14.03.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಿಮ್ಮ
ಚಹರೆಯು ಸದಾ ಖುಷಿಯಾಗಿರಬೇಕು `ನಮಗೆ ಭಗವಂತನೇ ಓದಿಸುತ್ತಾರೆ’ - ಈ ಖುಷಿಯು ಚಹರೆಯಿಂದ
ಹೊಳೆಯುತ್ತಿರಬೇಕು”
ಪ್ರಶ್ನೆ:
ಈಗ ನೀವು ಮಕ್ಕಳ
ಮುಖ್ಯ ಪುರುಷಾರ್ಥವೇನಾಗಿದೆ?
ಉತ್ತರ:
ನೀವು
ಶಿಕ್ಷೆಗಳಿಂದ ಮುಕ್ತರಾಗುವ ಪುರುಷಾರ್ಥವನ್ನೇ ಮಾಡುತ್ತಿರುತ್ತೀರಿ ಅದಕ್ಕೆ ಮುಖ್ಯವಾದುದು ನೆನಪಿನ
ಯಾತ್ರೆಯಾಗಿದೆ, ಇದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ನೀವು ಪ್ರೀತಿಯಿಂದ ನೆನಪು ಮಾಡಿದ್ದೇ
ಆದರೆ ಬಹಳ ಸಂಪಾದನೆಯು ಜಮಾ ಆಗುತ್ತಾ ಇರುವುದು. ಮುಂಜಾನೆಯೆದ್ದು ನೆನಪಿನಲ್ಲಿ
ಕುಳಿತುಕೊಳ್ಳುವುದರಿಂದ ಹಳೆಯ ಪ್ರಪಂಚವು ಮರೆಯುತ್ತಾ ಹೋಗುವುದು, ಜ್ಞಾನದ ಮಾತುಗಳು ಬುದ್ಧಿಯಲ್ಲಿ
ಬರುತ್ತಾ ಇರುತ್ತದೆ. ನೀವು ಮಕ್ಕಳ ಬಾಯಿಂದ ಯಾವುದೇ ಕೊಳಕಿನ ಮಾತುಗಳು ಆಡಬಾರದು.
ಗೀತೆ:
ನಿಮ್ಮನ್ನು
ಪಡೆದ ನಾನು ಜಗತ್ತನ್ನೇ ಪಡೆದೆನು...............
ಓಂ ಶಾಂತಿ.
ಗೀತೆಯನ್ನು ಕೇಳುವ ಸಮಯದಲ್ಲಿ ಕೆಲವರಿಗೆ ಅದರ ಭಾವಾರ್ಥವು ಅರ್ಥವಾಗುತ್ತದೆ ಮತ್ತು ಆ ಖುಷಿಯೂ
ಏರುತ್ತದೆ. ಭಗವಂತನೇ ನಮಗೆ ಓದಿಸುತ್ತಾರೆ, ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆ ಆದರೆ ಇಷ್ಟು
ಅಪಾರ ಖುಷಿಯು ಇಲ್ಲಿ ಕೆಲವರಿಗೇ ವಿರಳ ಇರುತ್ತದೆ. ಆ ಸ್ಥಿರವಾದ ನೆನಪು ನಿಲ್ಲುವುದಿಲ್ಲ. ನಾವು
ತಂದೆಯ ಮಕ್ಕಳಾಗಿದ್ದೇವೆ, ತಂದೆಯೇ ನಮಗೆ ಓದಿಸುತ್ತಾರೆ ಎಂಬ ನಶೆಯು ಅನೇಕರಿಗೆ ಏರುವುದೇ ಇಲ್ಲ. ಆ
ಸತ್ಸಂಗ ಮೊದಲಾದುವುಗಳಲ್ಲಿ ಕಥೆಗಳನ್ನು ಕೇಳುತ್ತಾರೆ, ಅವರಿಗಾದರೂ ಖುಷಿಯಿರುತ್ತದೆ, ಇಲ್ಲಂತೂ
ತಂದೆಯು ಎಷ್ಟು ಒಳ್ಳೆಯ ಮಾತುಗಳನ್ನು ತಿಳಿಸುತ್ತಾರೆ, ಓದಿಸುತ್ತಾರೆ ಮತ್ತು ವಿಶ್ವದ
ಮಾಲೀಕರನ್ನಾಗಿ ಮಾಡುತ್ತಾರೆಂದಮೇಲೆ ವಿದ್ಯಾರ್ಥಿಗಳಿಗೆ ಎಷ್ಟೊಂದು ಖುಷಿಯಿರಬೇಕು! ಆ ಲೌಕಿಕ
ವಿದ್ಯೆಯನ್ನು ಓದುವವರಿಗಾದರೂ ಎಷ್ಟೊಂದು ಖುಷಿಯಿರುತ್ತದೆ ಆದರೆ ಇಲ್ಲಿರುವವರಿಗೆ ಅಷ್ಟೊಂದು
ಖುಷಿಯಿಲ್ಲ, ಬುದ್ಧಿಯಲ್ಲಿ ಕುಳಿತುಕೊಳ್ಳುವುದೇ ಇಲ್ಲ. ತಂದೆಯು ತಿಳಿಸುತ್ತಾರೆ - ಇಂತಿಂತಹ
ಗೀತೆಗಳನ್ನು ನಾಲಕ್ಕು-ಐದು ಬಾರಿ ಕೇಳಿ. ತಂದೆಯನ್ನು ಮರೆಯುವುದರಿಂದಲೇ ಹಳೆಯ ಪ್ರಪಂಚ ಮತ್ತು
ಹಳೆಯ ಸಂಬಂಧಗಳೇ ನೆನಪಿಗೆ ಬರುತ್ತದೆ, ಇಂತಹ ಸಮಯದಲ್ಲಿ ಹಾಡುಗಳನ್ನು ಕೇಳುವುದರಿಂದ ತಂದೆಯ ನೆನಪು
ಬಂದುಬಿಡುವುದು. ತಂದೆಯೆಂದು ಹೇಳಿದಾಗ ಆಸ್ತಿಯೂ ನೆನಪಿಗೆ ಬರುತ್ತದೆ. ವಿದ್ಯೆಯಿಂದ ಆಸ್ತಿಯು
ಸಿಗುತ್ತದೆ, ನೀವು ಇಡೀ ವಿಶ್ವದ ಮಾಲೀಕರಾಗಲು ಶಿವತಂದೆಯಿಂದ ಓದುತ್ತೀರಿ ಅಂದಮೇಲೆ ಮತ್ತಿನ್ನೇನು
ಬೇಕು! ಇಂತಹ ವಿದ್ಯಾರ್ಥಿಗಳಿಗೆ ಆಂತರಿಕವಾಗಿ ಎಷ್ಟೊಂದು ಖುಷಿಯಿರಬೇಕು. ಈ ಖುಷಿಯಿಂದ
ಹಗಲು-ರಾತ್ರಿ ನಿದ್ರೆಯೂ ಸಹ ದೂರವಾಗಬೇಕು. ವಿಶೇಷವಾಗಿ ನಿದ್ರೆಯನ್ನು ತ್ಯಜಿಸಿಯಾದರೂ ಇಂತಹ ತಂದೆ
ಮತ್ತು ಶಿಕ್ಷಕನನ್ನು ನೆನಪು ಮಾಡುತ್ತಿರಬೇಕು. ಮಸ್ತಾನರಾಗಿರಬೇಕು. ಓಹೋ! ನಮಗೆ ತಂದೆಯಿಂದ
ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ! ಆದರೆ ಮಾಯೆಯು ನೆನಪು ಮಾಡಲು ಬಿಡುವುದಿಲ್ಲ.
ಮಿತ್ರ-ಸಂಬಂಧಿಗಳು ಮೊದಲಾದವರ ನೆನಪು ಬರುತ್ತಿರುತ್ತದೆ, ಅವರದೇ ಚಿಂತನೆಯಿರುತ್ತದೆ. ಹಳೆಯ ಕೊಳಕು
ಮಾತುಗಳೇ ಅನೇಕರಿಗೆ ಬರುತ್ತಿರುತ್ತದೆ, ನೀವು ವಿಶ್ವದ ಮಾಲೀಕರಾಗುತ್ತೀರೆಂದು ತಂದೆಯು ಯಾವ
ಮಾತನ್ನು ತಿಳಿಸುತ್ತಾರೆಯೋ ಆ ನಶೆಯೇರುವುದಿಲ್ಲ. ಶಾಲೆಯಲ್ಲಿ ಓದುವವರ ಚಹರೆಯೇ ಪ್ರಸನ್ನತೆಯಿಂದ
ಕೂಡಿರುತ್ತದೆ. ಇಲ್ಲಿ ಭಗವಂತನೇ ಓದಿಸುತ್ತಾರೆ, ಈ ಖುಷಿಯು ವಿರಳ ಕೆಲವರಿಗೇ ಇರುತ್ತದೆ.
ಇಲ್ಲವೆಂದರೆ ಬಹಳ ಅಪಾರವಾದ ಖುಷಿಯ ನಶೆಯೇರಿರಬೇಕು. ಬೇಹದ್ದಿನ ತಂದೆಯು ನಮಗೆ ಓದಿಸುತ್ತಾರೆ ಎಂಬ
ಮಾತನ್ನೇ ಮರೆತುಹೋಗುತ್ತಾರೆ, ಕೇವಲ ಇಷ್ಟು ನೆನಪಿದ್ದರೂ ಸಾಕು ಖುಷಿಯಿರುತ್ತದೆ. ಆದರೆ ಹಿಂದಿನ
ಕರ್ಮಭೋಗವೇ ಈ ರೀತಿಯಿರುವುದರಿಂದ ತಂದೆಯನ್ನು ನೆನಪು ಮಾಡುವುದೇ ಇಲ್ಲ. ಮುಖವು ಕೆಸರಿನ ಕಡೆಗೇ
ಹೊರಟುಹೋಗುತ್ತದೆ. ತಂದೆಯು ಎಲ್ಲರಿಗೆ ಇದೇ ಮಾತನ್ನು ಹೇಳುವುದಿಲ್ಲ, ನಂಬರ್ವಾರ್ ಇದ್ದಾರೆ. ಸ್ವಯಂ
ಭಗವಂತನೇ ನಮಗೆ ಓದಿಸುತ್ತಾರೆ ಎಂದು ಯಾರು ತಂದೆಯ ನೆನಪಿನಲ್ಲಿರುವರೋ ಅವರೇ ಮಹಾನ್
ಸೌಭಾಗ್ಯಶಾಲಿಗಳು. ಹೇಗೆ ಆ ವಿದ್ಯೆಯಲ್ಲಿ ಇಂತಹ ಶಿಕ್ಷಕರು ನಮಗೆ ವಕೀಲರನ್ನಾಗಿ ಮಾಡುತ್ತಾರೆ
ಎಂದಿರುತ್ತದೆ ಹಾಗೆಯೇ ಇಲ್ಲಿ ನಮಗೆ ಭಗವಂತನೇ ಭಗವಾನ್-ಭಗವತಿಯರನ್ನಾಗಿ ಮಾಡಲು ಓದಿಸುತ್ತಾರೆ
ಅಂದಮೇಲೆ ಎಷ್ಟೊಂದು ಖುಷಿಯಿರಬೇಕಲ್ಲವೆ. ಕೇಳುವ ಸಮಯದಲ್ಲಿ ಕೆಲಕೆಲವರಿಗೆ ನಶೆಯೇರುತ್ತದೆ, ಇನ್ನೂ
ಕೆಲವರಿಗಂತೂ ಏನೂ ಅರ್ಥವಾಗುವುದಿಲ್ಲ. ಗುರುಗಳನ್ನು ಮಾಡಿಕೊಂಡರೆ ಇವರು ನಮ್ಮ ಜೊತೆ ಕರೆದುಕೊಂಡು
ಹೋಗುತ್ತಾರೆ, ಭಗವಂತನೊಂದಿಗೆ ಮಿಲನ ಮಾಡಿಸುತ್ತಾರೆಂದು ತಿಳಿಯುತ್ತಾರೆ. ಆದರೆ ಇಲ್ಲಿ ಸ್ವಯಂ
ಭಗವಂತನಾಗಿದ್ದಾರೆ, ತಮ್ಮೊಂದಿಗೆ ಮಿಲನ ಮಾಡಿಸುತ್ತಾರೆ, ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ.
