಹ್ಮಣರಂತೂ ಅನೇಕಾನೇಕ ಮಂದಿಯಿದ್ದಾರೆ ಆದರೆ ಅವರು ಕುಖವಂಶಾವಳಿಯಾಗಿದ್ದಾರೆ. ಅವರೇನೂ ಮುಖವಂಶಾವಳಿ ಬ್ರಹ್ಮನ ಸಂತಾನರಲ್ಲ. ಬ್ರಹ್ಮನ ಸಂತಾನರಿಗಂತೂ ತಂದೆ ಈಶ್ವರನಿಂದ ಆಸ್ತಿಯು ಸಿಗುತ್ತದೆ. ಈಗ ನಿಮಗೆ ಆಸ್ತಿಯು ಸಿಗುತ್ತದೆಯಲ್ಲವೆ! ನೀವು ಬ್ರಾಹ್ಮಣರೇ ಬೇರೆಯಾಗಿದ್ದೀರಿ, ಅವರೇ ಬೇರೆಯಾಗಿದ್ದಾರೆ. ನೀವು ಸಂಗಮಯುಗದಲ್ಲಾಗುತ್ತೀರಿ, ಅವರು ದ್ವಾಪರ-ಕಲಿಯುಗದಲ್ಲಾಗುತ್ತಾರೆ. ಈ ಸಂಗಮಯುಗೀ ಬ್ರಾಹ್ಮಣರೇ ಬೇರೆಯಾಗಿದ್ದೀರಿ. ಪ್ರಜಾಪಿತ ಬ್ರಹ್ಮಾನ ಅನೇಕ ಮಕ್ಕಳಿದ್ದೀರಿ. ಭಲೆ ಲೌಕಿಕತಂದೆಗೂ ಬ್ರಹ್ಮನೆಂದೇ ಹೇಳುತ್ತಾರೆ ಏಕೆಂದರೆ ಮಕ್ಕಳಿಗೆ ಜನ್ಮ ನೀಡುತ್ತಾರೆ ಆದರೆ ಅದು ದೈಹಿಕ ಮಾತಾಗಿದೆ. ಈಗ ತಂದೆಯಂತೂ ಎಲ್ಲಾ ಆತ್ಮಗಳು ನನ್ನ ಮಕ್ಕಳಾಗಿದ್ದಾರೆ ಎಂದು ಹೇಳುತ್ತಾರೆ. ನೀವು ಮಧುರಾತಿ ಮಧುರ ಆತ್ಮೀಯ ಮಕ್ಕಳಾಗಿದ್ದೀರಿ, ಇದು ಅನ್ಯರಿಗೆ ತಿಳಿಸುವುದು ಬಹಳ ಸಹಜವಾಗಿದೆ. ಶಿವತಂದೆಗೆ ತಮ್ಮದೇ ಆದ ಶರೀರವಿಲ್ಲ. ಶಿವಜಯಂತಿಯನ್ನಾಚರಿಸುತ್ತಾರೆ ಆದರೆ ಅವರ ಶರೀರವು ಕಾಣುವುದಿಲ್ಲ. ಉಳಿದಂತೆ ಮತ್ತೆಲ್ಲರಿಗೂ ಶರೀರವಿದೆ, ಎಲ್ಲಾ ಆತ್ಮಗಳಿಗೂ ತನ್ನತನ್ನದೇ ಆದ ಶರೀರವಿದೆ. ಎಲ್ಲರಿಗೆ ಶರೀರಕ್ಕೆ ಹೆಸರಿರುತ್ತದೆ ಆದರೆ ಪರಮಾತ್ಮನಿಗೆ ತನ್ನ ಶರೀರವೇ ಇಲ್ಲ ಆದ್ದರಿಂದ ಅವರಿಗೆ ಪರಮ ಆತ್ಮನೆಂದು ಕರೆಯಲಾಗುತ್ತದೆ. ಅವರ ಹೆಸರೇ ಆಗಿದೆ - ಶಿವ. ಅದು ಎಂದೂ ಸಹ ಬದಲಾಗುವುದಿಲ್ಲ, ಶರೀರಗಳು ಬದಲಾಗುವುದರಿಂದ ಶರೀರದ ಹೆಸರೂ ಬದಲಾಗುತ್ತದೆ ಆದರೆ ಶಿವತಂದೆಯು ತಿಳಿಸುತ್ತಾರೆ - ಸದಾ ನಿರಾಕಾರ ಪರಮಪಿತ ಆಗಿದ್ದೇನೆ. ನಾಟಕದ ಯೋಜನೆಯನುಸಾರ ಈಗ ಈ ಶರೀರವನ್ನು ತೆಗೆದುಕೊಂಡಿದ್ದೇನೆ. ಸನ್ಯಾಸಿಗಳಿಗೂ ಸಹ ಹೆಸರು ಬದಲಾಗುತ್ತದೆ. ಗುರುಗಳಿಗೆ ಶಿಷ್ಯರಾಗುತ್ತಾರೆಂದರೆ ಅವರ ಹೆಸರು ಬದಲಾಗುತ್ತದೆ. ನಿಮ್ಮ ಹೆಸರುಗಳೂ ಸಹ ಬದಲಾಯಿಸಲಾಗುತ್ತಿತ್ತು ಆದರೆ ಎಲ್ಲಿಯವರೆಗೆ ಹೆಸರನ್ನು ಬದಲಾಯಿಸುತ್ತಿರುವುದು! ಅಲ್ಲದೆ ಎಷ್ಟೊಂದು ಮಂದಿ ಓಡಿಹೋದರು. ಯಾರು ಆ ಸಮಯದಲ್ಲಿದ್ದರೋ ಅವರ ಹೆಸರನ್ನು ಇಡಲಾಯಿತು, ಈಗ ಹೆಸರುಗಳನ್ನಿಡುವುದಿಲ್ಲ, ಯಾರ ಮೇಲೂ ವಿಶ್ವಾಸವಿಲ್ಲ. ಮಾಯೆಯು ಅನೇಕರನ್ನು ಸೋಲಿಸುತ್ತದೆ ಆಗ ಓಡಿಹೋಗುತ್ತಾರೆ ಆದ್ದರಿಂದ ತಂದೆಯು ಯಾರಿಗೂ ಬೇರೆ ಹೆಸರನ್ನಿಡುವುದಿಲ್ಲ. ಯಾರಿಗೆ ಇಡುವುದು, ಯಾರಿಗೆ ಇಡದೇ ಇರುವುದು ಅದೂ ಸಹ ಸರಿಯಲ್ಲ. ಬಾಬಾ, ನಾವಂತೂ ತಮ್ಮವರಾಗಿಬಿಟ್ಟಿದ್ದೇವೆ ಎಂದು ಎಲ್ಲರೂ ಹೇಳುತ್ತಾರೆ ಆದರೆ ಯಥಾರ್ಥರೀತಿಯಲ್ಲಿ ನನ್ನವರಾಗುತ್ತಾರೆಯೇ ಅನೇಕ ಮಕ್ಕಳು ವಾರಸುಧಾರರಾಗುವ ರಹಸ್ಯವನ್ನೂ ಅರಿತುಕೊಂಡಿಲ್ಲ. ತಂದೆಯ ಬಳಿ ಮಿಲನ ಮಾಡಲು ಬರುತ್ತಾರೆ ಆದರೆ ವಾರಸುಧಾರರಾಗಿಲ್ಲ, ವಿಜಯಮಾಲೆಯಲ್ಲಿ ಬರಲು ಸಾಧ್ಯವಿಲ್ಲ. ನಾವಂತೂ ವಾರಸುಧಾರರಾಗಿದ್ದೇವೆಂದು ಕೆಲವು ಮಕ್ಕಳು ತಿಳಿಯುತ್ತಾರೆ ಆದರೆ ತಂದೆಯು ತಿಳಿಯುತ್ತಾರೆ - ಇವರು ವಾರಸುಧಾರರಲ್ಲ. ವಾರಸುಧಾರರಾಗಲು ಭಗವಂತನನ್ನು ತನ್ನ ವಾರಸುಧಾರನನ್ನಾಗಿ ಮಾಡಿಕೊಳ್ಳಬೇಕಾಗುವುದು. ಈ ರಹಸ್ಯವನ್ನು ಅರಿತುಕೊಳ್ಳುವುದೂ ಸಹ ಪರಿಶ್ರಮವಿದೆ. ವಾರಸುಧಾರರೆಂದು ಯಾರಿಗೆ ಹೇಳಲಾಗುತ್ತದೆ ಎಂಬುದನ್ನು ತಂದೆಯು ತಿಳಿಸುತ್ತಾರೆ - ಭಗವಂತನನ್ನು ಯಾರಾದರೂ ವಾರಸುಧಾರನನ್ನಾಗಿ ಮಾಡಿಕೊಂಡರೆ ಆಸ್ತಿಯನ್ನು ಕೊಡಬೇಕಾಗುತ್ತದೆ ಆಗಲೇ ತಂದೆಯು ವಾರಸುಧಾರನನ್ನಾಗಿ ಮಾಡಿಕೊಳ್ಳುವರು. ಆಸ್ತಿಯನ್ನು ಬಡವರ ವಿನಃ ಯಾವುದೇ ಸಾಹುಕಾರರು ಕೊಡಲು ಸಾಧ್ಯವಿಲ್ಲ. ಮಾಲೆಯು ಕೆಲವರದೇ ಆಗುತ್ತದೆ. ನೀವು ವಾರಸುಧಾರರಾಗಲು ಹಕ್ಕುದಾರರೋ ಅಥವಾ ಇಲ್ಲವೋ? ಎಂದು ತಂದೆಯೊಂದಿಗೆ ಕೇಳಿದರೆ ಅದಕ್ಕೆ ತಂದೆಯು