ಭಗವಂತನ ಬಳಿ ಕರೆದುಕೊಂಡು ಹೋಗಲು ಅಥವಾ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುವುದಕ್ಕಾಗಿ ಮನುಷ್ಯರು
ಗುರುಗಳನ್ನು ಮಾಡಿಕೊಳ್ಳುತ್ತಾರೆ. ಇಲ್ಲಿ ತಂದೆಯೇ ಸನ್ಮುಖದಲ್ಲಿ ಎಷ್ಟೊಂದು ತಿಳಿಸುತ್ತಾರೆ -
ನೀವು ವಿದ್ಯಾರ್ಥಿಗಳಾಗಿದ್ದೀರಿ, ಓದಿಸುವಂತಹ ಶಿಕ್ಷಕರನ್ನು ನೆನಪು ಮಾಡಿ ಎಂದು. ಆದರೂ ಸಹ ನೆನಪು
ಮಾಡುವುದೇ ಇಲ್ಲ, ಮಾತೇ ಕೇಳಬೇಡಿ. ಒಳ್ಳೊಳ್ಳೆಯ ಮಕ್ಕಳೂ ಸಹ ನೆನಪು ಮಾಡುವುದಿಲ್ಲ. ಶಿವತಂದೆಯು
ನಮಗೆ ಓದಿಸುತ್ತಾರೆ, ಅವರು ಜ್ಞಾನಸಾಗರನಾಗಿದ್ದಾರೆ, ನಮಗೆ ಆಸ್ತಿಯನ್ನು ಕೊಡುತ್ತಾರೆ, ಇಷ್ಟು
ನೆನಪಿದ್ದರೂ ಸಹ ಖುಷಿಯ ನಶೆಯೇರುವುದು. ತಂದೆಯು ಸನ್ಮುಖದಲ್ಲಿ ತಿಳಿಸಿದರೂ ಸಹ ಆ
ನಶೆಯೇರುವುದಿಲ್ಲ, ಬುದ್ಧಿಯು ಅಲ್ಲಿ-ಇಲ್ಲಿ ಹೊರಟುಹೋಗುತ್ತದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ,
ನನ್ನನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗುತ್ತದೆ. ನಾನು ಗ್ಯಾರಂಟಿ ಕೊಡುತ್ತೇನೆ - ಒಬ್ಬ
ತಂದೆಯ ವಿನಃ ಮತ್ತ್ಯಾರನ್ನೂ ನೆನಪು ಮಾಡಬೇಡಿ. ವಿನಾಶವಾಗಲಿರುವ ವಸ್ತುಗಳನ್ನೇಕೆ ನೆನಪು
ಮಾಡುತ್ತೀರಿ! ಇಲ್ಲಂತೂ ಯಾರಾದರೂ ಶರೀರಬಿಟ್ಟರೆ 3-4 ವರ್ಷಗಳವರೆಗೆ ಅವರನ್ನು ನೆನಪು
ಮಾಡುತ್ತಿರುತ್ತಾರೆ, ಅವರ ಗಾಯನ ಮಾಡುತ್ತಿರುತ್ತಾರೆ. ಈಗ ತಂದೆಯು ನನ್ನನ್ನು ನೆನಪು ಮಾಡಿ ಎಂದು
ಸನ್ಮುಖದಲ್ಲಿ ತಿಳಿಸುತ್ತಾರೆ. ಯಾರೆಷ್ಟು ನೆನಪು ಮಾಡುತ್ತಾರೋ ಅಷ್ಟು ಪಾಪಗಳು ಭಸ್ಮವಾಗುತ್ತಾ
ಹೋಗುತ್ತದೆ, ಬಹಳ ಸಂಪಾದನೆಯಾಗುತ್ತದೆ. ಮುಂಜಾನೆ ಎದ್ದು ತಂದೆಯನ್ನು ನೆನಪು ಮಾಡಿ. ಭಕ್ತಿಯನ್ನೂ
ಸಹ ಮನುಷ್ಯರು ಮುಂಜಾನೆಯ ಸಮಯದಲ್ಲಿಯೇ ಮಾಡುತ್ತಾರೆ, ನೀವಂತೂ ಜ್ಞಾನಿಗಳಾಗಿದ್ದೀರಿ ಅಂದಾಗ ನೀವು
ಹಳೆಯ ಪ್ರಪಂಚದ ಕೆಸರಿನಲ್ಲಿ ಸಿಲುಕಿಕೊಳ್ಳಬಾರದು. ಆದರೆ ಕೆಲವು ಮಕ್ಕಳು ಈ ರೀತಿ
ಸಿಲುಕಿಹಾಕಿಕೊಳ್ಳುತ್ತಾರೆ, ಅದರ ಮಾತೇ ಕೇಳಬೇಡಿ. ಕೆಸರಿನಿಂದ ಹೊರಬಂದಾಗಲೂ ಇಡೀ ದಿನ
ಕೆಟ್ಟಮಾತುಗಳನ್ನೇ ಮಾತನಾಡುತ್ತಿರುತ್ತಾರೆ, ಜ್ಞಾನದ ಮಾತುಗಳು ಬುದ್ಧಿಯಲ್ಲಿ ಬರುವುದೇ ಇಲ್ಲ.
ಕೆಲವರು ಇಂತಹ ಮಕ್ಕಳೂ ಇದ್ದಾರೆ ಇಡೀ ದಿನ ಸೇವೆಗಾಗಿ ಓಡುತ್ತಿರುತ್ತಾರೆ. ಯಾರು ತಂದೆಯ ಸೇವೆ
ಮಾಡುತ್ತಾರೆಯೋ ಅವರೇ ನೆನಪಿಗೆ ಬರುತ್ತಾರೆ. ಈ ಸಮಯದಲ್ಲಿ ಎಲ್ಲರಿಗಿಂತ ಹೆಚ್ಚಿನದಾಗಿ ಮನೋಹರಮಗು
ಸೇವೆಯಲ್ಲಿ ತತ್ಫರರಾಗಿರುತ್ತಾರೆ. ಪ್ರತಿನಿತ್ಯವೂ ಯಾವುದಾದರೊಂದು ಕಡೆ ಸೇವೆಗಾಗಿ
ಓಡುತ್ತಿರುತ್ತಾರೆ. ಯಾರು ಪರಸ್ಪರ ಹೊಡೆದಾಡುತ್ತಿರುತ್ತಾರೆಯೋ ಅವರೇನು ಸೇವೆ ಮಾಡುತ್ತಾರೆ!
ತಂದೆಗೆ ಯಾರು ಪ್ರಿಯರಾಗುತ್ತಾರೆ? ಚೆನ್ನಾಗಿ ಸೇವೆ ಮಾಡುವ ಮಕ್ಕಳೇ ತಂದೆಗೆ ಪ್ರಿಯರಾಗುತ್ತಾರೆ.
ಹಗಲು-ರಾತ್ರಿ ಸೇವೆಯದೇ ಚಿಂತೆಯಿರುತ್ತದೆ, ಅವರೇ ತಂದೆಯ ಹೃದಯವನ್ನೇರುತ್ತಾರೆ. ಮತ್ತೆ-ಮತ್ತೆ ಈ
ಗೀತೆಗಳನ್ನು ಕೇಳುತ್ತಾ ಇರಿ ಆಗ ನೆನಪಿರುತ್ತದೆ, ನಶೆಯೇರುತ್ತದೆ. ತಂದೆಯು ತಿಳಿಸಿದ್ದಾರೆ,
ಬೇಜಾರಾಗಿರುವ ಸಮಯದಲ್ಲಿ ಇಂತಹ ಹಾಡುಗಳನ್ನು ಕೇಳುವುದರಿಂದ ಖುಷಿಯಾಗಿಬಿಡುತ್ತದೆ. ಓಹೋ! ನಾವು
ವಿಶ್ವದ ಮಾಲೀಕರಾಗುತ್ತೇವೆ. ಕೇವಲ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ
ಎಂದು, ಎಷ್ಟು ಸಹಜವಾದ ವಿದ್ಯೆಯಾಗಿದೆ. ಬಾಬಾರವರು ಇಂತಹ 10-12 ಗೀತೆಗಳನ್ನು ಪ್ರತಿಯೊಬ್ಬರ ಬಳಿ
ಇರಬೇಕೆಂದು ಆಯ್ಕೆ ಮಾಡಿ ತೆಗೆದಿದ್ದರು, ಆದರೂ ಸಹ ಮರೆತುಹೋಗುತ್ತಾರೆ. ಕೆಲವರಂತೂ
ನಡೆಯುತ್ತಾ-ನಡೆಯುತ್ತಾ ವಿದ್ಯಾಭ್ಯಾಸವನ್ನೇ ಬಿಟ್ಟುಬಿಡುತ್ತಾರೆ. ಮಾಯೆಯು ಯುದ್ಧ ಮಾಡುತ್ತದೆ.