ತಿಳಿಸಬಲ್ಲರು, ಈ ಬ್ರಹ್ಮಾತಂದೆಯೂ ತಿಳಿಸುತ್ತಾರೆ. ಇದು ತಿಳಿದುಕೊಳ್ಳುವ ಸಾಮಾನ್ಯ ಮಾತಾಗಿದೆ. ವಾರಸುಧಾರರಾಗುವುದರಲ್ಲಿಯೂ ಬಹಳ ತಿಳುವಳಿಕೆ ಬೇಕು. ಲಕ್ಷ್ಮಿ-ನಾರಾಯಣರು ವಿಶ್ವದ ಮಾಲೀಕರಾಗಿದ್ದರು ಎಂದು ನೋಡುತ್ತೀರಿ ಆದರೆ ಅವರು ಅಂತಹ ಮಾಲೀಕತನವನ್ನು ಹೇಗೆ ಪಡೆದರು? ಇದು ಯಾರಿಗೂ ಸಹ ತಿಳಿದಿಲ್ಲ. ಈಗ ನಿಮ್ಮ ಗುರಿ-ಧ್ಯೇಯ ಎದುರಿನಲ್ಲಿದೆ - ನೀವು ಇಂತಹವ (ಲಕ್ಷ್ಮಿ-ನಾರಯಣ) ರಾಗಬೇಕಾಗಿದೆ. ಮಕ್ಕಳೂ ಸಹ ಹೇಳುತ್ತೀರಿ - ನಾವು ಸೂರ್ಯವಂಶಿ ಲಕ್ಷ್ಮಿ-ನಾರಾಯಣರಾಗಬೇಕಾಗಿದೆ, ಚಂದ್ರವಂಶಿ ರಾಮ-ಸೀತೆಯರಾಗುವುದಿಲ್ಲ. ರಾಮ-ಸೀತೆಯರಿಗೂ ಸಹ ಶಾಸ್ತ್ರದಲ್ಲಿ ನಿಂದನೆ ಮಾಡಿದ್ದಾರೆ. ಲಕ್ಷ್ಮಿ-ನಾರಾಯಣರು ಎಂದೂ ಸಹ ನಿಂದನೆಯನ್ನು ಕೇಳುವುದಿಲ್ಲ. ಶಿವಬಾಬಾರವರಿಗೆ ಕೃಷ್ಣನಿಗೂ ಸಹ ನಿಂದನೆಯಿದೆ. ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳನ್ನು ಇಷ್ಟೊಂದು ಶ್ರೇಷ್ಠಾತಿಶ್ರೇಷ್ಠರನ್ನಾಗಿ ಮಾಡುತ್ತೇನೆ, ನನಗಿಂತಲೂ ಮಕ್ಕಳು ಮುಂದೆಹೋಗುತ್ತೀರಿ. ಲಕ್ಷ್ಮಿ-ನಾರಾಯಣರಿಗೆ ಯಾರೂ ನಿಂದನೆ ಮಾಡುವುದಿಲ್ಲ. ಭಲೆ ಕೃಷ್ಣನ ಆತ್ಮವು ಅವರೇ ಆಗಿದ್ದಾರೆ ಆದರೆ ತಿಳಿದುಕೊಳ್ಳದಿರುವ ಕಾರಣ ನಿಂದನೆಯನ್ನು ಮಾಡುತ್ತಾರೆ. ಲಕ್ಷ್ಮಿ-ನಾರಾಯಣರ ಮಂದಿರವನ್ನೂ ಸಹ ಖುಷಿಯಿಂದ ಕಟ್ಟುತ್ತಾರೆ. ವಾಸ್ತವದಲ್ಲಿ ರಾಧಾಕೃಷ್ಣರ ಮಂದಿರವನ್ನು ಮಾಡಬೇಕು ಏಕೆಂದರೆ ಅವರು ಸತೋಪ್ರಧಾನರಾಗಿದ್ದಾರೆ, ಅವರದೇ ಯುವಅವಸ್ಥೆಯಾಗಿದೆ. ಲಕ್ಷ್ಮಿ-ನಾರಾಯಣರನ್ನು ಸತೋ ಎಂದು ಕರೆಯಲಾಗುತ್ತದೆ. ರಾಧಾಕೃಷ್ಣರು ಚಿಕ್ಕವರಾಗಿರುವುದರಿಂದ ಸತೋಪ್ರಧಾನರೆಂದು ಕರೆಯಲಾಗುತ್ತದೆ. ಚಿಕ್ಕಮಗು ಮಹಾತ್ಮನ ಸಮಾನವಾಗಿರುತ್ತದೆ. ಹೇಗೆ ಚಿಕ್ಕಮಕ್ಕಳಿಗೆ ವಿಕಾರದ ಅರಿವೇ ಇರುವುದಿಲ್ಲ ಹಾಗೆಯೇ ಅಲ್ಲಿ ದೊಡ್ಡವರಿಗೂ ಸಹ ವಿಕಾರವೆಂದರೆ ಏನು ಎಂಬ ತಿಳುವಳಿಕೆಯಿರುವುದಿಲ್ಲ. ಈ ಐದುಭೂತಗಳು ಅಲ್ಲಿರುವುದಿಲ್ಲ. ಐದು ವಿಕಾರಗಳ ಅರಿವೇ ಇರುವುದಿಲ್ಲ. ಈ ಸಮಯದಲ್ಲಿ ರಾತ್ರಿಯಾಗಿದೆ, ಕಾಮದ ಹೊಡೆತವೂ ಸಹ ರಾತ್ರಿಯಲ್ಲಿಯೇ ಇರುತ್ತದೆ. ದೇವತೆಗಳು ಹಗಲಿನಲ್ಲಿ ಇರುವುದರಿಂದ ಅಲ್ಲಿ ವಿಕಾರವಿರುವುದಿಲ್ಲ. ರಾತ್ರಿಯಲ್ಲಿ ಎಲ್ಲರೂ ವಿಕಾರಿಗಳಾಗಿದ್ದಾರೆ. ಯಾವಾಗ ಹಗಲು ಬರುತ್ತದೆಯೋ ಆಗ ನಮ್ಮಲ್ಲಿರುವ ಎಲ್ಲಾ ವಿಕಾರಗಳು ಹೊರಟುಹೋಗುತ್ತವೆ ನಂತರ ವಿಕಾರವೆಂದರೆ ಏನೆಂಬುದು ಅರಿವಿರುವುದಿಲ್ಲ. ಇದು ರಾವಣ ವಿಕಾರೀ ಗುಣವಾಗಿದೆ. ಇದು ವಿಕಾರಿಪ್ರಪಂಚವಾಗಿದೆ, ನಿರ್ವಿಕಾರಿ ಪ್ರಪಂಚದಲ್ಲಿ ವಿಕಾರದ ಯಾವುದೇ ಮಾತುಗಳಿರುವುದಿಲ್ಲ. ಅದಕ್ಕೆ ಈಶ್ವರೀಯ ರಾಜ್ಯವೆಂದು ಕರೆಯಲಾಗುತ್ತದೆ. ಇದು ಆಸುರೀಯ ರಾಜ್ಯವಾಗಿದೆ. ಇದನ್ನು ಯಾರೂ ಸಹ ತಿಳಿದುಕೊಂಡಿಲ್ಲ, ನೀವು ಎಲ್ಲವನ್ನೂ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದಿದ್ದೀರಿ. ಅನೇಕ ಮಕ್ಕಳಿದ್ದೀರಿ, ಇಷ್ಟೆಲ್ಲಾ ಬಿ.ಕೆ.ಗಳು ಯಾರ ಮಕ್ಕಳಾಗಿದ್ದಾರೆ ಎಂಬುದನ್ನು ಯಾವುದೇ ಮನುಷ್ಯರು ತಿಳಿದುಕೊಳ್ಳಲು ಸಾಧ್ಯವಿಲ್ಲ. ಸದಾ ಶಿವತಂದೆಯನ್ನು ನೆನಪು ಮಾಡಲಾಗುತ್ತದೆ ಬ್ರಹ್ಮಾತಂದೆಯನ್ನಲ್ಲ. ಇವರೂ (ಬ್ರಹ್ಮಾ) ಸಹ ಶಿವತಂದೆಯನ್ನೇ ನೆನಪು ಮಾಡಿ ಎಂದು ಹೇಳುತ್ತಾರೆ, ಇದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಮತ್ತೆ ಯಾರನ್ನಾದರೂ ನೆನಪು ಮಾಡಿದರೆ ವಿಕರ್ಮ ವಿನಾಶವಾಗುವುದಿಲ್ಲ. ಗೀತೆಯಲ್ಲಿಯೂ ಸಹ ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಹೇಳಲಾಗಿದೆ. ಈ ರೀತಿ ಕೃಷ್ಣನು ಹೇಳಲು ಸಾಧ್ಯವಿಲ್ಲ. ನಿರಾಕಾರ ತಂದೆಯಿಂದಲೇ ಆಸ್ತಿಯು ಸಿಗುತ್ತದೆ. ತನ್ನನ್ನು