ತಂದೆಯು ತಮೋಪ್ರಧಾನ ಬುದ್ಧಿಯನ್ನು ಸತೋಪ್ರಧಾನವನ್ನಾಗಿ ಮಾಡುವ ಎಷ್ಟು ಸಹಜ ಯುಕ್ತಿಯನ್ನು
ತಿಳಿಸುತ್ತಾರೆ. ಈಗ ನಿಮಗೆ ಸರಿ-ತಪ್ಪು ಎಂದು ಆಲೋಚಿಸುವ ಬುದ್ಧಿಯು ಸಿಕ್ಕಿದೆ. ಹೇ ಪತಿತ-ಪಾವನ
ಬನ್ನಿ ಎಂದು ತಂದೆಯನ್ನು ಕರೆಯುತ್ತಾರೆ ಆದರೆ ತಂದೆಯನ್ನು ಕರೆಯುತ್ತಾರೆಂದಮೇಲೆ ಪಾವನರಾಗಬೇಕಲ್ಲವೆ.
ನಿಮ್ಮ ತಲೆಯ ಮೇಲೆ ಜನ್ಮ-ಜನ್ಮಾಂತರದ ಹೊರೆಯಿದೆ ಅದಕ್ಕಾಗಿ ಎಷ್ಟು ನೆನಪು ಮಾಡುತ್ತೀರೋ,
ಪವಿತ್ರರಾಗುವಿರೋ ಅಷ್ಟು ಖುಷಿಯೂ ಇರುವುದು. ಭಲೆ ಸೇವೆ ಮಾಡುತ್ತಿರುತ್ತಾರೆ ಆದರೆ ನಾವು ಎಷ್ಟು
ಸಮಯ ತಂದೆಯ ನೆನಪಿನಲ್ಲಿರುತ್ತೇವೆಂದು ಚಾರ್ಟನ್ನಿಡಬೇಕಾಗಿದೆ. ನೆನಪಿನ ಚಾರ್ಟನ್ನು ಯಾರೂ
ಇಡುವುದಿಲ್ಲ. ಭಲೆ ಜ್ಞಾನಬಿಂದುಗಳನ್ನು ಬರೆಯುತ್ತಾರೆ ಆದರೆ ನೆನಪು ಮರೆತುಹೋಗುತ್ತಾರೆ. ತಂದೆಯು
ತಿಳಿಸುತ್ತಾರೆ - ನೀವು ನೆನಪಿನಲ್ಲಿದ್ದು ಭಾಷಣ ಮಾಡಿದರೆ ಬಹಳ ಬಲ ಸಿಗುವುದು ಇಲ್ಲವೆಂದರೆ ತಂದೆಯು
ತಿಳಿಸುತ್ತಾರೆ, ನಾನೇ ಹೋಗಿ ಅನೇಕರಿಗೆ ಸಹಯೋಗ ಕೊಡುತ್ತೇನೆ, ಅವಶ್ಯಕತೆಯಿದ್ದಾಗ ಅವರಲ್ಲಿ
ಪ್ರವೇಶ ಮಾಡಿ ಹೋಗಿ ನಾನೇ ಸೇವೆ ಮಾಡುತ್ತೇನೆ. ಸೇವೆಯನ್ನಂತೂ ಮಾಡಬೇಕಲ್ಲವೆ. ಯಾರ ಭಾಗ್ಯವಾದರೂ
ತೆರೆಯುವುದಿದ್ದಾಗ ಅವರಿಗೆ ತಿಳಿಸಿಕೊಡುವವರು ಬುದ್ಧಿವಂತರಲ್ಲದಿದ್ದರೆ ಆ ಸಮಯದಲ್ಲಿ ನಾನು
ಪ್ರವೇಶ ಮಾಡಿ ತಿಳಿಸುತ್ತೇನೆ. ಇದರಿಂದ ಕೆಲವರು ತಂದೆಯೇ ಈ ಸೇವೆ ಮಾಡಿದರು, ನಮ್ಮಲ್ಲಿ ಇಷ್ಟೊಂದು
ಶಕ್ತಿಯಿರಲಿಲ್ಲ, ತಂದೆಯೇ ಮುರುಳಿಯನ್ನು ನುಡಿಸಿದರೆಂದು ಬರೆಯುತ್ತಾರೆ. ಇನ್ನೂ ಕೆಲವರಿಗೆ ನಾವು
ಇಷ್ಟು ಚೆನ್ನಾಗಿ ತಿಳಿಸಿಕೊಟ್ಟೆವು ಎಂದು ತಮ್ಮ ಅಹಂಕಾರವು ಬಂದುಬಿಡುತ್ತದೆ. ತಂದೆಯು
ತಿಳಿಸುತ್ತಾರೆ - ನಾನು ಕಲ್ಯಾಣ ಮಾಡುವುದಕ್ಕಾಗಿ ಪ್ರವೇಶ ಮಾಡುತ್ತೇನೆ, ಮತ್ತೆ ಅವರು
ಬ್ರಾಹ್ಮಿಣಿಗಿಂತಲೂ ತೀವ್ರವಾಗಿ ಮುಂದೆ ಹೋಗುತ್ತಾರೆ. ಯಾರಾದರೂ ಬುದ್ಧಿಯಿಲ್ಲದವರನ್ನು
ಕಳುಹಿಸಿದರೆ ಇವರಿಗಿಂತ ನಾವೇ ಚೆನ್ನಾಗಿ ತಿಳಿಸಿಕೊಡಬಲ್ಲೆವು, ಇವರಿಗಿಂತ ನಮ್ಮ ಸ್ಥಿತಿಯೇ
ಚೆನ್ನಾಗಿದೆ ಎಂದು ಅವರು ತಿಳಿಯುತ್ತಾರೆ. ಕೆಲವರು ಮುಖ್ಯಸ್ಥರಾಗಿರುತ್ತಾರೆಂದರೆ ಅವರಿಗೆ ಬಹಳ
ನಶೆಯೇರಿಬಿಡುತ್ತದೆ. ಹಿರಿಯ ವ್ಯಕ್ತಿಗಳೊಂದಿಗೂ ಸಹ ನೀನು-ನೀನು ಎಂದೇ ಮಾತನಾಡುತ್ತಾರೆ. ಅವರನ್ನು
ದೇವಿ-ದೇವಿ ಎಂದು ಹೇಳಿದರೆ ಸಾಕು ಅದರಲ್ಲಿಯೇ ಖುಷಿಯಾಗಿಬಿಡುತ್ತಾರೆ, ಇಂತಹವರು ಅನೇಕರಿದ್ದಾರೆ.
ಶಿಕ್ಷಕರಿಗಿಂತಲೂ ವಿದ್ಯಾರ್ಥಿಗಳು ಬುದ್ಧಿವಂತರಾಗಿಬಿಡುತ್ತಾರೆ. ಎಲ್ಲರಿಗಿಂತಲೂ ದೊಡ್ಡವರು ಒಬ್ಬ
ತಂದೆಯೇ ಆಗಿದ್ದಾರೆ, ಅವರು ಜ್ಞಾನಸಾಗರನಾಗಿದ್ದಾರೆ. ನೀವು ಅವರಿಂದ ಓದಿ ಮತ್ತೆ ಓದಿಸುತ್ತೀರಿ,
ಕೆಲವರು ಬಹಳ ಚೆನ್ನಾಗಿ ಧಾರಣೆ ಮಾಡಿಕೊಳ್ಳುತ್ತಾರೆ, ಇನ್ನೂ ಕೆಲವರು ಮರೆತುಹೋಗುತ್ತಾರೆ.
ಅತಿದೊಡ್ಡ ಮುಖ್ಯಮಾತು ನೆನಪಿನ ಯಾತ್ರೆಯಾಗಿದೆ. ನಮ್ಮ ವಿಕರ್ಮಗಳು ಹೇಗೆ ವಿನಾಶವಾಗುತ್ತವೆ? ಕೆಲವು
ಮಕ್ಕಳಂತೂ ಇಂತಹ ನಡವಳಿಕೆಯಿಂದ ನಡೆಯುತ್ತಾರೆ, ಅದಂತೂ ಈ (ಬ್ರಹ್ಮಾ) ತಂದೆಗೆ ಗೊತ್ತು ಮತ್ತು ಆ
ತಂದೆಗೇ ಗೊತ್ತು.
ಈಗ ನೀವು ಮಕ್ಕಳು
ಮುಖ್ಯವಾಗಿ ಶಿಕ್ಷೆಗಳಿಂದ ಮುಕ್ತರಾಗುವ ಪುರುಷಾರ್ಥ ಮಾಡಬೇಕಾಗಿದೆ, ಅದಕ್ಕಾಗಿ ನೆನಪಿನ ಯಾತ್ರೆಯು
ಮುಖ್ಯವಾಗಿದೆ. ಇದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಭಲೆ ಯಾರಾದರೂ ಧನಸೇವೆ ಮಾಡುತ್ತಾರೆ,
ನಾವು ಇದರಿಂದ ಸಾಹುಕಾರರಾಗುತ್ತೇವೆಂದು ತಿಳಿಯುತ್ತಾರೆ ಆದರೆ ಶಿಕ್ಷೆಗಳಿಂದ ಮುಕ್ತರಾಗುವ
ಪುರುಷಾರ್ಥವನ್ನಂತೂ ಮಾಡಬೇಕಲ್ಲವೆ. ಇಲ್ಲವೆಂದರೆ ತಂದೆಯ ಮುಂದೆ ಶಿಕ್ಷೆಯನ್ನನುಭವಿಸಬೇಕಾಗುವುದು.
ನ್ಯಾಯಾಧೀಶರ ಮಕ್ಕಳು ಯಾವುದಾದರೂ ಅಂತಹ ಕೆಟ್ಟ ಕೆಲಸ ಮಾಡಿ ಶಿಕ್ಷೆಗೆ ಗುರಿಯಾದರೆ ನ್ಯಾಯಾಧೀಶರಿಗೂ
ನಾಚಿಕೆಯಾಗುತ್ತದೆಯಲ್ಲವೆ! ಇಲ್ಲಿಯೂ ಸಹ ತಂದೆಯು ಹೇಳುತ್ತಾರೆ - ನಾನು ಯಾರ ಪಾಲನೆಯನ್ನು
ಮಾಡುತ್ತೇನೆಯೋ ಅವರಿಗೆ ಮತ್ತೆ ಶಿಕ್ಷೆಯನ್ನು ಕೊಡಿಸುತ್ತೇನೆ! ಆ ಸಮಯದಲ್ಲಿ ತಲೆಬಗ್ಗಿಸಿ
ಅಯ್ಯಯ್ಯೊ ಎನ್ನುತ್ತಿರುತ್ತಾರೆ. ತಂದೆಯು ಇಷ್ಟೊಂದು ತಿಳಿಸಿದರು, ಓದಿಸಿದರು ನಾವು ಗಮನ
ಕೊಡಲಿಲ್ಲವೆಂದು ಪಶ್ಚಾತ್ತಾಪ ಪಡುವರು. ಆದರೆ ತಂದೆಯ ಜೊತೆ ಧರ್ಮರಾಜನೂ ಇದ್ದಾರಲ್ಲವೆ. ಅವರಿಗೆ
ಜನ್ಮಪತ್ರಿಯೆಲ್ಲವೂ ತಿಳಿದಿದೆ, ಈಗಂತೂ ನೀವು ಪ್ರತ್ಯಕ್ಷದಲ್ಲಿ ನೋಡುತ್ತೀರಿ. 10 ವರ್ಷಗಳ ಕಾಲ
ಪವಿತ್ರತೆಯಲ್ಲಿ ನಡೆದು ಆಕಸ್ಮಿಕವಾಗಿ ಮಾಯೆಯು ಇಂತಹ ಪೆಟ್ಟನ್ನು ಕೊಡುತ್ತದೆ ಅದರಿಂದ ಸಂಪಾದನೆ
ಮಾಡಿಕೊಂಡಿರುವುದೆಲ್ಲವನ್ನೂ ಸಮಾಪ್ತಿ ಮಾಡಿಕೊಳ್ಳುತ್ತಾರೆ, ಪತಿತರಾಗಿಬಿಡುತ್ತಾರೆ. ಇಂತಹ
ಉದಾಹರಣೆಗಳು ಬಹಳಷ್ಟಿವೆ. ಮಾಯೆಯ ಬಿರುಗಾಳಿಗಳಲ್ಲಿ ಇಡೀ ದಿನ ಸಿಲುಕುತ್ತಿರುತ್ತಾರೆ, ತಂದೆಯನ್ನೇ
ಮರೆತುಹೋಗುತ್ತಾರೆ. ತಂದೆಯಿಂದ ನಮಗೆ ಬೇಹದ್ದಿನ ರಾಜ್ಯಭಾಗ್ಯವು ಸಿಗುತ್ತದೆ ಎಂಬ ಖುಷಿಯೂ ಸಹ
ಇರುವುದಿಲ್ಲ. ಕಾಮದ ಹಿಂದೆ ಮತ್ತೆ ಮೋಹವೂ ಇರುತ್ತದೆ. ಇದರಲ್ಲಿ ನಷ್ಟಮೋಹಿಗಳಾಗಬೇಕಾಗಿದೆ.
ಪತಿತರೊಂದಿಗೆ ಮನಸ್ಸನ್ನೇಕೆ ಇಡುವುದು! ಹಾ! ಅಂತಹ ಸಮಯದಲ್ಲಿ ಇವರಿಗೂ ಸಹ ನಾವು ತಂದೆಯ ಪರಿಚಯ
ಕೊಟ್ಟು ಮೇಲೆತ್ತಬೇಕೆಂಬ ವಿಚಾರ ಮಾಡಬೇಕು. ಇವರನ್ನು ಯಾವ ರೀತಿಯಲ್ಲಿ ಶಿವಾಲಯಕ್ಕೆ ಯೋಗ್ಯರನ್ನಾಗಿ
ಮಾಡುವುದು ಎಂದು ಯುಕ್ತಿಯನ್ನು ರಚಿಸಿ, ಇದರಲ್ಲಿ ಮೋಹದ ಮಾತಿಲ್ಲ. ಎಷ್ಟೇ ಪ್ರಿಯ ಸಂಬಂಧಿಯಾಗಿರಲಿ
ಅವರಿಗೂ ಸಹ ತಿಳಿಸುತ್ತಾ ಇರಿ. ಯಾರಲ್ಲಿಯೂ ಹೆಚ್ಚಿನ ಪ್ರೀತಿಯ ಸೆಳೆತವಿರಬಾರದು. ಹಾಗಿದ್ದರೆ
ಸುಧಾರಣೆಯಾಗುವುದಿಲ್ಲ. ದಯಾಹೃದಯಿಗಳಾಗಬೇಕು, ತಮ್ಮ ಮೇಲೆ ಮತ್ತು ಅನ್ಯರ ಮೇಲೆ ದಯೆತೋರಿಸಬೇಕಾಗಿದೆ.
ತಂದೆಗೂ ಸಹ ದಯೆ ಬರುತ್ತದೆ - ನಾವು ಎಷ್ಟು ಮಂದಿಯನ್ನು ತಮ್ಮ ಸಮಾನ ಮಾಡಿಕೊಳ್ಳುತ್ತೇವೆಂದು
ತಮ್ಮನ್ನು ನೋಡಿಕೊಳ್ಳಬೇಕು. ತಂದೆಗೂ ಪ್ರತ್ಯಕ್ಷಪ್ರಮಾಣವನ್ನು ಕೊಡಬೇಕಾಗುತ್ತದೆ - ನಾವು ಇಷ್ಟು
ಮಂದಿಗೆ ಪರಿಚಯ ಕೊಟ್ಟೆವು. ಬಾಬಾ ನಮಗೆ ಇವರ ಮೂಲಕ ಬಹಳ ಒಳ್ಳೆಯ ಪರಿಚಯ ಸಿಕ್ಕಿತು ಎಂದು ಅವರೂ ಸಹ
ಬರೆಯುತ್ತಾರೆ. ತಂದೆಯ ಬಳಿ ಇಂತಹ ಪ್ರತ್ಯಕ್ಷಪ್ರಮಾಣವನ್ನು ತಂದಾಗಲೇ ಹಾ! ಇವರು ಸೇವೆ
ಮಾಡುತ್ತಾರೆಂದು ತಿಳಿಯುತ್ತಾರೆ. ಬಾಬಾ, ಈ ಬ್ರಾಹ್ಮಿಣಿಯು ಬಹಳ ಬುದ್ಧಿವಂತೆಯಾಗಿದ್ದಾರೆ, ಬಹಳ
ಒಳ್ಳೆಯ ಸೇವೆ ಮಾಡುತ್ತಾರೆ. ನಮಗೆ ಚೆನ್ನಾಗಿ ಓದಿಸುತ್ತಾರೆಂದು ತಂದೆಯ ಬಳಿ ಪತ್ರವು ಬರಬೇಕು.
ಒಳ್ಳೊಳ್ಳೆಯ ಮಕ್ಕಳೂ ಸಹ ಯೋಗದಲ್ಲಿ ಅನುತ್ತೀರ್ಣರಾಗುತ್ತಾರೆ. ನೆನಪು ಮಾಡುವ ಬುದ್ಧಿಯಿಲ್ಲ.
ತಂದೆಯು ತಿಳಿಸುತ್ತಾರೆ - ಭೋಜನ ಮಾಡುವ ಸಮಯದಲ್ಲಿಯೂ ಶಿವತಂದೆಯನ್ನು ನೆನಪು ಮಾಡಿ ಸ್ವೀಕರಿಸಿ.
ತಿರುಗಾಡಲು ಹೋಗುತ್ತೀರೆಂದರೂ ಸಹ ಶಿವತಂದೆಯನ್ನು ನೆನಪು ಮಾಡಿ, ಪರಚಿಂತನೆ ಮಾಡಬೇಡಿ. ಭಲೆ ಯಾವುದೇ
ಮಾತಿನ ವಿಚಾರ ಬಂದರೂ ಸಹ ತಂದೆಯನ್ನು ನೆನಪು ಮಾಡಿ. ಕೆಲಸಕಾರ್ಯಗಳನ್ನು ಕುರಿತು ಆಲೋಚಿಸಿದರೂ ಸಹ
ಮತ್ತೆ ತಂದೆಯ ನೆನಪಿನಲ್ಲಿ ತೊಡಗಿ. ತಂದೆಯು ತಿಳಿಸುತ್ತಾರೆ -ಭಲೆ ಕರ್ಮ ಮಾಡಿ, ನಿದ್ರೆಯನ್ನೂ
ಮಾಡಿ, ಜೊತೆಜೊತೆಗೆ ನೆನಪೂ ಮಾಡಿ. ಕೊನೆಪಕ್ಷ ನೆನಪಿನಲ್ಲಿ 8 ಗಂಟೆಯವರೆಗಾದರೂ ತಲುಪಬೇಕು. ಇದು
ಕೊನೆಯಲ್ಲಿಯೇ ಆಗುವುದು. ನಿಧಾನ-ನಿಧಾನವಾಗಿ ತಮ್ಮ ಚಾರ್ಟನ್ನು ಹೆಚ್ಚಿಸಿಕೊಳ್ಳುತ್ತಾ ಇರಿ. ನಾವು
2 ಗಂಟೆ ನೆನಪಿನಲ್ಲಿದ್ದೆವೆಂದು ಕೆಲವರು ಬರೆಯುತ್ತಾರೆ ಆದರೆ ನಡೆಯುತ್ತಾ-ನಡೆಯುತ್ತಾ ಅದೂ ಸಹ
ಕಡಿಮೆಯಾಗಿಬಿಡುತ್ತದೆ. ಮಾಯೆಯು ಅದನ್ನೂ ಮರೆಸಿಬಿಡುತ್ತದೆ. ಮಾಯೆಯು ಬಹಳ ಶಕ್ತಿಶಾಲಿಯಾಗಿದೆ,
ಯಾರು ಈ ಸೇವೆಯಲ್ಲಿ ಇಡೀ ದಿನ ತತ್ಪರರಾಗಿರುವರೋ ಅವರೇ ನೆನಪು ಮಾಡಲು ಸಾಧ್ಯವಾಗುತ್ತದೆ. ಪದೇ-ಪದೇ
ತಂದೆಯ ಪರಿಚಯವನ್ನು ಕೊಡುತ್ತಾ ಇರುತ್ತಾರೆ. ತಂದೆಯು ನೆನಪಿಗಾಗಿ ಬಹಳಷ್ಟು ಒತ್ತುಕೊಟ್ಟು
ಹೇಳುತ್ತಿರುತ್ತಾರೆ. ನಾವು ನೆನಪಿನಲ್ಲಿರುವುದಿಲ್ಲ ಎಂಬುದನ್ನು ತಾವೂ ಸಹ ತಿಳಿದುಕೊಳ್ಳಬಹುದು.