ಯಾವಾಗ ಆತ್ಮನೆಂದು ತಿಳಿದುಕೊಳ್ಳುತ್ತೀರಿ ಆಗ ನಿರಾಕಾರ ತಂದೆಯನ್ನು ನೆನಪು ಮಾಡುವಿರಿ. ನಾನು ಆತ್ಮನಾಗಿದ್ದೇನೆ, ಮೊದಲು ಇದನ್ನು ಪಕ್ಕಾನಿಶ್ಚಯ ಮಾಡಿಕೊಳ್ಳಬೇಕು. ನನ್ನ ತಂದೆ ಪರಮಾತ್ಮ, ನನ್ನನ್ನು ನೆನಪು ಮಾಡಿದ್ದೇ ಆದರೆ ನಾನು ನಿಮಗೆ ಆಸ್ತಿಯನ್ನು ಕೊಡುತ್ತೇನೆ ಎಂದು ಅವರು ಹೇಳುತ್ತಾರೆ. ನಾನು ಎಲ್ಲರಿಗೂ ಸುಖವನ್ನೇ ಕೊಡುವವನಾಗಿದ್ದೇನೆ, ನಾನು ಎಲ್ಲಾ ಆತ್ಮರನ್ನು ಶಾಂತಿಧಾಮದಲ್ಲಿ ಕರೆದುಕೊಂಡು ಹೋಗುತ್ತೇನೆ. ಯಾರು ಕಲ್ಪದ ಹಿಂದೆ ಆಸ್ತಿಯನ್ನು ತೆಗೆದುಕೊಂಡಿದ್ದರೋ ಅವರೇ ಬಂದು ಆಸ್ತಿಯನ್ನು ತೆಗೆದುಕೊಂಡು ಬ್ರಾಹ್ಮಣರಾಗುತ್ತಾರೆ. ಬ್ರಾಹ್ಮಣರಲ್ಲಿಯೂ ಕಚ್ಚಾ ಮಕ್ಕಳು ಮತ್ತು ಪಕ್ಕಾ ಮಕ್ಕಳೂ ಇದ್ದಾರೆ. ಸ್ವಂತಮಕ್ಕಳೂ ಇರುತ್ತಾರೆ ಮತ್ತು ಮಲಮಕ್ಕಳೂ ಆಗುತ್ತಾರೆ. ನಾವು ಶಿವತಂದೆಯ ವಂಶಾವಳಿಗಳಾಗಿದ್ದೇವೆ. ಇದು ಹೇಗೆ ಮನೆತನವು ವೃದ್ಧಿಯಾಗುತ್ತದೆಯೋ ಎಂಬುದು ತಿಳಿದಿದೆ. ನೀವು ಬ್ರಾಹ್ಮಣರಾದನಂತರ ಮರಳಿ ಮನೆಗೆ ಹೋಗಬೇಕು, ಎಲ್ಲಾ ಆತ್ಮರು ಶರೀರವನ್ನು ಬಿಟ್ಟು ಹಿಂತಿರುಗಿ ಹೋಗಬೇಕಾಗಿದೆ. ಪಾಂಡವರು ಮತ್ತು ಕೌರವರು ಇಬ್ಬರೂ ಶರೀರವನ್ನು ಬಿಡಬೇಕಾಗಿದೆ. ನೀವು ಜ್ಞಾನದ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತೀರಿ ಮತ್ತೆ ಅದರನುಸಾರವಾಗಿ ಪ್ರಾಲಬ್ಧವು ಸಿಗುತ್ತದೆ. ಅದೂ ಸಹ ಡ್ರಾಮಾದಲ್ಲಿ ನೊಂದಾಯಿಸಿದೆ ನಂತರ ಜ್ಞಾನದ ಪಾತ್ರವು ಸಮಾಪ್ತಿಯಾಗುತ್ತದೆ. ನಿಮಗೆ 84 ಜನ್ಮಗಳ ನಂತರ ಈಗ ಜ್ಞಾನವು ಸಿಕ್ಕಿದೆ ಮತ್ತೆ ಈ ಜ್ಞಾನವು ಪ್ರಾಯಃಲೋಪವಾಗಿಬಿಡುತ್ತದೆ. ನೀವು ಇದರ ಪ್ರಾಲಬ್ಧವನ್ನು ಭೋಗಿಸುತ್ತೀರಿ. ಅಲ್ಲಿ ಬೇರೆ ಯಾವುದೇ ಧರ್ಮದವರ ಚಿತ್ರ ಮುಂತಾದುವುಗಳು ಇರುವುದಿಲ್ಲ. ನಿಮ್ಮದು ಭಕ್ತಿಮಾರ್ಗದಲ್ಲಿಯೂ ಚಿತ್ರಗಳಿರುತ್ತವೆ. ಸತ್ಯಯುಗದಲ್ಲಿ ಯಾರದೇ ಚಿತ್ರಗಳಿರುವುದಿಲ್ಲ. ನಿಮ್ಮ ಚಿತ್ರವು ಆಲ್ರೌಂಡ್ ಭಕ್ತಿಮಾರ್ಗದಲ್ಲಿರುತ್ತದೆ. ನಿಮ್ಮ ರಾಜ್ಯದಲ್ಲಿ ಬೇರೆ ಯಾರದೇ ಚಿತ್ರಗಳಿರುವುದಿಲ್ಲ ಕೇವಲ ದೇವಿ-ದೇವತೆಗಳಿರುತ್ತಾರೆ. ಆದಿಸನಾತನ ದೇವಿ-ದೇವತಾಧರ್ಮವೇ ಇರುತ್ತದೆ ಎಂಬುದನ್ನು ತಿಳಿದಿದ್ದೀರಿ ನಂತರ ಸೃಷ್ಟಿಯು ವೃದ್ಧಿಯಾಗುತ್ತದೆ. ನೀವು ಮಕ್ಕಳು ಈ ಜ್ಞಾನದ ಸ್ಮರಣೆ ಮಾಡಿ ಅತೀಂದ್ರಿಯ ಸುಖದಲ್ಲಿರಬೇಕು. ಬಹಳ ಜ್ಞಾನಬಿಂದುಗಳು ಇವೆ ಆದರೆ ಮಾಯೆಯು ಘಳಿಗೆ-ಘಳಿಗೆಗೆ ಮರೆಸಿಬಿಡುತ್ತದೆ ಎಂದು ತಂದೆಗೆ ತಿಳಿದಿದೆ ಅಂದಾಗ ನಮಗೆ ಶಿವತಂದೆಯು ಓದಿಸುತ್ತಾರೆ ಎಂಬುದು ನೆನಪಿರಬೇಕು. ಅವರು ಶ್ರೇಷ್ಠಾತಿಶ್ರೇಷ್ಠನಾಗಿದ್ದಾರೆ, ನಾವು ಈಗ ಮನೆಗೆ ಹೋಗಬೇಕಾಗಿದೆ. ಇದು ಎಷ್ಟು ಸಹಜ ಮಾತಾಗಿದೆ! ಎಲ್ಲವೂ ನೆನಪಿನ ಮೇಲೆ ಆಧಾರಿತವಾಗಿದೆ. ನಾವು ದೇವತೆಗಳಾಗಬೇಕು, ದೈವೀಗುಣವನ್ನೂ ಸಹ ಧಾರಣೆ ಮಾಡಬೇಕು. ಐದುವಿಕಾರಗಳು ಭೂತಗಳಾಗಿವೆ. ಕಾಮದ ಭೂತ, ಕ್ರೋಧದ ಭೂತ, ದೇಹಾಭಿಮಾನದ ಭೂತವೂ ಸಹ ಇರುತ್ತದೆ. ಹಾ! ಕೆಲವರಲ್ಲಿ ಹೆಚ್ಚು ಭೂತಗಳಿರುತ್ತವೆ ಕೆಲವರಲ್ಲಿ ಕಡಿಮೆ. ನೀವು ಬ್ರಾಹ್ಮಣಮಕ್ಕಳಿಗೆ ಐದು ದೊಡ್ಡಭೂತಗಳಿವೆ ಎಂಬುದು ಗೊತ್ತಿದೆ. ನಂಬರ್ವನ್ ಕಾಮದಭೂತವಾಗಿದೆ, ಸೆಕೆಂಡ್ ಕ್ರೋಧದ ಭೂತವಾಗಿದೆ. ಯಾರಾದರೂ ಕಠಿಣವಾಗಿ ಮಾತನಾಡುತ್ತಾರೆಂದರೆ ತಂದೆಯು ಅವರನ್ನು ಕ್ರೋಧಿಗಳೆಂದು ಕರೆಯುತ್ತಾರೆ. ಈ ಭೂತವು ಬಿಟ್ಟಹೋಗಬೇಕು ಆದರೆ ಭೂತವನ್ನು ಓಡಿಸುವುದು ಬಹಳ ಕಠಿಣವಾಗಿದೆ. ಕ್ರೋಧವು ಇನ್ನೊಬ್ಬರಿಗೆ ದುಃಖವನ್ನು ಕೊಡುತ್ತದೆ. ಮೋಹದಲ್ಲಿ ಅನೇಕರಿಗೆ ದುಃಖವಾಗುವುದಿಲ್ಲ. ಯಾರಿಗೆ ಮೋಹವಿದೆಯೋ ಅವರಿಗೇ ದುಃಖವಾಗುತ್ತದೆ ಆದ್ದರಿಂದ ಈ ಭೂತಗಳನ್ನು ಓಡಿಸಿ ತಂದೆಯು ತಿಳಿಸುತ್ತಾರೆ.

ಪ್ರತಿಯೊಬ್ಬ ಮಗುವೂ ವಿಶೇಷವಾಗಿ ವಿದ್ಯೆ ಮತ್ತು ದೈವೀಗುಣದಕಡೆ ಗಮನವನ್ನು ಕೊಡಬೇಕು. ಕೆಲವು ಮಕ್ಕಳಲ್ಲಿ ಕ್ರೋಧದ ಅಂಶವೂ ಸಹ ಇರುವುದಿಲ್ಲ. ಕೆಲವರು ಕ್ರೋಧದಲ್ಲಿ ಬಂದು ಬಹಳ ಜಗಳ ಮಾಡುತ್ತಾರೆ. ಮಕ್ಕಳಿಗೆ ನಾವು ದೈವೀಗುಣವನ್ನು ಧಾರಣೆ ಮಾಡಿ ದೇವತೆಗಳಾಗಬೇಕು ಎಂಬ ವಿಚಾರ ಬರಬೇಕು. ಎಂದೂ ಸಹ ಕೋಪದಿಂದ ಮಾತನಾಡಬಾರದು. ಯಾರಾದರೂ ಕೋಪಮಾಡಿಕೊಳ್ಳುತ್ತಾರೆಂದರೆ ತಿಳಿದುಕೊಳ್ಳಿ, ಇವರಲ್ಲಿ ಕ್ರೋಧದ ಭೂತವು ಪ್ರವೇಶವಾಗಿದೆ. ಅವರು ಹೇಗೆ ಭೂತನಾಥ-ಭೂತನಾಥಿನಿಯಾಗಿದ್ದಾರೆ. ಇಂತಹ ಭೂತವುಳ್ಳಂತಹವರೊಂದಿಗೆ ಎಂದೂ ಮಾತನಾಡಬಾರದು. ಒಬ್ಬರು ಕ್ರೋಧದಲ್ಲಿ ಬಂದು ಮಾತನಾಡಿದರೆ ಮತ್ತೊಬ್ಬರಲ್ಲಿಯೂ ಸಹ ಭೂತವು ಬಂದುಬಿಡುತ್ತದೆ. ಭೂತಗಳು ಪರಸ್ಪರ ಯುದ್ಧಮಾಡುತ್ತವೆ. ಭೂತನಾಥಿನಿ ಎಂಬ ಅಕ್ಷರವು ಬಹಳ ಕೆಟ್ಟದ್ದಾಗಿದೆ. ಭೂತದ ಪ್ರವೇಶತೆಯಾಗಬಾರದೆಂದು ಮನುಷ್ಯರು ದೂರಸರಿಯುತ್ತಾರೆ. ಭೂತದ ಮುಂದೆ ನಿಲ್ಲಬಾರದು ಇಲ್ಲವೆಂದರೆ ಪ್ರವೇಶವಾಗಿಬಿಡುತ್ತದೆ. ಕ್ರೋಧಿಯಿಂದ ಒಂದೇಸಾರಿ ದೂರಸರಿಯಿರಿ ಎಂದು ತಂದೆಯು ತಿಳಿಸುತ್ತಾರೆ. ತನ್ನನ್ನು ಪಾರುಮಾಡಿಕೊಳ್ಳುವ ಯುಕ್ತಿಬೇಕು. ನಮ್ಮಲ್ಲಿ ಕ್ರೋಧವು ಬರಬಾರದು. ಇಲ್ಲವೆಂದರೆ ನೂರುಪಟ್ಟು ಪಾಪವಾಗುತ್ತದೆ. ಎಂತಹ ಒಳ್ಳೆಯ ತಿಳುವಳಿಕೆಯನ್ನು ತಂದೆಯು ಮಕ್ಕಳಿಗೆ ಕೊಡುತ್ತಾರೆ. ಮಕ್ಕಳೂ ಸಹ ತಿಳಿದುಕೊಳ್ಳುತ್ತೀರಿ - ತಂದೆಯು ಕಲ್ಪದ ಮೊದಲಿನಂತೆ ಮತ್ತೆ ತಿಳಿಸಿಕೊಡುತ್ತಿದ್ದಾರೆ. ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಳ್ಳುತ್ತಾಹೋಗುತ್ತೇವೆ. ತಮ್ಮಮೇಲೂ ಸಹ ದಯೆತೋರಿಸಿಕೊಳ್ಳಬೇಕು, ಅನ್ಯರ ಮೇಲೂ ಸಹ ದಯೆತೋರಿಸಬೇಕು. ಯಾರಾದರೂ ತನ್ನಮೇಲೆ ದಯೆತೋರಿಸಿಕೊಳ್ಳದೆ ಅನ್ಯರ ಮೇಲೆ ದಯೆತೋರಿಸುತ್ತಾರೆಂದರೆ ಅವರು ಮೇಲೆ ಹೋಗುತ್ತಾರೆ, ಇವರು ಸ್ವಯಂ ಕೆಳಗುಳಿಯುತ್ತಾರೆ. ತಾವು ವಿಕಾರದ ಮೇಲೆ ಜಯಗಳಿಸುವುದಿಲ್ಲ, ಅನ್ಯರಿಗೆ ತಿಳಿಸುತ್ತಾರೆಂದಾಗ ಅವರು ಜಯಶಾಲಿಗಳಾಗುತ್ತಾರೆ. ಇಂತಹ ವಿಚಿತ್ರವೂ ಆಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಜ್ಞಾನದ ಸ್ಮರಣೆ ಮಾಡಿ ಅತೀಂದ್ರಿಯ ಸುಖದಲ್ಲಿರಬೇಕು. ಯಾರೊಂದಿಗೂ ಸಹ ಕಠಿಣವಾಗಿ ಮಾತನಾಡಬಾರದು. ಯಾರಾದರೂ ಕೋಪದಿಂದ ಮಾತನಾಡಿದರೆ ಅವರಿಂದ ದೂರಸರಿಯಬೇಕು.