ನೆನಪಿನಲ್ಲಿಯೇ ಮಾಯೆಯು ವಿಘ್ನಗಳನ್ನು ಹಾಕುತ್ತದೆ. ವಿದ್ಯೆಯು ಬಹಳ ಸಹಜವಾಗಿದೆ, ತಂದೆಯಿಂದ ನಾವು
ಓದುತ್ತೇವೆ. ಎಷ್ಟು ಧನವನ್ನು ತೆಗೆದುಕೊಳ್ಳುವೆವೋ ಅಷ್ಟು ಸಾಹುಕಾರರಾಗುತ್ತೇವೆ. ತಂದೆಯಂತೂ
ಎಲ್ಲರಿಗೂ ಓದಿಸುತ್ತಾರಲ್ಲವೆ. ಮುರುಳಿಯು ಎಲ್ಲರ ಬಳಿ ಹೋಗುತ್ತದೆ. ಕೇವಲ ನೀವಷ್ಟೇ ಅಲ್ಲ ಎಲ್ಲರೂ
ಓದುತ್ತಿದ್ದಾರೆ. ಮುರುಳಿ ಸಿಗದಿದ್ದರೆ ಚಡಪಡಿಸುತ್ತಾರೆ. ಕೆಲವರಂತೂ ಮುರುಳಿ ಕೇಳುವುದೇ ಇಲ್ಲ,
ಹಾಗೆಯೇ ನಡೆಯುತ್ತಿರುತ್ತಾರೆ. ಮುರುಳಿಯನ್ನು ಕೇಳುವ ಉತ್ಸುಕತೆಯಿರಬೇಕು. ಬಾಬಾ, ನಾವು ತಮ್ಮಿಂದ
ಆಸ್ತಿಯನ್ನು ಪಡೆಯಲು ಬಂದಿದ್ದೇವೆಂದು ಗೀತೆಯು ಎಷ್ಟು ಸುಂದರವಾಗಿದೆ! ಬಾಬಾ, ನಾನು ಹೇಗಿದ್ದೇನೆಯೋ,
ಯಾರಾಗಿದ್ದೇನೆಯೋ, ಕುರುಡನೋ-ಕುಂಟನೋ ಅಂತೂ ತಮ್ಮವನಾಗಿದ್ದೇನೆಂದು ಹೇಳುತ್ತಾರೆ. ಅದಂತೂ ಸರಿ,
ಆದರೆ ಪತಿತರಿಂದ ಪಾವನರೂ ಆಗಬೇಕಲ್ಲವೆ. ಎಲ್ಲವೂ ಯೋಗ ಮತ್ತು ವಿದ್ಯೆಯ ಮೇಲೆ ಆಧಾರಿತವಾಗಿದೆ.
ತಂದೆಯ ಮಕ್ಕಳಾದ ಮೇಲೆ
ಪ್ರತಿಯೊಬ್ಬರೂ ಈ ವಿಚಾರ ಮಾಡಬೇಕು - ನಾವು ತಂದೆಯವರಾಗಿದ್ದೇವೆಂದರೆ ಸ್ವರ್ಗದಲ್ಲಂತೂ ಹೋಗುತ್ತೇವೆ
ಆದರೆ ನಾವು ಯಾವ ಪದವಿಯನ್ನು ಪಡೆಯಬೇಕು ಎಂಬುದನ್ನೂ ಆಲೋಚಿಸಬೇಕಾಗಿದೆ. ಒಳ್ಳೆಯ ರೀತಿಯಲ್ಲಿ ಓದಿ
ದೈವೀಗುಣಗಳನ್ನು ಧಾರಣೆ ಮಾಡಿ, ಹೇಗಿದ್ದವರು ಹಾಗೆಯೇ ಇದ್ದರೆ ಏನು ಪದವಿಯನ್ನು ಪಡೆಯುತ್ತೀರಿ!
ಸತ್ಯಯುಗದಲ್ಲಿಯೂ ಪ್ರಜೆಗಳು, ನೌಕರರು, ಚಾಕರಿ ಮಾಡುವವರು ಎಲ್ಲರೂ ಬೇಕಲ್ಲವೆ. ವಿದ್ಯಾವಂತರ ಮುಂದೆ
ಅವಿದ್ಯಾವಂತರು ಹೋಗಿ ತಲೆಬಾಗುತ್ತಾರೆ ಅಂದಮೇಲೆ ಇಲ್ಲಿ ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟು
ಒಳ್ಳೆಯ ಸುಖವನ್ನು ಪಡೆಯುತ್ತೀರಿ, ಒಳ್ಳೆಯ ಧನವಂತರಾದರೆ ಬಹಳ ಗೌರವವೂ ಇರುವುದು, ಓದುವವರಿಗೆ ಬಹಳ
ಗೌರವವಿರುತ್ತದೆ. ತಂದೆಯು ಸಲಹೆ ಕೊಡುತ್ತಿರುತ್ತಾರೆ, ತಂದೆಯ ನೆನಪಿನಲ್ಲಿ ಶಾಂತವಾಗಿರಿ ಆದರೆ
ತಂದೆಗೆ ಗೊತ್ತಿದೆ, ಸನ್ಮುಖದಲ್ಲಿ ಇರುವವರಿಗಿಂತಲೂ ದೂರದಲ್ಲಿರುವವರು ಬಹಳ ನೆನಪಿನಲ್ಲಿರುತ್ತಾರೆ
ಮತ್ತು ಬಹಳ ಒಳ್ಳೆಯ ಪದವಿಯನ್ನು ಪಡೆಯುತ್ತಾರೆ. ಭಕ್ತಿಮಾರ್ಗದಲ್ಲಿಯೂ ಇದೇ ರೀತಿಯಾಗುತ್ತದೆ.
ಕೆಲವರು ಭಕ್ತರು ಬಹಳ ಒಳ್ಳೆಯವರಿರುತ್ತಾರೆ, ಗುರುಗಳಿಗಿಂತಲೂ ಹೆಚ್ಚಿನದಾಗಿ ನೆನಪು
ಮಾಡುತ್ತಿರುತ್ತಾರೆ. ಯಾರು ಬಹಳ ಭಕ್ತಿ ಮಾಡಿರುವರೋ ಅವರೇ ಇಲ್ಲಿಗೆ ಬರುತ್ತಾರೆ. ಎಲ್ಲರೂ
ಭಕ್ತಿನಿಯರಲ್ಲವೆ! ಇಲ್ಲಿ ಸನ್ಯಾಸಿ ಮೊದಲಾದವರು ಬರುವುದಿಲ್ಲ, ಎಲ್ಲಾ ಭಕ್ತರು ಭಕ್ತಿ
ಮಾಡುತ್ತಾ-ಮಾಡುತ್ತಾ ಬಂದುಬಿಡುತ್ತಾರೆ. ತಂದೆಯು ಎಷ್ಟು ಸ್ಪಷ್ಟಮಾಡಿ ತಿಳಿಸುತ್ತಾರೆ. ನೀವು
ಜ್ಞಾನವನ್ನು ಪಡೆಯುತ್ತಿದ್ದೀರಿ, ಇದರಿಂದಲೇ ನೀವು ಬಹಳ ಭಕ್ತಿಮಾಡಿದ್ದೀರೆಂದು ಸಿದ್ಧವಾಗುತ್ತದೆ.
ಹೆಚ್ಚಿನದಾಗಿ ಭಕ್ತಿ ಮಾಡಿರುವವರು ಹೆಚ್ಚಿನ ವಿದ್ಯೆಯನ್ನು ಓದುತ್ತಾರೆ, ಕಡಿಮೆ ಮಾಡಿರುವವರು
ಕಡಿಮೆ ಓದುತ್ತಾರೆ. ಮುಖ್ಯವಾದ ಪರಿಶ್ರಮವು ನೆನಪಿನಲ್ಲಿದೆ, ನೆನಪಿನಿಂದಲೇ ವಿಕರ್ಮಗಳು
ವಿನಾಶವಾಗುತ್ತವೆ ಮತ್ತು ಬಹಳ ಮಧುರರೂ ಆಗಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಸೇವಾಧಾರಿ, ಆಜ್ಞಾಕಾರಿ, ಪ್ರಾಮಾಣಿಕ ಮಕ್ಕಳಿಗೆ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.ಯಾರೆಷ್ಟೇ
ಪ್ರಿಯ ಸಂಬಂಧಿಯಾಗಿರಲಿ ಅವರಲ್ಲಿ ಮೋಹದ ಸೆಳೆತವಿರಬಾರದು. ನಷ್ಟಮೋಹಿಗಳಾಗಬೇಕಾಗಿದೆ. ಯುಕ್ತಿಯಿಂದ
ತಿಳಿಸಬೇಕಾಗಿದೆ. ತಮ್ಮ ಮೇಲೆ ಮತ್ತು ಅನ್ಯರ ಮೇಲೆ ದಯೆತೋರಿಸಬೇಕಾಗಿದೆ.
2.ತಂದೆ ಮತ್ತು
ಶಿಕ್ಷಕರನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ನಶೆಯಿರಲಿ - ನಮಗೆ ಭಗವಂತನೇ ಓದಿಸುತ್ತಾರೆ,
ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆ! ನಡೆಯುತ್ತಾ-ತಿರುಗಾಡುತ್ತಾ ನೆನಪಿನಲ್ಲಿರಬೇಕಾಗಿದೆ,
ಪರಚಿಂತನೆ ಮಾಡಬಾರದಾಗಿದೆ.
ವರದಾನ:
ಅವಿನಾಶಿ
ಆತ್ಮಿಕ ಬಣ್ಣದ ಸತ್ಯ ಹೋಲಿಯ ಮೂಲಕ ತಂದೆಯ ಸಮಾನ ಸ್ಥಿತಿಯ ಅನುಭವಿ ಭವ
ನೀವು ಪರಮಾತ್ಮನ
ರಂಗಿನಲ್ಲಿ(ಬಣ್ಣದಲ್ಲಿ) ರಂಗಾಗಿರುವಂತಹ ಹೋಲಿ(ಪವಿತ್ರ) ಆತ್ಮರಾಗಿದ್ದೀರಿ. ಸಂಗಮಯುಗ
ಹೋಲಿ(ಪವಿತ್ರ) ಜೀವನದ ಯುಗವಾಗಿದೆ. ಯಾವಾಗ ಅವಿನಾಶಿ ಆತ್ಮಿಕ ಬಣ್ಣ ಅಂಟುವುದೋ ಆಗ ಸದಾಕಾಲಕ್ಕಾಗಿ
ತಂದೆಯ ಸಮಾನರಾಗಿ ಬಿಡುತ್ತೀರಿ. ನಿಮ್ಮ ಹೋಲಿ ಆಗಿದೆ ಸಂಗದ ರಂಗಿನಿಂದ(ಬಣ್ಣದಿಂದ) ತಂದೆಯ
ಸಮಾನರಾಗುವುದು. ಇಂತಹ ಪಕ್ಕಾ ರಂಗಾಗಿದ್ದೀರಿ ಯಾರು ಅನ್ಯರನ್ನು ಸಮಾನ ಮಾಡಿಕೊಳ್ಳುವರು. ಪ್ರತಿ
ಆತ್ಮನ ಮೇಲೆ ಅವಿನಾಶಿ ಜ್ಞಾನದ ಬಣ್ಣ, ನೆನಪಿನ ಬಣ್ಣ, ಅನೇಕ ಶಕ್ತಿಗಳ ಬಣ್ಣ, ಗುಣಗಳ ಬಣ್ಣ,
ಶ್ರೇಷ್ಠ ವೃತಿಯ ದೃಷ್ಟಿ, ಶುಭ ಭಾವನೆ, ಶುಭ ಕಾಮನೆಯ ಆತ್ಮಿಕ ಬಣ್ಣ ಏರಿಸಿಕೊಳ್ಳಿರಿ.
ಸ್ಲೋಗನ್:
ದೃಷ್ಟಿಯನ್ನು
ಅಲೌಕಿಕ. ಮನಸ್ಸನ್ನು ಶೀತಲ, ಬುದ್ಧಿಯನ್ನು ದಯಾಹೃದಯಿ ಮತ್ತು ಮುಖವನ್ನು ಮಧುರ ಮಾಡಿಕೊಳ್ಳಿ.
ಅವ್ಯಕ್ತ ಸೂಚನೆ - ಸತ್ಯ
ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ
ಸತ್ಯತೆಯ ಶಕ್ತಿ ಸ್ವರೂಪ
ಆಗಿ, ನಶೆಯಿಂದ ಹೇಳಿ, ನಶೆಯಿಂದ ನೋಡಿ. ನಾವು ಆಲ್ಮೈಟಿ ಗವಮೆರ್ಂಟ್ನ ಅನುಚರರಾಗಿದ್ದೇವೆ, ಇದೇ
ಸ್ಮೃತಿಯಿಂದ ಅಯಥಾರ್ಥ ವನ್ನು ಯಥಾರ್ಥದಲ್ಲಿ ತೆಗೆದುಕೊಂಡು ಬನ್ನಿ. ಸತ್ಯತೆಯನ್ನು ಪ್ರಸಿದ್ಧ
ಮಾಡಬೇಕು ಮುಚ್ಚಿಡಬಾರದು ಆದರೆ ಸಭ್ಯತೆಯೊಂದಿಗೆ. ನಶೆ ಇರಲಿ ನಾವು ಶಿವ ಶಕ್ತಿಯರಾಗಿದ್ದೇವೆ.
ಶಕ್ತಿಯರ ಸಾಹಸ, ಸರ್ವಶಕ್ತಿವಂತನ ಸಹಯೋಗ.