2. ಭಗವಂತನ ವಾರಿಸ್ ಆಗಲು ಮೊದಲು ಅವರನ್ನು ನೀವು ತಮ್ಮ ವಾರಿಸ್ ಮಾಡಿಕೊಳ್ಳ ಬೇಕು. ತಿಳುವಳಿಕೆ ಉಳ್ಳವರಾಗಿ ತಮ್ಮದನ್ನೆಲ್ಲವನ್ನೂ ತಂದೆಗೆ ಒಪ್ಪಿಸಿಬಿಟ್ಟು ಮಮತ್ವವನ್ನು ಅಳಿಸಿಹಾಕಿಬಿಡಬೇಕು. ನಿಮ್ಮ ಮೇಲೆ ನೀವೆ ದಯೆ ತೋರಿಸಿಕೊಳ್ಳ ಬೇಕು.

ವರದಾನ:
ಸಾಕ್ಷಿಯಾಗಿ ಶ್ರೇಷ್ಠ ಸ್ಟೇಜ್ನ ಮೂಲಕ ಸರ್ವ ಆತ್ಮರಿಗೆ ಸಕಾಶ ಕೊಡುವಂತಹ ತಂದೆಯ ಸಮಾನ ಅವ್ಯಕ್ತ ಫರಿಸ್ತಾ ಭವ

ನಡೆಯುತ್ತಾ ತಿರುಗಾಡುತ್ತಾ ಸದಾ ತಮ್ಮ ನಿರಾಕಾರಿ ಆತ್ಮ ಮತ್ತು ಕರ್ಮ ಮಾಡುತ್ತಾ ಅವ್ಯಕ್ತ ಫರಿಸ್ತಾ ತಿಳಿದಾಗ ಸದಾ ಖುಷಿಯಲ್ಲಿ ಮೇಲೆ ಹಾರುತ್ತಾ ಇರುವಿರಿ. ಫರಿಸ್ತಾ ಅರ್ಥಾತ್ ಶ್ರೇಷ್ಠ ಸ್ಥಿತಿಯಲ್ಲಿ ಇರುವರು. ಈ ದೇಹದ ಪ್ರಪಂಚದಲ್ಲಿ ಏನೇ ಆಗಲಿ ಆದರೆ ಸಾಕ್ಷಿಯಾಗಿ ಎಲ್ಲರು ಪಾತ್ರ ನೋಡುತ್ತಿರಿ ಮತ್ತು ಸಕಾಶ ಕೊಡುತ್ತೀರಿ. ಸೀಟ್ನಿಂದ ಇಳಿದು ಸಕಾಶ ಕೊಡಲಾಗುವುದಿಲ್ಲ. ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗಿ ವೃತ್ತಿ, ದೃಷ್ಟಿಯಿಂದ ಸಹಯೋಗದ, ಕಲ್ಯಾಣದ ಸಕಾಶ ಕೊಡಿ, ಮಿಕ್ಸ್ ಆಗಿ ಅಲ್ಲ ಆಗ ಯಾವುದೇ ಪ್ರಕಾರದ ವಾತಾವರಣದಿಂದ ಸುರಕ್ಷಿತರಾಗಿ ತಂದೆಯ ಸಮಾನ ಅವ್ಯಕ್ತ ಫರಿಸ್ತಾ ಭವದ ವರದಾನಿಯಾಗುವಿರಿ.

ಸ್ಲೋಗನ್:
ನೆನಪಿನ ಬಲದ ಮೂಲಕ ದುಃಖವನ್ನು ಸುಖದಲ್ಲಿ ಮತ್ತು ಅಶಾಂತಿಯನ್ನು ಶಾಂತಿಯಲ್ಲಿ ಪರಿವರ್ತನೆ ಮಾಡಿ.

ತಮ್ಮ ಶಕ್ತಿಶಾಲಿ ಮನಸ್ಸಾ ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ

ತಮ್ಮ ಶುಭ ಭಾವನೆ, ಶ್ರೇಷ್ಠ ಕಾಮನೆ, ಶ್ರೇಷ್ಠ ವೃತ್ತಿ, ಶ್ರೇಷ್ಠ ವೈಬ್ರೇಷನ್ ಮೂಲಕ ಯಾವುದೇ ಸ್ಥಾನದಲ್ಲಿ ಇರುತ್ತಾ ಅನೇಕ ಆತ್ಮಗಳ ಸೇವೆಯನ್ನು ಮಾಡಬಹುದು. ಇದರ ವಿಧಿಯಾಗಿದೆ - ಲೈಟ್ ಹೌಸ್, ಮೈಟ್ ಹೌಸ್ ಆಗುವುದು. ಇದರಲ್ಲಿ ಸ್ಥೂಲ ಸಾಧನ, ಅವಕಾಶ ಅಥವಾ ಸಮಯದ ಸಮಸ್ಯೆಯಿಲ್ಲ. ಕೇವಲ ಲೈಟ್-ಮೈಟ್ನಿಂದ ಸಂಪನ್ನರಾಗುವ ಅವಶ್ಯಕತೆಯಿದೆ.